Tag: anantnag

  • ಕಾಶ್ಮೀರದ ಹಲವೆಡೆ ಭದ್ರತಾ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ – ಇದುವರೆಗೆ 175ಕ್ಕೂ ಹೆಚ್ಚು ಮಂದಿ ವಶಕ್ಕೆ

    ಕಾಶ್ಮೀರದ ಹಲವೆಡೆ ಭದ್ರತಾ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ – ಇದುವರೆಗೆ 175ಕ್ಕೂ ಹೆಚ್ಚು ಮಂದಿ ವಶಕ್ಕೆ

    – ಉಗ್ರರಿಗೆ ಸ್ಥಳೀಯ ಮಟ್ಟದಲ್ಲಿ ಸಹಾಯ ಮಾಡುತ್ತಿದ್ದ ಹಿನ್ನೆಲೆ ವಶಕ್ಕೆ
    – 24 ಗಂಟೆಯಲ್ಲಿ ಐವರು ಉಗ್ರರ ಮನೆ ಧ್ವಂಸ

    ಶ್ರೀನಗರ: ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನೆತ್ತರು ಹರಿಸಿದ್ದ ಉಗ್ರರ ವಿರುದ್ಧ ಭಾರತೀಯ ಸೇನೆಯ (Indian Army) ಕಾರ್ಯಾಚರಣೆ ಶುರುವಾಗಿದೆ. ಕುಲ್ಗಾಮ್ ಜಿಲ್ಲೆಯ ಮುತಲ್ಹಾಮಾ ಗ್ರಾಮದಲ್ಲಿ ಉಗ್ರ ಝಾಕೀರ್ ಅಹ್ಮದ್ ಗಣಿ, ಶೋಪಿಯಾನ್‌ನ ಚೋಟಿಪೋರಾ ಗ್ರಾಮದಲ್ಲಿ ಎಲ್‌ಇಟಿ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟೆ ಉಗ್ರನ ಮನೆಯನ್ನು ನೆಲಸಮಗೊಳಿಸಲಾಗಿದೆ. ಪುಲ್ವಾಮಾದ ಮರ‍್ರಾನ್ ಪ್ರದೇಶದಲ್ಲಿ ಅಹ್ಸಾನ್ ಉಲ್ ಹಕ್ ಮನೆ ಸ್ಫೋಟಿಸಿ ನಿನ್ನೆಯಷ್ಟೇ ನೆಲಸಮ ಮಾಡಲಾಗಿತ್ತು.

    ಇನ್ನೂ ಉಗ್ರರಿಗೆ ಹಣಕಾಸು ಸಹಾಯ ಮಾಡಿರುವ ಶಂಕೆಯಲ್ಲಿ ಅನಂತನಾಗ್ (Anantnag) ಜಿಲ್ಲೆಯಲ್ಲಿ 175 ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದೇ ವೇಳೆ ಕುಪ್ವಾರದಲ್ಲಿ ಕೂಂಬಿಂಗ್ ವೇಳೆ 8 ಎಕೆ 47 ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಲಂಡನ್‌ನಲ್ಲಿ ಭಾರತೀಯರ ಪ್ರತಿಭಟನೆ ವೇಳೆ ಕತ್ತು ಕೊಯ್ಯುವ ಸನ್ನೆ ಮಾಡಿದ ಪಾಕ್ ಅಧಿಕಾರಿ

    ಇನ್ನೂ ಪಾಕಿಸ್ತಾನ ಪ್ರಜೆಗಳು ದೇಶ ತೊರೆಯಲು ಕೇಂದ್ರ ಸರ್ಕಾರ 48 ಗಂಟೆ ಗಡುವು ನೀಡಿತ್ತು. ಈ ಬೆನ್ನಲ್ಲೇ ಭಾರತಕ್ಕೆ ಭೇಟಿ ನೀಡಿದ ಒಟ್ಟು 191 ಪಾಕಿಸ್ತಾನಿ ಪ್ರಜೆಗಳು ಪಂಜಾಬ್‌ನ ಅಮೃತಸರದ ಅಟ್ಟಾರಿ-ವಾಘಾ ಭೂಮಾರ್ಗದ ಮೂಲಕ ವಾಪಸ್ ಮರಳಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ 287 ಭಾರತೀಯ ಪ್ರಜೆಗಳು ಸಹ ಹಿಂತಿರುಗಿದ್ದಾರೆ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕದಲ್ಲಿರುವ 98 ಜನ ಪಾಕಿಸ್ತಾನ ಪ್ರಜೆಗಳಿಗೂ ದೇಶ ತೊರೆಯುವಂತೆ ಸೂಚಿಸಲಾಗಿದೆ.

    ಈ ಮಧ್ಯೆ, ವಾಘಾ ಗಡಿ ಬಂದ್ ಆದ ಕಾರಣ ಪಾಕ್ ವಧು-ರಾಜಸ್ಥಾನದ ವರ ಮದುವೆ ಅತಂತ್ರಗೊಂಡಿದೆ. ಈ ಮಧ್ಯೆ, ಉಗ್ರರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ಮುಂದುವರಿದಿವೆ. ಇದನ್ನೂ ಓದಿ: ಪಾಕಿಸ್ತಾನದ ಲಾಹೋರ್‌ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ – ರನ್‌ವೇ ಬಂದ್‌, ವಿಮಾನಗಳ ಹಾರಾಟ ಸ್ಥಗಿತ

  • ಕಮರಿಗೆ ಉರುಳಿದ ಕಾರು – ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ದುರ್ಮರಣ!

    ಕಮರಿಗೆ ಉರುಳಿದ ಕಾರು – ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ದುರ್ಮರಣ!

    ಶ್ರೀನಗರ: ಜಮ್ಮು-ಕಾಶ್ಮೀರದ (Jammu And Kashmir) ಅನಂತ್‌ನಾಗ್‌ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ (Car Accident) ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿರುವ ಘಟನೆ ನಡೆಸಿದೆ.

    ಟಾಟಾ ಸುಮೋ ಕಾರೊಂದು ಕಮರಿಗೆ ಉರುಳಿದ್ದು, ಐವರು ಮಕ್ಕಳು ಸೇರಿ 8 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ. ಜಮ್ಮು-ಕಾಶ್ಮೀರದ ದಕ್ಸುಮ್‌ ಪ್ರದೇಶದಲ್ಲಿ ಕಾರು ನಿಯಂತ್ರಣ ತಪ್ಪಿ, ಕಮರಿಗೆ ಉರುಳಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ರಾಮನಗರ ಇತಿಹಾಸ ಅಳಿಸುವ ಕೆಲಸ: ನಿಖಿಲ್

    ದಕ್ಸುಮ್‌ ಪ್ರದೇಶದಿಂದ ಸುಮಾರು 20 ಕಿಮೀ ದೂರದಲ್ಲಿರುವ ಆರ್ಶುನ್‌ ಹಟ್‌ ಎಂಬ ಪ್ರದೇಶದಲ್ಲಿ ಕಾರು ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿದೆ. ಕಾರು ಕಣಿವೆಗೆ ಉರುಳುತ್ತಲೇ ಅವರ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಇನ್ನೂ ಕಾರನ್ನು ಮೇಲಕ್ಕೆ ಎತ್ತಿಲ್ಲ. ಶವಗಳನ್ನು ಕೂಡ ಮೇಲೆ ಎತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಮೃತರ ಕುರಿತು ಕೂಡ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Paris Olympics 2024: ಭಾರತದ ಮನು ಭಾಕರ್‌ ಫೈನಲ್‌ಗೆ ಎಂಟ್ರಿ – 20 ವರ್ಷಗಳ ಬಳಿಕ ವಿಶೇಷ ಸಾಧನೆ!

    ಜಮ್ಮು-ಕಾಶ್ಮೀರವು ಕಣಿವೆ ಪ್ರದೇಶವಾದ ಕಾರಣ ವಾಹನಗಳು ಹೆಚ್ಚಾಗಿ ಕಣಿವೆಗೆ ಉರುಳುತ್ತವೆ. ರಾಜೌರಿ ಜಿಲ್ಲೆಯಲ್ಲಿ ಕಳೆದ ಜೂನ್‌ನಲ್ಲಿ ಸೇನೆಯ ವಾಹನವೊಂದು ಕಂದಕಕ್ಕೆ ಉರಳಿ ಒಬ್ಬ ಯೋಧ ಮೃತಪಟ್ಟಿದ್ದರು ಹಾಗೆಯೇ, ನಾಲ್ವರು ಸೈನಿಕರು ಗಾಯಗೊಂಡಿದ್ದರು. ಗಾಯಗೊಂಡಿರುವ ಯೋಧರನ್ನು ಸೇನೆಯ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ನೀಡಲಾಗಿತ್ತು. ಇದನ್ನೂ ಓದಿ: ನಾಯಿ ಸ್ವಲ್ಪ ಟಚ್‌ ಆದ್ರೂ ಮಸೀದಿಯೊಳಕ್ಕೆ ಹೋಗಲ್ಲ, ಅಂತಹದ್ದರಲ್ಲಿ ಮಾಂಸ ತರೋಕಾಗುತ್ತಾ? – ಅಬ್ದುಲ್‌ ರಜಾಕ್‌

  • ಉಗ್ರರ ಸುರಂಗವನ್ನು ಭೇದಿಸಿದ ಭದ್ರತಾ ಪಡೆ – ಅನಂತ್‌ನಾಗ್‌ನಲ್ಲಿ ಗುಂಡಿನ ಚಕಮಕಿ

    ಉಗ್ರರ ಸುರಂಗವನ್ನು ಭೇದಿಸಿದ ಭದ್ರತಾ ಪಡೆ – ಅನಂತ್‌ನಾಗ್‌ನಲ್ಲಿ ಗುಂಡಿನ ಚಕಮಕಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಅನಂತ್‌ನಾಗ್‌ನಲ್ಲಿ (Anantnag) ಭಾನುವಾರ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಉಗ್ರರು (Terrorists) ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಭದ್ರತಾ ಪಡೆಗಳ ಶೋಧ ಕಾರ್ಯದ ವೇಳೆ ಉಗ್ರರು ಅಡಗಲು ಬಳಸುತ್ತಿದ್ದ ಸುರಂಗ ಮಾರ್ಗ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಭಾನುವಾರ ಬೆಳಗ್ಗೆ ಉಗ್ರರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಹಾಗೂ ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಯ ಜಂಟಿ ತಂಡ ಅನಂತ್‌ನಾಗ್‌ನ ಸಾಗಮ್‌ಗೆ ತೆರಳಿ ಶೋಧ ಕಾರ್ಯ ನಡೆಸಿದೆ.

     

    ಈ ವೇಳೆ ಭದ್ರತಾ ಪಡೆಗಳು ಉಗ್ರರು ಒಳನುಸುಳಲು ಹಾಗೂ ಅಡಗಲು ಬಳಸುತ್ತಿದ್ದ ಸುರಂಗ ಮಾರ್ಗವನ್ನು ಭೇದಿಸಿದ್ದಾರೆ. ಈ ಸಂದರ್ಭ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗುರುವನ್ನು ಸೋಲಿಸಿದ ಶಿಷ್ಯ: ಸಿಟಿ ರವಿ ಸೋತಿದ್ದು ಎಲ್ಲಿ?

    ಈ ಬಗ್ಗೆ ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರದ ಪೊಲೀಸರು, ಅನಂತ್‌ನಾಗ್ ಅಂಧ್ವಾನ್ ಸಾಗಮ್ ಪ್ರದೇಶದಲ್ಲಿ ಎನ್‌ಕೌಂಟರ್ ಆರಂಭವಾಗಿದೆ. ಪೊಲೀಸ್ ಹಾಗೂ ಭದ್ರತಾ ಪಡೆಗಳು ಕಾರ್ಯಪ್ರವೃತ್ತವಾಗಿವೆ. ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು ಎಂದು ಬರೆದಿದ್ದಾರೆ. ದಟ್ಟ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಸಮಯ ಹಿಡಿಯಬಹುದೆಂದು ಪೊಲೀಸರು ತಿಳಿಸಿದ್ದಾರೆ.

    ಹಿಂದೆ ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ಮನೆಗಳಲ್ಲಿ ಅಡಗಿಕೊಂಡಿರುತ್ತಿದ್ದರು. ಬಳಿಕ ಭದ್ರತಾ ಪಡೆಗಳು ಉಗ್ರರು ನೆಲೆಸುತ್ತಿದ್ದಂತಹ ಮನೆಗಳನ್ನು ಭೇದಿಸಿ ಅವುಗಳನ್ನು ಧ್ವಂಸಗೊಳಿಸಿದ್ದಾರೆ. ಇದೀಗ ಉಗ್ರರು ಸುರಂಗ ಮಾರ್ಗಗಳನ್ನು ಕೊರೆದು ಅವುಗಳಲ್ಲಿ ಒಳನುಸುಳುವುಕೆ ಹಾಗೂ ಅಡಗುತಾಣವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪತಿಯನ್ನು ಕೊಂದು ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದ ಕಿಲ್ಲರ್ ಲೇಡಿ

  • ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ – ಅಲ್ ಖೈದಾದ ಇಬ್ಬರು ಉಗ್ರರು ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಅಲ್ ಖೈದಾ ಅಂಗಸಂಸ್ಥೆ ಅನ್ಸರ್ ಘಜ್ವತುಲ್ ಹಿಂದ್‌ನ ಇಬ್ಬರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಗುಂಡಿನ ದಾಳಿಗೆ ಸಾವನ್ನಪ್ಪಿದ ಫಯಾಜ್ ಕುಮಾರ್ ಮತ್ತು ಓವೈಸ್ ಖಾನ್ ಎಂದು ಗುರುತಿಸಲಾದ ಭಯೋತ್ಪಾದಕರು ಹಲವಾರು ದಾಳಿಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಬಾಗೇವಾಡಿ ಸಾಹುಕಾರ

    ಅನಂತ್‌ನಾಗ್‌ನ ಬಿಜ್‌ಬೆಹರಾ ಪ್ರದೇಶದ ತಾಜಿವಾರದಲ್ಲಿ ಅನಂತನಾಗ್ ಪೊಲೀಸರು ಆಕಸ್ಮಿಕವಾಗಿ ಎನ್‌ಕೌಂಟರ್ ನಡೆಸಿದ್ದಾರೆ. ಈ ವೇಳೆ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ದ್ವೇಷ ರಾಜಕಾರಣಕ್ಕೆ ತಂದೆಯನ್ನು ಕಳೆದುಕೊಂಡೆ; ದೇಶವನ್ನು ಕಳೆದುಕೊಳ್ಳಲು ಬಯಸಲ್ಲ – ರಾಹುಲ್ ಗಾಂಧಿ

    ಜುಲೈ 3ರಂದು ಚೀನಿವುಡರ್ ಶ್ರೀಗುಫ್ವಾರಾದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ನಡೆದ ದಾಳಿಯಲ್ಲಿ ಹಾಗೂ ಜೂನ್ 15 ರಂದು ಪಾದ್‌ಶಾಹಿ ಬಾಗ್‌ನಲ್ಲಿ ನಡೆದ ಗ್ರೆನೇಡ್ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಇವರು ಭಾಗಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಕೊರೊನಾ ಬಂದಿರೋ ಭಯ ಕಾಡ್ತಿದೆ’- ಗುಂಡಿಕ್ಕಿಕೊಂಡು ಸಿಆರ್‌ಪಿಎಫ್ ಅಧಿಕಾರಿ ಆತ್ಮಹತ್ಯೆ

    ‘ಕೊರೊನಾ ಬಂದಿರೋ ಭಯ ಕಾಡ್ತಿದೆ’- ಗುಂಡಿಕ್ಕಿಕೊಂಡು ಸಿಆರ್‌ಪಿಎಫ್ ಅಧಿಕಾರಿ ಆತ್ಮಹತ್ಯೆ

    – ಮತ್ತೊಬ್ಬ ಅಧಿಕಾರಿಯೂ ಸೂಸೈಡ್

    ಶ್ರೀನಗರ: ಹೆಮ್ಮಾರಿ ಕೊರೊನಾ ವೈರಸ್ ಭೀತಿಯಿಂದಾಗಿ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಜಮ್ಮು-ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ನಡೆದಿದೆ.

    ರಾಜಸ್ಥಾನದ ಜೈಸಲ್ಮೇರ್ ನಿವಾಸಿ ಸಬ್‌-ಇನ್ಸ್‌ಪೆಕ್ಟರ್ ಫತಾಹ್ ಸಿಂಗ್ ಆತ್ಮಹತ್ಯೆಗೆ ಶರಣಾದ ಸಿಆರ್‌ಪಿಎಫ್ ಅಧಿಕಾರಿ. ಫತಾಹ್ ಸಿಂಗ್ ಅವರನ್ನು ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಮಟ್ಟನ್ ಪ್ರದೇಶದಲ್ಲಿ ಸಿಆರ್‌ಪಿಎಫ್‍ನ 49ನೇ ಬೆಟಾಲಿಯನ್‍ನೊಂದಿಗೆ ನೇಮಿಸಲಾಗಿತ್ತು. ಆದರೆ ತಾವು ಕೋವಿಡ್-19 ಸೋಂಕು ತಗುಲಬಹುದೆಂದು ಆತಂಕಕ್ಕೆ ಒಳಗಾಗಿದ್ದರು.

    ಫತಾಹ್ ಸಿಂಗ್ ಮಂಗಳವಾರ ತಮ್ಮ ಬಳಿ ಇದ್ದ ರೈಫಲ್‍ನಿಂದ ಗುಂಡು ಹಾರಿಸಿಕೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಫತಾಹ್ ಸಿಂಗ್ ಮೃತಪಟ್ಟಿದ್ದಾರೆ.

    “ಕೊರೊನಾ ವೈರಸ್ ತಗುಲಿರುವ ಭಯ ನನಗೆ ಕಾಡುತ್ತಿದೆ’ ಎಂದು ಫತಾಹ್ ಸಿಂಗ್ ಡೆತ್‍ನೋಟ್‍ನಲ್ಲಿ ತಿಳಿಸಿದ್ದಾರೆ. ಅವರಿಗೆ ಸೋಂಕು ತಗುಲಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಅವರ ಗಂಟಲು ದ್ರವವನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಜೊತೆಗೆ ಕೋವಿಡ್-19 ಶಿಷ್ಟಾಚಾರದಂತೆ ಫತಾಹ್ ಸಿಂಗ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಮತ್ತನ್ ಠಾಣೆಯ ಅಧಿಕಾರಿ ಜಝೀಬ್ ಅಹ್ಮದ್ ಹೇಳಿದ್ದಾರೆ.

    ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಆರ್‌ಪಿಎಫ್‍ನ ಮತ್ತೊಬ್ಬ ಅಧಿಕಾರಿ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಅವರ ಸಾವಿಗೆ ಕಾರಣ ಏನು ಎನ್ನುವುದು ಸ್ಪಷ್ಟವಾಗಿಲ್ಲ.

  • ಪುಲ್ವಾಮಾ ದಾಳಿಗೆ ಕಾರು ನೀಡಿದ್ದ ಉಗ್ರ ಸಜ್ಜದ್ ಭಟ್ ಹತ್ಯೆ

    ಪುಲ್ವಾಮಾ ದಾಳಿಗೆ ಕಾರು ನೀಡಿದ್ದ ಉಗ್ರ ಸಜ್ಜದ್ ಭಟ್ ಹತ್ಯೆ

    – ಅನಂತ್‍ನಾಗ್ ಜಿಲ್ಲೆಯ ಮುಂದುವರಿದ ಗುಂಡಿನ ದಾಳಿ

    ಶ್ರೀನಗರ: ಪುಲ್ವಾಮಾ ದಾಳಿಗೆ ಕಾರು ನೀಡಿದ್ದ ಜೈಶ್-ಇ-ಮೊಹಮ್ಮದ್ ಸಂಘಟನೆಯ ಉಗ್ರ ಸಜ್ಜದ್ ಭಟ್‍ನನ್ನು ಭಾರತೀಯ ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿದೆ.

    ದಕ್ಷಿಣ ಕಾಶ್ಮೀರನ ಅನಂತ್‍ನಾಗ್ ಜಿಲ್ಲೆಯ ಬಿಜ್ಜೆಹರಾ ಪ್ರದೇಶದಲ್ಲಿ ಇಂದು ಬೆಳ್ಳಂಬೆಳಗ್ಗೆ ಭಾರತೀಯ ಭದ್ರತಾ ಪಡೆ ಭರ್ಜರಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಉಗ್ರ ಸಜ್ಜದ್ ಮಕ್ಬೂಲ್ ಭಟ್ ಅಲಿಯಾಸ್ ಅಫ್ಜಲ್ ಗುರು ಅಲಿಯಾಸ್ ಹಫಿಝ್ ಹಾಗೂ ಇನ್ನೋರ್ವ ಪ್ರಮುಖ ಉಗ್ರ ತೌಸಿಫ್‍ನನ್ನು ಹತ್ಯೆ ಮಾಡಲಾಗಿದೆ.

    ಹತ್ಯೆಯಾದ ಇಬ್ಬರು ಜಮ್ಮು-ಕಾಶ್ಮೀರ ಪುಲ್ವಾಮಾದಲ್ಲಿ ಇದೇ ವರ್ಷ ಫೆಬ್ರವರಿ 14 ರಂದು ಸಿಆರ್‍ಪಿಎಫ್ ಯೋಧರಿದ್ದ ವಾಹನ ಮೇಲೆ ನಡೆದ ದಾಳಿಯಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ರೈಫಲ್ಸ್, ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಹೊಡೆದುರುಳಿಸಲಾಗಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

    ಸಜ್ಜದ್ ಮಕ್ಬೂಲ್ ಭಟ್ ಅನಂತ್‍ನಾಗ್ ಜಿಲ್ಲೆಯ ಬಿಜ್ಜೆಹರಾ ಪ್ರದೇಶದ ಮರ್ಹಾಮಾ ಗ್ರಾಮದ ನಿವಾಸಿ. ಪುಲ್ವಾಮಾ ದಾಳಿಗೂ ಮುನ್ನವೇ ಸಜ್ಜದ್ ಮಕ್ಬೂಲ್ ಭಯೋತ್ಪಾದಕ ಸಂಘಟನೆ ಸೇರಿದ್ದ. ಉಗ್ರ ತಸ್ವೀಫ್ ಭಟ್ ಪುಲ್ವಾಮಾ ದಾಳಿಯ ವೇಳೆ ಆತ್ಮಾಹುತಿ ದಾಳಿಕೋರರನ್ನು ನಿರ್ವಹಿಸುತ್ತಿದ್ದ ಎಂದು ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

    ಕೆಲವು ಉಗ್ರರು ಬಿಜ್ಜೆಹರಾ ಪ್ರದೇಶದಲ್ಲಿ ಇದ್ದಾರೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ. ಹೀಗಾಗಿ ಭದ್ರತಾ ಸಿಬ್ಬಂದಿ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದು, ಗುಂಡಿನ ದಾಳಿ ನಡೆಸಲಾಗುತ್ತಿದೆ.

    ಅನಂತ್‍ನಾಗ್ ಜಿಲ್ಲೆಯಲ್ಲಿ ಸೋಮವಾರ ನಡೆದ ಉಗ್ರರ ದಾಳಿಯಲ್ಲಿ ಆರ್ಮಿ ಮೇಜರ್ ಕೇತನ್ ಶರ್ಮಾ ಹುತಾತ್ಮರಾಗಿದ್ದು, ಮೂವರು ಸೈನಿಕರು ಗಾಯಗೊಂಡಿದ್ದರು. ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಮತ್ತು ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಗುಂಡಿನ ಚಕಮಕಿ ವೇಳೆ ಸಾವನ್ನಪ್ಪಿದ ಮೇಜರ್ ಕೇತನ್ ಶರ್ಮಾ ಅವರಿಗೆ ಗೌರವ ಸಲ್ಲಿಸಿದ್ದರು.

    ಅಮರನಾಥ್ ಯಾತ್ರಾರ್ಥಿಗಳಲ್ಲಿ ನಡುಕ:
    ಅಮರನಾಥ್ ಯಾತ್ರೆಯು ಮುಂದಿನ ತಿಂಗಳು ಆರಂಭವಾಗಲಿದ್ದು, ಸುಮಾರು 45 ದಿನಗಳ ಕಾಲ ನಡೆಯಲಿದೆ. ಈ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರ ರಾಜ್ಯ ಸರ್ಕಾರವು ಸಕಲ ಸಿದ್ಧತೆ ನಡೆಸಿದೆ. ಈ ತೀರ್ಥ ಯಾತ್ರೆಗೆ ಎರಡು ಮಾರ್ಗಗಳಿದ್ದು, ಒಂದು ಅನಂತ್‍ನಾಗ್ ಮೂಲಕ ಹಾದು ಹೋಗುತ್ತದೆ. ಹೀಗಾಗಿ ಅನಂತ್‍ನಾಗ್ ಮಾರ್ಗದ ಮೂಲಕ ಅಮರನಾಥ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಲ್ಲಿ ಈ ಬಾರಿ ಸಹಜವಾಗಿಯೇ ಆತಂಕ ಮೂಡಿದೆ. ಅಷ್ಟೇ ಅಲ್ಲದೆ ಕಳೆದ ವಾರ ಉಗ್ರರು ನಡೆಸಿದ ಗುಂಡಿನ ದಾಳಿಗೆ ಸಿಆರ್‌ಪಿಎಫ್ ನ 6 ಜನ ಪೊಲೀಸರು ಹುತಾತ್ಮರಾಗಿದ್ದರು.

  • ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – 5 ಯೋಧರು ಹುತಾತ್ಮ

    ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – 5 ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಸೈನಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಐವರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು, ಪ್ರತಿದಾಳಿಯಲ್ಲಿ ಒಬ್ಬ ಉಗ್ರನನ್ನು ಸೈನಿಕರು ಹತ್ಯೆ ಮಾಡಿದ್ದಾರೆ.

    ಅನಂತ್ ನಾಗ್ ಜಿಲ್ಲೆಯ ಕೆಪಿ ರೋಡ್ ಬಳಿ ಘಟನೆ ನಡೆದಿದ್ದು, ಸ್ಥಳೀಯ ಮಾಧ್ಯಮಗಳ ವರದಿಯ ಅನ್ವಯ ಇಬ್ಬರು ಉಗ್ರರು ಯೋಧರನ್ನ ಗುರಿಯಾಗಿಸಿಕೊಂಡು ಗುಂಡಿನ ದಾಳಿಯನ್ನ ನಡೆಸಿದ್ದರು. ಆಟೋಮ್ಯಾಟಿಕ್ ರೈಫಲ್ಸ್ ದಾಳಿ ನಡೆಸಿ, ಗ್ರೆನೇಡ್ ಗಳನ್ನು ಏಕಾಏಕಿ ಯೋಧರ ಮೇಲೆ ಎಸೆದಿದ್ದಾರೆ. ಈ ವೇಳೆ ಪ್ರತಿ ದಾಳಿಯಲ್ಲಿ ಓರ್ವ ಉಗ್ರ ಸಾವನ್ನಪ್ಪಿದ್ದಾನೆ.

    ಘಟನೆಯಲ್ಲಿ ಅನಂತ್ ನಾಗ್ ಪೊಲೀಸ್ ಠಾಣೆಯ ಅಧಿಕಾರಿ ಹರ್ಷದ್ ಅಹ್ಮದ್ ಗಾಯಗೊಂಡಿದ್ದು, ಅಲ್ಲದೇ ನಾಗರಿಕರೊಬ್ಬರು ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಪೊಲೀಸ್ ಅಧಿಕಾರಿಯನ್ನ ಚಿಕಿತ್ಸೆಗಾಗಿ ಶ್ರೀನಗರ ಆಸ್ಪತ್ರೆ ಕೊಂಡ್ಯೊಯಲಾಗಿದೆ. ಪುಲ್ವಾಮಾ ದಾಳಿ ನಡೆದ ಬಳಿಕ ಉಗ್ರರು ಮತ್ತೆ ಸಿಆರ್ ಪಿಎಫ್ ಯೋಧರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ.

  • ವೀಕೆಂಡ್ ಹಾಡುಗಳ ಹಂಗಾಮಾ!

    ವೀಕೆಂಡ್ ಹಾಡುಗಳ ಹಂಗಾಮಾ!

    ಬೆಂಗಳೂರು: ಹಾಡುಗಳೇ ಚಿತ್ರವೊಂದರ ಆಹ್ವಾನ ಪತ್ರಿಕೆ ಇದ್ದಂತೆ ಎಂಬ ಮಾತಿದೆ. ಆದ್ದರಿಂದಲೇ ಹಾಡುಗಳು ಗೆದ್ದರೆ ಚಿತ್ರಕ್ಕೂ ಗೆಲುವು ಗ್ಯಾರೆಂಟಿ ಎಂಬ ನಂಬಿಕೆ. ಇದಕ್ಕೆ ತಕ್ಕುದಾಗಿಯೇ ಹಾಡುಗಳು ಹಿಟ್ ಆದರೆ ಆ ಸಿನಿಮಾ ಕೂಡಾ ಹಿಟ್ ಆಗುತ್ತದೆ ಎಂಬ ನಂಬಿಕೆಯೂ ಗಾಂಧಿನಗರದಲ್ಲಿದೆ. ಇದು ಬಹುತೇಕ ಸತ್ಯವೂ ಹೌದು. ಈ ನಿಟ್ಟಿನಲ್ಲಿ ನೋಡ ಹೋದರೆ ಈ ವಾರ ಬಿಡುಗಡೆಗೆ ರೆಡಿಯಾಗಿರೋ ವೀಕೆಂಡ್ ಚಿತ್ರದ ಗೆಲುವು ನಿಚ್ಚಳವಾಗಿದೆ.

    ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ಅವರು ನಿರ್ಮಾಣ ಮಾಡಿರೋ ಈ ಚಿತ್ರವನ್ನು ಶೃಂಗೇರಿ ಸುರೇಶ್ ನಿರ್ದೇಶನ ಮಾಡಿದ್ದಾರೆ. ಈಗ್ಗೆ ಮೂರು ದಶಕಗಳಿಂದೀಚೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿರೋ ಸುರೇಶ್ ಅವರು ಈಗಿನ ಯುವ ಸಮುದಾಯದ ತಲ್ಲಣಗಳನ್ನು ಸಾಮಾಜಿಕ ಕಾಳಜಿಯೊಂದಿಗೆ ಕಮರ್ಷಿಯಲ್ ವೇನಲ್ಲಿ ಈ ಮೂಲಕ ದೃಷ್ಯೀಕರಿಸಿದ್ದಾರೆ.

    ಈ ಚಿತ್ರ ಹಾಡುಗಳು ಮತ್ತು ಟ್ರೈಲರ್ ಮೂಲಕವೇ ಜನಮಾನಸಕ್ಕೆ ಹತ್ತಿರಾಗಿದೆ. ಅದರಲ್ಲಿಯೂ ಹಾಡುಗಳಂತೂ ನವೀನ ರೀತಿಯಲ್ಲಿ ಪ್ರೇಕ್ಷಕರನ್ನು ತಲುಪಿಕೊಂಡಿವೆ. ಶ್ರೀಲಂಕಾ ಮೂಲದ ಮನೋಜ್ ಸಂಗೀತ ನಿರ್ದೇಶನದಲ್ಲಿ ಈ ಸಿನಿಮಾದ ಮೂರು ಹಾಡುಗಳು ಮೂಡಿ ಬಂದಿವೆ. ಅನನ್ಯಾ ಭಟ್ ಹಾಡಿರೋ ಐಲಾ ಐಲಾ ಎಂಬ ಪಾರ್ಟಿ ಸಾಂಗ್ ಅಂತೂ ಹೊಸಾ ಕ್ರೇಜ್ ಸೃಷ್ಟಿಸಿ ಬಿಟ್ಟಿದೆ.

    ಈ ಚಿತ್ರದಲ್ಲಿ ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶಶಿಧರ್ ಛಾಯಾಗ್ರಹಣ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ, ಮನೋಜ್ ಸಂಗೀತ ಹಾಗೂ ಅನಂತ್ ನಾಗ್, ಮಂಜುನಾಥ್, ನೀನಾಸಂ ರಘು, ಬ್ಯಾಂಕ್ ಸತೀಶ್, ನೀತು ಬಾಲಾ, ವೀಣಾ ಜಯಶಂಕರ್, ಸಂಜಯ್ ನಾಗೇಶ್, ಮಂಜುನಾಥ ಶಾಸ್ತ್ರಿ, ಗೋಪಿನಾಥ್ ಭಟ್, ನಾಗಭೂಷಣ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

  • ಈ ವಾರ ಬಿಚ್ಚಿಕೊಳ್ಳಲಿದೆ ವೀಕೆಂಡ್ ವೈಚಿತ್ರ್ಯ!

    ಈ ವಾರ ಬಿಚ್ಚಿಕೊಳ್ಳಲಿದೆ ವೀಕೆಂಡ್ ವೈಚಿತ್ರ್ಯ!

    ಅನಂತ್ ನಾಗ್ ಯಾವ ಚಿತ್ರದಲ್ಲಿಯೇ ಆದರೂ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆಂದರೇನೇ ಅದರೆಡೆಗೆ ಜನ ಆಕರ್ಷಿತರಾಗುತ್ತಾರೆ. ಹಾಗಿರೋವಾಗ ಅವರು ಪ್ರಧಾನ ಪಾತ್ರ ನಿರ್ವಹಿಸಿದ್ದಾರೆಂದರೆ ಕುತೂಹಲ ಹುಟ್ಟದಿರಲು ಸಾಧ್ಯವೇ ಇಲ್ಲ. ಇಂಥಾದ್ದೊಂದು ಕಾರಣದಿಂದಲೇ ಎಲ್ಲ ಪ್ರೇಕ್ಷಕರನ್ನೂ ಸೆಳೆದುಕೊಂಡಿರೋ ಚಿತ್ರ ವೀಕೆಂಡ್. ಇದೀಗ ಇದು ಬಿಡುಗಡೆಯಾಗೋ ದಿನಾಂಕ ಫಿಕ್ಸಾಗಿದೆ.

    ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರ ಈ ವಾರವೇ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ನಿರ್ಮಾಣ ಮಾಡಿರೋ ವೀಕೆಂಡ್ ಚಿತ್ರ ಈಗಾಗಲೇ ಭರ್ಜರಿಯಾಗಿ ಸೌಂಡ್ ಮಾಡಿದೆ. ಟ್ರೈಲರ್ ಮೂಲಕವೇ ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಸುಳಿವನ್ನು ಕುತೂಹಲವಾಗಿ ಪ್ರೇಕ್ಷಕರತ್ತ ದಾಟಿಸುವಲ್ಲಿಯೂ ಚಿತ್ರತಂಡ ಯಶ ಕಂಡಿದೆ.

    ಅಖಂಡ ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದ್ದು ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವವರು ಶೃಂಗೇರಿ ಸುರೇಶ್. ಶಂಕರ್ ನಾಗ್ ಅವರಂಥಾ ಮೇರು ನಟರ ಚಿತ್ರಗಳಿಗೂ ಕೆಲಸ ಮಾಡಿದ್ದ ಅವರು ಹಲವಾರು ಹಿರಿಯ ನಟರೊಂದಿಗೂ ಆತ್ಮೀಯ ಸಖ್ಯ ಹೊಂದಿರುವವರು. ಸುರೇಶ್ ತೀರಾ ಈಗಿನ ಜನರೇಷನ್ನಿನ ಆವೇಗಗಳನ್ನು ಆವಾಹಿಸಿಕೊಂಡೇ ಈ ಚಿತ್ರದ ಕಥೆಯನ್ನು ಸಿದ್ಧಪಡಿಸಿದ್ದಾರೆ.

    ವೀಕೆಂಡ್ ಅಂದರೆ ಐಟಿ ವಲಯದಲ್ಲಿರುವವರೂ ಸೇರಿದಂತೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ಐಟಿ ವಲಯದವರಿಗೆ ವೀಕೆಂಡ್ ಮೋಜು ಮಸ್ತಿಯಿಲ್ಲದಿದ್ದರೆ ಕಾಲವೆಂಬುದು ರುಚಿಸೋದಿಲ್ಲ. ಆದರೆ ಕೊಂಚ ಎಚ್ಚರ ತಪ್ಪಿದರೂ ಕೂಡಾ ಈ ಮೋಜು ಮಸ್ತಿ ಬದುಕನ್ನೇ ಅಲ್ಲಾಡಿಸಿ ಹಾಕಿ ಬಿಡುತ್ತದೆ. ಇಂಥಾ ಸೂಕ್ಷ್ಮವಾದ ಕಥಾ ಹಂದರವನ್ನು ಥ್ರಿಲ್ಲರ್ ಶೈಲಿಯಲ್ಲಿ ನಿರೂಪಿಸಲಾಗಿದೆಯಂತೆ.

    ಈ ಚಿತ್ರದಲ್ಲಿ ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶಶಿಧರ್ ಛಾಯಾಗ್ರಹಣ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ, ಮನೋಜ್ ಸಂಗೀತ ಹಾಗೂ ಅನಂತ್ ನಾಗ್, ಮಂಜುನಾಥ್, ನೀನಾಸಂ ರಘು, ಬ್ಯಾಂಕ್ ಸತೀಶ್, ನೀತು ಬಾಲಾ, ವೀಣಾ ಜಯಶಂಕರ್, ಸಂಜಯ್ ನಾಗೇಶ್, ಮಂಜುನಾಥ ಶಾಸ್ತ್ರಿ, ಗೋಪಿನಾಥ್ ಭಟ್, ನಾಗಭೂಷಣ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

  • ಬುರ್ಹಾನ್ ವಾನಿ ಬ್ರಿಗೇಡ್‍ನಲ್ಲಿದ್ದ ಕೊನೆಯ ಉಗ್ರನ ಹತ್ಯೆ

    ಬುರ್ಹಾನ್ ವಾನಿ ಬ್ರಿಗೇಡ್‍ನಲ್ಲಿದ್ದ ಕೊನೆಯ ಉಗ್ರನ ಹತ್ಯೆ

    ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಯ ಇಬ್ಬರು ಪ್ರಮುಖ ಉಗ್ರರನ್ನು ಭಾರತೀಯ ಸೇನೆ ಶುಕ್ರವಾರ ಬೆಳಗ್ಗೆ ಶೋಪಿಯನ್ ಜಿಲ್ಲೆಯಲ್ಲಿ ಹೊಡೆದುರುಳಿಸಿದೆ. ಸಾವನ್ನಪ್ಪಿದ ಇಬ್ಬರು ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯ ಸಹಚರರು ಎಂದು ಗುರುತಿಸಲಾಗಿದೆ.

    ಸಾವನ್ನಪ್ಪಿದ ಉಗ್ರರನ್ನು ತಾರಿಕ್ ಮಾಲ್ವಿ ಮತ್ತು ಲತೀಫ್ ಟೈಗರ್ ಎಂದು ಗುರುತಿಸಲಾಗಿದೆ. ಈ ಹಿಂದೆ ಉಗ್ರ ಬುರ್ಹಾನ್ ವಾನಿಯನ್ನು ಸೇನೆ ಹತ್ಯೆ ಮಾಡಿತ್ತು. ಹತ್ಯೆಯಾದ ಬಳಿಕ ಬುರ್ಹಾನ್ ವಾನಿ ತನ್ನ ಸ್ನೇಹಿತರ ಜೊತೆಗಿದ್ದ ಫೋಟೋ ವೈರಲ್ ಆಗಿತ್ತು. ಅಷ್ಟೇ ಅಲ್ಲದೇ ಈ ಗುಂಪಿಗೆ ಬುರ್ಹಾನ್ ಬ್ರಿಗೇಡ್ ಎಂದು ಹೆಸರನ್ನು ಇಟ್ಟುಕೊಂಡಿದ್ದ. ಈ ಫೋಟೋದಲ್ಲಿ 11 ಮಂದಿಯನ್ನು ಸೇನೆ ಹತ್ಯೆ ಮಾಡಿದ್ದು ಈಗ ಕೊನೆಯವನಾಗಿ ಲತೀಫ್ ಹತ್ಯೆಯಾಗಿದ್ದಾನೆ. ಈ ಮೂಲಕ ಬುರ್ಹಾನ್ ವಾನಿಯ ಬ್ರಿಗೇಡ್ ಕಾಶ್ಮೀರದಲ್ಲಿ ನಿರ್ಮೂಲನೆಯಾಗಿದೆ.

     

    ಶೋಪಿಯಾನ್ ಜಿಲ್ಲೆಯ ಇಮಾಮ್ ಸಾಹಿಬ್ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಭಾರತೀಯ ಸೇನೆಯ 34 ಆರ್‍ಆರ್ ಮತ್ತು ವಿಶೇಷ ಕಾರ್ಯಾಚರಣೆ ಗುಂಪು (ಎಸ್‍ಒಜಿ) ಜಂಟಿ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಉಗ್ರರು ಮತ್ತು ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಮತ್ತು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.

    ಶೋಪಿಯಾನ್ ಜಿಲ್ಲೆಯು ಲೋಕಸಭಾ ಚುನಾವಣೆಯಲ್ಲಿ ಅನಂತನಾಗ್ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಕ್ಷೇತ್ರದಲ್ಲಿ ಮೇ 6ಕ್ಕೆ ಐದನೇ ಹಂತದಲ್ಲಿ ಚುನಾವಣೆ ನಡೆಯಲಿದೆ.