Tag: andrapradesh

  • ಸಿನಿಮಾ ಥಿಯೇಟರ್ ಗೇಟ್ ಹಾರಿದ ನಟ ಸೂರ್ಯ

    ಸಿನಿಮಾ ಥಿಯೇಟರ್ ಗೇಟ್ ಹಾರಿದ ನಟ ಸೂರ್ಯ

    ಹೈದರಾಬಾದ್: ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ ತಮ್ಮ ‘ಗ್ಯಾಂಗ್’ ಚಿತ್ರದ ಪ್ರಮೋಷನ್ ವೇಳೆ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಥಿಯೇಟರ್ ಗೇಟ್ ಹಾರಿದ್ದಾರೆ.

    ಕಳೆದ ವಾರ ಬಿಡುಗಡೆಯಾಗಿರುವ ಸೂರ್ಯ ಅವರ `ಗ್ಯಾಂಗ್’ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು. ತಮಿಳು, ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆಯಾಗಿ ಉತ್ತಮ ಗಳಿಕೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಮೋಷನ್‍ಗೆ ಮಂಗಳವಾರ ಆಂಧ್ರಪ್ರದೇಶದ ರಾಜಮಂಡ್ರಿ ಜಿಲ್ಲೆಗೆ ಸೂರ್ಯ ತೆರಳಿದ್ದರು. ಈ ವೇಳೆ ಅಭಿಮಾನಿಗಳೊಂದಿಗೆ ಗ್ಯಾಂಗ್ ಚಿತ್ರದ ಬಗ್ಗೆ ಮಾತನಾಡಿ ಧನ್ಯವಾದ ತಿಳಿಸಿದ್ರು.

    ಆದರೆ ತಮ್ಮ ನೆಚ್ಚಿನ ನಟ ಬಂದ ಸುದ್ದಿ ತಿಳಿದ ಜನರು ಅವರನ್ನು ನೋಡಲು ಚಿತ್ರ ಮಂದಿರದ ಬಳಿ ಜಮಾಯಿಸಿದ್ದರು. ಹೀಗಾಗಿ ಸಕ್ಸಸ್ ಮೀಟ್ ಮುಗಿಸಿ ಸೂರ್ಯ ಥಿಯೇಟರ್‍ನಿಂದ ತೆರಳಲು ಆಗದೇ ಕಷ್ಟ ಪಟ್ಟಿದ್ದಾರೆ. ಅಭಿಮಾನಿಗಳಿಂದ ಪಾರಾಗಲು ಯತ್ನಿಸಿದ ಸೂರ್ಯ, ಬಂದ್ ಆಗಿದ್ದ ಗೇಟ್ ಹಾರಿ, ತಮ್ಮ ಕಾರಿನ ಬಳಿ ಬಂದು ಅಲ್ಲಿಂದ ಹೋಗಿದ್ದಾರೆ. ನಟ ಸೂರ್ಯ ಚಿತ್ರ ಮಂದಿರದ ಗೇಟ್ ಹಾರುತ್ತಿರುವ ದೃಶ್ಯಗಳನ್ನು ಸ್ಥಳದಲ್ಲಿದ್ದ ಅಭಿಮಾನಿಗಳು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಗ್ಯಾಂಗ್ ಚಿತ್ರದಲ್ಲಿ ಸೂರ್ಯ ಅವರ ಜೊತೆ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಹುಬಲಿ ಖ್ಯಾತಿಯ ರಮ್ಯಾಕೃಷ್ಣ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    https://www.youtube.com/watch?v=GFtOm2JrV2Y

  • ತನ್ನ ಮೊಬೈಲ್‍ನಲ್ಲಿ ಮಗಳಿಗೆ ಕಾಲ್ಸ್ ಬರ್ತಿತ್ತೆಂದು ಅಪ್ರಾಪ್ತ ಪುತ್ರಿಯನ್ನ ಕೊಂದೇಬಿಟ್ಟ

    ತನ್ನ ಮೊಬೈಲ್‍ನಲ್ಲಿ ಮಗಳಿಗೆ ಕಾಲ್ಸ್ ಬರ್ತಿತ್ತೆಂದು ಅಪ್ರಾಪ್ತ ಪುತ್ರಿಯನ್ನ ಕೊಂದೇಬಿಟ್ಟ

    ವಿಜಯವಾಡ: ತನ್ನ ಮೊಬೈಲ್‍ಗೆ ಯಾರೋ ಒಬ್ಬರು ಕರೆ ಮಾಡಿ ಮಗಳಿಗೆ ಫೋನ್ ಕೊಡಿ ಎಂದ ಬಳಿಕ 14 ವರ್ಷದ ಮಗಳನ್ನ ತಂದೆಯೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಸಾಯಿನಾಥಪುರಂನಲ್ಲಿ ನಡೆದಿದೆ.

    ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಆರೋಪಿಯಾದ ಆಟೋ ಡ್ರೈವರ್ ರಮಣನನ್ನು ಬಂಧಿಸಲಾಗಿದೆ. 10ನೇ ಕ್ಲಾಸ್‍ನಲ್ಲಿ ಓದುತ್ತಿದ್ದ ಮಗಳನ್ನು ಕೊಂದ ನಂತರ ಆರೋಪಿ ಅಂತ್ಯಕ್ರಿಯೆಗಾಗಿ ಸಿದ್ಧತೆ ಮಾಡುತ್ತಿದ್ದ.

    ನಡೆದಿದ್ದೇನು?: ಕುಡಿದ ಮತ್ತಿನಲ್ಲಿ ಮನೆಗೆ ಬಂದ ರಮಣ ಕರೆ ಮಾಡಿದ ವ್ಯಕ್ತಿಯ ಬಗ್ಗೆ ಮಗಳನ್ನ ಪ್ರಶ್ನಿಸಿದ್ದಾನೆ. ಆ ವ್ಯಕ್ತಿ ಯಾರೆಂಬುದು ತನಗೆ ಗೊತ್ತಿಲ್ಲವೆಂದು ಮಗಳು ಎಷ್ಟೇ ಹೇಳಿದ್ರೂ ರಮಣ ಆಕೆಯನ್ನ ಮನಬಂದಂತೆ ಹೊಡೆದಿದ್ದಾನೆ. ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಾಲಕಿ ಸಾವನ್ನಪ್ಪಿದ ಬಳಿಕ ಆರೋಪಿ ತಂದೆ ಆಕೆಯ ಮೃತದೇಹವನ್ನು ಮನೆಯ ಮುಂದೆ ತಂದು ಹಾಕಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲು ಹೊರಗೆ ಹೋಗಿದ್ದಾನೆ.

    ಅಕ್ಕಪಕ್ಕದ ಮನೆಯವರು ಅನುಮಾನಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿ ಬಾಲಕಿಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ.

  • ಮಲಗಿದ್ದಾಗ ಹೊದಿಕೆಯಿಂದ್ಲೇ ಕುತ್ತಿಗೆ ಬಿಗಿದು ಹೆತ್ತ ತಾಯಿಯನ್ನೇ ಕೊಲೆಗೈದ!

    ಮಲಗಿದ್ದಾಗ ಹೊದಿಕೆಯಿಂದ್ಲೇ ಕುತ್ತಿಗೆ ಬಿಗಿದು ಹೆತ್ತ ತಾಯಿಯನ್ನೇ ಕೊಲೆಗೈದ!

    ಚಿತ್ತೂರು: ಮದ್ಯಪಾನಕ್ಕೆ ಹಣ ನೀಡಲು ನಿರಾಕರಿಸಿದ ತಾಯಿಯನ್ನೇ 29 ವರ್ಷದ ಯುವಕನೊಬ್ಬ ಕೊಲೆಗೈದ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಿವಿನಿ ಕುಪ್ಪಂ ಎಂಬಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಯಿ ಬೆಲ್ಲಮ್ಮ(50) ತನ್ನ ಮಗ ಜೆ ಸುಬ್ರಹ್ಮಣ್ಯಂ ಕೈಯಿಂದ್ಲೇ ಕೊಲೆಯಾಗಿದ್ದಾರೆ.

    ಏನಿದು ಘಟನೆ?: ಆರೋಪಿ ಸುಬ್ರಹ್ಮಣ್ಯಂಗೆ ಕುಡಿತದ ಚಟವಿತ್ತು. ಹೀಗಾಗಿ ಪತ್ನಿ ದೂರವಾದ ಬಳಿಕ ಈತ ಪಕ್ಕದ ಗ್ರಾಮದಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದನು. ಪ್ರತೀ ದಿನ ಮದ್ಯಪಾನ ಮಾಡಲು ಹಣ ಕೊಡುವಂತೆ ತಾಯಿಯನ್ನು ಪೀಡಿಸುತ್ತಿದ್ದನು.

    ಅಂತೆಯೇ ಸೋಮವಾರವೂ ಕೂಡ ತಾಯಿಯ ಬಳಿ ಬಂದು ಹಣ ಕೇಳಿದ್ದಾನೆ. ಆದ್ರೆ ತಾಯಿ ಮಾತ್ರ ಆತನಿಗೆ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡಿದ್ದ ಮಗ ಸುಬ್ರಹ್ಮಣ್ಯಂ ತಾಯಿ ಮಲಗಿದ್ದ ಸಂದರ್ಭದಲ್ಲಿ ಹೊದಿಕೆಯನ್ನು ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮಂಗಳವಾರ ಬೆಳಗ್ಗೆ ತಾಯಿಯನ್ನು ನೋಡಲೆಂದು ಬೆಲ್ಲಮ್ಮ ಮಗಳು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಮೃತ ಬೆಲ್ಲಮ್ಮ ಅವರಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರಲ್ಲಿ 1.5 ಎಕರೆ ಜಮೀನಿದೆ. ಕಳೆದ ತಿಂಗಳಷ್ಟೇ ಆಟೋ ರಿಕ್ಷಾ ಖರೀದಿಸಲು ತಾಯಿ ದೊಡ್ಡ ಮಗನಿಗೆ 50,000 ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಎರಡನೇ ಮಗ ಸುಬ್ರಹ್ಮಣ್ಯಂ ತನಗೂ ಹಣ ಕೊಡುವಂತೆ ಹಾಗೂ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಡ ಹೇರಿದ್ದನು ಎಂಬುದಾಗಿ ವರದಿಯಾಗಿದೆ.

    ಸದ್ಯ ತಾಯಿ ಕೊಲೆ ಪ್ರಕರಣ ಸಂಬಂಧ ಮಗಳು ಸ್ಥಳೀಯ ಪೊಲೀಸ್ ಠಾಣೆಯನ್ನು ದೂರು ದಾಖಲಿಸಿದ್ದಾರೆ. ಮೃತ ಬೆಲ್ಲಮ್ಮ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

  • ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಹೋಗ್ತಿದ್ದಾಗ ಬೈಕ್, ಟಿಪ್ಪರ್ ಡಿಕ್ಕಿ- ಸವಾರ ಸ್ಥಳದಲ್ಲೇ ದುರ್ಮರಣ

    ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಹೋಗ್ತಿದ್ದಾಗ ಬೈಕ್, ಟಿಪ್ಪರ್ ಡಿಕ್ಕಿ- ಸವಾರ ಸ್ಥಳದಲ್ಲೇ ದುರ್ಮರಣ

    ಚಿಕ್ಕಬಳ್ಳಾಪುರ: ಪಲ್ಸರ್ ಬೈಕ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಬಳಿ ನಡೆದಿದೆ.

    ಆಂಧ್ರಪ್ರದೇಶದ ಅನಂತಪುರ ಮೂಲದ ರಾಕೇಶ್(23) ಮೃತ ಯುವಕ. ಇಂದು ಬೆಳಗ್ಗೆ ಒಂದೇ ಬೈಕ್‍ನಲ್ಲಿ ಮೂವರು ನಂದಿಬೆಟ್ಟಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬೆಳ್ಳಂಬೆಳಗ್ಗೆ ದಟ್ಟ ಮಂಜು ಆವರಿಸಿದ್ದ ಹಿನ್ನೆಲೆಯಲ್ಲಿ ಸರಿಯಾಗಿ ರಸ್ತೆ ಕಾಣದೆ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪರ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

    ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಡಿಯೋ: ಬೆಳ್ಳಂಬೆಳಗ್ಗೆ ನಡುರಸ್ತೆಯಲ್ಲೇ ಹೊತ್ತಿ ಉರಿಯಿತು 25 ಪ್ರಯಾಣಿಕರಿದ್ದ ಬಸ್!

    ವಿಡಿಯೋ: ಬೆಳ್ಳಂಬೆಳಗ್ಗೆ ನಡುರಸ್ತೆಯಲ್ಲೇ ಹೊತ್ತಿ ಉರಿಯಿತು 25 ಪ್ರಯಾಣಿಕರಿದ್ದ ಬಸ್!

    ವಿಜಯನಗರಂ: 25 ಮಂದಿ ಪ್ರಯಾಣಿಕರನ್ನು ತುಂಬಿದ್ದ ಖಾಸಗಿ ಬಸ್ಸೊಂದು ಬೆಳ್ಳಂಬೆಳಗ್ಗೆಯೇ ನಡುರಸ್ತೆಯಲ್ಲಿಯೇ ಧಗಧಗನೇ ಹೊತ್ತಿ ಉರಿದ ಘಟನೆ ಇಂದು ನಡೆದಿದೆ.

    ಈ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

    ವಿಜಯಲಕ್ಷ್ಮೀ ಎಂಬ ಹೆಸರಿನ ಖಾಸಗಿ ಬಸ್ ಈ ಅವಘಡಕ್ಕೆ ತುತ್ತಾಗಿದೆ. ಅರಕು ಎಂಬಲ್ಲಿಂದ ವಿಜಯನಗರಂಗೆ ತೆರಳುತ್ತಿದ್ದ ಬಸ್ಸಿನಲ್ಲಿ 25 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಕೆಲ ಪ್ರಯಾಣಿಕರಿಗೆ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಗಮನಕ್ಕೆ ಬಂದಿದೆ.

    ಕೂಡಲೇ ಪ್ರಯಾಣಿಕರೆಲ್ಲರೂ ಬಸ್ ನಿಂದ ಇಳಿದಿದ್ದಾರೆ. ಎಲ್ಲರೂ ಬಸ್ ನಿಂದ ಇಳಿಯುತ್ತಿದ್ದಂತೆಯೇ ಬೆಂಕಿಯ ಜ್ವಾಲೇ ಇಡೀ ಬಸ್ ಗೆ ಪಸರಿಸಿದ್ದು, ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಈ ದೃಶ್ಯವನ್ನು ಕೆಲ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

    ಶಾರ್ಟ್ ಸರ್ಕ್ಯೂಟ್  ನಿಂದ ಈ ಅವಘಡ ಸಂಭವಿಸಿರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

    https://www.youtube.com/watch?v=i9UXP2p3FGc

    https://www.youtube.com/watch?v=WnGbiFmwmm4

  • ನಿಮ್ಮ ಮಕ್ಕಳಿಗೆ ಪ್ಯಾಕೇಜ್ಡ್ ತಿಂಡಿ ಕೊಡೋ ಮೊದಲು ಈ ಸುದ್ದಿ ಓದಿ

    ನಿಮ್ಮ ಮಕ್ಕಳಿಗೆ ಪ್ಯಾಕೇಜ್ಡ್ ತಿಂಡಿ ಕೊಡೋ ಮೊದಲು ಈ ಸುದ್ದಿ ಓದಿ

     

    ಹೈದರಾಬಾದ್: ನಿಮ್ಮ ಮಕ್ಕಳು ಅಂಗಡಿಯಿಂದ ಚಿಪ್ಸ್ ಅಥವಾ ಇತರೆ ರೀತಿಯ ಪ್ಯಾಕೇಜ್ಡ್ ತಿಂಡಿ ತಂದು ತಿನ್ನುವಾಗ ಸ್ವಲ್ಪ ಎಚ್ಚರ ವಹಿಸಿ. ಕುರುಕಲು ತಿಂಡಿ ಮಕ್ಕಳ ಆರೋಗ್ಯವನ್ನ ಹಾಳು ಮಾಡುವುದರ ಜೊತೆಗೆ ಅವರ ಪ್ರಾಣಕ್ಕೂ ಕುತ್ತು ತರಬಹುದು. ಬಾಲಕನೊಬ್ಬ ಮಕ್ಕಳ ತಿಂಡಿಯಾದ ರಿಂಗ್ಸ್ ಪ್ಯಾಕೆಟ್‍ನಲ್ಲಿದ್ದ ಆಟಿಕೆ ನುಂಗಿ ಸಾವನ್ನಪ್ಪಿರೋ ಘಟನೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಬುಧವಾರದಂದು ನಡೆದಿದೆ.

    ಇಲ್ಲಿನ ಏಳೂರಿನ ಕುಮ್ಮಾರಾ ರೇವು ಪ್ರದೇಶದಲ್ಲಿ 4 ವರ್ಷದ ಬಾಲಕ ನಿರೀಕ್ಷಣ್ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಮಕ್ಕಳ ತಿಂಡಿಯಾದ ರಿಂಗ್ಸ್ ಪ್ಯಾಕೆಟ್‍ನಲ್ಲಿ ಸಾಮಾನ್ಯವಾಗಿ ಒಂದು ಚಿಕ್ಕ ಆಟಿಕೆ ಇರುತ್ತದೆ. ಇದನ್ನ ಬಾಲಕ ನುಂಗಿದ್ದಾನೆ. ಕೂಡಲೇ ಪೋಷಕರು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರಾದ್ರೂ ಯಾವುದೇ ಪ್ರಯೋಜನವಾಗಿಲ್ಲ.

    ಬಾಲಕ ಆಕಸ್ಮಿಕವಾಗಿ ಆಟಿಕೆಯನ್ನ ನುಂಗಿದನೋ ಅಥವಾ ಅದು ತಿನ್ನುವ ವಸ್ತು ಎಂದುಕೊಂಡು ನುಂಗಿದನೋ ಗೊತ್ತಿಲ್ಲ.

    ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

     

  • ಬೈಕ್‍ಗೆ ಡಿಕ್ಕಿ ಹೊಡೆದು ಕಾರ್ ಬಿಟ್ಟು ಎಸ್ಕೇಪ್ ಆದ ಆಂಧ್ರ ಪೊಲೀಸರು

    ಬೈಕ್‍ಗೆ ಡಿಕ್ಕಿ ಹೊಡೆದು ಕಾರ್ ಬಿಟ್ಟು ಎಸ್ಕೇಪ್ ಆದ ಆಂಧ್ರ ಪೊಲೀಸರು

    ಚಿಕ್ಕಬಳ್ಳಾಪುರ: ಆಂಧ್ರಪ್ರದೇಶ ಮೂಲದ ಯುವಕ-ಯುವತಿ ಸಂಚರಿಸುತ್ತಿದ್ದ ಬೈಕ್ ಗೆ ಆಂಧ್ರಪ್ರದೇಶ ಪೊಲೀಸರಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ತಳಗವಾರಹೊಸಹಳ್ಳಿ ಬಳಿ ನಡೆದಿದೆ.

    ಘಟನೆಯಲ್ಲಿ ಬೈಕ್‍ನಲ್ಲಿದ್ದ ಕದಿರಿ ಮೂಲದ ನಾಗಾರ್ಜುನ ಹಾಗೂ ಮಲ್ಲಿಕಾ ಗಾಯಗೊಂಡು ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಪಿ04ಬಿಸಿ 3222 ನಂಬರಿನ ಸ್ವಿಫ್ಟ್ ಕಾರು ಆಂಧ್ರದ ಕಡಪ ಎಸ್‍ಪಿ ಕಚೇರಿಗೆ ಸೇರಿದ್ದು ಎನ್ನಲಾಗಿದೆ.

    ಘಟನೆಯಲ್ಲಿ ಯುವಕ ನಾಗರಾಜು ಬಲಗಾಲಿನ ಪಾದ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಯುವಕ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಿಫ್ಟ್ ಕಾರಿನ ಟೈರ್ ಸ್ಫೋಟಗೊಂಡ ಪರಿಣಾಮ ಅಫಘಾತ ಸಂಭವಿಸಿದೆ. ಆದ್ರೆ ಅಪಘಾತದ ನಂತರ ಗಾಯಾಳುಗಳ ನೆರವಿಗೆ ಬರಬೇಕಾದ ಪೊಲೀಸರೇ ಅಪಘಾತ ಮಾಡಿ ಸ್ಥಳದಲ್ಲೇ ಕಾರು ಬಿಟ್ಟು ಎಸ್ಕೇಪ್ ಆಗಿದ್ದಾರೆ. ಸ್ಥಳೀಯರೇ ಗಾಯಾಳುಗಳ ನೆರವಿಗೆ ಧಾವಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.

    ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳೀಯ ಕೈವಾರ ಹೊರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಲವ್ ಮುಂದುವರೆಸಲು ನಿರಾಕರಿಸಿದ್ದಕ್ಕೆ ಪ್ರೇಯಸಿಯ ಮೇಲೆ ಲೈಂಗಿಕ ದೌರ್ಜನ್ಯ -ಗೆಳೆಯರಿಂದ ವಿಡಿಯೋ ಮಾಡಿಸ್ದ

    ಲವ್ ಮುಂದುವರೆಸಲು ನಿರಾಕರಿಸಿದ್ದಕ್ಕೆ ಪ್ರೇಯಸಿಯ ಮೇಲೆ ಲೈಂಗಿಕ ದೌರ್ಜನ್ಯ -ಗೆಳೆಯರಿಂದ ವಿಡಿಯೋ ಮಾಡಿಸ್ದ

    ಹೈದರಾಬಾದ್: ರಿಲೇಷನ್‍ಶಿಪ್ ಮುಂದುವರೆಸಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ತನ್ನ ಪ್ರೇಯಸಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅದನ್ನ ಗೆಳೆಯರಿಂದ ವಿಡಿಯೋ ಮಾಡಿಸಿದ್ದು, ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಆಗಸ್ಟ್ ನಲ್ಲಿ ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಮಾಡಿದ ಸ್ನೇಹಿತರು ಸೇರಿದಂತೆ ಪ್ರಮುಖ ಆರೋಪಿ ಸಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಯುವತಿ ಹಾಗೂ ಆರೋಪಿ ಸಾಯಿ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಇತ್ತೀಚೆಗೆ ಯುವತಿ ಸಾಯಿಯನ್ನು ಅವಾಯ್ಡ್ ಮಾಡುತ್ತಿದ್ದಳು. ಪ್ರೇಮವನ್ನು ಮುಂದುವರೆಸಲು ನಿರಾಕರಿಸಿದ್ದಳು. ಹೀಗಾಗಿ ಸಾಯಿ ಆಕೆಗೆ ಪಾಠ ಕಲಿಸಬೇಕೆಂದು ತನ್ನ ಸ್ನೇಹಿತರ ಜೊತೆಗೂಡಿ ಲೈಂಗಿಕ ದೌರ್ಜನ್ಯವೆಸಗುವ ಪ್ಲ್ಯಾನ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಮೂವರು ಯುವಕರು ಯುವತಿಗೆ ದೇವಸ್ಥಾನಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿ ಕರೆದುಕೊಂಡು ಹೋಗಿದ್ದರು. ಅದ್ರೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸಾಯಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈ ವೇಳೆ ಮತ್ತೊಬ್ಬ ಯುವತಿಯೂ ಅಲ್ಲಿದ್ದು, ತನ್ನ ಗೆಳತಿಯನ್ನ ರಕ್ಷಿಸಲು ಯತ್ನಿಸಿ ವಿಫಲಳಾಗಿದ್ದಾಳೆ.

    ಸಂತ್ರಸ್ತ ಯುವತಿ ಅಳುತ್ತಾ ಅಂಗಲಾಚುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನ ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿತ್ತು. ವಿಡಿಯೋ ನೋಡಿದ ಕನಿಗಿರಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಸಂತ್ರಸ್ತ ಯುವತಿಯನ್ನು ಪತ್ತೆ ಮಾಡಿದ ಪೊಲೀಸರು ಆಕೆಯನ್ನ ಸಂಪರ್ಕಿಸಿ, ಆಕೆಗೆ ಹಾಗೂ ಪೋಷಕರಿಗೆ ದೂರು ದಾಖಲಿಸುವಂತೆ ಹೇಳಿದ್ದರು.

    ಪ್ರಮುಖ ಆರೋಪಿ ಸಾಯಿ ಬಿಎಸ್‍ಸಿ ಕೃಷಿ ಓದುತ್ತಿದ್ದು, ಮತ್ತೊಬ್ಬ ಆರೋಪಿ ಕಾರ್ತಿಕ್ ಬಿಟೆಕ್ ವ್ಯಾಸಂಗ ಮಾಡುತ್ತಿದ್ದಾನೆ. ಮೂರನೇ ಆರೋಪಿ ಪವನ್ ಪೊಲೀಸ್ ಕಾನ್ಸ್ ಟೇಬಲ್‍ವೊಬ್ಬರ ಮಗ ಎಂದು ವರದಿಯಾಗಿದೆ. ಎಲ್ಲಾ ಮೂವರು ಆರೋಪಿಗಳ ವಿರುದ್ಧ ನಿರ್ಭಯಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    ಮೂರು ದಿನಗಳ ಹಿಂದೆ ನಮಗೆ ಈ ಘಟನೆ ಬಗ್ಗೆ ತಿಳಿಯಿತು. ನಂತರ ನಾವು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ಬಂಧಿಸಿದ್ದೇವೆ. ಶಿಕ್ಷಕರು ಹಾಗೂ ಪೋಷಕರಿಗೆ ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಕಣ್ಣಿಡುವಂತೆ ಮನವಿ ಮಾಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    https://www.youtube.com/watch?v=p0Td9z0QsiE

  • ತಿರುಮಲದಲ್ಲಿ ವ್ಯಕ್ತಿಯಿಂದ ಪಿಸ್ತೂಲ್, 14 ಬುಲೆಟ್ ವಶ

    ತಿರುಮಲದಲ್ಲಿ ವ್ಯಕ್ತಿಯಿಂದ ಪಿಸ್ತೂಲ್, 14 ಬುಲೆಟ್ ವಶ

    ತಿರುಮಲ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲದಲ್ಲಿ ವ್ಯಕ್ತಿಯೊಬ್ಬರು ಕಾರಿನಲ್ಲಿದ್ದ ಪಿಸ್ತೂಲ್ ಹಾಗೂ 14 ಬುಲೆಟ್‍ಗಳನ್ನ ವಶಪಡಿಸಿಕೊಳ್ಳಲಾಗಿದೆ.

    ಇಲ್ಲಿನ ಅಲಿಪಿರಿ ಚೆಕ್‍ಪೋಸ್ಟ್ ಬಳಿ ತಪಾಸಣೆ ವೇಳೆ ಪುಣೆ ಮೂಲದ ವ್ಯಕ್ತಿ ಕಾರಿನಲ್ಲಿ ಪಿಸ್ತೂಲ್ ಹಾಗೂ ಬುಲೆಟ್ ಅಡಗಿಸಿಟ್ಟಿದ್ದು ಪತ್ತೆಯಾಗಿದೆ. ಚೆಕ್‍ಪೋಸ್ಟ್ ನ ಸೆಕ್ಯೂರಿಟಿ ಗಾರ್ಡ್‍ಗಳು ಪಿಸ್ತೂಲ್ ಹಾಗೂ ಬುಲೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ತಿರುಪತಿ ವೆಂಕಟೇಶ್ವರ ಸನ್ನಿಧಿಯ ಪ್ರವೇಶ ದ್ವಾರದ ಬಳಿ ಈ ಚೆಕ್‍ಪೋಸ್ಟ್ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

    ದೇವಾಲಯದ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

  • ವಿದ್ಯುತ್ ಸಮಸ್ಯೆ ಬಗ್ಗೆ ಪ್ರಶ್ನಿಸಿದ ವ್ಯಕ್ತಿಗೆ ನೀನೇನು ಹುಚ್ಚನಾ? ಎಂದ ಚಂದ್ರಬಾಬು ನಾಯ್ಡು

    ವಿದ್ಯುತ್ ಸಮಸ್ಯೆ ಬಗ್ಗೆ ಪ್ರಶ್ನಿಸಿದ ವ್ಯಕ್ತಿಗೆ ನೀನೇನು ಹುಚ್ಚನಾ? ಎಂದ ಚಂದ್ರಬಾಬು ನಾಯ್ಡು

    ಹೈದರಾಬಾದ್: ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ತಾಳ್ಮೆ ಕಳೆದುಕೊಂಡು ವ್ಯಕ್ತಿಯೊಬ್ಬರ ಮೇಲೆ ನಾಲಿಗೆ ಹರಿಬಿಟ್ಟಿದ್ದಾರೆ.

    ಬುಧವಾರದಂದು ಚಂದ್ರಬಾಬು ನಾಯ್ಡು ಕರ್ನೂಲು ಜಿಲ್ಲೆಯ ನಂದ್ಯಾಲದಲ್ಲಿ ಉಪಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ವ್ಯಕ್ತಿಯೊಬ್ಬರು ಈ ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ಪ್ರಶ್ನಿಸಿದ್ರು. ಆಗ ಕೋಪಗೊಂಡ ಚಂದ್ರಬಾಬು ನಾಯ್ಡು, ನನ್ನ ಜೊತೆ ಈ ರೀತಿ ಮಾತಾಡಲು ನಿನಗೆ ಎಷ್ಟು ಧೈರ್ಯ? ನಾನು ಇಲ್ಲಿಗೆ ರಾಜಕೀಯ ಮುಖಂಡನಾಗಿ, ಒಬ್ಬ ಮುಖ್ಯಮಂತ್ರಿಯಾಗಿ ಬಂದಿದ್ದೀನಿ. ಇಷ್ಟೊಂದು ಜನ ಕಾರ್ಯಕರ್ತರ ಮಧ್ಯೆ ನನ್ನ ಜೊತೆ ಈ ರೀತಿ ಮಾತಾಡಲು ಎಷ್ಟು ಧೈರ್ಯ ಎಂದು ಗರಂ ಆದ್ರು. ಅಲ್ಲದೆ ಆ ವ್ಯಕ್ತಿ ವಿರೋಧ ಪಕ್ಷದವನು. ಸಾರ್ವಜನಿಕ ಸಭೆಯನ್ನ ಹಾಳು ಮಾಡ್ತಿದ್ದಾನೆ ಅಂದ್ರು.

    ನೀನೇನು ಹುಚ್ಚನಾ? ಕುಡಿದಿದ್ಯಾ? ವೈಎಸ್‍ಆರ್ ಕಾಂಗ್ರೆಸ್ ನವರು ನಿನ್ನನ್ನು ಇಲ್ಲಿಗೆ ಕಳಿಸಿದ್ರೆ ನನ್ನ ಸಭೆಗೆ ಬರ್ಬೇಡ, ಮನೆಯಲ್ಲಿರು ಎಂದು ಚಂದ್ರಬಾಬು ನಾಯ್ಡು ಹೇಳಿದ್ರು.

    ಚಂದ್ರಬಾಬು ನಾಯ್ಡು ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡ್ತಿದ್ರು. ಗ್ರಾಮೀಣ ಪ್ರದೇಶಗಳಿಗೆ ಹೇಗೆ ವಿದ್ಯುತ್ ಪೂರೈಕೆ ಮಾಡಲಾಗ್ತಿದೆ ಎಂಬುದರ ಬಗ್ಗೆ ಮಾತನಾಡ್ತಿದ್ದಾಗ ಈ ವ್ಯಕ್ತಿ ಮಧ್ಯಪ್ರವೇಶಿಸಿ, ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇದೆ ಎಂದು ಹೇಳಿದ್ರು. ಇದಕ್ಕೆ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಇಲ್ಲೆ ಎಂದು ವಾದಿಸಿದ್ರು.