Tag: Anegondi

  • ರಘುವರ್ಯ ತೀರ್ಥರ ಮಧ್ಯಾರಾಧನೆ ಮಹೋತ್ಸವ ಸಂಪನ್ನ

    ರಘುವರ್ಯ ತೀರ್ಥರ ಮಧ್ಯಾರಾಧನೆ ಮಹೋತ್ಸವ ಸಂಪನ್ನ

    ಕೊಪ್ಪಳ: ಗಂಗಾವತಿ (Gangavathi) ತಾಲೂಕಿನ ಆನೆಗೊಂದಿ (Anegondi) ಗ್ರಾಮದ ನವಬೃಂದಾವನ ಗಡ್ಡೆಯಲ್ಲಿ ಶ್ರೀರಘುವರ್ಯ ತೀರ್ಥರ ಮಧ್ಯಾರಾಧನೆಯ ಮಹೋತ್ಸವವನ್ನು ಶನಿವಾರ ನೆರವೆರಿಸಲಾಯಿತು.ಇದನ್ನೂ ಓದಿ: ವಿಮಾನ ದುರಂತ ಸ್ಥಳಕ್ಕೆ ಭೇಟಿ – ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಮಲ್ಲಿಕಾರ್ಜುನ ಖರ್ಗೆ

    ಉತ್ತರಾಧಿ ಮಠದ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ಶಿವಮೊಗ್ಗದ ಆರ್ಯ ಅಕ್ಷೋಭ್ಯ ತೀರ್ಥ ಮಠದ ಮಠಾಧೀಶರಾದ ರಘುವಿಜಯ ತೀರ್ಥರ ಸಾನಿಧ್ಯದಲ್ಲಿ ಮಧ್ಯಾರಾಧನೆ ಮಹೋತ್ಸವ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಧ್ಯಾರಾಧನೆಯ ಅಂಗವಾಗಿ ರಘುವರ್ಯ ತೀರ್ಥರ ಮೂಲಬೃಂದಾವನಕ್ಕೆ ನಿರ್ಮೂಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ರೇಷ್ಮೆ ವಸ್ತ್ರಗಳ ಸಮರ್ಪಣೆ, ವಿವಿಧ ಪುಷ್ಪಗಳ ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ನಾನಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ಉತ್ತರಾಧಿ ಮಠದ ಶ್ರೀಗಳಾದ ಸತ್ಯಾತ್ಮ ತೀರ್ಥ ಶ್ರೀಗಳಿಂದ ಭಕ್ತರಿಗೆ ತಪ್ತಮುದ್ರಾಧಾರಣೆ, ಸಂಸ್ಥಾನ ಪೂಜೆ, ಹಸ್ತೋದಕ ಪೂಜೆಗಳನ್ನು ನಡೆಸಲಾಯಿತು.

    ನಂತರ ಸತ್ಯಾತ್ಮ ತೀರ್ಥ ಶ್ರೀಗಳು ಮಾತನಾಡಿ, ನವಬೃಂದಾವನ ಗಡ್ಡೆಯಲ್ಲಿ ಬೃಂದಾವನರಾಗಿರುವ ಶ್ರೀ ರಘುವರ್ಯ ತೀರ್ಥರು ತೋರಿಸಿಕೊಟ್ಟ ಮಾರ್ಗದಲ್ಲಿ, ಸಾಧಿಸಿದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು. ಅವರ ಸಂದೇಶಗಳನ್ನು ಆಚರಣೆಗೆ ತರಬೇಕು. ಸುಧಾ-ಸರ್ವಮೂಲ ಗ್ರಂಥಗಳ ಅಧ್ಯಯನದ ಮೂಲಕ ಜೀವನ ಪಾವನಗೊಳಿಸಿಕೊಳ್ಳಬೇಕು. ನವಬೃಂದಾವನ ಗಡ್ಡೆ ಒಂದು ಪರಮ ಪವಿತ್ರ ತಾಣವಾಗಿದ್ದು, ಇಲ್ಲಿನ ಯತಿಗಳ ಆರಾಧನೆಯಲ್ಲಿ ಭಾಗವಹಿಸುವ ಮೂಲಕ ಅವರ ಆಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಹೇಳಿದರು. ಮಠದ ದಿವಾನ ಪಂಡಿತ ಶಶಿಧರ ಚಾರ್ಯರು, ಉಮರ್ಜಿ ಶ್ರೀಕರಾಚಾರ್ಯರು, ಮಹಿಷಿ ಆನಂದ ಆಚಾರ್ಯ, ನರಸಿಂಹ ಆಚಾರ್ಯ, ಜ್ಯೋತಿಷ್ಯ ವಿದ್ವಾಂಸ ಪ್ರಸನ್ನಾಚಾರ್ಯ ಕಟ್ಟಿ, ಮಠದ ವ್ಯವಸ್ಥಾಪಕ ಆನಂದ ಆಚಾರ್ಯ ಹಾಗೂ ಇತರರಿದ್ದರು.ಇದನ್ನೂ ಓದಿ: 11A ಸೀಟ್ ಮಿಸ್ಟರಿ – 2 ವಿಮಾನ ಪತನ, ಒಂದೇ ಕಡೆ ಕುಳಿತಿದ್ದ ಇಬ್ಬರು ಮೃತ್ಯುಂಜಯರು!

  • ಒಂದೇ ಬೃಂದಾವನಕ್ಕೆ ಇಬ್ಬರ ತೀರ್ಥರ ಹೆಸರು – ಆರಾಧನೆಯಲ್ಲಿ ಉಂಟಾದ ಗೊಂದಲ

    ಒಂದೇ ಬೃಂದಾವನಕ್ಕೆ ಇಬ್ಬರ ತೀರ್ಥರ ಹೆಸರು – ಆರಾಧನೆಯಲ್ಲಿ ಉಂಟಾದ ಗೊಂದಲ

    ಕೊಪ್ಪಳ: ನವಬೃಂದಾವನ ಗಡ್ಡೆಯಲ್ಲಿರುವ ಶ್ರೀಗಳ ಬೃಂದಾವನಗಳಲ್ಲಿ ಒಂದು ಬೃಂದಾವನಕ್ಕೆ ರಾಯರ, ಉತ್ತಾರಾಧಿ ಮಠದ ಅರ್ಚಕರು ಪೂಜೆ ವಿಚಾರವಾಗಿ ಗಲಾಟೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿರುವ ನವಬೃಂದಾವನ ಗಡ್ಡೆಯಲ್ಲಿ ಇತಿಹಾಸ ಕಾಲದ ತೀರ್ಥರ ಬೃಂದಾವನಗಳು ಇವೆ. ಅವರಿಗೆ ಭಕ್ತರು ಪೂಜೆಯನ್ನು ಸಲ್ಲಿಸಿ, ಶ್ರೀಗಳ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅದರಂತೆ ಗುರುವಾರದಂದು ಜಯತೀರ್ಥರ ಆರಾಧನೆ ಇದ್ದಿದ್ದು, ಆರಾಧನೆಯ ಪೂಜೆಯನ್ನು ಸಲ್ಲಿಸಲು ರಾಯರ ಮಠದ ಅರ್ಚಕರು ಹಾಗೂ ಭಕ್ತರು ನವಬೃಂದಾವನ ಗಡ್ಡೆಗೆ ಆಗಮಿಸಿ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ. ಆಗ ಉತ್ತಾರಾಧಿ ಮಠದ ಅರ್ಚಕರು, ರಾಯರ ಮಠದ ಅರ್ಚಕರಿಗೆ ಪೂಜೆ ಮಾಡಲು ಅವಕಾಶ ನೀಡಲಿಲ್ಲ. ನೀವು ಪೂಜೆ ಮಾಡಲು ಹೊರಟಿರುವ ಬೃಂದಾವನವು ಜಯತೀರ್ಥರ ಬೃಂದಾವನ ಅಲ್ಲ. ಅದು ರಘುವೀರ ತೀರ್ಥರ ಬೃಂದಾವನವಾಗಿದೆ. ಆ ಬೃಂದಾವನಕ್ಕೆ ನೀವು ಪೂಜೆ ಮಾಡುವಂತಿಲ್ಲ. ಜಯತೀರ್ಥರ ಬೃಂದಾವನ ಮಳಖೇಡನಲ್ಲಿದೆ. ಅಲ್ಲಿ ಆರಾಧನೆಯನ್ನ ಮಾಡಬೇಕು ಎಂದು ಅಡ್ಡಿಪಡಿಸಿದ್ದಾರೆ.

    ಉತ್ತಾರಾಧಿ ಮಠದ ಅರ್ಚಕರು ಪೂಜೆಗೆ ನಿರಾಕರಿಸಿದ್ದರೂ ಕೂಡ ರಾಯರ ಮಠದ ಅರ್ಚಕರು ಮಳಖೇಡದಲ್ಲಿ ಇರುವುದು ಜಯತೀರ್ಥರ ಮೂಲ ಬೃಂದಾವನ ಅಲ್ಲ. ಮೂಲ ಬೃಂದಾವನ ಇರುವುದು ನವಬೃಂದಾವನದಲ್ಲಿಯೇ ನೀವು ಹೇಳುವ ಪ್ರಕಾರ ರಘುವೀರ ತೀರ್ಥರ ಬೃಂದಾವನ ಇದಲ್ಲ. ಇದು ಜಯತೀರ್ಥರ ಬೃಂದಾವನ ಎಂದು ಪಟ್ಟು ಹಿಡಿದ್ದಿದ್ದಾರೆ. ಈ ರೀತಿಯಾಗಿ ಎರಡು ಮಠದ ಅರ್ಚಕರ ನಡುವೆ ಮಾತಿನ ಚಕಮಕಿ ನಡೆದ ವೀಡಿಯೋ ಸದ್ಯ ವೈರಲ್ ಆಗಿದ್ದು, ಭಕ್ತರಲ್ಲಿ ಗೊಂದಲವನ್ನು ಉಂಟು ಮಾಡಿದೆ. ಇದನ್ನೂ ಓದಿ: ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್ ಲೈನ್‍ಗೆ ಕನ್ನ

  • ಕೊಪ್ಪಳದ ಆನೆಗೊಂದಿಯಲ್ಲಿ ಕ್ರಾಫ್ಟ್ ಟೂರಿಸಂಗೆ ಕೇಂದ್ರ ಸರ್ಕಾರ ಅಸ್ತು

    ಕೊಪ್ಪಳದ ಆನೆಗೊಂದಿಯಲ್ಲಿ ಕ್ರಾಫ್ಟ್ ಟೂರಿಸಂಗೆ ಕೇಂದ್ರ ಸರ್ಕಾರ ಅಸ್ತು

    ಕೊಪ್ಪಳ: ಸ್ಥಳೀಯ ಕರಕುಶಲ ವಸ್ತಗಳಿಗೆ ಬೇಡಿಕೆ ಹೆಚ್ಚಿಸುವ ಉದ್ದೇಶದಿಂದ ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಕ್ರಾಫ್ಟ್ ಟೂರಿಸಂ ನಿರ್ಮಿಸಲು ಕೇಂದ್ರ ಸರ್ಕಾರ ಸದ್ಯ ಮುಂದಾಗಿದೆ. ವಿಶ್ವ ಪರಂಪರೆ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಹಂಪಿ ಪಕ್ಕದಲ್ಲಿನ ಆನೆಗೊಂದಿ ಗ್ರಾಮಕ್ಕೆ ಪ್ರತಿ ವರ್ಷ ಸಾವಿರಾರು ಜನರು ಭೇಟಿ ನೀಡಿ, ಸ್ಥಳೀಯ ವಾಗಿರುವ ಪುರಾತನ ದೇವಸ್ಥಾನ, ಮಂಟಪಗಳಿಗೆ ಭೇಟಿ ನೀಡಿ ಇತಿಹಾಸ ತಿಳಿದುಕೊಳ್ಳುತ್ತಾರೆ. ಪ್ರವಾಸಿಗರಿಗೆ ಮಾಹಿತಿ ನೀಡಲು ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡಲು ಕ್ರಾಫ್ಟ್ ಟೂರಿಸಂ ವಿಲೇಜ್ ಆರಂಭ ಮಾಡಲಾಗಗುತ್ತಿದೆ.

    ಏನಿದು ಕ್ರಾಫ್ಟ್ ಟೂರಿಸಂ ವಿಲೇಜ್?
    ಆನೆಗೊಂದಿ ಗ್ರಾಮದ ಕೆಲ ಕುಟುಂಬಗಳಿಗೆ ಕರಕುಶಲ ತರಬೇತಿ ನೀಡಿ ದೈನದಿಂದನ ಅಲಂಕಾರಿಕ ವಸ್ತುಗಳ ತಯಾರಿಕೆ ಮಾಡಲಾಗುವುದು. ಈಗಾಗಲೇ ಆನೆಗೊಂದಿಯಲ್ಲಿ ಬಾಳೆದಿಂಡು ಬಳಸಿ ಬ್ಯಾಗ್, ಅಲಂಕಾರಿಕ ಬುಟ್ಟಿಗಳನ್ನ ತಯಾರು ಮಾಡಲಾಗತ್ತೆ. ಇದೇ ಬಾಳೆದಿಂಡು ಇಟ್ಟುಕೊಂಡು ಮತ್ತೊಂದಿಷ್ಟು ಜನರಿಗೆ ಉದ್ಯೋಗ ಕಲ್ಪಿಸೋ ಯೋಜನೆಯಾಗಿದೆ. ಮಹಿಳೆಯರನ್ನ ಸಧೃಡಗೊಳಿಸಲು ಹಾಗೂ ಆರ್ಥಿಕವಾಗಿ ಸಬಲರನ್ನ ಮಾಡಲು ಕೇಂದ್ರ ಸರ್ಕಾರ ಸಹಯೋಗದೊಂದಿಗೆ ಯೋಜನೆ ರೂಪಿಸಲಾಗಿದೆ.

    ಆನೆಗೊಂದಿಯಲ್ಲಿ ತಯಾರಾಗುವ ಬಾಳೆ ದಿಂಡಿನ ಬ್ಯಾಗ್, ಬುಟ್ಟಿ, ಚಾಪೆ ದೇಶ ವಿದೇಶಗಳಲ್ಲಿ ಮಾರಾಟವಾಗತ್ತೆ. ಆನ್‍ಲೈನ್ ನಲ್ಲೂ ಕೂಡಾ ಮಾರಾಟ ಮಾಡಲಾಗತ್ತಿದೆ. ಆನೆಗೊಂದಿಗೆ ಪ್ರತಿ ವರ್ಷ ಸಾವಿರಾರು ವಿದೇಶಿಗರು ಬರ್ತಾರೆ, ಹೀಗಾಗಿ ಕ್ರಾಫ್ಟ್ ಟೂರಿಸಂ ವಿಲೇಜ್, ಮನೆಗಳ ಸೌಂದರ್ಯಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಸುಮಾರು ಐದು ಕೋಟಿ ವೆಚ್ಚದಲ್ಲಿ ಕ್ರಾಫ್ಟ್ ಟೂರಿಸಂ ವಿಲೇಜ್ ಮನೆಗಳ ಸೌಂದರ್ಯಕ್ಕೆ ಒತ್ತು ನೀಡಲಾಗಿದೆ.

    150ಕ್ಕೂ ಹೆಚ್ಚು ಮನೆಗಳ ಆಯ್ಕೆ;
    ಆನೆಗೊಂದಿಯಲ್ಲಿ 150 ಕ್ಕೂ ಹೆಚ್ಚು ಮನೆಗಳ ಆಯ್ಕೆ ಮಾಡಲಾಗಿದೆ. ಮನೆಗಳನ್ನ ಗುರುತಿಸಿ ಸುಮಾರು ಒಂದು ಲಕ್ಷ ಖರ್ಚು ಮಾಡಿ ಹಳ್ಳಿಗಳ ಮನೆಗಳಂತೆ ಅವುಗಳನ್ನ ಅಲಂಕಾರ ಮಾಡಲು ಮುಂದಾಗಿದೆ. ಆನೆಗೊಂದಿಗೆ ಬಂದ ಪ್ರವಾಸಿಗರು ಯಾವುದೇ ಕಲಾಲೋಕಕ್ಕೆ ಬಂದಿದ್ದೇವೆ ಅನ್ನೋ ಭಾವನೆ ಬರಲಿ ಅನ್ನೋ ಉದ್ದೇಶದಿಂದ ಮನೆಗಳಿಗೆ ಅಲಂಕಾರ ಮಾಡಲು ಮುಂದಾಗಿದೆ. ಜೊತೆಗೆ ಒಂದು ಓಣಿಯ ಪ್ರಮುಖ ದ್ವಾರವನ್ನು ನಿರ್ಮಿಸಿ ಕಲಾ ಲೋಕ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ.

    ಕರಕುಶಲ ವಸ್ತು ತಯಾರಿಕೆ ಹಾಗೂ ಮಾರಾಟ ಸ್ಥಳವನ್ನು ಅಲಂಕಾರ ಮಾಡಲಾಗತ್ತೆ. ವಿಜಯನಗರ ಸಾಮ್ರಾಜ್ಯದ ಗತ ವೈಭವ ನೆನಪು ಮಾಡುವ ರೀತಿಯಲ್ಲಿ ಆನೆಗೊಂದಿಯನ್ನ ನಿರ್ಮಾಣ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಆನೆಗೊಂದಿಯಲ್ಲಿ ಕೆಲ ಮನೆಗಳಿಗೆ ಬಣ್ಣ ಕೂಡಾ ಮಾಡಲಾಗಿದೆ. ವಿದೇಶಿಗರಿಗೆ ಆಕರ್ಷಕವಾಗಿ ಕಾಣಲಿ ಅನ್ನೋ ಉದ್ದೇಶಕ್ಕೆ ಕರಕುಶಲ ವಸ್ತುಗಳ ತಯಾರಿಕೆ ಘಟಕವನ್ನು ಅಲಂಕಾರ ಮಾಡಲಾಗತ್ತೆ. ಬಂದ ಪ್ರವಾಸಿಗರು ಆನೆಗೊಂದಿಗೆ ಬಂದ್ರೆ ಕರಕುಶಲ ಕೇಂದ್ರಕ್ಕ ಭೇಟಿ ನೀಡಬೇಕು ಅನ್ನೋ ರೀತಿಯಲ್ಲಿ ಕ್ರಾಫ್ಟ್ ಟೂರಿಸಂ ವಿಲೇಜ್ ನಿರ್ಮಾಣ ಮಾಡಲಾಗವುದು.