Tag: anchor

  • ಇನ್‍ಸ್ಟಾದಲ್ಲಿ ನಗ್ನ ಫೋಟೋ ಹಂಚಿಕೊಂಡ ಖ್ಯಾತ ನಟಿ

    ಇನ್‍ಸ್ಟಾದಲ್ಲಿ ನಗ್ನ ಫೋಟೋ ಹಂಚಿಕೊಂಡ ಖ್ಯಾತ ನಟಿ

    ಮುಂಬೈ: ಖ್ಯಾತ ನಟಿ, ನಿರೂಪಕಿ ಪದ್ಮಾ ಲಕ್ಷ್ಮಿ ತಮ್ಮ ಇನ್‍ಸ್ಟಾದಲ್ಲಿ ನಗ್ನ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಪದ್ಮಾ ಲಕ್ಷ್ಮಿ ಟಾಪ್‍ಲೆಸ್ ಫೋಟೋವನ್ನು ಇನ್‍ಸ್ಟಾದಲ್ಲಿ ಹಾಕಿ ಅದಕ್ಕೆ, “ಹೊಸ ವರ್ಷ, ಆದರೆ ನಾನು ಮೊದಲಿನಂತೆಯೇ ಇದ್ದೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

     

    View this post on Instagram

     

    New year, same me ???? (@vogueindia) #bts

    A post shared by Padma Lakshmi (@padmalakshmi) on

    ಬೆಳ್ಳಿತೆರೆಯಿಂದ ದೂರವಿರುವ ಪದ್ಮಾ ಲಕ್ಷ್ಮಿ ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪದ್ಮಾ ಸಕ್ರಿಯರಾಗಿದ್ದು, ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

    ಕಳೆದ ವಾರ ಪದ್ಮಾ ಸಂಪೂರ್ಣ ನಗ್ನವಾಗಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಕೂಡ ಸಾಕಷ್ಟು ವೈರಲ್ ಆಗಿತ್ತು.

  • ಮದುವೆ ಬಗ್ಗೆ ಮೌನ ಮುರಿದ ನಿರೂಪಕಿ ಅನುಶ್ರೀ

    ಮದುವೆ ಬಗ್ಗೆ ಮೌನ ಮುರಿದ ನಿರೂಪಕಿ ಅನುಶ್ರೀ

    ಬೆಂಗಳೂರು: ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಶೀಫ್ರದಲ್ಲೇ ಮದುವೆಯಾಗಲಿದ್ದಾರೆ. ಅವರ ಮನೆಯಲ್ಲಿ ಈಗಾಗಲೇ ಹುಡುಗನನ್ನು ಹುಡುಕಲು ಶುರು ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದೀಗ ಸ್ವತಃ ಅನುಶ್ರೀ ಈ ಬಗ್ಗೆ ಮೌನ ಮುರಿದಿದ್ದಾರೆ.

    ಇತ್ತೀಚೆಗೆ ಅನುಶ್ರೀ ಪ್ರತಿಕೆಯೊಂದಕ್ಕೆ ಮದುವೆ ಬಗ್ಗೆ ಸಂದರ್ಶನ ನೀಡಿದ್ದರು. ಈ ವೇಳೆ ನೀವು ಶೀಘ್ರದಲ್ಲೇ ಮದುವೆ ಆಗುತ್ತಿದ್ದಿರಾ ಎಂಬ ಸುದ್ದಿ ಹರಿದಾಡುತ್ತಿದೆ ಎಂದು ಪ್ರಶ್ನಿಸಿದಾಗ ಅವರು ಈ ವಿಷಯವನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ ಈ ಸುದ್ದಿಯಿಂದ ನನಗೆ ಬೇಸರವಾಗಿದೆ ಎಂದು ಹೇಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಅನು, ಈಗಾಗಲೇ ಅನೇಕರು ನನಗೆ ಹಲವು ಬಾರಿ ಮದುವೆ ಮಾಡಿಸಿದ್ದಾರೆ. ಹುಡುಗಿ ಎಂದಾಕ್ಷಣ ಮದುವೆ ಮಾಡುವ ಕಾತುರ ಈ ಜನಕ್ಕೆ ಏಕೆ ಬರುತ್ತೆ ಎಂದು ನನಗೆ ಗೊತ್ತಿಲ್ಲ. ಮದುವೆ ಎನ್ನುವುದು ನನ್ನ ಸ್ವಂತ ನಿರ್ಧಾರ. ನನ್ನ ವಿವಾಹವನ್ನು ಗುಟ್ಟಾಗಿಡುವ ಅವಶ್ಯಕತೆ ಇಲ್ಲ. ನಾನೇದಾರೂ ಮದುವೆಯಾದರೆ ಎಲ್ಲರಿಗೂ ತಿಳಿಸಿಯೇ ಆಗುತ್ತೇನೆ. ನನ್ನ ಮದುವೆ ಬಗ್ಗೆ ಪದೇ ಪದೇ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ ಎಂದು ತಿಳಿಸಿದ್ದಾರೆ.

    ಎಲ್ಲರೂ ಒಂದಲ್ಲಾ ಒಂದು ದಿನ ಮದುವೆಯಾಗಿಯೇ ಆಗುತ್ತಾರೆ. ಆದರೆ ನನ್ನ ಮದುವೆ ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ ಇದೆ. ಸದ್ಯಕ್ಕೆ ನಾನು ಮದುವೆ ಬಗ್ಗೆ ಯೋಚಿಸಿಲ್ಲ. ಅಲ್ಲದೆ ನನ್ನ ಮನೆಯವರು ಕೂಡ ಮದುವೆಯಾಗು ಎಂದು ಒತ್ತಾಯಿಸುತ್ತಿಲ್ಲ. ನನಗೆ ಇಲ್ಲದ ಮದುವೆ ಅವಸರ ಬೇರೆಯವರಿಗೆ ಏಕೆ ಇದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದರು.

    ಈಗ ನಾನು ನನ್ನ ವೃತ್ತಿಜೀವನದ ಬಗ್ಗೆ ಯೋಚಿಸುತ್ತಿದ್ದೇನೆ. ನನ್ನ ಮದುವೆ ಬಗ್ಗೆ ಯಾರಿಗೂ ಗೊಂದಲ ಬೇಡ. ನಾನು ಈಗಲೇ ಮದುವೆಯಾಗುತ್ತಿಲ್ಲ. ನನಗೆ ಇಷ್ಟವಾಗುವ ಹುಡುಗ ಕೂಡ ಸಿಕ್ಕಿಲ್ಲ. ಹುಡುಗನ ಆಯ್ಕೆಯಿಂದ ಮದುವೆತನಕ ಎಲ್ಲಾ ವಿಚಾರವನ್ನು ಬಹಿರಂಗಪಡಿಸುತ್ತೇನೆ. ಯಾವುದನ್ನು ಗುಟ್ಟಾಗಿ ಮಾಡುವುದಿಲ್ಲ. ಹೀಗಾಗಿ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ತಮ್ಮ ಮದುವೆ ವಂದತಿ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

  • ಪ್ರೇಯಸಿ, ಗೆಳೆಯನ ಜೊತೆ ಸೇರಿ ನಿರೂಪಕನಿಂದ ಪತ್ನಿಯ ಕೊಲೆ

    ಪ್ರೇಯಸಿ, ಗೆಳೆಯನ ಜೊತೆ ಸೇರಿ ನಿರೂಪಕನಿಂದ ಪತ್ನಿಯ ಕೊಲೆ

    ಲಕ್ನೋ: ನಿರೂಪಕನೊಬ್ಬ ತನ್ನ ಪ್ರೇಯಸಿ ಹಾಗೂ ಗೆಳೆಯನ ಜೊತೆ ಸೇರಿ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ.

    ದಿವ್ಯಾ (27) ಕೊಲೆಯಾದ ಮಹಿಳೆ. ದೆಹಲಿ ಮೂಲದ ನಿರೂಪಕ ಅಜಿತೇಶ್ ತನ್ನ ಪ್ರೇಯಸಿ ಹಾಗೂ ಸ್ನೇಹಿತನ ಜೊತೆ ಸೇರಿ ದಿವ್ಯಾಳನ್ನು ಕೊಲೆ ಮಾಡಿದ್ದಾನೆ. ಸೋಮವಾರ ದಿವ್ಯಾ ಇಟಾವಾದ ಕಟ್ರಾ ಬಾಲ್ ಸಿಂಗ್ ಏರಿಯಾದಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು.

    ಕೊಲೆಯಾದ ದಿನವೇ ದಿವ್ಯಾ ಮಾವ ಪ್ರಮೋದ್ ಮಿಶ್ರಾ, ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ದಳದ ಮೂಲಕ ಪೊಲೀಸರು ಈ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದರು. ತನಿಖೆ ವೇಳೆ ಅಜಿತೇಶ್ ತನ್ನ ಸ್ನೇಹಿತ ಅಖಿಲ್ ಕುಮಾರ್ ಸಿಂಗ್ ಹಾಗೂ ಭಾವನಾ ಆರ್ಯ ಜೊತೆ ಸೇರಿ ಈ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮೂವರು ಆರೋಪಿಗಳು ದೆಹಲಿಯಲ್ಲಿರುವ ನ್ಯೂಸ್ ಚಾನೆಲ್‍ನಲ್ಲಿ ಕೆಲಸ ಮಾಡುತ್ತಿದ್ದರು.

    ಸೋಮವಾರ ಈ ಕೊಲೆ ನಡೆದಿದ್ದು, ಗುರುವಾರ ಪೊಲೀಸರು ಕೊಲೆ ಆರೋಪಿಗಳಾದ ಅಜಿತೇಶ್, ಭಾವನಾ ಹಾಗೂ ಅಖಿಲ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಎಸ್‍ಪಿ ಸಂತೋಷ್ ಕುಮಾರ್, ವಿಚಾರಣೆ ವೇಳೆ ಅಜಿತೇಶ್, ನನ್ನ ಹಾಗೂ ಭಾವನಾ ನಡುವೆ ಅನೈತಿಕ ಸಂಬಂಧ ಇದೆ. ನಮ್ಮಿಬ್ಬರ ವಿಷಯ ದಿವ್ಯಾಗೆ ತಿಳಿದು ಆಕೆ ದಿನ ನನ್ನ ಜೊತೆ ಜಗಳವಾಡುತ್ತಿದ್ದರು. ಹಾಗಾಗಿ ಕೊಲೆ ಮಾಡಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ನಡೆದಿದ್ದೇನು?
    ಪ್ಲಾನ್ ಪ್ರಕಾರ ಅಕ್ಟೋಬರ್ 14ರಂದು ಅಖಿಲ್, ಅಜಿತೇಶ್ ಮನೆಗೆ ಆಗಮಿಸಿದ್ದಾನೆ. ಅಖಿಲ್ ಮೊದಲೇ ಪರಿಚಯವಿದ್ದ ಕಾರಣ ದಿವ್ಯಾ ಆತನನ್ನು ಮನೆಯೊಳಗೆ ಕರೆಸಿ ತನ್ನ ಮದುವೆ ಆಲ್ಬಂ ತೋರಿಸುತ್ತಿದ್ದಳು. ಈ ವೇಳೆ ಅಖಿಲ್ ಹೂ ಕುಂಡದಿಂದ ದಿವ್ಯಾ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ತೀವ್ರ ಗಾಯಗೊಂಡ ದಿವ್ಯಾ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ದಿವ್ಯಾ ಪ್ರಜ್ಞೆ ತಪ್ಪುತ್ತಿದ್ದಂತೆ ಅಖಿಲ್ ಸ್ಥಳದಿಂದ ಪರಾರಿಯಾಗಿದ್ದಾನೆ.

  • ಪತಿಯ ಮೊದಲ ಪತ್ನಿಯ ರಹಸ್ಯ ಬಿಚ್ಚಿಟ್ಟ ಸಮಂತಾ

    ಪತಿಯ ಮೊದಲ ಪತ್ನಿಯ ರಹಸ್ಯ ಬಿಚ್ಚಿಟ್ಟ ಸಮಂತಾ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಕಾರ್ಯಕ್ರಮವೊಂದರಲ್ಲಿ ತಮ್ಮ ಪತಿಯ ಮೊದಲ ಪತ್ನಿಯ ರಹಸ್ಯ ಬಿಚ್ಚಿಟ್ಟಿದ್ದಾರೆ.

    ಇತ್ತೀಚೆಗೆ ನಟಿ ಸಮಂತಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ನಿರೂಪಕಿ ಲಕ್ಷ್ಮಿ ಮಂಚು ಅವರು ಸಮಂತಾ ಅವರನ್ನು ಬೆಡ್‍ರೂಂ ಸೀಕ್ರೆಟ್ ಹಂಚಿಕೊಳ್ಳುವಂತೆ ಕೇಳುತ್ತಾರೆ. ಆದರೆ ಸಮಂತಾ ಇದಕ್ಕೆ ನಿರಾಕರಿಸುತ್ತಾರೆ.

    ಸಮಂತಾ ನಿರಾಕರಿಸುತ್ತಿದ್ದಂತೆ ನಿರೂಪಕಿ ಲಕ್ಷ್ಮಿ ಅವರು, ನೀವು ಈಗ ನಿಮ್ಮ ಎಲ್ಲ ರಹಸ್ಯ ಬಿಚ್ಚುಡುವಂತೆ ಮಾಡುತ್ತಿದ್ದೀರಾ. ಮದುವೆಗೂ ಮೊದಲು ನೀವು ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿ ಇದ್ದೀರಿ ಎಂಬ ವಿಷಯ ನನಗೆ ಗೊತ್ತು ಎಂದು ಹೇಳಿದ್ದಾರೆ. ಬಳಿಕ ಮದುವೆ ನಂತರ ನಿಮ್ಮ ಬೆಡ್‍ರೂಂನಲ್ಲಿ ಬದಲಾದ ಮೂರು ವಿಷಯ ತಿಳಿಸಿ ಎಂದು ಪ್ರಶ್ನಿಸಿದ್ದಾರೆ.

    ಈ ವೇಳೆ ಸಮಂತಾ ಅವರು, “ಚೈತನ್ಯ ಅವರ ಮೊದಲ ಪತ್ನಿ ದಿಂಬು. ನಾನು ಚೈತನ್ಯ ಅವರಿಗೆ ಕಿಸ್ ಮಾಡಬೇಕು ಎಂದರೆ ದಿಂಬು ಯಾವಾಗಲೂ ನಮ್ಮಿಬ್ಬರ ನಡುವೆ ಬರುತ್ತದೆ” ಎಂದರು. ಸ್ವಲ್ಪ ಹೊತ್ತಿನ ಬಳಿಕ ಸಮಂತಾ, “ನಾನು ಈಗ ಸಾಕಷ್ಟು ವಿಷಯ ಹೇಳಿದ್ದೇನೆ ಅನಿಸುತ್ತೆ. ಈಗ ಇಷ್ಟು ಸಾಕು” ಎಂದು ಹೇಳಿದ್ದಾರೆ.

    ಸಮಂತಾ ಅವರು 2017, ಅಕ್ಟೋಬರ್ ತಿಂಗಳಲ್ಲಿ ನಟ ನಾಗಚೈತನ್ಯ ಅವರ ಜೊತೆ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಗಿದ್ದರು. ಮೊದಲು ಇಬ್ಬರು ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ನಂತರ ಕ್ರೈಸ್ತ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ಆ್ಯಪಲ್ ಕಂಪನಿಯನ್ನು ಹಣ್ಣು ಎಂದು ತಿಳಿದ ಪಾಕ್ ನಿರೂಪಕಿ ಟ್ರೋಲ್: ವಿಡಿಯೋ

    ಆ್ಯಪಲ್ ಕಂಪನಿಯನ್ನು ಹಣ್ಣು ಎಂದು ತಿಳಿದ ಪಾಕ್ ನಿರೂಪಕಿ ಟ್ರೋಲ್: ವಿಡಿಯೋ

    ಇಸ್ಲಾಮಾಬಾದ್: ಪಾಕಿಸ್ತಾನದ ಟಿವಿ ಚಾನೆಲ್ ನಿರೂಪಕಿಯೊಬ್ಬರು ಆ್ಯಪಲ್ ಕಂಪನಿಯನ್ನು ಹಣ್ಣು ಎಂದು ತಿಳಿದು ಟ್ರೋಲ್ ಆಗುತ್ತಿದ್ದಾರೆ.

    ಪಾಕಿಸ್ತಾನದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ನೇರ ಪ್ರಸಾರದಲ್ಲಿ ಸಾಫ್ಟ್ ವೇರ್ ದಿಗ್ಗಜ ಆ್ಯಪಲ್ ಕಂಪನಿಯ ವಾರ್ಷಿಕ ಬಜೆಟ್ ಪಾಕಿಸ್ತಾನದ ಬಜೆಟ್‍ಗಿಂತಲೂ ಹಲವಾರು ಪಟ್ಟು ಹೆಚ್ಚಾಗಿದೆ ಎಂದು ಪತ್ರಕರ್ತ ನೈಲಾ ಇನಾಯತ್ ಹೇಳಿದ್ದರು.

    ಈ ವೇಳೆ ನಿರೂಪಕಿ,” ಹೌದು. ಸೇಬಿನ ವ್ಯಾಪಾರವು ಅಭಿವೃದ್ಧಿ ಹೊಂದುತ್ತಿದೆ. ಅದರಲ್ಲಿ ಹಲವು ರೀತಿಯ ವೈವಿಧ್ಯಗಳಿವೆ, ನಾನು ಈ ಬಗ್ಗೆ ಕೇಳಿದ್ದೇನೆ ಎಂದು ಹೇಳಿದ್ದಾರೆ. ತಕ್ಷಣ ಅತಿಥಿ ನೈಲಾ ಇನಾಯತ್ ನಾನು ಸಾಫ್ಟ್ ವೇರ್ ಕಂಪನಿ ಆ್ಯಪಲ್ ಬಗ್ಗೆ ಹೇಳುತ್ತಿದ್ದೇನೆ ವಿನಃ ಸೇಬಿನ ಹಣ್ಣಿನ ಬಗ್ಗೆ ಅಲ್ಲ ಎಂದು ಕಾಲೆಳೆದಿದ್ದಾರೆ.

    ಜುಲೈ 4ರಂದು ಪಾಕಿಸ್ತಾನದ ಪತ್ರಕರ್ತ ಈ ವಿಡಿಯೋವನ್ನು ಟ್ವೀಟ್ ಮಾಡಿಕೊಂಡಿದ್ದರು. ಆ್ಯಪಲ್ ಬಗ್ಗೆ ಆಂಕರ್ ಕನ್‍ಫ್ಯೂಸ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಜನರು ವಿಧವಿಧವಾಗಿ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಈ ವಿಡಿಯೋ ನೋಡಿ ಕೆಲವರು ಇದು ನ್ಯೂಸ್ ಚಾನೆಲ್ ಅಥವಾ ಕಾಮಿಡಿ ಚಾನೆಲಾ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ತುಂಬಾ ಕೆಟ್ಟ ನಿರೂಪಣೆ. ಈ ಕಾರ್ಯಕ್ರಮ ಮುಗಿದ ಮೇಲೆ ಧಾನ್ಯಗಳ ಬಗ್ಗೆಯೂ ಮಾತನಾಡಿ ಎಂದು ಟ್ವೀಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

  • ಕನ್ನಡದ ಕೋಟ್ಯಧಿಪತಿ ನಡೆಸಲು ಕಾರಣ ಬಿಚ್ಚಿಟ್ಟ ಪವರ್ ಸ್ಟಾರ್

    ಕನ್ನಡದ ಕೋಟ್ಯಧಿಪತಿ ನಡೆಸಲು ಕಾರಣ ಬಿಚ್ಚಿಟ್ಟ ಪವರ್ ಸ್ಟಾರ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕನ್ನಡದ ಕೋಟ್ಯಧಿಪತಿ ನಡೆಸಲು ಕಾರಣವೇನು ಎಂಬುದರ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

    ಇದೇ ಶನಿವಾರದಿಂದ ಮತ್ತೊಮ್ಮೆ ವೀಕೆಂಡ್ ಮಸ್ತಿಯನ್ನು ಹೆಚ್ಚಿಸಲು ಪುನೀತ್ ರಾಜ್‍ಕುಮಾರ್ ಕನ್ನಡದ ಕೋಟ್ಯಧಿಪತಿ ಶೋಗೆ ವಾಪಸ್ ಆಗಿದ್ದಾರೆ. ಕೋಟ್ಯಧಿಪತಿ ಶೋ ಈಗ ಮತ್ತೆ ಪುನೀತ್ ಅವರ ಕೈ ಸೇರಿದ್ದು, ಹೊಸ ಹುರುಪಿನೊಂದಿಗೆ ಕಾರ್ಯಕ್ರಮ ನಡೆಸಿಕೊಡಲು ಸಿದ್ಧರಾಗಿದ್ದಾರೆ. ಸಿದ್ಧಾರ್ಥ್ ಬಾಸಾ ನನಗೆ ಈ ಕಾರ್ಯಕ್ರಮಕ್ಕೆ ಸ್ಫೂರ್ತಿ ನೀಡಿದ್ದಾರೆ. ನಾನು ಚಿಕ್ಕವಯಸ್ಸಿನಲ್ಲಿ ಇದ್ದಾಗ ಅವರು ಕ್ವಿಝ್ ಮಾಡುತ್ತಿದ್ದರು. ಅವರನ್ನು ನೋಡಿ ನಾನು ಬೆಳೆದಿದ್ದೇನೆ. ನಾನು ಅವರ ದೊಡ್ಡ ಅಭಿಮಾನಿ ಎಂದು ಪುನೀತ್ ಹೇಳಿದ್ದಾರೆ.

    ಅಮಿತಾಬ್ ಬಚ್ಚನ್ ರಂತಹ ದಿಗ್ಗಜ ನಟರು ನಡೆಸಿಕೊಟ್ಟ ಕಾರ್ಯಕ್ರಮವನ್ನು ನಾನು ಹೇಗೆ ಮಾಡೋದು ಎಂಬ ಭಯ ನನ್ನ ಕಾಡಿತ್ತು. ಆದರೆ ನನ್ನ ತಾಯಿ ನನಗೆ ಮೊದಲ ಧೈರ್ಯ ನೀಡಿದ್ದರು. ನಿನ್ನಿಂದ ಇದು ಸಾಧ್ಯ ಎಂದು ಮೊದಲು ನನ್ನ ತಾಯಿ ನನಗೆ ಹೇಳಿದರು. ಆ ನಂತರ ನನ್ನ ಸಹೋದರರಾದ ಶಿವಣ್ಣ ಹಾಗೂ ರಾಘಣ್ಣ ಕೂಡ ನನಗೆ ಧೈರ್ಯ ತುಂಬಿದರು. ಅಲ್ಲದೆ ರಾಘಣ್ಣ ಈ ಕಾರ್ಯಕ್ರಮದಲ್ಲೂ ನನ್ನ ಜೊತೆ ಇರ್ತಾರೆ ಎಂದು ಪುನೀತ್ ನೆನೆಪು ಮೆಲುಕು ಹಾಕಿದರು.

    ಈ ಕಾರ್ಯಕ್ರಮದ ಬಗ್ಗೆ ತುಂಬಾ ಕ್ಯೂರೆಸ್ ಆಗಿರುವ ಪುನೀತ್, ಒಬ್ಬ ಆ್ಯಂಕರ್ ಆಗಿ ಯಾವ ಆ್ಯಂಕರ್ ಇಷ್ಟ ಎಂಬ ಮಾತನ್ನು ಹಂಚಿಕೊಂಡಿದ್ದಾರೆ. ರಮೇಶ್ ಅರವಿಂದ್, ಸುದೀಪ್, ಅಕುಲ್ ಬಾಲಾಜಿ, ಅನುಶ್ರೀ, ಸೃಜನ್ ಎಲ್ಲರೂ ಒಳ್ಳೆಯ ಆ್ಯಂಕರ್ ಗಳೇ ಆಗಿದ್ದಾರೆ. ನಾನು ಸುಮಾರು ಕಾರ್ಯಕ್ರಮಗಳನ್ನು ನೋಡುತ್ತೇನೆ. ಬಹಳಷ್ಟು ಆ್ಯಂಕರ್ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಳ್ಳುತ್ತಾರೆ ಎಂದು ಪುನೀತ್ ತಿಳಿಸಿದ್ದಾರೆ.

  • ಸನ್ನಿ ಲಿಯೋನ್ ಎಂದಿದ್ದ ಆ್ಯಂಕರ್ ಕಾಲೆಳೆದ ಕಾಂಡೋಮ್ ಕಂಪನಿ!

    ಸನ್ನಿ ಲಿಯೋನ್ ಎಂದಿದ್ದ ಆ್ಯಂಕರ್ ಕಾಲೆಳೆದ ಕಾಂಡೋಮ್ ಕಂಪನಿ!

    ಮುಂಬೈ: ರಾಷ್ಟ್ರೀಯ ಸುದ್ದಿ ವಾಹಿನಿ ನಿರೂಪಕ ಎಕ್ಸಿಟ್ ಪೋಲ್ ದಂದು ನಟ ಸನ್ನಿ ಡಿಯೋಲ್ ಹೆಸರು ಹೇಳುವ ಬದಲು ಸನ್ನಿ ಲಿಯೋನ್ ಹೆಸರು ಹೇಳಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗ ಸನ್ನಿ ಲಿಯೋನ್ ಹೆಸರು ಹೇಳಿದ್ದಕ್ಕೆ ಕಾಂಡೋಮ್ ಕಂಪನಿ ನಿರೂಪಕರ ಕಾಲೆಳೆದಿದೆ.

    ನಿರೂಪಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮ್ಯಾನ್‍ಫೋರ್ಸ್ ಕಂಪನಿ, “ಡಿಯರ್ ಅರ್ನಬ್, ನಾವು ಅರ್ಥ ಮಾಡಿಕೊಳ್ಳುತ್ತೇವೆ. ಸನ್ನಿ ನಮ್ಮ ಮನಸ್ಸಿನಲ್ಲೂ ಯಾವಾಗಲೂ ಇರುತ್ತಾರೆ” ಎಂದು ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಕಾಂಡೋಮ್ ಕಂಪನಿ ಟ್ವೀಟ್‍ನಿಂದ ನಿರೂಪಕ ಮತ್ತಷ್ಟು ಟ್ರೋಲ್ ಆಗುತ್ತಿದ್ದಾರೆ.

    ಈ ವೈರಲ್ ವಿಡಿಯೋ ಬಗ್ಗೆ ಸನ್ನಿ ಲಿಯೋನ್ ಕೂಡ ಪ್ರತಿಕ್ರಿಯಿಸಿದ್ದರು. ಸನ್ನಿ ಲಿಯೋನ್ ತಮ್ಮ ಟ್ವಿಟ್ಟರಿನಲ್ಲಿ, “ನಾನು ಎಷ್ಟು ಮತಗಳಿಂದ ಮುನ್ನಡೆಯಲ್ಲಿ ಇದ್ದೇನೆ?” ಎಂದು ಟ್ವೀಟ್ ಮಾಡಿ ನಿರೂಪಕನ ಕಾಲೇಳೆದಿದ್ದರು. ಸನ್ನಿ ಲಿಯೋನ್ ಪ್ರತಿಕ್ರಿಯೆಗೆ ಜನರು ತಮ್ಮ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ರೀ-ಟ್ವೀಟ್ ಮಾಡಿದ್ದರು.

    ಬಾಲಿವುಡ್ ನಟ ಸನ್ನಿ ಡಿಯೋಲ್ ಪಂಜಾಬ್‍ನ ಗುರ್ದಾಸ್‍ಪುರದಲ್ಲಿ ಬಿಜೆಪಿ ಪರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸನ್ನಿ ಡಿಯೋಲ್ ಈ ಚುನಾವಣೆಯಲ್ಲಿ 82,459 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಸನ್ನಿ ಡಿಯೋಲ್ ಅವರು ಕಾಂಗ್ರೆಸ್ ಹಿರಿಯ ನಾಯಕ ಸುನೀಲ್ ಜಾಕಾ ವಿರುದ್ಧ ಸ್ಪರ್ಧಿಸಿದ್ದರು.

  • ವೇದಿಕೆ ಮೇಲಿದ್ದ ನಿರೂಪಕಿಯನ್ನ ತಳ್ಳಿದ ಸಿದ್ದರಾಮಯ್ಯ

    ವೇದಿಕೆ ಮೇಲಿದ್ದ ನಿರೂಪಕಿಯನ್ನ ತಳ್ಳಿದ ಸಿದ್ದರಾಮಯ್ಯ

    ಹಾವೇರಿ: ಬಳ್ಳಾರಿಯ ಜಿಲ್ಲೆಯ ಶ್ರೀಕ್ಷೇತ್ರ ಮೈಲಾರದಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿರೂಪಕಿಯನ್ನು ತಳ್ಳಿ, ಏ ನಡಿಯಮ್ಮಾ. ನನಗೆ ಲೇಟ್ ಆಗುತ್ತೆ ಎಂದು ದರ್ಪ ಮೆರೆದಿದ್ದಾರೆ.

    ಮೈಲಾರದಲ್ಲಿ ಇಂದು ಕನಕ ಗುರುಪೀಠದ ಏಳುಕೋಟಿ ಭಕ್ತರ ಕುಟೀರ ಉದ್ಘಾಟನಾ ಸಮಾರಂಭ ನಡೆದಿತ್ತು. ನಿರೂಪಕಿ ವಚನಗಳನ್ನು ಹೇಳುತ್ತಿದ್ದರು. ಈ ವೇಳೆ ವೇದಿಕೆ ಮೇಲಿದ್ದ ಸಿದ್ದರಾಮಯ್ಯ ಅವರು ನಿರೂಪಕಿಯನ್ನು ತಳ್ಳಿ ಭಾಷಣ ಆರಂಭಿಸಿದರು.

    ಸಮಾವೇಶದಲ್ಲಿ ಸೇರಿದ್ದ ಜನರು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಕೂಗಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ, ಜನರ ಆಶೀರ್ವಾದ ಇದ್ದರೆ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ. ಖುರ್ಚಿ ಕೊಡುವರು ಹಾಗೂ ಅಲ್ಲಿಂದ ಕೆಳಗೆ ಇಳಿಸುವವರು ಜನರೇ ಎಂದು ಹೇಳಿದರು.

    ಸಿದ್ದರಾಮಯ್ಯ ಅವರು ಸೋಲುವ ಕ್ಷೇತ್ರದಲ್ಲಿ ಹಿಂದುಳಿದವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಆರೋಪಿಸುತ್ತಾರೆ. ಆದರೆ ಮಾನಗೆಟ್ಟವರು, ನಾಚಿಕೆ ಬಿಟ್ಟವರು ಸೋಲುವ ಕಡೆ ಒಬ್ಬರಿಗಾದರೂ ಕೊಡಬೇಕಿತ್ತು. ನನ್ನ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ಗುಡುಗಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮದಿಂದ ನಿರ್ಗಮಿಸುವಾಗ ನಿರೂಪಕಿಯನ್ನು ಕರೆದು ತಪ್ಪಾಯಿತು. ನನಗೆ ತುಂಬಾ ತಡವಾಗುತ್ತದೆ ಎಂದು ಹೇಳಿ ಕ್ಷಮೆ ಕೇಳಿದರು.

  • ಅನುಶ್ರೀಗೆ ಸಿಕ್ತು ಹೊಸ ಬಿರುದು

    ಅನುಶ್ರೀಗೆ ಸಿಕ್ತು ಹೊಸ ಬಿರುದು

    ಬೆಂಗಳೂರು: ಕಿರುತೆರೆಯಲ್ಲಿ ತಮ್ಮ ನಿರರ್ಗಳ ಮಾತಿನ ಮೂಲಕ ಚಾಪು ಮೂಡಿಸಿರುವ ಕರಾವಳಿ ತೀರದ ಬೆಡಗಿ ಅನುಶ್ರೀ ಅವರಿಗೆ ಹೊಸ ಬಿರುದನ್ನು ನಾದಬ್ರಹ್ಮ, ಸ್ವರದಿಗ್ಗಜ ಹಂಸಲೇಖ ನೀಡಿದ್ದಾರೆ.

    ಖಾಸಗಿ ವಾಹಿನಿಯ ಸಂಗೀತ ಕಾರ್ಯಕ್ರಮದ ನಿರೂಪಕಿಯಾಗಿರುವ ಅನುಶ್ರೀ ಎಲ್ಲರ ಅಚ್ಚುಮೆಚ್ಚಿನ ತಾರೆ. ಕಾರ್ಯಕ್ರಮದ ಮಹಾತೀರ್ಪುಗಾರರ ಸ್ಥಾನದಲ್ಲಿರುವ ಹಂಸಲೇಖ ಹೊಸ ಬಿರುದು ನೀಡಿ ಅನುಶ್ರೀ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಮಾತಿನ ಮಲ್ಲಿ, ಚಿನಕುರುಳಿ, ಪಟ್ ಪಟಾಕಿ ಹೀಗೆ ಅನುಶ್ರೀಯವರನ್ನ ಕರೆಯುವುದುಂಟು. ಇದೀಗ ‘ಪ್ರಸಂಗಗೀತ’ ಎಂಬ ಹೊಸ ಕನ್ನಡ ಬಿರುದನ್ನು ಹಂಸಲೇಖ ನೀಡಿದ್ದಾರೆ. ಪ್ರಸಂಗಗೀತ ಬಿರುದು ಪಡೆದ ಅನುಶ್ರೀ ಸಂತೋಷವನ್ನು ವ್ಯಕ್ತಪಡಿಸಿದರು.

    ಈ ಶನಿವಾರ ಪ್ರಸಾರವಾದ ಸಂಗೀತ ಕಾರ್ಯಕ್ರಮದ ಆರಂಭದಲ್ಲಿಯೇ ಹಂಸಲೇಖ ಇನ್ನ್ಮುಂದೆ ಪ್ರಸಂಗಗೀತ ಅನುಶ್ರೀ ಎಂದು ಹೇಳಿದರು. ಪರಸಂಗದ ತಿಮ್ಮದ ಅಂದ್ರೆ ಪರರ ಕತೆಗಳನ್ನು ವರ್ಣರಂಜಿತವಾಗಿ ಹೇಳುವ ವ್ಯಕ್ತಿ. ಸಂಗೀತ ಕಾರ್ಯಕ್ರಮದಲ್ಲಿಯೇ ಎಲ್ಲರ ಕತೆಯನ್ನು ಗೀತೆಯ ಮೂಲಕ ಹೇಳುವ ನಿರೂಪಕಿಯನ್ನು ಕನ್ನಡದಲ್ಲಿ ಪ್ರಸಂಗಗೀತ ಎಂದು ಕರೆತಯುತ್ತಾರೆ ಅಂತಾ ಹಂಸಲೇಖ ತಿಳಿಸಿದರು.

    ಹೊಸ ಬಿರುದು ಪಡೆದ ಆನುಶ್ರೀ ಚಪ್ಪಾಳೆಯ ಮೂಲಕ ಹಂಸಲೇಖರಿಗೆ ಧನ್ಯವಾದ ಅರ್ಪಿಸಿದರು. ಖುದ್ದು ಮಹಾ ಗುರುಗಳಾದ ಹಂಸಲೇಖ ಅವರು ನನಗೆ ಬಿರುದು ನೀಡಿದ್ದು, ಮುಂದಿನ ಸಂಚಿಕೆಯಿಂದ ನನ್ನ ಸಂಭಾವನೆಯಲ್ಲಿ ಹೆಚ್ಚಳ ಮಾಡಿ ಎಂದು ಹೇಳುವ ಮೂಲಕ ಎಲ್ಲರನ್ನು ನಗೆಯಲ್ಲಿ ತೇಲುವಂತೆ ಮಾಡಿದರು.

  • ಎಲ್ರೂ ನೋಡ್ತಾ ಇರ್ಬೇಕಿದ್ರೆ, ಆಕೆಯನ್ನ ಇಗ್ನೋರ್ ಮಾಡುವಂತಿರಬೇಕಂತೆ ಅನು `ಚಿನ್ನು’

    ಎಲ್ರೂ ನೋಡ್ತಾ ಇರ್ಬೇಕಿದ್ರೆ, ಆಕೆಯನ್ನ ಇಗ್ನೋರ್ ಮಾಡುವಂತಿರಬೇಕಂತೆ ಅನು `ಚಿನ್ನು’

    ಈ ಹಿಂದೆ ಹೇಳಿದ್ದಂತೆ ನನಗೆ ತುಂಬಾ ಬೆಳ್ಳಗಿರುವ ಹುಡುಗರು ಇಷ್ಟ ಆಗಲ್ಲ. ಯಾಕೆಂದ್ರ ನಾನು ಅಷ್ಟಾಗಿ ಬೆಳ್ಳಗಿಲ್ಲ. ಹುಡುಗ ನೋಡೊದಕ್ಕೆ ಎಲ್ಲರಿಕ್ಕಿಂತಲೂ ಭಿನ್ನವಾಗಿಯೇ ಇರಬೇಕು. ಎಲ್ಲರೂ ನನ್ನನ್ನೇ ನೋಡ್ತಿದ್ದರೆ, ಆತ ನನ್ನನ್ನು ಇಗ್ನೋರ್ ಮಾಡುವಂತಿರಬೇಕು. ಉದಾಹರಣೆಗೆ ಹಿಂದಿಯ ‘ಕಭಿ ಖುಷಿ ಕಭಿ ಗಮ್’ ಸಿನಿಮಾದಲ್ಲಿಯಂತೆ ಕರೀನಾ ಕಪೂರ್ ಹೇಳುವ ಹಾಗೆ ಯಾರವನು ನನ್ನನ್ನೇ ನೋಡ್ತಿಲ್ಲ ಅನ್ನುವಂತಿರಬೇಕು ಅಂತ ನಿರೂಪಕಿ ಅನುಶ್ರೀ ಹೇಳಿದ್ದಾರೆ.

    ಹಿಂದೆಲ್ಲಾ ಗಾಳಿ ಬೀಸುತ್ತೆ.. ಒಂದು ರೀತಿ ಎಲ್ಲ ನಿಧಾನಕ್ಕೆ ಚಲಿಸುವಂತೆ ಫೀಲ್ ಆಗುತ್ತೆ.. ನಾನು ಅವನನ್ನ ನೋಡಿದಾಗ ದಿಢೀರ್ ಅಂತಾ ನಾಚಿಕೆ ಬರಬೇಕು.. ಈ ರೀತಿಯಲ್ಲಿ ಯಾರನ್ನು ನೋಡಿದಾಗ ಆಗುತ್ತೆ ಅವನೇ ನನ್ನ `ಚಿನ್ನು’ ಎಂದು ಮನದಾಳದ ಮಾತನ್ನು ಪಬ್ಲಿಕ್ ಟಿವಿ ನಡೆಸಿದ ಸಂದರ್ಶನದ ವೇಳೆ ರಿವೀಲ್ ಮಾಡಿದ್ರು.

    ಇದೂವರೆಗೂ ಯಾರನ್ನು ನೋಡಿದರೂ ಆ ರೀತಿಯ ನಾಚಿಕೆ ಬಂದಿಲ್ಲ. ಏನ್ಮಾಡೋದು ಸಿಂಗಲ್ ಆಗಿದ್ದೇನೆ. ಗೊತ್ತಿಲ್ಲದೇ ಮುಖದಲ್ಲಿ ಒಂದು ರೀತಿಯ ನಾಚಿಕೆ ಬರಬೇಕು. ಹಿಂದೆ ಹೇಳುವ ಹಾಗೆ ಕಾಲಿನ ಹೆಬ್ಬೆರಳು ನೆಲ ಉಜ್ಜುವಂತೆ ಆಗಬೇಕು ಅನ್ನುವ ಫೀಲ್ ಆಗ್ಬೇಕು ಅಂತ ಹೇಳಿ ನಕ್ಕು ಬಿಟ್ಟರು.

    ಅಮ್ಮ ಮನೆಯಲ್ಲಿ ಗಂಡು ನೋಡಲಾ ಅಂತಾ ಹೇಳಿದ್ರು. ನನಗೂ ಜ್ಯೂಸ್, ಕಾಫಿ ಕಪ್ ಹಿಡಿದುಕೊಂಡು ಬರುವ ಅನುಭವ ಆಗಲಿ ಅಂತಾ ಹೇಳಿದ್ದೆ. ಒಂದು ಸಾರಿ ಇದನ್ನ ನನ್ನ ಫ್ರೆಂಡ್ ಗೆ ಹೇಳಿದಾಗ, ನಿನ್ನನ್ನು ನೋಡೋದಕ್ಕೆ 20 ಜನರು ಬಂದ್ರೆ ನೀನು ಸರ್ವರ್ ರೀತಿ ಆಗ್ತೀಯಾ ಅಂತಾ ಹೇಳಿದರು. ಹಾಗಾಗಿ ಆ ಪ್ಲಾನ್ ಕ್ಯಾನ್ಸಲ್ ಮಾಡಿದ್ದೀನಿ ಅಂದ್ರು.

    ಎಲ್ಲರಿಗೂ ಜ್ಯೂಸ್, ಉಪ್ಪಿಟ್ಟು ಕೊಡುತ್ತಿರೋದು ಆಗುತ್ತದೆ. ಅಂತಾ ಅಮ್ಮನಿಗೆ ಹೇಳಿ ಆ ಪ್ರೋಗ್ರಾಮ್ ಕ್ಯಾನ್ಸಲ್ ಮಾಡಿದ್ದೀನಿ. ಮಗಳಿಗೆ ಒಂದು ಕೆರಿಯರ್ ಇದೆ ಅಂತಾ ಅಮ್ಮನೂ ಒಪ್ಪಿಕೊಂಡಿದ್ದಾರೆ. ಹುಡುಗಿಯರಿಗೆ ಮದುವೆ ಜೀವನದ ಪ್ರಮುಖ ಘಟ್ಟ ಅನ್ನೋದು ಸ್ವಲ್ಪ ಬದಲಾಗಿದೆ. ಇಂದು ಹಲವರು ತಡವಾಗಿ ಮದುವೆ ಆಗುತ್ತಾರೆ. ಅದನ್ನು ಇಂದು ತುಂಬಾ ಜನ ಒಪ್ಪಿಕೊಂಡಿದ್ದಾರೆ ಅಂತ ಹೇಳಿದ್ರು. ಇದನ್ನೂ ಓದಿ: ನಟ ಶಂಕರ್ ನಾಗ್ ಅವರೇ ನನಗೆ ಸ್ಫೂರ್ತಿ ಅಂದ್ರು ಆ್ಯಂಕರ್ ಅನುಶ್ರೀ!

    ಇದೂವರೆಗೂ ನನಗೆ ಒಬ್ಬರೂ ಪ್ರಪೋಸ್ ಮಾಡಿಲ್ಲ. ಒಂದು ಸಲ ನನ್ನ ಫ್ರೆಂಡ್ಸ್ ಜೊತೆ `ಯಾಕೆ ಯಾರು ನನಗೆ ಪ್ರಪೋಸ್ ಮಾಡಲ್ಲ? ನಾನು ನೋಡೊದಕ್ಕೆ ಚೆನ್ನಾಗಿ ಇಲ್ವಾ?’ ಅಂತಾ ಕೇಳಿದ್ದಕ್ಕೆ ಸೋಶಿಯಲ್ ಆಗಿ ಎಲ್ಲರ ಜೊತೆ ಬೆರೆಯಬೇಕು ಅಂತಾ ಹೇಳಿದ್ರು. ಒಂದು ಸಾರಿ ಎಲ್ಲರ ಜೊತೆ ಪಬ್ ಗೆ ಹೋಗಿದ್ದಾಗ ಅಲ್ಲಿ ಫುಲ್ ಕತ್ತಲು. ಇದರಿಂದ ಗಾಬರಿಗೊಂಡ ನಾನು ಬಳಿಕ ಅಲ್ಲಿಗೆ ಹೋಗಲೇ ಇಲ್ಲ. ಹೀಗಾಗಿ ಶೂಟಿಂಗ್ ಮುಗಿದ ಕೂಡಲೇ ಮನೆಗೆ ಬಂದು ಬಿಡುತ್ತೇನೆ ಅಷ್ಟೇ ನನ್ನ ಜೀವನ ಅಂದ್ರು.

    ಒಮ್ಮೆ ಒಬ್ಬ ಮಹಿಳೆ ತನ್ನ ಮಗನ ಫೋಟೋ, ಜಾತಕ, ಉದ್ಯೋಗ ಮಾಹಿತಿ ಬರೆದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯರಿಗೆ ಪತ್ರ ಬರೆದಿದ್ದರು. ಇದನ್ನು ಅನುಶ್ರೀ ಅವರಿಗೆ ತಲುಪಿಸಬೇಕೆಂದು ಪತ್ರದಲ್ಲಿ ಬರೆದಿದ್ದರು. ಅರ್ಜುನ್ ಸರ್ ಬಂದು, ಮೇಡಂ ಪತ್ರ ನೋಡಿ ಅಂತಾ ಕೊಟ್ಟರು. ಒಂದು ಕ್ಷಣ ತುಂಬಾ ನಗು ಬಂತು. ಎಲ್ಲೋ ದೂರದಲ್ಲಿರುವ ತಾಯಿ ನನ್ನಲ್ಲಿ ಅವರ ಸೊಸೆ ಆಗುವ ಗುಣಲಕ್ಷಣ ನೋಡಿದ್ದಾರೆ ಅಂದ್ರೆ ನನಗೆ ತುಂಬಾ ಹೆಮ್ಮೆ ಆಗುತ್ತದೆ. ಕಾರ್ಯಕ್ರಮಗಳ ಮೂಲಕ ನಾನು ಜನರಿಗೆ ಎಷ್ಟು ಹತ್ತಿರ ಅಗಿದ್ದೀನಿ ಎಂಬುದು ಪತ್ರದ ಮೂಲಕ ತಿಳಿಯಿತು ಅಂತ ಹೇಳಿದ್ರು.  ಇದನ್ನೂ ಓದಿ: ಈ ಬಂಧ ‘ಅನು’ಬಂಧ- ಮಾತಿನ ಮಲ್ಲಿಯ ಮನದಾಳದ ಮಾತು

    ಸ್ಕೂಲ್ ಟೈಮಲ್ಲಿ ತುಂಬಾನೇ ಪ್ರಪೋಸ್ ಬರುತ್ತಿತ್ತು. ಆದ್ರೆ ನಿರೂಪಕಿ ಆದ್ಮೇಲೆ ಒಂದು ಲೆಟರ್ ಸಹ ಬಂದಿಲ್ಲ. ಪರಿಚಯದಲ್ಲಿ ಗಂಡು ನೋಡಲಾ ಅಂತಾ ಅಮ್ಮ ಹೇಳ್ತಾ ಇರ್ತಾರೆ. ಆದ್ರೆ ಆಗಬೇಕಾದ ಸಮಯದಲ್ಲಿ ಎಲ್ಲವೂ ನಡೆಯುತ್ತದೆ ಅಂತಾ ಹೇಳಿದ್ದೀನಿ ಅಂತ ತನ್ನ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=tjMufAL6i9U