Tag: andhrapradesh

  • ಮಗಳಿಗೆ ಸೆಲ್ಯೂಟ್ ಹೊಡೆದ ತಂದೆಯ ಫೋಟೋ ವೈರಲ್

    ಮಗಳಿಗೆ ಸೆಲ್ಯೂಟ್ ಹೊಡೆದ ತಂದೆಯ ಫೋಟೋ ವೈರಲ್

    – ಮಗಳು ಡಿವೈಎಸ್‍ಪಿ, ತಂದೆ ಸರ್ಕಲ್ ಇನ್ಸ್ ಪೆಕ್ಟರ್
    – ಫೋಟೋ ನೋಡಿ ನೆಟ್ಟಿಗರು ಫಿದಾ
    – ನೆಟ್ಟಿಗರಿಂದ ಭಾವನಾತ್ಮಕ ಕಾಮೆಂಟ್

    ಹೈದರಾಬಾದ್: ಆಂಧ್ರಪ್ರದೇಶದ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಭಾವನಾತ್ಮಕವಾದ ಫೋಟೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಹೌದು. ಕರ್ತವ್ಯದಲ್ಲಿದ್ದ ತಂದೆಯೊಬ್ಬರು ಕರ್ತವ್ಯದಲ್ಲಿದ್ದ ತನ್ನ ಮಗಳಿಗೆ ಸೆಲ್ಯೂಟ್ ಹೊಡೆದ ಫೋಟೋ ಇದಾಗಿದೆ. ಈ ಫೋಟೋವನ್ನು ಆಂಧ್ರಪ್ರದೇಶ್ ಪೊಲೀಸ್ ಟ್ವಿಟ್ಟರ್ ಖಾತೆಯಿಂದ ಭಾನುವಾರ ಶೇರ್ ಮಾಡಲಾಗಿತ್ತು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರು ಕೂಡ ಭಾವನಾತ್ಮಕ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

    ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ಯಾಮ್ ಸುಂದರ್ ಅವರ ಮಗಳು ಜೆಸ್ಸಿ ಪ್ರಶಾಂತಿ ಗುಂಟೂರು ಜಿಲ್ಲೆಯ ಡಿಎಸ್‍ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೈರಲ್ ಆಗುತ್ತಿರುವ ಫೋಟೋದಲ್ಲಿ ಶ್ಯಾಮ್ ಸುಂದರ್ ಅವರು ತಮ್ಮ ಮಗಳಿಗೆ ಸೆಲ್ಯೂಟ್ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ.

    ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿಯೇ ಶ್ಯಾಮ್ ಸುಂದರ್ ಅವರು ತನ್ನ ಮಗಳನ್ನು ಭೇಟಿಯಾಗಿದ್ದಾರೆ. ಜನವರಿ 3ರಂದು ರಾಜ್ಯ ಪೊಲೀಸರ ಸಭೆಯಲ್ಲಿ ಭಾಗವಹಿಸಿದಾಗ ತಿರುಪತಿಯಲ್ಲಿ ಶ್ಯಾಮ್ ಸುಂದರ್ ತಮ್ಮ ಮಗಳನ್ನು ಭೇಟಿಯಾಗಿದ್ದಾರೆ. ಈ ವೇಳೆ ತಂದೆಯೇ ಮಗಳಿಗೆ ಸೆಲ್ಯೂಟ್ ಹೊಡೆದಿರುವುದು ಭಾವನಾತ್ಮಕ ರೂಪ ಪಡೆದಿದೆ.

    ಆಂಧ್ರಪ್ರದೇಶ ಟ್ವಿಟ್ಟರ್ ಖಾತೆಯಲ್ಲಿ APPolice1stDutyMeet ಎಂದು ಬರೆದುಕೊಂಡು ಹ್ಯಾಶ್ ಟ್ಯಾಗ್ ಬಳಸಿ ಒಂದು ಕುಟುಂಬವನ್ನು ಒಟ್ಟುಗೂಡಿಸುತ್ತದೆ. ತಿರುಪತಿಯಲ್ಲಿ ನಡೆದ ಪೊಲೀಸ್ ಸಭೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಅವರು ತಮ್ಮ ಸ್ವಂತ ಮಗಳು ಜೆಸ್ಸಿ ಪ್ರಶಾಂತಿಗೆ ಹೆಮ್ಮೆಯಿಂದ ಸೆಲ್ಯೂಟ್ ಹೊಡೆದು ಗೌರವ ಸೂಚಿಸಿದ್ದಾರೆ. ನಿಜಕ್ಕೂ ಇದು ಒಂದು ಅಪರೂಪ ಹಾಗೂ ಮನಮುಟ್ಟುವಂತ ದೃಶ್ಯವಾಗಿದೆ ಎಂದು ಬರೆದುಕೊಳ್ಳಲಾಗಿದೆ.

    ಆಂಧ್ರ ಪೊಲಿಸ್ ಖಾತೆಯಲ್ಲಿ ಈ ಫೋಟೋ ಅಪ್ಲೋಡ್ ಆಗುತ್ತಿದ್ದಂತೆಯೇ ಸುಮಾರು 9 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೆ 2 ಸಾವಿರಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದಾರೆ. ಎಂತಹ ಅದ್ಭುತ ಕ್ಷಣ..! ಇಲ್ಲಿ ತಂದೆ ತನ್ನ ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅದು ಮಗಳ ನಗು ತಂದೆ- ಮಗಳ ಸಂಬಂಧವನ್ನು ವಿವರಿಸಿದೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ನಿಜಕ್ಕೂ ಎಂತಹ ಹೆಮ್ಮೆಹ ಕ್ಷಣ ಎಂದು ಬಣ್ಣಿಸಿದ್ದಾರೆ. ಹೀಗೆ ಹಲವಾರ ಕಾಮೆಂಟ್ ಗಳು ಬಂದಿವೆ.

  • ಆಂಧ್ರದಲ್ಲಿ ಮತ್ತೊಂದು ರೋಗದ ಭೀತಿ- ಬಾಯಲ್ಲಿ ನೊರೆ ಬಂದು ಏಕಾಏಕಿ ಅಸ್ವಸ್ಥಗೊಂಡ ಜನ

    ಆಂಧ್ರದಲ್ಲಿ ಮತ್ತೊಂದು ರೋಗದ ಭೀತಿ- ಬಾಯಲ್ಲಿ ನೊರೆ ಬಂದು ಏಕಾಏಕಿ ಅಸ್ವಸ್ಥಗೊಂಡ ಜನ

    – ನಿಗೂಢ ರೋಗಕ್ಕೆ ಓರ್ವ ಬಲಿ, 300ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ಹೈದರಾಬಾದ್: ಮಹಾಮಾರಿ ಕೊರೊನಾದಿಂದ ದೇಶಾದ್ಯಂತ ಜನ ನಲುಗಿ ಹೋಗಿದ್ದಾರೆ. ಈ ಮಧ್ಯೆ ಆಂದ್ರಪ್ರದೇಶದಲ್ಲಿ ಸಾರ್ವಜನಿಕರಿಗೆ ಮತ್ತೊಂದು ರೋಗದ ಭೀತಿ ಎದುರಾಗಿದೆ.

    ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದಲ್ಲಿ ನಿಗೂಢ ರೋಗವೊಂದು ಪತ್ತೆಯಾಗುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿದೆ. ಬಾಯಲ್ಲಿ ನೊರೆ ಬಂದು ಏಕಾಏಕಿ ಜನ ಅಸ್ವಸ್ಥಗೊಂಡಿದ್ದಾರೆ. ಈ ನಿಗೂಢ ರೋಗಕ್ಕೆ ಓರ್ವ ಬಲಿಯಾಗಿದ್ದು, ಸುಮಾರು 300ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಎಲುರಿನ ಉತ್ತರ ಬೀದಿ, ದಕ್ಷಿಣ ಬೀದಿ, ಅಶೋಕ ನಗರ ಹಾಗೂ ಅರುಂಧತಿ ಪೇಟೆ ನಿವಾಸಿಗಳಲ್ಲಿ ಇದ್ದಕ್ಕಿದ್ದಂತೆ ತಲೆನೋವು, ವಾಂತಿ, ತಲೆ ತಿರುಗುವಿಕ್ ಹಾಗೂ ಮೂರ್ಛೆ ರೋಗ ಮುಂತಾದ ಲಕ್ಷಣಗಳು ಕಾಣಿಸಿಕೊಂಡಿದೆ. 45 ವರ್ಷದ ವ್ಯಕ್ತಿಯೊಬ್ಬರು ವಾಂತಿ ಹಾಗೂ ಮೂರ್ಛೆಗೊಂಡು ಭಾನುವಾರ ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇನ್ನು ನಿಗೂಢ ರೋಗದಿಂದಾಗಿ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಜಯವಾಡಕ್ಕೆ ಶಿಫ್ಟ್ ಮಾಡಲಾಗಿದೆ. ಅಸ್ವಸ್ಥಗೊಂಡವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಘಟನೆಗೆ ಕಲುಷಿತಗೊಂಡ ನೀರು ಸೇವನೆಯೇ ಕಾರಣ ಎಂದು ಹೇಳಲಾಗುತ್ತಿದ್ದರೂ, ಈ ಸಂಬಂಧ ನಿಖರ ಕಾರಣ ತಿಳಿದುಬಂದಿಲ್ಲ. ಅಸ್ವಸ್ಥಗೊಂಡವರ ರಕ್ತದ ಮಾದರಿ ಪಡೆದು ವೈದ್ಯರು ಅಸಲಿ ಕಾರಣ ತಿಳಿಯುವ ಪ್ರಯತ್ನ ನಡೆಯುತ್ತಿದೆ. ಆಂದ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಈ ಸಂಬಂಧ ತನಿಖೆಗೆ ನಡೆಸುವಂತೆ ಆದೇಶಿಸಿದ್ದಾರೆ.

  • ಆನ್‍ಲೈನ್ ಗೇಮ್ ಹುಚ್ಚು- 16 ಲಕ್ಷ ಕಳ್ಕೊಂಡು ಸೆಲ್ಫಿ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

    ಆನ್‍ಲೈನ್ ಗೇಮ್ ಹುಚ್ಚು- 16 ಲಕ್ಷ ಕಳ್ಕೊಂಡು ಸೆಲ್ಫಿ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

    – ಒಂದು ಬಾರಿ ಸಾಲ ತೀರಿಸಿದ್ದ ತಂದೆ
    – ಮತ್ತೆ ಗೇಮ್ ಆಡಿ ಹಣ ಕಳೆದುಕೊಂಡ

    ಹೈದರಾಬಾದ್: ಆನ್‍ಲೈನ್ ಗೇಮ್ ಹುಚ್ಚಿನಿಂದ ವ್ಯಕ್ತಿಯೊಬ್ಬ 16 ಲಕ್ಷ ರೂ. ಕಳೆದುಕೊಂಡು ಇದೀಗ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಜಗದೀಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಈತ ಎಲ್‍ಬಿ ನಗರ ನಿವಾಸಿ. ಆನ್‍ಲೈನ್ ಗೇಮ್ ಚಟದಿಂದಾಗಿ ಜಗದೀಶ್ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡನು. ಅಲ್ಲದೆ ಸಾಲ ತೀರಿಸಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೆ ತನ್ನ ಪ್ರಾಣವನ್ನೇ ಕಳೆದುಕೊಳ್ಳಲು ನಿರ್ಧರಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಕೆಲವು ದಿನಗಳ ಹಿಂದೆ ಜಗದೀಶ್ ತಂದೆ 16 ಲಕ್ಷ ರೂ. ಸಾಲ ತೀರಿಸಿದ್ದರು. ಆದರೆ ಈತ ಮತ್ತೆ ಆನ್‍ಲೈನ್ ಆಟಗಳನ್ನು ಆಡಲು ಪ್ರಾರಂಭಿಸಿದ. ಇದರೊಂದಿಗೆ ಜಗದೀಶ್ ಸಂಪೂರ್ಣವಾಗಿ ಭಾರೀ ಸಾಲದ ಸುಳಿಯಲ್ಲಿ ಸಿಲುಕಿಕೊಂಡ. ಇದರಿಂದ ಖಿನ್ನತೆಗೊಳಗಾಗಿ ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ವಿಡಿಯೋದಲ್ಲಿ ಜಗದೀಶ್ ಆತ್ಮಹತ್ಯೆಗೆ ಕಾರಣಗಳನ್ನು ತಿಳಿಸಿದ್ದಾನೆ. ಈ ಸಂಬಂಧ ಜಗದೀಶ್ ಪೋಷಕರು ನೀಡಿರುವ ದೂರು ಸ್ವೀಕರಿಸಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

  • ಮದುವೆಯಾದ ಒಂದೇ ತಿಂಗಳಿಗೆ ನವವಿವಾಹಿತೆ ಬೆಂಕಿ ಹಚ್ಚಿಕೊಂಡಳು!

    ಮದುವೆಯಾದ ಒಂದೇ ತಿಂಗಳಿಗೆ ನವವಿವಾಹಿತೆ ಬೆಂಕಿ ಹಚ್ಚಿಕೊಂಡಳು!

    – ಮಹಿಳೆಯ ಫೋಷಕರು ಹೇಳೋದೇನು..?

    ಹೈದರಾಬಾದ್: ನವವಿವಾಹಿತೆಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ವಿಲಕ್ಷಣ ಘಟನೆಯೊಂದು ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯ ಕುಪ್ಪಂ ಪ್ರದೇಶದಲ್ಲಿ ನಡೆದಿದೆ.

    ಆತ್ಮಹತ್ಮೆ ಮಾಡಿಕೊಂಡಾಕೆಯನ್ನು ಚೈತನ್ಯ ಎಂದು ಗುರುತಿಸಲಾಗಿದೆ. ಈಕೆಗೆ ಅಕ್ಟೋಬರ್ 28ರಂದು ತಂಗವೇಲು ಎಂಬಾತನ ಜೊತೆ ವಿವಾಹವಾಗಿತ್ತು.

    ವಿವಾಹದ ಒಂದೇ ತಿಂಗಳಲ್ಲಿ ಚೈತನ್ಯ ಆತ್ಮಹತ್ಯೆಗೆ ಶರಣಾಗಿರುವುದು ಆಕೆಯ ಕುಟುಂಬಸ್ಥರನ್ನು ಗಾಬರಿಗೊಳಿಸಿದೆ. ಅಲ್ಲದೆ ಗಂಡನ ಮನೆಯವರೇ ಕಾರಣ ಎಂದು ಆರೋಪಿ ತಂಗವೇಲು ಮನೆಗೆ ಚೈತನ್ಯ ಸಂಬಂಧಿಕರು ದಾಳಿ ಮಾಡಿದ್ದಾರೆ. ಮನೆಯ ಸಾಮಗ್ರಿಗಳನ್ನು ಪುಡಿಗೈದಿದ್ದಾರೆ.

    ಮಗಳ ಸಾವಿನ ಹಿನ್ನೆಲೆಯಲ್ಲಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಅಲ್ಲದೆ ಆಕೆಯ ಪತಿ ಮನೆಯವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಘಟನೆಯನ್ನರಿತ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಚೈತನ್ಯ ಸಂಬಂಧಿಕರನ್ನು ಸಮಾಧಾನಪಡಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • 2,250ರೂ. ಪಿಂಚಣಿ ಹಣಕ್ಕಾಗಿ ಪತ್ನಿಯನ್ನು ಕೊಲೆಗೈದ 92ರ ವೃದ್ಧ!

    2,250ರೂ. ಪಿಂಚಣಿ ಹಣಕ್ಕಾಗಿ ಪತ್ನಿಯನ್ನು ಕೊಲೆಗೈದ 92ರ ವೃದ್ಧ!

    – ವಾಕಿಂಗ್ ಸ್ಟಿಕ್ ನಲ್ಲಿ ಹೊಡೆದು ಕೊಂದ
    – ಕೊಲೆಯ ಬಳಿಕ ಮಕ್ಕಳಿಗೆ ತಿಳಿಸಿದ

    ಹೈದರಾಬಾದ್: ಪತ್ನಿಯನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 92 ವರ್ಷದ ವೃದ್ಧನನ್ನು ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ವೃದ್ಧನನ್ನು ಎಂ. ಸ್ಯಾಮ್ಯುಯೆಲ್ ಎಂದು ಗುರುತಿಸಲಾಗಿದ್ದು, ಈತ ಪತ್ನಿ ಅಪ್ರಾಯಮ್ಮ(90)ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆ ಗುಂಟೂರು ಜಿಲ್ಲೆಯ ಅಮೃತಲೂರು ಬ್ಲಾಕ್ ನ ಯಲವರ್ರು ಗ್ರಾಮದಲ್ಲಿ ಸೋಮವಾರ ನಡೆದಿದೆ.

    ಆಂಧ್ರ ಸರ್ಕಾರದ ನಿಯಮದ ಪ್ರಕಾರ, ಪ್ರತಿ ಕುಟುಂಬದ ಒಬ್ಬ ಹಿರಿಯ ಸದಸ್ಯ 2,250 ರೂ. ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಸ್ಯಾಮ್ಯುಯೆಲ್ ಪತ್ನಿ ಅಪ್ರಾಯಮ್ಮ ಅವರು ಪ್ರತಿ ತಿಂಗಳ ಮೊದಲ ವಾರದಲ್ಲಿ ಹಣವನ್ನು ಸ್ವೀಕರಿಸಲು ನೋಂದಾವಣೆ ಮಾಡಿದ್ದರು.

    ಇತ್ತ ಹಣದ ವಿಚಾರವಾಗಿ ಸ್ಯಾಮ್ಯುಯೆಲ್ ಹಾಗೂ ಅಪ್ರಾಯಮ್ಮ ನಡುವೆ ಜಗಳ ಉಂಟಾಗಿತ್ತು. ಹೀಗಾಗಿ ದಂಪತಿ 10 ವರ್ಷಗಳಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಆದರೆ ಕಾನೂನುಬದ್ಧವಾಗಿ ಇವರಿಬ್ಬರು ವಿಚ್ಛೇದನ ಪಡೆದುಕೊಂಡಿರಲಿಲ್ಲ.

    ನವೆಂಬರ್ 1ರಂದು ಸ್ಯಾಮ್ಯುಯೆಲ್ ತನ್ನ ಪಾಲನ್ನು ತೆಗೆದುಕೊಳ್ಳುವ ಸಲುವಾಗಿ ಅಪ್ರಾಯಮ್ಮನ ಭೇಟಿ ಮಾಡಲು ಹೋಗಿದ್ದನು. ಈ ವೇಳೆ ತನಗೆ ಬರುತ್ತಿರುವ ಪಿಂಚಣಿ ಹಣದಿಂದ ಸ್ವಲ್ಪ ಹಣ ಕೊಟ್ಟಿದ್ದರಿಂದ ಸಿಟ್ಟಾದ ಸ್ಯಾಮ್ಯುಯೆಲ್ ಅಲ್ಲಿಂದ ಕೋಪಗೊಂಡು ಹೊರಟು ಹೋಗಿದ್ದನು. ಹೀಗೆ ಹೋದವನು ಮರುದಿನ ಮುಂಜಾನೆಯೇ ವಾಪಸ್ ಬಂದು ಅಪ್ರಾಯಮ್ಮನನ್ನು ವಾಕಿಂಕ್ ಸ್ಟಿಕ್ ನಲ್ಲಿ ಹೊಡೆದು ಕೊಂದಿದ್ದಾನೆ.

    ಪತ್ನಿ ಸಾವನ್ನಪ್ಪಿದ್ದನ್ನು ಖಚಿತಪಡಿಸಿಕೊಂಡ ಕೆಲ ಹೊತ್ತಿನ ಬಳಿಕ ಸ್ಯಾಮ್ಯುಯೆಲ್ ತನ್ನ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಕೊಲೆಗೆ ಬಗ್ಗೆ ತಿಳಿಸಿದ್ದಾನೆ. ಮೊದಲು ಯಾರೂ ಸ್ಯಾಮ್ಯುಯೆಲ್ ಮಾತನ್ನು ನಂಬಿರಲಿಲ್ಲ. ನೆರೆಹೊರೆಯವರು ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ ಅಪ್ರಾಯಮ್ಮನನ್ನು ಕಂಡು ಸುದ್ದಿ ಹಬ್ಬಿಸಿದರು. ಈ ವಿಚಾರ ಅಪ್ರಾಪಯಮ್ಮನ ಕುಟುಂಬಕ್ಕೆ ತಲುಪಿತ್ತು.

    ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಪ್ರಾಯಮ್ಮ ಕುಟುಂಬಸ್ಥರು, ಸ್ಯಾಮ್ಯುಯೆಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಸ್ಯಾಮ್ಯುಯೆಲ್ ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • 6ರ ಬಾಲಕಿಯ ಮೇಲೆ 26 ವರ್ಷದ ಯುವಕನಿಂದ ಅತ್ಯಾಚಾರ

    6ರ ಬಾಲಕಿಯ ಮೇಲೆ 26 ವರ್ಷದ ಯುವಕನಿಂದ ಅತ್ಯಾಚಾರ

    – ಮನೆಯಲ್ಲಿ ಯಾರೂ ಇಲ್ಲದಾಗ ಘಟನೆ
    – ಬೆಂಗ್ಳೂರಲ್ಲಿ ಬಡಗಿ ಕೆಲಸ ಮಾಡ್ತಿದ್ದ ಆರೋಪಿ

    ಹೈದರಾಬಾದ್: ನೆರೆಮನೆಯಲ್ಲಿ 6 ವರ್ಷದ ಬಾಲಕಿಯ ಮೇಲೆ 26 ವರ್ಷದ ಯುವಕ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಅಪ್ರಾಪ್ತ ವಯಸ್ಸಿನ ಬಾಲಕಿ ಮನೆಯಲ್ಲಿ ಏಕಾಂಗಿಯಾಗಿದ್ದನ್ನು ಗಮನಿಸಿದ ಯುವಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಘಟನೆ ನಡೆದಾಗ ಸಂತ್ರಸ್ತೆಯ ತಾಯಿ ತರಕಾರಿಗಳನ್ನು ಖರೀದಿಸಲು ಹೋಗಿದ್ದಳು. ಹೀಗಾಗಿ ಮನೆಯಲ್ಲಿ ಯಾರೂ ಇರಲಿಲ್ಲ.

    ಇತ್ತ ಹೊರಗಡೆ ಹೋಗಿದ್ದ ಅಜ್ಜಿ ಮನೆಗೆ ಬಂದು ನೋಡಿದಾಗ ಬಾಲಕಿಗೆ ರಕ್ತಸ್ರಾವವಾಗುತ್ತಿದ್ದನ್ನು ಕಂಡು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಬಾಲಕಿಗೆ ತೀವ್ರ ರಕ್ತಸ್ರಾವವಾಗಿತ್ತು ತುರ್ತು ವೈದ್ಯಕೀಯ ಆರೈಕೆಯನ್ನು ನೀಡಿದ್ದೇವೆ. ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಸ್ಥಳೀಯ ಆಸ್ಪತ್ರೆಯ ಇನ್‍ಚಾರ್ಜ್ ಹೇಳಿದ್ದಾರೆ.

    ಅತ್ಯಾಚಾರದ ವೇಳೆ ಬಾಲಕಿ ಧರಿಸಿದ್ದ ಬಟ್ಟೆ ಮೇಲೆ ಇರುವ ರಕ್ತ ಮತ್ತು ವೀರ್ಯವನ್ನು ಸಂಗ್ರಹಿಸಿದ್ದೇವೆ. ವಿಜಯವಾಡ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಬಾಲಕಿ ಕುಟುಂಬ ಮತ್ತು ಪರೀಕ್ಷಿಸಿದ ವೈದ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಸೋಮವಾರ ಬಂಧಿಸಿದ್ದೇವೆ. ಅತ್ಯಾಚಾರಕ್ಕೊಳಗಾದ ಬಾಲಕಿಯ ಸ್ಥಿತಿ ಸ್ಥಿರವಾಗಿದೆ ಮತ್ತು ಅವಳು ಅಪಾಯದಿಂದ ಪಾರಾಗಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಆರೋಪಿ ಬೆಂಗಳೂರಿನಲ್ಲಿ ಬಡಗಿ ಕೆಲಸ ಮಾಡುತ್ತಿದ್ದ. ಆದರೆ ರಾಷ್ಟ್ರವ್ಯಾಪಿ ಲಾಕ್‍ಡೌನ್ ನಂತರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಪೊಲೀಸರು ಹೇಳುವ ಪ್ರಕಾರ ಆರೋಪಿ ಬಾಲಕಿಯನ್ನು ಸ್ನಾನಗೃಹಕ್ಕೆ ಎಳೆದೊಯ್ದಿದ್ದಾನೆ ಅಲ್ಲಿ ಅವನು ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.

    ಮಕ್ಕಳ ಮೇಲೆ ಲೈಂಗಿಕ ಅಪರಾಧಗಳಿಂದ (ಪೋಕ್ಸೋ) ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ ಅಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಸಜೀವ ದಹನ ಮಾಡಿದ ಯುವಕ

    ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಸಜೀವ ದಹನ ಮಾಡಿದ ಯುವಕ

    – ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ

    ಹೈದಾರಾಬಾದ್: ತನ್ನ ಪ್ರೀತಿಯನ್ನು ನಿರಾಕರಿಸಿದ ಯುವತಿಯನ್ನು ಯುವಕನೊಬ್ಬ ಸಜೀವ ದಹನ ಮಾಡಿರುವ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಮೃತ ದುರ್ದೈವಿ ಯುವತಿ ನರ್ಸ್ ಆಗಿದ್ದು, ವಿಜಯವಾಡದಲ್ಲಿರುವ ಕೊರೊನಾ ವೈರಸ್ ಸೆಂಟರ್ ನಲ್ಲಿ ಕೆಲ ಮಾಡುತ್ತಿದ್ದರು. ಘಟನೆ ಸಂಬಂಧ ಆರೋಪಿಯನ್ನು ಇದುವರೆಗೆ ಬಂಧಿಸಿಲ್ಲ. ಇನ್ನು ಈ ಸಂಬಂಧ ತನಿಖೆ ಮುಂದುವರಿದಿದೆ.

    ತಾನು ನಿನ್ನನ್ನು ಪ್ರೀತಿಸುವುದಾಗಿ ಯುವಕ, ಯುವತಿ ಬಳಿ ಹೇಳಿದ್ದಾನೆ. ಆದರೆ ಯುವಕನ ಈ ಮಾತನ್ನು ಯುವತಿ ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಯುವಕ, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

    ಪೆಟ್ರೋಲ್ ಸುರಿದ್ದರಿಂದ ಬಹುಬೇಗನೇ ಬೆಂಕಿ ಹಚ್ಚಿಕೊಂಡ ಪರಿಣಾಮ ಗಂಭೀರ ಗಾಯಗೊಂಡು ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕೂಡಲೇ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಸಾಕ್ಷಿಗೆ ಕಲೆ ಹಾಕಿದ್ದಾರೆ.

  • ಮಕ್ಕಳನ್ನು ಕರೆದೊಯ್ಯಲ್ಲವೆಂದ ಅಳಿಯನ ಶಿರಚ್ಛೇದ- ರುಂಡದೊಂದಿಗೆ ಮಾವ ಪೊಲೀಸರಿಗೆ ಶರಣು

    ಮಕ್ಕಳನ್ನು ಕರೆದೊಯ್ಯಲ್ಲವೆಂದ ಅಳಿಯನ ಶಿರಚ್ಛೇದ- ರುಂಡದೊಂದಿಗೆ ಮಾವ ಪೊಲೀಸರಿಗೆ ಶರಣು

    ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಅಳಿಯನನ್ನು ಕೊಲೆ ಮಾಡಿ ಬಳಿಕ ಆತನ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾದ ವಿಚಿತ್ರ ಘಟನೆಯೊಂದು ಆಂಧ್ರಪ್ರದೇಶ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಪೂರ್ವ ಗೋದಾವರಿಯ ರೌತುಲಪುಡಿ ಮಂಡಲದ ಧರ ಜಗನ್ನಾಥಪುರಂ ಗ್ರಾಮದಲ್ಲಿ ನಡೆದಿದೆ. ಸತ್ಯನಾರಾಯಣ್(56) ಅಳಿಯ ಪಂಪನಪಾಯಿನ ಲಕ್ಷ್ಮಣ್(25) ಕೊಲೆ ಮಾಡಿದ್ದಾನೆ.

    ಆಗಸ್ಟ್ 9ರಂದು ಲಕ್ಷ್ಮಣ್, ಮಾವ ಸತ್ಯನಾರಾಯಣ್ ಮನೆಗೆ ತೆರಳಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದೇ ಸಿಟ್ಟಿನಿಂದ ಸತ್ಯನಾರಾಯಣ್ ಅಳಿಯ ಲಕ್ಷ್ಮಣ್‍ನ ಶಿರಚ್ಛೇದ ಮಾಡಿದ್ದಾನೆ. ಬಳಿಕ ಬೆಳಗ್ಗೆ 11.30ರ ಸುಮಾರಿಗೆ ಸತ್ಯನಾರಾಯಣ್ ಅಳಿಯನ ರುಂಡದೊಂದಿಗೆ ಅನ್ನವರಂ ಪೊಲೀಸ್ ಠಾಣೆಗೆ ತೆರಳಿ, ಪೊಲೀಸರಿಗೆ ಶರಣಾಗಿದ್ದಾನೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ರಂಬಾಬು ತಿಳಿಸಿದ್ದಾರೆ.

    ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಯ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

    10 ತಿಂಗಳ ಹಿಂದೆ ಲಕ್ಷ್ಮಣ್ ಪತ್ನಿ ಪಾವನಿ ತೀರಿಕೊಂಡಿದ್ದಳು. ಆ ಬಳಿಕ ಇಬ್ಬರು ಹೆಣ್ಣು ಮಕ್ಕಳು ಪಾವನಿ ತಂದೆ(ಸತ್ಯನಾರಾಣ್) ಮನೆಯಲ್ಲಿ ಇದ್ದಾರೆ. ಇತ್ತ ಮಗಳು ಸಾವನ್ನಪ್ಪಿ 10 ತಿಂಗಳ ಕಾರ್ಯಕ್ರಮವನ್ನು ಆಗಸ್ಟ್ 8 ರಂದು ಸತ್ಯನಾರಾಯಣ್ ಇಟ್ಟುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅಳಿಯನನ್ನು ಮನೆಗೆ ಕರೆದಿದ್ದಾನೆ.

    ಕಾರ್ಯಕ್ರಮದ ಮರುದಿನ ಅಂದರೆ ಆಗಸ್ಟ್ 9 ರಂದು ಸತ್ಯನಾರಾಯಣ್, ನಿನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗ ಎಂದು ಹೇಳಿದ್ದಾರೆ. ಈ ವೇಳೆ ಲಕ್ಷ್ಮಣ್, ಅಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಹೀಗಾಗಿ ನನಗೆ ಎರಡನೇ ಮದುವೆ ಮಾಡಿದರೆ ಮಾತ್ರ ಮಕ್ಕಳನ್ನು ಕರೆದೊಯ್ಯುತ್ತೇನೆ. ಇಲ್ಲವೆಂದರೆ ಕರೆದುಕೊಂಡು ಹೋಗಲ್ಲ ಎಂದು ಮಾವನಿಗೆ ತಿಳಿಸಿದ್ದಾನೆ.

    ಅಳಿಯನ ಪ್ರಸ್ತಾಪವನ್ನು ಮಾವ ತೀವ್ರವಾಗಿ ವಿರೋಧಿಸಿದನು. ಈ ಸಬಂಧ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪರಿಣಾಮ ಜಗಳ ತಾರಕಕ್ಕೇರಿ ಅಳಿಯನನ್ನು ಮಾವ ಕೊಂದು ಪೊಲೀಸರಿಗೆ ಶರಣಾದನು ಎಂದು ಸರ್ಕಲ್ ಇನ್ಸ್ ಪೆಕ್ಟರ್ ರಂಬಾಬು  ವಿವರಿಸಿದ್ದಾರೆ.

  • ಹೋಟೆಲ್‍ನಲ್ಲಿ ಅಗ್ನಿ ಅವಘಡ- ಮೃತರ ಕುಟುಂಬಕ್ಕೆ ತಲಾ 50 ಲಕ್ಷ ಪರಿಹಾರ ಘೋಷಣೆ

    ಹೋಟೆಲ್‍ನಲ್ಲಿ ಅಗ್ನಿ ಅವಘಡ- ಮೃತರ ಕುಟುಂಬಕ್ಕೆ ತಲಾ 50 ಲಕ್ಷ ಪರಿಹಾರ ಘೋಷಣೆ

    ಹೈದರಾಬಾದ್: ಕೋವಿಡ್ 19 ರೋಗಿಗಳಿದ್ದ ಹೋಟೆಲ್ ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಆಂಧ್ರ ಸರ್ಕಾರ ತಲಾ 50 ಲಕ್ಷ ಪರಿಹಾರ ಘೋಷಣೆ ಮಾಡಿದೆ.

    ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಕೋವಿಡ್ 19 ಸೌಲಭ್ಯವಿದ್ದ ಹೋಟೆಲ್ ನಲ್ಲಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ 7 ಮಂದಿ ಸಜೀವ ದಹನವಾಗಿದ್ದಾರೆ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳ, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

    ಈ ಸಂಬಂಧ ಮಾತನಾಡಿದ್ದ, ಕೃಷ್ಣ ಡಿಸಿ ಮೊಹಮ್ಮದ್ ಇಮ್ತಿಯಾಜ್, ಈ ಘಟನೆ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ನಡೆದಿದೆ. ಸುಮಾರು 22 ಮಂದಿ ಕೊರೊನಾ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಕಟ್ಟಡದಲ್ಲಿದ್ದ ಎಲ್ಲರನ್ನೂ ಸ್ಥಳಾಂತರಿಸಿದ್ದೇವೆ. ಶಾರ್ಟ್ ಸರ್ಕ್ಯೂಟ್ ನಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಘಟನೆಗೆ ನಿಖರ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಹೋಟೇಲ್ ನಲ್ಲಿದ್ದ ಸುಮಾರು 30 ಮಂದಿಯನ್ನು ರಕ್ಷಿಸಲಾಗಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಪ್ರಧಾನಿಯವರು ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

  • ಕೋವಿಡ್ 19 ರೋಗಿಗಳಿದ್ದ ಹೋಟೆಲ್‍ನಲ್ಲಿ ಅಗ್ನಿ ಅವಘಡ- 7 ಮಂದಿ ದುರ್ಮರಣ

    ಕೋವಿಡ್ 19 ರೋಗಿಗಳಿದ್ದ ಹೋಟೆಲ್‍ನಲ್ಲಿ ಅಗ್ನಿ ಅವಘಡ- 7 ಮಂದಿ ದುರ್ಮರಣ

    – ಹೋಟೆಲ್‍ನಲ್ಲಿದ್ದ 30 ಮಂದಿಯ ರಕ್ಷಣೆ

    ಹೈದರಾಬಾದ್: ಕೋವಿಡ್ 19 ಸೌಲಭ್ಯವಿದ್ದ ಹೋಟೆಲಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಏಳು ಮಂದಿ ಸಜೀವ ದಹನವಾದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

    ಘಟನೆಯ ಮಾಹಿತಿ ಅರಿತ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ. ಹೋಟೆಲ್‍ನಲ್ಲಿದ್ದ ಸುಮಾರು 30 ಮಂದಿಯನ್ನು ರಕ್ಷಿಸಲಾಗಿದೆ ವಿಜಯವಾಡ ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಘಟನೆ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ನಡೆದಿದೆ. ಸುಮಾರು 22 ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಕಟ್ಟಡದಲ್ಲಿದ್ದ ಎಲ್ಲರನ್ನೂ ಸ್ಥಳಾಂತರಿಸಿದ್ದೇವೆ. ಶಾರ್ಟ್ ಸರ್ಕ್ಯೂಟ್ ನಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಘಟನೆಗೆ ನಿಖರ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ ಎಂದು ಕೃಷ್ಣ ಡಿಸಿ ಮೊಹಮ್ಮದ್ ಇಮ್ತಿಯಾಜ್ ತಿಳಿಸಿದ್ದಾರೆ.

    ಮೃತಪಟ್ಟ 7 ಮಂದಿ ಕೂಡ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾಹಿ ಲಭ್ಯವಾಗಿದೆ.