Tag: Andhra Pradesh

  • 13 ವರ್ಷದ ಬಾಲಕಿ ಮೇಲೆ 80 ಮಂದಿ 8 ತಿಂಗಳಿಂದ ಅತ್ಯಾಚಾರ

    ಹೈದರಾಬಾದ್: 13 ವರ್ಷದ ಬಾಲಕಿಯ ಮೇಲೆ 80 ಮಂದಿ ಕಾಮುಕರು 8 ತಿಂಗಳಿನಿಂದ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

    ಗುಂಟೂರಿನ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದು, ವಿಜಯವಾಡ, ಹೈದರಾಬಾದ್, ಕಾಕಿನಾಡ ಮತ್ತು ನೆಲ್ಲೂರು ಸೇರಿದಂತೆ ವಿವಿಧೆಡೆಯಲ್ಲಿ ಬಿ.ಟೆಕ್ ವಿದ್ಯಾರ್ಥಿ ಸೇರಿದಂತೆ 10 ಮಂದಿ ಕಾಮುಕರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಪೊಲೀಸರು ಒಂದು ಕಾರು, 53 ಮೊಬೈಲ್‌ಗಳು, 3 ಆಟೋಗಳು ಮತ್ತು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ತವರಿನಲ್ಲಿ 1,300 ಕೋಟಿ ಮೌಲ್ಯದ ಹೆರಾಯಿನ್ ವಶ

    STOP RAPE

    ಏನಿದು ಘಟನೆ?: ಜೂನ್ 2021ರಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಆಸ್ಪತ್ರೆಯಲ್ಲಿ ಬಾಲಕಿಯ ತಾಯಿಯೊಂದಿಗೆ ಸ್ನೇಹ ಬೆಳೆಸಿದ ಸವರ್ಣ ಕುಮಾರಿ ಎಂಬ ಮಹಿಳೆ ಆ ಬಾಲಕಿಯನ್ನು ದತ್ತು ಪಡೆದಿದ್ದಳು. ಹುಡುಗಿಯ ತಾಯಿ ಕೋವಿಡ್-19ನಿಂದ ಮೃತಪಟ್ಟನಂತರ ಆಕೆಯ ತಂದೆಗೆ ವಿಷಯ ತಿಳಿಸದೇ ಸ್ವರ್ಣಕುಮಾರಿಯೇ ಬಾಲಕಿಯನ್ನು ಕರೆದುಕೊಂಡು ಹೋಗಿದ್ದರು. ಇದನ್ನೂ ಓದಿ: ಲಾರಿಯಡಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ!

    crime

    ಆಗಸ್ಟ್ 2021ರಲ್ಲಿ ಹುಡುಗಿಯ ತಂದೆ ಪೊಲೀಸರನ್ನು ಸಂಪರ್ಕಿಸಿ ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದರು. ಇದರ ಆಧಾರದ ಮೇಲೆ ಪೊಲೀಸರು ಪ್ರಮುಖ ಆರೋಪಿ ಮಹಿಳೆ ಸವರ್ಣ ಕುಮಾರಿ ಎಂದು ಗುರುತಿಸಿದ್ದರು. 2022ರ ಜನವರಿ ಮಾಹೆಯಲ್ಲಿ ಈ ಪ್ರಕರಣದ ಮೊದಲ ಹಂತದ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಇನ್ನಷ್ಟು ಆರೋಪಿಗಳನ್ನೂ ಬಂಧಿಸಿದ್ದು, ಬಾಲಕಿಯನ್ನು ರಕ್ಷಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾಸ್ಟರ್ ಮೈಂಡ್ ನಾನಲ್ಲ, ಗಲಭೆಗೆ ನಾನು ಕಾರಣನಲ್ಲ – ಅಜ್ಞಾತ ಸ್ಥಳದಿಂದ ವೀಡಿಯೋ ಬಿಟ್ಟ ವಾಸಿಂ

    CRIME 2

    ತನಿಖೆ ವೇಳೆ ಬಾಲಕಿ ಹೇಳಿದ್ದೇನು?: ಅಪ್ರಾಪ್ತ ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದಾಗ ಭಯಾನಕ ಸತ್ಯಗಳು ಬೆಳಕಿಗೆ ಬಂದಿವೆ. ಕಳೆದ 8 ತಿಂಗಳಿನಿಂದ ಆಕೆಯನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲು ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿವಿಧ ವೇಶ್ಯಾಗೃಹಗಳಿಗೆ ಕಳುಹಿಸಲಾಗಿತ್ತು. ಬಾಲಕಿಯನ್ನು ಕರೆದೊಯ್ದಿದ್ದ ಸವರ್ಣ ಕುಮಾರಿ ವೇಶ್ಯಾವಾಟಿಕೆಗೆ ಬಲವಂತಪಡಿಸಿದ್ದರು ಎಂದು ಬಾಲಕಿ ಹೇಳಿಕೊಂಡಿದ್ದಾರೆ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಪೊಲೀಸರು 80 ಆರೋಪಿಗಳನ್ನು ಗುರುತಿಸಿದ್ದು, ಅವರನ್ನು ಬಂಧಿಸಲು ಪ್ರಾರಂಭಿಸಿದ್ದಾರೆ. ಅವರಲ್ಲಿ ಕೆಲವರು ಕಿಂಗ್‌ಪಿನ್‌ಗಳು, 35 ಪಿಂಪ್‌ಗಳು ಮತ್ತು ಉಳಿದವರು ಗ್ರಾಹಕರಾಗಿದ್ದಾರೆ. ಪರಾರಿಯಾಗಿರುವ ಇನ್ನೂ ಕೆಲವು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ಪ್ರಕರಣದ ಓರ್ವ ಆರೋಪಿ ಲಂಡನ್‌ನಲ್ಲಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಸುಪ್ರಜಾ ತಿಳಿಸಿದ್ದಾರೆ.

  • ಔಷಧಿ ಘಟಕದಲ್ಲಿ ಅಗ್ನಿ ದುರಂತ: 6 ಮಂದಿ ಸಾವು

    ಔಷಧಿ ಘಟಕದಲ್ಲಿ ಅಗ್ನಿ ದುರಂತ: 6 ಮಂದಿ ಸಾವು

    ಹೈದರಾಬಾದ್: ಅನಿಲ ಸೋರಿಕೆಯಿಂದ ರಿಯಾಕ್ಟರ್ ಸ್ಫೋಟಗೊಂಡು ಔಷಧಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ 6 ಮಂದಿ ಸಜೀವ ದಹನವಾಗಿದ್ದು, 13 ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಉದುರುಪತಿ ಕೃಷ್ಣಯ್ಯ, ಬಿ ಕಿರಣ್ ಕುಮಾರ್, ಕಾರು ರವಿ ದಾಸ್, ಮನೋಜ್ ಕುಮಾರ್, ಸುವಾಸ್ ರವಿ ದಾಸ್ ಮತ್ತು ಹಬ್ದಾಸ್ ರವಿ ದಾಸ್ ಮೃತರು. ಏಲೂರು ಜಿಲ್ಲೆಯ ಅಕ್ಕಿರೆಡ್ಡಿಗುಡೆಂನಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟ 6 ಮಂದಿಯಲ್ಲಿ ನಾಲ್ವರು ಬಿಹಾರದಿಂದ ವಲಸೆ ಬಂದ ಕಾರ್ಮಿಕರಾಗಿದ್ದಾರೆ.

    ಬೆಂಕಿ ಕಾಣಿಸಿಕೊಂಡಾಗ 18 ಮಂದಿ ಔಷಧಿ ಘಟಕದ ನೇ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದಾಗಿ ತೀವ್ರವಾದ ನಷ್ಟ ಉಂಟಾಗಿದೆ. ಬೆಂಕಿಯನ್ನು ಹತೋಟಿಗೆ ತರಲು ಎರಡು ಗಂಟೆ ಬೇಕಾಯಿತು. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ದೇವ್ ಶರ್ಮಾ, ಅನಿಲ ಸೋರಿಕೆಗೆ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್ಲಾ ಪ್ರಧಾನಿಗಳ ಕಥೆ ಹೇಳುವ ಮ್ಯೂಸಿಯಂ ಉದ್ಘಾಟಿಸಲಿದ್ದಾರೆ ಮೋದಿ – ವಿಶೇಷತೆ ಏನು?

    ಘಟನೆಯ ಬಗ್ಗೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಗಂಭೀರ ಗಾಯಗೊಂಡವರಿಗೆ ತಲಾ 5 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಳುಗಳಿಗೆ 2ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಇಲ್ಲದೆ ತೃತೀಯ ರಂಗ ಸಾಧ್ಯವಿಲ್ಲ: ಶರದ್ ಪವಾರ್

  • ಚಿತ್ರರಂಗಕ್ಕೆ ಖ್ಯಾತ ನಟಿ ರೋಜಾ ಗುಡ್ ಬೈ: ಕಾರಣವೇನು ಗೊತ್ತಾ?

    ಚಿತ್ರರಂಗಕ್ಕೆ ಖ್ಯಾತ ನಟಿ ರೋಜಾ ಗುಡ್ ಬೈ: ಕಾರಣವೇನು ಗೊತ್ತಾ?

    ಹುಭಾಷಾ ನಟಿ ರೋಜಾ ಒಂದು ಕಾಲದಲ್ಲಿ ಟಾಲಿವುಡ್‍ನ ಬಹು ಬೇಡಿಕೆಯ ನಟಿ. ತೆಲುಗು ಚಿತ್ರರಂಗದಲ್ಲಿ ಅಷ್ಟೇ ಅಲ್ಲದೇ ಸೌತ್ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡುವ ಮೂಲಕ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದವರು. ಇತ್ತೀಚಿನ ವರ್ಷಗಳಲ್ಲಿ ಅವರು ರಾಜಕಾರಣದಲ್ಲಿ ಮುಳುಗಿ ಹೋಗಿದ್ದರೂ, ಕಿರುತೆರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಿರಲಿಲ್ಲ. ಟಿವಿ ರಿಯಾಲಿಟಿ ಶೋಗಳ ಜತೆ ರೋಜಾ ಸಿನಿಮಾದಲ್ಲೂ ಕೂಡ ನಟಿಸುತ್ತಿದ್ದರು. ಇದೀಗ ಏಕಾಏಕಿ ಟಿವಿ ರಿಯಾಲಿಟಿ ಶೋಗಳಿಗೆ ಗುಡ್ ಬೈ ಹೇಳಿ ತಮ್ಮ ಕನಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ ರೋಜಾ.

    ಹೌದು, ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಸಚಿವ ಸಂಪುಟ ಪುನಾರಚನೆ ಮಾಡಿದ್ದು, ಇದರಲ್ಲಿ ಅನೇಕ ಹೊಸಬರಿಗೆ ಸಚಿವ ಸ್ಥಾನ ನೀಡಲು ನಿರ್ಧರಿಸಿದ್ದಾರೆ. ಇದರಲ್ಲಿ ರೋಜಾ ಕೂಡ ಒಬ್ಬರಾಗಿದ್ದು, ಸಚಿವ ಸಂಪುಟ ಸ್ಥಾನ ದೊರೆಯುತ್ತಿರುವ ಸಂತಸದಲ್ಲಿ ಸಿನಿಮಾ ಮತ್ತು ತಾವು ಭಾಗವಹಿಸುತ್ತಿದ್ದ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಗುಡ್ ಬೈ ಹೇಳಿ, ಸಂಪೂರ್ಣವಾಗಿ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ತಮ್ಮ ದೊಡ್ಡ ಕನಸ್ಸು ನನಸಾಗುತ್ತಿರುವ ಖುಷಿ ರೋಜಾ ಅವರಿಗಿದ್ದರೂ, ಅವರ ಅಭಿಮಾನಿಗಳಿಗೆ ಮಾತ್ರ ಇನ್ಮುಂದೆ ರೋಜಾರನ್ನು ಸ್ಕ್ರೀನ್ ಮೇಲೆ ನೋಡಲು ಆಗುವುದಿಲ್ಲ ಎಂದು ಬೇಸರವಿರಲಿದೆ. ಇದನ್ನೂ ಓದಿ: ಆಲಿಯಾ-ರಣಬೀರ್ ಮದ್ವೆ : ಕೆಜಿಎಫ್ 2 ಅಧೀರನಿಗೆ ಗೊತ್ತೇ ಇಲ್ಲವಾ?

    ಇದೀಗ ರೋಜಾ ಅವರು ನಡೆಸಿ ಕೊಡುತ್ತಿದ್ದ ರಿಯಾಲಿಟಿ ಶೋಗೆ ಬೇರೆ ಬೇರೆ ಹಿರಿಯ ನಟಿಯರನ್ನು ಕರೆತರಲಾಗುತ್ತಿದ್ದು, ರೋಜಾ ಅವರ ಜಾಗಕ್ಕೆ ಯಾರು ಬರುತ್ತಾರೆ ಎಂಬುವುದನ್ನು ಕಾದು ನೋಡಬೇಕಾಗಿದೆ. ಇನ್ನೂ ಸಚಿವೆ ಸ್ಥಾನ ಪಡೆದ ರೋಜಾ ಅವರಿಗೆ ರಿಯಾಲಿಟಿ ಶೋ ಕಲಾವಿದರು ಮತ್ತು ಚಿತ್ರರಂಗದ ತಾರೆಯರು ಸೇರಿದಂತೆ ಗಣ್ಯಾತಿ ಗಣ್ಯರು ಶುಭ ಹಾರೈಸಿದ್ದಾರೆ. ಇದನ್ನೂ ಓದಿ : ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

  • ಮೊಬೈಲ್ ಬೆಳಕಿನಲ್ಲೇ ಹೆರಿಗೆ ಮಾಡಿಸಿದ ವೈದ್ಯರು

    ಮೊಬೈಲ್ ಬೆಳಕಿನಲ್ಲೇ ಹೆರಿಗೆ ಮಾಡಿಸಿದ ವೈದ್ಯರು

    ಹೈದರಾಬಾದ್: ಗರ್ಭಿಣಿಯೊಬ್ಬರಿಗೆ ವೈದ್ಯರು ಮೊಬೈಲ್ ಬೆಳಕಿನಲ್ಲಿ ಹೆರಿಗೆ ಮಾಡಿಸಿರುವ ಘಟನೆ ಆಂಧ್ರಪ್ರದೇಶದ ನರಸೀಪಟ್ಟಣಂನಲ್ಲಿರುವ ಎಸ್‍ಟಿಆರ್ ಆಸ್ಪತ್ರೆಯಲ್ಲಿ ನಡೆದಿದೆ.

    ನಡೆದಿದ್ದೇನು?: ಗರ್ಭಿಣಿಗೆ ರಾತ್ರಿ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ ಆಸ್ಪತ್ರೆಯಲ್ಲಿ ಕರೆಂಟ್ ಇರಲಿಲ್ಲ. ಇದರಿಂದ ಗರ್ಭಿಣಿ ಕಡೆಯವರಿಗೆ ಆತಂಕ ಎದುರಾಗಿತ್ತು. ಆದರೆ ಆಸ್ಪತ್ರೆಯ ನರ್ಸ್‍ಗಳು ಗರ್ಭಿಣಿಯ ಪತಿಗೆ ಎಷ್ಟು ಸಾಧ್ಯವೋ ಅಷ್ಟು ಮೊಬೈಲ್, ಕ್ಯಾಂಡಲ್ ಟಾರ್ಚ್‍ಲೈಟ್‍ಗಳನ್ನು ಅರೇಂಜ್ ಮಾಡಲು ಹೇಳಿದರು.

    ಕ್ಯಾಂಡಲ್ ಹಾಗೂ ಸಂಬಂಧಿಕರ ಮೊಬೈಲ್‍ಗಳನ್ನು ತಂದು ನರ್ಸ್‍ಗಳು ಕೈಗೆ ಕೊಟ್ಟರು. ಆ ಸೆಲ್‍ಫೋನ್‍ಗಳು, ಕ್ಯಾಂಡಲ್ ಬೆಳಕಿನಿಂದ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದೇವೆ. ತಾಯಿ, ಮಗು ಆರೋಗ್ಯವಾಗಿದ್ದಾರೆ.

    ಆಸ್ಪತ್ರೆಯಲ್ಲಿ ಕರೆಂಟ್ ಹೋದಾಗ ಯಾವುದೇ ಜನರೇಟರ್, ಯುಪಿಎಸ್ ಬ್ಯಾಕಪ್ ಇಲ್ಲದಿರುವುದಕ್ಕೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ರಾತ್ರಿಯಲ್ಲಿ ನಾನು ಟಾರ್ಚ್, ಮೊಬೈಲ್‍ಗಳ ವ್ಯವಸ್ಥೆ ಮಾಡಲು ಬಹಳ ಪರದಾಡಬೇಕಾಯಿತು. ಆಸ್ಪತ್ರೆಯಲ್ಲಿ ಇಷ್ಟು ರಾತ್ರಿ ವೇಳೆ ಆ ಎಲ್ಲಾ ವ್ಯವಸ್ಥೆಗಳನ್ನು ನಾನು ಮಾಡಬೇಕಾ? ಅಥವಾ ಆಸ್ಪತ್ರೆಯವರು ಅದಕ್ಕೆ ಮುಂಚಿತವಾಗಿ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕಾ? ಆ ಆಸ್ಪತ್ರೆಯಲ್ಲಿ ನನ್ನ ಹೆಂಡತಿ ಮಾತ್ರವಲ್ಲ. ಇತರ ಮಹಿಳೆಯರೂ ಇದ್ದರು. ಎಲ್ಲರೂ ನರಳುತ್ತಿದ್ದರು. ಅದನ್ನು ಕಂಡು ನನಗೆ ಹೆದರಿಕೆಯಾಗಿತ್ತು. ನನ್ನ ಹೆಂಡತಿ ಮತ್ತು ಮಗುವಿನ ಪ್ರಾಣದ ಬಗ್ಗೆ ನನಗೆ ಬಹಳ ಭಯವಾಗಿತ್ತು ಎಂದು ಆ ಗರ್ಭಿಣಿಯ ಪತಿ ಖಾಸಗಿ ವಾಹಿನಿ ಜೊತೆಗೆ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನದಿಗೆ ಹಾರಿ ಅರಣ್ಯಾಧಿಕಾರಿ ಆತ್ಮಹತ್ಯೆ? 

    ಬುಧವಾರ ಮತ್ತು ಗುರುವಾರದ ಮಧ್ಯರಾತ್ರಿಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿರುವ ಘಟನೆ ವರದಿಯಾಗಿದೆ. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಆಂಧ್ರಪ್ರದೇಶದ ವಿದ್ಯುತ್ ಇಲಾಖೆಯು ಶೇ. 50ರಷ್ಟು ವಿದ್ಯುತ್ ಕಡಿತವನ್ನು ಘೋಷಿಸಿದೆ. ಆಂಧ್ರಪ್ರದೇಶವು ದಿನಕ್ಕೆ ಸುಮಾರು 5 ಲಕ್ಷ ಯೂನಿಟ್ ಕೊರತೆಯನ್ನು ಎದುರಿಸುತ್ತಿದೆ. ಇದು ಸುದೀರ್ಘ ವಿದ್ಯುತ್ ಕಡಿತಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಭುವನ ಸುಂದರಿ ಶ್ರೀದೇವಿ ಮಗಳು ಈಗ ಬ್ಯಾಕ್‍ಲೆಸ್ ಸುಂದರಿ 

    ಆಸ್ಪತ್ರೆಗೆಯಲ್ಲಿ ಕರೆಂಟ್ ಹೋದಾಗ ಯಾವುದೇ ಜನರೇಟರ್, ಯುಪಿಎಸ್ ಬ್ಯಾಕಪ್ ಇಲ್ಲದಿರುವುದಕ್ಕೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ರಂಜಾನ್ ತಿಂಗಳಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಆಂಧ್ರ ಸರ್ಕಾರದಿಂದ ವಿಶೇಷ ಆದ್ಯತೆ

    ರಂಜಾನ್ ತಿಂಗಳಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಆಂಧ್ರ ಸರ್ಕಾರದಿಂದ ವಿಶೇಷ ಆದ್ಯತೆ

    ಹೈದರಾಬಾದ್: ರಂಜಾನ್ ತಿಂಗಳಲ್ಲಿ ಸರ್ಕಾರಿ ನೌಕರರು ಸೇರಿದಂತೆ ಶಿಕ್ಷಕರು ಒಂದು ಗಂಟೆ ಮುಂಚಿತವಾಗಿ ಕಚೇರಿಯಿಂದ ತೆರಳಲು ಆಂಧ್ರ ಪ್ರದೇಶ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ.

    ರಂಜಾನ್ ತಿಂಗಳಲ್ಲಿ ಮುಸ್ಲಿಮರು ಉಪವಾಸ ಮಾಡುವ ಸಲುವಾಗಿ ಅನುಕೂಲ ಆಗುವ ರೀತಿಯಲ್ಲಿ ಸರ್ಕಾರಿ ನೌಕರರು, ಶಿಕ್ಷಕರು, ಶಾಲಾ-ಕಾಲೇಜ್‍ನಲ್ಲಿರುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಸಂಜೆ ಒಂದು ಗಂಟೆ ಮುಂಚಿತವಾಗಿ ಮನೆಗೆ ತೆರಳಲು ಅವಕಾಶ ನೀಡಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಮುಸ್ಲಿಮರಿಗೆ ಏಪ್ರಿಲ್ 3 ರಿಂದ ಮೇ 4ರ ವರೆಗೆ ಅನುಕೂಲ ಆಗುವಂತೆ ಒಂದು ಗಂಟೆ ಮುಂಚಿತವಾಗಿ ಮನೆಗೆ ತೆರಳಲು ಆದೇಶಿಸಲಾಗಿದೆ. ಇದನ್ನೂ ಓದಿ: ಆಂಧ್ರಪ್ರದೇಶದ ಎಲ್ಲಾ ಸಚಿವರು ರಾಜೀನಾಮೆ

    ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ತಿಂಗಳಲ್ಲಿ ಉಪವಾಸ ಮಾಡುತ್ತಾರೆ. ಸೂರ್ಯ ಮುಳುಗುವ ಮುಂಚೆ ಮತ್ತು ಸೂರ್ಯ ಉದಯಿಸುವ ಮುನ್ನ ಆಹಾರವನ್ನು ಸೇವಿಸುವ ಪದ್ಧತಿ ಇರುವುದರಿಂದ ಅವರ ಅನುಕೂಲಕ್ಕಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: ಯೋಗಿಗೆ ಬೆದರಿಕೆ ಹಾಕಿದ್ದ ಎಸ್‍ಪಿ ಶಾಸಕನ ಪೆಟ್ರೋಲ್ ಬಂಕ್ ಧ್ವಂಸ

  • ಆಂಧ್ರಪ್ರದೇಶದ ಎಲ್ಲಾ ಸಚಿವರು ರಾಜೀನಾಮೆ

    ಆಂಧ್ರಪ್ರದೇಶದ ಎಲ್ಲಾ ಸಚಿವರು ರಾಜೀನಾಮೆ

    ಅಮರಾವತಿ: ಆಂಧ್ರಪ್ರದೇಶ ಸಂಪುಟದ ಎಲ್ಲಾ 24 ಸಚಿವರು ಗುರುವಾರ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಅವರಿಗೆ ರಾಜೀನಾಮೆ ನೀಡಿದ್ದಾರೆ.

    ಸಚಿವ ಸಂಪುಟದ ಪುನರ್‌ರಚನೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಅಧಿವೇಶನ ಮುಂದೂಡಲು ಸಂಸದರೇ ಮನವಿ ಮಾಡಿದ್ದರು: ಪ್ರಹ್ಲಾದ್ ಜೋಶಿ

    ಏಪ್ರಿಲ್ 11ರಂದು ಆಂಧ್ರಪ್ರದೇಶದ ಹೊಸ ಸಚಿವ ಸಂಪುಟ ರಚನೆ ಆಗಲಿದೆ. ಬುಧವಾರ ರಾತ್ರಿ ಜಗನ್‌ಮೋಹನ್ ರೆಡ್ಡಿ ರಾಜ್ಯಪಾಲ ಬಿಸ್ವ ಭೂಷಣ್ ಹರಿಚಂದನ್ ಅವರೊಂದಿಗೆ ಸಭೆ ನಡೆಸಿದ್ದು, ಸಚಿವ ಸಂಪುಟ ಪುನರ್‌ರಚನೆ ಕುರಿತು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹೊಸ 13 ಜಿಲ್ಲೆಗಳನ್ನು ಉದ್ಘಾಟಿಸಿದ ಜಗನ್

    ಸೋಮವಾರ ಆಂಧ್ರಪ್ರದೇಶದಲ್ಲಿ ಹೊಸ ಆಡಳಿತಾತ್ಮಕ ನಕ್ಷೆಯನ್ನು ರಚಿಸಲಾಗಿದೆ. 13 ಹೊಸ ಜಿಲ್ಲೆಗಳೊಂದಿಗೆ ಆಂಧ್ರಪ್ರದೇಶದ ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಹೆಚ್ಚಿಸಲಾಗಿದೆ.

  • ಕಳ್ಳತನಕ್ಕೆ ದೇವಾಲಯದ ಗೋಡೆ ಕೊರೆದ – ಹೊರಬರಲಾಗದೇ ಗೋಡೆಯಲ್ಲೇ ಸಿಕ್ಕಿಬಿದ್ದ

    ಕಳ್ಳತನಕ್ಕೆ ದೇವಾಲಯದ ಗೋಡೆ ಕೊರೆದ – ಹೊರಬರಲಾಗದೇ ಗೋಡೆಯಲ್ಲೇ ಸಿಕ್ಕಿಬಿದ್ದ

    ಹೈದರಾಬಾದ್: ತಾನೇ ತೊಡಿದ ಕೆಡ್ಡಕ್ಕೆ ತಾನೇ ಬಿದ್ದನಂತೆ, ಹಾಗೆಯೇ ಆಂಧ್ರಪ್ರದೇಶದಲ್ಲಿ ಕಳ್ಳನೊಬ್ಬ ಚಿನ್ನಾಭರಣ ಕದಿಯಲೆಂದು ಗೋಡೆಯನ್ನು ಕೊರೆದಿದ್ದನು. ಆದರೆ ಅದೇ ಗೋಡೆಯಲ್ಲಿ ಸಿಲುಕಿ ಕೊಳ್ಳುವ ಮೂಲಕ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

    ಆಂಧ್ರಪ್ರದೇಶದ ಶ್ರೀಕಾಕುಳಂನ ಕರಾವಳಿ ಜಿಲ್ಲೆಯ ಜಾಮಿ ಯಲಮ್ಮ ದೇವಸ್ಥಾನದ ಆಭರಣಗಳನ್ನು ಕದಿಯಲು ಯತ್ನಿಸುತ್ತಿದ್ದ ಆರೋಪಿ, ತಾನೇ ಕೊರೆದಿದ್ದ ರಂಧ್ರದಲ್ಲಿ ಸಿಲುಕಿಕೊಂಡಿದ್ದಾನೆ. ಆರೋಪಿಯನ್ನು 30 ವರ್ಷದ ಪಾಪ ರಾವ್ ಎಂದು ಗುರುತಿಸಲಾಗಿದ್ದು, ಈತ ದೇವಸ್ಥಾನದ ಚಿಕ್ಕ ಕಿಟಕಿ ಮುರಿದು ದೇವರ ವಿಗ್ರಹಗಳಲ್ಲಿದ್ದ ಆಭರಣಗಳನ್ನು ದೋಚಿದ್ದಾನೆ. ಇದನ್ನೂ ಓದಿ: ಕರ್ನಾಟಕದಲ್ಲಿ ಇಸ್ಲಾಂ ಸ್ಲೀಪರ್ ಸೆಲ್ ಕೆಲಸ ಮಾಡ್ತಿದೆ: ಚಕ್ರವರ್ತಿ ಸೂಲಿಬೆಲೆ

    ನಂತರ ಅಲ್ಲಿಂದ ಪರಾರಿಯಾಗುವ ವೇಳೆ ಗೋಡೆಯಲ್ಲೇ ಸಿಲುಕಿಕೊಂಡಿದ್ದಾನೆ. ಕೊನೆಗೆ ಹೊರ ಬರಲು ಆಗದೇ ಪಾಪ ರಾವ್ ಸಹಾಯಕ್ಕಾಗಿ ಅಳಲು ಪ್ರಾರಂಭಿಸಿದ್ದಾನೆ. ನಂತರ ಗ್ರಾಮಸ್ಥರು ಆತನಿಗೆ ಎಚ್ಚರಿಕೆ ನೀಡಿ, ಆತನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ:  ಸಮಾಧಿ ಮಾಡಿದ 24 ಗಂಟೆ ನಂತ್ರ ಮತ್ತೆ ಮನೆಗೆ ಬಂದ ವ್ಯಕ್ತಿ – ಬೆಚ್ಚಿಬಿದ್ದ ಕುಟುಂಬಸ್ಥರು

  • ಮೈಸೂರಿನಿಂದ ಬಂದ ರಾಯಲ್ ಎನ್‍ಫೀಲ್ಡ್ ಆಂಧ್ರದಲ್ಲಿ ಸ್ಫೋಟ

    ಮೈಸೂರಿನಿಂದ ಬಂದ ರಾಯಲ್ ಎನ್‍ಫೀಲ್ಡ್ ಆಂಧ್ರದಲ್ಲಿ ಸ್ಫೋಟ

    ಅಮರಾವತಿ: ಮೈಸೂರಿನಿಂದ ಆಂಧ್ರಪ್ರದೇಶಗೆ ಬಂದ ರಾಯಲ್ ಎನ್‍ಫೀಲ್ಡ್ ಬೈಕ್ ಸ್ಫೋಟಗೊಂಡ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಘಟನೆಗೆ ಸಂಬಂಧಿಸಿದ ವೀಡಿಯೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬುಲೆಟ್ ಎಂದೇ ಪ್ರಸಿದ್ಧವಾಗಿರುವ ರಾಯಲ್ ಎನ್ ಫೀಲ್ಡ್ ಬೈಕ್ ಮೈಸೂರಿನ ರವಿಚಂದ್ರನ್ ಖರೀದಿಸಿದ್ದಾನೆ. ಹೊಸ ಬೈಕ್ ಖರೀದಿಸಿದ ನಂತರ ರವಿಚಂದ್ರನ್ ಮೈಸೂರಿನಿಂದ ಆಂಧ್ರದ ಕುಂದಕಲ್ಲಿನಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಬೈಕ್‍ನಲ್ಲೇ ಬಂದಿದ್ದಾನೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?

    https://twitter.com/AlluHarish17/status/1510463748498022400?ref_src=twsrc%5Etfw%7Ctwcamp%5Etweetembed%7Ctwterm%5E1510463748498022400%7Ctwgr%5E%7Ctwcon%5Es1_&ref_url=https%3A%2F%2Fpipanews.com%2Froyal-enfield-bike-blast-in-andhra-video-became-viral-in-social-media%2F

    ಮೈಸೂರಿನಿಂದ ಆಂಧ್ರಗೆ ಬೈಕ್ ಎಲ್ಲಿಯೂ ನಿಲ್ಲಿಸದೇ 387 ಕಿಲೋಮೀಟರ್‍ವರೆಗೂ ಕ್ರಮಿಸಿದ್ದಾನೆ. ಆಂಜನೇಯ ದೇಗುಲಕ್ಕೆ ಪೂಜೆಗೆಂದು ಬೈಕ್ ಪಾರ್ಕ್ ಮಾಡಿ ಒಳಗೆ ಹೋಗಿದ್ದಾನೆ. ಇತ್ತ ಬೈಕ್ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿದ್ದು, ಬೆಂಕಿ ಹೊತ್ತಿಕೊಂಡಿದೆ.

    ಈ ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಬೈಕ್ ಸ್ಫೋಟಗೊಂಡಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: SSLC ಪರೀಕ್ಷೆ ವೇಳೆ ಜೇನುನೊಣಗಳ ದಾಳಿ – ಐವರಿಗೆ ಗಾಂಭೀರ ಗಾಯ 

  • ಹೊಸ 13 ಜಿಲ್ಲೆಗಳನ್ನು ಉದ್ಘಾಟಿಸಿದ ಜಗನ್

    ಹೊಸ 13 ಜಿಲ್ಲೆಗಳನ್ನು ಉದ್ಘಾಟಿಸಿದ ಜಗನ್

    ಅಮರಾವತಿ: ಆಂಧ್ರಪ್ರದೇಶ ಸೋಮವಾರ ರಾಜ್ಯದ ಹೊಸ ಆಡಳಿತಾತ್ಮಕ ನಕ್ಷೆಯನ್ನು ರಚಿಸಿದೆ. 13 ಹೊಸ ಜಿಲ್ಲೆಗಳ ರಚನೆಯೊಂದಿಗೆ ಆಂಧ್ರಪ್ರದೇಶದ ಒಟ್ಟು ಜಿಲ್ಲೆಗಳ ಸಂಖ್ಯೆ 26 ಕ್ಕೆ ಹೆಚ್ಚಿಸಲಾಗಿದೆ.

    ಆಂಧ್ರಪ್ರದೇಶದ ಮುಖ್ಯ ಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸೋಮವಾರ ಬೆಳಿಗ್ಗೆ ಶುಭ ಮುಹೂರ್ತದಲ್ಲಿ 13 ಹೊಸ ಜಿಲ್ಲೆಗಳನ್ನು ಉದ್ಘಾಟಿಸಿದರು. ಹೊಸ ಜಿಲ್ಲೆಗಳ ರಚನೆ ರಾಜ್ಯದ ಎಲ್ಲಾ ಪ್ರದೇಶಗಳ ಅಭಿವೃದ್ಧಿಗೆ ಸುಲಭವಾಗಲು ನೂತನ ಹೆಜ್ಜೆಯಾಗಿದೆ ಎಂದು ತಿಳಿಸಿದರು.

    ಜಗನ್ ಮೋಹನ್ ರೆಡ್ಡಿ 2019ರ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, 25 ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿಯೊಂದನ್ನು ಜಿಲ್ಲೆಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಇದನ್ನೂ ಓದಿ: ಸಿಬಿಐ ಪಂಜರದ ಗಿಳಿಯಲ್ಲ: ಕಿರಣ್ ರಿಜಿಜು

    ಶ್ರೀ ಬಾಲಾಜಿ, ಅನ್ನಮಯ್ಯ, ಶ್ರೀ ಸತ್ಯಸಾಯಿ, ನಂದ್ಯಾಲ, ಬಾಪಟ್ಲ, ಪಲ್ನಾಡು, ಏಲೂರು, ಎನ್‌ಟಿಆರ್, ಅನಕಾಪಲ್ಲಿ, ಕಾಕಿನಾಡ, ಕೋನಾ ಸೀಮಾ, ಮಾನ್ಯಂ, ಅಲ್ಲೂರಿ ಸೀತಾರಾಮ ರಾಜು ನೂತನ ಜಿಲ್ಲೆಗಳಾಗಿದೆ. ಇದನ್ನೂ ಓದಿ: ಕೇಜ್ರಿವಾಲ್ ಸಮ್ಮುಖದಲ್ಲಿ ಆಪ್ ಸೇರಿದ ಭಾಸ್ಕರ್ ರಾವ್

    ಹಿಂದುಳಿದ ಬುಡಕಟ್ಟು ಪ್ರದೇಶಗಳ ಮೇಲೆ ಹೆಚ್ಚಿನ ಗಮನ ಹರಿಸಿರುವ ಆಂಧ್ರ ಸರ್ಕಾರ ಹೆಚ್ಚಿನ ಜಿಲ್ಲೆಗಳಾಗಿ ವಿಭಜಿಸಿದೆ. ಸಣ್ಣ ಜಿಲ್ಲೆಗಳ ರಚನೆಯಿಂದ ಜಿಲ್ಲಾ ಕೇಂದ್ರದಿಂದ ಆಸುಪಾಸಿನ ಗ್ರಾಮಗಳಿಗೆ ದೂರ ಕಡಿಮೆಯಾಗುತ್ತದೆ. ಜಿಲ್ಲಾಡಳಿತ ಜನರಿಗೆ ಹತ್ತಿರವಾಗುತ್ತದೆ. ಸರ್ಕಾರ ಜನರಿಗೆ ಹತ್ತಿರವಾದಂತೆ ಹೊಣೆಗಾರಿಕೆ ಹೆಚ್ಚಾಗುತ್ತದೆ ಎಂದು ರೆಡ್ಡಿ ತಿಳಿಸಿದರು.

  • ಆಂಧ್ರಪ್ರದೇಶದ ಬಸ್‍ಗಳಲ್ಲಿ 4 ಲಕ್ಷ ಮಹಿಳೆಯರಿಗೆ ಉಚಿತ ಪ್ರಯಾಣ

    ಆಂಧ್ರಪ್ರದೇಶದ ಬಸ್‍ಗಳಲ್ಲಿ 4 ಲಕ್ಷ ಮಹಿಳೆಯರಿಗೆ ಉಚಿತ ಪ್ರಯಾಣ

    ಅಮರಾವತಿ: ಗರ್ಭಿಣಿ, ಬಾಣಂತಿ ಹಾಗೂ ಶಿಶುಗಳ ಸುರಕ್ಷಿತೆಗಾಗಿ 500 ಡಾ. ವೈಎಸ್‍ಆರ್ ತಲ್ಲಿ ಬಿಡ್ಡ ಎಕ್ಸ್‍ಪ್ರೆಸ್ ವಾಹನಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಚಾಲನೆ ನೀಡಿದರು.

    ಈ ವಾಹನಗಳ ಮೂಲಕ ವರ್ಷಕ್ಕೆ ನಾಲ್ಕು ಲಕ್ಷ ತಾಯಂದಿರು ಹಾಗೂ ಶಿಶುಗಳಿಗೆ ಉಚಿತ ಸಾರಿಗೆಯನ್ನು ಒದಗಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

    ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೆ ಸುಮಾರು 30 ವಾಹನಗಳನ್ನು ಹಂಚಲಾಗಿದೆ. ಜೊತೆಗೆ ಅಲ್ಲಿನ ಗರ್ಭಿಣಿಯರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಜಿಪಿಎಸ್ ಸಕ್ರಿಯಗೊಳಿಸಿದ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ಮೂಲಕ ಪ್ರತಿಯೊಂದು ವಾಹನವು ಕಾರ್ಮಿಕರಿಗೆ ಸಂಬಂಧಿಸಿದ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸುಧಾರಿತ ಸಾಧನಗಳನ್ನು ಹೊಂದಿರುತ್ತದೆ ಎಂದು ಮಾಹಿತಿ ನೀಡಿದೆ.

    ಪ್ರಸವದ ನಂತರದ ಮಹಿಳೆಯರು ವಾಹನಕ್ಕಾಗಿ ಕಾಯಬೇಕಾಗಿಲ್ಲ. ಏಕೆಂದರೆ ಅವರು ನೈಜ ಸಮಯದ ಆಧಾರದ ಮೇಲೆ ವಾಹನದ ಸ್ಥಳವನ್ನು ಗುರುತಿಸಬಹುದು ಮತ್ತು ಟ್ರ್ಯಾಕ್ ಮಾಡಬಹುದು ಎಂದು ಹೇಳಿದೆ. ಇದನ್ನೂ ಓದಿ: ಉಡುಪಿಯಲ್ಲಿ ಮುಸ್ಲಿಂ ಅಂಗಡಿ ಹೆಸರು ಬದಲಿಸುವಂತೆ ಪಟ್ಟು

    ಪ್ರಸವಾನಂತರದ ಮಹಿಳೆಯರ ಸಹಾಯಕ್ಕಾಗಿ ಕೇಂದ್ರೀಕೃತ ಕಾಲ್ ಸೆಂಟರ್ ಅನ್ನು ಸಹ ಸ್ಥಾಪಿಸಲಾಗಿದೆ. ಗರ್ಭಿಣಿಯರು, ನರ್ಸ್‍ಗಳು ಮತ್ತು ಚಾಲಕರ ನಡುವಿನ ಸಮನ್ವಯಕ್ಕಾಗಿ ಕಾಲ್ ಸೆಂಟರ್ ಜೊತೆಗೆ ಡಾ. ವೈಎಸ್‍ಆರ್ ಥಲ್ಲಿ ಬಿಡ್ಡ ಎಕ್ಸ್‍ಪ್ರೆಸ್ ಆ್ಯಪ್ ಅನ್ನು ಸ್ಥಾಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

    ಪ್ರಸವೋತ್ತರ ಸೇವೆಗಳ ಭಾಗವಾಗಿ ಸರ್ಕಾರವು ವೈಎಸ್‍ಆರ್ ಆರೋಗ್ಯ ಆಸರ ಅಡಿಯಲ್ಲಿ ತಾಯಂದಿರಿಗೆ 5,000 ರೂ. ಚೇತರಿಸಿಕೊಳ್ಳುವ ಭತ್ಯೆಯಾಗಿ ನೀಡಿದೆ. ವೈಎಸ್‍ಆರ್ ತಳ್ಳಿ ಬಿಡ್ಡ ಎಕ್ಸ್‍ಪ್ರೆಸ್ ವಾಹನಗಳ ಮೂಲಕ ಸಾರಿಗೆ ಸೌಲಭ್ಯದ ಜೊತೆಗೆ ಮಹಿಳೆಯರು ಮತ್ತು ನವಜಾತ ಶಿಶುಗಳನ್ನು ಸರ್ಕಾರಿ ಆಸ್ಪತ್ರೆಗಳಿಂದ ಸುರಕ್ಷಿತವಾಗಿ ಅವರ ಮನೆಗೆ ಸಾಗಿಸುತ್ತದೆ. ಇದನ್ನೂ ಓದಿ: ಬುಲ್ಡೋಜರ್ ಜನರನ್ನು ಹತ್ತಿಕ್ಕಲು ಪ್ರಾರಂಭಿಸಿದೆ: ಅಖಿಲೇಶ್ ಯಾದವ್