Tag: Ananya Bhat

  • ಬುರುಡೆ ಗ್ಯಾಂಗ್‌ ಹೇಳಿದಂತೆ ನಾನು ಮಾಡಿದ್ದೇನೆ – ಎಸ್‌ಐಟಿ ಪ್ರಶ್ನೆಗಳಿಗೆ ಸುಜಾತ ಥಂಡಾ

    ಬುರುಡೆ ಗ್ಯಾಂಗ್‌ ಹೇಳಿದಂತೆ ನಾನು ಮಾಡಿದ್ದೇನೆ – ಎಸ್‌ಐಟಿ ಪ್ರಶ್ನೆಗಳಿಗೆ ಸುಜಾತ ಥಂಡಾ

    – 11 ಗಂಟೆಗಳ ವಿಚಾರಣೆಯಲ್ಲಿ ಸುಜಾತ ಸತ್ಯ ಸ್ಫೋಟ
    – ಬುರುಡೆ ಗ್ಯಾಂಗ್‌ನಿಂದ ಅನನ್ಯಾ ಸೃಷ್ಟಿ
    – ಕೇಸ್ ಹಿಂಪಡೆಯುತ್ತೇನೆ ಎಂದು ಕಣ್ಣೀರು

    ಮಂಗಳೂರು: ದಿನಕ್ಕೊಂದು ಕಥೆ ಹೇಳುತ್ತಾ ಅನನ್ಯಾ ಭಟ್ (Ananya Bhat) ತನ್ನ ಮಗಳು ಎಂದು ಎಲ್ಲೆಡೆ ಸುದ್ದಿಯಾಗಿದ್ದ ಸುಜಾತ ಭಟ್ (Sujatha Bhat) ವಿಶೇಷ ತನಿಖಾ ತಂಡದ ವಿಚಾರಣೆ ಎದುರಿಸಿದ್ದಾರೆ.

    ಎರಡು ದಿನಗಳ ಕಾಲ ನಡೆದ ವಿಚಾರದಲ್ಲಿ ಅನನ್ಯಾ ಭಟ್ ತನ್ನ ಮಗಳು ಎಂದು ದಾಖಲೆ ನೀಡಲಾಗದೆ ಸುಸ್ತಾಗಿದ್ದಾರೆ. ಅನನ್ಯಾ ಭಟ್ ಕಥೆ ಸೃಷ್ಟಿಯ ಹಿಂದೆ ಇದ್ದ ಗ್ಯಾಂಗ್‌ನ ಮುಖವಾಡ ಅನಾವರಣ ಮಾಡಿದ ಸುಜಾತ ಭಟ್ ಹೇಳಿಕೆಯಿಂದ ಬುರುಡೆ ಗ್ಯಾಂಗ್‌ಗೆ ಸಂಕಷ್ಟಕ್ಕೆ ಸಿಲುಕಿದೆ.

    ಬುಧವಾರ  ನಡೆದ ವಿಚಾರಣೆಯಲ್ಲಿ ಅನನ್ಯಾ ಭಟ್ ತನ್ನ ಮಗಳು ಎಂದು ದಾಖಲೆ ನೀಡಲಾಗದೇ ಸುಸ್ತಾಗಿದ್ದಾರೆ. ಅನನ್ಯಾ ಭಟ್ ಕಥೆ ಸೃಷ್ಟಿಯ ಹಿಂದೆ ಇದ್ದ ಗ್ಯಾಂಗ್‌ನ ಮುಖವಾಡವನ್ನ ಸುಜಾತ ಭಟ್ ಅನಾವರಣ ಮಾಡಿದ್ದಾರೆ. ಇದನ್ನೂ ಓದಿ: ʻಬುರುಡೆʼ ಪ್ರಕರಣದಲ್ಲಿ ಚಿನ್ನಯ್ಯನೇ ಎ1 ಹಳೆ ಸೆಕ್ಷನ್ ತೆಗೆದು ಹೊಸ ಸೆಕ್ಷನ್ ಹಾಕಿದ SIT

     

    ಮಂಗಳವಾರ ಕರೆಯದಿದ್ದರೂ ಬೆಳ್ಳಂಬೆಳಗ್ಗೆ ಎಸ್‌ಐಟಿ ಕಚೇರಿಯಲ್ಲಿ ಪ್ರತ್ಯಕ್ಷವಾಗಿದ್ದ ಸುಜಾತಾ ಭಟ್‌ಗೆ ಅಧಿಕಾರಿಗಳು ಸತತ 6 ಗಂಟೆಗಳ ಕಾಲ ಗ್ರಿಲ್ ಮಾಡಿದರು. ಶಿವಮೊಗ್ಗದ ರಿಪ್ಪನ್ ಪೇಟೆ, ಉಡುಪಿಯ ಪರಿಕದ ಪರಿಸರ, ಕೊಡಗಿನ ವಿರಾಜಪೇಟೆ ಲಿಂಕ್ ಸಂಬಂಧ ವಿಚಾರಣೆ ನಡೆಸಿದ್ದ ಎಸ್‌ಐಟಿ ಬುಧವಾರ ಮತ್ತೆ ಪ್ರಶ್ನೆ ಕೇಳಿತು. ಆಟೋದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೆಳ್ತಂಡಿಯ ಎಸ್‌ಐಟಿ ಕಚೇರಿಗೆ ಬಂದಿದ್ದ ಸುಜಾತ ಭಟ್ ತನಿಖಾಧಿಕಾರಿ ಮುಂದೆ ಹೇಳಿಕೆ ದಾಖಲಿಸಿದರು. ಇದನ್ನೂ ಓದಿ: SIT ದಾಳಿ ತಿಳಿದು ತಿಮರೋಡಿ ಎಸ್ಕೇಪ್ – ಅತ್ತ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಮತ್ತೊಂದು ದೂರು

    ಎಸ್‌ಐಟಿ ವಿಚಾರಣೆಯಲ್ಲಿ ಸುಜಾತಾ ಭಟ್ ತಬ್ಬಿಬ್ಬಾಗಿದ್ದಾರೆ. ಅನನ್ಯಾ ಭಟ್ ಸೃಷ್ಟಿ ಬಗ್ಗೆ ಪ್ರಶ್ನಿಸಿ ಎಲ್ಲ ಸತ್ಯವನ್ನೂ ಆಕೆಯ ಬಾಯಿಂದಲೇ ಕಕ್ಕಿಸಿದ್ದಾರೆ. ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲಾಗದೇ ಸುಸ್ತಾದ ಸುಜಾತ ಭಟ್ ನಾನು ಹೇಳಿದ್ದ ಅನನ್ಯಾ ಭಟ್ ಕಥೆ ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ. ನನಗೆ ಬುರುಡೆ ಗ್ಯಾಂಗ್ ಹೇಳಿದಂತೆ ಮಾಡಿದ್ದೇನೆ. ನನ್ನ ಹಿರಿಯರ ಆಸ್ತಿ ನನಗೆ ಬೇಕಿತ್ತು. ಈ ಕಾರಣಕ್ಕೆ ಅನನ್ಯಾ ಭಟ್‌ ಪಾತ್ರ ಸೃಷ್ಟಿಯಾಗಿತ್ತು. ಬೇರೆ ನನಗೆ ಏನು ಗೊತ್ತಿಲ್ಲ. ನನ್ನನ್ನು ಬಿಟ್ಟು ಬಿಡಿ ಎಂದು ಕಣ್ಣೀರು ಹಾಕಿದ್ದಾರೆ. ಕೊಟ್ಟ ದೂರನ್ನು ವಾಪಸ್‌ ಪಡೆಯುವುದಾಗಿಯೂ ಸುಜಾತ ಗೋಗರೆದಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

     

    ಬುಧವಾರ ರಾತ್ರಿ 10 ಗಂಟೆಯ ವೇಳೆ ಸುಜಾತ ಭಟ್‌ ವಿಚಾರಣೆ ಮುಗಿಸಿ ಹೊರ ಬಂದರು. ಈ ವೇಳೆ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ, ನೀವು ಮಾಡಿದ ಸಹಕಾರ ಸಾಕು. ನನ್ನನ್ನು ನೀವು ಫಾಲೋ ಮಾಡುವ ಅಗತ್ಯವಿಲ್ಲ. ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿಟ್ಟು ಹೊರಹಾಕಿ ರಿಕ್ಷಾದಲ್ಲಿ ತೆರಳಿದರು. ಇದನ್ನೂ ಓದಿ: ತಿಮರೋಡಿಯ ಮನೆಯ ಒಳಗಡೆಗೆ ಚಿನ್ನಯ್ಯನಿಗೆ ಇರಲಿಲ್ಲ ಪ್ರವೇಶ!

  • ಬೆಳ್ಳಂಬೆಳಗ್ಗೆ 5 ಗಂಟೆಗೆ ಆಗಮಿಸಿ ಎಸ್‌ಐಟಿ ಅಧಿಕಾರಿಗಳಿಗೆ ಶಾಕ್‌ ಕೊಟ್ಟ ಸುಜಾತ ಭಟ್‌!

    ಬೆಳ್ಳಂಬೆಳಗ್ಗೆ 5 ಗಂಟೆಗೆ ಆಗಮಿಸಿ ಎಸ್‌ಐಟಿ ಅಧಿಕಾರಿಗಳಿಗೆ ಶಾಕ್‌ ಕೊಟ್ಟ ಸುಜಾತ ಭಟ್‌!

    ಮಂಗಳೂರು: ಅನನ್ಯಾ ಭಟ್‌ ನಾಪತ್ತೆ ಪ್ರಕರಣದ (Ananya Bhat Missing Case) ಸೃಷ್ಟಿಕರ್ತೆ ಸುಜಾತ ಭಟ್‌ (Sujatha Bhat) ಬೆಳ್ಳಂಬೆಳಗ್ಗೆ ವಿಶೇಷ ತನಿಖಾ ತಂಡದ (SIT) ಕಚೇರಿಗೆ ಆಗಮಿಸಿ ಅಧಿಕಾರಿಗಳಿಗೆ ಶಾಕ್‌ ನೀಡಿದ್ದಾರೆ.

    ಅನನ್ಯಾ ಭಟ್‌ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಪೊಲೀಸರು ಆ.29 ರಂದು ವಿಚಾರಣೆಗೆ ಹಾಜರಾಗುವಂತೆ ಸುಜಾತ ಭಟ್‌ಗೆ ನೋಟಿಸ್‌ ನೀಡಿದ್ದರು.

    ಶುಕ್ರವಾರ ವಿಚಾರಣೆ ನಿಗದಿಯಾಗಿದ್ದರೂ ಇಂದು ಬೆಳಗ್ಗೆ 5 ಗಂಟೆಗೆ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಇಬ್ಬರು ವಕೀಲರ ಜೊತೆ ಆಗಮಿಸಿದ್ದಾರೆ. ಸುಜಾತ ಭಟ್‌ ಬರುವಾಗ ಅಧಿಕಾರಿಗಳು ನಿದ್ದೆಯಲ್ಲಿದ್ದರು. ಕಚೇರಿಗೆ ಬಂದ ನಂತರ ಪೊಲೀಸರು ಸುಜಾತ ಭಟ್‌ ಅವರನ್ನು ಒಳಗಡೆ ಬರುವಂತೆ ಹೇಳಿದ್ದಾರೆ. ಸದ್ಯ ಈಗ ಸುಜಾತ ಭಟ್‌ ಎಸ್‌ಐಟಿ ಕಚೇರಿಯ ಒಳಗಡೆಯೇ ಇದ್ದಾರೆ. ಇದನ್ನೂ ಓದಿ: ಮಟ್ಟಣ್ಣನವರ್‌ನಿಂದ ಹೋರಾಟ ಹಳ್ಳ ಹಿಡಿಯಿತು ಸೌಜನ್ಯ ಪರ ಹೋರಾಟಗಾರರಲ್ಲೇ ಒಡಕು!

     

    ಮಣಿಪಾಲದಲ್ಲಿ ಎಂಬಿಬಿಎಸ್‌ ಓದುತ್ತಿದ್ದ ಪುತ್ರಿ ಅನನ್ಯಾ ಭಟ್‌ ಧರ್ಮಸ್ಥಳಕ್ಕೆ ಬಂದಾಗ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಠಾಣೆಗೆ ಹೋದಾಗ ಯಾರೂ ನನ್ನ ದೂರನ್ನು ತೆಗೆದುಕೊಂಡಿಲ್ಲ. ಪ್ರಶ್ನೆ ಮಾಡಿದರೆ ನನಗೆ ಧರ್ಮಸ್ಥಳದಲ್ಲಿ ಹೊಡೆಯಲಾಗಿತ್ತು. ಉತ್ಕನನದ ವೇಳೆ ನನ್ನ ಮಗಳ ಮೂಳೆ ಸಿಕ್ಕಿದರೆ ನಾನು ಸನಾತನ ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ಮಾಡುತ್ತೇನೆ ಎಂದು ಸುಜಾತ ಭಟ್‌ ಕಲರ್‌ ಕಲರ್‌ ಕಥೆ ಕಟ್ಟಿದ್ದರು. ಇದನ್ನೂ ಓದಿAI ವೀಡಿಯೋಗೆ ಸಾಕ್ಷಿ ಕೊಡಲು ತಡಬಡಿಸಿದ ಬುರುಡೆ ಸಮೀರ್

    ನಂತರದ ದಿನಗಳಲ್ಲಿ ಒಂದೊಂದು ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿಯ ಹೇಳಿಕೆ ನೀಡುತ್ತಿದ್ದ ಕಾರಣ ಅನನ್ಯಾ ಭಟ್‌ ಪ್ರಕರಣ ನಕಲಿ ಎನ್ನುವುದು ಸಾಬೀತಾಗಿತ್ತು. ಕೊನೆಗೆ ಸುಜಾತ ಭಟ್‌ ನಾನು ಹೇಳುತ್ತಿರುವುದು ಸುಳ್ಳು ಎಂದು ಅಧಿಕೃತವಾಗಿ ತಿಳಿಸಿ ಈ ನಾಪತ್ತೆ ಪ್ರಕರಣಕ್ಕೆ ಅಂತ್ಯ ಹಾಡಿದ್ದರು.

    ಸುಜಾತ ಭಟ್‌ ಅಂತ್ಯ ಹಾಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಮೀರ್‌ ಅನನ್ಯಾ ಭಟ್‌ಗೆ ಸಂಬಂಧಿಸಿದಂತೆ ಎಐ ವಿಡಿಯೋ ರಚಿಸಿ ಬುರುಡೆ ಬಿಟ್ಟಿದ್ದ. ಈ ವಿಡಿಯೋ ಲಕ್ಷಗಟ್ಟಲ್ಲೇ ವ್ಯೂ ಪಡೆದುಕೊಂಡಿತ್ತು ಮತ್ತು ಪ್ರಕರಣಕ್ಕೆ ದೊಡ್ಡ ತಿರುವು ನೀಡಿತ್ತು. ಆದರೆ ಸುಳ್ಳು ಕಥೆ ಕಟ್ಟಿ ದೇವಸ್ಥಾನದ ವಿರುದ್ಧ ಷಡ್ಯಂತ್ರ ನಡೆಸಿದ್ದಕ್ಕೆ ಸುಜಾತ ಭಟ್‌ ವಿರುದ್ಧ ಕೇಸ್‌ ದಾಖಲಿಸುವಂತೆ ಭಾರೀ ಒತ್ತಡ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸುಜಾತ ಭಟ್‌ ಅವರನ್ನು ವಿಚಾರಣೆಗೆ ಬರುವಂತೆ ಸೂಚಿಸಿದ್ದರು.

  • ಅನನ್ಯಾ ಭಟ್‌ ಫೋಟೋ ಕೇಳಿದಾಗ ಮಾಡೆಲ್‌ ಫೋಟೋ ಕಳಿಸಿದ್ದರು ಸುಜಾತ ಭಟ್: ಗಿರೀಶ್‌ ಮಟ್ಟಣ್ಣನವರ್‌

    ಅನನ್ಯಾ ಭಟ್‌ ಫೋಟೋ ಕೇಳಿದಾಗ ಮಾಡೆಲ್‌ ಫೋಟೋ ಕಳಿಸಿದ್ದರು ಸುಜಾತ ಭಟ್: ಗಿರೀಶ್‌ ಮಟ್ಟಣ್ಣನವರ್‌

    – ಫ್ಯಾಕ್ಟ್‌ಚೆಕ್‌ನಲ್ಲಿ ಸುಳ್ಳು ಅಂತಾ ಗೊತ್ತಾಯ್ತು!

    ಮಂಗಳೂರು: ಅನನ್ಯಾ ಭಟ್‌ (Ananya Bhat) ಫೋಟೋ ಕೇಳಿದಾಗ ಸುಜಾತ ಭಟ್ (Sujatha Bhat) ಮಾಡೆಲ್‌ ಫೋಟೋ ಕಳಿಸಿದ್ದಳು‌ ಎಂದು ಗಿರೀಶ್‌ ಮಟ್ಟಣ್ಣನವರ್‌ (Girish Mattannavar) ಹೇಳಿದ್ದಾರೆ.

    ಅನನ್ಯಾ ಭಟ್‌ ಕಟ್ಟು ಕತೆ ಎಂದಿದ್ದ ಸುಜಾತಾ ಭಟ್‌ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ಸುಜಾತ ಭಟ್‌ ಅವರನ್ನು ಭೇಟಿಯಾಗಿದ್ದೆ. ಆಗ, ತಮ್ಮ ಮಗಳ ಮೇಲೆ ಅತ್ಯಾಚಾರ ನಡೆದಿದೆ. ನನಗೆ ನ್ಯಾ ಕೊಡಿಸಿ ಎಂದು ಸುಜಾತ ಭಟ್‌ ಹೇಳಿದ್ದಳು. ಆದರೆ ಮಗಳ ಫೋಟೋ ಕೇಳಿದಾಗ ಮಾಡೆಲ್‌ ಫೋಟೋ ಕಳಿಸಿದ್ದಳು. ಬಳಿಕ ಇದನ್ನೂ ಫ್ಯಾಕ್ಟ್‌ ಚೆಕ್‌ ಮಾಡ್ದೆ, ಆಗ ಸುಳ್ಳು ಎಂದು ಗೊತ್ತಾಯ್ತು. ಅಲ್ಲಿಂದ ನಾನು ಈ ಪ್ರಕರಣದಿಂದ ಅಂತರ ಕಾದುಕೊಂಡೆ ಎಂದಿದ್ದಾರೆ. ಇದನ್ನೂ ಓದಿ: ಅನಾರೋಗ್ಯ ಕಾರಣಕ್ಕೆ ಶನಿವಾರ ವಿಚಾರಣೆಗೆ ಬರಲ್ಲ, ಆ.29ಕ್ಕೆ ಹಾಜರಾಗ್ತೀನಿ: ಎಸ್‌ಐಟಿಗೆ ಸುಜಾತಾ ಭಟ್‌ ಪತ್ರ

    ಸುಜಾತ್ ಭಟ್ ಪದೇ ಪದೇ ಕರೆ ಮಾಡಿ ನ್ಯಾಯ ಕೊಡಿಸಿ ಎಂದು ಹೇಳುತ್ತಿದ್ದರು. ಆಗ ನಾನು ಜಯಂತ್‌ಗೂ ಕೂಡ ಹೇಳಿದ್ದೆ. ಈ ಬಗ್ಗೆ ತನಿಖೆ ನಡೆಯಲಿ, ಸತ್ಯ ಹೊರಗಡೆ ಬರಲಿ ಎಂದಿದ್ದಾರೆ. ಇದನ್ನೂ ಓದಿ: ಗಿರೀಶ್ ಮಟ್ಟಣ್ಣನವರ್ ಚಿತ್ರಕಥೆ, ಸಮೀರ್ ಸ್ಕ್ರೀನ್‌ಪ್ಲೇಗೆ ಬಲಿಯಾದ್ರಾ ಸುಜಾತ ಭಟ್?

  • ಅನಾರೋಗ್ಯ ಕಾರಣಕ್ಕೆ ಶನಿವಾರ ವಿಚಾರಣೆಗೆ ಬರಲ್ಲ, ಆ.29ಕ್ಕೆ ಹಾಜರಾಗ್ತೀನಿ: ಎಸ್‌ಐಟಿಗೆ ಸುಜಾತಾ ಭಟ್‌ ಪತ್ರ

    ಅನಾರೋಗ್ಯ ಕಾರಣಕ್ಕೆ ಶನಿವಾರ ವಿಚಾರಣೆಗೆ ಬರಲ್ಲ, ಆ.29ಕ್ಕೆ ಹಾಜರಾಗ್ತೀನಿ: ಎಸ್‌ಐಟಿಗೆ ಸುಜಾತಾ ಭಟ್‌ ಪತ್ರ

    ಮಂಗಳೂರು: ಅನನ್ಯಾ ಭಟ್‌ ನಾಪತ್ತೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೀಡಿದ್ದ ನೋಟಿಸ್‌ಗೆ ಸುಜಾತಾ ಭಟ್‌ ಪ್ರತಿಕ್ರಿಯೆ ನೀಡಿದ್ದಾರೆ. ಅನಾರೋಗ್ಯ ಸಮಸ್ಯೆ ಕಾರಣಕ್ಕೆ ಆ.29ಕ್ಕೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    2003ರಲ್ಲಿ ಧರ್ಮಸ್ಥಳಕ್ಕೆ ಹೋಗಿ ಕಾಣೆಯಾಗಿದ್ದಾಳೆ. ನನ್ನ ಮಗಳ ವಿಧಿವತ್ತಾದ ಅಂತ್ಯಸಂಸ್ಕಾರ ಮಾಡಲು ಮೃತದೇಹದ ಅಸ್ಥಿಪಂಜರ ಹುಡುಕಿ ಕೊಡಲು ವಿನಂತಿ ಎಂಬಿತ್ಯಾದಿಯಾಗಿ ನೀಡಿದ ದೂರು ಅರ್ಜಿಯು ಎಸ್‌ಐಟಿಗೆ ವರ್ಗಾವಣೆ ಆಗಿದೆ. ಅರ್ಜಿ ವಿಚಾರಣೆಗೆ ಹೆಚ್ಚಿನ ಮಾಹಿತಿಯು ಅಗತ್ಯ ಇರುವುದರಿಂದ ತಾವು ಶನಿವಾರ ವಿಚಾರಣೆಗೆ ಹಾಜರಾಗಬೇಕು ಎಂದು ಎಸ್‌ಐಟಿ ನೋಟಿಸ್‌ ನೀಡಿತ್ತು.

    ಇದಕ್ಕೆ ಪ್ರತಿಕ್ರಿಯಿಸಿರುವ ಸುಜಾತಾ ಭಟ್‌, ಅನಾರೋಗ್ಯದ ಸಮಸ್ಯೆ ಕಾರಣ ನಾನು ಶನಿವಾರ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಆ.29 ಕ್ಕೆ ವಿಚಾರಣೆಗೆ ಹಾಜರಾಗುತ್ತೇನೆ. ಅದಕ್ಕೆ ಅನುಮತಿ ನೀಡುವಂತೆ ಎಂದು ಎಸ್‌ಐಟಿಗೆ ಮನವಿ ಮಾಡಿಕೊಂಡಿದ್ದಾರೆ.

  • ನನ್ನನ್ನು ಕಾರಲ್ಲಿ ಕೂಡಿ ಹಾಕಿ ಹೇಳಿಕೆ ಪಡೆದ್ರು – ಹೊಸ ಕಥೆ ಕಟ್ಟಿದ ಸುಜಾತ ಭಟ್!‌

    ನನ್ನನ್ನು ಕಾರಲ್ಲಿ ಕೂಡಿ ಹಾಕಿ ಹೇಳಿಕೆ ಪಡೆದ್ರು – ಹೊಸ ಕಥೆ ಕಟ್ಟಿದ ಸುಜಾತ ಭಟ್!‌

    ಮಂಗಳೂರು: ನನ್ನನ್ನು ಕಾರಲ್ಲಿ ಕೂಡಿ ಹಾಕಿ ಹೇಳಿಕೆ ಪಡೆದ್ರು ಎಂದು ಸುಜಾತ ಭಟ್ ಹೊಸ ಕಥೆ ಕಟ್ಟಿದ್ದಾಳೆ. ಇಂತವರ ಹೆಸರು ಹೇಳಿ ಅಂತ ಲಾಯರ್ ಒಬ್ಬರು ಒತ್ತಾಯ ಮಾಡಿದ್ರೂ ಎಂದಿದ್ದಾಳೆ.

    ತಿಮರೋಡಿ, ಮಟ್ಟಣ್ಣನವರ್ ಹೆಸರು ಹೇಳೋಕೆ ಹೇಳಿದ್ರು. ನಾವು ಬಚಾವ್ ಮಾಡ್ತಿವಿ ಅಂತ ಹೇಳಿದ್ರು. ಆದ್ರೆ, ಅನನ್ಯ ಭಟ್ ನನ್ನ ಮಗಳೇ, ನಾನು ಎಲ್ಲಾವನ್ನೂ ಎಸ್‌ಐಟಿ ಮುಂದೆ ಹೇಳ್ತೇನೆ. ಆಸ್ತಿ ವಿವಾದ ಇದೆ, ಹಾಗಾಂತ ಇದಕ್ಕೆ ನಾನು ಅದನ್ನ ತರಲ್ಲ. ಸಹಾಯ ಮಾಡ್ತೇನೆ ಅಂತ ಹೇಳಿದ್ರು, ಅದಕ್ಕೆ ಹಾಗಂದೆ ಎಂದಿದ್ದಾಳೆ. ಇದನ್ನೂ ಓದಿ: ನನಗೆ ಅನನ್ಯಾ ಭಟ್ ಅಂತ ಮಗಳಿರೋದು ಸತ್ಯ – ಕ್ಷಣಕ್ಕೊಂದು ದ್ವಂದ್ವ ಹೇಳಿಕೆ ನೀಡ್ತಿರೋ ಸುಜಾತ ಭಟ್

    ಸಂದರ್ಶನವೊಂದರಲ್ಲಿ ಆಸ್ತಿಗಾಗಿ ಅನನ್ಯಾ ಭಟ್‌ ಎಂಬ ಸುಳ್ಳು ಕಥೆ ಕಟ್ಟಿದೆ ಎಂದಿದ್ದಳು. ನನಗೆ ಹೀಗೆ ಸುಳ್ಳು ಹೇಳು ಎಂದು ಕೆಲವರು ಹೇಳಿ ಕೊಟ್ಟಿದ್ದರು. ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಇನ್ನಿತರರು ಹೇಳಿದ್ದರು. ಆಸ್ತಿ ಸಮಸ್ಯೆಯಿಂದ ಹೀಗೆ ಹೇಳಿದ್ದೆ. ಅದಕ್ಕೆ ನಾನು ಹೇಳಿಬಿಟ್ಟೆ ಎಂದು ಒಪ್ಪಿಕೊಂಡಿದ್ದಳು.

    ನಾನು ಟೆನ್ಷನ್‌ನಲ್ಲಿ ಇರುತ್ತೇನೆ. ನನ್ನ ಮಗಳು ಇದ್ದಳು, ಬಲವಂತ ಮಾಡಿಸಿ ಸುಳ್ಳು ಹೇಳಿಕೆ ಪಡೆದಿದ್ದಾರೆ. ಅದಕ್ಕೆ ನಾನು ಹಾಗಂದೆ ಎಂದಿದ್ದಾಳೆ. ಇದನ್ನೂ ಓದಿ: ಆಸ್ತಿಗೋಸ್ಕರ ಅನನ್ಯಾ ಭಟ್ ಕತೆ ಕಟ್ಟಿದ್ದೇನೆ – ತಪ್ಪೊಪ್ಪಿಕೊಂಡ ಸುಜಾತ ಭಟ್‌

  • ಆಸ್ತಿಗೋಸ್ಕರ ಅನನ್ಯಾ ಭಟ್ ಕತೆ ಕಟ್ಟಿದ್ದೇನೆ  –  ತಪ್ಪೊಪ್ಪಿಕೊಂಡ ಸುಜಾತ ಭಟ್‌

    ಆಸ್ತಿಗೋಸ್ಕರ ಅನನ್ಯಾ ಭಟ್ ಕತೆ ಕಟ್ಟಿದ್ದೇನೆ – ತಪ್ಪೊಪ್ಪಿಕೊಂಡ ಸುಜಾತ ಭಟ್‌

    ಮಂಗಳೂರು: ಧರ್ಮಸ್ಥಳದಲ್ಲಿ (Dharmasthala) ಭಾರೀ ಸಂಚಲನ ಸೃಷ್ಟಿಸಿದ್ದ ಅನನ್ಯಾ ಭಟ್‌ (Ananya Bhat) ನಾಪತ್ತೆ ಪ್ರಕರಣ ಇದೀಗ ಸುಳ್ಳು ಎಂದು ಗೊತ್ತಾಗಿದೆ. ಆಸ್ತಿಗಾಗಿ ಇಂತಹ ಸುಳ್ಳು ಕತೆ ಕಟ್ಟಿದೆ ಎಂದು ಸುಜಾತ ಭಟ್‌ (Sujatha Bhat) ಹೇಳಿಕೊಂಡಿದ್ದಾಳೆ.

    ನನಗೆ ಹೀಗೆ ಸುಳ್ಳು ಹೇಳು ಎಂದು ಕೆಲವರು ಹೇಳಿ ಕೊಟ್ಟರು ಎಂದು ಸಂದರ್ಶನವೊಂದರಲ್ಲಿ ಸುಜಾತ ಬಾಯ್ಬಿಟ್ಟಿದ್ದಾಳೆ. ಅನನ್ಯಾ ಭಟ್​ ಅಂತ ನನಗೆ ಮಗಳೇ ಇರಲಿಲ್ಲ. ಇಷ್ಟು ದಿನ ನಾನು ಸುಳ್ಳು ಹೇಳಿದ್ದೇನೆ. ಕೆಲವರು ನನಗೆ ಹೀಗೆ ಸುಳ್ಳು ಹೇಳು ಅಂತ ಹೇಳಿದ್ದರು ಅದಕ್ಕೆ ನಾನು ಹೇಳಿದ್ದೇನೆ ಎಂದಿದ್ದಾಳೆ. ಇದನ್ನೂ ಓದಿ: ನನಗೆ ಅನನ್ಯಾ ಭಟ್‌ ಅನ್ನೋ ಮಗಳೇ ಇರಲಿಲ್ಲ – ಉಲ್ಟಾ ಹೊಡೆದ ಸುಜಾತ ಭಟ್‌

    ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಇನ್ನಿತರರು ಹೇಳಿದ್ದರು. ಆಸ್ತಿ ಸಮಸ್ಯೆಯಿಂದ ಹೀಗೆ ಹೇಳು ಅಂತ ಅವರೆಲ್ಲಾ ಹೇಳಿದ್ದರು. ಅದಕ್ಕೆ ನಾನು ಹೇಳಿಬಿಟ್ಟೆ ಎಂದು ಒಪ್ಪಿಕೊಂಡಿದ್ದಾಳೆ.

    ನಾನು ದುಡ್ಡಿಗೊಸ್ಕರ ಡಿಮ್ಯಾಂಡ್ ಮಾಡಿಲ್ಲ. ನಾನು ಯಾರು ಕೂಡ ದುಡ್ಡು ಕೊಡ್ತೀನಿ ಅಂತ ಹೇಳಲಿಲ್ಲ. ನಮ್ಮ ಆಸ್ತಿ ಜೈನರಿಗೆ ಕೊಟ್ಟಿದ್ದರು. ಆದ್ರೆ, ನನ್ನ ಸಹಿ ಇಲ್ಲದೇ ಆಸ್ತಿಯನ್ನು ಹೇಗೆ ಕೊಟ್ರಿ ಅಂತ ಕೇಳಿದೆ. ನನ್ನ ತಾತನ ಆಸ್ತಿ ಅದು ಮೊಮ್ಮಕ್ಕಳಿಗೆ ಸಿಗಬೇಕಿತ್ತು ಅಷ್ಟೇ, ಅದಕ್ಕೆ ಹೀಗೆ ಮಾಡಿದ್ದೇನೆ ಎಂದಿದ್ದಾಳೆ.

    ನಾನು ಜನರ ಭಾವನೆಗಳ ಜೊತೆಗೆ ಆಟ ಆಡಿಲ್ಲ. ಅವರೆಲ್ಲಾ ಸೇರಿಕೊಂಡು ಪ್ರಚೋದಿಸುವಂತೆ ಮಾಡಿದ್ದರು. ಅನನ್ಯಾ ಭಟ್​ ಅನ್ನೋದೇ ಸುಳ್ಳು. ಧರ್ಮಸ್ಥಳ ದೇವರಿಗೆ ನಾನು ಧಕ್ಕೆ ತಂದಿಲ್ಲ. ನಾನು ಕೇಳುತ್ತಿರುವುದು ನನ್ನ ಆಸ್ತಿ ಅಷ್ಟೇ. ಆಸ್ತಿಗೋಸ್ಕರ ಅನನ್ಯಾ ಭಟ್​ ಕಥೆ ಕಟ್ಟಿದ್ದೇನೆ ಎಂದು ಹೇಳಿದ್ದಾಳೆ. ಇದನ್ನೂ ಓದಿ: ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಒದ್ದು ಒಳಗೆ ಹಾಕಿದ್ದೀವಿ: ಡಿಕೆಶಿ

  • ನನಗೆ ಅನನ್ಯಾ ಭಟ್‌ ಅನ್ನೋ ಮಗಳೇ ಇರಲಿಲ್ಲ – ಉಲ್ಟಾ ಹೊಡೆದ ಸುಜಾತ ಭಟ್‌

    ನನಗೆ ಅನನ್ಯಾ ಭಟ್‌ ಅನ್ನೋ ಮಗಳೇ ಇರಲಿಲ್ಲ – ಉಲ್ಟಾ ಹೊಡೆದ ಸುಜಾತ ಭಟ್‌

    • ಗಿರೀಶ್ ಮಟ್ಟಣ್ಣನವರ್, ಜಯಂತ್ ಒತ್ತಾಯಕ್ಕೆ ಸುಳ್ಳು ಹೇಳ್ದೆ

    ಮಂಗಳೂರು: ಅನನ್ಯಾ ಭಟ್‌ ನಾಪತ್ತೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಧರ್ಮಸ್ಥಳದಲ್ಲಿ ಅನಾಮಿಕನ ದೂರು ಹಾಗೂ ಸುಜಾತ ಭಟ್ ದೂರು ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಏಕಾಏಕಿ ಸುಜಾತ ಭಟ್ ಉಲ್ಟಾ ಹೊಡೆದಿದ್ದಾಳೆ. ‘ನಾನು ಸುಳ್ಳು ಹೇಳಿದ್ದೇನೆ’, ನನಗೆ ಹೀಗೆ ಸುಳ್ಳು ಹೇಳು ಎಂದು ಕೆಲವರು ಹೇಳಿ ಕೊಟ್ಟರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾಳೆ.

    ಸಂದರ್ಶನದಲ್ಲಿ ಅನನ್ಯಾ ಭಟ್​ ಅಂತ ನನಗೆ ಮಗಳೇ ಇರಲಿಲ್ಲ. ಇಷ್ಟು ದಿನ ನಾನು ಸುಳ್ಳು ಹೇಳಿದ್ದೇನೆ. ಕೆಲವರು ನನಗೆ ಹೀಗೆ ಸುಳ್ಳು ಹೇಳು ಅಂತ ಹೇಳಿದ್ದರು ಅದಕ್ಕೆ ನಾನು ಹೇಳಿದ್ದೇನೆ. ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಇನ್ನಿತರರು ಹೇಳಿದ್ದರು. ಆಸ್ತಿ ಸಮಸ್ಯೆಯಿಂದ ಹೀಗೆ ಹೇಳು ಅಂತ ಅವರೆಲ್ಲಾ ಹೇಳಿದ್ದರು. ಅದಕ್ಕೆ ನಾನು ಹೇಳಿಬಿಟ್ಟೆ ಎಂದು ಒಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: Dharmasthala Case | ವಿಚಾರಣೆಗೆ ಹಾಜರಾಗುವಂತೆ ಸುಜಾತ ಭಟ್‌ಗೆ SIT ನೋಟಿಸ್

    ನಾನು ದುಡ್ಡಿಗೊಸ್ಕರ ಡಿಮ್ಯಾಂಡ್ ಮಾಡಿಲ್ಲ. ನಾನು ಯಾರು ಕೂಡ ದುಡ್ಡು ಕೊಡ್ತೀನಿ ಅಂತ ಹೇಳಲಿಲ್ಲ. ನಮ್ಮ ಆಸ್ತಿ ಜೈನರಿಗೆ ಕೊಟ್ಟಿದ್ದರು. ಆದ್ರೆ, ನನ್ನ ಸಹಿ ಇಲ್ಲದೇ ಆಸ್ತಿಯನ್ನು ಹೇಗೆ ಕೊಟ್ರಿ ಅಂತ ಕೇಳಿದೆ. ನನ್ನ ತಾತನ ಆಸ್ತಿ ಅದು ಮೊಮ್ಮಕ್ಕಳಿಗೆ ಸಿಗಬೇಕಿತ್ತು ಅಷ್ಟೇ ಅದಕ್ಕೆ ಹೀಗೆ ಮಾಡಿದ್ದೇನೆ ಎಂದಿದ್ದಾಳೆ.

    ನಾನು ಜನರ ಭಾವನೆಗಳ ಜೊತೆಗೆ ಆಟ ಆಡಿಲ್ಲ. ಅವರೆಲ್ಲಾ ಸೇರಿಕೊಂಡು ಪ್ರಚೋದಿಸುವಂತೆ ಮಾಡಿದ್ದರು. ಅನನ್ಯಾ ಭಟ್​ ಅನ್ನೋದೇ ಸುಳ್ಳು. ಧರ್ಮಸ್ಥಳ ದೇವರಿಗೆ ನಾನು ಧಕ್ಕೆ ತಂದಿಲ್ಲ. ನಾನು ಕೇಳುತ್ತಿರುವುದು ನನ್ನ ಆಸ್ತಿ ಅಷ್ಟೇ. ಆಸ್ತಿಗೋಸ್ಕರ ಅನನ್ಯಾ ಭಟ್​ ಕಥೆ ಕಟ್ಟಿದ್ದೇನೆ ಎಂದು ಹೇಳಿದ್ದಾಳೆ. ಇದನ್ನೂ ಓದಿ: ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಒದ್ದು ಒಳಗೆ ಹಾಕಿದ್ದೀವಿ: ಡಿಕೆಶಿ

  • 9ನೇ ಕ್ಲಾಸ್‌ನಲ್ಲಿದ್ದಾಗಲೇ ಸುಜಾತ ಬಸುರಿಯಾಗಿದ್ದಳು, ತಂದೆ ಅಬಾರ್ಷನ್ ಮಾಡಿಸಿದ್ದರು: ಸಹೋದರ ಸ್ಫೋಟಕ ಹೇಳಿಕೆ

    9ನೇ ಕ್ಲಾಸ್‌ನಲ್ಲಿದ್ದಾಗಲೇ ಸುಜಾತ ಬಸುರಿಯಾಗಿದ್ದಳು, ತಂದೆ ಅಬಾರ್ಷನ್ ಮಾಡಿಸಿದ್ದರು: ಸಹೋದರ ಸ್ಫೋಟಕ ಹೇಳಿಕೆ

    – 40 ವರ್ಷದಲ್ಲಿ ಎರಡು ಮೂರು ಬಾರಿ ಮಾತ್ರ ಉಡುಪಿಗೆ ಬಂದಿದ್ದಾಳೆ
    – ಆಕೆಯ ವರ್ತನೆ, ಜೀವನ ಸರಿ ಇಲ್ಲ

    ಉಡುಪಿ: ಸ್ನೇಹಿತೆಯರ ಜೊತೆ ಧರ್ಮಸ್ಥಳಕ್ಕೆ (Dharmasthala) ಹೋಗಿದ್ದ ನನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ಸುಜಾತ ಭಟ್ (Sujatha Bhat) ವಿಚಾರದಲ್ಲಿ ಈಗ ಒಂದೊಂದೇ ಸತ್ಯಗಳು ಹೊರ ಬರುತ್ತಿವೆ. ಈಗ 9ನೇ ತರಗತಿ ಇದ್ದಾಗಲೇ ಸುಜಾತ ಭಟ್‌ ಆರೇಳು ತಿಂಗಳ ಬಸುರಿ ಆಗಿದ್ದ ವಿಚಾರ ಬೆಳಕಿಗೆ ಬಂದಿದೆ.

    ಅನನ್ಯಾ ಭಟ್‌ (Ananya Bhat) ಫೋಟೋವನ್ನು ಸುಜಾತಾ ಭಟ್ ರಿಲೀಸ್ ಮಾಡುತ್ತಿದ್ದಂತೆ ಸಾಕಷ್ಟು ಹಲ್‌ಚಲ್ ಎದ್ದಿದೆ. ಯಾರದ್ದೋ ಮನೆಯ ಸೊಸೆ ಫೋಟೋ ತೋರಿಸಿ ತಮ್ಮ ಮಗಳು ಎನ್ನುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ವಸಂತಾ ಎಂಬುವವರ ಸಹೋದರ ನನ್ನ ತಂಗಿ ಫೋಟೋ ಬಳಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದರು. ಇದೀಗ ಸ್ವತಃ ಸುಜಾತ ಭಟ್ ಸಹೋದರನೇ ಪಬ್ಲಿಕ್ ಟಿವಿಗೆ ಪ್ರತಿಕ್ರಿಸಿದ್ದು, ಆಕೆಗೆ ಮಗಳು ಇರಲು ಸಾಧ್ಯವೇ ಇಲ್ಲ ಎಂದಿದ್ದಾರೆ.

    ಸಹೋದರ ತಮ್ಮ ಹೆಸರು ಹಾಗೂ ಮುಖವನ್ನು ಬಹಿರಂಗಪಡಿಸಬಾರದು ಎಂದು ಮಾಧ್ಯಮಗಳಿಗೆ ಷರತ್ತು ವಿಧಿಸಿ ಹೇಳಿಕೆ ನೀಡಿದ್ದರಿಂದ ಅವರ ಹೆಸರನ್ನು ಇಲ್ಲಿ ಪ್ರಕಟಿಸುತ್ತಿಲ್ಲ. ಇದನ್ನೂ ಓದಿ: Exclusive ಸುಜಾತ ಭಟ್‌ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್‌

     

    ಸಹೋದರ ಹೇಳಿದ್ದೇನು?
    ಸುಜಾತ ಭಟ್ ಒಂಬತ್ತನೇ ತರಗತಿ ಓದುತ್ತಿದ್ದಾಗಲೇ ಮನೆಯಿಂದ ಓಡಿ ಹೋಗಿದ್ದಳು. ಏಳೆಂಟು ತಿಂಗಳ ಬಸುರಿಯಾದ ವಿಚಾರ ಗೊತ್ತಾದ ನಂತರ ನನ್ನ ತಂದೆ ಕ್ಲಿನಿಕ್‌ನಲ್ಲಿ ಅಬಾರ್ಷನ್ ಮಾಡಿಸಿದ್ದರು. ನಮ್ಮ ಕುಟುಂಬದೊಂದಿಗೆ ಆಕೆ ಸಂಪರ್ಕದಲ್ಲಿ ಇಲ್ಲ. ಕೆಲ ವರ್ಷದ ಹಿಂದೆ ಬಂದಾಗ ಶಿವಮೊಗ್ಗದ ರಿಪ್ಪನ್‌ ಪೇಟೆಯಲ್ಲಿ ಯಾರದ್ದೋ ಜೊತೆಗೆ ಇದ್ದೇನೆ. ನಂತರ ಶಿವಮೊಗ್ಗದಿಂದ ಬೆಂಗಳೂರಿನಲ್ಲಿ ಈಗ ನೆಲೆಸಿದ್ದೇನೆ ಎಂದು ಹೇಳಿದ್ದಳು.

    ಕಳೆದ 40 ವರ್ಷದಲ್ಲಿ ಎರಡು ಮೂರು ಬಾರಿ ಮಾತ್ರ ಉಡುಪಿಗೆ (Udupi) ಬಂದಿದ್ದಳು. ಎರಡು ಬಾರಿ ಕಾರಿನ ಚಾಲಕನ ಜೊತೆ ಉಡುಪಿಗೆ ಬಂದಾಗ ನಾನು ಈಗ ಕೋಟ್ಯಾಧೀಶೆ ಎಂದು ಕುಟುಂಬದ ಮುಂದೆ ಹೇಳಿಕೊಳ್ಳುತ್ತಿದ್ದಳು. ಸಹೋದರಿಗೆ ಅನನ್ಯ ಭಟ್ ಎಂಬ ಮಗಳು ಇರಲು ಸಾಧ್ಯವೇ ಇಲ್ಲ. ಮದುವೆಯಾದ ಬಗ್ಗೆ ಮತ್ತು ಮಗಳು ಇರುವ ಬಗ್ಗೆ ಒಂದು ಬಾರಿ ನಮ್ಮ ಬಳಿ ಹೇಳಿಲ್ಲ.

    ಧರ್ಮಸ್ಥಳದವರಿಂದ ನಮಗೆ ಯಾವುದೇ ಅನ್ಯಾಯವಾಗಿಲ್ಲ. ನಮ್ಮ ಚಿಕ್ಕಪ್ಪ ನಮ್ಮ ಜಮೀನನ್ನು ಧರ್ಮಸ್ಥಳದವರಿಗೆ ದಾನ ಕೊಟ್ಟಿದ್ದಾರೋ ಮಾರಿದ್ದಾರೋ ಗೊತ್ತಿಲ್ಲ. ಆ ಕಾಲದಲ್ಲಿ ನಮ್ಮ ತಂದೆಗೆ ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಆ ಹಣದಲ್ಲಿ ನಾವು ಮನೆ ಕಟ್ಟಿ ವಾಸ ಮಾಡುತ್ತಿದ್ದೇವೆ. ಸುಜಾತ ಹೇಳುತ್ತಿರುವ ಅನಿಲ್ ಭಟ್ ಯಾರು ಎನ್ನುವುದು ನಮಗೆ ಗೊತ್ತಿಲ್ಲ. ರಂಗಪ್ರಸಾದ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ.

    ವಿಶೇಷ ತನಿಖಾ ತಂಡದ ಮುಂದೆ ನಾನು ಸುಜಾತ ಬಗ್ಗೆ ಹೇಳಿಕೆ ನೀಡಲು ಸಿದ್ಧನಿದ್ದೇನೆ. ಆದರೆ ನನ್ನ ಕೆಲಸ ಬಿಟ್ಟು ಹೇಳಿಕೆ ನೀಡುವುದಿಲ್ಲ. ರಜಾ ದಿನದಲ್ಲಿ ಕರೆದರೆ ನಾನು ಹೇಳಿಕೆ ನೀಡುತ್ತೇನೆ. ಪೊಲೀಸರು ನನಗೆ ಸಂಬಳ ನೀಡಿದರೆ ನಾನು ಬಂದು ಹೇಳಿಕೆ ಕೊಡುತ್ತೇನೆ.

    ಸುಜಾತ ಪರೀಕಾಕ್ಕೆ ಹೋಗಿ ಜಾಗದ ಬಗ್ಗೆ ವಿಚಾರಣೆ ಮಾಡುತ್ತಿದ್ದಳು ಎಂಬ ಮಾಹಿತಿ ಸಿಕ್ಕಿತ್ತು. ಆಕೆಯ ವರ್ತನೆ ಮತ್ತು ಜೀವನ ಸರಿ ಇಲ್ಲ. ಮನೆ ಬಿಟ್ಟು ಓಡಿ ಹೋಗಿದ್ದವಳನ್ನು ನಾವೇ ಕರೆದುಕೊಂಡು ಬಂದು ಕೂಡಿ ಹಾಕಿ ಬುದ್ದಿ ಹೇಳಿದ್ದೆವು. ಬುದ್ದಿ ಹೇಳಿದ ನಂತರವೂ ಆಕೆ ಬದಲಾಗಲಿಲ್ಲ, ಮತ್ತೆ ಓಡಿ ಹೋಗಿದ್ದಳು.

  • Exclusive | ಅನನ್ಯಾ ಭಟ್ ಎಂಬಿಬಿಎಸ್ ಓದಿಲ್ಲ, ಇದೆಲ್ಲ `ಬುರುಡೆ’: ಮಹೇಶ್ ಠಾಕೂರ್

    Exclusive | ಅನನ್ಯಾ ಭಟ್ ಎಂಬಿಬಿಎಸ್ ಓದಿಲ್ಲ, ಇದೆಲ್ಲ `ಬುರುಡೆ’: ಮಹೇಶ್ ಠಾಕೂರ್

    – ಸುಜಾತಾ ಭಟ್ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆಂದು ಆಕ್ಷೇಪ

    ಉಡುಪಿ: ಧರ್ಮಸ್ಥಳದಲ್ಲಿ (Dharmasthala) ನಾಪತ್ತೆಯಾಗಿದ್ದಾರೆ ಎನ್ನಲಾದ ಅನನ್ಯಾ ಭಟ್ (Ananya Bhat) ಎಂಬಿಬಿಎಸ್ ಓದೇ ಇಲ್ಲ, ಇದೆಲ್ಲ ಕಟ್ಟುಕಥೆಯೆಂದು ಪರ್ಕಳದ ನಗರಸಭೆ ಮಾಜಿ ಸದಸ್ಯ ಮಹೇಶ್ ಠಾಕೂರ್ (Mahesh Thakur) ಹೇಳಿದ್ದಾರೆ.

    ತಮ್ಮ ಪುತ್ರಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎಂಬ ಸುಜಾತಾ ಭಟ್ ಆರೋಪ ಕುರಿತು `ಪಬ್ಲಿಕ್ ಟಿವಿ’ ಜೊತೆಗೆ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: Exclusive | ಧರ್ಮಸ್ಥಳ ಪ್ರಕರಣದ‌ ಅನಾಮಿಕನ ಹುಟ್ಟೂರಲ್ಲಿ ʻಪಬ್ಲಿಕ್‌ ಟಿವಿʼ – ಮಾಸ್ಕ್‌ ಮ್ಯಾನ್‌ ಊರು ಯಾವ್ದು? ಓದಿದ್ದೇನು?

    ಅನನ್ಯಾ ಭಟ್ ನನ್ನ ಮಗಳು ಎಂದು ಸುಜಾಜಾ ಭಟ್ ಹೇಳುತ್ತಿದ್ದಾರೆ. 2003ರಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಮಾಡುತ್ತಿರುವ ಬಗ್ಗೆಯೂ ಹೇಳಿದ್ದರು. ಈ ಬಗ್ಗೆ ನಾನು ಕೂಲಂಕುಷವಾಗಿ ಹೊರವಲಯದಲ್ಲಿ ಪರಿಶೀಲಿಸಿದಾಗ ಇದು ಅಕ್ಷರಶಃ ಸುಳ್ಳು ಎಂದು ತಿಳಿಯಿತು. ಅಲ್ಲಿ ವಿಚಾರಿಸಿದಾಗ ಆ ಹೆಸರಿನ ವಿದ್ಯಾರ್ಥಿ ಎಂಬಿಬಿಎಸ್ ಮಾಡ್ತಿರಲಿಲ್ಲ ಎಂದು ತಿಳಿಯಿತು ಅಂತ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಜೀವಕ್ಕೆ ಹಾನಿಯಾದ್ರೆ ರಾಜ್ಯ ಸರ್ಕಾರ, ಇಡೀ ಬಿಜೆಪಿ ಹೊಣೆ: ತಿಮರೋಡಿ ಫಸ್ಟ್‌ ರಿಯಾಕ್ಷನ್‌

    ಇಷ್ಟು ದೊಡ್ಡ ಕ್ಷೇತ್ರದ ಬಗ್ಗೆ ಹಾಗೂ ನಮ್ಮ ಊರಿನ ಪಕ್ಕದಲ್ಲಿರುವ ಉಪಾಧ್ಯಾಯ ಬಗ್ಗೆ ಹೇಳುತ್ತಿರುವುದನ್ನು ಗಮನಿಸಿದಾಗ ಇದು ಕಟ್ಟುಕಥೆಯೆಂದು ಗೊತ್ತಾಗುತ್ತದೆ. ಇಲ್ಲದ ಮಗಳನ್ನು ಸೃಷ್ಟಿಸಿ, ಪವಿತ್ರ ಕ್ಷೇತ್ರದ ಮೇಲೆ ಆರೋಪ ಮಾಡಿರುವುದೆಲ್ಲ ಸುಳ್ಳು. ಇದನ್ನು ಯಾರೂ ಸಹ ನಂಬಬಾರದು. ಇದನ್ನು ವಿರೋಧಿಸಬೇಕು. ಇದು ಸರಿಯಲ್ಲ ಎಂದು ನಾವು ಮನೆಯಲ್ಲಿ ಕೂತು ಹೇಳೋದಲ್ಲ. ಗಂಟಾಘೋಷವಾಗಿ ಇದು ಸುಳ್ಳು ಎಂದು ಹೇಳಬೇಕು ಎಂದಿದ್ದಾರೆ.

    ಸುಜಾತ ಭಟ್ ಅವರು ತುಂಬಾ ವಯಸ್ಸಾದವರು, ಅವರಿಗೆ ವಯಸ್ಸಿನ ಸಮಸ್ಯೆಗಳಿರಬಹುದು. ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯು ಇನ್ನೊಂದು ಬಾರಿ ನೀಡಿದ ಹೇಳಿಕೆಗೆ ಸರಿ ಹೊಂದುತ್ತಿಲ್ಲ. ಆದ್ದರಿಂದ ಅವರು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ. ಅವರು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಹೇಳಿದ್ದಾರೆ.

    ಸುಜಾತಾ ಭಟ್ ಹೇಳುತ್ತಿರುವುದೆಲ್ಲ ಕಟ್ಟುಕಥೆ. ಪರ್ಕಳದ ನಿವಾಸಿಯಾಗಿ ಹಾಗೂ ಮಾಜಿ ನಗರಸಭೆಯ ಸದಸ್ಯನಾಗಿದ್ದರಿಂದ ನನಗೆ ಇಲ್ಲಿನ ವಿಚಾರ ತಿಳಿದಿದೆ. ಇವೆಲ್ಲವು ಮುಂದೆ, ಹಿಂದೆ ಇಲ್ಲದ ಕಟ್ಟುಕಥೆ ಅಂತ ಹೇಳಿದ್ದಾರೆ.

  • ಅನನ್ಯಾ ಭಟ್ ಕೇಸ್ ಎಸ್‌ಐಟಿಗೆ ಹಸ್ತಾಂತರ

    ಅನನ್ಯಾ ಭಟ್ ಕೇಸ್ ಎಸ್‌ಐಟಿಗೆ ಹಸ್ತಾಂತರ

    ಬೆಂಗಳೂರು: ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣದ (Ananya Bhat Case) ತನಿಖೆಯನ್ನು ಅಧಿಕೃತವಾಗಿ ಎಸ್‌ಐಟಿಗೆ (SIT) ಹಸ್ತಾಂತರಿಸಲಾಗಿದೆ.

    ಡಿಜಿ & ಐಜಿಪಿ ಆದೇಶದಂತೆ ಮುಂದಿನ ವಿಚಾರಣೆಗಾಗಿ ಅನನ್ಯಾ ಭಟ್ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.

    2003ರಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಅನನ್ಯ ಭಟ್ ಕಾಣೆಯಾಗಿದ್ದ ಬಗ್ಗೆ ತಾಯಿ ಸುಜಾತ ಭಟ್ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ದೂರು ಅರ್ಜಿಯ ತನಿಖೆಯನ್ನು ಎಸ್‌ಐಟಿಗೆ ಹಸ್ತಾಂತರಿಸಿ ಆದೇಶಿಸಲಾಗಿದೆ.