Tag: and public TV

  • ವಿಡಿಯೋ ನೋಡಿ: ಎಟಿಎಂನಿಂದ ಹೊರ ಬಂದ ಗರಿ ಗರಿ ನೋಟುಗಳು

    ವಿಡಿಯೋ ನೋಡಿ: ಎಟಿಎಂನಿಂದ ಹೊರ ಬಂದ ಗರಿ ಗರಿ ನೋಟುಗಳು

    ಲಂಡನ್: ಬಿಟ್‍ಕಾಯಿನ್ ಎಟಿಎಂನಿಂದ ಗರಿ ಗರಿ ನೋಟುಗಳು ಹೊರ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಲಂಡನ್ ನಗರದ ಟ್ಯೂಬ್ ಸ್ಟೇಷನ್ (ರೈಲು ನಿಲ್ದಾಣ) ಎಟಿಎಂನಿಂದ 20 ಪೌಂಡ್ (ಸುಮಾರು 1,700 ರೂ) ಮುಖಬೆಲೆಯ ನೋಟುಗಳು ಹೊರ ಬಂದಿವೆ.

    ಲಂಡನ್ ನಗರದ ಬಾಂಡ್ ಸ್ಟ್ರೀಟ್ ನ ಟ್ಯೂಬ್ ಸ್ಟೇಷನ್ ನಲ್ಲಿ ವ್ಯಕ್ತಿಯೋರ್ವ ದೊಡ್ಡ ಮೊತ್ತದ ಹಣ ಡ್ರಾ ಮಾಡಿದ ಪರಿಣಾಮ 20 ಪೌಂಡ್ ಮುಖಬೆಲೆಯ ನೋಟುಗಳು ಹೊರ ಬಂದಿವೆ. ನಿಲ್ದಾಣದ ಭದ್ರತಾ ಸಿಬ್ಬಂದಿ ಹಣವನ್ನು ಯಾರು ಎತ್ತಿಕೊಳ್ಳದಂತೆ ಎಚ್ಚರವಹಿಸುತ್ತಿರೋದನ್ನು ವಿಡಿಯೋದಲ್ಲಿ ನೋಡಬಹುದು. ಗ್ರಾಹಕ ಎಟಿಎಂ ಮುಂದೆ ಬ್ಯಾಗ್ ಇಟ್ಟು ಹಣವನ್ನು ತುಂಬಿಕೊಳ್ಳುತ್ತಿದ್ದಾನೆ. ಬ್ಯಾಗ್ ಅಕ್ಕಪಕ್ಕ ಬಿದ್ದಿರುವ ನೋಟುಗಳನ್ನು ಕಾಲಿನಿಂದ ತಳ್ಳಿ ಒಂದೆಡೆ ಸೇರಿಸಿದ್ದಾನೆ.

    ದೊಡ್ಡ ಮೊತ್ತ ಡ್ರಾ ಮಾಡಿದಾಗ ಬಿಟ್ ಕಾಯಿನ್ ಯಂತ್ರ ಒಂದೇ ಸಾರಿ ನಿಧಾನಕ್ಕೆ ಹಣವನ್ನು ಹೊರ ನೀಡಿದೆ. ಸ್ವಲ್ಪ ಸ್ವಲ್ಪ ಹಣ ನೀಡುತ್ತಿದ್ದರಿಂದ ವ್ಯಕ್ತಿ ಕೆಳಗಡೆ ಬ್ಯಾಗ್ ಇರಿಸಿದ್ದಾನೆಂದು ವರದಿಯಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಬಿಟ್‍ಕಾಯಿನ್ ಟೆಕ್ನಾಲಜಿ ಮುಖ್ಯಸ್ಥ ಮತ್ತು ಸಿಇಓ ಆಡಂ ಗ್ರಾಮೊವಸ್ಕಿ, ನಮ್ಮ ಕಂಪನಿಯ ಯಂತ್ರಗಳಿಂದ ಇಂಗ್ಲೆಂಡ್ ನೋಟುಗಳು ಹೊರಬರೋದು ನಿಧಾನವಾಗುತ್ತಿದೆ. ಹೀಗಾಗಿ ಯಂತ್ರಗಳನ್ನು ನೋಟುಗಳಿಗೆ ಅನುಗುಣವಾಗಿ ರೂಪಿಸಬೇಕಿದೆ. ಎಟಿಎಂ ಮುಂದೆ ಬ್ಯಾಗ್ ಇಟ್ಟು ಗ್ರಾಹಕರೊಬ್ಬರು ಹಣ ತುಂಬಿಕೊಳ್ಳುತ್ತಿರುವ ವಿಡಿಯೋ ನಮ್ಮ ಗಮನಕ್ಕೆ ಬಂದಿದೆ. ಲಂಡನ್ ನೋಟುಗಳನ್ನು ಸಪೋರ್ಟ್ ಮಾಡುವ ತಂತ್ರಜ್ಞನವನ್ನು ಎಟಿಎಂಗಳಿಗೆ ಅಳವಡಿಸಲಾಗುವುದು. ನಮ್ಮ ಎಟಿಎಂಗಳು ಒಂದೇ ವ್ಯವಹಾರದಲ್ಲಿ ಹೆಚ್ಚು ಹಣ ನೀಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿದ್ದಾರೆ.

    ವಿಡಿಯೋದಲ್ಲಿಯ ನಮ್ಮ ಗ್ರಾಹಕ ನಿರ್ಲಕ್ಷ್ಯದಿಂದ ಬ್ಯಾಗ್ ಕೆಳಗಿಟ್ಟು ಹಣ ತುಂಬಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಎಟಿಎಂ ಗಳನ್ನು ಮರುವಿನ್ಯಾಸಗೊಳಿಸಲಾಗುವುದು. ಸುರಕ್ಷತೆ ದೃಷ್ಟಿಯಿಂದ ಯಂತ್ರಗಳಲ್ಲಿ ಕಡಿಮೆ ಮುಖಬೆಲೆಯ ನೋಟುಗಳನ್ನು ಇರಿಸಲಾಗುವುದು ಎಂದು ಆಡಂ ಹೇಳಿದ್ದಾರೆ.

  • ದೇಶದ 20% ರಷ್ಟು ಬಡವರಿಗೆ ವಾರ್ಷಿಕ 72 ಸಾವಿರ ರೂ.: ರಾಹುಲ್ ಗಾಂಧಿ

    ದೇಶದ 20% ರಷ್ಟು ಬಡವರಿಗೆ ವಾರ್ಷಿಕ 72 ಸಾವಿರ ರೂ.: ರಾಹುಲ್ ಗಾಂಧಿ

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಜಯ ಪಡೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಕಡು ಬಡವರ ಕುಟುಂಬಕ್ಕೆ ವಾರ್ಷಿಕ 72 ಸಾವಿರ ರೂ. ಆದಾಯ ನೀಡಲಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.

    ಕನಿಷ್ಠ ಆದಾಯ ಭರವಸೆ ನೀಡಿದ 2 ತಿಂಗಳ ಬಳಿಕ ಕಾಂಗ್ರೆಸ್ ಪಕ್ಷ ಈ ಆಶ್ವಾಸನೆಯನ್ನು ನೀಡಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಧ್ಯಕ್ಷ ರಾಹುಲ್ ಗಾಂಧಿ, ‘ನ್ಯಾಯ’ ಯೋಜನೆ ಜಾರಿಗೆ ತರುವ ಮೂಲಕ ಬಡ ಕುಟುಂಬಕ್ಕೆ ತಿಂಗಳಿಗೆ 6 ಸಾವಿರದಂತೆ, ಅಂದರೆ ವಾರ್ಷಿಕ 72 ಸಾವಿರ ರೂ. ಆದಾಯವನ್ನು ನೀಡಲಾಗುತ್ತದೆ. ಯೋಜನೆಯಿಂದ ದೇಶದ 20% ರಷ್ಟು ಜನರಿಗೆ, ಅಂದರೆ 25 ಕೋಟಿ ಮಂದಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.

    ಜಗತ್ತಿನ ಅತಿ ದೊಡ್ಡ ಕನಿಷ್ಠ ಆದಾಯ ಯೋಜನೆ ಇದಾಗುತ್ತದೆ. ಅಲ್ಲದೇ ಗಬ್ಬರ್ ಸಿಂಗ್ ಟ್ಯಾಕ್ಸ್ ಪದ್ಧತಿಯನ್ನು ರದ್ದುಗೊಳಿಸಿ, ಜಿಎಸ್‍ಟಿ ಸರಳೀಕರಣ ಮಾಡಲಾಗುವುದು. ಈ ಮೂಲಕ ದೇಶದ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳನ್ನು ಮರು ಸ್ಥಾಪಿಸಿ ಆ ಮೂಲಕ ಉದ್ಯೋಗ ಅವಕಾಶ ಹೆಚ್ಚಿಸಲಾಗುವುದು. ದೇಶದ ಸ್ವಾವಲಂಬಿ ಬದುಕಿನ ಸಾಮಥ್ರ್ಯ ಹೆಚ್ಚಸುವ ಉದ್ದೇಶದಿಂದ ಕೇಂದ್ರ ಸರ್ಕಾರಿ ಕೆಲಸ ಹಾಗೂ ಪಿಎಸ್‍ಯುಎಸ್ ನಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.

    ದೇಶದ ಜನತೆಗೆ ಗರಿಷ್ಠ ಆರೋಗ್ಯ ಖಾತರಿ ನೀಡಲಾಗುವುದು. ಆಯುಷ್ಮಾನ್ ಭಾರತ್ ನಂತೆ ಸೀಮಿತ ಜನರಿಗೆ ಕನಿಷ್ಟ ಹಣ ನೀಡುವುದು ನಮ್ಮ ಯೋಜನೆಯ ಗುರಿಯಲ್ಲ. ಆರೋಗ್ಯ ರಕ್ಷಣೆಯನ್ನು ಒಂದು ಮೂಲಭೂತ ವಿಚಾರವಾಗಿ ಪರಿಗಣಿಸಿರುವುದರಿಂದ ಆರೋಗ್ಯ ವೃತ್ತಿಪರರ ಸಂಖ್ಯೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

  • ವಿಶ್ವಕಪ್ ಆಯ್ಕೆಗೆ ‘ಆರೋಗ್ಯಕರ ತಲೆನೋವಾದ’ ರಿಷಬ್ ಪಂತ್

    ವಿಶ್ವಕಪ್ ಆಯ್ಕೆಗೆ ‘ಆರೋಗ್ಯಕರ ತಲೆನೋವಾದ’ ರಿಷಬ್ ಪಂತ್

    – ಆಯ್ಕೆಯ ರೇಸ್‍ನಲ್ಲಿ ರಹಾನೆ, ವಿಜಯ್ ಶಂಕರ್: ಎಂಎಸ್‍ಕೆ ಪ್ರಸಾದ್

    ಮುಂಬೈ: ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಮುಂದಿನ ವಿಶ್ವಕಪ್ ಸರಣಿಗೆ ಆಯ್ಕೆ ಆಗುವುದು ಬಹುತೇಕ ಖಚಿತ ಆಗಿದೆ ಎನ್ನಲಾಗಿದೆ.

    ಈ ಕುರಿತು ಟೀಂ ಇಂಡಿಯಾ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಅವರು ಮಾಹಿತಿ ನೀಡಿದ್ದು, ವಿಶ್ವಕಪ್ ತಂಡದ ಆಯ್ಕೆ ವೇಳೆ ರಿಷಬ್ ಪಂತ್‍ರನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೇ ರಿಷಬ್ ಪಂತ್ ಆಯ್ಕೆ ಆರೋಗ್ಯಕರ ತಲೆನೋವಾಗಿದೆ ಎಂದು ತಿಳಿಸಿದ್ದಾರೆ.

    ರಿಷಬ್ ಟೀಂ ಇಂಡಿಯಾಗೆ ಆಯ್ಕೆಯಾದ ಬಳಿಕ ಅವರ ಬ್ಯಾಟಿಂಗ್‍ನಲ್ಲಿ ಉತ್ತಮ ಸುಧಾರಣೆ ಆಗಿದೆ. ಮತ್ತಷ್ಟು ಪರಿಪಕ್ವತೆ ಸಾಧಿಸಲು ಟೀಂ ಇಂಡಿಯಾ ಎ ತಂಡ ಸೇರುವಂತೆ ಸಾಕಷ್ಟು ಅವಕಾಶಗಳನ್ನು ಅವರಿಗೆ ನೀಡಿದ್ದೇವೆ. ಮೊದಲು ರಿಷಬ್‍ರನ್ನು ದಪ್ಪ ಚರ್ಮದ ವ್ಯಕ್ತಿ ಎಂದು ತಿಳಿದಿದ್ದೇವು. ಆದರೆ ಇಂದು ಆತ ಅನುಭವಿ ಆಟಗಾರರಂತಾಗಿದ್ದು, ತಂಡಕ್ಕೆ ಸಾಕಷ್ಟು ಬದ್ಧತೆಯನ್ನು ತೋರಿದ್ದಾರೆ ಎಂದರು.

    ಇದೇ ವೇಳೆ ರಹಾನೆ ಹಾಗೂ ವಿಜಯ್ ಶಂಕರ್ ಅವರನ್ನು ಆಯ್ಕೆ ವೇಳೆ ಪರಿಗಣಿಸಲಾಗುತ್ತದೆ. ಏಕೆಂದರೆ ಅವರು ದೇಶಿಯ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಅಂದಹಾಗೇ ಕಳೆದ 11 ಇನ್ನಿಂಗ್ಸ್ ಗಳಲ್ಲಿ ರಹಾನೆ 74.62 ಸರಾಸರಿಯಲ್ಲಿ 597 ರನ್ ಗಳಿಸಿದ್ದಾರೆ. 2018 ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಏಕದಿನ ಪಂದ್ಯಗಳನ್ನು ಆಡಿದ್ದರು. ತಂಡದಲ್ಲಿ ಸದ್ಯ ಮಧ್ಯಮ ಕ್ರಮಾಂಕದ ಆಯ್ಕೆ ಕುರಿತು ಹೆಚ್ಚಿನ ಒತ್ತು ನೀಡಲಾಗುತ್ತಿದೆ.

    2019 ವಿಶ್ವಕಪ್ ಟೂರ್ನಿಗೆ 15 ಆಟಗಾರರ ಪಟ್ಟಿಯನ್ನು ಪ್ರಕಟ ಮಾಡಲು ಏಪ್ರಿಲ್ 23 ಅಂತಿಮ ದಿನಾಂಕವಾಗಿದೆ. ಜೂನ್ 05 ರಂದು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾರನ್ನು ಎದುರಿಸುವ ಮೂಲಕ ವಿಶ್ವಕಪ್ ಜರ್ನಿಯನ್ನು ಆರಂಭಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಎಚ್‍ಡಿಕೆ

    ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಎಚ್‍ಡಿಕೆ

    ಬೆಂಗಳೂರು: ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕರ ನಡುವೆ ನಡೆದ ಮಾರಾಮಾರಿ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್ ಸಿಂಗ್‍ರನ್ನು ಇಂದು ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದರು. ನಗರದ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದ ಸಿಎಂ ಆನಂದ್ ಸಿಂಗ್ ಆರೋಗ್ಯ ವಿಚಾರಿಸಿ ತೆರಳಿದರು.

    ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ವಿಚಾರದಲ್ಲಿ ತುಮಕೂರಿನಲ್ಲಿ 2 ದಿನಗಳ ಕಾಲ ಇದ್ದ ಸಿಎಂ ಕುಮಾರಸ್ವಾಮಿ ಅವರು ಬೆಂಗಳೂರಿಗೆ ಆಗಮಿಸಿದ ಬಳಿಕ ಆನಂದ್ ಸಿಂಗ್‍ರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು. ಆದರೆ ಸತತ 3 ದಿನಗಳ ಕಾಲ ಆನಂದ್ ಸಿಂಗ್ ಭೇಟಿಗೆ ಸಮಯ ನಿಗದಿ ಮಾಡಿದ್ದ ಸಿಎಂ ಅಂತಿಮ ಕ್ಷಣದಲ್ಲಿ ರದ್ದು ಮಾಡುತ್ತಿದ್ದರು. ಸಿಎಂ ಭೇಟಿ ನಿಗದಿ ಮಾಡಿ ಪೊಲೀಸರು ರಕ್ಷಣಾ ವ್ಯವಸ್ಥೆಗಳನ್ನು ಕೈಗೊಂಡ ಬಳಿಕ ಅಂತಿಮ ಕ್ಷಣದಲ್ಲಿ ಭೇಟಿ ರದ್ದು ಮಾಡಿದ ಮಾಹಿತಿ ನೀಡಲಾಗುತ್ತಿತ್ತು. ಸಿಎಂ ಅವರ ಈ ನಡೆಯಿಂದ ಕರ್ತವ್ಯದಲ್ಲಿದ್ದ ಶೇಷಾದ್ರಿಪುರಂ ಪೊಲೀಸರು ಪರದಾಟ ನಡೆಸಬೇಕಾಯಿತು.

    ಈ ಕುರಿತು ಪಬ್ಲಿಕ್ ಟಿವಿ ವರದಿಯನ್ನು ಪ್ರಸಾರ ಮಾಡಿತ್ತು. ಇದರ ಬೆನಲ್ಲೇ ನಿಗದಿತ ಕಾರ್ಯಕ್ರಮದಂತೆ ಸಿಎಂ ಇಂದು ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಸುಮಾರು 30 ನಿಮಿಷಗಳ ಕಾಲ ಆನಂದ್ ಸಿಂಗ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಸಿಎಂ ಕುಮಾರಸ್ವಾಮಿ ಅವರಿಗೆ ಶಾಸಕ ಮುನಿರತ್ನ ಅವರು ಸಾಥ್ ನೀಡಿದ್ದರು.

    ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಸಿಎಂ ಕುಮಾರಸ್ವಾಮಿ ತೆರಳಿದರು. ಇದಕ್ಕೂ ಮುನ್ನ ಇಂದು ಆನಂದ್ ಸಿಂಗ್‍ರನ್ನು ಭೇಟಿ ಮಾಡಿದ್ದ ಸಚಿವ ಪರಮೇಶ್ವರ್ ನಾಯ್ಕ್, ಆನಂದ್ ಸಿಂಗ್ ಅವರ ಆರೋಗ್ಯ ಉತ್ತಮವಾಗಿದೆ. ಅವರು ಕಣ್ಣು ಬಿಟ್ಟು ನನ್ನೊಂದಿಗೆ ಮಾತನಾಡಿದ್ದಾರೆ. ಯಾವುದೋ ಒಂದು ಆಚಾತುರ್ಯದಿಂದ ಘಟನೆ ನಡೆದಿದ್ದು, ಅಂದು ನಾನು ಸ್ಥಳದಲ್ಲಿ ಇದ್ದಿರಲಿಲ್ಲ. ಈ ಬಗ್ಗೆ ಪಕ್ಷದ ಹೈಕಮಾಂಡ್ ಕ್ರಮಕೈಗೊಳ್ಳುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

     

  • ವಿಂಡೀಸ್ ಟೆಸ್ಟ್ ಸರಣಿ ಗೆಲುವಿನೊಂದಿಗೆ ನಿರ್ಮಾಣವಾಯ್ತು ಹಲವು ದಾಖಲೆ!

    ವಿಂಡೀಸ್ ಟೆಸ್ಟ್ ಸರಣಿ ಗೆಲುವಿನೊಂದಿಗೆ ನಿರ್ಮಾಣವಾಯ್ತು ಹಲವು ದಾಖಲೆ!

    ಹೈದರಾಬಾದ್: ಅಂತಿಮ ಟೆಸ್ಟ್ ಪಂದ್ಯವನ್ನು 10 ವಿಕೆಟ್ ಅಂತರದಿಂದ ಗೆಲ್ಲುವ ಮೂಲಕ ಸತತ 7ನೇ ಬಾರಿ ವಿಂಡೀಸ್ ವಿರುದ್ಧ ಭಾರತ ಸರಣಿ ಗೆಲುವು ಪಡೆದಿದೆ.

    ಟೀಂ ಇಂಡಿಯಾ ವಿಂಡೀಸ್ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವಿಪ್ ಮಾಡುವ ಮೂಲಕ ತವರು ನೆಲದಲ್ಲಿ ಸತತ 10ನೇ ಸರಣಿಗಳಲ್ಲಿ ಗೆಲುವು ಪಡೆದಿದೆ. ವಿಶ್ವ ಕ್ರಿಕೆಟ್ ನಲ್ಲಿ ಆಸೀಸ್ ತಂಡ ಈ ಸಾಧನೆಯನ್ನು ಮಾಡಿದ್ದು, 1994 ರಿಂದ 2001ರವರೆಗೆ ಹಾಗೂ 2004 ರಿಂದ 2008ರ ಅವಧಿಯಲ್ಲಿ ಸತತ 10 ಸರಣಿಗಳಲ್ಲಿ ಗೆಲುವು ಪಡೆದಿತ್ತು.

    ಟೀಂ ಇಂಡಿಯಾ ಪಂದ್ಯವನ್ನು 10 ವಿಕೆಟ್ ಗಳಿಂದ ಗೆಲುವು ಪಡೆದಿದ್ದು, 2010ರ ಬಳಿಕ 8 ನೇ ಬಾರಿ ಈ ಸಾಧನೆ ಮಾಡಿದೆ. ವಿಶೇಷವೆಂದರೆ 16ನೇ ಬಾರಿ ವೆಸ್ಟ್ ಇಂಡೀಸ್ 10 ವಿಕೆಟ್ ಗಳ ಅಂತರದಲ್ಲಿ ಸೋತಿದೆ.

    ಸ್ಟಾರ್ ಆಟಗಾರನಾಗಿ ಹೊರ ಹೊಮ್ಮಿದ ಪೃಥ್ವಿ ಶಾ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯುವ ಮೂಲಕ ಪಾದಾರ್ಪಣೆ ಸರಣಿಯಲ್ಲೇ ಈ ಸಾಧನೆ ಮಾಡಿದ 10ನೇ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೇ ಭಾರತ ಪರ ಸೌರವ್ ಗಂಗೂಲಿ, ಆರ್ ಅಶ್ವಿನ್, ರೋಹಿತ್ ಶರ್ಮಾ ಬಳಿಕ ಈ ಸಾಧನೆ ಮಾಡಿದ್ದಾರೆ.

    ಇದರೊಂದಿಗೆ ಪೃಥ್ವಿ ಶಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ವಿಶ್ವದ 2ನೇ ಕಿರಿಯ, ಭಾರತದ ಮೊದಲ(18 ವರ್ಷ, 339 ದಿನ) ಆಟಗಾರರಾಗಿದ್ದಾರೆ. ಈ ಹಿಂದೆ ಆಸೀಸ್ ಆಟಗಾರ ಪ್ಯಾಟ್ ಕಮ್ಮಿನ್ಸ್ 18 ವರ್ಷ, 198 ದಿನಗಳಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 2018ರ ಶ್ರೀಲಂಕಾ ವಿರುದ್ಧದ ನಿದಾಸ್ ಏಕದಿನ ಸರಣಿಯಲ್ಲಿ ಭಾರತದ ವಾಷಿಂಗ್ಟನ್ ಸುಂದರ್ 18 ವರ್ಷ, 164 ದಿನಗಳ ವಯಸ್ಸಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

    ಪಂದ್ಯದಲ್ಲಿ 133 ರನ್ ನೀಡಿ 10 ವಿಕೆಟ್ ಪಡೆದ ಉಮೇಶ್ ಯಾದವ್ ಭಾರತ ಪರ ಟೆಸ್ಟ್ ನಲ್ಲಿ ಈ ಸಾಧನೆ ಮಾಡಿದ 8ನೇ ಆಟಗಾರರಾಗಿದ್ದಾರೆ. ಇದುವರೆಗೂ ಕಪಿಲ್ ದೇವ್ 2 ಬಾರಿ, ಜಾವಗಲ್ ಶ್ರೀನಾಥ್ ಈ ಸಾಧನೆ ಮಾಡಿದ ಪ್ರಮುಖ ಆಟಗಾರರಾಗಿದ್ದಾರೆ. ವಿಶೇಷವಾಗಿ ಉಮೇಶ್ ಯಾದವ್ ಪಂದ್ಯದ ಮೊದಲ ಇನ್ನಿಂಗ್ ನಲ್ಲಿ 4 ಎಸೆತಗಳ ಅಂತರದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಂಡೀಸ್ ವಿರುದ್ಧದ 2 ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ಪ್ರಕಟ- ದಿನೇಶ್‍ಗೆ ಕೋಕ್, ರಿಷಭ್ ಪಂತ್ ಇನ್

    ವಿಂಡೀಸ್ ವಿರುದ್ಧದ 2 ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ಪ್ರಕಟ- ದಿನೇಶ್‍ಗೆ ಕೋಕ್, ರಿಷಭ್ ಪಂತ್ ಇನ್

    ಮುಂಬೈ: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಟೂರ್ನಿಯ 2 ಪಂದ್ಯಗಳಿಗೆ ಬಿಸಿಸಿಐ ಟೀಂ ಇಂಡಿಯಾ ತಂಡವನ್ನು ಪ್ರಕಟ ಮಾಡಿದ್ದು, ಆಯ್ಕೆ ಸಮಿತಿ ದಿನೇಶ್ ಕಾರ್ತಿಕ್ ಅವರಿಗೆ ಕೋಕ್ ನೀಡಿ ಯುವ ಆಟಗಾರ ರಿಷಭ್ ಪಂತ್‍ರನ್ನು ಆಯ್ಕೆ ಮಾಡಿದೆ.

    ಏಷ್ಯಾಕಪ್‍ನಲ್ಲಿ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿ ಅವರು ಮತ್ತೆ ತಂಡದ ನಾಯಕತ್ವ ವಹಿಸಿದ್ದಾರೆ. ಸದ್ಯ 14 ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ತಂಡದಲ್ಲಿ ದಿನೇಶ್ ಕಾರ್ತಿಕ್, ಕೇದರ್ ಜಾದವ್, ಬುಮ್ರಾ, ಭುವನೇಶ್ವರ್, ಹಾರ್ದಿಕ್ ಪಾಂಡ್ಯ ಅವರಿಗೆ ಮೊದಲ ಎರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ, ಕೇದರ್ ಜಾದವ್ ಗಾಯದ ಸಮಸ್ಯೆಯಿಂದ ಚೇತರಿಕೆ ಪಡೆಯುತ್ತಿದ್ದಾರೆ. ಏಷ್ಯಾಕಪ್ ಕಪ್ ಕ್ರಿಕೆಟ್ ಟೂರ್ನಿಯ ವೇಳೆ ಇಬ್ಬರು ಆಟಗಾರರು ಗಾಯಗೊಂಡಿದ್ದರು.

    ಏಷ್ಯಾಕಪ್ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಥಾನ ಪಡೆದಿದ್ದ ದಿನೇಶ್ ಕಾರ್ತಿಕ್ 5 ಇನ್ನಿಂಗ್ಸ್ ಗಳಿಂದ 146 ರನ್ ಮಾತ್ರ ಗಳಿಸಿದ್ದರು. ಆದರೆ ಇತ್ತೀಚಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ರಿಷಭ್ ಪಂತ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದರ ಹಿನ್ನೆಲೆಯಲ್ಲಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಏಕದಿನ ಟೂರ್ನಿ ಅಕ್ಟೋಬರ್ 21 ರಿಂದ ನವೆಂಬರ್ 1ವರೆಗೂ ನಡೆಯಲಿದೆ.

    ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ಮನೀಷ್ ಪಾಂಡೆ, ಧೋನಿ (ಕೀಪರ್), ರಿಷಭ್ ಪಂತ್, ಆರ್ ಜಡೇಜಾ, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಖಲೀಲ್ ಅಹ್ಮದ್, ಶಾರ್ದೂಲ್ ಠಾಕೂರ್, ಕೆಎಲ್ ರಾಹುಲ್.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮುಸ್ಲಿಮರು ಮುಸ್ಲಿಮರಿಗೆ ಮತ ಹಾಕ್ಬೇಕು: ಅಸಾದುದ್ದಿನ್ ಓವೈಸಿ

    ಮುಸ್ಲಿಮರು ಮುಸ್ಲಿಮರಿಗೆ ಮತ ಹಾಕ್ಬೇಕು: ಅಸಾದುದ್ದಿನ್ ಓವೈಸಿ

    ಹೈದರಾಬಾದ್: ಮುಸ್ಲಿಮ್ ಸಮುದಾಯದವರು ಮುಸ್ಲಿಮ್ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಅಧ್ಯಕ್ಷ, ಹೈದರಬಾದಿನ ಸಂಸದ ಅಸಾದುದ್ದಿನ್ ಓವೈಸಿ ಹೇಳಿಕೆಯೊಂದನ್ನು ನೀಡಿದ್ದು ಈಗ ವಿವಾದಕ್ಕೆ ಗುರಿಯಾಗಿದೆ.

    ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಸಮುದಾಯದ ಸದಸ್ಯರಿಗೆ ಒತ್ತಾಯ ಮಾಡಿದ್ದಾರೆ.

    ಹಪೂರ್ ನಲ್ಲಿ ನಡೆದ ಕಾಸಿಂ ಹತ್ಯೆ ನಮ್ಮನ್ನು ಚಿಂತೆಗೀಡುಮಾಡಿದೆ. ಆದರೆ ನಾನು ನಿಮಗೆ ಈ ವಿಚಾರಕ್ಕೆ ಕಣ್ಣೀರು ಸುರಿಸಿ ಎಂದು ಹೇಳುತ್ತಿಲ್ಲ. ಆದರೆ ನಿಮ್ಮ ಆತ್ಮಸಾಕ್ಷಿ ಅನುಗುಣವಾಗಿ ನಡೆಯುವಂತೆ ಎಚ್ಚರಿಸುತ್ತಿದ್ದೇನೆ. ಜಾತ್ಯಾತೀತತೆಯ ಕುರಿತು ಮಾತನಾಡುತ್ತಿರುವ ಜನರು ದೊಡ್ಡ ಡಕಾಯಿತರು ಮತ್ತು ಅವಕಾಶವಾದಿಗಳಾಗಿದ್ದಾರೆ. ಅವರು ಮುಸ್ಲಿಮರನ್ನು 70 ವರ್ಷಗಳಿಂದ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ನಮಗೆ ಬೆದರಿಕೆ ಹಾಕಿ ನಮ್ಮನ್ನು ಸುಮ್ಮನಿರುವಂತೆ ಮಾಡಿದ್ದಾರೆ ಎಂದು ದೂರಿದರು.

    ಈಗ ಮುಸ್ಲಿಮರು ಅವರ ಹಕ್ಕಿಗಾಗಿ ಹೋರಾಡಬೇಕಿದೆ. ನೀವು ಜ್ಯಾತ್ಯಾತೀತೆಯನ್ನು ಬದುಕಿಸಬೇಕೆಂದಿದ್ದರೆ ನಿಮಗಾಗಿ ಹೋರಾಡಿ. ಅದನ್ನು ತಿಳಿಯಲು ರಾಜಕೀಯ ಶಕ್ತಿಯಾಗಿ ಮುಸ್ಲಿಮ್ ನಾಯಕರು ಗೆಲ್ಲುವಂತೆ ಮಾಡಿ ಎಂದಿದ್ದಾರೆ.

    ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಓವೈಸಿ ಹಪೂರ್ ಘಟನೆ ಸಂಬಂಧಿಸಿದಂತೆ ಅವಾಚ್ಯ ಶಬ್ಧಗಳನ್ನ ಬಳಸಿದ್ದಾರೆ. ಅಲ್ಲದೇ ಎಷ್ಟೋ ಮುಸ್ಲಿರನ್ನು ಬಂಧಿಸಲಾಗಿದೆ. ಇದೇನಾ ನಿಮ್ಮ ಸಬ್ ಕಿ ಸಾಥ್, ಸಬ್ ಕಿ ವಿಕಾಸ್ ಎಂದು ಮೋದಿಯವರ ವಿರುದ್ಧ ಹರಿಹಾಯ್ದಿದರು.

    ಭಾರತೀಯ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಹಿಂದೂ ಮತ ಬ್ಯಾಂಕ್ ಗಾಗಿ ಹಾತೊರೆಯುತ್ತಿವೆ. ಆದರೆ ಮುಸ್ಲಿಂರನ್ನು ಮತಬ್ಯಾಂಕ್ ಎಂದು ಹೇಳುತ್ತ ಎರಡೂ ಪಕ್ಷಗಳು ವಂಚಿಸುತ್ತಿವೆ ಎಂದು ದೂರಿದರು.

    ಉತ್ತರಪ್ರದೇಶದ ಹಪೂರ್ ದಲ್ಲಿ ಹಸು ಕಳ್ಳಸಾಗಾಣಿಗೆ ಶಂಕೆಯ ಹಿನ್ನೆಲೆಯಲ್ಲಿ ಗುಂಪೊಂದು ಕಾಸೀಂ(38) ಹತ್ಯೆಗೈದರೆ, ಶಾಮಿಯುದ್ದೀನ್(65) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು.

  • ಬಾಗಲಕೋಟೆಯಲ್ಲಿ ಬಂದ್ ಹಿಂಪಡೆದ ಬಿಜೆಪಿ

    ಬಾಗಲಕೋಟೆಯಲ್ಲಿ ಬಂದ್ ಹಿಂಪಡೆದ ಬಿಜೆಪಿ

    ಬಾಗಲಕೋಟೆ: ಇಂದು ನಸುಕಿನ ಜಾವ ಜಮಖಂಡಿ ಶಾಸಕ, ಹಿರಿಯ ರಾಜಕಾರಣಿ ಸಿದ್ದು ನ್ಯಾಮಗೌಡ ನಿಧನ ಹಿನ್ನೆಲೆಯಲ್ಲಿ ಇಂದು ಕರೆ ನೀಡಲಾಗಿದ್ದ ಬಂದ್‍ನ್ನು ಬಿಜೆಪಿ ಹಿಂಪಡೆದಿದೆ.

    ಹಿರಿಯ ರಾಜಕಾರಣಿಗಳು, ಅಪಾರ ಬೆಂಬಲಿಗರನ್ನು ಹೊಂದಿರುವ ಶಾಸಕರು ಇಂದು ಸಾವನ್ನಪ್ಪಿದ್ದು, ಕ್ಷೇತ್ರದ ಜನರು ತಮ್ಮ ನೆಚ್ಚಿನ ಜನನಾಯಕರ ಅಂತಿಮ ದರ್ಶನಕ್ಕೆ ಆಗಮಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪಕ್ಷ ಕರೆ ನೀಡಿದ್ದ ಬಂದ್ ನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ತೇರದಾಳ ಕ್ಷೇತ್ರದ ಶಾಸಕ, ಬಿಜೆಪಿ ಮುಖಂಡ ಸಿದ್ದು ಸವದಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಇನ್ನಿಲ್ಲ

    ಈ ಬಾರಿ ಬಾಗಲಕೋಟೆ ಜಿಲ್ಲೆಯಲ್ಲಿ ಕೇವಲ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಮಾತ್ರ ಗೆಲುವ ಸಾಧಿಸಿದ್ರು. ಬದಾಮಿ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಗೆಲುವು ಸಾಧಿಸಿದ್ರೆ, ಇತ್ತ ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ ಗೆಲುವನ್ನು ಕಂಡಿದ್ರು. ಈ ಹಿನ್ನೆಲೆಯಲ್ಲಿ ತಮಗೆ ಸಚಿವ ಸ್ಥಾನ ನೀಡಬೇಕೆಂದು ದೆಹಲಿಗೆ ತೆರಳಿ ಹೈಕಮಾಂಡ್‍ಗೆ ಮನವಿ ಸಲ್ಲಿಸಿ ಹಿಂದಿರುವ ವೇಳೆ ಅಪಘಾತ ಸಂಭವಿಸಿದೆ.

  • ಈ ಸ್ಪೆಷಲ್ ರಿಂಗ್ ಗಾಗಿ 3 ತಿಂಗಳು ಅಲೆದಾಡಿದ್ರಂತೆ ಕೊಹ್ಲಿ! ಇದರ ಬೆಲೆ ಎಷ್ಟು ಗೊತ್ತಾ?

    ಈ ಸ್ಪೆಷಲ್ ರಿಂಗ್ ಗಾಗಿ 3 ತಿಂಗಳು ಅಲೆದಾಡಿದ್ರಂತೆ ಕೊಹ್ಲಿ! ಇದರ ಬೆಲೆ ಎಷ್ಟು ಗೊತ್ತಾ?

    ನವದೆಹಲಿ: ವಿರಾಟ್ ಕೊಹ್ಲಿ- ಅನುಷ್ಕಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇಟಲಿಯ ಖಾಸಗಿ ರೆಸಾರ್ಟ್ ನಲ್ಲಿ ಪಂಜಾಬಿ ಸಂಪ್ರದಾಯದಂತೆ ನಡೆದ ಅದ್ಧೂರಿ ವಿವಾಹದಲ್ಲಿ ಕುಟುಂಬಸ್ಥರು ಮತ್ತು ಗೆಳೆಯರು ಮಾತ್ರ ಭಾಗಿಯಾಗಿದ್ದರು.

    ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದು, ಅನುಷ್ಕಾ ಶರ್ಮಾಗೆ ಇಷ್ಟವಾದ ರೀತಿಯ ಡೈಮಂಡ್ ರಿಂಗ್ ನೀಡಿದ್ದಾರೆ. ಈ ಉಂಗುರಕ್ಕಾಗಿ ಬರೋಬ್ಬರಿ 3 ತಿಂಗಳ ಕಾಲ ಹುಡುಕಾಟ ನಡೆಸಿದ್ದರಂತೆ. ಅಂತಿಮವಾಗಿ ಆಸ್ಟ್ರೇಲಿಯಾದ ಖ್ಯಾತ ಜ್ಯುವೆಲ್ಲರಿ ಎಕ್ಕಾ ಡಿಸೈನರ್‍ರಿಂದ ವಿಶೇಷ ರಿಂಗ್ ವಿನ್ಯಾಸ ಮಾಡಿಸಿದ್ದಾರೆ.

    ಈ ಉಂಗುರ ವಜ್ರ ಖಚಿತವಾಗಿದ್ದು, ನೋಡಲು ತುಂಬಾ ಸುಂದರವಾಗಿದೆ. ಪ್ರತಿ ಬಾರಿ ಈ ರಿಂಗ್ ನೋಡಿದರೆ ವಿಭಿನ್ನ ರೀತಿಯಲ್ಲಿ ಕಾಣಿಸುತ್ತದೆ. ಆಶ್ಚರ್ಯಕರವಾದ ಅಂಶಗಳನ್ನು ಪ್ರತಿಬಿಂಬಿಸುತ್ತದೆ. ಈ ವಿಶೇಷ ಉಂಗುರಕ್ಕೆ ವಿರಾಟ್ ಬರೋಬ್ಬರಿ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅನುಷ್ಕಾ ನಿಶ್ಚಿತಾರ್ಥಕ್ಕಾಗಿ ಖ್ಯಾತ ವಸ್ತ್ರ ವಿನ್ಯಾಸಕಾರ ಸಬ್ಯಸಾಚಿ ವಿನ್ಯಾಸಗೊಳಿಸಿದ್ದ ವೆಲ್ವೆಟ್ ಸೀರೆ ಧರಿಸಿದ್ದರು. ಸೀರೆಯಲ್ಲಿ ಮುತ್ತು ಹಾಗೂ ಅತ್ಯುತ್ತಮ ಗುಣಮಟ್ಟದ ಝರ್ದೋಸಿ, ಮರೋರಿ ಬಳಸಿ ಕೈಯಿಂದ ವಿನ್ಯಾಸ ಮಾಡಲಾಗಿತ್ತು. ವಿರಾಟ್ ಬೂದು ಬಣ್ಣದ ಟೈ ಮತ್ತು ನೀಲಿಬಣ್ಣದ ಸೂಟ್ ಧರಿಸಿದ್ದರು.

    ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್ ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ಸೋಮವಾರ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಸಿಂಪಲ್ ಆಗಿ ಆದರೂ ಪ್ರತಿಯೊಂದು ವಸ್ತುಗಳು ಕೂಡ ತುಂಬಾ ದುಬಾರಿಯಾಗಿತ್ತು.

    3 ವರ್ಷಗಳ ಹಿಂದೆ ಅನುಷ್ಕಾ ತಮ್ಮ ಮದುವೆಯ ಕನಸಿನ ಬಗ್ಗೆ ಹೇಳಿದ್ದರು. ಆ ಕನಸಿನಂತೆ ವಿರಾಟ್ ಅವರನ್ನು ಮದುವೆಯಾಗಿದ್ದಾರೆ. ಆದರೆ ಈ ಜೋಡಿ ಮದುವೆ ಫೋಟೋಗಳನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಳ್ಳುವವರೆಗೂ ಅಧಿಕೃತವಾಗಿ ಯಾರಿಗೂ ಹೇಳಿರಲಿಲ್ಲ.

    ಡಿಸೆಂಬರ್ 11 ರಂದು “ಇಂದಿನಿಂದ ನಾವು ಜೀವನ ಪರ್ಯಂತ ಒಂದಾಗಿ ಪ್ರೀತಿಯಿಂದ ಇರುತ್ತೇವೆ. ಹೀಗಾಗಿ ಈ ಸಂತೋಷದ ಸುದ್ದಿಯನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ. ಕುಟುಂಬದ ಸದಸ್ಯರು, ಅಭಿಮಾನಿಗಳ ಬೆಂಬಲಿದಿಂದ ಈ ದಿನ ನಮ್ಮ ಪಾಲಿಗೆ ವಿಶೇಷ ದಿನವಾಗಿದೆ. ನಮ್ಮ ಈ ಹೊಸ ಪಯಣಕ್ಕೆ ಶುಭ ಹಾರೈಸಿದ ನಿಮಗೆಲ್ಲ ಧನ್ಯವಾದಗಳು” ಎಂದು ಬರೆದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಟ್ವೀಟ್ ಮಾಡಿದ್ದರು.

    https://www.youtube.com/watch?v=gHvF38xCsiY

    https://www.instagram.com/p/Bcq9v7NnyHB/?hl=en&tagged=virushka

  • ಮಂಗಳೂರು ಮೇಯರ್ ಗುಂಡಾಗಿರಿ- ಅಪಾರ್ಟ್‌ಮೆಂಟ್‌ ಕಾವಲುಗಾರ ದಂಪತಿ ಮೇಲೆ ಹಲ್ಲೆ

    ಮಂಗಳೂರು ಮೇಯರ್ ಗುಂಡಾಗಿರಿ- ಅಪಾರ್ಟ್‌ಮೆಂಟ್‌ ಕಾವಲುಗಾರ ದಂಪತಿ ಮೇಲೆ ಹಲ್ಲೆ

    ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ತಮ್ಮ ಅಪಾರ್ಟ್ ಮೆಂಟ್ ಕಾವಲುಗಾರ ದಂಪತಿಗೆ ಹಲ್ಲೆಗೈದು ಗೂಂಡಾಗಿರಿ ತೋರಿದ್ದಾರೆಂಬ ಆರೋಪ ಕೇಳಿಬಂದಿದೆ.

    ಗುರುವಾರ ಸಂಜೆ ಅಪಾರ್ಟ್ ಮೆಂಟ್ ಕಾವಲುಗಾರ ಮನೆಗೆ ಏಕಾಏಕಿ ನುಗ್ಗಿರುವ ಮೇಯರ್ ಕವಿತಾ ಸನಿಲ್, ಕಾವಲುಗಾರ ಪತ್ನಿಯ ಜುಟ್ಟು ಹಿಡಿದು ಕಿವಿ ಹಾಗೂ ಮುಖಕ್ಕೆ ಹೊಡೆದಿದ್ದಾರೆ. ಅಲ್ಲದೇ ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಾರೆಂದು ಮೇಯರ್ ವಾಸವಿರುವ ಮಂಗಳೂರಿನ ಬಿಜೈನ ಅಪಾರ್ಟ್ ಮೆಂಟ್ ಕಾವಲುಗಾರ ದಂಪತಿ ಆರೋಪಿಸಿದ್ದಾರೆ.

    ಮೇಯರ್ ಕವಿತಾ ಸನಿಲ್ ವಾಸವಿರುವ ಆಪಾರ್ಟ್ ಮೆಂಟ್‍ನ ಸೆಕ್ಯೂರಿಟಿ ಕೆಲಸ ನಿರ್ವಹಿಸುತ್ತಿರುವ ಕಮಲ ಮತ್ತು ಪುಂಡಲೀಕ ದಂಪತಿಗಳೇ ಮೇಯರ್ ನಿಂದ ಪೆಟ್ಟು ತಿಂದವರಾಗಿದ್ದು, ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ನಿವಾಸಿಗಳಾಗಿದ್ದು, ದಂಪತಿ ಕಳೆದ ಹತ್ತು ತಿಂಗಳಿನಿಂದ ಈ ಫ್ಲಾಟ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ.

    ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ದಂಪತಿ, ಮೇಯರ್ ಮಗಳು ನಮ್ಮ ಮಕ್ಕಳ ಜೊತೆಗೆ ಆಡಲು ಬರುತ್ತಿದ್ದಳು. ಆದರೆ ಆಟದ ವೇಳೆ ಮಕ್ಕಳಿಗೆ ಹೊಡೆದು ರಂಪ ಮಾಡುತ್ತಿದ್ದಳು. ಅದಕ್ಕಾಗಿ ನಮ್ಮ ಮಕ್ಕಳ ಜೊತೆ ಆಡದಂತೆ ಹೇಳಿದ್ದೆ. ಈ ಕಾರಣಕ್ಕಾಗಿಯೇ ಏನು ವಿಚಾರ ಎಂದು ತಿಳಿದುಕೊಳ್ಳದೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

    ಜವಾಬ್ದಾರಿಯುತ ಮೇಯರ್ ಸ್ಥಾನದಲ್ಲಿರುವ ಅವರೇ ಹೀಗೆ ಹೊಡೆದು ಬಡಿದು ಮಾಡಿದ್ರೆ ಹೇಗೆ ಬದುಕೋದು ಅಂತಾ ಬಡ ದಂಪತಿಗಳು ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ಇದ್ದ ಕಾವಲುಗಾರರ ಮೇಲೆಯು ಇದೇ ರೀತಿ ಹಲ್ಲೆ ಮಾಡಿದ್ದರು ಎಂದು ಕಾವಲುದಾರ ಪತ್ನಿ ಕಮಲ ತಿಳಿಸಿದ್ದಾರೆ.

    ಮೇಯರ್ ಕವಿತಾ ಸನಿಲ್ ಮೂಲತಃ ಕರಾಟೆ ಪಟುವಾಗಿದ್ದು ರಾಷ್ಟ್ರ ಮಟ್ಟದಲ್ಲಿ ಚಾಂಪಿಯನ್ ಆಗಿದ್ದಾರೆ. ಇದೀಗ ತಮ್ಮ ಕರಾಟೆ ಕೈಚಳಕವನ್ನು ಬಡಪಾಯಿ ಮೇಲೆ ಪ್ರಯೋಗ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.