Tag: ananya pandey

  • ಬ್ರೇಕ್ ಅಪ್ ಅಂದಿತು ಮತ್ತೊಂದು ಬಾಲಿವುಡ್ ಜೋಡಿ

    ಬ್ರೇಕ್ ಅಪ್ ಅಂದಿತು ಮತ್ತೊಂದು ಬಾಲಿವುಡ್ ಜೋಡಿ

    ಬಾಲಿವುಡ್‌ನ ‘ಆಶಿಕಿ 2’ (Ashiqui 2) ಹೀರೋ ಆದಿತ್ಯ ರಾಯ್ ಕಪೂರ್ (Aditya Roy Kapoor) ಹಾಗೂ ನಟಿ ಅನನ್ಯಾ ಪಾಂಡೆ (Ananya Panday) ಲವ್ವಿಡವ್ವಿ ವಿಚಾರ ಹೊಸದೇನೂ ಅಲ್ಲ. ಆದಿತ್ಯ ಜೊತೆ ಅನನ್ಯಾ ಡೇಟ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಆದರೆ, ಇಬ್ಬರೂ ಗೆಳೆತನ ಕಡಿದುಕೊಂಡು (Break Up) ದೂರವಾಗಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿದೆ.

    ಹಾಗಂತ ತಾವಿಬ್ಬರೂ ಬಹಿರಂಗವಾಗಿ ಎಂದೂ ಡೇಟ್ ಮಾಡುತ್ತಿರುವ ವಿಚಾರವನ್ನು ಹಂಚಿಕೊಂಡವರು ಅಲ್ಲ. ಇಬ್ಬರೂ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿರಲಿಲ್ಲ. ಆದರೂ ಇಬ್ಬರೂ ಜೊತೆಯಿರುವ ಫೋಟೋ ಲೀಕ್ ಆಗುತ್ತಿದ್ದವು. ಸೋಷಿಯಲ್ ಮೀಡಿಯಾ ತುಂಬೆಲ್ಲಾ ಈ ಜೋಡಿಯ ಫೋಟೋ ಸದ್ದು ಮಾಡುತ್ತಿದ್ದವು.

    ಈ ಇಬ್ಬರು ಸ್ಟಾರ್ ಕಿಡ್ಸ್ ಆಗಿದ್ದರು ಕೂಡ ಇಬ್ಬರಿಗೂ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ‘ಆಶಿಕಿ 2’ ಚಿತ್ರದಲ್ಲಿ ಗಮನ ಸೆಳೆದ ಆದಿತ್ಯ, ತಮ್ಮ ವೃತ್ತಿ ಜೀವನದಲ್ಲಿ ಒಂದೊಳ್ಳೆ ಬ್ರೇಕ್‌ಗಾಗಿ ಕಾಯ್ತಿದ್ದಾರೆ. ಹೀಗಿರುವಾಗ ಲೈಗರ್ ನಟಿ ಜೊತೆ ಆದಿತ್ಯ ಹೆಸರು ಕೇಳಿ ಬಂದು ಅಚ್ಚರಿ ಮೂಡಿಸಿತ್ತು.

    ನಂತರ ಇಬ್ಬರೂ ಪ್ರತ್ಯೇಕವಾಗಿ ವಿಮಾನ ಏರಿ ವಿದೇಶಕ್ಕೆ ತೆರಳಿದ್ದರು. ಆದರೆ ಅವರಿಬ್ಬರೂ ಹೋಗಿರುವುದು ಒಂದೇ ಲೊಕೇಷನ್‌ ಎನ್ನುವುದು ಅವರು ಹಾಕಿದ್ದ ಫೋಟೋದಲ್ಲಿ ಸ್ಪಷ್ಟವಾಗಿತ್ತು.  ಸ್ಪೇನ್‌ನಲ್ಲಿ ಸಂಗೀತ ಕಾರ್ಯಕ್ರಮವೊಂದಕ್ಕೆ ಅವರು ಹಾಜರಿ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸ್ಟೋರಿಗಳನ್ನು ಅಪ್‌ಲೋಡ್ ಮಾಡಿಕೊಂಡಿದ್ದರು. ಇಬ್ಬರ ಸ್ಟೋರಿಯಲ್ಲೂ ಸಾಮ್ಯತೆ ಇರುವುದರಿಂದ ಅಭಿಮಾನಿಗಳಿಗೆ ಎಲ್ಲವೂ ಸ್ಪಷ್ಟವಾಗಿತ್ತು.

     

    ಅನನ್ಯಾರನ್ನು ಆದಿತ್ಯ ಅವರು ಹಿಂಬದಿಯಿಂದ ತಬ್ಬಿಕೊಂಡು ನಿಂತಿರುವ ಫೋಟೋ ಕೆಲವು ದಿನಗಳ ಹಿಂದೆ ಸದ್ದು ಮಾಡಿತ್ತು. ಇದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದರು. ಇಷ್ಟು ದಿನಗಳ ಕಾಲ ಈ ಜೋಡಿ ಹಕ್ಕಿಗಳು ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಡದಿದ್ದರೂ, ತಾನಾಗಿಯೇ ಗೊತ್ತಾಗುತ್ತಿತ್ತು. ಈಗ ಇಂತಹ ಜೋಡಿ ದೂರವಾಗಿದೆ ಎನ್ನುವುದು ನೋವಿನ ಸಂಗತಿ.

  • ಎದೆ ಮೇಲಿನ ‘ಚಿಟ್ಟೆ’ಗೆ ವಿಶೇಷ ಅರ್ಥ ಕಲ್ಪಿಸಿದ ನಟಿ ಅನನ್ಯ

    ಎದೆ ಮೇಲಿನ ‘ಚಿಟ್ಟೆ’ಗೆ ವಿಶೇಷ ಅರ್ಥ ಕಲ್ಪಿಸಿದ ನಟಿ ಅನನ್ಯ

    ಬಾಲಿವುಡ್ (Bollywood) ಖ್ಯಾತ ನಟಿ ಅನನ್ಯ ಪಾಂಡ್ಯ (Ananya Pandey) ಕಾಸ್ಟ್ಯೂಮ್ (Costume) ವಿಷಯದಲ್ಲಿ ಪಕ್ಕಾ ಕಟ್ಟುನಿಟ್ಟು. ಅವರು ತಮಗಿಷ್ಟದ ಬಟ್ಟೆ ಹೊರತಾಗಿ ಬೇರೆ ಕಾಸ್ಟ್ಯೂಮ್ ಧರಿಸುವುದಿಲ್ಲ. ಈ ಕುರಿತಂತೆ ಹಲವಾರು ಬಾರಿ ಹೇಳಿದ್ದೂ ಇದೆ. ಇತರರಿಗೆ ಮುಜಗರ ಅನಿಸುವಂತಹ ಕಾಸ್ಟ್ಯೂಮ್ ಹಾಕಿಕೊಳ್ಳುವುದಿಲ್ಲ ಎಂದು ಘೋಷಿಸಿ ಆಗಿದೆ. ಆದರೆ, ಎಲ್ಲರೂ ಅಚ್ಚರಿ ಪಡುವಂತಹ ಕಾಸ್ಟ್ಯೂಮ್ ಅನ್ನು ಅನನ್ಯ ಧರಿಸಿದ್ದಾರೆ.

    ಎದೆಯ ಭಾಗವನ್ನು ಚಿಟ್ಟೆಯಿಂದ ಮುಚ್ಚಿಕೊಂಡಿರುವಂತಹ ಕಾಸ್ಟ್ಯೂಮ್ ಅದಾಗಿದ್ದು, ಎದೆ ಮೇಲಿನ ಚಿಟ್ಟೆ (Butterfly) ಕಂಡು ಹಲವರು ಹಲವು ರೀತಿಗಳಲ್ಲಿ ಕಾಮೆಂಟ್ ಮಾಡಿದ್ದಾರೆ. ಲಕ್ಷಾಂತರ ಜನರು ಲೈಕ್ ಮಾಡಿದ್ದರೆ, ಸಾವಿರಾರು ಜನರು ಕಾಮೆಂಟ್ ಮಾಡಿದ್ದಾರೆ. ಈ ಚಿಟ್ಟೆ ಯಾಕೆ ಎಂದು ಕೇಳಲಾದ ಪ್ರಶ್ನೆಗೆ ಅನನ್ಯ ಸೊಗಸಾಗಿ ಉತ್ತರಿಸಿದ್ದಾರೆ.

    ಅನನ್ಯ ಪಾಂಡೆ ಈ ಬಟ್ಟೆಯನ್ನು ಹಾಕಿದ್ದು ಪ್ಯಾರಿಸ್ ನಲ್ಲಿ ನಡೆದ ಫ್ಯಾಷನ್ ಶೋ ನಲ್ಲಿ. ಈ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು ರಾಹುಲ್ ಮಿಶ್ರಾ. ಪರಿಸರ ಮತ್ತು ಕೀಟಗಳ ಮೇಲಿನ ಪ್ರೀತಿಯಿಂದಾಗಿ ಇಂಥದ್ದೊಂದು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರಂತೆ ರಾಹುಲ್. ಅಳಿವಿನಂಚಿಗೆ ತಳ್ಳಿರುವ ಕೀಟಗಳನ್ನು ಉಳಿಸೋ ಜಾಗೃತಿ ಕೂಡ ಇದಾಗಿದೆಯಂತೆ.

     

    ಪ್ರಾಣಿ, ಪಕ್ಷಿಗಳು ಹಾಗೂ ಕೀಟಗಳ ಬಗ್ಗೆ ಅನನ್ಯ ಯಾವಾಗಲೂ ಕಾಳಜಿ ತೋರಿಸುತ್ತಲೇ ಇರುತ್ತಾರೆ. ಈ ಬಾರಿ ಕಾಸ್ಟ್ಯೂಮ್ ಹಾಕುವ ಮೂಲಕ ಫ್ಯಾಷನ್ ವೇದಿಕೆಯ ಮೇಲೆ ಕಾಳಜಿ ಪ್ರದರ್ಶಿಸಿದ್ದಾರೆ.

  • ಕೊನೆಯ ಓವರ್‌ನಲ್ಲಿ 6, 6, 6, 6, 6 – ನಂಬೋಕಾಗ್ತಿಲ್ಲ ರಿಂಕು ಕಿಂಗ್‌ ಎಂದ ಅನನ್ಯ ಪಾಂಡೆ

    ಕೊನೆಯ ಓವರ್‌ನಲ್ಲಿ 6, 6, 6, 6, 6 – ನಂಬೋಕಾಗ್ತಿಲ್ಲ ರಿಂಕು ಕಿಂಗ್‌ ಎಂದ ಅನನ್ಯ ಪಾಂಡೆ

    ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾನುವಾರ ಕೋಲ್ಕತ್ತಾ ನೈಟ್‌ರೈಡರ್ಸ್‌ (KKR), ಹಾಲಿ ಚಾಂಪಿಯನ್ಸ್‌ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ ರೋಚಕ ಜಯ ಸಾಧಿಸಿತು.

    ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್‌ (Rinku Singh) ಸಿಡಿಸಿದ 5 ಭರ್ಜರಿ ಸಿಕ್ಸರ್‌ ನೆರವಿನಿಂದ ಕೆಕೆಆರ್‌, ಗುಜರಾತ್‌ ಜೈಂಟ್ಸ್‌ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿ, ತವರಿನಲ್ಲೇ ಹಾಲಿ ಚಾಂಪಿಯನ್ಸ್‌ಗೆ ಮುಖಭಂಗ ಉಂಟುಮಾಡಿತು. ಇದನ್ನೂ ಓದಿ: IPL 2023: ಕೊನೆಯ ಓವರ್‌ನಲ್ಲಿ 6, 6, 6, 6, 6 -‌ KKRಗೆ 3 ವಿಕೆಟ್‌ಗಳ ರೋಚಕ ಜಯ

    ರಿಂಕು ಸಿಂಗ್‌ ಅಮೋಘ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಬಾಲಿವುಡ್‌ ತಾರೆಯರೂ ಪ್ರಸಂಶೆ ವ್ಯಕ್ತಪಡಿಸಿದ್ದಾರೆ. ಹಾಟ್‌ ತಾರೆ ಅನನ್ಯ ಪಾಂಡೆ (Ananya Pandey) ಹಾಗೂ ಶಾರುಖ್‌ ಪುತ್ರಿ ಸುಹಾನಾ ಖಾನ್‌ (Suhana Khan) ತಮ್ಮ ಸ್ಟೇಟಸ್‌ನಲ್ಲಿ ರಿಂಕು ಸಿಂಗ್‌ ಬ್ಯಾಟಿಂಗ್‌ ಮಾಡುವ ಫೋಟೋವನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: RCB ಅಭಿಮಾನಿಗಳೇ ಎಚ್ಚರ – ಬ್ಲ್ಯಾಕ್‌ನಲ್ಲಿ ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿ ಮೋಸ ಹೋಗದಿರಿ

    `ಖಾರೂಖ್‌ ಖಾನ್‌ ಪುತ್ರಿ ಇದನ್ನೂ ಊಹಿಸಲು ಅಸಾಧ್ಯ ಎಂದರೆ, ಅನ್ಯನ್ಯ ಪಾಂಡೆ ನಿಜಕ್ಕೂ ನಂಬಲಾಗುತ್ತಿಲ್ಲ ರಿಂಕು ಕಿಂಗ್‌ʼ ಎಂದು ತಮ್ಮ ಇನ್ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದಾರೆ.

    ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 204 ರನ್‌ ಗಳಿಸಿತ್ತು. 205 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ ನಿಗದಿತ ಓವರ್‌ಗಳಲ್ಲಿ 207 ರನ್‌ ಗಳಿಸಿ ಗೆಲುವು ಸಾಧಿಸಿತು.

  • ಮದುವೆ ಮನೆಯಲ್ಲಿ ‘ಧಮ್’ ಹೊಡೆದು ಸಿಕ್ಕಿಬಿದ್ದ ನಟಿ ಅನನ್ಯಾ ಪಾಂಡೆ

    ಮದುವೆ ಮನೆಯಲ್ಲಿ ‘ಧಮ್’ ಹೊಡೆದು ಸಿಕ್ಕಿಬಿದ್ದ ನಟಿ ಅನನ್ಯಾ ಪಾಂಡೆ

    ವಿಜಯ್ ದೇವರಕೊಂಡ ನಟನೆಯ ಲೈಗರ್ ಸೇರಿದಂತೆ ಸಾಕಷ್ಟು ಬಾಲಿವುಡ್ (Bollywood) ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಅನನ್ಯಾ ಪಾಂಡೆ (Ananya Pandey) ಸಲ್ಲದ ಕಾರಣಕ್ಕಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಈ ಹಿಂದೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸೆಕ್ಸ್, ಡೇಟಿಂಗ್ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದ್ದರು. ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಕೂಡ ಚರ್ಚೆಗೆ ಕಾರಣವಾಗಿತ್ತು. ಇದೀಗ ಸಿಗರೇಟ್ (Cigarette) ಸೇದಿದ ಕಾರಣಕ್ಕಾಗಿ ವೈರಲ್ ಆಗಿದ್ದಾರೆ.

    ಅನನ್ಯಾ ಪಾಂಡೆ ಅವರ ಸಂಬಂಧಿ ಅಲನಾ ಪಾಂಡೆ ಅವರ ವಿವಾಹ ಕಾರ್ಯಕ್ರಮ ನಿನ್ನೆಯಿಂದ ನಡೆದಿದೆ. ಮೊದಲ ದಿನ ಮೆಹಂದಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಅನನ್ಯಾ ಕೂಡ ಬಂದಿದ್ದರು. ಒಂದು ಕಡೆ ಇಡೀ ಕುಟುಂಬ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ, ಅನನ್ಯಾ ಮಾತ್ರ ಧಮ್ ಎಳೆದುಕೊಂಡು ನಿಂತಿದ್ದಾರೆ. ಯಾರೋ ಸೆರೆ ಹಿಡಿದ ವಿಡಿಯೋದಲ್ಲಿ ಅನನ್ಯಾ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಆಸ್ಕರ್ ಪಾರ್ಟಿಯಲ್ಲಿ ಕಂಗೊಳಿಸಿದ ರಾ ರಾ ರಕ್ಕಮ್ಮ

    ಮೆಹಂದಿ ಕಾರ್ಯಕ್ರಮವನ್ನು ಅಲ್ಲಿ ಬಂದಿದ್ದವರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಕೂಡ ಮಾಡಿದ್ದರು. ಈ ವಿಡಿಯೋದಲ್ಲಿ ಅನನ್ಯಾ ಸಿಗರೇಟು ಸೇದುತ್ತಾ ನಿಂತಿರುವ ದೃಶ್ಯ ಸೆರೆಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವಿಡಿಯೋವನ್ನು ಡಿಲೀಟ್ ಮಾಡಿಸುವ ಪ್ರಯತ್ನ ಕೂಡ ನಡೆದಿದೆ. ಅಷ್ಟರಲ್ಲಿ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ.

    ಅನನ್ಯಾ ಪಾಂಡೆ ಅವರ ಈ ನಡೆಗೆ ನಾನಾ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ. ಸ್ಟಾರ್ ಕಿಡ್ಸ್ ಯಾವತ್ತಿಗೂ ಹೀಗೆ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಬಹುಶಃ ವಿಜಯ್ ದೇವರಕೊಂಡ ಅವರೇ ಕಲಿಸಿರಬೇಕು ಎಂದು ಕಾಲೆಳೆದವರೂ ಇದ್ದಾರೆ. ಈ ನಟಿಗೆ ಇಂಥದ್ದೊಂದು ಕೆಟ್ಟ ಅಭ್ಯಾಸ ಇದೆ ಎಂದು ಗೊತ್ತಿರಲಿಲ್ಲ ಎಂದು ಅಚ್ಚರಿ ಪಟ್ಟವರೂ ಇದ್ದಾರೆ.

  • ಬಾಲಿವುಡ್ ನಟಿ ಅನನ್ಯ ಪಾಂಡೆ ಕಾಪಿ ಮಾಡಿದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ

    ಬಾಲಿವುಡ್ ನಟಿ ಅನನ್ಯ ಪಾಂಡೆ ಕಾಪಿ ಮಾಡಿದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ

    ಗತ್ತಿನಾದ್ಯಂತ ಇದೀಗ  ಲಿಯೋನೆಲ್ ಮೆಸ್ಸಿ ಕುರಿತಾಗಿಯೇ ಮಾತು. ಅರ್ಜೆಂಟಿನಾ (Argentina) ಫಿಫಾ ವಿಶ್ವಕಪ್ ಗೆಲ್ಲುತ್ತಿದ್ದಂತೆಯೇ ಮೆಸ್ಸಿ ಗುಣಗಾನ ಯಾವ ದೇಶವನ್ನೂ ಬಿಟ್ಟಿಲ್ಲ. ಬಹುತೇಕ ದೇಶಗಳಲ್ಲಿ ಮೆಸ್ಸಿಯನ್ನು ಕೊಂಡಾಡಲಾಗುತ್ತಿದೆ. ಇಂತಹ ಮೆಸ್ಸಿ ಇದೀಗ ಬಾಲಿವುಡ್ ನಟಿ ಅನನ್ಯ ಪಾಂಡೆ (Ananya Pandey)ಯನ್ನು ಕಾಪಿ ಮಾಡಿದರಾ ಅನ್ನುವ ಅನುಮಾನವನ್ನು ಭಾರತದಲ್ಲಿರುವ ಮೆಸ್ಸಿ ಅಭಿಮಾನಿಗಳು ವ್ಯಕ್ತ ಪಡಿಸಿದ್ದಾರೆ. ಈ ಅನುಮಾನಕ್ಕೆ ಕಾರಣ, ಮೆಸ್ಸಿ ಟ್ರೋಫಿಯನ್ನು ತಬ್ಬಿಕೊಂಡು ಮಲಗಿರುವ ಫೋಟೋ.

    ಹೌದು, ಫಿಫಾ ವಿಶ್ವಕಪ್ ಗೆಲ್ಲುವುದು ಮೆಸ್ಸಿ ಪಾಲಿಗೆ ದೊಡ್ಡ ಗುರಿಯೇ ಆಗಿತ್ತು. ಇನ್ನೆಂದೂ ವಿಶ್ವಕಪ್ ನಲ್ಲಿ ಆಡಲಾರೆ ಎಂದು ಘೋಷಿಸಿಯೂ ಬಿಟ್ಟಿದ್ದರು. ವಿಶ್ವಕಪ್ ನಲ್ಲಿ ಇದು ಅವರ ಕೊನೆಯ ಆಟವಾಗಿದ್ದರಿಂದ ಆಸೆಗಣ್ಣಿನಿಂದಲೇ ಫುಟ್ ಬಾಲ್ (Football) ಮೇಲೆ ಕಾಲಿಟ್ಟಿದ್ದರು. ಕೊನೆಗೂ ಅದು ಈಡೇರಿದೆ. ರೋಚಕ ಪಂದ್ಯದಲ್ಲಿ ಗೆದ್ದು, ಮೆಸ್ಸಿ (Lionel Messi) ವಿಶ್ವ ಕಪ್ ಗೆ ಮುತ್ತಿಟ್ಟಿದ್ದರು. ಆ ಮುತ್ತಿನ ಗಮ್ಮತ್ತಿನಿಂದ ಹೊರಬರಲು ಇವತ್ತಿಗೂ ಅವರಿಗೆ ಸಾಧ್ಯವಾಗುತ್ತಿಲ್ಲ. ಅದರಲ್ಲೂ ವಿಶ್ವ ಕಪ್ ಗೆದ್ದ ದಿನ ಕಪ್ ಅನ್ನು ತಬ್ಬಿಕೊಂಡೇ ಮಲಗಿದ್ದರು ಮೆಸ್ಸಿ. ಆ ಫೋಟೋ ವೈರಲ್ ಆಗಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಅಚ್ಚರಿಯ ಎಂಟ್ರಿ : ಹಾವು ಏಣಿ ಆಟದಲ್ಲಿ ಮಂಜು ಪಾವಗಡ

    ಈ ಜಗತ್ತಿನಲ್ಲಿ ಇರುವುದು ನಾನು ಮತ್ತು ಕಪ್ ಎಂದು ನಿರಾಳವಾಗಿ ಮಲಗಿರುವ ಮೆಸ್ಸಿ, ಫೋಟೋ ರೀತಿಯಲ್ಲೇ ಈ ಹಿಂದೆ ಬಾಲಿವುಡ್ ನಟಿ ಅನನ್ಯ ಪಾಂಡೆ ಕೂಡ ಫಿಲ್ಮ್ ಫೇರ್ ಪ್ರಶಸ್ತಿಯ ಟ್ರೋಫಿಯನ್ನು ಹಿಡಿದು ಮಲಗಿದ್ದಾರೆ. ಆ ಮುಖಭಾವವೂ ಮೆಸ್ಸಿ ರೀತಿಯಲ್ಲೇ ಆನಂದದಿಂದಿದೆ. ಹಾಗಾಗಿ ಅನನ್ಯ ಪಾಂಡೆ ಅವರನ್ನು ಮೆಸ್ಸಿ ನಕಲು ಮಾಡಿದ್ದಾರೆ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಹಾಗಂತ ಇದು ಸೀರಿಯಸ್ ಆಗಿ ಆಗುತ್ತಿರುವ ಟ್ರೋಲ್ ಅಲ್ಲ, ತಮಾಷೆ ಅನ್ನುವಂತೆ ಮೆಸ್ಸಿಯನ್ನು ಕಾಲೆಳೆದಿದ್ದಾರೆ.

    ಮೆಸ್ಸಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಒಲಿದು ಬಂದಿದ್ದರೂ ಫಿಫಾ ವಿಶ್ವಕಪ್ (World Cup) ಮಾತ್ರ ಮರಿಚಿಕೆಯಾಗಿತ್ತು. ಈ ಬಾರಿ ತನ್ನ ಕೊನೆಯ ವಿಶ್ವಕಪ್ ಆಡಲು ಕಣಕ್ಕಿಳಿದ ಮೆಸ್ಸಿ ವಿಶ್ವಕಪ್ ಮುಡಿಗೇರಿಸಿಕೊಳ್ಳುವ ಬಯಕೆಯೊಂದಿಗೆ ಕತಾರ್‌ಗೆ ಕಾಲಿಟ್ಟಿದ್ದರು. ಆದರೆ ಅರ್ಜೆಂಟಿನಾಗೆ ಆರಂಭದಲ್ಲೇ ಶಾಕ್ ಎದುರಾಗಿತ್ತು. ಅಚ್ಚರಿ ಎಂಬಂತೆ ಅರ್ಜೆಂಟಿನಾ ತನ್ನ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋತು ಟೂರ್ನಿಯಿಂದ ಹೊರ ಬೀಳುವ ಇಕ್ಕಟ್ಟಿಗೆ ಸಿಲುಕಿತ್ತು. ಆದರೆ ಛಲಬಿಡದ ಮೆಸ್ಸಿ ತನ್ನ ಮ್ಯಾಜಿಕ್ ಮುಂದುವರಿಸಿದರು. ಆ ಬಳಿಕ ಲೀಗ್ ಮತ್ತು ನಾಕೌಟ್, ಸೆಮಿಫೈನಲ್ ಸಹಿತ ಫೈನಲ್‍ನಲ್ಲಿ ಗೋಲು ಸಿಡಿಸುತ್ತ ಫೈನಲ್‍ನಲ್ಲಿ ಫ್ರಾನ್ಸ್‌ನ್ನು ಬಗ್ಗುಬಡಿದು ಪ್ರಶಸ್ತಿ ಗೆದ್ದು ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದರು. ಜೊತೆಗೆ ವಿಶ್ವಕಪ್ ಗೆಲ್ಲುವ ತಮ್ಮ ಕನಸನ್ನು ಈಡೇರಿಸಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • ನಟ ಚಂಕಿ ಪಾಂಡೆಗೆ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು: ಪತ್ನಿ ಭಾವನಾ ಬಿಚ್ಚಿಟ್ಟ  ರಹಸ್ಯ

    ನಟ ಚಂಕಿ ಪಾಂಡೆಗೆ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು: ಪತ್ನಿ ಭಾವನಾ ಬಿಚ್ಚಿಟ್ಟ ರಹಸ್ಯ

    ಬಾಲಿವುಡ್ ಹೆಸರಾಂತ ನಟ, ಅನನ್ಯ ಪಾಂಡೆ ಅವರ ತಂದೆ ಚಂಕಿ (Chunky Pandey) ಪಾಂಡೆ ಕುರಿತಾಗಿ ಸ್ವತಃ ಪತ್ನಿಯೇ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಪತಿಗೆ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು ಎನ್ನುವುದನ್ನು ಬಹಿರಂಗವಾಗಿ ಭಾವನಾ ಪಾಂಡೆ ಹೇಳಿಕೊಂಡಿದ್ದಾರೆ. ಈ ಮಾತು ಬಾಲಿವುಡ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಸ್ವತಃ ಮಗಳಿಗೆ ಈ ಮಾತು ಇರಸುಮುರಸು ಉಂಟು ಮಾಡಿದೆ.

    ಕರಣ್ ಜೋಹಾರ್ (Karan Johar) ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾದ್ದ ಭಾವನಾ ಪಾಂಡೆ (Bhavana Pandey), ತನ್ನ ಪತಿಯ ಡೇಟಿಂಗ್ ಕುರಿತಾಗಿಯೂ ಮಾತನಾಡಿದ್ದಾರೆ. ಅಲ್ಲದೇ, ತಮ್ಮ ಗಂಡನಿಗೆ ಸಿನಿಮಾ ರಂಗದ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು. ಅದು ನನಗೂ ಗೊತ್ತಿತ್ತು. ನನಗೆ ಗೊತ್ತಿದೆ ಅಂತ ಚಂಕಿ ಪಾಂಡೆಗೂ ಗೊತ್ತಿತ್ತು ಎಂದು ಹೇಳುವ ಮೂಲಕ ಇನ್ನೂ ಅಚ್ಚರಿ ಮೂಡಿಸಿದ್ದಾರೆ. ನೂರಾರು ಸಿನಿಮಾಗಳ ಮೂಲಕ ಮನ ರಂಜನೆ ನೀಡಿರುವ ಮತ್ತು ಮಗಳನ್ನು ಇದೇ ರಂಗಕ್ಕೆ ಕರೆತಂದಿರುವ ಚಂಕಿ ಬಗ್ಗೆ ಮೊದಲ ಬಾರಿಗೆ ಇಂಥದ್ದೊಂದು ಮಾತು ಕೇಳಿ ಬಂದಿದೆ. ಇದನ್ನೂ ಓದಿ:ತಮ್ಮ ‘ಕೊನೆ ಆಸೆ’ ತಿಳಿಸಿದ ಸೋನು ಶ್ರೀನಿವಾಸ್ ಗೌಡ: ಅವನಿಗೆ ಹೃದಯ ಪೂರ್ವಕ ಹಾರೈಕೆ

    ಕಾಫಿ ವಿತ್ ಕರಣ್ (Koffee With Karan) ಶೋನಲ್ಲಿ ಬರೀ ಡೇಟಿಂಗ್, ಸೆಕ್ಸ್, ಅನೈತಿಕ ಸಂಬಂಧ, ಬಾಯ್ ಫ್ರೆಂಡ್ ಹೀಗೆ ಇಂಥದ್ದೇ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈವರೆಗೂ ಬಂದಿರುವಂತಹ ಅತಿಥಿಗಳು, ಯಾವುದಕ್ಕೂ ಮುಜಗರ ಪಟ್ಟುಕೊಳ್ಳದೇ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಅಲ್ಲದೇ, ಇನ್ನೂ ಅನೇಕ ಸಂಗತಿಗಳನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಹಾಗಾಗಿ ಈ ಶೋ ಬಗ್ಗೆ ಎಲ್ಲರಿಗೂ ಕುತೂಹಲ. ಬಾಲಿವುಡ್ ನ ಖ್ಯಾತ ನಟ ನಟಿಯರೆಲ್ಲ ಈ ಶೋಗೆ ಬಂದಿರುವುದು ವಿಶೇಷ.

    ಈ ಹಿಂದೆ ಚಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ (Ananya Pandey) ಕೂಡ ಬಂದಿದ್ದರು. ಅವರು ಅನೇಕ ವಿಷಯಗಳನ್ನು ಖುಲ್ಲಂ ಖುಲ್ಲ ಮಾತನಾಡಿದ್ದರು. ತಮ್ಮ ಮತ್ತು ವಿಜಯ್ ದೇವರಕೊಂಡ ಜೊತೆಗೆ ಖಾಸಗಿ ಸಂಗತಿಗಳನ್ನೂ ಅವರು ಹಂಚಿಕೊಂಡಿದ್ದರು. ಮಗಳ  ಆ ಮಾತುಗಳಿಗೆಲ್ಲ ಚಂಕಿ ಬೆಂಬಲ ವ್ಯಕ್ತ ಪಡಿಸಿದ್ದರು. ಇದೀಗ ಚಂಕಿ ಬಗ್ಗೆಯೇ ಅಂತಹ ಮಾತುಗಳು ಕೇಳಿ ಬಂದಿವೆ. ಅದೂ ಸ್ವತಃ ಪತ್ನಿಯಿಂದಲೇ ಎನ್ನುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ಗರ್ಲ್ ಫ್ರೆಂಡ್ ಅನನ್ಯಾ ಪಾಂಡೆಗೂ ‘ಲೈಗರ್’ ಸೋಲಿನ ಎಫೆಕ್ಟ್

    ವಿಜಯ್ ದೇವರಕೊಂಡ ಗರ್ಲ್ ಫ್ರೆಂಡ್ ಅನನ್ಯಾ ಪಾಂಡೆಗೂ ‘ಲೈಗರ್’ ಸೋಲಿನ ಎಫೆಕ್ಟ್

    ನನ್ಯಾ ಪಾಂಡೆ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್ ನ ಲೈಗರ್ ಸಿನಿಮಾ ಅಂದುಕೊಂಡಂತೆ ಯಶಸ್ಸು ಕಾಣಲಿಲ್ಲ. ಈ ಸಿನಿಮಾ ರಿಲೀಸ್ ಆಗಿ ಮೂರ್ನಾಲ್ಕು ದಿನದಲ್ಲೇ ನೂರು ಕೋಟಿ ರೂಪಾಯಿ ಕ್ಲಬ್ ಗೆ ಸೇರಲಿದೆ ಎಂಬ ಲೆಕ್ಕಾಚಾರವಿತ್ತು. ಹಾಗಾಗಿಯೇ ವಿಜಯ್ ದೇವರಕೊಂಡ ಧೈರ್ಯದಿಂದಲೇ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಎಲ್ಲ ನಿರೀಕ್ಷೆಯೂ ಹುಸಿ ಆಗಿವೆ.

    ಲೈಗರ್ ಸೋಲನ್ನು ಒಪ್ಪಿಕೊಂಡಿರುವ ವಿಜಯ್ ದೇವರಕೊಂಡ, ತಾವು ಈ ಸಿನಿಮಾಗಾಗಿ ಪಡೆದಿದ್ದ ಸಂಭಾವನೆಯನ್ನು ನಿರ್ಮಾಪಕರಿಗೆ ವಾಪಸ್ಸು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿಗೆ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದೇ ಬಣ್ಣಿಸಲಾಗುತ್ತಿದೆ. ಈ ಸೋಲು ಕೇವಲ ವಿಜಯ್ ದೇವರಕೊಂಡ ಅವರನ್ನು ಮಾತ್ರ ಬಾಧಿಸುತ್ತಿಲ್ಲ, ನಾಯಕಿ ಅನನ್ಯಾ ಪಾಂಡೆ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಇದು ಅವರ ಚೊಚ್ಚಲು ಸಿನಿಮಾವಾಗಿದ್ದರೂ,  ಈ ಸಿನಿಮಾದಿಂದ ಅನನ್ಯಾ ಪಾಂಡೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಎಲ್ಲವೂ ಠುಸ್ ಪಟಾಕಿ ಆಗಿದೆ. ಇದನ್ನೂ ಓದಿ:ಮಿಸ್ ಮ್ಯಾಚ್ ಜೋಡಿ: ಅತೀ ಹೆಚ್ಚು ಟ್ರೋಲ್ ಗೆ ಒಳಗಾದ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್

    ಲೈಗರ್ ಸಿನಿಮಾದ ಅಬ್ಬರ ನೋಡಿ ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾಗೆ ಅನನ್ಯಾ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಲೈಗರ್ ಲತ್ತೆ ಹೊಡೆಯುತ್ತಿದ್ದಂತೆಯೇ ಜ್ಯೂನಿಯರ್ ಅಂಡ್ ಟೀಮ್ ಅನನ್ಯಾ ಅವರನ್ನು ಆಯ್ಕೆ ಮಾಡಿಕೊಳ್ಳದಿರಲು ನಿರ್ಧರಿಸಿದ್ದಾರಂತೆ. ಹಾಗಾಗಿ ಜ್ಯೂನಿಯರ್ ಸಿನಿಮಾದಿಂದ ಅನನ್ಯಾರನ್ನು ಹೊರಹಾಕಲಾಗಿದೆ. ಅಲ್ಲದೇ, ಇನ್ನೂ ಹಲವು ನಿರ್ಮಾಪಕರು ಅನನ್ಯಾಗೆ ಅವಕಾಶ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಮೊದಲ ಸಿನಿಮಾದಲ್ಲೇ ಬ್ರೇಕ್ ಗಾಗಿ ನಿರೀಕ್ಷೆ ಮಾಡುತ್ತಿದ್ದ ಅನನ್ಯಾಗೆ ಈ ಸಾರಿ ಬ್ಯಾಡ್ ಲಕ್ ಎನಬೇಕು ಅಷ್ಟೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ‘ಲೈಗರ್’ ಸಿನಿಮಾಗೆ ಮಿಶ್ರಪ್ರತಿಕ್ರಿಯೆ: 200 ಕೋಟಿ ಆಫರ್ ಟ್ವಿಟ್ ವೈರಲ್

    ವಿಜಯ್ ದೇವರಕೊಂಡ ‘ಲೈಗರ್’ ಸಿನಿಮಾಗೆ ಮಿಶ್ರಪ್ರತಿಕ್ರಿಯೆ: 200 ಕೋಟಿ ಆಫರ್ ಟ್ವಿಟ್ ವೈರಲ್

    ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಲೈಗರ್ ಸಿನಿಮಾ ಬಿಡುಗಡೆಗೂ ಮುನ್ನ ಭಾರೀ ನಿರೀಕ್ಷೆ ಮೂಡಿಸಿತ್ತು. ಬಾಕ್ಸ್ ಆಫೀಸಿನಲ್ಲಿ ಈ ಚಿತ್ರ ಭಾರೀ ಸೌಂಡ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿಯೇ ಈ ಸಿನಿಮಾ ಕೊಳ್ಳಲು ಮುಗಿಬಿದ್ದಿದ್ದರು. ಆದರೆ, ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎನ್ನುತ್ತಿವೆ ಮೂಲಗಳು. ನೋಡುಗರು ಕೂಡ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾಗಿ ರಿಲೀಸ್ ಆದ ಮೊದಲ ದಿನವೇ ಸಿನಿಮಾ ಮುಗ್ಗರಿಸಿದೆ.

    ಈ ನಡುವೆ ವಿಜಯ್ ದೇವರಕೊಂಡ ಮಾಡಿದ್ದ ಟ್ವಿಟ್ ವೊಂದು ಸಖತ್ ವೈರಲ್ ಆಗುತ್ತಿದೆ. ಹಲವು ತಿಂಗಳ ಹಿಂದೆ ಲೈಗರ್ ಸಿನಿಮಾದ ವ್ಯಾಪಾರಕ್ಕೆ ಸಂಬಂಧಿಸಿದಂತೆ ವಿಜಯ್ ದೇವರಕೊಂಡ ಟ್ವಿಟ್ ಮಾಡಿದ್ದರು. ಅದರಲ್ಲಿ ‘ಓಟಿಟಿ ಸಂಸ್ಥೆಯೊಂದು 200 ಕೋಟಿ ರೂಪಾಯಿಗೆ ಲೈಗರ್ ಸಿನಿಮಾ ಕೇಳಿದೆ. ಇದು ಸಣ್ಣ ಮೊತ್ತದ ಹಣ. ಥಿಯೇಟರ್ ನಲ್ಲಿ ನಾವು ನೋಡಿಕೊಳ್ಳುತ್ತೇವೆ’ ಎಂದು ಟ್ವಿಟ್ ಮಾಡಿದ್ದರು. ಆದರೆ, ಈಗಿನ ಬಾಕ್ಸ್ ಆಫೀಸ್ ರಿಪೋರ್ಟ್ ನೋಡಿದರೂ, ಆ ಮೊತ್ತದ ಕಾಲು ಭಾಗವಾದರೂ ದುಡ್ಡು ಬರತ್ತಾ ಎನ್ನುವಂತಾಗಿದೆ. ಇದನ್ನೂ ಓದಿ:ಜಯಶ್ರೀಗೆ ಎರಡು ಮದುವೆ ಆಗ್ತವೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

    ವಿಜಯ್ ದೇವರಕೊಂಡ ಆ ವೇಳೆಯಲ್ಲಿ ಹೆಮ್ಮೆಯಿಂದ ಬರೆದುಕೊಂಡರೋ, ಅಥವಾ ಅಹಂನಿಂದ ಬರೆದುಕೊಂಡರೋ ಬೇರೆ ಮಾತು. ಆದರೆ, ನೆಟ್ಟಿಗರು ಅದೇ ಟ್ವಿಟ್ ತಗೆದುಕೊಂಡು ಈಗ ಗೇಲಿ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡಗೆ ಇಷ್ಟೊಂದು ಕಾನ್ಫಿಡೆನ್ಸ್ ಇರಬಾರದು ಎಂದು ಪಾಠ ಮಾಡಿದ್ದಾರೆ. ಈ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ವಿಜಯ್ ದೇವರಕೊಂಡಗೆ ವಿಜಯ ದೊರೆಯಲಿ ಎಂದೂ ಹಲವರು ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ‘ಲೈಗರ್’ ಚಿತ್ರಕ್ಕೂ ಬಾಯ್ಕಾಟ್ ಬಿಸಿ: ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್

    ವಿಜಯ್ ದೇವರಕೊಂಡ ‘ಲೈಗರ್’ ಚಿತ್ರಕ್ಕೂ ಬಾಯ್ಕಾಟ್ ಬಿಸಿ: ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್

    ವಾರವಷ್ಟೇ ವಿಜಯ್ ದೇವರಕೊಂಡ ಮತ್ತು ಪೂರಿ ಜಗನ್ನಾಥ್ ಕಾಂಬಿನೇಷನ್ ನ ಲೈಗರ್ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಸಿನಿಮಾ ಬಿಡುಗಡೆಗೂ ಮುನ್ನ ಈ ಚಿತ್ರವನ್ನು ಯಾರೂ ನೋಡದಂತೆ ಬಾಯ್ಕಾಟ್ ಅಭಿಯಾನ ಶುರುವಾಗಿದೆ. ಈಗಾಗಲೇ ಟ್ವಿಟರ್ ನಲ್ಲಿ ಬಾಯ್ಕಾಟ್ ಲೈಗರ್ ಟ್ರೆಂಡ್ ಕೂಡ ಆಗಿದೆ.

    ಆಮೀರ್ ಖಾನ್, ಅಕ್ಷಯ್ ಕುಮಾರ್, ಅನುರಾಗ್ ಕಶ್ಯಪ್ ಅವರ ಸಿನಿಮಾಗಳನ್ನು ಕ್ರಮವಾಗಿ ಬಾಯ್ಕಾಟ್ ಮಾಡಿಕೊಂಡೇ ಬಂದಿರುವ ನೆಟ್ಟಿಗರು ಈ ಬಾರಿ ಲೈಗರ್ ಸಿನಿಮಾದ ಹಿಂದೆ ಬಿದ್ದಿದ್ದಾರೆ. ಕಾರಣ ವಿಜಯ್ ದೇವರಕೊಂಡ ಮತ್ತು ಈ ಸಿನಿಮಾವನ್ನು ನಿರ್ಮಾಣ ಮಾಡಿರುವ ಕರಣ್ ಜೋಹಾರ್ ಎಂದು ಹೇಳಲಾಗುತ್ತಿದೆ. ದಕ್ಷಿಣದ ಸಿನಿಮಾಗಳನ್ನು ಕರಣ್ ಜೋಹಾರ್ ಬೆಳೆಯಲು ಬಿಡುತ್ತಿರಲಿಲ್ಲ. ಹಾಗಾಗಿ ಅವರ ಪ್ರೊಡಕ್ಷನ್ ಹೌಸ್ ನಿಂದ ಬಂದಿರುವ ಲೈಗರ್ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕಿದೆ ಎನ್ನುತ್ತಾರೆ ಹಲವರ. ಇದನ್ನೂ ಓದಿ:ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕಾನಿಷ್ಕಾ ಸೋನಿ

    ಅಲ್ಲದೇ ವಿಜಯ್ ದೇವರಕೊಂಡ ಅವರು ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಗ್ಗೆ ಮಾತನಾಡುತ್ತಾ, ಅದು ಕೇವಲ ಆಮೀರ್ ಖಾನ್ ಅವರ ಸಿನಿಮಾವಲ್ಲ. ಆ ಸಿನಿಮಾ ನಿರ್ಮಾಣದ ಹಿಂದೆ 250ಕ್ಕೂ ಹೆಚ್ಚು ಜನರ ಶ್ರಮವಿರುತ್ತದೆ. ಹಾಗಾಗಿ ಬಾಯ್ಕಾಟ್ ಮಾಡಬೇಡಿ ಎಂದು ಆಮೀರ್ ಪರವಾಗಿ ಮಾತನಾಡಿದ್ದರಂತೆ. ಈ ವಿಷಯವಾಗಿಯೂ ಲೈಗರ್ ಸಿನಿಮಾ ಬಾಯ್ಕಾಟ್ ಸಂಕಟವನ್ನು ಅನುಭವಿಸಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ ನಟ ವಿಜಯ್ ದೇವರಕೊಂಡ

    ಅಪ್ಪು ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ ನಟ ವಿಜಯ್ ದೇವರಕೊಂಡ

    ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಲೈಗರ್ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲು ಉದ್ಯಾನ ನಗರಕ್ಕೆ ಆಗಮಿಸಿರುವ ಅವರು, ಮೊದಲಿಗೆ ಅಪ್ಪು ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ಏರ್ ಪೋರ್ಟ್ ನಿಂದ ನೇರವಾಗಿಯೇ ಕಂಠೀರವ ಸ್ಟುಡಿಯೋಗೆ ಆಗಮಿಸಿದ ವಿಜಯ್ ದೇವರಕೊಂಡ, ಭಾವುಕರಾಗಿಯೇ ಅಪ್ಪು ಸಮಾಧಿಗೆ ನಮನ ಸಲ್ಲಿಸಿದರು.

    ಆಗಸ್ಟ್ 25 ರಂದು ದೇಶಾದ್ಯಂತ ರಿಲೀಸ್ ಆಗುತ್ತಿರುವ ಲೈಗರ್ ಸಿನಿಮಾದ ಪತ್ರಿಕಾಗೋಷ್ಠಿ ಮತ್ತು ಪ್ರಿ ರಿಲೀಸ್ ಇವೆಂಟ್ ಇಂದು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ನಟ ವಿಶ್, ನಿರ್ದೇಶಕ ಜಗನ್ನಾಥ್ ಪೂರಿ ಸೇರಿದಂತೆ ಹಲವರು ಬೆಂಗಳೂರಿಗೆ ಆಗಮಿಸಿದ್ದಾರೆ. ಅದಕ್ಕೂ ಮುನ್ನ ಎಲ್ಲರೂ ಅಪ್ಪು ಸಮಾಧಿಗೆ ಬಂದು ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ದೇಶದ ನಾನಾ ಭಾಗಗಳಲ್ಲಿ ಸಿನಿಮಾದ ಪ್ರಮೋಷನ್ ಶುರು ಮಾಡಿದೆ ಚಿತ್ರತಂಡ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಬಾಕ್ಸರ್ ಪಾತ್ರವನ್ನು ನಿರ್ವಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]