Tag: Anantkumar Hegde

  • ಅನಂತ್‍ಕುಮಾರ್ ಹೆಗ್ಡೆ ನಿಂದಿಸುವ ಭರದಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್- ಪಿಎಚ್‍ಡಿ ವಿದ್ಯಾರ್ಥಿ ವಿರುದ್ಧ ದೂರು

    ಅನಂತ್‍ಕುಮಾರ್ ಹೆಗ್ಡೆ ನಿಂದಿಸುವ ಭರದಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್- ಪಿಎಚ್‍ಡಿ ವಿದ್ಯಾರ್ಥಿ ವಿರುದ್ಧ ದೂರು

    -ಕೃಷ್ಣ, ರಾಮ, ಸೀತೆ, ಲಕ್ಷ್ಮಣನ ಬಗ್ಗೆ ಅವಹೇಳನ

    ಮೈಸೂರು: ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಅವರನ್ನ ನಿಂದಿಸುವ ಭರದಲ್ಲಿ ಹಿಂದೂ ದೇವರುಗಳ ಬಗ್ಗೆ ಬಾಯಿಗೆ ಬಂದಂತೆ ಒದರಿದ ಫೇಸ್‍ಬುಕ್ ಪುಡಾರಿ ವಿರುದ್ಧ ದೂರು ನೀಡಲಾಗಿದೆ.

    ಮೈಸೂರಿನ ಹಾರೋಹಳ್ಳಿ ರವೀಂದ್ರ ಹಿಂದೂ ದೇವರು ಹಾಗೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾನೆ. ರಾಮ, ಲಕ್ಷ್ಮಣ, ಸೀತೆ, ಕೃಷ್ಣನ ಬಗ್ಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಈತ ಮೈಸೂರು ವಿಶ್ವವಿದ್ಯಾಲಯದ ಪ್ರೊ. ಮಹೇಶ್‍ಚಂದ್ರ ಗುರು ಮಾರ್ಗದರ್ಶನದಲ್ಲಿ ಪಿಎಚ್.ಡಿ ಮಾಡುತ್ತಿದ್ದಾನೆ.

    ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?: ಸೀತೆಗೂ ಲಕ್ಷ್ಮಣನಿಗೂ ಅಕ್ರಮ ಸಂಬಂಧವಿತ್ತು. ಸೀತೆ ತಾನಾಗಿಯೇ ರಾವಣನ ಬಳಿ ಲೈಂಗಿಕ ಸುಖಕ್ಕಾಗಿ ಹೋಗಿದ್ದಳು. ರಾವಣನ ಜೊತೆಗಿನ ಲೈಂಗಿಕ ಸಂಪರ್ಕದ ನಂತರವೇ ಲವಕುಶ ಹುಟ್ಟಿದ್ದು. ಹೀಗೆ ರಾಮ, ಲಕ್ಷಣ ಸೀತೆ ಕುರಿತು ಅವಹೇಳನಕಾರಿಯಾಗಿ ಬರೆದಿದ್ದಾನೆ. ಅಷ್ಟೇ ಅಲ್ಲದೇ ಅನಂತ್‍ಕುಮಾರ್ ಹೆಗ್ಡೆ ಹಾಗೂ ಯೋಗಿ ಆದಿತ್ಯನಾಥ್‍ರನ್ನ ಟೀಕಿಸಿ ಪೋಸ್ಟ್ ಹಾಕಿದ್ದಾನೆ.

    ಶ್ರೀಕೃಷ್ಣ ತನ್ನ ತಂಗಿ ಸುಭದ್ರೆ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದ. ಕೃಷ್ಣ 16 ಸಾವಿರ ಗೋಪಿಕಾಸ್ತ್ರೀಯರ ಜೊತೆ ತನ್ನ ತಂಗಿಯ ಜೊತೆಯೂ ಲೈಂಗಿಕ ಸುಖ ಪಡೆದಿದ್ದಾನೆ. ಈಶ್ವರ ದಲಿತ ಸಮುದಾಯಕ್ಕೆ ಸೇರಿದವ. ಪಾರ್ವತಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎಂದು ಶಿವ, ಪಾರ್ವತಿ, ಅಗ್ನಿದೇವನ ಕುರಿತು ಅಸಹ್ಯ ಪದಗಳ ಬಳಸಿ ಬರೆದಿದ್ದಾನೆ. ಗಣೇಶ, ಸುಬ್ರಮಣ್ಯ ಸೇರಿದಂತೆ ಬಹುತೇಕ ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಿದ್ದಾನೆ.

    ಈತನ ಪೋಸ್ಟ್ ಗೆ  ಆಕ್ರೋಶಭರಿತ ಕಾಮೆಂಟ್‍ಗಳು ಬಂದಿದ್ದು, ಫೇಸ್‍ಬುಕ್‍ನಲ್ಲೇ ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮೈಸೂರಿನ ಸಮಗ್ರ ರಕ್ಷಣಾ ವೇದಿಕೆ ವತಿಯಿಂದ ಡಿಸಿಪಿ ವಿಷ್ಣುವರ್ಧನ ಅವರಿಗೆ ದೂರು ನೀಡಲಾಗಿದೆ.

  • ಸಂಸತ್ ಕಲಾಪದಲ್ಲಿ ಹೆಗ್ಡೆ ವಿರುದ್ಧ ಆಕ್ರೋಶ: ವಜಾಗೊಳಿಸಲು ಪ್ರತಿಪಕ್ಷಗಳ ಆಗ್ರಹ

    ಸಂಸತ್ ಕಲಾಪದಲ್ಲಿ ಹೆಗ್ಡೆ ವಿರುದ್ಧ ಆಕ್ರೋಶ: ವಜಾಗೊಳಿಸಲು ಪ್ರತಿಪಕ್ಷಗಳ ಆಗ್ರಹ

    ನವದೆಹಲಿ: ಜಾತ್ಯತೀತ ಮತ್ತು ಸಂವಿಧಾನ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು  ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಆಗ್ರಹಿಸಿವೆ.

     ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಮಾತನಾಡಿ, ಸಂವಿಧಾನದಲ್ಲಿ ಯಾರಿಗೆ ನಂಬಿಕೆ ಇಲ್ಲವೋ ಅವರು ಸಂಸತ್ತಿನಲ್ಲಿ ಇರಲು ಯಾವುದೇ ಹಕ್ಕಿಲ್ಲ ಎಂದು ಹೇಳಿದರು. ಇದೇ ವೇಳೆ ಚಯರ್‍ಮನ್ ಆಗಿರುವ ವೆಂಕಯ್ಯ ನಾಯ್ಡು ಅವರ ಮುಂಭಾಗ  ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅನಂತ್ ಕುಮಾರ್ ಹೆಗ್ಡೆ ಅವಮಾನ ಮಾಡಿದ್ದಾರೆ ಎಂದು ಘೋಷಣೆ ಕೂಗಿ ಪ್ರತಿಭಟಿಸಿದರು.

    ಪ್ರತಿಪಕ್ಷಗಳ ಪ್ರತಿಭಟನೆಯಿಂದ ಲೋಕಸಭಾ ಕಲಾಪವನ್ನು ಒಂದು ಗಂಟೆಗಳ ಕಾಲ ಮುಂದೂಡಲಾಯಿತು. ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ವಿಜಯ್ ಗೋಯಲ್ ಅನಂತ್ ಕುಮಾರ್ ಹೆಗ್ಡೆ ಹೇಳಿಕೆ ಸರ್ಕಾರದ ಹೇಳಿಕೆಯಲ್ಲ ಎಂದು ಸಮಜಾಯಿಷಿ ನೀಡಿದರು.

    ಸಾಧಾರಣವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರದ ಲೋಕಸಭಾ ಕಲಾಪಕ್ಕೆ ಹಾಜರಾಗುತ್ತಿರುತ್ತಾರೆ. ಆದರೆ ಇಂದು ಜೈರಾಮ್ ಠಾಕೂರ್ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ತೆರಳಿದ್ದರಿಂದ ಗೈರಾಗಿದ್ದರು.

    ಹೆಗ್ಡೆ ಹೇಳಿದ್ದು ಏನು?
    ಕೊಪ್ಪಳದ ಯಲಬುರ್ಗಾ ತಾಲೂಕಿನ ಕೊಕನೂರಿನಲ್ಲಿ ಬ್ರಾಹ್ಮಣ ಯುವ ಪರಿಷತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅನಂತ್ ಕುಮಾರ್ ಹೆಗ್ಡೆ, ಇತ್ತೀಚೆಗೆ ಹೊಸದೊಂದು ಸಂಪ್ರದಾಯ ಬಂದುಬಿಟ್ಟಿದೆ. ಅದ್ಯಾವುದೆಂದರೆ ಜಾತ್ಯತೀತರು. ನಾನೊಬ್ಬ ಹಿಂದೂ ಅಥವಾ ಮುಸ್ಲಿಂ ಅಥವಾ ಕ್ರೈಸ್ತ, ಲಿಂಗಾಯತ ಅಂತಾ ಯಾರದ್ರೂ ತಮ್ಮ ಧರ್ಮವನ್ನು ಹೆಮ್ಮೆಯಿಂದ ಹೇಳಿಕೊಂಡರೆ ನನಗೆ ಖುಷಿ ಅನಿಸುತ್ತೆ. ಯಾಕಂದ್ರೆ ಅವರಿಗೆ ಅವರ ರಕ್ತದ ಅರಿವಿದೆ ಎಂದರ್ಥ. ಆದ್ರೆ ಈ ಜಾತ್ಯತೀತರು ಅಂತ ಕರೆದುಕೊಳ್ಳುತ್ತಾರೆ ಅಲ್ವ. ಅಂಥವರು ಅಪ್ಪ-ಅಮ್ಮನ ಗುರುತು ಇಲ್ಲದೇ ಇರುವ ರಕ್ತವನ್ನು ಹೊಂದಿರುವವರು ಜಾತ್ಯತೀತರು ಅಂತ ಕರೆದುಕೊಳ್ಳುತ್ತಾರೆ ಎಂದು ಲೇವಡಿ ಮಾಡಿದ್ದರು.

    ಜಾತ್ಯತೀತರಿಗೆ ತಮ್ಮ ಗುರುತೇ ತಮಗಿರುವುದಿಲ್ಲ. ಮಾತು ಎತ್ತಿದ್ರೆ  ದೊಡ್ಡ ವಿಚಾರವಾದಿಗಳು. ಅಪ್ಪ-ಅಮ್ಮನ ಪರಿಚಯ ಇಲ್ಲದೇ ಇರೋ ಇವರುಗಳು ದೊಡ್ಡ ವಿಚಾರವಾದಿಗಳು. ಇವರನ್ನು ಜಾತಿಯ ಜೊತೆ ಕೂರಿಸಿಕೊಳ್ಳುತ್ತಿರೋ ಅಥವಾ ನಿಮ್ಮ ಕುಲದ ಜೊತೆ ಕೂರಿಸಿಕೊಳ್ಳುತ್ತಿರೋ ಗುರುತಿಸಿಕೊಳ್ಳಿ ಸ್ವಾಮಿ. ನಿಮಗೆ ನಿಮ್ಮ ರಕ್ತದ ಪರಿಚಯ ಇದ್ದಿದ್ದೇ ಆದ್ರೆ ನಿಮ್ಮ ಕಾಲು ಮುಟ್ಟಿ ನಮಸ್ಕರಿಸುತ್ತೇನೆ. ಆದ್ರೆ ಜಾತ್ಯತೀತರು ಅಂತ ಹೇಳಿದ್ರೆ ಮಾತ್ರ ಸ್ವಲ್ಪ ನೀವು ಯಾರು ಅಂತ ಸಂಶಯ ಬರುತ್ತೆ ಅಂತ ಹೇಳಿದ್ದರು.  ಇದನ್ನೂ ಓದಿ: ಕೌಶಲ್ಯಾಭಿವೃದ್ಧಿ ಸಚಿವಾಲಯ ನೀರಿಲ್ಲದ ಬಾವಿ ಇದ್ದಂತೆ: ಅನಂತ್ ಕುಮಾರ್ ಹೆಗ್ಡೆ

    ಹೌದು. ಸಂವಿಧಾನ ಜಾತ್ಯತೀತರು ಅಂತ ಹೇಳಿದೆ. ನಾವು ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದ್ರೆ ಸಂವಿಧಾನ ಕಾಲಕ್ಕೆ ತಕ್ಕಂತೆ ಅದೆಷ್ಟೋ ಬಾರಿ ಬದಲಾಗಿದೆ. ಮುಂದಿನ ದಿನಗಳಲ್ಲೂ ಬದಲಾಗುತ್ತೆ. ನಿಮಗೆ ಸಂಪ್ರದಾಯ, ಪರಂಪರೆ, ಸಂಸ್ಕೃತಿ ಇದರ ಐತಿಹಾಸಿಕ ಹೆಜ್ಜೆಯ ಗುರುತುಗಳೇ ನಿಮಗೆ ಗೊತ್ತಿಲ್ಲ. ನೀವು ಮೂರ್ಖರು. ಜಗತ್ತಿನ ಭೂಪಟಗಳು, ಸಾಮಾಜಿಕ ಚಿತ್ರಣ ಬದಲಾಗಿ ಹೋಗಿದೆ. ಹೀಗಾಗಿ ನಾವು ಸಂವಿಧಾನವನ್ನು ಬದಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.

    ಯಾರಿಗೆ ಸಭ್ಯತೆಯ ಅರಿವಿದೆ ಅಂತವರು ಸಂಸ್ಕಾರ ಎಂಬ ಶಬ್ಧವನ್ನು ಒಪ್ಪಿಕೊಳ್ಳಲೇ ಬೇಕು. ಆದ್ರೆ ಯಾರಿಗೆ ಈ ಶಬ್ಧ ಪರಿಚಯ ಇಲ್ಲವೋ ಅಥವಾ ಒಳ್ಳೆದು ಮತ್ತು ಕೆಟ್ಟದರ ಮಧ್ಯೆ ಇರೋ ಕಂದಕ ಗೊತ್ತಿಲ್ಲವೋ ಅಂತವರು ಶಿಕ್ಷಣವೇ ಸಂಸ್ಕಾರ ಅಂದುಕೊಂಡಿರುತ್ತಾರೆ. ಅಂತಹ ಮೂಢಮತಿಗಳ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದು ಹೇಳಿದ್ದರು.

  • ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆಗೆ ಮಂತ್ರಿ ಪಟ್ಟ

    ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆಗೆ ಮಂತ್ರಿ ಪಟ್ಟ

    ನವದೆಹಲಿ: ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಕೇಂದ್ರ ಮಂತ್ರಿ ಸ್ಥಾನ ಸಿಕ್ಕಿದೆ.

    ಭಾನುವಾರ ಬೆಳಗ್ಗೆ 10.30ಕ್ಕೆ ರಾಷ್ಟ್ರಪತಿ ಭವನದ ಅಶೋಕ ಹಾಲ್‍ನಲ್ಲಿ ಕೇಂದ್ರ ಸಂಪುಟ ಪುನಾರಚನೆ ಆಗಲಿದ್ದು ಹೊಸದಾಗಿ ಪ್ರಮಾಣವಚನ ಸ್ವೀಕರಿಸುವ ಸಚಿವರ  ಪಟ್ಟಿಯಲ್ಲಿ ಅನಂತ್ ಕುಮಾರ್ ಹೆಗಡೆಯವರಿಗೆ ಸ್ಥಾನ ಸಿಕ್ಕಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ತಿಳಿಸಿವೆ.

     ಬೆಳಗ್ಗೆ 9 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹೊಸ ಸಚಿವರ ಪಟ್ಟಿ ಹರ್ದೀಪ್ ಸಿಂಗ್ ಪುರಿ, ಗಜೇಂದ್ರ ಶೇಖವತ್, ಅಶ್ವಿನಿಕುಮಾರ್ ಚೌಭೆ, ಶಿವ ಪ್ರತಾಪ್ ಶುಕ್ಲಾ, ರಾಜ್ ಕುಮಾರ್ ಸಿಂಗ್, ಸತ್ಯಪಾಲ್ ಸಿಂಗ್, ಅಲ್ಫಾನ್ಸೋ ಕಣ್ಣತನಂಗೆ ಸಚಿವ ಸ್ಥಾನ ಸಿಗಲಿದೆ.

    ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಕ್ಯಾಬಿನೆಟ್ ದರ್ಜೆಗೆ ಭಡ್ತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.