Tag: Anchoring

  • ಕನ್ನಡದ ಕೋಟ್ಯಾಧಿಪತಿಯಲ್ಲಿ ಮೊದಲ ಸ್ಫರ್ಧಿಯಾಗಿ ಬರಲಿದ್ದಾರೆ ಸ್ಯಾಂಡಲ್‍ವುಡ್ ಸ್ಟಾರ್!

    ಕನ್ನಡದ ಕೋಟ್ಯಾಧಿಪತಿಯಲ್ಲಿ ಮೊದಲ ಸ್ಫರ್ಧಿಯಾಗಿ ಬರಲಿದ್ದಾರೆ ಸ್ಯಾಂಡಲ್‍ವುಡ್ ಸ್ಟಾರ್!

    ಬೆಂಗಳೂರು: ಕನ್ನಡದ ಕೋಟ್ಯಾಧಿಪತಿ ಮೂರನೇ ಆವೃತ್ತಿ ಬರುತ್ತಿದ್ದು, ರಮೇಶ್ ಅರವಿಂದ್ ನಿರೂಪಣೆ ಮಾಡುತ್ತಿದ್ದಾರೆ. ಶುಕ್ರವಾರ ಕಾರ್ಯಕ್ರಮವನ್ನು ಲಾಂಚ್ ಮಾಡಿದ್ದು, ಮೊದಲ ಸ್ಪರ್ಧಿ ಯಾರೆಂಬುದನ್ನು ನಟ ರಮೇಶ್ ಅರವಿಂದ್ ತಿಳಿಸಿದ್ದಾರೆ.

    ಕನ್ನಡದ ಕೋಟ್ಯಾಧಿಪತಿ 2ನೇ ಆವೃತ್ತಿಯನ್ನು ನಿರೂಪಣೆ ಮಾಡಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರೇ ಮೂರನೇ ಆವೃತ್ತಿಯ ಮೊದಲ ಸ್ಪರ್ಧಿ ಆಗಬೇಕೆಂದು ರಮೇಶ್ ಆಸೆ ಪಡುತ್ತಿದ್ದಾರೆ. ಪುನೀತ್ ರಾಜ್‍ಕುಮಾರ್ ಮೂಲಕ ಈ ಕಾರ್ಯಕ್ರಮ ಶುಭಾರಂಭ ಆಗಬೇಕೆಂದು ರಮೇಶ್ ಅರವಿಂದ್ ಬಯಸಿದ್ದಾರೆ.

    ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಿರೂಪಕಿ, ನೀವು ಈ ಕಾರ್ಯಕ್ರಮದ ಮೊದಲ ಸಂಚಿಕೆ ಹಾಟ್ ಸೀಟ್ ಮೇಲೆ ಯಾರನ್ನು ನೋಡಲು ಇಷ್ಟಪಡುತ್ತೀರಾ ಎಂದು ಪ್ರಶ್ನೆ ಮಾಡಿದ್ರು. ಈ ವೇಳೆ ನಿರೂಪಕಿ ರಾಜ್ಯದ ಮುಖ್ಯಮಂತ್ರಿಗಳು, ಪತ್ರಕರ್ತರು, ಸಿನಿಮಾ ಕಲಾವಿದರ ಹಾಗೂ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಮೊದಲು ಪರಿಚಯಿಸಿದವರ ಹೆಸರನ್ನು ಆಯ್ಕೆಗಳನ್ನಾಗಿ ರಮೇಶ್ ಅರವಿಂದ್ ಅವ್ರಿಗೆ ನೀಡಿದ್ದರು.

    ನಿರೂಪಕಿಯ ಪ್ರಶ್ನೆಗೆ ರಮೇಶ್, “ನಾನು ವೀಕೆಂಡ್ ವಿಥ್ ರಮೇಶ್” ಕಾರ್ಯಕ್ರಮದಲ್ಲಿ ಮೊದಲ ಸಂಚಿಕೆಯಲ್ಲಿ ಬಂದ ವ್ಯಕ್ತಿಯನ್ನೇ ಕನ್ನಡದ ಕೋಟ್ಯಾಧಿಪತಿಯ ಹಾಟ್ ಸೀಟ್‍ನಲ್ಲಿ ನೋಡಲು ಇಷ್ಟಪಡುತ್ತೇನೆ. ಅದು ಬೇರೆ ಯಾರೂ ಅಲ್ಲ ಪುನೀತ್ ರಾಜ್‍ಕುಮಾರ್ ಎಂದು ಉತ್ತರಿಸಿದ್ದಾರೆ.

    ಕನ್ನಡದ ಕೋಟ್ಯಾಧಿಪತಿ ಮಾಡುತ್ತಿರುವುದರ ಬಗ್ಗೆ ರಮೇಶ್, ಪುನೀತ್ ರಾಜ್‍ಕುಮಾರ್ ಅವರಿಗೆ ಮೆಸೇಜ್ ಮಾಡಿದ್ದಾರೆ. ಆ ಮೆಸೇಜ್ ನೋಡಿದ ತಕ್ಷಣ ಪುನೀತ್, ರಮೇಶ್ ಅರವಿಂದ್ ಅವರಿಗೆ ಫೋನ್ ಮಾಡಿದ್ದಾರೆ.

    ನೀವು ಕಾರ್ಯಕ್ರಮ ನಡೆಸಿಕೊಡುತ್ತಿರುವುದು ತುಂಬ ಖುಷಿ ಆಯಿತು ಎಂದು ಪುನೀತ್ ಸಂತೋಷದಿಂದ ಶುಭ ಹಾರೈಸಿದ್ದಾರೆ. ಸಿನಿಮಾಗಳ ಕೆಲಸದಿಂದಾಗಿ ಪುನೀತ್ ಈ ಬಾರಿ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

  • ಆ ಒಂದು ಕೆಲಸ ಮಾಡಲು ನನಗೆ ಕಷ್ಟ ಎಂದ ಯಶ್

    ಆ ಒಂದು ಕೆಲಸ ಮಾಡಲು ನನಗೆ ಕಷ್ಟ ಎಂದ ಯಶ್

    ಬೆಂಗಳೂರು: ನುಗ್ಗೋ ಬುಲೆಟ್ ಎದ್ರುಗಡೆ ಯಾವನಿದ್ರೇನು ನುಗ್ತಾ ಇರೋದೇ ಎದೆ ಸೀಳ್ತಾ ಇರೋದೇ ಎಂದು ಹೇಳುವ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಆ್ಯಂಕರಿಂಗ್ ಮಾಡೋದು ಸ್ವಲ್ಪ ಕಷ್ಟ ಎಂದು ತಿಳಿಸಿದ್ದಾರೆ.

    ಆರ್.ಜೆ ರೋಹಿತ್ ಅವರನ್ನು ರಾಕಿಂಗ್ ಸ್ಟಾರ್ ಇಂಟರ್ ವ್ಯೂ ಮಾಡಿದ್ದಾರೆ. ರೋಹಿತ್ ಅಭಿನಯದ ‘ಬಕಾಸುರ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ರಾಕ್‍ಸ್ಟಾರ್ ಗೆ ಪ್ರಶ್ನೆಗಳನ್ನ ಹಾಕಿದ್ದರು. ಇಂಟ್ರೆಸ್ಟಿಂಗ್ ಎಂದರೆ ಫಸ್ಟ್ ಟೈಮ್ ನಿರೂಪಣೆ ಮಾಡಿದರಿಂದ ಯಶ್ ಕೊಂಚ ಎಗ್ಸೈಟ್ ಆಗಿದ್ದರು.

    ಆ್ಯಂಕರಿಂಗ್ ತುಂಬಾ ಕಷ್ಟದ ಕೆಲಸ. ಏನು ಪ್ರಶ್ನೆ ಕೇಳಬೇಕು ಎಂದು ತಿಳಿಯುವುದಿಲ್ಲ. ಮಾತನಾಡುವುದು ಸುಲಭ ಆದರೆ ಅದಕ್ಕೆ ಒಂದು ನಿರ್ದಿಷ್ಟ ಪ್ರಶ್ನೆಯಿರುತ್ತದೆ. ಆ ಪ್ರಶ್ನೆಗೆ ನನ್ನ ಅಭಿಪ್ರಾಯ ಏನು ಎಂದು ಸುಲಭವಾಗಿ ಹೇಳಬಹುದು. ಆದರೆ ಒಂದು ಪ್ರಶ್ನೆಯನ್ನು ಹುಡುಕಿ ಅದನ್ನು ಕೇಳಬೇಕು ಎಂದರೆ ಕಷ್ಟದ ಕೆಲಸ. ಈಗ ಆ್ಯಂಕರಿಂಗ್ ಮಾಡುವವರ ಕಷ್ಟ ನನಗೆ ಗೊತ್ತಾಯಿತು ಎಂದು ಯಶ್ ತಿಳಿಸಿದ್ದಾರೆ.

    ಆ್ಯಂಕರಿಂಗ್ ಮಾಡುವಾಗ ಮನೋರಂಜನೆ ಹಾಗೂ ಸಿನಿಮಾಗೆ ಸಂಬಂಧಪಟ್ಟ ಪ್ರಶ್ನೆಗಳನ್ನೇ ಕೇಳಬೇಕು. ಅವರ ಮನಸಿನಲ್ಲಿ ಇರುವ ಯೋಚನೆಗಳು ಹೊರಬರುವಂತೆ ಪ್ರಶ್ನೆಗಳನ್ನು ಕೇಳಬೇಕು. ಹಾಗಾಗಿ ಇದು ಕಷ್ಟದ ಕೆಲಸ. ಆದರೆ ಸಿನಿಮಾಗಾಗಿ ಹಾಗೂ ಅವರ ಮೇಲೆ ಇರುವ ಪ್ರೀತಿಗಾಗಿ ನಾನು ಈ ಕೆಲಸವನ್ನು ಮಾಡಿದೆ ಎಂದು ಯಶ್ ಹೇಳಿದ್ದಾರೆ.

    ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವವರು ಹೇಗಿರಬೇಕು? ತಾನು ಯಾವುದಾದರೂ ಪಕ್ಷದ ಪ್ರಚಾರ ಮಾಡಬೇಕು ಎಂದರೆ ರಾಜಕೀಯ ನಾಯಕರು ಏನೆಲ್ಲಾ ಕೆಲಸಗಳನ್ನು ಮಾಡಬೇಕಾಗುತ್ತದೆ ಎನ್ನುವುದು ಯಶ್ ಸಾಕಷ್ಟು ಬಾರಿ ಹೇಳಿಕೊಂಡಿದ್ದರು.

    ಇದೀಗ ಮತದಾರರಿಗೆ ನೀವು ಆಯ್ಕೆ ಮಾಡುವ ಪ್ರತಿನಿಧಿ ಹೇಗಿರಬೇಕು ಎನ್ನುವುದನ್ನು ಹೇಳಿದ್ದಾರೆ. ನಾಟಕದ ಮಾತುಗಳಿಗೆ ನಂಬಬೇಡಿ, ನಿಮ್ಮ ಊರು, ನಿಮ್ಮ ಏರಿಯಾದ ಸಮಸ್ಯೆಯನ್ನು ಅರಿತು ಕೆಲಸ ಮಾಡುವ ಪ್ರತಿನಿಧಿಯನ್ನು ಆಯ್ಕೆ ಮಾಡಿ. ಭಂಡ ನ್ಯಾಯದಲ್ಲಿ ಗೆಲ್ಲುತ್ತೀನಿ ಎನ್ನುವರಿಗೆ ನೀವು ಬೆಂಬಲ ಕೊಡಬೇಡಿ ಎಂದು ಯಶ್ ತಿಳಿಸಿದ್ದಾರೆ.

    ಸದ್ಯ ಯಶ್ ಕೆಜಿಎಫ್ ಸಿನಿಮಾದಲ್ಲಿ ಬ್ಯೂಸಿಯಾಗಿದ್ದು, ಸ್ಟಾರ್ ಡೈರೆಕ್ಟರ್ ಅವರ ಕಾಲ್‍ಶೀಟ್‍ಗಾಗಿ ಕಾಯುತ್ತಿದ್ದಾರೆ.