Tag: Andola shree

  • ಕೋಮುದ್ವೇಷ ಪ್ರಚೋದನಾ ಭಾಷಣ ಆರೋಪ; ಆಂದೋಲಾ ಶ್ರೀ ವಿರುದ್ಧ FIR ದಾಖಲು

    ಕೋಮುದ್ವೇಷ ಪ್ರಚೋದನಾ ಭಾಷಣ ಆರೋಪ; ಆಂದೋಲಾ ಶ್ರೀ ವಿರುದ್ಧ FIR ದಾಖಲು

    ಕಲಬುರಗಿ: ಕೋಮುದ್ವೇಷ ಪ್ರಚೋದನಾ ಭಾಷಣ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ (Siddalinga Swamiji) ವಿರುದ್ಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಏ.15 ರಂದು ಚಿಂಚೋಳಿ ತಾಲ್ಲೂಕಿನ ಐನೊಳ್ಳಿ ಗ್ರಾಮದಲ್ಲಿ ಶ್ರೀ ರಾಮೋತ್ಸವ ಸಮಿತಿ ಆಯೋಜಿಸಿದ್ದ ಶ್ರೀ ರಾಮನವಮಿ ಉತ್ಸವದ ಕಾರ್ಯಕ್ರಮದಲ್ಲಿ ಆಂದೋಲದ ಸಿದ್ಧಲಿಂಗ ಸ್ವಾಮೀಜಿ, ಹಿಂದೂ-ಮುಸ್ಲಿಂ ಮಧ್ಯೆ ಕೋಮುದ್ವೇಷ ಬಿತ್ತುವ ಭಾಷಣ ಮಾಡಿದ್ದಾರೆ. ಅಲ್ಲದೇ, ಸಿಎಂ ಸಿದ್ದರಾಮಯ್ಯ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಕಲಬುರಗಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ಹೀಯಾಳಿಸಿ ಮಾತನ್ನಾಡಿದ್ದಾರೆ ಎಂದು ಆರೋಪಿಸಿ ಎಫ್ಐಆರ್ ದಾಖಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರದಿಂದ ರೂಲ್ಸ್ – ಪೋಷಕರ ಸಂದರ್ಶನ, ಮನಸೋ ಇಚ್ಛೆ ಫೀಸ್‌ಗೆ ಬ್ರೇಕ್

    ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಶರಣು ಪಾಟೀಲ್ ಅವರ ದೂರಿನ ಮೇರೆಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಚಿನ್ ಆತ್ಮಹತ್ಯೆ ಕೇಸ್‌: ಆಂದೋಲಾ ಶ್ರೀಗೆ ಸಿಐಡಿ ನೋಟಿಸ್

    ಸಚಿನ್ ಆತ್ಮಹತ್ಯೆ ಕೇಸ್‌: ಆಂದೋಲಾ ಶ್ರೀಗೆ ಸಿಐಡಿ ನೋಟಿಸ್

    ಕಲಬುರಗಿ: ಗುತ್ತಿಗೆದಾರ ಸಚಿನ್ ಪಾಂಚಾಳ (Contractor Sachin Panchal) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ರಾಷ್ಟ್ರೀಯ ಗೌರವಾಧ್ಯಕ್ಷ ಆಂದೋಲಾದ ಸಿದ್ದಲಿಂಗ ಸ್ವಾಮೀಜಿಗೆ (Andola shree) ಸಿಐಡಿ (CID) ನೋಟಿಸ್ ಜಾರಿಗೊಳಿಸಿದೆ.

    ತನ್ನ ಸಾವಿಗೂ ಮುನ್ನ ಸಚಿನ್ ಬರೆದಿಟ್ಟ ಡೆತ್ ನೋಟ್‌ನಲ್ಲಿ ಸಿದ್ದಲಿಂಗ ಸ್ವಾಮೀಜಿ, ಕಲಬುರಗಿ ನಗರ ಬಿಜೆಪಿ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಚಿತ್ತಾಪುರದ ಮಣಿಕಂಠ ರಾಠೋಡ್ ಹಾಗೂ ಶಾಸಕ ಬಸವರಾಜ್ ಮತ್ತಿಮೂಡ ಹತ್ಯೆಗೂ ಸಂಚು ರೂಪಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಕೂಲಂಕುಷ ತನಿಖೆ ಕೈಗೊಳ್ಳಲು ಜ.29 ಮತ್ತು 30ರ ಪೈಕಿ ಯಾವುದಾದರೂ ಒಂದು ದಿನ ಬೆಂಗಳೂರಿನ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಿದ್ದಲಿಂಗ ಸ್ವಾಮೀಜಿಗೆ ಸಿಐಡಿ ನೋಟಿಸ್ ನೀಡಿದೆ.

    ಸಚಿನ್ ಆತ್ಮಹತ್ಯೆ ಬಳಿಕ ಪತ್ತೆಯಾದ ಡೆತ್ ನೋಟ್ ಮೂಲಕ ಈ ನಾಲ್ವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಅಂಶ ಬಯಲಾಗುತ್ತಿದ್ದಂತೆಯೇ ಚಂದು ಪಾಟೀಲ್ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ವರ ಪೈಕಿ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿಯನ್ನು ಪ್ರಮುಖ ಸಾಕ್ಷಿ ಎಂದು ಪರಿಗಣಿಸಿ ಸಿಐಡಿ ನೋಟಿಸ್ ಜಾರಿಗೊಳಿಸುವ ಮೂಲಕ ತನಿಖೆ ಆರಂಭಿಸಿದೆ.

  • ಪ್ರಚೋದನಕಾರಿ ಭಾಷಣ; ಆಂದೋಲಶ್ರೀ ವಿರುದ್ಧ ಸುಮೋಟೋ ಕೇಸ್‌ ದಾಖಲು

    ಪ್ರಚೋದನಕಾರಿ ಭಾಷಣ; ಆಂದೋಲಶ್ರೀ ವಿರುದ್ಧ ಸುಮೋಟೋ ಕೇಸ್‌ ದಾಖಲು

    ಯಾದಗಿರಿ: ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಆಂದೋಲದ ಸಿದ್ದಲಿಂಗ ಶ್ರೀ (Andola Shree) ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಲಾಗಿದೆ.

    ಯಾದಗಿರಿಯ (Yadagiri) ಶಹಾಪುರ ನಗರದಲ್ಲಿ ಅ.3 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕೆ ಆಂದೋಲಶ್ರೀ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ 295a, 153 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಹಿಂದೂಗಳನ್ನು ಕೆಣಕಿದ್ರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತೆ- ಆಂದೋಲಶ್ರೀ ವಿವಾದಾತ್ಮಕ ಹೇಳಿಕೆ

    ಕೋಮು ಸೌಹಾರ್ದತೆಗೆ ಧಕ್ಕೆ, ಪ್ರಚೋದನೆ ಹಾಗೂ ಅನ್ಯ ಧರ್ಮೀಯರ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ‘ನಿಮ್ಮ ಹತ್ತಿರ ತಲ್ವಾರ್ ಇರಬಹುದು. ಆ ತಲ್ವಾರ್‌ನಿಂದ ನಮ್ಮನ್ನ ಎದುರಿಸೋಕೆ ಬಂದರೆ, ನಮ್ಮಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಖಡ್ಗ ಇದೆ. ಛತ್ರಪತಿ ಶಿವಾಜಿ ಮಹಾರಾಜರ ಖಡ್ಗ ಇದೆ. ಏಕ್ ಮಾರ್ ದೋ ತುಕಡಾ’ ಎಂದು ಆಂದೋಲಶ್ರೀ ಹೇಳಿಕೆ ನೀಡಿದ್ದರು.

    ಹೊಡೆದರೆ ಒಂದು ದೇಹ ಪಾಕಿಸ್ತಾನಕ್ಕೆ ಹೋಗಬೇಕು. ಇನ್ನೊಂದು ದೇಹ ಬಾಂಗ್ಲಾದೇಶಕ್ಕೆ ಹೋಗಬೇಕು. ಹಿಂದುಗಳನ್ನು ಕೆಣಕಬೇಡಿ. ಹಿಂದೂಗಳನ್ನ ಕೆಣಕಿದರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತದೆ ಎಂದು ವಿವಾದಾತ್ಮಕ ಭಾಷಣ ಮಾಡಿದ್ದರು. ಇದನ್ನೂ ಓದಿ: ಅಪ್ರಾಪ್ತರಿಗೆ ವಾಹನ ಕೊಟ್ರೆ ಪೋಷಕರಿಗೆ ಬೀಳುತ್ತೆ 25,000 ರೂ. ದಂಡ, 3 ವರ್ಷ ಜೈಲು ಶಿಕ್ಷೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಮು ಪ್ರಚೋದನೆ ಭಾಷಣ ಪ್ರಕರಣ – ಆಂದೋಲ ಸಿದ್ದಲಿಂಗ ಶ್ರೀ ದೋಷಿ

    ಕೋಮು ಪ್ರಚೋದನೆ ಭಾಷಣ ಪ್ರಕರಣ – ಆಂದೋಲ ಸಿದ್ದಲಿಂಗ ಶ್ರೀ ದೋಷಿ

    ಯಾದಗಿರಿ: ಕೋಮು ಪ್ರಚೋದನೆ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂದೋಲದ ಸಿದ್ದಲಿಂಗ ಸ್ವಾಮಿ (Andola Sri Siddalinga Swamiji) ದೋಷಿ ಎಂದು ಯಾದಗಿರಿಯ ಸೀನಿಯರ್ ಸಿವಿಲ್ ಕೋರ್ಟ್ (Court) ತೀರ್ಪು ನೀಡಿದೆ.

    ಯಾದಗಿರಿ (Yadagiri) ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ 2015ರ ಜನವರಿ 2ರಂದು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ (Police Station) ಪ್ರಕರಣ ದಾಖಲಾಗಿತ್ತು.

    ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಐಪಿಸಿ ಕಲಂ 153 (ಎ), 295ರಡಿಯಲ್ಲಿ ನಗರ ಪೊಲೀಸ್ ಠಾಣೆಯ ಪೊಲೀಸರು ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 8 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಧೀಶ ರವೀಂದ್ರ ಹೊನೋಲೆ ಅವರಿಂದ ತೀರ್ಪು ಹೊರಬಿದ್ದಿದೆ.

    ಗುರುವಾರ ತೀರ್ಪು ಪ್ರಕಟಿಸಿರುವ ನ್ಯಾಯಾಧೀಶರು, ಆಂದೋಲದ ಕರುಣೇಶ್ವರ ಮಠದ ಪೀಠಾಧಿಪತಿ ಹಾಗೂ ಶ್ರೀರಾಮಸೇನೆ (Srirama Sene) ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದಾರೆ. ಇದನ್ನೂ ಓದಿ: 2 ದಶಕಗಳಿಂದ ಹಾಲಿ ಶಾಸಕರಿಗೆ ಸೋಲು – ಇದು ಆಳಂದ ವಿಶೇಷತೆ

    ತೀರ್ಪು ನೀಡುತ್ತಿದ್ದಂತೆ ದೋಷಿಯ ಹಿನ್ನೆಲೆಯ ವರದಿ ನೀಡುವಂತೆ ಪ್ರೋಬೇಷನರಿ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ. ಹಿನ್ನೆಲೆಯ ವರದಿ ಆಧಾರದ ಮೇಲೆ ಆಂದೋಲ ಶ್ರೀಗಳಿಗೆ ಶಿಕ್ಷೆ ಪ್ರಮಾಣ ನಿರ್ಧಾರವಾಗಲಿದೆ. ಇದನ್ನೂ ಓದಿ: ರಾಜಕೀಯ ಅನುಭವ ಇಲ್ಲದೇ ಇದ್ರೂ ಶಿರಾದಲ್ಲಿ ತಾವರೆ ಅರಳಿಸಿದ ರಾಜೇಶ್‌ ಗೌಡ!

  • ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ: ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ

    ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ: ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ

    ಕಲಬುರಗಿ: ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ (Assembly Election) ಬಿಜೆಪಿಯಿಂದ (BJP) ಟಿಕೆಟ್ ನೀಡಿದರೆ ಖಂಡಿತವಾಗಿಯೂ ಸ್ಪರ್ಧಿಸುವೆ ಎಂದು ಶ್ರೀರಾಮ ಸೇನೆಯ (Sri Rama Sene) ರಾಜ್ಯಾಧ್ಯಕ್ಷ ಆಂದೋಲ ಶ್ರೀ (Andola Shree) ತಿಳಿಸಿದರು.

    ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ನಾನು ಚುನಾವಣೆ ನಿಲ್ಲುತ್ತೇನೆ ಎಂಬುದರ ಬಗ್ಗೆ ವಿಷಯ ಕೇಳಿ ಬರುತ್ತದೆ. ಇಲ್ಲಿವರೆಗೆ ನಾವು ಯಾರನ್ನೂ ಟಿಕೆಟ್‌ಗಾಗಿ ಸಂಪರ್ಕ ಮಾಡಿಲ್ಲ. ನನ್ನನ್ನೂ ಯಾವುದೇ ಮಖಂಡರು ಸಂಪರ್ಕ ಮಾಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲದ ಕಾಂಗ್ರೆಸ್ ಶಾಸಕ – ಬಿಜೆಪಿಯಿಂದ ಆಕ್ರೋಶ

    ಒಂದು ವೇಳೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಟ್ಟರೆ ಮಾತ್ರ ಸ್ಪರ್ಧಿಸುವೆ. ಸ್ವತಂತ್ರ್ಯ ಅಭ್ಯರ್ಥಿ ಅಥವಾ ಮತ್ಯಾವ ಪಕ್ಷದಿಂದ ಚುನಾವಣೆಗೆ ನಿಲ್ಲುವುದಿಲ್ಲ. ಹಿಂದುತ್ವ, ದೇಶದ ಅಭಿವೃದ್ಧಿ ಬಗ್ಗೆ ಚಿಂತನ ನಡೆಸುವವರನ್ನು ಬೆಂಬಲಿಸಲಾಗವುದು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮುರುಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ಆಡಳಿತಾಧಿಕಾರಿ

    Live Tv
    [brid partner=56869869 player=32851 video=960834 autoplay=true]

  • ಕಂಡಲ್ಲಿ ಗುಂಡು ಹಾರಿಸಲು ಅನುಮತಿ ಕೊಟ್ಟರಷ್ಟೇ ಹಿಂದೂಗಳು ಸೇಫ್: ಸಿದ್ದಲಿಂಗ ಸ್ವಾಮೀಜಿ

    ಕಂಡಲ್ಲಿ ಗುಂಡು ಹಾರಿಸಲು ಅನುಮತಿ ಕೊಟ್ಟರಷ್ಟೇ ಹಿಂದೂಗಳು ಸೇಫ್: ಸಿದ್ದಲಿಂಗ ಸ್ವಾಮೀಜಿ

    ಕಲಬುರಗಿ: ಸರ್ಕಾರ  ಕಂಡಲ್ಲಿ ಗುಂಡು ಹಾರಿಸಲು ಅನುಮತಿ ಕೊಟ್ಟರೇ ಮಾತ್ರವೇ ಹಿಂದೂಗಳು ಸುರಕ್ಷಿತವಾಗಿರಲಿದ್ದಾರೆ ಎಂದು ಶ್ರೀರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಒತ್ತಾಯಿಸಿದ್ದಾರೆ.

    ಶಿವಮೊಗ್ಗದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಭದ್ರಾವತಿಯಲ್ಲಿ ಭಜರಂಗದಳ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಇಂತಹ ಘಟನೆಗಳಿಂದ ಹಿಂದೂ ಕಾರ್ಯಕರ್ತರು ಜರ್ಜರಿತವಾಗಿ ಓಡಾಡಲು ಭಯ ಪಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಹಿಂದೂ ಕಾರ್ಯಕರ್ತರನ್ನು ಹುಡುಕಿ ಹುಡುಕಿ ದಾಳಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಾವರ್ಕರ್ ಪೋಸ್ಟರ್ ವಿವಾದ – ನಾಲ್ವರು ಅರೆಸ್ಟ್

    ಹಿಂದೂ ಕಾರ್ಯಕರ್ತರೂ ಕೈಕಟ್ಟಿ ಕುಳಿತುಕೊಳ್ಳುವ ಕಾಲ ಈಗ ಇಲ್ಲ. ಕ್ರಿಯೆಗೆ ಪ್ರತಿಕ್ರಿಯೆ ಕೊಡುವ ನಿಟ್ಟಿನಲ್ಲಿ ನಾವಿಂದು ವಿಚಾರ ಮಾಡಬೇಕಾಗಿದೆ. ಸರ್ಕಾರ ಶೂಟ್ ಅಂಡ್ ಸೈಟ್‌ಗೆ ಅನುಮತಿ ಕೊಟ್ಟರೆ ಮಾತ್ರವೇ ಹಿಂದೂಗಳು ಸುರಕ್ಷಿತವಾಗಿರಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ಪೊಲೀಸರಿಗೂ ಚಾಕು ಇರಿಯಲು ಮುಂದಾದ ಕಿಡಿಗೇಡಿ

    ಶಿವಮೊಗ್ಗ-ಭದ್ರಾವತಿ ಘಟನೆ ನಂತರವೂ ಯಾರೊಬ್ಬರೂ ಹೇಳಿಕೆ ಕೊಡುತ್ತಿಲ್ಲ. ಹೇಳಿಕೆ ಕೊಡುವವರ ಬಾಯಿಗೆ ಸರ್ಕಾರವೇ ಬೀಗ ಹಾಕಿದಂತಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎಷ್ಟೇ ನಿರ್ಬಂಧ ಹೇರಿದ್ರು, ನಮ್ಮ ಪ್ರವೇಶವನ್ನು ತಡೆಯಲು ಸಾಧ್ಯವಿಲ್ಲ: ಆಂದೋಲ ಶ್ರೀ

    ಎಷ್ಟೇ ನಿರ್ಬಂಧ ಹೇರಿದ್ರು, ನಮ್ಮ ಪ್ರವೇಶವನ್ನು ತಡೆಯಲು ಸಾಧ್ಯವಿಲ್ಲ: ಆಂದೋಲ ಶ್ರೀ

    ಬೀದರ್: ಬೀದರ್ ಜಿಲ್ಲಾಡಳಿತ ಎಷ್ಟೇ ನಿರ್ಬಂಧ ಹೇರಿದರೂ ಕೂಡಾ 12ಕ್ಕೆ ಕಲ್ಯಾಣದಲ್ಲಿ ನಡೆಯುವ ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ಕಾರ್ಯಕ್ರಮಕ್ಕೆ ನಮ್ಮ ಪ್ರವೇಶವನ್ನು ತಡೆಯಲು ಸಾಧ್ಯವಿಲ್ಲ ಎಂದು ಬೀದರ್ ಜಿಲ್ಲಾಡಳಿತಕ್ಕೆ ಆಂದೋಲ ಶ್ರೀಗಳು ಸವಾಲ್ ಹಾಕಿದರು.

    9 ದಿನಗಳ ಕಾಲ ಪ್ರಮೋದ್ ಮುತಾಲಿಕ್ ಅವರನ್ನು ಹಾಗೂ ನನ್ನನ್ನು ಬೀದರ್ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಇದಕ್ಕೆ ಕಾರಣ ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ಎಂಬ ಕಾರ್ಯಕ್ರಮ ಎಂದು ಜಿಲ್ಲಾಡಳಿತದ ವಿರುದ್ಧ ಶ್ರೀಗಳು ಕಿಡಿಕಾರಿದರು.

    ಈ ಕಾರ್ಯಕ್ರಮದಲ್ಲಿ ಭಾಗಿಯಾದರೆ ಕೋಮು ಸೌಹಾರ್ದ ಹಾಗೂ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂಬ ನೆಪವನ್ನು ಹೇಳಿ ಜಿಲ್ಲಾಡಳಿತ ನಮ್ಮನ್ನು ಬ್ಯಾನ್ ಮಾಡಿದೆ. ಇಂದು ಕಲ್ಯಾಣದಲ್ಲಿ ಯಾವುದೇ ಸಭೆ, ಸಮಾರಂಭ ಇಲ್ಲದೆ ಇದ್ದರೂ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದ್ದು, ಖಂಡನೀಯವಾಗಿದ್ದು, ಬಿಜೆಪಿ ಸರ್ಕಾರದ ಹಿಂದೂ ವಿರೋಧಿ ನೀತಿ ಇಂದು ಎದ್ದು ಕಾಣುತ್ತಿದ್ದು ಇದು ನಾಚೀಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೀದರ್ ಜಿಲ್ಲಾ ಪ್ರವೇಶಕ್ಕೆ ಪ್ರಮೋದ್ ಮುತಾಲಿಕ್, ಆಂದೋಲನ ಶ್ರೀಗಳಿಗೆ ಬ್ಯಾನ್

    ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಛೂಬಿಟ್ಟು ಸರ್ಕಾರ ಹಿಂದೂ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಮೂಲ ಅನುಭವ ಮಂಟಪವನ್ನು ಶಾಂತಿಯಿಂದ ಪಡೆಯಬೇಕು ಎಂದು ಮಠಾಧೀಶರು ಮಾತುಕತೆ ನಡೆಸಿದ್ದಾರೆ. ಈ ವೇಳೆ ಸರ್ಕಾರವೇ ಈ ರೀತಿ ನಿರ್ಬಂಧ ಹೇರುವ ಮೂಲಕ ಗೊಂದಲ ಸೃಷ್ಟಿ ಮಾಡಿ ಶಾಂತಿಗೆ ಕಾರಣರಾಗುತ್ತಿದೆ ಎಂದು ಶ್ರೀರಾಮ್ ಸೇನೆಯ ರಾಜ್ಯಾಧ್ಯಕ್ಷ ಸಿದ್ಧಲಿಂಗ ಶ್ರೀಗಳು ಬೀದರ್ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: 5 ವರ್ಷದ ಬಾಲಕಿಯ ಮಾದರಿಯನ್ನು ಮಂಕಿಪಾಕ್ಸ್ ಪರೀಕ್ಷೆಗೆ ಕಳುಹಿಸಿದ ವೈದ್ಯರು

  • ಆಜಾನ್ ವಿರುದ್ಧ ಆರತಿ, ಹನುಮಾನ್ ಚಾಲೀಸಾ ಪಠಿಸಲು ಹಿಂದೂಪರ ಸಂಘಟನೆಗಳ ನಿರ್ಧಾರ

    ಆಜಾನ್ ವಿರುದ್ಧ ಆರತಿ, ಹನುಮಾನ್ ಚಾಲೀಸಾ ಪಠಿಸಲು ಹಿಂದೂಪರ ಸಂಘಟನೆಗಳ ನಿರ್ಧಾರ

    ಬೆಂಗಳೂರು: ಆಜಾನ್ ವಿಚಾರದಲ್ಲಿ ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯಗೊಂಡಿದೆ. ಆದರೆ ಸರ್ಕಾರದಿಂದ ಯಾವುದೇ ಕ್ರಮ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆಗಳು ದೇವಾಲಯಗಳಲ್ಲಿ ಆರತಿ, ಹನುಮಾನ್ ಚಾಲೀಸಾ ಪಠಿಸಲು ನಿರ್ಧರಿಸಿವೆ.

    ಈ ಕುರಿತು ಬಿಜೆಪಿ ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಮತ್ತು ಆಂದೋಲ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂಪರ ಸಂಘಟನೆಗಳು ಆಜಾನ್ ಕೂಗುವುದನ್ನು ನಿಷೇಧಿಸಲು ಮೇ 1 ರವರೆಗೂ ಗಡುವು ನೀಡಿದ್ದವು. ಮೇ 1ರ ಒಳಗೆ ಮಸೀದಿಯ ಧ್ವನಿವರ್ಧಕ ತೆರವಿಗೆ ಶ್ರೀರಾಮಸೇನೆ ಗಡುವು ನೀಡಿತ್ತು. ಆದರೆ ಸರ್ಕಾರ ಮೇ 1 ಆದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿವೆ.

    court order law

    ಸಾರ್ವಜನಿಕ, ವಸತಿ ಸ್ಥಳಗಳಲ್ಲಿ ಆಜಾನ್ ಕೂಗಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಡೆಸಿಬಲ್ ಕಡಿಮೆ ಇಡಬೇಕು ಅಂತಾ ಸುಪ್ರೀಂ ಕೋರ್ಟ್ ಸ್ಪಷ್ಟವಾದ ಆದೇಶ ನೀಡಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ಜರುಗಿಸಿಲ್ಲ. ಸರ್ಕಾರಕ್ಕೆ ನೀಡಿದ್ದ ಗಡುವು ಅಂತ್ಯವಾದ ಹಿನ್ನೆಲೆ ಹಿಂದೂಪರ ಸಂಘಟನೆಗಳಿಂದ ಆಜಾನ್ ವಿರುದ್ಧ ಹೋರಾಟ ನಡೆಯಲಿದೆ ಎಂದು ಸಂಘಟನೆಗಳು ತಿಳಿಸಿವೆ.

    ರಾಜ್ಯಾದ್ಯಂತ ಮೇ 9 ನೇ ತಾರೀಖು ಮೈಕ್ ಪ್ರಾರ್ಥನೆ ತಡೆಯದಿದ್ದರೆ ಹಿಂದೂ ಸಂಘಟನೆಗಳಿಂದ ಸಂಘರ್ಷವಾಗಲಿದ್ದು, ಆಜಾನ್ ವಿರುದ್ಧ ಆರತಿ, ಹನುಮಾನ್ ಚಾಲೀಸಾ ಪಠಣ ಪಠಿಸಲಾಗುವುದು. ಹಿಂದೂ ದೇವಾಲಯಗಳ ಬಳಿ ಶ್ರೀರಾಮನ ಭಜನೆ ಮಾಡಲು ಶ್ರೀರಾಮ ಸೇನೆ ನಿರ್ಧರಿಸಿದೆ.

    ಮೇ 9 ರ ಬೆಳ್ಳಗ್ಗೆ 5 ಗಂಟೆಗೆ ದೇಗುಲ, ಮಠದಲ್ಲಿ ಭಜನೆ ನಡೆಸುವ ಪ್ಲ್ಯಾನ್ ಹಾಕಿಕೊಂಡಿದೆ. ಹಿಂದೂಪರ ಸಂಘಟನೆಗಳು ಅಂದು ರಾಜ್ಯದ ದೇವಾಲಯಗಳಲ್ಲಿ ಮೈಕ್ ಹಾಕಿ ಕೀರ್ತನೆ, ಭಜನೆ ಪಠಣೆ ಮಾಡಲಿವೆ.

  • ಎಚ್‍ಡಿ ಕುಮಾರಸ್ವಾಮಿ ಮುಸ್ಲಿಮರಿಗೆ ಬಕೆಟ್ ಹಿಡಿಯುವ ವ್ಯಕ್ತಿ: ಆಂದೋಲ ಶ್ರೀ

    ಎಚ್‍ಡಿ ಕುಮಾರಸ್ವಾಮಿ ಮುಸ್ಲಿಮರಿಗೆ ಬಕೆಟ್ ಹಿಡಿಯುವ ವ್ಯಕ್ತಿ: ಆಂದೋಲ ಶ್ರೀ

    ಕಲಬುರಗಿ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮುಸ್ಲಿಮರಿಗೆ ಬಕೆಟ್ ಹಿಡಿಯುವ ವ್ಯಕ್ತಿ. ಇವರ ಪ್ರೇರಣೆಯಿಂದಾಗಿ ರಾಜ್ಯದಲ್ಲಿ ಇವತ್ತು ದೊಂಬಿಗಳು ಆಗುತ್ತಿವೆ ಎಂದು ಆಂದೋಲ ಶ್ರೀ ಗರಂ ಆಗಿದ್ದಾರೆ.

    loudspeakers

    ಅಜಾನ್ ಮೈಕ್ ತೆರವಿಗೆ ಶ್ರೀರಾಮ್ ಸೇನೆ ಸರ್ಕಾರಕ್ಕೆ ಗಡುವು ನೀಡಿದೆ. ಈ ಬಗ್ಗೆ ವಾಗ್ದಾಳಿ ನಡೆಸಿದ್ದ ಎಚ್.ಡಿ ಕುಮಾರಸ್ವಾಮಿಗೆ ಆಂದೋಲನ ಶ್ರೀ ತೀರುಗೇಟು ನೀಡಿದ್ದು, ಮುಸ್ಲಿಮರಿಗೆ ಬೆಂಬಲ ನೀಡುವ ಇಂತಹ ರಾಜಕಾರಣಿಗಳನ್ನು ಮೊದಲು ಒಳಗಡೆ ಹಾಕಬೇಕು ಆಗಾ ಕರ್ನಾಟಕ, ಭಾರತ ಶಾಂತಿಯಿಂದ ಇರುತ್ತದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯದ ಪ್ರತಿಯೊಂದು ನೇಮಕಾತಿಯಲ್ಲೂ ಗೋಲ್ಮಾಲ್ – ಆರೋಪಿ ಗೊತ್ತಿದ್ರೂ ಕೇಸ್ ಮುಚ್ಚಾಕಿದ್ರಾ ಪೊಲೀಸರು?

    ಮುಸ್ಲಿಮರು ರಂಜಾನ್‍ಗೆ ಹಿಂದೂಗಳ ಬಳಿ ಬಟ್ಟೆ ಖರೀದಿ ಮಾಡಬೇಡಿ, ಮಸ್ಲಿಮರ ಬಳಿಯೇ ಬಟ್ಟೆ ಖರೀದಿ ಮಾಡಿ ಎಂದು ಫತ್ವಾ ಹೊರಡಿಸಿದ್ದಾರೆ. ಅವರು ಫತ್ವಾ ಹೊರಡಿಸಿದ ಮೇಲೆ ನಾವು ಸುಮ್ಮನೆ ಕೂರೋಕೆ ಆಗುತ್ತಾ, ಅಕ್ಷಯ ತೃತೀಯ ದಿನ ಸಾವಿರಾರು ಕೋಟಿ ಚಿನ್ನದ ವ್ಯವಹಾರ ನಡೆಯುತ್ತದೆ. ಹೀಗಾಗಿ ನಾವು ಹಿಂದೂಗಳಿಗೆ ವಿನಂತಿ ಮಾಡುತ್ತಿದ್ದೇವೆ. ಯಾರು ಕೂಡ ಮುಸ್ಲಿಂ ಅಂಗಡಿಯಿಂದ ಚಿನ್ನ ಖರೀದಿ ಮಾಡಬೇಡಿ ಎಂದು ತಿಳಿಸಿದರು. ಇದನ್ನೂ ಓದಿ: ಮ್ಯಾಂಗೋ ವಾರ್ ಬಳಿಕ ಇನ್ನೊಂದು ವಾರ್ ಶುರು- ಹಿಂದೂಗಳ ಬಳಿಯೇ ಚಿನ್ನ ಖರೀದಿಗಾಗಿ ಅಭಿಯಾನ

    ಮಲಬಾರ್ ಗೋಲ್ಡ್ ಸೇರಿದಂತೆ ಮುಸ್ಲಿಮರ ಚಿನ್ನದ ಅಂಗಡಿಗಳಲ್ಲಿ ಚಿನ್ನ ಖರೀದಿ ಮಾಡಿದ್ರೆ ದೇಶದಲ್ಲಿ ಒಬ್ಬ ಶತ್ರುವನ್ನು ಬೆಳೆಸಿದಂತೆ ಆಗುತ್ತದೆ. ಹೀಗಾಗಿ ಮುಸ್ಲಿಮರ ಬಳಿ ಚಿನ್ನ ಖರೀದಿ ಮಾಡದೆ ಹಿಂದೂಗಳ ಬಳಿ ಚಿನ್ನ ಖರೀದಿ ಮಾಡಿ ಎಂದು ಶ್ರೀರಾಮ್ ಸೇನೆ ಸಂದೇಶ ನೀಡಿದೆ ಎಂದರು.

  • ಮುಸ್ಲಿಂ ಗುಲಾಮಿ ಹೆಸರು ತೆಗೆದು ಸರ್ಕಲ್‍ಗಳಿಗೆ ಹಿಂದೂ ರಾಜರ, ಸಾಹಿತಿಗಳ ಹೆಸರಿಡಬೇಕು: ಆಂದೋಲ ಶ್ರೀ

    ಮುಸ್ಲಿಂ ಗುಲಾಮಿ ಹೆಸರು ತೆಗೆದು ಸರ್ಕಲ್‍ಗಳಿಗೆ ಹಿಂದೂ ರಾಜರ, ಸಾಹಿತಿಗಳ ಹೆಸರಿಡಬೇಕು: ಆಂದೋಲ ಶ್ರೀ

    ಕಲಬುರಗಿ: ಮುಸ್ಲಿಂ ಗುಲಾಮಿ ಹೆಸರು ತೆಗೆದು ನಗರದ ಆ ಸರ್ಕಲ್‍ಗಳಿಗೆ ಹಿಂದೂ ರಾಜರ, ಸಾಹಿತಿಗಳ ಹೆಸರಿಡಬೇಕು ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಊರು ಗ್ರಾಮಗಳಿಗೆ ಮುಸ್ಲಿಂ ರಾಜರ ಹೆಸರುಗಳಿವೆ. ಮುಸ್ಲಿಂ ರಾಜರು ತಮಗೆ ಬೇಕಾದಂತೆ ತಮ್ಮವರ ಹೆಸರು ಇಟ್ಟಿದ್ದಾರೆ. ಜಿಲ್ಲೆಯಲ್ಲಿ ಕೂಡಾ ಅನೇಕ ಮುಸ್ಲಿಂ ರಾಜರ ಹೆಸರುಗಳಿವೆ. ಗುಲಾಮಿ ಹೆಸರು ಬದಲಾಯಿಸಿ ಹಿಂದೂ ರಾಜ ಮಹಾರಾಜರು, ಸಾಹಿತಿಗಳ ಹೆಸರನ್ನಿಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕ- ಕಥೆಯೇ ರೋಚಕ!

    ಹಿಂದೂಗಳು ಬಿಜೆಪಿಗೆ ಮತಹಾಕಿ ಅಧಿಕಾರಕ್ಕೆ ತಂದಿದ್ದಾರೆ. ಹಿಂದೂಗಳ ಬೇಡಿಕೆಯನ್ನು ಇಡೇರಿಸಬೇಕು. ನಿಮ್ಮನ್ನು ಬಿಟ್ಟು ಕಾಂಗ್ರೆಸ್, ಜೆಡಿಎಸ್‍ನವರು ಮಾಡುತ್ತಾರೆಯೇ? ಕಾನೂನಿನ ಪ್ರಕಾರ ಹಿಂದೂಗಳ ಬೇಡಿಕೆ ಈಡೇರಿಸಬೇಕು. ಹೆಸರು ಬದಲಾವಣೆ ಜೊತೆಗೆ ಎಸ್.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ ಜಾರಿಯಾದ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ. ಮುಜರಾಯಿ ಅಧೀನಕ್ಕೆ ಒಳಪಡುವ ದೇವಸ್ಥಾನಗಳ ಸುತ್ತ ಕಡ್ಡಾಯವಾಗಿ ಹಿಂದೂಗಳಿಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ