Tag: Andhra Pradesh

  • 31 ತಿಂಗಳ ನಂತರ ಈಡೇರಿತು ಪ್ರತಿಜ್ಞೆ- ಮುಖ್ಯಮಂತ್ರಿಯಾಗಿ ವಿಧಾನಸಭೆಗೆ ಕಾಲಿಟ್ಟ ಚಂದ್ರಬಾಬು ನಾಯ್ಡು

    31 ತಿಂಗಳ ನಂತರ ಈಡೇರಿತು ಪ್ರತಿಜ್ಞೆ- ಮುಖ್ಯಮಂತ್ರಿಯಾಗಿ ವಿಧಾನಸಭೆಗೆ ಕಾಲಿಟ್ಟ ಚಂದ್ರಬಾಬು ನಾಯ್ಡು

    ಅಮರಾವತಿ: ಬರೋಬ್ಬರಿ 31 ತಿಂಗಳ ನಂತರ ಟಿಡಿಪಿಯ (TDP) ಚಂದ್ರಬಾಬು ನಾಯ್ಡು (Chandrababu Naidu) ಮುಖ್ಯಮಂತ್ರಿಯಾಗಿಯೇ ವಿಧಾನಸಭೆ (Vidhana Sabha) ಪ್ರವೇಶಿಸುವ ಮೂಲಕ ಪ್ರತಿಜ್ಞೆ ಈಡೇರಿಸಿದ್ದಾರೆ.

    ವೈಎಸ್‌ಆರ್ ಪಕ್ಷದ ಮುಖಂಡರ ತೀವ್ರ ನಿಂದನೆಯಿಂದ ನೊಂದು ಕಣ್ಣೀರಿಟ್ಟಿದ್ದ ಚಂದ್ರಬಾಬು ನಾಯ್ಡು ಸಿಎಂ ಆಗಿಯೇ ಮತ್ತೆ ಆಂಧ್ರ ಪ್ರದೇಶ (Andhra Pradesh) ವಿಧಾನಸಭೆಗೆ ಕಾಲಿಡುವುದಾಗಿ 2021ರ ನವೆಂಬರ್‌ನಲ್ಲಿ ಶಪಥ ಮಾಡಿದ್ದರು. ಇದನ್ನೂ ಓದಿ: ಚಂದ್ರಬಾಬು ನಾಯ್ಡು ಅವರ ಸೂಪರ್‌ ಸಿಕ್ಸ್‌ ಗ್ಯಾರಂಟಿ ಘೋಷಣೆ ಜಾರಿಗೆ ಬೇಕು 60 ಸಾವಿರ ಕೋಟಿ!

    ಇಂದು ಅಧಿವೇಶನ ಆರಂಭಕ್ಕೆ ಮುನ್ನ ವಿಧಾನಸಭೆಯ ಮೆಟ್ಟಿಲುಗಳಿಗೆ ಸಿಎಂ ಚಂದ್ರಬಾಬು ನಮಸ್ಕಾರ ಮಾಡಿದರು. ಸದನ ಪ್ರವೇಶಿಸುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು ಎದ್ದು ನಿಂತು ಚಂದ್ರಬಾಬು ನಾಯ್ಡು ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸತ್ಯ ಗೆದ್ದಿದೆ. ಪ್ರಜಾಪ್ರಭುತ್ವ ಉಳಿದಿದೆ ಎಂದು ಟಿಡಿಪಿ ಶಾಸಕರು ಭಿತ್ತಿಪತ್ರ ಪ್ರದರ್ಶಿಸಿ ಸಂಭ್ರಮಿಸಿದರು.

    ಇನ್ನೊಂದು ಕಡೆ ಮಾಜಿ ಸಿಎಂ ವೈಎಸ್ ಜಗನ್‌ಮೋಹನ್‌ರೆಡ್ಡಿ (Jagan Mohan Reddy) ಹಿಂಬಾಗಿಲ ಮೂಲಕ ವಿಧಾನಸಭೆಗೆ ಕಾಲಿಟ್ಟದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಇಂಡೋ-ಪಾಕ್ ಗಡಿಯಲ್ಲಿ ಸೈನಿಕರೊಂದಿಗೆ ಯೋಗ ಪ್ರದರ್ಶಿಸಿದ ಶ್ವಾನಗಳು

    2021ರಲ್ಲಿ ಆಗಿದ್ದು ಏನು?
    ನವೆಂಬರ್ 19 ರಂದು ಆಗಿನ ಆಡಳಿತದಲ್ಲಿದ್ದ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಸದಸ್ಯರು ತಮ್ಮ ಪತ್ನಿಯ ಬಗ್ಗೆ ಮಾಡಿದ ನಿಂದನೆಯ  ಹೇಳಿಕೆಯಿಂದ ಬೇಸರಗೊಂಡು ಸದನವನ್ನು ತೊರೆದಿದ್ದರು. ಮಹಿಳಾ ಸಬಲೀಕರಣದ ಚರ್ಚೆಯ ವೇಳೆ ವಿಧಾನಸಭೆಯಿಂದ ಹೊರನಡೆಯುವ ಮುನ್ನ ಚಂದ್ರಬಾಬು ನಾಯ್ಡು ಕಣ್ಣೀರು ಹಾಕಿದ್ದರು.

    ಇದು ಮಹಾಭಾರತದಲ್ಲಿ ದ್ರೌಪದಿಯನ್ನು ಅವಮಾನಿಸಿದ ಕೌರವರ ಸಭೆ ಎಂದು ಕಣ್ಣೀರು ಹಾಕಿದ್ದ ಚಂದ್ರಬಾಬು ನಾಯ್ಡು ಇನ್ನು ಮುಂದೆ ನಾನು ಈ ಸಭೆಗೆ ಹಾಜರಾಗುವುದಿಲ್ಲ. ನಾನು ಮುಖ್ಯಮಂತ್ರಿಯಾದ ನಂತರವೇ ಸದನಕ್ಕೆ ಮರಳುತ್ತೇನೆ ಪ್ರತಿಜ್ಞೆ ಮಾಡಿದ್ದರು.

    ಈ ಬಾರಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಟಿಡಿಪಿ, ಜನಾಸೇನಾ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಈ ಬಾರಿ ಒಟ್ಟು 175 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಟಿಡಿಪಿ 135, ಜನಸೇನಾ 21, ವೈಎಸ್‌ಆರ್‌ಸಿಪಿ 11, ಬಿಜೆಪಿ 8 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2019ರ ಚುನಾವಣೆಯಲ್ಲಿ ಬಹಳಷ್ಟು ಸೊಷಿಯಲಿಸ್ಟ್‌, ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದ್ದ ಪರಿಣಾಮ ಜಗನ್‌ ನೇತೃತ್ವದ ವೈಎಸ್‌ಅರ್‌ಸಿಪಿ ಕಾಂಗ್ರೆಸ್‌ 151, ಟಿಡಿಪಿ 23, ಜನಸೇನಾ 1 ಸ್ಥಾನವನ್ನು ಗೆದ್ದುಕೊಂಡಿತ್ತು.

     

  • ಟಿಡಿಪಿಯ ಸೂಪರ್‌ ಸಿಕ್ಸ್‌ ಗ್ಯಾರಂಟಿ ಘೋಷಣೆ ಜಾರಿಗೆ ಬೇಕು 60 ಸಾವಿರ ಕೋಟಿ!

    ಟಿಡಿಪಿಯ ಸೂಪರ್‌ ಸಿಕ್ಸ್‌ ಗ್ಯಾರಂಟಿ ಘೋಷಣೆ ಜಾರಿಗೆ ಬೇಕು 60 ಸಾವಿರ ಕೋಟಿ!

    – ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಆಂಧ್ರ
    – ಜನಪ್ರಿಯ ಯೋಜನೆ ಘೋಷಣೆ ಮಾಡಿ ಹೀನಾಯವಾಗಿ ಸೋತ ಜಗನ್‌

    ಹೈದರಾಬಾದ್‌: ಚುನಾವಣೆಯಲ್ಲಿ ಹಲವು ಭರವಸೆ ನೀಡಿ ಆಂಧ್ರಪ್ರದೇಶದ (Andhra Pradesh) ಅಧಿಕಾರ ಹಿಡಿದಿರುವ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ತೆಲುಗು ದೇಶಂ ಪಕ್ಷ (TDP) ಈ ಭರವಸೆಯನ್ನು ಹೇಗೆ ಈಡೇರಿಸುತ್ತದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

    ನಿರುದ್ಯೋಗಿ ಯುವಕರಿಗೆ ನಗದು ಪಾವತಿ, ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತು ಉಚಿತ ಎಲ್‌ಪಿಜಿ ಸಿಲಿಂಡರ್‌ ಸೇರಿದಂತೆ ಹಲವು ಭರವಸೆ ಈಡೇರಿಸಲು ಸರ್ಕಾರಕ್ಕೆ ವಾರ್ಷಿಕ ಸುಮಾರು 60 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

    cm jagan mohan reddy

    ಸಾಲ ಎಷ್ಟಿದೆ?
    ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಸರ್ಕಾರ ಅಧಿಕಾರ ವಹಿಸಿಕೊಂಡ ನಾಲ್ಕು ವರ್ಷದಲ್ಲಿ ಆಂಧ್ರಪ್ರದೇಶದ ಒಟ್ಟು ಸಾಲವು 2023 ರ ಮಾರ್ಚ್ ಅಂತ್ಯದ ವೇಳೆಗೆ 67% ಏರಿಕೆಯಾಗಿ 4,42,442 ಕೋಟಿ ರೂ.ಗೆ ಜಿಗಿದಿದೆ. 2018-19 ರಲ್ಲಿ ರಾಜ್ಯದ ಒಟ್ಟು ವಿತ್ತೀಯ ಕೊರತೆಯು 35,441 ಕೋಟಿ ರೂ. ಇದ್ದರೆ ಮಾರ್ಚ್‌ 31, 2024 ಕ್ಕೆ ಇದು 57% ಏರಿಕೆಯಾಗಿ 55,817.50 ಕೋಟಿ ರೂ. ತಲುಪಿದೆ.

    ಆಡಳಿತದ ವಿಕೇಂದ್ರಿಕರಣ ಮಾಡಲು ಆಂಧ್ರಕ್ಕೆ ಮೂರು ರಾಜಧಾನಿ ಮಾಡಲು ಜಗನ್‌ ಮುಂದಾಗಿದ್ದರೆ ಚಂದ್ರಬಾಬು ನಾಯ್ಡು ಅಮರಾವತಿಯನ್ನೇ ರಾಜಧಾನಿ ಮಾಡಲು ಮುಂದಾಗಿದ್ದರು. ಜಗನ್‌ ಸರ್ಕಾರ ಅಧಿಕಾರಕ್ಕೆ ಏರಿದ ಬಳಿಕ ಅಮರಾವತಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿರಲಿಲ್ಲ. ಆದರೆ ಈಗ ಚಂದ್ರಬಾಬು ನಾಯ್ಡು ಮರಳಿ ಮುಖ್ಯಮಂತ್ರಿಯಾಗಿರುವ ಕಾರಣ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದರೆ ಸಾಲ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

    ಈ ವರ್ಷ ಮಂಡನೆಯಾದ ಬಜೆಟ್‌(ಲೇಖಾನುದಾನ)ನಲ್ಲಿ 2024-2025 ರಲ್ಲಿ ಆದಾಯ ಸ್ವೀಕೃತಿಯಿಂದ 2,05,352.19 ರೂ ಬಂದರೆ 2,30,110.41 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಇದನ್ನೂ ಓದಿ: ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕೊಲ್ಲುವಾಗ ಸರ್ಕಾರ ಏನು ಮಾಡ್ತಿತ್ತು?: ಗೋವಿಂದ ಕಾರಜೋಳ

    ಸೂಪರ್‌ ಸಿಕ್ಸ್‌ ಘೋಷಣೆಗಳು:
    ಕರ್ನಾಟಕದಲ್ಲಿ ಕಾಂಗ್ರೆಸ್‌ ಹೇಗೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿತ್ತೋ ಅದೇ ಮಾದರಿಯಲ್ಲಿ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ʼಸೂಪರ್‌ ಸಿಕ್ಸ್‌ ಗ್ಯಾರಂಟಿʼ  ಹೆಸರಿನಲ್ಲಿ ಘೋಷಣೆ ಪ್ರಕಟಿಸಿದ್ದರು. ಪ್ರತಿ ತಿಂಗಳು ನಿರುದ್ಯೋಗಿಗಳಿಗೆ 3000 ರೂ. ನಿರುದ್ಯೋಗ ಭತ್ಯೆ, ಶಾಲೆಗೆ ತೆರಳು ಪ್ರತಿ ಮಗುವಿಗೆ ವರ್ಷಕ್ಕೆ 15,000 ರೂ., ಪ್ರತಿ ರೈತರಿಗೆ ವಾರ್ಷಿಕ 20,000 ರೂ., ಸರ್ಕಾರದಿಂದ ಪ್ರತಿ ಮನೆಗೆ ವರ್ಷಕ್ಕೆ 3 ಗ್ಯಾಸ್‌ ಸಿಲಿಂಡರ್‌ ಉಚಿತ, 18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೆ ತಿಂಗಳಿಗೆ 1,500 ರೂ., ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಘೋಷಣೆಗಳನ್ನು ಟಿಡಿಪಿ ಘೋಷಣೆ ಮಾಡಿತ್ತು.

    ಕರ್ನಾಟಕದಲ್ಲಿ ಹೇಗೆ ಮನೆ ಮನೆಗೆ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ಗಳನ್ನು ಹಂಚಿಕೆ ಮಾಡಿತ್ತೋ ಅದೇ ರೀತಿಯಾಗಿ ಆಂಧ್ರದಲ್ಲೂ ಟಿಡಿಪಿ ಮನೆಗೆ ಸೂಪರ್‌ ಸಿಕ್ಸ್‌ ಭರವಸೆಯ ಕಾರ್ಡ್‌ಗಳನ್ನು ಹಂಚಿಕೆ ಮಾಡಿತ್ತು. ಈ ಭರವಸೆಯ ಪರಿಣಾಮ ಆಂಧ್ರ ಚುನಾವಣೆಯಲ್ಲಿ ಜಗನ್‌ ಪಕ್ಷವನ್ನು ಹೀನಾಯವಾಗಿ ಸೋಲಿಸಿತ್ತು. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಿಂದಿನಿಂದ ಎಕ್ಸ್‌ಪ್ರೆಸ್ ರೈಲಿಗೆ ಗುದ್ದಿದ ಗೂಡ್ಸ್ ರೈಲು – ಐವರು ದುರ್ಮರಣ, 25 ಮಂದಿಗೆ ಗಾಯ

    ಕೇಂದ್ರದ ಅನುದಾನ ಸಿಗುತ್ತಾ?
    ಟಿಡಿಪಿ ತನ್ನ ಮೈತ್ರಿಪಕ್ಷವಾಗಿರುವ ಕಾರಣ ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರದ ಅನುದಾನದ ಮೇಲೆ ಚಂದ್ರಬಾಬು ನಾಯ್ಡ ಗಮನ ಕೇಂದ್ರಿಕರಿಸಿದ್ದಾರೆ. ಕೇಂದ್ರದ ವಿಶೇಷ ಅನುದಾನ ಪ್ರಕಟಿಸಿದರೆ ಈ ಯೋಜನೆಗಳನ್ನು ಈಡೇರಿಸಲು ಸ್ವಲ್ಪ ನೆರವಾಗಬಹುದು. ಆದರೆ ಆಂಧ್ರಪ್ರದೇಶಕ್ಕೆ ವಿಶೇಷ ಅನುದಾನ ನೀಡಿದರೆ ಬೇರೆ ರಾಜ್ಯಗಳು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ ಮೊರೆ ಹೋಗಬಹುದು. ಹೀಗಾಗಿ ಘೋಷಣೆ ಮಾಡಿದ ಭರವಸೆ ಈಡೇರಿಕೆಗೆ ಟಿಡಿಪಿ ಹಣ ಎಲ್ಲಿಂದ ತರುತ್ತದೆ ಎನ್ನುವುದು ದೊಡ್ಡ ಪ್ರಶ್ನೆ

    ಈ ಬಾರಿ ಒಟ್ಟು 175 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಟಿಡಿಪಿ 135, ಜನಸೇನಾ 21, ವೈಎಸ್‌ಆರ್‌ಸಿಪಿ 11, ಬಿಜೆಪಿ 8 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2019ರ ಚುನಾವಣೆಯಲ್ಲಿ ಜಗನ್‌ ಸರ್ಕಾರ ಬಹಳಷ್ಟು ಸೊಷಿಯಲಿಸ್ಟ್‌, ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದ್ದ ಪರಿಣಾಮ ವೈಎಸ್‌ಅರ್‌ಸಿಪಿ ಕಾಂಗ್ರೆಸ್‌ 151, ಟಿಡಿಪಿ 23, ಜನಸೇನಾ 1 ಸ್ಥಾನವನ್ನು ಗೆದ್ದುಕೊಂಡಿತ್ತು.

     

  • ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು, ಸಚಿವರಾಗಿ ಪವನ್‌ ಕಲ್ಯಾಣ್‌ ಪ್ರಮಾಣವಚನ ಸ್ವೀಕಾರ

    ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು, ಸಚಿವರಾಗಿ ಪವನ್‌ ಕಲ್ಯಾಣ್‌ ಪ್ರಮಾಣವಚನ ಸ್ವೀಕಾರ

    – ಕಾರ್ಯಕ್ರಮದಲ್ಲಿ ಮೋದಿ, ಅಮಿತ್‌ ಶಾ ಭಾಗಿ

    ಹೈದರಾಬಾದ್‌: ಆಂಧ್ರಪ್ರದೇಶದ (Andhra Pradesh) ನೂತನ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು (Chandrababu Naidu), ಮಂತ್ರಿಯಾಗಿ ಪವನ್‌ ಕಲ್ಯಾಣ್‌ (Pawan Kalyan) ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ಇದರೊಂದಿಗೆ ಚಂದ್ರಬಾಬು ನಾಯ್ಡು 4ನೇ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ವಿಜಯವಾಡದ ಹೊರವಲಯದಲ್ಲಿರುವ ಗನ್ನವರಂ ವಿಮಾನ ನಿಲ್ದಾಣದ ಬಳಿ ಇರುವ ಕೆಸರಪಲ್ಲಿ ಐಟಿ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಎಸ್‌. ಅಬ್ದುಲ್‌ ನಜೀರ್‌ ಪ್ರಮಾಣವಚನ ಬೋಧಿಸಿದರು. ಒಟ್ಟು 23 ಮಂದಿ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.

    ಪ್ರಧಾನಿ ನರೇಂದ್ರ ಮೋದಿ (PM Narendra Modi), ಗೃಹ ಸಚಿವ ಅಮಿತ್‌ ಶಾ, ನಟ ರಜನಿಕಾಂತ್‌, ಪವನ್‌ ಕಲ್ಯಾಣ್‌ ಸಹೋದರ ಚಿರಂಜೀವಿ ಸೇರಿದಂತೆ ಸಿನಿಮಾ ತಾರೆಯರು, ಎನ್‌ಡಿಎ(NDA) ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


    ಚಂದ್ರಬಾಬು ನಾಯ್ಡು ಅವರು 1995 ರಿಂದ 1999, 2004 ರಿಂದ 2009 ಹಾಗೂ 2014ರಿಂದ 2019ರ ವರೆಗೆ ಒಟ್ಟು ಮೂರು ಬಾರಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 2019ರ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಪಕ್ಷ ಸೋಲು ಕಂಡಿತ್ತು ಜಗನ್‌ ನೇತೃತ್ವದ ಸರ್ಕಾರ ಅಧಿಕಾರ ಏರಿತ್ತು.

    ಆಂಧ್ರಪ್ರದೇಶದಲ್ಲಿ ಮೇ 13ರಂದು ಲೋಕಸಭಾ ಚುನಾವಣೆಯ ಜೊತೆಯಲ್ಲೇ ವಿಧಾನಸಭೆಗೂ ಮತದಾನ ನಡೆದಿತ್ತು. ಈ ಚುನಾವಣೆಗೆ ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಮೈತ್ರಿಮಾಡಿಕೊಂಡಿದ್ದವು.

    ವಿಧಾನಸಭೆಯ 175 ಸ್ಥಾನಗಳ ಪೈಕಿ ಟಿಡಿಪಿ 135, ಜನಸೇನಾ 21, ಬಿಜೆಪಿ 8 ಹಾಗೂ ವೈಎಸ್‌ಆರ್‌ಸಿಪಿ 11 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. 25 ಲೋಕಸಭಾ ಕ್ಷೇತ್ರಗಳ ಪೈಕಿ ಟಿಡಿಪಿ 16, ವೈಎಸ್‌ಆರ್‌ಸಿಪಿ 4, ಬಿಜೆಪಿ 3, ಜನಸೇನಾ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

  • ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು, ಡಿಸಿಎಂ ಆಗಿ ಪವನ್ ಕಲ್ಯಾಣ್ ನಾಳೆ ಪ್ರಮಾಣವಚನ ಸ್ವೀಕಾರ

    ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು, ಡಿಸಿಎಂ ಆಗಿ ಪವನ್ ಕಲ್ಯಾಣ್ ನಾಳೆ ಪ್ರಮಾಣವಚನ ಸ್ವೀಕಾರ

    ಅಮರಾವತಿ: ಆಂಧ್ರದಲ್ಲಿ (Andhra Pradesh) ನಾಳೆ ಎನ್‌ಡಿಎ (NDA) ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಸಿಎಂ ಆಗಿ ಚಂದ್ರಬಾಬು ನಾಯ್ಡು (Chandrababu Naidu), ಡಿಸಿಎಂ ಆಗಿ ಜನಸೇನಾನಿ ಪವನ್ ಕಲ್ಯಾಣ್ (Pawan Kalyan) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಚಂದ್ರಬಾಬು ಸಂಪುಟದಲ್ಲಿ ಬಿಜೆಪಿಗರಿಗೂ ಸ್ಥಾನಮಾನ ಸಿಗಲಿದೆ ಎಂದು ಹೇಳಲಾಗಿದೆ. ನಾಳೆಯ ಪದಗ್ರಹಣ ಸಮಾರಂಭದಲ್ಲಿ ಪ್ರಧಾನಿ ಮೋದಿ, ಚಿರಂಜೀವಿ, ರಜಿನಿಕಾಂತ್ ಸೇರಿ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ. ಅಮರಾವತಿಯೇ ಆಂಧ್ರ ರಾಜಧಾನಿ. ವಿಶಾಖಪಟ್ಟಣ ಆರ್ಥಿಕ ರಾಜಧಾನಿ ಎಂದು ಭಾವಿ ಸಿಎಂ ಚಂದ್ರಬಾಬು ನಾಯ್ಡು ಘೋಷಣೆ ಮಾಡಿದ್ದಾರೆ. ಇನ್ನು ಆಂಧ್ರದಲ್ಲಿಯೂ ಕರ್ನಾಟಕ, ತೆಲಂಗಾಣ ಮಾದರಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಯಣಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಈಗಾಗಲೇ ಅಧ್ಯಯನ ಶುರುವಾಗಿದ್ದು, ಮುಂದಿನ ಒಂದೆರಡು ವಾರಗಳಲ್ಲಿ ಈ ಯೋಜನೆ ಜಾರಿಯಾಗುವ ಸಂಭವ ಇದೆ. ಇದನ್ನೂ ಓದಿ: ಎರಡು ಕಿವಿಗಳಲ್ಲೂ ಶ್ರವಣದೋಷ ಇದ್ದ ನೈಜೀರಿಯನ್ ಯುವತಿಗೆ ಫೋರ್ಟಿಸ್‌ ವೈದ್ಯರಿಂದ ಯಶಸ್ವಿ ‘ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ’

    ಮತ್ತೊಂದೆಡೆ ಒಡಿಶಾದಲ್ಲಿಯೂ ನಾಳೆಯೇ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಇಂದು ಭುವನೇಶ್ವರದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬುಡಕಟ್ಟು ಸಮುದಾಯದ ಮೋಹನ್ ಮಝ್ಹಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ನಾಳೆ ಮೋದಿ ಸಮ್ಮುಖದಲ್ಲಿ ಮೋಹನ್ ಮಝ್ಹಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 52 ವರ್ಷದ ಮೋಜನ್ ಮಝ್ಹಿ ನಾಲ್ಕನೇ ಬಾರಿ ಕಿಯೋಂಜರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ನು, ಎರಡು ಡಿಸಿಎಂ ಹುದ್ದೆ ಸೃಷ್ಟಿಸಲು ಬಿಜೆಪಿ ನಿರ್ಧರಿಸಿದೆ. ನಾಳೆಯ ಪದಗ್ರಹಣ ಸಮಾರಂಭಕ್ಕೆ ಮಾಜಿ ಸಿಎಂ ನವೀನ್ ಪಟ್ನಾಯಕ್‌ರನ್ನು ಬಿಜೆಪಿ ಆಹ್ವಾನಿಸಿದೆ. ವಿಶೇಷ ಎಂದರೆ ಒಡಿಶಾ ನೂತನ ಸಿಎಂಗೆ ಅಧಿಕೃತ ನಿವಾಸವನ್ನು ಹುಡುಕಲಾಗುತ್ತಿದೆ. 24 ವರ್ಷ ಸಿಎಂ ಆಗಿದ್ದ ನವೀನ್ ಪಟ್ನಾಯಕ್ ತಮ್ಮ ನಿವಾಸದಿಂದಲೇ ಆಡಳಿತ ನಡೆಸಿದ್ದ ಕಾರಣ ಈ ಸಮಸ್ಯೆ ಉದ್ಭವ ಆಗಿದೆ. ಇದನ್ನೂ ಓದಿ: SDMFನಿಂದ 100 ಕೋಟಿ ಬಿಡುಗಡೆ – ಮೊದಲ ಹಂತದಲ್ಲಿ 93 ಕೆರೆಗಳ ಸಂಗ್ರಹಣಾ ಸಾಮರ್ಥ್ಯ ವೃದ್ಧಿ: ಸಚಿವ ಎನ್‌.ಎಸ್‌.ಬೋಸರಾಜು

  • ಉಳ್ಳಾಲ ಬೀಚ್‍ಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಸಮುದ್ರ ಪಾಲು – ಮೂವರ ರಕ್ಷಣೆ

    ಉಳ್ಳಾಲ ಬೀಚ್‍ಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಸಮುದ್ರ ಪಾಲು – ಮೂವರ ರಕ್ಷಣೆ

    ಮಂಗಳೂರು: ಉಳ್ಳಾಲದ ಕಡಲ ತೀರದಲ್ಲಿ (Ullala beach) ಅಲೆಗಳ ಅಬ್ಬರಕ್ಕೆ ಪ್ರವಾಸಕ್ಕೆ ಬಂದಿದ್ದ ಓರ್ವ ಮಹಿಳೆ ಸಮುದ್ರದ ಪಾಲಾಗಿದ್ದು, ಮೂವರು ಮಹಿಳೆಯರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

    ಮೃತ ಮಹಿಳೆಯನ್ನು ಪರಿಮೀ ರತ್ನ ಕುಮಾರಿ (57) ಎಂದು ಗುರುತಿಸಲಾಗಿದೆ. ಆಂದ್ರಪ್ರದೇಶದ Andhra Pradesh) ಸಿರಿಲಿಂಗಪಲ್ಲಿ ಮೂಲದ ನಾಲ್ವರು ಮಹಿಳೆಯರು ಬೀಚ್‍ಗೆ ಪ್ರವಾಸಕ್ಕೆ ಬಂದಿದ್ದರು. ನೀರಿನಲ್ಲಿ ಆಟ ಆಡುತ್ತಿದ್ದ ವೇಳೆ ಬೃಹತ್ ಅಲೆಯೊಂದು ಮೂವರು ಮಹಿಳೆಯರನ್ನು ಎಳೆದೊಯ್ದಿದೆ. ಈ ವೇಳೆ ರತ್ನ ಕುಮಾರಿ ಸಾವಿಗೀಡಾಗಿದ್ದು, ಉಳಿದ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇದನ್ನೂ ಓದಿ: ಮಗನ ಕಳೆದುಕೊಂಡ ಪೋಷಕರ ಆಕ್ರಂದನ- ದರ್ಶನ್‌ಗೆ ಹಿಡಿ ಶಾಪ

    ಪರಿಮೀ ರತ್ನ ಕುಮಾರಿಯವರನ್ನು ಸಹ ಸ್ಥಳೀಯರು ತಕ್ಷಣ ದಡಕ್ಕೆ ತಂದಿದ್ದು, ಈ ವೇಳೆ ಮಹಿಳೆ ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿರುವುದನ್ನು ಕಂಡು, ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಮಹಿಳೆ ಸಾವಿಗೀಡಾಗಿದ್ದಾಳೆ ಎಂದು ತಿಳಿದು ಬಂದಿದೆ.

    ಹೈದರಾಬಾದ್‍ನಿಂದ 5 ಮಂದಿ ಮಹಿಳೆಯರ ತಂಡ ಜೂ.ಕ್ಕೆ ಮೈಸೂರಿಗೆ ವಿಮಾನದ ಮೂಲಕ ಬಂದಿಳಿದಿದ್ದರು. ಬಳಿಕ ಕಾರಿನ ಮೂಲಕ ಜೂ.7 ಕ್ಕೆ ಕೊಡಗಿಗೆ ತೆರಳಿ, ಬಳಿಕ ಜೂ.9ಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ತೆರಳಿ ಅಲ್ಲಿಂದ ಉಳ್ಳಾಲಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಜಿಮ್ ಮುಗಿಸಿ ಹೋಟೆಲ್‌ಗೆ ಬರ್ತಿದ್ದಂತೆ ದರ್ಶನ್ ಅರೆಸ್ಟ್!

  • ಆಂಧ್ರ ಬಿಜೆಪಿ ಅಧ್ಯಕ್ಷೆ ಪುರಂದೇಶ್ವರಿ ಲೋಕಸಭೆಯ ಸ್ಪೀಕರ್‌?

    ಆಂಧ್ರ ಬಿಜೆಪಿ ಅಧ್ಯಕ್ಷೆ ಪುರಂದೇಶ್ವರಿ ಲೋಕಸಭೆಯ ಸ್ಪೀಕರ್‌?

    ನವದೆಹಲಿ: ಸಚಿವರಿಗೆ ಖಾತೆ ಹಂಚಿಕೆ ಅಂತಿಮವಾಗುತ್ತಿದ್ದಂತೆ 18ನೇ ಲೋಕಸಭೆಯ ಸ್ಪೀಕರ್‌ (Lok Sabha Speaker) ಹುದ್ದೆಗೆ ಆಂಧ್ರಪ್ರದೇಶ (Andhra Pradesh) ಬಿಜೆಪಿ ಅಧ್ಯಕ್ಷೆ ದಗ್ಗುಬಾಟಿ ಪುರಂದೇಶ್ವರಿ (Purandeswari) ಹೆಸರು ಬಂದಿದೆ.

    ಬಿಜೆಪಿ (BJP) ಬಹುಮತ ಹೊಂದಿದ್ದ ಎರಡು ಅವಧಿಯಲ್ಲಿ ಕ್ರಮವಾಗಿ ಸುಮಿತ್ರಾ ಮಹಾಜನ್ ಮತ್ತು ಓಂ ಬಿರ್ಲಾ ಅವರು ಸ್ಪೀಕರ್ ಆಗಿದ್ದರು. ಆದರೆ ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲದೇ ಇದ್ದಾಗ ಸ್ಪೀಕರ್‌ ಯಾರಾಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

    ಎನ್‌ಡಿಎ ಸರ್ಕಾರ ರಚನೆಯಾದ ಬಳಿಕ ಸ್ಪೀಕರ್‌ ಹುದ್ದೆ ನೀಡುವಂತೆ ಟಿಡಿಪಿ (TDP) ಬೇಡಿಕೆ ಇಟ್ಟಿತ್ತು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಸ್ಪೀಕರ್‌ ಹುದ್ದೆಗೆ ಭಾರೀ ಮಹತ್ವ ಇರುವ ಕಾರಣ ಬಿಜೆಪಿ ಬಿಟ್ಟು ಕೊಟ್ಟಿಲ್ಲ. ಈ ಕಾರಣಕ್ಕೆ ಟಿಡಿಪಿ ಮತ್ತು ಬಿಜೆಪಿಗೆ ಆಪ್ತವಾಗಿರುವ ಪುರಂದೇಶ್ವರಿ ಹೆಸರು ಈಗ ಕೇಳಿ ಬಂದಿದೆ. ಇದನ್ನೂ ಓದಿ: ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತರಿಗೆ ಹಣ – ಕಿಸಾನ್‌ ಸಮ್ಮಾನ್‌ ನಿಧಿ ಕಡತಕ್ಕೆ ಮೋದಿ ಸಹಿ

    ಪುರಂದರೇಶ್ವರಿ ಯಾರು?
    ದಿವಂಗತ ಎನ್‌.ಟಿ.ರಾಮರಾವ್‌ ಅವರ ಪುತ್ರಿ ಆಗಿರುವ ಪುರಂದರೇಶ್ವರಿ ರಾಜಮಂಡ್ರಿ ಲೋಕಸಭಾ ಕ್ಷೇತ್ರದ ಸದಸ್ಯೆಯಾಗಿದ್ದಾರೆ. ಟಿಡಿಪಿ ನಾಯಕ ಚಂದ್ರಬಾಬು (Chandrababu Naidu) ಅವರ ಪತ್ನಿಯ ಸಹೋದರಿಯಾಗಿದ್ದಾರೆ. ಪುರಂದರೇಶ್ವರಿ ಅವರ ಸಹೋದರ ಬಾಲಕೃಷ್ಣ ಹಿಂದೂಪುರ ವಿಧಾನಸಭಾ ಕ್ಷೇತ್ರದ ಟಿಡಿಪಿ ಶಾಸಕರಾಗಿದ್ದಾರೆ. ಆಂಧ್ರದಲ್ಲಿ ಬಿಜೆಪಿ ಮತ್ತು ಟಿಡಿಪಿ, ಜನಸೇನಾ ಮೈತ್ರಿಯಾಗಲು ಪುರಂದೇಶ್ವರಿ ಪಾತ್ರ ದೊಡ್ಡದು. ಈ ಕಾರಣಕ್ಕೆ ಪುರಂದೇಶ್ವರಿ ಹೆಸರು ಈಗ ಮುನ್ನೆಲೆಗೆ ಬಂದಿದೆ.

    ಪುರಂದರೇಶ್ವರಿ ಅವರನ್ನು ಸ್ಪೀಕರ್‌ ಸ್ಥಾನಕ್ಕೆ ಕೂರಿಸಿದರೆ ಸರ್ಕಾರ ಮಹಿಳೆಯರ ಪರವಾಗಿ ಇದೆ ಎಂಬ ಸಂದೇಶವನ್ನು ರವಾನಿಸದಂತಾಗುತ್ತದೆ. ಅಷ್ಟೇ ಅಲ್ಲದೇ ಮಿತ್ರ ಪಕ್ಷವಾದ ಟಿಡಿಪಿ, ಜನಸೇನಾ ಸೇರಿದಂತೆ ಯಾವುದೇ ಪಕ್ಷಗಳು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇಲ್ಲ ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.

     

  • ಜೂ.12 ರಂದು ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ

    ಜೂ.12 ರಂದು ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ

    ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು (Chandrababu Naidu) ಅವರು ಇದೇ ಜೂ.12 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಈ ಕುರಿತು ಆಂಧ್ರ (Andhra Pradesh) ಸಿಎಂ ಅಧಿಕೃತ ಖಾತೆಯು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದೆ. ಜೂ.12 ರಂದು ಬೆಳಗ್ಗೆ 11:27 ಕ್ಕೆ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೃಷ್ಣಾ ಜಿಲ್ಲೆಯ ಗನ್ನವರಂನ ಕೇಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಇದನ್ನೂ ಓದಿ: ಕಾಂಗ್ರೆಸ್‍ನ ಸಂಸದೀಯ ಪಕ್ಷದ ನಾಯಾಕಿಯಾಗಿ ಸೋನಿಯಾ ಗಾಂಧಿ ಮರು ಆಯ್ಕೆ

    ಆಂಧ್ರಪ್ರದೇಶದಲ್ಲಿ ನಡೆದ 2024ರ ವಿಧಾನಸಭಾ ಚುನಾವಣೆಯಲ್ಲಿ ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷವು 175 ಸ್ಥಾನಗಳ ಪೈಕಿ 135 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಸಾಧನೆ ಮಾಡಿತು.

    ಜನಸೇನಾ ಪಕ್ಷ 21, ಆಡಳಿತಾರೂಢ ಪಕ್ಷ ವೈಎಸ್‌ಆರ್‌ಸಿಪಿ ಕೇವಲ 11 ಹಾಗೂ ಬಿಜೆಪಿ 8 ಸ್ಥಾನಗಳನ್ನು ಗೆದ್ದಿದೆ. ಇದನ್ನೂ ಓದಿ: ಮೋದಿ ಸಂಪುಟದಲ್ಲಿ ಹೆಚ್‍ಡಿಕೆಗೆ ಸಚಿವ ಸ್ಥಾನ ಫಿಕ್ಸ್?

  • ನಟಿ ರೋಜಾ ಸೋತ ಬೆನ್ನಲ್ಲೇ ಬಂಡ್ಲ ಗಣೇಶ್ ಪೋಸ್ಟ್ ವೈರಲ್

    ನಟಿ ರೋಜಾ ಸೋತ ಬೆನ್ನಲ್ಲೇ ಬಂಡ್ಲ ಗಣೇಶ್ ಪೋಸ್ಟ್ ವೈರಲ್

    ಆಂಧ್ರ ಪ್ರದೇಶದ (Andhra Pradesh) ವಿಧಾನಸಭೆ ಚುನಾವಣೆಯಲ್ಲಿ ನಟಿ ರೋಜಾ (Roja) ಸೋತಿದ್ದಾರೆ. ವೈಸಿಪಿ ಪಕ್ಷದಿಂದ ಸ್ಪರ್ಧಿಸಿದ್ದ ರೋಜಾ ಹೀನಾಯ ಸೋಲು ಕಂಡಿದ್ದಾರೆ. ಸಚಿವೆಯೂ ಆಗಿದ್ದ ನಟಿಯ ಈ ಸೋಲಿಗೆ ನಿರ್ಮಾಪಕ, ಉದ್ಯಮಿ ಬಂಡ್ಲ ಗಣೇಶ್ (Bandla Ganesh) ಸಖತ್ ಪ್ರತಿಕ್ರಿಯೆ ನೀಡಿದ್ದಾರೆ. ರೋಜಾ ಅವರನ್ನು ನಯವಾಗಿ ಕಾಲೆಳೆದಿದ್ದಾರೆ.

    ರೋಜಾ ಸೋಲಿನ ಬೆನ್ನಲ್ಲೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಬಂಡ್ಲ ಗಣೇಶ್, ‘ಜಬರ್ದಸ್ತ್ ಕಾಯ್ತಿದೆ.. ಬೇಗ ಬಾ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಜಬರ್ದಸ್ತ್ ಅನ್ನೋದು ರೋಜಾ ನಡೆಸಿಕೊಡುತ್ತಿದ್ದ ಶೋ. ಈಗ ರೋಜಾ ಸೋತಿದ್ದರಿಂದ ಯಾವುದೇ ಕೆಲಸ ಇರುವುದಿಲ್ಲ. ಹಾಗಾಗಿ ಈ ಶೋ ನಡೆಸಿಕೊಂಡು ಹೋಗು ಎನ್ನುವ ಅರ್ಥದಲ್ಲಿ ಕಾಲೆಳೆದಿದ್ದಾರೆ.

    ಪವನ್ ಕಲ್ಯಾಣ್ (Pawan Kalyan) ಅವರ ಆಪ್ತ ಬಂಡ್ಲೆ ಗಣೇಶ್, ಹಾಗಾಗಿ ರೋಜಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪವನ್ ಕಲ್ಯಾಣ್ ವಿರುದ್ಧ ರೋಜಾ ಸಿಡಿದೆದ್ದಾಗೆಲ್ಲ ಪವನ್ ಪರ ಬ್ಯಾಟ್ ಬೀಸಿದವರು ಗಣೇಶ್, ಪವನ್ ಗೆಲುವಿಗಾಗಿ ಸಾಕಷ್ಟು ಶ್ರಮ ವಹಿಸಿದವರು. ಈಗ ಪವನ್ ಗೆದ್ದಿದ್ದಾರೆ. ಅಧಿಕಾರ ಚುಕ್ಕಾಣೆಯನ್ನೂ ಹಿಡಿಯಲಿದ್ದಾರೆ. ಈ ವೇಳೆಯಲ್ಲಿ ಬಂಡ್ಲ ಬರೆದಿರೊ ಪೋಸ್ಟ್ ವೈರಲ್ ಆಗಿದೆ.

  • ಮತದಾರನ ಮೇಲೆ ಹಲ್ಲೆ ಮಾಡಿ ಕೆನ್ನೆಗೆ ಏಟು ತಿಂದಿದ್ದ ಶಾಸಕ ಅನ್ನಾಬತ್ತುನಿ ಶಿವಕುಮಾರ್‌ಗೆ ಹೀನಾಯ ಸೋಲು

    ಮತದಾರನ ಮೇಲೆ ಹಲ್ಲೆ ಮಾಡಿ ಕೆನ್ನೆಗೆ ಏಟು ತಿಂದಿದ್ದ ಶಾಸಕ ಅನ್ನಾಬತ್ತುನಿ ಶಿವಕುಮಾರ್‌ಗೆ ಹೀನಾಯ ಸೋಲು

    ಹೈದರಾಬಾದ್‌: ಮತದಾನದ ವೇಳೆ ಕ್ಯೂನಲ್ಲಿ ಬರುವಂತೆ ಹೇಳಿದ್ದಕ್ಕೆ ಮತದಾರನ ಮೇಲೆ ಹಲ್ಲೆ ನಡೆಸಿದ್ದ ಶಾಸಕ ಹಾಗೂ ವೈಸಿಪಿ ಅಭ್ಯರ್ಥಿ ಶಿವಕುಮಾರ್ ಅವರು ಭಾರೀ ಮತಗಳ ಸೋಲು ಕಂಡಿದ್ದಾರೆ. ಹಾಲಿ ಶಾಸಕರನ್ನು 48,112 ಮತಗಳ ಅಂತರದಿಂದ ಜನಸೇನೆಯ ಪಕ್ಷದ ಅಭ್ಯರ್ಥಿ ನಾದೆಂಡಲಮನೋಹರ್ ಸೋಲಿಸಿದ್ದಾರೆ.

    ಕ್ಯೂನಲ್ಲಿ ಬಂದು ಮತ ಹಾಕಲು ಹೇಳಿದ್ದಕ್ಕೆ ವೈಎಸ್‍ಆರ್ ಕಾಂಗ್ರೆಸ್‍ನ (YSR Congress) ಶಾಸಕ ಅನ್ನಾಬತ್ತುನಿ ಶಿವಕುಮಾರ್ (Annabathuni Sivakumar) ಮತದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಆಂಧ್ರ ಪ್ರದೇಶದ (Andhra Pradesh) ತೆನಾಲಿ ಮತಗಟ್ಟೆಯಲ್ಲಿ ನಡೆದಿತ್ತು. ಈ ವೇಳೆ ಮತದಾರ ಸಹ ಶಾಸಕರ ಕೆನ್ನೆಗೆ ಭಾರಿಸಿದ್ದರು. ಇದರಿಂದ ಶಾಸಕರ ಬೆಂಬಲಿಗರು ಮತದಾರನ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲಿಸರು ಮತದಾರನನ್ನು ರಕ್ಷಿಸಿದ್ದರು.

    ಶಾಸಕರು ಹಲ್ಲೆ ನಡೆಸಿದ್ದ ವೀಡಿಯೋ ತೆಲುಗುದೇಶಂ ಪಾರ್ಟಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು. ಮತದಾರನ ಮೇಲೆ ಹಲ್ಲೆ ಮಾಡಿದ ವೈಸಿಪಿ ಶಾಸಕನಿಗೆ ತಿರುಗಿ ಹೊಡೆದ ಸಾಮಾನ್ಯ ಮತದಾರ ಹಾಗೂ ಪ್ರಜೆಗಳ ಆಕ್ರೋಶದಲ್ಲಿ ವೈಎಸ್‍ಆರ್ ಪಕ್ಷ ಕೊಚ್ಚಿ ಹೋಗುತ್ತಿದೆ ಎಂದು ಪೋಸ್ಟ್ ಮಾಡಿತ್ತು.

  • ಆಡಳಿತಾರೂಢ ವೈಎಸ್‌ಆರ್‌ಸಿಪಿ ಧೂಳಿಪಟ – ಟಿಡಿಪಿ ತೆಕ್ಕೆಗೆ ಆಂಧ್ರ

    ಆಡಳಿತಾರೂಢ ವೈಎಸ್‌ಆರ್‌ಸಿಪಿ ಧೂಳಿಪಟ – ಟಿಡಿಪಿ ತೆಕ್ಕೆಗೆ ಆಂಧ್ರ

    – ಜೂ.9 ರಂದು ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ?

    ಅಮರಾವತಿ: ಆಂಧ್ರಪ್ರದೇಶ (Andhra Pradesh) ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ಟಿಡಿಪಿ ಭರ್ಜರಿ ಜಯ ಸಾಧಿಸಿದೆ. ಇದೇ ಜೂ.9 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    175 ವಿಧಾನಸಭಾ ಸ್ಥಾನಗಳ ಪೈಕಿ ಟಿಡಿಪಿ 67 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 68 ರಲ್ಲಿ ಮುಂದಿದೆ. ಆದರೆ ಜನಸೇನಾ ಪಕ್ಷವು 21 ಸ್ಥಾನಗಳನ್ನು ಹೊಂದಿದೆ. ಬಿಜೆಪಿ 8 ಸ್ಥಾನಗಳನ್ನು ಗೆದ್ದರೆ, ವೈಎಸ್‌ಆರ್‌ಸಿಪಿ 12 ಸ್ಥಾನಗಳಲ್ಲಿ ಜಯಗಳಿಸಿದೆ. ಇದನ್ನೂ ಓದಿ: Assembly Results: ಆಂಧ್ರದಲ್ಲಿ ಟಿಡಿಪಿ ಮತ್ತೆ ಎಂಟ್ರಿ – ಒಡಿಶಾದಲ್ಲಿ ಬಿಜೆಪಿಗೆ ಬಹುಮತ

    cm jagan mohan reddy

    ನಾಯ್ಡು ಜೂನ್ 9 ರಂದು ಅಮರಾವತಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಫಲಿತಾಂಶದ ಬೆನ್ನಲ್ಲೇ ಸೋಲೊಪ್ಪಿಕೊಂಡ ಜಗನ್ ರೆಡ್ಡಿ ಆಂಧ್ರಪ್ರದೇಶ ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

    ಫಲಿತಾಂಶದ ಬಳಿಕ ಮಾತನಾಡಿದ ನಿರ್ಗಮಿತ ಸಿಎಂ ಜಗನ್‌ (Jagan Mohan Reddy), ನಮ್ಮಿಂದ ಏನು ತಪ್ಪಾಗಿದೆ ಎಂದು ತಿಳಿದಿಲ್ಲ. ಆದರೆ ನಾನು ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ. ನಾನು ಧ್ವನಿಯಿಲ್ಲದವರಿಗೆ ಧ್ವನಿ ನೀಡಿದ್ದೇನೆ. ಗೆದ್ದವರಿಗೆ ಆಲ್ ದಿ ಬೆಸ್ಟ್ ಎಂದು ಟಿಡಿಪಿ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ವಾರಣಾಸಿಯಲ್ಲಿ ಮೋದಿಗೆ ಹ್ಯಾಟ್ರಿಕ್‌ ಜಯ – ಕಡಿಮೆಯಾಯ್ತು ಗೆಲುವಿನ ಅಂತರ

    ಆಂಧ್ರಪ್ರದೇಶದಲ್ಲಿ ಎನ್‌ಡಿಎ ಮೈತ್ರಿಕೂಟದ ಅದ್ಭುತ ಪ್ರದರ್ಶನದ ನಂತರ ಚಂದ್ರಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದರು. ಮೈತ್ರಿಕೂಟ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆದ್ದಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಶಾ ಇಬ್ಬರನ್ನೂ ಅಭಿನಂದಿಸಿದ್ದಾರೆ. ಪಿಎಂ ಹಾಗೂ ಕೇಂದ್ರ ಗೃಹ ಸಚಿವರೂ ಸಹ ನಾಯ್ಡು ಅವರನ್ನು ಅಭಿನಂದಿಸಿದ್ದಾರೆ.

    ಪಕ್ಷಗಳ ಈಗಿನ ಬಲಾಬಲ
    ಟಿಡಿಪಿ – 134
    ಜೆಎನ್‌ಪಿ – 21
    ಬಿಜೆಪಿ – 8
    ವೈಎಸ್‌ಆರ್‌ಸಿಪಿ – 12

    2019ರಲ್ಲಿ ಏನಾಗಿತ್ತು?
    ಆಂಧ್ರದಲ್ಲಿ 2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 151 ಸ್ಥಾನಗಳನ್ನು ಗೆದ್ದು ವೈಎಸ್‌ಆರ್‌ಸಿಪಿ ಅಧಿಕಾರ ಹಿಡಿದಿತ್ತು. ಟಿಡಿಪಿ 23 ಹಾಗೂ ಜೆಎನ್‌ಪಿ 1 ಸ್ಥಾನ ಗೆದ್ದಿತ್ತು. ಇದನ್ನೂ ಓದಿ: ಒಡಿಶಾದಲ್ಲಿ ಬಿಜೆಡಿ ಕೋಟೆ ಛಿದ್ರ – ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ