Tag: Andhra Pradesh

  • ಮಗಳಿಗೆ ವಿಚ್ಛೇದನ ಕೊಡಲು ಪ್ರೋತ್ಸಾಹಿಸಿದ ಅತ್ತೆಯನ್ನೇ ಹತ್ಯೆಗೈದ ಅಳಿಯ

    ಮಗಳಿಗೆ ವಿಚ್ಛೇದನ ಕೊಡಲು ಪ್ರೋತ್ಸಾಹಿಸಿದ ಅತ್ತೆಯನ್ನೇ ಹತ್ಯೆಗೈದ ಅಳಿಯ

    ಅಮರಾವತಿ: ಮಗಳನ್ನು ವಿಚ್ಛೇದನ (Divorce) ಕೊಡುವಂತೆ ಪ್ರೋತ್ಸಾಹಿಸಿದ ಕಾರಣಕ್ಕಾಗಿ ಅತ್ತೆಯನ್ನೇ (Mother-In-Law) ಅಳಿಯ ಹತ್ಯೆ ಮಾಡಿದ ಘಟನೆ ಆಂಧ್ರಪ್ರದೇಶದ (Andhra Pradesh) ವಿಜಯವಾಡದ (Vijayawada) ಫ್ಲೈಓವರ್ (Flyover) ಮೇಲೆ ಶನಿವಾರ ನಡೆದಿದೆ.

    ನಾಗಮಣಿ (47) ಕೊಲೆಯಾದ ಮಹಿಳೆ. ಆರೋಪಿ ರಾಜೇಶ್ (37) ಸುಮಾರು 9 ಗಂಟೆಯ ವೇಳೆಗೆ ಆತನ ಅತ್ತೆಯನ್ನು ಚನುಮೋಲು ವೆಂಕಟರಾವ್ ಫ್ಲೈಓವರ್ ಮೇಲೆ ಕೊಂದಿದ್ದಾನೆ. ಆರೋಪಿ ರಾಜೇಶ್‌ಗೆ ಆತನ ಹೆಂಡತಿ ವಿಚ್ಛೇದನ ನೀಡಲು ಮುಂದಾಗಿದ್ದಳು. ಈ ವಿಚ್ಛೇದನದ ಅರ್ಜಿ ನ್ಯಾಯಾಲಯದಲ್ಲಿ ಬಾಕಿ ಇದ್ದು, ಮಗಳಿಗೆ ವಿಚ್ಛೇದನ ನೀಡುವಂತೆ ಪ್ರೋತ್ಸಾಹಿಸಿದ್ದಕ್ಕಾಗಿ ನಾಗಮಣಿಯನ್ನು ಹತ್ಯೆ ಮಾಡಿದ್ದಾನೆ ಎಂದು ವಿಜಯವಾಡ ಪಶ್ಚಿಮ ಎಸಿಪಿ ಹನುಮಂತ ರಾವ್ ತಿಳಿಸಿದ್ದಾರೆ. ಇದನ್ನೂ ಓದಿ: ನವಜೋಡಿ ಸೇರಿ ಐವರು ಸಂಬಂಧಿಗಳನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ

    ಪೊಲೀಸರ ಪ್ರಕಾರ, ವಿಚ್ಛೇದನ ನೀಡುವಂತೆ ತನ್ನ ಮಗಳಿಗೆ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಿದ ಹಿನ್ನೆಲೆ ರಾಜೇಶ್ ನಾಗಮಣಿಯ ಮೇಲೆ ದ್ವೇಷ ಹೊಂದಿದ್ದ. ತಾನು ಪತ್ನಿಯಿಂದ ದೂರವಾಗಲು ಅತ್ತೆ-ಮಾವಂದಿರೇ ಕಾರಣ ಎಂದು ಭಾವಿಸಿ ಅತ್ತೆಯನ್ನು ತೆಂಗಿನಕಾಯಿ ತುಂಡರಿಸುವ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: 20 ಜನರ ಮೇಲೆ ದಾಳಿ ಮಾಡಿದ್ದ ಮೋಸ್ಟ್ ವಾಂಟೆಡ್ ಕೋತಿ ಕೊನೆಗೂ ಸೆರೆ

    ಘಟನೆಯಿಂದ ನಾಗಮಣಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆರೋಪಿಯ ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ರಾಜೇಶ್ ಮನೆಮನೆಗೆ ಬಟ್ಟೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದು, ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಮಾಜಿ ಪ್ರಿಯಕರನ ಕಿಡ್ನಾಪ್ – 21 ಲಕ್ಷ ರೂ. ದೋಚಿದ ಪ್ರಿಯತಮೆ

  • ಪ್ರಿಯಕರನ ಜೊತೆ ಸೇರಿ ಮಾಜಿ ಪ್ರಿಯಕರನ ಕಿಡ್ನಾಪ್ – 21 ಲಕ್ಷ ರೂ. ದೋಚಿದ ಪ್ರಿಯತಮೆ

    ಪ್ರಿಯಕರನ ಜೊತೆ ಸೇರಿ ಮಾಜಿ ಪ್ರಿಯಕರನ ಕಿಡ್ನಾಪ್ – 21 ಲಕ್ಷ ರೂ. ದೋಚಿದ ಪ್ರಿಯತಮೆ

    ಚಿಕ್ಕಬಳ್ಳಾಪುರ: ಮಾಜಿ ಪ್ರಿಯಕರನನ್ನ ಹಾಲಿ ಪ್ರಿಯಕರನಿಂದ ಕಿಡ್ನಾಪ್ ಮಾಡಿಸಿ ಆತನ ಮೇಲೆ ಹಲ್ಲೆ ಮಾಡಿ 21 ಲಕ್ಷ ರೂ. ದೋಚಿರುವ ಘಟನೆ ನಂದಿಗಿರಿಧಾಮದಲ್ಲಿ ನಡೆದಿದೆ.

    ಆಂಧ್ರದ (Andhra Pradesh) ಅನಂತಪುರದ ವಿಜಯ್ ಸಿಂಗ್ ಎಂಬಾತ ಬೆಂಗಳೂರಿನಲ್ಲಿ (Bengaluru) ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಈತ ಹಾಗೂ ಆಂಧ್ರದ ಪೊದ್ದಟೂರಿನ ಯುವತಿ ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕೆಲ ತಿಂಗಳಿಂದ ಇಬ್ಬರ ಮಧ್ಯೆ ಮನಸ್ತಾಪವಾಗಿ ದೂರ ಆಗಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಬತ್ತಿದ ಘಟಪ್ರಭಾ – ಲಕ್ಷಾಂತರ ಮೀನುಗಳ ಸಾವು

    ಜೂ.16 ರಂದು ಯುವತಿಯ ಮತ್ತೊಬ್ಬ ಪ್ರಿಯಕರ ಪುಲ್ಲಾರೆಡ್ಡಿ ಎಂಬಾತ ವಿಜಯ್‍ಸಿಂಗ್‍ಗೆ ಕರೆ ಮಾಡಿ ಪಾರ್ಟಿ ನೆಪದಲ್ಲಿ ಕರೆದಿದ್ದಾನೆ. ಬಳಿಕ ನಂದಿಬೆಟ್ಟದ ತಪ್ಪಲಿನ ಅಂಗಟ್ಟ ಗ್ರಾಮದ ಬಳಿಯ ಕ್ಯೂವಿಸಿ ವಿಲ್ಲಾಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಸಹಚರರಾದ ಸುಬ್ರಮಣಿ, ಸುಧೀರ್ ಜೊತೆ ಸೇರಿ ಪೆಪ್ಪರ್ ಸ್ಪ್ರೈ ಮುಖಕ್ಕೆ ಸಿಂಪಡಿಸಿ ಹಲ್ಲೆ ನಡೆಸಿದ್ದಾರೆ.

    ಬೆಲ್ಟ್ ಹಾಗೂ ಹಗ್ಗದಿಂದ ಮನಸೋ ಇಚ್ಛೆ ಹಲ್ಲೆ ಮಾಡಿ ವೀಡಿಯೋ ಕಾಲ್ ಮೂಲಕ ಯುವತಿ ತೋರಿಸಿದ್ದಾಳೆ. ಮರುದಿನ ಮತ್ತೆ ಯುವತಿಯು ವಿಜಯ್‍ನನ್ನು ಭೇಟಿಯಾಗಿ ಅವಾಚ್ಯ ಪದಗಳಿಂದ ಬೈದಿದ್ದಾಳೆ. ಅಲ್ಲದೇ ಖಾತೆಯಲ್ಲಿದ್ದ 8 ಲಕ್ಷ ರೂ. ಸೇರಿ ಮತ್ತೆ 13 ಲಕ್ಷ ರೂ. ಆತನ ಮೊಬೈಲ್ ಮೂಲಕ ಅನ್‍ಲೈನ್ ಆ್ಯಪ್‍ಗಳಲ್ಲಿ ಲೋನ್ ಪಡೆದು ಬರೋಬ್ಬರಿ 21 ಲಕ್ಷ ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾಳೆ.

    ಅಲ್ಲದೇ ವಿಜಯ್ ಸಿಂಗ್ ಬಳಿ ಇದ್ದ 2 ಆ್ಯಪಲ್ ಐ ಫೋನ್, ಆ್ಯಪಲ್ ಲ್ಯಾಪ್‍ಟಾಪ್, ಆ್ಯಪಲ್ ಐ ಪ್ಯಾಡ್‍ನ್ನ ಕಸಿದುಕೊಂಡು ಆತನ ಬಳಿ ಇದ್ದ 4000 ನಗದು ಸಹ ಕಿತ್ತುಕೊಂಡಿದ್ದಾರೆ. 2 ದಿನಗಳ ನಂತರ ವಿಜಯ್ ಸಿಂಗ್‍ನನ್ನ ಕರೆದುಕೊಂಡು ಹೋಗಿ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಬಿಟ್ಟು ಹೋಗಿದ್ದಾರೆ. ಯಾರಿಗಾದರೂ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ನಂದಿಗಿರಿಧಾಮ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ವ್ಹೀಲಿಂಗ್ ಮಾಡಿ ಶಾಲಾ – ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಮೂವರ ಬಂಧನ

  • ಕುಡಿದ ಮತ್ತಿನಲ್ಲಿ ಹೆಂಡತಿ ಹೆದರಿಸಲು ಬೆಂಕಿ ಹಚ್ಚಿಕೊಂಡ ಭೂಪ

    ಕುಡಿದ ಮತ್ತಿನಲ್ಲಿ ಹೆಂಡತಿ ಹೆದರಿಸಲು ಬೆಂಕಿ ಹಚ್ಚಿಕೊಂಡ ಭೂಪ

    ತುಮಕೂರು: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹೆಂಡತಿಯೊಂದಿಗೆ ಜಗಳವಾಡಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ತಂಗನಹಳ್ಳಿಯಲ್ಲಿ (Tanganahalli) ಬುಧವಾರ ರಾತ್ರಿ ನಡೆದಿದೆ.

    ವಿನೋದ್ (35) ಬೆಂಕಿ ಹಚ್ಚಿಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ. ಕುಲ್ಲಕ ಕಾರಣಕ್ಕೆ ಗಂಡ ಹಾಗೂ ಹೆ0ಡತಿ ನಡುವೆ ಜಗಳವಾಗಿದೆ. ಈ ವೇಳೆ ಹೆಂಡತಿಯನ್ನು ಹೆದರಿಸಲು ಬೈಕ್‍ನಲ್ಲಿದ್ದ ಪೆಟ್ರೋಲ್ ತೆಗೆದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಬಳಿಕ ಗಂಭೀರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 2 ಬಲ್ಬ್ ಇರುವ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ – ಕಂಗಲಾದ ವೃದ್ಧೆ

    ವಿನೋದ್ ಮೂಲತಃ ಆಂಧ್ರ ಪ್ರದೇಶದ (Andhra Pradesh) ಹಿಂದೂಪುರದ ಹೌಸಿಂಗ್ ಗ್ರಾಮದವನು. ತಂಗನಹಳ್ಳಿಯ ಆಶಾ ಎಂಬುವರನ್ನು ಮದುವೆಯಾಗಿ ಪತ್ನಿ ಮನೆಯಲ್ಲಿಯೇ ವಾಸವಾಗಿದ್ದ. ಮದುವೆಯಾದ ಒಂದೆರಡು ವರ್ಷ ಮಾತ್ರ ಸರಿಯಾಗಿ ಸಂಸಾರ ಮಾಡಿದ್ದ. ಈತ ಗಾರೆ ಕೆಲಸ ಮಾಡಿಕೊಂಡು, ಬರುವ ಹಣವನ್ನು ಕುಡಿತಕ್ಕೆ ಬಳಸಿಕೊಳ್ಳುತ್ತಿದ್ದ. ಕಳೆದ 8-10 ವರ್ಷಗಳಿಂದಲೂ ಪಾನಮತ್ತನಾಗಿ ಪ್ರತಿದಿನ ಮನೆಯಲ್ಲಿ ಜಗಳವಾಡುತ್ತಿದ್ದ. ಇದನ್ನೂ ಓದಿ: ಬಸ್ ನಿಲ್ಲಿಸದೇ ಮಹಿಳೆ ಜೊತೆ ಅನುಚಿತ ವರ್ತನೆ – ನಿರ್ವಾಹಕನ ಮೇಲೆ ಸಂಬಧಿಕರಿಂದ ಹಲ್ಲೆ

  • ಅನಾಥ ಬಾಲಕಿ ಮೇಲೆ ಆಶ್ರಮದಲ್ಲೇ ತಿಂಗಳುಗಳಿಂದ ಅತ್ಯಾಚಾರ – ಆಂಧ್ರದ ಸ್ವಾಮೀಜಿ ಅರೆಸ್ಟ್

    ಅನಾಥ ಬಾಲಕಿ ಮೇಲೆ ಆಶ್ರಮದಲ್ಲೇ ತಿಂಗಳುಗಳಿಂದ ಅತ್ಯಾಚಾರ – ಆಂಧ್ರದ ಸ್ವಾಮೀಜಿ ಅರೆಸ್ಟ್

    ಅಮರಾವತಿ: ತಾನೇ ನಡೆಸುತ್ತಿದ್ದ ಆಶ್ರಮದಲ್ಲಿ 15 ವರ್ಷದ ಅನಾಥ ಬಾಲಕಿ ಮೇಲೆ ಹಲವು ತಿಂಗಳುಗಳಿಂದ ಅತ್ಯಾಚಾರ (Rape) ಎಸಗಿರುವ ಆರೋಪದ ಮೇಲೆ ಆಂಧ್ರಪ್ರದೇಶದಲ್ಲಿ (Andhra Pradesh) ಸ್ವಾಮೀಜಿಯೊಬ್ಬರನ್ನು ಬಂಧಿಸಲಾಗಿದೆ.

    ಘಟನೆ ವಿಶಾಖಪಟ್ಟಣದಲ್ಲಿನ ಆಶ್ರಮದಲ್ಲಿ ನಡೆದಿದೆ. ಬಾಲಕಿ ಜೂನ್ 13ರಂದು ಆಶ್ರಮದಿಂದ ತಪ್ಪಿಸಿಕೊಂಡು ಹೋಗಿದ್ದು, ಈ ಬಗ್ಗೆ ಪೊಲೀಸರು ನಾಪತ್ತೆಯ ದೂರನ್ನು ದಾಖಲಿಸಿಕೊಂಡಿದ್ದರು. ಬಳಿಕ ಬಾಲಕಿ ವಿಜಯವಾಡ ತಲುಪಿ ಆಶ್ರಮದ ಸ್ವಾಮೀಜಿ ಪೂರ್ಣಾನಂದ ಸರಸ್ವತಿ (Purnananda Saraswati) ವಿರುದ್ಧ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಬಾಲಕಿಯ ಪೋಷಕರು ಆಕೆ ಚಿಕ್ಕವಳಿದ್ದಾಗಲೇ ನಿಧನರಾಗಿದ್ದಾರೆ. ಬಳಿಕ ಆಕೆಯ ಅಜ್ಜಿ 2 ವರ್ಷಗಳ ಹಿಂದೆ ಆಶ್ರಮದಲ್ಲಿ ಅವಳನ್ನು ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾಳೆ. ಕಳೆದ ಹಲವು ತಿಂಗಳುಗಳಿಂದ ಪೂರ್ಣಾನಂದ ಸರಸ್ವತಿ ತನಗೆ ಪದೇ ಪದೇ ಹಿಂಸೆ ನೀಡುತ್ತಿದ್ದರು ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಬಾಲಕಿ ದೂರು ನೀಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು

    ಇದೀಗ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದು, ಪೂರ್ಣಾನಂದ ಸರಸ್ವತಿ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿಗೆ ಪೋಷಕರಿಲ್ಲದ ಕಾರಣ ಆಕೆಯ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲಾಗಿದೆ. ಪೂರ್ಣಾನಂದ ಸರಸ್ವತಿ ಕಳೆದ ಹಲವು ತಿಂಗಳುಗಳಿಂದ ಆಶ್ರಮದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಲಾಗಿದೆ. ಅವರ ವಿರುದ್ಧ ಭಾರತೀಯ ದಂಡಸಂಹಿತೆ (IPC) ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 17,500 ರೂ. ಕೊಟ್ಟು ಫೇಶಿಯಲ್ ಮಸಾಜ್ ಮಾಡಿಸಿಕೊಂಡ ಯುವತಿ- ಮುಂದೇನಾಯ್ತು..?

  • ಟ್ಯೂಷನ್ ಮುಗಿಸಿ ಬರುತ್ತಿದ್ದಾಗ 10ನೇ ಕ್ಲಾಸ್ ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರು

    ಟ್ಯೂಷನ್ ಮುಗಿಸಿ ಬರುತ್ತಿದ್ದಾಗ 10ನೇ ಕ್ಲಾಸ್ ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರು

    ಅಮರಾವತಿ: ಟ್ಯೂಷನ್ ಮುಗಿಸಿ ವಾಪಸಾಗುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿಯೊಬ್ಬನ (Student) ಮೇಲೆ ದುಷ್ಕರ್ಮಿಗಳು ಪೆಟ್ರೋಲ್ (Petrol) ಸುರಿದು ಬೆಂಕಿ (Fire) ಹಚ್ಚಿರುವ ಅಮಾನುಷ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.

    ಆಂಧ್ರಪ್ರದೇಶದ ಬಾಪಟ್ಲಾ (Bapatla) ಜಿಲ್ಲೆಯಲ್ಲಿ ಬಾಲಕ (Boy) ಅಮರ್‌ನಾಥ್‌ನನ್ನು (15) ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ. ಬಾಲಕನಿಗೆ ವೆಂಕಟೇಶ್ವರ್ (21) ಹಾಗೂ ಇತರ ಮೂವರು ವ್ಯಕ್ತಿಗಳು ಬೆಂಕಿ ಹಚ್ಚಿ ಹತ್ಯೆ ಮಾಡಿರುವುದಾಗಿ ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ.

     

    KILLING CRIME

    ವೆಂಕಟೇಶ್ವರ್ ಮೃತ ಬಾಲಕನ ಸಹೋದರಿಗೆ ಈ ಮೊದಲು ಕಿರುಕುಳ ನೀಡುತ್ತಿದ್ದ. ಇದಕ್ಕೆ ಸಂಬಂಧಿಸಿದಂತೆ ವೆಂಕಟೇಶ್ವರ್ ಇತರ ಮೂವರೊಂದಿಗೆ ಸೇರಿಕೊಂಡು ಬಾಲಕನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ತೀವ್ರ ಸುಟ್ಟ ಗಾಯಗಳಿಂದಾಗಿ ಬಾಲಕನನ್ನು ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಬಾಲಕ ತನಗೆ ವೆಂಕಟೇಶ್ವರ್ ಹಾಗೂ ಇತರ ಮೂವರು ಬೆಂಕಿ ಹಚ್ಚಿದ್ದಾಗಿ ತಿಳಿಸಿದ್ದಾನೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಗಾಳಿಗೆ ಉರುಳಿ ಬಿದ್ದ ಶಾಮಿಯಾನದ ಕಂಬಗಳು- ಮಹಿಳೆ ಸಾವು

    ಘಟನೆಗೆ ಸಂಬಂಧಿಸಿದಂತೆ ಬಪಟ್ಲಾ ಪೊಲೀಸ್ ಠಾಣೆಯಲ್ಲಿ ದುಷ್ಕರ್ಮಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ವೆಂಕಟೇಶ್ವರ್‌ನಿಂದ ಕಿರುಕುಳಕ್ಕೆ ಒಳಗಾಗಿದ್ದ ಮೃತ ಬಾಲಕನ ಸಹೋದರಿಯೂ ಅಪ್ರಾಪ್ತಳಾಗಿರುವುದರಿಂದ ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಮತ್ತೊಂದು ಪ್ರಕರಣವನ್ನು ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಇದೀಗ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಾರಣಾಂತಿಕ ಹಲ್ಲೆಗೈದು ಲಾರಿಯಲ್ಲಿದ್ದ 13 ಟನ್ ಸ್ಟೀಲ್ ದೋಚಿ ಚಾಲಕನನ್ನು ರಸ್ತೆಗೆಸೆದ್ರು!

  • ಫ್ರೀ ಎಜುಕೇಷನ್ ಕೊಡಿಸ್ತೀನಿ ಅಂತ ವಿದ್ಯಾರ್ಥಿಗಳಿಗೆ 18 ಕೋಟಿ ವಂಚನೆ – ಆರೋಪಿ ಅರೆಸ್ಟ್

    ಫ್ರೀ ಎಜುಕೇಷನ್ ಕೊಡಿಸ್ತೀನಿ ಅಂತ ವಿದ್ಯಾರ್ಥಿಗಳಿಗೆ 18 ಕೋಟಿ ವಂಚನೆ – ಆರೋಪಿ ಅರೆಸ್ಟ್

    – ವಿದ್ಯಾರ್ಥಿಗಳ ದಾಖಲೆಗಳನ್ನು ಬ್ಯಾಂಕ್‍ನಲ್ಲಿಟ್ಟು ಕೋಟಿ ಕೋಟಿ ಸಾಲ ಪಡೆದಿದ್ದ ಖತರ್ನಾಕ್!

    ಬೆಂಗಳೂರು: ಉಚಿತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ (Free Education) ಕೊಡಿಸುವುದಾಗಿ 18 ಕೋಟಿ ರೂ. ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಆಂಧ್ರಪ್ರದೇಶ (Andhra Pradesh) ಮೂಲದ ಶ್ರೀನಿವಾಸುಲು ಎಂದು ಗುರುತಿಸಲಾಗಿದೆ. ಆರೋಪಿ ಡಾಟ ಸೈನ್ಸ್ ಕೋರ್ಸ್ ಮಾಡಿಸುವುದಾಗಿ ವಿದ್ಯಾರ್ಥಿಗಳಿಂದ ದಾಖಲೆಗಳನ್ನು ಪಡೆಯುತ್ತಿದ್ದ. ಬಳಿಕ ಅವುಗಳನ್ನು ಬ್ಯಾಂಕ್‍ನಲ್ಲಿಟ್ಟು ಲಕ್ಷಾಂತರ ರೂ. ಸಾಲ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಂಥರ್ ಗೌಡ ಗೆಲುವು – 135 ಕಿಮೀ ದೂರದ ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆ

    ಆರೋಪಿ ಇದುವರೆಗೂ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳಿಗೆ ವಂಚಿಸಿದ್ದಾನೆ. ಈ ಪ್ರಕರಣದಲ್ಲಿ ಬ್ಯಾಂಕ್ ಸಿಬ್ಬಂದಿಯೂ ಭಾಗಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಜಯನಗರ (Jayanagar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಾರತ, ಚೀನಾ ಗಡಿ ವಿವಾದ – ಮಾತುಕತೆಗೆ ಮುಂದಾದ ಉಭಯ ರಾಷ್ಟ್ರಗಳು

  • ಬೆಂಗಳೂರಿನಲ್ಲಿ ಭಾರೀ ಸಂಖ್ಯೆಯಲ್ಲಿ ಮರಗಳು ಉರುಳಿ ಬಿದ್ದಿದ್ದಕ್ಕೆ ಕಾರಣ ಸಿಕ್ತು

    ಬೆಂಗಳೂರಿನಲ್ಲಿ ಭಾರೀ ಸಂಖ್ಯೆಯಲ್ಲಿ ಮರಗಳು ಉರುಳಿ ಬಿದ್ದಿದ್ದಕ್ಕೆ ಕಾರಣ ಸಿಕ್ತು

    ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಕಳೆದ ಮೂರು ದಿನಗಳಿಂದ ಮಹಾಮಳೆ ಸುರಿಯುತ್ತಿದೆ. ಮಳೆಯ (Rain) ಜೊತೆ ಗಂಟೆಗೆ ಸುಮಾರು 40-50 ಕಿ.ಮೀ ವೇಗದಲ್ಲಿ ನೆಲಗಾಳಿ ಬೀಸಿದ್ದರ ಪರಿಣಾಮ ಸಿಲಿಕಾನ್ ಸಿಟಿಯಲ್ಲೇ 500ಕ್ಕೂ ಹೆಚ್ಚು ಗಿಡಮರಗಳು ನೆಲಕ್ಕುರುಳಿವೆ.

    ತಕ್ಷಣ ಈ ಪ್ರಮಾಣದಲ್ಲಿ ಮಳೆ ಹೆಚ್ಚಾಗಲು ಕಾರಣವನ್ನು ಹವಾಮಾನ ಇಲಾಖೆ (Meteorological Department) ತೆರೆದಿಟ್ಟಿದೆ. ಮೂರು ದಿನಗಳಲ್ಲಿ ಆಗಿದ್ದು ಬಿರುಗಾಳಿ ಸಹಿತ ಮಳೆ ಅಲ್ಲ, ಅದು ನೆಲಗಾಳಿ ಸಹಿತ ಮಳೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ಹಿಂದಿನ ಮಳೆ ವೇಳೆ ಸಾಮಾನ್ಯವಾಗಿ ಮೇಲ್ಮಟ್ಟದಲ್ಲಿ ಬಿರುಗಾಳಿ ಇರುತ್ತಿತ್ತು. ಇದರ ಪರಿಣಾಮ ಮಳೆ ಹೆಚ್ಚಾದರೂ ಗಾಳಿ ಕಡಿಮೆ ಇರುತ್ತಿತ್ತು. ಗಿಡಮರಗಳಿಗೆ ಹೆಚ್ಚಿನ ಅನಾಹುತ ಸಂಭವಿಸುತ್ತಿರಲಿಲ್ಲ. ಆದರೆ ಈ ಬಾರಿ ಮಳೆ ಕಡಿಮೆ, ನೆಲಗಾಳಿ ಹೆಚ್ಚಾದ ಪರಿಣಾಮ ಈ ಪ್ರಮಾಣದ ಅವಾಂತರಗಳು ಸೃಷ್ಟಿಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಮುಖ್ಯಮಂತ್ರಿ ಆಯ್ಕೆಗಿಂತಲೂ ಕಗ್ಗಂಟಾದ ವಿಪಕ್ಷ ನಾಯಕನ ಆಯ್ಕೆ

     

    ಅದರಲ್ಲೂ ನಗರದ ಪ್ರಮುಖ ರಸ್ತೆಗಳಲ್ಲಿ ಮುನ್ನೂರಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಕಬ್ಬನ್ ಪಾರ್ಕ್‍ನಲ್ಲೂ ಹಲವಾರು ಮರಗಳು ಮುರಿದು ಬಿದ್ದಿವೆ. ಅಲ್ಲದೆ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ. ಕರ್ನಾಟಕ (Karnataka) ಮಾತ್ರವಲ್ಲದೆ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲೂ (Andhra Pradesh) ಈ ಗಾಳಿ ಪರಿಣಾಮ ಬೀರಿದೆ.

    ಮುಂದಿನ ಮೂರ್ನಾಲ್ಕು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ನೆಲಗಾಳಿಯ ಎಚ್ಚರಿಕೆಯನ್ನು ಇಲಾಖೆ ನೀಡಿದೆ. ಅದೇ ವೇಗದಲ್ಲಿ ಬೀಸಲಿರುವ ಗಾಳಿ ಮತ್ತಷ್ಟು ಹಾನಿ ಉಂಟುಮಾಡುವ ಸಾಧ್ಯತೆಗಳಿದ್ದು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಮುನ್ಸೂಚನೆ ನೀಡಿದೆ.

    ಅರಬ್ಬಿ ಸಮುದ್ರದ ಮೇಲೆ ಕೇವಲ 900 ಮೀಟರ್‌ನಲ್ಲಿ ಸುಳಿಗಾಳಿ ಕಾಣಿಸಿಕೊಂಡಿದ್ದರಿಂದ ಮಳೆಯಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. ಇದನ್ನೂ ಓದಿ: ಜನನ, ಮರಣ ಮಾಹಿತಿ ಮತದಾರರ ಪಟ್ಟಿಗೆ ಜೋಡಣೆ – ಶೀಘ್ರವೇ ಮಸೂದೆ ಮಂಡನೆ

  • ಆಟೋ ರಿಕ್ಷಾ, ಖಾಸಗಿ ಬಸ್ ಡಿಕ್ಕಿ – 6 ಮಹಿಳೆಯರು ಸಾವು, ನಾಲ್ವರಿಗೆ ಗಾಯ

    ಆಟೋ ರಿಕ್ಷಾ, ಖಾಸಗಿ ಬಸ್ ಡಿಕ್ಕಿ – 6 ಮಹಿಳೆಯರು ಸಾವು, ನಾಲ್ವರಿಗೆ ಗಾಯ

    ಅಮರಾವತಿ: ಆಟೋ ರಿಕ್ಷಾಗೆ (Auto Rickshaw) ಖಾಸಗಿ ಬಸ್ (Bus) ಡಿಕ್ಕಿ ಹೊಡೆದ ಪರಿಣಾಮ 6 ಮಹಿಳೆಯರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಕಾಕಿನಾಡ (Kakinada) ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ತಲ್ಲರೇವು ಮಂಡಲದ ಸೀತಾರಾಮಪುರಂ ಬಳಿ ರಾಷ್ಟ್ರೀಯ ಹೆದ್ದಾರಿ 216ರಲ್ಲಿ ಅಪಘಾತ (Accident) ಸಂಭವಿಸಿದ್ದು, 6 ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಹಾಗೂ ಗಾಯಾಳುಗಳು ಯಾನಂನ ನೀಲಪಲ್ಲಿಯವರಾಗಿದ್ದು, ಸೀಗಡಿ ಘಟಕದ ಉದ್ಯೋಗಿಗಳಾಗಿದ್ದರು. ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಿಯಾದ್‌ನಿಂದ ಹೈದರಾಬಾದ್‌ಗೆ ಅಕ್ರಮ ಚಿನ್ನ ಸಾಗಾಟ – 67 ಲಕ್ಷ ರೂ. ಮೌಲ್ಯದ ಚಿನ್ನ ವಶ

    ನಾಲ್ವರು ಗಾಯಾಳುಗಳನ್ನು ಕಾಕಿನಾಡ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ಅಪಘಾತ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಪತ್ತೆ ಹಚ್ಚುತ್ತೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ಧಾರ್ಮಿಕ ಪೋಸ್ಟ್‌ಗೆ ನಡೀತು ಭಾರೀ ಘರ್ಷಣೆ – 1 ಸಾವು, 8 ಮಂದಿಗೆ ಗಾಯ

  • ಆನೆ ದಾಳಿಗೆ ಇಬ್ಬರು ಸಾವು – ಆತಂಕದಲ್ಲಿ ಗಡಿ ಜಿಲ್ಲೆಯ ಜನ

    ಆನೆ ದಾಳಿಗೆ ಇಬ್ಬರು ಸಾವು – ಆತಂಕದಲ್ಲಿ ಗಡಿ ಜಿಲ್ಲೆಯ ಜನ

    ಕೋಲಾರ: ಆನೆ ದಾಳಿಗೆ (Elephant Attack) ಇಬ್ಬರು ಮೃತಪಟ್ಟಿರುವ ಘಟನೆ ಕೋಲಾರ (Kolar) ಹಾಗೂ ಆಂಧ್ರದ ಗಡಿ ಭಾಗದ ಚಿತ್ತೂರಲ್ಲಿ ಶುಕ್ರವಾರ ನಡೆದಿದೆ.

    ಆಂಧ್ರಪ್ರದೇಶಕ್ಕೆ (Andhra Pradesh) ಸೇರಿರುವ ಚಿತ್ತೂರಿನ ಪತಿಚೇನು ಗ್ರಾಮದ ಓರ್ವ ಮಹಿಳೆ ಹಾಗೂ ಸಪ್ಪನಿಕುಂಟಾ ಗ್ರಾಮದ ವ್ಯಕ್ತಿಯ ಮೇಲೆ ಆನೆ ದಾಳಿ ನಡೆಸಿದೆ. ದಾಳಿಗೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಘಟನೆಯಿಂದ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ನಕ್ಸಲ್‌ ದಂಪತಿ ಮಗಳು 10 ನೇ ತರಗತಿ ಪಾಸ್‌; ಅಪ್ಪ-ಅಮ್ಮನ ಥರ ಆಗಲ್ಲ, ಡಾಕ್ಟರ್‌ ಆಗ್ತೀನಿ ಅಂದ್ಳು ಬಾಲಕಿ

    ಅರಣ್ಯ ಇಲಾಖೆಗೆ (Forest Department) ಆನೆಗಳ ಹಾವಳಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಆನೆಗಳ ಉಪಟಳದಿಂದಾಗಿ ಗಡಿ ಭಾಗದ ಎರಡು ರಾಜ್ಯಗಳ ಜನ ಕಂಗಾಲಾಗಿದ್ದಾರೆ. ಈ ಬಗ್ಗೆ ಇಲಾಖೆ ಸೂಕ್ತ ಕ್ರಮ ಕೈಗೊಂಡು ಆನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಗಡಿ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯ ಕುರ್ಚಿಯಲ್ಲೇ ರಾಜಾರೋಷವಾಗಿ ಕುಳಿತು ಮದ್ಯಪಾನ- ವ್ಯಕ್ತಿ ಅರೆಸ್ಟ್

  • ಸಲಿಂಗ ವಿವಾಹ ಕಾನೂನು ಮಾನ್ಯತೆ ವಿಚಾರಣೆ – ಸಿಜೆಐ ಹಿಂದೆ ಸರಿಯುವಂತೆ ಸಲ್ಲಿಸಿದ್ದ ಮನವಿ ತಿರಸ್ಕೃತ

    ಸಲಿಂಗ ವಿವಾಹ ಕಾನೂನು ಮಾನ್ಯತೆ ವಿಚಾರಣೆ – ಸಿಜೆಐ ಹಿಂದೆ ಸರಿಯುವಂತೆ ಸಲ್ಲಿಸಿದ್ದ ಮನವಿ ತಿರಸ್ಕೃತ

    ನವದೆಹಲಿ: ಸಲಿಂಗ ವಿವಾಹಗಳಿಗೆ (Same sex marriage) ಕಾನೂನು ಮಾನ್ಯತೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (Chief Justice of India) ಡಿವೈ ಚಂದ್ರಚೂಡ್ (DY Chandrachud) ಅವರು ಹಿಂದೆ ಸರಿಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಬುಧವಾರ ವಜಾಗೊಳಿಸಿದೆ.

    ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠವು ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ. ವಿಚಾರಣೆಯ 9ನೇ ದಿನವಾದ ಇಂದು ಅನ್ಸನ್ ಥಾಮಸ್ ಎಂಬುವವರು ಮಾ. 13 ಮತ್ತು ಏ. 17 ರಂದು ಸುಪ್ರೀಂ ಕೋರ್ಟ್‍ಗೆ ಕಳುಹಿಸಿದ ಪತ್ರಗಳನ್ನು ಉಲ್ಲೇಖಿಸಲಾಯಿತು. ನ್ಯಾಯಮೂರ್ತಿ ಚಂದ್ರಚೂಡ್ ಅವರು ಈ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂಬ ಅದರಲ್ಲಿನ ಮನವಿಯನ್ನು ಪೀಠ ತಿರಸ್ಕರಿಸಿದೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

    ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ಹಿಂದೆ ಸರಿಯುವಂತೆ ಸಲ್ಲಿಸಿದ ಅರ್ಜಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು.

    ಸಿಜೆಐ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಎಸ್.ಕೆ ಕೌಲ್, ಎಸ್.ಆರ್ ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸುತ್ತಿದೆ. ಅಸ್ಸಾಂ (Assam), ಆಂಧ್ರಪ್ರದೇಶ (Andhra Pradesh) ಮತ್ತು ರಾಜಸ್ಥಾನ (Rajasthan) ರಾಜ್ಯಗಳು ಭಾರತದಲ್ಲಿ ಸಲಿಂಗ ವಿವಾಹಗಳನ್ನು ಕಾನೂನು ಬದ್ಧಗೊಳಿಸುವುದನ್ನು ವಿರೋಧಿಸಿವೆ. ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದು ಪ್ರಕರಣ – ರಾಜಕೀಯ ಹೇಳಿಕೆಗಳಿಗೆ ಸುಪ್ರೀಂ ಕಿಡಿ