Tag: Andhra Pradesh

  • ಮತ್ತೊಂದು ಬಾರ್ಡರ್‌ ಲವ್‌ – ಭಾರತದ ಪ್ರೇಮಿಗಾಗಿ ಲಂಕಾದಿಂದ ಹಾರಿ ಬಂದ ಲಂಕಿಣಿ!

    ಮತ್ತೊಂದು ಬಾರ್ಡರ್‌ ಲವ್‌ – ಭಾರತದ ಪ್ರೇಮಿಗಾಗಿ ಲಂಕಾದಿಂದ ಹಾರಿ ಬಂದ ಲಂಕಿಣಿ!

    ಅಮರಾವತಿ/ಕೊಲಂಬೊ: ಪ್ರೀತಿಗೆ (Love) ವಯಸ್ಸು, ಗಡಿ ಅನ್ನೋದೇ ಇಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಇತ್ತೀಚೆಗೆ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ ಪಬ್‌ಜೀ ಪ್ರೇಮಿಗಾಗಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿರತ್ತು. ಈ ಬೆನ್ನಲ್ಲೇ ಬಾಂಗ್ಲಾದೇಶದಿಂದ, ಪೊಲೇಂಡಿನಿಂದ ಭಾರತಕ್ಕೆ ತಮ್ಮ ಪ್ರೇಮಿಗಳನ್ನ ಹರಸಿ ಬಂದ ಉದಾಹರಣೆಗಳಿವೆ. ಅಲ್ಲದೇ ಭಾರತದ ವಿವಾಹಿತ ಮಹಿಳೆ ಅಂಜು ತನ್ನ ಇನ್‌ಸ್ಟ್ರಾಗ್ರಾಮ್‌ ಪ್ರೇಮಿಗಾಗಿ ಪಾಕಿಸ್ತಾನಕ್ಕೆ ಹೋದ ಉದಾಹರಣೆಯಿದೆ. ಅದೇ ರೀತಿ ಶ್ರೀಲಂಕಾ ಮಹಿಳೆ (Sri Lankan Woman) ಸುದ್ದಿಯಲ್ಲಿದ್ದಾಳೆ.

    ಶ್ರೀಲಂಕಾದ ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಪರಿಚಯವಾದ ಭಾರತೀಯ ವ್ಯಕ್ತಿಯೊಬ್ಬನನ್ನ ಹುಡುಕಿಕೊಂಡು ಭಾರತಕ್ಕೆ ಬಂದು ಮದುವೆಯಾಗಿದ್ದಾರೆ. ವಿಘ್ನೇಶ್ವರಿ ಶಿವಕುಮಾರ್‌ ಹೆಸರಿನ‌ 25 ವರ್ಷದ ಮಹಿಳೆ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದಾಳೆ. ಇದೀಗ ಫೇಸ್‌ಬುಕ್‌ನಲ್ಲಿ ಪರಿಚಯವಾದ ಆಂಧ್ರಪ್ರದೇಶದ (Andhra Pradesh) ವೆಂಕಟಗಿರಿಕೋಟಾ ಪಟ್ಟಣ 28 ವರ್ಷದ ಗೆಳೆಯ ಲಕ್ಷ್ಮಣ್‌ನನ್ನ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಇದೇ ತಿಂಗಳ ಆಗಸ್ಟ್‌ 6ಕ್ಕೆ ವಿಘ್ನೇಶ್ವರಿ ಶಿವಕುಮಾರ್‌ ಪ್ರವಾಸಿ ವೀಸಾದ ಅವಧಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಿಯಮಗಳಿಗೆ ಅನುಸಾರವಾಗಿ ಚಿತ್ತೂರು ಜಿಲ್ಲಾ ಪೊಲೀಸರು ವಿಘ್ನೇಶ್ವರಿಗೆ ನೋಟಿಸ್‌ ನೀಡಿದ್ದಾರೆ. ಸದ್ಯ ಮದುವೆ ಫೋಟೊ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: 2013ರಲ್ಲೇ ಮೃತಪಟ್ಟ ಶಿಕ್ಷಕಿ ಹೆಸರಿಗೆ 7 ಕೋಟಿ ತೆರಿಗೆ ನೋಟಿಸ್‌ – ಕುಟುಂಬಸ್ಥರು ಶಾಕ್‌!

    ಲಂಕಿಣಿ ಹಾರಿಬಂದದ್ದು ಹೇಗೆ?
    2017ರಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ವಿಘ್ನೇಶ್ವರಿ ಮತ್ತು ಲಕ್ಷ್ಮಣ್‌ ಮೊದಲು ಸ್ನೇಹಿತರಾಗಿದ್ದರು. ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು. ಜುಲೈ 8 ರಂದು ಆಂಧ್ರಪ್ರದೇಶಕ್ಕೆ ಬಂದಿಳಿದ ವಿಘ್ನೇಶ್ವರಿ, ಜುಲೈ 20 ರಂದು ದೇವಸ್ಥಾನದಲ್ಲಿ ಇಬ್ಬರು ಮದುವೆಯಾಗಿದ್ದರು. ವಿವಾಹದ ನಂತರ ವಿಘ್ನೇಶ್ವರಿ ಭಾರತದ ಪೌರತ್ವಕ್ಕೆ ಬೇಡಿಕೆಯಿಟ್ಟಿದ್ದಾರೆ. ಆದ್ದರಿಂದ ಆಕೆಯ ವೀಸಾ ಅವಧಿಯನ್ನ ವಿಸ್ತರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ರಾಜಕೀಯ ಎದುರಾಳಿಗಳು- ಪರಸ್ಪರ ಕೈಕುಲುಕಿದ ಶರದ್ ಪವಾರ್, ಮೋದಿ

    ಈ ನಡುವೆ ಭವಿಷ್ಯದಲ್ಲಿ ಕಾನೂನು ಸಮಸ್ಯೆ ಎದುರಾಗುವುದಕ್ಕೂ ಮುನ್ನ ಔಪಚಾರಿಕವಾಗಿ ವಿವಾಹವನ್ನು ನೋಂದಣಿ ಮಾಡಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈ. ರಿಶಾಂತ್ ರೆಡ್ಡಿ ಭಾರತೀಯ ಪೌರತ್ವ ಪಡೆಯುವ ವಿಧಾನ ಮತ್ತು ಮಾನದಂಡಗಳ ಬಗ್ಗೆ ವಿಘ್ನೇಶ್ವರಿಗೆ ಮಾಹಿತಿ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚುನಾವಣಾ ಭರವಸೆ ಈಡೇರಿಸಲು ಸಾಧ್ಯವಾಗ್ಲಿಲ್ಲ ಅಂತ ತನಗೆ ತಾನೇ ಚಪ್ಪಲಿಯಿಂದ ಹೊಡೆದುಕೊಂಡ ಕೌನ್ಸಿಲರ್

    ಚುನಾವಣಾ ಭರವಸೆ ಈಡೇರಿಸಲು ಸಾಧ್ಯವಾಗ್ಲಿಲ್ಲ ಅಂತ ತನಗೆ ತಾನೇ ಚಪ್ಪಲಿಯಿಂದ ಹೊಡೆದುಕೊಂಡ ಕೌನ್ಸಿಲರ್

    ಅಮರಾವತಿ: ಮತದಾರರಿಗೆ ನೀಡಿದ ಚುನಾವಣಾ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದೇ ಹೋಗಿದ್ದಕ್ಕೆ ಕೌನ್ಸಿಲರ್ (Councillor) ಒಬ್ಬರು ತನಗೆ ತಾನೇ ಚಪ್ಪಲಿಯಿಂದ ಹೊಡೆದುಕೊಂಡಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಅನಕಪಲ್ಲಿಯಲ್ಲಿ (Anakapalli) ನಡೆದಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಆಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದ ನರಸೀ ಪಟ್ಟಣ ಪುರಸಭೆಯ ಕೌನ್ಸಿಲರ್ ಮುಲಪರ್ತಿ ರಾಮರಾಜು (40) ಸ್ಥಳೀಯ ಪೌರಾಡಳಿತ ಮಂಡಳಿಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನವನ್ನು ಮಾಡಿದರೂ ಸಹ ಮತದಾರರಿಗೆ ನೀಡಿದ ಭರವಸೆಯನ್ನು ಉಳಿಸುವಲ್ಲಿ ವಿಫಲವಾಗಿದ್ದಾಗಿ ಬೇಸರ ವ್ಯಕ್ತಪಡಿಸಿ ಚಪ್ಪಲಿಯಿಂದ ತಾವೇ ಹೊಡೆದುಕೊಂಡಿದ್ದಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇ ನಿರ್ಮಾಣದ ವೇಳೆ ಕ್ರೇನ್ ಕುಸಿದು 16 ಮಂದಿ ಕಾರ್ಮಿಕರು ದುರ್ಮರಣ

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮರಾಜು, ನಾನು ಕೌನ್ಸಿಲರ್ ಆಗಿ ಚುನಾಯಿತನಾಗಿ 31 ತಿಂಗಳಾಗಿದೆ. ಆದರೆ ನನ್ನ ವಾರ್ಡ್‌ನಲ್ಲಿ ಒಳಚರಂಡಿ, ವಿದ್ಯುತ್, ನೈರ್ಮಲ್ಯ, ರಸ್ತೆ ಹಾಗೂ ಇತರ ಸಮಸ್ಯೆಗಳನ್ನು ಪರಿಹರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಮತದಾರರ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದ ಕಾರಣಕ್ಕೆ ಪೌರ ಸಭೆಯಲ್ಲೇ ಸಾಯುವುದು ಉತ್ತಮ ಎಂದು ನೊಂದು ನುಡಿದಿದ್ದಾರೆ.

    ಸ್ಥಳೀಯ ಚುನಾವಣೆ ವೇಳೆ ರಾಮರಾಜು ಅವರು ತೆಲುಗು ದೇಶಂ ಪಕ್ಷದ (TDP) ಪರವಾಗಿ ಲಿಂಗಾಪುರಂ ಗ್ರಾಮದ ಬುಡಕಟ್ಟು ಪ್ರತಿನಿಧಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಇದನ್ನೂ ಓದಿ: ಇಂದಿನಿಂದ ಎಕ್ಸ್‌ಪ್ರೆಸ್‌ ವೇನಲ್ಲಿ ಬೈಕ್, ಆಟೋ ಸಂಚಾರಕ್ಕೆ ನಿರ್ಬಂಧ – ರೂಲ್ಸ್ ಬ್ರೇಕ್ ಮಾಡಿದ್ರೆ ದಂಡ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟಿ ಊರ್ವಶಿ ರೌಟೇಲಾ ಗಡಿಪಾರು ಮಾಡಿ : ಆಂಧ್ರ ಸಿಎಂಗೆ ನೆಟ್ಟಿಗರು ಮನವಿ

    ನಟಿ ಊರ್ವಶಿ ರೌಟೇಲಾ ಗಡಿಪಾರು ಮಾಡಿ : ಆಂಧ್ರ ಸಿಎಂಗೆ ನೆಟ್ಟಿಗರು ಮನವಿ

    ಬ್ಬ ನಟನನ್ನು ಹೊಗಳುವುದಕ್ಕಾಗಿ ಮತ್ತು ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯನ್ನು ಅವಮಾನಿಸಿದ ನಟಿ ಊರ್ವಶಿ ರೌಟೇಲಾ ಅವರನ್ನು ರಾಜ್ಯದಿಂದಲೇ ಗಡಿಪಾರು ಮಾಡುವಂತೆ ಹಲವಾರು ನೆಟ್ಟಿಗರು ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ (Jagan Mohan Reddy) ಅವರಿಗೆ ಮನವಿ ಮಾಡಿದ್ದಾರೆ. ನಟ ಪವನ್ ಕಲ್ಯಾಣ್ ಅವರನ್ನು ಮುಖ್ಯಮಂತ್ರಿ ಎಂದು ಕರೆದಿರುವ ನಟಿಯ ಮೇಲೆ ಕ್ರಮ ತಗೆದುಕೊಳ್ಳುವಂತೆ ಕಾಮೆಂಟ್ ಮಾಡಿದ್ದಾರೆ.

    ತೆಲುಗಿನ ನಟಿ ಊರ್ವಶಿ ರೌಟೇಲಾ (Urvashi Rautela) ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ (Andhra Pradesh) ಯಾವುದೇ ಚುನಾವಣೆ ನಡೆಯದೇ ಇದ್ದರೂ, ಮುಖ್ಯಮಂತ್ರಿಯನ್ನೇ ರೌಟೇಲಾ ಬದಲಾಯಿಸಿದ್ದಾರೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ನಟ ಪವನ್ ಕಲ್ಯಾಣ್ (Pawan Kalyan) ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

    ರಾಜಕೀಯ ಪಡಸಾಲೆಯಲ್ಲಿ ಪವನ್ ಕಲ್ಯಾಣ್ ಹೆಸರು ಇದೀಗ ಪ್ರಮುಖವಾಗಿ ಕೇಳಿ ಬರುತ್ತಿದೆ. ಮುಂದಿನ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಪವನ್ ರಾಜ್ಯದ ಪ್ರವಾಸ ಮಾಡುತ್ತಿದ್ದಾರೆ. ಅಲ್ಲದೇ, ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ರೌಟೇಲಾ ಬರೆದುಕೊಂಡು ಬರಹ ವೈರಲ್ ಆಗಿದೆ.

    ಆಂಧ್ರದ ಮುಖ್ಯಮಂತ್ರಿ (Chief Minister)ಪವನ್ ಕಲ್ಯಾಣ್ ಎಂದು ಉದ್ದೇಶಪೂರ್ವಕವಾಗಿಯೇ ಬರೆದಿರುವ ರೌಟೇಲಾ, ಅದರ ಪರಿಣಾಮವನ್ನು ನಾನಾ ರೀತಿಯಲ್ಲಿ ಅನುಭವಿಸುತ್ತಿದ್ದಾರೆ. ಕೆಲವರು ಪವನ್ ಕಲ್ಯಾಣ್ ಪರ ಕಾಮೆಂಟ್ ಮಾಡಿದ್ದರೆ, ಸಾಕಷ್ಟು ಮಂದಿ ರೌಟೇಲಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಊರ್ವಶಿ ರೌಟೇಲಾ ನಟನೆಯ ‘ಬ್ರೋ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಕೂಡ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಕಾರ್ಯಕ್ರಮವೊಂದರ ಫೋಟೋ ಹಂಚಿಕೊಂಡಿದ್ದ ಊರ್ವಶಿ, ‘ಗೌರವಾನ್ವಿತ ಮುಖ್ಯಮಂತ್ರಿಗಳಾದ ಪವನ್ ಕಲ್ಯಾಣ್ ಅವರು ನಮ್ಮ ಸಿನಿಮಾದಲ್ಲಿ ನಟಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಅದೇ ಇದೀಗ ಚರ್ಚೆಯನ್ನು ಹುಟ್ಟು ಹಾಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಂಧ್ರದ ಸಿಎಂ ಪವನ್ ಕಲ್ಯಾಣ್ ಎಂದು ಘೋಷಿಸಿದ ನಟಿ ರೌಟೇಲಾ

    ಆಂಧ್ರದ ಸಿಎಂ ಪವನ್ ಕಲ್ಯಾಣ್ ಎಂದು ಘೋಷಿಸಿದ ನಟಿ ರೌಟೇಲಾ

    ತೆಲುಗಿನ ನಟಿ ಊರ್ವಶಿ ರೌಟೇಲಾ (Urvashi Rautela) ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ (Andhra Pradesh) ಯಾವುದೇ ಚುನಾವಣೆ ನಡೆಯದೇ ಇದ್ದರೂ, ಮುಖ್ಯಮಂತ್ರಿಯನ್ನೇ ರೌಟೇಲಾ ಬದಲಾಯಿಸಿದ್ದಾರೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ನಟ ಪವನ್ ಕಲ್ಯಾಣ್ (Pawan Kalyan) ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

    ರಾಜಕೀಯ ಪಡಸಾಲೆಯಲ್ಲಿ ಪವನ್ ಕಲ್ಯಾಣ್ ಹೆಸರು ಇದೀಗ ಪ್ರಮುಖವಾಗಿ ಕೇಳಿ ಬರುತ್ತಿದೆ. ಮುಂದಿನ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಪವನ್ ರಾಜ್ಯದ ಪ್ರವಾಸ ಮಾಡುತ್ತಿದ್ದಾರೆ. ಅಲ್ಲದೇ, ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ರೌಟೇಲಾ ಬರೆದುಕೊಂಡು ಬರಹ ವೈರಲ್ ಆಗಿದೆ. ಇದನ್ನೂ ಓದಿ:‘ನಾಗರಹಾವು’ ಚಿತ್ರದ ನಂತರ ಮತ್ತೆ ಒಂದಾಗಲಿದ್ದಾರೆ ದಿಗಂತ್-ರಮ್ಯಾ

    ಆಂಧ್ರದ ಮುಖ್ಯಮಂತ್ರಿ (Chief Minister)ಪವನ್ ಕಲ್ಯಾಣ್ ಎಂದು ಉದ್ದೇಶಪೂರ್ವಕವಾಗಿಯೇ ಬರೆದಿರುವ ರೌಟೇಲಾ, ಅದರ ಪರಿಣಾಮವನ್ನು ನಾನಾ ರೀತಿಯಲ್ಲಿ ಅನುಭವಿಸುತ್ತಿದ್ದಾರೆ. ಕೆಲವರು ಪವನ್ ಕಲ್ಯಾಣ್ ಪರ ಕಾಮೆಂಟ್ ಮಾಡಿದ್ದರೆ, ಸಾಕಷ್ಟು ಮಂದಿ ರೌಟೇಲಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದಿಂದಲೇ ಈ ನಟಿಯನ್ನು ಗಡಿಪಾರು ಮಾಡಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.

    ಊರ್ವಶಿ ರೌಟೇಲಾ ನಟನೆಯ ‘ಬ್ರೋ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಕೂಡ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಕಾರ್ಯಕ್ರಮವೊಂದರ ಫೋಟೋ ಹಂಚಿಕೊಂಡಿದ್ದ ಊರ್ವಶಿ, ‘ಗೌರವಾನ್ವಿತ ಮುಖ್ಯಮಂತ್ರಿಗಳಾದ ಪವನ್ ಕಲ್ಯಾಣ್ ಅವರು ನಮ್ಮ ಸಿನಿಮಾದಲ್ಲಿ ನಟಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಅದೇ ಇದೀಗ ಚರ್ಚೆಯನ್ನು ಹುಟ್ಟು ಹಾಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಂಧ್ರಪ್ರದೇಶದ ಜಮೀನುಗಳಲ್ಲಿ ವಜ್ರಕ್ಕಾಗಿ ಹುಡುಕಾಟ – ರಾಯಚೂರು, ಬಳ್ಳಾರಿಯಿಂದಲೂ ತೆರಳುತ್ತಿರುವ ಜನ

    ಆಂಧ್ರಪ್ರದೇಶದ ಜಮೀನುಗಳಲ್ಲಿ ವಜ್ರಕ್ಕಾಗಿ ಹುಡುಕಾಟ – ರಾಯಚೂರು, ಬಳ್ಳಾರಿಯಿಂದಲೂ ತೆರಳುತ್ತಿರುವ ಜನ

    ರಾಯಚೂರು: ರಾಜ್ಯದಲ್ಲಿ ತಡವಾಗಿ ಮುಂಗಾರು ಮಳೆ ಅಬ್ಬರಿಸುತ್ತಿದ್ದರೆ ಗಡಿ ರಾಜ್ಯ ಆಂಧ್ರಪ್ರದೇಶದಲ್ಲಿ (Andhra Pradesh) ವಜ್ರದ ಮಳೆಯೇ (Diamond Rain) ಸುರಿಯುತ್ತಿದೆ ಎಂದು ಹೇಳಲಾಗಿದೆ. ಜಮೀನುಗಳಲ್ಲಿ ರೈತರು ಮಾತ್ರವಲ್ಲ ದೂರದ ಊರುಗಳಾದ ರಾಯಚೂರು, ಬಳ್ಳಾರಿ ಜಿಲ್ಲೆಗಳಿಂದಲೂ ಹೋಗಿ ಜನ ವಜ್ರಗಳನ್ನ ಹುಡುಕುತ್ತಿದ್ದಾರೆ.

    ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವಜಕರೂರ ಮತ್ತು ಪೆತ್ತಿಕೊಂಡ ಮಂಡಲದ ಹಲವಾರು ಹಳ್ಳಿಗಳಲ್ಲಿ ವಜ್ರಗಳ (Diamond) ಹುಡುಕಾಟ ನಡೆದಿದೆ. ವಜಕರೂರು, ತುಗ್ಗಲಿ, ಜೊನ್ನಾಗಿರಿ, ಮಡ್ಡಿಕೇರಾ, ಬಾಸಿನೇಪಲ್ಲಿ, ಚೆನ್ನಗಿರಿ, ಯಾಪಲಿ, ಮದ್ದಿಕೇರಿ ಸೇರಿ ಸುತ್ತಮುತ್ತಲ ಹಳ್ಳಿಗಳಲ್ಲಿ ಮಳೆಗಾಲ ಬಂದರೆ ಸಾಕು, ಹೊಲದಲ್ಲಿ ರೈತರು, ಕೃಷಿ ಕೂಲಿಕಾರ್ಮಿಕರು ವಜ್ರಕ್ಕಾಗಿ ಹುಡುಕಾಟ ನಡೆಸುತ್ತಾರೆ. ಇದನ್ನೂ ಓದಿ: KRS ಡ್ಯಾಂ ಬರೋಬ್ಬರಿ 110 ಅಡಿ ಭರ್ತಿ – 48 ಗಂಟೆಯಲ್ಲಿ 5 ಟಿಎಂಸಿ ನೀರು ಒಳಹರಿವು

    ವಜ್ರ ಹುಡುಕಲು ಜಮೀನುಗಳನ್ನ ಲೀಸ್‌ (ಭೋಗ್ಯಕ್ಕೆ) ಪಡೆಯುವರೂ ಇದ್ದಾರೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ರಾಯಲಸೀಮಾದಲ್ಲಿ ವಜ್ರಗಳ ಮಾರುಕಟ್ಟೆಯಿತ್ತು. ಆಗ ರಸ್ತೆ ಪಕ್ಕದಲ್ಲಿ ವಜ್ರ, ವಜ್ರದ ಆಭರಣಗಳನ್ನ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಆಗಿನ ವಜ್ರಗಳು ಇಂದಿಗೂ ಭೂಮಿಯಲ್ಲಿದ್ದು, ಮಳೆ ಬಂದಾಗ ಮಾತ್ರ ಕಣ್ಣಿಗೆ ಗೋಚರವಾಗುತ್ತವೆ ಅಂತ ಜನ ನಂಬಿದ್ದಾರೆ. ಹಲವರಿಗೆ ಬೆಲೆಬಾಳುವ ವಜ್ರಗಳು ಸಿಕ್ಕಿರುವ ಹಿನ್ನೆಲೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇಲ್ಲಿನ ಜಮೀನುಗಳ ಮೇಲೆ ನಿಗಾ ಇಟ್ಟಿದ್ದಾರೆ. ಇದನ್ನೂ ಓದಿ: ಕರಾವಳಿ ಭಾಗದಲ್ಲಿಂದು ರೆಡ್ ಅಲರ್ಟ್ – ಬೆಂಗ್ಳೂರಲ್ಲಿ ದಿನವಿಡೀ ತುಂತುರು ಮಳೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ಯಾನರ್‌ ಕಟ್ಟುತ್ತಿದ್ದಾಗ ವಿದ್ಯುತ್‌ ಶಾಕ್‌ – ನಟ ಸೂರ್ಯನ ಅಭಿಮಾನಿಗಳು ಸಾವು!

    ಬ್ಯಾನರ್‌ ಕಟ್ಟುತ್ತಿದ್ದಾಗ ವಿದ್ಯುತ್‌ ಶಾಕ್‌ – ನಟ ಸೂರ್ಯನ ಅಭಿಮಾನಿಗಳು ಸಾವು!

    ಅಮರಾವತಿ: ತಮಿಳು ಚಿತ್ರರಂಗದ ನಟ ಸೂರ್ಯ (Actor Surya) ಅವರ ಹುಟ್ಟುಹಬ್ಬದ ಬ್ಯಾನರ್‌ ಕಟ್ಟುತ್ತಿದ್ದ ವೇಳೆ ವಿದ್ಯುತ್‌ ಸ್ಪರ್ಶಿಸಿ ಇಬ್ಬರು ಅಭಿಮಾನಿಗಳು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.

    ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮೋಪುಲವಾರಿಪಾಲೆಂ ಗ್ರಾಮದಲ್ಲಿ ನರಸರಾವ್‌ ಪೇಟೆ ಮಂಡಲದ ನಕ್ಕಾ ವೆಂಕಟೇಶ್‌ ಮತ್ತು ಪೋಲೂರಿ ಸಾಯಿ ಹೆಸರಿನ ಅಭಿಮಾನಿಗಳಿಬ್ಬರು ಸಾವನ್ನಪ್ಪಿರುವುದಾಗಿ ಪೊಲೀಸರು (Andhra Police) ತಿಳಿಸಿದ್ದಾರೆ. ಇದನ್ನೂ ಓದಿ: ವಿದೇಶಿ ಪ್ರಜೆಯಿಂದ 5,000 ರೂ. ಪಡೆದು ರಶೀದಿ ಕೊಡದೇ ಯಾಮಾರಿಸಿದ್ದ ಟ್ರಾಫಿಕ್‌ ಪೊಲೀಸ್‌ ಅಮಾನತು

    ಪೊಲೀಸರ ಪ್ರಕಾರ, ಬ್ಯಾನರ್‌ ಕಟ್ಟುತ್ತಿದ್ದ ಇಬ್ಬರೂ ನಟ ಸೂರ್ಯ ಅವರ ಅಭಿಮಾನಿಗಳು. ಅವರ ಹುಟ್ಟುಹಬ್ಬಕ್ಕೆ ಬ್ಯಾನರ್‌ ಕಟ್ಟುತ್ತಿದ್ದರು. ಈ ವೇಳೆ ಫ್ಲೆಕ್ಸ್‌ನ ಕಬ್ಬಿಣದ ರಾಡ್‌ ಓವರ್ಹೆಡ್‌ ವಿದ್ಯುತ್‌ ತಂತಿಗೆ ತಗುಲಿ ದುರಂತ ಸಂಭವಿಸಿದೆ. ಇಬ್ಬರು ಯುವಕರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರೂ ನರಸರಾವ್‌ಪೇಟೆಯ ಖಾಸಗಿ ಪದವಿ ಕಾಲೇಜಿನಲ್ಲಿ 2ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮೃತದೇಹಗಳನ್ನ ನರಸರಾವ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುದ್ದಿನ ನಾಯಿ ನಾಪತ್ತೆ – ಭದ್ರತಾ ಸಿಬ್ಬಂದಿ ಅಮಾನತು ಮಾಡುವಂತೆ ಪೊಲೀಸ್ ಅಧಿಕಾರಿಗೆ ಪತ್ರ ಬರೆದ ನ್ಯಾಯಾಧೀಶ

    ಈ ನಡುವೆ ಮೃತ ಪೋಲೂರಿ ಸಾಯಿ ಅವರ ಸಹೋದರಿ ಅನನ್ಯಾ ತನ್ನ ಅಣ್ಣನ ಸಾವಿಗೆ ತಾನೇ ಕಾರಣ ಎಂಬುದಾಗಿ ಮರುಕ ವ್ಯಕ್ತಪಡಿಸಿದ್ದಾಳೆ. ಕಾಲೇಜಿಗೆ ಸಾಕಷ್ಟು ಶುಲ್ಕ ಕಟ್ಟುತ್ತಿದ್ದೇವೆ. ಕಾಲೇಜಿಗೆ ಸೇರುವ ಮುನ್ನವೇ ವಿದ್ಯಾರ್ಥಿಗಳಿಗೆ ಭದ್ರತೆ, ನಿಗಾ ಇಡುವುದಾಗಿ ಭರವಸೆ ನೀಡಿದ್ದರು. ಆದ್ರೆ ಕಾಲೇಜು ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳ ರಕ್ಷಣೆ, ನಿಗಾ ಇಡುತ್ತಿಲ್ಲ. ನಾವು ದಿನಗೂಲಿ ನೌಕರರು, ಕಾಲೇಜು ಶುಲ್ಕ ಕಟ್ಟಲು ಅಣ್ಣ ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದ. ನನಗಾಗಿ ಶುಲ್ಕ ಕಟ್ಟಲು ಕೆಲಸ ಮಾಡುತ್ತಿದ್ದ ವೇಳೆ ನನ್ನ ಅಣ್ಣ ಸಾವನ್ನಪ್ಪಿದ್ದಾನೆ ಎಂಬುದಾಗಿ ಹೇಳಿಕೊಂಡಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುತ್ತು ಕೊಡುವ ವೇಳೆ ನೆನಪಾದ ಸೇಡು – ಗಂಡನ ನಾಲಿಗೆಗೆ ಹಲ್ಲಿನಲ್ಲೇ ಕತ್ತರಿ

    ಮುತ್ತು ಕೊಡುವ ವೇಳೆ ನೆನಪಾದ ಸೇಡು – ಗಂಡನ ನಾಲಿಗೆಗೆ ಹಲ್ಲಿನಲ್ಲೇ ಕತ್ತರಿ

    ಅಮರಾವತಿ: ಮುತ್ತು ಕೊಡುವ ವೇಳೆ ಗಂಡನ (Husband) ನಾಲಿಗೆಯನ್ನು ಪತ್ನಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಆಂಧ್ರಪ್ರದೇಶದ (Andhra Pradesh) ಕರ್ನೂಲ್‍ನಲ್ಲಿ (Kurnool) ನಡೆದಿದೆ. ಗಂಡನ ಮೇಲಿನ ಸಿಟ್ಟನ್ನು ಹೆಂಡತಿ (Wife) ಈ ರೀತಿ ವಿಚಿತ್ರವಾಗಿ ತೀರಿಸಿಕೊಂಡಿದ್ದಾಳೆ. ಈಗ ಇಬ್ಬರ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

    ಆಂಧ್ರದ ಥಾರಚಂದ್ ನಾಯ್ಕ್ ಹಾಗೂ ಪುಷ್ಪಾವತಿ 2015ರಲ್ಲೇ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಯಲ್ಲಮ್ಮಗುಟ್ಟಾ ಥಂಡಾದಲ್ಲಿ ಇವರಿಬ್ಬರು ವಾಸವಾಗಿದ್ದರು. ಅನ್ಯೋನ್ಯವಾಗಿದ್ದ ಗಂಡ, ಹೆಂಡ್ತಿ ಮಧ್ಯೆ ಕಳೆದ ಎರಡು ವರ್ಷಗಳಿಂದ ಆಗಾಗ ಜಗಳಗಳು ನಡೆಯುತ್ತಿತ್ತು. ಇದರಿಂದ ಬೇಸತ್ತಿದ್ದ ಹೆಂಡತಿ ಈ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ಅಮೆರಿಕಾದಲ್ಲಿ 80 ಕೋಟಿ ರೂ. ವೆಚ್ಚದ ಕಾಲಭೈರವೇಶ್ವರ ದೇಗುಲ ನಿರ್ಮಾಣ- ಕಾಮಗಾರಿ ಪರಿಶೀಲನೆ

    ಇತ್ತೀಚೆಗೆ ದಂಪತಿ ನಡುವೆ ಜೋರು ಜಗಳ ನಡೆದಿದೆ. ಈ ವೇಳೆ ಇವರಿಬ್ಬರ ಕಿತ್ತಾಟ ಇಡೀ ಬೀದಿಯ ಜನರಿಗೆಲ್ಲಾ ಕೇಳಿಸಿದೆ. ಸ್ವಲ್ಪ ಸಮಯದ ಬಳಿಕ ಇಬ್ಬರ ಕೋಪ ತಣ್ಣಗಾಗಿ ಜಗಳವೂ ನಿಂತಿದೆ. ಬಳಿಕ ಪತಿ ಪುಷ್ಪಾವತಿಗೆ ಮುತ್ತು ಕೊಡಲು ಹೋಗಿದ್ದಾನೆ. ಇದರಿಂದ ಕೋಪಗೊಂಡ ಪುಷ್ಪಾವತಿ ಪತಿಯ ನಾಲಿಗೆಯನ್ನು ರಕ್ತ ಬರುವ ಹಾಗೆ ಕಚ್ಚಿದ್ದಾಳೆ. ಇದರಿಂದ ಆತನ ನಾಲಿಗೆ ತೀವ್ರವಾಗಿ ಗಾಯಗೊಂಡಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇಷ್ಟೆಲ್ಲಾ ಆದ ಮೇಲೆ ಪುಷ್ಪಾವತಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ನನ್ನ ಗಂಡ ನನ್ನಿಂದ ಬಲವಂತವಾಗಿ ಮುತ್ತು ಸ್ವೀಕರಿಸಲು ಯತ್ನಿಸಿದ. ಹೀಗಾಗಿ ನಾಲಿಗೆ ಕಚ್ಚಿದ್ದೇನೆ ಎಂದಿದ್ದಾಳೆ. ಪತಿ ಕೂಡ ಹೆಂಡತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆಕೆಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದಾನೆ. ಇದನ್ನೂ ಓದಿ: ಮಹಾರಾಷ್ಟ್ರ ಭೂಕುಸಿತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ದತ್ತು ಪಡೆದ ಸಿಎಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೇಟೆಗಾಗಿ ಸಂಗ್ರಹಿಸಿದ್ದ 81 ನಾಡಬಾಂಬ್ ವಶ – ಇಬ್ಬರು ಅರೆಸ್ಟ್

    ಬೇಟೆಗಾಗಿ ಸಂಗ್ರಹಿಸಿದ್ದ 81 ನಾಡಬಾಂಬ್ ವಶ – ಇಬ್ಬರು ಅರೆಸ್ಟ್

    ಚಿತ್ರದುರ್ಗ: ಕಾಡು ಹಂದಿ ಬೇಟೆಗಾಗಿ ಸಂಗ್ರಹಿಸಿಡಲಾಗಿದ್ದ 81 ನಾಡಬಾಂಬ್‍ಗಳನ್ನು (Crude Bomb) ಪೊಲೀಸರು ವಶಪಡಿಸಿಕೊಂಡಿರುವ ಪ್ರಕರಣ ಮೊಳಕಾಲ್ಮೂರು (Molakalmuru) ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ನಡೆದಿದೆ.

    ಪ್ರಕರಣ ಸಂಬಂಧ ಸುಮನ್ ಹಾಗೂ ಆಂಧ್ರಪ್ರದೇಶ (Andhra Pradesh) ಮೂಲದ ಗಂಗಣ್ಣ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಆರೋಪಿ ಸುಮನ್ ಎಂಬಾತನ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಬಾಂಬ್‍ಗಳು ಪತ್ತೆಯಾಗಿವೆ. ಬಾಂಬ್‍ಗಳು ಆಂಧ್ರ ಮೂಲದಿಂದ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 12 ಜಿಲ್ಲೆಗಳ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ ಅನ್ನ ಭಾಗ್ಯದ ಹಣ

    ವಶಕ್ಕೆ ಪಡೆದ ಸ್ಫೋಟಕಗಳನ್ನು ಬಾಂಬ್ ನಿಷ್ಕ್ರಿಯ ದಳ ಸಿಬಾರ ಗ್ರಾಮದ ಬಳಿ ನಿಷ್ಕ್ರಿಯಗೊಳಿಸಿದೆ. ಹಲವು ವರ್ಷಗಳಿಂದ ಈ ನಾಡಬಾಂಬ್ ಸ್ಫೋಟ ನಡೆಯುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು.

    ರಾಂಪುರ ಠಾಣೆ ಸಿಪಿಐ ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಈ ಸಂಬಂಧ ರಾಂಪುರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ KSRTC ಚಾಲಕನ ಹುಚ್ಚಾಟ – ಒನ್‍ವೇ ಸಂಚಾರಕ್ಕೆ ಆಕ್ರೋಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೊಮೆಟೋಗೆ ಬಂಗಾರದ ಬೆಲೆ – 30 ಲಕ್ಷ ಗಳಿಸಿದ್ದ ರೈತನ ಕೊಲೆ

    ಟೊಮೆಟೋಗೆ ಬಂಗಾರದ ಬೆಲೆ – 30 ಲಕ್ಷ ಗಳಿಸಿದ್ದ ರೈತನ ಕೊಲೆ

    ಅಮರಾವತಿ: ಟೊಮೆಟೋ (Tomato) ಮಾರಾಟ ಮಾಡಿ 30 ಲಕ್ಷ ರೂ. ಗಳಿಸಿದ್ದ ರೈತನನ್ನು ಹಣಕ್ಕಾಗಿ ದರೋಡೆಕೋರರು ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.

    ಮದನಪಲ್ಲಿಯ ರಾಜಶೇಖರ್ ರೆಡ್ಡಿ (62) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಆತ ಟೊಮೆಟೋ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ. ಜುಲೈ ಮೊದಲ ವಾರದಲ್ಲಿ ಬೆಲೆ ಏರಿಕೆಯಾಗುತ್ತಿದ್ದಾಗ ಟೊಮೆಟೋ ಮಾರಾಟ ಮಾಡಿ 30 ಲಕ್ಷ ರೂ. ಗಳಿಸಿದ್ದ. ಸುಮಾರು 70 ಬಾಕ್ಸ್ ಟೊಮೆಟೋ ಮಾರಾಟ ಮಾಡಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ – ಪತಿ ವಿರುದ್ಧ ಕೊಲೆ ಆರೋಪ

    ಪ್ರಾಥಮಿಕ ತನಿಖೆಯ ಪ್ರಕಾರ ಕೊಲೆಯಲ್ಲಿ ದರೋಡೆಕೋರರ ಜೊತೆಗೆ ಕೆಲವು ಉದ್ಯಮಿಗಳು ಭಾಗಿಯಾಗಿದ್ದಾರೆ ಎಂದು ಕುಟುಂಬ ಸದಸ್ಯರು ಶಂಕಿಸಿದ್ದಾರೆ.

    ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಆತನನ್ನು ದರೋಡೆಕೋರರು ಅಡ್ಡಗಟ್ಟಿದ್ದರು. ಆತನ ಬಾಯಿಗೆ ಬಲವಂತವಾಗಿ ಬಟ್ಟೆ ತುರುಕಿ ಮರಕ್ಕೆ ಕೈಕಾಲು ಕಟ್ಟಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: Don’t Allow him to Speak ಎಂದ ಸಿಎಂ: ಪ್ಲೀಸ್ ಸೇರಿಸಿ Kill Him ಎನ್ನಬಹುದಾ ಎಂದ ಸುರೇಶ್ ಕುಮಾರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೇಮವೈಫಲ್ಯ – ಮನನೊಂದ ಯುವತಿ ಚಿತ್ರಾವತಿ ನದಿಗೆ ಹಾರಿ ಆತ್ಮಹತ್ಯೆ!

    ಪ್ರೇಮವೈಫಲ್ಯ – ಮನನೊಂದ ಯುವತಿ ಚಿತ್ರಾವತಿ ನದಿಗೆ ಹಾರಿ ಆತ್ಮಹತ್ಯೆ!

    ಚಿಕ್ಕಬಳ್ಳಾಪುರ: ಪ್ರೇಮವೈಫಲ್ಯದಿಂದ ಮನನೊಂದ ಯುವತಿ ಚಿತ್ರಾವತಿ ನದಿಗೆ (Chitravathi River) ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಆಂಧ್ರಪ್ರದೇಶದ (Andhra Pradesh) ಧರ್ಮಾವರಂ ನ ನಿಹಾರಿಕಾ (22) ಮೃತ ಯುವತಿ. ಬೆಂಗಳೂರಿನಲ್ಲಿ B-Tech ಓದುತ್ತಿದ್ದ ನಿಹಾರಿಕಾ ಪಿಜಿಯಲ್ಲಿ ವಾಸವಿದ್ದಳು. ಆಂಧ್ರಪ್ರದೇಶದ ತೆನಾಲಿ ಮೂಲದ ಅಜಯ್‌ ಎಂಬಾತನನ್ನ ಪ್ರೀತಿಸುತ್ತಿದ್ದಳು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಕಾರಣಾಂತರಗಳಿಂದ ಇಬ್ಬರ ಮಧ್ಯೆ ವೈಮನಸ್ಯ ಮೂಡಿ ಬ್ರೇಕಪ್‌ ಮಾಡಿಕೊಂಡಿದ್ದರು ಎನ್ನಲಾಗಿದೆ.

    ಇದೇ ತಿಂಗಳ 23 ರಂದು ಕೆಎಸ್ಆರ್‌ಟಿಸಿ ಬಸ್ ಮೂಲಕ ಬೆಂಗಳೂರಿನಿಂದ ಧರ್ಮಾವರಂಗೆ ಬರುತ್ತಿದ್ದ ನಿಹಾರಿಕಾ ಬಸ್ ನಲ್ಲಿ ಬರುವಾಗಲೇ ಪ್ರಿಯಕರನ ಜೊತೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಜಗಳ ಮಾಡಿಕೊಂಡಿದ್ದಾಳೆ. ನಂತರ ಈ ವಿಚಾರವನ್ನು ಸ್ನೇಹಿತರು ಹಾಗೂ ತನ್ನ ತಂಗಿಗೆ ಕರೆ ಮಾಡಿ ತಿಳಿಸಿದ್ದಾಳೆ. ಇದನ್ನೂ ಓದಿ: ದೇಶದಲ್ಲಿ ಶಾಂತಿ ಕಾಪಾಡಿ- ಆಸ್ಪತ್ರೆಯಿಂದಲೇ ಬೆಂಬಲಿಗರಿಗೆ ಚಂದ್ರಶೇಖರ್ ಆಜಾದ್ ಸಂದೇಶ

    ತಂಗಿಯೊಂದಿಗೆ ಮಾತನಾಡಿದ ನಂತರ ಬಸ್ಸಿನಲ್ಲಿ ಬರುತ್ತಿದ್ದ ನಿಹಾರಿಕಾ ಬಾಗೇಪಲ್ಲಿ ಬಳಿ ಚಿತ್ರಾವತಿ ನದಿಯಲ್ಲಿ ನೀರಿರುವುದನ್ನ ಕಂಡಿದ್ದಾಳೆ. ಬಸ್‌ ನಿಲ್ದಾಣದಲ್ಲಿ ಇಳಿದವಳೇ ಸೀದಾ ಸೇತುವೆ ಮೇಲೆ ಹೋಗಿ ಚಿತ್ರಾವತಿ ನದಿಗೆ ಹಾರಿದ್ದಾಳೆ. ಸಾಯುವುದಕ್ಕೂ ಮುನ್ನ ಆ ಸ್ಥಳದ ಫೋಟೋ ಹಾಗೂ ಲೋಕೇಶನ್ ಶೇರ್ ಮಾಡಿದ್ದಾಳೆ. ಇದನ್ನೂ ಓದಿ: ದುಬೈನಲ್ಲಿ ತೈಲ ವ್ಯಾಪಾರ ಮಾಡ್ತಿದ್ದ ಉದ್ಯಮಿ ಕಾರು ಅಡ್ಡಗಟ್ಟಿ 95 ಲಕ್ಷ ರೂ. ದರೋಡೆ

    ಮಗಳ ಸಾವಿಗೆ ಪ್ರಿಯಕರ ಅಜಯ್ ಕಾರಣ ಅಂತಾ ಮೃತ ನಿಹಾರಿಕಾಳ ಪೋಷಕರು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನದಿಗೆ ಹಾರಿದ ಎರಡು ದಿನಗಳ ನಂತರ ಯುವತಿ ಮೃತದೇಹ ಪತ್ತೆಯಾಗಿದೆ.