Tag: Andhra Pradesh

  • ಪರೀಕ್ಷೆಯಲ್ಲಿ ಫೇಲ್ – ಆಂಧ್ರದಲ್ಲಿ 48 ಗಂಟೆಗಳಲ್ಲಿ 9 ವಿದ್ಯಾರ್ಥಿಗಳು ಆತ್ಮಹತ್ಯೆ

    ಪರೀಕ್ಷೆಯಲ್ಲಿ ಫೇಲ್ – ಆಂಧ್ರದಲ್ಲಿ 48 ಗಂಟೆಗಳಲ್ಲಿ 9 ವಿದ್ಯಾರ್ಥಿಗಳು ಆತ್ಮಹತ್ಯೆ

    ಹೈದರಾಬಾದ್: ಆಂಧ್ರಪ್ರದೇಶದ ಪರೀಕ್ಷಾ ಮಂಡಳಿ (Andhra Pradesh Board of Intermediate Examination) ಬುಧವಾರ 11 ಮತ್ತು 12 ನೇ ತರಗತಿಯ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ನಂತರ ಒಂಭತ್ತು ವಿದ್ಯಾರ್ಥಿಗಳು (Students) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶ್ರೀಕಾಕುಳಂ ಜಿಲ್ಲೆಯ ಗೋಪಾಲಪುರಂ ಗ್ರಾಮದ 17 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿ ಹೆಚ್ಚಿನ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡಿದ್ದ. ಇದರಿಂದ ಮನನೊಂದು ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಲ್ಕಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿನಾಧಪುರಂನ 16 ವರ್ಷದ ಬಾಲಕಿ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆಲವು ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡು ನೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 2 ಸಾವಿರ ರೂ. ಹಣದಾಸೆಗೆ ಬಾಂಗ್ಲಾದಿಂದ ಭಾರತಕ್ಕೆ ಅಕ್ರಮ ಚಿನ್ನ ಸಾಗಾಟ – ಮಹಿಳೆ ಅರೆಸ್ಟ್

    ವಿಶಾಖಪಟ್ಟಣಂನ (Vishakapattanam) ಕಂಚರಪಾಲೆಂನ 18 ವರ್ಷದ ಯುವಕ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಆತ ದ್ವಿತೀಯ ಪಿಯುಸಿಯ ಒಂದು ವಿಷಯದಲ್ಲಿ ಫೇಲ್ ಆಗಿದ್ದ ಎಂದು ತಿಳಿದು ಬಂದಿದೆ. ಚಿತ್ತೂರು ಜಿಲ್ಲೆಯ ಇಬ್ಬರು 17 ವರ್ಷದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒರ್ವ ಬಾಲಕಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೆ, ಬಾಲಕನೊಬ್ಬ ಕೀಟನಾಶಕ ಸೇವಿಸಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

    ಮತ್ತೊಬ್ಬ 17 ವರ್ಷದ ವಿದ್ಯಾರ್ಥಿ ಅನಕಾಪಲ್ಲಿಯಲ್ಲಿರುವ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂಟರ್ ಮೀಡಿಯೇಟ್ ಮೊದಲ ವರ್ಷದಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕಾಗಿ ಆತ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಅಲ್ಲದೆ ರಾಜ್ಯದಲ್ಲಿ ಇನ್ನಿಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

    ರಾಜ್ಯದಲ್ಲಿ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 11ನೇ ತರಗತಿಗೆ 61% ಫಲಿತಾಂಶ ಬಂದಿದ್ದರೆ, 12ನೇ ತರಗತಿಗೆ 72% ಫಲಿತಾಂಶ ಬಂದಿತ್ತು.

    ಭಾರತದ (India) ಪ್ರೀಮಿಯರ್ ಕಾಲೇಜುಗಳಲ್ಲಿ ಆತ್ಮಹತ್ಯೆಗಳ ಸರಣಿಯ ಆಘಾತಕಾರಿ ಬೆಳವಣಿಗೆಯ ನಡುವೆ ಈ ಸಾವುಗಳು ಪೋಷಕರನ್ನು ಕಂಗೆಡಿಸಿವೆ. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (Indian Institute of Technology)  ವಿವಿಧ ಕ್ಯಾಂಪಸ್‍ಗಳಲ್ಲಿ ಈ ವರ್ಷ ನಾಲ್ಕು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

    ಭಾರತದ ಮುಖ್ಯ ನ್ಯಾಯಮೂರ್ತಿ (Chief Justice of India) ಡಿವೈ ಚಂದ್ರಚೂಡ್ (DY Chandrachud) ಅವರು ಫೆಬ್ರವರಿಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಸಾವಿಗೀಡಾದ ವಿದ್ಯಾರ್ಥಿಗಳ ದುಃಖಿತ ಕುಟುಂಬ ಸದಸ್ಯರ ಬಗ್ಗೆ ಮರುಕವಿದೆ ಎಂದು ಹೇಳಿದ್ದರು. ನಮ್ಮ ವ್ಯವಸ್ಥೆಯಲ್ಲಿ ಎಲ್ಲಿ ತಪ್ಪಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಬಿಜೆಪಿ ಸಂಸದನ ವಿರುದ್ಧ ಪ್ರತಿಭಟನೆ – ಕುಸ್ತಿಪಟುಗಳ ಭೇಟಿಯಾದ ಪ್ರಿಯಾಂಕಾ ಗಾಂಧಿ

  • ಗಡಿ ಜಿಲ್ಲೆ ಕೋಲಾರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಪೆಟ್ರೋಲ್, ಡೀಸೆಲ್ ಸಾಗಾಟ

    ಗಡಿ ಜಿಲ್ಲೆ ಕೋಲಾರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಪೆಟ್ರೋಲ್, ಡೀಸೆಲ್ ಸಾಗಾಟ

    ಕೋಲಾರ: ಆಂಧ್ರಪ್ರದೇಶದ (Andhra Pradesh) ರಾಜ್ಯಕ್ಕೆ ಹೊಂದಿಕೊಂಡಿರುವ ಕೋಲಾರ (Kolar) ಜಿಲ್ಲೆಯಲ್ಲಿ ಅಕ್ರಮ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಮಾಫಿಯಾ ಸಖತ್ ಸದ್ದು ಮಾಡುತ್ತಿದೆ.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರ (Srinivaspura) ಹಾಗೂ ಮುಳಬಾಗಿಲು (Mulabagilu) ತಾಲೂಕಿನಲ್ಲಿ ಎಗ್ಗಿಲ್ಲದೆ ಈ ಮಾಫಿಯಾ ಸದ್ದು ಮಾಡುತ್ತಿದೆ. ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾಫಿಯಾ (Mafia) ಜೋರಾಗಿದ್ದು, ಗಡಿಯ ಪೆಟ್ರೋಲ್ ಬಂಕ್‌ಗಳಿಂದ ಆಂಧ್ರಪ್ರದೇಶಕ್ಕೆ ಪೆಟ್ರೋಲ್ ಡೀಸೆಲ್ ಸಾಗಾಟ ಮಾಡಲಾಗುತ್ತಿದೆ. ಇದನ್ನೂ ಓದಿ: ನೂರು ಕೋಟಿ ಕ್ಲಬ್ ಸೇರಿದ ಚುನಾವಣೆ ಅಕ್ರಮ- ಹಣಕ್ಕಿಂತ ಕುಕ್ಕರ್, ತವಾಗಳದ್ದೇ ಮೇಲುಗೈ

    ಆಂಧ್ರದಲ್ಲಿ ಡೀಸೆಲ್ ಬೆಲೆ ಹೆಚ್ಚಾಗಿರುವ ಕಾರಣ ಕರ್ನಾಟಕದ (Karnataka) ಬಂಕ್‌ಗಳಿಂದ ಅಕ್ರಮವಾಗಿ ಪ್ರತಿನಿತ್ಯ ನೂರಾರು ಲೀಟರ್ ಟ್ರಾಕ್ಟರ್, ಟ್ಯಾಂಕರ್ ಹಾಗೂ ಡ್ರಮ್‌ಗಳಲ್ಲಿ ರಾತ್ರೋರಾತ್ರಿ ಸಾಗಾಟ ಮಾಡಲಾಗುತ್ತಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪ್ರಭಾವಿ ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಅಕ್ರಮ ಪೆಟ್ರೋಲ್, ಡೀಸೆಲ್ ಸಾಗಾಟಕ್ಕೆ ಪೊಲೀಸರ ಕುಮ್ಮಕ್ಕು ಸಿಕ್ಕಿದೆ. ಇದನ್ನೂ ಓದಿ: ಬೀದರ್‌ನಲ್ಲಿ 1 ಕೋಟಿ 50 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ

    ಹಾಗಾಗಿ ರಾಯಲ್ಪಾಡು ಪೊಲೀಸರ ಕುಮ್ಮಕ್ಕಿನಿಂದಲೇ ಇಷ್ಟೆಲ್ಲಾ ನಡೆಯುತ್ತಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಆಂಧ್ರಪ್ರದೇಶದ ಸರ್ಕಾರದಲ್ಲಿರುವ ಪ್ರಭಾವಿ ನಾಯಕರು ತಮ್ಮ ಗುತ್ತಿಗೆ ಕಾಮಗಾರಿಗಳಿಗೆ ಹೀಗೆ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿ ಮಾಡುತ್ತಿದ್ದಾರೆ ಎನ್ನುವುದು ಜಗಜ್ಜಾಹೀರಾಗಿದೆ. ಇದನ್ನೂ ಓದಿ: ಪೊಲೀಸರ ಬಂಧನದಿಂದ ಎಸ್ಕೇಪ್ ಆಗಿದ್ದ ಅಮೃತ್‌ಪಾಲ್ ಸಿಂಗ್‌ನ ಆಪ್ತ ಸಹಾಯಕ ಅರೆಸ್ಟ್ 

    ಹಾಗಾಗಿ ಇದರಲ್ಲಿ ಕೆಲ ಅಧಿಕಾರಿಗಳು ಶಾಮೀಲಾಗಿದ್ದು, ನಿತ್ಯ ಸಾವಿರಾರು ಲೀಟರ್ ಪೆಟ್ರೋಲ್, ಡೀಸೆಲ್ ಸಾಗಾಟ ಮಾಡುತ್ತಿದ್ದರೂ ಕೋಲಾರದ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎನ್ನುವ ಆರೋಪ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಇದನ್ನೂ ಓದಿ: ಬಿಜೆಪಿ ಬೆಂಬಲಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಗಲಾಟೆ – ಮಾರಕಾಸ್ತ್ರ ಹಿಡಿದು ಎರಡು ಗುಂಪುಗಳು ಹೊಡೆದಾಟ

  • ಆಂಧ್ರ ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ ಬಿಜೆಪಿ ಸೇರ್ಪಡೆ

    ಆಂಧ್ರ ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ ಬಿಜೆಪಿ ಸೇರ್ಪಡೆ

    ನವದೆಹಲಿ: ಆಂಧ್ರಪ್ರದೇಶದ (Andhra Pradesh) ಮಾಜಿ ಮುಖ್ಯಮಂತ್ರಿ (Former Chief Minister) ಕಿರಣ್ ಕುಮಾರ್ ರೆಡ್ಡಿ (Kiran Kumar Reddy) ಅವರು ಶುಕ್ರವಾರ ಭಾರತೀಯ ಜನತಾ ಪಕ್ಷಕ್ಕೆ (BJP) ಸೇರ್ಪಡೆಯಾಗಿದ್ದಾರೆ.

    ಅವಿಭಜಿತ ಆಂಧ್ರಪ್ರದೇಶದ ಕೊನೆಯ ಮುಖ್ಯಮಂತ್ರಿಯಾಗಿದ್ದ ಕಿರಣ್ ಕುಮಾರ್ ರೆಡ್ಡಿ ಮಾರ್ಚ್ 12 ರಂದು ಕಾಂಗ್ರೆಸ್ ತೊರೆದಿದ್ದರು. ಅವರು ದೆಹಲಿಯ ಬಿಜೆಪಿ ಕಾರ್ಯಾಲಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ಇದೀಗ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದನ್ನೂ ಓದಿ: ಸುದೀಪ್ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ಪತ್ರ

    ಆಂಧ್ರಪ್ರದೇಶದ ವಿಭಜನೆಯನ್ನು ವಿರೋಧಿಸಿದ್ದ ಕಿರಣ್ ಕುಮಾರ್ 2014ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಅನ್ನು ತೊರೆದಿದ್ದರು. ಬಳಿಕ ‘ಕಿರಣ್ ಜೈ ಸಮೈಕ್ಯಾ ಆಂಧ್ರ’ ಪಕ್ಷವನ್ನು ಕಟ್ಟಿದ್ದರು. ಆದರೆ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಅಗತ್ಯ ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿರಲಿಲ್ಲ. ಬಳಿಕ 2018ರಲ್ಲಿ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.

    ಕಳೆದ ತಿಂಗಳು ಕಿರಣ್ ಕುಮಾರ್ ಕಾಂಗ್ರೆಸ್ ಪಕ್ಷದ ಬಗ್ಗೆ ನಿರಾಶೆ ಹಾಗೂ ಅಪನಂಬಿಕೆ ವ್ಯಕ್ತಪಡಿಸಿ ಪಕ್ಷವನ್ನು ತೊರೆದರು. ಇದೀಗ ಅವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಪ್ರಹ್ಲಾದ್ ಜೋಶಿ ಕಿರಣ್ ಕುಮಾರ್ ಅವರನ್ನು ಪಕ್ಷಕ್ಕೆ ಸಂತೋಷದಿAದ ಸ್ವಾಗತಿಸಿದ್ದಾರೆ. ಆಂಧ್ರದ ಮಾಜಿ ಮುಖ್ಯಮಂತ್ರಿ ಪಕ್ಷಕ್ಕೆ ಸೇರಿರುವುದು ರಾಜ್ಯದಲ್ಲಿ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಶಕ್ತಿಯಾಗಿದೆ ಎಂದು ಜೋಶಿ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಕಬ್ಬಿಣದ ಕಡಲೆಯಾದ ಅಥಣಿ ಕ್ಷೇತ್ರ

  • ಬಣ್ಣದ ಮಾತುಗಳಿಂದ ಅಪ್ರಾಪ್ತ ಬಾಲಕಿಯನ್ನು ನಂಬಿಸಿ ಮದುವೆಯಾಗಿದ್ದ ಶಿಕ್ಷಕ ಅರೆಸ್ಟ್

    ಬಣ್ಣದ ಮಾತುಗಳಿಂದ ಅಪ್ರಾಪ್ತ ಬಾಲಕಿಯನ್ನು ನಂಬಿಸಿ ಮದುವೆಯಾಗಿದ್ದ ಶಿಕ್ಷಕ ಅರೆಸ್ಟ್

    ಅಮರಾವತಿ: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ವಂಚಿಸಿದ ಆರೋಪದ ಮೇಲೆ ಶಿಕ್ಷಕನನ್ನು (Teacher) ಬಂಧಿಸಿದ (Arrest) ಘಟನೆ ಆಂಧ್ರಪ್ರದೇಶದ (Andhra Pradesh) ಚಿತ್ತೂರು ಜಿಲ್ಲೆಯ ಗಂಗವರಂ ಮಂಡಲ್ ಪ್ರದೇಶದಲ್ಲಿ ನಡೆದಿದೆ.

    ಆರೋಪಿಯನ್ನು ಶಿಕ್ಷಕ ಚಲಪತಿ (33) ಬಂಧಿತ ಆರೋಪಿ. ಚಲಪತಿ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ. ಚಲಪತಿಗೆ ಈಗಾಗಲೇ ಮದುವೆಯಾಗಿದ್ದು, ಓರ್ವ ಮಗಳಿದ್ದಾಳೆ. ಆದರೂ ಆತ 12ನೇ ತರಗತಿಯಲ್ಲಿ ಓದುತ್ತಿರುವ 17 ವರ್ಷದ ಬಾಲಕಿಯನ್ನು ಪ್ರೀತಿಸಿದ್ದಾನೆ.

    ಅದಾದ ಬಳಿಕ ಬಾಲಕಿಯ ಅಂತಿಮ ಪರೀಕ್ಷೆ ಮುಗಿದ ನಂತರ ಸುಳ್ಳು ಹೇಳಿ ತಿರುಪತಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಬಾಲಕಿಯ ಬಳಿ ತಾನು ಪ್ರಾಮಾಣಿಕ, ತನ್ನನ್ನು ನಂಬು, ನಿನ್ನನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಬಣ್ಣದ ಮಾತುಗಳನ್ನು ಆಡಿ ನಂಬಿಸಿದ್ದಾನೆ.

    ಅದಾದ ಬಳಿಕ ಅವರಿಬ್ಬರು ಅಲ್ಲಿನ ದೇವಸ್ಥಾನದಲ್ಲಿ ಮದುವೆಯಾದರು. ಮದುವೆಯಾದ (Marriage) ಬಳಿಕ ಚಲಪತಿ ವರ್ತನೆಯಲ್ಲಿ ಬದಾಲಾವಣೆಯಾಗಿದೆ. ಇದನ್ನು ಗಮನಿಸಿದ ಆಕೆ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ರಿವರ್ಸ್ ಆಪರೇಷನ್ ಭೀತಿ – ಡಿಕೆಶಿಗೆ ಬಿಜೆಪಿ, ಜೆಡಿಎಸ್‍ನಿಂದ ಮಾಸ್ಟರ್ ಸ್ಟ್ರೋಕ್!

    ಅದಾದ ಬಳಿಕ ಆಕೆ ತನ್ನ ಪೋಷಕರೊಂದಿಗೆ ಗಂಗವರಂ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಚಲಪತಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಸೋಲಿಸಲು ಜಿದ್ದಿಗೆ ಬಿದ್ದಿರುವ ಬಿಜೆಪಿಗೆ ಅಭ್ಯರ್ಥಿ ಆಯ್ಕೆಯ ಟೆನ್ಶನ್

  • ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಯಲ್ಲಿ 3 ಕಿ.ಮೀ ವರೆಗೆ ಈಜಿದ ಟ್ರಕ್‌ ಡ್ರೈವರ್‌ – ಮುಂದೇನಾಯ್ತು?

    ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಯಲ್ಲಿ 3 ಕಿ.ಮೀ ವರೆಗೆ ಈಜಿದ ಟ್ರಕ್‌ ಡ್ರೈವರ್‌ – ಮುಂದೇನಾಯ್ತು?

    ಅಮರಾವತಿ: ಅಪಘಾತ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಗೆ ಹಾರಿದ ಟ್ರಕ್‌ ಚಾಲಕನೊಬ್ಬ 3 ಕಿ.ಮೀ. ವರೆಗೂ ಸ್ವಿಮ್ಮಿಂಗ್‌ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.

    ಟ್ರಕ್‌ ಡ್ರೈವರ್‌ ಚಲ್ಲ ಕೃಷ್ಣ ಈ ಸಾಹಸ ಮಾಡಿದ ಭೂತ. ಈತ ವಿಂಜಮೂರಿಗೆ ತೆರಳುತ್ತಿದ್ದ. ವೇಗವಾಗಿ ಟ್ರಕ್‌ ಚಾಲನೆ ಮಾಡುತ್ತಿದ್ದರಿಂದ ನಿಯಂತ್ರಣಕ್ಕೆ ಸಿಗದೆ ಪೊದಲಕೂರು ಮಂಡಲದ ತಾಟಿಪರ್ತಿ ಬಳಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೃಷ್ಣ ವಾಹನವನ್ನು ನಿಲ್ಲಿಸದೆ ಇನ್ನಷ್ಟು ವೇಗವಾಗಿ ಓಡಿಸಿದ್ದಾನೆ. ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ವಿಧವೆಗೆ 12 ಲಕ್ಷ ವಂಚಿಸಿದ 56ರ ವ್ಯಕ್ತಿ!

    ಗಾಬರಿಯಲ್ಲಿ ವಾಹನ ಚಲಾಯಿಸುತ್ತಿದ್ದ ಕೃಷ್ಣ, ಸಂಗಮ್ ಪ್ರದೇಶದಲ್ಲಿ ಮತ್ತೆ ಎಮ್ಮೆಯೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈತನನ್ನು ಹಿಡಿಯಲೇಬೇಕು ಎಂದು ಪೊಲೀಸರು ಟ್ರಕ್‌ ಬೆನ್ನತ್ತಿದ್ದಾರೆ. ಡ್ರೈವರ್‌ ಬೆನ್ನತ್ತಿದ್ದ ಪೊಲೀಸರಿಗೆ ಕನಿಗಿರಿ ಜಲಾಶಯದ ನಾಲೆಯ ಒಡ್ಡು ಮೇಲೆ ಟ್ರಕ್‌ ನಿಂತಿರುವುದು ಕಂಡುಬಂದಿದೆ.

    ಈ ವೇಳೆ ನಾಲೆ ಕಡೆ ದೃಷ್ಟಿ ಹಾಯಿಸಿ ನೋಡಿದ ಪೊಲೀಸರಿಗೆ ಟ್ರಕ್‌ ಡ್ರೈವರ್‌ ನೀರಿನಲ್ಲಿ ಈಜುತ್ತಿರುವುದು ಕಂಡುಬಂದಿದೆ. ಆತನನ್ನು ಹಿಡಿಯಲು ಮುಂದಾದಾಗ, ಸಿಗಬಾರದು ಎಂಬ ಕಾರಣಕ್ಕೆ ನಾಲೆಯಿಂದ ದಡದ ಮೇಲಕ್ಕೆ ಬರದೇ ಸುಮಾರು 3 ಕಿ.ಮೀ ವರೆಗೂ ಈಜಿದ್ದಾನೆ. ಇದನ್ನೂ ಓದಿ: ಚಾಕಲೇಟ್ ಆಮಿಷವೊಡ್ಡಿ 4ರ ಬಾಲಕಿ ಮೇಲೆ ಅತ್ಯಾಚಾರ

    ನಾಲೆಯಲ್ಲಿ ಅಪಾಯದ ನೀರಿನ ಮಟ್ಟ ಇದ್ದಿದ್ದರಿಂದ ಪೊಲೀಸರು ಯಾರೂ ಸಹ ನೀರಿಗಿಳಿಯಲು ಮುಂದಾಗಲಿಲ್ಲ. ಕೊನೆಗೆ ಈಜುಪಟುವೊಬ್ಬನನ್ನು ಸ್ಥಳಕ್ಕೆ ಕರೆಸಿದರು. ಆತ ನಾಲೆಗೆ ದುಮುಕಿ ಕೃಷ್ಣನನ್ನು ಹಿಡಿದು ಸುರಕ್ಷಿತವಾಗಿ ದಡಕ್ಕೆ ಕರೆತಂದ. ನಂತರ ಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದರು.

  • ಪಾಗಲ್ ಪ್ರೇಮಿ ಕೊಲೆ ಕೇಸ್‌ಗೆ ಟ್ವಿಸ್ಟ್- ಪೊಲೀಸ್ ತನಿಖೆಯಲ್ಲಿ ಸ್ಫೋಟಕ ರಹಸ್ಯ ಬಯಲು

    ಪಾಗಲ್ ಪ್ರೇಮಿ ಕೊಲೆ ಕೇಸ್‌ಗೆ ಟ್ವಿಸ್ಟ್- ಪೊಲೀಸ್ ತನಿಖೆಯಲ್ಲಿ ಸ್ಫೋಟಕ ರಹಸ್ಯ ಬಯಲು

    ಬೆಂಗಳೂರು: ಪ್ರೀತಿ (Love) ನಿರಾಕರಿಸಿದ ಯುವತಿಯನ್ನ ಬರ್ಬರವಾಗಿ ಇರಿದು ಕೊಲೆ ಮಾಡಿದ್ದ ಸ್ಟೋರಿಗೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದ್ದು, ತನಿಖೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಸಾಯುವ ಮುನ್ನ ತಾಯಿಗೆ ಕರೆ:
    ಪಾಗಲ್ ಪ್ರೇಮಿ ದಿನಕರ್, ಮೂರು ದಿನಗಳ ಹಿಂದೆ ಯುವತಿ ಕೆಲಸ ಮಾಡುತ್ತಿದ್ದ ಜಾಗಕ್ಕೆ ಹುಡುಕಿಕೊಂಡು ಬಂದಿರುವ ವಿಚಾರ ತಿಳಿದ ಲೀಲಾ ಪವಿತ್ರಾ ತನ್ನ ತಾಯಿಗೆ ಕರೆ ಮಾಡಿದ್ದಳು. ಆಂಧ್ರಪ್ರದೇಶದಲ್ಲಿರುವ (Andhra Pradesh) ತನ್ನ ತಾಯಿಗೆ ಕರೆ ಮಾಡಿದ ಲೀಲಾ, ಅಮ್ಮ ಅವನು ಇಲ್ಲಿಗೂ ಬಂದಿದ್ದಾನೆ. ಹೊರಗೆ ಬರುವಂತೆ ಕಿರುಕುಳ ಕೊಡ್ತಿದ್ದಾನೆ. ಏನ್ ಮಾಡೋದು ಗೊತ್ತಾಗ್ತಿಲ್ಲ ಅಂತಾ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಯುವತಿಯ ಬರ್ಬರ ಹತ್ಯೆ- 16 ಬಾರಿ ಚುಚ್ಚಿ ಕೊಂದ ಪಾಗಲ್ ಪ್ರೇಮಿ!

    BENGALURU MURDER 2

    ದಿನಕರ್ ಜೊತೆಗೆ ಮಾತಾಡುವ ವೇಳೆ ಕೂಡ, ತಾಯಿಗೆ ಫೋನ್ ಮಾಡಿ ದಿನಕರ್‌ಗೆ ಮಾತನಾಡುವಂತೆ ಕೊಟ್ಟಿದ್ದಳು. ಈ ವೇಳೆ ಲೀಲಾ ತಾಯಿ ಸಹ ದಿನಕರ್‌ಗೆ ಬೈದು ಅಲ್ಲಿಂದ ಹೋಗುವಂತೆ ಹೇಳಿದ್ದಳು. ಫೋನ್‌ನಲ್ಲಿ ಮಾತನಾಡುತ್ತಿದ್ದಂತೇ ದಿನಕರ್ ಚಾಕು ತೆಗೆದಿದ್ದನಂತೆ. ಚಾಕು ನೋಡಿದ ಲೀಲಾ ತಾಯಿ ಜೊತೆಗೆ ತುಂಬಾ ಭಯ ಆಗ್ತಿದೆ, ಏನಾದರೂ ಮಾಡ್ತಾನೆ ಅಂತಲೇ ಫೋನ್ ಕಟ್ ಆಗಿದೆ ಅನ್ನೋದು ಪೊಲೀಸರ ತನಿಖೆ (Police Investigation) ವೇಳೆ ಬಹಿರಂಗಗೊಂಡಿದೆ. ಇದನ್ನೂ ಓದಿ: ಗೃಹ ಸಚಿವರ ಬೆಂಗಾವಲು ವಾಹನ ಡಿಕ್ಕಿಯಾಗಿಲ್ಲ: ಸ್ಪಷ್ಟನೆ

    BENGALURU MURDER1

    ಆಂಧ್ರಪ್ರದೇಶದ ಶ್ರೀಕಾಕೋಳುವಿನಲ್ಲಿ ಕಾಲೇಜು ಓದುವ ವೇಳೆ ಆರೋಪಿ ದಿನಕರ್, ಲೀಲಾ ಪವಿತ್ರಾಗೆ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ವಿದ್ಯಾಭ್ಯಾಸ ಮುಗಿಸಿದ ಯುವತಿ ಕೆಲಸ ಹರಿಸಿ ಬೆಂಗಳೂರಿಗೆ ಬಂದಿದ್ಲು. ಇದರಿಂದ ಗಾಬರಿಯಾದ ದಿನಕರ್, ಲೀಲಾಳ ತಾಯಿಗೆ ಕರೆ ಮಾಡಿ ಅವಳನ್ನು ನಾನೇ ಮದುವೆ ಆಗೋದು, ನಂಗೆ ಮದುವೆ ಮಾಡಿಕೊಡಿ ಚೆನ್ನಾಗಿ ನೋಡ್ಕೋತಿನಿ ಅಂತಾ ಕೇಳ್ಕೊಂಡಿದ್ದ. ಆದರೆ ಯುವತಿ ತಾಯಿ, ಅಂತರ್ಜಾತಿ ಅನ್ನೋ ಕಾರಣಕ್ಕೆ ಸಾಧ್ಯವಿಲ್ಲ ಅಂತಾ ಹೇಳಿದ್ದರು.

    JEEVAN BHIMA NAGAR POLICE STATION

    ಈ ವೇಳೆ ಲೀಲಾಳನ್ನು ನಾನೇ ಮದುವೆ ಆಗೋದು ಒಂದು ವೇಳೆ ಆ ರೀತಿ ಆಗಲಿಲ್ಲ ಅಂದರೆ ಅವಳನ್ನು ಪತ್ತೆ ಮಾಡಿ ಕೊಲೆ ಮಾಡಿ ನಾನೂ ಆತ್ಮಹತ್ಯೆ ಮಾಡ್ಕೋತಿನಿ ಅಂತಾ ಬೆದರಿಸಿದ್ದ. ಅದು ಮುಂದುವರಿದು, ಲೀಲಾ ಪವಿತ್ರ ಕೆಲಸ ಮಾಡುತ್ತಿದ್ದ ಜಾಗವನ್ನು ಸ್ನೇಹಿತರ ಮೂಲಕ ಪತ್ತೆ ಮಾಡಿದ್ದ. ಆಕೆ ಮದುವೆಯಾಗಲು ನಿರಾಕರಿಸಿದ ನಂತರ 16 ಬಾರಿ ಬರ್ಬರವಾಗಿ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • `ಕಲಾತಪಸ್ವಿ’ ಖ್ಯಾತ ಚಲನಚಿತ್ರ ನಿರ್ಮಾಪಕ ಕೆ. ವಿಶ್ವನಾಥ್ ನಿಧನ

    `ಕಲಾತಪಸ್ವಿ’ ಖ್ಯಾತ ಚಲನಚಿತ್ರ ನಿರ್ಮಾಪಕ ಕೆ. ವಿಶ್ವನಾಥ್ ನಿಧನ

    ಅಮರಾವತಿ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (Dadasaheb Phalke Award) ಪುರಸ್ಕೃತ ಖ್ಯಾತ ಚಲನಚಿತ್ರ ನಿರ್ಮಾಪಕ (Filmmaker) ಕಾಸಿನಾಧುನಿ ವಿಶ್ವನಾಥ್ (92) (K Viswanath) ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

    ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ತಡರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    `ಕಲಾತಪಸ್ವಿ’ (Kalatapasvi) ಎಂದೇ ಖ್ಯಾತರಾಗಿರುವ ವಿಶ್ವನಾಥ್ ಅವರು ಫೆಬ್ರವರಿ 1930ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದರು. ತೆಲುಗು ಚಿತ್ರರಂಗದಲ್ಲಿ (Telugu Industry) ಮಾತ್ರವಲ್ಲದೇ ತಮಿಳು ಹಾಗೂ ಹಿಂದಿ ಚಲನಚಿತ್ರಗಳಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ.

    1951ರಲ್ಲಿ ಪಾತಾಳ ಭೈರವಿ ಸಿನಿಮಾದ ಮೂಲಕ ಸಹಾಯಕ ನಿರ್ದೇಶಕರಾಗಿ ಸಿನಿಮಾ (Cinema) ರಂಗದಲ್ಲಿ ವೃತ್ತಿ ಜೀವನ ಆರಂಭಿಸಿದ ಕೆ ವಿಶ್ವನಾಥ್, 1965 ರಲ್ಲಿ `ಆತ್ಮ ಗೌರವಂ’ ಸಿನಿಮಾದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟರು. ಇದನ್ನೂ ಓದಿ: ಖ್ಯಾತ ನಟ ನಿತಿನ್ ಪಾಲಾದ ‘ಕಬ್ಜ’ ಸಿನಿಮಾದ ಆಂಧ್ರ-ತೆಲಂಗಾಣ ಹಕ್ಕು

    `ಸ್ವಾತಿ ಮುತ್ಯಂ (Swati Mutyam), ಸಾಗರ ಸಂಗಮಂ, ಶಂಕರಾಭರಣಂ, ಸಪ್ತಪದಿ, ಸಿರಿವೆನ್ನೆಲ, ಶುಭಲೇಖ, ಶ್ರುತಿಲಯಲು’ ಸೇರಿದಂತೆ ಹತ್ತು ಹಲವು ಅತ್ಯದ್ಭುತ ತೆಲುಗು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ವಿಶ್ವನಾಥ್, ಹಿಂದಿ ಭಾಷೆಯಲ್ಲೂ `ಈಶ್ವರ್, ಸಂಜೋಗ್, ಸುರ ಸಂಗಮ್ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದರು. ಸ್ವರಾಭಿಷೇಕಂ, ಅತಡು, ಠಾಗೂರ್’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಟ, ನಿರ್ದೇಶಕರಾಗಿ, ಚಿತ್ರಕಥೆಗಾರರಾಗಿಯೂ ತನ್ನದೇ ಆದ ಛಾಪು ಮೂಡಿಸಿ ತೆಲುಗು ಚಿತ್ರರಂಗದಲ್ಲಿ ಕಲಾ ತಪಸ್ವಿ ಎಂದೇ ಹೆಸರಾಂತರಾಗಿದ್ದರು.

    ವಿಶ್ವನಾಥ್ ಅವರಿಗೆ 1992ರಲ್ಲಿ ಪದ್ಮಶ್ರೀ, 5 ರಾಷ್ಟ್ರೀಯ ಪ್ರಶಸ್ತಿಗಳು, ಆಂಧ್ರಪ್ರದೇಶ ಸರ್ಕಾರದಿಂದ 20 ನಂದಿ ಪ್ರಶಸ್ತಿಗಳು, ಜೀವಮಾನ ಸಾಧನೆ ಸೇರಿ 10 ಫೆಲ್ಮ್‌ಫೇರ್‌ ಪ್ರಶಸ್ತಿಗಳು ಸಂದಿವೆ. ಅಲ್ಲದೇ ಭಾರತೀಯ ಚಿತ್ರರಂಗದ ಅತ್ಯುನ್ನತ `ದಾದಾಸಾಹೇಬ್ ಫಾಲ್ಕೆ’ ಗೌರವ ಸಿಕ್ಕಿತ್ತು. ಇದನ್ನೂ ಓದಿ: ಕನ್ನಡದ ‘ಕಬ್ಜ’ ಸಿನಿಮಾಗೆ ಸಾಥ್ ನೀಡಲಿದ್ದಾರೆ ರಾಜಮೌಳಿ

    ವಿಶ್ವನಾಥ್ ಅವರ ನಿಧನಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸಂತಾಪ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರ್ನಾಟಕ-ಆಂಧ್ರ ನಡುವೆ ಸಾರಿಗೆ ಒಪ್ಪಂದ – ಮತ್ತಷ್ಟು ಬಸ್ ಸಂಚಾರ ಆರಂಭ

    ಕರ್ನಾಟಕ-ಆಂಧ್ರ ನಡುವೆ ಸಾರಿಗೆ ಒಪ್ಪಂದ – ಮತ್ತಷ್ಟು ಬಸ್ ಸಂಚಾರ ಆರಂಭ

    ಬೆಂಗಳೂರು: 15 ವರ್ಷಗಳ ಬಳಿಕ ಕರ್ನಾಟಕ (Karnataka) ಹಾಗೂ ಆಂಧ್ರಪ್ರದೇಶ (Andhra Pradesh) ನಡುವೆ ಅಂತರ ರಾಜ್ಯ ಸಾರಿಗೆ ಸಂಚಾರಕ್ಕೆ ಕೆಎಸ್‌ಆರ್‌ಟಿಸಿ (KSRTC) ಒಪ್ಪಂದ ಮಾಡಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಗಳು ಆಂಧ್ರಪ್ರದೇಶದ ಮತ್ತಷ್ಟು ಭಾಗಗಳಿಗೆ ಕರ್ನಾಟಕದಿಂದ ಸಂಚಾರ ಆರಂಭಿಸಲಿದ್ದಾವೆ.

    ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯಗಳ ನಡುವೆ ಇದುವರೆಗೆ ಒಂದು ಪ್ರಧಾನ ಅಂತರರಾಜ್ಯ ಸಾರಿಗೆ ಒಪ್ಪಂದ ಹಾಗೂ 8 ಪೂರಕ ಅಂತರರಾಜ್ಯ ಸಾರಿಗೆ ಒಪ್ಪಂದಗಳು ಏರ್ಪಟ್ಟಿತ್ತು. ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯಗಳ ನಡುವೆ 2008ರಲ್ಲಿ ಅಂತರರಾಜ್ಯ ಸಾರಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

    ಇದೀಗ ಎರಡೂ ರಾಜ್ಯಗಳ ನಡುವೆ ಪ್ರಯಾಣಿಸುವ ಸಾರ್ವಜನಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಕಾರಣ ಸಾರ್ವಜನಿಕ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಮತ್ತು ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ಇಂದು ವಿಜಯವಾಡದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದಂತ ಅನ್ಬುಕುಮಾರ್ ವಿ ಹಾಗೂ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದಂತ ಸಿಹೆಚ್. ಡಿ. ತಿರುಮಲ ರಾವ್ ಮತ್ತಷ್ಟು ಸಂಚಾರ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದರು. ಇದನ್ನೂ ಓದಿ: ಕೂಡಲೇ ವಿದ್ಯುತ್‌ ದರ ಏರಿಸಿ – ಪಾಕ್‌ಗೆ ಐಎಂಎಫ್‌ ಶಾಕ್‌: PoK ಜನತೆಗೆ ನೀಡಿದ್ದ ಸಬ್ಸಿಡಿ ಬಂದ್‌

    ಈ ಚರ್ಚೆಯ ಬಳಿಕ ಕರ್ನಾಟಕ ಹಾಗೂ ಆಂಧ್ರ ಪ್ರದೇಶ ಸರ್ಕಾರಗಳು ಮಾಡಿಕೊಳ್ಳಬೇಕಾದ ಪ್ರಸ್ತಾಪಿತ 9ನೇ ಪೂರಕ ಅಂತರರಾಜ್ಯ ಸಾರಿಗೆ ಒಪ್ಪಂದಕ್ಕೆ ರಾಜ್ಯ ಸಾರಿಗೆ ಸಂಸ್ಥೆಗಳ ಮಾರ್ಗಗಳನ್ನು ಅಂತಿಮಗೊಳಿಸಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಹೀಗಾಗಿ ಈ ಒಪ್ಪಂದದ ಅನ್ವಯ ಪ್ರತಿನಿತ್ಯ ಹೆಚ್ಚುವರಿ ಬಸ್ಸುಗಳನ್ನು ಎರಡು ರಾಜ್ಯಗಳಲ್ಲಿ ಕಾರ್ಯಾಚರಣೆ ಮಾಡಲಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು 69,321 ಕಿಲೋಮೀಟರ್ ಮತ್ತು ಆಂಧ್ರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳು 69,284 ಕಿಲೋಮೀಟರ್ ಕಾರ್ಯಚರಿಸಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೂಳೆ ಮುರಿದರೂ ಎಡಗೈ ಒಂದರಲ್ಲೇ ಬ್ಯಾಟಿಂಗ್ – ವಿಹಾರಿ ಫೈಟ್ ಬ್ಯಾಕ್‍ಗೆ ಮೆಚ್ಚುಗೆ

    ಮೂಳೆ ಮುರಿದರೂ ಎಡಗೈ ಒಂದರಲ್ಲೇ ಬ್ಯಾಟಿಂಗ್ – ವಿಹಾರಿ ಫೈಟ್ ಬ್ಯಾಕ್‍ಗೆ ಮೆಚ್ಚುಗೆ

    ಇಂದೋರ್: ರಣಜಿ ಟ್ರೋಫಿ (Ranji Trophy 2023) ಪಂದ್ಯದಲ್ಲಿ ಆಂಧ್ರಪ್ರದೇಶ (Ranji Trophy 2023) ತಂಡದ ಕ್ಯಾಪ್ಟನ್ ಹನುಮ ವಿಹಾರಿ (Hanuma Vihari) ತನ್ನ ಬಲಗೈ ಮೂಳೆ ಮುರಿದರೂ (Fractured Hand) ಎರಡೂ ಇನ್ನಿಂಗ್ಸ್‌ಗಳಲ್ಲೂ ಎಡಗೈನಲ್ಲಿ ಬ್ಯಾಟಿಂಗ್ ಮಾಡಿ ತಂಡಕ್ಕಾಗಿ ಹೋರಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಆಂಧ್ರಪ್ರದೇಶ (Andhra Pradesh) ಹಾಗೂ ಮಧ್ಯಪ್ರದೇಶ (Andhra Pradesh) ನಡುವಿನ ಕ್ವಾರ್ಟರ್ ಫೈನಲ್ (Quarter-Final) ಪಂದ್ಯದ ಪ್ರಥಮ ಇನ್ನಿಂಗ್ಸ್ ವೇಳೆ ಮೂಳೆ ಮುರಿತಕ್ಕೆ ಒಳಗಾಗಿ ಕೈಗೆ ಪ್ಲಾಸ್ಟರ್ ಹಾಕಿದ್ದರೂ ವಿಹಾರಿ ಆಂಧ್ರಪ್ರದೇಶದ ಬ್ಯಾಟಿಂಗ್ ಸರದಿ ಬಂದಾಗ ಬಲಗೈ ಬ್ಯಾಟರ್ ಎಡಗೈ ಒಂದರಲ್ಲೇ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು. ಪ್ರಥಮ ಇನ್ನಿಂಗ್ಸ್‌ನಲ್ಲಿ 22 ರನ್ (57 ಎಸೆತ, 5 ಬೌಂಡರಿ) ಸಿಡಿಸಿ ಔಟ್ ಆಗಿದ್ದ ವಿವಾರಿ, ಎರಡನೇ ಇನ್ನಿಂಗ್ಸ್‌ನಲ್ಲಿ ದಿಢೀರ್ ಕುಸಿತ ಕಂಡ ಆಂಧ್ರಪ್ರದೇಶದ ಸ್ಥಿತಿ ಕಂಡು ಮತ್ತೆ ಒಂದೇ ಕೈನಲ್ಲಿ ಬ್ಯಾಟಿಂಗ್ ನಡೆಸಲು ಮುಂದಾದರು. ಇದನ್ನೂ ಓದಿ: T20Iː ಧೋನಿ ಹೋದ್ಮೇಲೆ ಜವಾಬ್ದಾರಿ ನನ್ನ ಮೇಲಿದೆ – ಪಾಂಡ್ಯ ಭಾವುಕ

    ಎರಡನೇ ಇನ್ನಿಂಗ್ಸ್‌ನಲ್ಲಿ ಎಡಗೈ ಒಂದರಲ್ಲಿ ಮೂರು ಬೌಂಡರಿ ಸಹಿತ 16 ಎಸೆತಗಳಲ್ಲಿ 15 ರನ್ ಸಿಡಿಸಿ ತಂಡದ ಮೊತ್ತ 90ರ ಗಡಿದಾಟುವಂತೆ ನೋಡಿಕೊಂಡರು. ಇತ್ತ ತಂಡಕ್ಕಾಗಿ ನೆರವಾಗಲು ವಿಹಾರಿ ಒಂದೇ ಕೈನಲ್ಲಿ ಬ್ಯಾಟಿಂಗ್ ಮಾಡಿದನ್ನು ಕಂಡು ಕ್ರಿಕೆಟ್ ಪಂಡಿತರು ಸಹಿತ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 3rd T20I: ಶತಕ ಸಿಡಿಸಿ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದ ಗಿಲ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಖ್ಯಾತ ನಟ ನಿತಿನ್ ಪಾಲಾದ  ‘ಕಬ್ಜ’ ಸಿನಿಮಾದ ಆಂಧ್ರ-ತೆಲಂಗಾಣ ಹಕ್ಕು

    ಖ್ಯಾತ ನಟ ನಿತಿನ್ ಪಾಲಾದ ‘ಕಬ್ಜ’ ಸಿನಿಮಾದ ಆಂಧ್ರ-ತೆಲಂಗಾಣ ಹಕ್ಕು

    ನ್ನಡದ ಮತ್ತೊಂದು ಭಾರೀ ಬಜೆಟ್ ಸಿನಿಮಾ ‘ಕಬ್ಜ’ (Kabzaa) ಇನ್ನೇನು ತೆರೆಗೆ ಬರಲು ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಫೆ.4 ರಂದು ಹೈದರಾಬಾದ್ ನಲ್ಲಿ ಈ ಸಿನಿಮಾದ ಹಾಡೊಂದನ್ನು ಬಿಡುಗಡೆ ಆಗುತ್ತಿದ್ದು, ಅದಕ್ಕೂ ಮುನ್ನ ಆಂಧ್ರ (Andhra Pradesh) ಮತ್ತು ತೆಲಂಗಾಣದ (Telangana) ವಿತರಣಾ ಹಕ್ಕು ಮಾರಾಟವಾಗಿದೆ. ತೆಲುಗಿನ ಖ್ಯಾತ ನಟ ನಿತಿನ್ (Nitin) ಈ ಸಿನಿಮಾವನ್ನು ಎರಡೂ ರಾಜ್ಯಗಳಿಗೆ ವಿತರಣೆ ಮಾಡುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಉಪೇಂದ್ರ (Upendra) ಮತ್ತು ಸುದೀಪ್ (Sudeep) ಅವರನ್ನು ನಿಮ್ಮ ಮುಂದೆ ತರಲು ಖುಷಿ ಆಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ಕಬ್ಜ ಸಿನಿಮಾದ ಹಿಂದಿ ಹಕ್ಕುಗಳು ಈಗಾಗಲೇ ಭರ್ಜರಿಯಾಗಿಯೇ ಮಾರಾಟವಾಗಿವೆ. ಬಾಲಿವುಡ್ ನ ಪ್ರತಿಷ್ಠಿತ ಸಂಸ್ಥೆಯೇ ಹಿಂದಿಯಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದೆ. ಅಲ್ಲದೇ, ಚಿತ್ರದ ಟ್ರೈಲರ್ ಬಿಡುಗಡೆಯನ್ನು ಮುಂಬೈನಲ್ಲಿ ಮಾಡಲು ಸಿದ್ಧತೆ ಕೂಡ ನಡೆಸಿದೆ. ಈ ಹೊತ್ತಿನಲ್ಲಿ ತೆಲುಗಿನ ಹಕ್ಕು ಮತ್ತೋರ್ವ ಖ್ಯಾತ ನಟನ ಸಂಸ್ಥೆಗೆ ಮಾರಾಟವಾಗಿದ್ದು, ಸಹಜವಾಗಿಯೇ ನಿರ್ದೇಶಕ ಆರ್.ಚಂದ್ರು ಅವರಿಗೆ ಸಂಭ್ರಮ ತಂದಿದೆ.  ನಟ ನಿತಿನ್ ಅವರಿಗೆ ಚಂದ್ರು (R. Chandru) ಕೂಡ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಇದನ್ನೂ ಓದಿ: ನಟಿ ಲಾವಣ್ಯ ಜೊತೆ ಹಸೆಮಣೆ ಏರಲು ರೆಡಿಯಾದ ವರುಣ್‌ ತೇಜ್‌

    ಕಬ್ಜ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಒಂಬತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಕೆಜಿಎಫ್ 2 ಸಿನಿಮಾದ ನಂತರ ಮತ್ತೊಂದು ಕನ್ನಡದ ಸಿನಿಮಾ ಭಾರೀ ಸದ್ದು ಮಾಡುತ್ತಿದ್ದು, ಈಗಾಗಲೇ ಭಾರತೀಯ ಸಿನಿಮಾ ರಂಗ ಮತ್ತೊಮ್ಮೆ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುತ್ತಿದೆ. ಈಗಾಗಲೇ ಹಲವಾರು ಯಶಸ್ವಿ ಸಿನಿಮಾಗಳನ್ನು ನೀಡಿರುವ ಚಂದ್ರು, ಈಗ ಮತ್ತೊಂದು ಅದ್ಧೂರಿ ಸಿನಿಮಾವನ್ನೇ ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಭಾರೀ ನಿರೀಕ್ಷೆ ಮೂಡಿಸಿದ್ದಾರೆ.

    ಉಪೇಂದ್ರ, ಸುದೀಪ್ ಮತ್ತು ಚಂದ್ರು ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಮೇಕಿಂಗ್ ನಿಂದಾಗಿಯೇ ನಿರೀಕ್ಷೆ ಹೆಚ್ಚಿಸಿದೆ. ಅದ್ಧೂರಿ ಮೇಕಿಂಗ್, ಭರ್ಜರಿ ತಾರಾಗಣ, ಸೆಟ್, ಹಿನ್ನೆಲೆ ಸಂಗೀತ ಹೀಗೆ ಪ್ರತಿ ವಿಭಾಗದಲ್ಲೂ ಸಿನಿಮಾ ಶ್ರೀಮಂತಿಕೆಯನ್ನು ಹೊತ್ತು ತರುತ್ತಿದೆ. ಹಾಗಾಗಿ ಈ ಸಿನಿಮಾ ಕೂಡ ಮತ್ತೊಂದು ಇತಿಹಾಸ ಬರೆಯಲಿದೆ ಎಂದು ಬಣ್ಣಿಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k