Tag: Andhra Pradesh

  • ಆಷಾಢ ಮಾಸ – 1000 ಕೆ.ಜಿ ಮೀನು, 10 ಕುರಿ ಮಗಳಿಗೆ ಗಿಫ್ಟ್ ಕೊಟ್ಟ ತಂದೆ

    ಆಷಾಢ ಮಾಸ – 1000 ಕೆ.ಜಿ ಮೀನು, 10 ಕುರಿ ಮಗಳಿಗೆ ಗಿಫ್ಟ್ ಕೊಟ್ಟ ತಂದೆ

    ಹೈದರಾಬಾದ್: ಮದುವೆಯಾಗಿ ಗಂಡನ ಮನೆಗೆ ಸೇರಿರುವ ತಮ್ಮ ಮಗಳಿಗೆ ತಂದೆಯೊಬ್ಬ ಆಷಾಢ ಮಾಸಕ್ಕೆ ವಿಭಿನ್ನವಾದ ಗಿಫ್ಟ್ ಕೊಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಆಂಧ್ರಪ್ರದೇಶದ ಬಟುಲಾ ಬಲರಾಮ ಕೃಷ್ಣ ಅವರು ತಮ್ಮ ಮಗಳಿಗೆ ಆಷಾಢ ಮಾಸ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಮೀನು, ಉಪ್ಪಿನಕಾಯಿ, ತರಕಾರಿಗಳು ಮತ್ತು ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಿದರು. ಹೊಸದಾಗಿ ಮದುವೆಯಾದ ಮಗಳಿಗೆ ಬಲರಾಮ ಕೃಷ್ಣ ವಿಭಿನ್ನವಾಗಿ ಉಡುಗೊರೆ ನೀಡಿದ್ದಾರೆ. ಇವರು ಪ್ರಮುಖ ಉದ್ಯಮಿಯಾಗಿದ್ದು, ರಾಜಮಂಡ್ರಿ ಮೂಲದವರಾಗಿದ್ದಾರೆ ಇದನ್ನೂ ಓದಿ:  ಈ ವರ್ಷದಲ್ಲಿ ದೇಶದಲ್ಲೇ ಮೊದಲು- ಹಕ್ಕಿ ಜ್ವರಕ್ಕೆ 12ರ ಬಾಲಕ ಬಲಿ

    ಅಂಧ್ರಪ್ರದೇಶದ ರಾಮಕೃಷ್ಣ ಅವರು ತಮ್ಮ ಮಗಳಿಗೆ ಬರೋಬ್ಬರಿ 1000 ಕೆ.ಜಿ ಮೀನು, 1000 ಕೆ.ಜಿ ತರಕಾರಿ, 250 ಕೆ.ಜಿ ಸಿಗಡಿ ಹಾಗೂ 250 ಕೆಜಿ ಕಿರಾಣಿ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅಲ್ಲದೆ 250 ಜಾರ್ ಉಪ್ಪಿನಕಾಯಿ, 50 ಕೆ.ಜಿ ಚಿಕನ್, 10 ಕುರಿಗಳನ್ನು ಮತ್ತು 250 ಕೆ.ಜಿ ಸಿಹಿ ತಿಂಡಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ:  ಸ್ಪೆಷಲ್ ಕೇಕ್ ಚಪ್ಪರಿಸಿ ತಿಂದು ಅಜಯ್ ಪತ್ನಿಗೆ ರಚಿತಾ ಧನ್ಯವಾದ

    ವಧುವಿನ ಕುಟುಂಬವು ತಮ್ಮ ಮಗಳಿಗೆ ಹೊಸ ಜೀವನವನ್ನು ಆರಂಭಿಸಲು ಸಾಧ್ಯವಾದಷ್ಟು ಎಲ್ಲವನ್ನೂ ಒದಗಿಸುತ್ತಾರೆ. ಆದರೆ ಈ ಪೋಷಕರು ಮಾತ್ರ ಮಗಳ ಜೀವನಕ್ಕೆ ಅಗತ್ಯ ಇರುವುದಕ್ಕಿಂತ ಹೆಚ್ಚಿನ ದಿನ ಬಳಕೆಯ ವಸ್ತುವನ್ನು ಉಡುಗೊರೆಯಾಗಿ ನೀಡಿದ್ದಾರೆ. ನವವಿವಾಹಿತರಿಗೆ ಹಣ, ಕಲಾಕೃತಿ, ಆಭರಣ, ಮನೆ, ಕಾರು ನೀಡುವ ಪೋಷಕರ ಮಧ್ಯೆ ಇವರು ವಿಶೇಷವಾಗಿ ಮಗಳಿಗೆ ಮೀನು, ತರಕಾರಿ, ಕುರಿ ಮುಂತಾದವುಗಳನ್ನು ನೀಡಿದ್ದಾರೆ.

    ರಾಮಕೃಷ್ಣ ಅವರ ಮಗಳು ಪ್ರತ್ಯೂಷಾ ಹಾಗೂ ಆಕೆಯ ಪತಿ ಪವನ್ ಕುಮಾರ್ ಮಾವ ಟ್ರಕ್‍ನಲ್ಲಿ ತುಂಬಿ ಕಳುಹಿಸಿರುವ ಊಡುಗೊರೆಯನ್ನು ನೋಡಿ ಶಾಕ್ ಆಗಿದ್ದಾರೆ.

  • ಬಳ್ಳಾರಿಯಲ್ಲಿ ಮತ್ತೆ ಅಕ್ರಮ ಅದಿರು ಸಾಗಾಟ

    ಬಳ್ಳಾರಿಯಲ್ಲಿ ಮತ್ತೆ ಅಕ್ರಮ ಅದಿರು ಸಾಗಾಟ

    ಬಳ್ಳಾರಿ: ಗಣಿನಾಡಲ್ಲಿ ಸಂಪೂರ್ಣವಾಗಿ ಅಕ್ರಮ ಗಣಿಗಾರಿಕೆ ಹಾಗೂ ಸಾಗಾಟ ಸದ್ದು ಮತ್ತೆ ಶುರುವಾಗಿ ಬಿಟ್ಟಿದೆ. ಬಳ್ಳಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಅಕ್ರಮ ಗಣಿ ಸಾಗಾಟ ಮಾಡುತ್ತಿದ್ದ 20ಕ್ಕೂ ಹೆಚ್ಚು ಲಾರಿಗಳನ್ನ ವಶಕ್ಕೆ ಪಡೆದಿದ್ದಾರೆ.

    ಗಣಿನಾಡು ಬಳ್ಳಾರಿ ಅಂದರೆ ಅಕ್ರಮ ಗಣಿಗಾರಿಕೆ, ಅಕ್ರಮ ಗಣಿ ಸಾಗಾಟ ಎನ್ನುವುದು ಇಡೀ ದೇಶಕ್ಕೇ ಸಾರಿತು. ಮಾಜಿ ಸಚಿವ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿಕೊಂಡು ಸಿಬಿಐ ತನಿಖೆ ಆರಂಭಿಸಿದ ಬಳಿಕ ಸುಪ್ರೀಂ ಕೋರ್ಟ್ ಗಣಿ ರಪ್ತಿಗೆ ನಿಷೇಧ ಹೇರಿತ್ತು. ಪ್ಲಾಂಟ್ ಇದ್ದವರಿಗೆ ಗಣಿಗಾರಿಕೆ ಮಾತ್ರ ಅವಕಾಶ ಮಾಡಿ ಕೊಟ್ಟಿತ್ತು. ಆದರೆ ಇಂದು ಸುಪ್ರೀಂ ಕೋರ್ಟ್ ಆದೇಶದ ಮಧ್ಯೆಯೂ ಕೋಟಿ ಕೋಟಿ ಬೆಲೆ ಬಾಳುವ ಕಬ್ಬಿಣದ ಗಣಿಯನ್ನು ಆಂಧ್ರಕ್ಕೆ ಅಕ್ರಮವಾಗಿ ರವಾನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

    ಬಳ್ಳಾರಿ ಪೊಲೀಸರು ಫ್ಲೈ ಹ್ಯಾಶ್ ತುಂಬಿಕೊಂಡು ಆಂಧ್ರಕ್ಕೆ ತೆರಳುತ್ತಿದ್ದ, ಲಾರಿಗಳ ಮೇಲೆ ನಿಗಾ ಇಟ್ಟು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಫ್ಲೈ ಹ್ಯಾಶ್ ಒಯ್ಯುವ ನೆಪದಲ್ಲಿ ಅದಿರನ್ನ ಸಾಗಾಟ ಮಾಡುತ್ತಿರುವ ಅಂಶ ಗೊತ್ತಾಗಿದೆ. ಪ್ಲೈ ಹ್ಯಾಶ್ ಮಧ್ಯೆ 43 ಪಸೆರ್ಂಟ್ ನಷ್ಟು ಅದಿರನ್ನು ತುಂಬಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 20 ಲಾರಿಗಳನ್ನು ಸೀಜ್ ಮಾಡಲಾಗಿದೆ.

    ಈ ಕುರಿತಂತೆ ಕಾರ್ಯಾಚರಣೆ ನಡೆದ ಖಾಕಿ ಟೀಂ ಅದಿರು ಸಾಗಾಣಿಕೆ ಮಾಡುತ್ತಿದ್ದ ಲಾರಿ ಡ್ರೈವರ್ಸ್ ಹಾಗೂ ಕ್ಲೀನರ್ ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ಅದಿರು ಸಾಗಾಟವನ್ನು ಬಳ್ಳಾರಿ ಎಸ್ಪಿ ಸೈದುಲ್ ಅಡಾವತ್ ದೃಢಪಡಿಸಿದ್ದು, ಸೂಕ್ತ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಇತ್ತ ಅದಿರು ಲಾರಿಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇಸ್ಪಾತ್ ಎನ್ನುವ ಸ್ಪಾಂಜ್ ಐರೆನ್ ಕಂಪನಿಯಿಂದ ಫ್ಲೈ ಹ್ಯಾಶ್ ರವಾನೆಗೆ ಪರವಾನಿಗೆ ಪಡೆದು ಅದರಲ್ಲಿ ಅದಿರನ್ನ ಸಾಗಾಟ ಮಾಡಲಾಗುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ಮಾತನಾಡಿರುವ ಲಾರಿ ಡ್ರೈವರ್‍ಗಳು ಇದು ಪ್ಲೈ ಹ್ಯಾಶ್ ಎಂದುಕೊಂಡಿದ್ವಿ, ಆದರೆ ಅದಿರು ತುಂಬಲಾಗಿದೆ ಎನ್ನುವುದು ಗೊತ್ತಿರಲಿಲ್ಲ. ಇದೇ ರೀತಿ ಇಪ್ಪತ್ತು ದಿನಗಳಿಂದ ಸಾಗಾಟ ಮಾಡಿದ್ದೇವೆ. ನಮ್ಮದೇನು ತಪ್ಪಿಲ್ಲ ಎನ್ನುತ್ತಿದ್ದಾರೆ. ಇದನ್ನೂ ಓದಿ:ದೇವಸ್ಥಾನದಲ್ಲಿ ಬಿಜೆಪಿ ಮುಖಂಡನ ಮಗಳ ಅದ್ಧೂರಿ ವಿವಾಹ- ಜಿಲ್ಲಾಡಳಿತದಿಂದ ತಡೆ

  • ಮಹಿಳೆ ಸೇರಿದಂತೆ 6 ಮಾವೋವಾದಿಗಳನ್ನ ಹೊಡೆದುರಳಿಸಿದ ಆ್ಯಂಟಿ ನಕ್ಸಲ್ ಫೋರ್ಸ್

    ಮಹಿಳೆ ಸೇರಿದಂತೆ 6 ಮಾವೋವಾದಿಗಳನ್ನ ಹೊಡೆದುರಳಿಸಿದ ಆ್ಯಂಟಿ ನಕ್ಸಲ್ ಫೋರ್ಸ್

    ಹೈದರಾಬಾದ್: ಇಂದು ಬೆಳಗ್ಗೆ ಆಂಧ್ರ ಪ್ರದೇಶದ ವಿಶಾಖಪಟ್ಟಣ ವ್ಯಾಪ್ತಿಯಲ್ಲಿ ಆರು ಮಾವೋವಾದಿಗಳನ್ನು ಆ್ಯಂಟಿ ನಕ್ಸಲ್ ಫೋರ್ಸ್ ಹೊಡೆದುರಳಿಸಿದೆ. ಮೃತರಲ್ಲಿ ಓರ್ವ ಮಹಿಳೆ ಸಹ ಒಬ್ಬರು. ಮೃತರು ನಿಷೇಧಿತ ತಂಡ ಸಿಪಿಐ(ಮಾವೋವಾದಿ)ಯ ಸದಸ್ಯರಾಗಿದ್ದರು.

    ಇಂದು ಬೆಳಗ್ಗೆ ಆ್ಯಂಟಿ ನಕ್ಸಲ್ ಫೋರ್ಸ್ ಗ್ರೌಂಡ್ ಮತ್ತು ವಿಶೇಷ ದಳದವರು ಥಿಗ್ಲಮೆಟ್ಟಾ ಗ್ರಾಮದ ವ್ಯಾಪ್ತಿಯಲ್ಲಿ ಸರ್ಚಿಂಗ್ ಆಪರೇಷನ್ ಆರಂಭಿಸಿದ್ದರು. ಈ ವೇಳೆ ಮಾವೋವಾದಿಗಳು ಮತ್ತು ಸರ್ಚಿಂಗ್ ಆಪರೇಷನ್ ತಂಡದ ನಡುವೆ ಗುಂಡಿನ ಕಾಳಗ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಒಟ್ಟು ಆರು ಜನರನ್ನು ಹೊಡೆದುರಳಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಮಾವೋವಾದಿಗಳ ಹತ್ಯೆ – ಚಿಕ್ಕಮಗಳೂರಿನ ಇಬ್ಬರು ಸಾವು

    ಸುರಕ್ಷಬಲ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ. ಮೃತರ ಬಳಿಯಲ್ಲಿದ್ದ ಆಯುಧಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸರ್ಚಿಂಗ್ ಆಪರೇಷನ್ ಮುಂದುವರಿದಿದೆ ಎಂದು ಚಿಂತಾಪಲ್ಲೆಯ ಎಎಸ್‍ಪಿ ವಿದ್ಯಾಸಾಗರ್ ಹೇಳಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ಕೊಂದು ಸೇಡು ತೀರಿಸಿಕೊಳ್ಳುತ್ತೇವೆ – ಕೇರಳ ಸಿಎಂಗೆ ಮಾವೋವಾದಿಗಳಿಂದ ಪತ್ರ

  • ಸೋನು ಸೂದ್ ಸಮಾಜಮುಖಿ ಕಾರ್ಯಗಳಿಗೆ ಈ ರಾಜಕಾರಣಿ ಸ್ಫೂರ್ತಿಯಂತೆ

    ಸೋನು ಸೂದ್ ಸಮಾಜಮುಖಿ ಕಾರ್ಯಗಳಿಗೆ ಈ ರಾಜಕಾರಣಿ ಸ್ಫೂರ್ತಿಯಂತೆ

    ಮುಂಬೈ: ಬಾಲಿವುಡ್ ನಟ ಸೋನುಸೂದ್‍ರವರು ನನಗೆ ರಾಜಕೀಯ ಪ್ರವೇಶಿಸಲು ಇಷ್ಟ ಇಲ್ಲ. ಆದರೆ ಈ ರಾಜಕಾರಣಿ ನನಗೆ ಸ್ಪೂರ್ತಿ ಎಂದು ತಿಳಿಸಿದ್ದಾರೆ.

    ಕೊರೊನಾ ಸಂಕಷ್ಟದಲ್ಲಿರುವ ಹಲವಾರು ಮಂದಿಗೆ ಸೆಲೆಬ್ರೆಟಿಗಳು ಸಹಾಯ ಮಾಡುತ್ತಿದ್ದಾರೆ. ಅಲ್ಲದೇ ಬಾಲಿವುಡ್ ನಟ ಸೂನ್ ಸೂದ್ ಕೂಡ ಲಾಕ್‍ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿ ಆರ್ಥಿಕವಾಗಿ ಹಾಗೂ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಅನೇಕ ಜನರಿಗೆ ನೆರವಾಗುತ್ತಿದ್ದಾರೆ.

    ಇಷ್ಟೆಲ್ಲಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಟ ಸೋನು ಸೂದ್‍ರವರಿಗೆ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಎಂದರೆ ಬಹಳ ಇಷ್ಟ ಹಾಗೂ ಅವರು ಅಭಿವೃದ್ಧಿ ಪಡಿಸಿದ ಕಾರ್ಯಗಳು ತಮಗೆ ಸ್ಫೂರ್ತಿ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

    ಮೊದಲಿಗೆ ನಾನು ನಟನಾಗಿ ಕೆಲಸ ಆರಂಭಿಸಿದಾಗ ಶೂಟಿಂಗ್‍ಗಾಗಿ ಹೈದರಾಬಾದ್‍ಗೆ ತೆರಳುತ್ತಿದ್ದೆ. ಈ ನಗರ ನೋಡಲು ಬಹಳ ಸುಂದರವಾಗಿತ್ತು. ಅಲ್ಲಿನ ಬೆಳವಣಿಗೆಗೆ ಕಾರಣ ಚಂದ್ರಬಾಬು ನಾಯ್ಡುರವರು ಎಂಬ ವಿಚಾರ ತಿಳಿಯಿತು. ಸದ್ಯ ತಾವು ಮಾಡುತ್ತಿರುವ ಅನೇಕ ಕೆಲಸಗಳಿಗೆ ಅವರೇ ಸ್ಪೂರ್ತಿ ಹಾಗೂ ಇಂದಿನ ಯುವ ಜನತೆ ಕೂಡ ಅವರನ್ನು ಪ್ರೇರಣೆಯಾಗಿ ಪಡೆದುಕೊಳ್ಳಬೇಕು ಎಂದಿದ್ದಾರೆ.

    ವಿಶೇಷವೆಂದರೆ ಸೋನು ಸೂದ್ ಪತ್ನಿ ಸೋನಾಲಿಯವರು ಕೂಡ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯವರಾಗಿದ್ದು, ತಮ್ಮ ವಿದ್ಯಾಭ್ಯಾಸಕ್ಕಾಗಿ ನಾಗ್‍ಪುರಕ್ಕೆ ತೆರಳಿದಾಗ ಸೋನು ಸೂದ್‍ರವರನ್ನು ಭೇಟಿಯಾಗಿದ್ದು, ನಂತರ ಇಬ್ಬರು ಪ್ರೀತಿಸಿ ವಿವಾಹವಾಗಿದ್ದಾರೆ.

    ಲಾಕ್‍ಡೌನ್ ವೇಳೆ ಸೋನು ಸೂದ್‍ರವರು ಮಾಡಿರುವ ಅನೇಕ ಕೆಲಸಗಳನ್ನು ನೋಡಿ ಚಂದ್ರಬಾಬುರವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: IAS ಆಕಾಂಕ್ಷಿಗಳಿಗೆ ಫ್ರೀ ಕೋಚಿಂಗ್ ಆಫರ್ ನೀಡಿದ ಸೋನು ಸೂದ್

  • ಹಳ್ಳಿ ಜನರಿಗೆ ಫ್ರೀ ಲಸಿಕೆ – ಮಹೇಶ್ ಬಾಬುವಿಗೆ ಅಭಿಮಾನಿಗಳಿಂದ ಮೆಚ್ಚುಗೆ

    ಹಳ್ಳಿ ಜನರಿಗೆ ಫ್ರೀ ಲಸಿಕೆ – ಮಹೇಶ್ ಬಾಬುವಿಗೆ ಅಭಿಮಾನಿಗಳಿಂದ ಮೆಚ್ಚುಗೆ

    ಹೈದರಾಬಾದ್: ಟಾಲಿವುಡ್ ನಟ ಸೂಪರ್ ಸ್ಟಾರ್ ಮಹೇಶ್ ಬಾಬು ಹಳ್ಳಿ ಜನರಿಗೆ ಉಚಿತವಾಗಿ ಲಸಿಕೆ ಹಾಕಿಸಿದ್ದಾರೆ.

    ಮೇ 31ರಂದು ಮಹೇಶ್ ಬಾಬುರವರು ತಮ್ಮ ತಂದೆ ಸೂಪರ್ ಸ್ಟಾರ್ ಕೃಷ್ಣರವರ ಹುಟ್ಟು ಹಬ್ಬದ ಪ್ರಯುಕ್ತ ಆಂಧ್ರಪ್ರದೇಶದಲ್ಲಿರುವ ತಮ್ಮ ಸ್ವಂತ ಗ್ರಾಮ ಬುರೀಪಲೇಮ್‍ನ ಜನರಿಗೆ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಹಾಕಿಸಿದ್ದಾರೆ.

    2015ರ ಶ್ರೀಮಂತುಡು ಸಿನಿಮಾದ ವೇಳೆ ಬುರಿಪಲೇಮ್ ಗ್ರಾಮವನ್ನು ಮಹೇಶ್ ಬಾಬುರವರು ದತ್ತು ಪಡೆದಿದ್ದರು. ಸದ್ಯ ಕೊರೊನಾ ಸಂಕಷ್ಟದ ಸಮಯದಲ್ಲಿ ಗ್ರಾಮದ ಜನರಿಗೆ ಉಚಿತವಾಗಿ ಲಸಿಕೆ ಹಾಕಿಸಿದ್ದು, ಈ ಕುರಿತಂತೆ ಮಹೇಶ್ ಬಾಬುರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೆಲವೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಓದಿ: ವಿದೇಶದಲ್ಲಿ ದುಬಾರಿ ಕಾರ್ ಖರೀದಿ ಮಾಡಿದ ಸೀರಿಯಲ್ ನಟಿ

    ಫೋಟೋ ಜೊತೆಗೆ ವ್ಯಾಕ್ಸಿನೇಷನ್‍ನಿಂದ ಮತ್ತೆ ಸಾಮಾನ್ಯ ಜೀವನ ಆರಂಭವಾಗುತ್ತದೆ ಎಂಬುವುದು ನಮ್ಮ ಭರವಸೆ. ಬುರಿಪಲೇಮ್‍ನಲ್ಲಿರುವ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಿ ಸುರಕ್ಷಿಗೊಳಿಸಲು ನಾನು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಈ ವ್ಯಾಕ್ಸಿನೇಷನ್ ಡ್ರೈವ್ ವ್ಯವಸ್ಥೆಗೊಳಿಸಲು ಸಹಾಯ ಮಾಡಿದ ಆಂಧ್ರ ಆಸ್ಪತ್ರೆಗಳಿಗೆ ಬಹಳ ಧನ್ಯವಾದಗಳು. ಇದನ್ನು ಓದಿ: RRR ಸಿನಿಮಾದ ಒಂದು ಸಾಂಗ್ ಶೂಟ್‍ಗೆ ರಾಜಮೌಳಿ ಬೃಹತ್ ಪ್ಲಾನ್

    ಈ ಅಭೂತಪೂರ್ವ ಸಮಯದಲ್ಲಿ ಕಾರ್ಯನಿರ್ವಹಿಸಿದ ಫ್ರಂಟ್ ಲೈನ್ ವಾರಿಯರ್ಸ್ ಹಾಗೂ ಲಸಿಕೆಯ ಮಹತ್ವವನ್ನು ಅರಿತು ಮುಂದೆ ಬಂದು ತಮ್ಮ ಲಸಿಕೆ ಪಡೆದ ಗ್ರಾಮಸ್ಥರಿಗೆ ನಿಜವಾಗಲೂ ಪ್ರಶಂಸಿಸುತ್ತೇನೆ. ಲಸಿಕೆ ಪಡೆಯಿರಿ, ಎಲ್ಲರೂ ಸುರಕ್ಷಿತವಾಗಿರಿ ಎಂದು ಟ್ವೀಟ್ ಮಾಡಿದ್ದಾರೆ.

    ಒಟ್ಟಾರೆ ಸೂಪರ್ ಸ್ಟಾರ್ ಮಹೇಶ್ ಬಾಬುವಿನಂತೆ ಪ್ರತಿ ಸ್ಟಾರ್ ನಟರು ಒಂದೊಂದು ಹಳ್ಳಿಯ ಜನರಿಗೆ ವ್ಯಾಕ್ಸಿನೇಷನ್ ಮಾಡಿಸಿದರೆ, ಕಷ್ಟದ ಸಮಯದಲ್ಲಿ ಹಳ್ಳಿ ಜನರಿಗೆ ಸಹಕಾರಿ ಆಗುತ್ತದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ರಾಜ್ಯ ಸಾರಿಗೆ ಬಸ್‍ಗಳ ನಡುವೆ ಅಪಘಾತ -ಐವರ ದುರ್ಮರಣ

    ರಾಜ್ಯ ಸಾರಿಗೆ ಬಸ್‍ಗಳ ನಡುವೆ ಅಪಘಾತ -ಐವರ ದುರ್ಮರಣ

    ಅಮರಾವತಿ: ರಾಜ್ಯ ಸಾರಿಗೆ ಸಂಸ್ಥೆಗಳ ಎರಡು ಬಸ್‍ಗಳ ನಡುವೆ ಸಂಭವಿಸಿದ ಡಿಕ್ಕಿಯ ಪರಿಣಾಮ ಐವರು ಮೃತಪಟ್ಟು 30 ಕ್ಕೂ ಹೆಚ್ಚುಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಸುಂಕರಿ ಪೆಟಾದಲ್ಲಿ ನಡೆದಿದೆ.

    ಸಾರಿಗೆ ಬಸ್‍ಗಳು ಒಟ್ಟೊಟ್ಟಿಗೆ ಚಲಿಸುತ್ತಿದ್ದ ವೇಳೆ ಹಿಂದುಗಡೆಯಿದ್ದ ಬಸ್ ಮುಂದೆ ಚಲಿಸುತ್ತಿದ್ದ ಬಸ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹಿಂದೆ ಬರುತ್ತಿದ್ದ ಟ್ರಕ್ ತನ್ನ ಮುಂದಿದ್ದ ಬಸ್‍ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 2 ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಹೆಚ್ಚಿನ ಪ್ರಯಾಣಿಕರಿಗೆ ಗಾಯಗಳಾಗಿವೆ.

    ಬಸ್‍ಗಳ ನಡುವೆ ಅಪಘಾತಕ್ಕೆ ರಸ್ತೆಯ ಬದಿಯಲ್ಲಿದ್ದ ತ್ಯಾಜ್ಯಕ್ಕೆ ಬೆಂಕಿ ಕೊಟ್ಟಿದ್ದ ಕಾರಣ ಹೊಗೆ ರಸ್ತೆ ತುಂಬಾ ಹಬ್ಬಿದ್ದರಿಂದಾಗಿ ಅಪಘಾತ ನಡೆದಿದೆ ಎಂದು ವರದಿಯಾಗಿದೆ. ಘಟನೆ ನಡೆದ ತಕ್ಷಣ ಅಂಬ್ಯುಲೆನ್ಸ್, ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೂಡಲೇ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಮಗಳ ಜೊತೆಗೆ ನೇಣು ಬಿಗಿದುಕೊಂಡು ಟೆಕ್ಕಿ ಪತ್ನಿ ಸಾವು

    ಮಗಳ ಜೊತೆಗೆ ನೇಣು ಬಿಗಿದುಕೊಂಡು ಟೆಕ್ಕಿ ಪತ್ನಿ ಸಾವು

    ಅಮರಾವತಿ: ಅಮೆರಿಕದಲ್ಲಿ ಟೆಕ್ಕಿ ಪತಿ ವಾಸವಾಗಿದ್ದಾರೆ. ಆದರೆ ಇತ್ತ ಮಗಳ ಜೊತೆಗೆ ಮಹಿಳೆ ನೇಣು ಬಿಗಿದುಕೊಂಡು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕಡಪದಲ್ಲಿ ನಡೆದಿದೆ.

    ಮೃತರನ್ನು ಶ್ರಾವಣಿ(34) ಹಾಗೂ ಈಕೆಯ 9 ವರ್ಷದ ಮಗಳು ಎಂದು ಗುರುತಿಸಲಾಗಿದೆ. ಮಗಳ ಜೊತೆಗೆ ಫ್ಯಾನಿಗೆ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆರೆಹೊರೆಯವರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದಿರುವ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಶವಪರೀಕ್ಷೆಗೆ ಕಳುಹಿಸಿದ್ದಾರೆ.

    ಮೃತ ಶ್ರಾವಣಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ದಂಪತಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಕಳೆದ ನಾಲ್ಕು ವರ್ಷಗಳಿಂದ ಪತಿಯಿಂದ ದೂರವಾಗಿ ಮಗಳೊಂದಿಗೆ ವಾಸವಾಗಿದ್ದರು.

    ಪತಿ ಯುಎಸ್‍ಎನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ತಾಯಿ-ಮಗಳ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದೇವೆ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಪತಿಯ ಅಣ್ಣನಿಂದ ಲೈಂಗಿಕ ಕಿರುಕುಳ- ಆತ್ಮಹತ್ಯೆಗೆ ಶರಣು

    ಪತಿಯ ಅಣ್ಣನಿಂದ ಲೈಂಗಿಕ ಕಿರುಕುಳ- ಆತ್ಮಹತ್ಯೆಗೆ ಶರಣು

    ಅಮರಾವತಿ: ಪತಿಯ ಅಣ್ಣ ನೀಡುತ್ತಿದ್ದ ಲೈಂಗಿಕ ಕಿರುಕುಳದಿಂದ ಮನನೊಂದ ಮಹಿಳೆ ಆತ್ಮಹತ್ಯೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತಡೆಪಲ್ಲಿಯಲ್ಲಿ ನಡೆದಿದೆ.

    ಗೋದಾವರಿಯ ಪೆರುಪಾಳ್ಯಂದ ಸುರೇಖಾ ಮೃತ ಮಹಿಳೆ. 12 ವರ್ಷಗಳ ಹಿಂದೆ ಶ್ರೀನಿವಾಸ್ ರಾವ್‍ನನ್ನು ಮದುವೆಯಾಗಿ ತಡೆಪಲ್ಲಿಯ ಉಂದಾವಳ್ಳಿ ಗ್ರಾಮದಲ್ಲಿ ನೆಲೆಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು.

    ಸುರೇಖಾ ಪತಿ ಶ್ರೀನಿವಾಸ್ ಫೋಟೋಗ್ರಾಫರ್ ಆಗಿದ್ದು, ಮುಗ್ಧ ಸ್ವಭಾವದವರಾಗಿದ್ದರು. ಕೆಲಸದ ನಿಮಿತ್ತ ಹೆಚ್ಚಾಗಿ ಮನೆಯಿಂದ ಹೊರಗೆ ಇರುತ್ತಿದ್ದರು. ಈ ವೇಳೆ ಶ್ರೀನಿವಾಸ್ ಸಹೋದರ ಶಿವಶಂಕರ್ ತಮ್ಮನ ಪತ್ನಿಯ ಮೇಲೆ ಕಣ್ಣು ಹಾಕಿದ್ದನು. ಸುರೇಖಾಗೆ ನಿರಂತರವಾಗಿ ಕಿರುಕುಳವನ್ನು ನೀಡುತ್ತಿದ್ದನು. ಸುರೇಖಾ ಮಕ್ಕಳಿಗೆ ಈ ವಿಚಾರವನ್ನು ಎಲ್ಲೂ ಹೇಳದಂತೆ ಬೆದರಿಕೆ ಹಾಕುತ್ತಿದ್ದನು. ಇದರಿಂದ ಮನನೊಂದ ಸುರೇಖಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ವಿಷ ಸೇವಿಸಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಸುರೇಖಾರನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಾಯಿಯನ್ನು ಕಳೆದುಕೊಂಡ ಮಕ್ಕಳು ತಬ್ಬಲಿಗಳಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸುರೇಖಾ ಸಾವಿಗೆ ಶಿವಶಂಕರ್ ಕಾರಣ ಎಂದ ಸಂಬಂಧಿಕರು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಅನಾಥ ಶವದ ಅಂತ್ಯಕ್ರಿಯೆ ನೆರವೇರಿಸಿದ ಮಹಿಳಾ ಎಸ್‍ಐ

    ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಅನಾಥ ಶವದ ಅಂತ್ಯಕ್ರಿಯೆ ನೆರವೇರಿಸಿದ ಮಹಿಳಾ ಎಸ್‍ಐ

    ಅಮರಾವತಿ: ಅಂತ್ಯಕ್ರಿಯೆಗಾಗಿ ಅನಾಥ ಶವವವನ್ನು ಮಹಿಳಾ ಎಸ್‍ಐ ತನ್ನ ಭುಜದ ಮೇಲೆ ಇಟ್ಟು 2 ಕೀಲೋಮೀಟರ್ ದೂರ ಹೊತ್ತು ಸಾಗಿ ಮಾನವೀಯತೆ ಮೆರೆದಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

    ಅನಾಥ ಶವವನ್ನು ಹೊತ್ತು ಸಾಗಿದ ಮಹಿಳಾ ಎಸ್‍ಐ ಶಿರೀಶಾ ಆಗಿದ್ದಾರೆ. ಇವರು ಕಾನಿಗುಬ್ಬ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಅನಾಥ ಶವವನ್ನು ಹೊತ್ತು ಹೋಗಿ ಅಂತ್ಯಕ್ರಿಯೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಎಸ್‍ಐ ಮಾನವೀಯತೆ ಕಂಡು ಮೆಚ್ಚುಗೆ ಮತ್ತು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಶವವೊಂದು ಅವಿಕೊತ್ತೂರು ಗ್ರಾಮದ ಜಮೀನೊಂದರಲ್ಲಿ ಪತ್ತೆಯಾಗಿತ್ತು. ಸ್ಥಳ ಪರಿಶೀಲನೆಗೆ ಹೋದಾಗ ಗ್ರಾಮಸ್ಥರು ಈ ಅನಾಥ ಶವವನ್ನು ಹೊತ್ತು ಅಂತ್ಯಕ್ರಿಯೆ ಮಾಡಲು ಮುಂದೆ ಬರಲಿಲ್ಲ. ಆಗ ಎಸ್‍ಐ ತಾವೇ ಶವವವನ್ನು ಹೊತ್ತುಕೊಂಡು ಹೋಗಲು ಮುಂದಾಗಿದ್ದಾರೆ. ಓರ್ವ ವ್ಯಕ್ತಿ ಮತ್ತು ಎಸ್‍ಐ ಶಿರೀಶಾ ತಮ್ಮ ಹೆಗಲ ಮೇಲೆ ಹೊತ್ತು ಜಮೀನಿನಿಂದ ವಾಹನವಿದ್ದ ಸ್ಥಳದವರೆಗೆ ಸುಮಾರು 2 ಕೀಲೋಮೀಟರ್ ದೂರ ನಡೆದುಕೊಂಡು ಹೋಗಿ ಅಂತ್ಯಕ್ರಿಯೆಯನ್ನು ನರೆವೆರಿಸಿದ್ದಾರೆ. ಪೊಲೀಸ್ ಮಾನವೀಯತೆ ಕಂಡು ಮೆಚ್ಚುಗೆ ವ್ಯಕ್ತವಾಗುತ್ತಿದೆ.

     

  • ಡಬಲ್ ಮರ್ಡರ್ ಕೇಸ್ – ಮಗಳ ನಾಲಗೆಯನ್ನು ತುಂಡರಿಸಿ ತಿಂದಳು ತಾಯಿ

    ಡಬಲ್ ಮರ್ಡರ್ ಕೇಸ್ – ಮಗಳ ನಾಲಗೆಯನ್ನು ತುಂಡರಿಸಿ ತಿಂದಳು ತಾಯಿ

    ತಿರುಪತಿ: ಆಂಧ್ರದ ಮದನಪಲ್ಲಿಯಲ್ಲಿ ಜನವರಿ 24ರಂದು ಹೆತ್ತವರೇ ಇಬ್ಬರು ಮಕ್ಕಳನ್ನು ಕೊಂದ ಪ್ರಕರಣದಲ್ಲಿ ಬೆಚ್ಚಿಬೀಳುವ ವಿಚಾರಗಳು ಬೆಳಕಿಗೆ ಬರುತ್ತಿವೆ. ತನ್ನನ್ನು ತಾಯಿ ಕಾಳಿಯ ಅಪರಾವತಾರ ಎಂದು ಭಾವಿಸಿಕೊಂಡ ನನ್ನ ಪತ್ನಿ ಪದ್ಮಜ, ದೊಡ್ಡ ಮಗಳು ಅಲೇಖ್ಯಾಳನ್ನು ಕೊಂದ ನಂತರ, ನಾಲಗೆಯನ್ನು ಕಟ್ ಮಾಡಿಕೊಂಡು ತಿಂದುಬಿಟ್ಟಳು’ ಎಂದು ಪುರುಷೋತ್ತಮ ನಾಯ್ಡು ಕಣ್ಣೀರಿಡುತ್ತಾ ವೈದ್ಯರ ಮುಂದೆ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಈ ವಿಚಾರದಲ್ಲಿ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

    ಪೂರ್ವಜನ್ಮದಲ್ಲಿ ನಂಬಿಕೆ ಇರಿಸಿದ್ದ ಅಲೇಖ್ಯಾ, ಅಪ್ಪ ನೀನು ಮಹಾಭಾರತ ನಡೆದಾಗ ಅರ್ಜುನನಾಗಿ ಜನಿಸಿದ್ದೆ. ಕಾಲೇಜಿಗೆ ಹೋಗಿ ಪಾಠ ಮಾಡುವುದು ನಿನ್ನ ವೃತ್ತಿ ಅಲ್ಲ. ಪಾಂಡವರ ಪರವಾಗಿ ಮುಂದೆ ನಿಂತು ನಡೆಸಿದ ಹೋರಾಟ ಸ್ಫೂರ್ತಿಯನ್ನು ಈಗಲೂ ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳುತ್ತಿದ್ದಳು ಎಂದು ಪುರುಷೋತ್ತಮ್ ನಾಯ್ಡು ವೈದ್ಯರಲ್ಲಿ ಹೇಳಿಕೊಂಡಿದ್ದಾರೆ.

    ಕಲಿಯುಗ ಅಂತ್ಯವಾಗಿ ಸತ್ಯ ಯುಗ ಆರಂಭವಾಗಲಿದೆ. ಕೊರೊನಾ ಕೂಡ ಇದರ ಸೂಚಕ ಎಂದು ಮಗಳು ಅಲೇಖ್ಯಾ ಹೇಳುತ್ತಿದ್ದಳು. “ನನ್ನ ಮಗಳ ಮಾತುಗಳೆಲ್ಲಾ ಸತ್ಯ ನಾನು ಓದಿದ ಆಧ್ಯಾತ್ಮಿಕ ಪುಸ್ತಗಳಲ್ಲಿಯೂ ಈ ವಿಷಯಗಳೇ ಇವೆ” ಎಂದು ಪುರುಷೋತ್ತಮ್ ನಾಯ್ಡು ವೈದ್ಯರಲ್ಲಿ ಹೇಳಿದ್ದಾರೆ.

    ವೈದ್ಯರ ಮುಂದೆಯೂ ಮಂತ್ರಪಠಣ ಮಾಡುತ್ತಿದ್ದ ಪದ್ಮಜ, “ನನ್ನ ಮಕ್ಕಳು ಮತ್ತೆ ಬದುಕಿ ಬರುತ್ತಾರೆ.. ಮನೆಗೆ ವಾಪಸ್ ಹೋಗಬೇಕು.. ಜೈಲಲ್ಲಿ ನನ್ನ ಜೊತೆ ಇದ್ದ ಶಿವ, ಕೃಷ್ಣ ಇಲ್ಲಿ ಕಾಣುತ್ತಿಲ್ಲ” ಎಂದು ಬಡಬಡಿಸುತ್ತಿದ್ದರು ಎನ್ನಲಾಗಿದೆ.

    ಪುರುಷೋತ್ತಮ್ ನಾಯ್ಡು ಮತ್ತು ಪದ್ಮಜ ಇಬ್ಬರಿಗೂ ಮಾನಸಿಕ ಸಮಸ್ಯೆಯ ಲಕ್ಷಣಗಳು ಹೆಚ್ಚಿವೆ. ಸದ್ಯದ ಸಂದರ್ಭದಲ್ಲಿ ಜೈಲಿನಂತಹ ವಾತಾವರಣದಲ್ಲಿ ಅವರಿಗೆ ಚಿಕಿತ್ಸೆ ನೀಡಬೇಕು ಹೀಗಾಗಿ, ವಿಶಾಖಪಟ್ಟಣದ ಸರ್ಕಾರಿ ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿರುಪತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇಬ್ಬರನ್ನು ಶುಕ್ರವಾರ ಮದನಪಲ್ಲಿಯ ಸಬ್ ಜೈಲಿನಿಂದ ತಿರುಪತಿಯ ಮೆಂಟಲ್ ಆಸ್ಪತ್ರೆಗೆ ಬಿಗಿ ಭದ್ರತೆಯಲ್ಲಿ ಕರೆತರಲಾಗಿತ್ತು.