Tag: Andhra Pradesh

  • ಯುವಕನ ‘ಸೈಕೋ’ ಚೇಷ್ಟೆಗಳಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ

    ಯುವಕನ ‘ಸೈಕೋ’ ಚೇಷ್ಟೆಗಳಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ

    ಹೈದರಾಬಾದ್: ಪ್ರೀತಿ ಮಾಡು ಎಂದು ಹಿಂದೆ ಬಿದ್ದ ಯುವಕನ ಚೇಷ್ಟೆಗಳಿಂದ ನೊಂದ ಯುವತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ.

    25 ವರ್ಷದ ಮೀನಾಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಕಾರಣನಾದ ಯುವಕನ ಬಗ್ಗೆ ತನ್ನ ನೋಟ್ ಬುಕ್ ನಲ್ಲಿ ಬರೆದಿಟ್ಟು ಸಾವಿಗೆ ಶರಣಾಗಿದ್ದಾಳೆ.

    ಮೀನಾಕ್ಷಿ ಶ್ರೀಕಾಕುಳಂನ ಗುರುದಾಸಪುರಂ ಗ್ರಾಮದ ನಿವಾಸಿಯಾಗಿದ್ದು, ತನ್ನೊಂದಿಗೆ ಪಿಯುಸಿ ಓದಿದ್ದ ಯುವಕ ತುಲಸಿರಾವ್ ನೊಂದಿಗೆ ಉತ್ತಮ ಸ್ನೇಹವಿದ್ದ ಕಾರಣ ಫೋನ್ ನಂಬರ್ ನೀಡಿದ್ದಳು. ಇಬ್ಬರ ನಡುವೆ ಉತ್ತಮ ಸ್ನೇಹವಿತ್ತು. ಆದರೆ ಫೋನ್ ನಂಬರ್ ಪಡೆದ ತುಲಸಿರಾವ್ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ ಆತನ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಸ್ನೇಹಿತನ ಜೀವನಕ್ಕೆ ತೊಂದರೆಯಾಗಬಾರದು ಎಂದು ಮೀನಾಕ್ಷಿ ಈ ವಿಚಾರವನ್ನು ಕುಟುಂಬಸ್ಥರಿಗೆ ಹೇಳಿರಲಿಲ್ಲ.

    ಮೀನಾಕ್ಷಿಯಿಂದ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಆಕೆಗೆ ತೊಂದರೆ ನೀಡಲು ಆರಂಭಿಸಿದ್ದ ಆತ, ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಬೆದರಿಸಿದ್ದ. ಅಲ್ಲದೇ ಈ ಹಿಂದೆ ಆತನೊಂದಿಗೆ ತೆಗೆದುಕೊಂಡಿದ್ದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ಇದರಿಂದ ನೊಂದ ಮೀನಾಕ್ಷಿ ಅ.5 ರಂದು ಆತ್ಮಹತ್ಯೆಗೆ ಶರಣಾಗಿದ್ದಳು.

    ಬಾವಿಯಲ್ಲಿ ಯುವತಿಯ ಮೃತದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವತಿ ಪೋಷಕರು ನೀಡಿದ ದೂರಿನ ಮೇರೆಗೆ ವಿಚಾರಣೆ ಆರಂಭಿಸಿದ್ದ ಪೊಲೀಸರಿಗೆ ಮೃತ ಮೀನಾಕ್ಷಿ ಬರೆದಿಟ್ಟಿದ್ದ ಡೇಟ್ ನೋಟ್ ಸಿಕ್ಕಿತ್ತು.

    ಡೇತ್ ನೋಟ್‍ನಲ್ಲೇನಿದೆ: ‘ನನಗೆ ಈ ಹಿಂದೆ ತುಲಸಿ ಹಾಗೂ ಕೃಷ್ಣ ಇಬ್ಬರು ಸ್ನೇಹಿತರು. ಆದರೆ ನನ್ನ ಫೋನ್ ನಂಬರ್ ಪಡೆದು ಮದುವೆಯಾಗುತ್ತೇನೆ ಎಂದು ಹೇಳಿ ಕರೆ ಮಾಡುತ್ತಿದ್ದ ಹಿಂಸೆಯ ಕುರಿತು ನಾನು ಕೃಷ್ಣ ಬಳಿ ಹೇಳಿಕೊಳ್ಳುತ್ತಿದೆ. ಪೊಲೀಸರಿಗೆ ಹೇಳಿದರೆ ಕಷ್ಟಬಿದ್ದು ಸಿಆರ್ ಪಿಎಫ್‍ನಲ್ಲಿ ಕೆಲಸ ಪಡೆದಿದ್ದ ಆತ ಉದ್ಯೋಗ ಕಳೆದುಕೊಳ್ಳುತ್ತಾನೆ. ಸರ್ಕಾರಿ ಉದ್ಯೋಗ ಪಡೆಯುವುದರ ಹಿಂದಿನ ಕಷ್ಟವೇನು ಎಂಬುವುದು ನನಗೆ ಗೊತ್ತಿದೆ. ಆದ್ದರಿಂದ ನನ್ನ ಹಾಗೂ ಆತನ ಕುಟುಂಬಕ್ಕೆ ಯಾವುದೇ ತೊಂದರೆಯಾಗದಂತೆ ನಾನೇ ದೂರವಾಗುತ್ತಿದ್ದೇನೆ. ಹಿಂದೊಮ್ಮೆ ನನಗೆ ಕುಟುಂಬಕ್ಕಿಂತಲೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದ ಆತ, ಈಗ ನನ್ನನ್ನು ಈ ಲೋಕದಲ್ಲೇ ಇಲ್ಲದಂತೆ ಮಾಡುತ್ತೇನೆ ಎಂದು ಹೇಳುತ್ತಿದ್ದಾನೆ. ಎಲ್ಲವೂ ನನಗೆ ಈಗ ಅರ್ಥವಾಗುತ್ತಿದೆ. ಪ್ರತಿ ಕ್ಷಣ ಭಯದಿಂದ ಬದುಕುವುದು ವ್ಯರ್ಥ. ಐ ಮಿಸ್ ಮೈ ಫ್ಯಾಮಿಲಿ’ ಎಂದು ಮೀನಾಕ್ಷಿ ಬರೆದಿಟ್ಟಿದ್ದಾಳೆ.

  • ತಾಯಿಯ ಚಿಕಿತ್ಸೆಗಾಗಿ ಕಾರವಾರಕ್ಕೆ ಹೊರಟಿದ್ದ ಆಂಧ್ರದ ವ್ಯಕ್ತಿ ದಾರುಣ ಸಾವು

    ತಾಯಿಯ ಚಿಕಿತ್ಸೆಗಾಗಿ ಕಾರವಾರಕ್ಕೆ ಹೊರಟಿದ್ದ ಆಂಧ್ರದ ವ್ಯಕ್ತಿ ದಾರುಣ ಸಾವು

    – ಕಾರು, ಬಸ್ ಮುಖಾಮುಖಿ ಡಿಕ್ಕಿ: ಮೂವರ ದುರ್ಮರಣ

    ಧಾರವಾಡ: ಸರ್ಕಾರಿ ಸಾರಿಗೆ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ಹುಬ್ಬಳ್ಳಿ-ಗದಗ ಹೆದ್ದಾರಿಯಲ್ಲಿ ನಡೆದಿದೆ.

    ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಡೇವಿಸ್ ಸುಧಾಕರ್ ಮೃತ ದುರ್ದೈವಿ. ಉಳಿದ ಇಬ್ಬರ ಗುರುತು ಪತ್ತೆಯಾಗಿಲ್ಲ. ಅಣ್ಣಿಗೇರಿ ಸಮೀಪದ ಭದ್ರಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಪ್ಯಾರಾಲಿಸಿಸ್‍ನಿಂದ ಬಳಲುತ್ತಿದ್ದ ತಾಯಿಯನ್ನು ಕಾರಿನಲ್ಲಿ ಕರೆದುಕೊಂಡು ಡೇವಿಸ್ ಸುಧಾಕರ್ ಕಾರವಾರಕ್ಕೆ ಪ್ರಯಾಣ ಬೆಳೆಸಿದ್ದರು. ಹುಬ್ಬಳ್ಳಿ-ಗದಗ ಹೆದ್ದಾರಿ ದುರಸ್ತಿ ಕಾಮಗಾರಿ ನಡೆದಿದ್ದು, ವೇಗವಾಗಿ ಬಂದ ಕಾರು ಹಾಗೂ ಬಸ್ ಚಾಲಕರ ನಿಯಂತ್ರಣ ತಪ್ಪಿ ಭದ್ರಾಪೂರ ಗ್ರಾಮದ ಬಳಿ ಮುಖಾಮುಖಿ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಬಸ್ ಪಲ್ಟಿ ಹೊಡೆದಿದ್ದು, ಕಾರು ನುಜ್ಜುಗುಜ್ಜು ಆಗಿದೆ. ಕಾರಿನಲ್ಲಿದ್ದ ಡೇವಿಸ್ ಸುಧಾಕರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಸ್‍ನಲ್ಲಿ 12 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಅಣ್ಣಿಗೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅದೃಷ್ಟವಶಾತ್ ಬಸ್ ಪಲ್ಟಿ ಹೊಡೆದರೂ ಅನೇಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಗುರುತು ಪತ್ತೆಗಾಗಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಒಂದೇ ದಿನಕ್ಕೆ 1.26 ಲಕ್ಷ ಮಂದಿಗೆ ಸರ್ಕಾರಿ ಕೆಲಸ – ದಾಖಲೆ ಬರೆದ ಆಂಧ್ರ ಸರ್ಕಾರ

    ಒಂದೇ ದಿನಕ್ಕೆ 1.26 ಲಕ್ಷ ಮಂದಿಗೆ ಸರ್ಕಾರಿ ಕೆಲಸ – ದಾಖಲೆ ಬರೆದ ಆಂಧ್ರ ಸರ್ಕಾರ

    ಹೈದರಾಬಾದ್: ಒಂದೇ ದಿನಕ್ಕೆ ಬರೋಬ್ಬರಿ 1.26 ಲಕ್ಷ ಮಂದಿಗೆ ಸರ್ಕಾರಿ ಕೆಲಸ ನೀಡುವ ಮೂಲಕ ಆಂಧ್ರ ಪ್ರದೇಶ ಸರ್ಕಾರ ದಾಖಲೆ ನಿರ್ಮಿಸಿದ್ದು, ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಕಾರ್ಯವೈಖರಿ ಎಲ್ಲರ ಮನ ಗೆದ್ದಿದೆ.

    ಭಾರತದಲ್ಲಿ ಹೀಗೆ ಭಾರೀ ಸಂಖ್ಯೆಯಲ್ಲಿ ಈ ಹಿಂದೆ ಒಂದೇ ದಿನಕ್ಕೆ ಯಾವ ಸರ್ಕಾರ ಕೂಡ ಉದ್ಯೋಗ ನೀಡಿರಲಿಲ್ಲ. ಆದರೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಈ ಸಾಧನೆ ಮಾಡಿದ್ದು, ಒಂದೇ ದಿನಕ್ಕೆ 1.26 ಲಕ್ಷ ಮಂದಿಗೆ ಉದ್ಯೋಗ ನೀಡಿ ಇತಿಹಾಸ ಬರೆದಿದೆ.

    ಸೋಮವಾರ ವಿಜಯವಾಡದಲ್ಲಿ ಖುದ್ದು ಸಿಎಂ ಜಗನ್ ಮೋಹನ್ ರೆಡ್ಡಿಯವರೇ, ಹೊಸದಾಗಿ ನೇಮಕಗೊಂಡವರಿಗೆ ಆದೇಶ ಪತ್ರ ವಿತರಿಸಿ ಅಭಿನಂದನೆ ತಿಳಿಸಿದರು. ಈ ವೇಳೆ ಮಾತಾಡಿದ ಸಿಎಂ, ವೈಎಸ್‍ಆರ್ ಕಾಂಗ್ರೆಸ್ ಸರ್ಕಾರ ನಿರುದ್ಯೋಗವನ್ನು ಹೋಗಲಾಡಿಸಿ, ಜನತೆಗೆ ಉದ್ಯೋಗ ಕಲ್ಪಿಸಿಕೊಡಲು ಪಣತೊಟ್ಟಿದೆ. ಆದ್ದರಿಂದ ಇನ್ಮುಂದೆ ಯುವ ಜನತೆಗೆ ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿದ್ದೇವೆ. ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

    ಸುಮಾರು 500 ಸಾರ್ವಜನಿಕ ಸೇವೆಗಳಿಗೆ 21 ಲಕ್ಷಕ್ಕೂ ಅಧಿಕ ಮಂದಿ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್ 1 ರಿಂದ 8ರವರೆಗೆ ಒಟ್ಟು 19.50 ಲಕ್ಷ ಮಂದಿ ಸರ್ಕಾರಿ ಕೆಲಸಕ್ಕಾಗಿ ಲಿಖಿತ ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆಗಳಲ್ಲಿ ಅರ್ಹತೆ ಪಡೆದ 1,98,164 ಅಭ್ಯರ್ಥಿಗಳಲ್ಲಿ ನಗರ ಪ್ರದೇಶಗಳಲ್ಲಿ 31,640 ಉದ್ಯೋಗ ನೀಡಿರುವುದನ್ನೂ ಸೇರಿಸಿ ಒಟ್ಟು 1,26,728 ಮಂದಿಗೆ ವಿವಿಧ ಹುದ್ದೆಗೆ ನೇಮಿಸಲಾಗಿದೆ.

    ಈ ಹಿಂದೆ ನೂತನವಾಗಿ ಸಿಎಂ ಪಟ್ಟ ಏರಿದಾಗಲೇ ಜಗನ್ ಅವರು ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಸಿಹಿಸುದ್ದಿ ನೀಡಿದ್ದರು. ಅವರಿಗೆ ನೀಡುತ್ತಿದ್ದ ಗೌರವ ಧನವನ್ನು 3 ಸಾವಿರದಿಂದ ದಿಢೀರ್ 10 ಸಾವಿರಕ್ಕೇರಿಸಿ ಅಧಿಕೃತವಾಗಿ ಘೋಷಿಸಿ ಮೆಚ್ಚುಗೆ ಪಡೆದಿದ್ದರು. ಇದರಿಂದ ಕಡಿಮೆ ಸಂಬಳ ಪಡೆಯುತ್ತಿದ್ದವರು ಖುಷಿಯಿಂದ ಸಿಎಂ ಕಾರ್ಯವನ್ನು ಶ್ಲಾಘಿಸಿದ್ದರು.

    ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಸಿಎಂ ಜಗನ್ ಅವರು ಹೊಸ ಯೋಜನೆಗಳನ್ನು ಘೋಷಿಸುತ್ತಲೇ ಬಂದಿದ್ದು, ವೃದ್ಧಾಪ್ಯ ವೇತನ ಹೆಚ್ಚಳ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಕಷ್ಟಪಟ್ಟು ದುಡಿಯುವ ಆಶಾ ಕಾರ್ಯಕರ್ತೆಯರಿಗೆ ಸಂಬಳ ಹೆಚ್ಚಿಸಿದ್ದರು. ಈಗ ನಿರುದ್ಯೋಗಿಗಳಿಗೆ 1 ಲಕ್ಷ 26 ಸಾವಿರ ಸರ್ಕಾರಿ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಿ ಭೇಷ್ ಎನಿಸಿಕೊಂಡಿದ್ದಾರೆ.

  • ಮಗು, ಪತ್ನಿಯನ್ನ ಕೊಲೆಗೈದ ಪಾಪಿ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಆತ್ಮಹತ್ಯೆ

    ಮಗು, ಪತ್ನಿಯನ್ನ ಕೊಲೆಗೈದ ಪಾಪಿ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಆತ್ಮಹತ್ಯೆ

    ಅಮರಾವತಿ: ವ್ಯಕ್ತಿಯೊಬ್ಬ ಪತ್ನಿ ಹಾಗೂ ಒಂದು ವರ್ಷದ ಮಗು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಒಡಿಶಾ ಮೂಲದ ಸಕ್ರಜಿತ್ ಭಂಜೆ ತನ್ನ ಪತ್ನಿ ಸುಕ್ಲಾ ಹಾಗೂ ಒಂದು ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದಿದ್ದ. ಬಳಿಕ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಾಣ ಬಿಟ್ಟಿದ್ದಾನೆ. ವಿಶಾಖಪಟ್ಟಣ ಜಿಲ್ಲೆಯ ಮಧುರ್ವಾಡಾ ಎಂಬಲ್ಲಿ ಶನಿವಾರ ಈ ದುರಂತ ಸಂಭವಿಸಿದೆ.

    ಒಡಿಶಾ ಮೂಲದ ಸಕ್ರಜಿತ್ ಭಂಜೆ ಸುಕ್ಲಾರನ್ನು 2017ರಲ್ಲಿ ವಿವಾಹವಾಗಿದ್ದ. ಮಗು ಹಾಗೂ ಪತ್ನಿಯನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದ ಸಕ್ರಜಿತ್ ಚಲಿಸುತ್ತಿದ್ದ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಭಂಜೆ ಆಹಾರ ಇಲಾಖೆಯ ಉದ್ಯೋಗಿಯಾಗಿದ್ದನಂತೆ. ಭಂಜೆ, ಸುಕ್ಲಾ ಹಾಗೂ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

    ಭಂಜೆ ಯಾವ ಕಾರಣಕ್ಕಾಗಿ ಪತ್ನಿ ಹಾಗೂ ಮಗುವನ್ನು ಕೊಲೆ ಮಾಡಿದ್ದಾನೆ. ಆತ್ಮಹತ್ಯೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಸಂಸಾರ ನಡೆಸೋಣ ಬಾ ಎಂದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಪತ್ನಿ

    ಸಂಸಾರ ನಡೆಸೋಣ ಬಾ ಎಂದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಪತ್ನಿ

    ಅಮರಾವತಿ: ಸಂಸಾರ ನಡೆಸೋಣ ಬಾ ಎಂದು ಕರೆದ ಪತಿಯ ಮರ್ಮಾಂಗವನ್ನು ಪತ್ನಿ ಕತ್ತರಿಸಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

    ಪಾಣ್ಯಂ ತಾಲೂಕಿನ ಎಸ್.ಕೊಟ್ಟಾಲ ಗ್ರಾಮದ ಯೂನುಸ್ (23) ಪತ್ನಿಯಿಂದ ಹಲ್ಲೆಗೆ ಒಳಗಾದ ಪತಿ. ಹಸೀನಾಳ ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ. ಕರ್ನೂಲ್ ಜಿಲ್ಲೆಯ ಗಡಿವೆಮುಲ ತಾಲೂಕಿನ ಸೋಮಾಪುರಂನಲ್ಲಿ ಗುರುವಾರ ಘಟನೆ ನಡೆದಿದೆ.

    ಯೂನುಸ್ ಎರಡು ವರ್ಷಗಳ ಹಿಂದೆಯಷ್ಟೇ ಸೋಮಾಪುರಂ ಗ್ರಾಮದ ಹಸೀನಾಳನ್ನು ಮದುವೆಯಾಗಿದ್ದ. ಮದುವೆಯಾಗಿ ಕೆಲವೇ ದಿನಗಳಲ್ಲಿ ಪತಿ-ಪತ್ನಿ ಸಣ್ಣ ವಿಚಾರಕ್ಕೆ ಜಗಳವಾಡಿ ದೂರವಾಗಿದ್ದರು. ಪತಿ ಮನೆ ಬಿಟ್ಟು ಬಂದಿದ್ದ ಹಸೀನಾ ತವರು ಮನೆ ಸೇರಿದ್ದಳು. ಇಂದಲ್ಲ ನಾಳೆ ಪತ್ನಿ ಬರುತ್ತಾಳೆ ಅಂತ ಯೂನಸ್ ಎರಡು ವರ್ಷಗಳಿಂದ ಕಾಯುತ್ತಲೇ ಇದ್ದ. ಆದರೆ ಹಸೀನಾ ಮಾತ್ರ ತವರು ಮನೆಯಲ್ಲಿಯೇ ಉಳಿದಿದ್ದಳು.

    ಯೂನುಸ್ ಎರಡು ವರ್ಷಗಳ ಬಳಿಕ ಸೋಮಾಪುರಂನಲ್ಲಿರುವ ಅತ್ತೆಯ ಮನೆಗೆ ತೆರಳಿ ಪತ್ನಿ ಹಸೀನಾಳನ್ನು ಸಂಸಾರ ಮಾಡೋಣ ಬಾ ಎಂದು ಕರೆದಿದ್ದಾನೆ. ಪತಿಯ ಮಾತು ಕೇಳಿದ ಹಾಸೀನಾ ಕೋಪಗೊಂಡಿದ್ದಾಳೆ. ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸಿದ್ದಾರೆ. ಕುಟುಂಬಸ್ಥರ ಜೊತೆ ಸೇರಿ ಹಸೀನಾ ಪತಿ ಯೂನುಸ್‍ನನ್ನು ಕಂಬಕ್ಕೆ ಕಟ್ಟಿ ಹಾಕಿ ಮನ ಬಂದಂತೆ ಥಳಿಸಿದ್ದಾಳೆ. ಈ ವೇಳೆ ಹಸೀನಾ ಪತಿಯ ಮರ್ಮಾಂಗವನ್ನು ಕತ್ತರಿಸಿ ಹಾಕಿದ್ದಾಳೆ.

    ಗಂಭೀರವಾಗಿ ಗಾಯಗೊಂಡ ಯೂನುಸ್ ಕಾಪಾಡುವಂತೆ ಕೂಗಿ ಅಳುತ್ತಿದ್ದ ಧ್ವನಿಯನ್ನು ಕೇಳಿದ ಸ್ಥಳೀಯರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ತಕ್ಷಣವೇ ಯೂನುಸ್‍ನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯೂನುಸ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ ಎಂದು ವರದಿಯಾಗಿದೆ.

  • ವಿಧಾನಸಭೆಯಿಂದ ಪೀಠೋಪಕರಣ ಮನೆಗೆ ಹೊತ್ತೊಯ್ದ ಮಾಜಿ ಸ್ಪೀಕರ್ ನೇಣಿಗೆ ಶರಣು

    ವಿಧಾನಸಭೆಯಿಂದ ಪೀಠೋಪಕರಣ ಮನೆಗೆ ಹೊತ್ತೊಯ್ದ ಮಾಜಿ ಸ್ಪೀಕರ್ ನೇಣಿಗೆ ಶರಣು

    ಹೈದರಾಬಾದ್: ವಿಧಾನಸಭೆಯಿಂದ ಪೀಠೋಪಕರಣ ಮನೆಗೆ ಹೊತ್ತೊಕೊಂಡು ಹೋಗಿದ್ದಾರೆ ಎಂಬ ಆರೋಪ ಹೊತ್ತಿದ್ದ ಆಂಧ್ರ ಪ್ರದೇಶದ ಮಾಜಿ ವಿಧಾನಸಭೆ ಸ್ಪೀಕರ್ ಕೊಡೆಲ ಶಿವಪ್ರಸಾದ್ ರಾವ್ ಅವರು ತಮ್ಮ ಹೈದರಾಬಾದ್‍ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    72 ವರ್ಷದ ಶಿವಪ್ರಸಾದ್ ಬೆಳಗ್ಗೆ ತಿಂಡಿ ತಿಂದು ತಮ್ಮ ರೂಮ್‍ಗೆ ಹೋಗಿದ್ದಾರೆ. ನಂತರ ಅವರ ರೂಮ್ ಬಿಟ್ಟು ಬಾರದೆ ಇರುವುದನ್ನು ಗಮನಿಸಿದ ಅವರ ಮನೆಯವರು ರೂಮ್ ಒಳಗೆ ಹೋಗಿ ನೋಡಿದಾಗ ಅವರು ಅವರ ರೂಮ್‍ನ ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿಕೊಂಡಿದ್ದಾರೆ. ತಕ್ಷಣ ಅವರನ್ನು ಹೈದರಾಬಾದ್‍ನ ಬಸವತಾರಕಂ ಆಸ್ಪತ್ರೆಗೆ ಸೇರಿಸಿದರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

    ವೈ.ಎಸ್‍.ಆರ್‍.ಪಿ ಪಕ್ಷದವರು ಶಿವಪ್ರಸಾದ್ ಅವರ ಕುಟುಂಬದ ಸದಸ್ಯರ ವಿರುದ್ಧ ದೂರು ನೀಡಿದ್ದ ಕಾರಣ ಅವರು ತುಂಬ ಅವಮಾನಕ್ಕೆ ಒಳಗಾಗಿದ್ದರು. ಅವರ ಕುಟುಂಬ ಸದಸ್ಯರಿಗೆ ಕೋರ್ಟ್ ಜಾಮೀನು ನೀಡಿದ್ದರೂ ಶಿವಪ್ರಸಾದ್ ಆ ವಿಚಾರದಲ್ಲಿ ತುಂಬಾ ಖಿನ್ನತೆಗೆ ಒಳಗಾಗಿದ್ದರು. ಈ ವಿಚಾರಕ್ಕೆ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಇದನ್ನು ಓದಿ: ವಿಧಾನಸಭೆಯಲ್ಲಿನ ಕಂಪ್ಯೂಟರ್, ಎಸಿ, ಪೀಠೋಪಕರಣಗಳನ್ನು ಮನೆಗೆ ಹೊತ್ತೊಯ್ದ ಮಾಜಿ ಸ್ಪೀಕರ್

    1983 ರಲ್ಲಿ ಎನ್.ಟಿ ರಾಮರಾವ್ ಅವರು ತೆಲುಗು ದೇಶಂ ಪಕ್ಷ (ಟಿಡಿಪಿ) ಪಕ್ಷ ಸ್ಥಾಪನೆ ಮಾಡಿದಾಗ ಶಿವಪ್ರಸಾದ್ ರಾಜಕೀಯಕ್ಕೆ ಕಾಲಿಟ್ಟಿದ್ದರು ಮತ್ತು ಪಕ್ಷದಲ್ಲಿ ಹಿರಿಯ ನಾಯಕ ಎಂದು ಗುರುತಿಸಿಕೊಂಡಿದ್ದರು. ಆರು ಬಾರಿಯ ಶಾಸಕನಾಗಿ ಸೇವೆಸಲ್ಲಿಸಿರುವ ಅವರು ಐದು ಬಾರಿ ನರಸಾರೋಪೇಟೆ ಕ್ಷೇತ್ರದಿಂದ ಮತ್ತು 2014 ರಲ್ಲಿ ಒಂದು ಬಾರಿ ಸಟ್ಟೇನಪಳ್ಳಿಯಿಂದ ಗೆದ್ದಿದ್ದಾರೆ. ಅನೇಕ ಬಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ ಶಿವಪ್ರಸಾದ್ 2014 ರ ಅವಧಿಯಲ್ಲಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

    ಸ್ಪೀಕರ್ ಆಗಿ ತಮ್ಮ ಅವದಿ ಮುಗಿದ ನಂತರ ಅವರು ವಿಧಾನಸಭೆಯಲ್ಲಿರುವ ಕಂಪ್ಯೂಟರ್ ಮತ್ತು ಎಸಿ ಹಾಗೂ ಪೀಠೋಪಕರಣಗಳನ್ನು ಮನೆಗೆ ಹೊತ್ತೊಯ್ದಿದ್ದಾರೆ ಎಂಬ ಆರೋಪವು ಶಿವಪ್ರಸಾದ್ ರಾವ್ ವಿರುದ್ಧ ಕೇಳಿ ಬಂದಿತ್ತು.

  • 74ನೇ ವಯಸ್ಸಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ‘ಜಗತ್ತಿನ ಹಿರಿಯ ಪೋಷಕರು’ ಐಸಿಯುನಲ್ಲಿ

    74ನೇ ವಯಸ್ಸಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ‘ಜಗತ್ತಿನ ಹಿರಿಯ ಪೋಷಕರು’ ಐಸಿಯುನಲ್ಲಿ

    ಹೈದರಾಬಾದ್: 74ರ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ‘ಜಗತ್ತಿನ ಹಿರಿಯ ಪೋಷಕರು’ ಎಂದು ಖ್ಯಾತಿ ಪಡೆದ ಎರ್ರಮಟ್ಟಿ ಮಂಗಯಮ್ಮ ಹಾಗೂ ಅವರ ಪತಿ ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಭಾನುವಾರದಂದು ಮಂಗಯಮ್ಮ(74) ಹಾಗೂ ಎರ್ರಾಮಟಿ ರಾಜ ರಾವ್(80) ದಂಪತಿಯ ಅವಳಿ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅತ್ತ ರಾಜರಾವ್ ಅವರಿಗೆ ಹೃದಯಾಘಾತವಾದ ಕಾರಣಕ್ಕೆ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಮಂಗಯಮ್ಮ ಅವರಿಗೆ ಸಿಸೇರಿಯನ್ ಮಾಡಿರುವ ಕಾರಣಕ್ಕೆ ಯಾವುದೇ ಇನ್ಫೆಕ್ಷನ್ ಆಗದಿರಲಿ ಎಂದು ಇನ್ನೂ ಐಸಿಯುನಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ. ಹೀಗಾಗಿ ಅವಳಿ ಮಕ್ಕಳನ್ನು ಅವರ ಸಂಬಂಧಿಗಳು ನೋಡಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ವೈದ್ಯರು ಪ್ರತಿಕ್ರಿಯಿಸಿ, ಶ್ವಾಸಕೋಶದ ಇನ್ಫೆಕ್ಷನ್ ಹಾಗೂ ಲಘು ಹೃದಯಾಘಾತವಾದ ಕಾರಣಕ್ಕೆ ರಾಜರಾವ್ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಇತ್ತ ಮಂಗಯಮ್ಮ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಈಗ ಅವರು ಸ್ಪಲ್ಪ ಸ್ವಲ್ಪ ಓಡಾಡುತ್ತಿದ್ದಾರೆ. ಅವಳಿ ಮಕ್ಕಳು ಕೂಡ ಆರೋಗ್ಯವಾಗಿವೆ ಎಂದು ತಿಳಿಸಿದ್ದಾರೆ.

    ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನೆಲ್ಲಪಾರ್ತಿಪಾಡು ಗ್ರಾಮದ ನಿವಾಸಿಯಾದ ಎರ್ರಮಟ್ಟಿ ಮಂಗಯಮ್ಮ ಅವರು ಸೆ. 5 ರಂದು ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿ ಹೊಸ ದಾಖಲೆ ಬರೆದಿದ್ದರು. ಜಗತ್ತಿನ ಹಿರಿಯ ಪೋಷಕರು ಎಂಬ ಖ್ಯಾತಿಗೆ ಪಾತ್ರರಾದರು.

    ಸುಮಾರು 3 ದಶಕಗಳಿಂದ ಮಕ್ಕಳು ಪಡೆಯಲು ದಂಪತಿ ಸಾಕಷ್ಟು ವೈದ್ಯರ ಮೊರೆಹೋಗುತ್ತಲೇ ಇದ್ದರು. ಆದರೆ 2018ರ ನವೆಂಬರ್ ತಿಂಗಳಲ್ಲಿ ಅವರು ಗುಂಟೂರಿನ ಅಹಲ್ಯಾ ನರ್ಸಿಂಗ್ ಹೋಂಗೆ ತಮ್ಮ ಸಮಸ್ಯೆಗೆ ಪರಿಹಾರ ಪಡೆಯಲು ಹೋಗಿದ್ದರು. ಅಲ್ಲಿ ಡಾ. ಶಾನಕ್ಯಾಲ ಉಮಾಶಂಕರ್ ಅವರು ದಂಪತಿಯ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಈ ಸವಾಲಿನ ಪ್ರಕರಣವನ್ನು ತಮ್ಮ ಕೈಗೆ ತೆಗೆದುಕೊಂಡು ಯಶಸ್ವಿಯಾದರು.

    ಈ ಬಗ್ಗೆ ಮಾತನಾಡಿದ ಡಾ. ಶಾನಕ್ಯಾಲ ಉಮಾಶಂಕರ್ ಅವರು, ಮಂಗಯಮ್ಮ ಅವರಿಗೆ ಬಿಪಿ, ಸಕ್ಕರೆ ಕಾಯಿಲೆ ಅಥವಾ ಯಾವುದೇ ಆರೋಗ್ಯದ ತೊಂದರೆ ಇಲ್ಲ. ಅವರ ಆನುವಂಶಿಕ ರೇಖೆಯು ತುಂಬಾ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಹೃದ್ರೋಗ ತಜ್ಞರು, ಶ್ವಾಸಕೋಶ ಶಾಸ್ತ್ರಜ್ಞರು ಸೇರಿದಂತೆ ಇತರೆ ವಿಶೇಷ ವೈದ್ಯರೊಂದಿಗೆ ಚರ್ಚಿಸಿದ ಬಳಿಕ ಮಂಗಮ್ಮ ಅವರಿಗೆ ಎಲ್ಲಾ ರೀತಿಯ ಪರೀಕ್ಷೆ ನಡೆಸಿ, ನಂತರ ನಾವು ಅವರ ಸಮಸ್ಯೆಯನ್ನು ಬಗೆಹರಿಸಲು ನಿರ್ಧರಿಸಿದೆವು. ಬಹಳ ವರ್ಷಗಳ ಹಿಂದೆಯೇ ಅವರು ಋತುಬಂಧದ ಹಂತವನ್ನು ತಲುಪಿದ್ದರು. ಆದರೆ ಐವಿಎಫ್(ವಿಟ್ರೊ ಫಲೀಕರಣ ಅಥವಾ ವಿಟ್ರೋ ಫರ್ಟಿಲೈಸೇಷನ್) ಮೂಲಕ ನಾವು ಕೇವಲ ಒಂದು ತಿಂಗಳಲ್ಲಿ ಅವರು ಮತ್ತೆ ಋತುಮತಿಯಾಗುವಂತೆ ಚಿಕಿತ್ಸೆ ಕೊಟ್ಟೆವು ಎಂದು ತಿಳಿಸಿದ್ದರು.

    ನಂತರ ಐವಿಎಫ್ ವಿಧಾನದಿಂದ ಮಂಗಯಮ್ಮ ಅವರು ಗರ್ಭ ಧರಿಸುವಂತೆ ಚಿಕಿತ್ಸೆ ನೀಡಲಾಯಿತು. ಬಳಿಕ ಅವರನ್ನು ಜಾಗೃತೆಯಿಂದ ನೋಡಿಕೊಳ್ಳುವುದು ಅವಶ್ಯವಾಗಿದ್ದ ಕಾರಣಕ್ಕೆ ದಂಪತಿಯನ್ನು ಆಸ್ಪತ್ರೆಯಲ್ಲಿಯೇ ಉಳಿಯಲು ಸೂಚಿಸಿದೆವು. ಮಂಗಯಮ್ಮ ಅವರಿಗೆ ಅಗತ್ಯ ಪೋಷ್ಠಿಕಾಂಶ, ಆರೈಕೆ, ಚಿಕಿತ್ಸೆ ನೀಡಿ ಆಸ್ಪತ್ರೆಯಲ್ಲಿಯೇ ನೋಡಿಕೊಳ್ಳಲಾಗುತ್ತಿತ್ತು. ಅವರ ವಯಸ್ಸಿಗೆ ನಾರ್ಮಲ್ ಡೆಲಿವರಿ ಆಗುವುದು ಕಷ್ಟದ ವಿಚಾರವಾಗಿದ್ದ ಕಾರಣಕ್ಕೆ ಸಿಸೇರಿಯನ್ ಮಾಡಬೇಕಾಯಿತು. ಸದ್ಯ ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದರು.

  • ಗೋದಾವರಿಯಲ್ಲಿ ಮುಳುಗಿದ ಬೋಟ್ – 13 ಮಂದಿ ಸಾವು, 40 ಜನ ನಾಪತ್ತೆ

    ಗೋದಾವರಿಯಲ್ಲಿ ಮುಳುಗಿದ ಬೋಟ್ – 13 ಮಂದಿ ಸಾವು, 40 ಜನ ನಾಪತ್ತೆ

    ಹೈದರಾಬಾದ್: ಆಂಧ್ರ ಪ್ರದೇಶದ ಗೋದಾವರಿ ನದಿಯಲ್ಲಿ ಇಂದು ಮಧ್ಯಾಹ್ನ 63 ಪ್ರಯಾಣಿಕರಿದ್ದ ಪ್ರವಾಸಿ ಬೋಟ್ ಅಪಘಾತಕ್ಕೀಡಾಗಿ, 13 ಜನರು ಸಾವನ್ನಪ್ಪಿದ್ದು, 40 ಮಂದಿ ನಾಪತ್ತೆಯಾಗಿದ್ದಾರೆ.

    ಪೂರ್ವ ಗೋದಾವರಿ ಜಿಲ್ಲೆಯ ದೇವಿಪಟ್ನಂ ಮಂಡಲದ ಕಾಚುಲೂರು ಗ್ರಾಮದ ಬಳಿ ಈ ಘಟನೆ ನಡೆದಿದೆ. ಬೋಟ್ ನಲ್ಲಿ ಒಟ್ಟು 63 ಜನರಿದ್ದು, ಅದರಲ್ಲಿ 50 ಪ್ರವಾಸಿಗರು ಮತ್ತು 13 ಮಂದಿ ಬೋಟ್ ಸಿಬ್ಬಂದಿ ಇದ್ದಾರೆ. ಗೋದಾವರಿ ನದಿಯ ಬಳಿಯಿರುವ ಪಾಪಿಕೊಂಡಲು ಬೆಟ್ಟಗಳನ್ನು ನೋಡಲು ಪ್ರವಾಸಕ್ಕೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

    ಈ ಹಡಗಿನಲ್ಲಿದ್ದ 63 ಜನರ ಪೈಕಿ 13 ಮಂದಿಯ ಮೃತ ದೇಹ ಸಿಕ್ಕಿದ್ದು, ಇನ್ನೂ ಸುಮಾರು 40 ಮಂದಿ ನದಿಯಲ್ಲಿ ಕಾಣೆಯಾಗಿದ್ದಾರೆ. ಮೂಲಗಳ ಪ್ರಕಾರ, ದೋಣಿಯಲ್ಲಿದ್ದ ಎಲ್ಲರಿಗೂ ಲೈಫ್ ಜಾಕೆಟ್‍ಗಳು ಇದ್ದು, ಅವರಲ್ಲಿ ಕೆಲವರು ಧರಿಸಿಲ್ಲ ಎಂದು ವರದಿಯಾಗಿದೆ. ವಿಶಾಖಪಟ್ಟಣಂ ಮತ್ತು ಗುಂಟೂರಿನಿಂದ ಎರಡು ಎನ್‍ಡಿಆರ್‍ಎಫ್ ತಂಡಗಳು ಬಂದಿದ್ದು, ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಚರಣೆ ಮಾಡುತ್ತಿದ್ದಾರೆ.

    ಗೋದಾವರಿ ನದಿಗೆ ಪ್ರವಾಹದ ಸಮಯದಲ್ಲಿ ಸುಮಾರು 5 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿತ್ತು. ಅದ್ದರಿಂದ ಅಲ್ಲಿನ ಪ್ರವಾಸೋದ್ಯಮ ಅಧಿಕಾರಿಗಳು ಶನಿವಾರದವರೆಗೆ ನದಿಯಲ್ಲಿ ಪ್ರವಾಸಿಗರ ಸೇವೆಯನ್ನು ನಿಲ್ಲಿಸಿತ್ತು. ಆದರೆ ಇತ್ತೀಚಿಗೆ ನೀರಿನ ಪ್ರಮಾಣ ಕಡಿಮೆಯಾದ ಕಾರಣ ಇಂದು ಬೋಟ್‍ನಲ್ಲಿ ಹೋಗಲು ಅನುಮತಿ ನೀಡಿದ್ದರು ಎಂದು ವರದಿಯಾಗಿದೆ.

    ಈ ವಿಚಾರದ ತಿಳಿದು ತಕ್ಷಣ ಅಧಿಕಾರಿಗಳೊಂದಿಗೆ ಮಾತನಾಡಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗಮೋಹನ್ ರೆಡ್ಡಿ, ತಕ್ಷಣವೇ ರಕ್ಷಣಾ ಕಾರ್ಯಚರಣೆ ಕೈಗೊಳ್ಳುವಂತೆ ಸೂಚಿಸಿ, ಮೃತವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ಪರಿಹಾರ ಹಣವನ್ನು ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ನೌಕಪಡೆ ಮತ್ತು ಹೆಲಿಕಾಪ್ಟರ್ ಬಳಸಿ ಕಾರ್ಯಚರಣೆ ನಡೆಸುವಂತೆ ಆದೇಶ ನೀಡಿದ್ದಾರೆ.

  • ಪಿವಿ ಸಿಂಧುಗೆ ಲಕ್ಸುರಿ ಕಾರು ಗಿಫ್ಟ್ ಕೊಟ್ಟ ನಟ ನಾಗಾರ್ಜುನ

    ಪಿವಿ ಸಿಂಧುಗೆ ಲಕ್ಸುರಿ ಕಾರು ಗಿಫ್ಟ್ ಕೊಟ್ಟ ನಟ ನಾಗಾರ್ಜುನ

    ಹೈದರಾಬಾದ್: ಟಾಲಿವುಡ್ ನಟ, ತೆಲಂಗಾಣ ಬ್ಯಾಡ್ಮಿಂಟನ್ ಅಸೋಸಿಯೆಷನ್ (ಟಿಬಿಎ)ನ ಉಪಾಧ್ಯಕ್ಷರಾಗಿರುವ ನಾಗಾರ್ಜುನ ಅವರು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ಬಿಎಂಡಬ್ಲೂ ಎಕ್ಸ್5  ಲಕ್ಸುರಿ ಕಾರನ್ನು ಗಿಫ್ಟ್ ನೀಡಿದ್ದಾರೆ.

    ಹೈದರಾಬಾದ್‍ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಪಿವಿ ಸಿಂಧುರನ್ನು ಭೇಟಿ ಮಾಡಿದ ನಾಗಾರ್ಜುನ, ಕೋಚ್ ಪುಲ್ಲೇಲ ಗೋಪಿಚಂದ್ ಅವರ ಸಮ್ಮುಖದಲ್ಲಿ ಕಾರನ್ನು ಉಡುಗೊರೆಯಾಗಿ ನೀಡಿದರು. ಈ ಉಡುಗೊರೆಯನ್ನು ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೆಷನ್ ಮಾಜಿ ಅಧ್ಯಕ್ಷ ಚಾಮುಂಡೇಶ್ವರಿನಾಥ್ ಅವರು ನೀಡಿದ್ದು, ಇದು ಪಿವಿ ಸಿಂಧು ಅವರಿಗೆ ಅವರು ನೀಡುತ್ತಿರುವ 4ನೇ ಕಾರು ಎಂಬುವುದು ವಿಶೇಷ. ಸಿಂಧುಗೆ ಮಾತ್ರವಲ್ಲೇ ಚಾಮುಂಡೇಶ್ವರಿನಾಥ್ ಈವರೆಗೆ ಭಾರತದ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ 22 ಕಾರುಗಳನ್ನು ಗಿಫ್ಟ್ ನೀಡಿದ್ದಾರೆ. ಈ ಹಿಂದೆ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಲಕ್ಸುರಿ ಕಾರನ್ನು ಸಿಂಧುಗೆ ಗಿಫ್ಟ್ ನೀಡಿದ್ದರು.

    ಈ ಸಂದರ್ಭದಲ್ಲಿ ಮಾತನಾಡಿದ ನಟ ನಾಗಾರ್ಜುನ ಸಿಂಧು ಸಾಧನೆಗೆ ಮೆಚ್ಚುಗೆ ಸೂಚಿಸಿದರು. ಅಲ್ಲದೇ ಕೋಚ್ ಗೋಪಿಚಂದ್ ಅವರ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಇಂತಹ ಉತ್ತಮ ಕ್ರೀಡಾಪಟುವನ್ನು ನೀಡಿದಕ್ಕೆ ಧನ್ಯವಾದ. ಇಂತಹ ಮತ್ತಷ್ಟು ಕ್ರೀಡಾಪಟುಗಳನ್ನು ದೇಶಕ್ಕಾಗಿ ನೀಡಬೇಡಿಕೆ ಎಂದು ಮನವಿ ಮಾಡಿದರು.

    ಸಿಂಧು ಇತ್ತೀಚೆಗೆ ನಡೆದ ವಿಶ್ವ ಚಾಂಪಿಯನ್‍ಶಿಪ್ ನಲ್ಲಿ ಜಪಾನ್‍ನ ನೊಜೊಮಿ ಒಕುಹರಾ ವಿರುದ್ಧ 21-7, 21-7 ಸೆಟ್ ಗಳಿಂದ ಗೆಲ್ಲುವ ಮೂಲಕ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದಿದ್ದರು.

    ಚಿನ್ನದ ಪದಕ ಗೆದ್ದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ತೆಲುಗು ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಸಿಂಧುಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಸಿಂಧು ಆಂಧ್ರಪ್ರದೇಶ ಸಿಎಂ ಜಗನ್‍ಮೋಹನ್ ರೆಡ್ಡಿ ಅವರು ಭೇಟಿ ಮಾಡಿದ್ದರು.

  • 7ರ ಕಂದಮ್ಮನ ಮೇಲೆ 16 ವರ್ಷದ ಬಾಲಕ ಅತ್ಯಾಚಾರ

    7ರ ಕಂದಮ್ಮನ ಮೇಲೆ 16 ವರ್ಷದ ಬಾಲಕ ಅತ್ಯಾಚಾರ

    ಅಮರಾವತಿ: ಏಳು ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕ ಅತ್ಯಾಚಾರ ಎಸಗಿರುವ ಭಯಾನಕ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದ ವೆಪಗುಂಟ ಉಪನಗರದಲ್ಲಿ ನಡೆದಿದೆ.

    ಪ್ರಕರಣದ ನಂತರ ಬಾಲಕಿಯ ತಂದೆ ಪೆಂಡುರ್ಥಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೊಕ್ಸೋ) ಕಾಯ್ದೆ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿದ್ಯಾರ್ಥಿನಿಯು ಸ್ಥಳೀಯ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದಾಳೆ. ಐಟಿಐ ಓದುತ್ತಿರುವ 16 ವರ್ಷದ ಬಾಲಕ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪ್ರಕರಣದ ನಂತರ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.

    ಜುಲೈನಲ್ಲಿ ಇದೇ ರೀತಿಯ ಪ್ರಕರಣ ನಡೆದು, ಮಧ್ಯ ಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ 7 ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯ ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬುಡಕಟ್ಟು ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕರು ಸ್ನಾನ ಮಾಡಲು ನದಿಗೆ ತೆರಳುತ್ತಿ ಬಾಲಕಿಯನ್ನು ಅತ್ಯಾಚಾರಗೈದಿದ್ದರು.