Tag: Andhra Pradesh

  • ಮೋದಿ ಭದ್ರತೆಯಲ್ಲಿ ಲೋಪ – ಹೆಲಿಕಾಪ್ಟರ್ ಪಕ್ಕವೇ ಕಪ್ಪು ಬಲೂನ್‍ಗಳ ಹಾರಾಟ

    ಮೋದಿ ಭದ್ರತೆಯಲ್ಲಿ ಲೋಪ – ಹೆಲಿಕಾಪ್ಟರ್ ಪಕ್ಕವೇ ಕಪ್ಪು ಬಲೂನ್‍ಗಳ ಹಾರಾಟ

    ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿಗೆ ಪಂಜಾಬ್‍ನಲ್ಲಿ ಭದ್ರತಾ ಲೋಪದ ಬಳಿಕ ಇದೀಗ ಮತ್ತೊಮ್ಮೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ಇದೇ ರೀತಿ ಘಟನೆ ನಡೆದಿದೆ.

    ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮದಿನದಂದು ಪ್ರಧಾನಿ ಮೋದಿ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮೋದಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ವೇಳೆ ಕಪ್ಪು ಬಲೂನ್‍ಗಳನ್ನು ಹಾರಿ ಬಿಡಲಾಗಿತ್ತು. ಮೋದಿ ಕಾರ್ಯಕ್ರಮದ ಹೊರಭಾಗದಲ್ಲಿ ಈ ಬಲೂನ್‍ಗಳನ್ನು ಹಾರಿ ಬಿಡಲಾಗಿದೆ. ಹಾರಿಬಿಟ್ಟ ದೊಡ್ಡ ಗಾತ್ರದ ಬಲೂನ್‍ಗಳು ಆಗಸದಲ್ಲಿ ತೇಲಾಡಿದೆ. ಕಾರ್ಯಕ್ರಮದ ಮುಗಿಸಿ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕ್ ಆಫ್ ಆಗುತ್ತಿದ್ದಂತೆ ಪ್ರತಿಭಟನಾಕಾರರು ಹಾರಿಬಿಟ್ಟ ಬಲೂನ್ ಅಡ್ಡಬಂದಿದೆ. ಆದರೆ ಪೈಲೆಟ್ ಸಮಯಪ್ರಜ್ಞೆಯಿಂದ ಬಹುದೊಡ್ಡ ಅಪಾಯ ತಪ್ಪಿದೆ. ಇದು ಪ್ರಧಾನಿ ಮೋದಿ ಭದ್ರತಾ ವಿಚಾರದಲ್ಲಿ ನಡೆದ ಅತೀ ದೊಡ್ಡ ಲೋಪ ಎಂದು ಆಕ್ರೋಶ ಕೇಳಿಬರುತ್ತಿದೆ. ಇದನ್ನೂ ಓದಿ: ಭಾರೀ ಭದ್ರತಾ ಲೋಪ – ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ

    ಮೋದಿ ಕಾರ್ಯಕ್ರಮದ ಹೊರಭಾಗದಲ್ಲಿ ಹಾಗೂ ಮೋದಿ ಹೆಲಿಕಾಪ್ಟರ್ ಮೂಲಕ ತೆರಳುವ ಮಾರ್ಗದಲ್ಲಿ ಪ್ರತಿಭಟನೆ ವೇಳೆ ಬಲೂನ್ ಹಾರಿಬಿಟ್ಟು ಭದ್ರತಾ ಲೋಪವೆಸಗಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಇದೀಗ ಒಂದು ವರ್ಷದಲ್ಲಿ ಎರಡನೇ ಬಾರಿಗೆ ಲೋಪವಾದಂತಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಫೇಕ್ ವೀಡಿಯೋ ವೈರಲ್ – ಬಿಜೆಪಿ ಶಾಸಕರ ವಿರುದ್ಧ ಎಫ್‍ಐಆರ್

    ಈ ಹಿಂದೆ 2022ರ ಜನವರಿ ತಿಂಗಳಿನಲ್ಲಿ ಬಟಿಂಡಾದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಪಂಜಾಬ್‍ಗೆ ತೆರಳಿದ್ದರು. ಮಧ್ಯಾಹ್ನ ಹುಸೇನಿವಾಲಾದಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕ ಸ್ಥಳಕ್ಕೆ ತೆರಳಲು ಹೋಗುತ್ತಿದ್ದಾಗ ಭದ್ರತಾ ಲೋಪವಾಗಿತ್ತು. ಕಾರ್ಯಕ್ರಮಕ್ಕೆ ಕಾರಿನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಫ್ಲೈಓವರ್‌ನಲ್ಲಿ ತೆರಳುತ್ತಿದ್ದಾಗ ರೈತರು ಪ್ರತಿಭಟನೆ ಮಾಡುತ್ತಿರುವುದು ಗೊತ್ತಾಗಿತ್ತು. ಭದ್ರತಾ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‍ನ ಫ್ಲೈಓವರ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸ್ವಾತಂತ್ರ್ಯ ಹೋರಾಟಗಾರರ ಮಗಳ ಕಾಲು ಮುಟ್ಟಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ

    ಸ್ವಾತಂತ್ರ್ಯ ಹೋರಾಟಗಾರರ ಮಗಳ ಕಾಲು ಮುಟ್ಟಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ

    ಅಮರಾವತಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ ಪಸಲ ಕೃಷ್ಣ ಮೂರ್ತಿ ಅವರ ಕುಟುಂಬವನ್ನು ಭೇಟಿ ಮಾಡಿದರು.

    ಪಸಲ ಕೃಷ್ಣ ಮೂರ್ತಿ ಅವರ 90 ವರ್ಷದ ಪುತ್ರಿ ಪಸಲ ಭಾರತಿ, ಅವರ ಸಹೋದರಿ ಹಾಗೂ ಸೊಸೆಯನ್ನು ಮೋದಿ ಭೇಟಿ ಮಾಡಿದ್ದಾರೆ. ಈ ವೇಳೆ ಮೋದಿ ಭಾರತಿಯವರ ಕಾಲನ್ನು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ವ್ಹೀಲ್ ಚೇರ್‌ನಲ್ಲಿ ಕುಳಿತಿರುವ ಭಾರತಿ ಅವರ ಕಾಲನ್ನು ಮುಟ್ಟಿ ನಮಸ್ಕರಿಸುತ್ತಿರುವ ಮೋದಿಯವರ ಫೋಟೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕೋವಿಡ್ ವೇಳೆ ಜನರ ಜೀವ ರಕ್ಷಣೆಗೆ ಮೋದಿಯವ್ರು ಹಗಲು-ರಾತ್ರಿ ಪ್ರಯತ್ನ ಮಾಡಿದ್ದಾರೆ: ಶೋಭಾ ಕರಂದ್ಲಾಜೆ

    ಪಸಲ ಕೃಷ್ಣ ಮೂರ್ತಿ ಅವರು 1900 ಇಸವಿಯಲ್ಲಿ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೆಪಲ್ಲಿಗುಡೆಂ ತಾಲೂಕಿನ ಪಶ್ಚಿಮ ವಿಪ್ಪರ್ರಿ ಗ್ರಾಮದಲ್ಲಿ ಜನಿಸಿದರು. ಅವರು 1921ರಲ್ಲಿ ತಮ್ಮ ಪತ್ನಿಯೊಂದಿಗೆ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಗಾಂಧಿವಾದಿಯಾಗಿದ್ದ ಕೃಷ್ಣ ಮೂರ್ತಿ ಉಪ್ಪಿನ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿದ್ದರು. ಇದಕ್ಕಾಗಿ ಅವರಿಗೆ 1 ವರ್ಷದ ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು. ಕೃಷ್ಣ ಮೂರ್ತಿ 1978ರಲ್ಲಿ ನಿಧನರಾದರು. ಇದನ್ನೂ ಓದಿ: ಮಿಗ್ 29 ಬದಲಿಸಲು ಮಲೇಷ್ಯಾದ ಮೊದಲ ಆಯ್ಕೆ ಭಾರತದ ತೇಜಸ್

    ಆಂಧ್ರಪ್ರದೇಶದ ಭೀಮಾವರಂನಲ್ಲಿ ಇಂದು ನಡೆದ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮ ದಿನದ ಆಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು. ಈ ವಿಶೇಷ ಕಾರ್ಯಕ್ರಮದಲ್ಲಿ 30 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಮೋದಿ ಅನಾವಣಗೊಳಿಸಿದರು.

    Live Tv
    [brid partner=56869869 player=32851 video=960834 autoplay=true]

  • 24 ವರ್ಷ ಕಾದ ಬಳಿಕ 57ನೇ ವಯಸ್ಸಿನಲ್ಲಿ ಸಿಕ್ತು ಸರ್ಕಾರಿ ನೌಕರಿ

    24 ವರ್ಷ ಕಾದ ಬಳಿಕ 57ನೇ ವಯಸ್ಸಿನಲ್ಲಿ ಸಿಕ್ತು ಸರ್ಕಾರಿ ನೌಕರಿ

    ಅಮರಾವತಿ: ಸರ್ಕಾರಿ ಶಿಕ್ಷಕನಾಗಬೇಕೆಂದು ಕನಸು ಕಂಡಿದ್ದ ಆಂಧ್ರಪ್ರದೇಶದ ವ್ಯಕ್ತಿ ತನ್ನ 33ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು, 24 ವರ್ಷ ಕಾದ ಬಳಿಕ ತನ್ನ 57ನೇ ವಯಸ್ಸಿನಲ್ಲಿ ಉದ್ಯೋಗ ಪಡೆದಿದ್ದಾರೆ.

    ಪಥಪಟ್ಟಣದ ಪೆದ್ದಾ ಸಿದ್ದಿಯ ಅಲಕಾ ಕೇದಾರೇಶ್ವರ್ ರಾವ್ ತಮ್ಮ ಬ್ಯಾಚುಲರ್ ಆಫ್ ಎಜುಕೇಶನ್ ಅನ್ನು ಪೂರೈಸಿ, 1998ರಲ್ಲಿ ಸರ್ಕಾರಿ ಶಿಕ್ಷಕನಾಗುವ ಸಲುವಾಗಿ ಜಿಲ್ಲಾ ಆಯ್ಕೆ ಸಮಿತಿ(ಡಿಎಸ್‌ಸಿ) ಪರೀಕ್ಷೆ ಬರೆದಿದ್ದರು. ಅವರು ಒಳ್ಳೆಯ ಅಂಕ ಗಳಿಸಿದ್ದರೂ ಕಾನೂನು ಸಮಸ್ಯೆಯಿಂದ ಅವರ ಆಯ್ಕೆ ವಿಳಂಬವಾಯಿತು. ಇತ್ತೀಚೆಗೆ ಜಿಲ್ಲಾ ಆಯ್ಕೆ ಸಮಿತಿ 1998ರ ಕಡತವನ್ನು ತೆರವುಗೊಳಿಸಿದ್ದರಿಂದ ಕೊನೆಗೂ ತಮ್ಮ 57ನೇ ವಯಸ್ಸಿನಲ್ಲಿ ಕೇದಾರೇಶ್ವರ್‌ಗೆ ಶಿಕ್ಷಕ ಉದ್ಯೋಗ ದೊರೆತಿದೆ. ಇದನ್ನೂ ಓದಿ: ಅಗ್ನಿಪಥ್‌ ಯೋಜನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ: ದೋವಲ್‌

    1998ರಲ್ಲೇ ಪರೀಕ್ಷೆ ಬರೆದು ನೌಕರಿಗಾಗಿ ಕಾದು ಕುಳಿತಿದ್ದ ಕೇದಾರೇಶ್ವರ್ ಕೈಯಲ್ಲಿ ಕಾಸಿಲ್ಲದೇ ತನ್ನ ತಾಯಿಯೊಂದಿಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಬಡತನದೊಂದಿಗೆ ತಾಯಿಯ ಮರಣದ ಬಳಿಕ ಖಿನ್ನತೆಗೆ ಜಾರಿದ ಕೇದಾರೇಶ್ವರ್ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ಆತನನ್ನು ಸ್ಥಳೀಯರು ಮಾನಸಿಕ ಅಸ್ವಸ್ಥ ಎಂದು ದೂರವಿಡಲು ಪ್ರಾರಂಭಿಸಿದರು. ಇದನ್ನೂ ಓದಿ: ಗುಜರಾತ್‍ನ ಏಕತಾ ಪ್ರತಿಮೆ ಬಳಿ ಭೂಕಂಪನ

    ಇತ್ತೀಚೆಗೆ ಡಿಎಸ್‌ಸಿ 1998ರ ಕಡತವನ್ನು ತೆರವುಗೊಳಿಸಿ ಕೇದಾರೇಶ್ವರ್‌ಗೆ ನೇಮಕಾತಿಯ ಆದೇಶ ನೀಡಿದಾಗ ಅವರ ಜೀವನವೇ ಬದಲಾಯಿತು. ಈ ಸಂದರ್ಭದಲ್ಲಿ ಉತ್ಸುಕನಾಗಿ ಮಾತನಾಡಿರುವ ಅವರ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಆತನ ಮಾತು ಎಲ್ಲೆಡೆ ಹರಡುತ್ತಿದ್ದಂತೆ, ದೂರವಿಟ್ಟಿದ್ದ ಜನರು ಅವರಿಗೆ ಹೊಸ ಬಟ್ಟೆ, ಊಟ ನೀಡಿದರು, ಶಾಲು ಹೊದಿಸಿ ಸನ್ಮಾನ ಮಾಡಿದರು. ಈ ಮೂಲಕ ಕೇದಾರೇಶ್ವರ ಅವರ ಜೀವನವೇ ಬದಲಾಗಿದೆ.

    Live Tv

  • ಆಂಧ್ರಪ್ರದೇಶದ ಕಾರ್ಖಾನೆಯಲ್ಲಿ ಅನಿಲ ಸೋರಿಕೆ – 200 ಮಹಿಳಾ ಕಾರ್ಮಿಕರು ಅಸ್ವಸ್ಥ

    ಆಂಧ್ರಪ್ರದೇಶದ ಕಾರ್ಖಾನೆಯಲ್ಲಿ ಅನಿಲ ಸೋರಿಕೆ – 200 ಮಹಿಳಾ ಕಾರ್ಮಿಕರು ಅಸ್ವಸ್ಥ

    ಹೈದರಾಬಾದ್: ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಪಶುವೈದ್ಯಕೀಯ ಔಷಧಿ ಕಂಪನಿಯಲ್ಲಿ ಅನಿಲ ಸೋರಿಕೆಯಾದ ಪರಿಣಾಮ ಪಕ್ಕದ ಕಂಪನಿ ಅಪ್ಯಾರಲ್ಸ್ ಸಂಸ್ಥೆಯ ಸುಮಾರು 200 ಮಹಿಳಾ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ.

    ಪೋರಸ್ ಲ್ಯಾಬೊರೇಟರೀಸ್‍ನಲ್ಲಿ ಅನಿಲ ಸೋರಿಕೆಯಾಗಿದೆ. ಇದರಿಂದಾಗಿ ಅಚ್ಚುತಪುರಂ ಪ್ರದೇಶದಲ್ಲಿನ ವಿಶೇಷ ಆರ್ಥಿಕ ವಲಯದ (SEZ) ಪಕ್ಕದ ಸಂಸ್ಥೆಯ ಸಿಬ್ಬಂದಿ ಮೇಲೆ ಪರಿಣಾಮ ಬೀರಿದೆ. ಅಪ್ಯಾರಲ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 200ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ವಾಂತಿ, ತಲೆನೋವು ಮತ್ತು ಕಣ್ಣುರಿ ಕಾಣಿಸಿಕೊಂಡ ಪರಿಣಾಮ ಎಲ್ಲ ಕಾರ್ಮಿಕರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವೀಸಾ ಹಗರಣ – ಕಾರ್ತಿ ಚಿದಂಬರಂಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

    ಪೋರಸ್ ಪಕ್ಕದಲ್ಲಿರುವ ಬ್ರಾಂಡಿಕ್ಸ್ ಎಂಬ ಕಂಪನಿ 1,000 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಬ್ರಾಂಡಿಕ್ಸ್ ಕ್ಯಾಂಪಸ್ ಸೀಡ್ಸ್ ಅಪರೆಲ್ ಇಂಡಿಯಾ ಎಂಬ ಇನ್ನೊಂದು ಕಂಪನಿಯನ್ನು ಹೊಂದಿದೆ. ಕಂಪನಿಯಲ್ಲಿ 1,800 ಮಂದಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ಬಳಿಕ ಅಕ್ಕಪಕ್ಕದ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ತಕ್ಷಣ ಸ್ಥಳಾಂತರಿಸಿದ ಪರಿಣಾಮ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ. ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ – ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಬಿಜೆಪಿ ಆಗ್ರಹ

    ಅಸ್ವಸ್ಥಗೊಂಡ ಮಹಿಳಾ ಕಾರ್ಮಿಕರನ್ನು ಅಚ್ಯುತಪುರಂನ ಎರಡು ಖಾಸಗಿ ಆಸ್ಪತ್ರೆಗಳು ಮತ್ತು ಅನಕಪಲ್ಲಿಯ ಎನ್‍ಟಿಆರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 1,800ಕ್ಕೂ ಅಧಿಕ ಕಾರ್ಮಿಕರನ್ನು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಡಿಸ್ಚಾರ್ಚ್ ಮಾಡಲಾಗಿದೆ.

  • ರಹಸ್ಯ ಬಯಲಾಗುತ್ತೆಂಬ ಭಯಕ್ಕೆ ಮಾಜಿ ಚಾಲಕನ ಹತ್ಯೆಗೈದ YSRCP ಮುಖಂಡ

    ರಹಸ್ಯ ಬಯಲಾಗುತ್ತೆಂಬ ಭಯಕ್ಕೆ ಮಾಜಿ ಚಾಲಕನ ಹತ್ಯೆಗೈದ YSRCP ಮುಖಂಡ

    ಹೈದರಾಬಾದ್: ಮಾಜಿ ಚಾಲಕನನ್ನು ಕೊಂದ ಆರೋಪದಡಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‍ಆರ್‌ಸಿಪಿ) ಮುಖಂಡ ಅನಂತ ಸತ್ಯ ಉದಯ ಭಾಸ್ಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ಚಾಲಕನನ್ನು ಸುಬ್ರಹ್ಮಣ್ಯಂ ಎಂದು ಗುರುತಿಸಲಾಗಿದೆ. ತನ್ನ ರಹಸ್ಯಗಳು ಮತ್ತು ಇತರೆ ಚಟುವಟಿಕೆಗಳನ್ನು ಎಲ್ಲಿ ಬಹಿರಂಗಪಡಿಸುತ್ತಾನೋ ಎಂಬ ಭಯದಿಂದ ಮೇ 19ರಂದು ಗುರುವಾರ ರಾತ್ರಿ 9.30ರ ಸುಮಾರಿಗೆ ಸುಬ್ರಹ್ಮಣ್ಯಂ ಅವರನ್ನು ಭೇಟಿಯಾಗುವಂತೆ ಅನಂತ ಭಾಸ್ಕರ್ ತಿಳಿಸಿದ್ದರು. ಆದರೆ ಶುಕ್ರವಾರ 2 ಗಂಟೆಯ ಸುಮಾರಿಗೆ ಸುಬ್ರಹ್ಮಣ್ಯಂ ಅಪಘಾತದಲ್ಲಿ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ. ಇದನ್ನೂ ಓದಿ:  ಉತ್ತರ ಕೊರಿಯಾದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ

    CRIME 2

    ಈ ಘಟನೆ ಸಂಬಂಧ ಮೇ 20 ರಂದು ಮೃತರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಆಂಧ್ರಪ್ರದೇಶದ ಪೂರ್ವ ಗೋದಾವ್ರಿ ಜಿಲ್ಲೆಯ ಸರ್ಪವರಂ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ. ಅಲ್ಲದೇ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಚಾಲಕನ ಖಾಸಗಿ ಭಾಗಕ್ಕೆ ಪೆಟ್ಟಾಗಿದ್ದು, ಆತನ ಕಾಲು, ಕೈ ಮತ್ತು ತಲೆಗೆ ಗಂಭೀರ ಗಾಯಗಳಾಗಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಪಿಯುಸಿ ಅಡ್ಮಿಷನ್‍ಗೆ ಹೊರಟಿದ್ದ ಪ್ರತಿಭಾವಂತ ವಿದ್ಯಾರ್ಥಿ ಅಪಘಾತದಲ್ಲಿ ಸಾವು

    ಈ ಘಟನೆ ಕುರಿತಂತೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರನಾಥ್ ಬಾಬು ಅವರು, ಮೇ 19 ರಂದು ಉದಯ ಭಾಸ್ಕರ್, ಸುಬ್ರಹ್ಮಣ್ಯಂ ಅವರನ್ನು ರಾತ್ರಿ ಭೇಟಿಯಾಗುವಂತೆ ತಿಳಿಸಿದ್ದರು. ನಂತರ ಶಂಕರನಗರ ಸೆಲ್ ಟವರ್ ಪ್ರದೇಶದಲ್ಲಿ ಸುಬ್ರಮಣ್ಯಂ ಮೇಲೆ ಅನಂತ ಭಾಸ್ಕರ್ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

  • ಜೂ.30ರವರೆಗೆ ತಿರುಮಲದಲ್ಲಿ ಕೆಲವು ಸಾಪ್ತಾಹಿಕ ಸೇವೆಗಳು ತಾತ್ಕಾಲಿಕ ಸ್ಥಗಿತ

    ಜೂ.30ರವರೆಗೆ ತಿರುಮಲದಲ್ಲಿ ಕೆಲವು ಸಾಪ್ತಾಹಿಕ ಸೇವೆಗಳು ತಾತ್ಕಾಲಿಕ ಸ್ಥಗಿತ

    ಹೈದರಾಬಾದ್: ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ದೇವಾಲಯವು ಕೆಲವು ವಾರಗಳ ಕಾಲ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದೆ

    ವೆಂಕಟೇಶ್ವರನ ಬೆಟ್ಟದ ದೇವಾಲಯದೊಳಗೆ ನಡೆಸಲಾಗುವ ಕೆಲವು ವಾರದ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಮಂಗಳವಾರ ನಡೆಯುವ ಅಸ್ತದಳ ಪಾದಪದ್ಮರದಾನ, ಗುರುವಾರದ ತಿರುಪ್ಪವಾಡ, ಶುಕ್ರವಾರದ ನಿಜಪಾದ ದರ್ಶನಂ ಮುಂತಾದ ಸಾಪ್ತಾಹಿಕ ಸೇವೆಗಳನ್ನು ಜೂನ್ 30ರವರೆಗೆ ಸ್ಥಗಿತಗೊಳಿಸಲಾಗಿದೆ.

    ಪ್ರಸ್ತುತ ಬೇಸಿಗೆಯಲ್ಲಿ ಭಾರೀ ಸಂಖ್ಯೆಯಲ್ಲಿ ದೇವಾಲಯಕ್ಕೆ ಜನರು ಭೇಟಿ ನೀಡುವ ಹಿನ್ನೆಲೆ ಸಾಮಾನ್ಯ ಯಾತ್ರಾರ್ಥಿಗಳಿಗೆ ಹೆಚ್ಚಿನ ಸಮಯ ದರ್ಶನವನ್ನು ಒದಗಿಸುವ ಉದ್ದೇಶದಿಂದ ಕೆಲವು ಸೇವೆಗಳನ್ನು ಅಮಾನತುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಸಮಾಧಿ ಅಗೆದು ಅಪ್ರಾಪ್ತೆಯ ಶವದ ಅತ್ಯಾಚಾರ- ಶಾಕ್ ಆದ ಕುಟುಂಬಸ್ಥರಿಂದ ದೂರು

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾ ರೆಡ್ಡಿ ಅವರು, ಸಾಪ್ತಾಹಿಕ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಮಂಗಳವಾರ ಮತ್ತು ಶುಕ್ರವಾರದಂದು ಹೆಚ್ಚುವರಿಯಾಗಿ ಸುಮಾರು 5,000 ಯಾತ್ರಾರ್ಥಿಗಳಿಗೆ ಮತ್ತು ಗುರುವಾರದಂದು 9,000 ಭಕ್ತರಿಗೆ ದರ್ಶನಕ್ಕೆ ಅನುಕೂಲವಾಗುವಂತೆ ಟಿಟಿಡಿಗೆ ಅನುವು ಮಾಡಿಕೊಡುತ್ತದೆ. ಈ ನಿರ್ಧಾರದಿಂದ ಭಕ್ತರು ವೆಂಕಟೇಶ್ವರ ದೇವಾಲಯದ ಒಳಗೆ ಹೆಚ್ಚು ಗಂಟೆಗಳ ಕಾಲ ಕಾಯಬೇಕಾಗಿಲ್ಲ ಎಂದಿದ್ದಾರೆ.

    ಕೋವಿಡ್-19ನಿಂದಾಗಿ ಕಳೆದ ಎರಡು ವರ್ಷಗಳಿಂದ ಟಿಟಿಡಿ ತನ್ನ ಹಲವು ಚಟುವಟಿಕೆಗಳನ್ನು ಮೊಟಕುಗೊಳಿಸಿತ್ತು. ಇದೀಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ಕ್ರಮೇಣ ಟಿಟಿಡಿ ಸಾರ್ವಜನಿಕ ಕಲ್ಯಾಣ ಮತ್ತು ಹಿಂದೂ ಧಾರ್ಮಿಕ ಪ್ರಚಾರ ಚಟುವಟಿಕೆಗಳನ್ನು ಪುನರಾರಂಭಿಸುತ್ತಿದೆ. ಇದನ್ನೂ ಓದಿ: ನಮ್ಮ ಮನೆ ಎಕ್ಸ್ ಪೋ 4ನೇ ಆವೃತ್ತಿಗೆ ಎರಡನೇ ದಿನವು ಭರ್ಜರಿ ರೆಸ್ಪಾನ್ಸ್

  • ಮೇ10 ರಿಂದ ಒಡಿಶಾ, ಬಂಗಾಳ, ಆಂಧ್ರಪ್ರದೇಶದಲ್ಲಿ ಭಾರೀ ಮಳೆ ಸಾಧ್ಯತೆ

    ಮೇ10 ರಿಂದ ಒಡಿಶಾ, ಬಂಗಾಳ, ಆಂಧ್ರಪ್ರದೇಶದಲ್ಲಿ ಭಾರೀ ಮಳೆ ಸಾಧ್ಯತೆ

    ನವದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆ ಭಾನುವಾರ ಸಂಜೆ ವೇಳೆಗೆ ಅಸನಿ ಚಂಡಮಾರುತವು ಗಂಟೆಗೆ 75 ಕಿ.ಮೀ. ವೇಗದಲ್ಲಿ ಉತ್ತರ ಪ್ರದೇಶ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

    ಮಂಗಳವಾರದಿಂದ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಅಸನಿ ಚಂಡಮಾರುತದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಭಾನುವಾರ ಸಂಜೆಯವರೆಗೆ ಸೈಕ್ಲೋನಿಕ್ ಚಂಡಮಾರುತದ ರೂಪದಲ್ಲಿದ್ದು, ನಂತರ ಚಂಡಮಾರುತ ತೀವ್ರಗೊಂಡು ಮೇ10ರವರೆಗೂ ಇರಲಿದೆ. ಮೇ 11 ಮತ್ತು 12 ರಂದು ಮತ್ತೊಂದು ಚಂಡಮಾರುತವಾಗಿ ಪರಿಣಮಿಸುತ್ತದೆ. ಇದನ್ನೂ ಓದಿ:  ಉಕ್ರೇನ್‌ಗೆ ಬ್ರಿಟನ್‌ನಿಂದ ಮತ್ತೆ 12 ಸಾವಿರ ಕೋಟಿ ಮಿಲಿಟರಿ ನೆರವು

    ಮಂಗಳವಾರ ಸಂಜೆಯಿಂದ ಮಳೆ ಆರಂಭವಾಗಲಿದ್ದು, ಒಡಿಶಾದ ಗಜಪತಿ, ಗಂಜಾಂ ಮತ್ತು ಪುರಿ 3 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಮತ್ತು ಬುಧವಾರ ಜಗತ್‍ಸಿಂಗ್‍ಪುರ, ಪುರಿ, ಖುರ್ದಾ, ಕಟಕ್ ಮತ್ತು ಗಂಜಾಂ ಎಂಬ 5 ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾಗೆ ಸದ್ಯಕ್ಕಿಲ್ಲ ಬಂಧನ

  • ರಾಯಚೂರಿನಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಪೊಲೀಸರ ಜಂಟಿ ಸಭೆ

    ರಾಯಚೂರಿನಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಪೊಲೀಸರ ಜಂಟಿ ಸಭೆ

    ರಾಯಚೂರು: ಗಡಿರಾಜ್ಯಗಳ ಪ್ರಕರಣಗಳ ಕುರಿತು ಚರ್ಚಿಸಲು ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಪೊಲೀಸರು ಜಂಟಿ ಸಭೆ ನಡೆಸಿದರು.

    ಸಭೆಯಲ್ಲಿ ರಾಜ್ಯದ, ಆಂಧ್ರಪ್ರದೇಶ, ತೆಲಂಗಾಣದ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಈವರೆಗೆ ಪತ್ತೆಯಾಗದೇ ಇರುವ ಪ್ರಕರಣಗಳ ಬಗ್ಗೆ ಚರ್ಚಿಸಲಾಯಿತು. ನಾಪತ್ತೆ, ದರೋಡೆ, ಕಳ್ಳತನ, ಕೊಲೆ, ಡ್ರಗ್ಸ್, ಮಾನವ ಕಳ್ಳಸಾಗಣೆ ಸೇರಿ ವಿವಿಧ ಕೇಸ್‍ಗಳ ಪರಿಶೀಲನೆ ನಡೆಯಿತು.

    ಮೂರು ರಾಜ್ಯಗಳಲ್ಲಿ ಪತ್ತೆಯಾದ ಅಪರಿಚಿತ ಮೃತದೇಹಗಳು, ಸಾಕ್ಷ್ಯಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. ಭೇದಿಸಲಾಗದ ಪ್ರಕರಣಗಳ ಸಾಕ್ಷ್ಯಗಳು, ದಾಖಲೆಗಳ ಬಗ್ಗೆ ಚರ್ಚೆ ಮಾಡಲಾಯಿತು. ನಗರದ ಡಿವೈಎಸ್‍ಪಿ ವೆಂಕಟೇಶ್, ತೆಲಂಗಾಣದ ನಾರಾಯಣಪುರ ಡಿವೈಎಸ್‍ಪಿ ವೆಂಕಟೇಶ್ ನೇತೃತ್ವದಲ್ಲಿ ಸಭೆ ನಡೆದಿದೆ.

  • ದ್ವೇಷಕ್ಕೆ ಪ್ರಧಾನ ಮಂತ್ರಿ ಅಂತ್ಯ ಹಾಡಬೇಕು: ಓವೈಸಿ

    ದ್ವೇಷಕ್ಕೆ ಪ್ರಧಾನ ಮಂತ್ರಿ ಅಂತ್ಯ ಹಾಡಬೇಕು: ಓವೈಸಿ

    ಹೈದರಾಬಾದ್: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶುಕ್ರವಾರ ಹೈದರಾಬಾದ್‍ನಲ್ಲಿ ಭಾವನಾತ್ಮಕ ಭಾಷಣದಲ್ಲಿ, ಬಿಜೆಪಿ ಮುಸ್ಲಿಮರ ವಿರುದ್ಧ ಯುದ್ಧ ನಡೆಸುತ್ತಿದೆ ಮತ್ತು ಸಮುದಾಯದ ವಿರುದ್ಧ ದ್ವೇಷವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.

    ಜಮಾತ್-ಉಲ್-ವಿದಾ (ರಂಜಾನ್ ಕೊನೆಯ ಶುಕ್ರವಾರ) ಸಂದರ್ಭದಲ್ಲಿ ಮೆಕ್ಕಾ ಮಸೀದಿಯಲ್ಲಿ ‘ಜಲ್ಸೆ ಯಾಮ್-ಉಲ್-ಕುರಾನ್’ ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ದ್ವೇಷದ ಘಟನೆಗಳಿಂದ ದೇಶವನ್ನು ದುರ್ಬಲಗೊಳಿಸುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಬಡ ಮುಸ್ಲಿಮರ ಮೇಲೆ ಬಿಜೆಪಿ ಸಮರ ಸಾರಿದೆ: ಓವೈಸಿ ಕಿಡಿ

    MODi

    ಬಿಜೆಪಿ ಮುಸ್ಲಿಮರ ಮೇಲೆ ತುಂಬಾ ಒತ್ತಡ ಹೇರಲು ಬಯಸುತ್ತದೆ. ಅಂತಿಮವಾಗಿ ಮುಸ್ಲಿಮರ ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿಸಲು, ಅವರನ್ನು ನೋಯಿಸಲು ಬಯಸುತ್ತದೆ ಎಂದು ಟೀಕಿಸಿದ್ದಾರೆ.

    ಬಿಜೆಪಿ ನಮ್ಮ ದೇಶದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಬಿರುಗಾಳಿಯನ್ನು ಸೃಷ್ಟಿಸಿದೆ. ಮುಸ್ಲಿಮರು ತಾಳ್ಮೆ ಮತ್ತು ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ. ಸಂವಿಧಾನದೊಳಗೆ ಉಳಿಯುವ ಮೂಲಕ ಈ ದಬ್ಬಾಳಿಕೆಯ ವಿರುದ್ಧ ಹೋರಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಈ ಸರ್ಕಾರಕ್ಕೆ ಹಿಂಸಾಚಾರ ಬೇಕಾಗಿದೆ: ಅಸಾದುದ್ದೀನ್‌ ಓವೈಸಿ

    ಈ ದ್ವೇಷವನ್ನು ನಿಲ್ಲಿಸುವಂತೆ ನಾವು ಪ್ರಧಾನಿಯನ್ನು ಕೇಳಲು ಬಯಸುತ್ತೇವೆ. ಇದು ದೇಶವನ್ನು ದುರ್ಬಲಗೊಳಿಸುತ್ತಿದೆ. ನಿಮ್ಮ ಪಕ್ಷ ಮತ್ತು ಸರ್ಕಾರವು ಭಾರತೀಯ ಮುಸ್ಲಿಮರ ವಿರುದ್ಧ ಯುದ್ಧ ಘೋಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬುಲ್ಡೋಜರ್ ವಿವಾದದ ಬಗ್ಗೆ ಮಾತನಾಡಿ, ಮಧ್ಯಪ್ರದೇಶದ ಖಾರ್ಗೋನ್ ನಗರ ಮತ್ತು ಸೆಂಧ್ವಾದಲ್ಲಿ ಮುಸ್ಲಿಮರ ಮನೆಗಳನ್ನು ನೆಲಸಮ ಮಾಡಲಾಗಿದೆ. ಮುಸ್ಲಿಮರನ್ನು ಬಹಿಷ್ಕರಿಸಲು ಕರೆ ನೀಡಲಾಗಿದೆ. ಅವರ ಅಂಗಡಿಗಳಿಂದ ಖರೀದಿಸಬೇಡಿ ಅಂತಾ ಮುಸ್ಲಿಂ ವರ್ತಕರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಇತ್ತೀಚೆಗೆ ಹರಿಯಾಣದಲ್ಲಿ, ಮುಸ್ಲಿಂ ವೃದ್ಧರೊಬ್ಬರ ಗಡ್ಡವನ್ನು ಹಿಡಿದು ಥಳಿಸಲಾಗಿದೆ. ಅದೇ ರೀತಿ ಹಸುವನ್ನು ಕೊಂದಿದ್ದಾನೆ ಎಂದು ಆರೋಪಿಸಿ ಮತ್ತೊಬ್ಬನನ್ನು ಮನೆಯಿಂದ ಕರೆದೊಯ್ದು ಥಳಿಸಿದ್ದಾರೆ ಎಂದು ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

    ನಮ್ಮ ದೇಶದಲ್ಲಿ ಅನೇಕ ಘಟನೆಗಳು ನಡೆಯುತ್ತಿವೆ ಎಂದು ನಮಗೆ ತಿಳಿದಿದೆ. ಈ ಸಂಬಂಧ ನನಗೆ ಅನೇಕ ಕರೆಗಳು ಬರುತ್ತಿವೆ. ಜನರು ನನಗೆ ಹೇಳುತ್ತಾರೆ, ಅಸಾದುದ್ದೀನ್ ಅವರೇ ನಮ್ಮ ಮನೆಗಳು ಮತ್ತು ಅಂಗಡಿಗಳನ್ನು ಕೆಡವಲಾಗುತ್ತಿದೆ. ನಾವು ನಾಶವಾಗುತ್ತಿದ್ದೇವೆ ಅಂತ ಹೇಳಿ ಅಳಲು ತೊಡಿಕೊಳ್ಳುತ್ತಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯಿಸಿ, ಭಯಪಡುವ ಅಗತ್ಯವಿಲ್ಲ, ಧೈರ್ಯದಿಂದಿರಿ. ಮುಸ್ಲಿಮರು ಭರವಸೆ ಮತ್ತು ಧೈರ್ಯವನ್ನು ಕಳೆದುಕೊಳ್ಳಬೇಡಿ ಎಂದು ತಿಳಿಸಿದ್ದೇನೆ ಎಂದು ಮಾತನಾಡಿದ್ದಾರೆ.

  • YSRP ಪೋಸ್ಟರ್‌ಗಳಿಗೆ ಹಾನಿ – 3, 4ನೇ ತರಗತಿಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸ್ರು

    YSRP ಪೋಸ್ಟರ್‌ಗಳಿಗೆ ಹಾನಿ – 3, 4ನೇ ತರಗತಿಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸ್ರು

    ಹೈದರಾಬಾದ್: ಆಡಳಿತಾರೂಢ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‍ಆರ್‌ಪಿ) ಬ್ಯಾನರ್‌ಗಳನ್ನು ಹಾನಿಗೊಳಿಸಿದ 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳನ್ನು ಆಂಧ್ರಪ್ರದೇಶ ಗುಂಟೂರು ಜಿಲ್ಲೆಯ ಪಲ್ನಾಡು ಪ್ರದೇಶದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಆಡಳಿತ ನಡೆಸುತ್ತಿರುವ ವೈಎಸ್‍ಆರ್‌ಪಿ ಪೋಸ್ಟರ್‌ಗಳನ್ನು ಹರಿದು ಹಾಕಿದರ ಕುರಿತಂತೆ ವಿಚಾರಣೆ ನಡೆಸಲು ಪೊಲೀಸರು ಅಪ್ರಾಪ್ತ ಬಾಲಕರನ್ನು ಠಾಣೆಗೆ ಕರೆದೊಯ್ದು ಸಂಜೆಯವರೆಗೂ ನೆಲದ ಮೇಲೆ ಕುರಿಸಿಕೊಂಡಿದ್ದರು. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಮುಖ್ಯಸ್ಥೆ ಆಗಬೇಕು ಅಂತ ಪ್ರಶಾಂತ್ ಕಿಶೋರ್ ಬಯಸಿದ್ರು

    cm jagan mohan reddy

    ಈ ಕುರಿತಂತೆ ಪ್ರತಿಕ್ರಿಯಿಸಿದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‍ಪಿ) ಜಯರಾಮ್ ಪ್ರಸಾದ್, ಕಟ್ಟಿದ್ದ ವೈಎಸ್‍ಆರ್‌ಪಿ ಪೋಸ್ಟರ್‌ಗಳಿಗೆ ಹಾನಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿಚಾರಣೆ ನಡೆಸಲು ನಾವು ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಠಾಣೆಗೆ ಕರೆದಿದ್ದೇವೆ ಎಂದು ತಿಳಿಸಿದ್ದಾರೆ.

    ವೈಎಸ್‍ಆರ್ ಸದಸ್ಯರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಗ್ರಾಮದ 10ರಿಂದ 15 ವರ್ಷದೊಳಗಿನ ಕೆಲವು ಮಕ್ಕಳನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿ ಒಂದು ದಿನದ ಬಳಿಕ ಪೊಲೀಸರು ಮಕ್ಕಳನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಹೆಚ್ಚು ಗಮನಹರಿಸಬೇಕು: ರಾಹುಲ್ ಸಲಹೆ

    ಈ ವಿಚಾರ ಹಬ್ಬುತ್ತಿದ್ದಂತೆಯೇ ತೆಲುಗು ದೇಶಂ ಪಕ್ಷ (ಟಿಡಿಪಿ) ಅಪ್ರಾಪ್ತ ಮಕ್ಕಳಿಗೆ ಕಿರುಕುಳ ನೀಡಿದ ವೈಸಿಪಿ ನಾಯಕರು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.