Tag: andhrapradesh

  • ಹಾರ್ಮೋನ್ ಮಾತ್ರೆ ತೆಗೆದುಕೊಳ್ಳುವಂತೆ ಮಗಳಿಗೆ ಒತ್ತಾಯಿಸಿದ ತಾಯಿ ಅರೆಸ್ಟ್!

    ಹಾರ್ಮೋನ್ ಮಾತ್ರೆ ತೆಗೆದುಕೊಳ್ಳುವಂತೆ ಮಗಳಿಗೆ ಒತ್ತಾಯಿಸಿದ ತಾಯಿ ಅರೆಸ್ಟ್!

    ಹೈದರಾಬಾದ್: ಹಾರ್ಮೋನ್ ಮಾತ್ರೆ ತೆಗೆದುಕೊಳ್ಳುವಂತೆ ಮಗಳಿಗೆ ಒತ್ತಾಯಿಸಿದ ತಾಯಿಯನ್ನು ಆಂಧ್ರಪ್ರದೇಶ (Andhrapradesh) ದ ಪೊಲೀಸರು ಬಂಧಿಸಿದ್ದಾರೆ.

    ಆಂಧ್ರಪ್ರದೇಶ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು 16 ವರ್ಷದ ಹುಡುಗಿ (Girl) ಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ನೋವು ಮತ್ತು ಅಡ್ಡ ಪರಿಣಾಮಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಆಕೆ ಚೈಲ್ಡ್‍ಲೈನ್‍ನ ಸಹಾಯ ಪಡೆದು ದೂರು ದಾಖಲಿಸಿದ್ದಾಳೆ. ಈ ವೇಳೆ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

    ಕಳೆದ ನಾಲ್ಕು ವರ್ಷಗಳಿಂದ ಈ ಹಾರ್ಮೋನ್ ಮಾತ್ರೆ (Hormone Pills) ಗಳನ್ನು ಆಕೆ ಸೇವಿಸುತ್ತಿದ್ದಳು. ಇದರಿಂದಾಗಿ ಪ್ರಜ್ಞಾಹೀನತೆ ಮತ್ತು ದೇಹದಲ್ಲಿ ತೀವ್ರವಾದ ಊತವನ್ನು ಅನುಭವಿಸಿದ್ದಾಳೆ. ಸಿನಿಮಾದಲ್ಲಿ ಅಭಿನಯಿಸುವ ಸಲುವಾಗಿ ದೈಹಿಕ ಬೆಳವಣಿಗೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ತನ್ನ ತಾಯಿ ಒತ್ತಾಯಿಸುತ್ತಿದ್ದಳು ಎಂದು ಹುಡುಗಿ ಬಹಿರಂಗಪಡಿಸಿದ್ದಾಳೆ.

     ಬಲವಂತದ ಔಷಧ ತನ್ನ ಶಿಕ್ಷಣದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಗೊತ್ತಾದಾಗ ಯುವತಿ ಆಘಾತಕ್ಕೊಳಗಾಗಿದ್ದಾಳೆ. ಮಗಳನ್ನು ಹೇಗಾದ್ರೂ ಮಾಡಿ ಸಿನಿಮಾದಲ್ಲಿ ಅಭಿನಯಿಸುವಂತೆ ಮಾಡಬೇಕು ಎಮದು ಪಣ ತೊಟ್ಟಿರುವ ತಾಯಿ ಕೆಲವೊಂದು ಸಿನಿಮಾ ನಿರ್ಮಾಪಕರ ಜೊತೆ ಸಂಪರ್ಕದಲ್ಲಿದ್ದರು. ಆದರೆ ಇದನ್ನೆಲ್ಲಾ ವಿರೋಧಿಸಿದಾಗ ತಾಯಿ ತನಗೆ ನೀಡಿರುವ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನೂ ಕೂಡ ಆಕೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಇದನ್ನೂ ಓದಿ: ಮಕ್ಕಳ ಮಾಹಿತಿ ಅಕ್ರಮವಾಗಿ ಸಂಗ್ರಹ – 165 ಕೋಟಿ ಪಾವತಿಗೆ ಮುಂದಾದ ಮೈಕ್ರೋಸಾಫ್ಟ್

  • ಆಟವಾಡ್ತಿದ್ದಾಗ ಕಾರಿನ ಡೋರ್ ಲಾಕ್- 8 ವರ್ಷದ ಬಾಲಕಿ ದುರ್ಮರಣ

    ಆಟವಾಡ್ತಿದ್ದಾಗ ಕಾರಿನ ಡೋರ್ ಲಾಕ್- 8 ವರ್ಷದ ಬಾಲಕಿ ದುರ್ಮರಣ

    ಹೈದರಾಬಾದ್: 8 ವರ್ಷದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕಾರಿನೊಳಗೆ ಸಿಲುಕಿಕೊಂಡು ಉಸಿರುಗಟ್ಟಿ ಮೃತಪಟ್ಟ ಘಟನೆ ಆಂಧ್ರಪ್ರದೇಶ (Andhrapradesh) ದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ.

    ಬಾಲಕಿ ಇಂದು (ಸೋಮವಾರ) ಕಾರಿ (Car) ನೊಳಗೆ ತನ್ನ ಪಾಡಿಗೆ ಆಟವಾಡುತ್ತಿದ್ದಳು. ಈ ವೇಳೆ ಕಾರಿನ ಡೋರ್ ಲಾಕ್ ಆಗಿ ಬಾಲಕಿ (Girl) ಒಳಗೆ ಸಿಲುಕಿಕೊಂಡಿದ್ದಾಳೆ. ಪರಿಣಾಮ ಉಸಿರಾಡಲು ಸಾಧ್ಯವಾಗದೇ ದುರ್ಮರಣಕ್ಕೀಡಾಗಿದ್ದಾಳೆ. ಇದನ್ನೂ ಓದಿ: ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಭೀಕರ ಅಪಘಾತ ; ಮೂವರು ಯುವಕರು ಸಾವು

    ಇತ್ತ ಸಂಜೆಯಾದರೂ ಬಾಲಕಿ ಕಾಣದೆ ಇದ್ದಾಗ ಆಕೆಯ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಎಲ್ಲಾ ಕಡೆ ಹುಡುಕಾಡಿದರೂ ಬಾಲಕಿ ಕಾಣಿಸಲಿಲ್ಲ. ಕೊನೆಗೆ ಮನೆ ಪಕ್ಕ ನಿಲ್ಲಿಸಿದ್ದ ಕಾರನ್ನು ಚೆಕ್ ಮಾಡಿದ್ದಾರೆ. ಈ ವೇಳೆ ಬಾಲಕಿ ಕಾರಿನೊಳಗೆ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಉಸಿರುಗಟ್ಟಿ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಬಾಲಕಿಯ ತಂದೆ ನಿಧನ ಹೊಂದಿದ್ದರು. ಸದ್ಯ ಮೃತಪಟ್ಟ ಬಾಲಕಿ ತನ್ನ 11 ವರ್ಷದ ಸಹೋದರನ ಜೊತೆ ತಾಯಿಯೊಂದಿಗೆ ವಾಸವಾಗಿದ್ದಳು. ಪತಿ ತೀರಿಕೊಂಡ ದುಃಖದಲ್ಲಿದ್ದ ಆದಿಲಕ್ಷ್ಮಿಗೆ ಗ್ರಾಮಸ್ಥರು ಸಾಂತ್ವನ ಹೇಳುತ್ತಿದ್ದಂತೆಯೇ ಇದೀಗ ಮತ್ತೊಂದು ದುರಂತ ಸಂಭವಿಸಿದೆ.

  • ಬ್ಯಾಂಕ್‍ಗಳಿಗೆ ಜಮೆ ಆಗ್ತಿಲ್ಲ ತಿರುಪತಿ ಹುಂಡಿಯ ವಿದೇಶಿ ಕರೆನ್ಸಿ

    ಬ್ಯಾಂಕ್‍ಗಳಿಗೆ ಜಮೆ ಆಗ್ತಿಲ್ಲ ತಿರುಪತಿ ಹುಂಡಿಯ ವಿದೇಶಿ ಕರೆನ್ಸಿ

    ಅಮರಾವತಿ: ಹಿಂದೂಗಳ ಪವಿತ್ರ ಕ್ಷೇತ್ರ ತಿರುಪತಿ (Tirupathi) ಗೆ ಕೇಂದ್ರ ಸರ್ಕಾರ (Central Government) ಶಾಕ್ ನೀಡಿದೆ. ತಿರುಮಲ ತಿರುಪತಿ ತಿಮ್ಮಪ್ಪನ ಸನ್ನಿಧಾನ ಹುಂಡಿಗಳಲ್ಲಿ ಸಂಗ್ರಹವಾದ ವಿದೇಶಿ ಕರೆನ್ಸಿ (Foreign Currency) ಯನ್ನು ಬ್ಯಾಂಕ್‍ಗಳಿಗೆ ಜಮೆ ಮಾಡದಂತೆ ನಿರ್ಬಂಧ ಹೇರಿದೆ.

    ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ತಿಮ್ಮಪ್ಪನ ಹುಂಡಿಗೆ ವಿದೇಶಿ ಕರೆನ್ಸಿ ರೂಪದಲ್ಲಿ ಬಂದಿರುವ 26 ಕೋಟಿ ರೂಪಾಯಿ ಮೌಲ್ಯದ ಕಾಣಿಕೆ ಹಾಗೆಯೇ ಉಳಿದಿದೆ. ಕಳೆದ ಮೂರು ವರ್ಷಗಳಿಂದ ಮೋದಿ ಸರ್ಕಾರ, ಎಫ್‍ಸಿಆರ್‍ಎ ಅಡಿಯಲ್ಲಿ ಟಿಟಿಡಿ (TTD)ಗೆ ನೀಡಿದ್ದ ಪರವಾನಗಿಯನ್ನು ಅಮಾನತಿನಲ್ಲಿ ಇಟ್ಟಿದೆ. ಹೀಗಾಗಿಯೇ ಬ್ಯಾಂಕ್‍ಗಳಿಗೆ ವಿದೇಶಿ ಕರನ್ಸಿ ಜಮೆ ಮಾಡಲು ಆಗುತ್ತಿಲ್ಲ ಎನ್ನಲಾಗಿದೆ.

    ಈ ಬೆಳವಣಿಗೆ ಬಗ್ಗೆ ಹಲವರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೇಂದ್ರ ಬಿಜೆಪಿ ಸರ್ಕಾರ ಏಕೆ ದೇಗುಲಗಳಿಗೆ ತೊಂದ್ರೆ ಕೊಡ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, #ಆ್ಯಂಟಿಹಿಂದೂಬಿಜೆಪಿ ಎಂಬ ಹ್ಯಾಶ್‍ಟ್ಯಾಗ್ ಹಾಕಿದ್ದಾರೆ. ರಣದೀಪ್ ಸುರ್ಜೆವಾಲಾ ಮಾತಾಡಿ, ಮೋದಿ ಸರ್ಕಾರ (Modi Government) ದೊಡ್ಡ ದೇವಸ್ಥಾನದ ಮೇಲೆ ದಾಳಿಗೆ ಮುಂದಾಗಿದೆ. ಇದನ್ನು ಖಂಡಿಸ್ತೇವೆ ಎಂದಿದ್ದಾರೆ.

    ರಾಮಮಂದಿರ (RamaMandira) ದ ಚಂದಾ ಹಣವನ್ನು ಬಿಜೆಪಿ ಲೂಟಿ ಮಾಡಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ಮಧ್ಯೆ ರಾಮನಗರದಲ್ಲಿ ಸಿಎಂ ಬೊಮ್ಮಾಯಿ ರಾಮಜಪ ಮಾಡಿದ್ದಾರೆ. ರಾಮರಾಜ್ಯ ನಿರ್ಮಾಣ ನಮ್ಮ ಕನಸು ಎಂದು ಪ್ರತಿಪಾದಿಸಿದ್ದಾರೆ.

  • ಮಹಿಳೆಯ ಹೊಟ್ಟೆಯಿಂದ ಮೀಟರ್ ಉದ್ದದ ಬಟ್ಟೆ ಹೊರತೆಗೆದ ವೈದ್ಯರು!

    ಮಹಿಳೆಯ ಹೊಟ್ಟೆಯಿಂದ ಮೀಟರ್ ಉದ್ದದ ಬಟ್ಟೆ ಹೊರತೆಗೆದ ವೈದ್ಯರು!

    ಅಮರಾವತಿ: ಕೆಲವೊಂದು ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ (Operation) ಮಾಡುವಾಗ ಎಡವಟ್ಟುಗಳು ನಡೆಯುತ್ತಲೇ ಇರುತ್ತವೆ. ಇದೀಗ ಅಂಥದ್ದೇ ಘಟನೆಯೊಂದು ಆಂಧ್ರಪ್ರದೇಶ (Andrapradesh) ದ ಎನ್‍ಟಿಆರ್ ಜಿಲ್ಲೆಯಲ್ಲಿ ನಡೆದಿದೆ.

    ಹೌದು. 51 ವರ್ಷದ ಮಹಿಳೆಗೆ 8 ತಿಂಗಳ ಹಿಂದೆ ಹಿಸ್ಟರೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಈ ವೇಳೆ ವೈದ್ಯರು ಮೀಟರ್ ಉದ್ದದ ಬಟ್ಟೆಯನ್ನು ಹೊಟ್ಟೆಯಲ್ಲಿಯೇ ಬಿಟ್ಟು ಎಡವಟ್ಟು ಮಾಡಿದ್ದಾರೆ. ಇದನ್ನೂ ಓದಿ: ಬೆಡ್‌ರೂಮ್‌ನಲ್ಲಿ ಮಲಗಿದ ಸ್ಥಿತಿಯಲ್ಲಿ ಯೂಟ್ಯೂಬರ್‌ ಮೃತದೇಹ ಪತ್ತೆ

    ವರದಿಗಳ ಪ್ರಕಾರ, ಆಸ್ಪತ್ರೆಯ ವೈದ್ಯೆ ಅನು ಎಂಬಾಕೆ ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಯ ಹೊಟ್ಟೆಯಲ್ಲಿಯೇ ಬಟ್ಟೆಯನ್ನು ಬಿಟ್ಟು ಹೊಲಿಗೆ ಹಾಕಿದ್ದಾರೆ. ಇದಾದ ಕೆಲವು ವಾರಗಳ ನಂತರ, ಮಹಿಳೆಗೆ ತನ್ನ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಹಲವು ಬಾರಿ ಸಿಟಿ ಸ್ಕ್ಯಾನ್ ಮಾಡಿಸಿದರೂ ಪ್ರಯೋಜನವಾಗಲಿಲ್ಲ.

    ಕೊನೆಗೆ ಅವರು ವಿಜಯವಾಡದಲ್ಲಿರುವ ಖಾಸಗಿ ಆಸ್ಪತ್ರೆಗೆ ತೆರಳಿ ವೈದ್ಯರ ಬಳಿ ವಿವರಿಸಿದ್ದಾರೆ. ಈ ವೇಳೆ ವೈದ್ಯರು ಪರೀಕ್ಷೆ ನಡೆಸಿದಾಗ ಮಹಿಳೆಯ ಹೊಟ್ಟೆ (Stomach) ಯೊಳಗಡೆ ಬಟ್ಟೆಯ ತುಂಡು ಇರುವುದು ಬಯಲಾಗಿದೆ. ಕೂಡಲೇ ಆಪರೇಷನ್ ಮಾಡುವಂತೆ ಸೂಚನೆ ನೀಡಿದ್ದಾರೆ.

    ಅಂತೆಯೇ ಮಹಿಳೆಗೆ ಆಪರೇಷನ್ ಮಾಡಿ ಮೀಟರ್ ಉದ್ದದ ಬಟ್ಟೆ (Cloth) ಯನ್ನು ಹೊರತೆಗೆದ ವೈದ್ಯರೇ ಒಂದು ಬಾರಿ ಶಾಕ್ ಗೆ ಒಳಗಾಗಿದ್ದಾರೆ. ಇತ್ತ ಕುಟುಂಬಸ್ಥರು ಕೂಡ ಮೊದಲು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ನಿರ್ಲಕ್ಷ್ಯಕ್ಕೆ ಬೆರಗಾಗಿದ್ದಾರೆ. ಅಲ್ಲದೆ ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆಂಧ್ರದಲ್ಲಿ ಎಟಿಎಂಗೆ ಹಣ ತುಂಬುವ ವಾಹನ ಕಳ್ಳತನ- ಕರ್ನಾಟಕದಲ್ಲಿ 53.5 ಲಕ್ಷ ನಗದು ಸೀಜ್

    ಆಂಧ್ರದಲ್ಲಿ ಎಟಿಎಂಗೆ ಹಣ ತುಂಬುವ ವಾಹನ ಕಳ್ಳತನ- ಕರ್ನಾಟಕದಲ್ಲಿ 53.5 ಲಕ್ಷ ನಗದು ಸೀಜ್

    ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದಲ್ಲಿ ಎಟಿಎಂ (ATM) ಗೆ ತುಂಬುವ ವಾಹನ ಸಮೇತ ಹಣ ಕಳವುಗೈದ ಚಾಲಕನನ್ನು ಕರ್ನಾಟಕದಲ್ಲಿ ಅರೆಸ್ಟ್ ಮಾಡಲಾಗಿದೆ.

    ಬಂಧಿತನನ್ನು ಫಾರೂಕ್ ಎಂದು ಗುರುತಿಸಲಾಗಿದ್ದು, ಈತ ಸಿಎಂಎಸ್ (CMS) ಕಂಪನಿಯ ಎಟಿಎಂಗೆ ಹಣ ತುಂಬುವ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಈತ ಆಂಧ್ರಪ್ರದೇಶ (Andhrapradesh) ದ ಕಡಪ ನಗರದ ಎಸ್‍ಬಿಎಂ (SBM) ಬ್ಯಾಂಕ್‍ನಿಂದ 53.5ಲಕ್ಷ ಹಣ ಎಟಿಎಂ (ATM) ಗೆ ತುಂಬಲು ತಂದಿದ್ದ. ಆದರೆ ತದನಂತರ ಸಿಎಂಎಸ್ ಕಂಪನಿ ವಾಹನದಿಂದ ಇಟಿಯೋಸ್ ಕಾರಿಗೆ ಹಣ ಶಿಫ್ಟ್ ಮಾಡಿದ್ದಾನೆ.

    ಇಟಿಯೋಸ್ ಕಾರಿಗೆ ಹಣ ಶಿಫ್ಟ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಪಿ 39 ಎಚ್ ಜಿ 3109 ಟಾಟಾ ಇಟಿಯೋಸ್ ಕಾರಿನಲ್ಲಿ ಹಣ ಇಟ್ಟುಕೊಂಡು ಪರಾರಿಗೆ ಯತ್ನಿಸಿದ್ದಾನೆ. ಆಂಧ್ರ ಗಡಿಭಾಗದ ಬಾಗೇಪಲ್ಲಿ ಚೆಕ್ ಪೋಸ್ಟ್ ಬಳಿ ಇಟಿಯೋಸ್ ಕಾರಿಗೆ ಪೊಲೀಸರು ತಡೆಕೋರಿದ್ದಾರೆ. ಪೊಲೀಸರನ್ನ ಕಂಡ ಕೂಡಲೇ ಫಾರೂಕ್ ಕಾರಿನಿಂದ ಇಳಿದು ಪರಾರಿಯಾಗಿದ್ದಾನೆ. ಇದನ್ನೂ ಓದಿ: ನಾನ್‍ವೆಜ್ ಊಟಕ್ಕೆಂದು ಬಂದವರಿಗೆ ಗೋಮಾಂಸ ಸರ್ವ್ – ಹೋಟೆಲ್ ಮಾಲೀಕ ಅರೆಸ್ಟ್

    ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಇಟಿಯೋಸ್ ಕಾರು ಸಮೇತ 53.5 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 5.47 ಕೋಟಿ ಮೌಲ್ಯದ 2.43 ಲಕ್ಷ ಎಣ್ಣೆ ಬಾಟ್ಲಿಗಳ ಮೇಲೆ ಹರಿಯಿತು ರೋಡ್ ರೋಲರ್!

    5.47 ಕೋಟಿ ಮೌಲ್ಯದ 2.43 ಲಕ್ಷ ಎಣ್ಣೆ ಬಾಟ್ಲಿಗಳ ಮೇಲೆ ಹರಿಯಿತು ರೋಡ್ ರೋಲರ್!

    ಅಮರಾವತಿ: 5.47 ಕೋಟಿ ಮೌಲ್ಯದ ಅಕ್ರಮ ಮದ್ಯವನ್ನು ಆಂಧ್ರಪ್ರದೇಶ(AndhraPradesh) ದ ಪೊಲೀಸರು ನಾಶಪಡಿಸಿದ್ದಾರೆ.

    2.43 ಲಕ್ಷ ಮದ್ಯ(Liquor) ದ ಬಾಟ್ಲಿಗಳ ಮೇಲೆ ಪೊಲೀಸರು ರೋಡ್ ರೋಲರ್ (Road Roler) ಹರಿಸಿದ್ದಾರೆ. ಈ ಘಟನೆ ಎನ್‍ಟಿಆರ್ ಜಿಲ್ಲೆಯ ನಂದಿಗಾಮದಲ್ಲಿ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ಆಲ್ಕೋಹಾಲ್ ತುಂಬಿದ ಬಾಟ್ಲಿಗಳನ್ನು ನಾಶಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ತೆಲಂಗಾಣ (Telangana) ದಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಮದ್ಯದ ಬಾಟ್ಲಿಗಳನ್ನು ಸಾಗಿಸಲಾಗುತ್ತಿತ್ತು. ಈ ವಿಚಾರ ನಮ್ಮ ಗಮನಕ್ಕೆ ಬಂತು. ಹೀಗಾಗಿ ನಾವು ದಾಳಿ ಮಾಡಿ 2 ಸಾವಿರ ಲೀಟರ್ ಅಕ್ರಮ ಮದ್ಯವನ್ನು ನಾಶಪಡಿಸಿದ್ದೇವೆ. ಅಲ್ಲದೆ ಈ ಸಂಬಂಧ 226 ಕೇಸ್ ದಾಖಲಿಸಿದ್ದೇವೆ ಎಂದು ವಿಜಯವಾಡದ ಪೊಲೀಸ್ ಆಯುಕ್ತ ಕಾಂತಿ ರಾಣಾ ಟಾಟಾ ವಿವರಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಸೀಟ್ ಬೆಲ್ಟ್ ಕಡ್ಡಾಯ – ಧರಿಸದಿದ್ದರೆ 1,000ರೂ. ದಂಡ

    ನಗರದ ಹೊರವಲಯದಲ್ಲಿರುವ ಎಲ್ಲಾ ಚೆಕ್ ಪೋಸ್ಟ್ (Check Post) ಗಳ ಮೇಲೆ ಏಕಾಏಕಿ ದಾಳಿ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇತರ ರಾಜ್ಯಗಳಿಂದ ಆಂಧ್ರಪ್ರದೇಶಕ್ಕೆ ಅಕ್ರಮ ಮದ್ಯ ಸಾಗಣೆಯಾಗಿರುವ ಕುರಿತು ವರದಿಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

    ಈ ವರ್ಷದ ಆರಂಭದಲ್ಲಿ ಕರ್ನೂಲ್‍ನಿಂದ 2 ಕೋಟಿ ಮೌಲ್ಯದ 66 ಸಾವಿರ ಮದ್ಯದ ಬಾಟ್ಲಿಗಳನ್ನು ಆಂಧ್ರ ಪ್ರದೇಶದ ವಿಶೇಷ ಜಾರಿ ಬ್ಯೂರೋ (SEB) ಸೀಜ್ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಖಾಸಗಿ ಬಸ್ ಪಲ್ಟಿ- ಆಂಧ್ರ ಮೂಲದ ದಂಪತಿ ದುರ್ಮರಣ

    ಖಾಸಗಿ ಬಸ್ ಪಲ್ಟಿ- ಆಂಧ್ರ ಮೂಲದ ದಂಪತಿ ದುರ್ಮರಣ

    ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದ್ದು, ಆಂಧ್ರಪ್ರದೇಶ ಮೂಲದ ದಂಪತಿ ಮೃತಪಟ್ಟಿದ್ದಾರೆ.

    ಇಂದು ಮುಂಜಾನೆ 5.30ರ ಸುಮಾರಿಗೆ ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ವಿರೂಪಾಕ್ಷಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಈ ದುರ್ಘಟನೆ ನಡೆದಿದೆ. ಬಸ್ ನಲ್ಲಿದ್ದ 15ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಇದನ್ನೂ ಓದಿ: ಮಗಳ ಮದುವೆಗೆ ಖರೀದಿಸಿದ್ದ ಚಿನ್ನಾಭರಣ ಕಳವು!

    ವೇಮುರಿ ಹೆಸರಿನ ಖಾಸಗಿ ಬಸ್ ವಿಜಯವಾಡದಿಂದ ಬೆಂಗಳೂರಿಗೆ ಬರುತ್ತಿತ್ತು. ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಸಾಧ್ಯತೆ ಇದೆ. ಗಾಯಾಳುಗಳು ಮುಳಬಾಗಿಲು ಸರ್ಕಾರಿ ಆಸ್ಪತ್ರೆ ಸೇರಿದಂತೆ ಕೋಲಾರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಮುಳಬಾಗಿಲು ಪೊಲೀಸರು ಸ್ಥಳಕ್ಕೆ ಭೇಟಿ ಗಾಯಾಳುಗಳ ರಕ್ಷಣೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭೀಕರ ರಸ್ತೆ ಅಪಘಾತ- 6 ಜನ ಸಾವು

    ಭೀಕರ ರಸ್ತೆ ಅಪಘಾತ- 6 ಜನ ಸಾವು

    ಹೈದರಾಬಾದ್: ನಿಂತಿದ್ದ ಲಾರಿ ಮತ್ತು ಟೆಂಪೋ ಟ್ರಾವೆಲರ್‌ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 110 ಮಂದಿ ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ನಡೆದಿದೆ.

    ಅಪಘಾತದ ಸಮಯದಲ್ಲಿ ಮಿನಿವ್ಯಾನ್‍ನಲ್ಲಿ ಸುಮಾರು 39 ಪ್ರಯಾಣಿಕರು ಇದ್ದರು. ಆ ಟೆಂಪೋ ಟ್ರಾವೆಲರ್‌ನಲ್ಲಿದ್ದ ನಾಲ್ವರು ಸ್ಥಾಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಗದೇ ಸಾವನ್ನಪ್ಪಿದ್ದಾರೆ.

    ಗಾಯಾಳುಗಳನ್ನು ನರಸರಾಯಪೇಟೆಯ ಗುರಜಾಲ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ರಾಜ್ಯಸಭೆ ಚುನಾವಣೆ- ಜೆಡಿಎಸ್ ಅಭ್ಯರ್ಥಿಯಾಗಿ ಕುಪ್ಪೇಂದ್ರ ರೆಡ್ಡಿ ಫೈನಲ್

    ನಿನ್ನೆಯಷ್ಟೇ ಉತ್ತರ ಪ್ರದೇಶದ ಖೇರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ 8 ಜನ ಮೃತಪಟ್ಟಿದ್ದರು. ಅಯೋಧ್ಯೆಗೆ ಟೆಂಪೋ ಟ್ರಾವೆಲರ್‌ನಲ್ಲಿ ಬೀದರ್‌ನ 16 ಜನರು ಪ್ರಯಾಣ ಬೆಳೆಸುತ್ತಿದ್ದರು. ಈ ಟೆಂಪೋ ಟ್ರಾವೆಲರ್‌ ಮೋತಿಪುರ್ ಪ್ರದೇಶದ ನಾನಿಹಾ ಮಾರುಕಟ್ಟೆಯಲ್ಲಿ ಎದುರಿನ ಲೇನ್‍ಗೆ ಪ್ರವೇಶಿಸಿದೆ. ಈ ವೇಳೆ ಟೆಂಪೋ ಟ್ರಾವೆಲರ್‌ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಯುಪಿಯಲ್ಲಿ ಬೀದರ್‌ ಟಿಟಿ ಅಪಘಾತ – ಯುವತಿ ಸಾವು, ಸಾವಿನ ಸಂಖ್ಯೆ 8ಕ್ಕೆ ಏರಿಕೆ

  • ಕೆಮಿಕಲ್ ಕಾರ್ಖಾನೆಯಲ್ಲಿ ಅಗ್ನಿ ದುರಂತ – 6 ಮಂದಿಯ ಕುಟುಂಬಕ್ಕೆ 25 ಲಕ್ಷ ಪರಿಹಾರ

    ಕೆಮಿಕಲ್ ಕಾರ್ಖಾನೆಯಲ್ಲಿ ಅಗ್ನಿ ದುರಂತ – 6 ಮಂದಿಯ ಕುಟುಂಬಕ್ಕೆ 25 ಲಕ್ಷ ಪರಿಹಾರ

    ಆಂಧ್ರಪ್ರದೇಶ: ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆಯಿಂದಾಗಿ ಮೃತಪಟ್ಟ 6 ಮಂದಿ ಕುಟುಂಬಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಹಾರ ಘೋಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರಿಗೆ 5 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೂ ಸೂಚಿಸಿದ್ದಾರೆ. ಇದನ್ನೂ ಓದಿ: ಔಷಧಿ ಘಟಕದಲ್ಲಿ ಅಗ್ನಿ ದುರಂತ: 6 ಮಂದಿ ಸಾವು

    cm jagan mohan reddy

    ಘಟನೆ ಕುರಿತು ವಿಷಾದ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಆಂಧ್ರಪ್ರದೇಶದ ಎಲ್ಲೂರಿನ ರಾಸಾಯನಿಕ ಘಟಕದಲ್ಲಿ ಸಂಭವಿಸಿದ ಅವಘಡದಿಂದ ಪ್ರಾಣಹಾನಿಯಾಗಿರುವುದು ನೋವು ತಂದಿದೆ. ಮೃತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ’ ಎಂದು ಹಾರೈಸಿದ್ದಾರೆ.

    ಏನಿದು ಅಗ್ನಿ ದುರಂತ?
    ಇಲ್ಲಿನ ಆಂಧ್ರಪ್ರದೇಶದ ಎಲ್ಲೂರು ಜಿಲ್ಲೆಯ ಅಕ್ಕಿರೆಡ್ಡಿಗುಡೇಂನಲ್ಲಿರುವ ಫಾರ್ಮಾ ಉತ್ಪಾದನಾ ಘಟಕದಲ್ಲಿ ಭಾರೀ ಅಗ್ನಿದುರಂತ ಸಂಭವಿಸಿದ್ದು, ದುರಂತದಲ್ಲಿ 6 ಮಂದಿ ಸಜೀವ ದಹನವಾಗಿ 15 ಮಂದಿ ಗಾಯಗೊಂಡಿದ್ದರು. ಇದನ್ನೂ ಓದಿ: ಎಲ್ಲಾ ಪ್ರಧಾನಿಗಳ ಕಥೆ ಹೇಳುವ ಮ್ಯೂಸಿಯಂ ಉದ್ಘಾಟಿಸಲಿದ್ದಾರೆ ಮೋದಿ – ವಿಶೇಷತೆ ಏನು?

    ಘಟನೆ ಸಂಬಂಧ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಬಿ.ಶ್ರೀನಿವಾಸುಲು, ಕೆಲಸ ಸಮರ್ಥವಾಗಿ ನಿಭಾಯಿಸದೇ ಅನಿಲ ಸೋರಿಕೆಯಾಗಿ, ಸ್ಪೋಟಕ್ಕೆ ಕಾರಣವಾಗಿದೆ. ಔಷಧಿ ಹಾಗೂ ಕೆಮಿಕಲ್‌ಗಳನ್ನು ತಯಾರಿಸುವ ಪೋರಸ್ ಲ್ಯಾಬೋರೇಟರೀಸ್ ಪ್ರೈವೇಟ್ ಲಿಮಿಟೆಡ್‌ನ ಘಟಕದಲ್ಲಿ ಸ್ಫೋಟ ಸಂಭವಿಸಿದಾಗ 20ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದರು. ಘಟನೆ ಬಳಿಕ ಸ್ಥಳಕ್ಕಾಗಿಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಹತ್ತಿರದ ಕಾಲೋನಿಗಳಿಂದ ಜನರನ್ನು ಸ್ಥಳಾಂತರಿಸಿ, ರಕ್ಷಣೆ ಮಾಡಲಾಗಿದೆ. ಸ್ಪೋಟ ಸಂಭವಿಸಿದ ಒಂದೆರಡು ಗಂಟೆಗಳಲ್ಲೇ ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲಾಗಿದೆ ಎಂದು ಮಾಹಿತಿ ನೀಡಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಇಲ್ಲದೆ ತೃತೀಯ ರಂಗ ಸಾಧ್ಯವಿಲ್ಲ: ಶರದ್ ಪವಾರ್

    MODI

    ಐವರು ಕಾರ್ಮಿಕರು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದು, ಮತ್ತೋರ್ವ ಕಾರ್ಮಿಕ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕೆಲ ಕಾರ್ಮಿಕರನ್ನು ವಿಜಯವಾಡ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ದೇವ್ ಶರ್ಮಾ, ಅನಿಲ ಸೋರಿಕೆಗೆ ನಿಖರ ಕಾರಣ ಪತ್ತೆ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು.

    ಗುಜರಾತ್‌ನಲ್ಲೂ ಕಾರ್ಖಾನೆ ಸ್ಪೋಟಗೊಂಡಿತ್ತು:
    ಅಹಮದಾಬಾದ್‌ನಿಂದ 235 ಕಿಮೀ ದೂರದಲ್ಲಿರುವ ದಹೇಜ್ ಕೈಗಾರಿಕಾ ಪ್ರದೇಶದ ಘಟಕದಲ್ಲಿ ರಾಸಾಯನಿಕ ಕಾರ್ಖಾನೆಯೊಂದು ಮುಂಜಾನೆ ವೇಳೆ ಸ್ಫೋಟಗೊಂಡಿದ್ದು, 6 ಮಂದಿ ಕಾರ್ಮಿಕರು ಮೃತಪಟ್ಟಿರುವ ದುರಂತ ನಡೆದಿತ್ತು.