Tag: Andhra Pradesh

  • ಆಂಧ್ರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ – ಮನೆ ಬಾಗಿಲಿಗೇ ಬರಲಿದೆ ಕ್ಯಾರವಾನ್

    ಆಂಧ್ರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ – ಮನೆ ಬಾಗಿಲಿಗೇ ಬರಲಿದೆ ಕ್ಯಾರವಾನ್

    ಪ್ರವಾಸೋದ್ಯಮ (Tourism) ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಬದಲಾವಣೆ ತರಲು ಆಂಧ್ರ (Andhra Pradesh) ಸರ್ಕಾರ ಮುಂದಾಗಿದೆ. ಪ್ರವಾಸಿಗರ ಮನೆಗಳಿಗೆ ತಲುಪುವ ‘ಕ್ಯಾರವಾನ್ ಪ್ರವಾಸಿ ವಾಹನಗಳು’ ಶೀಘ್ರದಲ್ಲೇ ರಾಜ್ಯದಲ್ಲಿ ಜಾರಿಗೆ ಬರಲಿವೆ. ಈ ಯೋಜನೆಯ ಮೂಲಕ ಪ್ರವಾಸಿಗರು ತಮ್ಮ ಮನೆಗಳಿಂದ ಪ್ರವಾಸಿ ತಾಣಗಳಿಗೆ ಹಾಯಾಗಿ ಪ್ರಯಾಣಿಸಬಹುದಾಗಿದೆ. ಈ ಹೊಸ ಕಲ್ಪನೆಗೆ ಅನುಗುಣವಾಗಿ ರಾಜ್ಯ ಸರ್ಕಾರವು ವಿಶೇಷ ಕ್ಯಾರವಾನ್ (Caravan) ನೀತಿಯನ್ನೂ ಸಿದ್ಧಪಡಿಸುತ್ತಿದೆ. ಹಾಗಿದ್ರೆ ಏನಿದು ಕ್ಯಾರಾವಾನ್‌? ಪ್ರವಾಸಿಗರಿಗೆ ಇದು ಹೇಗೆ ಪ್ರಯೋಜನಕಾರಿ? ಕ್ಯಾರಾವಾನ್‌ ವಿಶೇಷತೆಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಆಂಧ್ರಪ್ರದೇಶ ಸರ್ಕಾರವು ಪ್ರವಾಸೋದ್ಯಮ ಮತ್ತು ನಗರಾಭಿವೃದ್ಧಿಗೆ ಹೊಸ ಹಾದಿಯನ್ನು ರೂಪಿಸುತ್ತಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಕ್ಯಾರವಾನ್ ಪ್ರವಾಸೋದ್ಯಮ ನೀತಿಯನ್ನು ಪ್ರಾರಂಭಿಸುವುದು, ಚಾಲಕರಿಗೆ ನೇರ ಹಣಕಾಸು ನೆರವು ಮತ್ತು ದೊಡ್ಡ ಪ್ರಮಾಣದ ನಗರ ಮೂಲಸೌಕರ್ಯ ಯೋಜನೆಗಳು ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಆಂಧ್ರಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (APTDC) ಸಹಯೋಗದೊಂದಿಗೆ ಓಜಿ ಡ್ರೀಮ್‌ಲೈನರ್ ಕಂಪನಿಯು ವಿಶಾಖಪಟ್ಟಣದಲ್ಲಿ ಐಷಾರಾಮಿ ಕ್ಯಾರವಾನ್ ಅನ್ನು ಪ್ರಾರಂಭಿಸಿದೆ.

    ಒಂದೇ ಕಡೆ ಎಲ್ಲಾ ವ್ಯವಸ್ಥೆ:
    ಈ ಮೊದಲು ಪ್ರವಾಸಿಗರು ವಸತಿ ಮತ್ತು ಪ್ರಯಾಣಕ್ಕಾಗಿ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಬೇಕಾಗಿತ್ತು. ಆದರೆ, ಕ್ಯಾರವಾನ್ ವಾಹನಗಳ ಮೂಲಕ ಪ್ರಯಾಣ, ವಸತಿ ಮತ್ತು ಆಹಾರ ಒಂದೇ ಸ್ಥಳದಲ್ಲಿ ಲಭ್ಯವಾಗಲಿದೆ. ಇವು ಆಧುನಿಕ ಸೌಲಭ್ಯಗಳನ್ನು ಹೊಂದಿರುವ ‘ಮೊಬೈಲ್ ಮನೆಗಳು’ ಇದ್ದಂತೆ. ಪ್ರವಾಸಿಗರು ಈ ವಾಹನಗಳನ್ನು ಬುಕ್ ಮಾಡಿ ಅರಕು, ಲಂಬಸಿಂಘಿ, ಗಂಡಿಕೋಟ, ಸೂರ್ಯಲಂಕಾ ಬೀಚ್, ಶ್ರೀಶೈಲಂ ಮತ್ತು ತಿರುಪತಿಯಂತಹ ಸ್ಥಳಗಳಿಗೆ ತಮ್ಮ ಮನೆಗಳಿಂದಲೇ ಪ್ರಯಾಣಿಸಬಹುದು.

    ವಿಶೇಷವಾಗಿ ಕುಟುಂಬ ಅಥವಾ ಸ್ನೇಹಿತರೊಂದಿಗೆ ದೀರ್ಘ ಪ್ರಯಾಣ ಮತ್ತು ರಸ್ತೆ ಪ್ರಯಾಣಕ್ಕೆ ಕ್ಯಾರವ್ಯಾನ್‌ಗಳು ಸೂಕ್ತ. ಮಲಗಲು ಹಾಸಿಗೆ, ಅಡುಗೆ ಮಾಡಲು ಸಣ್ಣ ಅಡುಗೆಮನೆ, ಶೌಚಾಲಯ ಮತ್ತು ಕುಳಿತುಕೊಳ್ಳಲು ವ್ಯವಸ್ಥೆ ಸೇರಿದಂತೆ ಆರಾಮದಾಯಕ ಪ್ರಯಾಣಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಅವು ಹೊಂದಿವೆ. ಕ್ಯಾರವ್ಯಾನ್‌ನ ಒಳ ವಿನ್ಯಾಸ ಸಾಮಾನ್ಯವಾಗಿ ಸರಳವಾಗಿದೆ.ಇದು ಕ್ಯಾಂಪ್, ಪಿಕ್ನಿಕ್ ಮುಂತಾದ ದೀರ್ಘ ಪ್ರಯಾಣಕ್ಕೆ ಸೂಕ್ತವಾಗಿದೆ.

    ಕುಟುಂಬ, ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಕ್ಯಾರವಾನ್ ಬಸ್‌ಗಳು ಅನುಕೂಲಕರವಾಗಿವೆ. ಸುಮಾರು 10 ರಿಂದ 15 ಜನರು ಏಕಕಾಲದಲ್ಲಿ ಆರಾಮವಾಗಿ ಪ್ರಯಾಣಿಸಬಹುದು. ನಾವು ಉಪಾಹಾರದಿಂದ ಭೋಜನದವರೆಗೆ ಎಲ್ಲವನ್ನೂ ಒದಗಿಸುತ್ತೇವೆ. ಅತಿಥಿಗಳು ವಿಶೇಷ ಭಕ್ಷ್ಯಗಳನ್ನು ಬಯಸಿದರೆ, ಅವುಗಳನ್ನೂ ವ್ಯವಸ್ಥೆ ಮಾಡುತ್ತೇವೆ. ಪ್ರತಿ ಪ್ರವಾಸಕ್ಕೂ ಮಾರ್ಗದರ್ಶಿ ಜೊತೆಗಿರುತ್ತಾರೆ. ಶೀಘ್ರದಲ್ಲೇ ಪ್ಯಾಕೇಜ್‌ಗಳನ್ನು ಘೋಷಿಸುತ್ತೇವೆ ಎಂದು ಓಜಿ ಡ್ರೀಮ್‌ಲೈನರ್‌ ಕಂಪನಿಯ ಸಿಇಓ ಶಿವಾಜಿ ತಿಳಿಸಿದ್ದಾರೆ.

    2029ರ ವೇಳೆಗೆ 150 ಕ್ಯಾರವಾನ್‌ಗಳು:
    ಆಂಧ್ರ ಸರ್ಕಾರವು 2029ರ ವೇಳೆಗೆ 150 ಕ್ಯಾರವಾನ್ ವಾಹನಗಳು ಮತ್ತು 25 ಕ್ಯಾರವಾನ್ ಪಾರ್ಕ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.. ಆರಂಭದಲ್ಲಿ ಈ ವಾಹನಗಳನ್ನು ಖಾಸಗಿ ನಿರ್ವಾಹಕರು ನಿರ್ವಹಿಸುತ್ತಾರೆ. ಸರ್ಕಾರವು ಅವರಿಗೆ ತೆರಿಗೆ ವಿನಾಯಿತಿ ಮತ್ತು SGST ಮರುಪಾವತಿಯಂತಹ ಅನೇಕ ಪ್ರೋತ್ಸಾಹಕಗಳನ್ನು ಒದಗಿಸುತ್ತಿದೆ.

    ಖಾಸಗಿ ನಿರ್ವಾಹಕರಿಗೆ ವಿಶೇಷ ರಿಯಾಯಿತಿಗಳು:
    ಕ್ಯಾರವಾನ್ ಪಾಲಿಸಿಯಡಿಯಲ್ಲಿ ಮೊದಲ 25 ವಾಹನಗಳಿಗೆ 100%  Life Tax Exemption (ರೂ. 3 ಲಕ್ಷದವರೆಗೆ), ಮುಂದಿನ 13 ವಾಹನಗಳಿಗೆ 50% ರಿಯಾಯಿತಿ (ರೂ. 2 ಲಕ್ಷದವರೆಗೆ) ಹಾಗೂ ಇನ್ನೂ 12 ವಾಹನಗಳಿಗೆ 25% ರಿಯಾಯಿತಿ (ರೂ. 1 ಲಕ್ಷದವರೆಗೆ) ನೀಡಲಾಗುತ್ತದೆ. ಇದರ ಜೊತೆಗೆ ಏಳು ವರ್ಷಗಳ ಕಾಲ SGST ಮರುಪಾವತಿ ಸೌಲಭ್ಯವನ್ನು ಒದಗಿಸಲಾಗುವುದು. ಇದು ಖಾಸಗಿ ನಿರ್ವಾಹಕರು ಕ್ಯಾರವಾನ್ ವಲಯದಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತದೆ ಎಂದು ಅಧಿಕಾರಿಗಳು ಆಶಿಸಿದ್ದಾರೆ.

    ಕ್ಯಾರವಾನ್ ಪಾರ್ಕ್‌ಗಳಿಗೆ ವಿಶೇಷ ಪ್ರೋತ್ಸಾಹ:
    ಆಂಧ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಎಪಿಟಿಡಿಸಿ) ಕ್ಯಾರವಾನ್ ಪಾರ್ಕ್‌ಗಳನ್ನು ಸ್ಥಾಪಿಸಲು ಭೂಮಿಯನ್ನು ಹಂಚಿಕೆ ಮಾಡುತ್ತದೆ. ಈ ಉದ್ಯಾನವನಗಳು ಕ್ಯಾರವಾನ್‌ಗಳಿಗೆ ಪಾರ್ಕಿಂಗ್ ಸೌಲಭ್ಯಗಳು, ವಸತಿ, ಆಹಾರ ಮತ್ತು ಪ್ರವಾಸಿಗರಿಗೆ ಇತರ ಸೌಲಭ್ಯಗಳನ್ನು ಒಳಗೊಂಡಿರುತ್ತವೆ. ಮೊದಲ ಹಂತದಲ್ಲಿ, ಗಂಡಿಕೋಟ, ಅರಕು, ಸೂರ್ಯಲಂಕಾ ಬೀಚ್, ನಾಗಾರ್ಜುನಸಾಗರ ಮತ್ತು ಶ್ರೀಶೈಲಂನಂತಹ ಪ್ರಮುಖ ಪ್ರವಾಸಿ ತಾಣಗಳಲ್ಲಿ ಉದ್ಯಾನವನಗಳನ್ನು ಸ್ಥಾಪಿಸುವ ಸಾಧ್ಯತೆಯಿದೆ.

    ಪ್ರಸ್ತುತ ರಾಜ್ಯದಲ್ಲಿ ಸ್ವದೇಶ್ ದರ್ಶನ್ 2.0, ಸಾಸ್ಕಿಯಾ ಯೋಜನೆಗಳು ಮತ್ತು ಗಮ್ಯಸ್ಥಾನ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.
    -ಗಂಡಿಕೋಟ ಮತ್ತು ಗೋದಾವರಿ ಪ್ರದೇಶಗಳ ಅಭಿವೃದ್ಧಿಗೆ 172.35 ಕೋಟಿ ರೂ.
    -ಅರಕು, ಲಂಬಸಿಂಗಿ ಮತ್ತು ಸೂರ್ಯಲಂಕಾ ಕಡಲತೀರಗಳ ಅಭಿವೃದ್ಧಿಗೆ 127.39 ಕೋಟಿ ರೂ.
    -ಅಹೋಬಿಲಂ ಮತ್ತು ನಾಗಾರ್ಜುನಸಾಗರ ಯೋಜನೆಗಳಿಗೆ 49.49 ಕೋಟಿ ರೂ.
    ಈ ಯೋಜನೆಗಳ ಪ್ರವಾಸೋದ್ಯಮ ಮೌಲ್ಯವನ್ನು ಹೆಚ್ಚಿಸುವಲ್ಲಿ ಕ್ಯಾರವಾನ್ ವಾಹನಗಳು ಪ್ರಮುಖ ಪಾತ್ರ ವಹಿಸುತ್ತವೆ.

    ದರ ಎಷ್ಟು?
    ಒಬ್ಬ ವ್ಯಕ್ತಿಯು ಸುಮಾರು 2,500 ರೂ. ಪಾವತಿಸಿದರೆ, ಪೂರ್ಣ ದಿನ ಪ್ರಯಾಣಿಸಬಹುದು ಮತ್ತು ರಾತ್ರಿ ವಾಸ್ತವ್ಯವನ್ನು ಆನಂದಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಅಂತಿಮ ಬೆಲೆ ಓಜಿ ಡ್ರೀಮ್‌ಲೈನರ್ ಮತ್ತು ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆಯ ನಡುವಿನ ಒಪ್ಪಂದವನ್ನು ಅವಲಂಬಿಸಿರುತ್ತದೆ.

    ವಿಶೇಷ ಸೌಲಭ್ಯಗಳು:
    – ಈ ಕ್ಯಾರವಾನ್ ವಾಹನಗಳು ಸಣ್ಣ ಬಸ್ಸಿನ ಗಾತ್ರವನ್ನು ಹೊಂದಿವೆ.
    – 2-6 ಜನರಿಗೆ ಅವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ.
    – ಹಾಸಿಗೆಗಳು, ಊಟಕ್ಕೆ ಜಾಗವಿದೆ.
    – ಗ್ಯಾಸ್ ಸ್ಟೌವ್, ಇಂಡಕ್ಷನ್ ಕುಕ್ಕರ್, ಫ್ರಿಡ್ಜ್, ಮೈಕ್ರೋವೇವ್ ಓವನ್ ವ್ಯವಸ್ಥೆ ಇದೆ.
    – ಕುಡಿಯುವ ನೀರಿನ ಟ್ಯಾಂಕ್, ಸಿಂಕ್, ಸ್ನಾನಗೃಹ, ಶೌಚಾಲಯ, ಶವರ್, ವಾಶ್ ಬೇಸಿನ್ ಇರಲಿದೆ.
    – ಏರ್ ಕಂಡೀಷನರ್, ಹೀಟರ್, ವೈ-ಫೈ, ದೂರದರ್ಶನವಿದೆ.
    – ಜಿಪಿಎಸ್ ಟ್ರ್ಯಾಕಿಂಗ್, ಅಗ್ನಿಶಾಮಕಗಳು, ಪ್ರಥಮ ಚಿಕಿತ್ಸಾ ಕಿಟ್ ಇರಲಿದೆ.

    ಕ್ಯಾರವಾನ್‌ಗಳು ಪ್ರಯಾಣಿಸುವ ಆರಂಭಿಕ ಮಾರ್ಗಗಳು:
    ವಿಶಾಖಪಟ್ಟಣಂ – ಅರಕು
    ವಿಶಾಖಪಟ್ಟಣಂ – ಲಂಬಸಿಂಗಿ
    ವಿಜಯವಾಡ – ಗಂಡಿಕೋಟ
    ವಿಜಯವಾಡ – ಸೂರ್ಯಲಂಕಾ ಬೀಚ್
    ವಿಜಯವಾಡ – ನಾಗಾರ್ಜುನಸಾಗರ
    ವಿಜಯವಾಡ – ಶ್ರೀಶೈಲಂ
    ವಿಜಯವಾಡ – ತಿರುಪತಿ

    ಹೋಂ-ಸ್ಟೇ ವಸತಿ ಸೌಲಭ್ಯಗಳನ್ನು ಹೊಂದಿರುವ ಈ ಕ್ಯಾರವಾನ್‌ಗಳು ರಾಜ್ಯದ ಪ್ರವಾಸೋದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತವೆ. ಕೇರಳ, ಗೋವಾ ಮತ್ತು ಕರ್ನಾಟಕದಂತೆಯೇ, ಆಂಧ್ರಪ್ರದೇಶವೂ ಈಗ ಕ್ಯಾರವಾನ್ ಪ್ರವಾಸೋದ್ಯಮದಲ್ಲಿ ಸ್ಥಾನ ಪಡೆಯಲಿದೆ.

  • ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ – 6 ಮಂದಿ ಸಜೀವ ದಹನ

    ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ – 6 ಮಂದಿ ಸಜೀವ ದಹನ

    ಅಮರಾವತಿ: ಪಟಾಕಿ ತಯಾರಿಕಾ ಘಟಕದಲ್ಲಿ (Firecracker factory) ಭೀಕರ ಸ್ಫೋಟ ಸಂಭವಿಸಿ, 6 ಮಂದಿ ಸಜೀವ ದಹನವಾಗಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಅಂಬೇಡ್ಕರ್ ಕೊನಸೀಮಾ (Konaseema) ಜಿಲ್ಲೆಯಲ್ಲಿ ಸಂಭವಿಸಿದೆ.

    ರಾಯವರಂ ಮಂಡಲದ ರಾಯವರಂ ಲಕ್ಷ್ಮಿ ಗಣಪತಿ ಪಟಾಕಿ ತಯಾರಿಕಾ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪಟಾಕಿ ತಯಾರಿಸುತ್ತಿದ್ದಾಗ ಅವಘಡ ಸಂಭವಿಸಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಮನೆಯಲ್ಲಿ ಬಾಯ್ಲರ್ ಸ್ಫೋಟ – 11ರ ಬಾಲಕಿ ಸಾವು, ಮೂವರಿಗೆ ಗಂಭೀರ

    ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ, ಬೆಂಕಿ ನಂದಿಸುವ ಕಾರ್ಯವನ್ನು ಆರಂಭಿಸಿದ್ದಾರೆ. ಮೃತರು ಮತ್ತು ಗಾಯಗೊಂಡವರನ್ನು ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಎಂದು ಗುರುತಿಸಲಾಗಿದೆ ಎಂದು ಜಿಲ್ಲಾ ಡಿಎಸ್ಪಿ ರಾಹುಲ್ ಮೀನಾ ತಿಳಿಸಿದ್ದಾರೆ.

  • ಟಾಲಿವುಡ್‌ನಲ್ಲಿ ಕಾಂತಾರ ಬಾಯ್ಕಾಟ್ ಸಮಸ್ಯೆ ಬಗೆಹರಿಸಿದ ಪವನ್ ಕಲ್ಯಾಣ್

    ಟಾಲಿವುಡ್‌ನಲ್ಲಿ ಕಾಂತಾರ ಬಾಯ್ಕಾಟ್ ಸಮಸ್ಯೆ ಬಗೆಹರಿಸಿದ ಪವನ್ ಕಲ್ಯಾಣ್

    – ಪವನ್ ಕಲ್ಯಾಣ್‌ಗೆ ಧನ್ಯವಾದ ಅರ್ಪಿಸಿದ ಹೊಂಬಾಳೆ ಫಿಲಂಸ್

    ಟಾಲಿವುಡ್‌ನಲ್ಲಿ ಕಾಂತಾರ ಬಾಯ್ಕಾಟ್ ಸಮಸ್ಯೆ ಬಗೆಹರಿಸಿದ್ದಕ್ಕೆ ಪವನ್ ಕಲ್ಯಾಣ್‌ಗೆ (Pawan Kalyan) ಹೊಂಬಾಳೆ ಫಿಲಂಸ್ (Hombale Film’s) ಧನ್ಯವಾದ ಅರ್ಪಿಸಿದೆ.

    ಅಖಂಡ ಆಂಧ್ರದಾದ್ಯಂತ ಕಾಂತಾರ ಚಿತ್ರಕ್ಕೆ ಬಾಯ್ಕಾಟ್ ಹೇರಿ ಅಭಿಯಾನ ಶುರುವಾಗಿತ್ತು. ಹೈದ್ರಾಬಾದ್‌ನಲ್ಲಿ ಪ್ರೀ-ರಿಲೀಸ್ ಇವೆಂಟ್ ವೇಳೆ ರಿಷಬ್ (Rishab Shetty) ಕನ್ನಡದಲ್ಲಿ ಮಾತನಾಡಿದ್ರು ಅನ್ನೋದು ಒಂದು ಕಾರಣವಾಗಿದ್ರೆ, ಪವನ್ ಕಲ್ಯಾಣ ಓಜಿ ಸಿನಿಮಾ ರಿಲೀಸ್ ಆದ ವೇಳೆ ಥಿಯೇಟರ್‌ನಲ್ಲಿ ಡಿಜೆ ಬಳಸಿ ಗಲಾಟೆ ಮಾಡಿರುವುದನ್ನ ಕನ್ನಡಪರ ಸಂಘಟನೆಗಳು ತಡೆದು ವಿರೋಧಿಸಿದ್ದವು ಅನ್ನೋದು ಇನ್ನೊಂದು ಕಾರಣ. ಹೀಗಾಗಿ ಆಂಧ್ರದಲ್ಲಿ ಒಂದು ಗುಂಪು ಕಾಂತಾರ ಚಿತ್ರಕ್ಕೆ ಬಾಯ್ಕಾಟ್ ಅಭಿಯಾನ ಶುರುಮಾಡಿತ್ತು. ಇದನ್ನೂ ಓದಿ: ಬರದಿರುವ ಭಾಷೆ ಮಾತಾಡಿ ಅಗೌರವ ತೋರಿಸೋದು ಬೇಡ – ಹೈದ್ರಾಬಾದ್‌ನಲ್ಲಿ ಕನ್ನಡ ಮಾತಾಡಿದ್ದಕ್ಕೆ ರಿಷಬ್ ಸ್ಪಷ್ಟನೆ

    ಇದೀಗ ಬಿಗುವಿನ ಪರಿಸ್ಥಿತಿಯನ್ನು ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ ತಿಳಿಗೊಳಿಸಿದ್ದಾರೆ. ಆಂಧ್ರದಲ್ಲಿ ಕಾಂತಾರ ಚಿತ್ರ ಸುಲಭವಾಗಿ ರಿಲೀಸ್ ಆಗುವಂತೆ ದಾರಿ ಮಾಡಿಕೊಟ್ಟಿದ್ದಾರೆ. ಹೀಗಾಗಿ ಕಾಂತಾರ ಚಿತ್ರತಂಡ ಪವನ್ ಕಲ್ಯಾಣ್‌ಗೆ ಅಧಿಕೃತವಾಗಿ ಧನ್ಯವಾದ ಅರ್ಪಿಸಿದೆ.

    ಕಾಂತಾರ ಚಿತ್ರಕ್ಕೆ ತಮ್ಮ ರಾಜ್ಯದಲ್ಲಿ ಎದುರಾಗುತ್ತಿರುವ ಸಮಸ್ಯೆಯನ್ನ ತಡೆದ ಪವನ್ ಕಲ್ಯಾಣ್ ರಾಜ್ಯದ ಜನತೆಗೆ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಎದುರಾಗುವ ಪರಿಸ್ಥಿತಿ ಮುಂದಿಟ್ಟುಕೊಂಡು ಅವರ ಚಿತ್ರಗಳಲ್ಲಿ ನಾವು ಇಲ್ಲಿ ತೊಂದರೆ ಕೊಡುವುದು ಸರಿಯಿಲ್ಲ. ನಾವು ರಾಷ್ಟ್ರೀಯ ಭಾವನೆಯಿಂದ ಹಾಗೂ ಹೃದಯದಿಂದ ನೋಡಬೇಕು. ಡಾ.ರಾಜ್‌ಕುಮಾರ್ ಅವರಿಂದ ಹಿಡಿದು ಕಿಚ್ಚ ಸುದೀಪ್, ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಿಷಬ್ ಶೆಟ್ಟಿವರೆಗೂ ತೆಲುಗು ಜನರು ಬೆಂಬಲ ಕೊಟ್ಟಿದ್ದಾರೆ. ನಾವು ಸಹೋದರತ್ವದಿಂದ ಮುಂದುವರೆಯಬೇಕು ಎಂದು ಕರೆ ಕೊಟ್ಟಿದ್ದಾರೆ.

    ಜೊತೆಗೆ ಎರಡೂ ರಾಜ್ಯಗಳ ಚಲನಚಿತ್ರ ಮಂಡಳಿಗಳು ಪರಸ್ಪರ ಎದುರಾಗುತ್ತಿರುವ ಅಡೆತಡೆಗಳ ಚರ್ಚಿಸಬೇಕು. ಈ ವಿಷಯವನ್ನು ನಾನು ಮುಖ್ಯಮಂತ್ರಿಯವರಿಗೆ ತಿಳಿಸುತ್ತೇನೆ. ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆ ಇಟ್ಟುಕೊಂಡು ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ತೊಂದರೆ ಕೊಡಬೇಡಿ ಎಂದು ತಮ್ಮ ನಾಡಿನ ಜನತೆಗೆ ಡಿಸಿಎಂ ಸಂದೇಶ ರವಾನಿಸಿದ್ದಾರೆ. ಹೀಗೆ ಎರಡೂ ರಾಜ್ಯಗಳ ಪರಸ್ಪರ ಸೌಹಾರ್ದತೆ ಕಾಪಾಡಿಕೊಳ್ಳಲು ಸೇತುವೆಯಾಗಿದ್ದಾರೆ.

  • Andhra Pradesh | ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

    Andhra Pradesh | ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

    ಅಮರಾವತಿ: ಶಾಲೆಯ (School) ಅಡುಗೆಮನೆಯಲ್ಲಿ ಇಟ್ಟಿದ್ದ ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಹೆಣ್ಣು ಮಗು ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ ಅನಂತಪುರ (Anantpur) ಜಿಲ್ಲೆಯ ಬುಕ್ಕರಾಯಸಮುದ್ರಂ (Bukkarayasamudram) ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಅಂಬೇಡ್ಕರ್ ಗುರುಕುಲ ಶಾಲೆಯಲ್ಲಿ ಘಟನೆ ಸಂಭವಿಸಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಅಕ್ಷಿತಾ ಮೃತ ಮಗು. ಮಗುವಿನ ತಾಯಿ ಕೃಷ್ಣವೇಣಿ ಶಾಲೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ವಿತರಿಸಲು ಸಿದ್ಧಪಡಿಸಿದ್ಧ ಬಿಸಿ ಹಾಲನ್ನು ತಣ್ಣಗಾಗಿಸಲು ಸೀಲಿಂಗ್ ಫ್ಯಾನ್ ಅಡಿಯಲ್ಲಿ ಇಡಲಾಗಿತ್ತು. ತಾಯಿ ಅಡುಗೆಮನೆಯಲ್ಲಿ ಇಲ್ಲದ ವೇಳೆ ಬೆಕ್ಕನ್ನು ಹಿಂಬಾಲಿಸಿಕೊಡು ಹೋದ ಮಗು ಕುದಿಯುತ್ತಿದ್ದ ಹಾಲಿನ ಪಾತ್ರೆಯೊಳಗೆ ಬಿದ್ದಿದೆ. ಇದನ್ನೂ ಓದಿ: ಮಿಗ್ -21 ತ್ರಿವರ್ಣ ಧ್ವಜದ ಗೌರವ ಹೆಚ್ಚಿಸಿದೆ: ರಾಜನಾಥ್ ಸಿಂಗ್

    ಬಿಸಿ ಹಾಲಿನ ಪಾತ್ರೆಗೆ ಬಿದ್ದ ಪರಿಣಾಮ ಮಗುವಿಗೆ ತೀವ್ರ ಸುಟ್ಟ ಗಾಯಗಳಾಗಿತ್ತು. ಮಗುವಿನ ಕಿರುಚಾಟ ಕೇಳಿದ ತಾಯಿ ಕೃಷ್ಣವೇಣಿ, ಕೂಡಲೇ ಮಗುವನ್ನು ಪಾತ್ರೆಯಿಂದ ಹೊರತೆಗೆದು ಅನಂತಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರ ಶಿಫಾರಸಿನ ಮೇರೆಗೆ, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಇದನ್ನೂ ಓದಿ: ಲಡಾಖ್‌ ಹಿಂಸಾಚಾರಕ್ಕೆ ಪ್ರಚೋದನೆ – ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ಅರೆಸ್ಟ್‌

  • ಜೈಲಧಿಕಾರಿ ಮೇಲೆ ಹಲ್ಲೆ ನಡೆಸಿ ಇಬ್ಬರು ಕೈದಿಗಳು ಪರಾರಿ

    ಜೈಲಧಿಕಾರಿ ಮೇಲೆ ಹಲ್ಲೆ ನಡೆಸಿ ಇಬ್ಬರು ಕೈದಿಗಳು ಪರಾರಿ

    ಅಮರಾವತಿ: ಆಂಧ್ರಪ್ರದೇಶದ (Andhra Pradesh) ಚೋಡವರಂ ಸಬ್-ಜೈಲಿನಲ್ಲಿ ಜೈಲಧಿಕಾರಿ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ, ಇಬ್ಬರು ಕೈದಿಗಳು (Prisoners) ಪರಾರಿಯಾಗಿರುವ ಘಟನೆ ನಡೆದಿದೆ.

    ಪಿಂಚಣಿ ನಿಧಿಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಜೈಲಿನಲ್ಲಿರುವ ಮಾಜಿ ಪಂಚಾಯತ್ ಕಾರ್ಯದರ್ಶಿ ನಕ್ಕ ರವಿಕುಮಾರ್, ಜೈಲಿನ ಅಡುಗೆ ಕೋಣೆ ಬಳಿ ಜೈಲಧಿಕಾರಿ ವಾಸ ವೀರರಾಜು ಅವರ ಮೇಲೆ ಹಲ್ಲೆ ಮಾಡಿದ್ದ. ಇದನ್ನೂ ಓದಿ: ಧರ್ಮಸ್ಥಳ ಕೇಸ್;‌ ಕೇರಳ ಕಮ್ಯುನಿಸ್ಟ್‌ ಪಕ್ಷದ ಸಂಸದನ ಮುಂದೆ ಬುರುಡೆ ಇಟ್ಟಿದ್ದ ಗ್ಯಾಂಗ್‌

     ಈ ವೇಳೆ ಜೈಲಧಿಕಾರಿಯ ತಲೆಗೆ ಸುತ್ತಿಗೆಯಿಂದ ಹೊಡೆದು, ಅವರ ಬಳಿಯಿದ್ದ ಜೈಲಿನ ಬೀಗದ ಕೀಯನ್ನು ಕಸಿದುಕೊಂಡಿದ್ದ. ಆ ಸಂದರ್ಭ ಕಳ್ಳತನದ ಆರೋಪದ ಮೇಲೆ ವಿಚಾರಣೆಯಲ್ಲಿದ್ದ ಮತ್ತೊಬ್ಬ ಕೈದಿ ಬೆಜವಾಡ ರಾಮು ಕೂಡ ರವಿಕುಮಾರ್‌ನೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬುರುಡೆ ಕೇಸಲ್ಲಿ ಸೆಂಥಿಲ್ ಹೆಸರು – ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು

    ಕೂಡಲೇ ಜೈಲಧಿಕಾರಿಗಳು ನೆರೆಯ ಪೊಲೀಸ್ ಠಾಣೆಗಳಿಗೆ ಮಾಹಿತಿಯನ್ನು ನೀಡಿದ್ದು, ಪರಾರಿಯಾದ ಕೈದಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಜೈಲಧಿಕಾರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಕೃಷ್ಣಾ ಮೇಲ್ದಂಡೆ ಯೋಜನೆಗೆ ಆಂಧ್ರ, ಮಹಾರಾಷ್ಟ್ರ ಅಡ್ಡಿ: ಡಿಕೆಶಿ

    ಕೃಷ್ಣಾ ಮೇಲ್ದಂಡೆ ಯೋಜನೆಗೆ ಆಂಧ್ರ, ಮಹಾರಾಷ್ಟ್ರ ಅಡ್ಡಿ: ಡಿಕೆಶಿ

    ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಗೆ (Upper Krishna Project) ಅಧಿಸೂಚನೆಗೆ ಒಮ್ಮೆ ಆಂಧ್ರ ಪ್ರದೇಶ ಮತ್ತೊಮ್ಮೆ ಮಹಾರಾಷ್ಟ್ರದವರು ಕೇಂದ್ರದ ಮೇಲೆ ಒತ್ತಡ ತಂದು ನಿಲ್ಲಿಸಿದರು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

    ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿಹೆಚ್ ಪೂಜಾರ್ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಗತಿಯ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಇದನ್ನೂ ಓದಿ: ಅಡಿಕೆ ಬೆಳೆ GST ವ್ಯಾಪ್ತಿಯಿಂದ ಹೊರಗಿಡಿ, ಹಳದಿ ಎಲೆ ರೋಗ ಬಿದ್ದ ಭೂಮಿಗೆ ಪರಿಹಾರ ನೀಡಿ – ರಾಜ್ಯ ಸಂಸದರ ನಿಯೋಗ ಮನವಿ

    ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್ ಅವರು ಈ ಯೋಜನೆಯ ಪರವಾಗಿದ್ದು, ಇದಕ್ಕೆ ಅಧಿಸೂಚನೆ ಹೊರಡಿಸಲೇಬೇಕು ಎಂದು ಸಂಬಂಧಪಟ್ಟ ರಾಜ್ಯಗಳ ಸಭೆ ನಡೆಸಲು ಎರಡು ಬಾರಿ ಪ್ರಯತ್ನಿಸಿದರು. ಆದರೆ ಎರಡು ರಾಜ್ಯದವರು ದೂರವಾಣಿ ಕರೆ ಮಾಡಿ ನಿಲ್ಲಿಸಿದರು. ಕೇಂದ್ರ ಸಚಿವರನ್ನು ನಾನು, ಮುಖ್ಯಮಂತ್ರಿಯವರು ಹಾಗೂ ಕೇಂದ್ರ ಸಚಿವ ಸೋಮಣ್ಣ ಅವರು ಭೇಟಿಯಾಗಿ ಮನವಿ ಸಲ್ಲಿಸಿದ್ದೆವು ಎಂದರು. ಇದನ್ನೂ ಓದಿ: ಐದೇ ನಿಮಿಷದಲ್ಲಿ ಆಟೋ, ಇಲ್ಲವಾದಲ್ಲಿ 50 ರೂ. ಆಫರ್ ನೀಡಿ ವಂಚನೆ – ರಾಪಿಡೋಗೆ 10 ಲಕ್ಷ ದಂಡ

    ಯೋಜನೆ ಜಾರಿಗೆ 2 ಲಕ್ಷ ಕೋಟಿ ಬೇಕು:
    ಕೃಷ್ಣಾ ಮೇಲ್ದಂಡೆ ಯೋಜನೆ (3) ಜಾರಿಗೆ 2 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಇದು ಸಾಧ್ಯವಾಗುತ್ತದೆಯೇ? ಈ ಯೋಜನೆ ವಿಚಾರದಲ್ಲಿ ದೊಡ್ಡ ಹಗರಣವೇ ನಡೆಯುತ್ತಿದೆ. ಭೂಮಿ ಪರಿಹಾರ ವಿಚಾರದಲ್ಲಿ ವಕೀಲರುಗಳು ಹಣ ಮಾಡುತ್ತಿದ್ದಾರೆ ವಿನಃ ರೈತರಿಗೆ ಪರಿಹಾರ ದೊರೆಯುವುದಿಲ್ಲ. ಆದ ಕಾರಣಕ್ಕೆ ಪರಿಷತ್ ಸದಸ್ಯರಾದ ಪೂಜಾರ್ ಅವರು ಅಲ್ಲಿನ ರೈತರನ್ನು ಸಮಾಧಾನಪಡಿಸಿದರೆ ಹದಿನೈದು ದಿನಗಳಲ್ಲಿ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೋಗಲು ಭಯವಿದೆ – ಪೊಲೀಸರ ಮುಂದೆ ಹಲವು ಬೇಡಿಕೆ ಇಟ್ಟ ಸಮೀರ್‌

    ಸುಪ್ರೀಂ ಕೊರ್ಟ್‌ನಿಂದ ಎಕರೆಗೆ 8-10 ಕೋಟಿ ಪರಿಹಾರ ನೀಡಿ ಎಂದು ಆದೇಶವಾಗಿದೆ. ಇಷ್ಟು ಪರಿಹಾರ ಮೊತ್ತ ಬೆಂಗಳೂರಿನಲ್ಲಿಯೇ ಇಲ್ಲ. ಆದ ಕಾರಣಕ್ಕೆ ಕಂದಾಯ ಇಲಾಖೆಯಿಂದ ನೀರಾವರಿ ಇಲಾಖೆಗೆ ಭೂಮಿ ಹಸ್ತಾಂತರ ಕುರಿತ ವಿಚಾರವನ್ನು ಸಚಿವ ಸಂಪುಟದ ಮುಂದಿಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಎಂಕೆ, ಬಿಜೆಪಿ ಯಾವುದೇ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ – ಟಿವಿಕೆ ವಿಜಯ್ ಘೋಷಣೆ

    ಈಗಾಗಲೇ 75,563 ಎಕರೆ ಸಬ್ ಮರ್ಜ್ ಆಗಿದೆ. ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವುದು 2,543 ಎಕರೆಗೆ ಮಾತ್ರ. ವಿವಿಧ ಹಂತಗಳಲ್ಲಿ ಅಧಿಸೂಚನೆ ಹೊರಡಿಸಿರುವ ಅಡಿ 29,568 ಎಕರೆ ಭೂಮಿಯಿದೆ. 43,452 ಎಕರೆ ಭೂಮಿಗೆ ಅಧಿಸೂಚನೆ ಹೊರಡಿಸಲು ಬಾಕಿ ಇದೆ. ಕಾಲುವೆಗಳ ನಿರ್ಮಾಣಕ್ಕೆ 51 ಸಾವಿರ ಎಕರೆ ಬೇಕಾಗಿದೆ. ಇದರಲ್ಲಿ 23 ಸಾವಿರ ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಆರ್.ಸಿ ಭೂಮಿಗೆ 6,467 ಎಕರೆ ಬೇಕಾಗಿದೆ. ಇದರಲ್ಲಿ 50%ನಷ್ಟು ಎಂದರೆ 3,392 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಹೆಚ್‌ಡಿಕೆ

    ಶೀತ ವಾತಾವರಣ ತಡೆಯಲು 16.42 ಕೋಟಿ ವೆಚ್ಚ:
    ಸದಸ್ಯ ಸೂರಜ್ ರೇವಣ್ಣ ಅವರು ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಹೇಮಾವತಿ ಹಾಗೂ ಯಗಚಿ ಶೀತಪೀಡಿತವಲ್ಲ ಎಂದು ಘೋಷಣೆಯಾಗಿರುವ ಗ್ರಾಮಗಳು ಯಾವುವು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಶೀತ ವಾತಾವರಣ ತಡೆಯಲು 12 ಕಾಮಗಾರಿಗಳಿಗೆ 16.42 ಕೋಟಿ ವೆಚ್ಚ ಮಾಡಲಾಗಿದೆ. ಮತ್ತೊಂದು ಅಂದಾಜು ವರದಿ ಮಾಡಿಸಿ 27 ಕೋಟಿ ಬೇಕಾಗಿದೆ ಎಂದು ವರದಿ ಸಲ್ಲಿಸಿದ್ದಾರೆ. ನಾವು ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ಈ ಬಗ್ಗೆ ಗಮನಹರಿಸುತ್ತೇವೆ ಎಂದು ನುಡಿದರು. ಇದನ್ನೂ ಓದಿ: ದೆಹಲಿ ಸಿಎಂಗೆ ಕಪಾಳಮೋಕ್ಷ ಕೇಸ್ – ಆರೋಪಿಯನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್

    ಈ ಹಿಂದೆ ಶಾಸಕರುಗಳು ಜಲಸಂಪನ್ಮೂಲ ಇಲಾಖೆಯಿಂದ ರಸ್ತೆ, ಸಮುದಾಯ ಭವನ ಬೇಕು ಎಂದು ಶಿಫಾರಸು ಮಾಡುತ್ತಿದ್ದರು. ಈಗ ನಾನು ಅದನ್ನೆಲ್ಲಾ ನಿಲ್ಲಿಸಿದ್ದೇನೆ. ನಮ್ಮ ಇಲಾಖೆ ಹಣವನ್ನು ಕಾಲುವೆ ಅಭಿವೃದ್ಧಿ, ಪ್ರಮುಖ ಯೋಜನೆಗಳಿಗೆ ಮಾತ್ರ ಬಳಸುತ್ತಿದ್ದೇವೆ. ಈ ವಿಚಾರವಾಗಿಯೂ ಮತ್ತೊಂದು ವರದಿ ತರಿಸಿ ಗಮನಹರಿಸುತ್ತೇನೆ. ಸದಸ್ಯರು ಹೇಳಿರುವಂತೆ ನ್ಯಾಯಾಲಯದ ವಿಚಾರ ಪರಿಶೀಲನೆ ಮಾಡಲಾಗುವುದು. ಆನಂತರ ನಾವು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಜಿಎಸ್‌ಟಿ ಪರಿಷ್ಕರಣೆ – 12%, 28% ಸ್ಲ್ಯಾಬ್‌ ತೆಗೆಯಲು ಸಚಿವರ ಸಮಿತಿ ಒಪ್ಪಿಗೆ

  • ಕರ್ನಾಟಕದಂತೆ ಆಂಧ್ರದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

    ಕರ್ನಾಟಕದಂತೆ ಆಂಧ್ರದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

    – ರಾಜ್ಯಾದ್ಯಂತ ಆ.15ರಿಂದ ಜಾರಿ

    ಅಮರಾವತಿ: ಕರ್ನಾಟಕದ (Karnataka)`ಶಕ್ತಿ ಯೋಜನೆ’ಯಂತೆ ಆಂಧ್ರಪ್ರದೇಶದಲ್ಲಿಯೂ (Andhra Pradesh) ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ (Free Bus Scheme) ಯೋಜನೆಯನ್ನು ಜಾರಿಗೊಳಿಸಲು ಚಂದ್ರಬಾಬು ನಾಯ್ಡು ಸರ್ಕಾರ ನಿರ್ಧರಿಸಿದೆ.

    2024ರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಚಂದ್ರಬಾಬು ನಾಯ್ಡು (Chandrababu Naidu Govt) ಸರ್ಕಾರ ಇದೇ ಆ.15ರಿಂದ `ಸ್ತ್ರೀ ಶಕ್ತಿ’ ಯೋಜನೆ ಆರಂಭಿಸಲಿದೆ. ಈ ಯೋಜನೆಯಡಿ ಎಲ್ಲ ಬಾಲಕಿಯರು, ಮಂಗಳಮುಖಿಯರು ಉಚಿತ ಬಸ್ ಪ್ರಯಾಣ ಮಾಡಬಹುದು. ಆಂಧ್ರದಲ್ಲಿ ವಾಸಿಸುವ ಪ್ರಮಾಣೀಕೃತ ದಾಖಲೆ ತೋರಿಸಿ ಆಂಧ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (APSRTC) ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಬಹುದು.ಇದನ್ನೂ ಓದಿ: ನಿಲ್ದಾಣದಲ್ಲಿ ನಿಂತಿದ್ದ ಫ್ಲೈಟ್‌ಗೆ ಡಿಕ್ಕಿ ಹೊಡೆದು ವಿಮಾನ ಪತನ

    ಈ ಕುರಿತು ರಾಜ್ಯ ಸಾರಿಗೆ, ರಸ್ತೆಗಳು ಮತ್ತು ಕಟ್ಟಡಗಳು ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಾಂತಿಲಾಲ್ ದಂಡೆ ಸೋಮವಾರ (ಆ.11) ತಿಳಿಸಿದ್ದಾರೆ. ಈ ಯೋಜನೆ ರಾಜ್ಯಾದ್ಯಂತ ಆ.15ರಂದು ಜಾರಿಯಾಗಲಿದ್ದು, ಎಪಿಎಸ್‌ಆರ್‌ಟಿಸಿಯ ಸಾಮಾನ್ಯ ಬಸ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಎಸಿ ಸೇರಿ ವಿವಿಧ ಐಷಾರಾಮಿ ಬಸ್ಸುಗಳಿಗೆ ಅನ್ವಯ ಆಗುವುದಿಲ್ಲ ಎಂದಿದ್ದಾರೆ.

    ಇನ್ನೂ ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲಾ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೆ. ಜೊತೆಗೆ ಬಸ್ ಸಿಬ್ಬಂದಿಯು ತಮ್ಮ ಬಟ್ಟೆಯ ಮೇಲೆ ಹಾಕಿಕೊಳ್ಳಬಹುದಾದಂತಹ ಕ್ಯಾಮೆರಾವನ್ನು ಅಳವಡಿಸಲು ಯೋಚಿಸಿದೆ. ಅದಲ್ಲದೇ ಬಸ್ ನಿಲ್ದಾಣಗಳಲ್ಲಿ ಫ್ಯಾನ್, ಕುರ್ಚಿ, ಕುಡಿಯುವ ನೀರು ಮತ್ತು ಶೌಚಾಲಯಗಳ ಸೌಲಭ್ಯ ದೊರೆಯಲಿದೆ.

    ಈ ಯೋಜನೆಗೆ ವಾರ್ಷಿಕವಾಗಿ 1,942 ಕೋಟಿ ರೂ. ಹಾಗೂ ತಿಂಗಳಿಗೆ ಸುಮಾರು 162 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಶಿಕ್ಷಣ, ಉದ್ಯೋಗ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.ಇದನ್ನೂ ಓದಿ: 354ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟ – ಮಂತ್ರಾಲಯ ರಾಜಬೀದಿಯಲ್ಲಿಂದು ಮಹಾರಥೋತ್ಸವ

  • ಪರಮೇಶ್ವರ್ ಪರ ಆಂಧ್ರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಂದ ಮುಂದಿನ ಸಿಎಂ ಘೋಷಣೆ

    ಪರಮೇಶ್ವರ್ ಪರ ಆಂಧ್ರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಂದ ಮುಂದಿನ ಸಿಎಂ ಘೋಷಣೆ

    ಬೆಂಗಳೂರು: ಗೃಹ ಸಚಿವ ಡಾ. ಜಿ.ಪರಮೇಶ್ವರ್ (G Parameshwar) ಅವರು ಹುಟ್ಟುಹಬ್ಬದ ನಿಮಿತ್ತ ತಿರುಪತಿಗೆ ಹೋಗುವ ಮಾರ್ಗದಲ್ಲಿ ಆಂಧ್ರಪ್ರದೇಶ (Andhra Pradesh) ಕಾಂಗ್ರೆಸ್ (Congress) ಕಾರ್ಯಕರ್ತರು ಅವರನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.

    ತಿರುಪತಿ ಜಿಲ್ಲಾ ಗಾದಂಕಿ ಗ್ರಾಮದ ಹೆದ್ದಾರಿ ಟೋಲ್ ಬಳಿ ಸ್ಥಳೀಯ ಶಾಸಕ ಗಂಗಾಲಪನಿ ಶ್ರೀನಿವಾಸಲು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪರಮೇಶ್ವರ್ ಅವರಿಗೆ ಶುಭಕೋರಿದರು. ಇದನ್ನೂ ಓದಿ: ಮೂರಂತಸ್ತಿನ ಕಟ್ಟಡದಿಂದ ಬಿದ್ದು ಯುವತಿ ಅನುಮಾನಾಸ್ಪದ ಸಾವು

    ಈ ವೇಳೆ ಆಂಧ್ರಪ್ರದೇಶ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಗೃಹ ಸಚಿವ ಪರಮೇಶ್ವರ್ ಅವರಿಗೆ, ‘ಸಿಎಂ, ಸಿಎಂ, ಸಿಎಂ’ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಇದನ್ನೂ ಓದಿ: ಆ.6ಕ್ಕೆ ರಾಯಚೂರಿಗೆ ಸಿಎಂ, ಡಿಸಿಎಂ – ಹಟ್ಟಿ ಚಿನ್ನದಗಣಿಯ 998 ಕೋಟಿ ಕಾಮಗಾರಿಗೆ ಶಂಕುಸ್ಥಾಪನೆ

  • ಆಂಧ್ರದಲ್ಲಿ ರಾಜ್ಯದ ಇಬ್ಬರು ಬಿಜೆಪಿ ಕಾರ್ಯಕರ್ತರ ಹತ್ಯೆ; ತನಿಖೆಗೆ ವಿಜಯೇಂದ್ರ ಆಗ್ರಹ

    ಆಂಧ್ರದಲ್ಲಿ ರಾಜ್ಯದ ಇಬ್ಬರು ಬಿಜೆಪಿ ಕಾರ್ಯಕರ್ತರ ಹತ್ಯೆ; ತನಿಖೆಗೆ ವಿಜಯೇಂದ್ರ ಆಗ್ರಹ

    ಬೆಂಗಳೂರು: ಆಂಧ್ರದಲ್ಲಿ ರಾಜ್ಯದ ಇಬ್ಬರು ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿದ್ದು, ಶೀಘ್ರವೇ ತನಿಖೆಯಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B Y Vijayendra) ಆಗ್ರಹಿಸಿದ್ದಾರೆ.

    ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರಾಗಿದ್ದ ಕೆ.ವಿ.ಪ್ರಶಾಂತ್ ರೆಡ್ಡಿ ಹಾಗೂ ಅವರ ತಂದೆ ವೀರಸ್ವಾಮಿರೆಡ್ಡಿ ಅವರು ಹತ್ಯೆಗೀಡಾಗಿರುವ ಘಟನೆ ಅತ್ಯಂತ ಅಮಾನವೀಯ ಹಾಗೂ ದುಃಖಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಂಧ್ರದಲ್ಲಿ ಬೆಂಗಳೂರಿನ ಉದ್ಯಮಿಗಳ ಅಪಹರಿಸಿ ಕೊಲೆ

    ಈ ದುರ್ಘಟನೆಯನ್ನು ಖಂಡಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರುವೆ. ಕೊಲೆಗಡುಕರನ್ನು ಬಂಧಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತನಿಖೆ ಚುರುಕುಗೊಳಿಸಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಇಸ್ಪೀಟ್ ಅಡ್ಡೆ ಮೇಲೆ ದಾಳಿ – ಬರೋಬ್ಬರಿ 49 ಲಕ್ಷ ಹಣ, 4 ಕಾರು, 15 ಮೊಬೈಲ್‌ ಸೀಜ್‌, 19 ಮಂದಿ ಬಂಧನ

    ನೊಂದ ಕುಟುಂಬಕ್ಕೆ ನ್ಯಾಯ ಸಿಗಲಿ. ಮೃತರ ಕುಟುಂಬ ವರ್ಗದವರಿಗೆ ಈ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಗರ್ಭಿಣಿ ಅನುಮಾನಾಸ್ಪದ ಸಾವು – ಪತ್ನಿ ಶವದ ಮುಂದೆ 2 ದಿನ ಕಳೆದಿದ್ದ ಪತಿ

    ಏನಿದು ಪ್ರಕರಣ?
    ಮಂಗಳವಾರ (ಜು.22) ರಾತ್ರಿ ಆಂಧ್ರದಲ್ಲಿದ್ದ ವೀರಸ್ವಾಮಿರೆಡ್ಡಿ ಹಾಗೂ ಕೆ.ವಿ.ಪ್ರಶಾಂತ್ ರೆಡ್ಡಿ ಅವರ ಮಗ ಬುಧವಾರ ಚೆಕ್‌ಬೌನ್ಸ್ ಪ್ರಕರಣ ಸಂಬಂಧ ಕೋರ್ಟ್ಗೆ ತೆರಳುತ್ತಿದ್ದರು. ಈ ವೇಳೆ 6 ಜನ ದುರ್ಷ್ಕಮಿಗಳು ಕಪ್ಪು ಬಣ್ಣದ ಕಾರಿನಲ್ಲಿ ಬಂದು ಇಬ್ಬರನ್ನು ಅಪಹರಿಸಿ ಬಳಿಕ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.

  • ಭೂಸ್ವಾಧೀನ ಕೈಬಿಟ್ಟ ಕರ್ನಾಟಕ ಸರ್ಕಾರ – ಏರೋಸ್ಪೇಸ್ ಉದ್ಯಮಿಗಳಿಗೆ ಬಹಿರಂಗ ಆಹ್ವಾನ ನೀಡಿದ ಆಂಧ್ರ ಸಿಎಂ ಪುತ್ರ

    ಭೂಸ್ವಾಧೀನ ಕೈಬಿಟ್ಟ ಕರ್ನಾಟಕ ಸರ್ಕಾರ – ಏರೋಸ್ಪೇಸ್ ಉದ್ಯಮಿಗಳಿಗೆ ಬಹಿರಂಗ ಆಹ್ವಾನ ನೀಡಿದ ಆಂಧ್ರ ಸಿಎಂ ಪುತ್ರ

    ಅಮರಾವತಿ: 3 ವರ್ಷಗಳಿಂದ ನಡೆಯುತ್ತಿದ್ದ ದೇವನಹಳ್ಳಿಯ ಚನ್ನರಾಯಪಟ್ಟಣ ಜಮೀನು ಭೂಸ್ವಾಧೀನ ರದ್ದಾಗಿದೆ. ಇದರ ಬೆನ್ನಲ್ಲೇ, ಏರೋಸ್ಪೇಸ್ ಉದ್ಯಮಿಗಳಿಗೆ (Aerospace Industry) ಆಂಧ್ರ (Andhra Pradesh) ಸಿಎಂ ಪುತ್ರ ಹಾಗೂ  ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ (Nara Lokesh) ಏರೋಸ್ಪೇಸ್ ಉದ್ಯಮಿಗಳಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.

    1,777 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಹೊರಡಿಸಿದ್ದ ಫೈನಲ್ ನೋಟಿಫಿಕೇಶನ್‌ನ್ನು ಕರ್ನಾಟಕ ಸರ್ಕಾರ ರದ್ದು ಮಾಡಿದೆ. ಇದರ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ನಾರಾ ಲೋಕೆಶ್‌, ಈ ವಿಚಾರ ಕೇಳಿ ಬೇಸರವಾಯಿತು. ನಿಮಗಾಗಿ ನನ್ನ ಬಳಿ ಇನ್ನೊಂದು ಉತ್ತಮ ಉಪಾಯ ಇದೆ. ನೀವು ಆಂಧ್ರಪ್ರದೇಶದಲ್ಲಿ ಏಕೆ ಜಾಗ ನೋಡಬಾರದು? ಪ್ರೋತ್ಸಾಹ ಧನ ಮತ್ತು 8000 ಎಕರೆಗಳಿಗೂ ಹೆಚ್ಚು ಭೂಮಿ ನಿಮಗಾಗಿ ಸಿದ್ಧವಿದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಿ, ಚರ್ಚಿಸಲು ಬಯಸುತ್ತೇನೆ ಎಂದು ಅವರು ಏರೋಸ್ಪೇಸ್ ಉದ್ಯಮಿಗಳಿಗೆ ಕರೆಕೊಟ್ಟಿದ್ದಾರೆ. ಇದನ್ನೂ ಓದಿ: ದೇವನಹಳ್ಳಿಯ ಭೂಸ್ವಾಧೀನ ಅಧಿಸೂಚನೆ ರದ್ದು – ಸಿಎಂ ಘೋಷಣೆ

    ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರೈತರು, ಹೋರಾಟಗಾರರು, ಸಂಘಟನೆಗಳ ಸಭೆಯಲ್ಲಿ ನೋಟಿಫಿಕೇಶನ್ ರದ್ದು ಮಾಡುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 1,777 ಎಕರೆ ಜಮೀನು ಭೂಸ್ವಾಧೀನಕ್ಕೆ ಸರ್ಕಾರ ನೋಟಿಫಿಕೇಶನ್ ಹೊರಡಿಸಿತ್ತು. ಕೃಷಿ ಭೂಮಿ ಭೂಸ್ವಾಧೀನ ಮಾಡದಂತೆ ರೈತರು ಹೋರಾಟ ಮಾಡುತ್ತಿದ್ದರು. ಕೃಷಿ ಚಟುವಟಿಕೆಗಳು ಮುಂದುವರೆಸುವ ದೃಷ್ಟಿಯಿಂದ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನ ರದ್ದು ಮಾಡುತ್ತಿರೋದಾಗಿ ತಿಳಿಸಿದ್ದರು.

    ಒಂದು ವೇಳೆ ರೈತರು ಸ್ವಯಂ ಪ್ರೇರಿತರಾಗಿ ಜಮೀನು ಕೊಟ್ಟರೆ ಆ ಭೂಮಿ ಸರ್ಕಾರ ಪಡೆಯಲಿದೆ. ಜೊತೆಗೆ ಸೂಕ್ತ ಪರಿಹಾರ ಕೊಡುವ ಜೊತೆಗೆ ಅಭಿವೃದ್ಧಿಪಡಿಸಿದ 50% ಭೂಮಿಯನ್ನು ಜಮೀನು ಕೊಡುವ ರೈತರಿಗೆ ಕೊಡಲಾಗುತ್ತದೆ. ಸರ್ಕಾರದ ಈ ನಿರ್ಧಾರ ದೇವನಹಳ್ಳಿ ಜಮೀನಿಗೆ ಮಾತ್ರ ಅನ್ವಯ ಆಗಲಿದೆ ಎಂದು ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಟೆಕ್ಕಿ ಗಿರೀಶ್‌ ಹತ್ಯೆ ಕೇಸ್‌ – ಶುಭಾಗೆ ಕ್ಷಮಾದಾನ ಅವಕಾಶ ನೀಡಿದ ಸುಪ್ರೀಂ