Tag: Andhra Pradesh

  • Assembly Results: ಆಂಧ್ರದಲ್ಲಿ ಟಿಡಿಪಿ ಮತ್ತೆ ಎಂಟ್ರಿ – ಒಡಿಶಾದಲ್ಲಿ ಬಿಜೆಪಿಗೆ ಬಹುಮತ

    Assembly Results: ಆಂಧ್ರದಲ್ಲಿ ಟಿಡಿಪಿ ಮತ್ತೆ ಎಂಟ್ರಿ – ಒಡಿಶಾದಲ್ಲಿ ಬಿಜೆಪಿಗೆ ಬಹುಮತ

    – ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಪಟ್ಟಾಭಿಷೇಕಕ್ಕೆ ಸಿದ್ಧತೆ

    ನವದೆಹಲಿ: ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪುನರಾಗಮನಕ್ಕೆ ಸಿದ್ಧವಾಗಿದೆ. ಇತ್ತ ಒಡಿಶಾದಲ್ಲಿ ಸರಳ ಬಹುಮತ ಸಂಖ್ಯೆ ದಾಟಿ ಬಿಜೆಪಿ ಮುಂದೆ ಸಾಗಿದೆ.

    ಆಂಧ್ರಪ್ರದೇಶದಲ್ಲಿ ಸಿಎಂ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್‌ಆರ್‌ಸಿಪಿ ಕುಸಿತ ಕಂಡಿದೆ. ರಾಜ್ಯದಲ್ಲಿ ಟಿಡಿಪಿ 131, ಜೆಎನ್‌ಪಿ 20, ವೈಎಸ್‌ಆರ್‌ಸಿಪಿ 17, ಬಿಜೆಪಿ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

    ಆಂಧ್ರದಲ್ಲಿ ಗೆಲುವಿನ ಸೂಚನೆ ಸಿಗುತ್ತಿದ್ದಂತೆ ಸರ್ಕಾರ ರಚನೆಗೆ ಚಂದ್ರಬಾಬು ನಾಯ್ಡು ಸಿದ್ಧತೆ ನಡೆಸಿದ್ದಾರೆ. ಮೇ 13ರಂದು ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭೆ ಚುನಾವಣೆಯೂ ನಡೆದಿತ್ತು. ಮತ್ತೊಂದು ಅವಧಿಗಾಗಿ ವೈಎಸ್‌ಆರ್‌ಸಿಪಿ ಎಲ್ಲಾ 175 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಟಿಡಿಪಿ 144 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (ಜೆಎಸ್‌ಪಿ) 21 ಮತ್ತು ಬಿಜೆಪಿ 10 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.

    ಒಡಿಶಾದಲ್ಲಿ ಆಡಳಿತಾರೂಢ ಬಿಜು ಜನತಾ ದಳ ಪಕ್ಷಕ್ಕೆ ಶಾಕ್‌ ಎದುರಾಗಿದೆ. 147 ಸದಸ್ಯ ಬಲದ ವಿಧಾನಸಭೆಗೆ ಸರ್ಕಾರ ರಚಿಸಲು 74 ಸ್ಥಾನಗಳು ಬೇಕು. ಈಗಾಗಲೇ ಬಿಜೆಪಿ ಅಷ್ಟು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನೇತೃತ್ವದ ಪಕ್ಷ 57 ಸ್ಥಾನಗಳಲ್ಲಷ್ಟೇ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ 13, ಐಎನ್‌ಡಿ 2 ಹಾಗೂ ಸಿಪಿಐ(ಎಂ) 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

    ಒಡಿಶಾದಲ್ಲಿ 2019 ರಲ್ಲಿ ಬಿಜೆಡಿ 147 ಸ್ಥಾನಗಳ ಪೈಕಿ 112 ಸೀಟ್‌ಗಳನ್ನು ಗೆದ್ದಿತ್ತು. ಬಿಜೆಪಿ 23 ಹಾಗೂ ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಗೆದ್ದಿತ್ತು.

  • ಹಿಂಸಾಚಾರದ ಆತಂಕ – ಚುನಾವಣಾ ಫಲಿತಾಂಶದ ಬಳಿಕವೂ ಪಶ್ಚಿಮ ಬಂಗಾಳ, ಆಂಧ್ರದಲ್ಲಿ ಭಾರೀ ಭದ್ರತೆ

    ಹಿಂಸಾಚಾರದ ಆತಂಕ – ಚುನಾವಣಾ ಫಲಿತಾಂಶದ ಬಳಿಕವೂ ಪಶ್ಚಿಮ ಬಂಗಾಳ, ಆಂಧ್ರದಲ್ಲಿ ಭಾರೀ ಭದ್ರತೆ

    ನವದೆಹಲಿ: ಮತದಾನ ಸಂಬಂಧಿತ ಹಿಂಸಾಚಾರದಿಂದ ಸುದ್ದಿಯಾಗಿರುವ ಎರಡು ರಾಜ್ಯಗಳಿಗೆ ಚುನಾವಣಾ ಆಯೋಗ (ECI) ಮತ ಎಣಿಕೆ ದಿನ ಭಾರೀ ಭದ್ರತೆಯನ್ನು ಕೈಗೊಂಡಿದೆ. ಆಂಧ್ರಪ್ರದೇಶ (Andhra Pradesh) ಮತ್ತು ಪಶ್ಚಿಮ ಬಂಗಾಳದಲ್ಲಿ (West Bengal) ಮತ ಎಣಿಕೆಯ ದಿನವಾದ ಜೂ.4 ಹಾಗೂ ಮತ ಎಣಿಕೆ ನಂತರ 15 ದಿನಗಳ ಕಾಲ ಕೇಂದ್ರ ಭದ್ರತಾ ಪಡೆಗಳು ಬೀಡುಬಿಡಲಿವೆ ಎಂದು ಮೂಲಗಳು ತಿಳಿಸಿವೆ.

    ಉತ್ತರ ಪ್ರದೇಶ, ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ ಎಣಿಕೆ ದಿನದ ನಂತರ ಎರಡು ದಿನಗಳ ಕಾಲ ಭದ್ರತಾ ಪಡೆಗಳು ಇರಲಿವೆ. ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ. ರಾಜ್ಯ ಮತ್ತು ಕೇಂದ್ರದ ಚುನಾವಣಾಧಿಕಾರಿಗಳ ಮಾಹಿತಿ ಅನುಗುಣವಾಗಿ ಭದ್ರತಾ ಪಡೆಗಳನ್ನು ಒದಗಿಸಲಾಗಿದೆ. ಸುದೀರ್ಘವಾಗಿ ನಡೆದ ಏಳು ಹಂತಗಳ ಚುನಾವಣೆ ಇಂದು ಸಂಜೆ ಮುಕ್ತಾಯಗೊಳ್ಳುತ್ತಿದ್ದಂತೆ ಆಯೋಗದಿಂದ ಈ ನಿರ್ಧಾರ ಹೊರಬಿದ್ದಿದೆ. ಇದನ್ನೂ ಓದಿ: ಅಬ್ಕಿ ಬಾರ್ ಚಾರ್ ಸೌ ಪಾರ್ – ಎನ್‌ಡಿಎ 400ರ ಗಡಿ ದಾಟುತ್ತೆ ಎಂದ ಟುಡೇಸ್‌ ಚಾಣಕ್ಯ

    ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಕೆಲವು ಮತಗಟ್ಟೆ ಏಜೆಂಟರನ್ನು ಮತಗಟ್ಟೆಗಳಿಗೆ ಪ್ರವೇಶಿಸದಂತೆ ನಿಬರ್ಂಧಿಸಿದ ಬಳಿಕ ಹಿಂಸಾಚಾರ ನಡೆದಿತ್ತು. ಈ ವೇಳೆ ಕೋಪಗೊಂಡ ಜನಸಮೂಹವು ಮತಗಟ್ಟೆಗಳಿಗೆ ನುಗ್ಗಿ, ಇವಿಎಂನ್ನು ಕೊಳಕ್ಕೆ ಎಸೆದಿತ್ತು. ಇನ್ನೂ ಜಾದವ್‍ಪುರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಭಂಗಾರ್‍ನ ಸತುಲಿಯಾ ಪ್ರದೇಶದಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್ ಮತ್ತು ಸಿಪಿಐ(ಎಂ) ನಡುವಿನ ಘರ್ಷಣೆಯಲ್ಲಿ ಹಲವಾರು ಜನರು ಗಾಯಗೊಂಡಿರುವುದು ವರದಿಯಾಗಿದೆ.

    ಆಂಧ್ರಪ್ರದೇಶದಲ್ಲಿ, ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಮತ್ತು ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಘರ್ಷಣೆಯು ಮೇ ತಿಂಗಳಲ್ಲಿ ನಡೆದ ಎರಡನೇ ಹಂತದ ಮತದಾನದಲ್ಲಿ ಪ್ರಮುಖ ಸುದ್ದಿಯಾಗಿತ್ತು. ಎಕ್ಸಿಟ್ ಪೋಲ್‍ಗಳು ಎರಡೂ ರಾಜ್ಯಗಳಲ್ಲಿ ಬಿಜೆಪಿ (BJP) ಮತ್ತು ಎನ್‍ಡಿಎ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಭವಿಷ್ಯ ನುಡಿದಿದ್ದು, ಹಿಂಸಾಚಾರ ನಡೆಯವ ಸಾಧ್ಯತೆ ಬಗ್ಗೆ ಆತಂಕ ಮನೆ ಮಾಡಿದೆ. ಇದೇ ಕಾರಣಕ್ಕೆ ಚುನಾವಣಾ ಆಯೋಗ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Exit Poll | ಎಕ್ಸಿಟ್‌ ಪೋಲ್‌ ಮೇಲೆ ನಂಬಿಕೆಯಿಲ್ಲ, ಬಿಜೆಪಿ 275 ಸ್ಥಾನಗಳನ್ನೂ ದಾಟಲ್ಲ: ಎಂ.ಬಿ ಪಾಟೀಲ್‌

  • ಕ್ಯೂನಲ್ಲಿ ಬನ್ನಿ ಎಂದಿದ್ದಕ್ಕೆ ವೈಎಸ್‍ಆರ್ ಶಾಸಕನಿಂದ ಕಪಾಳಮೋಕ್ಷ!

    ಕ್ಯೂನಲ್ಲಿ ಬನ್ನಿ ಎಂದಿದ್ದಕ್ಕೆ ವೈಎಸ್‍ಆರ್ ಶಾಸಕನಿಂದ ಕಪಾಳಮೋಕ್ಷ!

    ಹೈದರಾಬಾದ್: ಕ್ಯೂನಲ್ಲಿ ಬಂದು ಮತ ಹಾಕಲು ಹೇಳಿದ್ದಕ್ಕೆ ವೈಎಸ್‍ಆರ್ ಕಾಂಗ್ರೆಸ್‍ನ (YSR Congress) ಶಾಸಕ ಅನ್ನಾಬತ್ತುನಿ ಶಿವಕುಮಾರ್ (Annabathuni Sivakumar) ಮತದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಆಂಧ್ರ ಪ್ರದೇಶದ (Andhra Pradesh) ತೆನಾಲಿ ಮತಗಟ್ಟೆಯಲ್ಲಿ ನಡೆದಿದೆ.

    ಈ ವೇಳೆ ಮತದಾರ ಸಹ ಶಾಸಕರ ಕೆನ್ನೆಗೆ ಭಾರಿಸಿದ್ದಾರೆ. ಇದರಿಂದ ಶಾಸಕರ ಬೆಂಬಲಿಗರು ಮತದಾರನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲಿಸರು ಮತದಾರನನ್ನು ರಕ್ಷಿಸಿದ್ದಾರೆ. ತೆನಾಲಿಯ ಶಾಸಕ, ಸದ್ಯ ಅಭ್ಯರ್ಥಿಯಾಗಿ ಅನ್ನಾಬತ್ತುನಿ ಶಿವಕುಮಾರ್ ಸ್ಪರ್ಧೆ ಮಾಡಿದ್ದಾರೆ. ಇಂದು ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ್ದಾಗ ಈ ಘಟನೆ ನಡೆದಿದೆ. ಇದನ್ನೂ ಓದಿ: ಗುರುದ್ವಾರಕ್ಕೆ ಭೇಟಿ ನೀಡಿ ಭಕ್ತರಿಗೆ ಪ್ರಸಾದ ಬಡಿಸಿದ ಪ್ರಧಾನಿ ಮೋದಿ

    ಶಾಸಕರು ಹಲ್ಲೆ ನಡೆಸಿರುವ ವೀಡಿಯೋವನ್ನು ತೆಲುಗುದೇಶಂ ಪಾರ್ಟಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮತದಾರನ ಮೇಲೆ ಹಲ್ಲೆ ಮಾಡಿದ ವೈಸಿಪಿ ಶಾಸಕನಿಗೆ ತಿರುಗಿ ಹೊಡೆದ ಸಾಮಾನ್ಯ ಮತದಾರ. ಪ್ರಜೆಗಳ ಆಕ್ರೋಶದಲ್ಲಿ ವೈಎಸ್‍ಆರ್ ಪಕ್ಷ ಕೊಚ್ಚಿ ಹೋಗುತ್ತಿದೆ ಎಂದು ಪೋಸ್ಟ್ ಮಾಡಿದೆ.

    ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: Exclusive: ಕರ್ನಾಟಕದಲ್ಲಿ ‘ಆಪರೇಷನ್ ನಾಥ’ ಸುಳಿವು ಕೊಟ್ಟ ಏಕನಾಥ ಶಿಂಧೆ!

  • ಗೋವಾದಿಂದ ಆಂಧ್ರಕ್ಕೆ ಅಕ್ರಮ ಸಾಗಾಟ – 28 ಲಕ್ಷ ರೂ. ಮೌಲ್ಯದ ಮದ್ಯ ವಶ

    ಗೋವಾದಿಂದ ಆಂಧ್ರಕ್ಕೆ ಅಕ್ರಮ ಸಾಗಾಟ – 28 ಲಕ್ಷ ರೂ. ಮೌಲ್ಯದ ಮದ್ಯ ವಶ

    ಚಿಕ್ಕೋಡಿ: ಯಮಕನಮರಡಿ (Yamakanamaradi) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗೋವಾದಿಂದ‌ (Goa) ಆಂಧ್ರಕ್ಕೆ (Andhra Pradesh) ಅಕ್ರಮ ಸಾಗಾಟ ಮಾಡುತ್ತಿದ್ದ ಮದ್ಯವನ್ನು (Alcohol) ವಶಕ್ಕೆ ಪಡೆದಿದ್ದಾರೆ.

    16,848 ಲೀಟರ್ ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾರ್ಡ್‌ವೇರ್ ವಸ್ತು ಸಾಗಾಟ ಮಾಡುತ್ತೇವೆ ಎಂದು ಲೈಸೆನ್ಸ್ ಪಡೆದು ಹಾರ್ಡ್‌ವೇರ್ ಬದಲಿಗೆ ಗೋವಾದ ಅಕ್ರಮ ಮದ್ಯ ಸಾಗಾಟ ಮಾಡಲಾಗುತ್ತಿತ್ತು. ಈ ಹಿನ್ನೆಲೆ ಒಟ್ಟು 28 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಕಳೆದ ಐದು ದಿನದಲ್ಲಿ ಧರೆಗುರುಳಿದ 271 ಮರ

    ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಹಲಗೆ, ಸದಾಶಿವ ಗೇರಡೆ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇಂದು ದೇಶ್ಯಾದ್ಯಂತ ಕಾಮೆಡ್-ಕೆ ಪರೀಕ್ಷೆ

  • ಪವನ್ ಕಲ್ಯಾಣ್ ಬೆಂಬಲಕ್ಕೆ ನಿಂತ ನಟ ಅಲ್ಲು ಅರ್ಜುನ್

    ಪವನ್ ಕಲ್ಯಾಣ್ ಬೆಂಬಲಕ್ಕೆ ನಿಂತ ನಟ ಅಲ್ಲು ಅರ್ಜುನ್

    ತೆಲುಗಿನ ಖ್ಯಾತ ನಟ, ಜನಸೇನಾ ಪಾರ್ಟಿ ಮುಖ್ಯಸ್ಥ ಪವನ್ ಕಲ್ಯಾಣ್ ಬೆಂಬಲಕ್ಕೆ ತೆಲುಗಿನ ಮತ್ತೋರ್ವ ಹೆಸರಾಂತ ನಟ ಅಲ್ಲು ಅರ್ಜುನ್ (Allu Arjun) ಬೆಂಬಲಕ್ಕೆ ನಿಂತಿದ್ದಾರೆ. ಪವನ್ ಕಲ್ಯಾಣ್ ಗೆಲುವಿಗೆ ಶ್ರಮಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. ಪವನ್ ಅವರ ಸಮಾಜಸೇವೆಯನ್ನೂ ಅವರು ಶ್ಲ್ಯಾಘಿಸಿದ್ದಾರೆ.

    ಆಂಧ್ರಪ್ರದೇಶದಲ್ಲಿ ಚುನಾವಣೆ ಕಾವು ಜೋರಾಗಿದೆ. ದಿನಕ್ಕೊಂದು ತಿರುವನ್ನೂ ಅದು ಪಡೆದುಕೊಳ್ಳುತ್ತಿದೆ. ಅದರಲ್ಲೂ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೋಲಿಗಾಗಿ ಸರ್ವ ಪಕ್ಷಗಳು ಒಂದಾಗಿವೆ. ಮೈತ್ರಿ ಪಕ್ಷಗಳನ್ನು ಬಲ ಪಡಿಸೋಕೆ ಏನೆಲ್ಲ ಕಸರತ್ತುಗಳನ್ನು ಮಾಡಲಾಗುತ್ತಿದೆ. ಜಗನ್ ಮೋಹನ್ ರೆಡ್ಡಿ ಪಕ್ಷವನ್ನು ಸೋಲಿಸಲು ಒಂದು ಕಡೆ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ (Jana Sena) ಟೊಂಕ ಕಟ್ಟಿ ನಿಂತಿದ್ದರೆ, ಅದರ ಬೆಂಬಲಕ್ಕೆ ಹೆಸರಾಂತ ನಟ ಚಿರಂಜೀವಿ ಕೂಡ ಇರುವುದಾಗಿ ಘೋಷಣೆ ಮಾಡಿದ್ದಾರೆ.

    ಪವನ್ ಕಲ್ಯಾಣ್ ಬೆಂಬಲ ಕುರಿತಂತೆ ವಿಡಿಯೋವೊಂದನ್ನು ಮಾಡಿರುವ ಚಿರಂಜೀವಿ (Chiranjeevi), ಒಳ್ಳೆಯ ಆಡಳಿತಕ್ಕಾಗಿ ಜನಸೇನಾ ಮತ್ತು ಮೈತ್ರಿಕೂಟವನ್ನು ಬೆಂಬಲಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅಗತ್ಯವಿದ್ದರೆ ಪವನ್ ಕಲ್ಯಾಣ್ (Pawan Kalyan) ಮತ್ತು ಅವರ ಪಕ್ಷದ ಪರವಾಗಿಯೂ ಪ್ರಚಾರಕ್ಕೆ ಬರುವುದಾಗಿ ಅವರು ಹೇಳಿಕೊಂಡಿದ್ದಾರೆ.

     

    ಮೇ 13ರಂದು ಆಂಧ್ರಪ್ರದೇಶದ (Andhra Pradesh) ಚುನಾವಣೆ ನಡೆಯುತ್ತಿದೆ. ಪವನ್ ಕಲ್ಯಾಣ್ ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಈಗಾಗಲೇ ಮತದಾರನ ಒಲವು ಪವನ್ ಕಲ್ಯಾಣ್ ಕಡೆ ಇದೆ ಎಂದು ಹೇಳಲಾಗುತ್ತಿದೆ. ನಟ ನಾನಿ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಪವನ್ ಕಲ್ಯಾಣ್ ಪರ ಮತಯಾಚನೆ ಮಾಡುವ ಇಂಗಿತವನ್ನೂ ವ್ಯಕ್ತ ಪಡಿಸಿದ್ದಾರೆ. ಈ ಚುನಾವಣೆ ನಿಜಕ್ಕೂ ರಂಗೇರಿದೆ.

  • ಪವನ್ ಕಲ್ಯಾಣ್ ಗಾಗಿ ಕೊನೆಗೂ ಅಖಾಡಕ್ಕೆ ಇಳಿದ ನಟ ಚಿರಂಜೀವಿ

    ಪವನ್ ಕಲ್ಯಾಣ್ ಗಾಗಿ ಕೊನೆಗೂ ಅಖಾಡಕ್ಕೆ ಇಳಿದ ನಟ ಚಿರಂಜೀವಿ

    ಆಂಧ್ರಪ್ರದೇಶದಲ್ಲಿ ಚುನಾವಣೆ ಕಾವು ಜೋರಾಗಿದೆ. ದಿನಕ್ಕೊಂದು ತಿರುವನ್ನೂ ಅದು ಪಡೆದುಕೊಳ್ಳುತ್ತಿದೆ. ಅದರಲ್ಲೂ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೋಲಿಗಾಗಿ ಸರ್ವ ಪಕ್ಷಗಳು ಒಂದಾಗಿವೆ. ಮೈತ್ರಿ ಪಕ್ಷಗಳನ್ನು ಬಲ ಪಡಿಸೋಕೆ ಏನೆಲ್ಲ ಕಸರತ್ತುಗಳನ್ನು ಮಾಡಲಾಗುತ್ತಿದೆ. ಜಗನ್ ಮೋಹನ್ ರೆಡ್ಡಿ ಪಕ್ಷವನ್ನು ಸೋಲಿಸಲು ಒಂದು ಕಡೆ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ (Jana Sena) ಟೊಂಕ ಕಟ್ಟಿ ನಿಂತಿದ್ದರೆ, ಅದರ ಬೆಂಬಲಕ್ಕೆ ಹೆಸರಾಂತ ನಟ ಚಿರಂಜೀವಿ ಇರುವುದಾಗಿ ಘೋಷಣೆ ಮಾಡಿದ್ದಾರೆ.

    ಪವನ್ ಕಲ್ಯಾಣ್ ಬೆಂಬಲ ಕುರಿತಂತೆ ವಿಡಿಯೋವೊಂದನ್ನು ಮಾಡಿರುವ ಚಿರಂಜೀವಿ (Chiranjeevi), ಒಳ್ಳೆಯ ಆಡಳಿತಕ್ಕಾಗಿ ಜನಸೇನಾ ಮತ್ತು ಮೈತ್ರಿಕೂಟವನ್ನು ಬೆಂಬಲಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅಗತ್ಯವಿದ್ದರೆ ಪವನ್ ಕಲ್ಯಾಣ್ (Pawan Kalyan) ಮತ್ತು ಅವರ ಪಕ್ಷದ ಪರವಾಗಿಯೂ ಪ್ರಚಾರಕ್ಕೆ ಬರುವುದಾಗಿ ಅವರು ಹೇಳಿಕೊಂಡಿದ್ದಾರೆ.

     

    ಮೇ 13ರಂದು ಆಂಧ್ರಪ್ರದೇಶದ (Andhra Pradesh) ಚುನಾವಣೆ ನಡೆಯುತ್ತಿದೆ. ಪವನ್ ಕಲ್ಯಾಣ್ ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಈಗಾಗಲೇ ಮತದಾರನ ಒಲವು ಪವನ್ ಕಲ್ಯಾಣ್ ಕಡೆ ಇದೆ ಎಂದು ಹೇಳಲಾಗುತ್ತಿದೆ. ನಟ ನಾನಿ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಪವನ್ ಕಲ್ಯಾಣ್ ಪರ ಮತಯಾಚನೆ ಮಾಡುವ ಇಂಗಿತವನ್ನೂ ವ್ಯಕ್ತ ಪಡಿಸಿದ್ದಾರೆ. ಈ ಚುನಾವಣೆ ನಿಜಕ್ಕೂ ರಂಗೇರಿದೆ.

  • ಟ್ರಕ್‌ಗೆ ಡಿಕ್ಕಿ ಹೊಡೆದು ಕಾರು ಮೂರು ಪಲ್ಟಿ –  ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಪಾರು

    ಟ್ರಕ್‌ಗೆ ಡಿಕ್ಕಿ ಹೊಡೆದು ಕಾರು ಮೂರು ಪಲ್ಟಿ – ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಪಾರು

    ಬೆಂಗಳೂರು: ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ (Bhaskar Rao) ಅವರು ಕಾರು ಅಪಘಾತದಿಂದ ಪಾರಾಗಿದ್ದಾರೆ.

    ಆಂಧ್ರಪ್ರದೇಶದಲ್ಲಿ ಇವರಿದ್ದ ಕಾರು ಅಪಘಾತವಾಗಿದ್ದು (Accident) ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಏ.23 ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವಾಗ ಅಪಘಾತ ಸಂಭವಿಸಿದ್ದು ಇಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಘಟನೆ ವಿವರಿಸಿದ್ದಾರೆ. ಅಷ್ಟೇ ಅಲ್ಲದೇ ನಮಗೆ ಸರ್ವಿಸ್‌ ರಸ್ತೆಗಳು ಮತ್ತು ಅತ್ಯುತ್ತಮ ಟ್ರಾಮಾ ಕೇರ್ ಕೇಂದ್ರಗಳ ಅಗತ್ಯವಿದೆ ಎಂದು ಸಾರಿಗೆ ಸಚಿವ ನಿತಿನ್‌ ಗಡ್ಕರಿಗೆ ಮನವಿ ಮಾಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಏಪ್ರಿಲ್ 23 ರಂದು ಟಯೋಟಾ ಇನ್ನೋವಾ ಹೈಬ್ರಿಡ್ ಹೈಕ್ರಾಸ್‌ನಲ್ಲಿ ಅನಂತಪುರ ಮತ್ತು ಕದ್ರಿ (ಆಂಧ್ರಪ್ರದೇಶ) ನಡುವೆ ಚಾಲನೆ ಮಾಡುವಾಗ ರಸ್ತೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

    ಹೆದ್ದಾರಿಯಲ್ಲಿ ಯಾವುದೇ ಎಚ್ಚರಿಕೆ ಫಲಕಗಳಿಲ್ಲದ ಕಾರಣ ಟಿಪ್ಪರಿಗೆ ಮುಖಾಮುಖಿ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ.

    ನಮ್ಮ ಕಾರು ಮೂರು ಬಾರಿ ಪಲ್ಟಿಯಾಗಿದ್ದು ನಾವೆಲ್ಲರೂ ಅಪಾಯದಿಂದ ಪಾರಾಗಿದ್ದೇವೆ. ವೆಂಕಿ ತೀವ್ರವಾಗಿ ಗಾಯಗೊಂಡಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


    ನನ್ನ ಪಕ್ಕೆಲುಬುಗಳು ಮುರಿದಿದ್ದು, ಸೀಟ್‌ಬೆಲ್ಟ್ ಮತ್ತು ಏರ್‌ಬ್ಯಾಗ್‌ಗಳು ನಮ್ಮನ್ನು ಉಳಿಸಿದೆ. ಅಪಘಾತವಾದ ನಂತರ ನಮ್ಮನ್ನು ಕಾರಿನಿಂದ ಹೊರಗೆ ಎಳೆದು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆಂಧ್ರಪ್ರದೇಶ ಸರ್ಕಾರದ ಆರೋಗ್ಯ ಕೇಂದ್ರವನ್ನು ಮೆಚ್ಚಲೇಬೇಕು. ಅಂಬುಲೆನ್ಸ್‌ ಮೂಲಕ ನನ್ನನ್ನು ಅನಂತಪುರಕ್ಕೆ ದಾಖಲಿಸಲಾಯಿತು. ಉತ್ತಮ ಕೆಲಸ ಮಾಡಿದ್ದಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ.

    40 ವರ್ಷಗಳಿಂದ ನಾನು ವಾಹನ ಚಲಾಯಿಸುತ್ತಿದ್ದರೂ ಅಪಘಾತ ಸಂಭವಿಸಿದೆ. ಅತ್ಯುತ್ತಮ ಹೆದ್ದಾರಿಗಳ ಜೊತೆಗೆ ನಮಗೆ ಸರ್ವಿಸ್‌ ರಸ್ತೆಗಳು ಮತ್ತು ಅತ್ಯುತ್ತಮ ಟ್ರಾಮಾ ಕೇರ್ ಕೇಂದ್ರಗಳ ಅಗತ್ಯವಿದೆ ಎಂದು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ಈ ಅಪಘಾತದ ತನಿಖೆ ನಡೆಸುವಂತೆ ಟಯೋಟಾ ಕಂಪನಿಗೆ ವಿನಂತಿಸಿದ್ದಾರೆ.

     

  • ಪವನ್ ಕಲ್ಯಾಣ್ ಆಸ್ತಿ ಇಷ್ಟೇನಾ?: ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರ

    ಪವನ್ ಕಲ್ಯಾಣ್ ಆಸ್ತಿ ಇಷ್ಟೇನಾ?: ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರ

    ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ (Pawan Kalyan), ಆಂಧ್ರ ಪ್ರದೇಶದಲ್ಲಿ (Andhra Pradesh) ನಡೆಯುತ್ತಿರುವ ವಿಧಾನ ಸಭಾ ಚುನಾವಣೆಯಲ್ಲಿ (Election) ಸ್ಪರ್ಧಿಸಿದ್ದಾರೆ. ಈಗಾಗಲೇ ಅವರು ಕಾಕಿನಾಡು ಜಿಲ್ಲೆಯ ಪೀಟಾಪುರಮ್ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಈ ಬೆನ್ನಲ್ಲೇ ನಾಮಿನೇಷನ್ ಸಲ್ಲಿಸಿ, ಆಸ್ತಿಯನ್ನು (Property Details) ಘೋಷಣೆ ಮಾಡಿದ್ದಾರೆ.

    ಚರಾಸ್ತಿ, ಸ್ಥಿರಾಸ್ತಿಗಳನ್ನು ಸೇರಿಸಿ ತಮ್ಮ ಬಳಿ ಒಟ್ಟಾರೆ ಎಷ್ಟು ಆಸ್ತಿ ಇದೆ ಎನ್ನುವುದನ್ನು ಅವರು ಅಫಿಡೆವಿಟ್ ನಲ್ಲಿ ಉಲ್ಲೇಖಿಸಿದ್ದಾರೆ. ಸಿನಿಮಾವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ನೂರಾರು ಕೋಟಿ ಬಜೆಟ್ ಸಿನಿಮಾಗಳಲ್ಲಿ ನಟಿಸುವ ಪವನ್ ಕಲ್ಯಾಣ್ ಬಳಿ ಇರೋ ಆಸ್ತಿ ಇಷ್ಟೇನಾ ಎಂದು ಅಭಿಮಾನಿಗಳು ಬೆರಗುಗಣ್ಣಿನಿಂದ ನೋಡಿದ್ದಾರೆ.

    ಚುನಾವಣೆ ಆಯೋಗಕ್ಕೆ ಪವನ್ ಕಲ್ಯಾಣ್ ಸಲ್ಲಿಸಿದ ಆಸ್ತಿ ವಿವರದ ಪ್ರಕಾರ, 136 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅವರು ಹೊಂದಿದ್ದಾರೆ. 18 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ ಹಾಗೂ 52.85 ಕೋಟಿ ರೂಪಾಯಿ ಬೆಲೆಯ ಕೃಷಿಯೇತರ ಜಮೀನನನ್ನು ಅವರು ಹೊಂದಿದ್ದಾರೆ. 2019ರಲ್ಲಿ ಅವರು 52.85 ಕೋಟಿ ರೂಪಾಯಿ ಆಸ್ತಿ ತೋರಿಸಿದ್ದರು.

     

    ಪವನ್ ಕಲ್ಯಾಣ್ ಈ ಹಿಂದೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಾಗ ಇವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳು ಇರಲಿಲ್ಲ. ಆದರೆ, ಈಗ 8 ಪ್ರಕರಣಗಳು ಇವರ ಮೇಲಿವೆ.

  • ಪವನ್ ಕಲ್ಯಾಣ್ ಬೆನ್ನಿಗೆ ನಿಂತ ನಟ ಚಿರಂಜೀವಿ

    ಪವನ್ ಕಲ್ಯಾಣ್ ಬೆನ್ನಿಗೆ ನಿಂತ ನಟ ಚಿರಂಜೀವಿ

    ಆಂಧ್ರ ಪ್ರದೇಶದ (Andhra Pradesh) ಚುನಾವಣೆಯಲ್ಲಿ ಭಾರೀ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಅದರಲ್ಲೂ ಸಿನಿಮಾ ರಂಗದ ಅನೇಕರು ರಾಜಕಾರಣದ ಅಖಾಡದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದೀಗ ನಟ ಚಿರಂಜೀವಿ (Chiranjeevi) ಕೂಡ ರಾಜಕಾರಣದ ಪಡಸಾಲೆಗೆ ಬರಲು ತಯಾರಾಗಿದ್ದಾರೆ. ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ಪರ ಪ್ರಚಾರಕ್ಕೆ ಬರುವುದಾಗಿ ತಿಳಿಸಿದ್ದಾರೆ.

    ಈ ಕಡೆ ಪವನ್ ಕಲ್ಯಾಣ್ ಅವರ ಚಿರಂಜೀವಿ ಬಲ ಬಂದರೆ, ಮತ್ತೊಂದು ಕಡೆ ತಮ್ಮದೇ ಆದ ಸೂತ್ರ ಹೆಣೆದುಕೊಂಡು ಆಟವಾಡುತ್ತಿದ್ದಾರೆ ಪವನ್. ರೋಜಾ (Roja) ಮತ್ತು ಪವನ್ ಕಲ್ಯಾಣ್ (Pawan Kalyan) ನಡುವಿನ ವೈಮನಸ್ಸು ಮತ್ತಷ್ಟು ಗಟ್ಟಿಯಾಗುತ್ತಿದೆ. ರೋಜಾ ಅವರನ್ನು ಹೇಗಾದರೂ ಬಗ್ಗು ಬಡಿಯುವುದಕ್ಕಾಗಿಯೇ ನಟ ಪವನ್ ಕಲ್ಯಾಣ್ ರಣತಂತ್ರವೊಂದನ್ನು ಹೆಣೆದಿದ್ದಾರಂತೆ. ಅದು ರೋಜಾಗೆ ಮುಳುವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

    ರೋಜಾ ಈಗಾಗಲೇ ಶಾಸಕಿಯಾಗಿ, ಮಂತ್ರಿಯಾಗಿ ಜನಮಾನಸದಲ್ಲಿ ಬೇರೂರಿದ್ದಾರೆ. ಹಾಗಾಗಿಯೇ ಕಳೆದ ಬಾರಿ ಚುನಾವಣೆಯಲ್ಲಿ (Election) ಪವನ್ ಕಲ್ಯಾಣ್ ವಿರುದ್ಧ ಹರಿಹಾಯ್ದಿದ್ದರು. ಪವನ್ ಕಲ್ಯಾಣ್ ಶಾಸಕ ಕೂಡ ಆಗುವುದಿಲ್ಲವೆಂದು ಭವಿಷ್ಯ ನುಡಿದಿದ್ದರು. ಈ ಮಾತು ಪವನ್ ಕಲ್ಯಾಣ್ ಅವರನ್ನು ಕೆರಳಿಸಿತ್ತು.

    ಈ ಬಾರಿ ರೋಜಾ ಅವರು ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆಗಾಗಿ ಚಿತ್ತೂರು ಜಿಲ್ಲೆಯ ನಗಾರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಆ ಕ್ಷೇತ್ರಕ್ಕೆ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರನ್ನು ತಮ್ಮ ಜನಸೇನಾ ಪಕ್ಷದಿಂದ ಕಣಕ್ಕಿಳಿಸಲು ಪವನ್ ಕಲ್ಯಾಣ್ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅನುಷ್ಕಾ ಜೊತೆ ಮಾತು ಕೂಡ ಆಡಿದ್ದಾರಂತೆ.

     

    ರಾಜಕೀಯಕ್ಕೆ ಬರುವ ಕುರಿತಂತೆ ಅನುಷ್ಕಾ ಬಹಿರಂಗವಾಗಿ ಹೇಳಿಕೆ ನೀಡದೇ ಇದ್ದರೂ, ಈ ಕುರಿತಂತೆ ಪವನ್ ಕೂಡ ಮಾತನಾಡದೇ ಇದ್ದರೂ, ತೆರೆ ಮರೆಯಲ್ಲಿ ರಣತಂತ್ರ ಹೆಣದಿದ್ದು ಸುಳ್ಳಲ್ಲಅಂತಿದೆ ಆಂಧ್ರ ರಾಜಕಾರಣ.

  • ಜ್ವರದಿಂದ ಬಳಲುತ್ತಿದ್ದಾರೆ ನಟ ಪವನ್ ಕಲ್ಯಾಣ್

    ಜ್ವರದಿಂದ ಬಳಲುತ್ತಿದ್ದಾರೆ ನಟ ಪವನ್ ಕಲ್ಯಾಣ್

    ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯ ಸುತ್ತುತ್ತಿದ್ದಾರೆ ನಟ ಪವನ್ ಕಲ್ಯಾಣ್ (Pawan Kalyan). ಲೋಕಸಭೆ ಮತ್ತು ಮುಂದಿನ ಆಂಧ್ರದ ವಿಧಾನಸಭೆ ಚುನಾವಣೆಗಾಗಿ ಅವರು ಭರ್ಜರಿ ಸಿದ್ದತೆ ನಡೆಸಿದ್ದಾರೆ. ಹಗಲು ರಾತ್ರಿ ಪ್ರಚಾರದಲ್ಲಿ ತೊಡಗಿದ್ದರಿಂದ ಪವನ್ ಕಲ್ಯಾಣ್ ಆಯಾಸಗೊಂಡಿದ್ದಾರಂತೆ.

    ಪಿಠಾಪುರಂ ಕ್ಷೇತ್ರದಿಂದ ಪವನ್ ಕಲ್ಯಾಣ್ ಚುನಾವಣೆಗೆ ಸ್ಪರ್ಧಿಸುವುದರಿಂದ ಅಲ್ಲಿ ಹೆಚ್ಚೆಚ್ಚು ಸಭೆಗಳನ್ನು ನಡೆಸಿದ್ದಾರೆ. ನಿನ್ನೆ ನಡೆದ ಸಭೆಯ ನಂತರ ಪವನ್ ಅಸ್ವಸ್ಥರಾದರು ಎನ್ನಲಾಗುತ್ತಿದೆ. ಜೊತೆಗೆ ಅವರಿಗೆ ಜ್ವರ ಕೂಡ ಬಾಧಿಸುತ್ತಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

     

    ಜ್ವರ ಮತ್ತು ಕೆಮ್ಮಿನಿಂದ ವಿಪರೀತ ಬಳಲುತ್ತಿರುವ ಪವನ್ ಕಲ್ಯಾಣ್, ಈಗಾಗಲೇ ಚಿಕಿತ್ಸೆ ಪಡೆದುಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಮತ್ತೆ ಅವರು ತಮ್ಮ ರಾಜಕೀಯ ಚಟುವಟಿಕೆಯಲ್ಲಿ ಭಾಗಿಯಾಗಲಿದ್ದಾರೆ.