Tag: Andhra Pradesh High Court

  • ಲೈಂಗಿಕ ದೌರ್ಜನ್ಯಕ್ಕೆ ವೀರ್ಯ ಸ್ಖಲನವಾಗಿರಲೇ ಬೇಕಿಲ್ಲ – ಆಂಧ್ರ ಹೈಕೋರ್ಟ್

    ಲೈಂಗಿಕ ದೌರ್ಜನ್ಯಕ್ಕೆ ವೀರ್ಯ ಸ್ಖಲನವಾಗಿರಲೇ ಬೇಕಿಲ್ಲ – ಆಂಧ್ರ ಹೈಕೋರ್ಟ್

    ಅಮರಾವತಿ: ಲೈಂಗಿಕ ದೌರ್ಜನ್ಯದ (Sexual Assault) ಅಪರಾಧ ಸಾಬೀತುಪಡಿಸಲು ವೀರ್ಯ ಸ್ಖಲನ (Ejaculation Of Semen) ಆಗಿರಲೇಬೇಕಾದ ಅಗತ್ಯ ಇಲ್ಲ ಎಂದು ಆಂಧ್ರ ಪ್ರದೇಶದ (Andhra Pradesh) ಹೈಕೋರ್ಟ್ (High Court) ಹೇಳಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಪ್ರಕರಣದ (POCSO) ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದ ಅಪರಾಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ವಿಚಾರವನ್ನು ನ್ಯಾಯಾಲಯ ಪ್ರಸ್ತಾಪಿಸಿದ್ದು, ಅಪರಾಧಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿದೆ.

    ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ದಾಖಲಾದ ಸಾಕ್ಷ್ಯಾಧಾರಗಳಲ್ಲಿ (Evidence) ವೀರ್ಯ ಸ್ಖಲನ ಆಗಿರದೆ, ದೌರ್ಜನ್ಯದ ಕುರುಹು ಸಿಕ್ಕರೂ ಪೋಕ್ಸೊ ಕಾಯಿದೆಯ ಸೆಕ್ಷನ್ 3ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಲೈಂಗಿಕ ದೌರ್ಜನ್ಯದ ಅಪರಾಧ ಎಂದು ನಿರ್ಣಯಿಸಲು ಅಷ್ಟು ಸಾಕು ಎಂದು ನ್ಯಾಯಮೂರ್ತಿ ಚೀಕಾಟಿ ಮಾನವೇಂದ್ರನಾಥ್ ರಾಯ್ ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಟಿಫಿನ್ ಬಾಕ್ಸ್, ಹೊಲಿಗೆ ಯಂತ್ರ ಜಪ್ತಿ

    12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿದಾಗ, ಅದು ಪೋಕ್ಸೋ ಕಾಯಿದೆಯ ಸೆಕ್ಷನ್ 5ರ (ಎಮ್) ಅಡಿಯ ಲೈಂಗಿಕ ದೌರ್ಜನ್ಯಕ್ಕೆ ಸಮನಾಗಿರುತ್ತದೆ. ಹಾಗೂ ಸೆಕ್ಷನ್ 6ರಲ್ಲಿ ಹೇಳಲಾದ ತೀವ್ರ ತರವಾದ ಲೈಂಗಿಕ ದೌರ್ಜನ್ಯವನ್ನು ಮಾಡಿದ ವ್ಯಕ್ತಿಯ ವಿರುದ್ಧ ಅದು ಶಿಕ್ಷೆಯನ್ನು ಸೂಚಿಸುತ್ತದೆ ಎಂದು ನ್ಯಾಯಮೂರ್ತಿ ರಾಯ್ ತಮ್ಮ 22 ಪುಟಗಳ ತೀರ್ಪಿನಲ್ಲಿ ತಿಳಿಸಿದ್ದಾರೆ.

    ಇದಲ್ಲದೆ ಬಾಲಕಿಯ ಜನನಾಂಗದಲ್ಲಿ ರಕ್ತವಿತ್ತು ಹಾಗೂ ಜನನಾಂಗಕ್ಕೆ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದರು. ಇದು ದೌರ್ಜನ್ಯಕ್ಕೆ ಒಳಗಾಗಿರುವುದನ್ನು ಸೂಚಿಸುತ್ತದೆ ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.

    ವೀರ್ಯ ಪತ್ತೆಯಾಗದ ಕಾರಣ, ಯಾವುದೇ ದೌರ್ಜನ್ಯ ನಡೆದಿಲ್ಲ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಪೋಕ್ಸೋ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಲೈಂಗಿಕ ದೌರ್ಜನ್ಯದ ಅಪರಾಧವನ್ನು ಸಾಬೀತುಪಡಿಸಲು ಬೇಕಾಗಿರುವುದು, ಹೆಣ್ಣು ಮಗುವಿನ ಮೇಲೆ ದೇಹ ಅಥವಾ ಜನನಾಂಗಕ್ಕೆ ವ್ಯಕ್ತಿಯ ಗುಪ್ತಾಂಗ ಇಲ್ಲವೇ ಇತರೆ ವಸ್ತುಗಳಿಂದ ದೌರ್ಜನ್ಯ ಎಸಗಿದ್ದರೂ ಸಾಕು ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು 2016ರ ತೀರ್ಪನ್ನು ಎತ್ತಿಹಿಡಿದ್ದಾರೆ.

    ಏನಿದು ಪ್ರಕರಣ?
    2015ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ, 2016ರಲ್ಲಿ ಪಶ್ಚಿಮ ಗೋದಾವರಿ ಜಿಲ್ಲೆಯ (West Godavari District) ಎಲ್ಲೂರಿನ (Eluru) ವಿಶೇಷ ನ್ಯಾಯಾಧೀಶರು 5,000 ರೂ. ದಂಡ (Penalty) ಸೇರಿದಂತೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದರು. ಬಾಲಕಿಯ ವೈದ್ಯಕೀಯ ಪರೀಕ್ಷೆಯ (Examination) ಸಮಯದಲ್ಲಿ ವೀರ್ಯ ಪತ್ತೆಯಾಗಿರಲಿಲ್ಲ. ಸಂತ್ರಸ್ತ ಬಾಲಕಿ ಮೇಲೆ ಇತ್ತೀಚೆಗೆ ಲೈಂಗಿಕ ಕ್ರಿಯೆ ನಡೆಸಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ವೈದ್ಯರು ಅಂದು ವರದಿ ನೀಡಿದ್ದರು. ಈ ಆಧಾರದಲ್ಲಿ ಆರೋಪಿ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ. ಇದನ್ನೂ ಓದಿ: ಶೆಟ್ಟರ್ ನಿರ್ಧಾರದಿಂದ ಉಂಟಾದ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ಜೆ.ಪಿ ನಡ್ಡಾ

  • ಮೆಡಿಕಲ್ ಶಿಕ್ಷಣ ಲಾಭಗಳಿಸುವ ವ್ಯವಹಾರವಲ್ಲ – ಬೋಧನಾ ಶುಲ್ಕ ಕೈಗೆಟುಕುವಂತಿರಬೇಕು ಎಂದ ಸುಪ್ರೀಂ

    ಮೆಡಿಕಲ್ ಶಿಕ್ಷಣ ಲಾಭಗಳಿಸುವ ವ್ಯವಹಾರವಲ್ಲ – ಬೋಧನಾ ಶುಲ್ಕ ಕೈಗೆಟುಕುವಂತಿರಬೇಕು ಎಂದ ಸುಪ್ರೀಂ

    ನವದೆಹಲಿ: ಶಿಕ್ಷಣ (Education) ಲಾಭಗಳಿಸುವ ವ್ಯವಹಾರವಲ್ಲ. ಬೋಧನಾ ಶುಲ್ಕ ಯಾವಾಗಲೂ ಕೈಗೆಟುಕುವ ದರದಲ್ಲಿ ಇರಬೇಕು ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ (Supreme Court) ಆಂಧ್ರಪ್ರದೇಶ ಹೈಕೋರ್ಟ್‌ನ (Andhra Pradesh High Court) ಆದೇಶವನ್ನು ಎತ್ತಿ ಹಿಡಿದಿದೆ.

    ಕೋರ್ಟ್ 2017 ರಲ್ಲಿ ಅನುದಾನ ರಹಿತ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ (Private Unaided Medical Colleges) ಎಂಬಿಬಿಎಸ್ (MBBS) ಕೋರ್ಸ್‌ನ  ವಾರ್ಷಿಕ ಬೋಧನಾ ಶುಲ್ಕವನ್ನು 24 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ ಆಂಧ್ರ ಸರ್ಕಾರದ ಆದೇಶವನ್ನು ರದ್ದು ಮಾಡಿದೆ. 2011ರಲ್ಲಿ ನಿಗದಿಪಡಿಸಿದ್ದ ಶುಲ್ಕಕ್ಕಿಂತ ಏಳು ಪಟ್ಟು ಹೆಚ್ಚಿರುವ ವಾರ್ಷಿಕ ಶುಲ್ಕವನ್ನು 24 ಲಕ್ಷ ರೂ.ಗಳಿಗೆ ಹೆಚ್ಚಿಸಿರುವ 2017ರ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಷಾ ಹಾಗೂ ಎಂ.ಎಂ.ರುದ್ರೇಶ್ ಅವರಿದ್ದ ದ್ವಿಸದಸ್ಯ ಪೀಠ ಹೇಳಿದೆ.

    ಈ ಹಿಂದೆ ನಿಗದಿಪಡಿಸಿದ್ದ ಶುಲ್ಕಕ್ಕಿಂತ 7 ಪಟ್ಟು ಶುಲ್ಕವನ್ನು 24 ಲಕ್ಷ ರೂ.ಗೆ ಹೆಚ್ಚಿಸಿರುವುದು ಸಮರ್ಥನೀಯವಲ್ಲ. ಶಿಕ್ಷಣವು ಲಾಭ ಗಳಿಸುವ ವ್ಯವಹಾರವಲ್ಲ. ಹಾಗಾಗಿ ಬೋಧನಾ ಶುಲ್ಕ ಯಾವಾಗಲೂ ಕೈಗೆಟುಕುವಂತಿರಬೇಕು ಎಂದು ಹೇಳಿದ ಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದೆ. ಇದನ್ನು ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಆರಾಧನೆಗೆ ಅನುಮತಿ ಕೋರಿ ಅರ್ಜಿ – ನ.14ಕ್ಕೆ ವಿಚಾರಣೆ ಮುಂದೂಡಿಕೆ

    ರಾಜ್ಯ ಸರ್ಕಾರ ಹಾಗೂ ಮೇಲ್ಮನವಿದಾರರಾಗಿರುವ ವೈದ್ಯಕೀಯ ಕಾಲೇಜು, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (NALSA) ಹಾಗೂ ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಮತ್ತು ಸಮನ್ವಯ ಯೋಜನಾ ಸಮಿತಿ (MCPC)ಗೆ ತಲಾ 2.5 ಲಕ್ಷ ದಂಡ ಪಾವತಿಸುವಂತೆ ಸೂಚಿಸಿದೆ. ಜೊತೆಗೆ 2017ರ ಸೆಪ್ಟಂಬರ್‌ನಲ್ಲಿ ಹೊರಡಿಸಲಾದ ಸರ್ಕಾರಿ ಆದೇಶ (GO) ಅಡಿಯಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ ವಸೂಲಿ ಮಾಡಿದ ಶುಲ್ಕವನ್ನು ಮರುಪಾವತಿಸಬೇಕೆಂದು ಕೋರ್ಟ್ ಸೂಚಿಸಿದೆ. ಇದನ್ನು ಓದಿ: ವಿದ್ಯಾರ್ಥಿನಿಯನ್ನ ಮದ್ವೆಯಾಗಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಶಿಕ್ಷಕಿ

    ಇನ್ನು ಮುಂದೆ ಬೋಧನಾ ಶುಲ್ಕ ನಿರ್ಧರಿಸುವಾಗ ವೃತ್ತಿಪರ ಸಂಸ್ಥೆಯ ಸ್ಥಳ, ವೃತ್ತಿಪರ ಕೋರ್ಸ್ನ ಸ್ವರೂಪ, ಲಭ್ಯವಿರುವ ಮೂಲಸೌಕರ್ಯಗಳ ವೆಚ್ಚ, ಆಡಳಿತ ಮತ್ತು ನಿರ್ವಹಣೆಗೆ ಖರ್ಚು, ಸಂಸ್ಥೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹೆಚ್ಚುವರಿ ಅಗತ್ಯವಿದೆಯೇ? ಮೀಸಲು ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ಮನ್ನಾ ಮಾಡುವ ವಿಧಾನ ಅಳವಡಿಸಿಕೊಂಡಿದೆಯೇ? ಈ ಎಲ್ಲಾ ಅಂಶಗಳನ್ನು ಪ್ರವೇಶ ಮತ್ತು ಶುಲ್ಕ ನಿಯಂತ್ರಣ ಸಮಿತಿ (AFRC) ಪರಿಗಣಿಸಿ ಶುಲ್ಕವನ್ನು ನಿರ್ಧರಿಸಬೇಕು ಎಂದು ಪೀಠ ನಿರ್ದೇಶನ ನೀಡಿದೆ.

    Live Tv
    [brid partner=56869869 player=32851 video=960834 autoplay=true]