Tag: Andhra Pradesh

  • 60 ವರ್ಷದ ವೃದ್ಧೆಯನ್ನೂ ಬಿಡದ ಕಾಮುಕರು – ಅತ್ಯಾಚಾರ ಎಸಗಿ ಕೊಲೆ

    60 ವರ್ಷದ ವೃದ್ಧೆಯನ್ನೂ ಬಿಡದ ಕಾಮುಕರು – ಅತ್ಯಾಚಾರ ಎಸಗಿ ಕೊಲೆ

    ಅಮರಾವತಿ: ತೆಲಂಗಾಣದ ಪಶುವೈದ್ಯೆ ಅತ್ಯಾಚಾರ, ಕೊಲೆ ನಂತರ ಇದೀಗ ಆಂಧ್ರ ಪ್ರದೇಶ ಮತ್ತೊಂದು ಅಸಹ್ಯಕರ ಘಟನೆಗೆ ಸಾಕ್ಷಿಯಾಗಿದೆ.

    ಕಾಮುಕರು 60 ವರ್ಷದ ವೃದ್ಧೆಯನ್ನೂ ಬಿಡದೆ ಅತ್ಯಾಚಾರ ಎಸಗುವ ಮೂಲಕ ಅಮಾನವೀಯವಾಗಿ ವರ್ತಿಸಿದ್ದು, ಅಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿ ಘಟನೆ ನಡೆದಿದೆ.

    ಎಸ್‍ಪಿ ನಯೀಮ್ ಅಸ್ಮಿ ಅವರು ಮನೆಯನ್ನು ಪರಿಶೀಲಿಸಿದ್ದು, ಈ ವೇಳೆ ಮನೆತುಂಬಾ ಖಾರದ ಪುಡಿ ಚೆಲ್ಲಿದ್ದನ್ನು ಕಂಡು ಗಾಬರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

    ಎಸ್‍ಪಿ ನಯೀಮ್ ಅಸ್ಮಿ ಅವರ ಪ್ರಕಾರ, ಕಳೆದ ರಾತ್ರಿ ವೃದ್ಧೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಮೂವರು ಶಂಕಿತರನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದೇವೆ. ಕೆಲವು ಸುಳಿವುಗಳು ಸಿಕ್ಕಿದ್ದು, ಮುಂದಿನ ತನಿಖೆಯನ್ನು ನಡೆಸುತ್ತಿದ್ದು, 12 ಗಂಟೆಗಳಲ್ಲಿ ನಾವು ಪ್ರಕರಣವನ್ನು ಬೇಧಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಭಾನುವಾರ 70 ವರ್ಷದ ವೃದ್ಧೆಯನ್ನು ಅತ್ಯಾಚಾರ ಮಾಡಿದ ಪ್ರಕರಣ ಉತ್ತರ ಪ್ರದೇಶದ ಸೋನ್‍ಭದ್ರಾ ಜಿಲ್ಲೆಯಲ್ಲಿ ನಡೆದಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ವೃದ್ಧೆಯು ಒಬ್ಬಳೆ ಇದ್ದ ವೇಳೆ 27 ವರ್ಷದ ಯುವಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಸರ್ಕಲ್ ಆಫೀಸರ್ ಜ್ಞಾನ್ ಪ್ರಕಾಶ್ ಅವರು ಮಾಹಿತಿ ನೀಡಿದ್ದರು.

    ಡಿಸೆಂಬರ್ 2ರಂದು ಆರೋಪಿಯನ್ನು ಬಂಧಿಸಿದ್ದೆವು. ಅತ್ಯಾಚಾರ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿತ್ತು. ವ್ಯಕ್ತಿಯು ವೃತ್ತಿಯಲ್ಲಿ ಬಡಗಿಯಾಗಿದ್ದ ವೃದ್ಧೆಯು ದಲಿತ ಸಮುದಾಯಕ್ಕೆ ಸೇರಿದವಳಾಗಿದ್ದಳು ಎಂದು ವಿವರಿಸಿದರು.

    ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ ನಡೆದು ಐದು ದಿನಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು. ತೆಲಂಗಾಣ ಅತ್ಯಾಚಾರ ಪ್ರಕರಣದ ಕುರಿತು ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಹೈದರಾಬಾದ್ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

  • ಆಟವಾಡುವಾಗ ಲಿಫ್ಟ್‌ಗೆ ಸಿಲುಕಿ ಜಜ್ಜಿ ಹೋಯ್ತು ಬಾಲಕನ ದೇಹ

    ಆಟವಾಡುವಾಗ ಲಿಫ್ಟ್‌ಗೆ ಸಿಲುಕಿ ಜಜ್ಜಿ ಹೋಯ್ತು ಬಾಲಕನ ದೇಹ

    ಹೈದರಾಬಾದ್: ಆಂಧ್ರಪ್ರದೇಶದ ರಾಯದುರ್ಗಂನ ಅಪಾರ್ಟ್​ಮೆಂಟ್‌ ಒಂದರಲ್ಲಿ 9 ವರ್ಷದ ಬಾಲಕನೋರ್ವ ಆಟವಾಡುತ್ತ ಲಿಫ್ಟ್ ಮಧ್ಯೆ ಸಿಲುಕಿ ಜಜ್ಜಿಹೋಗಿ ಸಾವನ್ನಪಿದ್ದಾನೆ.

    ಭಾನುವಾರ ಈ ಘಟನೆ ನಡೆದಿದೆ. ಧನುಷ್(9) ಮೃತ ಬಾಲಕ. ರಾಯದುರ್ಗಂನ ಪಂಚವತಿ ಕಾಲೋನಿಯ ಅಪಾರ್ಟ್​ಮೆಂಟ್‌ನಲ್ಲಿ ಬಾಲಕ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದನು. ಬಾಲಕ ತಂದೆ ಹೆಸರು ಶೇಷಾ ಭಟ್ಟಾಚಾರ್ಯ, ಧನುಷ್ ಸೇರಿ ಅವರಿಗೆ ಒಟ್ಟು 4 ಮಂದಿ ಮಕ್ಕಳು. ಧನುಷ್ ಮನೆ ಮೂರನೇ ಮಹಡಿಯಲ್ಲಿ ಇದೆ. ಆದರೆ ಬಾಲಕ ತನ್ನ ಸಹೋದರಿ ಜೊತೆಗೆ ಕಟ್ಟಡದ 4ನೇ ಮಹಡಿಯಲ್ಲಿ ಆಟವಾಡುತ್ತಿದ್ದನು.

    ಈ ಕಟ್ಟಡದಲ್ಲಿದ್ದ ಲಿಫ್ಟ್ ನ ಬಾಗಿಲ ಬಳಿ ಹಾಕುವ ಸೇಫ್ಟಿ ಗ್ರಿಲ್ ಹಾಳಾಗಿತ್ತು. ಅದು ಸರಿಯಾಗಿ ಕಾರ್ಯನಿರ್ವಸುತ್ತಿರಲಿಲ್ಲ. ಈ ವೇಳೆ ಆಟವಾಡುತ್ತಿದ್ದ ಬಾಲಕ ಲಿಫ್ಟ್ ಹತ್ತಲು ಹೋಗಿದ್ದನು. ಲಿಫ್ಟ್ ಮೇಲಿನ ಮಹಡಿಯಲ್ಲಿದ್ದ ಕಾರಣ  ಅದನ್ನು ನೋಡಲು ಹತ್ತಿರ ಹೋದ ಬಾಲಕ ಆಯಾತಪ್ಪಿ ಲಿಫ್ಟ್ ಕೆಳಗೆ ಇರುವ ಖಾಲಿ ಜಾಗಕ್ಕೆ ಬಿದ್ದಿದ್ದಾನೆ. ಆಗ ಆತನ ಸಹೋದರಿ ಸಹಾಯಕ್ಕೆ ಬಂದರೂ ಯಾವುದೇ ಪ್ರಯೋಜನವಾಗಿಲ್ಲ.

    ಬಾಲಕ ಬೀಳುತ್ತಿದ್ದಂತೆ ಲಿಫ್ಟ್ ಕೂಡ ಮೇಲಿಂದ ಕೆಳಗೆ ಬಂದಿದ್ದು. ಲಿಫ್ಟ್ ಮಧ್ಯೆ ಸಿಲುಕಿ ಬಾಲಕನ ದೇಹ ಜಜ್ಜಿಹೋಗಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಲಿಫ್ಟ್ ನ ಸೇಫ್ಟಿ ಗ್ರಿಲ್ ಸರಿಯಿಲ್ಲದ ಕಾರಣದಿಂದ ಈ ಅನಾಹುತ ನಡೆದಿದೆ. ಲಿಫ್ಟ್ ಅನ್ನು ಸರಿಯಾಗಿ ನಿರ್ವಹಿಸದ ಕಾರಣ ಒಂದು ಪುಟ್ಟ ಜೀವ ಬಲಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಈ ಸಂಬಂಧ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿದ್ದಾರೆ.

    ಹೀಗೆ ಲಿಫ್ಟ್‌ಗೆ ಸಿಲುಕಿ ಬಾಲಕ ಸಾವನ್ನಪ್ಪಿರುವುದು ಈ ವರ್ಷದಲ್ಲಿ ಇದು ಮೂರನೇ ಪ್ರಕರಣವಾಗಿದೆ. ಈ ಹಿಂದೆ ಅಕ್ಟೋಬರ್ ತಿಂಗಳಲ್ಲಿ ಹಸ್ತಿನಾಪುರದಲ್ಲಿ 9 ವರ್ಷದ ಬಾಲಕಿ ಲಿಫ್ಟ್‌ಗೆ ಸಿಲುಕಿ ಮೃತಪಟ್ಟಿದ್ದಳು. ಹಾಗೆಯೇ ಫೆಬ್ರವರಿಯಲ್ಲಿ 10 ವರ್ಷದ ಬಾಲಕನೋರ್ವ ಬಾಲಾಜಿ ನಗರದಲ್ಲಿ ಲಿಫ್ಟ್ ಗ್ರಿಲ್ ಬಾಗಿಲಿಗೆ ಸಿಲುಕಿ ಸಾವನ್ನಪ್ಪಿದ್ದನು.

  • ಫೇಸ್‍ಬುಕ್ ಗೆಳತಿಗಾಗಿ ಗುಡಿ ಕಟ್ಟಿಸಿ ಪ್ರೇಮ ಪೂಜಾರಿಯಾದ ಟೆಕ್ಕಿ

    ಫೇಸ್‍ಬುಕ್ ಗೆಳತಿಗಾಗಿ ಗುಡಿ ಕಟ್ಟಿಸಿ ಪ್ರೇಮ ಪೂಜಾರಿಯಾದ ಟೆಕ್ಕಿ

    – ಪ್ರೇಮಿಯ ಮನೆಯಿಂದಲೇ ಬಂದ ಗೆಳತಿಯ ಪ್ರತಿಮೆ
    – ಮನೆಯ ಮೇಲೆ ಪ್ರೇಮ ಗುಡಿ ಕಟ್ಟಿದ ಯುವಕ

    ಹೈದರಾಬಾದ್: ರಾಜಕೀಯ ನಾಯಕರು ಅಥವಾ ಜನ್ಮ ನೀಡಿದ ತಂದೆ-ತಾಯಿಯ ಪ್ರತಿಮೆಯನ್ನು ಪತಿಷ್ಠಾಪನೆ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಆಂಧ್ರಪ್ರದೇಶದ ಯುವಕನೊಬ್ಬ ಫೇಸ್‍ಬುಕ್ ಗೆಳತಿಯ ನೆನಪಿಗಾಗಿ ಗುಡಿ ಕಟ್ಟಿಸಿ, ಪೂಜಾರಿಯಾಗಿದ್ದಾರೆ.

    ವಿಜಯನಗರಂ ಜಿಲ್ಲೆಯ ಜಾಮಿ ಗ್ರಾಮದ ಯುವಕ ಎರ್ನಿಬಾಬು ಪ್ರೇಮ ಗುಡಿ ಕಟ್ಟಿ, ಗೆಳತಿಯ ಪ್ರತಿಮೆ ಪ್ರತಿಷ್ಠಾಪಿಸಿ ಪ್ರೇಮಿ. ವೃತ್ತಿಯಿಂದ ಇಲೆಕ್ಟ್ರಿಕಲ್ ಮೆಕಾನಿಕ್ ಆಗಿರುವ ಎರ್ನಿಬಾಬುಗೆ ಫೇಸ್‍ಬುಕ್‍ನಲ್ಲಿ ಯುವತಿ ಪರಿಚಯವಾಗಿದ್ದಳು. ಬಳಿಕ ಯುವತಿಯ ಫೋನ್ ನಂಬರ್ ಪಡೆದ ಆಕೆಯ ಜೊತೆಗೆ ಚಾಟಿಂಗ್ ಮಾಡುತ್ತಿದ್ದ.

    ಈ ಪರಿಚಯ ಸ್ನೇಹವಾಗಿ ಬದಲಾಗಿತ್ತು. ಬಳಿಕ ಒಬ್ಬರು ಹೈದರಾಬಾದ್‍ನಲ್ಲಿ ಎರಡು ಬಾರಿ ಭೇಟಿಯಾಗಿ, ಪ್ರೇಮ ಪ್ರಸ್ತಾಪ ಮಾಡಿದ್ದರು. ಆದರೆ ಕಳೆದ ವರ್ಷ ಅನಾರೋಗ್ಯದಿಂದ ಯುವತಿ ಮೃತಪಟ್ಟಿದ್ದಳು. ಈ ಆಘಾತದಿಂದ ಎರ್ನಿಬಾಬು ಹೊರ ಬರಲು ಭಾರೀ ಕಷ್ಟಪಡುತ್ತಿದ್ದಾನೆ. ಪ್ರೇಮಿಯ ನೆನಪಿನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದ. ಮಗನ ನಡೆಯಿಂದಾಗಿ ಪೋಷಕರು ನೊಂದುಕೊಂಡಿದ್ದರು.

    ಗೆಳತಿಯು ಆಗಾಗ ನನ್ನ ಕನಸಿನಲ್ಲಿ ಬರುತ್ತಾಳೆ ಎಂದು ಎರ್ನಿಬಾಬು ಸ್ನೇಹಿತರ ಮುಂದೆ ಹೇಳಿಕೊಂಡಿದ್ದ. ಹೀಗಾಗಿ ಪೋಷಕರ ಒಪ್ಪಿಗೆ ಪಡೆದು, ಮನೆಯ ಮೇಲೆ ಪ್ರೇಮ ಗುಡಿ ನಿರ್ಮಿಸಿದ್ದಾನೆ. ಈ ವಿಚಾರ ತಿಳಿದ ಯುವತಿಯ ಪೋಷಕರು ತಮ್ಮ ಪುತ್ರಿಯ ವಿಗ್ರಹವನ್ನು ಜಾಮಿ ಗ್ರಾಮಕ್ಕೆ ಕಳುಹಿಸಿದ್ದಾರೆ. ಎರ್ನಿಬಾಬು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗೆಳತಿಯ ವಿಗ್ರಹವನ್ನು ಅದ್ಧೂರಿ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪನೆ ಮಾಡಿದ್ದಾನೆ. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ, ಗ್ರಾಮದ 300ಕ್ಕೂ ಅಧಿಕ ಜನರಿಗೆ ಅನ್ನ ಸಂತರ್ಪನೆ ನೆರವೇರಿಸಿದ್ದಾನೆ.

  • ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಚಂದ್ರಬಾಬುಗೆ ಜಗನ್ ಪ್ರಶ್ನೆ

    ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಚಂದ್ರಬಾಬುಗೆ ಜಗನ್ ಪ್ರಶ್ನೆ

    ವಿಜಯವಾಡ: ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮವನ್ನಾಗಿ ಪರಿವರ್ತಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

    ಎಲ್ಲ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಗಳನ್ನಾಗಿ ಪರಿವರ್ತಿಸುವ ಕುರಿತು ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಚಿಂತನೆ ನಡೆಸಿದ್ದಾರೆ. ಆದರೆ ಇದಕ್ಕೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟ, ರಾಜಕಾರಣಿ ಪವನ್ ಕಲ್ಯಾಣ್ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

    ವಿಜಯವಾಡದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ವೇಳೆ ಇದಕ್ಕೆ ತಿರುಗೇಟು ನೀಡಿರುವ ಸಿಎಂ ಜಗನ್, ನಿಮ್ಮ ಮಕ್ಕಳು ಎಲ್ಲಿ ಕಲಿಯುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರೇ ನಿಮ್ಮ ಮಗ ಯಾವ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದಾರೆ? ನಾಳೆ ನಿಮ್ಮ ಮೊಮ್ಮಗ ಯಾವ ಮಾಧ್ಯಮದಲ್ಲಿ ಅಧ್ಯಯನ ಮಾಡುತ್ತಾನೆ ಎಂದು ಪ್ರಶ್ನಿಸಿದ್ದಾರೆ.

    ಮಾತ್ರವಲ್ಲದೆ ಸರ್, ವೆಂಕಯ್ಯ ನಾಯ್ಡು ಅವರೇ ನಿಮ್ಮ ಮಗ ಮತ್ತು ಮೊಮ್ಮಕ್ಕಳು ಯಾವ ಮಧ್ಯಮದಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ಕೇಳಿದ್ದಾರೆ. ಅಲ್ಲದೆ ಪವನ್ ಕಲ್ಯಾಣ್ ಅವರಿಗೂ ಇದೇ ರೀತಿಯ ಪ್ರಶ್ನೆ ಕೇಳಿದ್ದು, ನಿಮಗೆ ಮೂವರು ಪತ್ನಿಯರು, ನಾಲ್ಕೈದು ಮಕ್ಕಳಿದ್ದಾರೆ. ಅವರು ಓದುತ್ತಿರುವ ಶಾಲೆಗಳಲ್ಲಿ ಬೋಧನಾ ಮಾಧ್ಯಮ ಯಾವುದು ಎಂದು ಕೇಳಿದ್ದಾರೆ.

    ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಹಲವು ನಾಯಕರು ವಿರೋಧಿಸುತ್ತಿದ್ದಾರೆ. ಆ ಎಲ್ಲ ನಾಯಕರು ತಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಓದುತ್ತಿದ್ದಾರೆ ಎಂದು ಎದೆ ಮೇಲೆ ಕೈ ಇಟ್ಟುಕೊಂಡು ಹೇಳಲಿ ಎಂದು ಸವಾಲು ಎಸೆದಿದ್ದಾರೆ.

    ಇಂದು ನಾವು ಪ್ರಪಂಚದೊಂದಿಗೆ ಸ್ಪರ್ಧಿಸಬೇಕಿದೆ. ಇಂಗ್ಲಿಷ್ ಇಲ್ಲದೆ ಸ್ಪರ್ಧಿಸಲು ಸಾಧ್ಯವಿಲ್ಲ. ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ನಾನು ಈ ಪ್ರಯತ್ನಕ್ಕೆ ಮುಂದಾಗಿದ್ದೇನೆ. ನಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕು. ನಮ್ಮ ಎಲ್ಲ ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿರಬೇಕು ಎಂದು ಪ್ರತಿಪಾದಿಸಿದರು.

    1ರಿಂದ 6ನೇ ತರಗತಿಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ(2020-21) ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣದ ಮಾಧ್ಯಮವಾಗಲಿದೆ ಎಂದು ರೆಡ್ಡಿ ಇದೇ ವೇಳೆ ಘೋಷಿಸಿದರು. ಇದಾದ ಒಂದರಿಂದ ನಾಲ್ಕು ವರ್ಷಗಳಲ್ಲಿ 10ನೇ ತರಗತಿ ವರೆಗೆ ಇಂಗ್ಲಿಷ್ ಮಾಧ್ಯಮವನ್ನಾಗಿ ಮಾಡಲಾಗುವುದು. ಎಲ್ಲ ಶಾಲೆಗಳಲ್ಲಿ ತೆಲುಗು ಅಥವಾ ಉರ್ದು ಕಡ್ಡಾಯ ವಿಷಯವಾಗಲಿದೆ ಎಂದರು.

  • ಸೆಕ್ಸ್ ಟಾಯ್ಸ್ ಬಳಸಿ ಅಪ್ರಾಪ್ತೆಯರಿಗೆ ಮಹಿಳೆಯಿಂದ ಕಿರುಕುಳ

    ಸೆಕ್ಸ್ ಟಾಯ್ಸ್ ಬಳಸಿ ಅಪ್ರಾಪ್ತೆಯರಿಗೆ ಮಹಿಳೆಯಿಂದ ಕಿರುಕುಳ

    –  ಪತ್ನಿಯ ಅವಮಾನವೀಯ ಕೃತ್ಯ ಪತಿ ಆತ್ಮಹತ್ಯೆಗೆ ಶರಣು

    ಹೈದರಾಬಾದ್: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪತ್ನಿಯ ಅವಮಾನವೀಯ ಕೃತ್ಯಕ್ಕೆ ಮನನೊಂದು ವ್ಯಕ್ತಿಯೊಬ್ಬ ಮೂರು ಅಂತಸ್ತಿನ ಕಟ್ಟಡದಿಂದ ಬಿದ್ದು ಮೃತಪಟ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಪ್ರಕಾಶಂ ಜಿಲ್ಲೆಯ ಒಂಗೋಲ್ ನಗರದ ಕೃಷ್ಣ ಕಿಶೋರೆ (32) ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮಹಿಳೆ. ಆರೋಪಿಯ ಮೂರನೇ ಪತಿ, 47 ವರ್ಷದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಒಂಗೋಲ್ ನಗರದಲ್ಲಿ ಘಟನೆ ನಡೆದಿದ್ದು, ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮದ್ವೆಯಾಗದ ಯುವಕರೇ ಟಾರ್ಗೆಟ್- ಬರೋಬ್ಬರಿ 14 ಮಂದಿಯೊಂದಿಗೆ ವಕೀಲೆಯ ಪ್ರೇಮ ಪುರಾಣ

    ಕೃಷ್ಣ ಕಿಶೋರೆ ಪುರುಷರಂತೆ ಬಟ್ಟೆ ಧರಿಸಿ, ಹೇರ್ ಕಟ್ಟಿಂಗ್ ಮಾಡಿಸಿದ್ದಾಳೆ. ಈ ಮೂಲಕ ಅಪ್ರಾಪ್ತೆಯರನ್ನು ಪರಿಚಯ ಮಾಡಿಕೊಂಡು ಸೆಕ್ಸ್ ಟಾಯ್ಸ್ ಬಳಸಿ ಅವರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದಳು. 17 ವರ್ಷದ ಬಾಲಕಿ ಪ್ರಕಾಶಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಅಧಿಕೃತ ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತೆಯ ದೂರಿನಲ್ಲಿ, ಕೃಷ್ಣ ಕುಮಾರ್ ರೆಡ್ಡಿ ಎಂಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿಸಿದ್ದಳು. ಆದರೆ ಪ್ರಕರಣದ ಪ್ರಾಥಮಿಕ ತನಿಖೆಯ ವೇಳೆ, ಆರೋಪಿ ಬೇರೆ ಯಾರು ಅಲ್ಲ, ಪುರುಷರ ಧಿರಿಸಿನಲ್ಲಿ ಓಡುತ್ತಿರುವ ಕೃಷ್ಣ ಕಿಶೋರೆ ಎನ್ನುವುದು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.

    ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಒಂಗೋಲ್ ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ.ರವಿ ಚಂದ್ರ, ಆರೋಪಿ ಮಹಿಳೆ ಪುರುಷರ ಬಟ್ಟೆಗಳನ್ನು ಧರಿಸುವುದನ್ನು ಇಷ್ಟಪಡುತ್ತಾಳೆ. ಪುರುಷನಂತೆ ಕಾಣಲು ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡಿದ್ದಾಳೆ. ಆರೋಪಿಯು ಈ ಮೊದಲು ಎರಡು ಬಾರಿ ಮದುವೆಯಾಗಿದ್ದಳು. ಆಕೆ 2016ರಲ್ಲಿ ತನ್ನ ಗ್ರಾಮವನ್ನು ತೊರೆದು ಒಂಗೋಲ್‍ಗೆ ಬಂದಿದ್ದಳು. ಈ ವೇಳೆ ಇಲ್ಲಿಯೇ 47 ವರ್ಷದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಳು. ಬಳಿಕ ಅಪ್ರಾಪ್ತ ಬಾಲಕಿಯರ ಪರಿಚಯ ಮಾಡಿ ಅವರೊಂದಿಗೆ ಆತ್ಮೀಯ ಸಂಬಂಧವನ್ನು ಪ್ರಾರಂಭಿಸಲು ಯತ್ನಿಸುತ್ತಿದ್ದಳು ಎಂದು ತಿಳಿಸಿದ್ದಾರೆ.

    17 ವರ್ಷದ ಬಾಲಕಿ ಹಾಗೂ ಪತಿಯೊಂದಿಗೆ ಒಂದೇ ಮನೆಯಲ್ಲಿ ಇರಲು ಮಹಿಳೆ ಮುಂದಾಗಿದ್ದಳು. ಅಷ್ಟೇ ಅಲ್ಲದೆ 28 ವರ್ಷದ ಸ್ನೇಹಿತ ಮತ್ತು ಅಪ್ರಾಪ್ತೆಗೆ ನಕಲಿ ವಿವಾಹ ಮಾಡಿಸಲು ಮನವೊಲಿಸಿದ್ದಳು. ಈ ವಿಚಾರವನ್ನು ಸಂತ್ರಸ್ತೆಯು ಪೋಷಕರ ಮುಂದೆ ಹೇಳಿಕೊಂಡಿದ್ದಳು. ಇದರಿಂದ ಗಾಬರಿಗೊಂಡ ಬಾಲಕಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಕೃಷ್ಣ ಕಿಶೋರೆ ಕೃತ್ಯ ಬಯಲಿಗೆ ಬಂದಿತ್ತು ಎಂದು ಬಿ.ರವಿ ಚಂದ್ರ ಮಾಹಿತಿ ನೀಡಿದ್ದಾರೆ.

    ಸಂತ್ರಸ್ತ ಬಾಲಕಿ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸ್ ಸಿಬ್ಬಂದಿ ಆರೋಪಿಯ ಮನೆಯ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಪತ್ನಿಯ ಕೃತ್ಯ ತಿಳಿದ ಪತಿ, ಪೊಲೀಸರಿಂದ ತಪ್ಪಿಸಿಕೊಂಡು ಮೂರನೇ ಮಹಡಿಯಿಂದ ಜಿಗಿದಿದ್ದ. ಪರಿಣಾಮ ಗಂಭೀರಾಗಿ ಗಾಯಗೊಂಡಿದ್ದ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆರೋಪಿ ಮಹಿಳೆಯ ಪತಿ ಮೃತಪಟ್ಟಿದ್ದಾನೆ. ಮಹಿಳೆಯ ಮನೆಯಲ್ಲಿದ್ದ ದೊಡ್ಡ ಬ್ಯಾಗ್‍ನಲ್ಲಿ ಸೆಕ್ಸ್ ಟಾಯ್ಸ್ ಸಿಕ್ಕಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿ.ರವಿ ಚಂದ್ರ ತಿಳಿಸಿದ್ದಾರೆ.

    ಆರೋಪಿ ಕೃಷ್ಣ ಕಿಶೋರೆಯನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಬಂಧಿತಳ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

  • ಮದ್ವೆಯಾಗದ ಯುವಕರೇ ಟಾರ್ಗೆಟ್- ಬರೋಬ್ಬರಿ 14 ಮಂದಿಯೊಂದಿಗೆ ವಕೀಲೆಯ ಪ್ರೇಮ ಪುರಾಣ

    ಮದ್ವೆಯಾಗದ ಯುವಕರೇ ಟಾರ್ಗೆಟ್- ಬರೋಬ್ಬರಿ 14 ಮಂದಿಯೊಂದಿಗೆ ವಕೀಲೆಯ ಪ್ರೇಮ ಪುರಾಣ

    ಹೈದರಾಬಾದ್: ಮದುವೆಯಾಗದ ಯುವಕರನ್ನೇ ಟಾರ್ಗೆಟ್ ಮಾಡಿ ಪ್ರೀತಿ, ಪ್ರೇಮದ ಹೆಸರಿನಲ್ಲಿ ಅವರೊಂದಿಗೆ ಸಲಿಗೆ ಬೆಳೆಸಿಕೊಂಡು, ಆ ಬಳಿಕ ಹಣಕ್ಕಾಗಿ ಕಿರುಕುಳ ನೀಡಿ ಮೋಸ ಮಾಡುತ್ತಿದ್ದ ಯುವತಿಯನ್ನು ಹೈದರಾಬಾದ್‍ನ ಅಂಬಿಟ್ಸ್ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಹೈದರಾಬಾದ್‍ನ ಮಲಕಪೇಟ್ ಪ್ರದೇಶಕ್ಕೆ ಸೇರಿದ ಷಾದನ್ ಸುಲ್ತಾನ (27) ಬಂಧಿತ ಯುವತಿಯಾಗಿದ್ದು, ಪ್ರಕರಣದ ಕುರಿತು ಸಿಐ ರವಿಕುಮಾರ್ ಅವರು ಹೆಚ್ಚಿನ ಮಾಹಿತಿ ನೀಡಿದ್ದಾರೆ.

    ಬಂಧಿತ ಷಾದನ್ ಸುಲ್ತಾನ ಎಲ್‍ಎಲ್‍ಬಿ ಪದವಿ ಪಡೆದಿದ್ದು, ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಳು. 2015ರಲ್ಲಿ ಆಕೆಗೆ ಅಂಬಿಡ್ಸ್ ನ ಅಲ್ಪ ಸಂಖ್ಯಾತ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರಹೀಂ ಎಂಬಾತನೊಂದಿಗೆ ಪರಿಚಯವಾಗಿತ್ತು. ಆ ಬಳಿಕ ಇಬ್ಬರು ಫೋನ್ ಮೂಲಕ ಮಾತನಾಡಲು ಆರಂಭಿಸಿದ್ದರು. ಅಲ್ಲದೇ ಇಬ್ಬರು ಸುತ್ತಾಟ ಕೂಡ ನಡೆಸಿದ್ದರು. ಪೂರ್ತಿಯಾಗಿ ರಹೀಂನನ್ನು ನಿಯಂತ್ರಿಸಲು ಆರಂಭಿಸಿದ್ದ ಷಾದನ್ ಸುಲ್ತಾನ 6 ತಿಂಗಳ ಹಿಂದೆ 3 ಲಕ್ಷ ರೂ.ಗಳನ್ನು ತನ್ನ ಖಾತೆಗೆ ಜಮಾ ಮಾಡಿಸಿಕೊಂಡಿದ್ದಳು. ಅಲ್ಲದೇ ಮತ್ತೆ 5 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿ, ನಿರಾಕರಿಸಿದರೆ ಇಬ್ಬರು ಸಲಿಗೆಯಿಂದಿರುವ ವಿಚಾರವನ್ನು ಬಹಿರಂಗ ಮಾಡುವುದಾಗಿ ಬೆದರಿಕೆ ಹಾಕಿದ್ದಳು.

    ಸುಲ್ತಾನ ಬೆದರಿಕೆಗಳಿಂದ ನೊಂದ ರಹೀಂ ಕಳೆದ ತಿಂಗಳ 19 ರಂದು ತನ್ನ ಕಚೇರಿಯ ಸಮೀಪ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಪೊಲೀಸರಿಗೆ ರಹೀಂ, ಷಾದನ್ ಸುಲ್ತಾನ್ ವಿರುದ್ಧ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಷಾದನ್‍ನನ್ನು ಬಂಧಿಸಿದ್ದರು.

    ಪ್ರಕರಣದ ವಿಚಾರಣೆ ವೇಳೆ ಷಾದನ್ ಸುಲ್ತಾನ ನಿಜಾಮಿಯಾ 2014ರಿಂದಲೇ ಪ್ರೇಮ ನಾಟಕ ಮಾಡುತ್ತಿದ್ದ ಸಂಗತಿ ತಿಳಿದು ಬಂದಿದೆ. 2014 ರಲ್ಲೇ ಪ್ರೇಮ ಹೆಸರಿನಲ್ಲಿ ಮೋಸ ಮಾಡುವ ಕೃತ್ಯವನ್ನು ಷಾದನ್ ಆರಂಭಿಸಿದ್ದಳು. 2014-18ರ ಅವಧಿಯಲ್ಲಿ ಸುಲ್ತಾನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 14 ಪ್ರಕರಣಗಳು ದಾಖಲಾಗಿತ್ತು. ಇದರಲ್ಲಿ ಸೈಫಾಬಾದ್‍ನ ಪಿಎಸ್ ಠಾಣೆಯಲ್ಲಿ 3, ಚದರ್ ಛದೇರಿಘಾಟ್ 5, ಎಲ್‍ಬಿ ನಗರ 3, ಅಂಬರ್ ಪೇಟ್ 2, ಅಂಬಿಟ್ಸ್ 2, ಮೀರ್ ಚೌಕ್ 4, ನಾರಾಯಣ ಗೂಡ, ಮಲಕ್ ಪೇಟ್, ನಲ್ಲಕುಂಟ, ಉಪ್ಪಲ್ ಪೊಲೀಸ್ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ವಿಶೇಷ ಎಂದರೆ ಷಾದನ್ ಸುಲ್ತಾನ ಮೋಸ ಮಾಡಿದ ಯುವಕರಲ್ಲಿ ವಕೀಲರೊಬ್ಬರು ಇರುವುದು ಗಮನರ್ಹವಾಗಿದೆ.

  • ರಾಜ್ಯದ ಅರ್ಧದಷ್ಟು ಬಾರ್‌ಗಳನ್ನು ಮುಚ್ಚಲು ಮುಂದಾದ ಆಂಧ್ರ ಸರ್ಕಾರ

    ರಾಜ್ಯದ ಅರ್ಧದಷ್ಟು ಬಾರ್‌ಗಳನ್ನು ಮುಚ್ಚಲು ಮುಂದಾದ ಆಂಧ್ರ ಸರ್ಕಾರ

    – ಹೊಸ ವರ್ಷಕ್ಕೆ ಜಗನ್ ಸರ್ಕಾರದ ಹೊಸ ನಿರ್ಧಾರ

    ಹೈದರಾಬಾದ್: ಆಂಧ್ರ ಪ್ರದೇಶದ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರು ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಹಲವು ಮಹತ್ತರ ಬದಲಾವಣೆಗಳನ್ನು ತರುತ್ತಿದ್ದಾರೆ. ಈಗ ರಾಜ್ಯದಲ್ಲಿ ಅರ್ಧದಷ್ಟು ಬಾರ್‌ಗಳನ್ನು ಮುಚ್ಚಲು ಆಂಧ್ರ ಸರ್ಕಾರ ಮುಂದಾಗಿದೆ.

    ಚುನಾವಣೆ ಸಂದರ್ಭದಲ್ಲಿ ಜಗನ್ ಅವರು ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ ಮದ್ಯ ಸಂಪೂರ್ಣವಾಗಿ ನಿಷೇಧ ಮಾಡುವ ಭರವಸೆ ನೀಡಿದ್ದರು. ಈ ಹಿನ್ನೆಲೆ ಈಗಾಗಲೇ ರಾಜ್ಯ ಸರ್ಕಾರ ಶೇ.20ರಷ್ಟು ಮದ್ಯದಂಗಡಿಗಳನ್ನು ಮುಚ್ಚಿದೆ. ಅಲ್ಲದೆ ಹೊಸ ವರ್ಷದಿಂದ ರಾಜ್ಯದಲ್ಲಿನ ಅರ್ಧದಷ್ಟು ಬಾರ್‌ಗಳ ಮುಚ್ಚಲಾಗುತ್ತದೆ. ಹಾಗೆಯೇ ಬಾರ್ ಕೆಲಸದ ಅವಧಿಯನ್ನೂ ಕೂಡ ಕಡಿಮೆ ಮಾಡುವುದಾಗಿ ಸರ್ಕಾರ ತಿಳಿಸಿದೆ. ಇದನ್ನೂ ಓದಿ:ಸಂಪೂರ್ಣ ಮದ್ಯ ನಿಷೇಧ ಸಾಧ್ಯವೇ ಅಥವಾ ಇಲ್ಲವೇ ಎಂಬುವುದರ ಚರ್ಚೆಯ ಸಂಪೂರ್ಣ ಮಾಹಿತಿ

    ಗುರುವಾರ ನಡೆದ ಸಭೆಯಲ್ಲಿ ಈ ಮಹತ್ತರ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಬಾರ್‌ಗಳ ಸಂಖ್ಯೆ ಕಡಿಮೆ ಮಾಡಲಿದ್ದೇವೆ. ಬಾರ್‌ಗಳ ಕೆಲಸದ ಅವಧಿಯನ್ನು ಕೂಡ ಕಡಿಮೆ ಮಾಡಲಿದ್ದೇವೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದ ತಕ್ಷಣವೇ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿ, 2020ರ ಜನವರಿ 1ರಂದು ಈ ಕುರಿತು ಸರ್ಕಾರದ ಪರಿಷ್ಕೃತ ಆದೇಶ ಜಾರಿಯಾಗಲಿದೆ ಎಂದರು. ಇದನ್ನೂ ಓದಿ:ಆಂಧ್ರದಲ್ಲಿ ಮದ್ಯ ಬ್ಯಾನ್ ಸಾಧ್ಯತೆ – ಯಾವ ರಾಜ್ಯಕ್ಕೆ ಎಷ್ಟು ಆದಾಯ ಬಂದಿದೆ?

    ಪ್ರಸ್ತುತವಾಗಿ ಆಂಧ್ರಪ್ರದೇಶದಲ್ಲಿ 839 ಬಾರ್‍ಗಳಿವೆ. ಅವುಗಳಲ್ಲಿ 420 ಬಾರ್‌ಗಳನ್ನು ಮುಚ್ಚಲಾಗುತ್ತದೆ. ಬಾರ್‌ಗಳ ಕೆಲಸದ ಅವಧಿ ಬೆಳಗ್ಗೆ 10 ರಿಂದ ರಾತ್ರಿ 12 ರವರೆಗೆ ಇತ್ತು. ಆದರೆ ಈ ಅವಧಿಯನ್ನು ಬೆಳಗ್ಗೆ 11 ಗಂಟೆಯಿಂದ ರಾತ್ರಿ 10ರವರೆಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಜೊತೆಗೆ ಜನವರಿಯಿಂದ ಬಾರ್‌ಗಳ ಪರವಾನಗಿ ಶುಲ್ಕವನ್ನು ಹೆಚ್ಚಿಸುವ ಬಗ್ಗೆ ಆಂಧ್ರ ಸರ್ಕಾರ ನಿರ್ಧರಿಸಿದೆ. ಒಂದು ವೇಳೆ ಆಂಧ್ರದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧಗೊಂಡರೆ ರಾಜ್ಯದ ಬೊಕ್ಕಸಕ್ಕೆ ಶೇ.9 ಆದಾಯ ನಷ್ಟವಾಗಲಿದೆ. ಇದನ್ನೂ ಓದಿ:ಕಾರಿನಿಂದ ಬಿದ್ದ ಮದ್ಯದ ಬಾಟಲಿಗಳನ್ನು ಹೆಕ್ಕಿಕೊಳ್ಳಲು ಮುಗಿಬಿದ್ದ ಗುಜರಾತ್ ಜನತೆ!

    ಹಾಗೆಯೇ ಯಾವ ಪ್ರದೇಶದಲ್ಲಿ ಸ್ಥಳೀಯರು ಮದ್ಯದಂಗಡಿ ಬಗ್ಗೆ ಆಕ್ಷೇಪಿಸುವುದಿಲ್ಲವೋ ಅಲ್ಲಿ ಮಾತ್ರ ಮದ್ಯದಂಗಡಿಗಳಿಗೆ ಅನುಮತಿ ನೀಡುವಂತೆ ಆಂಧ್ರ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  • ಪ್ರಗತಿ ಸಭೆಯಲ್ಲಿ ಕರ್ನಾಟಕದ ಸಾಧನೆಯನ್ನು ಹೊಗಳಿದ ಮೋದಿ

    ಪ್ರಗತಿ ಸಭೆಯಲ್ಲಿ ಕರ್ನಾಟಕದ ಸಾಧನೆಯನ್ನು ಹೊಗಳಿದ ಮೋದಿ

    ನವದೆಹಲಿ: ಪ್ರಗತಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರದ ಸಾಧನೆಯನ್ನು ಪ್ರಶಂಸಿದ್ದಾರೆ.

    ಬುಧವಾರ ನಡೆದ 31ನೇ ಪ್ರಗತಿ ಸಭೆಯಲ್ಲಿ ದೇಶದ ವಿವಿಧ ಯೋಜನೆಗಳ ಅಭಿವೃದ್ಧಿ ಕುರಿತಾಗಿ ನಡೆಯುತ್ತಿರುವ ಪ್ರಗತಿಯನ್ನು ಪರಿಶೀಲಿಸಿದರು. ಈ ವೇಳೆ ನವೀಕರೀಸಬಹುದಾದ ಇಂಧನ ಪ್ರಸರಣ ಸಂಬಂಧ ಗ್ರಿಡ್ ನಿರ್ಮಾಣ ಯೋಜನೆಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳು ನಿಗದಿತ ಸಮಯದ ಒಳಗಡೆ ಕೆಲಸವನ್ನು ಪೂರ್ಣಗೊಳಿಸಿದ್ದಕ್ಕೆ ಶ್ಲಾಘಿಸಿದರು.

    ಕರ್ನಾಟಕ, ತಮಿಳುನಾಡು, ರಾಜಸ್ಥಾನ, ಗುಜರಾತ್, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್, ಮಧ್ಯಪ್ರದೇಶದಲ್ಲಿ ನವೀಕರಿಸಬಹುದಾದ ಇಂಧನ ಸಂಪನ್ಮೂಲ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಈ 8 ರಾಜ್ಯಗಳ ನಡುವೆ ಕೇಂದ್ರ ಸರ್ಕಾರ ಗ್ರಿಡ್ ನಿರ್ಮಾಣ ಯೋಜನೆ ಆರಂಭಿಸಿದೆ.

    ಈ ಸಭೆಯಲ್ಲಿ ಸೋಲಾರ್ ಮತ್ತು ಗಾಳಿ ವಿದ್ಯುತ್ ಉತ್ಪಾದನೆ ಕಂಪನಿಗಳ ಸಮಸ್ಯೆ, ಭೂ ಸ್ವಾಧೀನ ವಿಚಾರದ ಬಗ್ಗೆ ಚರ್ಚೆ ನಡೆಯಿತು.

    ಹಲವು ವರ್ಷಗಳಿಂದ ಪೂರ್ಣವಾಗದೇ ಇರುವ ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರಗಳು ಮುಂದಾಗಬೇಕು ಮತ್ತು ಆ ಯೋಜನೆಗಳ ಪ್ರಗತಿಯ ವಿವರಗಳು ನನ್ನ ಕಚೇರಿಗೆ ಕಳಹಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಈ ಸಭೆಯಲ್ಲಿ ಮೋದಿ ಸೂಚಿಸಿದ್ದಾರೆ.

  • 4 ದಶಕಗಳ ಹಿಂದೆ ಸತ್ತಿದ್ದ ವ್ಯಕ್ತಿ ಮರಳಿ ಬಂದ- ಚಿತ್ರದುರ್ಗದಲ್ಲಿ ಅಚ್ಚರಿಯ ಘಟನೆ

    4 ದಶಕಗಳ ಹಿಂದೆ ಸತ್ತಿದ್ದ ವ್ಯಕ್ತಿ ಮರಳಿ ಬಂದ- ಚಿತ್ರದುರ್ಗದಲ್ಲಿ ಅಚ್ಚರಿಯ ಘಟನೆ

    ಚಿತ್ರದುರ್ಗ: ನಾಲ್ಕು ದಶಕಗಳ ಬಳಿಕ ಹಿಂದೆ ಸಾವನ್ನಪ್ಪಿದ್ದ ವ್ಯಕ್ತಿ ಮರಳಿ ಊರಿಗೆ ಬಂದಿರುವ ಅಚ್ಚರಿಯ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ ನಿವಾಸಿಯಾಗಿದ್ದ ಈರಜ್ಜ ತನ್ನ 32 ವಯಸ್ಸಿನಲ್ಲೇ 4 ದಶಕಗಳ ಹಿಂದೆ ಅನಾರೋಗ್ಯದಿಂದ ಸಾವಿಗೀಡಾಗಿದ್ದರು. ಕುಟುಂಬಸ್ಥರು ಈರಜ್ಜರ ಅಂತ್ಯ ಸಂಸ್ಕಾರವನ್ನು ನಡೆಸಿದ್ದರು. ಆದರೆ ಸದ್ಯ ಈಗ ಮತ್ತೆ ಈರಜ್ಜ ಮರಳಿ ಮನೆಗೆ ಬಂದಿರುವುದು ಕುಟುಂಬಸ್ಥರಿಗೆ ಆಚ್ಚರಿಯನ್ನು ತಂದಿದೆ.

    ಈರಜ್ಜ ಆಂಧ್ರಪ್ರದೇಶದ ಯಾಪಲಪರ್ತಿ ಗ್ರಾಮದಲ್ಲಿ ಮತ್ತೊಂದು ಮದುವೆಯಾಗಿದ್ದಾರೆ. ಚಿತ್ರನಾಯಕನಹಳ್ಳಿ ಗ್ರಾಮಸ್ಥರು ಯಾಪಲಪರ್ತಿ ಗ್ರಾಮಕ್ಕೆ ಗೊಬ್ಬರ ಕೊಂಡುಕೊಳ್ಳಲೆಂದು ತೆರಳಿದ್ದರು. ಈ ವೇಳೆ ಈರಪ್ಪ ಅವರನ್ನು ಕಂಡ ಚಿತ್ರನಾಯಕನಹಳ್ಳಿ ಗ್ರಾಮಸ್ಥರು ಗುರುತಿಸಿ ಮಾತನಾಡಿದ್ದರು. ಸದ್ಯ ಈರಜ್ಜ ಅವರು ಗ್ರಾಮಕ್ಕೆ ವಾಪಸ್ ಆಗಿದ್ದು, ಪತಿಯನ್ನು ಗುರುತಿಸಿದ ಪತ್ನಿ ಮನೆಗೆ ಸಂಭ್ರಮದಿಂದ ಆಹ್ವಾನಿಸಿದ್ದಾರೆ.

    ಈರಜ್ಜ ಗ್ರಾಮಕ್ಕೆ ಮರಳಿ ವಾಪಸ್ ಬಂದಿರುವುದರಿಂದ ಗ್ರಾಮಸ್ಥರು ಹಾಗೂ ಪತ್ನಿ ಸಂತಸ ವ್ಯಕ್ತಪಡಿಸಿದ್ದಾರೆ. ವೈದ್ಯರು ಮಾತ್ರ ಸತ್ತ ವ್ಯಕ್ತಿ ಮರಳಿ ಬರುವುದು ಅಸಾಧ್ಯ. ಹೀಗಾಗಿ ಅವರ ಡಿಎನ್‍ಎ ಪರೀಕ್ಷೆಯಿಂದ ಸತ್ಯಾಂಶ ತಿಳಿದು ಬರಲಿದೆ ಎಂದಿದ್ದಾರೆ. ಗ್ರಾಮಸ್ಥರು ಮಾತ್ರ ಈರಣ್ಣ ಅವರನ್ನು ನೋಡಲು ಮನೆಗೆ ಆಗಮಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಈರಜ್ಜ ಕೂಡ ನಾನೇ 56 ವರ್ಷಗಳ ಹಿಂದೆ ಸಾವನ್ನಪ್ಪಿದೆ. ಆದರೆ ಮರಳಿ ಜೀವ ಪಡೆದು ಬೇರೆಡೆ ತೆರಳಿದ್ದೆ ಎಂದು ಹೇಳುತ್ತಿದ್ದಾರೆ.

  • ಟೋಲ್ ಕಿರಿಕಿರಿ- ಕಾರ್ ನಂಬರ್ ಪ್ಲೇಟನ್ನೇ ‘ಎಪಿ ಸಿಎಂ ಜಗನ್’ ಎಂದು ಬದಲಿಸಿದ ಭೂಪ

    ಟೋಲ್ ಕಿರಿಕಿರಿ- ಕಾರ್ ನಂಬರ್ ಪ್ಲೇಟನ್ನೇ ‘ಎಪಿ ಸಿಎಂ ಜಗನ್’ ಎಂದು ಬದಲಿಸಿದ ಭೂಪ

    ಹೈದರಾಬಾದ್: ಟೋಲ್ ಅಥವಾ ಪಾರ್ಕಿಂಗ್ ಶುಲ್ಕ ಪಾವತಿಸುವುದನ್ನು ತಪ್ಪಿಸಲು ಅನೇಕ ವಾಹನ ಸವಾರರು ಪೊಲೀಸ್, ಪ್ರೆಸ್, ನ್ಯಾಯಾಧೀಶರು ಅಥವಾ ಶಾಸಕರ ಸ್ಟಿಕ್ಕರ್ ಗಳನ್ನು ಬಳಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯ ಐಡಿಯಾ ನೋಡಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ.

    ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನಿವಾಸಿ ಎಂ.ಹರಿ ರಾಕೇಶ್, ಟೋಲ್ ಶುಲ್ಕ ಕಟ್ಟುವುದನ್ನು ತಪ್ಪಿಸಿಕೊಳ್ಳಲು ತನ್ನ ಕಾರ್ ನಂಬರ್ ಪ್ಲೇಟನ್ನೇ ‘ಎಪಿ ಸಿಎಂ ಜಗನ್’ ಎಂದು ಬದಲಾಯಿಸಿಕೊಂಡಿದ್ದಾನೆ. ಕೇವಲ ಕಾರ್ ಮೇಲೆ ಸ್ಟಿಕ್ಕರ್ ಮಾತ್ರ ಅಂಟಿಸಿಕೊಂಡಿಲ್ಲ. ಬದಲಿಗೆ ಮುಂಭಾಗ ಹಾಗೂ ಹಿಂಭಾಗದ ನಂಬರ್ ಪ್ಲೇಟನ್ನು ‘ಎಪಿ ಸಿಎಂ ಜಗನ್’ ಎಂದು ಬದಲಾಯಿಸಿಕೊಂಡಿದ್ದಾನೆ.

    ಜಡಿಮೆಟ್ಲಾದಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಈತ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಪೊಲೀಸರು ಈತನನ್ನು ವಿಚಾರಣೆ ನಡೆಸಿದ್ದು, ಟೋಲ್ ತೆರಿಗೆ ಪಾವತಿಸುವುದರಿಂದ ವಿನಾಯಿತಿ ಪಡೆಯಲು ಹಾಗೂ ಸಂಚಾರಿ ಪೊಲೀಸರ ತಪಾಸಣೆಯಿಂದ ತಪ್ಪಿಸಲು ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ.

    ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದು, ರಾಕೇಶ್ ವಿರುದ್ಧ ಮೋಸ ಹಾಗೂ ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.