Tag: Andhra Pradesh

  • ಮಗು ಏಕೆ ಕಪ್ಪಾಗಿದೆ ಎಂದು ಪತ್ನಿಯನ್ನೇ ಕೊಂದ ಪತಿ- ಎರಡೂವರೆ ವರ್ಷದ ಮಗುವಿನಿಂದ ಬಯಲಾಯ್ತು ರಹಸ್ಯ

    ಮಗು ಏಕೆ ಕಪ್ಪಾಗಿದೆ ಎಂದು ಪತ್ನಿಯನ್ನೇ ಕೊಂದ ಪತಿ- ಎರಡೂವರೆ ವರ್ಷದ ಮಗುವಿನಿಂದ ಬಯಲಾಯ್ತು ರಹಸ್ಯ

    ಅಮರಾವತಿ: ಪತ್ನಿ (Wife) ಹಾಗೂ ತನ್ನ ಬಣ್ಣ ಬಿಳಿಯದ್ದಾಗಿದ್ದರೂ ಮಗುವಿನ ಬಣ್ಣ ಮಾತ್ರ ಏಕೆ ಕಪ್ಪಾಗಿದೆ ಎಂದು ಪತ್ನಿಯ ಶೀಲ ಶಂಕಿಸಿ ಪತಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ.

    ಒಡಿಶಾದ ಉಮ್ಮರ್‌ಕೋಟ್‌ನ ಸಿಲಾಟಿಗಾಂವ್ ಗ್ರಾಮದ ಮಾಣಿಕ್ ಘೋಷ್ ಇಂತಹದ್ದೊಂದು ಕೃತ್ಯ ಎಸಗಿದ್ದಾನೆ. ಈತನ ಕೃತ್ಯಕ್ಕೆ ಬಲಿಯಾದವರು ಕರಗಾಂವ್ ಗ್ರಾಮದ ಲಿಪಿಕಾ ಮಂಡಲ್. ಮೊದಲು ಸಹಜ ಸಾವು ಎಂದೇ ಬಿಂಬಿತವಾಗಿದ್ದ ಈ ಸಾವಿನ ಪ್ರಕರಣ ನಂತರದಲ್ಲಿ ಕೊಲೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಕತಾರ್ ವಿಶ್ವದ ಬೆಸ್ಟ್ ಏರ್‌ಲೈನ್ – ಟಾಪ್ 20 ಸಂಸ್ಥೆಗಳಲ್ಲಿ ಕತಾರ್‌ಗೆ No-1 ಸ್ಥಾನ

    ಏನಿದು ಮರ್ಡರ್ ಮಿಸ್ಟ್ರಿ?: ಕಳೆದ 7 ವರ್ಷಗಳ ಹಿಂದೆ ಮಾಣಿಕ್ ಘೋಷ್ ಹಾಗೂ ಲಿಪಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ (Marriage) ನಂತರ ಇಬ್ಬರೂ ಉದ್ಯೋಗಕ್ಕಾಗಿ ಆಂಧ್ರಪ್ರದೇಶದ ಕಾಕಿನಾಡಕ್ಕೆ ವಲಸೆ ಬಂದಿದ್ದರು. ಎರಡೂವರೆ ವರ್ಷಗಳ ಹಿಂದೆ ಈ ದಂಪತಿಗೆ ಹೆಣ್ಣು ಮಗು (Daughter) ಹುಟ್ಟಿತ್ತು. ಆದರೆ ಇಬ್ಬರೂ ಬೆಳ್ಳಗಿದ್ದರೂ ಮಗು ಮಾತ್ರ ಏಕೆ ಕಪ್ಪಗೆ ಇದೆ ಎಂದು ಘೋಷ್ ಸದಾ ಪತ್ನಿಯ ಬಗ್ಗೆ ಸಂದೇಹಪಡುತ್ತಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಪತಿಯ ದೌರ್ಜನ್ಯದಿಂದ ಬೇಸತ್ತ ಲಿಪಿಕಾ ತನ್ನ ತವರು ಮನೆಗೆ ಬಂದಿದ್ದಳು. ನಂತರ ಕುಟುಂಬಸ್ಥರು ಇಬ್ಬರನ್ನೂ ಸಮಾಧಾನಪಡಿಸಿ ವಾಪಸ್ ಕಳುಹಿಸಿದ್ದರು. ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಮೋದಿಯವರಿಂದ್ಲೇ ಧಾರವಾಡ IIT ಕ್ಯಾಂಪಸ್‌ ಉದ್ಘಾಟನೆ – ಜೋಶಿ

    ಆದರೆ ಇದೇ ತಿಂಗಳ 18ರಂದು ರಾತ್ರಿ ಲಿಪಿಕಾಗೆ ಮೂರ್ಛೆ ಹೋಗಿರುವುದಾಗಿ ಹೇಳಿದ್ದ ಪತಿ, ಅವರನ್ನು ಆಸ್ಪತ್ರೆಗೆ (Hospital) ಕರೆದೊಯ್ದಿದ್ದ. ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು. ಮೊದಲು ಇದು ಸಹಜ ಸಾವು ಎನ್ನಲಾಗಿತ್ತು. ನಂತರ ಕುತ್ತಿಗೆಯಲ್ಲಿ ಗಾಯದ ಗುರುತು ಕಂಡುಬಂದಿದ್ದು ಸಂದೇಹಕ್ಕೆ ಎಡೆ ಮಾಡಿಕೊಟ್ಟಿತ್ತು. ಆದರೆ ಪತಿಯೇ ಈ ಕೊಲೆ ಮಾಡಿದ್ದಾನೆ ಎಂಬ ಬಗ್ಗೆ ಪುರಾವೆಗಳು ಇರಲಿಲ್ಲ. ನಂತರ ಸಾಕ್ಷಿ ಹೇಳಿದ್ದೆ ಪುಟ್ಟ ಕಂದಮ್ಮ. ಅಮ್ಮನ ಸಾವಿನ ಬಳಿಕ ಅಜ್ಜಿ ಮನೆಗೆ ಬಂದಿದ್ದ ಎರಡೂವರೆ ವರ್ಷದ ಮಗು, ಅಜ್ಜ-ಅಜ್ಜಿಗೆ ಅಂದು ತಾನು ಕಂಡಿರುವ ದೃಶ್ಯ ವಿವರಿಸಿದೆ. ಅಮ್ಮನ ಗಂಟಲನ್ನು ಎರಡೂ ಕೈಗಳಿಂದ ಅಪ್ಪ ಹಿಡಿದುಕೊಂಡಿದ್ದು, ಅಮ್ಮ ಒದ್ದಾಡಿದ್ದು, ನಂತರ ಅಮ್ಮ ಏನೂ ಮಾತನಾಡದೇ ಇದ್ದುದನ್ನು ಮಗು ವಿವರಿಸಿದೆ.

    ಅಲ್ಲಿಯವರೆಗೂ ಮಗಳು ಪ್ರಜ್ಞೆ ತಪ್ಪಿ ಸತ್ತಿದ್ದಾಳೆ ಎಂದುಕೊಂಡಿದ್ದ ಅವರಿಗೆ ಅಳಿಯನೇ ಮಗಳನ್ನು ಕೊಂದಿದ್ದಾನೆ ಎಂಬುದು ಮೊಮ್ಮಗಳ ಮಾತಿನ ಮೂಲಕ ಅರ್ಥವಾಗಿ ಪೊಲೀಸರಿಗೆ ದೂರು ದಾಖಲು ಮಾಡಿದ್ದಾರೆ. ಪೊಲೀಸರ (Police) ಬಳಿ ಕೂಡ ಮಗು ಅಂದು ನಡೆದ ಘಟನೆ ವಿವರಿಸಿದೆ. ಪತಿಯನ್ನು ಪೊಲೀಸರು ಬಂಧಿಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ಲಿನಿಕ್‌ನಲ್ಲಿ ಬೆಂಕಿ – ವೈದ್ಯ, ಆತನ ಇಬ್ಬರು ಮಕ್ಕಳು ದಾರುಣ ಸಾವು

    ಕ್ಲಿನಿಕ್‌ನಲ್ಲಿ ಬೆಂಕಿ – ವೈದ್ಯ, ಆತನ ಇಬ್ಬರು ಮಕ್ಕಳು ದಾರುಣ ಸಾವು

    ಅಮರಾವತಿ: ಕ್ಲಿನಿಕ್ (Clinic) ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿ ವೈದ್ಯ (Doctor) ಹಾಗೂ ಆತನ ಇಬ್ಬರು ಮಕ್ಕಳು (Children)ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ (Andhra Pradesh) ತಿರುಪತಿ ಜಿಲ್ಲೆ ರೇಣಿಗುಂಟಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

    ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ವೈದ್ಯನ ಮನೆಯ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ರೇಣಿಗುಂಟಾ ಪೊಲೀಸರು (Renigunta Police) ತಿಳಿಸಿದ್ದಾರೆ.

    ವರದಿಗಳ ಪ್ರಕಾರ ವೈದ್ಯನ ಮನೆಯ ನೆಲದ ಮಹಡಿಯನ್ನು ಕ್ಲಿನಿಕ್ ಆಗಿ ಮಾಡಿಕೊಳ್ಳಲಾಗಿತ್ತು. ಕಟ್ಟಡದ ಮೊದಲ ಹಾಗೂ 2ನೇ ಮಹಡಿಯಲ್ಲಿ ವೈದ್ಯನ ಕುಟುಂಬ ವಾಸವಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆಯಿಂದ ಕ್ರಮ: ಸುಧಾಕರ್

    ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ರಕ್ಷಣಾ ಕಾರ್ಯದಲ್ಲಿ ವೈದ್ಯನ ಪತ್ನಿ ಹಾಗೂ ತಾಯಿಯನ್ನು ರಕ್ಷಿಸಲಾಗಿದೆ. ಗಂಭೀರ ಸುಟ್ಟ ಗಾಯಗಳಿಂದ ಡಾ. ರವಿ ಶಂಕರ್, ಅವರ 12 ವರ್ಷದ ಮಗ ಹಾಗೂ 7 ವರ್ಷದ ಮಗಳು ಸಾವನ್ನಪ್ಪಿದ್ದಾರೆ.

    ಘಟನೆಯ ಬಗ್ಗೆ ರೇಣಿಗುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: PFI ಶಂಕಿತರ ಮೊಬೈಲ್‌ನಲ್ಲಿತ್ತು ಸಾಕ್ಷಿಗಳನ್ನೇ ನಾಶ ಮಾಡುವ ಆಪ್

    Live Tv
    [brid partner=56869869 player=32851 video=960834 autoplay=true]

  • ಆಂಧ್ರ, ತೆಲಂಗಾಣದ 23 ಸ್ಥಳಗಳಲ್ಲಿ NIA ರೇಡ್ – PFI ಸದಸ್ಯರ ವಿಚಾರಣೆ

    ಆಂಧ್ರ, ತೆಲಂಗಾಣದ 23 ಸ್ಥಳಗಳಲ್ಲಿ NIA ರೇಡ್ – PFI ಸದಸ್ಯರ ವಿಚಾರಣೆ

    ಅಮರಾವತಿ: ರಾಷ್ಟ್ರೀಯ ತನಿಖಾ ದಳ(NIA) ಅಧಿಕಾರಿಗಳು ಭಾನುವಾರ ಆಂಧ್ರಪ್ರದೇಶದ(Andhra Pradesh) ವಿವಿಧ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ತೆಲಂಗಾಣದ(Telangana) ನಿಜಾಮಾಬಾದ್ ಜಿಲ್ಲೆಯ ಮನೆಯೊಂದರ ಮೇಲೆಯೂ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಸೋಮವಾರ ಹೈದರಾಬಾದ್‌ನಲ್ಲಿರುವ ಎನ್‌ಐಎ ಕಚೇರಿಗೆ ಭೇಟಿ ನೀಡುವಂತೆ ವ್ಯಕ್ತಿಯೊಬ್ಬರಿಗೆ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ – ವಿಶ್ವವಿದ್ಯಾಲಯದಲ್ಲಿ ಭುಗಿಲೆದ್ದ ಪ್ರತಿಭಟನೆ

    ಎನ್‌ಐಎ ಅಧಿಕಾರಿಗಳ 23 ತಂಡಗಳು ನಿಜಾಮಾಬಾದ್, ಕರ್ನೂಲ್, ಗುಂಟೂರು ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿವೆ. ಭಯೋತ್ಪಾದನಾ ಚಟುವಟಿಕೆಗಳ ಮಾಹಿತಿಗೆ ಸಂಬಂಧಿಸಿದಂತೆ ದಾಳಿ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

    ಶೋಧದ ವೇಳೆ ಅಧಿಕಾರಿಗಳು ಈಗಾಗಲೇ ಪಿಎಫ್‌ಐ ಜಿಲ್ಲಾ ಸಂಚಾಲಕ ಶಾದುಲ್ಲಾ ಮತ್ತು ಸದಸ್ಯರಾದ ಮೊಹಮ್ಮದ್ ಇಮ್ರಾನ್ ಮತ್ತು ಮೊಹಮ್ಮದ್ ಅಬ್ದುಲ್ ಮೊಬಿನ್ ಅವರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಕರಾಟೆ ಕಲಿಸುವ ನೆಪದಲ್ಲಿ ಹಿಂಸಾಚಾರ ಮತ್ತು ಕಾನೂನುಬಾಹಿರ ತರಬೇತಿಗೆ ಪ್ರಚೋದನೆ ನೀಡಿರುವ ಮಾಹಿತಿಯ ಮೇರೆಗೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಯುಪಿ ಸಚಿವರಿಗೆ 500 ರೂ. ದಂಡ

    Live Tv
    [brid partner=56869869 player=32851 video=960834 autoplay=true]

  • ಹಳೆಯ ಬಾವಿಯೊಳಗೆ ಉಸಿರುಗಟ್ಟಿ ನಾಲ್ವರ ಸಾವು

    ಹಳೆಯ ಬಾವಿಯೊಳಗೆ ಉಸಿರುಗಟ್ಟಿ ನಾಲ್ವರ ಸಾವು

    ಅಮರಾವತಿ: ಹಳೆಯ ಬಾವಿಯೊಳಗೆ(well) ತಂದೆ, ಮಗ ಸೇರಿದಂತೆ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ(Andhra Pradesh) ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ. ಮಚಲಿಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಬಂಟುಮಿಲ್ಲಿ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಸ್ಥಳೀಯ ನಿವಾಸಿ ರಾಮರಾವ್(55) ಅವರು ನೀರಿನ ಹರಿವನ್ನು ಸರಿಪಡಿಸುವ ಸಲುವಾಗಿ ಹೂಳು ತೆಗೆಯಲು ಆಳವಾಗಿದ್ದ ಹಳೆಯ ಬಾವಿಗೆ ಇಳಿದಿದ್ದರು. ಆದರೆ ಈ ವೇಳೆ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬಳಿಕ ಅವರ ಮಗ ಲಕ್ಷ್ಮಣ್(33) ರಾಮರಾವ್ ಅವರನ್ನು ರಕ್ಷಿಸುವ ಸಲುವಾಗಿ ಬಾವಿಗೆ ಹಾರಿದ್ದಾರೆ. ಆದರೆ ಅವರಿಗೂ ಅದೇ ವಿಧಿ ಎದುರಾಗಿ, ಬಾವಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಮ್ಮ ಪ್ರಯತ್ನದಿಂದಾಗಿ ಚೀತಾ ಭಾರತಕ್ಕೆ ಬಂದಿವೆ: ಕಾಂಗ್ರೆಸ್

    ಬಾವಿಗೆ ಇಳಿದಿದ್ದ ತಂದೆ, ಮಗನನ್ನು ರಕ್ಷಿಸಲು ಮುಂದಾದ ಗ್ರಾಮದ ಶ್ರೀನಿವಾಸ್ ಹಾಗೂ ರಂಗ ಬಾವಿಗೆ ಇಳಿದಿದ್ದರು. ಆದರೆ ಬಾವಿ ಪ್ರವೇಶಿಸಿದ ಯಾರೊಬ್ಬರೂ ಬದುಕಲು ಸಾಧ್ಯವಾಗಲಿಲ್ಲ. ಬಾವಿಯಲ್ಲಿ ಉಸಿರುಗಟ್ಟಿ ನಾಲ್ವರು ಸಾವನ್ನಪ್ಪಿದ ಮಾಹಿತಿಯನ್ನು ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ: ಗನ್ ಹಿಡಿದು ಮಕ್ಕಳನ್ನು ಮದರಸಾಗೆ ಕಳುಹಿಸಿದ ವ್ಯಕ್ತಿ

    ಘಟನಾ ಸ್ಥಳಕ್ಕೆ ಆಗಮಿಸಿದ ಆಂಧ್ರಪ್ರದೇಶದ ವಸತಿ ಸಚಿವ ಜೋಗಿ ರಮೇಶ್, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಘಟನೆಯ ಬಗ್ಗೆ ಬಂಟುಮಿಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಿರುಮಲಕ್ಕೆ ಭಾವಿ ಸೊಸೆಯೊಂದಿಗೆ ಮುಖೇಶ್ ಅಂಬಾನಿ ಭೇಟಿ – ದೇವಾಲಯಕ್ಕೆ 1.5 ಕೋಟಿ ದೇಣಿಗೆ

    ತಿರುಮಲಕ್ಕೆ ಭಾವಿ ಸೊಸೆಯೊಂದಿಗೆ ಮುಖೇಶ್ ಅಂಬಾನಿ ಭೇಟಿ – ದೇವಾಲಯಕ್ಕೆ 1.5 ಕೋಟಿ ದೇಣಿಗೆ

    ಹೈದರಾಬಾದ್: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಶುಕ್ರವಾರ ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

    ಈ ವೇಳೆ ಅಂಬಾನಿ ಅವರ ಜೊತೆಗೆ ಪುತ್ರ ಅನಂತ್ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ರಾಧಿಕಾ ಮರ್ಚೆಂಟ್ ಮತ್ತು ರಿಲಯನ್ಸ್ ರಿಟೇಲ್ ಲಿಮಿಟೆಡ್ ನಿರ್ದೇಶಕ ಮನೋಜ್ ಮೋದಿ ಉಪಸ್ಥಿತರಿದ್ದರು. ಆಂಧ್ರಪ್ರದೇಶದ ತಿರುಮಲ ವೆಂಕಟೇಶ್ವರ ದೇವಾಲಯದ ಜೊತೆಗೆ ದೇವಸ್ಥಾನಗಳನ್ನು ನಿರ್ವಹಿಸುತ್ತಿರುವ ಸ್ವತಂತ್ರ ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನಕ್ಕೆ 1.5 ಕೋಟಿ ರೂಪಾಯಿಯನ್ನು ನೀಡಿದರು. ಇದನ್ನೂ ಓದಿ: ಸಿದ್ದು, ಡಿಕೆಶಿ ಮಧ್ಯೆ ಮತ್ತೆ ಪವರ್ ವಾರ್ – ಅತ್ತ ಭಾರತ್ ಜೋಡೋ, ಇತ್ತ ರಾಜ್ಯದಲ್ಲಿ ಕಾಂಗ್ರೆಸ್ ಜೋಡೋ ಸ್ಥಿತಿ!

    ಮುಖೇಶ್ ಅಂಬಾನಿ ಅವರು ತಿರುಮಲಕ್ಕೆ ಭೇಟಿ ನೀಡಿರುವ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೀಡಿಯೋದಲ್ಲಿ ಮುಖೇಶ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ದೇವಾಲಯದ ಆವರಣದಲ್ಲಿ ಆನೆಗೆ ತಿಂಡಿ ನೀಡಿ ಅದರ ಆಶೀರ್ವಾದ ಪಡೆಯುತ್ತಿರುವುದನ್ನು ಕೂಡ ನೋಡಬಹುದಾಗಿದೆ. ಇದನ್ನೂ ಓದಿ: ಟ್ರಕ್ – ಬಸ್ ನಡುವೆ ಭೀಕರ ಅಪಘಾತ – 6 ಸಾವು, 20 ಮಂದಿಗೆ ಗಾಯ

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖೇಶ್ ಅಂಬಾನಿ ಅವರು, ವೆಂಕಟೇಶ್ವರನ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಬಂದಿದ್ದೇನೆ. ಪ್ರತಿ ವರ್ಷ ದೇವಾಲಯ ಸುಧಾರಣೆ ಹೊಂದುತ್ತಿದೆ ಮತ್ತು ಉತ್ತಮವಾಗುತ್ತಿದೆ. ಇದು ಭಾರತೀಯರಾದ ನಮಗೆ ಹೆಮ್ಮೆ ಪಡುವಂತಹ ವಿಚಾರ. ನಿಮ್ಮೆಲ್ಲರ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಈ ಮುನ್ನ ಸೋಮವಾರ ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್‍ಜಿ ದೇವಸ್ಥಾನಕ್ಕೂ ಮುಕೇಶ್ ಅಂಬಾನಿ ಅವರು ಭೇಟಿ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯನ್ನು ವೇಶ್ಯಾಗೃಹಕ್ಕೆ ಹೋಲಿಸಿ ಆಕ್ರೋಶ ಹೊರಹಾಕಿದ ಸಿಪಿಐ ಮುಖಂಡ

    ‘ಬಿಗ್ ಬಾಸ್’ ಮನೆಯನ್ನು ವೇಶ್ಯಾಗೃಹಕ್ಕೆ ಹೋಲಿಸಿ ಆಕ್ರೋಶ ಹೊರಹಾಕಿದ ಸಿಪಿಐ ಮುಖಂಡ

    ಬಿಗ್ ಬಾಸ್ (Bigg Boss) ಕುರಿತಾಗಿ ಅನೇಕರು ಈ ಹಿಂದೆಯೂ ಬೇಸರ ವ್ಯಕ್ತ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಪರ್ಧಿಗಳ ಆಯ್ಕೆಯ ಕುರಿತಾಗಿಯೂ ಟ್ರೋಲ್ ಮಾಡಲಾಗಿದೆ. ಆದರೆ, ಬಿಗ್ ಬಾಸ್ ಮನೆಯನ್ನು ವೇಶ್ಯಾಗೃಹಕ್ಕೆ ಹೋಲಿಸುವಂತಹ ಪ್ರಸಂಗಗಳು ನಡೆದಿರಲಿಲ್ಲ. ಇಂಥದ್ದೊಂದು ಘಟನೆಗೆ ತೆಲುಗು (Telugu) ಬಿಗ್ ಬಾಸ್ ಅಂಗಳದಲ್ಲಿ ನಡೆದಿದೆ. ಕಳೆದ ವಾರದಿಂದ ಶುರುವಾಗಿರುವ ತೆಲುಗು ಬಿಗ್ ಬಾಸ್ ಅನ್ನು ಆಂಧ್ರದ (Andhra Pradesh) ಸಿಪಿಐ (CPI) ಮುಖಂಡ ನಾರಾಯಣ್ ಅವರು ವೇಶ್ಯಾಗೃಹಕ್ಕೆ (Brothel House) ಹೋಲಿಸಿದ್ದಾರೆ.

    ತೆಲುಗು ಬಿಗ್ ಬಾಸ್ ಅನ್ನು ನಾಗಾರ್ಜುನ ನಡೆಸಿಕೊಡುತ್ತಿದ್ದಾರೆ. ಅವರಿಗೂ ಹಲವು ಪ್ರಶ್ನೆಗಳನ್ನು ಮಾಡಿರುವ ನಾರಾಯಣ್ (Narayan), ‘ಕುಟುಂಬವಲ್ಲದ, ಅಣ್ಣ ತಮ್ಮ, ಅಕ್ಕ ತಂಗಿ, ಅಣ್ಣ ತಂಗಿ ಹೀಗೆ ಯಾವುದೂ ಅಲ್ಲದ, ಪಡ್ಡೆಗಳನ್ನು ತಂದು ಒಂದೇ ಮನೆಯಲ್ಲಿ ಕೂಡಿ ಹಾಕುತ್ತೀರಿ. ಅವರೇನೂ ಮಹಾ ಸಾಧಕರಲ್ಲ. ಅಂತವರು ಸಂಬಂಧವೇ ಇಲ್ಲದ ಮನೆಯಲ್ಲಿ ಒಂದಾದರೆ ಏನಾಗುತ್ತೆ ಹೇಳಿ? ನನಗೆ ಬಿಗ್ ಬಾಸ್ ಮನೆ ವೇಶ್ಯಾಗೃಹದಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.

    ನಾಗಾರ್ಜುನ್ (Nagarjuna) ಅವರಿಗೆ ಪ್ರಶ್ನೆ ಕೇಳುತ್ತಾ, ‘ನಾಗಣ್ಣ ಬಿಗ್ ಬಾಸ್ ಮನೆಯಲ್ಲಿ ಮದುವೆಯಾದವರಿಗೆ ಲೈಸೆನ್ಸ್ ಕೊಟ್ಟಿದ್ದೀರಿ. ಏನೆಲ್ಲ ಮಾಡಬೇಕೋ ಅದಕ್ಕೆಲ್ಲ ವ್ಯವಸ್ಥೆ ಮಾಡಿದ್ದೀರಿ. ಶೋಭನಾ ರೂಮ್ ಕೂಡ ರೆಡಿಯಿದೆ. ಆದರೆ, ಮದುವೆ ಆಗದೇ ಇರೋರ ಕಥೆ ಏನು? ನೂರು ದಿನಗಳ ಕಾಲ ಅವರು ಏನು ಮಾಡಬೇಕು? ಎಂದು ಕೇಳಿದ್ದಾರೆ. ನಾರಾಯಣ್ ಅವರು ಮಾತನಾಡಿದ ವಿಡಿಯೋ ತೆಲುಗು ಕಿರುತೆರೆ ಜಗತ್ತಿನಲ್ಲಿ ಸಖತ್ ವೈರಲ್ ಆಗಿದೆ.

    ಇಂತಹ ಅಸಹ್ಯಗಳನ್ನು ಒಟ್ಟು ಮಾಡಿ ಸಮಾಜದ ಮನಸ್ಥಿತಿಯನ್ನು ಹಾಳು ಮಾಡುತ್ತಿದ್ದೀರಿ. ಕೂಡಲೇ ಇಂತಹ ಶೋ ನಿಲ್ಲಿಸಬೇಕು ಎಂದು ಅವರು ಆಗ್ರಹ ಪಡಿಸಿದ್ದಾರೆ. ನಾರಾಯಣ್ ಅವರ ಈ ಮಾತಿಗೆ ಭಾರೀ ಬೆಂಬಲ ಕೂಡ ವ್ಯಕ್ತವಾಗಿದೆ. ಬಿಗ್ ಬಾಸ್ ಮನೆಯನ್ನು ಸ್ವಚ್ಚ ಮಾಡುವಂತಹ ಕೆಲಸಕ್ಕೆ ನಾರಾಯಣ್ ಕೈ ಹಾಕಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪರೀಕ್ಷೆ ಬರೆಯಲು ಈಜಿ ಚಂಪಾವತಿ ನದಿ ದಾಟಿದ ಯುವತಿ

    ಪರೀಕ್ಷೆ ಬರೆಯಲು ಈಜಿ ಚಂಪಾವತಿ ನದಿ ದಾಟಿದ ಯುವತಿ

    ಹೈದರಾಬಾದ್: ಪರೀಕ್ಷೆ ಬರೆಯುವ ಸಲುವಾಗಿ ಆಂಧ್ರಪ್ರದೇಶದ ವಿಜಯನಗರಂನಲ್ಲಿ 21 ವರ್ಷದ ಯುವತಿಯೊಬ್ಬಳು ಚಂಪಾವತಿ (Champavathi River) ನದಿಯನ್ನು ಈಜಿಕೊಂಡು ದಾಟಿದ್ದಾಳೆ.

    ಯುವತಿಯನ್ನು ತಡ್ಡಿ ಕಲಾವತಿ(Kalavathi) ಎಂದು ಗುರುತಿಸಲಾಗಿದ್ದು, ಈಕೆ ಗಜಪತಿನಗರ ಮಂಡಲದ (Gajapathinagaram Mandal) ಮರಿವಲಸ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಶನಿವಾರ ನಡೆಯಬೇಕಿದ್ದ ಪರೀಕ್ಷೆಗೆ ಹಾಜರಾಗಲೇ ಬೇಕೆಂದು ಜೀವವನ್ನೇ ಪಣಕ್ಕಿಟ್ಟು ಕಲಾವತಿ ತನ್ನ ಇಬ್ಬರು ಸಹೋದರರ ನೆರವಿನೊಂದಿಗೆ ಶುಕ್ರವಾರ ಪ್ರವಾಹಕ್ಕೆ ಪೀಡಿತ ಚಂಪಾವತಿ ನದಿಯನ್ನು ದಾಟಿದ್ದಾಳೆ.

    35 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ಕಲಾವತಿಯ ಸಹೋದರರು ಅವಳನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ನದಿಯ ಇನ್ನೊಂದು ಬದಿಗೆ ಸ್ಥಳಾಂತರಿಸುವುದನ್ನು ಕಾಣಬಹುದು, ಆದರೆ ಆಕೆ ಹರಿಯುವ ನೀರಿನಲ್ಲಿ ಹೋಗಲು ಹೆಣಗಾಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಸಂಕಷ್ಟದಲ್ಲಿರೋ ಜನರಿಗೆ ಸ್ಪಂದಿಸೋದು ಬಿಟ್ಟು ಡಾನ್ಸ್ ಮಾಡ್ತಿದ್ದಾರೆ : ಸಿದ್ದರಾಮಯ್ಯ ಕಿಡಿ

    ಭಾರೀ ಮಳೆಯಿಂದಾಗಿ, ಉತ್ತರ ಕರಾವಳಿಯ ಹಲವಾರು ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಎಲ್ಲಾ ಸಾರಿಗೆ ವ್ಯವಸ್ಥೆಗಳನ್ನು ಕಡಿತಗೊಳಿಸಲಾಗಿದೆ. ಈ ಹಿನ್ನೆಲೆ ಯುವತಿಯನ್ನು ಆಕೆಯ ಸಹೋದರರು ಪರೀಕ್ಷೆ ಬರೆಯಲು ನದಿ ದಾಟಿಸಿ ಸಹಾಯ ಮಾಡಬೇಕೆಂದು ನಿರ್ಧರಿಸಿದರು. ಇದನ್ನೂ ಓದಿ: ಮೋದಿ ಪ್ರಧಾನಿಯಾಗಿ ಇರುವವರೆಗೂ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಬಿಡಲ್ಲ, ಇದು ನಮ್ಮ ಶಪಥ – ಬಿಎಸ್‌ವೈ

    Live Tv
    [brid partner=56869869 player=32851 video=960834 autoplay=true]

  • 14ರ ಬಾಲಕಿಯ ಕತ್ತು ಸೀಳಿ, ಮುಖಕ್ಕೆ ಆ್ಯಸಿಡ್ ಹಾಕಿದ ಪಾಪಿ

    14ರ ಬಾಲಕಿಯ ಕತ್ತು ಸೀಳಿ, ಮುಖಕ್ಕೆ ಆ್ಯಸಿಡ್ ಹಾಕಿದ ಪಾಪಿ

    ಅಮರಾವತಿ: ವ್ಯಕ್ತಿಯೊಬ್ಬ 14 ವರ್ಷದ ಬಾಲಕಿಯ ಕತ್ತು ಸೀಳಿ, ಆಕೆಯ ಮುಖಕ್ಕೆ ಆ್ಯಸಿಡ್ ಹಾಕಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

    ಭೀಕರ ಕೃತ್ಯ ಎಸಗಿರುವ ಆರೋಪಿ ಬಾಲಕಿಯ ಕುಟುಂಬದ ಹತ್ತಿರದ ಸಂಬಂಧಿ ಎಂದು ಹೇಳಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆ್ಯಸಿಡ್ ದಾಳಿಗೆ ತುತ್ತಾದ ಬಾಲಕಿಯನ್ನು ಮೊದಲಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ.

    ಘಟನೆಯೇನು?
    ವರದಿಗಳ ಪ್ರಕಾರ ಕೃತ್ಯ ಎಸಗಿರುವ ಆರೋಪಿ ಸಂತ್ರಸ್ತೆಯ ಹತ್ತಿರದ ಸಂಬಂಧಿಯಾಗಿದ್ದು, ಹಣದ ಆಸೆಯಿಂದ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾನೆ. ಸೋಮವಾರ ಮಧ್ಯಾಹ್ನ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಮದ್ಯದ ಅಮಲಿನಲ್ಲಿದ್ದ ಆತ ಕಳ್ಳತನಕ್ಕಾಗಿ ಬಂದಿದ್ದ. ಮನೆಯೊಳಗೆ ಹೊಕ್ಕ ಆರೋಪಿ ಬಾಲಕಿ ಮೇಲೆ ಆ್ಯಸಿಡ್ ದಾಳಿ ನಡೆಸಿ, ಕತ್ತು ಕುಯ್ದಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಚೀನಾ ಭೂಕಂಪ – ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ವೀಡಿಯೋಗಳು

    ಘಟನೆ ಬಗ್ಗೆ ತಿಳಿದ ಸ್ಥಳೀಯರು ತಕ್ಷಣವೇ ಬಾಲಕಿಯ ತಂದೆಗೆ ಕರೆ ಮಾಡಿ, ಮಾಹಿತಿ ನೀಡಿದ್ದಾರೆ. ಬಳಿಕ 108 ಸಹಾಯವಾಣಿಗೆ ಕರೆ ಮಾಡಿ, ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    CRIME

    ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಭಾರತೀಯ ದಂಡಸಂಹಿತೆ(ಐಪಿಸಿ) ಹಾಗೂ ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ್ಯಸಿಡ್ ದಾಳಿಯಿಂದಾಗಿ ಬಾಲಕಿಯ ಮುಖ ಸುಟ್ಟು ಹೋಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಭೀಮಾತೀರದಲ್ಲಿ ಮತ್ತೆ ರಕ್ತಪಾತ – ಅಣ್ಣನನ್ನೇ ಬರ್ಬರವಾಗಿ ಹತ್ಯೆಗೈದ ತಮ್ಮ

    Live Tv
    [brid partner=56869869 player=32851 video=960834 autoplay=true]

  • ಬೆಂಗ್ಳೂರಲ್ಲಿ ರಾಯಲ್ ಎನ್‍ಫೀಲ್ಡ್ ಬೈಕ್ ಕದ್ದು ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

    ಬೆಂಗ್ಳೂರಲ್ಲಿ ರಾಯಲ್ ಎನ್‍ಫೀಲ್ಡ್ ಬೈಕ್ ಕದ್ದು ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

    ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಬುಲೆಟ್ ಬೈಕ್‍ಗಳನ್ನು ಕದ್ದು ಆಂಧ್ರಪ್ರದೇಶಲ್ಲಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗೊಂದನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಬಂಧಿಸಿ ಒಂದು ಕೋಟಿ ರೂ. ಮೌಲ್ಯದ ಬುಲೆಟ್ ಬೈಕ್‍ಗಳನ್ನು ಸೀಜ್‌ ಮಾಡಿಕೊಂಡು ಬಂದಿದ್ದಾರೆ.

    ಹೌದು ಮೊನ್ನೆ ಮೊನ್ನೆ ತಾನೇ ಇಬ್ಬರು ಇಂಜಿನಿಯರಿಂಗ್ ಸ್ಟೂಡೆಂಟ್ಸ್‌ಗಳನ್ನು ಅರೆಸ್ಟ್ ಮಾಡಿ ಅವರಿಂದ 12 ಬುಲೆಟ್ ಬೈಕ್‍ಗಳನ್ನು ಸೀಜ್ ಮಾಡಿಕೊಂಡಿದ್ದ ಬಾಗೇಪಲ್ಲಿ ಪೊಲೀಸರು ಈಗ 06 ಮಂದಿ ಬೈಕ್ ಮೆಕ್ಯಾನಿಕ್‍ಗಳನ್ನು ಅರೆಸ್ಟ್ ಮಾಡಿ ಅವರಿಂದಲೂ 18 ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕ್‍ಗಳು ಸೇರಿದಂತೆ 5 ಡಿಯೋ, 3 ಬಜಾಜ್ ಪಲ್ಸಾರ್, 1 ಕೆಟಿಎಂ ಡ್ಯೂಕ್, 1 ಯಮಹಾ ಆರ್ ಒನ್ ಫೈವ್, 1 ಅಕ್ಸೆಸ್, ಹಾಗೂ 1 ಪ್ಯಾಷನ್ ಪ್ರೋ ಬೈಕ್ ಸೇರಿ ಒಟ್ಟು 30 ಬೈಕ್‍ಗಳನ್ನು ಸೀಜ್‌ ಮಾಡಿದ್ದಾರೆ. ಇದರಲ್ಲಿ ಬಹುತೇಕ ಬೈಕ್‍ಗಳು ಬೆಂಗಳೂರು ನಗರದಲ್ಲೇ ಕದ್ದ ಬೈಕ್‍ಗಳಾಗಿದ್ದು ಕದ್ದ ಬೈಕ್‍ಗಳನ್ನು ಕಳ್ಳರು ಆಂಧ್ರದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಮಜಾ ಮಾಡ್ತಿದ್ರು ಅಂತ ತಿಳಿದುಬಂದಿದೆ. ಎರಡು ಪ್ರಕರಣಗಳಲ್ಲಿ ಸರಿಸುಮಾರು 1 ಕೋಟಿ ರೂ. ಮೌಲ್ಯದ 46ಕ್ಕೂ ಹೆಚ್ಚು ಬೈಕ್‍ಗಳನ್ನು ಬಾಗೇಪಲ್ಲಿ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಮದುವೆಯಾಗೋ ನೆಪದಲ್ಲಿ ಕಾರ್ಯಕರ್ತೆ ಮೇಲೆ ತೆಲಂಗಾಣದ ಕಾಂಗ್ರೆಸ್ ಮುಖಂಡನಿಂದ ಅತ್ಯಾಚಾರ

    ಬಂಧಿತ ಕಳ್ಳರು ಯಾರು?
    ಅಂದಹಾಗೆ ಆಂಧ್ರಪ್ರದೇಶದ ಮೂಲದ ಕಾಳಸಮುದ್ರಂ ಗ್ರಾಮದ ಷೇಕ್‍ಮೌಲಾ, ಇಮ್ರಾನ್ ಪಠಾಣ್, ಖಾದರ್ ಭಾಷಾ, ಷಾಹಿದ್, ಹಾಗೂ ಮಹಮದ್ ಆಲಿ, ವೆಂಗಮುನಿ ಬಂಧಿತರಾಗಿದ್ದು, ಬಂಧಿತರು ಬೈಕ್ ಮೆಕ್ಯಾನಿಕ್‍ಗಳಾಗಿದ್ದಾರೆ. ಬುಲೆಟ್ ಬೈಕ್‍ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ರು. ಅದ್ರಲ್ಲೂ ಬೆಂಗಳೂರಲ್ಲಿ ಕದ್ದು ಆಂಧ್ರದಲ್ಲಿ ಮಾರಾಟ ಮಾಡಿದ್ರೆ ಯಾವ ಪೊಲೀಸರು ಹಿಡಿಯಲ್ಲ ಅಂತ ಅಂದುಕೊಂಡು ಕದ್ದ ಬೈಕ್‍ಗಳನ್ನೆಲ್ಲಾ ಆಂಧ್ರಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದರು. ಇದೀಗ ಈ ಬೈಕ್ ಕಳ್ಳರು ಪೊಲೀಸರ ಅತಿಥಿಯಾಗಿದ್ದಾರೆ.

    ಇತ್ತ ತಮ್ಮ ಬೈಕ್ ತಮಗೆ ಸಿಗುತ್ತೆ ಅಂತ ಅಂದುಕೊಂಡೇ ಇರಲಿಲ್ಲ. ಬೆಂಗಳೂರಲ್ಲಿ ಕಂಪ್ಲೇಂಟ್ ಕೊಟ್ರೂ ಪೊಲೀಸರು ಬೈಕ್ ಕಳ್ಳರನ್ನ ಹಿಡಿಯಲಿಲ್ಲ. ನಮ್ಮ ಅಪ್ಪ ನನಗೆ ಕೊಡಿಸಿದ್ದ ಬೈಕ್ ಕಳೆದು ಹೋಗಿ ಬೇಜಾರಾಗಿತ್ತು ಈಗ ಸಿಕ್ಕಿರೋದು ಖುಷಿ ಆಗ್ತಿದೆ. ಬಾಗೇಪಲ್ಲಿ ಪೊಲೀಸರು ಕಾರ್ಯಾಚರಣೆ ಮಾಡಿ ನಮ್ಮ ಬೈಕ್ ನಮಗೆ ಮರಳಿ ಸಿಗುವಂತೆ ಮಾಡಿದ್ದು ಸಂತಸ ತರಿಸಿದೆ ಎಂದು ಬೈಕ್ ಮಾಲೀಕರಾದ ಸಾಯಿಕುಮಾರ್ ಹಾಗೂ ಶಿವಕುಮಾರ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮದುವೆ ನಂತ್ರ ದಪ್ಪ ಆಗಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಪತಿ

    ರಾಯಲ್ ಎನ್‍ಫೀಲ್ಡ್ ಬೈಕ್ ಬಹುತೇಕರ ಪಾಲಿಗೆ ಡ್ರೀಮ್ ಬೈಕ್. ಇಂತಹ ಕನಸಿನ ಬೈಕ್ ಕಳ್ಳರ ಪಾಲಾಗಿ ಇನ್ನೂ ನಮಗೂ ಬುಲೆಟ್ ಬೈಕ್ ಕನಸೇ ಅಂದುಕೊಂಡವರ ಪಾಲಿಗೆ ಬಾಗೇಪಲ್ಲಿ ಪೊಲೀಸರು ಕಳುವಾಗಿದ್ದ ಬೈಕ್‍ಗಳನ್ನು ಮರಳಿ ಕೊಡುವ ಮೂಲಕ ಕನಸು ಮರಳಿ ನನಸಾಗುವಂತೆ ಮಾಡಿರುವುದು ಬಹುತೇಕರಿಗೆ ಸಂತಸ ತರಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಹಸುವಿನ ಜೊತೆ ಸೆಕ್ಸ್‌ ಮಾಡ್ತಿದ್ದ ಸರ್ಕಾರಿ ನಿವೃತ್ತ ಅಧಿಕಾರಿ ಬಂಧನ

    ಹಸುವಿನ ಜೊತೆ ಸೆಕ್ಸ್‌ ಮಾಡ್ತಿದ್ದ ಸರ್ಕಾರಿ ನಿವೃತ್ತ ಅಧಿಕಾರಿ ಬಂಧನ

    ಅಮರಾವತಿ: ಹಸುವಿನ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ 62 ವರ್ಷದ ನಿವೃತ್ತ ಸರ್ಕಾರಿ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

    ವಿಜಯನಗರ ಜಿಲ್ಲೆಯ ರಾಜಂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಚರಂ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ. ಕೃತ್ಯದ ವೀಡಿಯೋ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕುಡಿದ ಮತ್ತಲ್ಲಿ ತಾಯಿಯನ್ನೇ ಥಳಿಸಿ ಕೊಂದ ಪಾಪಿ ಪುತ್ರ

    ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕರಾಗಿ ನಿವೃತ್ತರಾಗಿರುವ ಪಿ.ರಾಮಕೃಷ್ಣ ಅವರನ್ನು ಬಂಧಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಹಸುಗಳು ಮತ್ತು ಸಾಕುನಾಯಿಗಳೊಂದಿಗೆ ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆತನ ಅಸ್ವಾಭಾವಿಕ ಮಾರ್ಗಗಳ ಬಗ್ಗೆ ಆತನ ಸಂಬಂಧಿಕರು ಮತ್ತು ಗ್ರಾಮಸ್ಥರು ತಿಳಿದಿದ್ದರೂ, ಅವರು ಅದನ್ನು ಯಾರಿಗೂ ಬಹಿರಂಗಪಡಿಸಲಿಲ್ಲ. ಈ ವಿಚಾರ ತಿಳಿದ ನಂತರ ಅವನಿಂದ ದೂರವಿದ್ದರು. ಅವರು ಇಂತಹ ಕೃತ್ಯಗಳಲ್ಲಿ ತೊಡಗಿರುವುದಕ್ಕೆ ನಿಖರವಾದ ಕಾರಣ ನಮಗೆ ಇನ್ನೂ ತಿಳಿದಿಲ್ಲ ಎಂದು ಸ್ಥಳೀಯ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಡಿ.ನವೀನ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಜಾರ್ಖಂಡ್ ಸಿಎಂ ಆಪ್ತನ ಮನೆ ಮೇಲೆ ಇಡಿ ದಾಳಿ – 2 ಎಕೆ-47 ರೈಫಲ್‌ಗಳು ವಶ

    ಹಸುವಿನ ಜೊತೆ ಅಸ್ವಾಭಾವಿಕ ಸಂಭೋಗ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ರಾಮಕೃಷ್ಣರನ್ನು ಬಂಧಿಸಲಾಗಿದೆ. ದೂರಿನ ಆಧಾರದ ಮೇಲೆ ನಾವು ಐಪಿಸಿ ಸೆಕ್ಷನ್ 377 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]