Tag: Andhra Pradesh

  • ಪ್ರಸಾದದಲ್ಲಿ ಕಲಬೆರಕೆ, ಅಪವಿತ್ರಕ್ಕೆ ಡೋಂಟ್ ಕೇರ್ – ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ಮುಗಿಬಿದ್ದ ಭಕ್ತರು

    ಪ್ರಸಾದದಲ್ಲಿ ಕಲಬೆರಕೆ, ಅಪವಿತ್ರಕ್ಕೆ ಡೋಂಟ್ ಕೇರ್ – ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ಮುಗಿಬಿದ್ದ ಭಕ್ತರು

    – ‘ನಂದಿನಿ’ ತುಪ್ಪ ಬಳಕೆ ಬಳಿಕ ಸ್ವಾಧಿಷ್ಟ, ಗುಣಮಟ್ಟ ಕಾಯ್ದುಕೊಂಡ ತಿರುಪತಿ ಲಡ್ಡು
    – ಪರಸ್ಪರರಿಗೆ ಲಡ್ಡು ತಿನ್ನಿಸಿ ಭಕ್ತರ ಸಂಭ್ರಮ

    ಕೋಲಾರ/ಅಮರಾವತಿ: ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ ಗೊಂದಲ, ಅಪವಿತ್ರದ ಸುದ್ದಿಗಳಿಗೆ ತಲೆಕೆಡಿಸಿಕೊಳ್ಳದ ಭಕ್ತರು ಸೋಮವಾರ ತಿರುಪತಿ ತಿಮ್ಮಪ್ಪನ (Tirupati) ದರ್ಶನ ಪಡೆದು ಲಡ್ಡುಗಾಗಿ ಮುಗಿಬಿದ್ದರು.

    ತಿರುಪತಿ ಲಡ್ಡು ಪ್ರಸಾದ (Tirupati Laddu Row) ಅಪವಿತ್ರ ಭಾವನೆಯನ್ನು ಭಕ್ತರಿಂದ ತೊಡೆದುಹಾಕಲು, ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಶುದ್ಧೀಕರಣ ಮಾಡಲಾಯಿತು. ಜೊತೆಗೆ ಮಹಾಶಾಂತಿ ಹೋಮ ಕೂಡ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಇದನ್ನೂ ಓದಿ: ತಿರುಪತಿ ದೇವಾಲಯ ಪವಿತ್ರೋತ್ಸವ – ಹಾಲು, ಮೊಸರು, ತುಪ್ಪ, ಗೋಮೂತ್ರ, ಸಗಣಿ ಬಳಸಿ ದೇವಸ್ಥಾನ ಶುದ್ಧೀಕರಣ

    ಪ್ರಸಾದದ ವಿಚಾರವಾಗಿ ಸಾಕಷ್ಟು ವಿವಾದ ಎದ್ದಿದ್ದರೂ ಅದ್ಯಾವುದಕ್ಕೂ ಭಕ್ತರು ತಲೆಕೆಡೆಸಿಕೊಳ್ಳದೇ ಅಪಾರ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದರು. ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ-ಭಾವ ಮೆರೆದರು.

    ತಿಮ್ಮಪ್ಪನ ದರ್ಶನ ಬಳಿಕ ಲಡ್ಡು ತೆಗೆದುಕೊಳ್ಳಲು ಭಕ್ತರ ದಂದೇ ಸರತಿ ಸಾಲಿನಲ್ಲಿ ನಿಂತಿತ್ತು. ದರ್ಶನದ ಮಾದರಿಯಲ್ಲೇ ಲಡ್ಡುಗಾಗಿ ಉದ್ದುದ್ದ ಕ್ಯೂ ನಿಂತಿದ್ದರು. ಪ್ರಸಾದ ಕಲಬೆರಕೆ, ಅಪವಿತ್ರದ ಸುದ್ದಿಗಳಿಗೆ ಜನ ಡೋಂಟ್ ಕೇರ್ ಎಂದಿರುವಂತೆ ಕಂಡುಬಂತು. ಎಂದಿನಂತೆ ಲಡ್ಡು ಖರೀದಿ ಭರಾಟೆ ಜೋರಾಗಿತ್ತು. ಇದನ್ನೂ ಓದಿ: ಅಪವಿತ್ರ ಆರೋಪ ನಡುವೆಯೂ ತಿರುಪತಿ ಲಡ್ಡುಗೆ ಬೇಡಿಕೆ – ಒಂದೇ ದಿನ 3 ಲಕ್ಷಕ್ಕೂ ಹೆಚ್ಚು ಲಡ್ಡು ಮಾರಾಟ

    ಅದರಲ್ಲೂ ಕೆಎಂಎಫ್ ನಂದಿನಿ ತುಪ್ಪ ಬಳಕೆ ಬಳಿಕ ಸ್ವಾಧಿಷ್ಟ, ಗುಣಮಟ್ಟವನ್ನು ಲಡ್ಡು ಕಾಯ್ದುಕೊಂಡಿದೆ. ಲಡ್ಡು ಸ್ವೀಕರಿಸಿ ಭಕ್ತರು ಖುಷಿ ಹಂಚಿಕೊಂಡರು. ಕೆಲವರು ಅಲ್ಲೇ ಪರಸ್ಪರ ಲಡ್ಡು ತಿನ್ನಿಸಿ ಭಕ್ತಿ ಮೆರೆದರು.

  • ತಿರುಪತಿ ದೇವಾಲಯ ಪವಿತ್ರೋತ್ಸವ – ಹಾಲು, ಮೊಸರು, ತುಪ್ಪ, ಗೋಮೂತ್ರ, ಸಗಣಿ ಬಳಸಿ ದೇವಸ್ಥಾನ ಶುದ್ಧೀಕರಣ

    ತಿರುಪತಿ ದೇವಾಲಯ ಪವಿತ್ರೋತ್ಸವ – ಹಾಲು, ಮೊಸರು, ತುಪ್ಪ, ಗೋಮೂತ್ರ, ಸಗಣಿ ಬಳಸಿ ದೇವಸ್ಥಾನ ಶುದ್ಧೀಕರಣ

    – ಅನ್ನ ಪ್ರಸಾದ, ಲಡ್ಡು ತಯಾರಿಕಾ ಸ್ಥಳ, ಗೋದಾಮಿನಲ್ಲಿ ಸಂಪ್ರೋಕ್ಷಣೆ
    – ಶಾಂತಿ, ವಾಸ್ತು ಹೋಮ ನೆರವೇರಿಸಿದ ಅರ್ಚಕರು
    – ದೇವಾಲಯ ಶುದ್ಧೀಕರಣ ಬಳಿಕ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ

    ತಿರುಪತಿ: ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಹಿನ್ನೆಲೆಯಲ್ಲಿ ತಿರುಪತಿ ದೇವಾಲಯ ಶುದ್ಧೀಕರಣ ಕಾರ್ಯ ಸೋಮವಾರ ನಡೆಯಿತು. ತಿರುಮಲದ ದೇವಾಲಯದ ಸುತ್ತ ಅರ್ಚಕರು ಸಂಪ್ರೋಕ್ಷಣೆ ಮಾಡಿದರು. ಹಾಲು, ತುಪ್ಪ, ಮೊಸರು, ಗಂಜಲ, ಸಗಣಿ ಬಳಸಿ ದೇವಾಲಯ ಶುದ್ಧೀಕರಣ ಮಾಡಿದರು.

    ಟಿಟಿಡಿ ಇಓ ಜೆ ಶ್ಯಾಮಲಾ ರಾವ್ ಈ ಬಗ್ಗೆ ಮಾಹಿತಿ ನೀಡಿದರು. ಇಂದಿನಿಂದ ಶ್ರೀನಿವಾಸನ ದೇವಾಲಯದ ಶುದ್ಧೀಕರಣದ ಯಾಗ ನಡೆಯುತ್ತಿದೆ. ಶುದ್ದೀಕರಣ ಸಂದರ್ಭದಲ್ಲಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಪವಿತ್ರೋತ್ಸವ ಮುಗಿದ ಬಳಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

    ಬೆಳಗ್ಗೆ 6 ಗಂಟೆಯಿಂದ ದೇವಾಲಯ ಪವಿತ್ರೋತ್ಸವ, ಮಹಾಶಾಂತಿ ಯಾಗ ಆರಂಭವಾಯಿತು. ವಿವಿಧ ಪಂಡಿತರು, ವೇದಶಾಸ್ತ್ರ ವಿದ್ವಾಂಸರು ಶುದ್ಧೀಕರಣದಲ್ಲಿ ಭಾಗಿಯಾಗಿದ್ದರು. ತಿರುಪತಿ ತಿರುಮಲದ ಪ್ರಧಾನ ಅರ್ಚಕರು, ಆಗಮ ಪಂಡಿತರಿಂದ ಪವಿತ್ರೋತ್ಸವ ನೆರವೇರಿತು. ದೇವಾಲಯದ ಸುತ್ತ ಸಂಪ್ರೋಕ್ಷಣೆ ಮಾಡಲಾಯಿತು. ಭಕ್ತರ ಮನಸ್ಸಿನಲ್ಲಿರುವ ಅಪವಿತ್ರತೆ ಹೋಗಲಾಡಿಸಲು ಟಿಟಿಡಿಯಿಂದ ಯಾಗ ನಡೆಯಿತು.

    ದೇವಾಲಯ ಆವರಣದಲ್ಲಿ ವೇದ ಶಾಸ್ತ್ರ ಪಂಡಿತರು, ಆಗಮಿಕರಿಂದ ಮಹಾ ಶಾಂತಿ ಯಾಗ ಜರುಗಿತು. ಯಾಗದಲ್ಲಿ ನೂರಾರು ಆಗಮಿಕರು, ಅರ್ಚಕರು ಭಾಗಿಯಾಗಿದ್ದರು. ಶುದ್ದೀಕರಣ ಬಳಿಕ ಎಂದಿನಂತೆ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದೇವರ ದರ್ಶನ ಮಾಡಿ ಭಕ್ತರು ಪುನೀತರಾದರು.

    ಮೊದಲಿಗೆ ಶಾಂತಿ ಹೋಮ ನಡೆಯಿತು. ಬಳಿಕ ಅರ್ಚಕರು ವಾಸ್ತು ಹೋಮ ನಡೆಸಿದರು. ಹೋಮ ಬಳಿಕ ತುಪ್ಪ ಬಳಕೆ ಮಾಡಿದ್ದ ಸ್ಥಳದಲ್ಲಿ ಸಂಪ್ರೋಕ್ಷಣೆ ಸಿಂಪಡಣೆ ಮಾಡಲಾಯಿತು. ಅನ್ನ ಪ್ರಸಾದ, ಲಡ್ಡು ತಯಾರಿಕೆ ಸ್ಥಳ, ಗೋದಾಮು ಸೇರಿದಂತೆ ಎಲ್ಲೆಡೆ ಸಂಪ್ರೋಕ್ಷಣೆ ಮಾಡಿದರು.

    ಹೋಮ, ಯಾಗ, ಶುದ್ಧೀಕರಣದಲ್ಲಿ ಭಾಗಿಯಾಗಿದ್ದ ಅರ್ಚಕರ ತಂಡವನ್ನು ಟಿಟಿಡಿ ಬೀಳ್ಕೊಟ್ಟಿತು. ಎರಡು ಆನೆಗಳ ಸಹಿತ ಅರ್ಚಕರನ್ನು ಬೀಳ್ಕೊಡಲಾಯಿತು. ಮಹಾ ಶಕ್ತಿ ಹೋಮದ ಬಳಿಕ ಹೊಸ ಬಟ್ಟೆ, ಆಭರಣಗಳನ್ನ ಅರ್ಚಕರು ತೊಡಿಸಿದರು. ಶಾಸ್ತ್ರೋಕ್ತವಾಗಿ ಅರ್ಚಕರು ಶಾಂತಿ ಹೋಮ ನೆರವೇರಿಸಿದರು. ಅದರಂತೆ ತಿಮ್ಮಪನಿಗೆ ಹೊಸ ಬಟ್ಟೆ, ಆಭರಣ ತೊಡಿಸಲಾಯಿತು. ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

  • ಅಪವಿತ್ರ ಆರೋಪ ನಡುವೆಯೂ ತಿರುಪತಿ ಲಡ್ಡುಗೆ ಬೇಡಿಕೆ – ಒಂದೇ ದಿನ 3 ಲಕ್ಷಕ್ಕೂ ಹೆಚ್ಚು ಲಡ್ಡು ಮಾರಾಟ

    ಅಪವಿತ್ರ ಆರೋಪ ನಡುವೆಯೂ ತಿರುಪತಿ ಲಡ್ಡುಗೆ ಬೇಡಿಕೆ – ಒಂದೇ ದಿನ 3 ಲಕ್ಷಕ್ಕೂ ಹೆಚ್ಚು ಲಡ್ಡು ಮಾರಾಟ

    – ಸೋಮವಾರ ತಿರುಮಲದಲ್ಲಿ ಮಹಾಶಾಂತಿ ಹೋಮ

    ಅಮರಾವತಿ: ತಿರುಪತಿ ಲಡ್ಡು (Tirupati Laddu Row) ಅಪವಿತ್ರವಾಗಿದೆ ಎಂಬ ಆರೋಪಗಳು ಲಡ್ಡು ಪ್ರಸಾದಕ್ಕೆ ಬೇಡಿಕೆ ಕುಸಿಯಬಹುದು ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ, ಅಂಥಾದ್ದೇನು ಆಗಿಲ್ಲ. ಈ ಆರೋಪಗಳು ಭಕ್ತರ ಮೇಲೆ ಹೆಚ್ಚಿನ ಪ್ರಭಾವ ಬೀರಿಲ್ಲ. ಕಳಂಕರಹಿತ ಎಂದು ಟಿಟಿಡಿ ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ತಿಮ್ಮಪ್ಪನ ಮಹಾ ಪ್ರಸಾದ ಲಡ್ಡುಗೆ ಮತ್ತೆ ಬೇಡಿಕೆ ಹೆಚ್ಚಿದೆ.

    ಲಡ್ಡು ತಯಾರಿಯಲ್ಲಿ ಅಪಚಾರ ನಡೆದಿದೆ ಎಂಬ ಆರೋಪಗಳ ನಡುವೆಯೂ ತಿಮ್ಮಪ್ಪನ ಪ್ರಸಾದವನ್ನು ಪರಮವಿತ್ರ ಎಂದೇ ಭಕ್ತರು ಪರಿಗಣಿಸಿದ್ದಾರೆ. ಇದಕ್ಕೆ ಲಡ್ಡು ಮಾರಾಟದ ಲೆಕ್ಕವೇ ಸಾಕ್ಷಿಯಾಗಿದೆ. ಸೆ. 19 ರಂದು 3.69 ಲಕ್ಷ, 20 ರಂದು 3.16 ಲಕ್ಷ, 21 ರಂದು 3.66 ಲಕ್ಷ ಲಡ್ಡುಗಳನ್ನು ಟಿಟಿಡಿ ಮಾರಾಟ ಮಾಡಿದೆ. ಇದನ್ನೂ ಓದಿ: ತಿರುಪತಿ ದೇವಾಲಯದ ಅಕ್ರಮಗಳ ತನಿಖೆಗೆ ವಿಶೇಷ ತಂಡ ರಚಿಸಿದ ಆಂಧ್ರ ಸರ್ಕಾರ

    ಅಂದ ಹಾಗೇ, ಲಡ್ಡು ಅಪಚಾರ ಸಂಬಂಧ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಾಳೆ ಮಹಾಶಾಂತಿ ಯಾಗ ನಿರ್ವಹಿಸಲು ಟಿಟಿಡಿ ಅಧಿಕಾರಿಗಳು ಶರವೇಗದ ಸಿದ್ಧತೆಗಳನ್ನು ನಡೆಸಿದ್ದಾರೆ. ನಾಳೆಯ ಶುಭ ರೋಹಿಣಿ ನಕ್ಷತ್ರದಲ್ಲಿ ಮೊದಲಿಗೆ ಮಹಾಶಾಂತಿ ಹೋಮ ನಿರ್ವಹಿಸಿ ನಂತರ ವಾಸ್ತು ಹೋಮವನ್ನು ಆಗಮ ಪಂಡಿತರು ನೆರವೇರಿಸಲಿದ್ದಾರೆ. ಅಂತಿಮವಾಗಿ ಪಂಚಗವ್ಯಗಳಿಂದ ಸಂಪ್ರೋಕ್ಷಣೆ ಮಾಡಲಿದ್ದಾರೆ.

    ತಿಮ್ಮಪ್ಪನ ಆರ್ಜಿತ ಸೇವೆಗಳಿಗೆ ಭಂಗ ಉಂಟಾಗದಂತೆ ನಾಳೆಯೇ ಎಲ್ಲಾ ಯಾಗಗಳನ್ನು ಮುಗಿಸಲಿದ್ದಾರೆ. ಈ ಸಂಬಂಧ ಇಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರನ್ನು ಟಿಟಿಡಿ ಅಧಿಕಾರಿಗಳು ಮತ್ತು ಆಗಮ ಪಂಡಿತರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಹಾಗೆಯೇ, ಬ್ರಹ್ಮೋತ್ಸವಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಇನ್ನು, ಡಿಸಿಎಂ ಪವನ್ ಕಲ್ಯಾಣ್ ಇಂದಿನಿಂದ ಪ್ರಾಯಶ್ಚಿತ ದೀಕ್ಷೆ ಕೈಗೊಂಡಿದ್ದಾರೆ. ಇದು 11 ದಿನ ಮುಂದುವರಿಯಲಿದೆ. ಈ ಮಧ್ಯೆ, ಬೆಂಗಳೂರಿನ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಬಿ.ಸುರೇಂದ್ರನಾಥ್ ನೇತೃತ್ವದ ತಜ್ಞರ ಸಮಿತಿ, ಭವಿಷ್ಯದಲ್ಲಿ ಲಡ್ಡುಗೆ ಬಳಸುವ ತುಪ್ಪದ ವಿಚಾರದಲ್ಲಿ ಯಾವುದೇ ಅನಾಹುತಗಳು ಉಂಟಾಗದ ರೀತಿಯಲ್ಲಿ ಹಲವು ಶಿಫಾರಸು ಮಾಡಿದೆ. ಇದನ್ನೂ ಓದಿ: ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ – ಸುರಕ್ಷತೆಗೆ ಜಿಪಿಎಸ್ ಅಳವಡಿಸಲು ಮುಂದಾದ KMF

  • ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೊಳಪಡಿಸಿ: ರಾಜ್ಯ ಸರ್ಕಾರಕ್ಕೆ ಜೋಶಿ ಆಗ್ರಹ

    ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೊಳಪಡಿಸಿ: ರಾಜ್ಯ ಸರ್ಕಾರಕ್ಕೆ ಜೋಶಿ ಆಗ್ರಹ

    ಹುಬ್ಬಳ್ಳಿ: ತಿರುಪತಿ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೆ ಒಳಪಡಿಸಲು ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆಗ್ರಹಿಸಿದ್ದಾರೆ.

    ನವದೆಹಲಿಯಲ್ಲಿ (New Delhi) ಇಂದು (ಶುಕ್ರವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಿರುಪತಿ ಪ್ರಸಾದದ ವಿಚಾರವಾಗಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು. ತಿರುಪತಿಯಲ್ಲಿ ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸಿದ ಕಾರಣ ರಾಜ್ಯದಲ್ಲಿನ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ತಕ್ಷಣ ಪರೀಕ್ಷೆಗೆ ಒಳಪಡಿಸುವುದು ಒಳಿತು. ಹಿಂದೂಗಳ ಪವಿತ್ರ ಕ್ಷೇತ್ರವಾದ ತಿರುಮಲ ತಿರುಪತಿಯಲ್ಲಿ ಪ್ರಸಾದಕ್ಕೆ ಜಾನುವಾರುಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸುತ್ತಿದ್ದರು ಎಂಬ ಸಂಗತಿ ಹಿಂದೂ ಸಮಾಜವನ್ನು ಚಿಂತೆಗೀಡು ಮಾಡಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ರು; ಒಡಿಶಾ ಠಾಣೆಯಲ್ಲಿ ಅನುಭವಿಸಿದ ಯಾತನೆಯ ಕತೆ ಹೇಳಿದ ಸೇನಾಧಿಕಾರಿಯ ಭಾವಿ ಪತ್ನಿ

    ಆಂಧ್ರಪ್ರದೇಶದ (Andhra Pradesh) ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (Jagan Mohan Reddy) ಅವರ ಅಧಿಕಾರ ಅವಧಿಯಲ್ಲಿ ಈ ರೀತಿ ಹಲವು ಹಿಂದೂ ವಿರೋಧಿ ಕ್ರಮಗಳಿಗೆ ಬೆಂಬಲವಾಗಿ ನಿಂತಿರುವುದು ಅಕ್ಷಮ್ಯ ಎಂದು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ, ತಿರುಮಲ ತಿರುಪತಿಯ ಟ್ರಸ್ಟ್ನಲ್ಲಿ ಜಗನ್ ರೆಡ್ಡಿ ಅವರು ಹಿಂದೂಯೇತರರನ್ನೂ ಟ್ರಸ್ಟ್ ಸದಸ್ಯರನ್ನಾಗಿ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ವರದಿ ಕೇಳಿದ ಕೇಂದ್ರ ಸರ್ಕಾರ

    ಆಂಧ್ರಪ್ರದೇಶದಲ್ಲಿ ಮತ್ತೆ ಈ ರೀತಿಯ ವಿಚಾರಗಳು ಮರುಕಳಿಸಬಾರದು. ಆ ನಿಟ್ಟಿನಲ್ಲಿ ನೂತನ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸದಾ ಎಚ್ಚರಿಕೆ ವಹಿಸಬೇಕು. ಆಂಧ್ರಪ್ರದೇಶ ಪ್ರಕರಣದಿಂದ ಕರ್ನಾಟಕ ಸಹ ಎಚ್ಚೆತ್ತುಕೊಳ್ಳಬೇಕು. ಹಾಗೆಯೇ ಹಿಂದೂ ಧಾರ್ಮಿಕ ಟ್ರಸ್ಟ್‌ಗಳಲ್ಲಿ ಹಿಂದೂಯೇತರರನ್ನು ನೇಮಕ ಮಾಡಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಇದನ್ನೂ ಓದಿ: ವಾಮಂಜೂರು ಶಾರದಾ ಮಹೋತ್ಸವದ ಕಾರ್ಯಾಲಯ ಉದ್ಘಾಟನೆ

  • Tirupati Laddu Row: ಹೈಕೋರ್ಟ್‌ ಮೊರೆ ಹೋದ ಜಗನ್‌

    Tirupati Laddu Row: ಹೈಕೋರ್ಟ್‌ ಮೊರೆ ಹೋದ ಜಗನ್‌

    ಹೈದರಾಬಾದ್‌: ತಿರುಪತಿ ದೇವಸ್ಥಾನದ (Tirupati Temple) ಲಡ್ಡು (Laddu ) ಪ್ರಸಾದ ವಿವಾದ ಜೋರಾಗುತ್ತಿದ್ದಂತೆ ಮಾಜಿ ಸಿಎಂ ಜಗನ್‌ ರೆಡ್ಡಿ (YS Jagan Mohan Reddy) ಆಂಧ್ರ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

    ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಸಿಎಂ ಚಂದ್ರಬಾಬು ನಾಯ್ಡು ಅವರು ಆರೋಪಿಸಿದ್ದಾರೆ. ಹೀಗಾಗಿ ಈ ಆರೋಪದ ಬಗ್ಗೆ ಹಾಲಿ ನ್ಯಾಯಾಧೀಶರು ಅಥವಾ ಹೈಕೋರ್ಟ್ (High Court) ನೇಮಿಸಿದ ಸಮಿತಿ ತನಿಖೆ ನಡೆಸಬೇಕು ಎಂದು ಜಗನ್‌ ಪರ ವಕೀಲರು ಮನವಿ ಮಾಡಿದರು.

    ಈ ವೇಳೆ ಸೆ.25 ರ ಒಳಗಡೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿ. ಅಂದು ವಿಚಾರಣೆ ನಡೆಸಲಾಗುವುದು ಎಂದು ಹೈಕೋರ್ಟ್‌ ಸೂಚಿಸಿದೆ. ಇದನ್ನೂ ಓದಿ: ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ – ಜಗನ್ ಅವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ!

     

    ಲ್ಯಾಬ್ ವರದಿಯಲ್ಲಿ ಏನಿದೆ?
    ಲಡ್ಡುಗೆ ಬಳಸಿದ ತುಪ್ಪದಲ್ಲಿ ಮೀನೆಣ್ಣೆ, ಹಂದಿಯ ಕೊಬ್ಬು, ತಾಳೆ ಎಣ್ಣೆ ಕೊಬ್ಬು, ತೆಂಗಿನ ಎಣ್ಣೆಯ ಕೊಬ್ಬು ಪತ್ತೆಯಾಗಿದೆ. ಸೋಯಾ, ಸೂರ್ಯಕಾಂತಿ, ಆಲಿವ್, ಹತ್ತಿ ಬೀಜದೆಣ್ಣೆ ಸಿಕ್ಕಿದೆ. ತುಪ್ಪದಲ್ಲಿ ವ್ಹೀಟ್ ಜೆರ್ಮ್ ಆಯಿಲ್, ಮೇಜ್ ಜೆರ್ಮ್ ಆಯಿಲ್ ಪತ್ತೆಯಾಗಿದೆ. ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಬೆರೆಸಿರುವುದು ಸ್ಪಷ್ಟವಾಗಿದೆ: ರಾಮಜನ್ಮಭೂಮಿ ಪ್ರಧಾನ ಅರ್ಚಕ

     

    ಸಿಎಂ ಹೇಳಿಕೆಯನ್ನು ಟಿಟಿಡಿ ಭಾಗಶಃ ಒಪ್ಪಿದೆ. ಒಂದು ಕಂಪನಿಯ ತುಪ್ಪದಲ್ಲಿ ವೆಜಿಟೆಬಲ್ ಫ್ಯಾಟ್ ಬೆರೆಸಿರುವುದು ಗೊತ್ತಾಗಿದೆ ಎಂದು ಟಿಟಿಡಿ ಇಓ ಶ್ಯಾಮಲರಾವ್ ಹೇಳಿದ್ದಾರೆ. ಟಿಟಿಡಿ ಮಾಜಿ ಸದಸ್ಯ ಓವಿ ರಮಣ ಅವರು ಚಂದ್ರಬಾಬು ನಾಯ್ಡು ಹೇಳಿದ್ದೆಲ್ಲಾ ಸತ್ಯ ಎಂದಿದ್ದಾರೆ.

    ಜಗನ್ ಸಿಎಂ ಆಗಿದ್ದಾಗ ವಿದೇಶದಿಂದ ಆಮದು ಮಾಡಿಕೊಂಡ ಬೆಣ್ಣೆಯನ್ನು ಲಡ್ಡು ತಯಾರಿಗೆ ಬಳಸಲಾಗುತ್ತಿತ್ತು ಎಂದು ಆಪಾದಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಗೆ ಬಿಜೆಪಿ ಆಗ್ರಹಿಸಿದೆ.

     

  • ಮುಂಬೈ ಮೂಲದ ಮಾಡೆಲ್‍ಗೆ ಕಿರುಕುಳ – ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳು ಸಸ್ಪೆಂಡ್

    ಮುಂಬೈ ಮೂಲದ ಮಾಡೆಲ್‍ಗೆ ಕಿರುಕುಳ – ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳು ಸಸ್ಪೆಂಡ್

    ಅಮರಾವತಿ: ಮುಂಬೈ (Mumbai) ಮೂಲದ ಮಾಡೆಲ್ ಕಮ್ ನಟಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿ, ಕಿರುಕುಳ ನೀಡಿದ ಆರೋಪದ ಮೇಲೆ ಆಂಧ್ರಪ್ರದೇಶದ (Andhra Pradesh) ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

    ಡೈರೆಕ್ಟರ್ ಜನರಲ್ ಶ್ರೇಣಿಯ ಒಬ್ಬರು, ಇನ್ಸ್ ಪೆಕ್ಟರ್ ಜನರಲ್ ಮತ್ತು ಸೂಪರಿಂಟೆಂಡೆಂಟ್ ಶ್ರೇಣಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪಿಎಸ್ ಆರ್ ಆಂಜನೇಯುಲು (ಡಿಜಿ ಶ್ರೇಣಿ), ಕಂಠಿ ರಾಣಾ ಟಾಟಾ (ಐಜಿ ಶ್ರೇಣಿ) ಮತ್ತು ವಿಶಾಲ್ ಗುನ್ನಿ (ಎಸ್‍ಪಿ ಶ್ರೇಣಿ) ಅಮಾನತುಗೊಂಡ ಮೂವರು ಹಿರಿಯ ಅಧಿಕಾರಿಗಳಾಗಿದ್ದಾರೆ.

    ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಸರ್ಕಾರದ ಆಡಳಿತದ ಇರುವಾಗ ನಟಿ ಪೊಲೀಸರಿಂದ ಕಿರುಕುಳಕ್ಕೊಳಗಾಗಿದ್ದಾರೆ ಎಂದು ಆರೋಪಿಸಿದ್ದರು. ಮುಂಬೈನ ಕಾರ್ಪೋರೇಷನ್‌ನ ಉನ್ನತ ಕಾರ್ಯನಿರ್ವಾಹಕರ ವಿರುದ್ಧ ತಾನು ಈ ಹಿಂದೆ ದಾಖಲಿಸಿದ ಪ್ರಕರಣವನ್ನು ಹಿಂದೆಗೆದುಕೊಳ್ಳಬೇಕು. ಇಲ್ಲದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಬೆದರಿಕೆ ಹಾಕಿದ್ದರು. ಅಲ್ಲದೇ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿದ್ದರು ಎಂದು ನಟಿ ಆರೋಪಿಸಿದ್ದರು.

    ಆಂಧ್ರಪ್ರದೇಶ ಪೊಲೀಸರು ಆರೋಪಗಳ ವಿಚಾರಣೆ ನಡೆಸಿದ್ದು, ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪ ಮತ್ತು ದುರ್ನಡತೆ ಆರೋಪದಡಿ ಅಮಾನತು ಆದೇಶ ಹೊರಡಿಸಲಾಗಿದೆ. ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು, 1969 ರ ನಿಯಮ 3 (1) ರ ಅಡಿಯಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆಗ ರಾಜ್ಯ ಗುಪ್ತಚರ ಮುಖ್ಯಸ್ಥರಾಗಿದ್ದ ಪಿ ಎಸ್ ಆರ್ ಆಂಜನೇಯುಲು ಅವರು ಫೆಬ್ರವರಿ 2 ರಂದು ಎಫ್‍ಐಆರ್ ದಾಖಲಿಸುವ ಮೊದಲೇ ಕಂಠಿ ರಾಣಾ ಟಾಟಾ ಮತ್ತು ವಿಶಾಲ್ ಗುನ್ನಿ ಅವರನ್ನು ಕರೆಸಿ ಜನವರಿ 31 ರಂದು ನಟನ ಬಂಧನಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಮಾನತು ಆದೇಶದಲ್ಲಿ ಆಂಜನೇಯುಲು ಅವರು ತಮ್ಮ ಅಧಿಕಾರ ಮತ್ತು ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡು, ಸಮರ್ಪಕ ಪರಿಶೀಲನೆಯಿಲ್ಲದೆ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿದ್ದಾರೆ. ಇದು ಅಧಿಕಾರದ ದುರುಪಯೋಗ ಎಂದು ಆದೇಶದಲ್ಲಿ ಹೇಳಲಾಗಿದೆ.

    ವಿಜಯವಾಡದ ಮಾಜಿ ಕಮಿಷನರ್ ಆಗಿದ್ದ ಕಂಠಿ ರಾಣಾ ಟಾಟಾ ಅವರು ತನಿಖೆಯನ್ನು ಸರಿಯಾಗಿ ಮೇಲ್ವಿಚಾರಣೆ ಮಾಡಲು ವಿಫಲರಾಗಿದ್ದಾರೆ ಮತ್ತು ಎರಡು ದಿನಗಳ ನಂತರ ಎಫ್‍ಐಆರ್ ದಾಖಲಿಸುವ ಮೊದಲು ಜನವರಿ 31 ರಂದು ತಮ್ಮ ಮೇಲಧಿಕಾರಿಗಳ ಮೌಖಿಕ ಸೂಚನೆಯ ಮೇರೆಗೆ ನಟಿಯನ್ನು ಬಂಧಿಸಲು ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಪ್ರಕರಣ ದಾಖಲಾದ 1 ಗಂಟೆ ಬಳಿಕ, ಸರಿಯಾದ ಲಿಖಿತ ಆದೇಶ ಇಲ್ಲದೇ ನಟಿಯ ಬಂಧನಕ್ಕಾಗಿ ಮುಂಬೈಗೆ ತೆರಳಲು ಪೊಲೀಸ್ ಅಧಿಕಾರಿಗಳಿಗೆ ಟಿಕೆಟ್‍ಗಳನ್ನು ಕಾಯ್ದಿರಿಸುವಂತೆ ಅವರು ಆದೇಶಿಸಿದ್ದರು ಎಂದು ವರದಿಯಾಗಿದೆ.

    ನಟನನ್ನು ಬಂಧಿಸುವ ಮುನ್ನ ದೂರನ್ನು ಕೂಲಂಕಷವಾಗಿ ಪರಿಶೀಲಿಸಲು ವಿಫಲವಾದ ಆರೋಪವನ್ನು ವಿಶಾಲ್ ಗುನ್ನಿ ಮೇಲೆ ಹೊರಿಸಲಾಗಿದೆ. ಸರಿಯಾದ ಲಿಖಿತ ಆದೇಶವಿಲ್ಲದೆ ಬಂಧನಕ್ಕಾಗಿ ಫೆಬ್ರವರಿ 2 ರಂದು ಮುಂಬೈಗೆ ಪ್ರಯಾಣಿಸಿದ್ದರು ಮತ್ತು ಮೇಲಧಿಕಾರಿಗಳ ಮೌಖಿಕ ಸೂಚನೆಯಂತೆ ಕಾರ್ಯನಿರ್ವಹಿಸಿದ್ದರು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ನಟಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ಇಬ್ರಾಹಿಂಪಟ್ಟಣಂ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಿಸಿದ್ದರು.

  • ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲರು

    ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲರು

    ಅಮರಾವತಿ: ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ (Thawarchand Gehlot) ಅವರು ತಿರುಪತಿಗೆ (Tirupati) ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ.

    ಬುಧವಾರ ಆಂಧ್ರಪ್ರದೇಶದ ತಿರುಪತಿಯ ತಿರುಮಲ ವೆಂಕಟೇಶ್ವರ ಸನ್ನಿಧಿಗೆ ಕುಟುಂಬ ಸಮೇತರಾಗಿ ಕರ್ನಾಟಕದ ರಾಜ್ಯಪಾಲ ಗೆಹ್ಲೋಟ್ ಅವರು ಭೇಟಿ ನೀಡಿ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸಿಎಂ ಬದಲಾವಣೆ ಪ್ರಸಂಗ ಬಂದ್ರೆ ನಾನೇ ಸ್ಪರ್ಧೆ ಮಾಡ್ತೀನಿ: ಶಾಮನೂರು ಶಿವಶಂಕರಪ್ಪ

    ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (TTD) ಅಧಿಕಾರಿಗಳು ಮತ್ತು ಅರ್ಚಕರು ರಾಜ್ಯಪಾಲರನ್ನು ಸ್ವಾಗತಿಸಿದರು. ಪೂಜೆಯ ನಂತರ ರಂಗಾನಾಯಕುಲ ಮಂಟಪದಲ್ಲಿ ಶ್ರೀವಾರಿ ವಸ್ತ್ರವನ್ನು ನೀಡಿ ರಾಜ್ಯಪಾಲರನ್ನು ಗೌರವಿಸಿದರು. ನಂತರ ತಿಮ್ಮಪ್ಪ ಸ್ವಾಮಿ ಪ್ರಸಾದವನ್ನು ರಾಜ್ಯಪಾಲರಿಗೆ ದೇವಾಲಯದ ವತಿಯಿಂದ ನೀಡಲಾಯಿತು.

  • ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಕಾಲುವೆಗೆ ಉರುಳಿದ ಲಾರಿ – 7 ಮಂದಿ ದುರ್ಮರಣ

    ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಕಾಲುವೆಗೆ ಉರುಳಿದ ಲಾರಿ – 7 ಮಂದಿ ದುರ್ಮರಣ

    ಅಮರಾವತಿ: ರಸ್ತೆಯಲ್ಲಿದ್ದ ಗುಂಡಿ (Pothole) ತಪ್ಪಿಸಲು ಹೋಗಿ ಲಾರಿಯೊಂದು (Lorry) ಕಾಲುವೆಗೆ (Canal) ಉರುಳಿದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

    ಗೋಡಂಬಿ ಹಾಗೂ ಎಂಟು ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಲಾರಿ ದೇವರಪಲ್ಲಿ (Devarapalli) ಗ್ರಾಮದ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಲಾರಿಯ ಮೇಲೆ ಕುಳಿತಿದ್ದ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 8 ಮಂದಿಯ ಪೈಕಿ ಓರ್ವ ಮಾತ್ರ ಬದುಕುಳಿದಿದ್ದು, ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಾಗಿದೆ. ಇದನ್ನೂ ಓದಿ: ರಾಹುಲ್‌ ಹೇಳಿಕೆಯಿಂದ ಕಾಂಗ್ರೆಸ್‌ ಮೀಸಲಾತಿ ವಿರೋಧಿ ನೀತಿ ಬಯಲಾಗಿದೆ: ಅಮಿತ್‌ ಶಾ

    ಗುಂಡಿ ತಪ್ಪಿಸಲು ಯತ್ನಿಸಿದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ವಾಹನ ಕಾಲುವೆಗೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಶವಗಳನ್ನು ಕೊವ್ವೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜಿ ದೇವಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ರೇಸ್‌ನಲ್ಲಿ ಯಾರೂ ಇಲ್ಲ, ಸಿದ್ದರಾಮಯ್ಯನವರೇ ಮುಂದುವರಿಯುತ್ತಾರೆ: ದಿನೇಶ್ ಗುಂಡೂರಾವ್

  • ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ದೋಚಿ ಓಡಿದ್ರು!

    ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ದೋಚಿ ಓಡಿದ್ರು!

    ಅಮರಾವತಿ: ಅಕ್ರಮ ಮದ್ಯವನ್ನು ನಾಶಪಡಿಸುವಾಗ ಪೊಲೀಸರನ್ನು ಲೆಕ್ಕಿಸದೇ ಜನರು ಬಾಟಲಿಗಳನ್ನು ಹಿಡಿದು ಪರಾರಿಯಾದ ಘಟನೆ ಆಂಧ್ರಪ್ರದೇಶ (Andhra Pradesh) ಅಮರಾವತಿ (Amaravati) ಬಳಿಯ ಗುಂಟೂರು ಗ್ರಾಮದಲ್ಲಿ ನಡೆದಿದೆ.

    ಪೊಲೀಸರು ವಶಪಡಿಸಿಕೊಂಡ ಮದ್ಯವನ್ನು ನಾಶ ಮಾಡುತ್ತಿರುವ ವೇಳೆ ಮದ್ಯಪ್ರಿಯರು ಬಾಟಲಿ ಹಿಡಿದು ಓಡುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಶೀಘ್ರದಲ್ಲೇ ಬರಲಿದೆ ಸ್ಯಾಟಲೈಟ್ ಆಧಾರಿತ ಟೋಲ್ ವ್ಯವಸ್ಥೆ; ಮೊದಲ 20 ಕಿಮೀವರೆಗೆ ಫ್ರೀ

    ವಿವಿಧ ಪ್ರಕರಣಗಳಲ್ಲಿ ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಸುಮಾರು 50 ಲಕ್ಷ ರೂ. ಮೌಲ್ಯದ 24,031 ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಎಸ್‌ಪಿ ಸತೀಶ್ ಕುಮಾರ್ ನೇತೃತ್ವದಲ್ಲಿ ನಲ್ಲಚೆರುವು ಡಂಪಿಂಗ್ ಯಾರ್ಡ್ ನಲ್ಲಿ ವಿಲೇವಾರಿ ಮಾಡುವ ಸಂದರ್ಭದಲ್ಲಿ ಜನ ಮದ್ಯ ಬಾಟಲಿಗಾಗಿ ಮುಗಿಬಿದ್ದರು. ಇದನ್ನೂ ಓದಿ: ಮುಡಾ ಕೇಸ್‌ ತನಿಖೆಗೆ ಲೋಕಾಯುಕ್ತ ಎಂಟ್ರಿ – 18 ಅಧಿಕಾರಿಗಳಿಗೆ ನೋಟಿಸ್

    ಸಾಮಾನ್ಯವಾಗಿ ಮದ್ಯದ ಬಾಟಲಿಗಳನ್ನು ರೋಡ್ ರೋಲರ್ ಮೂಲಕ ನಾಶ ಮಾಡಲಾಗುತ್ತೆ, ಆದರೆ ಸೋಮವಾರ ಪೊಕ್ಲೈನ್ ಯಂತ್ರದ ಮೂಲಕ ನಾಶ ಮಾಡಲು ಮುಂದಾಗಿದ್ದರಿಂದ ಸ್ವಲ್ಪ ವಿಳಂಬವಾಗಿತ್ತು. ಇದರ ಪ್ರಯೋಜನ ಪಡೆದ ಜನರು ಮದ್ಯದ ಬಾಟಲಿಗಳ ಲೂಟಿಗೆ ಮುಂದಾದರು. ಇದನ್ನೂ ಓದಿ: ಟಾಟಾ ಕಾರುಗಳ ಬೆಲೆ ಭಾರೀ ಕಡಿತ

    ಜೋಡಿಸಿಟ್ಟಿದ್ದ ಬಾಟಲಿಗಳತ್ತ ನುಗ್ಗಿದ ಜನರು ಪೊಲೀಸರ ಎದುರೇ ಕೈಗೆ ಸಿಕ್ಕಷ್ಟು ಬಾಟಲಿಗಳನ್ನ ಹಿಡಿದು ಓಡಿಹೋದರು. ಅಲ್ಲೆ ಇದ್ದ ಪೊಲೀಸರು ಜನರನ್ನು ತಡೆಯಲು ಸಾದ್ಯವಾಗಲಿಲ್ಲ.

    ನಾಶಕ್ಕೆ ಮುಂದಾಗಿದ್ದ ಬಾಟಲಿಗಳನ್ನು ಹೊತ್ತೊಯ್ದವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಭಾಗಿಯಾಗಿರುವವರ ಪತ್ತೆಗಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಕೋರ್ಟ್‌ಗೆಳೆಯುತ್ತೇವೆ; ಸಿಖ್ ಸಮುದಾಯದ ಬಗ್ಗೆ ಹೇಳಿಕೆಗೆ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡ

  • ಆಂಧ್ರ, ತೆಲಂಗಾಣದಲ್ಲಿ ಪ್ರವಾಹ – ಸಾವಿನ ಸಂಖ್ಯೆ 27ಕ್ಕೆ ಏರಿಕೆ

    ಆಂಧ್ರ, ತೆಲಂಗಾಣದಲ್ಲಿ ಪ್ರವಾಹ – ಸಾವಿನ ಸಂಖ್ಯೆ 27ಕ್ಕೆ ಏರಿಕೆ

    – ರೈಲು ಸಂಚಾರ ಸ್ಥಗಿತ: 6,000 ಪ್ರಯಾಣಿಕರ ಪರದಾಟ

    ಅಮರಾವತಿ: ಆಂಧ್ರಪ್ರದೇಶ (Andhra Pradesh) ಹಾಗೂ ತೆಲಂಗಾಣದಲ್ಲಿ (Telangana) ಭಾರೀ ಮಳೆಯಾಗುತ್ತಿದ್ದು (Rain) ಪ್ರವಾಹದಿಂದ (Flood) ಎರಡು ರಾಜ್ಯಗಳಿಂದ ಸೇರಿ 27 ಜನ ಸಾವಿಗೀಡಾಗಿದ್ದಾರೆ. ಮೂವರು ಕಣ್ಮರೆಯಾಗಿದ್ದು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಶಂಕಿಸಲಾಗಿದೆ.

    ಮಳೆಯ ಪರಿಣಾಮದಿಂದ ಸತ್ತವರ ಪೈಕಿ 12 ಮಂದಿ ಆಂಧ್ರಪ್ರದೇಶದವರಾಗಿದ್ದು, 15 ಮಂದಿ ತೆಲಂಗಾಣದವರಾಗಿದ್ದಾರೆ. ಇನ್ನೂ ಮಳೆಯ ಅಬ್ಬರಕ್ಕೆ ರಸ್ತೆಗಳು ಜಲಾವೃತಗೊಂಡಿದ್ದು ಕೆಲವೆಡೆ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಹಲವೆಡೆ ರಕ್ಷಣಾ ಕಾರ್ಯಾಚರಣೆಗಳಿಗೂ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    97 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಅಲ್ಲದೇ 140 ರೈಲುಗಳು ರದ್ದುಪಡಿಸಲಾಗಿದೆ. ಇದರಿಂದಾಗಿ ರೈಲ್ವೆ ನಿಲ್ದಾಣಗಳಲ್ಲಿ 6,000 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.

    ಭಾರೀ ಮಳೆಯಿಂದಾಗಿ ವಿಜಯವಾಡದ ದುಃಖದ ನದಿ ಎಂದು ಕರೆಯಲ್ಪಡುವ ಬುಡಮೇರು ವಾಗು ನದಿ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಈ ನದಿ ಸಮೀಪದ ಪ್ರದೇಶಗಳ ಸುಮಾರು 17,000ಕ್ಕೂ ಹೆಚ್ಚು ಜನರನ್ನು ರಕ್ಷಣಾ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನೂ ತೀವ್ರ ಪ್ರವಾಹವನ್ನು ಅನುಭವಿಸಿದ ವಿಜಯವಾಡ ಒಂದರಲ್ಲೇ 2.76 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಹದ ವಿಚಾರವಾಗಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿರುವುದರಿಂದ ಕೇಂದ್ರದಿಂದ ಸಾಧ್ಯವಿರುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನಿಡಿದ್ದಾರೆ.

    ಸೆ.2 ರಿಂದ 5 ರವರೆಗೆ ನಾಲ್ಕು ದಿನಗಳ ಕಾಲ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಮಿಂಚು ಸಹಿತ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.