Tag: Ancient Shivalinga

  • ಪುರಾತನ ಕಾಲದ ಶಿವಲಿಂಗ ಪತ್ತೆ- ಗ್ರಾಮಸ್ಥರಲ್ಲಿ ಅಚ್ಚರಿ, ಸಂತಸ

    ಪುರಾತನ ಕಾಲದ ಶಿವಲಿಂಗ ಪತ್ತೆ- ಗ್ರಾಮಸ್ಥರಲ್ಲಿ ಅಚ್ಚರಿ, ಸಂತಸ

    ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಕೆಟಿ ಹಳ್ಳಿ ಗ್ರಾಮದಲ್ಲಿ ಪುರಾತನ ಕಾಲದ ಶಿವಲಿಂಗ ಹಾಗೂ ಶಿಲಶಾಸನ ಪತ್ತೆಯಾಗಿದೆ.

    ಕೆಟಿ ಹಳ್ಳಿ ಗ್ರಾಮದಲ್ಲಿರುವ ಸಿದ್ದಪ್ಪನ ದೇವಾಲಯ ಮುಂಭಾಗ ಪುರಾತನ ಕಾಲದ ಶಿವಲಿಂಗ ಹಾಗೂ ಶೀಲಾ ಶಾಸನ ಪತ್ತೆಯಾಗಿದೆ. ಗ್ರಾಮದಲ್ಲಿ ತುಂಗಾಭದ್ರಾ ಯೋಜನೆಯಡಿ ಕುಡಿಯುವ ನೀರಿನ ಪೈಪ್‍ಲೈನ್ ಕಾಮಗಾರಿಗಾಗಿ ಭೂಮಿ ತೋಡಲಾಗಿತ್ತು. ಆಗ ಆಕಸ್ಮಿಕವಾಗಿ ಶಿವಲಿಂಗ ಪತ್ತೆಯಾಗಿದೆ.

    ತಕ್ಷಣ ಗ್ರಾಮಸ್ಥರು ಶಿವಲಿಂಗ ನೋಡಿ ಅಚ್ಚರಿಪಟ್ಟಿದ್ದಾರೆ. ನಂತರ ಶಿವಲಿಂಗವನ್ನು ಮೇಲಕ್ಕೆತ್ತಿ ಅದನ್ನು ಶುಚಿಗೊಳಿಸಿ ಅದಕ್ಕೆ ಪೂಜೆ ಸಲ್ಲಿಸಿದ್ದಾರೆ. ಚೋಳರ ಕಾಲದ ಶಿವಲಿಂಗ ಎಂದು ಶಂಕಿಸಲಾಗಿದೆ. ಪುರಾತನ ಕಾಲದ ಶಿವಲಿಂಗ ಹಾಗೂ ಶಿಲಾ ಶಾಸನ ಸಿಕ್ಕ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಚ್ಚರಿ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ.

    ಶಿವಲಿಂಗವನ್ನ ನೋಡಲು ಭಕ್ತರ ದಂಡೇ ಧಾವಿಸಿದೆ. ಶಿವಲಿಂಗ ಹಾನಿಗೊಳಗಾಗಿದ್ದು ಇತಿಹಾಸದಲ್ಲಿ ಮುಸಲ್ಮಾನರ ದಾಳಿಯಿಂದ ಹೀಗೆ ಆಗಿರಬಹದು ಹಾಗೂ ಪೂರ್ವಿಕರು ಮಣ್ಣಿನಲ್ಲಿ ಮುಚ್ಚಿಟ್ಟಿರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.