Tag: Anegundi

  • ಕೊಪ್ಪಳಕ್ಕುಂಟು ಶ್ರೀರಾಮನ ನಂಟು – ಈ ಸ್ಥಳದಲ್ಲಿದೆ ಶಬರಿ ಗುಹೆ, ರಾವಣನ ಸಂಹಾರಕ್ಕೆ ಸೈನ್ಯ ಸಜ್ಜಾಗಿದ್ದೂ ಇಲ್ಲಿಯೇ!

    ಕೊಪ್ಪಳಕ್ಕುಂಟು ಶ್ರೀರಾಮನ ನಂಟು – ಈ ಸ್ಥಳದಲ್ಲಿದೆ ಶಬರಿ ಗುಹೆ, ರಾವಣನ ಸಂಹಾರಕ್ಕೆ ಸೈನ್ಯ ಸಜ್ಜಾಗಿದ್ದೂ ಇಲ್ಲಿಯೇ!

    ಕೊಪ್ಪಳ: ಕೋಟ್ಯಂತರ ರಾಮ ಭಕ್ತರ ಕನಸಿನ ಮಂದಿರ (Ram Mandir) ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದಲ್ಲೂ ಸಾವಿರಾರು ಭಕ್ತರು ರಾಮನೂರಿಗೆ ತೆರಳಲು ಬರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಶ್ರೀರಾಮನ (Shri Rama) ನಂಟಿರುವ ಕರ್ನಾಟಕದ (Karnataka) ವಿವಿಧ ಸ್ಥಳಗಳ ಬಗ್ಗೆ ತಿಳಿಯುವುದೂ ಅಷ್ಟೇ ಅವಶ್ಯಕವಾಗಿದೆ.

    ಹೌದು. ಸೀತೆಯನ್ನ ಹುಡುಕುತ್ತಾ ಹೊರಟ ಶ್ರೀರಾಮನ ಹೆಜ್ಜೆ ಗುರುತುಗಳು ಕರುನಾಡಿನಲ್ಲೂ ಮೂಡಿವೆ ಅನ್ನೋದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ನಮ್ಮ ರಾಜ್ಯದ ಕೊಪ್ಪಳ ಜಿಲ್ಲೆಗೂ ರಾಮಾಯಣಕ್ಕೂ ಅವಿನಾಭಾವ ಸಂಬಂಧವಿದೆ ಅನ್ನೋದಕ್ಕೆ ಅನೇಕ ನಿದರ್ಶನಗಳು ಇಲ್ಲಿವೆ. ಇದನ್ನೂ ಓದಿ: ಕೊಪ್ಪಳಕ್ಕುಂಟು ಶ್ರೀರಾಮನ ನಂಟು – ರಾಮ, ಆಂಜನೇಯ, ಸುಗ್ರೀವರು ಭೇಟಿಯಾಗಿದ್ದ ಚಂಚಲಕೋಟೆ ಬಗ್ಗೆ ನಿಮ್ಗೆ ಗೊತ್ತಾ?

    ರಾವಣ ಸೀತೆಯನ್ನು ಅಪಹರಿಸಿದಾಗ ವನವಾಸದಲ್ಲಿದ್ದ ಶ್ರೀರಾಮ, ಸೀತೆಯನ್ನು ಹುಡುಕುತ್ತಾ ಹೊರಟಿದ್ದ. ಈ ವೇಳೆ ಶ್ರೀರಾಮನಿಗೆ ಶಕ್ತಿ ತುಂಬಿದ್ದು ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಅದುವೆ ಕಿಷ್ಕಿಂದೆ ರಾಜ್ಯ. ವಾನರಸೇನೆ ಹಾಗೂ ಶ್ರೀರಾಮನ ಬಂಟ ಹನುಮ ಸಿಕ್ಕಿದ್ದು ಇದೇ ಕಿಷ್ಕಿಂದೆ ರಾಜ್ಯದಲ್ಲಿ ಅದು ಇಂದಿನ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದಲ್ಲಿ. ಇದನ್ನೂ ಓದಿ: ಅಯೋಧ್ಯೆ ರಾಮ ಮಂತ್ರಾಕ್ಷತೆ ಅಂದ್ರೆ ಏನು?, ಯಾಕಿಷ್ಟು ಮಹತ್ವ?, ಹೇಗೆಲ್ಲಾ ಬಳಸಬಹುದು?

    ಆನೆಗೊಂದಿ ಸಮೀಪದ ಪಂಪಾಸರೋವರದಲ್ಲಿ ಮೊದಲ ಬಾರಿಗೆ ಶ್ರೀರಾಮನನ್ನ ಆಂಜನೇಯ ಭೇಟಿಯಾಗುತ್ತಾನೆ. ಇದೇ ಸ್ಥಳದಲ್ಲಿ ವಾಲಿ ಸುಗ್ರೀವರ ಕಾಳಗ ಸಹ ನಡೆಯತ್ತೆ. ವಾಲಿ – ಸುಗ್ರೀವರ ಕಾಳಗದಲ್ಲಿ ಶ್ರೀರಾಮ ವಾಲಿವಧೆ ಮಾಡಿ ಸುಗ್ರೀವನಿಗೆ ಕಿಷ್ಕಿಂದೆಯ ಅಧಿಕಾರ ತಂದುಕೊಡುತ್ತಾನೆ. ಇದು ಒಂದು ಕಡೆಯಾದ್ರೆ, ಸೀತಾಮಾತೆಯನ್ನ ಹುಡುಕಿ ಹೊರಟ ಶ್ರೀ ರಾಮನಿಗೆ ಶಬರಿ ಕಾದು ಕುಳಿತಿದ್ದು ಕೂಡಾ ಇದೆ, ಪಂಪಾಸರೋವರದಲ್ಲಿ, ಈ ಪಂಪಾಸರೋವರದಲ್ಲಿ ಶಬರಿಯ ಗುಹೆ ಇಂದಿಗೂ ಇದೆ‌. ಈ ಗುಹೆಯಲ್ಲಿ ಪ್ರಭು ಶ್ರೀರಾಮನ ಪಾದುಕೆಗಳಿವೆ. ರಾಮ ಇಲ್ಲಿಂದ ತೆರಳಿದ ಬಳಿಕ ಶಬರಿ ಈ ಪಾದುಕೆಗಳಿಗೆ ಪೂಜೆ ಸಲ್ಲಿಸುತ್ತಿದ್ದಳು ಅನ್ನೋ ಬಗ್ಗೆ ಪುರಾಣಗಳಲ್ಲಿಯೂ ಉಲ್ಲೆಖವಿದೆ‌‌. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದ ರಾತ್ರಿಯ ವಿಹಂಗಮ ನೋಟವನ್ನು ಚಿತ್ರಗಳಲ್ಲಿ ನೋಡಿ

    14 ವರ್ಷಗಳ ವನವಾಸದಲ್ಲಿದ್ದ ಶ್ರೀರಾಮ ಸೀತೆಯನ್ನ ಹುಡುಕಿ ಹೊರಟಾಗ ಆತನ ಬಳಿ ಯಾವುದೇ ಸೈನ್ಯವಾಗಲಿ, ಯುದ್ಧ ಸಲಕರಣೆಗಳಾಗಲಿ ಇರಲಿಲ್ಲ. ಅಲ್ಲದೇ ಸಮುದ್ರವನ್ನ ದಾಟಿ ಲಂಕೆಗೆ ಹೋಗಲು ಮುಂದಾಗಿದ್ದಾಗ ಹನುಮ ಹಾಗೂ ಕಿಷ್ಕಿಂದೆಯ ರಾಜ್ಯದ ವಾನರ ಸೇನೆ ರಾಮನನ್ನ ಸೇರಿದ್ದು ಇದೇ ಕಿಷ್ಕಿಂದೆಯಲ್ಲಿ. ಕೊಪ್ಪಳ ಜಿಲ್ಲೆಯ ಸುತ್ತ ಮುತ್ತಲಿನ, ಹೊಸಪೇಟೆ, ಬಳ್ಳಾರಿ ಭಾಗದ ಕಬ್ಬಿಣ ಅಧಿರಿನಿಂದಲೇ ಅಂದು ಯುದ್ಧಕ್ಕೆ ಬೇಕಾದ ಆಯುಧಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಇಲ್ಲಿಯೇ ಸೇನೆಯನ್ನು ಸಿದ್ಧಪಡಿಸಿಕೊಂಡಿದ್ದ ಬಗ್ಗೆಯೂ ಇತಿಹಾಸವಿದೆ.

    ನಂತರ ವಾನರ ಸೇನೆಯ ಸಹಾಯದಿಂದಲೇ ಲಂಕೆಗೆ ಸೇತುವೆ ನಿರ್ಮಿಸಿ ಆಂಜನೇಯನ ಸಹಾಯದಿಂದ ಲಂಕಾ ಪ್ರವೇಶಿಸಿ ರಾವಣನ ಸಂಹಾರ ಮಾಡಲಾಯಿತು. ನಂತರ ಸೀತಾ ಮಾತೆಯನ್ನ ಅಯೋಧ್ಯೆಗೆ ಕರೆತರಲಾಯಿತು. ಈ ಎಲ್ಲ ಮಹತ್ಕಾರ್ಯಕ್ಕೆ ಸಹಾಯಕವಾಗಿದ್ದು ಅಂದಿನ ಕಿಷ್ಕಿಂದೆ ರಾಜ್ಯದ ವಾನರ ಸೇನೆ. ಅದು ಇಂದಿನ ಅಂಜನಾದ್ರಿಯ ಆನೆಗೊಂದಿ ಭಾಗ. ಇದಕ್ಕೆ ಅಂಜನಾದ್ರಿ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಹಲವು ಸಾಕ್ಷಿಗಳು ದೊರೆತಿವೆ‌. ಇದರಿಂದ ರಾಮಾಯಣಕ್ಕೂ ಕೊಪ್ಪಳ ಜಿಲ್ಲೆಯಗೂ ಅವಿನಾಭಾವ ಸಂಬಂಧವಿದೆ ಎನ್ನುತ್ತಾರೆ ಇತಿಹಾಸ ತಜ್ಞರು. ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠೆ – 96 ವರ್ಷದ ಕರಸೇವಕಿಗೆ ವಿಶೇಷ ಆಹ್ವಾನ – ಈಕೆ ಯಾರು ಗೊತ್ತಾ?

  • ವಿದೇಶದಲ್ಲಿ ಬಾಳೆ ನೂಲಿನ ವಸ್ತುಗಳಿಗೆ ಡಿಮ್ಯಾಂಡ್

    ವಿದೇಶದಲ್ಲಿ ಬಾಳೆ ನೂಲಿನ ವಸ್ತುಗಳಿಗೆ ಡಿಮ್ಯಾಂಡ್

    – 400 ಜನ ಮಹಿಳೆಯರಿಗೆ ಉದ್ಯೋಗ

    ಕೊಪ್ಪಳ: ದಿನ ಬಳಕೆಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಸಂಖ್ಯೆ ಹೆಚ್ಚಾಗಿರುವ 21ನೇ ಶತಮಾನದಲ್ಲಿಯೂ ಗ್ರಾಮೀಣ ಮಹಿಳೆಯರು ಬಾಳೆ ಗಿಡದ ನೂಲಿನಿಂದ ಗೃಹ ಬಳಕೆ ವಸ್ತುಗಳನ್ನು ತಯಾರಿಸಿ, ದೇಶ ಸೇರಿದಂತೆ ವಿದೇಶದಲ್ಲಿ ಕೂಡ ಮಾರಾಟ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

    ವಿಜಯನಗರ ಕಾಲದ ಇತಿಹಾಸವನ್ನು ಹೇಳುವ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿನ ಮಹಿಳೆಯರು ಸ್ಥಳೀಯವಾಗಿಯೇ ಸ್ವಯಂ ದುಡಿಮೆಯನ್ನು ಕಂಡುಕೊಂಡು, ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ. ಈ ಮಹಿಳೆಯರು ಕೃಷಿಯಲ್ಲಿ ದೊರೆಯುವ ಕಚ್ಚ ವಸ್ತುಗಳನ್ನು ಬಳಕೆ ಮಾಡಿಕೊಂಡು ಕಸದಿಂದ ರಸ ತೆಗೆಯುವ ಕಾಯಕಕ್ಕೆ ಮುಂದಾಗಿದ್ದಾರೆ.

    ಆನೆಗೊಂದಿ ಗ್ರಾಮದ ಶಮಾ ಪವಾರ್ ಅವರು ಕಿಷ್ಕಿಂದ್ ಟ್ರಸ್ಟ್ ಕಟ್ಟಿಕೊಂಡು, ಕಳೆದ 24 ವರ್ಷಗಳಿಂದ ಗ್ರಾಮೀಣ ಮಹಿಳೆಯರಿಗೆ ಉದ್ಯೋಗವನ್ನು ಒದಗಿಸುತ್ತಿದ್ದಾರೆ. ಬಾಳೆ ಗಿಡದ ನೂಲಿನಿಂದ ಗೃಹ ಬಳಕೆ ವಸ್ತುಗಳನ್ನು ತಯಾರಿಸುವ ಕುರಿತು ಮಹಿಳೆಯರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿಯನ್ನು ಪಡೆದುಕೊಂಡ ಮಹಿಳೆಯರಿಗೆ ಅವರ ಸಂಸ್ಥೆಯಲ್ಲಿಯೇ ಉದ್ಯೋಗವನ್ನು ನೀಡುತ್ತಿದ್ದಾರೆ.

    1997ರಲ್ಲಿ ಈ ಸಂಸ್ಥೆಯು ಸ್ಥಾಪನೆಯಾಗಿದ್ದು, ಇಲ್ಲಿಯವರೆಗೆ ಸುಮಾರು ನೂರಾರು ಮಹಿಳೆಯರಿಗೆ ಉದ್ಯೋಗವನ್ನು ನೀಡಿದ್ದಾರೆ. ಸದ್ಯ 400 ಜನ ಮಹಿಳೆಯರು ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಸಪೇಟೆ ತಾಲೂಕಿನ ಬುಕ್ಕಸಾಗರ, ರಾಮಸಾಗರ, ಆನೆಗೊಂದಿ, ಸಣಾಪೂರ, ಹನುಮನಹಳ್ಳಿ ಸೇರಿದಂತೆ ನಾನಾ ಗ್ರಾಮಗಳ 200ಕ್ಕೂ ಅಧಿಕ ಕುಟುಂಬಗಳು ಗೃಹ ಬಳಕೆ ವಸ್ತುಗಳ ತಯಾರಿಕೆಗೆ ಬೇಕಾಗುವ ಬೆಳೆ ಗಿಡದ ನೂಲು ತಯಾರಿಕೆಯಲ್ಲಿ ಕೆಲಸದಲ್ಲಿ ನಿರತವಾಗಿವೆ.

    ಯಾವ ವಸ್ತುಗಳ ತಯಾರಿಕೆ:
    ಬಾಳೆ ನೂಲಿನಿಂದ ದಿನ ಬಳಕೆಗೆ ಅವಶ್ಯಕವಾಗಿರುವ ಕ್ಯಾಟ್ ಬ್ಯಾಗ್, ವಾಟರ್ ಬ್ಯಾಗ್, ಮೊಬೈಲ್ ಪಾಕೇಟ್, ಮೇಕಪ್ ಕಿಟ್, ಹ್ಯಾಂಡ್ ಬ್ಯಾಂಡ್‍ಗಳನ್ನು ಕೈಯಿಂದ ತಯಾರಿಸಿ ಅವುಗಳಿಗೆ ನೈಸರ್ಗಿಕವಾಗಿರುವ ಬಣ್ಣಗಳಿಂದ ಆಧುನಿಕ ಸ್ಪರ್ಶವನ್ನು ನೀಡಲಾಗುತ್ತಿದೆ. ಗೃಹ ಬಳಕೆಗೆ ಅವಶ್ಯಕವಾಗಿರುವ ಮ್ಯಾಟ್, ವಾಲ್ ಡಿಸೈನ್ಸ್, ಟೇಬಲ್ ಮ್ಯಾಟ್, ಪೆನ್ಸಿಲ್ ಬಾಕ್ಸ್, ಕೈ ಚೀಲಗಳು, ಬುಟ್ಟಿ, ಶೋಕೆಸ್ ಗೊಂಬೆಗಳ ಜೊತೆಗೆ ಮಕ್ಕಳಿಗೆ ಪ್ರಿಯವಾಗಿರುವ ಆಟಿಕೆ ಸಾಮಾನುಗಳನ್ನು ಸಹ ಇಲ್ಲಿ ಬಾಳೆ ನೂಲಿನಿಂದ ತಯಾರು ಮಾಡಲಾಗುತ್ತದೆ.

    ಹೇಗೆ ತಯಾರಿಕೆ:
    ಆನೆಗೊಂದಿ, ರಾಮಸಾಗರ, ಬುಕ್ಕಸಾಗರ, ಸಣಾಪೂರ ಗ್ರಾಮಗಳ ಸುತ್ತಮುತ್ತಲಿನಲ್ಲಿ ಬಾಳೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಬಾಳೆ ಪೈರು ಮುಗಿದ ನಂತರ ಬಾಳೆ ಗಿಡಗಳು ರೈತರು ಉಪಯೋಗವನ್ನು ಮಾಡದೆ ಬಿಸಾಡುತ್ತಾರೆ. ಅಂತಹ ಬಾಳೆ ಗಿಡಗಳನ್ನು ತೆಗೆದುಕೊಂಡು ಬಾಳೆ ಬೊಂಬುನಲ್ಲಿರುವ ಪದರುಗಳನ್ನು ವಿಂಗಡನೆಯನ್ನು ಮಾಡಿ, ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ನಂತರ ಸ್ವಲ್ಪ ಪ್ರಮಾಣದಲ್ಲಿ ನೀರಿನಲ್ಲಿ ನೆನೆಸಿ, ಒಂದೊಂದಾಗಿ ನಾರು ತೆಗೆಯಲಾಗುತ್ತದೆ. ಮಹಿಳೆಯರು ನಾರು ರೂಪದಲ್ಲಿ ಕಚ್ಚಾ ವಸ್ತುವನ್ನು ನೂಲಿನ ರೂಪಕ್ಕೆ ಸಿದ್ಧಪಡಿಸುತ್ತಾರೆ. ನಂತರ ನೂಲಿನ್ನು ಸೂಜಿಯ ಸಹಾಯಕದಿಂದ ಗೃಹ ಬಳಕೆಗೆ ಅವಶ್ಯಕತೆ ಇರುವ ಗ್ರಾತಕ್ಕೆ ವಿವಿಧ ಬಗೆಯ ವಸ್ತುಗಳನ್ನು ತಯಾರಿಸಲಾಗುತ್ತಿದೆ.

    ದೇಶ, ವಿದೇಶಗಳಲ್ಲಿ ಮಾರಾಟ:
    ನೈಸರ್ಗಿಕವಾಗಿ ದೊರೆಯುವ ಕೃಷಿ ಉಪಕರಣಗಳನ್ನು ಬಳಸಿಕೊಂಡಿ ತಯಾರಿಕೆ ಮಾಡುವ ಈ ವಸ್ತುಗಳ ಮಾರಾಟಕ್ಕಾಗಿಯೇ ಕಿಷ್ಕಿಂದ್ ಟ್ರಸ್ಟ್ ಹೆಸರಲ್ಲಿ ವೆಬ್ ಕ್ರೀಯೆಟ್ ಮಾಡಲಾಗಿದೆ. ಅದರಲ್ಲಿ ಇಲ್ಲಿ ದೊರೆಯುವ ವಸ್ತುಗಳ ಜೊತೆಗೆ ಇವುಗಳಿಗೆ ಬಳಕೆ ಮಾಡವುದರಿಂದ ಆಗುವ ಉಪಯೋಗಗಳ ಕುರಿತು ವಿವರಣೆಯನ್ನು ನೀಡಲಾಗಿದೆ. ಸಾಮಾನ್ಯವಾಗಿ ಆನ್‍ಲೈನ್‍ನಲ್ಲಿ ಬುಕ್ ಮಾಡಿ, ತೆಗೆದುಕೊಳ್ಳುವವರೆ ಹೆಚ್ಚಾಗಿದ್ದಾರೆ. ಸ್ಪೇನ್, ಪ್ರಾನ್ಸ್, ನ್ಯೂಜಿಲ್ಯಾಂಡ್, ಜರ್ಮನಿ, ಅಮೆರಿಕ ದೇಶದವರು ಈ ವಸ್ತುಗಳನ್ನು ಅತಿ ಹೆಚ್ಚು ಖರೀದಿ ಮಾಡುತ್ತಿದ್ದಾರೆ. ಹಾಗಾಗಿಯೇ ವಿದೇಶದಲ್ಲಿ ಈ ವಸ್ತುಗಳಿಗೆ ಸದ್ಯದ ಮಟ್ಟಿಗೆ ಬೇಡಿಕೆ ಕೂಡ ಹೆಚ್ಚಳವಾಗಿದೆ. ದೇಶದಲ್ಲಿ ವ್ಯಾಪಾರಿಗಳು ಇಲ್ಲಿಂದ ಖರೀದಿ ಮಾಡಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರು, ದೆಹಲಿ, ಮುಂಬೈ, ಗೋವಾ, ಹುಬ್ಬಳ್ಳಿ, ತಮಿಳುನಾಡು, ಕೇರಳ, ಹೈದ್ರಾಬಾದ್ ಸೇರಿದಂತೆ ನಾನಾ ಕಡೆಗಳಲ್ಲಿ ಕಳುಹಿಸಲಾಗುತ್ತಿದೆ.