Tag: Andhra Pradesh

  • ಪಾಕ್ ಅಪ್ರಚೋದಿತ ಗುಂಡಿನ ದಾಳಿಗೆ ಬಾಗೇಪಲ್ಲಿ ಗಡಿಯ ಯೋಧ ಹುತಾತ್ಮ- ಕಂಬನಿ ಮಿಡಿದ ಕರುನಾಡು

    ಪಾಕ್ ಅಪ್ರಚೋದಿತ ಗುಂಡಿನ ದಾಳಿಗೆ ಬಾಗೇಪಲ್ಲಿ ಗಡಿಯ ಯೋಧ ಹುತಾತ್ಮ- ಕಂಬನಿ ಮಿಡಿದ ಕರುನಾಡು

    ಚಿಕ್ಕಬಳ್ಳಾಪುರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಗಡಿ ಭಾಗದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಈ ಸಂಘರ್ಷದಲ್ಲಿ ಬಾಗೇಪಲ್ಲಿ ಸಮೀಪದ ಆಂಧ್ರಪ್ರದೇಶದ (Andhra Pradesh) ಗೋರಂಟ್ಲು ತಾಲೂಕಿನ ಕಲ್ಲಿಕೊಂಡ ಗ್ರಾಮದ ಯೋಧನೊಬ್ಬ (Soldier) ಹುತಾತ್ಮರಾಗಿದ್ದಾರೆ.

    ಮುರಳಿ ನಾಯಕ್‌ ಹುತಾತ್ಮ ಯೋಧ. ಪಾಕಿಸ್ತಾನ ಗಡಿಯಲ್ಲಿ (Pakistan Border) ನಡೆದ ದಾಳಿಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸಮೀಪದ ಆಂಧ್ರಪ್ರದೇಶಕ್ಕೆ ಸೇರಿದ ಕಲ್ಲಿಕೊಂಡ ಗ್ರಾಮದ ಶ್ರೀರಾಮುಲು ನಾಯಕ್ ಹಾಗೂ ಜ್ಯೋತಿಬಾಯಿ ಅವರ ಏಕೈಕ ಪುತ್ರ ಮುರಳಿ ನಾಯಕ್ ದೇಶಕ್ಕಾಗಿ ಹೋರಾಡಿ ವೀರಮರಣ ಹೊಂದಿದ್ದಾರೆ. ಮುರಳಿ ಹುತಾತ್ಮನಾಧ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ಬೆಂಗಳೂರು ಪಾಕಿಸ್ತಾನದ ಹಿಟ್‌ಲಿಸ್ಟ್‌ನಲ್ಲಿ ಇದ್ಯಾ? – ಗೃಹಸಚಿವ ಪರಮೇಶ್ವರ್‌ ಹೇಳಿದ್ದಿಷ್ಟು…

    ಹುತಾತ್ಮ ಯೋಧ ಮುರಳಿ ನಾಯಕ್‌ (Murali Naik) ಪಾರ್ಥೀವ ಶರೀರವನ್ನು ಇಂದು ಜಮ್ಮುವಿನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ತಂದು ಅಲ್ಲಿಂದ ಇಂಡಿಗೋ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಏರ್‌ಪೋರ್ಟ್‌ನ ಕಾರ್ಗೋ ಟರ್ಮಿನಲ್‌ನಲ್ಲಿ ಯೋಧರಿಂದ ಅಂತಿಮ ನಮನ ಸಲ್ಲಿಸಿದ ಬಳಿಕ ಸ್ವಗ್ರಾಮಕ್ಕೆ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗುತ್ತಿದೆ. ಇದನ್ನೂ ಓದಿ: ದೇಶದ ಕರೆಗೆ ಹನಿಮೂನ್‌ ಮೊಟಕುಗೊಳಿಸಿ ಸೇವೆಗೆ ತೆರಳಿದ ಯೋಧ

    ದೇವನಹಳ್ಳಿ ಚಿಕ್ಕಬಳ್ಳಾಪುರ ಬಾಗೇಪಲ್ಲಿ ಮಾರ್ಗವಾಗಿ ಸ್ವಗ್ರಾಮದತ್ತ ಪಾರ್ಥಿವ ಶರೀರವನ್ನ ಸೇನಾ ವಾಹನದ ಸಾರಥಿಯೊಂದಿಗೆ ಅಂಬುಲೆನ್ಸ್‌ನಲ್ಲಿ ಕೊಂಡೊಯ್ಯಲಾಗುತ್ತಿದೆ. ಈ ವೇಳೆ ಚಿಕ್ಕಬಳ್ಳಾಪುರದಲ್ಲಿ ಮಳೆ ಬಂದರೂ ಜಗದ್ದೇ ದಾರಿಯಲ್ಲೇ ನಿಂತಿದ್ದ ಜನ ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರದ ವಾಪಸಂದ್ರದ ಬಳಿ ಜನರು ಆಗಮಿಸಿ ಪುಷ್ಪ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಭಾರತದ 36 ಕಡೆ 400 ಮಿಸೈಲ್‌ನಿಂದ ಪಾಕ್ ದಾಳಿ: ಕರ್ನಲ್ ಸೋಫಿಯಾ ಖುರೇಷಿ

  • ಎಲ್‌ಒಸಿಯಲ್ಲಿ ಭಾರತ-ಪಾಕ್ ಸಂಘರ್ಷ; ಭಾರತೀಯ ಯೋಧ ಹುತಾತ್ಮ

    ಎಲ್‌ಒಸಿಯಲ್ಲಿ ಭಾರತ-ಪಾಕ್ ಸಂಘರ್ಷ; ಭಾರತೀಯ ಯೋಧ ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ (LOC) ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆಂಧ್ರಪ್ರದೇಶ (Andhra Pradesh) ಮೂಲದ ಯೋಧ (Army Jawan) ಹುತಾತ್ಮರಾಗಿದ್ದಾರೆ.

    ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ (Sathya Sai) ಜಿಲ್ಲೆಯ ಕಲ್ಲಿತಾಂಡ ಗ್ರಾಮದ ಯೋಧ ಮುರಳಿ ನಾಯ್ಕ್ ಪಾಕಿಸ್ತಾನದ ಸೇನೆಯೊಂದಿಗಿನ ಸಂಘರ್ಷದ ವೇಳೆ ಹುತಾತ್ಮರಾಗಿದ್ದಾರೆ. ಮುರಳಿ ನಾಯ್ಕ್ ಅವರ ಪಾರ್ಥಿವ ಶರೀರ ಮೇ 10ರ ವೇಳೆಗೆ ಸ್ವಗ್ರಾಮಕ್ಕೆ ತಲುಪುವ ನಿರೀಕ್ಷೆಯಿದೆ. ಇದನ್ನೂ ಓದಿ: ಗುಜರಾತ್ ಸಿಎಂ ಜೊತೆ ಗಡಿ ಜಿಲ್ಲೆಗಳ ಭದ್ರತೆ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಮೋದಿ

    ಗುರುವಾರ ರಾತ್ರಿ ಭಾರತದ ವಿರುದ್ಧ ಪಾಕಿಸ್ತಾನ ಸೇನೆ ಜಮ್ಮು ಕಾಶ್ಮೀರ ಗಡಿಯಲ್ಲಿ ಗುಂಡಿನ ದಾಳಿ ನಡೆಸಿತು. ಈ ವೇಳೆ ಭಾರತೀಯ ಸೇನೆಯೂ ಪ್ರತಿದಾಳಿ ನಡೆಸಿ ಪಾಕ್‌ಗೆ ತಿರುಗೇಟು ನೀಡಿದೆ. ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಮುರಳಿ ನಾಯ್ಕ್ ಅವರಿಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: India’s Strike | ಪಾಕ್‌ ಮೇಲೆ ಭಾರತ ಪ್ರಯೋಗಿಸಿದ 3 ರಾಷ್ಟ್ರಗಳ ಶಸ್ತ್ರಾಸ್ತ್ರಗಳು ಎಷ್ಟು ಪವರ್‌ಫುಲ್?‌

  • ಆಂಧ್ರಪ್ರದೇಶ | ಸಿಂಹಾದ್ರಿ ಅಪ್ಪಣ್ಣಸ್ವಾಮಿ ದೇವಸ್ಥಾನದ ಗೋಡೆ ಕುಸಿದು 8 ಮಂದಿ ದುರ್ಮರಣ

    ಆಂಧ್ರಪ್ರದೇಶ | ಸಿಂಹಾದ್ರಿ ಅಪ್ಪಣ್ಣಸ್ವಾಮಿ ದೇವಸ್ಥಾನದ ಗೋಡೆ ಕುಸಿದು 8 ಮಂದಿ ದುರ್ಮರಣ

    ಅಮರಾವತಿ: ಸಿಂಹಾದ್ರಿ ಅಪ್ಪಣ್ಣಸ್ವಾಮಿ ದೇವಸ್ಥಾನದ ಗೋಡೆ ಕುಸಿದು ಎಂಟು ಜನರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣದಲ್ಲಿರುವ ಸಿಂಹಾಚಲಂನಲ್ಲಿ ನಡೆದಿದೆ.

    ದೇವಸ್ಥಾನದಲ್ಲಿ ನಡೆಯುತ್ತಿದ್ದ ಚಂದನೋತ್ಸವಂ ವೇಳೆ ಈ ಅವಘಡ ಸಂಭವಿಸಿದೆ. ಇಂದು ಬೆಳಗ್ಗೆ ಚಂದನೋತ್ಸವದಲ್ಲಿ ವರಾಹ ಲಕ್ಷ್ಮೀ ನರಸಿಂಹಸ್ವಾಮಿಯ ನಿಜರೂಪ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಇದೇ ವೇಳೆ ದೇವಸ್ಥಾನದಲ್ಲಿ ಇತ್ತೀಚಿಗೆ ನಿರ್ಮಿಸಲಾಗಿದ್ದ 20 ಅಡಿ ಉದ್ದದ ಹೊಸ ಗೋಡೆಯೊಂದು ಕುಸಿದಿದೆ. ಪರಿಣಾಮ ಎಂಟು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.ಇದನ್ನೂ ಓದಿ: ಕೋಲ್ಕತ್ತಾ ಹೋಟೆಲ್‌ನಲ್ಲಿ ಬೆಂಕಿ ಅವಘಡ: 14 ಮಂದಿ ಸಾವು

    ಸ್ಥಳಕ್ಕೆ ತಕ್ಷಣವೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ದೌಡಾಯಿಸಿ, ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದವು. ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲಾಗಿದ್ದು, ಗಾಯಾಳುಗಳನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ರವಾನಿಸಲಾಗಿದೆ.

    ವರದಿಗಳ ಪ್ರಕಾರ, ಇಂದು ಬೆಳಗಿನ ಜಾವ 2:30 ರಿಂದ 3:30ರವರೆಗೆ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಭಾರೀ ಗಾಳಿ ಹಾಗೂ ದೇವಸ್ಥಾನದ ಬಳಿ ಹರಿಯುತ್ತಿದ್ದ ನೀರಿನ ಹರಿವು ಈ ಘಟನೆಗೆ ಕಾರಣ ಎನ್ನಲಾಗಿದೆ. ಗೋಡೆಯು ಮಣ್ಣಿನ ಹೊದಿಕೆಯನ್ನು ಹೊಂದಿದ್ದು, ಮಣ್ಣು ಸಡಿಲಗೊಂಡಿರಬಹುದು, ಜೊತೆಗೆ ಭಾರೀ ಗಾಳಿಯಿಂದಾಗಿ ಪೆಂಡಾಲ್‌ಗಳು ನೆಲಕ್ಕುರುಳಿದವು. ಇನ್ನೂ 20 ದಿನಗಳ ಹಿಂದೆಯಷ್ಟೇ ಈ ಗೋಡೆಯನ್ನು ನಿರ್ಮಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

    ಚಂದನೋತ್ಸವಂ ಹಬ್ಬವನ್ನು ಪ್ರತಿ ವರ್ಷ ಏ.30 ರಂದು ಆಚರಿಸಲಾಗುತ್ತದೆ. ಭಕ್ತರು ವರ್ಷಪೂರ್ತಿ ಶ್ರೀಗಂಧದ ಲೇಪದಿಂದ ಮುಚ್ಚಿದ ನರಸಿಂಹ ದೇವರನ್ನು ಈ ಚಂದನೋತ್ಸವಂ ಹಬ್ಬದ ಸಂದರ್ಭದಲ್ಲಿ ನೋಡುತ್ತಾರೆ.ಇದನ್ನೂ ಓದಿ: ಖಾಸಗಿಯವ್ರ ಪಾಲಾಗುತ್ತಿದೆ ಟೈರನ್ನೊಸಾರಸ್ ಪಳಯುಳಿಕೆ – ವಿಜ್ಞಾನಿಗಳ ಆತಂಕವೇನು?

  • ಬರಿದಾದ ತುಂಗಭದ್ರಾ; ಕಲ್ಯಾಣ ಕರ್ನಾಟಕ, ಆಂಧ್ರ-ತೆಲಂಗಾಣದ ಜಿಲ್ಲೆಗಳಿಗೆ ನೀರಿನ ಅಭಾವ ಸಾಧ್ಯತೆ

    ಬರಿದಾದ ತುಂಗಭದ್ರಾ; ಕಲ್ಯಾಣ ಕರ್ನಾಟಕ, ಆಂಧ್ರ-ತೆಲಂಗಾಣದ ಜಿಲ್ಲೆಗಳಿಗೆ ನೀರಿನ ಅಭಾವ ಸಾಧ್ಯತೆ

    ಬಳ್ಳಾರಿ: ಮೂರು ರಾಜ್ಯ 8 ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯ (Tungabhadra Reservoir) ಬತ್ತಿ ಬರಿದಾಗಿದ್ದು ಜಲಾಶಯದ ವ್ಯಾಪ್ತಿಯ ರೈತರಿಗೆ ಇದೀಗ ಆತಂಕ ಶುರುವಾಗಿದೆ.

    105 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲೀಗ ಕೇವಲ 5 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. 3 ಟಿಎಂಸಿ ಡೆಡ್ ಸ್ಟೋರೇಜ್ ಇರೋ ಜಲಾಶಯದಲ್ಲೀಗ ಕೇವಲ 2 ಟಿಎಂಸಿ ನೀರು ಮಾತ್ರ ಹೆಚ್ಚುವರಿ ಇದ್ದು, ಆ 2 ಟಿಎಂಸಿ ನೀರಿನಲ್ಲಿಯೇ ಇನ್ನೊಂದು ತಿಂಗಳು ಕುಡಿಯುವ ನೀರು ಪೂರೈಕೆ ಮಾಡಬೇಕಾದ ಅನಿವಾರ್ಯತೆ ಇದೆ. ಇದನ್ನೂ ಓದಿ: ಮನೆ ಮಾಲೀಕನ ಪತ್ನಿಯನ್ನೇ ಲವ್ ಮಾಡಿ ಮದುವೆಯಾಗಿದ್ದ ವ್ಯಕ್ತಿಯ ಬರ್ಬರ ಹತ್ಯೆ!

    ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ನಾಲ್ಕು ಜಿಲ್ಲೆಗಳು ಸೇರಿದಂತೆ ಆಂಧ್ರ ಹಾಗೂ ತೆಲಂಗಾಣ ರಾಜ್ಯದ ಒಟ್ಟು 8 ಜಿಲ್ಲೆಗಳಿಗೆ ಇದೇ ಜಲಾಶಯದ ನೀರು ಅನಿವಾರ್ಯ. ಆದರೆ ನಿರೀಕ್ಷೆಯಂತೆ ಮಳೆ ಆಗದೇ ಕಲ್ಯಾಣ ಕರ್ನಾಟಕದ ನಾಲ್ಕೂ ಜಿಲ್ಲೆಗಳು ಸೇರಿದಂತೆ 8 ಜಿಲ್ಲೆಗಳಿಗೆ ನೀರಿನ ಹಾಹಾಕಾರ ಶುರುವಾಗೋದು ಗ್ಯಾರಂಟಿ ಎನ್ನಲಾಗಿದೆ. ಹೀಗಾಗಿ ಇರುವ ನೀರನ್ನ ಮ್ಯಾನೇಜ್ ಮಾಡಿ ಬಳಕೆ ಮಾಡೋದೇ ಟಿಬಿ ಬೋರ್ಡ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.‌ ಇದನ್ನೂ ಓದಿ: ಉಗ್ರರ ದಾಳಿ ಬಳಿಕ ಕಾಶ್ಮೀರಕ್ಕೆ ಭೇಟಿ ನೀಡಿದ ಅತುಲ್ ಕುಲಕರ್ಣಿ

  • Andhra Pradesh| ಕತ್ತು ಹಿಸುಕಿ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ ಪತಿ

    Andhra Pradesh| ಕತ್ತು ಹಿಸುಕಿ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ ಪತಿ

    ಅಮರಾವತಿ: ಗಂಡ-ಹೆಂಡತಿಯ ನಡುವೆ ಜಗಳ ನಡೆದು, ಪತಿ 8 ತಿಂಗಳ ಗರ್ಭಿಣಿ ಪತ್ನಿಯನ್ನು (Preganant Wife) ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣದಲ್ಲಿ ಸೋಮವಾರ ನಡೆದಿದೆ.

    ಅನುಷಾ (27) ಮೃತ ಪತ್ನಿ. ಪತಿ ಜ್ಞಾನೇಶ್ವರ್ ಹಾಗೂ ಪತ್ನಿ ಅನುಷಾ ಸೋಮವಾರ ಬೆಳಗ್ಗೆ ಜಗಳವಾಡಿದ್ದು, ಈ ಜಗಳ ತಾರಕಕ್ಕೇರಿ ಜ್ಞಾನೇಶ್ವರ್ ತನ್ನ ಪತ್ನಿಯ ಕತ್ತು ಹಿಸುಕಿದ್ದಾನೆ. ಈ ಸಂದರ್ಭ ಅನುಷಾ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೇ ಪತಿ, ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಅಷ್ಟರಲ್ಲಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಇದನ್ನೂ ಓದಿ: ತುಮಕೂರು | ಬೀದಿ ದೀಪ ಆರಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಶಿಕ್ಷಕ ಸಾವು

    ವಿಶಾಖಪಟ್ಟಣಂನ (Visakhapatnam) ಪಿಎಂ ಪಾಲೆಂನ ಉಡಾ ಕಾಲೋನಿಯಲ್ಲಿ ಘಟನೆ ನಡೆದಿದೆ. ಆರೋಪಿ ಪತಿ ನಗರದ ಸ್ಕೌಟ್ಸ್ ಮತ್ತು ಸಾಗರ್‌ನಗರ ವೀಕ್ಷಣಾ ಕೇಂದ್ರದ ಬಳಿ ಫಾಸ್ಟ್ ಫುಡ್ ಸೆಂಟರ್ ನಡೆಸುತ್ತಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಅನುಷಾಳೊಂದಿಗೆ ಪ್ರೇಮ ವಿವಾಹವಾಗಿದ್ದರು. ಬಳಿಕ ಹಲವಾರು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ದಂಪತಿ ಆಗಾಗ ಜಗಳವಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸೆಂಚುರಿ ಬಾರಿಸಿದ್ದಕ್ಕೆ ಪಾಕ್‌ ಸೂಪರ್‌ ಲೀಗಲ್ಲಿ ಸಿಕ್ಕಿದ್ದು ಹೇರ್ ಡ್ರೈಯರ್‌!

    ಘಟನೆಯ ಬಳಿಕ ಆರೋಪಿ ಪತಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮುಸ್ಲಿಮರದ್ದು ಕಾಂಟ್ರ್ಯಾಕ್ಟ್‌ ಮ್ಯಾರೇಜ್, ಹಿಂದೂಗಳ ರೀತಿ ಏಳು ಜನ್ಮದ ಅನುಬಂಧ ಅಲ್ಲ: ರಾಯರೆಡ್ಡಿ

  • ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ – 8 ಮಂದಿ ದುರ್ಮರಣ

    ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ – 8 ಮಂದಿ ದುರ್ಮರಣ

    ಅಮರಾವತಿ: ಪಟಾಕಿ ಕಾರ್ಖಾನೆಯಲ್ಲಿ (Cracker Factory) ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮಹಿಳೆಯರು ಸೇರಿ 8 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ (Andhra Pradesh) ಅನಕಪಲ್ಲಿಯಲ್ಲಿ ನಡೆದಿದೆ.

    ಅವಘಡದಲ್ಲಿ 8 ಜನರು ಸಾವನ್ನಪ್ಪಿದ್ದು, 7 ಜನರು ಗಾಯಗೊಂಡಿದ್ದಾರೆ. ಬೆಂಕಿ ಅವಘಡದ ಕುರಿತು ಆಂಧ್ರ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು (Chandrababu Naidu) ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನ ಸುಮಿ ಮೇಲೆ ರಷ್ಯಾ ಕ್ಷಿಪಣಿ ದಾಳಿ – 21 ಮಂದಿ ಸಾವು

    ಇಬ್ಬರು ಮಹಿಳೆಯರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ಬೆಂಕಿ ಅವಘಡದ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಗೃಹ ಸಚಿವೆ ವಿ.ಅನಿತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ | ಸೈಕೋಪಾತ್‌ನಿಂದ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ

    ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

  • Andhra Pradesh | ಹಕ್ಕಿಜ್ವರಕ್ಕೆ 2 ವರ್ಷದ ಹೆಣ್ಣು ಮಗು ಬಲಿ

    Andhra Pradesh | ಹಕ್ಕಿಜ್ವರಕ್ಕೆ 2 ವರ್ಷದ ಹೆಣ್ಣು ಮಗು ಬಲಿ

    ಅಮರಾವತಿ: ಎರಡು ವರ್ಷದ ಹೆಣ್ಣು ಮಗುವೊಂದು ಹಕ್ಕಿಜ್ವರಕ್ಕೆ (Bird Flu) ಬಲಿಯಾಗಿರುವ ಘಟನೆ ಆಂಧ್ರಪ್ರದೇಶದ (Andhra Pradesh ) ಪಲ್ನಾಡು ಜಿಲ್ಲೆಯ ನರಸರಾವ್‌ಪೇಟೆಯಲ್ಲಿ ನಡೆದಿದೆ.

    ಮಾರ್ಚ್ 15ರಂದು ಮಗು ಮೃತಪಟ್ಟಿದೆ. ಈ ಹಿನ್ನೆಲೆ ಮಗುವಿನ ಸ್ಯಾಂಪಲ್ ಅನ್ನು ಪುಣೆ ಮೂಲದ ರಾಷ್ಟ್ರೀಯ ವೈರಾಲಜಿಗೆ ಕಳುಹಿಸಲಾಗಿತ್ತು. ಸ್ಯಾಂಪಲ್ ಪರೀಕ್ಷೆಯಲ್ಲಿ ಮಗು ಹಕ್ಕಿಜ್ವರದಿಂದ ಮೃತಪಟ್ಟಿರುವುದು ಧೃಡಪಟ್ಟಿದೆ. ಇದನ್ನೂ ಓದಿ: ರಾಜೇಂದ್ರ ಕೊಲೆ ಸಂಚು ಪ್ರಕರಣ – ಮುಖ್ಯ ಆರೋಪಿ ಸೋಮ ಪೊಲೀಸರಿಗೆ ಶರಣು

    ಮಂಗಳಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮಗು ಸಾವನ್ನಪ್ಪಿದೆ. ಪಲ್ನಾಡು ಜಿಲ್ಲೆಯಲ್ಲಿ ಯಾವುದೇ ಹಕ್ಕಿಜ್ವರದ ಪ್ರಕರಣಗಳು ವರದಿಯಾಗಿಲ್ಲ. ಆದರೆ ಮಗುವಿಗೆ ಹೇಗೆ ಸೋಂಕು ತಗುಲಿತು ಎಂಬುದು ಇನ್ನೂ ಅಸ್ಪಷ್ಟ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 6 ವಾರಗಳಲ್ಲಿ ಓಲಾ, ಉಬರ್ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ

    ಮಗು ಆಗಾಗ ಹಸಿ ಕೋಳಿಮಾಂಸದ ತುಂಡುಗಳನ್ನು ತಿನ್ನುತ್ತಿತ್ತು. ರೋಗಲಕ್ಷಣಗಳು ಕಾಣಿಸುವ ಮೊದಲೂ ಮಗು ಒಂದು ತುಂಡು ಮಾಂಸ ತಿಂದಿದ್ದಳು. ಹೀಗಾಗಿ ಮಗುವಿಗೆ ಕೋಳಿಜ್ವರ ಹರಡಿರಬಹುದು ಎಂದು ಶಂಕಿಸಲಾಗಿದೆ. ಈ ಬೆನ್ನಲ್ಲೇ ಮಗುವಿನ ಪೋಷಕರು ಹಾಗೂ ಕುಟುಂಬಸ್ಥರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಆದರೆ ಅವರಲ್ಲಿ ಯಾವುದೇ ಸೋಂಕು ಅಥವಾ ಲಕ್ಷಣಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 105 ಮೀಟರ್‌ ಭರ್ಜರಿ ಸಿಕ್ಸರ್‌ – ಈ ಐಪಿಎಲ್‌ನಲ್ಲಿ ಫಿಲ್‌ ಸಾಲ್ಟ್‌ ವಿಶೇಷ ಸಾಧನೆ

  • ತಿರುಪತಿ ತಿಮ್ಮಪ್ಪನ ಬಜೆಟ್‌ 5,259 ಕೋಟಿಗೆ ಹೆಚ್ಚಳ – ದೇವಾಲಯದಲ್ಲಿ ಅಡುಗೆ ಕೆಲಸಗಾರರ ವೇತನ ಹೆಚ್ಚಳಕ್ಕೆ ನಿರ್ಧಾರ

    ತಿರುಪತಿ ತಿಮ್ಮಪ್ಪನ ಬಜೆಟ್‌ 5,259 ಕೋಟಿಗೆ ಹೆಚ್ಚಳ – ದೇವಾಲಯದಲ್ಲಿ ಅಡುಗೆ ಕೆಲಸಗಾರರ ವೇತನ ಹೆಚ್ಚಳಕ್ಕೆ ನಿರ್ಧಾರ

    ಅಮರಾವತಿ: ತಿರುಪತಿ ತಿಮ್ಮಪ್ಪನ (Tirupati) ಬಜೆಟ್‌ 5,259 ಕೋಟಿಗೆ ಹೆಚ್ಚಳ ಕಂಡಿದೆ. 2025-26ರ ಆರ್ಥಿಕ ವರ್ಷಕ್ಕೆ 5,259 ಕೋಟಿ ರೂ.ಗಳ ಬಜೆಟ್ ಅನ್ನು ಅನುಮೋದಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಗಳ (TTD) ಅಧ್ಯಕ್ಷ ಬಿ.ಆರ್. ನಾಯ್ಡು ತಿಳಿಸಿದ್ದಾರೆ.

    ಟಿಟಿಡಿ ಟ್ರಸ್ಟಿಗಳ ಮಂಡಳಿಗಳು ಬಜೆಟ್ ಅನ್ನು ಅನುಮೋದಿಸಿದೆ. ಜೊತೆಗೆ ‘ಪೋಟು’ (ದೇವಾಲಯದ ಅಡುಗೆಮನೆ) ಕೆಲಸಗಾರರಿಗೆ ವೇತನವನ್ನು ಹೆಚ್ಚಿಸುವುದು, ವೃದ್ಧರು ಮತ್ತು ಅಂಗವಿಕಲ ಭಕ್ತರಿಗೆ ಆಫ್‌ಲೈನ್ ದರ್ಶನ ನೀಡುವುದು ಸೇರಿದಂತೆ ಹಲವಾರು ಪ್ರಮುಖ ನಿರ್ಣಯಗಳನ್ನು ಮಂಡಳಿಯು ಅಂಗೀಕರಿಸಿದೆ.

    ‘ಪೋಟು’ ಕಾರ್ಮಿಕರಿಗೆ ಸಂಬಳ ಹೆಚ್ಚಿಸುವ ಮತ್ತು ಅವರ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಮಂಡಳಿ ನಿರ್ಧರಿಸಿತು. ಕೊಡಂಗಲ್, ಕರೀಂನಗರ, ಉಪಮಾಕ, ಅನಕಪಲ್ಲಿ, ಕರ್ನೂಲ್, ಧರ್ಮಾವರಂ, ತಲಕೋಣ, ಮತ್ತು ತಿರುಪತಿ (ಗಂಗಮ್ಮ ದೇವಸ್ಥಾನ) ದೇವಾಲಯಗಳ ಪುನರ್ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲು ಮಂಡಳಿಯು ಅನುಮೋದನೆ ನೀಡಿದೆ.

    ತಿರುಮಲದಲ್ಲಿ ಆಯ್ದ ವಿಐಪಿ ಮತ್ತು ವಿಐಪಿ ಅಲ್ಲದ ಅತಿಥಿ ಗೃಹಗಳನ್ನು ಪುನರ್ನಿರ್ಮಿಸಲು, ಅಲಿಪಿರಿಯಲ್ಲಿ ವಿಜ್ಞಾನ ನಗರ ಮತ್ತು ವಸ್ತುಸಂಗ್ರಹಾಲಯಕ್ಕಾಗಿ ಈ ಹಿಂದೆ ಗೊತ್ತುಪಡಿಸಿದ 20 ಎಕರೆ ಭೂಮಿಯ ಹಂಚಿಕೆಯನ್ನು ರದ್ದುಗೊಳಿಸಲು ಮಂಡಳಿ ನಿರ್ಧರಿಸಿದೆ.

  • ತಿರುಪತಿ ದೇವಸ್ಥಾನದಲ್ಲಿ ಹಿಂದೂಗಳು ಮಾತ್ರ ಕೆಲಸ ಮಾಡಬೇಕು: ಸಿಎಂ ಚಂದ್ರಬಾಬು ನಾಯ್ಡು

    ತಿರುಪತಿ ದೇವಸ್ಥಾನದಲ್ಲಿ ಹಿಂದೂಗಳು ಮಾತ್ರ ಕೆಲಸ ಮಾಡಬೇಕು: ಸಿಎಂ ಚಂದ್ರಬಾಬು ನಾಯ್ಡು

    – ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ತಿರುಪತಿ ದೇವಸ್ಥಾನ ನಿರ್ಮಾಣಕ್ಕೆ ಪ್ಲ್ಯಾನ್‌

    ಹೈದರಾಬಾದ್‌: ತಿರುಮಲ ತಿರುಪತಿ ದೇವಸ್ಥಾನದಲ್ಲಿ (TTD) ಹಿಂದೂಗಳು ಮಾತ್ರ ಕೆಲಸ ಮಾಡಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು (Chandrababu Naidu) ಹೇಳಿದ್ದಾರೆ.

    ತಮ್ಮ ಮೊಮ್ಮಗ ದೇವಾಂಶ್ ಹುಟ್ಟುಹಬ್ಬದ ಪ್ರಯುಕ್ತ ಸಿಎಂ ನಾಯ್ಡು ಅವರಿಂದು ತಿರುಮಲ ತಿರುಪತಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಈ ವೇಳೆ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ತಿರುಮಲ ದೇವಸ್ಥಾನದಲ್ಲಿ ಹಿಂದೂಗಳು (Hindus) ಮಾತ್ರ ಕೆಲಸ ಮಾಡಬೇಕು. ಒಂದು ವೇಳೆ ಕ್ರೈಸ್ತರು, ಇತರ ಧರ್ಮದ ಜನ ಕೆಲಸ ಮಾಡುತ್ತಿದ್ದರೆ, ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಗೌರವಯುತವಾಗಿ ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

    ಇದೇ ವೇಳೆ ದೇಶದಾದ್ಯಂತ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ವೆಂಕಟೇಶ್ವರ ಸ್ವಾಮಿ ದೇವಾಲಯಗಳನ್ನು ನಿರ್ಮಿಸುವ ಯೋಜನೆ ಇದೆ ಎಂದು ಪ್ರಕಟಿಸಿದರು. ದೇವಾಲಯಗಳ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಸಿಎಂ ನಾಯ್ಡು ಘೋಷಿಸಿದರು. ಇದನ್ನೂ ಓದಿ: ರಾಷ್ಟ್ರಗೀತೆ ಗಾಯನದ ವೇಳೆ ನಿತೀಶ್ ಕುಮಾರ್ ಮಾತುಕತೆ – ಬಿಹಾರ ಅಸೆಂಬ್ಲಿಯಲ್ಲಿ ಗದ್ದಲ, ಸಿಎಂ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯ

    ಜೊತೆಗೆ ಹಿಂದಿನ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಎಂಆರ್‌ಕೆಆರ್‌ ಮತ್ತು ಮುಮ್ತಾಜ್‌ ಹೊಟೇಲ್‌ ನಿರ್ಮಾಣ ಮಾಡುವ ʻದೇವಲೋಕಂʼ ಯೋಜನೆಗಳಿಗೆ 35 ಎಕರೆ ಜಮೀನು ಮಂಜೂರು ಮಾಡಿರುವುದನ್ನು ರದ್ದುಪಡಿಸುವುದಾಗಿಯೂ ಘೋಷಿಸಿದರು. ಇದನ್ನೂ ಓದಿ: 19ರ ಯುವತಿಗೆ 42ರ ಅಂಕಲ್‌ನಿಂದ ಲವ್‌ ಟಾರ್ಚರ್‌ – ಪಿನಾಯಿಲ್ ಕುಡಿದು ವಿದ್ಯಾರ್ಥಿನಿ ಆತ್ಮಹತ್ಯೆ

    ಕೆಲ ಹಿಂದೂ ಧಾರ್ಮಿಕ ಮುಖಂಡರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು, ಟಿಡಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಹೋಟೆಲ್‌ಗಳ ನಿರ್ಮಾಣ ಮಾಡುವುದು ಹಾಗೂ ಇತರ ಚಟುವಟಿಕೆಗಳನ್ನು ಕೈಗೊಂಡಿದೆ. ಇದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು ಈ ಹಿನ್ನೆಲೆ ಸರ್ಕಾರ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.

  • 7 ಸೆಕೆಂಡುಗಳಲ್ಲಿ ಹೃದ್ರೋಗ ಪತ್ತೆಹಚ್ಚುವ AI ಆ್ಯಪ್ ಸಿದ್ಧಪಡಿಸಿದ 14ರ ಬಾಲಕ

    7 ಸೆಕೆಂಡುಗಳಲ್ಲಿ ಹೃದ್ರೋಗ ಪತ್ತೆಹಚ್ಚುವ AI ಆ್ಯಪ್ ಸಿದ್ಧಪಡಿಸಿದ 14ರ ಬಾಲಕ

    – ಭಾರತೀಯ ಮೂಲದ ವಿದ್ಯಾರ್ಥಿಗೆ ಭೇಷ್‌ ಎಂದ ಆಂಧ್ರ ಸಿಎಂ

    ಅಮರಾವತಿ: 14 ವರ್ಷದ ಭಾರತೀಯ ಅಮೆರಿಕನ್‌ ವಿದ್ಯಾರ್ಥಿ ಹೃದಯ ಸಂಬಂಧಿ ಕಾಯಿಲೆ (Heart Disease) ಪತ್ತೆಹಚ್ಚುವ ಕೃತಕ ಬುದ್ಧಿಮತ್ತೆ ಆಧಾರಿತ (AI) ಅಪ್ಲಿಕೇಷನ್‌ ಅನ್ನು ಅಭಿವೃದ್ಧಿಪಡಿಸಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

    ಹೌದು.. ಎನ್‌ಆರ್‌ಐ ವಿದ್ಯಾರ್ಥಿ ಸಿದ್ಧಾರ್ಥ್ ನಂದ್ಯಾಲ (Siddharth Nandyala) ಕೇವಲ 7 ಸೆಕೆಂಡುಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆಹಚ್ಚುವ ʻಸಿರ್ಕಾಡಿಯಾ-ವಿʼ (CircadiaV) ಎಐ ಆಧಾರಿತ ಆ್ಯಪ್‌ವೊಂದನ್ನ ಸಿದ್ಧಪಡಿಸಿದ್ದಾರೆ. ಅನಂತರಪುರದ ಮೂಲದ ಸಿದ್ಧಾರ್ಥ್‌ ಸದ್ಯ ಅಮೆರಿಕದ ಡಲ್ಲಾಸ್‌ ನಗರದಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಿಂದ ದೇಶದ ಸಾಮೂಹಿಕ ಪ್ರಜ್ಞೆ ಬಲಗೊಂಡಿದೆ – ಲೋಕಸಭೆಯಲ್ಲಿ ಮೋದಿ ಶ್ಲಾಘನೆ

    14ರ ವಿದ್ಯಾರ್ಥಿ ಕಂಡುಹಿಡಿದ ಈ ಆ್ಯಪ್ ಸ್ಮಾರ್ಟ್‌ ಫೋನ್‌ ಸಹಾಯದಿಂದ ಹೃದಯ ರಕ್ತನಾಳಗಳ ಕಾಯಿಲೆಯನ್ನು ಬಹುಬೇಗನೆ ಪತ್ತೆಹಚ್ಚುತ್ತದೆ. ಹೃದಯದ ಮಿಡಿತವನ್ನು ಗ್ರಹಿಸುತ್ತದೆ. ಶೇ.96ಕ್ಕಿಂತ ಹೆಚ್ಚು ನಿಖರತೆಯನ್ನು ಸೂಚಿಸುತ್ತದೆ. ಈಗಾಗಲೇ ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆ ಸೇರಿದಂತೆ ಅಮೆರಿಕದಲ್ಲಿ 15,000ಕ್ಕೂ ಹೆಚ್ಚು ರೋಗಿಗಳು ಹಾಗೂ ಭಾರತದಲ್ಲಿ 700 ರೋಗಿಗಳಿಗೆ ಇದನ್ನು ಪರೀಕ್ಷಿಸಲಾಗಿದೆ. ಖುದ್ದು ಸಿದ್ಧಾರ್ಥ್‌ ಅವರೇ ಸ್ಮಾರ್ಟ್‌ ಫೋನ್‌ ಬಳಸಿ ರೋಗಿಗಳನ್ನು ಪರೀಕ್ಷಿಸಿ ಯಶಸ್ವಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ:  ಮೋದಿ ಬಳಿ ಉದ್ಧವ್‌ ಠಾಕ್ರೆ ಕ್ಷಮೆಯಾಚಿಸಿ, ಬಿಜೆಪಿ ಜೊತೆ ಮತ್ತೆ ಮೈತ್ರಿಗೆ ಸಿದ್ಧ ಎಂದಿದ್ರು: ಏಕನಾಥ್‌ ಶಿಂಧೆ

    ಸಿದ್ಧಾರ್ಥ್‌ ಅವರ ಈ ಸಾಧನೆ ತಿಳಿದ ನಂತರ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu), ಡಿಸಿಎಂ ಪವನ್‌ ಕಲ್ಯಾಣ್‌ (Pawan Kalyan) ಅವರು ಸಿದ್ಧಾರ್ಥ್‌ ನಂದ್ಯಾಲ ಅವರನ್ನ ಭೇಟಿಯಾಗಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಕೊಂಕಣ ರೈಲ್ವೆ ವಿಲೀನ, ಮಂಗಳೂರು ರೈಲು ವ್ಯಾಪ್ತಿ ಪುನರ್ ರಚನೆ – ಲೋಕಸಭೆಯಲ್ಲಿ ಧ್ವನಿಯೆತ್ತಿದ ಕ್ಯಾ.ಬ್ರಿಜೇಶ್ ಚೌಟ

    ಸಿಎಂ ಚಂದ್ರಬಾಬು ನಾಯ್ಡು ಅವರು ತಮ್ಮೊಂದಿಗೆ ಚರ್ಚಿಸಲು ಕೇಂದ್ರ ಸಚಿವಾಲಯಕ್ಕೆ ಆಹ್ವಾನಿಸಿದ್ದರು. ಸುಮಾರು ಅರ್ಧಗಂಟೆಗಳ ಕಾಲ ಸಿದ್ಧಾರ್ಥ್‌ ಜೊತೆಗೆ ಚರ್ಚೆ ನಡೆಸಿದರು. ಇಂತಹ ಪ್ರಯತ್ನಗಳೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡುವಂತೆ ಪ್ರೋತ್ಸಾಹಿಸಿದರು. ಜೊತೆಗೆ ಈ ರೀತಿ ಕೊಡುಗೆಗಳನ್ನು ನೀಡುವ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಸರ್ಕಾರದ ಸಂಪೂರ್ಣ ಬೆಂಬಲ ಇರಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ನಿಮ್ಮನ್ನು ಭಾರತದಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದೇವೆ: ಸುನಿತಾ ವಿಲಿಯಮ್ಸ್‌ಗೆ ಮೋದಿ ಪತ್ರ