Tag: Anantkumar Hegde

  • ಲತಾ ಮಂಗೇಶ್ಕರ್ ಶವದ ಮೇಲೆ ಉಗುಳುವುದು, ಶಾರೂಖ್ ಹೀನ ಮನಸ್ಥಿತಿಯನ್ನು ತೋರಿಸುತ್ತದೆ: ಅನಂತಕುಮಾರ್ ಹೆಗಡೆ ಕಿಡಿ

    ಲತಾ ಮಂಗೇಶ್ಕರ್ ಶವದ ಮೇಲೆ ಉಗುಳುವುದು, ಶಾರೂಖ್ ಹೀನ ಮನಸ್ಥಿತಿಯನ್ನು ತೋರಿಸುತ್ತದೆ: ಅನಂತಕುಮಾರ್ ಹೆಗಡೆ ಕಿಡಿ

    ಕಾರವಾರ: ಭಾರತ ರತ್ನ ಲತಾ ಮಂಗೇಶ್ಕರ್ ಅಂತಿಮ ದರ್ಶನ ಪಡೆಯುವ ವೇಳೆ ಶ್ರದ್ಧಾಂಜಲಿ ಸಲ್ಲಿಸಲು ಆಗಮಿಸಿದ್ದ ಶಾರೂಖ್ ಖಾನ್ ಮಾಸ್ಕ್ ತೆಗೆದು ಲತಾ ಮಂಗೇಶ್ಕರ್ ಮೃತದೇಹದ ಮೇಲೆ ಉಗುಳಿದ್ದಾರೆ. ಶಾರುಖ್ ಖಾನ್‍ರವರು ಶ್ರದ್ಧಾಂಜಲಿ ಸಲ್ಲಿಸುತ್ತಿರುವ ವೀಡಿಯೋವನ್ನು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಾಲಿವುಡ್ ಖಾನ್‍ಗಳ ದರಿದ್ರ ಮನಸ್ಥಿತಿಯೇ ಹೀಗೆ, ತಮ್ಮ ಅಸಹಜ ನಡವಳಿಕೆಯಿಂದ ದೇಶದ ಗಮನ ತಮ್ಮತ್ತ ಸೆಳೆಯುವುದು, ಪ್ರಚಾರದ ತೆವಲಾಗಿದೆ. ಸಂಪ್ರದಾಯದ ಹೆಸರಿನಲ್ಲಿ ಅನಿಷ್ಟಗಳನ್ನು ಮಾಡುವುದು, ರಾಷ್ಟ್ರಧ್ವಜವನ್ನು ಹೊದಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಶವದ ಮೇಲೆ ಉಗುಳುವುದು, ಅವರ ಹೀನ ಮನಸ್ಥಿತಿಯನ್ನು ತೋರಿಸುತ್ತದೆ. ಇವುಗಳನ್ನು ಬುಡಸಮೇತ ಕಿತ್ತುಹಾಕೋ ತನಕ ಹೀಗೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಾರೂಖ್ ಜೊತೆ ಪ್ರಾರ್ಥನೆ ಮಾಡಿದ್ದು ಪತ್ನಿ ಗೌರಿ ಖಾನ್ ಅಲ್ಲ

    ವೀಡಿಯೋದಲ್ಲಿ ಏನಿದೆ?: ಲತಾ ಮಂಗೇಶ್ಕರ್ ಅವರ ಮೃತದೇಹದ ಎದುರಿನಲ್ಲಿ ನಿಂತು ಪ್ರಾರ್ಥನೆ ಮಾಡುವಾಗ ಶಾರೂಖ್ ಖಾನ್ ಅವರು ಮಾಸ್ಕ್ ಧರಿಸಿದ್ದರು. ಗಾಯಕಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥನೆ ಮಾಡಿದರು. ಬಳಿಕ ಮಾಸ್ಕ್ ತೆಗೆದು ಪಾರ್ಥಿವ ಶರೀರದ ಕಡೆಗೆ ಗಾಳಿ ಊದಿದರು. ಮುಸ್ಲಿಂ ಸಮುದಾಯದಲ್ಲಿ ಈ ರೀತಿ ಮಾಡುವ ಪದ್ಧತಿ ಇದೆ. ಆದರೆ ಅವರು ಗಾಳಿ ಊದಿದ್ದನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಲತಾಜೀ ಪಾರ್ಥಿವ ಶರೀರಕ್ಕೆ ಶಾರೂಖ್ ಖಾನ್ ಉಗಿದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಅವರನ್ನು ಸಚಿನ್ ತೆಂಡೂಲ್ಕರ್ ಏನೆಂದು ಕರೆಯುತ್ತಿದ್ದರು ಗೊತ್ತಾ?

  • ಎಲ್ಲರನ್ನ ನೋಡಿದಾಗ ರಾಮಾಯಣ ನೆನಪಾಗುತ್ತೆ – ಸಂಸದ ಅನಂತಕುಮಾರ್ ಮತ್ತೆ ವಿವಾದ

    ಎಲ್ಲರನ್ನ ನೋಡಿದಾಗ ರಾಮಾಯಣ ನೆನಪಾಗುತ್ತೆ – ಸಂಸದ ಅನಂತಕುಮಾರ್ ಮತ್ತೆ ವಿವಾದ

    ಬೆಳಗಾವಿ: ಮಾಸ್ಕ್ ಹಾಕಿಕೊಂಡವರನ್ನು ನೋಡಿದರೆ ರಾಮಾಯಣ ನೆನಪಾಗುತ್ತದೆ ಎಂದು ಹೇಳುವ ಮೂಲಕ ಕೇಂದ್ರದ ಮಾಜಿ ಸಚಿವ ಮತ್ತು ಸಂಸದ ಅನಂತಕುಮಾರ್ ಹೆಗಡೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: BSNL ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು: ಸಂಸದ ಅನಂತಕುಮಾರ್ ಹೆಗಡೆ

    ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಂಸದ ಅನಂತಕುಮಾರ್ ಹೆಗಡೆ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ. ಇದೀಗ ಕೊರೊನಾ ಕುರಿತು ಭಾಷಣ ಮಾಡುವಾಗ ಮಾತನಾಡಿದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಮಗೆ ಸುಮ್ಮನೆ ಹೆದರಿಸಿದ್ದಾರೆ. ಈ ಕೊರೊನಾ, ಕಿರೊನಾ ಏನೋ ಇಲ್ಲ. ತಪ್ಪು ತಿಳಿದುಕೊಳ್ಳಬೇಡಿ ತಮಾಷೆಗೆ ಹೇಳುವುದು ನಾನು, ಎಲ್ಲರನ್ನು ನೋಡಿದಾಗ ನನಗೆ ತುಂಬಾ ರಾಮಾಯಣ ನೆನಪಾಗುತ್ತೆ. ಎಷ್ಟು ಪ್ರೀತಿ ಅಂತ ಎಂದು ಹೇಳುವ ಮೂಲಕ ಮಾಸ್ಕ್ ಹಾಕಿಕೊಂಡವರನ್ನು ಸಂಸದ ಅನಂತಕುಮಾರ್ ಹೆಗಡೆ ಕಪಿಗಳಿಗೆ ಹೋಲಿಸಿದ್ದಾರೆ.

    ಅಷ್ಟೇ ಅಲ್ಲದೇ ಇರಲಿ, ಈ ಭ್ರಮೆಯಲ್ಲಿ ನಾವು ಬಹಳ ದಿವಸ ಬದುಕುವುದು ಬೇಡ. ಅದನ್ನು ನಾವು ನಮ್ಮ ಮನೆಯಲ್ಲೇ ಎದುರಿಸಬೇಕಾಗುತ್ತದೆ. ಹೇಗೆ ನೆಗಡಿ ಬಂದಿದೆ. ಜ್ವರ ಬಂದಿದೆ. ಹಾಗೆ ಕೊರೊನಾ ಕೂಡ. ಇದನ್ನು ನಾವು ಮನೆಯಲ್ಲಿ ಎದುರಿಸಬೇಕಾಗುತ್ತದೆ. ಇದರ ಬಗ್ಗೆ ತೆಲೆಕೆಡಿಸಿಕೊಂಡರೆ ಆರ್ಥಿಕತೆ ದಿವಾಳಿತನ ಆಗುತ್ತೆ ಎಂದು ಅನಂತಕುಮಾರ್ ಹೆಗಡೆ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ.

    ಕೆಲವು ದಿನಗಳ ಹಿಂದೆ ಕಾರವಾರದ ಕುಮಟಾದಲ್ಲಿ ಸಂಸದರ ಹಾಗೂ ಕೇಂದ್ರ ಸರ್ಕಾರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಬಿಎಸ್‍ಎನ್‍ಎಲ್ ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು, ದೇಶದ್ರೋಹಿಗಳೇ ಆ ಸಂಸ್ಥೆಯಲ್ಲಿ ತುಂಬಿಕೊಂಡಿದ್ದಾರೆ ಎಂದು ಕಿಡಿ ಕಾರುವ ಮೂಲಕ ವಿವಾದಿತ ಹೇಳಿಕೆ ನೀಡಿದ್ದರು.

  • ತಬ್ಲಿಘಿ ಜಮಾತ್ ಉಗ್ರ ಸಂಘಟನೆ, ದೇಶಾದ್ಯಂತ ಸೋಂಕು ಹರಡಿಸಿದ್ದಾರೆ -ಅನಂತ್‍ಕುಮಾರ್ ಹೆಗ್ಡೆ

    ತಬ್ಲಿಘಿ ಜಮಾತ್ ಉಗ್ರ ಸಂಘಟನೆ, ದೇಶಾದ್ಯಂತ ಸೋಂಕು ಹರಡಿಸಿದ್ದಾರೆ -ಅನಂತ್‍ಕುಮಾರ್ ಹೆಗ್ಡೆ

    – ಹಲವು ಉಗ್ರರಿಗೂ ಸಂಘಟನೆಗೂ ಸಂಬಂಧ
    – ಲಾಕ್‍ಡೌನ್ ವಿಫಲಗೊಳಿಸಲೆಂದೇ ದೇಶದೆಲ್ಲೆಡೆ ಓಡಾಟ
    – ಇಸ್ಲಾಮಿಕ್ ಮೂಲಭೂತವಾದಿಗಳ ಕೈಯಲ್ಲಿ ವೈರಾಣು ಅಸ್ತ್ರವಾಯಿತೇ?

    ಕಾರವಾರ: ಸದಾ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್‍ಕುಮಾರ್ ಹೆಗ್ಡೆ ತಮ್ಮ ಫೇಸ್‍ಬುಕ್ ನಲ್ಲಿ ತಬ್ಲಿಘಿ ಜಮಾತ್ ಕುರಿತು ಸುದೀರ್ಘ ಲೇಖನ ಬರೆದು, ಅದೊಂದು ಉಗ್ರ ಸಂಘಟನೆ ಎಂದು ಬಿಂಬಿಸಿದ್ದಾರೆ.

    ದೇಶಾದ್ಯಂತ ಸೋಂಕು ಅಂಟಿಸುತ್ತಿರುವ ರಹಸ್ಯ ಸಂಘಟನೆ – ತಬ್ಲಿಘಿ ಜಮಾತ್ ಒಳಸುಳಿಗಳು ಎಂದು ಶೀರ್ಷಿಕೆಯಡಿ ಲೇಖನವನ್ನು ತಮ್ಮ ಫೇಸ್‍ಬುಕ್ ಹಾಗೂ ಬ್ಲಾಗ್ ನಲ್ಲಿ ಇಂದು ಪ್ರಕಟಿಸಿದ್ದಾರೆ. ಈ ಲೇಖನದಲ್ಲಿ ಅನಂತ್‍ಕುಮಾರ್ ಅವರು ತಬ್ಲಿಘಿ ಇಸಹಾಸವೇನು? ಭಾರತ ಮೂಲದ ಇಸ್ಲಾಂ ಧರ್ಮ ಪ್ರಚಾರದ ಸಂಸ್ಥೆ ವಿಶ್ವವ್ಯಾಪಿ ಬೆಳೆದಿದ್ದು ಹೇಗೆ? ತಬ್ಲಿಘಿಗೂ ಉಗ್ರಸಂಘನೆಗೂ ಹೇಗೆ ನಂಟು? ಧರ್ಮ ಪ್ರಚಾರದಕ್ಕೆ ತಬ್ಲಿಘಿ ಜಮಾತ್ ಸದಸ್ಯರನ್ನು ಹೇಗೆ ಬಳಸಿಕೊಂಡಿತು? ರಷ್ಯಾ- ಅಫ್ಘಾನಿಸ್ತಾನ್‍ನ ವಿವಾದವೇನು? ಕೊರೊನಾ ವೈರಸ್ ಹಾಗೂ ತಬ್ಲಿಘಿ ಜಮಾತ್ ನಂಟಿನ ಬಗ್ಗೆ ಉಲ್ಲೇಖಿಸಿದ್ದಾರೆ.

    “ಇಸ್ಲಾಮ್ ರಾಜಕಾರಣ” ಎಂಬ ತಲೆಬರಹ ನೀಡಿ ಅನಂತ್‍ಕುಮಾರ್ ಬರೆದ ಯಥಾವತ್ ಬರಹವನ್ನು ಇಲ್ಲಿ ನೀಡಲಾಗಿದೆ.

    ದೇಶಾದ್ಯಂತ ಸೋಂಕು ಅಂಟಿಸುತ್ತಿರುವ ರಹಸ್ಯ ಸಂಘಟನೆ – ತಬ್ಲೀಘಿ ಜಮಾತ್ ಒಳಗಿನ ಒಳಸುಳಿಗಳು.
    ಪ್ರಪಂಚದ ಅಷ್ಟೂ ದೇಶಗಳ ಅದೆಷ್ಟೋ ಮಂದಿ ಪ್ರಚಂಡ ವಿಜ್ಞಾನಿಗಳಿಗೂ ಸವಾಲಾಗಿರುವ, ಎಲ್ಲಾ ವೈದ್ಯರಿಗೂ ಕಗ್ಗಂಟಾಗಿರುವ, ಜಗತ್ತಿನ ಅಷ್ಟೂ ಬಲಾಢ್ಯ ದೇಶಗಳೇ ಬೆಚ್ಚಿಬಿದ್ದಿರುವ, ಅಬಾಲ ವೃದ್ಧರಾದಿಯಾಗಿ ಎಲ್ಲರೂ ಭಯಭೀತರಾಗಿರುವ ಕೊರೊನಾ ಎಂಬ ಮಹಾಮಾರಿಯಂಥ ವೈರಸ್ಸು ಎಲ್ಲ ಕಡೆ ಹಬ್ಬುತ್ತಿದೆ. ಈ ಮಾರಣಾಂತಿಕ ಸೋಂಕು ವ್ಯಾಪಕವಾಗಿ ಯಾರೂ ಊಹಿಸದಷ್ಟು ವೇಗದಲ್ಲಿ ಹರಡುತ್ತಿದೆ. ಅದು ಪ್ರಸರಣವಾದೆಡೆಯಲ್ಲೆಲ್ಲಾ ಮರಣ ತಾಂಡವವಾಡುತ್ತಿದೆ. ಬರಿಗಣ್ಣಿಗೆ ಕಾಣಿಸದ ಈ ಭೀಕರ ಹೆಮ್ಮಾರಿಯನ್ನು ಮಣಿಸುವುದು ಹೇಗೆಂಬ ಉಪಾಯಗಾಣದೆ ಆಧುನಿಕ ಮನುಷ್ಯ ತಲ್ಲಣಿಸಿ ಮನೆಯೊಳಗೇ ಅವಿತುಕುಳಿತಿದ್ದಾನೆ. ತೀರಾ ಅಸಹಾಯಕನಾಗಿದ್ದಾನೆ.

    ನಾವು ಬುದ್ಧಿವಂತ ಮನುಷ್ಯರು ಕಟ್ಟಿಕೊಂಡಿರುವ ಆ ಅತ್ಯಾಧುನಿಕ ಜಗತ್ತಿಗೆ ಇಂಥದ್ದೊಂದು ಗಂಡಾಂತರ ಬರಬಹುದು, ಅದರಲ್ಲೂ ಕಣ್ಣಿಗೆ ಕಾಣಿಸದ ಒಂದು ಯಕಶ್ಚಿತ್ ವೈರಸ್ಸಿನ ಎದುರು ಹೀಗೆ ಮಾನವ ಜನಾಂಗವೇ ಮರಣಭಯದಿಂದ ಶರಣಾಗಬಹುದೆನ್ನುವ ಕಿಂಚಿತ್ ಊಹೆಯೂ ಯಾರಿಗೂ ಇರಲಿಲ್ಲ.

    ಅದೇ ರೀತಿ ಕೊರೊನಾ ಎಂಬ ಮಾಹಾಮಾರಿ ವೈರಾಣುವನ್ನು ಮಣಿಸಲು, ಅದು ಹರಡುವುದನ್ನು ತಡೆಗಟ್ಟಲು ಇಡೀ ದೇಶವೇ ಒಗ್ಗಟ್ಟಾಗಿ ಹೋರಾಡಿ, ಪ್ರಪಂಚದ ಬೇರೆಲ್ಲಾ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಬಹಳಷ್ಟು ಯಶಸ್ಸುಗಳಿಸಿ, ಅತ್ಯಂತ ಕಡಿಮೆ ಸಂಖ್ಯೆಯ ಸೋಂಕಿತರನ್ನು ಹೊಂದಿ ಇನ್ನೇನು ಈ ಯುದ್ಧದಲ್ಲಿ ನಾವು ನಿಶ್ಚಿತವಾಗಿಯೂ ಜಯಗಳಿಸುತ್ತೇವೆ ಎಂಬ ದೃಢನಂಬಿಕೆಯಲ್ಲಿರುವಾಗಲೇ ಇಂಥಾದ್ದೊಂದು ದೇಶ ದ್ರೋಹದ ಕೆಲಸ ನಡೆಯಬಹುದು, ಗಂಭೀರ ಮಾರಣಾಂತಿಕ ಕಾಯಿಲೆಯೊಂದನ್ನು ದೇವರ ಹೆಸರಿನಲ್ಲಿ, ನಂಬಿಕೆಯ ಹೆಸರಿನಲ್ಲಿ ದೇಶದ ಮೂಲೆ ಮೂಲೆಗೂ ಹರಡಬಹುದು. ಆ ಮೂಲಕ ಭಾರತದ ಕೋಟ್ಯಂತರ ಪ್ರಜೆಗಳಿಗೆ ಗಂಡಾಂತರ ಉಂಟುಮಾಡಬಹುದೆನ್ನುವ ಕಿಂಚಿತ್ ಊಹೆಯೂ ಯಾರಿಗೂ ಇರಲಿಲ್ಲ.

    ಕೊರೊನಾ ಎಂಬ ನಿಗೂಢ ವೈರಸ್ಸಿನಿಂದ ಉಂಟಾಗಬಹುದಾದ ಅಪಾಯದ ಅರಿವೇ ಇಲ್ಲದೆ, ಅದನ್ನು ಅರ್ಥ ಮಾಡಿಕೊಳ್ಳಲಾಗದೆ ಜಗತ್ತಿನ ಅತ್ಯಂತ ಮುಂದುವರಿದ ದೇಶಗಳ ವಿಜ್ಞಾನಿಗಳು, ವೈದ್ಯರು ಹೇಗೆ ಸೋತು ಹೋದರೋ, ಅದೇ ರೀತಿ ತಬ್ಲಿಘಿ ಜಮಾತ್ ಎಂಬ ರಹಸ್ಯ ಸಂಘಟನೆ ಮತ್ತು ಇಸ್ಲಾಮ್ ಎಂಬ ಅಪಾಯಕಾರಿ ಮತವನ್ನು, ಅದು ಇಡೀ ಮಾನವಜನಾಂಗಕ್ಕೆ ತಂದೊಡ್ಡಲಿರುವ ಗಂಡಾಂತರವನ್ನು ಅಂದಾಜಿಸುವಲ್ಲಿ ಇಡೀ ಪ್ರಪಂಚದ ಅಷ್ಟೂ ರಾಜಕಾರಣಿಗಳು, ರಾಜತಂತ್ರಜ್ಞರು, ಮುತ್ಸದ್ದಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಅಂತ ಅನಿಸುತ್ತಿದೆ. ಒಂದರ್ಥದಲ್ಲಿ ವೇಗವಾಗಿ ವೃದ್ಧಿಗೊಳ್ಳುತ್ತಾ ಜಗತ್ತಿನಾದ್ಯಂತ ತನ್ನ ಕರಾಳ ಹಸ್ತವನ್ನು ಪಸರಿಸುತ್ತಾ ಮಾರಣಹೋಮ ಎಸಗುತ್ತಿರುವ ಕೊರೊನಾ ವೈರಸ್ ಮತ್ತು ಅದೇ ರೀತಿ ವೇಗವಾಗಿ ವೃದ್ಧಿಗೊಳ್ಳುತ್ತಾ, ಜಗತ್ತಿನಾದ್ಯಂತ ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳ ಮೂಲಕ ಮನುಕುಲಕ್ಕೇ ಗಂಡಾಂತರ ತಂದೊಡ್ಡುತ್ತಿರುವ ಇಸ್ಲಾಮ್, ಈ ಎರಡಕ್ಕೂ ಒಂದು ರೀತಿಯ ಹೋಲಿಕೆ ಇದೆ.

    ತಬ್ಲೀಘಿ ಜಮಾತ್, ಭಾರತದಲ್ಲೇ ಹುಟ್ಟಿ ಇವತ್ತು ವಿಶ್ವದೆಲ್ಲೆಡೆ ಬೇರುಬಿಟ್ಟು ಹರಡಿಕೊಂಡು ಕೋಟ್ಯಂತರ ಸದಸ್ಯರನ್ನು ಹೊಂದಿರುವ ಒಂದು ಖಟ್ಟರ್ ಮೂಲಭೂತವಾದಿ ಇಸ್ಲಾಮಿಕ್ ಸಂಸ್ಥೆ. ಇದು ಮೂಲತಃ ಭಾರತದ್ದೇ ಇನ್ನೊಂದು ಇಸ್ಲಾಮಿಕ್ ಸಂಸ್ಥೆ ದಾರುಲ್ ಉಲೂಮ್ ದೇವ್ ಬಂದ್ ನ ಒಂದು ಶಾಖೆಯಾಗಿ ಪ್ರಾರಂಭವಾಯಿತು. ಇದರ ಮೂಲ ಉದ್ದೇಶ ಇಸ್ಲಾಮ್ ಪ್ರಚಾರ. ಅದರಲ್ಲೂ ಪ್ರವಾದಿ ಮೊಹಮ್ಮದರ ಕಾಲದಲ್ಲಿದ್ದಂತೆಯೇ ಕಟ್ಟುನಿಟ್ಟಿನ ಜೀವನ ಪದ್ಧತಿ ರೂಢಿಸಿಕೊಳ್ಳಲು ಮುಸ್ಲಿಮರನ್ನೇ ಪ್ರೇರೇಪಿಸುವುದು ಇದರ ಆಶಯ. ದಾರಿ ತಪ್ಪಿರುವ, ಇಸ್ಲಾಮ್ ಧರ್ಮವನ್ನು ಸರಿಯಾಗಿ ಪಾಲಿಸದ ಮುಸ್ಲಿಮರೇ ಈ ಸಂಸ್ಥೆಯ ಗುರಿ. ಖುರಾನ್ ಹದೀಸ್, ಸುನ್ನಾಹ್‍ವನ್ನೇ ಭೋಧಿಸುವ, ಮತಪ್ರಚಾರದ ಕೆಲಸ ಬಿಟ್ಟರೆ ಯಾವುದೇ ರಾಜಕೀಯ ಉದ್ದೇಶಗಳಿಲ್ಲದ ಸಂಘಟನೆ ಅಂತ ಹೇಳಿಕೊಂಡಿದ್ದ ತಬ್ಲಿಘಿ ಜಮಾತ್ ನ ಪ್ರವರ್ತಕ ಮೌಲಾನಾ ಮೊಹಮ್ಮದ್ ಇಲ್ಯಾಸ್ ಖಾಂಡಾಲವಿ. ರಾಜಕೀಯ ಉದ್ದೇಶ ಇಲ್ಲದ ಸಂಘಟನೆಯಾದುದರಿಂದ ಭಾರತವನ್ನಾಳುತ್ತಿದ್ದ ಬ್ರಿಟಿಷರೂ ಇದಕ್ಕೆ ಸಂಪೂರ್ಣ ಬೆಂಬಲ ನೀಡಿದರು. ಹೀಗೆ 1928ರಲ್ಲಿ ಪ್ರಾರಂಭವಾದ ತಬ್ಲಿಘಿ ಜಮಾತ್‍ಗೆ ಇದ್ದ ಮೂಲ ಉದ್ದೇಶವೇ ಮತಾಂತರ.

    ಹೌದು. ಅದಕ್ಕೊಂದು ಐತಿಹಾಸಿಕ ಹಿನ್ನೆಲೆಯೂ ಇದೆ. ಮರಾಠರ ಆಕ್ರಮಣದಿಂದ ಮುಘಲರು ಸೋತುಹೋದ ಬಳಿಕ ಭಾರತದ, ಅದರಲ್ಲೂ ದೆಹಲಿಯ ಅಧಿಕಾರ ಗದ್ದುಗೆ ಮುಸ್ಲಿಮರ ಕೈ ತಪ್ಪಿ ಹೋಗಿತ್ತು. ಮುಘಲರ ಕಾಲದಲ್ಲಿ ಲಕ್ಷಾಂತರ ರಾಜಪೂತರು ಇಸ್ಲಾಮಿಗೆ ಬಲವಂತದ ಮತಾಂತರವಾಗಿದ್ದರು. ಇವರಲ್ಲಿ ಹೆಚ್ಚಿನವರು ಮೇವಾರಿ ಭಾಷೆ ಮಾತಾಡುತ್ತಿದ್ದ ಮೀಯೋ ಮುಸ್ಲಿಮರಾಗಿದ್ದರು. ಯಾವಾಗ ದೆಹಲಿಯಲ್ಲಿ ಮುಸ್ಲಿಮರ ಪ್ರಭಾವ ಕಡಿಮೆಯಾಯಿತೋ ಆಗ ಈ ಮುಸ್ಲಿಂ ರಾಜಪೂತರೆಲ್ಲಾ ಮರಳಿ ಹಿಂದೂ ಧರ್ಮಕ್ಕೆ ಮತಾಂತರವಾಗತೊಡಗಿದರು. ಅದಕ್ಕೆಂದೇ ಸ್ವಾಮೀ ದಯಾನಂದ ಸರಸ್ವತಿ ಮತ್ತವರ ಆರ್ಯ ಸಮಾಜ “ಶುದ್ಧೀಕರಣ” ಎಂಬ ಕಾರ್ಯಕ್ರಮ ರೂಪಿಸಿದರು. ದಯಾನಂದರ ಬಳಿಕ ಅವರ ಶಿಷ್ಯ ಸ್ವಾಮೀ ಶ್ರದ್ಧಾನಂದ 1923 ರಲ್ಲಿ “ಭಾರತೀಯ ಹಿಂದೂ ಶುದ್ಧಿ ಮಹಾಸಭಾ” ಎಂಬ ಹೊಸ ಸಂಘಟನೆಯನ್ನೇ ಶುರುಮಾಡಿ. ಬಲವಂತವಾಗಿ ಇಸ್ಲಾಮಿಗೆ ಮತಾಂತರವಾಗಿದ್ದವರನ್ನೆಲ್ಲ ಮರಳಿ ಮಾತೃಧರ್ಮಕ್ಕೆ ಕರೆತರುವ ಕೆಲಸವನ್ನು ದೊಡ್ಡಮಟ್ಟದಲ್ಲೇ ಶುರುಮಾಡಿದರು. ಇದಕ್ಕೆ ಪ್ರತಿಯಾಗಿ ಎರಡೇ ವರ್ಷ ಕಳೆಯುವಷ್ಟರಲ್ಲಿ ಮೌಲಾನಾ ಮೊಹಮ್ಮದ್ ಇಲ್ಯಾಸ್ ಖಾಂಡಾಲವಿ ತಬ್ಲಿಘಿ ಜಮಾತ್ ಶುರುಮಾಡಿದ್ದ. ಅದಕ್ಕೆ ಬ್ರಿಟಿಷರ ಕೃಪಾಶೀರ್ವಾದ ಕೂಡ ದೊರಕಿತು.

    ತಬ್ಲಿಘಿ ಜಮಾತ್ ಅಲ್ಪ ಕಾಲದಲ್ಲೇ ದೇಶದಾದ್ಯಂತ ಪಸರಿಸಿತು. ಪ್ರವಾದಿಯ ಕಾಲದಲ್ಲಿ ಅನುಸರಿಸಲಾಗುತ್ತಿತ್ತೆಂದು ಹೇಳಲಾದ ಖಟ್ಟರ್ ಇಸ್ಲಾಮನ್ನು ಬೋಧನೆ ಮಾಡುತ್ತಿದ್ದ ತಬ್ಲಿಘಿ ಜಮಾತ್, ತನ್ನ ರೀತಿಯ ಧರ್ಮ ಪ್ರಚಾರದ ಉದ್ದೇಶಕ್ಕೆಂದೇ ಮುಹಮ್ಮದ್ ಝಕಾರಿಯಾ ಖಾಂಡಾಲವಿ ಬರೆದ ‘ತಬ್ಲಿಘಿ ನಿಸಾಬ್’ ಎಂಬ ಪುಸ್ತಕವನ್ನು ಪಠ್ಯ ಪುಸ್ತಕದಂತೆ ಉಪಯೋಗಿಸುತ್ತಿತ್ತು. ಇದು ಹಲವಾರು ಪುಸ್ತಕಗಳ ಕಂತೆ. ಇದರಲ್ಲಿ ಕಾಲಾಂತರದಲ್ಲಿ ಸೌಮ್ಯವಾದಿ ಸೂಫಿ ಪಂಥದ ಕತೆಗಳೂ ಸೇರಿಕೊಂಡವು. ಆದರೆ ಬಳಿಕ ಇವುಗಳನ್ನೆಲ್ಲ ಪರಿಷ್ಕರಿಸಿ ಖಟ್ಟರ್ ಇಸ್ಲಾಮಿನ ಬೋಧನೆಗಳಷ್ಟನ್ನೇ ಉಳಿಸಿ ‘ಸಹೀಹ್ ಫಝಯ್ಲ್ ಎ ಅಮಾಲ್’ ಎಂಬ ಪುಸ್ತಕವನ್ನು ಪ್ರಕಟಿಸಲಾಯಿತು. ಇದರೊಂದಿಗೆ ತಬ್ಲಿಘಿ ಜಮಾತ್ ಅನ್ನುವುದು ಖಟ್ಟರ್ ಮೂಲಭೂತವಾದಿ ಇಸ್ಲಾಮನ್ನು ಭೋಧನೆ ಮಾಡುವ ಬೃಹತ್ ಸಂಸ್ಥೆಯಾಗಿ ಬೆಳೆಯಿತು.

    ತಬ್ಲಿಘಿ ಜಮಾತ್‍ಗೆ ಒಂದು ದೊಡ್ಡ ತಿರುವು ಸಿಕ್ಕಿದ್ದು ದೇಶ ವಿಭಜನೆಯಾಗಿ ಪಾಕಿಸ್ತಾನ ರಚನೆಯಾದಾಗ. ಪಾಕಿಸ್ತಾನದ ರಾಯ್‍ವಿಂಡ್‍ನಲ್ಲಿ ತಬ್ಲಿಘಿ ಜಮಾತ್ ನ ಬೃಹತ್ ಶಾಖೆಯೊಂದು ಪ್ರಾರಂಭವಾಯಿತು ಮತ್ತು ಇದಕ್ಕೆ ಪಾಕಿಸ್ತಾನ ಸರ್ಕಾರದ ಸಂಪೂರ್ಣ ಬೆಂಬಲ ದೊರಕಿತು. ಮೌಲಾನಾ ಇಲ್ಯಾಸನ ಮಗ ಮೌಲಾನಾ ಮೊಹಮ್ಮದ್ ಯೂಸುಫ್ ಮತ್ತು ಆತನ ಉತ್ತರಾಧಿಕಾರಿ ಮೌಲಾನಾ ಇನಾಮುಲ್ ಹಸನ್ ಅವಧಿಯಲ್ಲಿ ತಬ್ಲಿಘಿ ಜಮಾತ್ ಗೆ ಪಾಕಿಸ್ತಾನದಲ್ಲೂ, ಭಾರತದಲ್ಲೂ ಭಾರೀ ರಾಜಕೀಯ ಮತ್ತು ಹಣಕಾಸಿನ ಬೆಂಬಲ ದೊರಕಿ ಅದು ಅಂತಾರಾಷ್ಟ್ರೀಯ ಸಂಘಟನೆಯಾಗಿ ಬೆಳೆಯಿತು. ಅರವತ್ತರ ದಶಕದಲ್ಲಿ ತಬ್ಲಿಘಿ ಜಮಾತ್ ಪಶ್ಚಿಮ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ತಳ ಊರಿತ್ತು. ಎಪ್ಪತ್ತರ ದಶಕದಲ್ಲಿ ಸೌದಿಯ ವಹಾಬಿಗಳ ಸಹಕಾರ ಮೊಟ್ಟಮೊದಲ ಬಾರಿಗೆ ತಬ್ಲಿಘಿ ಜಮಾತ್ ಗೆ ದೊರೆಯಿತು. ಆಗಿನ ಕಾಲದ ಪ್ರಮುಖ ವಹಾಬೀ ಧರ್ಮಗುರು ಶೇಖ್ ಅಬ್ದ್ ಅಲ್ ಇಬ್ನ್ ಬಾಜ್ ತಬ್ಲಿಘಿ ಜಮಾತ್ ಅನ್ನು ಸಂಪೂರ್ಣವಾಗಿ ಬೆಂಬಲಿಸಿದ್ದು ಮಾತ್ರವಲ್ಲ ತಬ್ಲಿಘಿ ಜಮಾತ್ ನ ಧರ್ಮಪ್ರಚಾರಕ ಮೌಲ್ವಿಗಳ ಜೊತೆಗೆ ತಮ್ಮ ವಹಾಬೀ ಪ್ರಚಾರಕರನ್ನೂ ಕಳುಹಿಸಿಕೊಡಲು ಉತ್ತೇಜಿಸಿದರು. ಇದು ತಬ್ಲಿಘಿನ ಇನ್ನೊಂದು ಟರ್ನಿಂಗ್ ಪಾಯಿಂಟ್. ಅಷ್ಟರಲ್ಲಾಗಲೇ ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ತಮ್ಮ ಧರ್ಮ ಪ್ರಚಾರದ ನೆಟ್ ವರ್ಕ್ ಸ್ಥಾಪಿಸಿದ್ದ ತಬ್ಲಿಘಿನ ಜೊತೆಗೆ ಸೌದಿಯ ವಹಾಬಿಗಳು ಕೈಜೋಡಿಸಿ ತಮ್ಮ ಜಾಲವನ್ನು ಬಲಪಡಿಸಿಕೊಳ್ಳುವ ಪ್ಲಾನ್ ಹಾಕಿಕೊಂಡಿದ್ದರು. ಮತ್ತು ಅದರಲ್ಲಿ ಯಶಸ್ವಿಯೂ ಆದರು. ತಬ್ಲಿಘಿಗೆ ಸೌದಿಯಿಂದ ಹಣದ ನೆರವು ಕೂಡಾ ಯಥೇಚ್ಛವಾಗಿ ಹರಿದು ಬಂತು. ಸೌದಿ ಮೂಲದ “ವರ್ಲ್ಡ್ ಮುಸ್ಲಿಂ ಲೀಗ್” ಪ್ರಧಾನ ಪೋಷಕನಾಗಿ ತಬ್ಲಿಘಿಗೆ ಸಹಾಯ ಮಾಡಿತು. ವಾಸ್ತವವಾಗಿ ತಬ್ಲಿಘಿ ಜಮಾತ್ ನ ಪ್ರಚಾರಕರು ಸ್ವಯಂ ಸೇವಕರು, ಮತ್ತು ತಮ್ಮ ಕೈಯಿಂದಲೇ ಖರ್ಚು ಮಾಡಿಕೊಂಡು ಪ್ರಯಾಣಿಸುತ್ತಾ ಊರೂರು ತಿರುಗಿ ಧರ್ಮ ಪ್ರಚಾರ ಮತ್ತು ಮತಾಂತರ ಮಾಡುತ್ತಿದ್ದರು. ಆದರೆ ಕಾಲಾಂತರದಲ್ಲಿ ಸೌದಿಯ ಹಣ ಹರಿದುಬಂದಂತೆಲ್ಲ ತಬ್ಲಿಘಿನ ಪ್ರಚಾರಕರ ಪ್ರಯಾಣದ ಖರ್ಚಿಗೆ ಈ ಹಣ ಬಳಕೆಯಾಗತೊಡಗಿತು.

    ಸೌದಿ ಮೂಲದ ವರ್ಲ್ಡ್ ಮುಸ್ಲಿಂ ಲೀಗ್ 1978ರಷ್ಟು ಹಿಂದೆಯೇ ಇಂಗ್ಲೆಂಡಿನ ಡ್ರ್ಯುಸ್ ಬರಿಯಲ್ಲಿ ಭಾರೀ ದೊಡ್ಡ ಕಟ್ಟಡವೊಂದನ್ನು ತಬ್ಲಿಘಿ ಜಮಾತ್ ಗೆ ಮಸೀದಿಗಾಗಿ ನೀಡಿತು. ಅವತ್ತಿನಿಂದ ಈ ಕಟ್ಟಡ ಪೂರ್ತಿ ಯುರೋಪಿಗೆ ತಬ್ಲಿಘಿ ಜಮಾತ್ ನ ಹೆಡ್ ಕ್ವಾರ್ಟರ್ಸ್ ಆಗಿ ಬದಲಾಯಿತು. ತಬ್ಲಿಘಿ ಧರ್ಮ ಪ್ರಚಾರಕರು ಆಫ್ರಿಕಾದಲ್ಲಿ ಅವಿರತವಾಗಿ ಕೆಲಸ ನಿರ್ವಹಿಸಿದರು. ಈ ಕೆಲಸಕ್ಕಾಗಿ ಅವರಿಗೆ ವರ್ಲ್ಡ್ ಮುಸ್ಲಿಂ ಲೀಗ್ ನಿಂದ್ ಭರ್ಜರಿ ಸಂಬಳ ಸಿಗತೊಡಗಿತು. ನಿಧಾನವಾಗಿ ಭಾರತೀಯ ಮೂಲದ ಈ ತಬ್ಲಿಘಿ ಜಮಾತ್ ವಿಶ್ವದಲ್ಲೇ ಅತೀದೊಡ್ಡ ಧರ್ಮ ಪ್ರಚಾರಕ ಸಂಸ್ಥೆಯಾಗಿ ಸದ್ದಿಲ್ಲದೆಯೇ ಬೆಳೆದುಬಿಟ್ಟಿತು. ಆದರೆ ಈ ಸಂಘಟನೆಯ ಇಮೇಜ್ ಅನ್ನು ಬಹಳ ಎಚ್ಚರಿಕೆಯಿಂದ ಕಾಪಾಡಲಾಯಿತು. ತಬ್ಲಿಘಿ ಜಮಾತ್ ಯಾವುದೇ ಕಾರಣಕ್ಕೂ ರಾಜಕೀಯ ವಿಚಾರಕ್ಕೆ ತಲೆತೂರಿಸಲೇ ಇಲ್ಲ. ತನ್ನದು ರಾಜಕೀಯರಹಿತವಾದ ಕೇವಲ ಧರ್ಮ ಪ್ರಚಾರದ ಕೆಲಸ ಅಂತ ವ್ಯವಸ್ಥಿತವಾಗಿ ರಹಸ್ಯವಾಗಿಯೇ ಪ್ರಚಾರ ಕೂಡ ಮಾಡಿಕೊಂಡಿತು. ಹಾಗಾಗಿ ಮೂಲಭೂತವಾದಿ ಇಸ್ಲಾಮಿನ ಬಗ್ಗೆ, ಅದರ ವಿವಿಧ ಸಂಘಟನೆಗಳ ಕಾರ್ಯ ಚಟುವಟಿಕೆಯ ಮೇಲೆ ಕಣ್ಣಿಡುವ ಬೇರೆ ಬೇರೆ ದೇಶಗಳ ಗುಪ್ತಚರ ಇಲಾಖೆಗಳ ತಜ್ಞರಿಗೂ ತಬ್ಲಿಘಿ ಜಮಾತ್ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡಲಾಯಿತು. ಹಾಗಾಗಿ ತಬ್ಲಿಘಿನ ಮೇಲೆ ಅದರ ಕಾರ್ಯ ಚಟುವಟಿಕೆಯ ಮೇಲೆ, ಅದು ಪ್ರಚಾರ ಮಾಡುವ ಮೂಲಭೂತವಾದಿ ಸಿದ್ಧಾಂತಗಳ ಬಗ್ಗೆ ಯಾರಿಗೂ ಸುಳಿವು ಸಿಗಲೇ ಇಲ್ಲ. ಆದರೆ ತಬ್ಲಿಘಿ ಜಮಾತ್‍ನ ವಿಶಾಲ ನೆಟ್ ವರ್ಕ್ ಅನ್ನು ಇತರ ಮೂಲಭೂತವಾದಿ ಸಂಘಟನೆಗಳು ಚೆನ್ನಾಗಿಯೇ ಬಳಸಿಕೊಂಡವು.

    ತಬ್ಲಿಘಿ ಜಮಾತ್ ನ ಪ್ರಚಾರಕರು ತಮ್ಮ ಜಾಲದಲ್ಲಿನ ಎಲ್ಲಾ ಸುನ್ನೀ ಮಸೀದಿಗಳಿಗೂ ಭೇಟಿ ನೀಡಿ ತಮ್ಮ ಮತಾಂತರ ಕಾರ್ಯಕ್ರಮವಾದ “ದಾವಾ” ಗಳಲ್ಲಿ ಅಲ್ಲಿನ ಹುಡುಗರು ಭಾಗವಹಿಸುವಂತೆ ಮಾಡುತ್ತಾರೆ. ಬಳಿಕ ನಿಧಾನವಾಗಿ ಇಸ್ಲಾಮಿನ ಉನ್ನತ ಶಿಕ್ಷಣದ ಆಮಿಷವೊಡ್ಡಿ ತಮ್ಮ ಕೇಂದ್ರ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕಳಿಸಿಕೊಡುತ್ತಾರೆ. ಪಾಕಿಸ್ತಾನದ ರಾಯ್‍ವಿಂಡ್‍ನಲ್ಲಿನ ತಬ್ಲಿಘಿ ಜಮಾತ್ ಕಚೇರಿಯಲ್ಲಿ ವಿದ್ಯಾರ್ಥಿಗಳ ಸಂದರ್ಶನ ನಡೆಸಿ ಸೂಕ್ತ ವಿದ್ಯಾರ್ಥಿಗಳನ್ನು ಉಗ್ರಸಂಘಟನೆಗೆ ರಿಕ್ರೂಟ್ ಮಾಡುವ ಕೆಲಸ ಎಂಭತ್ತರ ದಶಕದಲ್ಲೇ ಪ್ರಾರಂಭವಾಗಿತ್ತು. 1980 ರಲ್ಲಿ ಅಫ್ಘಾನಿಸ್ತಾನದಲ್ಲಿ ರಷ್ಯಾ ವಿರುದ್ಧ ಹೋರಾಡಲು ಪಾಕಿಸ್ತಾನದಲ್ಲಿ ಹುಟ್ಟಿಕೊಂಡ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮ್ ನಲ್ಲಿ ತಬ್ಲಿಘಿ ಜಮಾತ್ ನ ಸದಸ್ಯರ ಪಾತ್ರ ಇತ್ತು. ಆ ಬಳಿಕ ಹುಟ್ಟಿಕೊಂಡ ಹರ್ಕತ್ ಉಲ್ ಮುಜಾಹಿದೀನ್ ಉಗ್ರ ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಹಲವಾರು ಮಂದಿ ತಬ್ಲಿಘಿ ನ ಸದಸ್ಯರೇ ಆಗಿದ್ದರು. 1998ರಲ್ಲಿ ಏರ್ ಇಂಡಿಯಾ ವಿಮಾನವನ್ನು ಅಪಹರಿಸಿ ಮೌಲಾನಾ ಮಸೂದ್ ಅಝರ್ ಮತ್ತವನ ಸಂಗಡಿಗರನ್ನು ಭಾರತದ ಸೆರೆಯಿಂದ ಬಿಡಿಸಿಕೊಂಡ ಪ್ರಕರಣದಲ್ಲಿ ಮತ್ತು 2002ರಲ್ಲಿ ಕರಾಚಿಯಲ್ಲಿ ಫ್ರೆಂಚ್ ಇಂಜಿನಿಯರ್ ಗಳಿದ್ದ ವಾಹನ ಸ್ಫೋಟಿಸಿದ ಪ್ರಕರಣದಲ್ಲಿ ಭಾಗಿಯಾದ ಹರ್ಕತ್ ಉಲ್ ಮುಜಾಹಿದೀನ್ ನ ಉಗ್ರರು ತಬ್ಲಿಘಿ ಜಮಾತ್ ನ ಸದಸ್ಯರೇ ಆಗಿದ್ದರು. ಸುಮಾರು ಆರು ಸಾವಿರಕ್ಕೂ ತಬ್ಲಿಘಿ ಜಮಾತ್ ಸದಸ್ಯರು ಹರ್ಕತ್ ಉಲ್ ಮುಜಾಹಿದ್ದೀನ್ ನ ಕ್ಯಾಂಪ್ ಗಳಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದರು. ಇವರೆಲ್ಲಾ ತಾಲಿಬಾನ್ ಸಂಘಟನೆ ಸೇರಿ ರಷ್ಯಾ ವಿರುದ್ಧ ಹೋರಾಡಿದ್ದರು ಮತ್ತು ರಷ್ಯಾ ಅಫ್ಘಾನಿಸ್ತಾನದಿಂದ ಕಾಲ್ತೆಗೆದ ಮೇಲೆ ಇವರ ಪೈಕಿ ಬಹುತೇಕ ಮಂದಿ ಅಲ್ ಖಾಯ್ದಾ ಸೇರಿದ್ದರು.

    1994ರಲ್ಲಿ ಪ್ಯಾರಿಸ್ ನಲ್ಲಿ ಮತ್ತು ಮೊರಾಕೊ ದಲ್ಲಿ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗವಹಿಸಿದ್ದಕ್ಕಾಗಿ ತಬ್ಲಿಘಿ ಜಮಾತ್ ನ ಸದಸ್ಯರಿಗೆ ಶಿಕ್ಷೆ ಆಗಿದೆ. ಮೊರಾಕೋದ ಮಾರಾಕೆಶ್ ನ ಅಟ್ಲಾಸ್ ಅಸ್ನಿ ಹೋಟೆಲಿನಲ್ಲಿ ಗುಂಡಿನ ದಾಳಿ ನಡೆಸಿ ಇಬ್ಬರು ಸ್ಪ್ಯಾನಿಷ್ ಯಾತ್ರಿಕರ ಸಾವಿಗೆ ಕಾರಣರಾಗಿದ್ದ ಸ್ಟೆಫಾನೀ ಐಟ್ ಇದಿರ್ ಎಂಬ ಆಲ್ಜೀರಿಯಾ ಮೂಲದ ಫ್ರೆಂಚ್ ಪ್ರಜೆ ಮತ್ತು ರೆಡೊಯೆನ್ ಹಮ್ಮದೀ ಎಂಬ ಮೊರಾಕೊ ಪ್ರಜೆಗೆ ಈ ಪ್ರಕರಣದಲ್ಲಿ ಶಿಕ್ಷೆ ಆಗಿದೆ. ಅವರಿಬ್ಬರಿಗೂ ತಬ್ಲಿಘಿ ಜಮಾತ್ ಸಂಪರ್ಕ ಇತ್ತು. ಇತ್ತೀಚೆಗೆ ಮೊರಾಕೋದ ಅತ್ ತಫ್ಕೀರ್ ವಲ್ ಹಿಜ್ರಾಹ್ ಎಂಬ ಉಗ್ರ ಸಂಘಟನೆಯ ಸದಸ್ಯ ಯೂಸೆಫ್ ಫಿಕ್ರೀ ಎಂಬಾತನಿಗೆ 2003ರಲ್ಲಿ ನಲವತ್ತಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಕ್ಯಾಸಬ್ಲ್ಯಾಂಕ ದಲ್ಲಿ ನಡೆದ ಯಹೂದಿ ಚರ್ಚ್ ಮೇಲಿನ ದಾಳಿಗೆ ಸಂಬಂಧಿಸಿ ಮರಣದಂಡನೆ ವಿಧಿಸಲಾಗಿದೆ. ಈತ ಕೂಡಾ ತಬ್ಲಿಘಿ ಜಮಾತ್ ಸದಸ್ಯ ಆಗಿದ್ದ. ಇಷ್ಟಲ್ಲದೆ ತಬ್ಲಿಘಿ ಜಮಾತ್ ಗಿರುವ ಸೌಮ್ಯ ರೂಪದ ಧರ್ಮ ಪ್ರಚಾರದ ಸಂಘಟನೆ ಎಂಬ ಹೆಸರನ್ನೇ ಬಳಸಿಕೊಂಡು ಇತರ ಹಲವು ಭಯೋತ್ಪಾದನಾ ಕೃತ್ಯಗಳಿಗೆ ಸಹಾಯ ಮಾಡಲಾಗಿದೆ. ಪ್ರವಾಸ ಮತ್ತು ಪ್ರವೇಶ ದಾಖಲಾತಿಗಳನ್ನು ಪಡೆದದ್ದು ಸಾಬೀತಾಗಿದೆ. ಮೊರಾಕೋದ ಅಲ್ ಸಲಫಿಯಾಹ್ ಅಲ್ ಜಿಹಾದಿಯಾ ಎಂಬ ಉಗ್ರ ಸಂಘಟನೆ ತನ್ನ ಕರಪತ್ರದಲ್ಲಿ ತನ್ನ ಸದಸ್ಯರಿಗೆ ತಬ್ಲೀಘಿ ಜಮಾತ್ ನ ಸದಸ್ಯರಾಗುವಂತೆ ಕೇಳಿಕೊಂಡಿತ್ತು, ಪಾಕಿಸ್ತಾನದ ಭಯೋತ್ಪಾದನಾ ವೆಬ್ ಸೈಟ್ ಒಂದು ಆದಷ್ಟು ಜನ ಯುವಕರು ತಬ್ಲಿಘಿ ಜಮಾತ್ ಗೆ ಸೇರಿಕೊಳ್ಳಿ, ಅವರ ಮತೀಯ ಶಿಕ್ಷಣ ಪಡೆದರೆ ಸುಲಭವಾಗಿ ಜಿಹಾದಿಗಳಾಗಬಹುದು ಅಂತ ಬಹಿರಂಗವಾಗಿಯೇ ಪ್ರಕಟಿಸಿತ್ತು.

    ಫಿಲಿಪೀನ್ಸ್ ನಲ್ಲಿ ತಬ್ಲಿಘಿ ಜಮಾತ್ ನ ಹನ್ನೊಂದು ಸಾವಿರ ಜನ ಸದಸ್ಯರಿದ್ದಾರೆ. ಫಿಲಿಪೀನ್ಸ್ ಸರಕಾರದ ಪ್ರಕಾರ ತಬ್ಲಿಘಿ ಜಮಾತ್ ಮೂಲಕವೇ ಉಗ್ರ ಚಟುವಟಿಕೆಗಳಿಗೆ ಸೌದಿ ಮೂಲದ ಹಣ ಪೂರೈಕೆಯಾಗುತ್ತಿದೆ. ತಬ್ಲಿಘಿಗಳು ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಆಶ್ರಯ ಕೂಡಾ ನೀಡುತ್ತಿದ್ದಾರೆ ಎಂದು ಅಲ್ಲಿನ ಸರಕಾರದ ಆರೋಪ. ಇದಲ್ಲದೆ ತಬ್ಲಿಘಿ ಜಮಾತ್ ನೇರವಾಗಿಯೇ ಉಗ್ರರನ್ನು ರಿಕ್ರೂಟ್ ಮಾಡಿಕೊಂಡು ತರಬೇತಿ ನೀಡುತ್ತಿದೆ ಎಂಬ ಆರೋಪ 1980 ದಶಕದಲ್ಲೇ ಕೇಳಿಬಂದಿತ್ತು. ಪಾಕಿಸ್ತಾನ ಮತ್ತು ಅಲ್ಜೀರಿಯಾದಿಂದ ಪ್ರತೀ ವರ್ಷವೂ ಅಂದಾಜು ಒಂಭೈನೂರು ಜನರನ್ನು ಉಗ್ರತರಬೇತಿ ಪಡೆಯಲು ಜಮಾತ್ ಸ್ಪಾನ್ಸರ್ ಮಾಡುತ್ತಿದೆ ಎಂಬ ಆರೋಪದ ಜೊತೆಗೆಯೇ ತಬ್ಲಿಘಿ ಜಮಾತ್ ತನ್ನ ದೇಶದ 400 ಕ್ಕೂ ಹೆಚ್ಚು ಯುವಕರನ್ನು ಉಗ್ರತರಬೇತಿಗೆ ಕಳಿಸಿತ್ತು ಅಂತ ಉಜ್ಬೇಕಿಸ್ತಾನ್ ಆಪಾದನೆ ಮಾಡಿತ್ತು.

    ಅಮೆರಿಕಾದಲ್ಲಿ ತಬ್ಲಿಘಿ ಜಮಾತ್ ಬಹಳ ದೊಡ್ಡ ಜಾಲವನ್ನೇ ಹೊಂದಿದೆ. ಅಲ್ಲಿನ ವಲಸಿಗ ಮುಸ್ಲಿಮರೇ ಜಮಾತ್ ಗೆ ದೊಡ್ಡ ಆಸ್ತಿ. ಅಮೆರಿಕಾದ ಮೊತ್ತ ಮೊದಲ ತಾಲಿಬಾನಿ ಜಾನ್ ವಾಕರ್ ಲಿಂದ್ ಅಲಯಾಸ್ ಸುಲೇಮಾನ್ ಅಲ್ ಫಾರಿಸ್ 2001ರಲ್ಲಿ ಅಮೆರಿಕಾ ಪಡೆಗಳಿಗೆ ಅಫ್ಘಾಅನಿಸ್ತಾನದಲ್ಲಿ ಸೆರೆಸಿಕ್ಕಿದ. ಅವನ ಕತೆ ರೋಚಕ. ಕ್ಯಾಲಿಫೋರ್ನಿಯಾದಲ್ಲಿದ್ದ ಆತನನ್ನು ಹದಿನಾರನೆಯ ವಯಸ್ಸಿಗೇ ಇಸ್ಲಾಮಿಗೆ ಮತಾಂತರಗೊಳಿಸಲಾಗಿತ್ತು. ನಂತರ ಆತ ಯೆಮೆನ್ ಗೆ ಅರಾಬಿಕ್ ಕಲಿಯಲೆಂದು ತೆರಳಿದ. ಅಲ್ಲಿಂದ ಬಳಿಕ ಆತ ಪಾಕಿಸ್ತಾನಕ್ಕೆ ತೆರಳಿ ಹರ್ಕತ್ ಉಲ್ ಮುಜಾಹಿದೀನ್ ಬಳಿ ತರಬೇತಿ ಪಡೆದು ಬಳಿಕ ಅಫ್ಘಾನಿಸ್ತಾನಕ್ಕೆ ತೆರಳಿ ತಾಲಿಬಾನಿಗೆ ಸೇರಿದ.ಆತನನ್ನು ಮತಾಂತರಗೊಳಿಸಿದ್ದು, ಉಗ್ರತರಬೇತಿ ನೀಡಿಸಿದ್ದೆಲ್ಲಾ ತಬ್ಲಿಘಿ ಜಮಾತ್ ನವರೇ. ನ್ಯೂಯಾರ್ಕ್ ನ ಲಾಖವಾನಾ ಎಂಬ ಪಟ್ಟಣದಲ್ಲಿದ್ದ ಆರು ಯೆಮೆನಿ ಯುವಕರು ಅಲ್ ಖಾಯ್ದಾಗೆ ಸಹಾಯ ಮಾಡಿದ್ದರಿಂದ ಸಿಕ್ಕಿಬಿದ್ದು ಜೈಲುಪಾಲಾದರು. ಅವರು ಕೂಡಾ ತಬ್ಲಿಘಿ ಜಮಾತ್ ನ ಸಂಪರ್ಕ ಹೊಂದಿದ್ದರು. ರಿಚರ್ಡ್ ಕಾಲ್ವಿನ್ ರೀಡ್ ಎಂಬಾತ ಸಣ್ಣಪುಟ್ಟ ಕಳ್ಳತನಮಾಡಿ ಜೈಲುಪಾಲಾಗಿದ್ದ. ಜೈಲಿನಲ್ಲೇ ಆತನನ್ನು ಇಸ್ಲಾಮಿಗೆ ಮತಾಂತರ ಮಾಡಲಾಯಿತು. ಮುಂದೆ ಆತ ಪಾಕಿಸ್ತಾನದಲ್ಲಿ ಉಗ್ರತರಬೇತಿ ಪಡೆದು ಅಲ್ ಖಾಯ್ದಾ ಸೇರಿಕೊಂಡ. 2001ರಲ್ಲಿ ಪ್ಯಾರಿಸ್ಸಿನಿಂದ ಮಿಯಾಮಿಗೆ ಹೋಗುವ ಅಮೆರಿಕಾದ ವಿಮಾನ ಹತ್ತಿಕೊಂಡ. ತಾನು ಧರಿಸಿದ ಶೂವಿನಲ್ಲೇ ಬಾಂಬ್ ಹುದುಗಿಸಿ ವಿಮಾನವನ್ನೇ ಸ್ಫೋಟಿಸಲು ಹೊರಟ. ಆದರೆ ಸ್ಫೋಟ ವಿಫಲವಾಗಿ ಸೆರೆಯಾದ. ಈತನಿಗೂ ತಬ್ಲಿಘಿ ಜಮಾತ್ ಸಂಪರ್ಕ ಇತ್ತು. ಜೋಸ್ ಪಾಡಿಲ್ಲಾ ಅಲಯಾಸ್ ಅಬ್ದುಲ್ಲಾಹ್ ಅಲ್ ಮುಹಾಜಿರ್ ಚಿಕಾಗೋದಲ್ಲಿ ವಿಕಿರಣ ಇರುವಂಥ ಬಾಂಬ್ ಸ್ಫೋಟಿಸುವ ಸಂಚು ಮಾಡಿದ್ದ. 2002ರಲ್ಲಿ ಆತನನ್ನು ಬಂಧಿಸಿ ಸೆರೆಮನೆಗಟ್ಟಲಾಯಿತು ಈತನಿಗೂ ತಬ್ಲಿಘಿ ಜಮಾತ್ ನ ಸಂಪರ್ಕ ಇತ್ತು. ಲೈಮನ್ ಫಾರಿಸ್ ಅಲಯಾಸ್ ಮೊಹಮ್ಮದ್ ರಾವೂಫ್ ಮೂಲತಃ ಪಾಕಿಸ್ತಾನದಾತ. ಈತ ಬ್ರೂಕ್ಲಿನ್ ಸೇತುವೆಯನ್ನು ಸ್ಫೋಟಿಸುವ ಅಲ್ ಖೈದಾ ಯೋಜನೆಗೆ ಸಹಾಯ ಮಾಡಿ ಸಿಕ್ಕಿ ಬಿದ್ದು ಜೈಲುಪಾಲಾದ. ಆತನಿಗೂ ತಬ್ಲಿಘಿ ಜಮಾತ್ ನದ್ದೇ ಸಂಪರ್ಕ. ಹೀಗೆ ಅಮೆರಿಕಾದ ತುಂಬಾ ತನ್ನ ಜಾಲ ಹರಡಿಕೊಂಡಿರುವ ತಬ್ಲಿಘಿ ಜಮಾತ್ ಮತಪ್ರಚಾರದ ಹೆಸರಿನಲ್ಲಿ ಬೋಧಿಸುವುದು ಮತಾಂಧತೆಯನ್ನೇ. ಅಲ್ ಖಾಯ್ದಾ ದ ಕ್ರೇಜ್ ತುತ್ತತುದಿ ತಲುಪಿದ್ದ 1990ರ ಸಮಯದಲ್ಲಿ ಒಸಾಮಾ ಬಿನ್ ಲಾಡೆನ್ ಆಕರ್ಷಣೆಗೆ ಒಳಗಾಗಿ ಅಮೇರಿಕ ಒಂದರಿಂದಲೇ ಸುಮಾರು ಒಂದರಿಂದ ಎರಡು ಸಾವಿರ ಯುವಕ ಯುವತಿಯರು ದೇಶ ತೊರೆದು ಪಾಕಿಸ್ತಾನಕ್ಕೆ ಹೋಗಿ ತರಬೇತಿ ಪಡೆದು ಅಫ್ಘಾನಿಸ್ತಾನಕ್ಕೆ ಹೋಗಿ ಅಲ್ ಖೈದಾ ಸೇರಿಕೊಂಡಿದ್ದರು. ಇವರೆಲ್ಲರ ಹಿಂದೆಯೂ ಢಾಳಾಗಿ ಕಾಣಿಸುತ್ತಾ ಇದ್ದದ್ದು ತಬ್ಲಿಘಿ ಜಮಾತ್ ನ ನೆರಳೇ. ಇದೆಲ್ಲದ್ದಕ್ಕೆ ಪೂರಕವಾಗಿ ಸ್ವತಃ ಪಾಕಿಸ್ತಾನದ ಗುಪ್ತಚರ ಇಲಾಖೆಯೇ ನೀಡಿದ್ದ ರಹಸ್ಯ ವರದಿಯಲ್ಲಿ 1989ರಿಂದ ಅಮೆರಿಕಾದ ಸುಮಾರು 400 ಕ್ಕೂ ಮಿಕ್ಕಿದ ತಬ್ಲೀಘಿ ಜಮಾತ್ ಸದಸ್ಯರು ಪಾಕಿಸ್ತಾನಕ್ಕೆ ಬಂದು ಉಗ್ರತರಬೇತಿ ಪಡೆದ ಬಗ್ಗೆ ವಿವರಣೆಯಿದೆ.

    ಕಳೆದೊಂದು ದಶಕದಿಂದ ನ್ಯೂ ಯಾರ್ಕ್ ನ ಕ್ವೀನ್ಸ್ ನಲ್ಲಿರುವ ಅಲ್ ಫಲಾಹ್ ಮಸೀದಿಯೇ ತಬ್ಲೀಘಿ ಜಮಾತ್ ನ ಹೆಡ್ ಕ್ವಾರ್ಟರ್ಸ್. ಸೌದಿಯಿಂದ ನಿಯಂತ್ರಿತವಾಗಿರುವ ವಲ್ರ್ಡ್ ಮುಸ್ಲಿಂ ಲೀಗ್, ವಲ್ರ್ಡ್ ಅಸ್ಸೆಂಬ್ಲೀ ಆಫ್ ಮುಸ್ಲಿಂ ಯೂಥ್, ಹರಮೈನ್ ಫೌಂಡೇಶನ್, ಇಂಟರ್ ನ್ಯಾಷನಲ್ ಇಸ್ಲಾಮಿಕ್ ರಿಲೀಫ್ ಫಂಡ್ ಮುಂತಾದ ಸಂಘಟನೆಗಳಿಂದ ದೊಡ್ಡ ಪ್ರಮಾಣದಲ್ಲಿ ಹಣ ಹರಿದು ಬರುತ್ತಿದ್ದು ತಬ್ಲಿಘಿ ಜಮಾತ್ ತನ್ನ ಮತಾಂತರದ ಚಟುವಟಿಕೆಗಳನ್ನು ಬಹಳ ದೊಡ್ಡಮಟ್ಟದಲ್ಲಿ ಮಾಡುತ್ತಿದೆ. ಅಮೆರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿರುವ ಆಫ್ರಿಕಾ ಮೂಲದ ಕರಿಯ ಅಮೆರಿಕನ್ನರನ್ನು ತಬ್ಲಿಘಿ ಜಮಾತ್ ವ್ಯವಸ್ಥಿತವಾಗಿ ಟಾರ್ಗೆಟ್ ಮಾಡುತ್ತಿದೆ. ಅಮೆರಿಕಾದ ಕರಿಯ ಸಮುದಾಯವನ್ನು ತನ್ನತ್ತ ಸೆಳೆದುಕೊಂಡು ಬಿಟ್ಟರೆ ಆಗ ಪೂರ್ತಿ ಅಮೆರಿಕಾದ ಅಧಿಕಾರದ ಚುಕ್ಕಾಣಿ ಹಿಡಿಯುವ, ಆ ಮೂಲಕ ಅಮೆರಿಕಾವನ್ನೇ ಇಸ್ಲಾಮಿಕ್ ರಾಷ್ಟ್ರ ಮಾಡುವ ಭಾರೀ ಯೋಜನೆಯನ್ನೇ ಹಾಕಿಕೊಳ್ಳಲಾಗಿದೆ. ಇವತ್ತು ಅಮೆರಿಕಾದ ಮುಸ್ಲಿಮರ ಪೈಕಿ ಶೇಕಡಾ 30 ರಿಂದ 40 ಶೇಕಡಾ ಮುಸ್ಲಿಮರು ಕರಿಯರೇ. ಅಮೆರಿಕಾದ ಜೈಲುಗಳನ್ನೇ ತಬ್ಲಿಘಿ ಜಮಾತ್ ಸಂಸ್ಥೆ ಗುರಿಯಾಗಿಸಿಕೊಂಡಿದೆ. ಜೈಲುಗಳಲ್ಲಿರುವ ಕರಿಯ ಖೈದಿಗಳನ್ನು ಮನವೊಲಿಸಿ ಇಸ್ಲಾಮಿಗೆ ಮತಾಂತರಿಸುವ ಕೆಲಸ ಸದ್ದಿಲ್ಲದೆಯೇ ನಡೀತಿದೆ. ಈಗ ಪ್ರತೀ ವರ್ಷವೂ ಅಂದಾಜು ಮೂವತ್ತು ಸಾವಿರ ಕರಿಯ ಖೈದಿಗಳು ಇಸ್ಲಾಮಿಗೆ ಮತಾಂತರವಾಗುತ್ತಿದ್ದಾರೆ. ಹೀಗೆ ಅಮೆರಿಕಾದ ಮೇಲೆಯೇ ಒಂದು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಮತ್ತು ಈ ಭಾರೀ ಷಡ್ಯಂತ್ರದ ಹಿಂದೆ ತಬ್ಲಿಘಿ ಜಮಾತ್ ಇದೆ.

    ಭಾರತದಲ್ಲಿ ಮೂಲವನ್ನು ಹೊಂದಿರುವ ತಬ್ಲಿಘಿ ಜಮಾತ್ ಇವತ್ತು ಪಾಕಿಸ್ತಾನದಲ್ಲಿ, ಬಾಂಗ್ಲಾದೇಶದಲ್ಲಿ ಮಲೇಷ್ಯಾದಲ್ಲಿ, ಇಂಡೋನೇಷ್ಯಾದಲ್ಲಿ, ಫಿಲಿಪೀನ್ಸ್ ನಲ್ಲಿ ಇಂಗ್ಲೆಂಡಿನಲ್ಲಿ, ಯುರೋಪಿನಲ್ಲಿ, ಅಮೆರಿಕಾ ಖಂಡದಲ್ಲಿ ಹಿಂದಿನ ಸೋವಿಯತ್ ರಷ್ಯಾ ದ ಹಲವಾರು ದೇಶಗಳಲ್ಲಿ, ಹೀಗೆ ಪ್ರಪಂಚದ ಮೂಲೆ ಮೂಲೆಗಳಲ್ಲಿಯೂ ಹಬ್ಬಿ ನಿಂತಿದೆ.

    ತಬ್ಲಿಘಿ ಜಮಾತ್ ಸಂಘಟನೆ ಸಂಪೂರ್ಣ ಧಾರ್ಮಿಕ ಸಂಘಟನೆ ಮತ್ತು ಸಂಪೂರ್ಣ ರಾಜಕೀಯೇತರ ಸಂಘಟನೆ ಅಂತಲೇ ಹೇಳಲಾಗುತ್ತಿದೆ. ಆದರೆ ಪಾಕಿಸ್ತಾನದಲ್ಲಿ ತಬ್ಲಿಘಿ ಜಮಾತ್ ಗೆ ಅಲ್ಲಿನ ರಾಜಕೀಯ ಪಕ್ಷಗಳು, ಅಲ್ಲಿನ ಮಂತ್ರಿಗಳು, ಅಲ್ಲಿನ ಸರಕಾರಗಳು ಸಂಪೂರ್ಣ ಬೆಂಬಲ ನೀಡಿವೆ ಮತ್ತು ಮೂಲಭೂತವಾದೀ ಇಸ್ಲಾಮನ್ನು ಪ್ರಚುರ ಪಡಿಸಲು ಯಥೇಚ್ಛ ಹಣಕಾಸಿನ ಮತ್ತು ಆಡಳಿತಾತ್ಮಕ ನೆರವು ನೀಡಿದೆ. ಪಾಕಿಸ್ತಾನವನ್ನು ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವನ್ನಾಗಿಸಿದ್ದ ಜಿಯಾ ಉಲ್ ಹಕ್ ತಬ್ಲಿಘಿ ಜಮಾತ್ ಗೆ ಮತಪ್ರಚಾರಕ್ಕೆ ಬೇಕಾದ ಎಲ್ಲ ನೆರವು ಸೌಲಭ್ಯಗಳನ್ನು ಒದಗಿಸಿದ್ದ. ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ನ ಅಪ್ಪ ಮುಹಮ್ಮದ್ ಷರೀಫ್ ತಬ್ಲಿಘಿ ಜಮಾತ್ ಗೆ ದೊಡ್ಡ ಫೈನಾನ್ಷಿಯರ್ ಆಗಿದ್ದರು. ಆತನ ಮಗ ಪ್ರಧಾನಿ ಆದ ಮೇಲೆ ಜಮಾತ್ ಸದಸ್ಯರಿಗೆ ಪಾಕಿಸ್ತಾನ ಸರಕಾರದ ಉನ್ನತ ಹುದ್ದೆಗಳು ಲಭಿಸಿದ್ದವು ಪಾಕಿಸ್ತಾನದ ಒಂಭತ್ತನೇ ರಾಷ್ಟ್ರಪತಿಯಾಗಿದ್ದ ಮುಹಮ್ಮದ್ ರಫೀಕ್ ತರಾರ್ ಮತ್ತು ಐ ಎಸ್ ಐ ಮುಖ್ಯಸ್ಥ ಜಾವೇದ್ ನಾಸಿರ್ ತಬ್ಲಿಘಿ ಜಮಾತ್ ನ ಕ್ಯಾಂಡಿಡೇಟುಗಳಾಗಿದ್ದರು. ಬೆನಜಿರ್ ಭುಟ್ಟೋ ಸರಕಾರವನ್ನು ಕಿತ್ತೊಗೆಯುವ ಸಂಚಿನಲ್ಲೂ ತಬ್ಲಿಘಿ ಜಮಾತ್ ಪಾತ್ರ ಇತ್ತು.

    ಈಗ ಇದೆ ತಬ್ಲಿಘಿ ಜಮಾತ್ ಭಾರತಕ್ಕೇ ಗಂಡಾಂತರ ಉಂಟುಮಾಡುವ ಭಾರೀ ಸಂಚು ನಡೆಸಿದ ಆರೋಪ ಎದುರಿಸುತ್ತಿದೆ. ಕೊರೋನಾ ವೈರಸ್ ಭಯಾನಕ ಸಾಂಕ್ರಾಮಿಕವಾಗಿ ಹರಡುತ್ತಿರುವ ಹೊತ್ತಿನಲ್ಲೇ ದೆಹಲಿಯ ನಿಜಾಮುದ್ದೀನ್ ನ ತಮ್ಮ ಹೆಡ್ ಕ್ವಾರ್ಟರ್ಸ್ ನಲ್ಲಿ ಸಾವಿರಾರು ಮತಪ್ರಚಾರಕರನ್ನು ಸೇರಿಸಿಕೊಂಡು ಸೋಂಕನ್ನು ದೇಶಾದಾದ್ಯಂತ ಹರಡುವ ಒಂದು ವಿಕೃತ ಸಂಚು ನಡೆಸಲಾಯಿತೇ? ಮೇಲ್ನೋಟಕ್ಕೆ ಸಂಚು ನಿಜ ಅಂತಲೇ ಅನ್ನಿಸುತ್ತದೆ. ಯಾಕೆಂದರೆ ಈ ಸಭೆಯಲ್ಲಿ ಹಲವಾರು ವಿದೇಶೀ ಮತಪ್ರಚಾರಕರಿದ್ದರು. ಅವರಿಗಿದ್ದ ವೈರಸ್ಸಿನ ಸೋಂಕು ಇತರರಿಗೂ ಹರಡಿದ್ದು, ಹಾಗೆ ಸೋಂಕಿತರಾದ ತಬ್ಲೀಘಿ ಜಮಾತ್ ಸದಸ್ಯರು ಎಲ್ಲೆಂದರಲ್ಲಿ ದೇಶಪೂರ್ತಿ ಓಡಾಡಿದ್ದಾರೆ ತಮ್ಮಲ್ಲಿರುವ ಸೋಂಕನ್ನು ಎಲ್ಲೆಲ್ಲಿಗೋ ಹರಡಿಬಿಟ್ಟಿದ್ದಾರೆ. ಆ ಮೂಲಕ ಭಾರತ ಸರಕಾರ ದೇಶವನ್ನೇ ಸಂಪೂರ್ಣ ಲಾಕ್ ಡೌನ್ ಮಾಡಿ ವೈರಾಣುವಿನ ಹರಡುವಿಕೆಗೆ ಕಡಿವಾಣ ಹಾಕಲು ಮಾಡಿದ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.

    ಅಷ್ಟೇ ಅಲ್ಲ, ತಬ್ಲಿಘಿ ಜಮಾತ್ ನ ಅಧ್ಯಕ್ಷನನ್ನು ಸೇರಿಸಿ ಅದೆಷ್ಟೋ ಮಂದಿ ತಲೆತಪ್ಪಿಸಿ ಎಲ್ಲೆಲ್ಲೋ ಮಸೀದಿಗಳಲ್ಲಿ ಅವಿತು ಕುಳಿತಿದ್ದಾರೆ. ಎಷ್ಟೇ ವಿನಂತಿ ಮಾಡಿಕೊಂಡರೂ ಇವರ್ಯಾರೂ ಕೊರೋನಾ ವೈರಸ್ ತಪಾಸಣೆಗೆ ಒಪ್ಪುತ್ತಿಲ್ಲ ಅದಕ್ಕಿಂತಲೂ ಹೀನವೆಂದರೆ ಈಗಾಗಲೇ ಕೊರೋನಾಗೆ ತುತ್ತಾಗಿರುವ ತಬ್ಲಿಘಿ ಜಮಾತ್ ಸದಸ್ಯರು ಆಸ್ಪತ್ರೆಗಳಲ್ಲಿ ದುರ್ವರ್ತನೆ ತೋರುತ್ತಿದ್ದಾರೆ, ವೈದ್ಯರ ಮೇಲೆ ದಾದಿಯರ ಮೇಲೆ ಉಗುಳುತ್ತಿದ್ದಾರೆ, ನಗ್ನವಾಗಿ ಓಡಾಡುತ್ತ ಮುಜುಗರ ಸೃಷ್ಟಿಸುತ್ತಿದ್ದಾರೆ. ಚಿಕಿತ್ಸೆಗೆ ಸಹಕಾರ ನೀಡುತ್ತಿಲ್ಲ. ತಮಗೆ ಯಾವುದೇ ವೈರಸ್ ಸೋಂಕೂ ಇಲ್ಲವೆಂದೇ ಹಠಹಿಡಿಯುತ್ತಿದ್ದಾರೆ. ಇದೆಲ್ಲವೂ ಒಂದು ವ್ಯವಸ್ಥಿತ ಸಂಚು ಅಂತಲೇ ಅನ್ನಿಸತೊಡಗಿದೆ.

    ಇವತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ತುಂಬಾ, ದೇಶದ ಉದ್ದಗಲಕ್ಕೂ ಸುಮಾರು ಹದಿನೈದು ಸಾವಿರ ತಬ್ಲೀಘಿ ಜಮಾತ್ ಮತಪ್ರಚಾರಕರು ಕಾರ್ಯಾಚರಿಸುತ್ತಿದ್ದಾರೆ. ಅದೇ ಹೊತ್ತಿಗೆ ಕಾಕತಾಳೀಯವಾಗಿ ಕೊರೋನಾ ವೈರಸ್ ಸೋಂಕಿನ ಪ್ರಮಾಣ ತೀವ್ರವಾಗಿ ಹೆಚ್ಚಿ ಅಮೆರಿಕಾ ಈಗ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸೋಂಕಿತರನ್ನು ಹೊಂದಿದ ದೇಶವಾಗಿ ಹೊರಹೊಮ್ಮಿದೆ. ಹಾಗಾಗಿ ಭಾರತದಲ್ಲಿ ಮಾಡಿದ ರೀತಿಯ ಸಂಚನ್ನೇ ತಬ್ಲಿಘಿ ಜಮಾತ್ ಅಮೆರಿಕಾದಲ್ಲಿಯೂ ಮಾಡಿತೇ? ಜಗತ್ತನ್ನೇ ಇಸ್ಲಾಮೀಕರಣಗೊಳಿಸುವ ಬೃಹತ್ ಷಡ್ಯಂತ್ರದ ಭಾಗವಾಗಿಯೇ ಇದೆಲ್ಲವೂ ನಡೆಯುತ್ತಿದೆಯೇ? ಇಸ್ಲಾಮಿಕ್ ಮೂಲಭೂತವಾದಿಗಳ ಕೈಯಲ್ಲಿ ಕೊರೋನಾದಂಥಾ ಅಪಾಯಕಾರೀ ವೈರಾಣು ಕೂಡಾ ಒಂದು ಅಸ್ತ್ರವಾಯಿತೇ?

    ಕೊರೋನಾ ವೈರಸ್ಸನ್ನು ಮತ್ತು ಅದು ಮಾಡಬಹುದಾದ ಅಪಾಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಜ್ಞಾನಿಗಳು ಮತ್ತು ವೈದ್ಯರು ವಿಫಲರಾದ ರೀತಿಯಲ್ಲೇ ಜಗತ್ತಿನ ಘಟಾನುಘಟಿ ರಾಜಕಾರಣಿಗಳು, ಮುತ್ಸದ್ಧಿಗಳು, ಇಸ್ಲಾಮಿನ ಅಪಾಯವನ್ನು ಅಂದಾಜಿಸುವಲ್ಲಿ ಸಂಪೂರ್ಣ ವಿಫಲರಾದರೇ? ಮುಂದುವರಿಯುವುದು…. ಎಂದು ಬರೆದು ಅನಂತ್‍ಕುಮಾರ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

  • ನಾನು ಬಾಯಿ ಬಿಟ್ರೆ ಸಿದ್ದರಾಮಯ್ಯ, ಗುಂಡೂರಾವ್‍ಗೆ ನಿದ್ರೆ ಬರಲ್ಲ: ಅನಂತ್‍ಕುಮಾರ್ ಹೆಗ್ಡೆ

    ನಾನು ಬಾಯಿ ಬಿಟ್ರೆ ಸಿದ್ದರಾಮಯ್ಯ, ಗುಂಡೂರಾವ್‍ಗೆ ನಿದ್ರೆ ಬರಲ್ಲ: ಅನಂತ್‍ಕುಮಾರ್ ಹೆಗ್ಡೆ

    ಕಾರವಾರ: ನಾನು ಬಾಯಿ ಬಿಟ್ಟರೆ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ನಿದ್ದೆನೇ ಬರಲ್ಲ ಎಂದು ಸಂಸದ ಅನಂತ್‍ಕುಮಾರ್ ವ್ಯಂಗ್ಯವಾಡಿದ್ದಾರೆ.

    ದಾಂಡೇಲಿಯಲ್ಲಿ ಮಾತನಾಡಿದ ಸಂಸದರು, ಪ್ರತಿ ರೇಷನ್ ಅಂಗಡಿಯಲ್ಲೂ ಮದ್ಯ ಕೊಡಿ ಅಂದಿದ್ದು ಯಾರು? ಭಾಗ್ಯದ ಹೆಸರಲ್ಲಿ ಸಾರಾಯಿ ಭಾಗ್ಯ ಯೋಜನೆ ರಾಜ್ಯಕ್ಕೆ ತಂದು ಕೊಟ್ಟಿದ್ದು ಯಾರು ಎಂದು ಸಂಸದರು ಪ್ರಶ್ನಿಸಿದರು. ಆಗ ಕೆಲ ಕಾರ್ಯಕರ್ತರು ಸಿದ್ದರಾಮಯ್ಯ ಎಂದು ಉತ್ತರಿಸಿದರು. ಈ ವೇಳೆ ಸಂಸದರು, ಕೆಲವು ಸಂದರ್ಭಗಳಲ್ಲಿ ಅಂತವರನ್ನು ನೆನೆಯಬಾರದು. ಸಿದ್ದರಾಮಯ್ಯ ಅವರ ಹೆಸರು ಹೇಳಿದ್ದು ನೀವು, ನಾನಲ್ಲ. ಇವತ್ತು ನಾನು ಇಷ್ಟು ಮಾತನಾಡಿದ್ದನ್ನು ಕೇಳಿದ್ರೆ ಸಾಕು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್‍ನವರು ಜಿಗಿದು, ಜಿಗಿದು ಕೂರುತ್ತಾರೆ. ನಾನು ಬಾಯಿ ಬಿಟ್ಟಿದ್ದು ಗೊತ್ತಾದ್ರೆ ಅವರಿಗೆ ನಿದ್ರೆ ಬರಲ್ಲ ಎಂದು ಕುಟುಕಿದರು.

    ಸ್ವಚ್ಛತೆಗೆ ಮಹಾತ್ಮ ಗಾಂಧೀಜಿ ಪ್ರಾಮುಖ್ಯತೆ ನೀಡುತ್ತಿದ್ದರು. ಸ್ವತಃ ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ ಗಾಂಧೀಜಿ ಅವರ ಹೆಸರಿನಲ್ಲಿ ಸಮಾಜದ ಒಳಗೆ ಹಾಗೂ ಹೊರಗೆ ಕೆಸರನ್ನು ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ಸಿಗರು ಯಾವತ್ತೂ ದೇಶವನ್ನು ಸ್ವಚ್ಛ ಮಾಡುವ ಬಗ್ಗೆ ಯೋಚಿಸಲಿಲ್ಲ. ಈಗ ನೋಡಿ ಕೆಸರು ಹಾಕಲಿಕ್ಕೆ ಜಾಗವಿಲ್ಲದ್ದಕ್ಕೆ ಒಬ್ಬೊಬ್ಬರೇ ತಿಹಾರ್ ಜೈಲಿಗೆ ಹೋಗುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ವಿರುದ್ಧ ವಾಗ್ದಾಳಿ ನಡೆಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದರು. ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು. ರಾಮರಾಜ್ಯದ ಕಲ್ಪನೆ ಕೊಟ್ಟಿದ್ದು ಮಹಾತ್ಮಾ ಗಾಂಧೀಜಿ ಅವರೇ ಹೊರತು ಆರ್‍ಎಸ್‍ಎಸ್, ಬಿಜೆಪಿ, ವಿಶ್ವ ಹಿಂದೂ ಪರಿಷತ್ ಅಲ್ಲ. ಆದರೆ ರಾಮರಾಜ್ಯ ಕಾಂಗ್ರೆಸ್‍ನ ಅಜೆಂಡಾದಲ್ಲಿ ಇರಲಿಲ್ಲ. ರಾಮರಾಜ್ಯದ ಕಲ್ಪನೆ ಇಟ್ಟು ಕೊಂಡವರು ಬಿಜೆಪಿಯವರು. ಪ್ರತಿನಿತ್ಯ ಮಹಾತ್ಮ ಗಾಂಧೀಜಿ ಅವರನ್ನ ಹತ್ಯೆ ಮಾಡಿದ್ದು, ಅವಹೇಳನ ಮಾಡಿದ್ದು ಕಾಂಗ್ರೆಸ್. ಗಾಂಧೀಜಿ, ಬಿ.ಆರ್.ಅಂಬೇಡ್ಕರ್, ವೀರ್ ಸಾವರ್ಕರ್ ಹೀಗೆ ದೇಶಕ್ಕಾಗಿ ದುಡಿದರನ್ನು ಬದಿಗಿಡುವ ಕೆಲಸವನನ್ನು ಕಾಂಗ್ರೆಸ್ ಮಾಡಿದೆ ಎಂದು ಕಿಡಿಕಾರಿದರು.

    ಮಹಾತ್ಮ ಗಾಂಧೀಜಿ ಅವರು ‘ನಾನೇಕೆ ಹಿಂದೂ’ ಎನ್ನುವ ಪುಸ್ತಕ ಬರೆದಿದ್ದಾರೆ. ಕಾಂಗ್ರೆಸ್ಸಿಗರು ಅದನ್ನು ಓದಿದ್ರೆ ಎಲ್ಲರೂ ಕಾಳಿ ನದಿಯಲ್ಲಿ ಸ್ನಾನ ಮಾಡಿ ಹೋಗುತ್ತಾರೆ. ಪುಸ್ತಕ ಓದಿದರೂ ಸಿದ್ದರಾಮಯ್ಯನವರ ತಲೆ ಸರಿ ಹೋಗುತ್ತೆ ಎನ್ನುವ ವಿಶ್ವಾಸ ಖಂಡಿತ ನನಗಿಲ್ಲ ಎಂದು ಗುಡುಗಿದರು.

  • ನಿರ್ಲಕ್ಷಿಸಿದ ಅನಂತ್‍ಕುಮಾರ್ ವಿರುದ್ಧ ಸಿಡಿದ ಸಂತ್ರಸ್ತರು

    ನಿರ್ಲಕ್ಷಿಸಿದ ಅನಂತ್‍ಕುಮಾರ್ ವಿರುದ್ಧ ಸಿಡಿದ ಸಂತ್ರಸ್ತರು

    ಬೆಳಗಾವಿ: ಪ್ರವಾಹದಿಂದ ತತ್ತರಿಸಿರುವ ಸಂತ್ರಸ್ತರ ಭೇಟಿಗೆ ಹೋಗಿದ್ದ ಸಂಸದ ಅನಂತಕುಮಾರ್ ಹೆಗಡೆ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸಂತ್ರಸ್ತರ ಮಾತು ಕೇಳದೆ ಅವರನ್ನು ನಿರ್ಲಕ್ಷಿಸಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

    ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೇಗಿನಹಾಳ ಗ್ರಾಮದ ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರನ್ನು ಭೇಟಿ ಮಾಡಲು ಅನಂತಕುಮಾರ್ ಹೆಗಡೆ ಅವರು ಹೋಗಿದ್ದರು. ಈ ವೇಳೆ ಮಲಪ್ರಭಾ ನದಿಯಿಂದ ಉಂಟಾದ ಪ್ರವಾಹಕ್ಕೆ ಮನೆಗಳನ್ನ ಕಳೆದುಕೊಂಡ ನಿರಾಶ್ರಿತರು, ದೂರದಿಂದ ನೋಡಲು ಮನೆಗಳು ಸರಿಯಾಗಿದೆ ಎಂದು ಕಾಣುತ್ತದೆ. ಆದರೆ ಮನೆಗಳ ಒಳಗೆ ಎಲ್ಲವೂ ಹಾನಿಯಾಗಿದೆ. ನಮಗೆ ಮನೆ ಕಟ್ಟಿಸಿಕೊಡಿ ಎಂದು ಕೇಳಿದ್ದಾರೆ. ಆದರೆ ಜನರ ಮಾತನ್ನು ಕೇಳದೆ, ಸರಿಯಾಗಿ ಸ್ಪಂದಿಸದೆ ಅನಂತ್‍ಕುಮಾರ್ ಅವರು ನಿರ್ಲಕ್ಷಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಂತ್ರಸ್ತರು ಸಂಸದರನ್ನು ತರಾಟೆಗೆ ತೆಗೆದುಕೊಂಡರು.

    ಅಲ್ಲದೆ ಪ್ರವಾಹದ ಬಗ್ಗೆ ಪ್ರತಿಕ್ರಿಯೆ ಕೇಳಿದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಕೂಡ ಅನಂತ್‍ಕುಮಾರ್ ಅವರು ಕಿಡಿಕಾರಿದರು. ವಿಡಿಯೋ ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ. ಹಾಗೆಯೇ ಮೊದಲೇ ಸಂಸದರ ನಡವಳಿಕೆಯಿಂದ ಸಿಟ್ಟಲಿದ್ದ ಸಂತ್ರಸ್ತ ಮಹಿಳೆಯರು ನಿನಗೆ ವೋಟ್ ಹಾಕುವುದಿಲ್ಲ ಎಂದು ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಕೂಡ ಮಹಿಳೆಯರ ಮಾತು ಕೇಳಿಯೂ ಕೇಳಿಸದಂತೆ ಅನಂತ್‍ಕುಮಾರ್ ಅವರು ಕುಳಿತ್ತಿದ್ದರು. ಹೀಗೆ ಗ್ರಾಮಸ್ಥರ ತೀವ್ರ ತರಾಟೆಗೆ ತೆಗೆದುಕೊಂಡ ನಂತರ ಬೇರೆ ಪರಿಹಾರ ಕೇಂದ್ರಕ್ಕೆ ಸಂಸದರು ತೆರಳಿದರು.

  • ಇಂದು ನಡೆಯುತ್ತಿರುವ ಚರ್ಚೆಯಿಂದ ಗೋಡ್ಸೆ ಸಂತೋಷ ಪಡಬಹುದು: ಹೆಗ್ಡೆ

    ಇಂದು ನಡೆಯುತ್ತಿರುವ ಚರ್ಚೆಯಿಂದ ಗೋಡ್ಸೆ ಸಂತೋಷ ಪಡಬಹುದು: ಹೆಗ್ಡೆ

    ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ನಾಥುರಾಮ್ ಗೋಡ್ಸೆಯ ದೇಶಭಕ್ತಿಗೆ ಸಂಬಂಧಿಸಿದಂತೆ ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

    ಮಧು ಪೂರ್ಣಿಮಾ ಕಿಶ್ವರ್ ಎಂಬವರು, ಗೋಡ್ಸೆ ಗಾಂಧೀಜಿಯನ್ನು ಹತ್ಯೆ ಮಾಡಿದ್ದರೂ ಓಡಿ ಹೋಗಿರಲಿಲ್ಲ. ಶರಣಾಗಿ ವಿಚಾರಣೆ ಹಾಜರಾಗಿ ಧೈರ್ಯದಿಂದ ನಾನು ಗಾಂಧೀಜಿಯನ್ನು ಹತ್ಯೆ ಮಾಡಿದ್ದು ಯಾಕೆ ಎಂದು ಸಮರ್ಥಿಸಿಕೊಂಡಿದ್ದ. ಕೊಲೆ ಮಾಡಿದ್ದನ್ನು ನಾನು ಖಂಡಿಸುತ್ತೇನೆ. ಆದರೆ ಗೋಡ್ಸೆ ದೇಶಭಕ್ತಿಯನ್ನು ನಾನು ಮೆಚ್ಚುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ಗೆ ಅನಂತ್ ಕುಮಾರ್ ಹೆಗ್ಡೆ, ಬದಲಾದ ಸನ್ನಿವೇಶದಲ್ಲಿ 7 ವರ್ಷದ ಬಳಿಕ ಇಂದಿನ ತಲೆಮಾರುಗಳು ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿರುವುದು ಸಂತೋಷ ತಂದಿದೆ. ನಾಥುರಾಮ್ ಗೋಡ್ಸೆ ಈ ಚರ್ಚೆಯನ್ನು ನೋಡಿ ಸಂತೋಷ ಪಡಬಹುದು ಎಂದು ಅಭಿಪ್ರಾಯ ಬರೆದು ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಹೆಗ್ಡೆ, ನನ್ನ ಟ್ವಿಟ್ಟರ್ ಖಾತೆ ನಿನ್ನೆಯಿಂದ ಹ್ಯಾಕ್ ಆಗಿದೆ. ಗಾಂಧೀಜಿಯನ್ನು ಹತ್ಯೆಗೈದ ವಿಚಾರವನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ದೇಶಕ್ಕೆ ಗಾಂಧೀಜಿಯವರು ನೀಡಿದ ಕೊಡುಗೆಯ ಬಗ್ಗೆ ನನಗೆ ಗೌರವವಿದೆ ಎಂದಿದ್ದಾರೆ.

    ಕಳೆದ ಒಂದು ವಾರದಲ್ಲಿ ಎರಡು ಬಾರಿ ನನ್ನ ಖಾತೆ ಹ್ಯಾಕ್ ಆಗಿದೆ. ನನ್ನ ಟೈಮ್ ಲೈನಿನಲ್ಲಿ ಪ್ರಕಟಗೊಂಡ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದೇನೆ ಎಂದು ಹೇಳಿದ್ದಾರೆ.

  • ಮೈಕ್ ಇಲ್ಲದ್ದಕ್ಕೆ ಗರಂ ಆಗಿ ವೇದಿಕೆಯಿಂದ ಹೊರ ನಡೆದ ಸಚಿವ ಹೆಗಡೆ

    ಮೈಕ್ ಇಲ್ಲದ್ದಕ್ಕೆ ಗರಂ ಆಗಿ ವೇದಿಕೆಯಿಂದ ಹೊರ ನಡೆದ ಸಚಿವ ಹೆಗಡೆ

    ಕಾರವಾರ: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಕಾರವಾರದ ಮೂಡಲಮಕ್ಕಿ ಗ್ರಾಮದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಗ್ಯಾಸ್ ವಿತರಣಾ ಕಾರ್ಯಕ್ರಮಕ್ಕೆ ಮಳೆಯ ಅವಾಂತರದಿಂದ ಭಾಷಣ ಮಾಡಲು ಮೈಕ್ ಇಲ್ಲದೇ ಸಚಿವರು ಗರಂ ಆಗಿ ಕಾರ್ಯಕ್ರಮದಿಂದ ಹೊರನಡೆದ ಘಟನೆ ನಡೆದಿದೆ.

    ಇತ್ತ ತಮಗೆ ಗ್ಯಾಸ್ ಸಿಗಲಿಲ್ಲ ಎಂದು ಜನ ಮಳೆಯಲ್ಲಿಯೇ ಕಾರವಾರದ ಶಾಸಕಿ ರೂಪಾಲಿ ನಾಯ್ಕ ಹಾಗೂ ಸಚಿವರ ಮುಂದೆಯೇ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡ ಘಟನೆ ಕೂಡ ನಡೆದಿದೆ.

    ಇಂದು ಕಾರವಾರದ ಮೂಡಲಮಕ್ಕಿನಲ್ಲಿ ಬಡವರಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಳೆ ಸುರಿದಿದೆ. ಹೀಗಾಗಿ ಸರತಿಯಲ್ಲಿ ನಿಂತಿದ್ದ ಜನರು ಕೊಡೆ ಹಿಡಿದು ಕೂತಿದ್ದರು. ಆದರೆ ತಮಗಾಗಿ ಮಳೆಯಲ್ಲಿಯೂ ಕುಳಿತ ಜನರನ್ನು ಲೆಕ್ಕಿಸದೇ ಸಚಿವರು ಮೈಕ್ ವ್ಯವಸ್ಥೆಯಿಲ್ಲ ಎಂದು ಗರಂ ಆಗಿದ್ದಾರೆ.

    ಸಚಿವರು ಕೇವಲ ನಾಲ್ಕು ಜನರಿಗೆ ಗ್ಯಾಸ್ ಕಿಟ್ ವಿತರಿಸಿ ಹೊರನಡೆದಿದ್ದರಿಂದ ಅಸಮಧಾನಗೊಂಡ ಯೋಜನೆಯ ಫಲಾನುಭವಿಗಳಿಬ್ಬರು ತಮಗೆ ಸಿಗಲಿಲ್ಲ ಎಂದು ಬಡಿದಾಡಿಕೊಂಡಿದ್ದಾರೆ. ಅಲ್ಲೇ ಇದ್ದ ಬಿಜೆಪಿ ಮುಖಂಡರು ಅವರನ್ನು ಸಮಾಧಾನಪಡಿಸಿ ಅಸಮಧಾನಕ್ಕೆ ತೆರೆ ಎಳೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನಂತಕುಮಾರ್ ಹೆಗಡೆಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಭೀತಿ!

    ಅನಂತಕುಮಾರ್ ಹೆಗಡೆಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಭೀತಿ!

    ಬೆಳಗಾವಿ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರಿಗೆ 2019ರ ಲೋಕಸಭಾ ಚುನಾವಣೆಯ ಟಿಕೆಟ್ ತಪ್ಪುವ ಭೀತಿ ಉಂಟಾಗಿದ್ದು, ತಮ್ಮ ಆತಂಕವನ್ನು ಶುಕ್ರವಾರ ಎಂ.ಕೆ.ಹುಬ್ಬಳ್ಳಿಯಲ್ಲಿ ಹೊರ ಹಾಕಿದ್ದಾರೆ.

    ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡನಗೌಡರ ಅಭಿನಂದನಾ ಕಾರ್ಯಕ್ರಮದಲ್ಲಿ ಅನಂತಕುಮಾರ್ ಹೆಗಡೆ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ, ನನ್ನ ಯೋಗ್ಯತೆ ನೋಡಿ ಜನರು ವೋಟ್ ಕೊಟ್ಟಿಲ್ಲ. ಬದಲಿಗೆ ಪ್ರೀತಿ, ವಿಶ್ವಾಸದ ಮೇಲೆ ಮತ ಕೊಟ್ಟಿದ್ದಿರಿ. ಪಾರ್ಟಿ ಮೇಲಿನ ಬದ್ಧತೆ ಇಲ್ಲಿಯ ತನಕ ತಂದು ನಿಲ್ಲಿಸಿದೆ. 5 ಭಾರೀ ಎಂಪಿ ಮಾಡಿದ್ದಿರಿ ಇದಕ್ಕಿಂತ ಹೆಚ್ಚೆನು ಬೇಕು. 5 ಬಾರಿ ವೋಟಿನ ಗೌರವ ಕಡಿಮೆ ಆಗದಂತೆ ನೋಡಿಕೊಂಡಿದ್ದೇನೆ ಎಂದರು. ಇದನ್ನೂ ಓದಿ: ಲೋಕಾಸಭಾ ಚುನಾವಣೆ – ಬಿಜೆಪಿಯ ಹಾಲಿ 150 ಎಂಪಿಗಳಿಗೆ ಟಿಕೆಟ್ ಇಲ್ಲ!

    ಮುಂದಿನ ಬಾರಿ ಉತ್ತರ ಕನ್ನಡ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುವುದು ಗೊತ್ತಿಲ್ಲ. ಆದರೆ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಗೆಲ್ಲಬೇಕು. ದೇಶಕ್ಕೆ ಬಿಜೆಪಿ ಅನಿವಾರ್ಯವಾಗಿದೆ ಎಂದು ಅನಂತಕುಮಾರ್ ಹೆಗಡೆ ತಮಗೆ ಟಿಕೆಟ್ ಸಿಗುತ್ತೋ, ಇಲ್ಲವೋ ಎಂಬ ಆತಂಕವನ್ನು ಹೊರಹಾಕಿದರು.

  • ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವಿರುದ್ಧ ಬೌ..ಬೌ.., ಹಚ್..ಹಚ್.. ಪ್ರತಿಭಟನೆ

    ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವಿರುದ್ಧ ಬೌ..ಬೌ.., ಹಚ್..ಹಚ್.. ಪ್ರತಿಭಟನೆ

    ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವಿರುದ್ಧ ದಲಿತ ಸಂಘಟನೆಗಳಿಂದ ವಿಶಿಶ್ಟ ಬೌ..ಬೌ.., ಹಚ್..ಹಚ್ ಪ್ರತಿಭಟನೆ ನಡೆಸಲಾಯಿತು.

    ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರ ಎದುರು ಜಮಾಯಿಸಿದ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಅನಂತಕುಮಾರ್ ಹೆಗ್ಡೆ ಅವರನ್ನ ನಾಯಿಗೆ ಹೋಲಿಸಿ ಹಚ್ ಹಚ್ ಎಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕೋಡಿ ತಾಲೂಕಿನ ವಿವಿಧ ಕಾರ್ಯಕ್ರಮ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವ ಹೆಗ್ಡೆ ಭಾಗಿಯಾಗಲಿದ್ದಾರೆ ಎಂದು ಸುದ್ದಿ ತಿಳಿದು ಕಪ್ಪು ಬಾವುಟ ಪ್ರದರ್ಶನ ಮಾಡಲು ದಲಿತ ಸಂಘಟನೆಗಳ ಕಾರ್ಯಕರತರು ಮುಂದಾಗಿದ್ದರು.

    ಕೆಲ ಸಮಯದ ಬಳಿಕ ಸಚಿವರು ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ ಎಂಬ ವಿಷಯ ತಿಳಿದ ಕಾರ್ಯಕರ್ತರು, ಗೋ ಬ್ಯಾಕ್, ಗೋ ಬ್ಯಾಕ್ ಅಂತಾ ಸಚಿವ ಹೆಗ್ಡೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಸಂವಿಧಾನ ಬದಲಾಯಿಸಲು ನಾವು ಬಂದಿದ್ದು ಹಾಗೂ ಬೀದಿಯಲ್ಲಿ ಬೊಗಳುವ ನಾಯಿಗೆ ತಲೆ ಕೆಡಿಸಿಕೊಳಲ್ಲ ಎಂದು ಸಚಿವ ಹೆಗ್ಡೆ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಇನ್ನೂ ಈ ಸಂದರ್ಭದಲ್ಲಿ ನೈತಿಕತೆ ಇದ್ದರೆ ಸಚಿವ ಅನಂತಕುಮಾರ್ ಹೆಗ್ಡೆ ರಾಜೀನಾಮೆ ನೀಡಬೇಕು ಎಂದು ಮುಖಂಡರು ಆಗ್ರಹಿಸಿದರು.

  • ಸಂವಿಧಾನ ಪವಿತ್ರವಾದ ಗ್ರಂಥ, ಅಂಬೇಡ್ಕರ್ ದೇಶಕಂಡ ಪರಮೋಚ್ಚ ರಾಷ್ಟ್ರ ಋಷಿ: ಅನಂತ್ ಕುಮಾರ್ ಹೆಗ್ಡೆ

    ಸಂವಿಧಾನ ಪವಿತ್ರವಾದ ಗ್ರಂಥ, ಅಂಬೇಡ್ಕರ್ ದೇಶಕಂಡ ಪರಮೋಚ್ಚ ರಾಷ್ಟ್ರ ಋಷಿ: ಅನಂತ್ ಕುಮಾರ್ ಹೆಗ್ಡೆ

    ಬೆಂಗಳೂರು: ದೇಶದ ಸಂವಿಧಾನ ಅತ್ಯಂತ ಪವಿತ್ರವಾದ ಗ್ರಂಥ. ಈ ಗ್ರಂಥವನ್ನು ರಚಿಸಿದ ಭಾರತರತ್ನ ಬಾಬಾಸಾಹೇಬ್ ಅಂಬೇಡ್ಕರ್, ನಮ್ಮ ದೇಶ ಕಂಡ ಪರಮೋಚ್ಚ ರಾಷ್ಟ್ರ ಋಷಿ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

    ಅಂಬೇಡ್ಕರ್ ಮತ್ತು ಜಾತ್ಯತೀತತೆ ಕುರಿತಂತೆ ಫೇಸ್‍ಬುಕ್ ನಲ್ಲಿ ದೀರ್ಘ ಬರಹ ಬರೆದಿದ್ದಾರೆ. ಈ ಬರಹದಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ನಾನು ಹೇಳಿಕೆ ನೀಡಿದ ಬಳಿಕ ಈ ವಿಚಾರದ ಬಗ್ಗೆ ಕೆಲ ದಿನಗಳ ಓದಿ ತಿಳಿದುಕೊಳ್ಳುವ ಪ್ರಯತ್ನ ನಡೆಸಿದೆ. ನನ್ನ ಹೇಳಿಕೆಯ ಹಿನ್ನಲೆಯಲ್ಲಿ, ಸಂವಿಧಾನ ಮತ್ತು ಜಾತ್ಯತೀತತೆ ಬಗ್ಗೆ ತಿಳಿದುಕೊಳ್ಳಲು ದೇಶದ ಹಲವಾರು ಮಂದಿ ಪ್ರಯತ್ನಿಸಿದ್ದು ನನ್ನನ್ನು ಬಹುತೇಕ ಚಕಿತಗೊಳಿಸಿತು ಎಂದು ಬರೆದುಕೊಂಡಿದ್ದಾರೆ.

    “ದೇಶದ ಸಂವಿಧಾನ ಅತ್ಯಂತ ಪವಿತ್ರವಾದ ಗ್ರಂಥ. ಈ ಗ್ರಂಥವನ್ನು ರಚಿಸಿದ ಭಾರತರತ್ನ ಬಾಬಾಸಾಹೇಬ್ ಅಂಬೇಡ್ಕರ್, ನಮ್ಮ ದೇಶ ಕಂಡ ಪರಮೋಚ್ಚ ರಾಷ್ಟ್ರ ಋಷಿ. ಹಾಗೂ ನನ್ನ ಪಾಲಿಗೆ ಅವರು ಪ್ರಾತಃ ಸ್ಮರಣೀಯ ಮತ್ತು ಅತ್ಯುನ್ನತ ಆದರಣೀಯ ಸ್ಪೂರ್ತಿಯ ಚೇತನ. ಈ ಮಹಾನ್ ಚೇತನವನ್ನು ಅಂದಿನ ಕಾಂಗ್ರೆಸ್ ಹೇಗೆ ನಡೆಸಿಕೊಂಡಿತು ಎನ್ನುವುದು ಇಂದಿನ ತಲೆಮಾರಿನ ಹಲವರಿಗೆ ತಿಳಿಯದಾಗಿದೆ. ಬಾಬಾಸಾಹೇಬ್ ರನ್ನು, ಅವರ ಜೀವಿತಾವಧಿಯಲ್ಲಿ ನೆಹರು ಮತ್ತು ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸಂಪೂರ್ಣವಾಗಿ ತಿರಸ್ಕಾರದಿಂದ ವರ್ತಿಸಿ ಅವರ ರಾಜಕೀಯ ತೇಜೋವಧೆ ಮಾಡಿತು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಕ್ಷಮೆ ಕೇಳಿದ್ದ ಸಚಿವರು: ಜಾತ್ಯತೀತ ಮತ್ತು ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಕಳೆದ ಗುರುವಾರ ಲೋಕಸಭಾ ಕಲಾಪದಲ್ಲಿ ಕ್ಷಮೆ ಕೇಳಿ ವಿವಾದಕ್ಕೆ ಪೂರ್ಣವಿರಾಮ ಹಾಕಿದ್ದರು. ನಾನು ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಸಂವಿಧಾನವನ್ನು ಗೌರವಿಸುತ್ತೇನೆ ಅಷ್ಟೆ ಅಲ್ಲದೆ ಅದರಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಅವರಲ್ಲಿ ನಾನು ಕ್ಷಮೆ ಕೇಳಲು ನನಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದರು.

    https://youtu.be/_3Hz_6SnMAE

    ಅನಂತ್ ಕುಮಾರ್ ಹೆಗ್ಡೆ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಈ ದೀರ್ಘ ಬರಹವನ್ನು ಬರೆದಿದ್ದು, ಕನ್ನಡದಲ್ಲಿ ಬರೆದಿರುವ ಬರಹದ ಯಥಾವತ್ ಕಾಪಿಯನ್ನು ಇಲ್ಲಿ ನೀಡಲಾಗಿದೆ.

    ರಾಜಕೀಯ ಕ್ಷೇತ್ರ ಬಚ್ಚಲು ಮನೆ ಇದ್ದ ಹಾಗೆ… ಸದಾ ಪಾಚಿ ಕಟ್ಟುತ್ತಲೆ ಸ್ವಚ್ಛಗೊಳಿಸಬೇಕಾದ ಅನಿವಾರ್ಯತೆ ಇರುತ್ತದೆ. ಕೆಲವೊಮ್ಮೆ ಸ್ವಚ್ಛಗೊಳಿಸುವ ಭರದಲ್ಲಿ ಜಾರುವ ​ಸಂದರ್ಭ ಉಂಟಾಗುತ್ತದೆ. ಕಳೆದ ಒಂದು ವಾರದ ವಿದ್ಯಮಾನ ಇದನ್ನು ಇನ್ನಷ್ಟು ಪುಷ್ಟಿಗೊಳಿಸಿದೆ.

    ಕಳೆದ ವಾರದಿಂದ Google ನಲ್ಲಿ ಸಂವಿಧಾನ, ಜಾತ್ಯತೀತತೆ ಮತ್ತು ಅದಕ್ಕೆ ಸಂಬಂದಿಸಿದ ವಿಷಯದ ಬಗ್ಗೆ, ದೇಶದಾದ್ಯಂತ ನಮ್ಮ ಜನ ಜಾಲಾಡಿದ ಬಗೆ ಮಾತ್ರ ಅವಿಸ್ಮರಣೀಯ!!! ಎಂದು ಕಾಣದ ಧಾವಂತ, ಅಸಂಖ್ಯಾತ Digital Footprints ದಾಖಲಿಸಲು ಈ ಸಂದರ್ಭ ಸಾಕ್ಷಿಯಾಯಿತು. ನನ್ನ ಹೇಳಿಕೆಯ ಹಿನ್ನಲೆಯಲ್ಲಿ, ಸಂವಿಧಾನ ಮತ್ತು ಜಾತ್ಯತೀತತೆ ಬಗ್ಗೆ ತಿಳಿದುಕೊಳ್ಳಲು ದೇಶದ ಹಲವಾರು ಮಂದಿ ಪ್ರಯತ್ನಿಸಿದ್ದು ನನ್ನನ್ನು ಬಹುತೇಕ ಚಿಕಿತಗೊಳಿಸಿತು. ಎಂದಿನಂತೆ ಸಂಸತ್ತಿನ ವಾಚನಾಲಯದ ಮೇಜಿನ ಮೇಲೆ Magazines ಬದಲಿಗೆ Making of Constitution ಹಾಗು ಸಂವಿಧಾನದ ಬಗ್ಗೆ ಇರುವ ಇತರ ಹಲವಾರು ಪುಸ್ತಕಗಳು ಹೆಚ್ಚಾಗಿ ಕಾಣಿಸಿಕೊಂಡವು. ನನ್ನ ಹೇಳಿಕೆ ಈ ಅಷ್ಟು ಬೆಳೆವಣಿಗೆಗಳನ್ನು ರೂಪಿಸಿದ್ದೆಯಾಗಿದ್ದಲ್ಲಿ ಇದಕ್ಕಿಂತ ಬೇರಾವ ಸಂತಸವಿದೇ!!

    ಇನ್ನು….. ದೇಶದ ಸಂವಿಧಾನ ಅತ್ಯಂತ ಪವಿತ್ರವಾದ ಗ್ರಂಥ. ಈ ಗ್ರಂಥವನ್ನು ರಚಿಸಿದ ಭಾರತರತ್ನ ಬಾಬಾಸಾಹೇಬ್ ಅಂಬೇಡ್ಕರ್, ನಮ್ಮ ದೇಶ ಕಂಡ ಪರಮೋಚ್ಚ ರಾಷ್ಟ್ರ ಋಷಿ…. ಹಾಗು ನನ್ನ ಪಾಲಿಗೆ ಅವರು ಪ್ರಾತಃ ಸ್ಮರಣೀಯ ಮತ್ತು ಅತ್ಯುನ್ನತ ಆದರಣೀಯ ಸ್ಪೂರ್ತಿಯ ಚೇತನ!! ಈ ಮಹಾನ್ ಚೇತನವನ್ನು ಅಂದಿನ ಕಾಂಗ್ರೆಸ್ ಹೇಗೆ ನಡೆಸಿಕೊಂಡಿತು ಎನ್ನುವುದು ಇಂದಿನ ತಲೆಮಾರಿನ ಹಲವರಿಗೆ ತಿಳಿಯದಾಗಿದೆ. ಬಾಬಾಸಾಹೇಬ್ ರನ್ನು, ಅವರ ಜೀವಿತಾವಧಿಯಲ್ಲಿ ನೆಹರು ಮತ್ತು ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸಂಪೂರ್ಣವಾಗಿ ತಿರಸ್ಕಾರದಿಂದ ವರ್ತಿಸಿ ಅವರ ರಾಜಕೀಯ ತೇಜೋವಧೆ ಮಾಡಿತು. ಚುನಾವಣೆಯಲ್ಲಿ ಅವರನ್ನು ಮೋಸದಿಂದ ಸೋಲಿಸಿ, ಅವರ ರಾಜಕಾರಣದ ಅವಕಾಶಗಳನ್ನು ಕಿತ್ತುಕೊಂಡರು. ಆ ದಿನಗಳಲ್ಲಿ ದಲಿತ ಸಂಘಟನೆ ಅಥವಾ ದೇಶದ ನಿಜವಾದ ಬೌದ್ಧಿಕ ಶಕ್ತಿಗಳು ಸಹ, ಎಚ್ಚತುಗೊಳ್ಳದೆ ಮತ್ತು ಬಲಿಷ್ಠವಾಗಿರದೆ, ಅಂಬೇಡ್ಕರ್ ರ ನೆರವಿಗೆ ಕೂಡ ಧಾವಿಸಲಿಲ್ಲ. ಅವರ ರಾಜಕಾರಣವನ್ನು ಅಂದಿನ ನೆಹರು ಕೂಟ ಹಾಗು ಕಮ್ಯುನಿಸ್ಟ್ ಸೋಗಲಾಡಿಗಳು ಜಂಟಿಯಾಗಿ ನಿರ್ನಾಮ ಮಾಡಿದವು. ಮುಂದೆ ಇಂದಿರಾ ಗಾಂಧಿ, ಬಾಬು ಜಗಜೀವನ್ ರಾಮ್ ರವರನ್ನು ಹದ್ದುಬಸ್ತಿನಲ್ಲಿಡಲು, ಇತಿಹಾಸದ ಕಪಾಟಿನಿಂದ ಅಂಬೇಡ್ಕರ್ ರವರನ್ನು ಹೊರತಂದು ದೇಶದ ಜನತೆಗೆ ಅವರ ಪರಂಪರೆಯ ವಾರಸುದಾರರು ತಾವೆಂದು ಬಿಂಬಿಸಿದರು. ಈ ಮೋಸದ ಪರಂಪರೆ ಹಲವು ತಲೆಮಾರುಗಳನ್ನು ದಾರಿ ತಪ್ಪಿಸಿ ಇಂದಿಗೂ ಅದನ್ನು ಚಾಲ್ತಿಯಲ್ಲೇ ಇಟ್ಟಿರುವ ಕಾಂಗ್ರೆಸ್ ನವರ ಸೋಗಲಾಡಿತನ ಮಾತ್ರ ಇತ್ತೀಚಿನ ದಿನಗಳಲ್ಲಿ ಬಟಾಬಯಲಾಗುತ್ತಿದೆ. ಡಾ। ಅಂಬೇಡ್ಕರ್ ರವರನ್ನು ಸಂಪೂರ್ಣವಾಗಿ ಗುತ್ತಿಗೆ ಪಡೆದವರಂತೆ ವರ್ತಿಸುವ ಇಂದಿನ ಮೂರು ಕಾಸಿನ ಚಿಲ್ಲರೆ ನಾಯಕರುಗಳಿಗೆ ತಮ್ಮ ನೆಲ ಕುಸಿಯುತಿರುವ ಅನುಭವವಾಗಿದ್ದರಿಂದಲೇ ಕಳೆದ ೩-೪ ದಿನಗಳ ಆರ್ಭಟ-ಚೀರಾಟ-ನರ್ತನ ನಡೆದದ್ದು!!!

    ಡಾ। ಅಂಬೇಡ್ಕರ್ ಸಂವಿಧಾನದಲ್ಲಿ “ಸಮಾಜವಾದ ಮತ್ತು ಜಾತ್ಯತೀತತೆ” ಎಂದು ವರ್ಣಿಸದಿರುವ ಬಗ್ಗೆ ಎದ್ದ ಆಕ್ಷೇಪಕ್ಕೆ ಉತ್ತರಿಸಿದ್ದು ಹೀಗೆ……

    ” ಸಾಮಾಜಿಕ ವ್ಯವಸ್ಥೆ ಒಂದು ನಿರ್ದಿಷ್ಟ ರೂಪವನ್ನು ತೆಗೆದುಕೊಳ್ಳಬೇಕೆಂದು ನೀವು ಸಂವಿಧಾನದಲ್ಲಿ ಹೇಳಿದರೆ, ನನ್ನ ಪ್ರಕಾರ, ಜನರು ಬದುಕಲು ಬಯಸುವ ಸಾಮಾಜಿಕ ವ್ಯವಸ್ಥೆ ಏನಾಗಿರಬೇಕು ಎಂಬುದನ್ನು ನಿರ್ಧರಿಸುವ ಪ್ರಜೆಗಳ ಸ್ವಾತಂತ್ರ್ಯವನ್ನು ಕಸಿದುಕೊಂಡ ಹಾಗೆ ಆಗುತ್ತದೆ. ಇಂದು, ಸಮಾಜದ ಬಹುಪಾಲು ಜನರು ಸಮಾಜವಾದ ವ್ಯವಸ್ಥೆಯನ್ನು, ಬಂಡವಾಳಶಾಹಿ ವ್ಯವಸ್ಥೆಗಿಂತಲೂ ಉತ್ತಮವೆಂದು ಪ್ರಸ್ತುತ ಸಮಯದಲ್ಲಿ ಪರಿಗಣಿಸಿರುವುದು ಸರಿಯಷ್ಟೆ. ಆದರೆ ಮುಂದಿನ ದಿನಗಳಲ್ಲಿ ಸಮಾಜವಾದಿ ವ್ಯವಸ್ಥೆಗಿಂತ ಉತ್ತಮವಾದ ಸಾಮಾಜಿಕ ರೂಪದ ಇತರ ವ್ಯವಸ್ಥೆಗಳನ್ನು ಜನರು ಯೋಚಿಸುವಂತೆ ಮಾಡುವುದು ಸಾಧ್ಯವಿದೆ. ಹಾಗಾಗಿ ಒಂದು ನಿರ್ದಿಷ್ಟ ರೂಪದಲ್ಲಿ ಜನರು ಬದುಕಲು ಸಂವಿಧಾನವನ್ನು ಏಕೆ ಕಟ್ಟಿಹಾಕಬೇಕು ಮತ್ತು ಅದನ್ನು ಸ್ವತಃ ಅಂದಿನ ಜನರೇ ಅಂದಿನ ಕಾಲಮಾನಕ್ಕೆ ನಿರ್ಧರಿಸಲು ಆ ಜನರಿಗೆ ಏಕೆ ಬಿಡಬಾರದು? ಈ ದೃಷ್ಟಿಕೋನದಲ್ಲಿ ನಾವು ಈ ತಿದ್ದುಪಡಿ ಪ್ರಸ್ತಾಪವನ್ನು ವಿರೋಧಿಸುತ್ತಿದ್ದೇವೆ. “

    ತಿದ್ದುಪಡಿಯು “ಸಂಪೂರ್ಣವಾಗಿ ನಿರುಪದ್ರವ” ಮತ್ತು “ಅನಗತ್ಯ” ಎಂಬುದು ಅವರ ಎರಡನೆಯ ಆಕ್ಷೇಪಣೆ. ಏಕೆಂದರೆ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನೀತಿಯ ನಿರ್ದಿಷ್ಟ ತತ್ವಗಳ ಮೂಲಕ ನಮ್ಮ ಸಂವಿಧಾನದಲ್ಲಿ ಸಮಾಜವಾದಿ ತತ್ತ್ವಗಳನ್ನು ಈಗಾಗಲೇ ಒಳಪಡಿಸಲಾಗಿದೆ. ನಿರ್ಧಿಷ್ಟ ತತ್ವಗಳನ್ನು ಉಲ್ಲೇಖಿಸುತ್ತಾ, ಅವರು “ಗಮನ ಸೆಳೆಯುವ ಈ ನಿರ್ದಿಷ್ಟ ತತ್ವಗಳು ಅವರ ದಿಕ್ಕಿನಲ್ಲಿ ಮತ್ತು ಅವರ ವಿಷಯದಲ್ಲಿ ಸಮಾಜವಾದವಾಗದಿದ್ದಲ್ಲಿ, ಇನ್ನು ಹೆಚ್ಚಿನ ಸಮಾಜವಾದವು ಏನೆಂಬುದನ್ನು ನಾನು ಅರಿಯೆ” ಎಂದು ಷಾ ಅವರಿಗೆ ತಿಳಿಸಿದರು. ಷಾ ಅವರ ತಿದ್ದುಪಡಿಯು ಜಾರಿಯಾಗುವಲ್ಲಿ ಅಂದು ವಿಫಲವಾಯಿತು ಮತ್ತು 42ನೇ ತಿದ್ದುಪಡಿ ತನಕ ಈ ಪೀಠಿಕೆ ಪ್ರಸ್ತಾವವು ಬದಲಾಗದೆ ಉಳಿಯಿತು.

    ಸ್ವತಃ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಮುಂದಿನ ಪೀಳಿಗೆಯ ಆಶೋತ್ತರಗಳಿಗೆ, ದೇಶ ತನ್ನ ವ್ಯವಸ್ಥೆಯನ್ನು ಬದಲಿಸಿಕೊಳ್ಳಲು ಮುಂಬರುವ ಪೀಳಿಗೆಯವರಿಗೇ ಅವಕಾಶ ಒದಗಿಸಿ ತಾವು ಎಷ್ಟು ಪ್ರಜಾಪ್ರಭುತ್ವವಾದಿ ಎಂದು ನಿರೂಪಿಸಿದ್ದಾರೆ. ಇವರಿಗಿಂತ ಹೆಚ್ಚಿನ ಪ್ರಜಾಪ್ರಭುತ್ವವನ್ನು ಅರಗಿಸಿಕೊಂಡ ಇನ್ನೊಬ್ಬ ಮೇಧಾವಿಯನ್ನು ಈ ಜಗತ್ತು ಇಂದಿಗೂ ಕಂಡಿಲ್ಲ ಹಾಗು ಇನ್ನೂ ಸಹ ಕಾಯುತ್ತಲಿದೆ!!!

    ಇಂತಹ ಮಹಾನ್ ಆರಾಧ್ಯ ಪುರುಷನನ್ನು ಕೇವಲ ಅಲಂಕಾರಿಕವಾಗಿ ತಮ್ಮ vote-bank ರಾಜಕೀಯಕ್ಕೆ ಬಳಸಿಕೊಳ್ಳುವ, ಮತಿಗೆಟ್ಟ ರಾಜಕಾರಣಿಗಳಿಗೆ ಹಾಗು ಬುದ್ಧಿಜೀವಿಯೆನಿಸಿಕೊಳ್ಳುವ ಸೋಗಲಾಡಿ ಗಂಜಿಗಿರಾಕಿಗಳಿಗೆ, ಮುಂದಿನ ದಿನಗಳಲ್ಲಿ ನನ್ನ ನಿಲುವನ್ನೇ ಇದೆ ಸಮಾಜ ಗಟ್ಟಿಯಾಗಿ ಪ್ರತಿಧ್ವನಿಗೊಳಿಸುವುದು ಪ್ರತಿಶತ ಸತ್ಯ. ಕೇವಲ ನನ್ನಂಥವನ ಒಂದು ಭಾಷಣದಲ್ಲಿ ಆಡಿದ ನನ್ನ ಆಲೋಚನೆಯನ್ನು ಜೀರ್ಣಿಸಿಕೊಳ್ಳಲಾಗದ ಈ ವಿಕೃತ ಮಂದಿಗೆ, ಇಂದಿನ ಯುವಜನತೆ ಮತ್ತು ಮುಂದಿನ ತಲೆಮಾರಿನ ಆಲೋಚನೆಗಳನ್ನೂ ಕಟ್ಟಿಹಾಕಲು ಎಂದಿಗೂ ಸಾಧ್ಯವಿಲ್ಲ. ಈ ಸಮಾಜ ಎಚ್ಚತ್ತುಗೊಂಡಿದೆ. ನಾಯಕರೆನಿಸಿಕೊಂಡವರು, ಈ ಕಾಲಮಾನದ ಕರೆಗೆ ಓಗೊಟ್ಟು ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡದಿದ್ದಲ್ಲಿ ಅಂಥವರೆಲ್ಲರೂ ಇತಿಹಾಸದ ಕಸದ ಬುಟ್ಟಿಗೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿಷಯ ಪ್ರಸ್ತಾಪ, ಪ್ರಸಕ್ತ ಕಾಲಮಾನದಲ್ಲಿ ಒಂದು ದಿಕ್ಸೂಚಿಯೆಂದು ತಿಳಿದು, ಪ್ರಸ್ತುತ (ಡೋಂಗಿ)ಜಾತ್ಯಾತೀತ(?) ರೆಂದು ಕರೆಸಿಕೊಳ್ಳುವವರಿಗೆ ಖಂಡಿತ ಕಾದಿದೆ ವಿಶೇಷ ನಿರಾಶ್ರಿತ ಶಿಬಿರಗಳು!!

    ಮಾಧ್ಯಮದಲ್ಲಿ ನನ್ನನ್ನು ಯಾರು ಬೆಂಬಲಿಸಲಿಲ್ಲವೆಂದು ಬಿಂಬಿಸಿದರು ಸಹ ನನಗೆ ಮಾತ್ರ ಈ ವಿದ್ಯಮಾನದ ನಂತರ ಎಂದು ಒಬ್ಬಂಟಿಯೆನಿಸಲೇ ಇಲ್ಲ. ನಮ್ಮ ಜನರ ಪ್ರತಿಕ್ರಿಯೆ ಎಷ್ಟು ಉತ್ತಮವಾಗಿತ್ತು ಎಂದರೆ ನನ್ನನ್ನು ಇಂದಿನ ವಿದ್ಯಮಾನಗಳು ಇನ್ನಷ್ಟು ಹುರುಪು ಗೊಳಿಸಿ, ಶಕ್ತಿ ನೀಡಿ ಹೆಚ್ಚಿನ ವಿಶ್ವಾಸ ಮೂಡಿಸಿದೆ.

    ಯಾವುದೋ ಅವಿವೇಕಿ, ಹಿಂದೂ ಧರ್ಮಕ್ಕೆ ಅಪ್ಪ-ಅಮ್ಮವಿಲ್ಲವೆಂದಿದ್ದಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೊದಿಕೆಯಲ್ಲಿ ಈ ಸಮಾಜದ ವಿವಿಧ ಸ್ತರದ ನಾಯಕರೆಲ್ಲ ನಾಚಿಕೆಗೆಟ್ಟು ವಿಜೃಂಭಿಸಿದರು. ಆದರೆ ವಿಚಾರ ಪ್ರಚೋದನೆ ಮಾಡಿದ ನನಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ್ಯವಿಲ್ಲ. ನನ್ನ ನಾಲಿಗೆ ಕತ್ತರಿಸಿ ತಂದು ಕೊಡುವವರಿಗೆ ಬಹುಮಾನ ನೀಡುತ್ತೇವೆಯೆನ್ನುವವರ ಬಗ್ಗೆ ಇದೆ ನಮ್ಮ ರಾಜಕೀಯ ನಾಯಕರಾಗಲಿ, ಸಮಾಜದ ಬುದ್ಧಿಜೀವಿಯೆನಿಸಿಕೊಂಡವರಾಗಲಿ ಅಥವಾ ಮಾಧ್ಯಮದ ಮಂದಿಯಾಗಲಿ ಧ್ವನಿ ಎತ್ತದಿದ್ದದು ಪ್ರಸಕ್ತ ವಿದ್ಯಮಾನದ ಕಟು ವಾಸ್ತವವು ಹೌದು. ಆದರೆ ವಾಸ್ತವ ನೆಲಗಟ್ಟಿನಲ್ಲಿ ಜನ ಮಾನಸದಲ್ಲಿ ರೂಪಗೊಂಡ ಅಭಿಪ್ರಾಯ ಮಾತ್ರ ವ್ಯತಿರಿಕ್ತವಾಗಿತ್ತು. ನನಗಂತೂ ಹಲವು ನೇರ ಪ್ರತಿಕ್ರಿಯೆಗಳು ಬಂದವು. ನನ್ನ ನಿಲುವಿಗೆ ಹಲವರು ಬೆಂಬಲಿಸಿ ತಮ್ಮ ಅನಿಸಿಕೆಗಳನ್ನೂ ವಿವಿಧ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಅವರೆಲ್ಲರೂ ನನ್ನ ವಿಚಾರವನ್ನು ಶ್ಲಾಘಿಸಿ ವಿಚಾರದ ಬಗ್ಗೆ ಧೀರ್ಘವಾಗಿ ಚರ್ಚಿಸಿ ಮತ್ತು ಇಂತಹ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಅಭಿನಂದಿಸಿದ್ದಾರೆ. ಅವರೆಲ್ಲರ ಪ್ರತಿಕ್ರಿಯೆ ನನ್ನನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಅವರೆಲ್ಲರಿಗೂ ನನ್ನ ಅನಂತ ವಂದನೆಗಳು.

     

    https://youtu.be/oYObRLHynu4