Tag: andola mutt seer

  • ಇಂದು ಕಾಂಗ್ರೆಸ್ ಶಾಸಕ ಮನೆಗೆ ಬೆಂಕಿ ಇಟ್ಟೊರು ನಾಳೆ ನಿಮ್ಮ ಮನೆಗೆ ಬೆಂಕಿ ಇಡ್ತಾರೆ: ಆಂದೋಲ ಶ್ರೀ

    ಇಂದು ಕಾಂಗ್ರೆಸ್ ಶಾಸಕ ಮನೆಗೆ ಬೆಂಕಿ ಇಟ್ಟೊರು ನಾಳೆ ನಿಮ್ಮ ಮನೆಗೆ ಬೆಂಕಿ ಇಡ್ತಾರೆ: ಆಂದೋಲ ಶ್ರೀ

    -ಎಸ್‍ಡಿಪಿಐ, ಪಿಎಫ್‍ಐ ಬ್ಯಾನ್‍ಗೆ ಆಂದೋಲ ಶ್ರೀ ಒತ್ತಾಯ

    ಯಾದಗಿರಿ: ಎಸ್‍ಡಿಪಿಐ ಬ್ಯಾನ್ ಮಾಡುತ್ತಿರೋ ಅಥವಾ ನಿಮ್ಮ ಮನೆಗಳಿಗೆ ಬೆಂಕಿ ಇಡಿಸಿಕೊಳ್ಳುತ್ತಿರೋ ಎಂದು ಬಿಜೆಪಿ ನಾಯಕರುಗಳಿಗೆ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ.

    ಜಿಲ್ಲೆಯ ಕೆಂಭಾವಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ, ಸಿದ್ದಲಿಂಗಸ್ವಾಮೀಜಿ, ಕಾಂಗ್ರೆಸ್ ಮತ್ತು ಎಸ್‍ಡಿಪಿಐ ನಡುವೆ ತಿಕ್ಕಾಟ ನಡೆದು ಮುಸ್ಲಿಂ ಮತ ವಿಭಜನೆಗೊಂಡು ಅದು ಬಿಜೆಪಿಗೆ ಲಾಭವಾಗುತ್ತೆ ಎಂಬ ಭ್ರಮೆ ಬಿಜೆಪಿಯಲ್ಲಿದೆ. ಇಂತಹ ಭಾವನೆ ಬಿಜೆಪಿಗೆ ಇದ್ದರೆ ಮುಂದೆ ದೊಡ್ಡ ಅನಾಹುತ ಕಾದಿದೆ ಎಂದು ಬಿಜೆಪಿ ನಾಯಕರುಗಳಿಗೆ ಎಚ್ಚರಿಸಿದರು.

    ಪಿಎಫ್‍ಐ, ಎಸ್‍ಡಿಪಿಐ ಮತ್ತು ಕೆಎಫ್‍ಡಿಗೆ ಪಾಕಿಸ್ತಾನದ ಐಎಸ್‍ಐನೊಂದಿಗೆ ನಂಟಿದೆ. ಎಸ್‍ಡಿಪಿಐ ಎಂದರೇ ಮುಸ್ಲಿಂ ಲೀಗ್ ಇದ್ದಂತೆ. ಈ ಸಂಘಟನೆ ಇದ್ದರೆ ದೇಶ ಕಂಡಿತ ಮತ್ತೆ ಭಾಗವಾಗುತ್ತೆ. ಈ ಸಂಘಟನೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಇಂತಹವರ ವಿಚಾರದಲ್ಲಿ ಮುಖ್ಯ ಮಂತ್ರಿಗಳು ಮೃಧು ಧೋರಣೆ ಹೊಂದಿದ್ದಾರೆ. ಪಾದರಾಯನಪುರ ಘಟನೆ ನಡೆದಾಗ ಯಾರು ಅಲ್ಪಸಂಖ್ಯಾತರ ಬಗ್ಗೆ ಮಾತನಾಡಬಾರದು ಎಂದು ಸಿಎಂ ಹೇಳಿದ್ದರು. ಆದರೆ ಅದರ ಮುಂದುವರಿದ ಭಾಗವೇ ಬೆಂಗಳೂರಿನ ಗಲಭೆ ಎಂದ ಶ್ರೀಗಳು ಹೇಳಿದರು. ಅಲ್ಲದೇ ಗಲಭೆಕೋರರನ್ನು ಕಾಂಗ್ರೆಸ್ ಬೆಂಬಲಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

  • ರಾಮ ಸುಳ್ಳು ಅಂದೋರೆಲ್ಲ ಗೋರಿ ಸೇರಿದ್ದು, ಇನ್ನೊಬ್ಬ ಉಳಿದಿದ್ದಾನೆ: ಆಂದೋಲ ಶ್ರೀ

    ರಾಮ ಸುಳ್ಳು ಅಂದೋರೆಲ್ಲ ಗೋರಿ ಸೇರಿದ್ದು, ಇನ್ನೊಬ್ಬ ಉಳಿದಿದ್ದಾನೆ: ಆಂದೋಲ ಶ್ರೀ

    ಕಲಬುರಗಿ: ರಾಮ ಸುಳ್ಳು ಅಂದೋರೆಲ್ಲ ಗೋರಿ ಸೇರಿದ್ದು, ಇನ್ನೊಬ್ಬ ಉಳಿದಿದ್ದಾನೆ. ಆತ ಮೈಸೂರಿನ ಸೈತಾನ್, ಅವನೂ ಗೋರಿ ಸೇರಲಿದ್ದಾನೆ ಎಂದು ಆಂದೋಲ ಕರುಣೇಶ್ವರ ಮಠದ ಸಿದ್ದಲಿಂಗಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಜಗತ್ ವೃತ್ತದಲ್ಲಿ ಆಯೋಜಿಸಿರುವ ರಾಮ ಮಂದಿರ ಕಟ್ಟುವ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ರಾಮ ಸುಳ್ಳು ಎಂದಿದ್ದ ಕರುಣಾನಿಧಿ ಗೋರಿ ಸೇರಿದ್ದು, ಕಿಡ್ನಿ ವೈಫಲ್ಯದಿಂದ ಯು.ಆರ್.ಅನಂತಮೂರ್ತಿ ಗೋರಿ ಸೇರಿದ್ದಾರೆ. ಹಿಂದೂಗಳ ವಿರುದ್ಧ ಮಾತನಾಡುತ್ತಿದ್ದ ಗೌರಿ ಲಂಕೇಶ್ ಗೋರಿ ಸೇರಿದ್ದಾಳೆ. ಇನ್ನೊಬ್ಬ ಉಳಿದಿದ್ದಾನೆ. ಮೈಸೂರಿನ ಸೈತಾನ್ ಅವನೂ ಗೋರಿ ಸೇರಲಿದ್ದಾನೆ ಎಂದು ಪರೋಕ್ಷವಾಗಿ ಭಗವಾನ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

    ಇದೇ ವೇಳೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಮುಂದಾದ ಫಾತಿಮಾಳನ್ನು ವೇಶ್ಯೆ ಎಂದು ಲೇವಡಿ ಮಾಡಿದ ಸ್ವಾಮೀಜಿ, ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜಿಸಿದ ಇಂಥವರು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸುವುದಾಗಿ ಹೇಳುತ್ತಾರೆ. ಮೊದಲು ಇಂಥವರನ್ನು ಜೈಲಿಗೆ ಕಳುಹಿಸಬೇಕು ಎಂದು ಕಿಡಿಕಾರಿದರು. ರಾಮನ ಹೆಸರಲ್ಲಿ ಮೋದಿ ಅಧಿಕಾರಕ್ಕೆ ಬಂದಿದ್ದಾರೆ. ಹೀಗಾಗಿ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಬದ್ಧರಾಗಿರಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv