Tag: andrapradesh

  • ಟ್ರಕ್, ಸಾರಿಗೆ ಬಸ್ ಡಿಕ್ಕಿ – 8 ಜನರು ರ್ದುಮರಣ, 30ಕ್ಕೂ ಹೆಚ್ಚು ಜನರಿಗೆ ಗಾಯ

    ಟ್ರಕ್, ಸಾರಿಗೆ ಬಸ್ ಡಿಕ್ಕಿ – 8 ಜನರು ರ್ದುಮರಣ, 30ಕ್ಕೂ ಹೆಚ್ಚು ಜನರಿಗೆ ಗಾಯ

    -ಕೋಲಾರ ಜಿಲ್ಲೆ ಗಡಿ ಭಾಗದಲ್ಲಿ ಭೀಕರ ಅಪಘಾತ

    ಕೋಲಾರ: ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಕೋಲಾರ (Kolar) ಜಿಲ್ಲೆಯ ಗಡಿ ಆಂಧ್ರಪ್ರದೇಶದ (Andrapradesh) ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಕಂಟೈನರ್ ಹೊಂದಿದ್ದ ಟ್ರಕ್ ಮತ್ತು ಆಂಧ್ರ ಸಾರಿಗೆ ಬಸ್ ಡಿಕ್ಕಿಯಾಗಿ ಬಸ್ ನಜ್ಜುಗುಜ್ಜಾಗಿದೆ. ಪರಿಣಾಮ ಬಸ್ಸಿನಲ್ಲಿದ್ದ 8 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಗಾಯಾಳುಗಳನ್ನು ಚಿತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಇದನ್ನೂ ಓದಿ: ನಾನಿನ್ನೂ ವೆಬ್‌ಸೀರಿಸ್‌ ನೋಡಿಲ್ಲ, ಮಾಡುವವರು ಸರ್ಕಾರವನ್ನು ಒಳ್ಳೆಯ ರೀತಿಯಲ್ಲಿ ತೋರಿಸಲ್ಲ: ಎಸ್.ಜೈಶಂಕರ್

    ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು (Palamaner) ಬಳಿ ಈ ಅಪಘಾತ ಸಂಭವಿಸಿದ್ದು, ಬೆಂಗಳೂರು ಹಾಗೂ ಚಿತ್ತೂರು ರಾಷ್ಟೀಯ ಹೆದ್ದಾರಿಯ ಮೋಗಲಿ ಘಾಟ್‌ನಲ್ಲಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಆಂಧ್ರ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳೀಯರು ಮತ್ತು ಪೊಲೀಸರು ರಕ್ಷಣಾಕಾರ್ಯವನ್ನು ಕೈಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ: ಕೇಜ್ರಿವಾಲ್‌ಗೆ ಜಾಮೀನು – 6 ತಿಂಗಳ ಬಳಿಕ ಜೈಲಿನಿಂದ ಹೊರಬಂದ ದೆಹಲಿ ಸಿಎಂ

  • ಚಿಕ್ಕಬಳ್ಳಾಪುರ ಎರಡು ಪ್ರತ್ಯೇಕ ಅಪಘಾತ- ಐದು ಮಂದಿಯ ದಾರುಣ ಸಾವು

    ಚಿಕ್ಕಬಳ್ಳಾಪುರ ಎರಡು ಪ್ರತ್ಯೇಕ ಅಪಘಾತ- ಐದು ಮಂದಿಯ ದಾರುಣ ಸಾವು

    -ತಂದೆ ತಾಯಿ ಮಗನ ದಾರುಣ ಸಾವು

    ಚಿಕ್ಕಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ ಸಂಭವಿಸಿದ್ದು ಐದು ಮಂದಿಯ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯಲ್ಲಿ ನಡೆದಿದೆ.

    ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ಬಳಿ ನಡೆದಿದೆ. ಇದನ್ನೂ ಓದಿ: ಬಳ್ಳಾರಿ ಜೈಲಿಗೆ ದರ್ಶನ್‌ ಶಿಫ್ಟ್‌ – ದಾಸನಿಗಾಗಿ ರೂಟ್‌ ಮ್ಯಾಪ್‌ ಚೇಂಜ್‌?

    ಮೃತರನ್ನು ಸೂರಜ್ (27) ಹಾಗೂ ಕಮಲ್ (26) ಗುರುತಿಸಲಾಗಿದ್ದು ಉತ್ತರ ಪ್ರದೇಶದ (Uttarpradesh) ಖಾನಾಪುರ್ (Khanapur) ನಿವಾಸಿಗಳು ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡ ಜೈಸಿಂಗ್, ಯು ಜೈಸಿಂಗ್ ಅವರನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ ಇಬ್ಬರಿಗೆ ಹಿಂದೂಪೂರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ವೈದ್ಯೆ ಅತ್ಯಾಚಾರ-ಕೊಲೆ ಕೇಸ್; ಐಎಂಎ ಸದಸ್ಯತ್ವದಿಂದ ಆರ್‌ಜಿ ಕರ್‌ ಆಸ್ಪತ್ರೆ ಮಾಜಿ ವೈದ್ಯ ಡಾ. ಸಂದೀಪ್‌ ಅಮಾನತು‌

    ಆರು ಮಂದಿ ಆಂಧ್ರಪ್ರದೇಶದ (Andrapradesh) ಸತ್ಯಸಾಯಿ ಜಿಲ್ಲೆಯ ಹಿಂದೂಪುರ ಬಳಿಯ ಕೈಗಾರಿಕಾ ಪ್ರದೇಶ ಶ್ಯಾಮ್ ಪೈರಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿಕೊಂಡು ಗೌರಿಬಿದನೂರು ಮಾರ್ಗವಾಗಿ ಇನ್ನೋವಾ ಕಾರಿನಲ್ಲಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರು ಚಾಲಕನ ಅತಿ ವೇಗವೇ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಪಲ್ಟಿಯಾಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: Video | ರಾತ್ರೋರಾತ್ರಿ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ!

    ಇನ್ನೂ ಚಿಂತಾಮಣಿ ತಾಲೂಕಿನ ದಂಡುಪಾಳ್ಯ ಗೇಟ್ ಬಳಿ ಕಾರು ಹಾಗೂ ಟಿಟಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮಗ ಶ್ರೀಕಾಂತ್, ತಂದೆ ಶ್ರೀನಿವಾಸಲು ಹಾಗೂ ತಾಯಿ ಪುಷ್ಪ ಮೃತಪಟ್ಟಿದ್ದಾರೆ. ಟಿಟಿಯಲ್ಲಿದ್ದ 12 ಮಂದಿಯೂ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಗುಜರಾತ್‌ನಲ್ಲಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ – ಮಗುವಿನ ಅಪ್ಪನ ಸ್ನೇಹಿತನಿಂದಲೇ ಕೃತ್ಯ

  • ಆಂಧ್ರಪ್ರದೇಶ-ತೆಲಂಗಾಣ ನಡುವೆ ಕೃಷ್ಣಾ ನದಿ ನೀರು ಹಂಚಿಕೆ ವಿವಾದ- ಕೃಷ್ಣಾ ನ್ಯಾಯಧಿಕರಣ 2 ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

    ಆಂಧ್ರಪ್ರದೇಶ-ತೆಲಂಗಾಣ ನಡುವೆ ಕೃಷ್ಣಾ ನದಿ ನೀರು ಹಂಚಿಕೆ ವಿವಾದ- ಕೃಷ್ಣಾ ನ್ಯಾಯಧಿಕರಣ 2 ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

    ನವದೆಹಲಿ: ಆಂಧ್ರಪ್ರದೇಶ (Andhra Pradesh) ಮತ್ತು ತೆಲಂಗಾಣ (Telangana) ನಡುವೆ ಕೃಷ್ಣಾ ನದಿ (Krishna  River) ನೀರು ಹಂಚಿಕೆ ವಿವಾದ ಪರಿಹರಿಸಲು ನ್ಯಾಯಧಿಕರಣ (Tribunal) ರಚನೆಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಬುಧವಾರ ನಡೆದ ಸಭೆಯಲ್ಲಿ ಕೃಷ್ಣಾ ಟ್ರಿಬ್ಯುನಲ್ 2 ರಚನೆಗೆ ಒಪ್ಪಿಗೆ ಸೂಚಿಸಲಾಗಿದೆ.

    ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಕೃಷ್ಣಾ ನ್ಯಾಯಧಿಕರಣ ಕರ್ನಾಟಕ, ಮಹರಾಷ್ಟ್ರ, ಅವಿಭಜಿತ ಆಂಧ್ರಪ್ರದೇಶಕ್ಕೆ ನೀರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಆದರೆ ಆಂಧ್ರಪ್ರದೇಶದಿಂದ ಹೊರ ಬಂದ ತೆಲಂಗಾಣ ನೀರು ಮರು ಹಂಚಿಕೆಗೆ ಆಗ್ರಹಿಸಿ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿತ್ತು.

    ಪ್ರಕರಣ ವಿಚಾರಣೆ ವೇಳೆ ತೆಲಂಗಾಣ ಮನವಿಗೆ ಕರ್ನಾಟಕ-ಮಹಾರಾಷ್ಟ್ರ ವಿರೋಧ ವ್ಯಕ್ತಪಡಿಸಿದ್ದವು, ನಮ್ಮ ನೀರಿನ ಪ್ರಮಾಣದಲ್ಲಿ ಕಡಿಮೆ ಮಾಡುವಂತಿಲ್ಲ, ಆಂಧ್ರಪ್ರದೇಶಕ್ಕೆ ಹಂಚಿಕೆಯಾಗಿರುವ ನೀರಿನ ಪ್ರಮಾಣದಲ್ಲಿ ತೆಲಂಗಾಣಕ್ಕೆ ಪಾಲು ನೀಡಬೇಕು ಎಂದು ಒತ್ತಾಯಿಸಿದ್ದವು, ಇದಕ್ಕೆ ತೆಲಂಗಾಣವೂ ಒಪ್ಪಿದ ಹಿನ್ನೆಲೆ ಎರಡು ರಾಜ್ಯಗಳ ನಡುವೆ ನೀರು ಹಂಚಲು ನ್ಯಾಯಧಿಕರಣ ಸ್ಥಾಪಿಸಲು ಸುಪ್ರೀಂಕೋರ್ಟ್ (Supreme Court) ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

    ಸುಪ್ರೀಂಕೋರ್ಟ್ ನಿರ್ದೇಶನ ಅನ್ವಯ ಅಂತರ-ರಾಜ್ಯ ನದಿ ನೀರಿನ ವಿವಾದಗಳ (ISRWD) ಕಾಯ್ದೆ, 1956ರ ಅಡಿಯಲ್ಲಿ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-II ಗೆ ಅನುಮೋದನೆ ನೀಡಿದೆ. ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಇದನ್ನು ಅಧಿಕೃತವಾಗಿ ಹೇಳಿದ್ದಾರೆ. ಇದನ್ನೂ ಓದಿ: ಉಜ್ವಲ ಫಲಾನುಭವಿಗಳಿಗೆ ಸಬ್ಸಿಡಿ ಹೆಚ್ಚಳ- 600 ರೂ.ಗೆ ಸಿಗಲಿದೆ ಸಿಲಿಂಡರ್

    ಕೃಷ್ಣಾ ನ್ಯಾಯಧಿಕರಣದಲ್ಲಿ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524.26 ಮೀಟರುಗಳಿಗೆ ಏರಿಸಲು ಅವಕಾಶ ನೀಡಿ ಕರ್ನಾಟಕಕ್ಕೆ 911 ಟಿಎಂಸಿ, ಮಹಾರಾಷ್ಟ್ರಕ್ಕೆ 666 ಟಿಎಂಸಿ ಹಾಗೂ ಆಂಧ್ರಪ್ರದೇಶಕ್ಕೆ 1001 ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶಿಸಿತ್ತು. ಕರ್ನಾಟಕಕ್ಕೆ ಎ ಸ್ಕೀಮಿನಲ್ಲಿ 734, ಬಿ ಸ್ಕೀಮಿನಲ್ಲಿ 177 ಟಿಎಂಸಿ ನೀರು. ಮಹಾರಾಷ್ಟ್ರಕ್ಕೆ ಬಿ. ಸ್ಕೀಮಿನಲ್ಲಿ 81 ಟಿಎಂಸಿ, ಆಂಧ್ರಕ್ಕೆ ಬಿ ಸ್ಕೀಮಿನಲ್ಲಿ 190 ಟಿಎಂಸಿ ನೀರು ನೀಡಿತ್ತು.

    ಕರ್ನಾಟಕ ಹೆಚ್ಚುವರಿಯಾಗಿ 170 ಟಿಎಂಸಿ ನೀರು ಸಂಗ್ರಹಿಸಬಹುದು. ಪ್ರತಿ ವರ್ಷ ರಾಜ್ಯದಿಂದ ಆಂಧ್ರಕ್ಕೆ 8-10 ಟಿಎಂಸಿ ಹರಿಸಬೇಕು, ಕೃಷ್ಣಾ ಮೇಲ್ದಂಡೆ ಯೋಜನೆಗೆ 303 ಟಿಎಸಿ ನೀರು ಬಳಸಲು ಸಮ್ಮತಿ ನೀಡಿ ಈ ತೀರ್ಪು 2050ರವರೆಗೆ ಅನ್ವಯವಾಗುತ್ತದೆ ಎಂದು ಹೇಳಿತ್ತು. ಸದ್ಯ ಕರ್ನಾಟಕ ಮಹರಾಷ್ಟ್ರ ತಮ್ಮ ಪಾಲಿನ ನೀರಿನ ಬಳಕೆಗೆ ಗೆಜೆಟ್ ಹೊರಡಿಸಲು ನಿರ್ದೇಶಿಸುವಂತೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಧಾನಸೌಧಕ್ಕೆ ಆಂಧ್ರ ಸರ್ಕಾರದ ಸಚಿವರ ನಿಯೋಗ ಭೇಟಿ – ಅಶೋಕ್ ಜತೆ ಸಮಾಲೋಚನೆ

    ವಿಧಾನಸೌಧಕ್ಕೆ ಆಂಧ್ರ ಸರ್ಕಾರದ ಸಚಿವರ ನಿಯೋಗ ಭೇಟಿ – ಅಶೋಕ್ ಜತೆ ಸಮಾಲೋಚನೆ

    ಬೆಂಗಳೂರು: ಕರ್ನಾಟಕ ಸರ್ಕಾರದ (Karnataka Government) ಕಂದಾಯ ಇಲಾಖೆ ಜಮೀನುಗಳ ಮಂಜೂರಾತಿ ನಿಯಮ, ನಿಬಂಧನೆಗಳ ಅಧ್ಯಯನಕ್ಕೆ ಆಂಧ್ರ ಸರ್ಕಾರದ ಕಂದಾಯ ಸಚಿವರ ನೇತೃತ್ವದ ನಿಯೋಗ ರಾಜ್ಯಕ್ಕೆ ಆಗಮಿಸಿದೆ.

    ಇಂದು ಕಂದಾಯ ಸಚಿವ ಆರ್. ಅಶೋಕ್‌ ಅವರನ್ನು ಆಂಧ್ರಪ್ರದೇಶದ (AndraPradesh) ಕಂದಾಯ‌ ಸಚಿವರ ನೇತೃತ್ವದ ಸಚಿವರು ಹಾಗೂ ಉನ್ನತ ಅಧಿಕಾರಿಗಳ ನಿಯೋಗವು ವಿಧಾನಸೌಧದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿತು. ಈ ಸಂದರ್ಭದಲ್ಲಿ ಸಚಿವ ಆರ್. ಅಶೋಕ್‌ (R Ashok) ಅವರು ರಾಜ್ಯ ಕಂದಾಯ ಇಲಾಖೆ ತೆಗೆದುಕೊಂಡ ಮಹತ್ವದ ತೀರ್ಮಾನಗಳು, ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟರು.

    ಕಂದಾಯ ಇಲಾಖೆಯ ಪಿಂಚಣಿ ವ್ಯವಸ್ಥೆ, ಭೂ ಪರಿವರ್ತನೆ ಸಮಯಾವಧಿ ಇಳಿಕೆ, ಕಾಫಿ ಶುಂಠಿ ಬೆಳೆಗಾರರಿಗೆ ಜಮೀನನ್ನು 30 ವರ್ಷದ ಅವಧಿಗೆ ಲೀಸ್ ನೀಡುವುದು, ಕಂದಾಯ ದಾಖಲೆಗಳನ್ನು ಉಚಿತವಾಗಿ ರೈತರ ಮನೆ ಬಾಗಿಲಿಗೆ ತಲುಪಿಸುವುದು ಮುಂತಾದವುಗಳ ಕುರಿತು ಸಚಿವ ಅಶೋಕ್ ಆಂಧ್ರದ ನಿಯೋಗಕ್ಕೆ ಮಾಹಿತಿ ನೀಡಿದರು. ಇದನ್ನೂ ಓದಿ: ಸರ್ಕಾರಿ ಉಚಿತ ನಿವೇಶನ ಪಡೆಯಲು ಲಂಚ ನೀಡಿದರೆ ಮಂಜೂರಾತಿ ರದ್ದು: ಸುಧಾಕರ್

    ಆಂಧ್ರಪ್ರದೇಶ ಸರ್ಕಾರದ ಕಂದಾಯ ಸಚಿವ ಧರ್ಮನಾ ಪ್ರಸಾದ್ ರಾವ್, ನಗರಾಭಿವೃದ್ಧಿ ಮತ್ತು ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಸಚಿವ ಡಾ. ಆದಿಮುಲುಪು ಸುರೇಶ್, ಸೋಶಿಯಲ್ ವೆಲ್ ಫೇರ್ ಖಾತೆ ಸಚಿವ ಮುರುಗ ನಾಗಾರ್ಜುನ, ಶಾಸಕಿ ಎಲ್. ಪದ್ಮಾವತಿ ಹಾಗೂ ಉನ್ನತ ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯರಾಂ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಪ್ರಚಾರದ ಗೀಳಿಗಾಗಿ ಕೆ.ಆರ್‌ ಮಾರ್ಕೆಟ್‌ನಲ್ಲಿ ಹಣದ ಮಳೆ ಸುರಿಸಿದ್ದ ವ್ಯಕ್ತಿ ವಶಕ್ಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆಸ್ತಿಯಲ್ಲಿ ಪಾಲು ಕೊಡದಿದ್ದಕ್ಕೆ ಮೂವರು ಮಕ್ಕಳೊಂದಿಗೆ ಬೆಂಕಿಹಚ್ಚಿಕೊಂಡ ತಾಯಿ

    ಆಸ್ತಿಯಲ್ಲಿ ಪಾಲು ಕೊಡದಿದ್ದಕ್ಕೆ ಮೂವರು ಮಕ್ಕಳೊಂದಿಗೆ ಬೆಂಕಿಹಚ್ಚಿಕೊಂಡ ತಾಯಿ

    ಅಮರಾವತಿ: ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ಸ್ವತಃ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಎಲಮಂಚಿಲಿ ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ಚಿಂಟು ಚಿನಮಣಿ (45), ಅವರ ಪುತ್ರಿ ಜಾಹ್ನವಿ (18) ಎಂದು ಗುರುತಿಸಲಾಗಿದೆ. ಮಹಿಳೆ ಮತ್ತು ಆಕೆಯ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಮಗಳಿಗೆ ಗಂಭೀರವಾಗಿ ಸುಟ್ಟಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕೆದಕಿದ್ದ ಎಂಇಎಸ್ ಮುಖಂಡನ ವಿರುದ್ಧ FIR ದಾಖಲು

    crime

    ಕುಟುಂಬದಲ್ಲಿ ಆಸ್ತಿವಿವಾದ ಏರ್ಪಟ್ಟಿದ್ದು, ಇದು ತಾರಕಕ್ಕೇರಿದ್ದರಿಂದ ಆಸ್ಪತ್ರೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಪತಿ ಕಣ್ಣೆದುರೇ ಪ್ರಿಯಕರನೊಂದಿಗೆ ಪತ್ನಿ ಸೆಕ್ಸ್ – ಸ್ಕ್ರೂಡ್ರೈವರ್‌ನಿಂದ ಇಬ್ಬರನ್ನು ಇರಿದು ಕೊಂದ

    ಚಿನಮಣಿ ಅವರ ಅತ್ತೆ ಆಸ್ತಿಯಲ್ಲಿ ತನ್ನ ಪಾಲು ನೀಡಲು ನಿರಾಕರಿಸಿದ್ದಾರೆ. ಆಕೆ, ಆಸ್ತಿಯ ಬಹುಪಾಲನ್ನು ತನ್ನ ಮಗಳಿಗೆ ನೀಡಿ, ಉಳಿದ ಪಾಲನ್ನು ಮಗನಿಗೆ ನಿಡಲು ಬಯಸಿದ್ದಳು. ಇದರಿಂದಾಗಿ ಅತೃಪ್ತಿಗೊಂಡ ಚಿನಮಣಿ ಆಹತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಎಂದು ಜಾಲ್ಮುರು ಎಸ್‌ಐ ಪಾರಿ ನಾಯ್ಡು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

  • ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿ ಮೇಲೆ ಬಿದ್ದ ಫ್ಯಾನ್

    ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿ ಮೇಲೆ ಬಿದ್ದ ಫ್ಯಾನ್

    ಹೈದರಾಬಾದ್: 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದ ವೇಳೆ ಶಾಲೆಯಲ್ಲಿದ್ದ ಸೀಲಿಂಗ್ ಫ್ಯಾನ್ ಕೆಳಗೆ ಬಿದ್ದು ವಿದ್ಯಾರ್ಥಿನಿ ಮುಖಕ್ಕೆ ಗಾಯವಾದ ಘಟನೆ ಆಂಧ್ರಪ್ರದೇಶದ ಶ್ರೀಸತ್ಯ ಸಾಯಿ ಜಿಲ್ಲೆಯ ಸ್ಥಳೀಯ ಶಾಲೆಯಲ್ಲಿ ನಡೆದಿದೆ.

    ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಮಾತನಾಡಿ, ಪರೀಕ್ಷೆಗೆ ಎರಡು ದಿನದ ಮೊದಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೂ ಇಂತಹ ಘಟನೆ ನಡೆದಿರುವುದು ದುರದೃಷ್ಟಕರವಾಗಿದೆ. ಈ ಬಗ್ಗೆ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು. ಗಾಯಗೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ ಪುನಃ ಆಕೆ ಪರೀಕ್ಷೆಯನ್ನು ಬರೆದಿದ್ದಾಳೆ.

    ಈ ಹಿಂದೆ ಏಪ್ರಿಲ್ 28 ರಂದು ಕರ್ನೂಲ್‍ನ ಗೋನೆಗಂಡ್ಲ್‍ದಲ್ಲಿರುವ ಮಂಡಲ ಪರಿಷತ್ ಉರ್ದು ಶಾಲೆಯಲ್ಲಿ ತರಗತಿ ನಡೆಯುತ್ತಿದ್ದಾಗ ಸೀಲಿಂಗ್ ಫ್ಯಾನ್‍ನ ಒಂದು ಭಾಗ ಬಿದ್ದು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಇದನ್ನೂ ಓದಿ: ಬೆಂಗ್ಳೂರು ಆಯುಕ್ತರ ಕಚೇರಿಯಲ್ಲೇ ಸಿಕ್ಕಿಬಿದ್ದ ಪೊಲೀಸ್ ಕಳ್ಳ

    ಈ ಘಟನೆಗೆ ಸಂಬಂಧಿಸಿ ಸರ್ಕಾರವನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದು, ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವನ್ನು ದೂಷಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಳಪೆ ಮೂಲಭೂತ ಸೌಕರ್ಯವಿದೆ ಎಂದು ಟೀಕಿಸಿದೆ. ಇದನ್ನೂ ಓದಿ: ಪತಿಯ ಕಿರುಕುಳ ತಾಳಲಾರದೇ ಪತ್ನಿ ನೇಣಿಗೆ ಶರಣು

  • ರೈಲು ನಿಲ್ದಾಣದಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್

    ರೈಲು ನಿಲ್ದಾಣದಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್

    ಹೈದರಾಬಾದ್: ಇಬ್ಬರು ವ್ಯಕ್ತಿಗಳು ಮಹಿಳೆಯ ಪತಿಯ ಮೇಲೆ ದಾಳಿ ಮಾಡಿ ನಂತರ ಮಹಿಳೆಯನ್ನು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ರೈಲು ನಿಲ್ದಾಣದಲ್ಲಿ ನಡೆದಿದೆ.

    25 ವರ್ಷದ ಮಹಿಳೆಯೂ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ಪ್ರಕಾಶಂ ಜಿಲ್ಲೆಯ ಗುಂಟೂರು ಜಿಲ್ಲೆಗೆ ಕಲ್ಲಿನ ಕೆಲಸ ಹುಡುಕಲು ಬಂದಿದ್ದರು. ಇದಕ್ಕಾಗಿ ಗುಂಟೂರು- ರೆಪಲ್ಲೆ ಪ್ಯಾಸಂಜರ್ ರೈಲಿನಲ್ಲಿ ರೆಪಳ್ಳೆ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಶನಿವಾರ ತಡರಾತ್ರಿ ಗುಂಟೂರು ರೈಲು ನಿಲ್ದಾಣದಲ್ಲೇ ತಂಗಲು ನಿರ್ಧರಿಸಿದರು.

    STOP RAPE

    ರಾತ್ರಿ 1 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರ ಬಳಿ ಬಂದು ಮಹಿಳೆಯ ಪತಿಯನ್ನು ಎಬ್ಬಿಸಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ಕೇಳಿ ಎಚ್ಚೆತ್ತುಕೊಂಡ ಮಹಿಳೆ ಮಧ್ಯಪ್ರವೇಶಿಸಿದ್ದಾಳೆ. ಆಗ ಆ ದಾಳಿಕೋರರು ಮಹಿಳೆಯನ್ನು ಹಿಡಿದು ಪ್ಲಾಟ್‍ಫಾರ್ಮ್‍ನ ತುದಿಯಲ್ಲಿರುವ ಪೊದೆಗಳ ಹಿಂದೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ಎರಚಿದ ಕಿರಾತಕನಿಗೆ ಲುಕ್‍ಔಟ್ ನೊಟೀಸ್ ಜಾರಿ

    train

    ಈ ಬಗ್ಗೆ ಮಹಿಳೆಯ ಪತಿ ರೇಪಳ್ಳ ಪೊಲೀಸ್ ಠಾಣೆಗೆ ಧಾವಿಸಿ ಘಟನೆಯ ಬಗ್ಗೆ ತಿಳಿಸಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ದಾಳಿಕೋರರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ – ಪ್ರಾಧ್ಯಾಪಕ ಅಮಾನತು

    ಇಬ್ಬರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಸದ್ಯ ಆಕೆ ಚೇತರಿಸಿಕೊಳ್ಳುತ್ತಿದ್ದಾರೆ.

  • ಫೋಟೋಸ್, ರೀಲ್ಸ್ ಮಾಡ್ಕೊಂಡು ಸ್ಕೂಟಿಯಲ್ಲಿ ಜಾಲಿ ಟ್ರಿಪ್- ಬಸ್ ಡಿಕ್ಕಿಯಾಗಿ ಮೂವರು ದುರ್ಮರಣ

    ಫೋಟೋಸ್, ರೀಲ್ಸ್ ಮಾಡ್ಕೊಂಡು ಸ್ಕೂಟಿಯಲ್ಲಿ ಜಾಲಿ ಟ್ರಿಪ್- ಬಸ್ ಡಿಕ್ಕಿಯಾಗಿ ಮೂವರು ದುರ್ಮರಣ

    ಚಿಕ್ಕಬಳ್ಳಾಪುರ: ಖಾಸಗಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ತಂದೆ, ತಾಯಿ ಹಾಗೂ ಮಗ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ನಡೆದಿದೆ.

    ಬೆಂಗಳೂರು ಮೂಲದ ದಂಪತಿ ಗೌಸ್(37), ಅಮ್ಮಾಜಾನ್(33) ಹಾಗೂ ಇವರ ಮಗ ರಿಯಾನ್(13) ಮೃತರು. ಗೌಸ್ ಮೂಲತಃ ಹೊಸಪೇಟೆಯವರು ಹಾಗೂ ಅಮ್ಮಾಜಾನ್ ಆಂಧ್ರಪ್ರದೇಶದ ಕದಿರಿಯದವರು. ಇವರು ಮದುವೆಯಾದ ನಂತರ ಬೆಂಗಳೂರಿಗೆ ಬಂದು ವಾಸ ಮಾಡುತ್ತಿದ್ದರು. ಗೌಸ್ ಸೆಕೆಂಡ್ ಹ್ಯಾಂಡ್ ಬೈಕ್ ತಗೊಂಡು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು.

    ಇಂದು ಬೆಳಗ್ಗೆ ಗೌಸ್, ಅಮ್ಮಾಜಾನ್ ಹಾಗೂ ಮಗ ರಾಯಾನ್ ಮೂವರು ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಸ್ಕೂಟಿಯಲ್ಲಿ ಅಮ್ಮಾಜಾನ್ ಅವರ ತಂಗಿ ಮನೆ ಕದಿರಿಗೆ ಹೊರಟಿದ್ದರು. ಮಾರ್ಗಮಧ್ಯೆ ಫೋಟೋಸ್ ತೆಗೆದುಕೊಂಡು, ರೀಲ್ಸ್ ಮಾಡಿಕೊಂಡು ಸ್ಕೂಟಿಯಲ್ಲಿ ಜಾಲಿಟ್ರಿಪ್ ಮಾಡುತ್ತಿದ್ದರು.

    ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಬಳಿ ಬೆಂಗಳೂರು ಕಡೆಯಿಂದ ಬರುತ್ತಿದ್ದವರು ತಿಂಡಿ ತಿನ್ನಲು ರಸ್ತೆ ಬದಿಯಲ್ಲಿರುವ ಹೋಟೆಲ್‍ಗೆ ಬೈಕ್ ತಿರುಗಿಸಿದ್ದಾರೆ. ಹೋಟೆಲ್‍ನಲ್ಲಿ ತಿಂಡಿ ತಿಂದು ಮರಳಿ ಬಾಗೇಪಲ್ಲಿ ಕಡೆಗೆ ಯೂಟರ್ನ್ ತೆಗೆದುಕೊಂಡಿದ್ದಾರೆ. ಆದರೆ ಅಷ್ಟರಲ್ಲೇ ಬಾಗೇಪಲ್ಲಿ ಕಡೆಯಿಂದ ಬಂದ ಖಾಸಗಿ ಬಸ್ ಸ್ಕೂಟಿ ಮೇಲೆ ಎರಗಿದೆ.

    ಇದರ ಪರಿಣಾಮ ಸ್ಕೂಟಿ ಬಸ್ ಕೆಳಗೆ ಸಿಲುಕಿ ನಜ್ಜುಗುಜ್ಜಾಗಿ ಬಸ್ ಡಿವೈಡರ್ ಮೇಲೆ ಹತ್ತಿದೆ. ಬಸ್ ಕೆಳಗೆ ಸಿಲುಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಚಿಕ್ಕಬಳ್ಳಾಪುರ ಸಂಚಾರಿ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಇದನ್ನೂ ಓದಿ: ಟೂತ್‌ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಪ್ರಾಣ ಬಿಟ್ಟಳು

    ಅಪಘಾತ ನಂತರ ಬಸ್ ಸ್ಥಳದಲ್ಲೇ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಅಪಘಾತ ಮುನ್ನ ದಂಪತಿ ಮಗನ ಸಮೇತ ಮಾಡಿತೋ ರೀಲ್ಸ್, ಫೋಟೋಸ್ ನೋಡಿದ್ರೆ ಅಯ್ಯೋ ಪಾಪ ಅನಿಸದೆ ಇರದು. ಚಿಕ್ಕಬಳ್ಳಾಪುರ ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಒಂದು ಯುದ್ಧದಿಂದ ತಪ್ಪಿಸಿಕೊಂಡು ಉಕ್ರೇನ್‍ಗೆ ಬಂದ್ರೆ ಇನ್ನೊಂದು ಯುದ್ಧ ಪ್ರಾರಂಭವಾಗಿದೆ: ಅಫ್ಘಾನ್ ನಿವಾಸಿ

  • ಮಂತ್ರಾಲಯಕ್ಕೆ ತೆರಳುತ್ತಿದ್ದ ಭಕ್ತರ ಆಟೋ ಪಲ್ಟಿ- ಇಬ್ಬರು ಸಾವು

    ಮಂತ್ರಾಲಯಕ್ಕೆ ತೆರಳುತ್ತಿದ್ದ ಭಕ್ತರ ಆಟೋ ಪಲ್ಟಿ- ಇಬ್ಬರು ಸಾವು

    ರಾಯಚೂರು: ಮಂತ್ರಾಲಯಕ್ಕೆ ಹೊರಟಿದ್ದ ಆಟೋವೊಂದು ಪಲ್ಟಿ ಹೊಡೆದು ಇಬ್ಬರು ಪ್ರಯಾಣಿಕರು ಸ್ಥಳದಲ್ಲೆ ಸಾವನ್ನಪ್ಪಿದ್ದು ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಮಾಧವರಂ ಬಳಿ ನಡೆದಿದೆ.

    ದೊಡ್ಡಬಳ್ಳಾಪುರ ಮೂಲದ ರಾಘವೇಂದ್ರ(37) ಹಾಗೂ ಹುಬ್ಬಳ್ಳಿ ಮೂಲದ ಅಭಿಷೇಕ್(27) ಮೃತ ದುರ್ದೈವಿಗಳು. ಬೆಂಗಳೂರಿನಿಂದ ರೈಲಿನ ಮೂಲಕ ಮಂತ್ರಾಲಯಕ್ಕೆ ಬಂದಿದ್ದ ಭಕ್ತರು ರಾಯರ ಮಠಕ್ಕೆ ಆಟೋದಲ್ಲಿ ಹೊರಟಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ ಹೊಡೆದಿದೆ. ಇದರಿಂದಾಗಿ ಸ್ಥಳದಲ್ಲೇ ರಾಘವೇಂದ್ರ ಹಾಗೂ ಅಭಿಷೇಕ ಅವರು ಮೃತಪಟ್ಟಿದ್ದಾರೆ.

    ಮೃತ ರಾಘವೇಂದ್ರ ರೈಲ್ವೆ ಇಲಾಖೆ ಸಿಬ್ಬಂದಿಯಾಗಿದ್ದು, ಯಶವಂತಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸದ ನಿಮಿತ್ತ ಮಂತ್ರಾಲಯಕ್ಕೆ ಬಂದಿದ್ದ ಅವರು, ಭಕ್ತರ ಜೊತೆ ಆಟೋದಲ್ಲಿ ಹೊರಟಿದ್ದಾಗ ಅಪಘಾತದಿಂದ ಸಾವನ್ನಪ್ಪಿದ್ದಾನೆ. ದನ್ನೂ ಓದಿ: ನವಜಾತ ಶಿಶುವಿನ ದೇಹವನ್ನು ಕಿತ್ತು ತಿಂದ ಶ್ವಾನಗಳು

    ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ನಾಲ್ವರನ್ನು ಕರ್ನೂಲು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆ ಮಾಧವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದನ್ನೂ ಓದಿ:  ಟಾಟಾ ಏಸ್ ವಾಹನಕ್ಕೆ ಗುದ್ದಿದ ಅಪರಿಚಿತ ವಾಹನ – 2 ಸಾವು, 10 ಮಂದಿಗೆ ಗಾಯ

  • ನೆಲಮಂಗಲದಲ್ಲಿ ಪೆಡ್ಲರ್‌ಗಳ ಬಂಧನ – 53 ಕೆ.ಜಿ ಗಾಂಜಾ ವಶ

    ನೆಲಮಂಗಲದಲ್ಲಿ ಪೆಡ್ಲರ್‌ಗಳ ಬಂಧನ – 53 ಕೆ.ಜಿ ಗಾಂಜಾ ವಶ

    ನೆಲಮಂಗಲ: ಹೊರ ರಾಜ್ಯದಿಂದ ಬೆಳೆದ ಗಾಂಜಾ ಸೊಪ್ಪುನ್ನು ತಂದು ಮಾರಾಟ ಮಾಡುತ್ತಿದ್ದ ಗುಂಪೊಂದನ್ನು ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕುಲುವನಹಳ್ಳಿ ಮೂಲದ ಉಮೇಶ್ ಮತ್ತು ಪಶ್ಚಿಮ ಗೋದಾವರಿಯ ರಾಮ್ ಪ್ರಸಾದ್ ಬಂಧಿತ ಗಾಂಜಾ ಪೇಡ್ಲರ್‌ಗಳು. ಮತ್ತೊಬ್ಬ ಆರೋಪಿ ಸಲೀಂ ಪಾಷ ತಲೆಯ ಮರೆಸಿಕೊಂಡಿದ್ದು, ಹುಡುಕಾಟ ನಡೆಸಿದ್ದಾರೆ. ದಾಳಿಯಲ್ಲಿ ಪೊಲೀಸರು 15.90 ಲಕ್ಷ ಮೌಲ್ಯದ 53 ಕೆ.ಜಿ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ.

    ತಾಲೂಕಿನ ಅರಿವೇಸಂದ್ರ ಗೇಟ್ ಬಳಿಯ ಸುಬ್ಬಯ್ಯ ಲಾರಿ ಪಾರ್ಕಿಂಗ್ ಬಳಿಯಲ್ಲಿ ಮಾರಾಟ ಮಾಡುವ ವೇಳೆಯಲ್ಲಿ ಪೊಲೀಸರು ಈ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಆರೋಪಿಗಳು ಬಳಸುತ್ತಿದ್ದ ಮಾರುತಿ 800 ಕಾರು ಹಾಗೂ ಎರಡು ಮೊಬೈಲ್ ಪೋನ್ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಈಗ ಜಗತ್ತು ಬಲಿಷ್ಠ ಭಾರತವನ್ನು ನೋಡಲು ಬಯಸುತ್ತದೆ: ಮೋದಿ

    ಆಂಧ್ರದಿಂದ ಬೆಂಗಳೂರು, ತುಮಕೂರು, ನೆಲಮಂಗಲ ಸುತ್ತಮುತ್ತಲಿನ ಪ್ರದೇಶಗಳಿಗೆ ಗಾಂಜಾವನ್ನು ಉಮೇಶ್ ಸರಬರಾಜು ಮಾಡುತ್ತಿದ್ದ ಎನ್ನಲಾಗಿದ್ದು, ಸರ್ಕಲ್ ಇನ್ಸ್ ಪೆಕ್ಟರ್ ರಾಜೀವ್, ತ್ಯಾಮಗೊಂಡ್ಲು ಪೊಲೀಸ್ ಠಾಣೆಯ ಪಿಎಸ್‌ಐ ಚಿಕ್ಕನರಸಿಂಹಯ್ಯ ತಂಡದವರು ನಡೆಸಿದ ಒಂದು ವಾರದ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:  ಅಶ್ಲೀಲ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದವನ ಕೊಂದು ಬ್ಯಾಗ್‍ನಲ್ಲಿ ತುಂಬಿದ್ರು