‘ಪುಷ್ಪ 2′ ನಟಿ ಅನಸೂಯ ಭಾರಧ್ವಜ್ (Anasuya Bharadwaj) ಅವರು ಅದ್ಧೂರಿಯಾಗಿ ಗೃಹಪ್ರವೇಶ (House Warming) ಮಾಡಿ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಈ ಕುರಿತು ನಟಿಯೇ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಂಗೊಳಿಸಿದ KGF ನಟಿ ಮೌನಿ
ಸತ್ಯನಾರಾಯಣ ವ್ರತ, ಹೋಮಗಳನ್ನು ಮಾಡಿಸಿದ್ದಾರೆ. ಮನೆಗೆ ‘ಶ್ರೀರಾಮ ಸಂಜೀವಿನಿ’ ಎಂದು ಮನೆಗೆ ಹೆಸರಿಟ್ಟಿದ್ದಾರೆ. ಗೃಹಪ್ರವೇಶದ ಖುಷಿಯಲ್ಲಿರುವ ನಟಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.
ರಂಗಸ್ಥಳಂ, ಕ್ಷಣಂ, ವಿಮಾನಂ, ಪುಷ್ಪ, ಪುಷ್ಪ 2 ಸಿನಿಮಾಗಳಲ್ಲಿ ಅನಸೂಯ ನಟಿಸಿದ್ದಾರೆ. ನಟಿ, ನಿರೂಪಕಿಯಾಗಿ ಅನಸೂಯ ಮೋಡಿ ಮಾಡಿದ್ದಾರೆ.
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ (Casting Couch) ಹೆಚ್ಚಾಗಿದೆ. ಆಗಾಗ ಈ ಬಗ್ಗೆ ಅಪಸ್ಪರ ಕೇಳಿ ಬರುತ್ತಲೇ ಇದೆ. ಸಾಕಷ್ಟು ನಾಯಕಿಯರು ತಮಗಾದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದು ಇದೆ. ಇದೀಗ ‘ಪುಷ್ಪ 2’ ನಟಿ ಅನಸೂಯ ಭಾರಧ್ವಾಜ್ ಹೀರೋ ಹಾಗೂ ನಿರ್ದೇಶಕರೊಬ್ಬರು ಕಮಿಟ್‌ಮೆಂಟ್ ಕೇಳಿದ ಕರಾಳ ಘಟನೆಯೊಂದನ್ನು ನಟಿ ಹಂಚಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ, ಚಿತ್ರರಂಗದ ಸ್ಟಾರ್ ನಾಯಕನೊಬ್ಬ ತನ್ನಿಂದ ಕಮಿಟ್‌ಮೆಂಟ್ ಕೇಳಿದ್ದರ ಬಗ್ಗೆ ಹಂಚಿಕೊಂಡಿದ್ದಾರೆ. ಜೊತೆಗೆ ನಿರ್ದೇಶಕನೊಬ್ಬ ಕಮಿಟ್‌ಮೆಂಟ್ ಒಪ್ಪಿದರೆ ಸಿನಿಮಾ ಅವಕಾಶ ಕೊಡೊದಾಗಿ ಹೇಳಿದ್ದರು. ಅದನ್ನು ನಾನು ತಿರಸ್ಕಾರ ಮಾಡಿದಕ್ಕೆ ನನಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಕ್ಷೇತ್ರದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಕಮಿಟ್‌ಮೆಂಟ್‌ಗೆ ನೋ ಎಂದು ಹೇಳುವ ಧೈರ್ಯವಿರಬೇಕು ಎಂದು ನಟಿ ಮಾತನಾಡಿದ್ದಾರೆ. ತಮಗೆ ಕಮಿಟ್‌ಮೆಂಟ್‌ಗೆ ಕರೆದ ಆ ಹೀರೋ ಮತ್ತು ನಿರ್ದೇಶಕ ಯಾರು ಎಂಬುದು ನಟಿ ರಿವೀಲ್ ಮಾಡಿಲ್ಲ. ಇದನ್ನೂ ಓದಿ:ಬಾಲಿವುಡ್ ನಟ ಸೂರಜ್ ಪಾಂಚೋಲಿಗೆ ಸುಟ್ಟ ಗಾಯ- ಆಸ್ಪತ್ರೆಗೆ ದಾಖಲು
ಅಂದಹಾಗೆ, ಅನಸೂಯ ಅವರು ನಿರೂಪಕಿಯಾಗಿ ಸೈ ಎನಿಸಿಕೊಂಡಿದ್ದಾರೆ. ‘ಪುಷ್ಪ’, ‘ಪುಷ್ಪ 2’ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ.
ತೆಲುಗಿನ ಬೋಲ್ಡ್ ನಟಿ ಅನಸೂಯಾ ಭಾರದ್ವಾಜ್ (Anasuya Bharadwaj) ಪ್ರಸ್ತುತ ‘ಪುಷ್ಪ 2’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಶೋವೊಂದಕ್ಕೆ ಎಂಟ್ರಿ ಕೊಟ್ಟಿದ್ದು, ಪೈಪೋಟಿ ಗೆಲ್ಲಲು ಅನಸೂಯಾ ವೇದಿಕೆ ಮೇಲೆ ಜಾಕೆಟ್ ಬಿಚ್ಚಿದ್ದಾರೆ.
ನೃತ್ಯ ನಿರ್ದೇಶಕ ಶೇಖರ್ ಮಾಸ್ಟರ್ ಜೊತೆ ಅನಸೂಯಾಗೆ ಪೈಪೋಟಿಗಿಳಿದಿದ್ದಾರೆ. ವೇದಿಕೆಯಲ್ಲಿ ಶೇಖರ್ ಮಾಸ್ಟರ್ ಶರ್ಟ್ ಬಿಚ್ಚಿದ್ದಾರೆ. ಸೋಲು ಒಪ್ಪದ ಅನಸೂಯ, ತಾವು ಧರಿಸಿದ ಜಾಕೆಟ್ ಕಳಚಿ ನಾನೂ ಯಾವುದಕ್ಕೂ ಹಿಂದೆ ಸರಿಯಲ್ಲ ಅಂತ ಫ್ರೂವ್ ಮಾಡಿದ್ದಾರೆ.
ಅನಸೂಯಗೆ ತೆಲುಗಿನಲ್ಲಿ ಹೇಳಿಕೊಳ್ಳುವಂತಹ ಅವಕಾಶವೇನು ಸಿಕ್ತಿಲ್ಲ. `ಪುಷ್ಪ 2′ ಸಿನಿಮಾ ಬಿಟ್ಟರೇ ಬೇರೆ ಚಿತ್ರಗಳು ಅವರ ಕೈಯಲಿಲ್ಲ.
ಎಂದಿನಂತೆ ಈ ವರ್ಷವು ಕೂಡ ಹುಟ್ಟುಹಬ್ಬವನ್ನು ನಟಿ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಬೆಡ್‌ರೂಮ್‌ನಲ್ಲಿ ನಟಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಪತಿ ಮತ್ತು ಮಕ್ಕಳ ಜೊತೆ ನಟಿ ಸೆಲೆಬ್ರೇಟ್ ಮಾಡಿದ್ದಾರೆ. ಕಂದು ಬಣ್ಣದ ಧಿರಿಸಿನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ, ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಟೀಮ್‌ನಿಂದ ನಟಿ ಅನಸೂಯಾ ಭಾರದ್ವಾಜ್‌ಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಅನಸೂಯಾ ಅವರ ಹುಟ್ಟುಹಬ್ಬಕ್ಕೆ (ಮೇ 15) ದಾಕ್ಷಾಯಿಣಿ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು, ಅಭಿಮಾನಿಗಳು ಫಸ್ಟ್ ಲುಕ್‌ಗೆ ಫಿದಾ ಆಗಿದ್ದಾರೆ. ಜಬರ್ದಸ್ತ್ ಲುಕ್‌ನಲ್ಲಿ ಮಾಸ್ ಆಗಿ ಕಂಡಿದ್ದಾರೆ. ಅನಸೂಯಾ ಸೀರೆಯುಟ್ಟು ಮೈ ತುಂಬಾ ಆಭರಣ ಧರಿಸಿ ಖಡಕ್ ಆಗಿ ಪೋಸ್ ಕೊಟ್ಟಿದ್ದಾರೆ.
ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾದಲ್ಲಿ ಹೀರೋ ಅಲ್ಲು ಅರ್ಜುನ್‌ಗೆ ಅನಸೂಯಾ ಖಡಕ್ ವಿಲನ್ ಆಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಶ್ರೀವಲ್ಲಿ ಪಾತ್ರದ ಮೂಲಕ ಮತ್ತೊಮ್ಮೆ ಕಮಾಲ್ ಮಾಡಲು ಸಜ್ಜಾಗಿದ್ದಾರೆ.
ಈ ಸಿನಿಮಾದಲ್ಲಿ ಫಹಾದ್ ಫಾಸಿಲ್, ಡಾಲಿ ಸೇರಿದಂತೆ ಹಲವರು ನಟಿಸಿದ್ದಾರೆ. ‘ಪುಷ್ಪ 2’ ಇದೇ ಆಗಸ್ಟ್ 15ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.
ಟಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ 2’ (Pushpa 2) ಸಿನಿಮಾತಂಡದಿಂದ ಇದೀಗ ಅಪ್‌ಡೇಟ್ ಸಿಕ್ಕಿದೆ. ನಟಿ ಕಮ್ ನಿರೂಪಕಿ ಅನಸೂಯಾ ಅವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಪುಷ್ಪ 2 ಚಿತ್ರದ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ. ಇದನ್ನೂ ಓದಿ:ಕಾನ್ಸ್ ರೆಡ್ ಕಾರ್ಪೆಟ್- ದೀಪಿಕಾ ಪಡುಕೋಣೆ ಸ್ಟೈಲ್ ಕಾಪಿ ಮಾಡಿದ ಊರ್ವಶಿ
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಟೀಮ್‌ನಿಂದ ನಟಿ ಅನಸೂಯಾ ಭಾರದ್ವಾಜ್‌ಗೆ (Anasuya Bharadwaj) ಭರ್ಜರಿ ಗಿಫ್ಟ್ ಸಿಕ್ಕಿದೆ. ಅನಸೂಯಾ ಅವರ ಹುಟ್ಟುಹಬ್ಬಕ್ಕೆ (ಮೇ 15) ದಾಕ್ಷಾಯಿಣಿ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು, ಅಭಿಮಾನಿಗಳು ಫಸ್ಟ್ ಲುಕ್‌ಗೆ ಫಿದಾ ಆಗಿದ್ದಾರೆ. ಜಬರ್ದಸ್ತ್ ಲುಕ್‌ನಲ್ಲಿ ಮಾಸ್ ಆಗಿ ಕಂಡಿದ್ದಾರೆ. ಅನಸೂಯಾ ಸೀರೆಯುಟ್ಟು ಮೈ ತುಂಬಾ ಆಭರಣ ಧರಿಸಿ ಖಡಕ್ ಆಗಿ ಪೋಸ್ ಕೊಟ್ಟಿದ್ದಾರೆ.
Wishing the talented @anusuyakhasba a very Happy Birthday ❤????
She will be back with #Pushpa2TheRule as the wily ‘Dakshayani’ ????
— Mythri Movie Makers (@MythriOfficial) May 15, 2024
ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾದಲ್ಲಿ ಹೀರೋ ಅಲ್ಲು ಅರ್ಜುನ್‌ಗೆ (Allu Arjun) ಅನಸೂಯಾ ಖಡಕ್ ವಿಲನ್ ಆಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ್ದಾರೆ. ಜೊತೆಗೆ ಫಹಾದ್ ಫಾಸಿಲ್, ಡಾಲಿ ಸೇರಿದಂತೆ ಹಲವರು ನಟಿಸಿದ್ದಾರೆ.
‘ಪುಷ್ಪ 2’ ಇದೇ ಆಗಸ್ಟ್ 15ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.
ಟಾಲಿವುಡ್ ನಟಿ ಅನಸೂಯಾ ಭಾರದ್ವಾಜ್ (Anasuya Bharadwaj) ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವೈರಲ್ ಫಿವರ್ ಬಳಲುತ್ತಿರೋದಾಗಿ ನಟಿ ಪೋಸ್ಟ್ ಮಾಡಿದ್ದಾರೆ. ಪುಷ್ಪ ನಟಿಯ ಆರೋಗ್ಯದ ಬಗೆಗಿನ ಟ್ವೀಟ್ ಈಗ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಗೃಹಪ್ರವೇಶದ ಫೋಟೋ ಹಂಚಿಕೊಂಡ ‘ನಾಗಿಣಿ 2’ ನಟಿ
ಪುಷ್ಪ (Pushpa) ನಟಿ ಅನಸೂಯಾ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದಾರೆ. ಇದಕ್ಕೆ ಕಾರಣವಿದೆ. ಕಳೆದ ಐದು ದಿನಗಳಿಂದ ವೈರಲ್ ಫಿವರ್‌ನಿಂದ ಬಳಲುತ್ತಿದ್ದಾರೆ. ಅವರು ಈ ಬಗ್ಗೆ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ನಾನು ಐದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದೇನೆ ಎಂದಿದ್ದಾರೆ.
Have been down with viral since 5 days.. so have plenty of time to be on social media.. so came across so many things.. it’s alarming.. the unjust.. the unkindness.. the abuse.. the mere lack of being civilised.. makes me wonder where we are heading..
ಹಾಗಾಗಿಯೇ ಸೋಷಿಯಲ್ ಮೀಡಿಯಾದಿಂದ ದೂರವಿದ್ದರೂ ಈ ಐದು ದಿನಗಳಲ್ಲಿ ಸಾಕಷ್ಟು ವಿಷಯಗಳನ್ನು ಅರಿತುಕೊಂಡೆ ಎಂದಿದ್ದಾರೆ. ಅವರಲ್ಲಿ ಕೆಲವರು ಕ್ರೂರವಾಗಿ ವರ್ತಿಸುತ್ತಿದ್ದಾರೆ, ಸಹಜೀವಿಗಳ ಬಗ್ಗೆ ಸಹಾನುಭೂತಿ ಇಲ್ಲ. ಕಿರುಕುಳ ನೀಡುತ್ತಿದ್ದಾರೆ ಎಂದಿದ್ದಾರೆ. ಸದ್ಯ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಮೂಲಕ ಟ್ರೋಲರ್ಸ್ ಬಗ್ಗೆ ನಟಿ ಅಸಮಾಧಾನ ಹೊರ ಹಾಕಿದ್ದಾರೆ.
‘ಪುಷ್ಪ’ ಸಕ್ಸಸ್ ನಂತರ ಅಲ್ಲು ಅರ್ಜುನ್(Allu Arjun), ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ನಲ್ಲಿಯೂ ಅನಸೂಯಾ ನಟಿಸುತ್ತಿದ್ದಾರೆ. ಅವರ ಪಾತ್ರಕ್ಕೂ ಚಿತ್ರದಲ್ಲಿ ಪ್ರಾಮುಖ್ಯತೆ ಇದೆ.
ಟಾಲಿವುಡ್ (Tollywood) ನಟಿ, ನಿರೂಪಕಿ ಅನಸೂಯಾ (Anasuya) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸದ್ದು ಮಾಡುತ್ತಲೇ ಇರುತ್ತಾರೆ. ಸಿನಿಮಾ ವಿಚಾರಕ್ಕಿಂತ ಇತರೆ ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮತ್ತೆ ಬೋಲ್ಡ್ ಫೋಟೋ ವಿಷ್ಯವಾಗಿ ಸೌಂಡ್ ಮಾಡ್ತಿದ್ದಾರೆ. ನಟಿಯ ನಯಾ ಫೋಟೋಗೆ ನೆಟ್ಟಿಗರಿಂದ ಕಾಮೆಂಟ್ಸ್ ಹರಿದುಬರುತ್ತಿದೆ. ಈ ಅವತಾರ ನಿಮಗೆ ಬೇಕಾ? ಅಂತಾ ಪಾಠ ಮಾಡ್ತಿದ್ದಾರೆ.
‘ಪುಷ್ಪ’ (Pushpa) ನಟಿ ಅನಸೂಯಾ ಅದ್ಯಾವಾಗ ವಿಜಯ್ ದೇವರಕೊಂಡಗೆ ಕ್ಲಾಸ್ ತೆಗೆದುಕೊಳ್ಳುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ್ರೋ ಅಂದಿನಿಂದ ಅವರು ಏನೇ ಮಾಡಿದ್ರು ಸುದ್ದಿಯಾಗುತ್ತಿದ್ದಾರೆ. ಕಳೆದ ಬಾರಿ ಪತಿ ಪ್ರವಾಸಕ್ಕೆ ತೆರಳಿದ್ದ ನಟಿ ಕೊಂಚ ಫೋಟೋ ಶೇರ್ ಮಾಡಿದ್ದಕ್ಕೆ ನೆಟ್ಟಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದರು. ಇದನ್ನೂ ಓದಿ:ರಿಷಬ್ ನಿರ್ಮಾಣದ ‘ಶಿವಮ್ಮ’ನಿಗೆ ಮತ್ತೆ ಅಂತಾರಾಷ್ಟ್ರೀಯ ಪ್ರಶಸ್ತಿ
ಈ ಬೆನ್ನಲ್ಲೇ ಗಾಸಿಪ್ ಪ್ರಿಯರಿಗೆ ಆಹಾರವಾಗುವಂತಹ ಮತ್ತೊಂದು ಫೋಟೋವನ್ನ ಶೇರ್ ಮಾಡಿರೋದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತೀಚಿಗೆ ಅನಸೂಯಾ ಅಮೆರಿಕಾಗೆ ಹೋಗಿದ್ದರು. ಆಗ ಕೈಗಳನ್ನು ಮೇಲಕ್ಕೆ ಎತ್ತಿ ಹೊಟ್ಟೆಯ ಭಾಗ ಕಾಣುವಂತೆ ಫೋಟೋಗೆ ಪೋಸ್ ಕೊಟ್ಟಿದ್ದರು. ಈ ಫೋಟೋ ಅವರು ಅಪ್‌ಲೋಡ್ ಮಾಡ್ತಿದ್ದಂತೆ ನೆಗೆಟಿವ್ ಕಾಮೆಂಟ್ ಹರಿದು ಬರುತ್ತಿದೆ.
ನಟಿ ಕೈಗಳನ್ನು ಆಕಾಶದತ್ತ ಎತ್ತಿ ಗಾಗಲ್ಸ್ ಧರಿಸಿಕೊಂಡು ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ. ಬ್ಲೂ ರಿಪ್ಡ್ ಶಾರ್ಟ್ಸ್, ಟಾಪ್ ಧರಿಸಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಸಂಸ್ಕಾರದ ಪಾಠ ಮಾಡಿದ್ದಾರೆ. ಈ ವಯಸ್ಸಿನಲ್ಲಿ ಈ ಶೋಕಿ ಎಲ್ಲಾ ಬೇಕಾ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇನ್ನೂ 2021ರಲ್ಲಿ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ (Allu Arjun) ಎದುರಾಳಿಯಾಗಿ ನಟಿಸಿದ ಮೇಲೆ ಅನಸೂಯಾಗೆ, ನಟನೆಯಲ್ಲಿ ಬಿಗ್ ಬ್ರೇಕ್ ಸಿಕ್ಕಿದೆ. ನಿರೂಪಣೆ ಜೊತೆ ಸಾಕಷ್ಟು ಸಿನಿಮಾಗಳಿಗೆ ಬಂಪರ್ ಆಫರ್ ಗಳಿಸುತ್ತಿದ್ದಾರೆ.
ಟಾಲಿವುಡ್ (Tollywood) ಸ್ಟಾರ್ ನಟ ವಿಜಯ್ ದೇವರಕೊಂಡ ಬಗ್ಗೆ ಅದ್ಯಾವಾಗ ನಟಿ ಅನಸೂಯಾ ಭಾರದ್ವಾಜ್ (Anasuya Bharadwaj) ಎದುರು ಮಾಡಿದ್ರೋ ಅಂದಿನಿಂದ ವಿಜಯ್ ಫ್ಯಾನ್ಸ್ ನಟಿಯ ಹಿಂದೆ ಬಿದ್ದಿದ್ದಾರೆ. ಬಿಟ್ಟು ಬಿಡದೇ ಆಕೆಯನ್ನ ಟ್ರೋಲ್ (Troll) ಮಾಡ್ತಿದ್ದಾರೆ. ಇತರೆ ವಿಚಾರಗಳಿಗೆ ನಟಿಯ ಹೆಸರನ್ನು ಬಳಸಿಕೊಳ್ತಿದ್ದಾರೆ. ಕಿಡಿಗೇಡಿಗಳ ಕಾಟ ತಾಳಲಾರದೇ ನಟಿ ಮೌನ ಮುರಿದಿದ್ದಾರೆ. ನನಗೂ ಒಂದು ಕುಟುಂಬವಿದೆ. ನನ್ನನ್ನೂ ನನ್ನ ಪಾಡಿಗೆ ಬಿಟ್ಟು ಬಿಡಿ ಎಂದು ನಿರೂಪಕಿ ಅನಸೂಯಾ ಕೋರಿದ್ದಾರೆ. ಇದನ್ನೂಓದಿ:ಹೆಣ್ಣು ಮಗುವಿನ ತಂದೆಯಾದ ನಟ ರಾಮ್ ಚರಣ್
ತೆಲುಗು ಕಿರುತೆರೆಯಲ್ಲಿ ಉತ್ತಮ ನಿರೂಪಕಿ, ನಟಿಯಾಗಿ ಗಮನ ಸೆಳೆದವರು ಅನಸೂಯಾ ಭಾರದ್ವಾಜ್. ಇತ್ತೀಚಿನ ಅಲ್ಲು ಅರ್ಜುನ್, ರಶ್ಮಿಕಾ ನಟನೆಯ ‘ಪುಷ್ಪ’ (Pushpa) ಚಿತ್ರದಲ್ಲಿ ಅನಸೂಯಾ ಪ್ರಮುಖ ನಟಿಸಿದ್ದರು. ರಗಡ್ ಪಾತ್ರಕ್ಕೆ ನಟಿ ಜೀವತುಂಬಿದ್ದರು. ಇನ್ನೂ ಈ ಹಿಂದೆ ‘ಅರ್ಜುನ್ ರೆಡ್ಡಿ’ (Arjun Reddy) ಚಿತ್ರದಲ್ಲಿ ತಾಯಿ (Mother) ಬಗ್ಗೆ ಬೈಗುಳ ಇದೆ. ಇದರ ವಿರುದ್ಧ ಅನಸೂಯಾ ಧ್ವನಿ ಎತ್ತಿದ್ದರು. ವಿಜಯ್ ದೇವರಕೊಂಡ ವಿರುದ್ಧ ಅವರು ಕಿಡಿಕಾರಿದ್ದರು. ಇದನ್ನು ವಿಜಯ್ ಫ್ಯಾನ್ಸ್ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅನಸೂಯಾ ಅವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆ ಕೊಡುತ್ತಿದ್ದಾರೆ. ಇದೀಗ ನಟಿ, ಸರಣಿ ಟ್ವೀಟ್ ಮೂಲಕ ರಿಯಾಕ್ಟ್ ಮಾಡಿದ್ದಾರೆ.
ಎಲ್ಲರಿಗೂ ನಮಸ್ಕಾರ. ಕಳೆದ ಕೆಲವು ದಿನಗಳಿಂದ ನನ್ನ ಬಗ್ಗೆ ಸಾಕಷ್ಟು ಟ್ವೀಟ್‌ಗಳನ್ನು ನೋಡುತ್ತಿದ್ದೇನೆ. ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಪ್ರಮುಖರಿಗೆ ಅಗೌರವ ತೋರಲು ನನ್ನ ಹೆಸರನ್ನು ಬಳಸಲಾಗುತ್ತಿದೆ. ಇದನ್ನು ಮಾಡುತ್ತಿರುವುದರಿಂದ ನನ್ನ ಗೌರವಕ್ಕೆ ಧಕ್ಕೆ ಬರುತ್ತಿದೆ ಎಂದು ಮೊದಲ ಟ್ವೀಟ್‌ನಲ್ಲಿ ಅನಸೂಯಾ ಹೇಳಿದ್ದಾರೆ. ಇದು ನನ್ನ ಹೆಸರಿಗೆ ಮಾನಹಾನಿ ಮಾಡುತ್ತಿದೆ. ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇದರಿಂದ ಅನಗತ್ಯ ನೋವು ಉಂಟಾಗುತ್ತಿದೆ. ಇದು ನನ್ನ ಜೀವನ. ನನ್ನ ಇಷ್ಟದಂತೆ ಮುನ್ನಡೆಸುತ್ತಿದ್ದೇನೆ. ಅಲ್ಲದೆ ನಾನು ಯಾರ ಬಳಿಗೂ ಹೋಗಲು ಬಯಸುವುದಿಲ್ಲ. ನನ್ನ ಬಲದಿಂದ ನಾನು ಬೆಳೆದಿದ್ದೇನೆ ಎಂದಿದ್ದಾರೆ ಅವರು.
Hello everyone.. I have a request to make.. I’ve been coming across many tweets since few days.. where my name is being used as a mean comparison to disrespect others in political and entertainment industry.. which in turn is disrespectful to me too as my name is used as (1/4)
ಬಡಾಯಿ ಕೊಚ್ಚಿಕೊಳ್ಳಲು ನನ್ನ ಬಳಿ ಯಾವುದೇ ವಿಶೇಷ PR ತಂಡಗಳಿಲ್ಲ. ನನ್ನ ಬಗ್ಗೆ ನೀವು ಮೆಚ್ಚುಗೆ ಸೂಚಿಸಲು ಸಾಧ್ಯವಾಗದೇ ಇದ್ದರೆ ಕನಿಷ್ಠ ನನ್ನಿಂದ ದೂರವಿರಿ. ಸಂಬಂಧವಿಲ್ಲದ ವಿಷಯಗಳಲ್ಲಿ ನನ್ನ ಹೆಸರನ್ನು ಎಳೆದು ತರಬೇಡಿ. ದಯವಿಟ್ಟು ಮನುಷ್ಯರಂತೆ ವರ್ತಿಸಿ. ನನಗೊಂದು ಕುಟುಂಬವಿದೆ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ, ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ ಎಂದು ಅನಸೂಯಾ ಮನವಿ ಮಾಡಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಅನಸೂಯಾ ಅವರು ತಮ್ಮ ವಿವಾಹ ವಾರ್ಷಿಕೋತ್ಸವನ್ನ ಪತಿ ಜೊತೆ ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡಿದ್ರು. ಕಡಲ ಕಿನಾರೆಯಲ್ಲಿ ಬಿಕಿನಿ ಧರಿಸಿ ಮಿಂಚಿದ್ದರು. ನಟಿಯ ಈ ಲುಕ್ ಕೂಡ ಟ್ರೋಲಿಗರ ಬಾಯಿಗೆ ಆಹಾರವಾಗಿತ್ತು.
ಟಾಲಿವುಡ್‌ನಲ್ಲಿ ನಟ ವಿಜಯ್ ದೇವರಕೊಂಡ ಮತ್ತು ನಿರೂಪಕಿ ಅನಸೂಯ ನಡುವಿನ ಜಟಾಪಟಿ ಇದೀಗ ಮತ್ತೆ ಭಾರೀ ಸುದ್ದಿಯಲ್ಲಿದೆ. ಇತ್ತೀಚೆಗೆ ವಿಜಯ್ ವಿರುದ್ಧ ಅನಸೂಯ ಅವರು ಹಾಕಿದ ಪೋಸ್ಟ್ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಈ ಬೆನ್ನಲ್ಲೇ ಅನಸೂಯ ವಿರುದ್ಧ ವಿಜಯ್ ಫ್ಯಾನ್ಸ್ ತಿರುಗಿಬಿದ್ದಿದ್ದಾರೆ. ವಿಜಯ್ ಅಭಿಮಾನಿಗಳನ್ನ ಇದೀಗ ನಟಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಿಜಯ್ ದೇವರಕೊಂಡ ನಟನೆಯ `ಅರ್ಜುನ್ ರೆಡ್ಡಿ’ ಸಿನಿಮಾದ ಕಾರ್ಯಕ್ರಮದಲ್ಲಿ ನಿರೂಪಕಿ ಅನಸೂಯ ಮತ್ತು ವಿಜಯ್ ದೇವರಕೊಂಡ ನಡುವೆ ಜಟಾಪಟಿ ನಡೆದಿತ್ತು. ಮಹಿಳೆಯರ ಕುರಿತಾಗಿ ವಿಜಯ್ ದೇವರಕೊಂಡ ಅವಮಾನಕರ ರೀತಿಯಲ್ಲಿ ಸಂಭಾಷಣೆ ಹೇಳಿದರು ಎಂದು ವೇದಿಕೆಯ ಮೇಲೆಯೇ ಅನಸೂಯ ಆಕ್ಷೇಪಿಸಿದ್ದರು. `ಲೈಗರ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೋತಿರುವ ಬೆನ್ನಲ್ಲೇ ವಿಜಯ್ ವಿರುದ್ಧ ನಿರೂಪಕಿ ಅನಸೂಯ ಬರೆದಿರುವ ಪೋಸ್ಟ್ ವೈರಲ್ ಆಗುತ್ತಿದ್ದಂತೆ ವಿಜಯ್ ಅಭಿಮಾನಿಗಳು ಅನುಸೂಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಫ್ಯಾನ್ಸ್ ಮತ್ತು ಅನಸೂಯ ನಡುವೆ ಬಿಗ್ ವಾರ್ ನಡೆಯುತ್ತಿದೆ. ಇದನ್ನೂ ಓದಿ:1 ವರ್ಷದ ಬಳಿಕ ಆಫ್ಘನ್‌ನಲ್ಲಿ ಚಿತ್ರಮಂದಿರಗಳು ಓಪನ್ – ಸಿನಿಮಾದಲ್ಲಿ ಮಹಿಳಾ ಪಾತ್ರಗಳಿಗೆ ತಾಲಿಬಾನ್ ನಿರ್ಬಂಧ
ಅದರಲ್ಲಿ ಒಬ್ಬ ಅಭಿಮಾನಿ, ಅಸಹ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಒಂದು ದಿನಕ್ಕೆ ನಿನ್ನ ರೇಟ್ ಎಷ್ಟು ಎಂದು ಕೇಳಿದ್ದಾರೆ. ಆ ಕಾಮೆಂಟ್ ನೋಡಿರುವ ಅನಸೂಯ, ಮುಟ್ಟಿ ನೋಡಿಕೊಳ್ಳುವಂತೆ ಖಡಕ್ ಉತ್ತರ ನೀಡಿದ್ದಾರೆ.
ನಿಮ್ಮ ಸಹೋದರಿಯರಿಗೆ, ಅಥವಾ ನೀವು ಮದುವೆಯಾಗಿದ್ದರೆ, ನಿಮ್ಮ ಹೆಂಡತಿ ಅಥವಾ ಸಹೋದರಿಯ ಬಳಿ ಕೇಳಿ ಒಂದು ದಿನದಲ್ಲಿ ಎಷ್ಟು ತೆಗೆದುಕೊಳ್ಳುತ್ತಾರೆ ಎಂದು ರಿಪ್ಲೇ ಮಾಡಿದ್ದಾರೆ. ನೆಟ್ಟಿಗರು ಹೆದರಿ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಅನಸೂಯ ಅವರ ಈ ಕಾಮೆಂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಕೆಲವೊಬ್ಬರು ಆಂಟಿ ಎಂದು ಕರೆದಿದ್ದಾರೆ. ಕೆಲವರ ಬ್ಯಾಡ್ ಕಾಮೆಂಟ್‌ಗೆ ನಟಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]