ಹೈದರಾಬಾದ್: ಆಂಧ್ರಪ್ರದೇಶದ (Andhra Pradesh) ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಅವರ ಸಹೋದರಿ ವೈ.ಎಸ್. ಶರ್ಮಿಳಾ (YS Sharmila) ಅವರನ್ನು ವಾರಂಗಲ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣದಲ್ಲಿ ಶರ್ಮಿಳಾ ಅವರು ವೈಎಸ್‍ಆರ್ ತೆಲಂಗಾಣ ಪಕ್ಷವನ್ನು (YSRTP) ಸಂಘಟಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪಾದಾಯಾತ್ರೆಯನ್ನು ಹಮ್ಮಿಕೊಂಡಿದ್ದರು. ಅಷ್ಟೇ ಅಲ್ಲದೇ ಈವರೆಗೆ ಸುಮಾರು 3,500 ಕಿ.ಮೀವರೆಗೆ ಪಾದಯಾತ್ರೆ ನಡೆಸಿದ್ದರು.
https://t.co/76sRne8P8f
వైయస్ షర్మిల గారి బస్సును తగలబెట్టి, పార్టీ శ్రేణులపై దాడులకు పాల్పడిన టీఆర్ఎస్ గూండాలను వదిలి.. ప్రజా సమస్యలపై నిరంతరం పోరాడుతున్న వైయస్ షర్మిల గారిని పోలీసులు అరెస్ట్ చేయడం హేయమైన చర్య. అక్రమ అరెస్టులతో పోరాటాన్ని ఆపలేరు.#PrajaPrasthanam#YSSharmila
ಇದರಿಂದಾಗಿ ವೈ.ಎಸ್. ಶರ್ಮಿಳಾ ಬೆಂಬಲಿಗರಿಗೂ ಸಿಟ್ಟಿಗೆದ್ದಿದ್ದಾರೆ. ಈ ವೇಳೆ ಶರ್ಮಿಳಾ ಬೆಂಬಲಿಗರಿಗೂ ಹಾಗೂ ಟಿಆರ್‌ಎಸ್ (TRS) ಕಾರ್ಯಕರ್ತರಿಗೂ ಮಾರಾಮಾರಿ ನಡೆದಿದೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಶರ್ಮಿಳಾ ಅವರನ್ನು ಬಂಧಿಸಿದ್ದಾರೆ. ಈ ವೇಳೆ ಶರ್ಮಿಳಾ ಅವರು ನನನ್ನು ಯಾಕೆ ಬಂಧಿಸುತ್ತಿದ್ದೀರಿ? ಇಲ್ಲಿ ನಾನು ಸಂತ್ರಸ್ತೆ, ನಾನು ಆರೋಪಿಯಲ್ಲ ಎಂದು ಕೂಗಾಡಿದ್ದಾರೆ. ಈಗಿರುವ ಆರ್‌ಎಸ್‌ಎಸ್ ಕಳ್ಳರ ಆರ್‌ಎಸ್‌ಎಸ್ : ಪರಿಷತ್ ಸದಸ್ಯ ರಾಜೇಂದ್ರ ಕಿಡಿ
Live Tv
[brid partner=56869869 player=32851 video=960834 autoplay=true]
ಅಮರಾವತಿ: ಬೆಂಗಳೂರಿನಿಂದ (Bengaluru) ಕೋಲ್ಕತ್ತಾಗೆ ಹೋಗುತ್ತಿದ್ದ ಹೌರಾ ಎಕ್ಸ್‌ಪ್ರೆಸ್ (Howrah Express) ರೈಲಿನಲ್ಲಿ ಭಾನುವಾರ ಬೆಂಕಿ (Fire) ಕಾಣಿಸಿಕೊಂಡಿದೆ.
ಹೌರಾ ಎಕ್ಸ್‌ಪ್ರೆಸ್‌ನ ಎಸ್ 9 ಎಸಿ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ರೈಲನ್ನು ಆಂಧ್ರಪ್ರದೇಶದ (Andhra Pradesh) ಚಿತ್ತೂರು (Chittoor) ಜಿಲ್ಲೆಯ ಕುಪ್ಪಂ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ರೈಲ್ವೇ ಸಿಬ್ಬಂದಿ ಬೆಂಕಿಯನ್ನು ಕಂಡು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಪ್ರಯಾಣಿಕರು ರೈಲಿನಿಂದ ಇಳಿದು ಹೊರ ಬಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ನಗರಸಭಾ ಸದಸ್ಯನ ಬರ್ತ್‌ಡೇಯಲ್ಲಿ ನಂಗನಾಚ್ – ಯುವಕನಿಗೆ ಚಾಕು ಇರಿತ
Chittoor, Andhra Pradesh | Local police rushed to rescue passengers after a fire broke out in a bogie of the Bangalore – Howrah express train. No casualties have yet been reported. Fire is being doused. Further details awaited pic.twitter.com/gO4XVFxSod
ಅಮರಾವತಿ: ಪಾಪಿ ತಂದೆಯೊಬ್ಬ (Father) ಮಗು (Son) ಅಳುತ್ತಿದ್ದನ್ನು ನೋಡಿ ಕೋಪಗೊಂಡು ಅದನ್ನು ಹತ್ಯೆ ಮಾಡಿದ ಘಟನೆ ಆಂಧ್ರಪ್ರದೇಶದ (Andhra Pradesh) ತಿರುಪತಿಯ ಶ್ರೀಕಾಳಹಸ್ತಿ ಶುಕಬ್ರಹ್ಮ ಆಶ್ರಮದ ಬಳಿಯ ವಾಟರ್ ಹೌಸ್ ಕಾಲೋನಿಯಲ್ಲಿ ನಡೆದಿದೆ.
ಅನಿಲ್ ತನ್ನ 3 ತಿಂಗಳ ಮಗುವನ್ನು ಕೊಲೆ ಮಾಡಿದ ಆರೋಪಿ. ಈತನಿಗೆ ಹಾಗೂ ಈತನ ಪತ್ನಿ ಸ್ವಾತಿ ಜಗಳ ನಡೆದಿತ್ತು. ಅದೇ ವೇಳೆ ಮಗುವಿಗೂ ಜ್ವರ ಬಂದಿದ್ದರಿಂದ ಒಂದೇ ಸಮನೆ ಅಳುತ್ತಿತ್ತು. ಇದರಿಂದಾಗಿ ಕೋಪಗೊಂಡ ಅನಿಲ್ ಮಗುವನ್ನು ನೆಲಕ್ಕೆ ಎಸೆದಿದ್ದಾನೆ.
ನಾಲ್ಕು ದಿನದಿಂದ ಜ್ವರದಿಂದ ತೀವ್ರವಾಗಿ ಬಳಲುತ್ತಿದ್ದ ಮಗುವು ಅಸ್ವಸ್ಥಗೊಂಡಿತ್ತು. ಅಷ್ಟೇ ಅಲ್ಲದೇ ನೆಲಕ್ಕೆ ಆ ಮಗುವನ್ನು ಎಸೆದಿದ್ದರಿಂದ ಗಂಭೀರವಾಗಿ ತಲೆಗೆ ಪೆಟ್ಟು ಬಿದ್ದಿತ್ತು. ಇದರಿಂದಾಗಿ ಕೂಡಲೇ ಆ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಇದನ್ನೂ ಓದಿ: ಬರ್ತ್‌ಡೇ ಪಾರ್ಟಿಯಲ್ಲಿ ಅರೆಬೆತ್ತಲೆ ನೃತ್ಯ – ಕಾಂಗ್ರೆಸ್ ಸದಸ್ಯರ ನಂಗಾನಾಚ್
ಅಮರಾವತಿ: ತನ್ನನ್ನು ನೋಡಿಕೊಳ್ಳಲು ಕುಟುಂಬದವರು ಯಾರೂ ಇಲ್ಲ ಎಂಬ ಕಾರಣಕ್ಕೆ ತುಂಬು ಗರ್ಭಿಣಿಯನ್ನು (Pregnant) ಆಸ್ಪತ್ರೆಗೆ (Hospital) ದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಿಸಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ (Andhra Pradesh) ತಿರುಪತಿಯ (Tirupati) ಆಸ್ಪತ್ರೆಯೊಂದರಲ್ಲಿ ನಡೆದಿದೆ. ಕೊನೆಗೆ ಮಹಿಳೆ ಅಪರಿಚಿತ ವ್ಯಕ್ತಿಯೊಬ್ಬನ ಸಹಾಯದಿಂದ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.
ವರದಿಗಳ ಪ್ರಕಾರ 100 ಹಾಸಿಗೆಗಳ ತಿರುಪತಿ ಹೆರಿಗೆ ಆಸ್ಪತ್ರೆಯಲ್ಲಿ ಮಹಿಳೆಗೆ ದಾಖಲಾತಿಯನ್ನು ನಿರಾಕರಿಸಿದ ಬಳಿಕ ಅಲ್ಲಿಂದ ಹೊರ ಬರುತ್ತಿದ್ದಂತೆಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಮಹಿಳೆಗೆ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ (Road) ಹೆರಿಗೆ (Delivery) ಮಾಡಿಸಿದ್ದಾನೆ.
ಮಹಿಳೆಗೆ ಹೆರಿಗೆ ಮಾಡಿಸುವ ವೇಳೆ ಅಲ್ಲೇ ಇದ್ದ ಕೆಲ ಮಹಿಳೆಯರು ಬೆಡ್‌ಶೀಟ್ ಹಿಡಿದುಕೊಂಡು ಆಕೆಯನ್ನು ಸುತ್ತುವರಿದಿದ್ದಾರೆ. ಮಹಿಳೆ ಹೆರಿಗೆ ವೇಳೆ ಚೀರಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿದೆ. ಆಕೆಗೆ ಹೆರಿಗೆ ಮಾಡಿಸಿದ ವ್ಯಕ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬುದು ಬಳಿಕ ತಿಳಿದುಬಂದಿದೆ. ಇದನ್ನೂ ಓದಿ: ಜನಪ್ರಿಯ ಪಾನೀಯ ರಸ್ನಾ ಸೃಷ್ಟಿಕರ್ತ ಅರೀಜ್ ಪಿರೋಜ್‍ಶಾ ಖಂಬಟ್ಟಾ ನಿಧನ
ರಸ್ತೆಯಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗರ್ಭಿಣಿಯೊಂದಿಗೆ ಯಾರೂ ಇಲ್ಲವೆಂದರೂ ಆಸ್ಪತ್ರೆಯಲ್ಲಿ ಪ್ರವೇಶವನ್ನು ನಿರಾಕರಿಸಲಾಗುವುದಿಲ್ಲ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿರುಪತಿ ಜಿಲ್ಲಾ ಆರೋಗ್ಯ ಉಸ್ತುವಾರಿ ಶ್ರೀಹರಿ ತಿಳಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ಸತ್ಯೇಂದ್ರ ಜೈನ್‍ಗೆ ಮಾಡಿದ್ದು ಮಸಾಜ್ ಅಲ್ಲ, ಫಿಸಿಯೋಥೆರಪಿ – ಬಿಜೆಪಿಗೆ ಕೇಜ್ರಿವಾಲ್ ತಿರುಗೇಟು
Live Tv
[brid partner=56869869 player=32851 video=960834 autoplay=true]
ಹೈದರಾಬಾದ್: 2024ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬರದಿದ್ದರೆ, ಅದು ನನ್ನ ಕೊನೆಯ ಚುನಾವಣೆಯಾಗಬಹುದು ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) (Telugu Desam Party) ಮುಖ್ಯಸ್ಥ ಚಂದ್ರಬಾಬು ನಾಯ್ಡು (Chandrababu Naidu) ಹೇಳಿದ್ದಾರೆ.
ಆಂಧ್ರಪ್ರದೇಶದ (Andhra Pradesh) ಕರ್ನೂಲ್‍ನಲ್ಲಿ (Kurnool) ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನಸಭೆಗೆ ಪ್ರವೇಶಿಸುವುದಿಲ್ಲ ಎಂಬ ನಿರ್ಧಾರವನ್ನು ತಿಳಿಸಿದ್ದಾರೆ. ಇದು ತನಗೆ, ಅವರ ಪತ್ನಿ ಮತ್ತು ಅವರ ನಂಬಿಕೆಗಳಿಗೆ ಕಳಂಕ ತಂದಿದೆ. ಸಭೆಯು ಗೌರವಾನ್ವಿತ (ಗೌರವ) ಸಭೆಯಲ್ಲ, ಬದಲಿಗೆ ಕೌರವ ಸಭೆಯಾಗಿದೆ (Kaurava Sabha). ಮತ್ತೆ ವಿಧಾನಸಭೆಯನ್ನು ಗೌರವಾನ್ವಿತವಾಗಿ ಸಭೆಯನ್ನಾಗಿ ಮಾಡಲು ಅವರು ಅಧಿಕಾರಕ್ಕೆ ಬರಲು ಮತ ಹಾಕುವುದು ಜನರ ಕೈಯಲ್ಲಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕರೇ, ನಾನು ವಿಧಾನಸಭೆಗೆ ಹೋಗಬೇಕಾದರೆ, ರಾಜ್ಯಕ್ಕೆ ನ್ಯಾಯ ಒದಗಿಸಬೇಕಾದರೆ ನಾನು ರಾಜಕೀಯದಲ್ಲಿ ಇರಬೇಕೆಂದು ಹೇಳುತ್ತೇನೆ. ನನ್ನನ್ನು ಗೆಲ್ಲಿಸದಿದ್ದರೆ ಇದೇ ನನ್ನ ಕೊನೆಯ ಚುನಾವಣೆಯಾಗಿರುತ್ತದೆ. ಇದನ್ನು ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ನಟ ಕೋಮಲ್ ಗೆ ಕೇತುದೆಸೆ: 7 ವರ್ಷ ಸಿನಿಮಾ ಮಾಡಬೇಡ ಎಂದಿದ್ದರಂತೆ ಜಗ್ಗೇಶ್
ಗುರುವಾರ ಅದೋನಿಯಲ್ಲಿ ನಡೆದ ಮತ್ತೊಂದು ರ್‍ಯಾಲಿಯಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (chief minister Jagan Mohan Reddy) ರಾಜ್ಯದ ಪ್ರಗತಿಯನ್ನು ಸಂಪೂರ್ಣವಾಗಿ ಹಾಳುಮಾಡಿದ್ದಾರೆ. ಕಳೆದ ಮೂರೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಪ್ರಗತಿ ಇಲ್ಲ, ಆದರೆ ರೌಡಿಸಂ ಮತ್ತು ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಚಂದ್ರಬಾಬು ನಾಯ್ಡು ಅವರು ಆರೋಪಿಸಿದ್ದರು.
ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‍ಆರ್‌ಸಿಪಿ) ಸರ್ಕಾರವು ಶೌಚಾಲಯಗಳ ಮೇಲೂ ತೆರಿಗೆ ವಿಧಿಸುತ್ತಿದೆ. ಅಲ್ಲದೇ ಆಂಧ್ರಪ್ರದೇಶದಲ್ಲಿ ಮದ್ಯ ಮಾಫಿಯಾ ಆಡಳಿತ ನಡೆಸುತ್ತಿದೆ. ಈ ಮದ್ಯವನ್ನು ಜಗನ್ ಕಡೆಯವರೆ ತಯಾರಿಸುತ್ತಾರೆ ಮತ್ತು ಮಾರಾಟವನ್ನು ಮಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನನ್ನ ಗರ್ಲ್‍ಫ್ರೆಂಡ್‍ಗೆ ನ್ಯಾಯ ಕೊಡಿಸಿ – 6ನೇ ಮಹಡಿಯಿಂದ ಜಿಗಿದ ವ್ಯಕ್ತಿ
Live Tv
[brid partner=56869869 player=32851 video=960834 autoplay=true]
ಹೈದರಾಬಾದ್: ಆನೆಯೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು, ಅದನ್ನು ಮೇಲಕ್ಕೆತ್ತಲು ಜೆಸಿಬಿ ಮೂಲಕ ಅರಣ್ಯಾಧಿಕಾರಿಗಳು ಹರಸಾಹಸ ಪಟ್ಟಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಚಿತ್ತೂರು (Chittoor) ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಮತ್ತು ಅಗ್ನಿಶಾಮಕ ದಳ ತಂಡ ಸ್ಥಳಕ್ಕೆ ಧಾವಿಸಿ, ಬಾವಿಯಲ್ಲಿ ಸಿಕ್ಕಿಬಿದ್ದ ಆನೆಯನ್ನು ರಕ್ಷಿಸುವ ಪ್ರಯತ್ನವನ್ನು ಮೊದಲಿಗೆ ಮಾಡಿದರು. ನಂತರ ಎಷ್ಟೇ ಪ್ರಯತ್ನ ಮಾಡಿದರು, ಆನೆಯನ್ನು ಮೇಲಕ್ಕೆತ್ತಲು ಆಗದೇ, ಕೊನೆಗೆ ಜೆಸಿಬಿ ಯಂತ್ರವನ್ನು ಅಳವಡಿಸಿ ಬಾವಿಯ ಗೋಡೆ ಅಗೆದು ಕೊಂಚ ಜಾಗ ಮಾಡಿಕೊಂಡು ಆನೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಸೂಪರ್ ಸ್ಟಾರ್ ಕೃಷ್ಣ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
Live Tv
[brid partner=56869869 player=32851 video=960834 autoplay=true]
ಅಮರಾವತಿ: ಪಟಾಕಿ ಅಂಗಡಿಗಳಿಗೆ (Firecracker Shop) ಬೆಂಕಿ ತಗುಲಿ ಭಾರೀ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಜೀವ ದಹನಗೊಂಡಿರುವ ಘಟನೆ ಆಂಧ್ರಪ್ರದೇಶದ (Andhra Pradesh) ವಿಜಯವಾಡದಲ್ಲಿ ಭಾನುವಾರ ನಡೆದಿದೆ.
ನಗರದ ಗಾಂಧಿನಗರದ ಜಿಮಖಾನಾ ಮೈದಾನದಲ್ಲಿ ವ್ಯಾಪಾರಿಗಳು ಪಟಾಕಿ (Firecracker) ಅಂಗಡಿಗಳನ್ನು ಸ್ಥಾಪಿಸುತ್ತಿದ್ದ ಸಂದರ್ಭ ದುರ್ಘಟನೆ ನಡೆದಿದೆ. ಸ್ಥಳದಲ್ಲಿದ್ದ 19 ಅಂಗಡಿಗಳ ಪೈಕಿ 3 ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿವೆ. ಇನ್ನೊಂದು ಅಂಗಡಿ ಭಾಗಶಃ ಸುಟ್ಟು ಹೋಗಿದೆ. ಭಾರೀ ಸ್ಫೋಟ ಸಂಭವಿಸಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿದವರು ವಿಜಯವಾಡದ ನಿವಾಸಿಗಳಾದ ಕಾಶಿ ಮತ್ತು ಸಾಂಬಾ ಎಂದು ಗುರುತಿಸಲಾಗಿದ್ದು, ಅವರು ಅದೇ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಬೆಂಕಿ ಹೊತ್ತಿಕೊಂಡಾಗ ಅವರು ಮಲಗಿದ್ದರು ಎನ್ನಲಾಗಿದ್ದು, ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ ಇತರ 6 ಮಂದಿ ಸುರಕ್ಷಿತ ಸ್ಥಳಕ್ಕೆ ಓಡಿಹೋಗಿದ್ದಾರೆ. ಇದನ್ನೂ ಓದಿ: ಕಾಳಿಂಗ ಸರ್ಪಗೆ ಕಿಸ್ ಕೊಟ್ಟ ಭೂಪ – ವ್ಯಕ್ತಿ ಧೈರ್ಯಕ್ಕೆ ಶಹಬ್ಬಾಸ್ ಅಂದ ನೆಟ್ಟಿಗರು
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸಿವೆ. ಘಟನಾ ಸ್ಥಳಕ್ಕೆ ಶಾಸಕ ಮಲ್ಲಾಡಿ ವಿಷ್ಣು, ವಿಜಯವಾಡ ಪೊಲೀಸ್ ಆಯುಕ್ತ ಕಾಂತಿ ರಾಣಾ ಟಾಟಾ ಭೇಟಿ ನೀಡಿದ್ದಾರೆ. ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಗಳು ಬೆಂಕಿಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಅನಿತಾ ಕುಮಾರಸ್ವಾಮಿ ಬರುತ್ತಿದ್ದಂತೆ ಕೈಮುಗಿದು ಮಾತನಾಡಿಸಿದ ಶಾಸಕ ಪ್ರೀತಂಗೌಡ
ಭಾರೀ ಸ್ಫೋಟ ಉಂಟಾಗಿದ್ದರಿಂದ ಮೈದಾನದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಹುಟ್ಟುಹಾಕಿದೆ. ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿದ್ದಾರೆ. ಪೆಟ್ರೋಲ್ ಬಂಕ್ ಹತ್ತಿರ ಪಟಾಕಿ ಅಂಗಡಿಗಳಿಗೆ ಅನುಮತಿ ನೀಡಿದ್ದಕ್ಕೆ ಅಧಿಕಾರಿಗಳ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಅಮರಾವತಿ: ಸೀನಿಯರ್ಸ್ ಮಹಿಳಾ ಟಿ20 (Womens T20) ಲೀಗ್ ತೆರಳಿದ್ದ ಬರೋಡಾದ ಮಹಿಳಾ ಕ್ರಿಕೆಟ್ ತಂಡವಿದ್ದ (Womens Cricket Team) ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನ ಜ್ಞಾನಪುರಂನಲ್ಲಿ ನಡೆದಿದೆ.
ಆಂಧ್ರಪ್ರದೇಶದಲ್ಲಿ ಸೀನಿಯರ್ ಮಹಿಳಾ ಟಿ20 ಲೀಗ್ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಟ್ರಕ್ ಚಾಲಕ ಹಠಾತ್ ಬ್ರೇಕ್ ಹಾಕಿದ್ದರಿಂದ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಖಚಿತ ಮಾಹಿತಿ ಪಡೆದ ಸ್ಥಳೀಯ ಪೊಲೀಸರು (Police) ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ರೀಟೇಲ್‌ನ ಜಿಯೋಮಾರ್ಟ್ ಜೊತೆಗೆ ಆನ್‌ಲೈನ್‌ಗೆ ಸ್ಥಳೀಯ ಕುಶಲಕರ್ಮಿಗಳು ಪ್ರವೇಶ
ಸೀನಿಯರ್ ಮಹಿಳಾ ಟಿ20 ಟ್ರೋಫಿಗೆ ತೆರಳಿದ್ದ ಬರೋಡಾದ ಮಹಿಳಾ ಕ್ರಿಕೆಟ್ ತಂಡವು ಅ.20 ರಂದು ಡಾ.ಪಿವಿಜಿ ರಾಜು ಎಸಿಎ ಕ್ರೀಡಾಂಗಣದಲ್ಲಿ ಸೌರಾಷ್ಟ್ರಗಳೊಂದಿಗೆ ನಡೆದ ಪಂದ್ಯದಲ್ಲಿ ಬರೋಡಾ 7 ವಿಕೆಟ್‌ಗಳಿಂದ ಗೆದ್ದಿತ್ತು. ಯಾಶಿಕಾ ಭಾಟಿಯಾ 60 ಎಸೆತಗಳಲ್ಲಿ 64 ರನ್ ಮತ್ತು ಅಮೃತಾ ಜೋಸೆಫ್ 24 ರನ್ ಗಳಿಸಿದರು. ಯಾಶಿಕಾ ಭಾಟಿಯಾ ಅವರ ನಿರ್ಣಾಯಕ ಹೊಡೆತವು ಬರೋಡಾ ತಂಡಕ್ಕೆ ಪಂದ್ಯವನ್ನು ಗೆಲ್ಲಲು ನೆರವಾಯಿತು.
Andhra Pradesh | A women's cricket team bus met with an accident as it collided with a truck in Gnanapuram, Visakhapatnam earlier today. 4 players & coach were injured; all were admitted to a pvt hospital. After treatment, they went to Vadodara today evening: Visakhapatnam Police pic.twitter.com/VBCboHaQN3
ಸೀನಿಯರ್ ಮಹಿಳಾ ಟಿ20 ಲೀಗ್‌ನ 14ನೇ ಆವೃತ್ತಿ ಅಕ್ಟೋಬರ್ 11ರಿಂದ ಆರಂಭವಾಯಿತು. ಅಕ್ಟೋಬರ್ 30 ರಂದು ಕ್ವಾಲಿಫೈರ್ ಪಂದ್ಯಗಳು ಆರಂಭವಾಗಲಿದ್ದು, ನವೆಂಬರ್ 5ರಂದು ಫೈನಲ್ ಪಂದ್ಯ ನಡೆಯಲಿದೆ.
Live Tv
[brid partner=56869869 player=32851 video=960834 autoplay=true]
– ಹೈದರಾಬಾದ್ ರೋಡ್ ಶೋ ಯಶಸ್ವಿ – 5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ನಿರೀಕ್ಷೆ
ಹೈದರಾಬಾದ್: ನವೆಂಬರ್ 2ರಿಂದ 4ರ ವರೆಗೆ ಬೆಂಗಳೂರಿನಲ್ಲಿ (Bengaluru) ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಭಾಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್. ನಿರಾಣಿ (Murugesh Nirani) ಅವರು ಹೈದರಾಬಾದ್‌ನಲ್ಲಿ ಶುಕ್ರವಾರ ನಡೆಸಿದ ರೋಡ್‌ಶೋ (Roadshow) ಯಶಸ್ವಿಯಾಗಿದೆ.
ಹೈದರಾಬಾದ್‌ನ (Hyderabad) ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಸಚಿವ ನಿರಾಣಿ, ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾಗವಾಗಿ ದೆಹಲಿಯಲ್ಲಿ ಚಾಲನೆ ನೀಡಿದ ದೇಶೀಯ ರೋಡ್ ಶೋ ಯಶಸ್ವಿಯಾಗಿದೆ. ಅದೇ ರೀತಿ, ಹೈದರಾಬಾದ್ ರೋಡ್ ಶೋ ವೇಳೆ ಉದ್ಯಮಿಗಳ ಜತೆ ಇಂದು ನಡೆಸಿದ ಮಾತುಕತೆ ಫಲಪ್ರದವಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳು ನಮ್ಮ ಕೈಗಾರಿಕಾ ನೀತಿ ಕುರಿತು ಆಂಧ್ರ (Andhra Pradesh) ಹಾಗೂ ತೆಲಂಗಾಣದ (Telangana) ಉದ್ಯಮಿಗಳಿಗೆ ಮಾಹಿತಿ ನೀಡಲಾಗಿದೆ. ರಾಜ್ಯದಲ್ಲಿ ಬಂಡವಾಳ ಹೂಡಲು ಹಾಗೂ ಉದ್ಯಮ ವಿಸ್ತರಣೆಗೆ ಹಲವು ಕಂಪನಿಗಳ ಮುಖ್ಯಸ್ಥರು ಒಲವು ತೋರಿದ್ದಾರೆ ಎಂದು ಸಚಿವ ನಿರಾಣಿ ಹೇಳಿದರು.
ಜಾಗತಿ ಹೂಡಿಕೆದಾರರ ಸಮಾವೇಶದ ಅಂತಾರಾಷ್ಟ್ರೀಯ ರೋಡ್‌ಶೋನ ಭಾಗವಾಗಿ ಜಪಾನ್, ದಕ್ಷಿಣ ಕೊರಿಯಾ, ಅಮೆರಿಕ ಹಾಗೂ ಯೂರೋಪ್‌ಗೆ ಭೇಟಿ ನೀಡಲಾಗಿದೆ. ಈ ದೇಶಗಳಿಂದ ದೊಡ್ಡ ಮಟ್ಟದ ವಿದೇಶಿ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. ದೇಶೀಯ ರೋಡ್ ಶೋ ಮುಂಬೈಯಲ್ಲಿ ಮುಕ್ತವಾಗಲಿದೆ ಎಂದು ಅವರು ತಿಳಿಸಿದರು.
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5,000ಕ್ಕೂ ಹೆಚ್ಚು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. 5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದ್ದು, ಇದರಿಂದ 5 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ. ಜಾಗತಿಕ ಹೂಡಿಕೆದಾರರ ಸಮಾವೇಶ ‘ಬಿಲ್ಡ್ ಫಾರ್ ದಿ ವರ್ಲ್ಡ್’ ಎಂಬ ಪರಿಕಲ್ಪನೆಯಡಿ ಅನಾವರಣಗೊಳ್ಳುತ್ತಿದೆ. ಅತ್ಯುತ್ತಮ ಕೈಗಾರಿಕಾ ಪರಿಸರ ವ್ಯವಸ್ಥೆ ಹೊಂದಿರುವ ಕರ್ನಾಟಕ, ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣ ಎಂದರು.
ನಮ್ಮ ಸರ್ಕಾರದ ಹಲವು ಸುಧಾರಣಾ ಕ್ರಮಗಳ ಪರಿಣಾಮವಾಗಿ ಕರ್ನಾಟಕವು ದೇಶದ ಆಕರ್ಷಕ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ. 2021ರ ಜುಲೈನಿಂದೀಚೆಗೆ ಬರೋಬ್ಬರಿ 3 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಪ್ರಸ್ತಾವನೆಗಳು ರಾಜ್ಯಕ್ಕೆ ಬಂದಿವೆ. ದೇಶದ ಒಟ್ಟಾರೆ ವಿದೇಶಿ ಹೂಡಿಕೆಯಲ್ಲಿ ರಾಜ್ಯದ ಪಾಲು ಶೇ.38 ರಷ್ಟು ಇದೆ. ಬರೋಬ್ಬರಿ 22 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆ ರಾಜ್ಯಕ್ಕೆ ಹರಿದು ಬಂದಿದೆ ಎಂದು ಅವರು ವಿವರಿಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆಗೆ ಕೋವ್ಯಾಕ್ಸಿನ್ ಉತ್ಪಾದಕ ಭಾರತ್ ಬಯೋಟೆಕ್ ಒಲವು
ಸುಲಲಿತ ವ್ಯವಹಾರಕ್ಕೆ ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್ ಯೋಜನೆಯ ಜಾರಿಗೊಳಿಸಿರುವ ಕರ್ನಾಟಕ, ಈಸ್ ಆಫ್ ಡೂಯಿಂಗ್ ಬಿಸಿನೆಸ್‌ಗೆ ಶ್ರೇಯಾಂಕ ಪಟ್ಟಿಯಲ್ಲಿ ‘ಟಾಪ್ ಅಚೀವರ್’ ಆಗಿ ಹೊರಹೊಮ್ಮಿದೆ. ಜೊತೆಗೆ, ಹೂಡಿಕೆದಾರರಿಗೆ ಭೂ ಹಂಚಿಕೆಗೆ ಅನುಕೂಲವಾಗುವಂತೆ ‘ಈಸ್ ಆಫ್ ಲ್ಯಾಂಡ್ ಅಲಾಟ್‌ಮೆಂಟ್’ ಕ್ರಮ ಜಾರಿಗೊಳಿಸಲಾಗಿದೆ ಎಂದರು.
ಜಾಗತಿಕ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ಭೂ ಹಂಚಿಕೆಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚುವರಿಯಾಗಿ 50 ಸಾವಿರ ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ 20 ಸಾವಿರ ಮತ್ತು ಇತರ ಜಿಲ್ಲೆಗಳಲ್ಲಿ 30 ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಸಂಭಾವ್ಯ ಹೂಡಿಕೆದಾರರೊಂದಿಗೆ ಚರ್ಚೆ:
ಹೈದರಾಬಾದ್ ರೋಡ್‌ಶೋನಲ್ಲಿ ಭಾರತ್ ಬಯೋಟೆಕ್, ವಿಮತ ಲ್ಯಾಬ್ಸ್, ಲೌರಸ್ ಲ್ಯಾಬ್ಸ್, ಪೆಂಟಗನ್ ರಗ್ಗಡ್ ಸಿಸ್ಟಮ್, ವೈಬ್ರೆಂಟ್ ಎನರ್ಜಿ ಸೇರಿದಂತೆ ಹಲವು ಕಂಪನಿಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಾಗಿದೆ ಎಂದು ನಿರಾಣಿ ತಿಳಿಸಿದರು. ಇದನ್ನೂ ಓದಿ: ಭೂತಾನ್‍ನಿಂದ 17 ಸಾವಿರ ಟನ್ ಅಡಿಕೆ ಆಮದಿಗೆ ಮುಂದಾದ ಕೇಂದ್ರ – ರೈತರಿಂದ ವಿರೋಧ
ವೈನ್ ಮತ್ತು ಆಹಾರ ಮೇಳ:
ಈ ಸಮಾವೇಶ ಬಂಡವಾಳ ಹೂಡಿಕೆಗಷ್ಟೇ ಸೀಮಿತವಾಗಿಲ್ಲ. ಕರ್ನಾಟಕದ ಸಾಂಸ್ಕೃತಿಕ ಲೋಕ ಅಲ್ಲಿ ಅನಾವರಣಗೊಳ್ಳಲ್ಲಿದೆ. ವೈನ್ ಮತ್ತು ಆಹಾರ ಮೇಳದಲ್ಲಿ ಕರ್ನಾಟಕದ ವಿಶೇಷ ಖಾದ್ಯಗಳನ್ನು ಸವಿಯಬಹುದು ಎಂದು ಸಚಿವರು ಹೇಳಿದರು.
ಅಸೋಚಾಮ್ ತೆಲಂಗಾಣ ರಾಜ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರವಿ ಕುಮಾರ್ ರೆಡ್ಡಿ, ಅಸೋಚಾಮ್ ಪ್ರಧಾನ ಕಾರ್ಯದರ್ಶಿ ಪೂಜಾ ಅಹ್ಲುವಾಲಿಯಾ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಡಾ.ಇ.ವಿ ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ಹಾಗೂ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Live Tv
[brid partner=56869869 player=32851 video=960834 autoplay=true]
ಹೈದರಾಬಾದ್: ಹಿಂದೂ ದೇವಾಲಯಗಳಲ್ಲಿ ವಿಗ್ರಹಗಳಿಗೆ ಚಿನ್ನದ ಆಭರಣಗಳನ್ನು ತೊಡಿಸುವುದು ಹೊಸದೇನಲ್ಲ. ಆದರೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನಲ್ಲಿರುವ (Visakhapatnam) 135 ವರ್ಷಗಳಷ್ಟು ಹಳೆಯದಾದ ವಾಸವಿ ಕನ್ಯಕಾ ಪರಮೇಶ್ವರಿ (Vasavi Kanyaka Parameswari) ದೇವಿಯ ದೇವಾಲಯದಲ್ಲಿ ಕರೆನ್ಸಿ ನೋಟುಗಳನ್ನು ಗೋಡೆಗಳ ಮೇಲೆ ಮತ್ತು ನೆಲದ ಮೇಲೆ ಅಂಟಿಸುವ ಮೂಲಕ ಅಲಂಕಾರ ಮಾಡಿರುವ ಅಪರೂಪದ ದೃಶ್ಯ ಕಂಡು ಬಂದಿದೆ.
ನವರಾತ್ರಿ (Navratri) ಮತ್ತು ದಸರಾ (Dussehra) ವೇಳೆ ದೇವಾಲಯಕ್ಕೆ ಮಾಡಲಾಗಿರುವ ಈ ಅಲಂಕಾರವು 8 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ದೇವಾಲಯಗಳಲ್ಲಿ ಈ ರೀತಿಯ ಅಲಂಕಾರಗಳನ್ನು ಮಾಡುವುದು ಹೆಚ್ಚಾಗಿದೆ. ಇದನ್ನೂ ಓದಿ: ಪಂಜಾಬ್ ಸಿಎಂ ಬೆಂಗಾವಲಿಗೆ 42 ಕಾರು- ವಿಐಪಿ ಸಂಸ್ಕೃತಿ ಎಂದು ಕಾಂಗ್ರೆಸ್ ಕಿಡಿ
ಈ ಕುರಿತಂತೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ದೇವಾಲಯ ಸಮಿತಿಯು, ಇದು ಸಾರ್ವಜನಿಕರಿಂದ ಬಂದಿರುವ ಕಾಣಿಕೆಯಾಗಿದ್ದು, ಒಂಬತ್ತು ದಿನಗಳ ಪೂಜೆ ಬಳಿಕ ಹಣವನ್ನು ಅವರಿಗೆ ಹಿಂತಿರುಗಿಸಲಾಗುತ್ತದೆ. ಈ ಹಣವು ದೇವಾಲಯದ ಟ್ರಸ್ಟ್‌ಗೆ ಸೇರುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಪುಣ್ಯಸ್ಮರಣೆ – ತಂದೆಯ ಸಮಾಧಿಗೆ ಹೆಲಿಕಾಪ್ಟರ್‌ನಲ್ಲಿ ಪುಷ್ಪಾರ್ಚನೆ ಮಾಡಿಸಿದ ಮಗ
ನೋಟುಗಳಿಂದ ಮಾಡಿದ ಬಂಟಿಂಗ್ಸ್‍ಗಳನ್ನು ಮರಗಳ ಮೇಲೆ ಮತ್ತು ಸೀಲಿಂಗ್ ಮೇಲೆ ಅಂಟಿಸಿರುವುದನ್ನು ಕಾಣಬಹುದಾಗಿದೆ. ಈ ದೇವಾಲಯವು ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗೊಂಡ ಪಟ್ಟಣದಲ್ಲಿದೆ. ಈ ದೇವಾಲಯದ ಕೇಂದ್ರ ದೇವತೆ, ವಾಸವಿ ಕನ್ಯಕಾ ದೇವಿಯಾಗಿದೆ. ಈ ಹಿಂದೆ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಅಲಂಕಾರವನ್ನು ದೇವಾಲಯಕ್ಕೆ ಮಾಡಲಾಗಿತ್ತು.
Live Tv
[brid partner=56869869 player=32851 video=960834 autoplay=true]