Tag: Andhra Pradesh

  • ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದ್ದಕ್ಕೆ ಇಬ್ಬರು ಪುತ್ರರನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು ನೇಣಿಗೆ ಶರಣಾದ ತಂದೆ

    ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದ್ದಕ್ಕೆ ಇಬ್ಬರು ಪುತ್ರರನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು ನೇಣಿಗೆ ಶರಣಾದ ತಂದೆ

    ಹೈದರಾಬಾದ್‌: ಪರೀಕ್ಷೆಯಲ್ಲಿ (Exam) ಉತ್ತಮ ಅಂಕ ಗಳಿಸದ್ದಕ್ಕೆ ಇಬ್ಬರು ಮಕ್ಕಳನ್ನು ಒಎನ್‌ಜಿಸಿ ಉದ್ಯೋಗಿಯೊಬ್ಬ ಹತ್ಯೆಗೈದ ಘಟನೆ ಆಂಧ್ರಪ್ರದೇಶದ (Andhra Pradesh) ಕಾಕಿನಾಡದಲ್ಲಿ ನಡೆದಿದೆ.

    37 ವರ್ಷದ ಒಎನ್‌ಜಿಸಿ ಉದ್ಯೋಗಿ ಚಂದ್ರಶೇಖರ್‌ ಇಬ್ಬರು ಅಪ್ರಾಪ್ತ ಪುತ್ರರನ್ನು ಕೊಂದು ನಂತರ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಶುಕ್ರವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ತಂದೆ ವಿ. ಚಂದ್ರ ಕಿಶೋರ್ ಇಬ್ಬರು ಬಾಲಕರನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ನಟ ಪ್ರಭುದೇವ

     

    ಪುತ್ರರ ಶೈಕ್ಷಣಿಕ ಸಾಧನೆಯಿಂದ ಚಂದ್ರಶೇಖರ್‌ ನಿರಾಶೆಗೊಂಡಿದ್ದರು. ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡದಿದ್ದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದೆ ಕಷ್ಟವಾಗಲಿದೆ ಎಂದು ಭಾವಿಸಿ ಮಕ್ಕಳನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ವಿಧಿವಿಜ್ಞಾನ ತಂಡ ಮನೆಗೆ ಆಗಮಿಸಿ ಪರಿಶೀಲಿಸಿದೆ. ಈ ಘಟನೆಗೆ ನಿಖರವಾದ ಕಾರಣಗಳನ್ನು ಪತ್ತೆ ಹಚ್ಚಲು  ತನಿಖೆ ಆರಂಭವಾಗಿದೆ.

    ಕಿಶೋರ್ ಅವರ ಪತ್ನಿಯ ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಪತಿ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ ಮಕ್ಕಳು ಬಕೆಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

     

  • 3ನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಬಂಪರ್‌ – ಹೆಣ್ಣು ಜನಿಸಿದ್ರೆ 50,000 ರೂ., ಗಂಡು ಜನಿಸಿದ್ರೆ ಹಸು ಗಿಫ್ಟ್‌!

    3ನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಬಂಪರ್‌ – ಹೆಣ್ಣು ಜನಿಸಿದ್ರೆ 50,000 ರೂ., ಗಂಡು ಜನಿಸಿದ್ರೆ ಹಸು ಗಿಫ್ಟ್‌!

    ಅಮರಾವತಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Womens Day) ಕಾರ್ಯಕ್ರಮದ ವೇಳೆ ತೆಲುಗು ದೇಶಂ ಪಕ್ಷ (TDP)ದ ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಅವರು, 3ನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಬಂಪರ್‌ ಕೊಡುಗೆ ಘೋಷಣೆ ಮಾಡಿದ್ದಾರೆ. ಇದು ಆಂಧ್ರಪ್ರದೇಶದಲ್ಲಿ (Andhra Pradesh) ಭಾರೀ ಸಂಚಲನ ಸೃಷ್ಟಿಸಿದೆ.

    ಪ್ರಕಾಶಂ ಜಿಲ್ಲೆಯ ಮಾರ್ಕಾಪುರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, ಮಹಿಳೆಯೊಬ್ಬರು 3ನೇ ಮಗುವಿಗೆ ಜನ್ಮ ನೀಡಿದ್ರೆ ವಿಶೇಷ ಉಡುಗೊರೆ ನೀಡಲಾಗುವುದು. ಹೆಣ್ಣು ಮಗುವಿಗೆ ಜನ್ಮ ನೀಡಿದ್ರೆ ನನ್ನ ಸ್ವಂತ ವೇತನದಲ್ಲಿ 50,000 ರೂ., ಗಂಡು ಮಗುವಿಗೆ ಜನ್ಮ ನೀಡಿದ್ರೆ 1 ಹಸುವನ್ನು ಉಡಗೊರೆಯಾಗಿ ಕೊಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಸಂಸದರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: Champions Trophy Final: ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳಿಂದ ದೇವರಿಗೆ ವಿಶೇಷ ಪೂಜೆ

    ಜನಸಂಖ್ಯೆ ಬೆಳವಣಿಗೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕರೆಗಳ ಮೇರೆಗೆ ಈ ವಿಶೇಷ ಉಡುಗೊರೆಗಳನ್ನು ಘೋಷಣೆ ಮಾಡಲಾಗಿದೆ. ಮಹಿಳೆಯರು ಹೆಚ್ಚು ಮಕ್ಕಳನ್ನು ಹೊಂದಬೇಕೆಂದು ಹೇಳುತ್ತಿದ್ದೇವೆ. ಹೀಗಾಗಿ 3ನೇ ಮಗು ಜನಿಸಿದ್ರೆ ಪ್ರೋತ್ಸಾಹ ಧನ ನೀಡಲು ಮುಂದಾಗಿದ್ದೇವೆ ಸಂಸದ ಅಪ್ಪಲನಾಯ್ಡು ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆ ಚಂದ್ರಬಾಬು ನಾಯ್ಡು ಅವರು, ಮಹಿಳೆಯರು ಸಂಖ್ಯೆಯನ್ನು ಲೆಕ್ಕಿಸದೇ ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳಿ. ಅದಕ್ಕಾಗಿ ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ಹೆರಿಗೆ ರಜೆ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ ಅವರು ಸಹ 2026ರ ಒಳಗೆ ಮಹಿಳೆಯರು ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳುವಂತೆ ಕರೆ ನೀಡಿದ್ದರು. ಇದನ್ನೂ ಓದಿ: ‘ಹುಡುಗರು’ ಚಿತ್ರದಲ್ಲಿ ಅಪ್ಪು ತಂಗಿ ಪಾತ್ರ ಮಾಡಿದ್ದ ಅಭಿನಯಗೆ ಮದುವೆ ಫಿಕ್ಸ್

  • ಬಜೆಟ್‌ ಮಂಡನೆ ವೇಳೆ ನಿರ್ಮಲಾ ಉಲ್ಲೇಖಿಸಿದ ಕವಿತೆ ಬರೆದ ಗುರಜದ ವೆಂಕಟ ಅಪ್ಪರಾವ್ ಯಾರು ಗೊತ್ತಾ?

    ಬಜೆಟ್‌ ಮಂಡನೆ ವೇಳೆ ನಿರ್ಮಲಾ ಉಲ್ಲೇಖಿಸಿದ ಕವಿತೆ ಬರೆದ ಗುರಜದ ವೆಂಕಟ ಅಪ್ಪರಾವ್ ಯಾರು ಗೊತ್ತಾ?

    ನವದೆಹಲಿ: ಬಜೆಟ್‌ ಮಂಡನೆ (Budget 2025) ವೇಳೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ತೆಲುಗು ಕವಿ ಮತ್ತು ನಾಟಕಕಾರ ಗುರಜದ ವೆಂಕಟ ಅಪ್ಪರಾವ್ (Gurajada Venkata Apparao) ಅವರನ್ನು ಸ್ಮರಿಸಿದ್ದಾರೆ.

    ಅಪ್ಪರಾವ್‌ ಅವರ ʻದೇಶವೆಂದರೆ ಅದರ ಮಣ್ಣು ಮಾತ್ರವಲ್ಲ, ದೇಶವೆಂದರೆ ಅದರ ಜನರುʼ (ದೇಶಮಂತೆ ಮತ್ತಿ ಕಾಡೋಯಿ, ದೇಶಮಂತೆ ಮನುಷ್ಯೋಯಿ) ಸಾಲನ್ನು ಬಳಸಿ ಮಾತಾಡಿದ್ದಾರೆ. ಈ ಮಾತಿನಂತೆ ನಮ್ಮದು ಜನರ ಬಜೆಟ್‌ ಆಗಿದೆ. ವಿಕ್ಷಿತ್ ಭಾರತವೂ ಶೂನ್ಯ ಬಡತನ, ಉತ್ತಮ ಶಾಲಾ ಶಿಕ್ಷಣ, ಉತ್ತಮ ಸಮಗ್ರ ಆರೋಗ್ಯ ಸೇವೆ, 100% ಕೌಶಲ್ಯಪೂರ್ಣ ಕಾರ್ಮಿಕರು, ಉದ್ಯೋಗ, ಆರ್ಥಿಕ ಚಟುವಟಿಕೆಗಳಲ್ಲಿ 70% ಮಹಿಳೆಯರು ಮತ್ತು ರೈತರನ್ನು ಒಳಗೊಂಡಿದೆ. ಅವರೆಲ್ಲ ನಮ್ಮ ದೇಶವನ್ನು ವಿಶ್ವದ ಆಹಾರದ ಬುಟ್ಟಿಯನ್ನಾಗಿ ಮಾಡುತ್ತಿದ್ದಾರೆ.

    ಗುರಜದ ಅಪ್ಪರಾವ್ (1861-1915) ಅವರು ತೆಲುಗು ಭಾಷೆಯಲ್ಲಿ ತಮ್ಮ ನಾಟಕಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ನಾಟಕಗಳಲ್ಲಿ ವಿಶೇಷವಾಗಿ ಕನ್ಯಾಸುಲ್ಕಂ ಮತ್ತು ದೇಸಮುನು ಪ್ರೇಮಿಂಚುಮನ್ನಾ ಬಹಳ ಪ್ರಮುಖವಾಗಿವೆ.

    ಆಂಧ್ರಪ್ರದೇಶದ (Andhra Prades) ಇಂದಿನ ಎಲಮಂಚಿಲಿಯಲ್ಲಿ ಜನಿಸಿದ ಅಪ್ಪರಾವ್ ವಿಜಯನಗರದ ಮಹಾರಾಜ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಬಳಿಕ ಅದೇ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.

    ನಾಟಕಗಳು, ಸಣ್ಣ ಕಥೆಗಳು ಮತ್ತು ಕಾವ್ಯಗಳನ್ನು ಅವರು ಬರೆದಿದ್ದಾರೆ. ತೆಲುಗು ಭಾಷಿಕರ ಮತ್ತು ಕಳಿಂಗ (ಒಡಿಶಾ) ಭೂಮಿಯ ಇತಿಹಾಸವನ್ನು ಸಂಶೋಧಿಸಿ ಅದರ ಇತಿಹಾಸವನ್ನು ಬರೆಯಲು ಅವರು ಯೋಜಿಸಿದ್ದರು. ಅವರು 1915 ರಲ್ಲಿ ನಿಧನರಾದರು.

    ನಿರ್ಮಲಾ ಅವರ 8ನೇ ಬಜೆಟ್‌ನಲ್ಲಿ MSME ವಲಯ, ಮಹಿಳೆಯರು, ರೈತರು, ಶಿಕ್ಷಣ ವಲಯ ಮತ್ತು ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ರಿಯಾಯಿತಿಗಳನ್ನು ಘೋಷಿಸಲಾಗಿದೆ.

  • ಕ್ಲಾಸ್‌ ನಡೆಯುತ್ತಿದ್ದಾಗಲೇ ತರಗತಿಯಿಂದ ಹೊರಬಂದು ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

    ಕ್ಲಾಸ್‌ ನಡೆಯುತ್ತಿದ್ದಾಗಲೇ ತರಗತಿಯಿಂದ ಹೊರಬಂದು ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

    ಅಮರಾವತಿ: ಕ್ಲಾಸ್‌ ನಡೆಯುತ್ತಿದ್ದಾಗಲೇ ತರಗತಿಯಿಂದ ಹೊರನಡೆದು ಮೂರನೇ ಮಹಡಿಯಿಂದ ಜಿಗಿದು 16 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಅನಂತಪುರದ ನಾರಾಯಣ ಕಾಲೇಜಿನ ವಿದ್ಯಾರ್ಥಿ ಬೆಳಗ್ಗೆ 10:15 ಕ್ಕೆ ತನ್ನ ಚಪ್ಪಲಿಗಳನ್ನು ತೆಗೆದು ತರಗತಿಯಿಂದ ಹೊರಬಂದ. ನೇರವಾಗಿ ಕಟ್ಟೆಯ ಬಳಿಗೆ ನಡೆದು, ಅದನ್ನು ಹತ್ತಿ ಹಠಾತ್‌ ಜಿಗಿದಿದ್ದಾನೆ.

    ತರಗತಿ ನಡೆಯುತ್ತಿರುವಾಗ ಹುಡುಗ ಕೊಠಡಿಯಿಂದ ಹೊರಹೋಗುವುದನ್ನು ವೀಡಿಯೋದಲ್ಲಿ ಕಾಣಬಹುದು. ಅವನು ಜಿಗಿದ ನಂತರ, ಸಹಪಾಠಿಗಳು ಏನಾಯಿತು ಎಂದು ನೋಡಲು ಕೋಣೆಯಿಂದ ಹೊರಗೆ ಓಡಿ ಬಂದಿದ್ದಾರೆ.

    ಗುರುವಾರ ಬೆಳಗ್ಗೆ ರಜೆಯ ನಂತರ ಬಾಲಕ ಕಾಲೇಜಿಗೆ ಮರಳಿದ್ದ ಎಂದು ಪೊಲೀಸ್ ಅಧಿಕಾರಿ ಟಿ ವೆಂಕಟೇಶುಲು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

    ಈ ಕುರಿತು ಮೃತ ಬಾಲಕನ ತಂದೆ ಪ್ರತಿಕ್ರಿಯೆ ನೀಡಿದ್ದು, ಶುಲ್ಕ ಪಾವತಿಸದ ಬಗ್ಗೆ ಕಾಲೇಜಿನವರು ನನ್ನ ಮಗನನ್ನು ಕೇಳಿದ್ದಾರೆ ಅನಿಸುತ್ತೆ. ನಿಖರವಾಗಿ ಏನಾಯಿತು ಎಂದು ನನಗೂ ಖಚಿತವಿಲ್ಲ ಎಂದು ದುಃಖಿಸಿದ್ದಾರೆ. ಆದರೆ, ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಶ್ರೀಹರಿಕೋಟಾದಲ್ಲಿ 3ನೇ ಉಡಾವಣಾ ಕೇಂದ್ರ ಸ್ಥಾಪನೆಗೆ ಸಂಪುಟ ಅಸ್ತು

    ಶ್ರೀಹರಿಕೋಟಾದಲ್ಲಿ 3ನೇ ಉಡಾವಣಾ ಕೇಂದ್ರ ಸ್ಥಾಪನೆಗೆ ಸಂಪುಟ ಅಸ್ತು

    ಅಮರಾವತಿ: ಆಂಧ್ರಪ್ರಧೇಶದ (Andhra Pradesh) ಸತೀಶ್ ಧವನ್ (Satish Dhawan Space Centre) ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಕೇಂದ್ರದ ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

    ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು, ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಕೇಂದ್ರದ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದೆ. ಈ ಉಡಾವಣಾ ಕೇಂದ್ರ ಇಸ್ರೋದ ಎನ್‌ಜಿಎಲ್‌ವಿ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.ಇದನ್ನೂ ಓದಿ: Chhattisgarh| ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ- 12 ಮಾವೋವಾದಿಗಳು ಬಲಿ

    ಈ ಮೂಲಕ ಮೂರನೇ ಉಡಾವಣಾ ಕೇಂದ್ರವು ಭಾರತೀಯ ಅಂತರಿಕ್ಷ ನಿಲ್ದಾಣ ಸ್ಥಾಪನೆಗೆ ಹಾಗೂ 2024ರ ವೇಳೆಗೆ ಮಾನವನನ್ನು ಚಂದ್ರನ ಬಳಿ ಕಳುಹಿಸುವ ಯೋಜನೆಗೆ ಇದು ಸಹಕಾರಿಯಾಗಲಿದೆ. ಉಡಾವಣಾ ಕೇಂದ್ರವನ್ನು 4 ವರ್ಷಗಳ ಅವಧಿಯಲ್ಲಿ 3,984.86 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ನಿರೀಕ್ಷೆಯಿದ್ದು, ಇದು ಉಡಾವಣಾ ಕೇಂದ್ರದ ಸ್ಥಾಪನೆ ಮತ್ತು ವಾಹನ ಜೋಡಣೆ, ಉಪಗ್ರಹ ತಯಾರಿಕೆ ಮತ್ತು ಇಂಧನ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

    ಸದ್ಯ ಬಾಹ್ಯಾಕಾಶ ಕೇಂದ್ರದಲ್ಲಿ ಎರಡು ಉಡಾವಣಾ ಕೇಂದ್ರಗಳಿದ್ದು, ಪಿಎಸ್‌ಎಲ್‌ವಿ, ಎಸ್‌ಎಸ್‌ಎಲ್‌ವಿ ರಾಕೆಟ್‌ಗಳ ಉಡಾವಣೆಗಾಗಿ 30 ವರ್ಷಗಳ ಹಿಂದೆ ಮೊದಲ ಉಡಾವಣಾ ಕೇಂದ್ರವನ್ನು ಸ್ಥಾಪಿಸಲಾಯಿತು. ಅದಾದ 20 ವರ್ಷಗಳ ಬಳಿಕ ಎರಡನೇ ಉಡಾವಣಾ ಕೇಂದ್ರವನ್ನು ಸ್ಥಾಪಿಸಲಾಯಿತು. ಇದು ಜಿಎಸ್‌ಎಲ್‌ವಿ ಹಾಗೂ ಎಲ್‌ವಿಎಮ್3 ರಾಕೆಟ್‌ಗಳ ಉಡಾವಣೆಗಾಗಿ ಬಳಸಲಾಗುತ್ತದೆ.

    ಇದೀಗ ಹೊಸ ಉಡಾವಣಾ ಕೇಂದ್ರವು, 2ನೇ ಉಡಾವಣಾ ಕೇಂದ್ರದ ಬ್ಯಾಕಪ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರವಾದ ರಾಕೆಟ್ ಉಡಾವಣೆಗಾಗಿ ಬಳಸಬಹುದಾಗಿದೆ.ಇದನ್ನೂ ಓದಿ:ನ್ಯೂಕ್ಲಿಯರ್ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು- ಉಪರಾಷ್ಟ್ರಪತಿ ಜಗದೀಪ್ ಧನಕರ್

     

  • 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಮಾತ್ರ ಸ್ಥಳೀಯ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ: ಚಂದ್ರಬಾಬು ನಾಯ್ಡು

    2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಮಾತ್ರ ಸ್ಥಳೀಯ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ: ಚಂದ್ರಬಾಬು ನಾಯ್ಡು

    ಅಮರಾವತಿ: ಇನ್ನುಮುಂದೆ 2ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ ನೀಡುವುದಾಗಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಘೋಷಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಳ ವಿಚಾರ ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಮೊನ್ನೆಯಷ್ಟೇ ಮಧ್ಯಪ್ರದೇಶದ ನಿಗಮವೊಂದು ನಾಲ್ಕು ಮಕ್ಕಳನ್ನು ಹೆತ್ತರೇ 1 ಲಕ್ಷ ನಗದು ಬಹುಮಾನ ಘೋಷಿಸಿತ್ತು. ಈ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಈ ಹೇಳಿಕೆ ನೀಡಿದ್ದಾರೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿಲ್ಲದವರು ಸರಪಂಚ್ ಆಗಲು ಸಾಧ್ಯವಿಲ್ಲ. ಪುರಸಭೆ ಕೌನ್ಸಿಲರ್, ಪಾಲಿಕೆ ಮೇಯರ್ ಆಗಲು ಸಾಧ್ಯವಿಲ್ಲ ಎಂದು ನಾಯ್ಡು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕ ಜಂಗಲ್ ರಾಜ್ಯ ಆಗಿದೆ – ಬೀದರ್ ಗುಂಡಿನ ದಾಳಿಗೆ ಬೊಮ್ಮಾಯಿ ದಿಗ್ಭ್ರಮೆ

    ಹಳೆ ತಲೆಮಾರಿನವರು ಹೆಚ್ಚೆಚ್ಚು ಮಕ್ಕಳನ್ನು ಹೊಂದಿರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನೀವು ಒಂದು ಮಗುವನ್ನು ಮಾತ್ರ ಪಡೆಯುತ್ತಿದ್ದೀರಿ. ನಿಮ್ಮ ಪೋಷಕರು ನಿಮ್ಮಂತೆಯೇ ಯೋಚಿಸಿದ್ದರೆ ಈ ಜಗತ್ತಿಗೆ ನೀವು ಬರುತ್ತಿರಲಿಲ್ಲ. ಹೀಗೆ ಮಾಡದೇ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ಬಗ್ಗೆ ಗಮನ ಕೊಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 2ನೇ ಹೆಂಡ್ತಿ ಬಿಟ್ಟು ತನ್ನ ಬಳಿಯೇ ಇರುವಂತೆ ಒತ್ತಾಯ – ಮೊದಲ ಹೆಂಡ್ತಿಯನ್ನೇ ಹತ್ಯೆಗೈದ ಗಂಡ

    ರಾಜ್ಯದಲ್ಲಿ ನವದಂಪತಿಗಳು ಹೆಚ್ಚು ಮಕ್ಕಳನ್ನು ಹೊಂದುವಂತೆ ಮಾಡಲು ಹೊಸ ಪ್ರೋತ್ಸಾಹಕ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನಸಂಖ್ಯೆ ಹೆಚ್ಚಳಕ್ಕೆ ರಷ್ಯಾದಲ್ಲಿ ʻಸೆಕ್ಸ್‌ ಸಚಿವಾಲಯʼ ಸ್ಥಾಪನೆಗೆ ಪ್ಲ್ಯಾನ್‌ – ಭಾರತದಲ್ಲಿ ಏನಾಗ್ತಿದೆ?

  • ತಿರುಪತಿ ಲಡ್ಡು ಕೇಂದ್ರದಲ್ಲಿ ಅಗ್ನಿ ಅವಘಡ – ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ತಿರುಪತಿ ಲಡ್ಡು ಕೇಂದ್ರದಲ್ಲಿ ಅಗ್ನಿ ಅವಘಡ – ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ತಿರುಪತಿ: ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ (Tirupati Temple) ಲಡ್ಡು ಕೌಂಟರ್‌ನಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದೆ.

    ದೇವಾಲಯದ 47ನೇ ಲಡ್ಡು ಕೌಂಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ದೇವಾಲಯದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದ ಭಾರೀ ಅನಾಹುತ ತಪ್ಪಿದೆ.

    ದೇವಾಲಯದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಇತರ ಭಾಗಗಳಿಗೆ ಬೆಂಕಿ ಹರಡುವುದು ತಪ್ಪಿದಂತಾಗಿದೆ.

    ಜ. 8ರಂದು ತಿರುಪತಿಯಲ್ಲಿ ಸಾವಿರಾರು ಭಕ್ತರು ವೈಕುಂಠ ದ್ವಾರ ದರ್ಶನಕ್ಕಾಗಿ ಟಿಕೆಟ್‌ಗಾಗಿ ಮುಗಿಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು. ಇದರಿಂದ ಸುಮಾರು 6 ಜನ ಸಾವನ್ನಪ್ಪಿದ್ದರು. ತಿರುಪತಿಯ ವಿಷ್ಣು ನಿವಾಸದ ಬಳಿ ಇರುವ ತಿರುಮಲ ಶ್ರೀವಾರಿ ವೈಕುಂಠ ದ್ವಾರದಲ್ಲಿ ಬುಧವಾರ ರಾತ್ರಿ ಈ ಅವಘಡ ಸಂಭವಿಸಿತ್ತು. ಇದಾದ ಕೆಲವೇ ದಿನಗಳ ಅಂತರದಲ್ಲಿ ಅಗ್ನಿಅವಘಡ ಸಂಭವಿಸಿದೆ.

  • ರೆಸ್ಟೋರೆಂಟ್ ಮಾಲೀಕನ ಪುತ್ರ, ಸಿಬ್ಬಂದಿಯಿಂದ ಹಲ್ಲೆ – ನ್ಯೂ ಇಯರ್‌ಗೆ ಗೋವಾಗೆ ತೆರಳಿದ್ದ ಆಂಧ್ರದ ಯುವಕ ಸಾವು

    ರೆಸ್ಟೋರೆಂಟ್ ಮಾಲೀಕನ ಪುತ್ರ, ಸಿಬ್ಬಂದಿಯಿಂದ ಹಲ್ಲೆ – ನ್ಯೂ ಇಯರ್‌ಗೆ ಗೋವಾಗೆ ತೆರಳಿದ್ದ ಆಂಧ್ರದ ಯುವಕ ಸಾವು

    – ಯುವತಿಯ ವಿಚಾರವಾಗಿ ಶುರುವಾದ ಜಗಳ ಸಾವಿನಲ್ಲಿ ಅಂತ್ಯ

    ಅಮರಾವತಿ: ನ್ಯೂ ಇಯರ್ ಪಾರ್ಟಿಗೆಂದು (New Year Party) ಗೋವಾಗೆ (Goa) ತೆರಳಿದ್ದ ಆಂಧ್ರ (Andhra Pradesh) ಮೂಲದ ಯುವಕನಿಗೆ ರೆಸ್ಟೋರೆಂಟ್ ಮಾಲೀಕನ ಪುತ್ರ ಹಾಗೂ ಸಿಬ್ಬಂದಿ ಹಲ್ಲೆ ನಡೆಸಿದ ಪರಿಣಾಮ ಚಿಕಿತ್ಸೆ ಫಲಿಸದೇ ಯುವಕ ಸಾವನ್ನಪ್ಪಿದ್ದಾನೆ.

    ರವಿತೇಜ ಮೃತ ಯುವಕ. ರವಿತೇಜ ಸೇರಿದಂತೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೆಪಲ್ಲಿಗುಡೆಮ್‌ನ ಸ್ನೇಹಿತರ ಗುಂಪು ಹೊಸ ವರ್ಷದ ಸಂಭ್ರಮಾಚಾರಣೆಯ ಸಲುವಾಗಿ ಗೋವಾಗೆ ತೆರಳಿತ್ತು. ಸ್ನೇಹಿತರ ಗುಂಪಿನಲ್ಲಿದ್ದ ಮಹಿಳೆಯೊಬ್ಬರ ಜೊತೆ ರೆಸ್ಟೋರೆಂಟ್ ಮಾಲೀಕನ ಪುತ್ರ ಅನುಚಿತವಾಗಿ ವರ್ತಿಸಿದ್ದನ್ನು ರವಿತೇಜ ಪ್ರಶ್ನಿಸಿದ್ದಾನೆ. ಈ ವೇಳೆ ಜಗಳ ಶುರುವಾಗಿದೆ. ಬಳಿಕ ಜಗಳ ತಾರಕಕ್ಕೇರಿ ರೆಸ್ಟೋರೆಂಟ್ ಮಾಲೀಕನ ಪುತ್ರ ಹಾಗೂ ಸಿಬ್ಬಂದಿ ರವಿತೇಜನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ರವಿತೇಜಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರವಿತೇಜ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್‌ನ ಪಾಪದ ಕೊಡ ತುಂಬಿದೆ, ದೇವರೇ ಶಿಕ್ಷೆ ಕೊಡ್ತಾನೆ: ಕುಮಾರಸ್ವಾಮಿ

    ಘಟನೆಯ ಬಳಿಕ ತಾಡೆಪಲ್ಲಿಗುಡೆಂ ಶಾಸಕ ಬೋಳಿಸೆಟ್ಟಿ ಶ್ರೀನಿವಾಸ್ ಗೋವಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬಳಿಕ ವಿಶೇಷ ವಿಮಾನದ ಮೂಲಕ ಮೃತದೇಹವನ್ನು ಹುಟ್ಟೂರಿಗೆ ಸಾಗಿಸಲು ಅನುಕೂಲ ಮಾಡಿಕೊಟ್ಟರು. ತಾಡೆಪಲ್ಲಿಗುಡೆಂನಲ್ಲಿ ರವಿತೇಜ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ.  ಇದನ್ನೂ ಓದಿ: ಡಿಕೆಶಿಗೂ ಶಾಕ್, ಪವರ್ ಶೇರ್ ಕುತೂಹಲಿಗಳಿಗೂ ಶಾಕ್ – ಸಿಎಂ ಡಿನ್ನರ್‌ ಸಭೆ ಇನ್‌ಸೈಡ್‌ ಸ್ಟೋರಿ

  • ಏನಿದು ಪೋಲಾವರಂ ಯೋಜನೆ? ಒಡಿಶಾದಲ್ಲಿ ವಿರೋಧ ಯಾಕೆ?

    ಏನಿದು ಪೋಲಾವರಂ ಯೋಜನೆ? ಒಡಿಶಾದಲ್ಲಿ ವಿರೋಧ ಯಾಕೆ?

    ಪೋಲಾವರಂ ಯೋಜನೆಯು (Polavaram Dam Project) ಆಂಧ್ರಪ್ರದೇಶದ (Andhra Pradesh) ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಗೋದಾವರಿ ನದಿಗೆ ನಿರ್ಮಿಸಲಾಗುತ್ತಿರುವ ಬಹುಪಯೋಗಿ ನೀರಾವರಿ ಯೋಜನೆಯಾಗಿದೆ. ಈ ಯೋಜನೆಯು ಗೋದಾವರಿ ನದಿಯ ಮೇಲಿನ ಅಂತರರಾಜ್ಯ ಯೋಜನೆಯಾಗಿದ್ದು, ಇದನ್ನು 1980 ರಲ್ಲಿ ಗೋದಾವರಿ ಜಲ ವಿವಾದಗಳ ನ್ಯಾಯಮಂಡಳಿಯ (GWDT) ಶಿಫಾರಸುಗಳ ಭಾಗವಾಗಿ ನಿರ್ಮಿಸಲಾಗುತ್ತಿದೆ. 

    1980ರ ಏ.2 ರಂದು, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳು 36 ಲಕ್ಷ ಕ್ಯುಸೆಕ್‌ ಸಾಮರ್ಥ್ಯದ 150 ಅಡಿ ಜಲಾಶಯ ನಿರ್ಮಾಣದ ಈ ಯೋಜನೆಗೆ ಒಪ್ಪಂದ ಮಾಡಿಕೊಂಡಿವೆ. ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ (ಈಗ ಛತ್ತೀಸ್‌ಗಢವೂ ಸೇರಿಕೊಂಡಿದೆ) ರಾಜ್ಯಗಳ ನಡುವೆ ಗೋದಾವರಿ ನದಿ ನೀರಿಗೆ ಸಂಬಂಧಿಸಿದ ನೀರು ಹಂಚಿಕೆ ವಿವಾದಗಳನ್ನು ಪರಿಹರಿಸಲು ಗೋದಾವರಿ ಜಲ ವಿವಾದಗಳ ನ್ಯಾಯಮಂಡಳಿ (GWDT) ಸ್ಥಾಪಿಸಲಾಯಿತು. ಗೋದಾವರಿ ನದಿ ನೀರಿನ ಬಳಕೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣವು ಆಂಧ್ರಪ್ರದೇಶಕ್ಕೆ 80 ಟಿಎಂಸಿ ಗೋದಾವರಿ ನೀರನ್ನು ನೀರಾವರಿ ಮತ್ತು ಇತರ ಬಳಕೆಗೆ 75% ತಿರುಗಿಸಲು ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ ಒಪ್ಪಂದ ಅಡಿಯಲ್ಲಿ ಎಲ್ಲಾ ರಾಜ್ಯಗಳ ನಡುವೆ ಸಮಾನ ನೀರಿನ ಹಂಚಿಕೆಯನ್ನು ಖಚಿತಪಡಿಸುತ್ತದೆ.

    ಈಗ ಏಕೆ ಇದು ಸುದ್ದಿಯಲ್ಲಿದೆ? 

    2027ರ ಒಳಗೆ ಪೋಲಾವರಂ ಯೋಜನೆ ಪೂರ್ಣಗೊಳಿಸುವುದಾಗಿ ಆಂದ್ರಪ್ರದೇಶದ ಸರ್ಕಾರ ಘೋಷಿಸಿದೆ. ಇದರ ಬೆನ್ನಲ್ಲೇ, ಒಡಿಶಾದ (Odisha) ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ಆಂಧ್ರಪ್ರದೇಶದ ಪೋಲಾವರಂ ವಿವಿಧೋದ್ದೇಶ ಯೋಜನೆಯನ್ನು ವಿರೋಧಿಸಿದೆ. ಈ ಯೋಜನೆಯು ಒಡಿಶಾದ ಮಲ್ಕನ್‌ಗಿರಿಯಲ್ಲಿ ಬುಡಕಟ್ಟು ಜನಾಂಗದವರು ವಾಸಿಸುವ ಹೆಚ್ಚಿನ ಭೂಮಿ ಮುಳುಗಡೆಗೆ ಕಾರಣವಾಗುತ್ತದೆ ಎಂದು ಬಿಜೆಡೆ ಆರೋಪಿಸಿದೆ.

    ಪೋಲಾವರಂ ಯೋಜನೆಯ ಪರಿಣಾಮಗಳೇನು? 

    ಸಾಮಾಜಿಕ ಪರಿಣಾಮ: ಈ ಯೋಜನೆಯು ಸರಿಸುಮಾರು 276 ಹಳ್ಳಿಗಳಾದ್ಯಂತ 150,000 ಜನರನ್ನು ಸ್ಥಳಾಂತರಿಸುವ ನಿರೀಕ್ಷೆಯಿದೆ. ಇವುಗಳಲ್ಲಿ ಹೆಚ್ಚಿನವು ಬುಡಕಟ್ಟು ಸಮುದಾಯಗಳಾಗಿವೆ. ಪ್ರತಿ ಐದು ಎಕರೆ ನೀರಾವರಿಗೆ, ಒಂದು ಬುಡಕಟ್ಟು ಕುಟುಂಬವು ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

    ಮೂಲಸೌಕರ್ಯದ ಒತ್ತಡ: ಯೋಜನೆಯು ಪುನರ್ವಸತಿ ಪ್ರಯತ್ನಗಳಿಗೆ ಹಣಕಾಸಿನ ಸವಾಲುಗಳನ್ನು ಎದುರಿಸಲಿದೆ. ಇದು ಸ್ಥಳಾಂತರಗೊಂಡ ಜನರ ಮೇಲೆ ತೀವ್ರ ಪರಿಣಾಮ ಬೀರಬಹುದು. ಇದು ಕಾಲುವೆಗಳಂತಹ ಅಗತ್ಯ ಮೂಲಸೌಕರ್ಯಗಳ ಕೆಲಸವನ್ನು ಸ್ಥಗಿತಗೊಳಿಸುವುದಕ್ಕೆ ಕಾರಣವಾಗುತ್ತದೆ. 

    ಪರಿಸರದ ಮೇಲಿನ ಪ್ರಭಾವ: ಅಣೆಕಟ್ಟಿನ ಹಿನ್ನೀರು ಅಂದಾಜು 3,731 ಹೆಕ್ಟೇರ್ ಅರಣ್ಯ ಭೂಮಿಯನ್ನು ಮುಳುಗಿಸುತ್ತದೆ. ಇದರಿಂದ ಭೂಕುಸಿತ ಸಂಭವಿಸುವ ಆತಂಕವಿದೆ. 

    ಪೋಲವರಂ ಯೋಜನೆಯ ಮುಖ್ಯಂಶಗಳು 

    ಈ ಯೋಜನೆಗೆ ಭಾರತದ ಕೇಂದ್ರ ಸರ್ಕಾರವು ರಾಷ್ಟ್ರೀಯ ಯೋಜನಾ ಸ್ಥಾನಮಾನವನ್ನು ನೀಡಿದೆ. ಇದು 55,000 ಕೋಟಿ ರೂ. ಯೋಜನೆಯಾಗಿದೆ. ಕೇಂದ್ರ ಸರ್ಕಾರದಿಂದ ಈ ಯೋಜನೆಗೆ 12,157 ಕೋಟಿ ರೂ. ಅನುದಾನ ಘೋಷಣೆಯಾಗಿದೆ. ಈಗಾಗಲೇ, 2,900 ಕೋಟಿ ರೂ. ಬಿಡುಗಡೆಯಾಗಿದೆ. ಪೋಲವರಂ ಯೋಜನೆಯಿಂದ 4.3 ಲಕ್ಷ ಹೆಕ್ಷರ್‌ಗೆ ನೀರಾವರಿ ಸೌಲಭ್ಯ ಸಿಗಲಿದೆ. 611 ಹಳ್ಳಿಗಳಿಗೆ ಕುಡಿಯುವ ನೀರು, 960 ಮೆ.ವ್ಯಾ ವಿದ್ಯುತ್‌ ಉತ್ಪಾದನೆ ಮಾಡುವ ಗುರಿ ಈ ಯೋಜನೆಯದ್ದಾಗಿದೆ. 

    BJD ಎತ್ತಿರುವ ಕಳವಳಗಳೇನು?

    ಡ್ಯಾಮ್ ಸಾಮರ್ಥ್ಯವನ್ನು 36 ಲಕ್ಷ ಕ್ಯುಸೆಕ್‌ನಿಂದ 50 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಬಿಜೆಡಿ ಆರೋಪಿಸಿದೆ. ಒಡಿಶಾ ಮತ್ತು ಛತ್ತೀಸ್‌ಗಢದ (ಹಿಂದಿನ ಮಧ್ಯಪ್ರದೇಶದ ಭಾಗ) ಮೇಲಿನ ಹಿನ್ನೀರಿನ ಪ್ರಭಾವವನ್ನು ಸಾಕಷ್ಟು ಪರಿಗಣಿಸದೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಜೆಡೆ ಆರೋಪಿಸಿದೆ. 

    ಮುಳುಗಡೆ ಮಟ್ಟವನ್ನು ಮಿತಿಗೊಳಿಸಲು ಮೊದಲೇ ಹೇಳಿದಂತೆ ಡ್ಯಾಮ್‌ನ ಎತ್ತರ 150 ಅಡಿ ಇರಬೇಕು. ಯೋಜನೆಯ ವಿನ್ಯಾಸದಲ್ಲಿನ ಬದಲಾವಣೆಯು ಒಡಿಶಾದಲ್ಲಿ ಗರಿಷ್ಠ ಹಿನ್ನೀರಿನ ಮಟ್ಟವನ್ನು 174.22 ಅಡಿಗಳಿಗೆ ಹೆಚ್ಚಿಸುತ್ತದೆ ಎಂದು BJD ಹೇಳಿಕೊಂಡಿದೆ. 

    ಇದು ತಮ್ಮ ಭೂಮಿ ಮತ್ತು ಮನೆಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿರುವ ಮಲ್ಕಾನ್‌ಗಿರಿಯ ಜನಸಂಖ್ಯೆಯ ಮೇಲೆ ಪರಿಣಾಮ ಬೀರಬಹುದು. ಯೋಜನೆಯಿಂದಾಗಿ ಮಲ್ಕನಗಿರಿಯ ಸುಮಾರು 162 ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆಯಿದೆ ಎಂದು ಬಿಜೆಡೆ ಕಳವಳ ವ್ಯಕ್ತಪಡಿಸಿದೆ.

  • ಮನೆಗೆ ಬಂದ ಪಾರ್ಸೆಲ್‌ನಲ್ಲಿತ್ತು ವ್ಯಕ್ತಿಯ ಮೃತದೇಹ – ಬಾಕ್ಸ್‌ ಓಪನ್‌ ಮಾಡಿ ಮಹಿಳೆ ಶಾಕ್‌!

    ಮನೆಗೆ ಬಂದ ಪಾರ್ಸೆಲ್‌ನಲ್ಲಿತ್ತು ವ್ಯಕ್ತಿಯ ಮೃತದೇಹ – ಬಾಕ್ಸ್‌ ಓಪನ್‌ ಮಾಡಿ ಮಹಿಳೆ ಶಾಕ್‌!

    ಅಮರಾವತಿ: ಮನೆಗೆ ಬಂದ ಪಾರ್ಸೆಲ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಕಂಡು ಮಹಿಳೆ ಶಾಕ್‌ ಆಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಜಿಲ್ಲೆಯ ಉಂಡಿ ಮಂಡಲದ ಯಂಡಗಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಾರ್ಸೆಲ್‌ನಲ್ಲಿ ಮೃತದೇಹದ ಜೊತೆಗೆ ಒಂದು ಪತ್ರ ಕೂಡ ಇತ್ತು. ನಾಗ ತುಳಸಿ ಎಂದು ಗುರುತಿಸಲಾದ ಮಹಿಳೆ ತನ್ನ ಮನೆ ನಿರ್ಮಿಸಲು ಹಣಕಾಸಿನ ನೆರವು ಕೋರಿ ಕ್ಷತ್ರಿಯ ಸೇವಾ ಸಮಿತಿಗೆ ತೆರಳಿದ್ದರು. ಆಕೆಯ ಅರ್ಜಿಯ ಆಧಾರದ ಮೇಲೆ ಸಮಿತಿಯು ಆಕೆಗೆ ಟೈಲ್ಸ್ ಕಳುಹಿಸಿತ್ತು.

    ಆಕೆ ಮತ್ತೆ ಸಮಿತಿಗೆ ಮನವಿ ಸಲ್ಲಿಸಿದ್ದರು. ನಿರ್ಮಾಣಕ್ಕೆ ಹೆಚ್ಚಿನ ಸಹಾಯವನ್ನು ಕೇಳಿದ್ದರು. ಸಂಸ್ಥೆಯು ಆಕೆಗೆ ವಿದ್ಯುತ್ ಉಪಕರಣಗಳನ್ನು ಒದಗಿಸುವ ಭರವಸೆ ನೀಡಿತ್ತು. ಮಹಿಳೆಗೆ ವಾಟ್ಸಾಪ್ ಸಂದೇಶದಲ್ಲಿ, ಲೈಟ್‌ಗಳು, ಫ್ಯಾನ್‌ಗಳು ಮತ್ತು ಸ್ವಿಚ್‌ಗಳಂತಹ ವಸ್ತುಗಳನ್ನು ಕಳುಹಿಸಲಾಗುವುದು ಎಂದು ಸಮಿತಿ ತಿಳಿಸಿತ್ತು.

    ಗುರುವಾರ ರಾತ್ರಿ ಮಹಿಳೆ ಮನೆಗೆ ಪಾರ್ಸೆಲ್‌ವೊಂದು ತಲುಪಿತು. ಅದರಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಇದ್ದವು ಎಂದು ಡೆಲಿವರಿ ಮಾಡುವಾತ ತಿಳಿಸಿದ್ದ. ಮಹಿಳೆ ನಂತರ ಪಾರ್ಸೆಲ್ ತೆರೆದು ನೋಡುತ್ತಿದ್ದಂತೆ ಆಘಾತಕ್ಕೆ ಒಳಗಾಗಿದ್ದಾರೆ. ಪಾರ್ಸೆಲ್‌ನಲ್ಲಿ ವಿದ್ಯುತ್‌ ಉಪಕರಣಗಳಿಗೆ ಬದಲಾಗಿ, ವ್ಯಕ್ತಿಯೊಬ್ಬರ ದೇಹ ಇತ್ತು.

    ಕೂಡಲೇ ಆಕೆಯ ಕುಟುಂಬಸ್ಥರು ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ತಂಡವೊಂದು ಸ್ಥಳಕ್ಕೆ ಧಾವಿಸಿ‌ ಪರಿಶೀಲನೆ ನಡೆಸಿತು. ಅಧಿಕಾರಿಗಳು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

    ಮೃತದೇಹದ ಜೊತೆಗೆ ಪಾರ್ಸೆಲ್‌ನಲ್ಲಿ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ 1.30 ಕೋಟಿ ಕೊಡಬೇಕು ಎಂದು ಮಹಿಳೆಗೆ ಬೇಡಿಕೆ ಇಡಲಾಗಿದೆ. ಬೇಡಿಕೆ ಈಡೇರಿಸಲು ವಿಫಲವಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕುಟುಂಬಕ್ಕೆ ಎಚ್ಚರಿಕೆ ನೀಡಲಾಗಿದೆ.