Tag: Ananya Kashyap

  • ವೈಭವ್ ಕಣ್ಣಲ್ಲಿ ‘ಬಸ್ರಿಕಟ್ಟೆ’ ಹಾರರ್ ಕಥನ

    ವೈಭವ್ ಕಣ್ಣಲ್ಲಿ ‘ಬಸ್ರಿಕಟ್ಟೆ’ ಹಾರರ್ ಕಥನ

    ಸಾಮಾನ್ಯವಾಗಿ ಹಾರರ್ ಸಿನಿಮಾ ಎಂದಾಕ್ಷಣ ಕಾಡು, ಕತ್ತಲೆ, ದೆವ್ವ ಹೀಗೆ ಅನೇಕ ಅಂಶಗಳು ಕಣ್ಮುಂದೆ ಬರುತ್ತವೆ. ಆದರೆ, ಬಸ್ರಿಕಟ್ಟೆ ಸಿನಿಮಾ ಕೊಂಚ ವಿಭಿನ್ನ. ಇದೂ ಸಸ್ಪೆನ್ಸ್- ಹಾರರ್ ಸಿನಿಮಾವಾದರೂ ರಿಯಲಿಸ್ಟಿಕ್ ಆಗಿ ಮೂಡಿಬಂದಿದೆ ಎಂಬುದು ಚಿತ್ರತಂಡದ ಅನಿಸಿಕೆ.

    ಬಸ್ರಿಕಟ್ಟೆ (Basrikate) ಸಿನಿಮಾಕ್ಕೆ ಯುವ ನಿರ್ದೇಶಕ ವೈಭವ್ ಎಂ (Vaibhav) ಆಕ್ಷನ್ ಕಟ್ ಹೇಳಿದ್ದಾರೆ. ಕರ್ನಾಟಕದಲ್ಲಿರುವ ಖ್ಯಾತ ಸ್ಥಳ ಬಸ್ರಿಕಟ್ಟೆಗೂ ಈ ಚಿತ್ರಕ್ಕೂ ಸಂಬಂಧವಿಲ್ಲ ಎಂಬುದನ್ನು ಮೊದಲೇ ಸ್ಪಷ್ಟಪಡಿಸುತ್ತಾರೆ ವೈಭವ್. “ಈ ಚಿತ್ರದಲ್ಲಿ ಸಿನಿಮ್ಯಾಟಿಕ್ ಫೀಲ್ ಗಿಂತ ನ್ಯಾಚುರಲ್ ಆಗಿ ಮೂಡಿ ಬರಲಿ ಎಂಬ ಕಾರಣಕ್ಕೆ ರಿಯಲಿಸ್ಟಿಕ್ ಆಗಿಯೇ ಶೂಟಿಂಗ್ ಮಾಡಿದ್ದೇವೆ. ಮಂಗಳೂರು, ಚಿಕ್ಕಮಗಳೂರು, ಮೂಡುಬಿದಿರೆ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಮ್ಮ ಚಿತ್ರದ ಟ್ರೇಲರ್ ನೋಡಿದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಟೆಕ್ನಿಕಲ್ ಆಗಿಯೂ ಸಿನಿಮಾ ತುಂಬಾ ಸ್ಟ್ರಾಂಗ್ ಆಗಿದೆ” ಎಂಬುದು ವೈಭವ್ ಅನಿಸಿಕೆ.

    ಕಳೆದ ಹತ್ತು ವರ್ಷಗಳಿಂದ ಹಲವು ನಿರ್ದೇಶಕರ ಬಳಿ ನಿರ್ದೇಶನದ ಪಟ್ಟುಗಳನ್ನು ಕಲಿತಿರುವ ವೈಭವ್, ಕೆಲವು ನಿರ್ಮಾಣ ಸಂಸ್ಥೆಗಳಲ್ಲಿ  ಸಾಕಷ್ಟು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವಿದೆ. ನಂತರ ಕೆಲವು ಕಿರುಚಿತ್ರಗಳನ್ನೂ ತಯಾರು ಮಾಡಿದ್ದಾರೆ. ಇಷ್ಟೆಲ್ಲ ಅನುಭವವನ್ನು ಬೆನ್ನಿಗೆ ಕಟ್ಟಿಕೊಂಡು ಈಗ ಬಸ್ರಿಕಟ್ಟೆ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಕಥೆ, ನಾಟಕ ಮತ್ತು ಬರವಣಿಗೆಯ ಗೀಳು ಹಚ್ಚಿಕೊಂಡಿದ್ದ ವೈಭವ್, ಆಗಲೇ ನಿರ್ದೇಶಕನಾಗುವ ಕನಸು ಕಟ್ಟಿಕೊಂಡಿದ್ದರು. ಆ ಕನಸು ಈಗ ನೆರವೇರಿದೆ. ತನ್ನದೇ ಯುವ ಪ್ರತಿಭೆಗಳ ತಂಡ ಕಟ್ಟಿಕೊಂಡು, ಕಂಟೆಂಟ್ ಸಿನಿಮಾಗಳನ್ನು ಮಾಡುವ ಯೋಜನೆ ವೈಭವ್ ಅವರಿಗಿದೆ. ಅನಾವಶ್ಯಕವಾಗಿ ಖರ್ಚು ಮಾಡದೇ, ಕಡಿಮೆ ಸಮಯದಲ್ಲಿ ಸಿನಿಮಾ ಮಾಡುವ ಕಲೆಗಾರಿಕೆ ಅವರಿಗೆ ಸಿದ್ಧಿಸಿರುವುದರಿಂದ, ಮುಂದೆಯೂ ಅದೇ ರೀತಿಯಲ್ಲಿ ಮುಂದುವರಿಯುವ ಆಲೋಚನೆಯಲ್ಲಿದ್ದಾರೆ ವೈಭವ್.

    ಐಟಿ ಕ್ಷೇತ್ರದ ಮಂದಿ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನಾನಾ ವರ್ಗದ ಜನರಿಗೆ ಟ್ರೇಲರ್ ಸಾಕಷ್ಟು ಇಷ್ಟವಾಗಿದ್ದು, ನವೆಂಬರ್ 3 ರಂದು ಸಿನಿಮಾ ತೆರೆ ಕಾಣಲಿದೆ. ಗೀತಾಂಜಲಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಎನ್ ಪೈ ಈ ಚಿತ್ರವನ್ನು ನಿರ್ಮಿಸಿದ್ದಾರೆ.

    ಕನ್ನಡದ ಕಿರಗೂರಿನ ಗಯ್ಯಾಳಿಗಳು, ಕಾಫಿ ತೋಟ ಸೇರಿದಂತೆ ಮಲಯಾಳಂನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ರಾಹುಲ್ ಮಾದೇವ್ (Rahul Madev)ನಾಯಕ. ಮುಂದಿನ ನಿಲ್ದಾಣ ಸಿನಿಮಾ ಖ್ಯಾತಿಯ ಅನನ್ಯ ಕಶ್ಯಪ್ (Ananya Kashyap) ನಾಯಕಿ. ಉಳಿದಂತೆ ಬಲರಾಜವಾಡಿ, ಕಿರಣ್ ನಾಯ್ಕ್, ಸಿದ್ಲಿಂಗು ಶ್ರೀಧರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಕದ್ರಿ ಮಣಿಕಾಂತ್ ಸಂಗೀತ ಹಾಗೂ ಉಮೇಶ್ ಸಂಕಲನ ಬಸ್ರಿಕಟ್ಟೆ ಚಿತ್ರಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸದ್ಗುರುವಿನೊಂದಿಗೆ ‘ಮುಂದಿನ ನಿಲ್ದಾಣ’ ತಂಡ

    ಸದ್ಗುರುವಿನೊಂದಿಗೆ ‘ಮುಂದಿನ ನಿಲ್ದಾಣ’ ತಂಡ

    ಬೆಂಗಳೂರು: ತೆರೆ ಕಾಣುವ ಮುನ್ನವೇ ಯುವ ನಿರ್ದೇಶಕ ವಿನಯ್ ಭಾರದ್ವಾಜ್ ಅವರ ಮುಂದಿನ ನಿಲ್ದಾಣ ಚಿತ್ರವು ಎಲ್ಲೆಡೆಯೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇದೆ. ಮೊನ್ನೆಯಷ್ಟೇ ರಿಲೀಸ್ ಆದ ಈ ಚಿತ್ರದ ಮನಸೇ ಮಾಯ ಹಾಡು ಯೂಟ್ಯೂಬ್, ಟಿಕ್ ಟಾಕ್ ಗಳಲ್ಲಿ ವೈರಲ್ ಆಗಿದ್ದು ದಿನದಿಂದ ದಿನಕ್ಕೆ ಅದರ ಕಾವು ಏರುತ್ತಾ ಇದೆ. ಇದರ ಜೊತೆಯಲ್ಲಿಯೇ, ಕಾವೇರಿ ತಾಯಿಯ ಒಡಲಿನ ಕಾವನ್ನು ತಗ್ಗಿಸುವ ಪ್ರಯತ್ನಕ್ಕೂ ಚಿತ್ರ ತಂಡವು ಕೈಜೋಡಿಸಿದೆ!

    ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ರಾಧಿಕಾ ನಾರಾಯಣ್, ಪ್ರವೀಣ್ ತೇಜ್ ಹಾಗೂ ಅನನ್ಯಾ ಕಶ್ಯಪ್ ಅವರನ್ನೊಳಗೊಂಡ ತಂಡವು ಕಾವೇರಿ ಕೂಗು ಅಭಿಯಾನ ಮಾಡುತ್ತಿರುವ ಈಶಾ ಫೌಂಡೇಶನ್‍ನ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಭೇಟಿ ಮಾಡಿತು.

    ಮುಂದಿನ ನಿಲ್ದಾಣ ಚಿತ್ರ ತಂಡವು ಸದಾ ಕಾವೇರಿಯ ಹಾಗೂ ಕನ್ನಡದ ನೆಲ, ಜಲ ಹಾಗೂ ಭಾಷೆಯ ಉಳಿವಿಗೆ ಬದ್ಧವಾಗಿದೆ ಎಂಬ ಮಾತನ್ನು ಸದ್ಗುರುವಿನ ಜೊತೆ ಹಂಚಿಕೊಳ್ಳುತ್ತಾ, ಚಿತ್ರ ತಂಡವು ಬೆಂಗಳೂರಿಗೆ ಮರಳಿತು.

  • ಮುಂದಿನ ನಿಲ್ದಾಣದಲ್ಲಿ ಮನಸು ಮಾಯವಾದಂಥಾ ಮೋಹಕ ಹಾಡು!

    ಮುಂದಿನ ನಿಲ್ದಾಣದಲ್ಲಿ ಮನಸು ಮಾಯವಾದಂಥಾ ಮೋಹಕ ಹಾಡು!

    ಈಗಾಗಲೇ ಡಿಫರೆಂಟ್ ಆಗಿರೋ ಪೋಸ್ಟರ್‌ಗಳು ಮತ್ತು ಹಾಡುಗಳ ಮೂಲಕ ‘ಮುಂದಿನ ನಿಲ್ದಾಣ’ ಚಿತ್ರ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಈವರೆಗೂ ಪ್ರತೀ ಹಂತದಲ್ಲಿಯೂ ಹೊಸತನದೊಂದಿಗೆ ಸದ್ದು ಮಾಡುತ್ತಾ ಬಂದಿರೋ ಈ ಚಿತ್ರದ ಒಂದಷ್ಟು ಹಾಡುಗಳು ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿಕೊಂಡಿವೆ. ಇದೀಗ ಮನಸೇ ಮಾಯ ಎಂಬ ಮೆಲೋಡಿ ವೀಡಿಯೋ ಸಾಂಗ್ ಒಂದು ಅನಾವರಣಗೊಂಡಿದೆ. ಒಂದೇ ಸಲಕ್ಕೆ ಮನಸಿಗಿಳಿಯುವಷ್ಟು ಮುದ್ದಾಗಿ ಮೂಡಿ ಬಂದಿರೋ ಈ ಹಾಡೂ ಸಹ ವ್ಯಾಪಕ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ.

    ಮನಸೇ ಮಾಯ ಎಂಬ ಈ ಹಾಡನ್ನು ಸೂರಜ್ ಸಂತೋಷ್ ಹಾಗೂ ವರುಣ್ ಸುನಿಲ್ ಹಾಡಿದ್ದಾರೆ. ಕಿರಣ್ ಕಾವೇರಪ್ಪ ಈ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ಈ ಹಾಡನ್ನು ಮಸಾಲಾ ಕಾಫಿ ಹೆಸರಿನ ತಂಡ ರೂಪಿಸಿದೆ. ಒಂದೇ ಕೇಳುವಿಕೆಯಲ್ಲಿ ಭಿನ್ನವಾದ ಸಂಗೀತದ ಪಟ್ಟುಗಳು ಮತ್ತು ಸೌಂಡಿಂಗ್‍ನಿಂದ ಗಮನ ಸೆಳೆಯುವಂಥಾ ಈ ಹಾಡು ವ್ಯಾಪಕ ಮೆಚ್ಚುಗೆ ಗಳಿಸಿಕೊಂಡು ಸದ್ಯ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡುತ್ತಿದೆ. ಈ ಮೂಲಕವೇ ಮುಂದಿನ ನಿಲ್ದಾಣ ಚಿತ್ರವೂ ಮತ್ತೆ ಪ್ರೇಕ್ಷಕರ ನಡುವೆ ಹರಿದಾಡಲಾರಂಭಿಸಿದೆ.

    ವಿನಯ್ ಭಾರದ್ವಾಜ್ ನಿರ್ದೇಶನ ಮಾಡಿರೋ ಈ ಚಿತ್ರದ ಟೀಸರ್ ಮತ್ತು ಪೋಸ್ಟರ್‍ಗಳೆಲ್ಲವೂ ಸೂಪರ್ ಹಿಟ್ ಆಗಿವೆ. ಈ ಮೂಲಕವೇ ಸದರಿ ಚಿತ್ರ ಬಹನಿರೀಕ್ಷಿತ ಸಿನಿಮಾವಾಗಿಯೂ ನೆಲೆ ಕಂಡುಕೊಂಡಿದೆ. ವಿಶಿಷ್ಟವಾದ ಪ್ರೇಮ ಕಥಾನಕದ ಜೊತೆ ಜೊತೆಗೇ ಗಹನವಾದುದ್ದೇನನ್ನೋ ಹೇಳಲು ಮುಂದಾಗಿರೋ ಈ ಚಿತ್ರದಲ್ಲಿ ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಮತ್ತು ಅನನ್ಯಾ ಕಶ್ಯಪ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಮನಸೇ ಮಾಯ ಎಂಬ ಹಾಡಿನ ಮೂಲಕ ಸೆಳೆದುಕೊಂಡಿರೋ ಮುಂದಿನ ನಿಲ್ದಾಣ ಇಷ್ಟರಲ್ಲಿಯೇ ತೆರೆಗಾಣಲಿದೆ.