Tag: Andhra Pradesh

  • ಪತ್ನಿಯ ಮಾರ್ಫ್‌ ಫೋಟೋ ಬಳಸಿ ಆ್ಯಪ್‌ ಏಜೆಂಟರ ಕಿರುಕುಳ – 2,000 ರೂ. ಸಾಲ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆ

    ಪತ್ನಿಯ ಮಾರ್ಫ್‌ ಫೋಟೋ ಬಳಸಿ ಆ್ಯಪ್‌ ಏಜೆಂಟರ ಕಿರುಕುಳ – 2,000 ರೂ. ಸಾಲ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆ

    ಅಮರಾವತಿ: ತ್ವರಿತ ಸಾಲ ನೀಡುವ ಆ್ಯಪ್‌ (Loan App) ಮೂಲಕ 2,000 ರೂ. ಸಾಲ ಪಡೆದಿದ್ದ ವ್ಯಕ್ತಿಯೊಬ್ಬ ಆ್ಯಪ್‌ ಏಜೆಂಟರ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.

    ಹೈದರಾಬಾದ್‌ ಮೂಲದ ನರೇಂದ್ರ (25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆ್ಯಪ್‌ ಏಜೆಂಟರು ತನ್ನ ಪತ್ನಿಯ ಮಾರ್ಫ್‌ ಮಾಡಿದ ಅಶ್ಲೀಲ ಫೋಟೋವನ್ನು ನರೇಂದ್ರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಕಳುಹಿಸಿದ್ದಾರೆ. ಇದರಿಂದ ಮನನೊಂದ ನರೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಮುಂದಿನ 5 ವರ್ಷದಲ್ಲಿ ಆಟೋಮೊಬೈಲ್ ಉದ್ಯಮದಲ್ಲಿ ವಿಶ್ವದಲ್ಲೇ ಭಾರತ ನಂಬರ್‌ 1: ಗಡ್ಕರಿ ಭವಿಷ್ಯ

    25 ವರ್ಷದ ನರೇಂದ್ರ ಕಳೆದ 6 ತಿಂಗಳ ಹಿಂದೆಯಷ್ಟೇ ಅಖಿಲಾ ಎಂಬಾಕೆಯೊಂದಿಗೆ ಪ್ರೇಮ ವಿವಾಹವಾಗಿದ್ದ. ದಂಪತಿ ಇಬ್ಬರೂ ವಿಶಾಖಪಟ್ಟಂನಲ್ಲಿ ನೆಲೆಸಿದ್ದರು. ನರೇಂದ್ರ ಮೀನುಗಾರಿಕೆ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಹಮಾವಾನ ವೈಪರಿತ್ಯದಿಂದಾಗಿ ಆರ್ಥಿಕ ನಷ್ಟ ಉಂಟಾಗಿತ್ತು. ಈ ವೇಳೆ ತನ್ನ ಖರ್ಚು ನಿಭಾಯಿಸಲು ತ್ವರಿತ ಸಾಲ ನೀಡುವ ಆ್ಯಪ್‌ನಿಂದ 2,000 ರೂ. ಸಾಲ ಪಡೆದುಕೊಂಡಿದ್ದ. ಸಾಲ ಪಡೆದ ಕೆಲದಿನಗಳ ನಂತರ ಆ್ಯಪ್‌ ಏಜೆಂಟರು ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಅಸಭ್ಯ ಭಾಷೆಗಳಿಂದ ಸಂದೇಶ ಕಳುಹಿಸಿದ್ದಾರೆ. ಇಷ್ಟಕ್ಕೆ ಬಿಡದೇ ನರೇಂದ್ರ ಪತ್ನಿಯ ಮಾರ್ಫ್‌ ಮಾಡಿದ ಅಶ್ಲೀಲ ಫೋಟೋವನ್ನ ಕುಟುಂಬಸ್ಥರು, ಸ್ನೇಹಿತರಿಗೆ ಕಳುಹಿಸಿದ್ದಾರೆ. ಕೊನೆಗೆ ಆತನ ಪತ್ನಿಗೂ ಫೋಟೋ ಕಳುಹಿಸಿದ ಬಳಿಕ ಈ ವಿಷಯ ನರೇಂದ್ರನಿಗೆ ಗೊತ್ತಾಗಿದೆ.

    ಬಳಿಕ 2 ಸಾವಿರ ರೂ. ಸಾಲ ತೀರಿಸಲು ಬೇರೊಬ್ಬರ ಬಳಿ ಸಹಾಯ ಕೇಳಿದ್ದರು. ಆದ್ರೆ ಹಣ ಸಿಗದೇ ಸಾಲ ಮರುಪಾವತಿ ಮಾಡಲಾಗಲಿಲ್ಲ. ಇದರಿಂದ ಆ್ಯಪ್‌ ಏಜೆಂಟರು ನಿರಂತರವಾಗಿ ಕಿರುಕುಳ ನೀಡಲು ಶುರು ಮಾಡಿದರು. ಕೊನೆಗೆ ಮನನೊಂದ ನರೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ | ಹಣಕ್ಕಾಗಿ ಕೇಸ್‌ ಮೇಲೆ ಕೇಸ್‌ – ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌

    ಒಂದೇ ವಾರದಲ್ಲಿ 3 ಕೇಸ್‌:
    ಆಂಧ್ರಪ್ರದೇಶದಲ್ಲಿ ಕಳೆದ ಒಂದು ವಾರದಲ್ಲಿ ತ್ವರಿತ ಆ್ಯಪ್‌ನಿಂದ ಸಾಲ ಪಡೆದವರ 3ನೇ ಆತ್ಮಹತ್ಯೆ ಪ್ರಕರಣ ಇದಾಗಿದೆ. ಇದಲ್ಲದೇ ನೆಂದ್ಯಾಲ್‌ ಜಿಲ್ಲೆಯಲ್ಲಿ ಇಂದು (ಡಿ.11) ಸಹ ಯುವತಿಯೊಬ್ಬಳು ಆಪ್‌ ಏಜೆಂಟರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಳು, ಅದೃಷ್ಟವಶಾತ್‌ ಪೊಲೀಸರು ಆಕೆಯನ್ನ ರಕ್ಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಶರಾವತಿ ಜಲವಿದ್ಯುತ್‌ ಯೋಜನೆ – ಸಂಸತ್‌ನಲ್ಲಿ ಕನ್ನಡದಲ್ಲೇ ಪ್ರಸ್ತಾಪಿಸಿದ ಬಿ.ವೈ.ರಾಘವೇಂದ್ರ

  • ಆಂಧ್ರದ ಡಿಸಿಎಂ ಪವನ್‌ ಕಲ್ಯಾಣ್‌ಗೆ ಜೀವ ಬೆದರಿಕೆ!

    ಆಂಧ್ರದ ಡಿಸಿಎಂ ಪವನ್‌ ಕಲ್ಯಾಣ್‌ಗೆ ಜೀವ ಬೆದರಿಕೆ!

    ಅಮರಾವತಿ: ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ ಎಂದು ವರದಿಯಾಗಿದೆ.

    ಅರಪಚಿತ ವ್ಯಕ್ತಿಯೊಬ್ಬರು ಪವನ್‌ ಕಲ್ಯಾಣ್‌ ಇಲ್ಲದಿದ್ದಾಗ, ಅವರ ಕಚೇರಿಗೆ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಉಪಮುಖ್ಯಮಂತ್ರಿಗಳನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಪದಗಳನ್ನ ಬಳಸಿ, ಬೆದರಿಕೆ ಸಂದೇಶಗಳನ್ನು ಕಳುಸಹಿಲಾಗಿದೆ. ನಾವು ಅವರ ಪಕ್ಕದಲ್ಲೇ ಇದ್ದೇಕೆ, ಅವರನ್ನು ಕೊಲ್ಲುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾನೆ. ಇದರಿಂದ ಆತಂಕಗೊಂಡ ಸಿಬ್ಬಂದಿ ತಕ್ಷಣ ಇದನ್ನು ಹಿರಿಯ ಪೊಲೀಸ್‌ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ.

    ತಕ್ಷಣ ಪ್ರತಿಕ್ರಿಯಿಸಿರುವ ಉನ್ನತ ಪೊಲೀಸ್ ಅಧಿಕಾರಿಗಳು, ಪವನ್ ಕಲ್ಯಾಣ್ ಸಿಬ್ಬಂದಿಗೆ ಈ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಎಲ್ಲಿಂದ ಬಂದವು ಎಂದು ವಿಚಾರಣೆ ನಡೆಸಲಾಗುತ್ತಿದೆ. ಪವನ್ ಹೊರತಾಗಿ ಬೇರೆ ಯಾವುದೇ ಸಚಿವರಿಗೆ ಇಂತಹ ಕರೆಗಳು ಬಂದಿವೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಜೈಲಲ್ಲಿ ನಿಲ್ಲದ ಕರ್ಮಕಾಂಡ – ಕಲಬುರಗಿ ಜೈಲು ಅಧೀಕ್ಷಕಿ ವಿರುದ್ಧ ವಿಡಿಯೋ ಮಸಲತ್ತು!

    ಪವನ್ ಸಿಬ್ಬಂದಿಗೆ ಈ ಕರೆಗಳು ಮತ್ತು ಸಂದೇಶಗಳು ಯಾವಾಗ ಬಂದವು ಎಂಬ ವಿವರಗಳ ಬಗ್ಗೆ ತನಿಖೆ ನಡೆಸಲಿದ್ದಾರೆ. ಹಿಂದೆಂದೂ ಇಲ್ಲದ ರೀತಿಯಲ್ಲಿ ಪವನ್ ಗೆ ಬೆದರಿಕೆ ಕರೆಗಳು ಬಂದಿದ್ದು, ಈ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ದುಬೈ; ಬ್ಯಾರೀಸ್ ಚೇಂಬರ್ ಯುಎಇ ವತಿಯಿಂದ ಫೆ.9ರಂದು ಅದ್ಧೂರಿ ಬ್ಯಾರಿ ಮೇಳ

  • ವಕ್ಫ್‌ ಮಂಡಳಿಯನ್ನೇ ವಿಸರ್ಜಿಸಿದ ಆಂಧ್ರಪ್ರದೇಶ ಸರ್ಕಾರ

    ವಕ್ಫ್‌ ಮಂಡಳಿಯನ್ನೇ ವಿಸರ್ಜಿಸಿದ ಆಂಧ್ರಪ್ರದೇಶ ಸರ್ಕಾರ

    ಅಮರಾವತಿ: ಆಂಧ್ರಪ್ರದೇಶ (Andhra Pradesh) ರಾಜ್ಯ ವಕ್ಫ್‌ ಮಂಡಳಿಯನ್ನು (Waqf Board) ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ಸರ್ಕಾರ ವಿಸರ್ಜಿಸಿದೆ.

    ಹಿಂದಿನ ವೈಎಸ್ಆರ್ ಕಾಂಗ್ರೆಸ್ ಆಡಳಿತದಿಂದ ನಾಮನಿರ್ದೇಶನಗೊಂಡ ರಾಜ್ಯ ವಕ್ಫ್ ಮಂಡಳಿಯನ್ನು ವಿಸರ್ಜಿಸಲಾಗಿದೆ. ವಕ್ಫ್ (ತಿದ್ದುಪಡಿ) ಮಸೂದೆ, 2024ರ ವಿರುದ್ಧ ನಡೆಯುತ್ತಿರುವ ಕೋಲಾಹಲದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಈಗಾಗಲೇ ನನ್ನ ಬೇಷರತ್ ಬೆಂಬಲ ನೀಡಿದ್ದೇನೆ: ‘ಮಹಾ’ ಸಿಎಂ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗೆ ಶಿಂಧೆ ಬೆಂಬಲ

    ನ.30 ರ ದಿನಾಂಕದ ಆದೇಶದಲ್ಲಿ, ವೈಎಸ್‌ಆರ್‌ಸಿ ಆಡಳಿತದಿಂದ ರಚಿಸಲ್ಪಟ್ಟ ರಾಜ್ಯ ವಕ್ಫ್ ಬೋರ್ಡ್ ದೀರ್ಘಕಾಲದ ವರೆಗೆ (ಮಾರ್ಚ್ 2023 ರಿಂದ) ಕಾರ್ಯನಿರ್ವಹಿಸುತ್ತಿಲ್ಲ ಎಂದು ರಾಜ್ಯ ಸರ್ಕಾರವು ಗಮನಿಸಿದೆ.

    ಆಗ ರಚನೆಯಾದ ವಕ್ಫ್ ಬೋರ್ಡ್ ಒಟ್ಟು 11 ಸದಸ್ಯರನ್ನು ಹೊಂದಿತ್ತು. ಅವರಲ್ಲಿ ಮೂವರು ಚುನಾಯಿತರು. ಉಳಿದ ಎಂಟು ಮಂದಿ ನಾಮನಿರ್ದೇಶನಗೊಂಡವರು. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಜೈಲಲ್ಲಿದ್ದ ಟೆರರಿಸ್ಟ್‌ಗಳು ಈಗ ರಿಲೀಸ್‌ ಆಗಿದ್ದಾರೆ: ತ್ರಿಪುರಾ ಸಿಎಂ ಕಳವಳ

    ಮಂಡಳಿಯನ್ನು ರಚಿಸಲು ಅನುಸರಿಸಿದ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಆಂಧ್ರಪ್ರದೇಶದ ಹೈಕೋರ್ಟ್ 2023ರ ನ.1 ರಂದು ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರ ಆಯ್ಕೆಗೆ ತಡೆ ನೀಡಿತ್ತು.

  • Ballari | ಮರಕ್ಕೆ ಕಾರು ಡಿಕ್ಕಿ; ಇಬ್ಬರು ವೈದ್ಯರು, ಓರ್ವ ವಕೀಲ ಸ್ಥಳದಲ್ಲೇ ಸಾವು

    Ballari | ಮರಕ್ಕೆ ಕಾರು ಡಿಕ್ಕಿ; ಇಬ್ಬರು ವೈದ್ಯರು, ಓರ್ವ ವಕೀಲ ಸ್ಥಳದಲ್ಲೇ ಸಾವು

    ಬಳ್ಳಾರಿ: ರಸ್ತೆ ಪಕ್ಕದ ಮರಕ್ಕೆ ಕಾರು (Car) ಡಿಕ್ಕಿ ಹೊಡೆದ ಪರಿಣಾಮ ಬಳ್ಳಾರಿ ಬಿಮ್ಸ್ (BIMS) ಆಸ್ಪತ್ರೆಯ ಇಬ್ಬರು ವೈದ್ಯರು ಹಾಗೂ ಓರ್ವ ವಕೀಲ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆಂಧ್ರ ಗಡಿಭಾಗದ ವಿಡಪನಕಲ್ (Vidapanakal) ಬಳಿ ನಡೆದಿದೆ.

    ಡಾ.ಗೋವಿಂದರಾಜುಲು, ಡಾ.ಯೋಗೇಶ್ ಮತ್ತು ವಕೀಲ ವೆಂಕಟನಾಯ್ಡು (55) ಮೃತ ದುರ್ದೈವಿಗಳು. ಘಟನೆಯಲ್ಲಿ ಮತ್ತೋರ್ವ ಖಾಸಗಿ ಆಸ್ಪತ್ರೆ ವೈದ್ಯ ಅಮರೇಗೌಡ ಪಾಟೀಲ್ ಸ್ಥಿತಿ ಗಂಭೀರವಾಗಿದೆ. ವಿದೇಶಿ ಪ್ರವಾಸಕ್ಕೆ ತೆರಳಿದ್ದ ಸ್ನೇಹಿತರು ಬಳ್ಳಾರಿಗೆ ವಾಪಸ್ಸಾಗುತ್ತಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ನ್ಯೂಇಯರ್‌ಗೆ ಪೊಲೀಸರು ಅಲರ್ಟ್; ರೆಸಾರ್ಟ್‌, ಏರ್ಪೋರ್ಟ್‌, ರೈಲ್ವೆ ನಿಲ್ದಾಣಗಳ ಮೇಲೆ ಹದ್ದಿನ ಕಣ್ಣು

    ಬೆಂಗಳೂರು ವಿಮಾನ ನಿಲ್ದಾಣದಿಂದ ಅನಂತಪುರ ಮಾರ್ಗವಾಗಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿ ಅಪಘಾತ ಸಂಭವಿಸಿರಬಹುದು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇದನ್ನೂ ಓದಿ: Bengaluru| ಸಿಲಿಂಡರ್ ಸ್ಫೋಟಗೊಂಡು 3 ಮನೆಗಳಿಗೆ ಬೆಂಕಿ – ಒಂದೇ ಕುಟುಂಬದ ನಾಲ್ವರಿಗೆ ಗಾಯ

  • ನಿನ್ನ ನೋಡ್ಬೇಕು ಬಾ ಅಂತ ಕರೆಸಿ ಪ್ರಿಯತಮೆಯಿಂದ್ಲೇ ಪ್ರಿಯಕರನ ಕಿಡ್ನ್ಯಾಪ್‌, 5 ಲಕ್ಷ ಸುಲಿಗೆ!

    ನಿನ್ನ ನೋಡ್ಬೇಕು ಬಾ ಅಂತ ಕರೆಸಿ ಪ್ರಿಯತಮೆಯಿಂದ್ಲೇ ಪ್ರಿಯಕರನ ಕಿಡ್ನ್ಯಾಪ್‌, 5 ಲಕ್ಷ ಸುಲಿಗೆ!

    – ಚಿನ್ನಾಭರಣ ಹಾಕ್ಕೊಂಡು ಇನ್ನೋವಾ ಕಾರಿನಲ್ಲಿ ಬಾ ಎಂದಿದ್ದ ಪ್ರಿಯತಮೆ

    ಬೆಂಗಳೂರು: ಪ್ರಿಯತಮೆ (Lover) ಮೀಟ್‌ ಮಾಡೋಕೆ ಬಂದಿದ್ದವನನ್ನ ಕಿಡ್ನ್ಯಾಪ್‌ ಮಾಡಿ ಸುಲಿಗೆ ಮಾಡಿ ಸಿನಿಮೀಯ ರೀತಿಯಲ್ಲಿ ತಗಲಾಕ್ಕೊಂಡ ಘಟನೆ ಬೆಂಗಳೂರಿನ ಕೋರಮಂಗಲ ಪೊಲೀಸ್‌ ಠಾಣಾ (Koramangala Police Station) ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯತಮೆಯೇ ಸುಲಿಗೆ ಹಿಂದಿನ ಕಿಂಗ್‌ಪಿನ್‌ ಎಂದು ತಿಳಿದು ಪ್ರಿಯಕರ ಬೆಚ್ಚಿಬಿದ್ದಿದ್ದಾನೆ.

    ಪ್ರಿಯತಮೆ ಸ್ಕೆಚ್‌ ಹಾಕಿದ್ದು ಹೇಗೆ?
    ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಶಿವ ಮತ್ತು ಮೋನಿಕಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಹೀಗಿರುವಾಗ ಶಿವನಿಗೆ ಕರೆ ಮಾಡಿ ನನ್ನ ಸ್ನೇಹಿತರು ನಿನ್ನ ನೋಡಬೇಕಂತೆ, ನಿನ್ನ ಹತ್ರ ಇರುವ ಚಿನ್ನಾಭರಣ ಹಾಕ್ಕೊಂಡು, ಇನ್ನೋವಾ ಕಾರಿನಲ್ಲಿ ಬಾ ಅಂತಾ ಫೋನ್‌ ಮಾಡಿದ್ಲು. ಮೋನಿಕಾ ಮಾತು ನಂಬಿದ ಪ್ರಿಯಕರ 60 ಗ್ರಾಂ ಚಿನ್ನಾಭರಣದ ಜೊತೆಗೆ ಇನ್ನೋವಾ ಕಾರಿನಲ್ಲಿ ಬಂದಿದ್ದಾನೆ.

    ಈ ವೇಳೆ ಮೋನಿಕಾ ಅಂಡ್ ಗ್ಯಾಂಗ್ ಶಿವನನ್ನ ಕಿಡ್ನ್ಯಾಪ್ ಮಾಡಿ ಮೈಮೇಲಿದ್ದ ಚಿನ್ನಾಭರಣ ದೋಚಿ 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದ್ರೆ ಪ್ರಿಯತಮೆ ಶಿವನಿಗೆ 5 ಲಕ್ಷ ರೂ. ಕೊಡೋಕೆ ಒಪ್ಪಿಸಿದ್ದಳು. ಎಟಿಎಂ ಕಾರ್ಡ್ ಬೆಂಗಳೂರಿನ ಮೆಜೆಸ್ಟಿಕ್ ಅಡ್ರೆಸ್‌ಗೆ ಕೋರಿಯರ್ ಮಾಡಿಸಿಕೊಡು ಕೋರಮಂಗಲಕ್ಕೆ ಹಣ ಡ್ರಾ ಮಾಡಿಕೊಳ್ಳೋಕೆ ಬಂದಿದ್ದರು. ಆದ್ರೆ ಕೋರಮಂಗಲದ ಎಟಿಎಂನಲ್ಲಿ ಹಣ ಡ್ರಾ ಮಾಡುವ ವೇಳೆ ಆರೋಪಿಗಳ ಮಧ್ಯೆ ಗಲಾಟೆ ನಡೆದಿದೆ. ಇದೇ ವೇಳೆ ರೌಂಡ್ಸ್‌ನಲ್ಲಿದ್ದ ಪಿಎಸ್‌ಐ ಮಾದೇಶ್‌ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕಿಡ್ನ್ಯಾಪ್ ಮತ್ತು ಸುಲಿಗೆ ಪ್ರಕರಣ ಬೆಳಕಿಗೆ ಬಂದಿದೆ.

    ಪ್ರಿಯತಮೆ ಮೋನಿಕಾಳೇ ಕಿಂಗ್ ಪಿನ್ ಅನ್ನೋದನ್ನು ಕೇಳಿ ಪ್ರಿಯಕರ ಶಿವ ಶಾಕ್ ಆಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಆರೋಪಿಗಳಾದ ಮೋನಿಕಾ, ಹರೀಶ್, ಹರಿಕೃಷ್ಣ, ನರೇಶ್, ರಾಜ್ ಕುಮಾರ್, ನರಸಿಂಹ, ಅಂಜನೀಲ್‌ನನ್ನ ಬಂಧಿಸಿದ್ದಾರೆ. ಬಂಧಿತ ಏಳು ಮಂದಿಯೂ ಆಂಧ್ರದ ನೆಲ್ಲೂರು ಮೂಲದವರು ಎಂದು ತಿಳಿಸಿದ್ದಾರೆ.

    ಸೌತ್ ಈಸ್ಟ್ ಡಿಸಿಪಿ ಹೇಳಿದ್ದೇನು?
    ಇನ್ನೂ ಪ್ರಕರಣದ ಕುರಿತು ಮಾತನಾಡಿದ ಸೌತ್ ಈಸ್ಟ್ ಡಿಸಿಪಿ ಸಾರಾ ಫಾತಿಮಾ, ಪ್ರಕರಣದಲ್ಲಿ ಯುವತಿ ಸೇರಿ 7 ಆರೋಪಿಗಳ ಬಂಧನವಾಗಿದೆ. 7 ಜನ ಆರೋಪಿಗಳಲ್ಲಿ ಇಬ್ಬರ ಮೇಲೆ 5ಕ್ಕೂ ಹೆಚ್ಚು ಪ್ರಕರಣಗಳಿವೆ. ದೂರುದಾರ, ಆರೋಪಿ ಯುವತಿಗೆ 3-4 ವರ್ಷದಿಂದ ಪರಿಚಯದಲ್ಲಿದ್ದ, ನೆಲ್ಲೂರಿನಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ. ಕೋರಮಂಗಲ ಎಸ್‌ಐ ರಾತ್ರಿ ರೌಂಡ್ಸ್‌ನಲ್ಲಿದ್ದಾ ಗ ಎಟಿಎಂ ಬಳಿ ಆರೋಪಿಗಳ ನಡುವೆ ಗಲಾಟೆ ನಡೆದಿದೆ. 3 ಜನ ಕಿತ್ತಾಡಿಕೊಳ್ಳೋದು ಕಂಡು ಬಂದಾಗ ಅದನ್ನ ಗಮನಿಸಿದ್ದಾರೆ. ಅವರ ಮೇಲೆ ಸಂದೇಹ ಬಂದು ಸ್ಟೇಷನ್‌ಗೆ ಕರೆದುಕೊಂಡು ಬಂದಿದ್ದಾರೆ. ವಿಚಾರಣೆ ಮಾಡಿದಾಗ ಕಿಡ್ನಾಪ್ ಆಗಿರೋದು ಬೆಳಕಿಗೆ ಬಂದಿದೆ. ಹಣ ಡ್ರಾ ಮಾಡ್ತಾ ಇರೋದು ಸುಲಿಗೆ ಹಣ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.

    ಆರೋಪಿ ಮೋನಿಕಾ ಅವಳೇ ಶಿವನನ್ನ ಆಂಧ್ರದಿಂದ ಹಿಂದೂಪುರದ ಬಳಿಯ ಪೆನುಕೊಂಡ ಪಾವಗಡ ಹತ್ರ ಕರೆಸಿದ್ದಾಳೆ. ಬಳಿಕ 4 ಆರೋಪಿಗಳು ಕಿಡ್ನ್ಯಾಪ್‌ ಮಾಡಿ ಪಾವಗಡದ ಒಂದು ಖಾಸಗಿ ಹೋಟೇಲ್‌ನಲ್ಲಿ 3 ದಿನ ಕೂಡಿ ಹಾಕಿದ್ದಾರೆ. ಅವನ ಬಳಿ ಇರುವ ಚಿನ್ನಾಭರಣ ಪಡೆದು ಅಡವಿಟ್ಟಿದ್ದಾರೆ. ಮತ್ತೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ದೂರುದಾರ ತನ್ನ ಸ್ನೇಹಿತರಿಂದ ಬ್ಯಾಂಕ್‌ಗೆ 5 ಲಕ್ಷ ಹಾಕಿಸಿಕೊಂಡಿದ್ದಾನೆ. ನಂತರ ಡೆಬಿಟ್ ಕಾರ್ಡ್ ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಅದನ್ನ ಬೆಂಗಳೂರು ಅಡ್ರೆಸ್‌ಗೆ ಕೋರಿಯರ್ ಮಾಡಿ ಎಂದು ಹೇಳಿದ್ದಾನೆ. ಹಣವನ್ನ ವಿತ್‌ಡ್ರಾ ಮಾಡುವ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. 5 ಲಕ್ಷ ರೂ. ನೀಡಿರುವುದಾಗಿ ದೂರುದಾರ ಹೇಳಿದ್ದಾನೆ, ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ತಿಳಿದಿದ್ದಾರೆ.

  • 100 ಕೋಟಿ ಸ್ಕ್ಯಾಮ್: ದೆಹಲಿಯಲ್ಲಿ ಚೀನಾ ಪ್ರಜೆ ಅರೆಸ್ಟ್

    100 ಕೋಟಿ ಸ್ಕ್ಯಾಮ್: ದೆಹಲಿಯಲ್ಲಿ ಚೀನಾ ಪ್ರಜೆ ಅರೆಸ್ಟ್

    ನವದೆಹಲಿ: 100 ಕೋಟಿ ರೂ. ಮೊತ್ತದ ಬೃಹತ್ ಸೈಬರ್ ವಂಚನೆ (Cyber Fraud) ಪ್ರಕರಣದಲ್ಲಿ ಭಾಗಿಯಾಗಿರುವ ಚೀನಾ ಪ್ರಜೆ ಫಾಂಗ್ ಚೆಂಜಿನ್‌ನನ್ನು ದೆಹಲಿಯಲ್ಲಿ ಇಂದು (ಮಂಗಳವಾರ) ಸೈಬರ್ ಸೆಲ್ ಪೊಲೀಸರು ಬಂಧಿಸಿದ್ದಾರೆ.

    ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಫಾಂಗ್ ಚೆಂಜಿನ್ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಹಗರಣಗಳಲ್ಲಿ ಭಾಗಿಯಾಗಿದ್ದ. ಸಂತ್ರಸ್ತರಲ್ಲಿ ಒಬ್ಬರಾದ ಸುರೇಶ್ ಕೋಳಿಚಿಯಿಲ್ ಅಚ್ಯುತನ್ ಅವರು ಸೈಬರ್ ಕ್ರೈಂ (Cyber Crime) ಪೋರ್ಟಲ್‌ನಲ್ಲಿ 43.5 ಲಕ್ಷ ರೂ. ವಂಚಿಸಿದ್ದಾನೆ ಎಂದು ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ದೂರಿನ ಪ್ರಕಾರ, ಅವರನ್ನು ವಂಚನೆಯ ಷೇರು ಮಾರುಕಟ್ಟೆಯ ತರಬೇತಿ ಅವಧಿಗಳಿಗೆ ಆಮಿಷವೊಡ್ಡಲಾಯಿತು. ನಂತರ ಹಣವನ್ನು ಹಲವಾರು ವಹಿವಾಟುಗಳಲ್ಲಿ ಹೂಡಿಕೆ ಮಾಡುವಂತೆ ಹೇಳಿ ವಂಚನೆ ಎಸಗಲಾಗಿದೆ. ನಂತರ ಈ ಹಣವನ್ನು ವಂಚಕರು ನಿಯಂತ್ರಿಸಲ್ಪಡುವ ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ವಕ್ಫ್‌ ಬೋರ್ಡ್‌ ರಾಕ್ಷಸನನ್ನ ಮೋದಿ ಸಂಹಾರ ಮಾಡ್ತಾರೆ: ಆರ್.‌ ಅಶೋಕ್‌

    ಏಪ್ರಿಲ್‌ನಲ್ಲಿ 1.25 ಲಕ್ಷ ರೂ. ವಂಚನೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿಯ ಮುಂಡ್ಕಾದಲ್ಲಿರುವ ಮಹಾಲಕ್ಷ್ಮಿ ಟ್ರೇಡರ್ಸ್ ಹೆಸರಿನಲ್ಲಿ ಬ್ಯಾಂಕ್ ಖಾತೆ ಇತ್ತು. ಅಪರಾಧಕ್ಕೆ ಸಂಬಂಧಿಸಿದ ಮೊಬೈಲ್ ಫೋನ್ ಕೂಡ ಪತ್ತೆಯಾಗಿದೆ. ಇದು ಆರೋಪಿ ಚೆಂಜಿನ್‌ನನ್ನು ಗುರುತಿಸಲು ಸಹಾಯವಾಯಿತು. ಆರೋಪಿಗಳು ದೆಹಲಿಯ ಸಫ್ದರ್‌ಜಂಗ್ ಎನ್‌ಕ್ಲೇವ್‌ನಲ್ಲಿ ವಾಸವಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು | ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಅಗ್ನಿ ಅವಘಡ – ಯುವತಿ ಸಜೀವ ದಹನ

    ಅಪರಾಧಗಳನ್ನು ನಡೆಸಲು ಬಳಸಲಾದ ಫೋನ್‌ನಲ್ಲಿ ಚೆಂಜಿನ್ ಮತ್ತು ಅವನ ಸಹಚರರ ನಡುವೆ ವಾಟ್ಸಾಪ್ ಸಂಭಾಷಣೆಗಳು ಸೇರಿದಂತೆ ಹಲವಾರು ಸಾಕ್ಷಿಗಳು ಸಿಕ್ಕಿದೆ. ಈ ಸಾಕ್ಷಿ ಮೇರೆಗೆ ಆತನನ್ನು ಬಂಧಿಸಲಾಗಿದೆ. ಆರೋಪಿಯು ವಂಚನೆಗೆ ಬಳಸಲಾದ ಮೊಬೈಲ್ ಸಂಖ್ಯೆಗೆ ರೀಚಾರ್ಜ್ ಮಾಡುವಂತೆ ತನ್ನ ಸಹಾಯಕನಿಗೆ ಸೂಚಿಸಿದ್ದಾನೆ. ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ಕನಿಷ್ಠ 17 ದೂರುಗಳನ್ನು ದಾಖಲಿಸಲಾಗಿದೆ. ಎಲ್ಲವೂ ಒಂದೇ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗಿದೆ. ದೂರುಗಳ ಪ್ರಕಾರ, 100 ಕೋಟಿ ರೂ. ವಂಚನೆಯಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ತನಿಖೆಯಿಂದ ಆಂಧ್ರಪ್ರದೇಶ (Andhra Pradesh) ಮತ್ತು ಉತ್ತರ ಪ್ರದೇಶದಲ್ಲಿ (Uttar Pradesh) ಸೈಬರ್ ಕ್ರೈಮ್ ಮತ್ತು ಮನಿ ಲಾಂಡರಿಂಗ್ ಒಳಗೊಂಡತೆ ಇತರ ಎರಡು ಮಹತ್ವದ ವಂಚನೆ ಪ್ರಕರಣಗಳಿಗೂ ಫಾಂಗ್ ಚೆಂಜಿನ್‌ಗೂ ಸಂಬಂಧವಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಶಹದಾರ, ಪ್ರಶಾಂತ್ ಗೌತಮ್ ತಿಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭುಗಿಲೆದ್ದ ವಕ್ಫ್‌ ಆಸ್ತಿ ವಿವಾದ – ಅಶೋಕ್‌ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ

  • Cyclone Effect: ತಮಿಳುನಾಡಿನಲ್ಲಿ 2 ದಿನ ಮಳೆ ಸಾಧ್ಯತೆ

    Cyclone Effect: ತಮಿಳುನಾಡಿನಲ್ಲಿ 2 ದಿನ ಮಳೆ ಸಾಧ್ಯತೆ

    ಚೆನ್ನೈ: ಚಂಡಮಾರುತ (Cyclone) ಪ್ರಭಾವದಿಂದ ತಮಿಳುನಾಡಿನಲ್ಲಿ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.

    ಉತ್ತರ ತಮಿಳುನಾಡು (Tamil Nadu) ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧತೆ ಇದೆ. ಕಳೆದ 24 ಗಂಟೆಗಳಲ್ಲಿ ಆಂಧ್ರಪ್ರದೇಶದಲ್ಲಿ ಭಾರೀ ಮಳೆ ಸುರಿದಿದೆ. ಇದನ್ನೂ ಓದಿ: 17,000 ಕೆಲಸ ಕಡಿತಗೊಳಿಸಲಿದೆ ಬೋಯಿಂಗ್ – ಕಂಪನಿಯ 10% ಉದ್ಯೋಗಿಗಳ ಕೆಲಸಕ್ಕೆ ಕುತ್ತು

    ಕವಲಿ ಮತ್ತು ಒಂಗೋಲೆಯಲ್ಲಿ ಕ್ರಮವಾಗಿ 67ಮಿ.ಮೀ ಹಾಗೂ 63ಮಿ.ಮೀ ಮಳೆ ದಾಖಲಾಗಿದೆ. ಮಿನಂಬಕ್ಕಂ, ನುಂಗಂಬಾಕ್ಕಂ, ಪುದುಚೇರಿ ಮತ್ತು ಕಡಲೂರುಗಳಲ್ಲಿ 15ಮಿ.ಮೀ ಮಳೆಯಾಗಿದೆ. ದಕ್ಷಿಣ ಕರಾವಳಿ ತಮಿಳುನಾಡು ಮತ್ತು ರಾಜ್ಯದ ಒಳಭಾಗಗಳಲ್ಲಿ ಅಲ್ಪ ಪ್ರಮಾಣದ ಸುರಿದಿದೆ. ಇದನ್ನೂ ಓದಿ: ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ

    ಮುಂದಿನ 48 ಗಂಟೆಗಳಲ್ಲಿ ಬಾಪಟ್ಲಾ, ಕವಾಲಿ, ಒಂಗೋಲ್, ನೆಲ್ಲೂರು, ಶ್ರೀಹರಿಕೋಟಾ, ಚೆನ್ನೈ (Chennai), ಕಾಂಚೀಪುರಂ, ತಾಂಬರಂ, ಪುದುಚೇರಿ, ಕಡಲೂರು ಮತ್ತು ಕಾರೈಕಲ್‌ನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ನೈಋತ್ಯ ಬಂಗಾಳ ಕೊಲ್ಲಿಯ ಮೇಲಿನ ಕಡಿಮೆ ಒತ್ತಡದ ವ್ಯವಸ್ಥೆಯು ಈ ಮಳೆಗೆ ಕಾರಣವಾಗಿದೆ. ಇದು ವಿಶೇಷವಾಗಿ ತಮಿಳುನಾಡಿನ ಕರಾವಳಿ ಜಿಲ್ಲೆಗಳು ಮತ್ತು ಚೆನ್ನೈ ಮೇಲೆ ಪರಿಣಾಮ ಬೀರುತ್ತದೆ. ಈ ಹವಾಮಾನ ವ್ಯವಸ್ಥೆಯಿಂದ ನ.16 ರ ತನಕ ರಾಜ್ಯದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ. ಇದನ್ನೂ ಓದಿ: ದೆಹಲಿಗೆ ಬರುತ್ತಿದ್ದಂತೆ ಗ್ಯಾಸ್ ಚೇಂಬರ್‌ಗೆ ಪ್ರವೇಶಿಸಿದಂತಾಯ್ತು: ಪ್ರಿಯಾಂಕಾ ಗಾಂಧಿ

  • ಆಂಧ್ರಪ್ರದೇಶ| 3ರ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ – ಮೃತದೇಹ ಹೊಲದಲ್ಲಿ ಹೂತುಹಾಕಿದ ಸಂಬಂಧಿ

    ಆಂಧ್ರಪ್ರದೇಶ| 3ರ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ – ಮೃತದೇಹ ಹೊಲದಲ್ಲಿ ಹೂತುಹಾಕಿದ ಸಂಬಂಧಿ

    ಅಮರಾವತಿ: ಮೂರು ವರ್ಷದ ಬಾಲಕಿಯ ಮೇಲೆ ಆಕೆಯ ಸಂಬಂಧಿಯೇ ಅತ್ಯಾಚಾರವೆಸಗಿ ಹತ್ಯೆಗೈದ ಘಟನೆ ಆಂಧ್ರಪ್ರದೇಶದ (Andhra Pradesh) ತಿರುಪತಿ (Tirupati) ಜಿಲ್ಲೆಯಲ್ಲಿ ನಡೆದಿದೆ.

    ಬಾಲಕಿ ವಾಸವಿದ್ದ ಕಾಲೋನಿಯಲ್ಲೇ ವಾಸವಿದ್ದ 22ರ ಹರೆಯದ ಆರೋಪಿ ಶುಕ್ರವಾರ ಮಗುವಿಗೆ ಚಾಕೊಲೇಟ್ ಕೊಡಿಸಿ ಗದ್ದೆಗೆ ಕರೆದೊಯ್ದಿದ್ದ. ಬಳಿಕ ಆಕೆಯನ್ನು ಕೊಂದು ಶವವನ್ನು ಹೊಲದಲ್ಲಿ ಹೂತು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ಚುನಾವಣಾ ಕಾರ್ಯತಂತ್ರಕ್ಕೆ 100 ಕೋಟಿ ಶುಲ್ಕ ಪಡೆಯುತ್ತೇನೆ: ಪ್ರಶಾಂತ್‌ ಕಿಶೋರ್‌

    ಬಾಲಕಿ ಮನೆಗೆ ಬಾರದೇ ಇದ್ದಾಗ ಆಕೆಯ ಪೋಷಕರು ಆಕೆಗಾಗಿ ಹುಡುಕಾಟ ಆರಂಭಿಸಿದ್ದು, ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ, ಉಗ್ರರ ನಡುವೆ ಗುಂಡಿನ ಚಕಮಕಿ

    ಮೃತದೇಹವನ್ನು ಹೊಲದಿದಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ನಗರಿ ಶಾಸಕ ಗಾಲಿ ಭಾನು ಪ್ರಕಾಶ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: Mumbai | ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಸಹೋದರನನ್ನು ಭಾರತಕ್ಕೆ ಕರೆತರಲು ತಯಾರಿ ಶುರು

  • ದೀಪಾವಳಿ ಹಬ್ಬಕ್ಕೆ ಸಾಗಿಸುತ್ತಿದ್ದ ‘ಈರುಳ್ಳಿ ಬಾಂಬ್’‌ ಸ್ಫೋಟಗೊಂಡು ಓರ್ವ ಸಾವು

    ದೀಪಾವಳಿ ಹಬ್ಬಕ್ಕೆ ಸಾಗಿಸುತ್ತಿದ್ದ ‘ಈರುಳ್ಳಿ ಬಾಂಬ್’‌ ಸ್ಫೋಟಗೊಂಡು ಓರ್ವ ಸಾವು

    ಅಮರಾವತಿ: ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಪಟಾಕಿ ಸಿಡಿಸುವ ವೇಳೆ ಸಂಭವಿಸಿದ ಅವಘಡದಲ್ಲಿ ಓರ್ವ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

    ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬರು ದೀಪಾವಳಿ ಹಬ್ಬದ ವಿಶೇಷ ಪಟಾಕಿ-ಆನಿಯನ್ ಬಾಂಬ್‌ಗಳನ್ನು ಸಾಗಿಸುತ್ತಿದ್ದಾಗ ಸ್ಥಳೀಯ ದೇವಸ್ಥಾನದ ಬಳಿಯ ಗುಂಡಿಗೆ‌ ಬೈಕ್‌ ಬಿಟ್ಟಿದ್ದಾರೆ. ಈ ವೇಳೆ ಬಾಂಬ್‌ಗಳು ಕೆಳಕ್ಕೆ ಬಿದ್ದು ಸ್ಫೋಟಗೊಂಡಿವೆ.

    ದೀಪಾವಳಿ ಹಿನ್ನೆಲೆ ಸಾಗಿಸುತ್ತಿದ್ದ ಬಾಂಬ್‌ಗಳು IED ಅಥವಾ ಸುಧಾರಿತ ಸ್ಫೋಟಕ ಸಾಧನದಂತೆಯೇ ಅದೇ ಸ್ಫೋಟಕ ಸಾಮರ್ಥ್ಯವನ್ನು ಹೊಂದಿತ್ತು. ದುರಂತದ ಸಿಸಿಟಿವಿ ದೃಶ್ಯಾವಳಿಯು, ಬಿಳಿ ಸ್ಕೂಟರ್‌ನಲ್ಲಿ ಇಬ್ಬರು ಪುರುಷರು ಕಿರಿದಾದ ರಸ್ತೆಯ ಮೂಲಕ ವೇಗದಲ್ಲಿ ಚಾಲನೆ ಮಾಡುವುದನ್ನು ತೋರಿಸಿದೆ. ರಸ್ತೆ ಅಗಲೀಕರಣಗೊಂಡು ಮುಖ್ಯರಸ್ತೆ ಸಂಧಿಸುವ ಹಂತಕ್ಕೆ ಬರುತ್ತಿದ್ದಂತೆ ಬೈಕ್ ಸ್ಫೋಟಗೊಂಡಿದೆ. ಜಂಕ್ಷನ್‌ನಲ್ಲಿ ಐದರಿಂದ ಆರು ಮಂದಿಯ ಸಣ್ಣ ಗುಂಪು ಇತ್ತು.

    ಸ್ಫೋಟದ ತೀವ್ರತೆಗೆ ಇಡೀ ಪ್ರದೇಶವು ಗಾಢ ಬೂದು ಹೊಗೆಯಿಂದ ಆವೃತವಾಗಿತ್ತು. ಸ್ಫೋಟದಿಂದ ಹೇಗೋ ಬದುಕುಳಿದ ಇಬ್ಬರು, ಸುರಕ್ಷಿತವಾಗಿ ಓಡಿ ಬಂದರು. ಬೈಕಿನ ಭಾಗಗಳು ಮತ್ತು ಮೃತನ ದೇಹದ ಭಾಗಗಳು ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಕಂಡುಬಂದಿದೆ.

    ಬೈಕ್ ಸವಾರನನ್ನು ಸುಧಾಕರ್ ಎಂದು ಗುರುತಿಸಲಾಗಿದೆ. ಆರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಜಗನ್ ಕುಟುಂಬದ ಆಸ್ತಿಯಲ್ಲಿ ನನ್ನ ಪಾಲನ್ನು ಕೊಟ್ಟಿಲ್ಲ – ಶರ್ಮಿಳಾ ಆರೋಪ

    ಜಗನ್ ಕುಟುಂಬದ ಆಸ್ತಿಯಲ್ಲಿ ನನ್ನ ಪಾಲನ್ನು ಕೊಟ್ಟಿಲ್ಲ – ಶರ್ಮಿಳಾ ಆರೋಪ

    ಅಮರಾವತಿ: ಆಂಧ್ರಪ್ರದೇಶದ (Andhra Pradesh) ಮಾಜಿ ಸಿಎಂ ಹಾಗೂ ನನ್ನ ಸಹೋದರ ಜಗನ್‌ ಮೋಹನ್ ರೆಡ್ಡಿ (Y.S. Jagan Mohan Reddy) ಕುಟುಂಬದ ಆಸ್ತಿಯಲ್ಲಿ ನನ್ನ ಪಾಲನ್ನು ನನಗೆ ನೀಡಿಲ್ಲ ಎಂದು ಅವರ ಸಹೋದರಿ ಹಾಗೂ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷೆ ಶರ್ಮಿಳಾ (Y. S. Sharmila) ಆರೋಪಿಸಿದ್ದಾರೆ.

    ಜಗನ್‌ ಆಸ್ತಿಗಳ ಏಕೈಕ ಉತ್ತರಾಧಿಕಾರಿಯಲ್ಲ. ಕುಟುಂಬದ ಯಾವುದೇ ಆಸ್ತಿಯು ನ್ಯಾಯಸಮ್ಮತವಾಗಿ ತನಗೆ ಸೇರಿಲ್ಲ. ತಮ್ಮ ತಂದೆ ವೈ.ಎಸ್. ರಾಜಶೇಖರ ರೆಡ್ಡಿ (ವೈಎಸ್ಆರ್) ಅವರ ಜೀವಿತಾವಧಿಯಲ್ಲಾಗಲಿ ಅಥವಾ ಅವರ ನಿಧನದ ನಂತರ ಯಾವುದೇ ಆಸ್ತಿ ವರ್ಗಾವಣೆ ನಡೆದಿಲ್ಲ. ನನ್ನ ಮತ್ತು ನನ್ನ ಮಕ್ಕಳ ಪಾಲಿನ ಒಂದೇ ಒಂದು ಆಸ್ತಿಯನ್ನು ನಾನು ಇನ್ನೂ ಹೊಂದಿಲ್ಲ ಎಂದು ನಾನು ಘೋಷಿಸುತ್ತೇನೆ. ಈ ವಿಚಾರವನ್ನು ವೈಎಸ್‌ಆರ್ ಅಭಿಮಾನಿಗಳಿಗೆ ಅವರು ಬರೆದ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.

    ವೈಎಸ್‌ಆರ್ ಅವರ ಆಸ್ತಿ ಅವರ ನಾಲ್ವರು ಮೊಮ್ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಗಬೇಕು. ಆ ರೀತಿ ಹಂಚಿಕೆ ಮಾಡುವುದು ಜಗನ್‌ ಕರ್ತವ್ಯವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಸ್ವಂತ ಆಸ್ತಿ ಎಂದು ಹೇಳಿಕೊಳ್ಳುವ ಆಸ್ತಿಗಳು ವಾಸ್ತವವಾಗಿ ಕುಟುಂಬದ ಆಸ್ತಿಗಳಾಗಿವೆ. ತಮ್ಮ ತಾಯಿ ವೈ.ಎಸ್.ವಿಜಯಮ್ಮ ಅವರು ಆಸ್ತಿ ಹಂಚಿಕೆಗಾಗಿ ನೂರಾರು ಪತ್ರಗಳನ್ನು ಬರೆದಿದ್ದಾರೆ. ಆದರೂ ಜಗನ್‌ ಅವರ ಕಲ್ಲು ಹೃದಯವನ್ನು ಕರಗಿಸಲು ಸಾಧ್ಯವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಜಗನ್ ಮೋಹನ್ ರೆಡ್ಡಿ ಒಡೆತನದ ದಿನಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದರ ವಿಚಾರವಾಗಿ ಅವರು ಪತ್ರ ಬಿಡುಗಡೆ ಮಾಡಿದ್ದಾರೆ. ಸತ್ಯವನ್ನು ಪ್ರಸ್ತುತಪಡಿಸುವುದು ತನ್ನ ಕರ್ತವ್ಯ ಎಂದು ಭಾವಿಸಿ ಪತ್ರ ಬರೆದಿದ್ದೇನೆ. ವೈಎಸ್‌ಆರ್‌ ಜೀವಿತಾಧಿಯಲ್ಲಿ ಆಸ್ತಿ ಹಂಚಿಕೆಯಾಗಿದೆ ಎಂಬುದು ಸುಳ್ಳು ಎಂದು ತಿಳಿಸಿದ್ದಾರೆ.

    ನಾನು ಮತ್ತು ತನ್ನ ತಾಯಿ ಆಸ್ತಿಗಾಗಿ ದುರಾಸೆ ಹೊಂದಿದ್ದಾರೆ ಎಂದು ವೈಎಸ್ಆರ್ ಬೆಂಬಲಿಗರನ್ನು ದಾರಿತಪ್ಪಿಸಬೇಡಿ. ನನಗೆ ಆಸ್ತಿಯನ್ನು ನೀಡದಿದ್ದರೂ, ನಾನು ಅದನ್ನು ಎಂದಿಗೂ ಮಾಧ್ಯಮಗಳಿಗೆ ಬಹಿರಂಗಪಡಿಸಿಲ್ಲ. ಕಾನೂನಿನ ಬಾಗಿಲನ್ನೂ ತಟ್ಟಿಲ್ಲ. ಪ್ರತಿಕೂಲ ಮತ್ತು ಆರ್ಥಿಕ ತೊಂದರೆಗಳ ನಡುವೆಯೂ ನಾನು ಶ್ರಮಪಟ್ಟಿದ್ದೇನೆ. ಕುಟುಂಬದ ಗೌರವ ಮತ್ತು ವೈಎಸ್‌ಆರ್ ಅವರ ಘನತೆಯನ್ನು ಎತ್ತಿಹಿಡಿಯಿರಿ ಎಂದು ಜಗನ್‌ಗೆ ಎಚ್ಚರಿಸಿದ್ದಾರೆ.