ಕೋಲಾರ: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್ ಹೈವೇಯಲ್ಲಿ (Chennai-Bengaluru Expressway) ಡಿವೈಡರ್‌ಗೆ ಕಾರು (Car) ಡಿಕ್ಕಿ ಹೊಡೆದ ಪರಿಣಾಮ ಆಂಧ್ರ ಮೂಲದ ವೈದ್ಯ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಅನಂತಪುರದಿಂದ ಕುಪ್ಪಂ ಪಿಇಎಸ್ ಕಾಲೇಜಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಅಪಘಾತಕ್ಕೆ ಅತಿ ವೇಗದ ಚಾಲನೆಯೇ ಕಾರಣವೆಂದು ಮೇಲೋಟ್ನಕ್ಕೆ ಕಂಡು ಬಂದಿದೆ. ರಸ್ತೆ ಆರಂಭವಾಗುವ ಮುನ್ನವೇ ಬೆಂಗಳೂರು-ಚೆನ್ನೈ ಕಾರಿಡಾರ್ ರಸ್ತೆಯಲ್ಲಿ ಅಪಘಾತದ ಸಂಖ್ಯೆಗಳು ಹೆಚ್ಚಾಗಿ ಹಲವಾರು ಮಂದಿ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಘಟನೆ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: 6 ಗನ್‌ಮ್ಯಾನ್‌ಗಳೊಂದಿಗೆ ಪಾಕ್ ಬೀದಿಯಲ್ಲಿ ಜ್ಯೋತಿ ಸುತ್ತಾಟ- ಸ್ಫೋಟಕ ವಿಡಿಯೋ ಔಟ್
– ಕರುಳು ಹಿಂಡುವ ಕಥೆ – ಪೊಲೀಸರು ಪ್ರಕರಣ ಭೇದಿಸಿದ್ದೇ ರೋಚಕ
ಚೆನ್ನೈ/ಹೈದರಾಬಾದ್: 25,000 ರೂ. ಸಾಲಕ್ಕಾಗಿ (Loan) ಜೀತಕ್ಕಿರಿಸಿಕೊಂಡಿದ್ದ ಹುಡುಗನೊಬ್ಬನ ಶವ ತಮಿಳುನಾಡಿನಲ್ಲಿ (TamilNadu) ಸಮಾಧಿಯಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೌದು. ಆಂಧ್ರ ಪ್ರದೇಶದ ಬಾತುಕೋಳಿ ಸಾಕಣೆದಾರ (Duck Rearer) ಯಾನಾಡಿ ಬುಡಕಟ್ಟು ಸಮುದಾಯದ ಮಹಿಳೆ ಮತ್ತು ಆಕೆಯ ಮೂವರು ಮಕ್ಕಳನ್ನು 25,000 ರೂ. ಸಾಲಕ್ಕೆ ಜೀತದಾಳುಗಳಾಗಿ ಇರಿಸಿಕೊಂಡಿದ್ದ. ಬಳಿಕ ತಾಯಿ ಇಬ್ಬರು ಮಕ್ಕಳನ್ನ ಬಿಟ್ಟು ಒಬ್ಬ ಮಗನನ್ನ ಮೇಲಾಧಾರವಾಗಿ (collateral) ಇರಿಸಿಕೊಂಡಿದ್ದ. ಮಹಿಳೆ ಬಡ್ಡಿ ಸಮೇತ ಸಾಲದ ಹಣ ಹೊಂದಿಸಿ ಮಗನನ್ನ ಬಿಡುವಂತೆ ಮಹಿಳೆ ಕೇಳಿದಾಗ ಹುಡುಗ ಓಡಿಹೋಗಿದ್ದಾನೆಂದು ಕಥೆ ಕಟ್ಟಿದ್ದ. ಇದನ್ನೂ ಓದಿ: ಪಾಕ್ ಏಜೆಂಟ್ ಜೊತೆ ಭಾರತೀಯ ಸೇನಾ ತಾಣಗಳ ಫೋಟೊ ಹಂಚಿಕೆ – ಗುಜರಾತ್ ವ್ಯಕ್ತಿ ಬಂಧನ
ಈ ಸಂಬಂಧ ಮಹಿಳೆ ನೀಡಿನ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡ ಪೊಲೀಸರು (Andhra Police) ಬಾತುಕೋಳಿ ಸಾಕಣೆದಾರನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಹುಡುಗ ಮೃತಪಟ್ಟಿರುವುದು ಗೊತ್ತಾಗಿದೆ. ವಿಚಾರಣೆ ವೇಳೆ ಮಾಲೀಕನೇ ತಮಿಳುನಾಡಿನ ಕಾಂಚಿಪುರಂನಲ್ಲಿರುವ ತನ್ನ ಅತ್ತೆಯ ಮನೆಯ ಬಳಿ ಶವವನ್ನು ಹೂತಿದ್ದಾನೆಂದು ಬಾಯ್ಬಿಟ್ಟಿದ್ದಾನೆ. ಬಳಿಕ ಮಂಗಳವಾರ (ಮೇ 20) ಪೊಲೀಸರು ಹುಡುಗನ ಶವವನ್ನ ಹೊರತೆಗೆದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: Davanagere | ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿ – 40ಕ್ಕೂ ಹೆಚ್ಚು ಮಂದಿಗೆ ಗಾಯ
ಕರುಳು ಹಿಂಡುವ ಕಥೆ ನೀವೂ ಓದಿ…
ಆಂಧ್ರ ಪ್ರದೇಶದ ನಿವಾಸಿ ಅನಕಮ್ಮ ಮತ್ತು ಆಕೆಯ ದಿ. ಪತಿ ಚೆಂಚಯ್ಯ ಮತ್ತವರ ಮೂವರು ಮಕ್ಕಳು ಬಾತುಕೋಳಿ ಸಾಕಣೆದಾರನ ಬಳಿ ಒಂದು ವರ್ಷದಿಂದ ಜೀತದಾಳುಗಳಾಗಿ ಕೆಲಸ ಮಾಡಿಕೊಂಡಿದ್ದರು. ಚೆಂಚಯ್ಯ ಮರಣದ ನಂತರ ಮಾಲೀಕ ಅನಕಮ್ಮ ಮತ್ತು ಆಕೆಯ ಮಕ್ಕಳನ್ನ ವಿರೀತವಾಗಿ ಶೋಷಣೆ ಮಾಡುತ್ತಿದ್ದ. ಆದ್ರೆ ಚೆಂಚಯ್ಯ ಮರಣಕ್ಕೂ ಮುನ್ನ 25,000 ರೂ. ಸಾಲ ಪಡೆದುಕೊಂಡಿದ್ದ ಕಾರಣ ಅವರು ಹೊರಗೆ ಹೋಗಲು ಸಾಧ್ಯವಿರಲಿಲ್ಲ. ಸಂಬಳ ಹೆಚ್ಚು ಮಾಡುವಂತೆ ಕೇಳಿಕೊಂಡಿದ್ದರೂ ಮಾಲೀಕನ ಮನಸ್ಸು ಕರಗಲಿಲ್ಲ. ಇದನ್ನೂ ಓದಿ: Bengaluru | ಅಕ್ರಮವಾಗಿ ನಾಡ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ರೌಡಿಶೀಟರ್ ಬಂಧನ
ಕೊನೆಗೆ ಆಕೆ ಮನೆಯಿಂದ ಹೊರಹೋಗಲು ನಿರ್ಧರಿಸಿದಾಗ 25,000 ರೂ. ಸಾಲಕ್ಕೆ 20 ಸಾವಿರ ರೂ. ಬಡ್ಡಿ ಹಣ ಸೇರಿ 45,000 ರೂ. ಕೊಡುವಂತೆ ಪಟ್ಟು ಹಿಡಿದಿದ್ದ. ಇದರಿಂದ ವಿಧಿಯಿಲ್ಲದೇ ಅನಕಮ್ಮ ತಮ್ಮ ಮೂವರು ಮಕ್ಕಳಲ್ಲಿ ಒಬ್ಬ ಮಗನನ್ನ ಜೀತದಾಳಾಗಿ ಬಿಟ್ಟು ಹೋಗಲು ಒಪ್ಪಿಕೊಂಡಳು. ಆಗಾಗ್ಗೆ ತನ್ನ ಮಗನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಅಮ್ಮ ಫೋನ್ ಮಾಡಿದಾಗೆಲ್ಲ ಮಾಲೀಕ ತೊಂದ್ರೆ ಕೊಡ್ತಿದ್ದಾನೆ, ನನ್ನನ್ನು ಇಲ್ಲಿಂದು ಕರೆದುಕೊಂಡು ಹೋಗು ಅಂತ ಮಗ ಬೇಡಿಕೊಳ್ಳುತ್ತಿದ್ದ. ಅನಕಮ್ಮ ಏಪ್ರಿಲ್‌ನಲ್ಲಿ ಮಗನೊಂದಿಗೆ ಕೊನೆಯ ಬಾರಿ ಮಾತನಾಡಿದ್ದಳು.
ಹೇಗೋ ಏಪ್ರಿಲ್ ಅಂತ್ಯದ ವೇಳೆಗೆ ಅನಕಮ್ಮ ಕಟ್ಟಪಟ್ಟು ದುಡಿದು ಹಣ ಹೊಂದಿಸಿದಳು. ಸಾಲ ಪಾವತಿಸಿ ಮಗನನ್ನ ಬಿಡಿಸಿಕೊಂಡು ಬರಲೆಂದು ಆ ಬಾತುಕೋಳಿ ಸಾಕಣೆದಾರನ ಬಳಿ ಹೋದಾಗ ಆತ ತಕ್ಷಣಕ್ಕೆ ಆಟವಾಡಿಸಿದ. ಮೊದಮೊದಲು ಹುಡುಗನನ್ನ ಬೇರೆಡೆಗೆ ಕೆಲಸಕ್ಕೆ ಕಳುಹಿಸಿರುವುದಾಗಿ ಹೇಳುತ್ತಿದ್ದ ಮಾಲೀಕ ಬಳಿಕ ಓಡಿ ಹೋಗಿದ್ದಾನೆಂದು ಕಥೆ ಕಟ್ಟಿದ್ದ. ಇದರಿಂದ ಅನುಮಾನಗೊಂಡ ಅನಕಮ್ಮ ಬುಡಕಟ್ಟು ಸಮುದಾಯ ಮುಖಂಡದ ಸಹಾಯ ಪಡೆದು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆ ಬಾತುಕೋಳಿ ಸಾಕಣೆದಾರನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.
ವಿಚಾರಣೆ ವೇಳೆ ಬಾತುಕೋಳಿ ಸಾಕಣೆದಾರ ಹುಡುಗ ಸಾವನ್ನಪ್ಪಿದ್ದಾನೆ ಮತ್ತು ಆತನನ್ನ ಕಾಂಚಿಪುರಂನಲ್ಲಿರುವ ತನ್ನ ಅತ್ತೆಯ ಮನೆಯ ಬಳಿ ರಹಸ್ಯವಾಗಿ ಸಮಾಧಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಈ ಪ್ರಕರಣದಲ್ಲಿ ಆರೋಪಿಗೆ ಸಹಕರಿಸಿದ್ದ ಬಾತುಕೋಳಿ ಸಾಗಣೆದಾರನ ಪತ್ನಿ, ಮಗನನ್ನೂ ಬಂಧಿಸಿ, ಜೀತ ಪದ್ಧತಿ (ನಿರ್ಮೂಲನೆ) ಕಾಯ್ದೆ, ಬಾಲ ಕಾರ್ಮಿಕ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಮಂಗಳವಾರ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಅಮರಾವತಿ: ಮೂರು ವರ್ಷದ ಬಾಲಕಿಗೆ ಬಾಳೆಹಣ್ಣು ಕೊಡಿಸುವ ಆಮಿಷವೊಡ್ಡಿ ಆಕೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ (Andhra Pradesh) ವೈಎಸ್ಆರ್ ಕಡಪ ಜಿಲ್ಲೆಯಲ್ಲಿ ನಡೆದಿದೆ.
ದೇಶದಲ್ಲಿ ಈಗ ನಿಧಾನಗತಿಯಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿದೆ. ಆಂಧ್ರ ಪ್ರದೇಶದಲ್ಲಿ ನಿನ್ನೆ ಒಂದೇ ದಿನ 19 ಪಾಸಿಟಿವ್ ಕೇಸ್ ದಾಖಲಾಗಿದೆ. ಗುಜರಾತ್‌ನಲ್ಲೂ 15 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದನ್ನೂ ಓದಿ: ಭಾರತ ಕೊಟ್ಟ ಏಟಿಗೆ ಡಿಆರ್‌ಎಸ್ ನಿಯಮವನ್ನೇ ಕೈಬಿಟ್ಟ ಪಿಎಸ್‌ಎಲ್!
ನೆರೆ ರಾಜ್ಯ ಕೇರಳ ಒಂದರಲ್ಲೇ 186 ಕೇಸ್ ಇದ್ದು 95 ಸಕ್ರಿಯ ಪ್ರಕರಣಗಳು ಇವೆ. ಕರ್ನಾಟಕದಲ್ಲಿ 33 ಕೇಸ್ ದಾಖಲಾಗಿದ್ದು ಈ ಪೈಕಿ 16 ಸಕ್ರಿಯ ಪ್ರಕರಣಗಳಾಗಿವೆ.
ಅಮರಾವತಿ: ಕಾರಿನಲ್ಲೇ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ(Andhra Pradesh) ವಿಜಯನಗರಂ ಜಿಲ್ಲೆಯ ದ್ವಾರಪುಡಿ(Dwarapudi) ಗ್ರಾಮದಲ್ಲಿ ನಡೆದಿದೆ.
Never leave children alone in a vehicle locked or unlocked, even for a minute, the interior temperature of a car can rise quickly, leading to heatstroke or #Suffocation
ಭಾನುವಾರ ದ್ವಾರಪುಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕಾರು ನಿಲ್ಲಿಸಿ, ಲಾಕ್ ಮಾಡುವುದನ್ನೇ ಮರೆತು ಹೋಗಿದ್ದ. ಅಲ್ಲೇ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಮಳೆಯಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲೇ ನಿಲ್ಲಿಸಿದ್ದ ಕಾರನ್ನು ಹತ್ತಿದ್ದಾರೆ. ದುರಾದೃಷ್ಟವಶಾತ್, ಕಾರಿನ ಬಾಗಿಲು ಆಕಸ್ಮಿಕವಾಗಿ ಲಾಕ್ ಆಗಿ, ನಾಲ್ವರು ಮಕ್ಕಳು ಕಾರಿನಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ | ಸೋಲಾಪುರದ ಟೆಕ್ಸ್‌ಟೈಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ – 8 ಮಂದಿ ಬಲಿ
ಮಕ್ಕಳಿಗಾಗಿ ಮನೆಯವರು ಸುಮಾರು 3 ಗಂಟೆಗಳ ಕಾಲ ಹುಡುಕಾಟ ನಡೆಸಿದ್ದರು. ಕೊನೆಗೆ ಅಲ್ಲೇ ನಿಲ್ಲಿಸಿದ್ದ ಕಾರನ್ನು ಗಮನಿಸಿದಾಗ ಮಕ್ಕಳು ಕಾರಿನೊಳಗೆ ಸಿಲುಕಿರುವುದು ಪತ್ತೆಯಾಗಿದೆ. ತಕ್ಷಣವೇ ಕಾರಿನ ಗ್ಲಾಸ್ ಒಡೆದು ಮನೆಯವರು ಮಕ್ಕಳನ್ನು ಹೊರೆತೆಗೆದರು. ಅಷ್ಟರಲ್ಲಾಗಲೇ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಇದನ್ನೂ ಓದಿ: ’ದಿ ಗರ್ಲ್‌ಫ್ರೆಂಡ್’ ಸಿನಿಮಾ ಏನಾಯ್ತು?- ಕೊನೆಗೂ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ರು ರಶ್ಮಿಕಾ
ಕಾರು ಲಾಕ್ ಮಾಡದೇ ತೆರಳಿದರೆ ಎಂಥಹ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಪ್ರತ್ಯಕ್ಷ ಉದಾಹರಣೆಯಾಗಿದೆ. ಇದೀಗ ಯಾರದೋ ನಿರ್ಲಕ್ಷ್ಯಕ್ಕೆ ಅಮಾಯಕ ಮಕ್ಕಳು ಬಲಿಯಾಗಿದ್ದಾರೆ.
ನವೀನ್, ಸಂತೋಷ್, ಲೋಕೇಶ್ ಸೇರಿ ಒಟ್ಟು 6 ಮಂದಿ ಆಂಧ್ರಪ್ರದೇಶದ ಕಡೆಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಕಾರು ಕರ್ನೂಲ್ ರಸ್ತೆ ವಿಭಜಕ್ಕೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ನವೀನ್, ಸಂತೋಷ್ ಹಾಗೂ ಲೋಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಮಹಾಮಳೆಗೆ ಕಾಂಪೌಂಡ್ ಗೋಡೆ ಕುಸಿದು ಮಹಿಳೆ ಸಾವು
ಇನ್ನುಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ನೂಲ್ ಪೊಲೀಸ್ ಠಾಣೆಯಲ್ಲಿ(Kurnool Police Station) ಪ್ರಕರಣ ದಾಖಲಾಗಿದೆ.
ಹೈದರಾಬಾದ್: ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಹೈದರಾಬಾದ್‌ನಲ್ಲಿ (Hyderabad) ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನು (Suspected Terrorists) ಬಂಧಿಸಿದ್ದಾರೆ.
ವಿಜಯನಗರದ ಸಿರಾಜ್ ಮತ್ತು ಹೈದರಾಬಾದ್‌ನ ಸಮೀರ್ ಬಂಧಿತರು. ಯೋಜನೆಯ ಭಾಗವಾಗಿ ಸಿರಾಜ್ ವಿಜಯನಗರದಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದ. ಸೌದಿ ಅರೇಬಿಯಾ ಮೂಲದ ಐಸಿಸ್ ಮಾಡ್ಯೂಲ್ ಇವರಿಗೆ ಹೈದರಾಬಾದ್‌ನಲ್ಲಿ ದಾಳಿ ನಡೆಸಲು ಮಾರ್ಗದರ್ಶನ ನೀಡುತ್ತಿದ್ದ. ಆಂಧ್ರಪ್ರದೇಶದ ವಿಜಯನಗರದಲ್ಲಿ ಸಿರಾಜ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಇನ್ನೋರ್ವ ಶಂಕಿತ ಉಗ್ರನ ಬಗ್ಗೆ ಸಿರಾಜ್ ಬಾಯ್ಬಿಟ್ಟಿದ್ದಾನೆ. ಬಳಿಕ ಪೊಲೀಸರು ಸಮೀರ್‌ನನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಏರೋಸ್ಪೇಸ್ ಎಂಜಿನಿಯರ್ ಸಾವು ಕೇಸ್‌ಗೆ ಟ್ವಿಸ್ಟ್ – 2 ಮಕ್ಕಳ ತಂದೆಯೊಂದಿಗೆ ಪ್ರೇಮ ವೈಫಲ್ಯ
ಶಂಕಿತ ಉಗ್ರರು ಅಲ್ ಹಿಂದ್ ಇತ್ತೆಹಾದುಲ್ ಮುಸ್ಲಿಮೀನ್ ಸಂಘಟನೆ ನಡೆಸುತ್ತಿದ್ದರು. ಸಮೀರ್ ಇಂಜಿನಿಯರಿಂಗ್ ಮುಗಿಸಿ, ಲಿಫ್ಟ್ ಆಪರೇಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಶಂಕಿತರು ಬ್ಲಾಸ್ಟ್ ಸಲುವಾಗಿ ಪೊಟ್ಯಾಸಿಯಮ್ ಕ್ಲೊರೇಡ್ ಹಾಗೂ ಸಲ್ಫರ್‌ನಂತಹ ರಾಸಾಯನಿಕಗಳನ್ನು ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ದರು. ಈ ತಿಂಗಳು 21-22 ರಂದು ವಿಜಯನಗರ ಪ್ರದೇಶದಲ್ಲಿ ಪೂರ್ವಭ್ಯಾಸಕ್ಕೆ ತಯಾರಿ ಮಾಡಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಾನ್ಯತಾ ಟೆಕ್ ಪಾರ್ಕ್ ಜಲಾವೃತ – ಪರ್ಯಾಯ ಮಾರ್ಗ ಬಳಸುವಂತೆ ಮನವಿ
ಶಂಕಿತ ಉಗ್ರರ ಮನೆಯಿಂದ ಅಮೋನಿಯಾ, ಸಲ್ಫರ್ ಮತ್ತು ಅಲ್ಯೂಮಿನಿಯಂ ಪುಡಿ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಇಬ್ಬರು ಶಂಕಿತ ಉಗ್ರರನ್ನು ಶೀಘ್ರದಲ್ಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುಂದಿನ ನಾಲ್ಕು ದಿನ ರಾಜ್ಯಕ್ಕೆ ಮಳೆ ಎಚ್ಚರಿಕೆ – ಬೆಂಗಳೂರಿಗೆ ಇಂದು ಯೆಲ್ಲೋ ಅಲರ್ಟ್
ಚಾಮರಾಜನಗರ: ಆಂಧ್ರ ಪ್ರದೇಶದ ಬಹುಕೋಟಿ ಅಬಕಾರಿ ಹಗರಣ (Andhra Pradesh Excise Scam) ಪ್ರಕರಣದ ಪ್ರಮುಖ ಆರೋಪಿ ಬಾಲಾಜಿ ಗೋವಿಂದಪ್ಪನನ್ನು ಎಸ್‌ಐಟಿ (SIT) ವಶಕ್ಕೆ ಪಡೆದಿದೆ.
ಆರೋಪಿ ಬಾಲಾಜಿ ಗೋವಿಂದಪ್ಪನನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು ಆಂಧ್ರ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಜಗನ್‌ಮೋಹನ್ ರೆಡ್ಡಿ ಪತ್ನಿ ವೈಎಸ್ ಭಾರತಿ ಅಧ್ಯಕ್ಷೆಯಾಗಿರುವ ಭಾರತಿ ಸಿಮೆಂಟ್ ಪ್ರೈವೆಟ್ ಲಿಮಿಟೆಡ್‌ನ ನಿರ್ದೇಶಕ ಹಾಗು ಲೆಕ್ಕಪರಿಶೋಧಕರಾಗಿರುವ ಬಾಲಾಜಿ ಗೋವಿಂದಪ್ಪ ಬಿಳಿಗಿರಿರಂಗನ ಬೆಟ್ಟದ ಖಾಸಗಿ ರೆಸಾರ್ಟ್‌ನಲ್ಲಿ ಕಳೆದ ಒಂದು ವಾರದಿಂದ ಉಳಿದುಕೊಂಡಿದ್ದರು. ಇದನ್ನೂ ಓದಿ: ಅವರು ನಮ್ಮ ತಲೆಗೆ ಹೊಡೆದ್ರೆ, ನಾವು ಎದೆ ಬಗೆಯುತ್ತೇವೆ: ಪಾಕ್‌ಗೆ ರಾಜನಾಥ್ ಸಿಂಗ್ ಖಡಕ್ ಸಂದೇಶ
ಜಗನ್‌ಮೋಹನ್ ರೆಡ್ಡಿ ಸಿಎಂ ಆಗಿದ್ದ ಅವಧಿಯಲ್ಲಿ ಅಬಕಾರಿ ಹಗರಣ ನಡೆದಿತ್ತು. ಈ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಬಾಲಾಜಿ ಗೋವಿಂದಪ್ಪಗೆ ನೋಟಿಸ್ ನೀಡಿತ್ತು. ನೋಟಿಸ್ ಜಾರಿಯಾದ ಬಳಿಕ ಆಂಧ್ರದಿಂದ ಗೋವಿಂದಪ್ಪ ನಾಪತ್ತೆಯಾಗಿದ್ದರು. ಆರೋಪಿಯ ಜಾಡು ಪತ್ತೆ ಮಾಡಿದ ಎಸ್‌ಐಟಿ ಬಾಲಾಜಿ ಗೋವಿಂದಪ್ಪನನ್ನು ವಶಕ್ಕೆ ಪಡೆದಿದೆ. ಇದನ್ನೂ ಓದಿ: ಪಾಕ್ ಧ್ವಜ, ಸರಕುಗಳ ಮಾರಾಟ ನಿಲ್ಲಿಸುವಂತೆ ಇ-ಕಾಮರ್ಸ್ ಕಂಪನಿಗಳಿಗೆ ಕೇಂದ್ರ ವಾರ್ನಿಂಗ್
ಆರೋಪಿ ಬಾಲಾಜಿ ಗೋವಿಂದಪ್ಪ ರಾತ್ರಿ ಸಂಚಾರ ನಿರ್ಬಂಧ ಉಲ್ಲಂಘನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಆರೋಪವನ್ನು ಬಿಆರ್‌ಟಿ ಅರಣ್ಯಾಧಿಕಾರಿಗಳು ನಿರಾಕರಿಸಿದ್ದಾರೆ. ಬಿಳಿಗಿರಿರಂಗನಬೆಟ್ಟಕ್ಕೆ ಗುಂಬಳ್ಳಿ ಚೆಕ್‌ಪೋಸ್ಟ್ ಮೂಲಕ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಪ್ರವೇಶ ನಿರ್ಬಂಧ ಇದೆ. ಈ ಸಮಯದಲ್ಲಿ ಯಾರಿಗೂ ಪ್ರವೇಶಾವಕಾಶ ನೀಡಿಲ್ಲ. ಆರೋಪಿತ ವ್ಯಕ್ತಿ ಮೇ 8 ರಂದು ಬೆಳಿಗ್ಗೆ 9 ಗಂಟೆ ನಂತರ ಬಿಳಿಗಿರಿರಂಗನ ಬೆಟ್ಟಕ್ಕೆ ಬಂದಿದ್ದಾರೆ. ಸಿಸಿಟಿವಿ ಪರಿಶೀಲಿಸಲಾಗಿದೆ. ನಿರ್ಬಂಧಿತ ಅವಧಿಯಲ್ಲಿ ಯಾವುದೇ ಖಾಸಗಿ ವಾಹನಕ್ಕೆ ಪ್ರವೇಶ ನೀಡಿಲ್ಲ ಎಂದು ಬಿಆರ್‌ಟಿ ಯಳಂದೂರು ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ್ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ದಾಳಿ ನಂತ್ರ ಪಾಕ್‌ನಲ್ಲಿ ಪರಮಾಣು ವಿಕಿರಣ ಸೋರಿಕೆ ಆಗ್ತಿದ್ಯಾ? ಮತ್ತೆ ಜಗತ್ತಿನ ಮುಂದೆ ಬೆತ್ತಲಾದ ಪಾಕ್
ಅಮರಾವತಿ: ಆಂಧ್ರಪ್ರದೇಶದ (Andhra Pradesh) ಗ್ರಾಮ ಪಂಚಾಯತಿ ಮಿತಿಯೊಳಗಿನ ಸೈನಿಕರ ಒಡೆತನದ ಮನೆಗಳಿಗೆ ಆಸ್ತಿ ತೆರಿಗೆ ವಿನಾಯಿತಿ (Property Tax Exemption) ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಘೋಷಿಸಿದ್ದಾರೆ.
Andhra Pradesh Stands with Our Soldiers
As a mark of deep respect and gratitude to our brave soldiers, the Andhra Pradesh NDA government Under the leadership of Hon’ble CM Sri @ncbn garu, PanchayatRaj Department has taken a significant decision, to grant property tax exemption…
ಈ ಬಗ್ಗೆ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ, ಈ ಹಿಂದೆ ನಿವೃತ್ತ ಸೈನಿಕರು ಅಥವಾ ಗಡಿಗಳಲ್ಲಿ ನಿಯೋಜನೆಗೊಂಡವರಿಗೆ ಸೀಮಿತವಾಗಿತ್ತು. ಇನ್ನುಮುಂದೆ ಈ ವಿನಾಯಿತಿಯು ದೇಶದ ಯಾವುದೇ ಭಾಗದಲ್ಲಿ ನಿಯೋಜನೆಗೊಂಡ ಎಲ್ಲಾ ಸಕ್ರಿಯ ಸಿಬ್ಬಂದಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎರಡೂ ಕಡೆಯಿಂದ ಒಂದೇ ಒಂದು ಗುಂಡು ಹೊಡೆಯಬಾರದು: DGMO ಸಭೆಯಲ್ಲಿ ಏನಾಯ್ತು?
ಈ ನಿರ್ಧಾರವು ಸೇನೆ, ನೌಕಾಪಡೆ, ವಾಯುಪಡೆ, CRPF ಮತ್ತು ಅರೆಸೈನಿಕ ಪಡೆಗಳಿಗೆ ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿದೆ. ರಾಷ್ಟ್ರಕ್ಕಾಗಿ ಅವರ ಸೇವೆ ಅಮೂಲ್ಯವಾದುದ್ದು. ಸಿಬ್ಬಂದಿ ಅಥವಾ ಅವರ ಸಂಗಾತಿ ವಾಸಿಸುವ ಅಥವಾ ಜಂಟಿಯಾಗಿ ಹೊಂದಿರುವ ಆಸ್ತಿ ಮೇಲಿನ ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಸೈನಿಕ ಕಲ್ಯಾಣ ನಿರ್ದೇಶಕರ ಶಿಫಾರಸಿನ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಇದು ರಾಷ್ಟ್ರದ ರಕ್ಷಕರಿಗೆ ಆಂಧ್ರದ ಗೌರವ ಮತ್ತು ಕೃತಜ್ಞತೆಯನ್ನು ಎತ್ತಿತೋರಿಸುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಜೆಯಲ್ಲಿದ್ದ ಯೋಧ ಮರಳಿ ಗಡಿಯತ್ತ – ಬೀಳ್ಕೊಟ್ಟ ಗುಬ್ಬಿ ನಾಗರಿಕರು
– ಆಂಧ್ರದ ಹುಟ್ಟೂರಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ – ಅಗ್ನಿವೀರ್ ಮುರಳಿ ಕುಟುಂಬಕ್ಕೆ ಆರ್ಥಿಕ ನೆರವು ಘೋಷಿಸಿದ ಸರ್ಕಾರ
ಅಮರಾವತಿ: ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಅಗ್ನಿವೀರ್ ಮುದವತ್ ಮುರಳಿ ನಾಯಕ್ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಅವರ ಹುಟ್ಟೂರು ಕಲ್ಲಿ ಥಂಡಾದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಗೋರಂಟ್ಲಾ ಮಂಡಲದ ಕಲ್ಲಿ ಥಂಡಾ ಗ್ರಾಮದ 23 ವರ್ಷದ ಸೈನಿಕ ಶುಕ್ರವಾರ ನಸುಕಿನ 2 ಗಂಟೆ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಮೀಸಲು ಪ್ರದೇಶದಲ್ಲಿ ‘ಆಪರೇಷನ್ ಸಿಂಧೂರ’ ಭಾಗವಾಗಿ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾಗಿದ್ದರು.
ಶನಿವಾರ ರಾತ್ರಿ ಮುರಳಿ ಅವರ ಪಾರ್ಥಿವ ಶರೀರ ಹುಟ್ಟೂರಿಗೆ ತಲುಪಿತು. ದೇಶಕ್ಕಾಗಿ ಹೋರಾಡಿ ಮಡಿದ ವೀರ ಯೋಧನಿಗೆ ಇಡೀ ಗ್ರಾಮವೇ ಕಂಬನಿ ಮಿಡಿದು ಗೌರವ ಸಲ್ಲಿಸಿತು. ಯೋಧನ ಪಾರ್ಥಿವ ಶರೀರವನ್ನು ಗುಮ್ಮಯ್ಯಗರಿಪಲ್ಲಿ ಕ್ರಾಸ್‌ನಿಂದ ಕಲ್ಲಿ ತಾಂಡಾದವರೆಗೆ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ನೆರೆದಿದ್ದ ಜನ ಪುಷ್ಪನಮನ ಸಲ್ಲಿಸಿ ಭಾವಪೂರ್ಣ ವಿದಾಯ ಹೇಳಿದರು. ‘ಭಾರತ್ ಮಾತಾ ಕಿ ಜೈ’, ‘ಮುರಳಿ ನಾಯಕ್ ಅಮರ್ ರಹೇ’ ಎಂದು ಎಂದು ಜನರು ಘೋಷಣೆ ಕೂಗಿ ಗೌರವ ಸಮರ್ಪಿಸಿದರು.
ಯೋಧನ ಪಾರ್ಥಿವ ಶರೀರ ಮನೆ ತಲುಪುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಪುತ್ರನ ಮೊಗವನ್ನು ಕಂಡು ತಾಯಿ ಜ್ಯೋತಿ ಬಾಯಿ ದುಃಖಿಸಿದರು. ಕುಟುಂಬದ ಸದಸ್ಯರು ಕಣ್ಣೀರಿಟ್ಟರು. ಈ ವೇಳೆ ಸ್ಥಳದಲ್ಲಿದ್ದ ಸಚಿವೆ ಸವಿತಾ ಅವರು ಯೋಧನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಐಟಿ ಸಚಿವ ನಾರಾ ಲೋಕೇಶ್ ಕೂಡ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಿ ಯೋಧನಿಗೆ ಗೌರವ ಸಲ್ಲಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಕಲ್ಯಾಣ್, ಯೋಧನ ಕುಟುಂಬಕ್ಕೆ ಆರ್ಥಿಕ ನೆರವು ಘೋಷಿಸಿದರು.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು, ಹುತಾತ್ಮ ಯೋಧ ಮುರಳಿ ನಾಯಕ್ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ, ಐದು ಎಕರೆ ಕೃಷಿ ಭೂಮಿ, ವಸತಿಗಾಗಿ 300 ಚದರಡಿ ಭೂಮಿಯನ್ನು ಘೋಷಿಸಿದ್ದಾರೆ. ಸಂಪುಟದಲ್ಲಿ ಚರ್ಚೆಯ ನಂತರ ನಾಯಕ್ ಅವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಸಹ ನೀಡಲಾಗುವುದು ಎಂದು ಪವನ್ ಕಲ್ಯಾಣ್ ತಿಳಿಸಿದರು. ದುಃಖಿತ ಕುಟುಂಬಕ್ಕೆ ವೈಯಕ್ತಿಕವಾಗಿ 25 ಲಕ್ಷ ರೂ. ಪರಿಹಾರ ನೀಡಿದರು.
ಸಾವಿಗೂ ಮುನ್ನ ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮುಂಬೈನ ಘಾಟ್‌ಕೋಪರ್‌ನ ಕಾಮರಾಜ್ ನಗರದಲ್ಲಿದ್ದ ತನ್ನ ಹೆತ್ತವರೊಂದಿಗೆ ಅಗ್ನಿವೀರ್ ಮುರಳಿ ವೀಡಿಯೊ ಕರೆಯ ಮೂಲಕ ಮಾತನಾಡಿದ್ದರು. ಪುತ್ರನೊಂದಿಗೆ ಕೊನೆಯದಾಗಿ ಮಾತನಾಡಿದ್ದ ಸನ್ನಿವೇಶ ನೆನಪಿಸಿಕೊಂಡು ತಂದೆ ಶ್ರೀರಾಮ್ ಕಣ್ಣೀರಿಟ್ಟರು.