Tag: Ananya Bhatt

  • ಅನನ್ಯ ಭಟ್ ಕಂಠದಲ್ಲಿ ‘ಪೆಂಟಗನ್’ ಸಿನಿಮಾದ ಥೀಮ್ ಸಾಂಗ್ ರಿಲೀಸ್

    ಅನನ್ಯ ಭಟ್ ಕಂಠದಲ್ಲಿ ‘ಪೆಂಟಗನ್’ ಸಿನಿಮಾದ ಥೀಮ್ ಸಾಂಗ್ ರಿಲೀಸ್

    ಗುರು ದೇಶಪಾಂಡೆ (Guru Deshpande) ಸಾರಥ್ಯದಲ್ಲಿ ಮೂಡಿ ಬಂದ ‘ಪೆಂಟಗನ್’ ಸಿನಿಮಾದ ಥೀಮ್ ಸಾಂಗ್ (Theme Song) ಇಂದು ರಿಲೀಸ್ ಆಗಿದೆ. ಖ್ಯಾತ ಗಾಯಕಿ ಅನನ್ಯ ಭಟ್ (Ananya Bhatt) ಕಂಠಸಿರಿಯಲ್ಲಿ ಮೂಡಿ ಬಂದ ಗೀತೆಗೆ ಮಣಿಕಾಂತ್ ಕದ್ರಿ (Manikanth Kadri) ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕ ರಾಘು ಶಿವಮೊಗ್ಗ (Raghu Shivamogga) ಸಾಹಿತ್ಯದಲ್ಲಿ ಈ ಹಾಡು ಮೂಡಿ ಬಂದಿದೆ. ಐದು ಕಥೆಗಳನ್ನು ಬೆಸೆಯುವಂತಹ ಮತ್ತು ಆ ಆಶಯವನ್ನು ಹಿಡಿದಿಡುವಂತಹ ಗೀತೆ ಇದಾಗಿದೆ.

    ಈಗಾಗಲೇ ಪೆಂಟಗನ್ (Pentagon) ಸಿನಿಮಾ ಟ್ರೈಲರ್ (Trailer) ರಿಲೀಸ್ ಆಗಿದ್ದು, ದಕ್ಷಿಣ ಭಾರತದ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಟ್ರೈಲರ್ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಟ್ರೈಲರ್ ಲಿಂಕ್ ಅನ್ನು ಸೋಷಿಯಲ್ ಮೀಡಿಯಾಗಳಲ್ಲೂ ಹಂಚಿಕೊಂಡಿದ್ದಾರೆ. ಅದರಲ್ಲೂ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ (Rishabh Shetty), ತೆಲುಗಿನ ಖ್ಯಾತ ನಿರ್ದೇಶಕ ಅನಿಲ್ ರವಿಪುಡಿ (Anil Ravipudi), ನಿರ್ದೇಶಕರಾದ ತರುಣ್ ಸುಧೀರ್, ಶಶಾಂಕ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

    ಐದು ಜನ ನಿರ್ದೇಶಕರು, ಐದು ಕಥೆಗಳು, ಐದು ಜನ ಬರಹಗಾರರು, ಐದು ಹೀರೋಗಳು ಹೀಗೆ ಐದೈದು ವಿಷಯಗಳನ್ನು ಪೆಂಟಗನ್ ಚಿತ್ರದಲ್ಲಿ ಹೇಳಲು ಹೊರಟಿದೆ ಚಿತ್ರತಂಡ. ಎಲ್ಲ ವಯಸ್ಸಿನವರಿಗೂ ಇಷ್ಟವಾಗುವಂತಹ ಕಥೆಗಳನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲಾಗಿದೆ ಎಂದಿದ್ದಾರೆ ಗುರು ದೇಶಪಾಂಡೆ.

    ಪ್ರತಿಭಾವಂತ ನಿರ್ದೇಶಕರುಗಳಾದ ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಹಾಗೂ ಮತ್ತೊಂದು ಕಥೆಗೆ ಗುರು ದೇಶಪಾಂಡೆ ಅವರೇ ನಿರ್ದೇಶನ ಮಾಡಿದ್ದಾರೆ. ಪ್ರಕಾಶ್ ಬೆಳವಾಡಿ, ಕಿಶೋರ್ (Kishore), ರವಿಶಂಕರ್ ಸೇರಿದಂತೆ ಹೆಸರಾಂತ ನಟರೇ ತಾರಾ ಬಳಗದಲ್ಲಿ ಇದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಜನರ ಗಮನ ಸೆಳೆದಿವೆ.

    ಇದು ಪ್ರಯೋಗಾತ್ಮಕ ಸಿನಿಮಾವಲ್ಲ, ಪಕ್ಕಾ ಕಮರ್ಷಿಯಲ್ ಚಿತ್ರ. ನೋಡುಗನಿಗೆ ಏನೆಲ್ಲ ಬೇಕಿದೆಯೋ ಎಲ್ಲವನ್ನೂ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಹೊಸ ಆಲೋಚನೆಯ ನಿರ್ದೇಶಕರು, ಬರಹಗಾರರು ಮತ್ತು ಹೊಸ ಕಲಾವಿದರು ಕೂಡ ಸಿನಿಮಾದ ಭಾಗವಾಗಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಈ ಸಿನಿಮಾ ಹೊಸ ಅನುಭವನ್ನು ನೀಡಲಿದೆ ಎನ್ನುತ್ತಾರೆ ಗುರು ದೇಶಪಾಂಡೆ.

  • ‘ಕಾಂತಾರ’ ಸಿನಿಮಾದ ಸಿಂಗಾರ ಸಿರಿಯೆ ಹಾಡಿನಲ್ಲಿ ರಿಷಭ್ ಶೆಟ್ಟಿ ಮಸ್ತ್ ಮಸ್ತ್

    ‘ಕಾಂತಾರ’ ಸಿನಿಮಾದ ಸಿಂಗಾರ ಸಿರಿಯೆ ಹಾಡಿನಲ್ಲಿ ರಿಷಭ್ ಶೆಟ್ಟಿ ಮಸ್ತ್ ಮಸ್ತ್

    ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ಅವರು ನಿರ್ಮಿಸಿರುವ ಹಾಗೂ ರಿಷಭ್ ಶೆಟ್ಟಿ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ ಹಾಡು ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಅದರಂತೆಯೇ ಈ  ಚಿತ್ರದ ‘ಸಿಂಗಾರ ಸಿರಿಯೆ’ ಎಂಬ ಅದ್ಭುತ ಹಾಡು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿನಲ್ಲಿ ರಿಷಭ್ ಕಂಡು ಅಭಿಮಾನಿಗಳು ಮಸ್ತ್ ಮಸ್ತ್‍ ಎಂದು ಅವರದ್ದೇ ಶೈಲಿಯ ಡೈಲಾಗ್ ಹೇಳುತ್ತಿದ್ದಾರೆ.

    ಅಜನೀಶ್ ಲೋಕನಾಥ್ ಸಂಗೀತ ನೀಡಿ, ಪ್ರಮೋದ್ ಮರವಂತೆ ಬರೆದಿರುವ “ಸಿಂಗಾರ ಸಿರಿಯೆ” ಹಾಡಿನಲ್ಲಿ ಕರುನಾಡ ಸಂಸ್ಕ್ರತಿಯ ಭವ್ಯ ಪರಂಪರೆಯನ್ನು ಮನಮುಟ್ಟುವಂತೆ ತೋರಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ. ಹಲವು ಜನಪದ ನೃತ್ಯಗಳ ಹಿನ್ನೆಲೆಯಲ್ಲಿ ನಾಯಕ, ನಾಯಕಿಗೆ ಪ್ರೇಮದ ವಿಷಯ ತಿಳಿಸುವ ರೀತಿ ಈ ಹಾಡಿನಲ್ಲಿ ಸೊಗಸಾಗಿ ಮೂಡಿಬಂದಿದೆ.  ಅಲ್ಲದೇ ಹಾಡಿನ ಕಾನ್ಸೆಪ್ಟ್ ಕೂಡ ನೋಡುಗರಿಗೆ ಹಿಡಿಸಿದೆ. ಹೀಗಾಗಿ ಈ ಗೀತೆಯನ್ನು ಅಭಿಮಾನಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ:ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

    ವಿಜಯ್ ಪ್ರಕಾಶ್,   ಅನನ್ಯ ಭಟ್ ಹಾಗೂ ಪನ್ನಾರ್ ವಲ್ಟುರ್ ಅವರ ಇಂಪಾದ ಗಾಯನ ಹಾಡಿನ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರ ಅಭಿನಯ ಅದ್ಭುತವಾಗಿದೆ. ಹಾಡು ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವೀಕ್ಷಣೆಯಾಗಿ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಚಿತ್ರ ಯಾವಾಗ ತೆರೆಗೆ ಬರುವುದೊ? ಎಂಬ ಕಾತುರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ಗಿಫ್ಟ್ ಬಾಕ್ಸ್’ ಹಾಡುಗಳು ಬಿಡುಗಡೆ

    ‘ಗಿಫ್ಟ್ ಬಾಕ್ಸ್’ ಹಾಡುಗಳು ಬಿಡುಗಡೆ

    ‘ಗಿಫ್ಟ್ ಬಾಕ್ಸ್’ ಮಾನವ ಕಳ್ಳ ಸಾಗಾಣಿಕೆ ಮಾಡುವ ವ್ಯಕ್ತಿ ಹಾಗೂ ಲಾಕ್ಡ್ ಇನ್ ಸಿಂಡ್ರಮ್ ಎಂಬ ನರರೋಗ ಸಮಸ್ಯೆಯ ಕುರಿತಂತೆ ಕಥಾ ಹಂದರವುಳ್ಳ ಚಿತ್ರ. ರಘು ಎಸ್.ಪಿ. ಈ ಚಿತ್ರದ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗ ಮೈಸೂರಿನ ಒಂದಷ್ಟು ಸಮಾನ ಮನಸ್ಕರೆಲ್ಲ ಸೇರಿ ‘ಗಿಫ್ಟ್ ಬಾಕ್ಸ್’ ಎಂಬ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ಶ್ರೀ ಚಾಮುಂಡೇಶ್ವರಿ ಸ್ಟುಡಿಯೋಸ್ ಆವರಣದಲ್ಲಿ ನೆರವೇರಿತು. ನಿವೃತ್ತ ಪೊಲೀಸ್ ಕಮೀಷನರ್ ಟಿ.ಲೋಕೇಶ್ವರ್, ಪತ್ರಕರ್ತ ಜಿ.ಎನ್.ಮೋಹನ್ ಹಾಗೂ ನಟ ಡಾಲಿ ಧನಂಜಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಗಿಫ್ಟ್ ಬಾಕ್ಸ್ ಹಾಡುಗಳನ್ನು ಬಿಡುಗಡೆಗೊಳಿಸಿದರು. 3 ವರ್ಷಗಳ ಹಿಂದೆ ‘ಪಲ್ಲಟ’ ಎಂಬ ಚಿತ್ರ ನಿರ್ಮಿಸಿ ರಘು ಅವರು ರಾಜ್ಯ ಪ್ರಶಸ್ತಿ ಕೂಡ ಗಳಿಸಿದ್ದರು. ಅಲ್ಲದೆ ಈ ಚಿತ್ರ ಹಲವು ಚಲನಚಿತ್ರೋತ್ಸವಗಳಲ್ಲಿ ಕೂಡ ಪ್ರದರ್ಶನ ಕಂಡಿತ್ತು.

    ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ರಘು ಮುಖ್ಯವಾಗಿ 2 ಟಾಪಿಕ್ ಮೇಲೆ ಈ ಚಿತ್ರಕಥೆ ಸಾಗುತ್ತದೆ. ಹ್ಯೂಮನ್ ಟ್ರಾಪಿಕ್ (ಮಾನವ ಕಳ್ಳ ಸಾಗಾಣಿಕೆ) ಹಾಗೂ ಲಾಕ್ಡ್ ಇನ್ ಸಿಂಡ್ರೋಮ್ ಕಾಯಿಲೆ ಚಿತ್ರದ ಮುಖ್ಯ ಕಥಾವಸ್ತು. ಹ್ಯೂಮನ್ ಟ್ರಾಫಿಕ್ ಮೇಲೆ ಅನೇಕ ಸಿನಿಮಾಗಳು ಬಂದಿದ್ದರೂ ಅದರಲ್ಲಿ ಯಾರೂ ಟಚ್ ಮಾಡಿರದಂಥ ಒಂದು ವಿಷಯವನ್ನು ತೆಗೆದುಕೊಂಡು ಈ ಸಿನಿಮಾ ಮಾಡಿದ್ದೇನೆ. ಮುಗ್ಧ ಯುವಕನೊಬ್ಬ ತನಗರಿವಿಲ್ಲದಂತೆ ಈ ಮಾನವ ಕಳ್ಳ ಸಾಗಾಣಿಕೆದಾರರ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ನಂತರ ಆತನ ಮನಃಸ್ಥಿತಿ ಹೇಗಿರುತ್ತದೆ. ಆತ ತನ್ನ ಫ್ಯಾಮಿಲಿಯನ್ನು ಹೇಗೆ ಫೇಸ್ ಮಾಡಬೇಕಾಗುತ್ತದೆ. ಆ ಜಾಲದಿಂದ ಹೊರಬರಲು ಏನೆಲ್ಲಾ ಪ್ರಯತ್ನ ಮಾಡಿದ ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ. ಗಿಫ್ಟ್ ಬಾಕ್ಸ್ ಇಡೀ ಸಿನಿಮಾದ ಒಂದು ಭಾಗವಾಗಿ ಮೂಡಿಬರುತ್ತದೆ. 38 ದಿನಗಳ ಕಾಲ ಮೈಸೂರಿನ ಚಾಮುಂಡಿ ಬೆಟ್ಟದ ಬಳಿಯ ಹಳ್ಳಿಯೊಂದರಲ್ಲಿ ಶೂಟ್ ಮಾಡಿದ್ದೇವೆ. ಇಡೀ ಸಿನಿಮಾ ಸಿಂಕ್ ಸೌಂಡ್‍ನಲ್ಲಿ ಶೂಟ್ ಆಗಿದೆ. ಅದಕ್ಕೆ ತುಂಬಾ ಸಮಯ ಬೇಕಿರುತ್ತದೆ. ರಿತ್ವಿಕ್ ಮಠದ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಅಮಿತಾ ಕುಲಾಲ್ ಹಾಗೂ ದೀಪ್ತಿ ಮೋಹನ್ ನಾಯಕಿಯರು, ಮುರಳಿ ಗುಂಡಣ್ಣ, ಶಿವಾಜಿರಾವ್ ಜಾಧವ್ ಹಾಗೂ ಪ್ರೊ. ಲಕ್ಷ್ಮಿ ಚಂದ್ರಶೇಖರ್ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು.

    ವಾಸು ದೀಕ್ಷಿತ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಅನನ್ಯಾ ಭಟ್, ಬಿಂದು ಮಾಲಿನಿ, ವಾಸು ದೀಕ್ಷಿತ್ ಹಾಡುಗಳಿಗೆ ದನಿಯಾಗಿದ್ದಾರೆ. ಹಳ್ಳಿ ಚಿತ್ರ ಬ್ಯಾನರ್ ಪರವಾಗಿ ಮಧು ದೀಕ್ಷಿತ್ ಮಾತನಾಡಿ, ಈ ಕಥೆಯನ್ನು ಓದಿದ ನಂತರವೂ ನಮ್ಮನ್ನು ಕಾಡುತ್ತದೆ. ಸಿನಿಮಾ ಕೂಡ ಅದ್ಭುತವಾಗಿ ಮೂಡಿಬಂದಿದೆ ಎಂದು ಹೇಳಿದರು.

    ನಿವೃತ್ತ ಪೊಲಿಸ್ ಅಧಿಕಾರಿ ಪಿ.ಲೋಕೇಶ್ವರ್ ಮಾತನಾಡಿ, ಪ್ರತಿವರ್ಷ ನಮ್ಮ ದೇಶದಲ್ಲಿ ವರ್ಷಕ್ಕೆ ಲಕ್ಷಾಂತರ ಜನ ಮಿಸ್ಸಿಂಗ್ ಆಗುತ್ತಾರೆ. ಅದರಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೇ ಜಾಸ್ತಿ. ಹುಟ್ಟಿದ ಅರ್ಧಗಂಟೆಯಲ್ಲೇ ಮಗು ಮಿಸ್ ಆಗುತ್ತದೆ. ಅಲ್ಲಿಂದಲೇ ಮಿಸ್ಸಿಂಗ್ ಪ್ರಕರಣ ಆರಂಭವಾಗುತ್ತದೆ. ಉತ್ತರ ಕರ್ನಾಟಕದ ಕಡೆ ಬಡತನದ ಕಾರಣದಿಂದ ಪೋಷಕರೇ ತಮ್ಮ ಮಕ್ಕಳನ್ನು ಕಳಿಸಿಕೊಡುತ್ತಾರೆ. ಅಂತಹವರೆಲ್ಲ ಸ್ಲೀಪಿಂಗ್ ಸೆಲ್ ಆಗಿ ಬದುಕುತ್ತಾರೆ. ರಘು ಇದನ್ನೆಲ್ಲಾ ಈ ಸಿನಿಮಾದಲ್ಲಿ ತೋರಿಸಿದ್ದಾರೆ ಎಂದುಕೊಂಡಿದ್ದೇನೆ. ಈ ಕುರಿತು ಜನ ಜಾಗೃತರಾಗಬೇಕು ಎಂದು ಹೇಳಿದರು.

    ನಾನಿಲ್ಲಿ ಸ್ಟಾರ್ ಆಗಿ ಬಂದಿಲ್ಲ, ಒಬ್ಬ ಗೆಳೆಯನಾಗಿ ಶುಭ ಕೋರಲು ಬಂದಿದ್ದೇನೆ ಎಂದು ಡಾಲಿ ಧನಂಜಯ ಹೇಳಿದರು.