Tag: Andhra Pradesh

  • ಪ್ರವಾಹ ಸಂಕಷ್ಟದಲ್ಲಿರುವವರಿಗೆ ನೆರವು ನೀಡಿ : ರಾಹುಲ್ ಗಾಂಧಿ

    ಪ್ರವಾಹ ಸಂಕಷ್ಟದಲ್ಲಿರುವವರಿಗೆ ನೆರವು ನೀಡಿ : ರಾಹುಲ್ ಗಾಂಧಿ

    ನವದೆಹಲಿ: ಸತತ ಮಳೆ ಮತ್ತು ಪ್ರವಾಹದಿಂದ ಆಂಧ್ರಪ್ರದೇಶದಲ್ಲಿ 25 ಮಂದಿ ಮೃತಪಟ್ಟಿರುವ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಕಷ್ಟಕ್ಕೆ ಸಿಲುಕಿರುವವರಿಗೆ ಪಕ್ಷದ ಕಾರ್ಯಕರ್ತರು ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ ಭಾರೀ ಹಾನಿಯಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪ. ಆತ್ಮೀಯ ಕಾಂಗ್ರೆಸ್ ಕಾರ್ಯಕರ್ತರೇ, ದಯವಿಟ್ಟು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ರಾಜ್ಯದಲ್ಲಿ ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತ – ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ


    ಆಂಧ್ರಪ್ರದೇಶದಲ್ಲಿ ಆಗಿರುವ ಪ್ರವಾಹವು ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ. ತೊಂದರೆಯಲ್ಲಿರುವವರಿಗೆ ಪಕ್ಷದ ಕಾರ್ಯಕರ್ತರು ನೆರವಾಗಬೇಕು ಎಂದು ಟ್ವೀಟ್ ಮಾಡಿ ಹೇಳಿದ್ದಾರೆ. ಮಳೆ ಮತ್ತು ಪ್ರವಾಹಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಅನಂತಪುರ ಮತ್ತು ಕಡಪಾ ಜಿಲ್ಲೆಯಲ್ಲಿ ಕನಿಷ್ಠ 25 ಮಂದಿ ಸಾವಿಗೀಡಾಗಿದ್ದು 15 ಮಂದಿ ಕಾಣೆಯಾಗಿದ್ದಾರೆ. ಇದನ್ನೂ ಓದಿ: 1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್

  • ಅಕಾಲಿಕ ಮಳೆಗೆ ತತ್ತರಿಸಿದ ಆಂಧ್ರಪ್ರದೇಶ – 24 ಮಂದಿ ಸಾವು

    ಅಕಾಲಿಕ ಮಳೆಗೆ ತತ್ತರಿಸಿದ ಆಂಧ್ರಪ್ರದೇಶ – 24 ಮಂದಿ ಸಾವು

    ಹೈದರಾಬಾದ್: ಅಕಾಲಿಕ ಮಳೆಯಬ್ಬರಕ್ಕೆ ಆಂಧ್ರಪ್ರದೇಶ ಅಕ್ಷರಶಃ ನಲುಗಿ ಹೋಗಿದೆ. ಪುಣ್ಯಕ್ಷೇತ್ರ ತಿರುಪತಿಯ ದೃಶ್ಯಗಳು ಭಕ್ತರನ್ನು ಬೆಚ್ಚಿಬೀಳಿಸಿವೆ. ಆಂಧ್ರದಲ್ಲಿ ಇದುವರೆಗೆ ಮಳೆಗೆ 24 ಮಂದಿ ಸಾವನ್ನಪ್ಪಿದ್ದಾರೆ.

    ಮಳೆಯಿಂದಾಗಿ 21 ಹಳ್ಳಿಗಳು ಜಲಾವೃತಗೊಂಡಿವೆ. ಇಂದು ಸಹ ಚಿತ್ತೂರು, ಕಡಪ, ಅನಂತಪುರಂ, ಕರ್ನೂಲ್ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗಲಿದೆ ಎಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ತಿರುಪತಿಯಲ್ಲಿ ಮತ್ತಷ್ಟು ಪ್ರವಾಹದ ಆತಂಕ ಇದೆ. ಇನ್ನೂ ಕೇರಳದಲ್ಲಿ ಮಳೆಯಬ್ಬರ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳಿಲ್ಲ. ಕೇರಳದ ಎಲ್ಲ ಜಿಲ್ಲೆಗಳಲ್ಲಿ ನವೆಂಬರ್ 25ರವರೆಗೂ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ವರುಣನ ಆರ್ಭಟ – 14 ಮಂದಿ ಸಾವು, 18ಕ್ಕೂ ಹೆಚ್ಚು ಮಂದಿ ನಾಪತ್ತೆ

    ರಾಜ್ಯದ ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ್ದು, ರಾಜ್ಯಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಕಟ್ಟಡ ಕುಸಿತ – ಇಬ್ಬರು ಮಕ್ಕಳ ಸಾವು

  • ಆಂಧ್ರಪ್ರದೇಶದಲ್ಲಿ ವರುಣನ ಆರ್ಭಟ – 14 ಮಂದಿ ಸಾವು, 18ಕ್ಕೂ ಹೆಚ್ಚು ಮಂದಿ ನಾಪತ್ತೆ

    ಆಂಧ್ರಪ್ರದೇಶದಲ್ಲಿ ವರುಣನ ಆರ್ಭಟ – 14 ಮಂದಿ ಸಾವು, 18ಕ್ಕೂ ಹೆಚ್ಚು ಮಂದಿ ನಾಪತ್ತೆ

    ಹೈದರಾಬಾದ್: ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆಗೆ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ ಮತ್ತು 18ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

    ಕಡಪ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಚಿತ್ತೂರು ಜಿಲ್ಲೆಯಲ್ಲಿಯೂ ಕೂಡ ಮಳೆಯಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಕಟ್ಟಡ ಕುಸಿತ – ಇಬ್ಬರು ಮಕ್ಕಳ ಸಾವು

    ಮಳೆಯಿಂದಾಗಿ ಹಲವಾರು ನದಿಗಳು ಉಕ್ಕಿ ಹರಿಯುತ್ತಿದ್ದು, ರಾಯಲಸೀಮಾ ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಕೆಲವು ಸ್ಥಳಗಳಲ್ಲಿ ರಸ್ತೆ ಸಂಚಾರ ವ್ಯವಸ್ಥೆಯನ್ನು ಸಹ ಕಡಿತಗೊಳಿಸಲಾಗಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಂಡಿದೆ. ಹಲವೆಡೆ ರಸ್ತೆಗಳು ರಾಜಕಾಲುವೆಗಳಾಗಿ ಮಾರ್ಪಡುಗೊಂಡು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

    ಭಾರೀ ಮಳೆಗೆ 1,544 ಮನೆಗಳಿಗೆ ಹಾನಿಯಾಗಿದ್ದು, 3.4 ಹೆಕ್ಟರ್ ಕೃಷಿ ಕ್ಷೇತ್ರಗಳು ಮುಳುಗಡೆಯಾಗಿವೆ ಮತ್ತು ನೂರಾರು ಜಾನುವಾರುಗಳು ಸಾವನ್ನಪ್ಪಿವೆ. ಕಡಪ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಸುಮಾರು 8,206.57 ಲಕ್ಷ ಸಾರ್ವಜನಿಕ ಆಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

    ಕಡಪಾ ಜಿಲ್ಲೆಯ ರಾಜಂಪೇಟಯ ಚೆಯ್ಯೆರು ಹಳ್ಳದ ಪ್ರವಾಹದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದು, 12 ಮಂದಿ ಪತ್ತೆಯಾಗಿಲ್ಲ. ಎಸ್‍ಡಿಆರ್‍ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಡಪ ಮತ್ತು ಚಿತ್ತೂರಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹತ್ತಾರು ಮಂದಿಯನ್ನು ರಕ್ಷಿಸಿದ್ದಾರೆ. ಪ್ರವಾಹದಿಂದಾಗಿ ಕಡಿತಗೊಂಡಿದ್ದ ಆರು ಗ್ರಾಮಗಳಿಗೆ ಎನ್‍ಡಿಆರ್‍ಎಫ್ ತಂಡ ಸಂಪರ್ಕವನ್ನು ಮರುಸ್ಥಾಪಿಸಿದೆ. ಕೊನೆಯದಾಗಿ ಉಳಿದಿರುವ ಒಂದು ಹಳ್ಳಿಯೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಕುಸಿದು ಬಿದ್ದ ಮನೆ ಗೋಡೆ- ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

    ರಾಜ್ಯದ ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ್ದು, ರಾಜ್ಯಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ಜಗನ್ ಮೋಹನ್ ರೆಡ್ಡಿ ಅವರು ಶನಿವಾರ ಪ್ರವಾಹ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಳ್ಳಲಿದ್ದಾರೆ ಎಂದು  ಹೇಳಲಾಗುತ್ತಿದೆ.

  • ಮದುವೆಗೆ ನಿರಾಕರಿಸಿದ ಯುವತಿಗೆ ಬೆಂಕಿ ಹಚ್ಚಿ, ತಾನೂ ಸಾಯಲು ಪ್ರಯತ್ನಿಸಿದ ಪಾಗಲ್ ಪ್ರೇಮಿ

    ಮದುವೆಗೆ ನಿರಾಕರಿಸಿದ ಯುವತಿಗೆ ಬೆಂಕಿ ಹಚ್ಚಿ, ತಾನೂ ಸಾಯಲು ಪ್ರಯತ್ನಿಸಿದ ಪಾಗಲ್ ಪ್ರೇಮಿ

    ವಿಶಾಖಪಟ್ಟಣಂ: ಪ್ರೀತಿಸಿದ ಹುಡುಗಿ ತನ್ನನ್ನು ಮದುವೆಯಾಗಲು ಒಪ್ಪಲಿಲ್ಲ ಎಂದು ಯುವಕನೊಬ್ಬ ಆಕೆಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡು ಸಾಯಲು ಪ್ರಯತ್ನಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಭೂಪಾಲಪಲ್ಲೆ ಮೂಲದ ಪಿ. ಹರ್ಷವರ್ಧನ್ ಹಾಗೂ ವಿಶಾಖಪಟ್ಟಣಂ ಮೂಲದ ಯುವತಿ ಇಬ್ಬರೂ ಖಾಸಗಿ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ ಓದುತ್ತಿದ್ದರು. ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚಾಗಿದ್ದರಿಂದ ಅವರು ತಮ್ಮ ತಮ್ಮ ಮನೆಗಳಲ್ಲಿಯೇ ವಾಸವಾಗಿದ್ದರು. ಹರ್ಷವರ್ಧನ್ ಆ ಯುವತಿಯನ್ನು ಪ್ರೀತಿ ಮಾಡುತ್ತಿರುವುದಾಗಿ ಪ್ರಪೋಸಲ್ ಮಾಡಿದ ಮೇಲೆ ಆಕೆ ಆತನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಆತ ಕೋಪಗೊಂಡಿದ್ದ. ಇದನ್ನೂ ಓದಿ: ತಮಿಳು ಚಿತ್ರತಂಡದ ನಂತರ ಮತ್ತೆ ಸಕ್ಕರೆ ನಾಡಿನಲ್ಲಿ ತೆಲುಗು ಸಿನಿಮಾದವರಿಂದ ಅವಾಂತರ

    ಕೆಲವು ದಿನಗಳ ಹಿಂದೆ ಯುವಕ ಆಕೆಯನ್ನು ವೈಜಾಗ್‍ನ ಲಾಡ್ಜ್‌ಗೆ ಕರೆದುಕೊಂಡು ಹೋದ ಆತ ಆಕೆಯ ಮೇಲೆ ಪೆಟ್ರೋಲ್ ಸುರಿದು, ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿ ಜೋರಾಗಿ ಹೊತ್ತಿಕೊಂಡ ನಂತರ ಅವರಿಬ್ಬರೂ ಸಹಾಯಕ್ಕಾಗಿ ಹೊರಗೆ ಓಡಿಬಂದಿದ್ದಾರೆ. ಆಗ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ಧಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕಳ್ಳತನ ಮಾಡುವುದಕ್ಕೂ ಮುನ್ನ ದೇವರ ಪಾದ ಮುಟ್ಟಿ ನಮಸ್ಕರಿಸಿದ!- ವೀಡಿಯೋ ವೈರಲ್

    ನಾನು ಮದುವೆಯಾಗಲು ಒಪ್ಪದ ಕಾರಣದಿಂದ ನನ್ನನ್ನು ಕೊಲೆ ಮಾಡಲು ಮುಂದಾಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆದರೆ ಆತ ನಾವಿಬ್ಬರು ಪ್ರೀತಿಸುತ್ತದ್ದೆವೆ, ಹೀಗಾಗಿ ಒಟ್ಟಿಗೆ ಸಾಯಲು ನಿರ್ಧಾರ ಮಾಡಿದ್ದೆವು ಎಂದು ಹೇಳಿದ್ದಾನೆ. ಇಬ್ಬರು ಬೇರೆ ಬೇರೆ ಹೇಳಿಕೆ ನೀಡಿದ್ದಾರೆ ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಬಡಿದಾಡಿಕೊಂಡು ದಸರಾ ಆಚರಣೆ- 80ಕ್ಕೂ ಹೆಚ್ಚು ಜನರಿಗೆ ಗಾಯ

    ಬಡಿದಾಡಿಕೊಂಡು ದಸರಾ ಆಚರಣೆ- 80ಕ್ಕೂ ಹೆಚ್ಚು ಜನರಿಗೆ ಗಾಯ

    ಹೈದರಾಬಾದ್: ಬಡಿಗೆಯಿಂದ ಬಡದಾಡಿಕೊಂಡು ವಿಶಿಷ್ಟವಾಗಿ ದಸರಾ ಹಬ್ಬವನ್ನು ಆಚರಣೆ ಮಾಡಿ, 80ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ನಡೆದಿದೆ.

    ಅರಕೇರೆ, ನೇರಣಿಕಿ, ಮಾಳ ಮಲ್ಲೇಶ್ವರದಲ್ಲಿ ಪ್ರತಿ ವರ್ಷದಂತೆ ಈ ವರ್ಷ ದಸರಾವನ್ನು ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ. ಪೊಲೀಸರೆದುರೇ ಸಾವಿರಾರು ಭಕ್ತರು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಒಬ್ಬರಿಗೊಬ್ಬರು ಹೊಡೆದುಕೊಳ್ಳುತ್ತಾ ಆಚರಣೆ ಮಾಡಿದ್ದಾರೆ.

    ಸುತ್ತಮುತ್ತಲು ಗ್ರಾಮಸ್ಥರು ಸೇರಿ ದಸರಾ ಹಬ್ಬಕ್ಕೆ ಕಟ್ಟಿಗೆ, ಕಬ್ಬಿಣ ಕೋಲಿನಿಂದ ಹೊಡೆದಾಟ ಮಾಡಿಕೊಂಡು ದೇವರನ್ನ ಗ್ರಾಮಕ್ಕೆ ಕರೆದುಕೊಂಡು ಹೋದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇಲ್ಲಿಯ ಜನರಿಗೆ ಇದೆ. ಹೀಗಾಗಿ ಹಲವು ವರ್ಷಗಳಿಂದ ಈ ಪದ್ಧತಿ ಆಚರಣೆ ನಡೆದುಕೊಂಡು ಬಂದಿದೆ. ಇದೀಗ ಕೊರೊನಾದಿಂದ ಈ ಆಚರಣೆಗೆ ನಿಷೇಧ ಇದ್ದರು ಸ್ಥಳೀಯರು ಎಲ್ಲರೂ ಸೇರಿಕೊಂಡು ಈ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.

    ಹೀಗೆ ನಿನ್ನೆ ರಾತ್ರಿ 10 ಗಂಟೆಯಿಂದ ಇಂದು ಮುಂಜಾನೆವರೆಗೂ ನಡೆದ ಈ ಆಚರಣೆಯಲ್ಲಿ 80ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಬಡಿದಾಟಕ್ಕೆ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಗೆಳೆಯನ ಜೊತೆ ತಿರುಪತಿಗೆ ಭೇಟಿ ಕೊಟ್ಟ ನಯನತಾರಾ

    ಗೆಳೆಯನ ಜೊತೆ ತಿರುಪತಿಗೆ ಭೇಟಿ ಕೊಟ್ಟ ನಯನತಾರಾ

    ಹೈದರಾಬಾದ್: ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಬಾಯ್ ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ಆಂಧ್ರಪ್ರದೇಶದಲ್ಲಿರುವ ತಿರುಮಲ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಕಿರುತೆರೆ ಖಡಕ್ ಖಳನಟ ಈಗ ಬೆಳ್ಳಿತೆರೆಯ ನಾಯಕನಟ – ‘ಬಹುಕೃತಂ ವೇಷಂ’ನಲ್ಲಿ ಶಶಿಕಾಂತ್ ಹೊಸ ಅವತಾರ

    ದೇವಾಲಯದಲ್ಲಿ ದೇವರ ದರ್ಶನ ಪಡೆದು ಹೊರ ಬಂದ ಈ ಜೋಡಿ ಫೋಟೋಗೆ ಪೋಸ್ ನೀಡಿದ್ದು, ಈ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ 36ನೇ ವಸಂತಕ್ಕೆ ಕಾಲಿಟ್ಟ ವಿಘ್ನೇಶ್ ಶಿವನ್‍ರವರಿಗೆ ನಯನತಾರಾ ಸರ್ಪ್ರೈಸ್ ಪಾರ್ಟಿ ನೀಡಿದ್ದರು. ಇದೀಗ ಈ ಜೋಡಿ ಒಟ್ಟಿಗೆ ತಿರುಮಲ ತಿರುಪತಿ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ವೀಡಿಯೋದಲ್ಲಿ ನಯನತಾರಾ ನೀಲಿ ಬಣ್ಣದ ಅನಾರ್ಕಲಿ ಧರಿಸಿದ್ದು, ವಿಘ್ನೇಶ್ ಬಿಳಿ ಬಣ್ಣದ ಪಂಚೆ ಹಾಗೂ ಶರ್ಟ್, ಅಲ್ಲದೇ ಮೆರೂನ್ ಕಲರ್‌ನ ಶಲ್ಯವನ್ನು ಧರಿಸಿದ್ದಾರೆ. ಬಳಿಕ ದೇವಾಲಯದಿಂದ ಮುಂದೆ ಸಾಗುತ್ತಾ ಇಬ್ಬರು ಮಾಸ್ಕ್ ಧರಿಸಿಕೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಸದ್ಯ ಇವರಿಬ್ಬರು ತಿರುಪತಿಗೆ ಭೇಟಿ ನೀಡಿರುವ ಸಾಕಷ್ಟು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನಯನಾತಾರಾ ಅಭಿಮಾನಿಗಳು ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮದುವೆಗೆ ಸ್ಥಳ ಹುಡುಕುತ್ತ ಜೈಪುರಗೆ ಬಂದ್ರು ಲವ್ ಬರ್ಡ್ಸ್

    ಖಾಸಗಿ ಮಾಧ್ಯಮವೊಂದರಲ್ಲಿ ನೆತ್ರಿಕನ್ ಚಿತ್ರದ ಪ್ರಚಾರದ ವೇಳೆ ನಯನಾ ವಿಘ್ನೇಶ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಮತ್ತೊಂದು ಸಂದರ್ಶನದ ವೇಳೆ ಉಂಗುರದ ಬಗ್ಗೆ ಪ್ರಶ್ನಿಸಿದಾಗ, ನಯನತಾರಾ ಅದು ನಿಶ್ಚಿತಾರ್ಥದ ಉಂಗುರ ಇತ್ತೀಚೆಗಷ್ಟೆ ಜರುಗಿದೆ ಎಂದಿದ್ದರು. ಇದು ನನ್ನ ವಿಘ್ನೇಶ್ ಶಿವನ್ ನಿಶ್ಚಿತಾರ್ಥದ ಉಂಗುರ. ನಾವು ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲಿಲ್ಲ. ಆದರೆ ಮದುವೆಯ ವೇಳೆ ಖಂಡಿತವಾಗಿಯೂ ಅಭಿಮಾನಿಗಳಿಗೆ ತಿಳಿಸುತ್ತೇವೆ. ನಮ್ಮ ನಿಶ್ಚಿತಾರ್ಥ ಕೇವಲ ನಮ್ಮ ಕುಟುಂಬ ಮತ್ತು ಆತ್ಮೀಯರ ಸಮುಖದಲ್ಲಿ ನಡೆಯಿತು. ಆದರೆ ನಮ್ಮ ವಿವಾಹದ ಬಗ್ಗೆ ಸದ್ಯ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

  • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ- ಆಂಧ್ರ, ಒಡಿಶಾ ಕರಾವಳಿ ಜಿಲ್ಲೆಗಳಲ್ಲಿ ಗುಲಾಬ್ ಚಂಡಮಾರುತ ಭೀತಿ

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ- ಆಂಧ್ರ, ಒಡಿಶಾ ಕರಾವಳಿ ಜಿಲ್ಲೆಗಳಲ್ಲಿ ಗುಲಾಬ್ ಚಂಡಮಾರುತ ಭೀತಿ

    ನವದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಆಂಧ್ರ, ಒಡಿಶಾ ಕರಾವಳಿ ಜಿಲ್ಲೆಗಳಲ್ಲಿ ಗುಲಾಬ್ ಚಂಡಮಾರುತ ಭೀತಿ ಎದುರಾಗಿದೆ. ಛತ್ತೀಸ್‍ಗಢ, ತೆಲಂಗಾಣದಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಕಂಡ ಹಿನ್ನೆಲೆ ಗುಲಾಬ್ ಚಂಡಮಾರುತದ ಭೀತಿ ಆವರಿಸಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಒಡಿಶಾದ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದ 7 ಜಿಲ್ಲೆಗಳಲ್ಲಿ ಹೆಚ್ಚಿನಾ ನಿಗಾ ವಹಿಸಲಾಗುತ್ತಿದ್ದು, ಗಜಪತಿ, ಗಂಜಾಮ್, ರಾಯಗಡ, ಕೋರಾಪುತ್, ಮಲ್ಕನಿಗಿರಿ, ನಬರಂಗಪುರ, ಕಂಧಮಲ್‍ಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಚಂಡಮಾರುತ ಒಡಿಶಾ ಹಾಗೂ ಆಂಧ್ರಪ್ರದೇಶದ ದಕ್ಷಿಣಕ್ಕೆ ಬೀಸಲಿದ್ದು, ಕರಾವಳಿ ಜಿಲ್ಲೆಗಳಲ್ಲೂ ಇದರ ಪ್ರಭಾವ ಬೀರಲಿದೆ. ಇದನ್ನೂ ಓದಿ: ತಾಲಿಬಾನಿ ಬಿಜೆಪಿ ಸರ್ಕಾರದಿಂದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ

    ಈ ಬಗ್ಗೆ ಎನ್‌ಡಿಆರ್‌ಎಫ್‌ನ ಪ್ರಧಾನ ನಿರ್ದೇಶಕ ಎಸ್.ಎನ್ ಪ್ರಧಾನ್ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದು, ಆಂಧ್ರಪ್ರದೇಶದಲ್ಲಿ 5 ತಂಡ, ಒಡಿಶಾದಲ್ಲಿ 13 ತಂಡಗಳನ್ನು ನಿಯೋಜಿಸಲಾಗುತ್ತದೆ. ಒಡಿಶಾದ ಬಾಲಸೋರ್, ಗಂಜಾಬ್, ಗಜಪತಿ, ರಾಯಗಢ, ಕೊರಾಪುತ್, ನಯಾಗರ್, ಮಲ್ಕಂಗಿರಿ ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್‌ ಪಡೆಗಳನ್ನು ನಿಯೋಜಿಸಲು ಕ್ರಮ ಕೈಗೊಂಡಿದ್ದು, ಆಂಧ್ರಪ್ರದೇಶದ ವಿಶಾಖಪಟ್ಟಣ, ಶ್ರೀಕಾಕುಳಂ, ಯನಮ್, ವಿಜಿಯನಗರಮ್‍ಗಳಲ್ಲಿ ಎನ್‌ಡಿಆರ್‌ಎಫ್‌ ಪಡೆಗಳನ್ನು ನಿಯೋಜಿಸುವ ಕಾರ್ಯ ನಡೆದಿದೆ. ಒಂದು ಎನ್‌ಡಿಆರ್‌ಎಫ್‌ ತಂಡದಲ್ಲಿ 47 ಸಿಬ್ಬಂದಿಗಳಿರಲಿದ್ದು, ಮರ, ಪೋಲ್ ಗಳನ್ನು ತುಂಡರಿಸುವ ಸಾಧನಗಳು, ಗಾಳಿ ತುಂಬಬಹುದಾದ ದೋಣಿಗಳು, ತುರ್ತು ವೈದ್ಯಕೀಯ ಸೌಲಭ್ಯ, ರಕ್ಷಣಾ ಕಾರ್ಯಾಚರಣೆಗಳಲ್ಲಿ ರಕ್ಷಿಸಿದ ಜನರಿಗೆ ಅಗತ್ಯವಿರುವ ನೆರವು ನೀಡುವ ಸಾಧನಗಳನ್ನು ಹೊಂದಿರಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ನಿಲ್ಲದ ದೊಡ್ಡವರ ಮಕ್ಕಳ ಆಕ್ಸಿಡೆಂಟ್ – Textile ಮಾಲೀಕನ ಮಗನ ಕಾರು ಅಪಘಾತ

     

  • ಟಿಟಿಡಿ ಸದಸ್ಯರಾಗಿ ಎಸ್.ಆರ್.ವಿಶ್ವನಾಥ್ ನೇಮಕ

    ಟಿಟಿಡಿ ಸದಸ್ಯರಾಗಿ ಎಸ್.ಆರ್.ವಿಶ್ವನಾಥ್ ನೇಮಕ

    ಬೆಂಗಳೂರು: ಆಂಧ್ರಪ್ರದೇಶದ ಪ್ರತಿಷ್ಠಿತ ತಿರುಮಲ ತಿರುಪತಿ ಟ್ರಸ್ಟ್​ಗೆ ಕರ್ನಾಟಕದ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ಸದಸ್ಯರನ್ನಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

    ಯಲಹಂಕ ಕ್ಷೇತ್ರದ ಶಾಸಕರು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಎಸ್.ಆರ್. ವಿಶ್ವನಾಥ್ ಅವರನ್ನು ಈ ಉನ್ನತ ಹುದ್ದೆಗೆ ನೇಮಕ ಮಾಡಲಾಗಿದೆ. ಈ ಹಿಂದೆ ಬೆಂಗಳೂರಿನ ತಿರುಮಲ ತಿರುಪತಿ ಟ್ರಸ್ಟ್ ನ ಸ್ಥಳೀಯ ಸಲಹಾ ಮಂಡಳಿಯ ಉಪಾಧ್ಯಕ್ಷರಾಗಿ ವಿಶ್ವನಾಥ್ ಅವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಸಫಾರಿಗರಿಗೆ ದರ್ಶನ ಕೊಟ್ಟ ಬಂಡೀಪುರದ ಸುಂದರಿ!

    ವಿಶ್ವನಾಥ್ ಅವರು ತಮ್ಮನ್ನು ಈ ಹುದ್ದೆಗೆ ನೇಮಕ ಮಾಡಿರುವುದಕ್ಕೆ ಜಗನ್ ಮೋಹನ್ ರೆಡ್ಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ಮತ್ತು ಆಂಧ್ರಪ್ರದೇಶ ಸರ್ಕಾರದ ಪಂಚಾಯತ್ ರಾಜ್ ಮತ್ತು ಗಣಿ ಸಚಿವ ರಾಮಚಂದ್ರರೆಡ್ಡಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಈ ಹುದ್ದೆಗೆ ನನ್ನನ್ನು ನೇಮಕ ಮಾಡಿರುವುದಕ್ಕೆ ಹರ್ಷವೆನಿಸಿದೆ. ತಿರುಮಲ ಕ್ಷೇತ್ರಕ್ಕೆ ಭೇಟಿ ನೀಡುವ ಕರ್ನಾಟಕದ ಭಕ್ತಾಧಿಗಳಿಗೆ ಸೇವೆ ಸಲ್ಲಿಸುವ ಅದೃಷ್ಟ ನನ್ನದಾಗಿದೆ ಎಂದು ಎಸ್. ಆರ್ ವಿಶ್ವನಾಥ್ ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ದೆಹಲಿಗೆ ಹೋಗಬೇಕು – ಸದನದಲ್ಲಿ ಸ್ವಾರಸ್ಯಕರ ಚರ್ಚೆ

  • 2 ಕೋಟಿ ವೆಚ್ಚದಲ್ಲಿ ಜಗನ್ ಮೋಹನ ರೆಡ್ಡಿ ದೇವಾಲಯ ನಿರ್ಮಿಸಿದ ಶಾಸಕ

    2 ಕೋಟಿ ವೆಚ್ಚದಲ್ಲಿ ಜಗನ್ ಮೋಹನ ರೆಡ್ಡಿ ದೇವಾಲಯ ನಿರ್ಮಿಸಿದ ಶಾಸಕ

    ಹೈದರಾಬಾದ್: ಆಂಧ್ರ ಪ್ರದೇಶದ ವೈಎಸ್‍ಆರ್ ಕಾಂಗ್ರೆಸ್ ಶಾಸಕ ಹಾಗೂ ಪಕ್ಷದ ಮುಖ್ಯಸ್ಥರೊಬ್ಬರು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರಿಗೆ ಭವ್ಯವಾದ ದೇವಸ್ಥಾನವೊಂದನ್ನು ನಿರ್ಮಿಸಿದ್ದಾರೆ.

    ವೈಎಸ್‌ಆರ್‌ಪಿಸಿಯ ಶಾಸಕ ಬಿ. ಮಧುಸೂಧನ್ ರೆಡ್ಡಿ ತಮ್ಮ ಗೌರವವನ್ನು ಪ್ರದರ್ಶಿಸಲು ಮತ್ತು ಸರ್ಕಾರದ ಯೋಜನೆ ಬಗ್ಗೆ ಜಾಗೃತಿ ಮೂಡಿಸಲು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದೇವಾಲಯವನ್ನು ನಿರ್ಮಿಸಿರುವುದಾಗಿ ತಿಳಿಸಿದ್ದು, ಈ ದೇವಾಲಯವನ್ನು ಕರ್ನಾಟಕ ಹಾಗೂ ತಮಿಳುನಾಡಿನ ಕೆಲವು ತಜ್ಞರು ವಿನ್ಯಾಸಗೊಳಿಸಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ:ತಾಲಿಬಾನಿಗಳನ್ನ RSS, ಬಜರಂಗದಳಕ್ಕೆ ಹೋಲಿಸಿದ ಕವಿ ಮುನ್ವರ್ ರಾಣಾ

    ಚಿತ್ತೂರು ಜಿಲ್ಲೆಯ ಶ್ರೀಕಳಹಸ್ತಿ ಪಟ್ಟಣದಲ್ಲಿ ಬುಧವಾರ ಆಂಧ್ರಪ್ರದೇಶ ಸರ್ಕಾರದ ಯೋಜನೆಯಡಿಯಲ್ಲಿ ನಿರ್ಮಿಸಲಾದ ನವರತ್ನಲು ದೇವಾಲಯವನ್ನು ಉದ್ಘಾಟಿಸಲಾಯಿತು. ‘ಜಗನಣ್ಣ ನಾರತ್ನಳ ನಿಲಯಂ’ ಎಂದು ಕರೆಯಲ್ಪಡುವ ದೇವಾಲಯದಲ್ಲಿ 9 ಸ್ತಂಭಗಳಿವೆ. ಇದು ರಾಜ್ಯ ಸರ್ಕಾರವು ಜಾರಿಗೊಳಿಸುತ್ತಿರುವ ಒಂಬತ್ತು ಕಲ್ಯಾಣ ಯೋಜನೆಗಳನ್ನು ಸೂಚಿಸುತ್ತದೆ. ಈ ಕುರಿತಂತೆ ಬಿ. ಮಧುಸೂಧನ್ ರೆಡ್ಡಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ನಮ್ಮ ಜಗನ್ನಣ್ಣ, ಬಡ ಜನರ ಕುಟುಂಬಗಳಿಗೆ ಸಂತಸ ತರುವ ದೇವರು ಎಂದು ಹೇಳಿದ್ದು, ಹೊಸದಾಗಿ ನಿರ್ಮಿಸಲಾಗಿರುವ ದೇವಾಲಯದ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ – ಸಿಬಿಐ ತನಿಖೆಗೆ ಆದೇಶ

    ಮನೆಯ ಮೇಲ್ಭಾಗದ ಮಿರರ್ ಹಾಲ್‍ನಲ್ಲಿ ಜಗನ್ ಮೋಹನ್ ರೆಡ್ಡಿಯವರ ಪ್ರತಿಮೆ ಹಾಗೂ ಫೋಟೋಗಳನ್ನು ಇಡಲಾಗಿದೆ. ಇದು ಆಗಸ್ಟ್ 20ರಂದು ಉದ್ಘಾಟನೆಯಾಗಲಿದೆ. ಅಲ್ಲದೇ ಕೇಂದ್ರ ಫಲಕವನ್ನು ಆಂಧ್ರಪ್ರದೇಶದ ನಕ್ಷೆಯೊಂದಿಗೆ ಕೆತ್ತಲಾಗಿದೆ. ಜೊತೆಗೆ ಜಗನ್ ರೆಡ್ಡಿ, ವೈಎಸ್‌ಆರ್‌ಪಿಸಿಯ ಧ್ವಜ ಮತ್ತು ಪಕ್ಷದ ಚಿಹ್ನೆ ನವ ರತ್ನಗಳನ್ನು ಬೆಳ್ಳಿ ಹಾಗೂ ಚಿನ್ನದಿಂದ ಮಾಡಲ್ಪಟ್ಟಿದೆ. ದೇವಾಲಯಕ್ಕೆ ಭೇಟಿ ನೀಡುವವರಿಗೆ ಜಗನ್ ಮೋಹನ್ ರೆಡ್ಡಿ ಮಾಡಿದ ಕಲ್ಯಾಣ ಯೋಜನೆಗಳ ತಿಳಿಸುವ ಕಿರು ಪುಸ್ತಕವನ್ನು ನೀಡಲಾಗುತ್ತದೆ ಎಂದಿದ್ದಾರೆ.

    ಅನೇಕರು ನಾನು ಜಗನ್ ಮೋಹನ್ ರೆಡ್ಡಿಯವರು ನಾರತ್ನಳ ನಿಲಯವನ್ನು ಏಕೆ ಕಟ್ಟಿದ್ದೇನೆ ಎಂದು ಟೀಕಿಸಬಹುದು. ಆದರೆ ಬ್ರಿಟಿಷರ ಪ್ರತಿಮೆಗಳನ್ನು ಗೋದಾವರಿ ನದಿಯ ಅಣೆಕಟ್ಟಿನಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಜನರಿಗೆ ಒಳ್ಳೆಯದನ್ನು ಮಾಡುವ ವ್ಯಕ್ತಿಯ ಪ್ರತಿಮೆಯನ್ನು ನಿರ್ಮಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

    ಜಗನ್‍ರವರು ಜಾರಿಗೊಳಿಸಿರುವ ನವ ರತ್ನಗಳ ಯೋಜನೆ ರಾಜ್ಯದ ಆರು ಕೋಟಿ ಜನಸಂಖ್ಯೆಯಲ್ಲಿ 5 ಕೋಟಿ ಜನರಿಗೆ ಪ್ರಯೋಜನವಾಗುತ್ತಿದೆ. ಇಂತಹ ಬೃಹತ್ ಯೋಜನೆ ಭಾರತದಲ್ಲಿ ಎಲ್ಲಿಯೂ ಇಲ್ಲ. ಅದಕ್ಕಾಗಿಯೇ ನಾನು ಇದನ್ನು ನಿರ್ಮಿಸಿದ್ದೇನೆ ಎಂದು ತನ್ನ ಕೆಲಸವನ್ನು ಮಧುಸೂಧನ್ ರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ:ಸಲಿಂಗಿಗಳಿಗೆ ಜೊತೆಯಾಗಿ ವಾಸಿಸಲು ಅನುಮತಿ ನೀಡಿದ ಯುಪಿ ಕೋರ್ಟ್

     

  • ಗಾಂಜಾ ಮಾರಾಟ ಯತ್ನ- ಆಂಧ್ರ ಮೂಲದ ಮೂವರ ಬಂಧನ

    ಗಾಂಜಾ ಮಾರಾಟ ಯತ್ನ- ಆಂಧ್ರ ಮೂಲದ ಮೂವರ ಬಂಧನ

    ಬೆಂಗಳೂರು: ನಗರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆಂಧ್ರ ಪ್ರದೇಶ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಹೊಸಕೋಟೆ  ಪೊಲೀಸರು ಯಶಸ್ವಿಯಾಗಿದ್ದಾರೆ.

    ಗಾಂಜಾ ಮಾರಾಟ ಹೊಸಕೋಟೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬಹಳಷ್ಟು ವ್ಯಾಪಾರವಾಗುತ್ತಿತ್ತು. ಇದರಿಂದಾಗಿ ಎಲ್ಲೆಡೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದರು. ಅದೇ ರೀತಿ ಕಳೆದ ರಾತ್ರಿ ಪೊಲೀಸ್ ಇನ್‍ಸ್ಪೆಕ್ಟರ್ ರಂಗಸ್ವಾಮಿ ರೌಂಡ್ಸ್ ನಲ್ಲಿದ್ದ ವೇಳೆ ಮೂವರು ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವುದು ಕಂಡುಬಂದಿದೆ. ಅವರನ್ನು ಹಿಡಿದು ವಿಚಾರಣೆ ಮಾಡಿದಾಗ ಗಾಂಜಾ ಮಾರಾಟ ಪ್ರಕರಣ ಬೆಳಕಿಗೆ ಬಂದಿದ್ದು, ಗಾಂಜಾ ಮಾರಾಟ ಮಾಡಲು ಆಂಧ್ರಪ್ರದೇಶದಿಂದ ಬಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಆಡುವಾಗ ಗಣೇಶ ಮೂರ್ತಿ ನುಂಗಿದ ಮೂರು ವರ್ಷದ ಮಗು

    ಆರೋಪಿಗಳನ್ನು ಆಂಧ್ರಪ್ರದೇಶದ ರಾಜು, ಶಿವ ನಾಗೇಶ್ವರ್, ಜಗದೀಶ್ ಎಂದು ಗುರುತಿಸಲಾಗಿದ್ದು ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 23 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಆರೋಪಿಗಳು ಆಂಧ್ರಪ್ರದೇಶದಿಂದ ಇಲ್ಲಿಗೆ ಯಾರಿಗೆ ವ್ಯಾಪಾರ ಮಾಡಲು ಬಂದಿದ್ದರು? ಎಲ್ಲಿಂದ ಬಂದಿದ್ದರು? ಗಾಂಜಾ ದೊರೆಯುವ ಪ್ರದೇಶದ ಕುರಿತು ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದು ಆರೋಪಿಗಳ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರಿಸಿದ್ದಾರೆ.