Tag: Andhra Pradesh

  • ಮದುವೆ ಮನೆಯಲ್ಲಿ ವಿಷಪೂರಿತ ಆಹಾರ ಸೇವಿಸಿ 17 ಮಂದಿ ಅಸ್ವಸ್ಥ

    ಮದುವೆ ಮನೆಯಲ್ಲಿ ವಿಷಪೂರಿತ ಆಹಾರ ಸೇವಿಸಿ 17 ಮಂದಿ ಅಸ್ವಸ್ಥ

    ತೆಲಂಗಾಣ: ವಿವಾಹ ಸಮಾರಂಭವೊಂದರಲ್ಲಿ ವಿಷಪೂರಿತ ಆಹಾರ ಸೇವಿಸಿ 17 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ನಡೆದಿದೆ.

    ಸದ್ಯ ಅಸ್ವಸ್ಥರು ಮಂಡಪೇಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯೆ ಪ್ರಿಯಾಂಕಾ ತಿಳಿಸಿದ್ದಾರೆ.  ಇದನ್ನೂ ಓದಿ: 100 ಲೋನ್ ಆ್ಯಪ್‍ಗಳಿಂದ 500 ಕೋಟಿ ರೂ. ವ್ಯವಹಾರ – ಗ್ರಾಹಕರ ಮಾಹಿತಿ ಚೀನಾಗೆ ರವಾನಿಸಿದ ಗ್ಯಾಂಗ್ ಅರೆಸ್ಟ್

    ಇದೀಗ ಮದುವೆ ಸಮಾರಂಭದಲ್ಲಿ ಫುಡ್ ಪಾಯ್ಸನ್‍ಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಮತ್ತಷ್ಟು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಇದನ್ನೂ ಓದಿ: ಭಾರತದೊಂದಿಗಿನ ಶಾಶ್ವತ ಶಾಂತಿಗೆ ಯುದ್ಧವೊಂದೇ ಆಯ್ಕೆಯಾಗಿಲ್ಲ: ಪಾಕ್ ಪ್ರಧಾನಿ

    Live Tv
    [brid partner=56869869 player=32851 video=960834 autoplay=true]

  • ತಂದೆಯ ಹುಟ್ಟು ಹಬ್ಬದ ನೆನಪಿಗೆ ಹುಟ್ಟೂರಿನ ಆಸ್ಪತ್ರೆಗೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್

    ತಂದೆಯ ಹುಟ್ಟು ಹಬ್ಬದ ನೆನಪಿಗೆ ಹುಟ್ಟೂರಿನ ಆಸ್ಪತ್ರೆಗೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್

    ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ದೇಶಕ ಪ್ರಶಾಂತ್ ನೀಲ್, ಕೇವಲ ಸಿನಿಮಾಗಳಿಂದ ಮಾತ್ರ ಗಮನ ಸೆಳೆಯುತ್ತಿಲ್ಲ. ಅವರ ಸಮಾಜಮುಖಿ ಕೆಲಸಗಳು ಕೂಡ ಅವರನ್ನು ಗೌರವದಿಂದ ಕಾಣುವಂತೆ ಮಾಡುತ್ತಿವೆ. ಸಿನಿಮಾಗಳಿಂದ ಪ್ರಶಾಂತ್ ಫೇಮಸ್ ಆಗಿದ್ದರೂ, ಇದೀಗ ಅವರು ತಾವು ಹುಟ್ಟಿದ ಊರಿನಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಿನ ಆಸ್ಪತ್ರೆಗೆ ಐವತ್ತು ಲಕ್ಷ ರೂಪಾಯಿಯನ್ನು ಕೊಡುವ ಮೂಲಕ ಮತ್ತೆ ಸದ್ದು ಮಾಡಿದ್ದಾರೆ.

    ಪ್ರಶಾಂತ್ ನೀಲ್ ಮೂಲತಃ ಆಂಧ್ರ ಪ್ರದೇಶದ ನೀಲಕಂಠಪುರಂ ನವರು. ಅವರ ಪೂರ್ಣ ಹೆಸರು ಪ್ರಶಾಂತ್ ನೀಲಕಂಠಪುರಂ, ಅದನ್ನೇ ಅವರು ಪ್ರಶಾಂತ್ ನೀಲ್ ಅಂತ ಬದಲಾಯಿಸಿಕೊಂಡಿದ್ದಾರೆ. ಈ ಊರಿನಲ್ಲಿ ಕಣ್ಣಿಗೆ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದ್ದು, ತಮ್ಮ ತಂದೆಯ 75ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಹೆಸರಿನಲ್ಲೇ 50 ಲಕ್ಷ ರೂಪಾಯಿಯನ್ನು ನೀಡಿದ್ದಾರೆ. ಇದನ್ನೂ ಓದಿ:Bigg Boss: ಗರ್ಲ್‌ಫ್ರೆಂಡ್ ವಿಚಾರಕ್ಕೆ ಬಂದ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಿಡಿಕಾರಿದ ಜಶ್ವಂತ್

    ಪ್ರಶಾಂತ್ ನೀಡಿರುವ ದೇಣಿಗೆಯನ್ನು ಬಹಿರಂಗ ಪಡಿಸಿದ್ದು, ಸ್ವತಃ ಅವರ ಚಿಕ್ಕಪ್ಪ, ಆಂಧ್ರ ಪ್ರದೇಶ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ, ಮಾಜಿ ಸಚಿವ ಡಾ. ಎನ್. ರಘುವೀರ ರೆಡ್ಡಿ ಅವರು. ಈ ವಿಷಯವನ್ನು ಟ್ವಿಟ್ ಮಾಡಿ, ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹಣದಿಂದ ಎಸ್.ವಿ. ಪ್ರಸಾದ್ ಕಣ್ಣಿನ ಆಸ್ಪತ್ರೆ ಹಲವರಿಗೆ ಬೆಳಕಾಗಲಿದೆ ಎಂದು ಅವರು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರೀತಿಗೆ ಹೊಸ ಅರ್ಥ ಕೊಟ್ಟ ಅಮೆರಿಕ ವರ-ಆಂಧ್ರ ವಧು

    ಪ್ರೀತಿಗೆ ಹೊಸ ಅರ್ಥ ಕೊಟ್ಟ ಅಮೆರಿಕ ವರ-ಆಂಧ್ರ ವಧು

    ಅಮರಾವತಿ: ಲವ್ ಇಸ್ ಬ್ಲೈಂಡ್ ಎಂಬ ವಾಕ್ಯ ಎಲ್ಲರಿಗೂ ಗೊತ್ತೆ ಇದೆ. ನಾವು ಹಲವು ಉದಾಹರಣೆಗಳನ್ನು ನೋಡಿದ್ದೇವೆ, ಓದಿದ್ದೇವೆ. ಈಗ ಮತ್ತೊಂದು ಉದಾಹರಣೆಯೊಂದು ನಮ್ಮ ಕಣ್ಣ ಮುಂದೆ ಇದ್ದು ಅಮೆರಿಕದ ಯುವಕನನ್ನು ಆಂಧ್ರ ಪ್ರದೇಶದ ಯುವತಿ ಮದುವೆಯಾಗಿ ನಮ್ಮ ಪ್ರೀತಿಗೆ ಹೊಸ ಅರ್ಥ ಕೊಟ್ಟಿದ್ದಾರೆ.

    ಈ ಮುದ್ದು ಜೋಡಿಯನ್ನು ನೋಡಲು ಹಲವು ಜನರು ಮದುವೆಗೆ ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯ ಫೋಟೋ ವೈರಲ್ ಆಗುತ್ತಿದೆ. ಈ ಜೋಡಿಯನ್ನು ನೋಡಿದ ಜನರು ನಿಜವಾದ ಪ್ರೀತಿಗೆ ಯಾವುದೇ ಬಣ್ಣ, ಗಡಿ ಬೇಕಾಗಿಲ್ಲ ಎಂದು ಶುಭಕೋರುತ್ತಿದ್ದಾರೆ. ಇದನ್ನೂ ಓದಿ: RTPSನಲ್ಲಿ ಕಳಚಿಬಿದ್ದ ಬಂಕರ್‌ಗಳು – ವಿದ್ಯುತ್ ಉತ್ಪಾದನೆ ಸ್ಥಗಿತ 

    ನಿರ್ಮಲವಾದ ಪ್ರೀತಿ ಎರಡು ಹೃದಯಗಳನ್ನು ಒಂದು ಮಾಡುತ್ತೆ ಎಂಬುದಕ್ಕೆ ಆಂಧ್ರ ಯುವತಿ, ಅಮೆರಿಕ ಯುವಕ ನಿರ್ದಶನರಾಗಿದ್ದಾರೆ. ಆಂಧ್ರದ ಟಿ.ಹರ್ಷವಿ ಹಾಗೂ ಅಮೆರಿಕದ ದಮಿಯನ್ ಫ್ರ್ಯಾಂಕ್ ಹಿಂದೂ ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.

    ವಧು ಹರ್ಷವಿ, ತಿರುಪತಿಯ ಜಯಚಂದ್ರ ರೆಡ್ಡಿ ಮತ್ತು ರಾಜೇಶ್ವರಿ ದಂಪತಿಯ ಪುತ್ರಿ ಬಿ.ಟೆಕ್ ಪೂರ್ಣಗೊಳಿಸಿರುವ ಹರ್ಷವಿ, ಅಮೆರಿಕದ ಬೋಸ್ಟನ್‍ನಲ್ಲಿರುವ ಫ್ರ್ಯಾಂಕ್ ಪರಿಚಯವಾಗಿದೆ. ನಂತರ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಹಿರಿಯರ ಒಪ್ಪಿಗೆ ಪಡೆದುಕೊಂಡಿದ್ದಾರೆ. ಎಲ್ಲರ ಒಪ್ಪಿಗೆ ನಂತರ ಇಬ್ಬರು ಸಂಪ್ರದಾಯದ ಪ್ರಕಾರ ಸಪ್ತಪದಿಯನ್ನು ತುಳಿಯುವ ಮೂಲಕ ಸಂಬಂಧಕ್ಕೆ ಹೊಸ ರೂಪವನ್ನು ಕೊಟ್ಟಿದ್ದಾರೆ. ಇದನ್ನೂ ಓದಿ: ನಿನ್ನ ತರ ನಕಲಿ ಸರ್ಟಿಫಿಕೇಟ್ ಕ್ರಿಯೇಟ್ ಮಾಡಿ ದಂಧೆ ನಡೆಸಿಕೊಂಡು ಬಂದಿಲ್ಲ ನಾನು:  ಹೆಚ್‍ಡಿಕೆ ಕಿಡಿ

    ಅಮೆರಿಕದಲ್ಲಿ ಇಬ್ಬರು ಮದುವೆಯಾಗಿದ್ದಾರೆ. ಆದರೆ ಹರ್ಷವಿ ಕುಟುಂಬದ ಒತ್ತಾಯದ ಮೇರೆಗೆ ತಿರುಪತಿಯಲ್ಲಿ ಮತ್ತೊಮ್ಮೆ ಇವರಿಬ್ಬರ ವಿವಾಹ ಕಾರ್ಯ ನೆರವೇರಿದೆ. ತಿರುಪತಿಯ ಹೋಟೆಲ್ ಒಂದರಲ್ಲಿ ಕಳೆದ ಗುರುವಾರ ರಾತ್ರಿ ಅದ್ಧೂರಿ ಮದುವೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಬಳ್ಳಾರಿಯಲ್ಲಿ ಶುರುವಾಗುತ್ತಾ ಮೈನಿಂಗ್ ಚಾಪ್ಟರ್ 2? – ಅನುಮತಿ ಕೇಳಿದ ರೆಡ್ಡಿ

    ಬಳ್ಳಾರಿಯಲ್ಲಿ ಶುರುವಾಗುತ್ತಾ ಮೈನಿಂಗ್ ಚಾಪ್ಟರ್ 2? – ಅನುಮತಿ ಕೇಳಿದ ರೆಡ್ಡಿ

    ನವದೆಹಲಿ: ಗಣಿಗಾರಿಕೆ ಚಟುವಟಿಕೆಗಳನ್ನು ಪುನಾರಂಭಿಸಲು ಅನುಮತಿ ಕೋರಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮಾಲೀಕತ್ವದ ಓಬಳಾಪುರಂ ಗಣಿ ಕಂಪನಿ(ಓಎಂಸಿ) ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

    ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ತಮ್ಮ ಕಂಪನಿಗೆ ಅವಕಾಶ ನೀಡುವಂತೆ ರೆಡ್ಡಿ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಗಣಿಗಾರಿಕೆ ನಿಲ್ಲಿಸಲು ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ವಿವಾದ ಕಾರಣವಾಗಿತ್ತು. ಎರಡು ರಾಜ್ಯಗಳ ನಡುವಿನ ಗಡಿ ವಿವಾದ ಬಗೆಹರಿದಿದ್ದು, ಅನುಮತಿ ತಡೆಹಿಡಿಯಲು ಕಾರಣಗಳಿಲ್ಲ. ಹೀಗಾಗಿ ಗಣಿಗಾರಿಕೆ ಪುನಾರಂಭಕ್ಕೆ ಅನುಮತಿ ನೀಡಬೇಕು ಎಂದು ಓಎಂಸಿ ಮನವಿ ಮಾಡಿದೆ.

    ಈ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಿರುವ ಆಂಧ್ರಪ್ರದೇಶ ಸರ್ಕಾರ, ಗಣಿಗಾರಿಕೆ ನಡೆಸಲು ಒಪ್ಪಿಗೆ ಸೂಚಿಸಿದೆ. ಸರ್ವೇಯರ್ ಜನರಲ್ ಆಫ್ ಇಂಡಿಯಾ ಎರಡು ರಾಜ್ಯಗಳ ನಡುವೆ ಗಡಿ ರೇಖೆಯನ್ನು ಗುರುತಿಸಿದೆ. ಇದನ್ನು ಎರಡು ರಾಜ್ಯಗಳು ಒಪ್ಪಿಕೊಂಡಿವೆ. ಹೀಗಾಗಿ ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ನಮ್ಮದು ಯಾವುದೇ ತಕರಾರು ಇಲ್ಲ ಎಂದು ಹೇಳಿದೆ.

    ಪ್ರಕರಣದ ವಿಚಾರಣೆಯನ್ನು ನಾಳೆ ಸುಪ್ರೀಂಕೋರ್ಟ್ ನಡೆಸಲಿದ್ದು, ಆಂಧ್ರಪ್ರದೇಶ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಹನ್ನೊಂದು ವರ್ಷಗಳ ಬಳಿಕ ಮತ್ತೆ ರೆಡ್ಡಿ ಸಹೋದರರಿಗೆ ಗಣಿಗಾರಿಕೆಗೆ ಅವಕಾಶ ಸಿಗುತ್ತಾ ಎಂಬ ಕುತೂಹಲ ಎದ್ದಿದೆ.

    ಅಕ್ರಮ ಗಣಿಗಾರಿಕೆ ಹಿನ್ನಲೆ ಬಂಧನಕ್ಕೆ ಒಳಗಾಗಿದ್ದ ಜನಾರ್ದನ ರೆಡ್ಡಿ ಜೈಲು ಶಿಕ್ಷೆ ಅನುಭವಿಸಿದ್ದರು. ಸದ್ಯ ವಿದೇಶಗಳಲ್ಲಿ ಹಣ ಹೂಡಿಕೆ, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಸಿಬಿಐ ತನಿಖೆಗೆ ಎದುರಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಂದ್ರಬಾಬು ನಾಯ್ಡು ಕ್ಷೇತ್ರದಿಂದ ಜಗನ್ ಸ್ಪರ್ಧೆ – 2 ವರ್ಷಕ್ಕೂ ಮುನ್ನ ರಂಗೇರಿದ ಚುನಾವಣಾ ರಾಜಕೀಯ

    ಚಂದ್ರಬಾಬು ನಾಯ್ಡು ಕ್ಷೇತ್ರದಿಂದ ಜಗನ್ ಸ್ಪರ್ಧೆ – 2 ವರ್ಷಕ್ಕೂ ಮುನ್ನ ರಂಗೇರಿದ ಚುನಾವಣಾ ರಾಜಕೀಯ

    ಹೈದರಾಬಾದ್: ಆಂಧ್ರಪ್ರದೇಶ ಚುನಾವಣೆಗೆ ಇನ್ನೂ ಎರಡು ವರ್ಷಗಳು ಬಾಕಿ ಇರುವಾಗಲೇ ಅಖಾಡ ಸಿದ್ಧವಾಗುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಹಾಲಿ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ.

    ಮಾಜಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಕಾಂಗ್ರೆಸ್ ನಾಯಕರ ಜೊತೆಗೆ ನಡೆಸಿದ ಸಭೆ ಬಳಿಕ ಜಗನ್ ಮೋಹನ್ ರೆಡ್ಡಿ ಈ ಘೋಷಣೆ ಮಾಡಿದ್ದಾರೆ. ಮುಂಬರುವ ಚುನಾವಣಾ ಕದನವು ಚಂದ್ರಬಾಬು ನಾಯ್ಡು ಕ್ಷೇತ್ರ ಕುಪ್ಪಂನಿಂದಲೇ ಆರಂಭವಾಗುತ್ತದೆ. ನಾಯ್ಡು ಅವರನ್ನು ಸಂಪೂರ್ಣವಾಗಿ ಹೊರ ಹಾಕುವುದು ನಮ್ಮ ಗುರಿ. ಇದಕ್ಕಾಗಿ ಕಾರ್ಯಕರ್ತರು ಸಿದ್ಧವಾಗಬೇಕು ಎಂದು ಜಗನ್ ಕರೆ ಕೊಟ್ಟಿದ್ದಾರೆ.

    Chandrababu Naidu

    1989 ರಿಂದ ಚಿತ್ತೂರು ಜಿಲ್ಲೆಯ ಕುಪ್ಪಂನಿಂದ ಚಂದ್ರಬಾಬು ನಾಯ್ಡು ಪ್ರತಿನಿಧಿಸುತ್ತಿದ್ದಾರೆ. 2019 ರ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 151 ಸ್ಥಾನಗಳನ್ನು ಗಳಿಸಿ, ಟಿಡಿಪಿಯನ್ನು 23 ಕ್ಕೆ ಇಳಿಸಿತು. ನಾಯ್ಡು ಅವರ ಮತಗಳು ಇಲ್ಲಿ ಮೊದಲ ಬಾರಿಗೆ ಶೇ.60 ಕ್ಕಿಂತ ಕಡಿಮೆ ಅಂದರೆ ಶೇ.55.18 ಕ್ಕೆ ಕುಸಿದಿತ್ತು. ವೈಎಸ್‌ಆರ್‌ಸಿಪಿಯ ಅಭ್ಯರ್ಥಿ ಕೆ ಚಂದ್ರಮೌಳಿ ಶೇ.38 ರಷ್ಟು ಮತಗಳನ್ನು ಪಡೆದಿದ್ದರು. ಜನಸೇನೆ ಮತ್ತು ಬಿಜೆಪಿಯಿಂದ ನಾಯ್ಡು ಮತಗಳು ಕಡಿಮೆಯಾಗಿದ್ದು ಈ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿ ವೈಎಸ್‌ಆರ್‌ಸಿಪಿಯಿಂದ ತಾವು ಸ್ಪರ್ಧಿಸುವ ಮೂಲಕ ನಾಯ್ಡುಗೆ ಸೋಲಿನ ರುಚಿ ಕಾಣಿಸಲು ಜಗನ್ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಇಡಿ ವಿಚಾರಣೆಗೆ ಹಾಜರಾದ ಸಂಜಯ್ ರಾವತ್ ಪತ್ನಿ ವರ್ಷಾ

    ಕುಪ್ಪಂ ಪುರಸಭೆ ವ್ಯಾಪ್ತಿಯಲ್ಲಿ ತಮ್ಮ ಸರ್ಕಾರ ಮಂಜೂರು ಮಾಡಿರುವ 65 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಪಟ್ಟಿ ಮಾಡಿ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು. ತಮ್ಮ ಸ್ವಂತ ಕ್ಷೇತ್ರವಾದ ಕಡಪಾದಲ್ಲಿರುವ ಪುಲಿವೆಂದುಲದಷ್ಟೇ ಕುಪ್ಪಂ ಅವರಿಗೆ ಮುಖ್ಯ ಎಂದು ಜಗನ್ ಹೇಳಿದ್ದಾರೆ.

    cm jagan mohan reddy

    ಕಳೆದ ವಿಧಾನಸಭೆ ಚುನಾವಣೆ ಬಳಿಕ ವೈಎಸ್‌ಆರ್‌ಸಿಪಿ ಬೆಳವಣಿಗೆ ಹೆಚ್ಚಿದ್ದು, ಎಲ್ಲಾ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಗೆದ್ದಿದೆ. ವೈಎಸ್‌ಆರ್‌ಸಿಪಿಯ ಬೆಳವಣಿಗೆಯಿಂದ ಕಾಂಗ್ರೆಸ್ ಹೀನಾಯವಾಗಿ, ರಾಜ್ಯದಲ್ಲಿ ಟಿಡಿಪಿ ಮಾತ್ರ ಪ್ರತಿಪಕ್ಷವಾಗಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ 175 ಸ್ಥಾನಗಳನ್ನೂ ಗೆಲ್ಲುವ ಗುರಿ ಹೊಂದಲಾಗಿದೆ. ಇದನ್ನೂ ಓದಿ: ಪ್ರತಿ ಮಗುವಿಗೆ ಶಿಕ್ಷಣ, ಯುವಕರಿಗೆ ಉದ್ಯೋಗ ಕೊಡದೇ ಬಲಿಷ್ಠ ಭಾರತದ ನಿರ್ಮಾಣವಾಗದು: ಕೇಜ್ರಿವಾಲ್

    Live Tv
    [brid partner=56869869 player=32851 video=960834 autoplay=true]

  • ಕಾರ್ಖಾನೆಯಲ್ಲಿ ಅನಿಲ ಸೋರಿಕೆ, 50 ಕಾರ್ಮಿಕರು ಅಸ್ವಸ್ಥ

    ಕಾರ್ಖಾನೆಯಲ್ಲಿ ಅನಿಲ ಸೋರಿಕೆ, 50 ಕಾರ್ಮಿಕರು ಅಸ್ವಸ್ಥ

    ಅಮರಾವತಿ: ಉಡುಪು ತಯಾರಿಕಾ ಘಟಕದಲ್ಲಿ ಅನಿಲ ಸೋರಿಕೆಯಾಗಿದ್ದು 50ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥರಾದ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಬ್ರಾಂಡಿಕ್ಸ್‍ನಲ್ಲಿ ನಡೆದಿದೆ.

    ಗ್ಯಾಸ್ ಸೋರಿಕೆಯಾದ ಬೆನ್ನಲ್ಲೇ ಕಾರ್ಮಿಕರು ಅಸ್ವಸ್ಥರಾಗ ತೊಡಗಿದರು. ಈ ಹಿನ್ನೆಲೆಯಲ್ಲಿ ಕಾರ್ಮಿಕರನ್ನು ಸ್ಥಳೀಯ ವೈದ್ಯಕೀಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು.

    POLICE JEEP

    ಘಟನೆ ಸಂಬಂಧಿಸಿ ಅನಕಪಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದು, ಬ್ರ್ಯಾಂಡಿಕ್ಸ್ ಆವರಣದಲ್ಲಿ ಅನಿಲ ಸೋರಿಕೆ ಸಂಭವಿಸಿದೆ. 50 ಜನರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ಹೊರಟ ಕ್ರೂಸರ್ ಪಲ್ಟಿ- ಓರ್ವ ಸಾವು, ಮೂವರಿಗೆ ಗಂಭೀರ ಗಾಯ

    ಜೂನ್ 3 ರಂದು ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ಸಂಭವಿಸಿದ್ದು, 200 ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಪ್ರಜ್ಞಾಹೀನರಾಗಿದ್ದರು. ಈ ಪ್ರದೇಶದಲ್ಲಿನ ಪೋರಸ್ ಲ್ಯಾಬೋರೇಟರೀಸ್ ಘಟಕದಿಂದ ಅಮೋನಿಯಾ ಅನಿಲ ಸೋರಿಕೆಯಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

    ಹೈದರಾಬಾದ್‍ನಲ್ಲಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯ ತಜ್ಞರ ತಂಡವು ಲ್ಯಾಬ್‍ಗೆ ಭೇಟಿ ನೀಡಿ ಅನಿಲ ಸೋರಿಕೆಯ ಕಾರಣವನ್ನು ನಿರ್ಧರಿಸಲು ಪರೀಕ್ಷೆಗಳನ್ನು ನಡೆಸಿತ್ತು. ಇದರಿಂದಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಲ್ಯಾಬ್ ಅನ್ನು ಮುಚ್ಚಲು ಆದೇಶಿಸಿದೆ. ಇದನ್ನೂ ಓದಿ: ಎಸ್‍ಡಿಪಿಐ, ಪಿಎಫ್‍ಐ ಅವರನ್ನ ಸಾಕ್ತಿರೋದೆ ಬಿಜೆಪಿ: ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ಸ್ನಾನಕ್ಕೆಂದು ಹೋದ 7 ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಾಪತ್ತೆ

    ಸ್ನಾನಕ್ಕೆಂದು ಹೋದ 7 ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಾಪತ್ತೆ

    ಹೈದರಾಬಾದ್: ಅನಕಾಪಲ್ಲಿಯ DIET ಎಂಜಿನಿಯರಿಂಗ್ ಕಾಲೇಜಿನ ಏಳು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಆಂಧ್ರಪ್ರದೇಶದ ಪುಡಿಮಡಕ ಬೀಚ್‍ನಲ್ಲಿ ನಾಪತ್ತೆಯಾಗಿದ್ದಾರೆ.

    ಶುಕ್ರವಾರ ಪೊಲೀಸರು ಇಬ್ಬರು ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿದ್ದು, ಅವರಲ್ಲಿ ಪವನ್ ಕುಮಾರ್ ಎಂಬ ಯುವಕ ಶವವಾಗಿ ಪತ್ತೆಯಾಗಿದ್ದು, ಮತ್ತೋರ್ವ ತೇಜ ಅವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ನಡೆದಂತಹ ಕೊಲೆಗಳು ರಾಜಕೀಯಕ್ಕಾಗಿ ನಡೆದಂತಹ ಕೊಲೆ: ಮಾಧುಸ್ವಾಮಿ

    ಸ್ನಾನ ಮಾಡಲೆಂದು ಏಳು ಮಂದಿ ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಜೋರಾಗಿ ಬಂದ ಅಲೆ ಅವರನ್ನು ಎಳೆದೊಯ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ಶನಿವಾರ ರಕ್ಷಣಾ ಅಧಿಕಾರಿಗಳು ಮತ್ತಿಬ್ಬರು ವಿದ್ಯಾರ್ಥಿಗಳ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಮೃತರನ್ನು ಜಸ್ವಂತ್ ಕುಮಾರ್ ಮತ್ತು ಪೆಂಟಕೋಟ ಗಣೇಶ್ ಎಂದು ಗುರುತಿಸಲಾಗಿದೆ.

    ಉಳಿದ ಮೂವರು ವಿದ್ಯಾರ್ಥಿಗಳಾದ ಕಂಪಾರ ಜಗದೀಶ್, ಬಯ್ಯಪುನೇನಿ ಸತೀಶ್ ಕುಮಾರ್ ಮತ್ತು ಪುಡಿ ರಾಮಚಂದು ಅವರನ್ನು ಹುಡುಕಲು ಹೆಲಿಕಾಪ್ಟರ್ ಮತ್ತು ಕೋಸ್ಟ್ ಗಾರ್ಡ್ ಬೋಟ್‍ಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ ಪ್ರಕರಣ – ಆರೋಗ್ಯ ಇಲಾಖೆಗೆ ಪತ್ರ ಬರೆದ ಡಿಹೆಚ್‍ಒ

    ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಮೃತ ವಿದ್ಯಾರ್ಥಿಗಳ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಅಗತ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 15ರ ಬಾಲಕನೊಂದಿಗೆ ಎರಡು ಮಕ್ಕಳ ತಾಯಿ ಜೂಟ್

    15ರ ಬಾಲಕನೊಂದಿಗೆ ಎರಡು ಮಕ್ಕಳ ತಾಯಿ ಜೂಟ್

    ಹೈದರಾಬಾದ್: ಎರಡು ಮಕ್ಕಳನ್ನು ಹೊಂದಿರುವ 30 ವರ್ಷದ ಮಹಿಳೆ 15 ವರ್ಷದ ಬಾಲಕನೊಂದಿಗೆ ಓಡಿ ಹೋಗಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.

    ಗುಡಿವಾಡ ಪಟ್ಟಣದಲ್ಲಿ ವಾಸಿಸುತ್ತಿದ್ದ ಮಹಿಳೆ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಬಾಲಕನೊಂದಿಗೆ ನಿಕಟ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. 8ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಜುಲೈ 19ರಂದು ನಾಪತ್ತೆಯಾದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ಕುರಿತಂತೆ ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಾಲದಲ್ಲೂ ಮರ್ಡರ್ ಆಗಿತ್ತು, ಸಿದ್ದರಾಮಯ್ಯನವರಿಗೆ ಪ್ರಶ್ನಿಸೋ ಹಕ್ಕಿಲ್ಲ: ಚಕ್ರವರ್ತಿ ಸೂಲಿಬೆಲೆ

    ಆರೋಪಿಯನ್ನು ಸ್ವಪ್ನಾ ಎಂದು ಗುರುತಿಸಲಾಗಿದ್ದು, ಬಾಲಕ ಹಾಗೂ ಮಹಿಳೆ ಒಂದೇ ಪ್ರದೇಶದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. ಆಕೆ ಎಂಟನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕನೊಂದಿಗೆ ನಿಕಟ ಸಂಬಂಧ ಬೆಳೆಸಿದ್ದಳು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ – ಬೆಳ್ಳಾರೆ, ಸುಬ್ರಹ್ಮಣ್ಯ ಠಾಣಾ ಎಸ್‍ಐಗಳ ಎತ್ತಂಗಡಿ

    ಜುಲೈ 26ರಂದು ಹೈದರಾಬಾದ್‍ನ ಬಾಲನಗರದಲ್ಲಿ ಮಹಿಳೆ ಮತ್ತು ಅಪ್ರಾಪ್ತ ಬಾಲಕ ಪತ್ತೆಯಾಗಿರುವ ವಿಚಾರ ತಿಳಿದು ಬಂದಿದೆ ಎಂದು ಗುಡಿವಾಡ ಟೌನ್ ಪೊಲೀಸ್ ಇನ್ಸ್‌ಪೆಕ್ಟರ್ ದುರ್ಗಾರಾವ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಾಂಜಾ ಗ್ಯಾಂಗ್ ಹಿಡಿಯಲು ಹೋಗಿ ಭೀಕರ ಅಪಘಾತ: ಸ್ವಗ್ರಾಮಕ್ಕೆ ಆಗಮಿಸಿದ ಪಿಎಸ್‍ಐ ಮೃತದೇಹ

    ಗಾಂಜಾ ಗ್ಯಾಂಗ್ ಹಿಡಿಯಲು ಹೋಗಿ ಭೀಕರ ಅಪಘಾತ: ಸ್ವಗ್ರಾಮಕ್ಕೆ ಆಗಮಿಸಿದ ಪಿಎಸ್‍ಐ ಮೃತದೇಹ

    ಬೀದರ್: ಗಾಂಜಾ ಗ್ಯಾಂಗ್ ಹಿಡಿಯಲು ಹೋಗಿದ್ದಾಗ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ ಬೀದರ್ ಮೂಲದ ಪಿಎಸ್‍ಐ ಮೃತದೇಹ ಇಂದು ಸ್ವ-ಗ್ರಾಮ ತಲುಪಿದೆ.

    ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ದಾಸರವಾಡಿ ಸ್ವ-ಗ್ರಾಮಕ್ಕೆ ಪಿಎಸ್‍ಐ ಅವಿನಾಶ್ ಯಾದವ್ ಮೃತದೇಹ ತಲುಪಿದೆ. ಆಂಧ್ರಪ್ರದೇಶದ ಚಿತ್ತೂರಿನಿಂದ ಆ್ಯಂಬುಲೇನ್ಸ್ ಮೂಲಕ ಸ್ವ-ಗ್ರಾಮಕ್ಕೆ ಮೃತದೇಹ ಇಂದು ತರಲಾಗಿದ್ದು, ಗ್ರಾಮಕ್ಕೆ ಪಿಎಸ್‍ಐ ಮೃತದೇಹ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿತ್ತು. ಇದನ್ನೂ ಓದಿ: ಗೂಗಲ್ ಕೋ-ಫೌಂಡರ್ ಪತ್ನಿ ಜೊತೆಗಿನ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದ ಮಸ್ಕ್ 

    ದಾಸರವಾಡಿ ಗ್ರಾಮದ ನಿವಾಸದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ದಾಸರವಾಡಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇಂದು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜನರು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಗ್ರಾಮದ ಜಮೀನಿನಲ್ಲಿ ಯಾದವ್ ಸಂಪ್ರದಾಯದಂತೆ ಪಿಎಸ್‍ಐ ಅಂತ್ಯಕ್ರಿಯೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಆಂಧ್ರದ ಜಾತ್ರೆಯಲ್ಲೂ ಅಪ್ಪು ಅಭಿಮಾನಿಗಳ ಪ್ರೀತಿ…

    ಆಂಧ್ರದ ಜಾತ್ರೆಯಲ್ಲೂ ಅಪ್ಪು ಅಭಿಮಾನಿಗಳ ಪ್ರೀತಿ…

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅಪ್ಪು ದೂರವಾಗಿ ಹಲವು ದಿನಗಳೇ ಕಳೆದಿದ್ದರೂ ಅವರ ನೆನಪುಗಳು ಅಭಿಮಾನಿಗಳನ್ನು ಬಿಟ್ಟು ಹೋಗಿಲ್ಲ ಎಂಬುದಕ್ಕೆ ಹಲವು ಸನ್ನಿವೇಶಗಳು ಸಾಕ್ಷಿಯಾಗುತ್ತಲೇ ಇವೆ.

    ಅಪ್ಪುಗೆ ಕರ್ನಾಟಕ ಮಾತ್ರವಲ್ಲದೇ ಪರಭಾಷೆಯಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಬೇರೆ ರಾಜ್ಯಗಳಲ್ಲೂ ಪುನೀತ್‌ಗೆ ನಮನ ಸಲ್ಲಿಸುವ ಕಾರ್ಯ ನಡೆಯುತ್ತಲೇ ಸಾಗಿದೆ. ನಾನಾ ರೀತಿಯಲ್ಲಿ ಅವರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಲಾಗುತ್ತಿದೆ. ಕೆಲವರು ಪುನೀತ್ ದಾರಿಯಲ್ಲಿ ಸಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಸಾಕಷ್ಟು ಮಂದಿ ಆಂಧ್ರ ಪ್ರದೇಶದಲ್ಲಿ ಪುನೀತ್ ಅವರ ಪ್ರತಿಮೆ ನಿರ್ಮಾಣ ಮಾಡುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲ ಆಂಧ್ರದಲ್ಲೂ ಅಭಿಮಾನಿಗಳು ಅಪ್ಪು ನಾಮ ಸ್ಮರಿಸುತ್ತಿದ್ದಾರೆ. ಇದನ್ನೂ ಓದಿ: ಶಿವಣ್ಣನನ್ನೇ ಹಿಂದಿಕ್ಕಿದ ಶಿವಣ್ಣನ ಅಭಿಮಾನಿ ಕಾಫಿನಾಡು ಚಂದು!

    ಹಾಗೆಯೇ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಮಂಡಲಂನ ಗುಡಿವಂಕ ಕಾವಡಿ ಉತ್ಸವದಲ್ಲಿ ಅಪ್ಪು ಅಭಿಮಾನಿಗಳು ಅಪ್ಪುವಿನ ದೊಡ್ಡ ಭಾವಚಿತ್ರ ಹಿಡಿದು ಕ್ರೇನ್‌ನಲ್ಲಿ ಕಾವಡಿ ಸಲ್ಲಿಸಿದ್ದಾರೆ.

    ಇತ್ತ ಶಿವಮೊಗ್ಗದ ಗುಡ್ಡೆಕಲ್‌ನಲ್ಲಿ ನಡೆಯುತ್ತಿರುವ ಸುಬ್ರಹ್ಮಣ್ಯ ಜಾತ್ರೆಯಲ್ಲೂ ಅಪ್ಪು ಭಾವಚಿತ್ರ ರಾರಾಜಿಸಿದೆ. ಹರೋಹರ ಜಾತ್ರೆಯಲ್ಲಿ ಅಪ್ಪು ಅಭಿಮಾನಿಗಳು ಅಪ್ಪು ಭಾವಚಿತ್ರ ಕೈಯಲ್ಲಿ ಹಿಡಿದು ಸುಬ್ರಹ್ಮಣ್ಯನ ದರ್ಶನ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]