ಕಾರವಾರ: ನೆಲಮಂಗಲ ರೋಡ್ ರೇಜ್ (Nelamangala Road Rage) ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಗನ್‌ಮ್ಯಾನ್ ಶ್ರೀಧರ್‌ರವರನ್ನು ಮುಂದಿನ ಆದೇಶದವರೆಗೂ ಅಮಾನತು ಮಾಡಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಆದೇಶ ಹೊರಡಿಸಿದ್ದಾರೆ.
ಮಾಜಿ ಸಂಸದ ಅನಂತಕುಮಾರ್ ಹೆಗಡೆ ಗನ್‌ಮ್ಯಾನ್ ಆಗಿ ಕಳೆದ 10 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಶ್ರೀಧರ್ ಮಾಜಿ ಸಂಸದರ ಆಪ್ತ ಕೂಡ. ಇನ್ನು ನೆಲಮಂಗಲದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಇವರು ಸಹ ಆರೋಪಿಯಾಗಿದ್ದು, ಇಂದು ಜಾಮೀನು ಪಡೆದಿದ್ದರು. ಇದನ್ನೂ ಓದಿ: ಶಾಸಕರ ಅಸಮಾಧಾನ ಎಲ್ಲವನ್ನೂ ಸಿಎಂ ಹ್ಯಾಂಡಲ್ ಮಾಡ್ತಾರೆ: ಸಚಿವ ಎಂಬಿ ಪಾಟೀಲ್
ಆದರೇ ಇದೀಗ ಡಿ.ಆರ್ ಪೊಲೀಸ್ ವಿಭಾಗದಲ್ಲಿ ಇವರ ಅಮಾನತು ಜೊತೆ ಗಣ್ಯ ವ್ಯಕ್ತಿಗಳಿಗೆ ಗನ್‌ಮ್ಯಾನ್ ಆಗಿರುವ ಜಿಲ್ಲೆಯ ಐದು ವರ್ಷಕ್ಕಿಂತ ಹೆಚ್ಚು ಸಮಯ ಸೇವೆ ಮಾಡುತ್ತಿರುವ ಗನ್ ಮ್ಯಾನ್‌ಗಳಿಗೆ ಸಹ ಇದೀಗ ಈ ಘಟನೆ ನಂತರ ವರ್ಗಾವಣೆ ಆದೇಶ ಮಾಡಲಾಗಿದ್ದು, ಹತ್ತು ಜನ ಗನ್‌ಮ್ಯಾನ್‌ಗಳಿಗೆ ಇಂದು ವರ್ಗಾವಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಆದೇಶಿಸಿದ್ದಾರೆ. ಇದನ್ನೂ ಓದಿ: ನಾಳೆ ಬಾಹ್ಯಾಕಾಶ ಯೋಜನೆಯ ಆಕ್ಸಿಯಮ್ 4 ಉಡಾವಣೆ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಪ್ರಯಾಣ
ಬೆಂಗಳೂರು: ನೆಲಮಂಗಲ ರೋಡ್ ರೇಜ್ (Nelamangala Road Rage) ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಗನ್‌ಮ್ಯಾನ್ ಮತ್ತು ಕಾರ್ ಡ್ರೈವರ್‌ಗೆ ಜಾಮೀನು ಮಂಜೂರು ಮಾಡಲಾಗಿದೆ.
ನ್ಯಾಯಾಲಯದಲ್ಲಿ ಅನಂತಕುಮಾರ್ ಹೆಗಡೆ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಇಬ್ಬರ ಪರ ವಕೀಲ ನಾಗೇಂದ್ರ ವಾದ ಮಂಡಿಸಿದರು. ನೋಟಿಸ್ ಕೊಡದೇ ಇಬ್ಬರನ್ನೂ ಬಂಧನ ಮಾಡಿದ್ದಾರೆ. 112ಗೆ ಕರೆ ಬಂದ ತಕ್ಷಣ ಠಾಣೆಗೆ ಕರೆದೊಯ್ದಿದ್ದಾರೆ. ಎಫ್‌ಐಆರ್ ದಾಖಲಾಗುವ ಮುನ್ನ ಬಂಧನ ತೋರಿಸಿದ್ದಾರೆ ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಪೂಜಾ ಶೆಟ್ಟಿ ಅವರು ಜಾಮೀನು ಮಂಜೂರು ಮಾಡಿದ್ದಾರೆ.
– ತಪ್ಪಿದ್ರೆ ಅನಂತ್ ಕುಮಾರ್ ಕ್ಷಮೆ ಕೇಳ್ತಾರೆ: ಶಾಸಕ ಸುರೇಶ್‌ಗೌಡ
ಬೆಂಗಳೂರು: ಕಾರು ಓವರ್ ಟೇಕ್ (Car Overtake) ಮಾಡಿದ್ದಕ್ಕೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಬಿಜೆಪಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಸೇರಿ ಮೂವರ ವಿರುದ್ಧ ದಾಬಸ್‌ಪೇಟೆಯಲ್ಲಿ (Dabaspete) ಪ್ರಕರಣ ದಾಖಲಾಗಿದೆ.
ಓವರ್‌ಟೇಕ್ ವಿಚಾರವಾಗಿ ನೆಲಮಂಗಲದ ಹಳೇ ನಿಜಗಲ್ ಬಳಿ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಸಲ್ಮಾನ್, ಸೈಫ್, ಇಲಿಯಾಜ್, ಗುಲಷಿರ್ ಉನ್ನೀಸಾ ಎಂಬವರು ದೂರು ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಹೆಗಡೆ ಕಾರಿನಲ್ಲಿದ್ದ ನಾಲ್ವರನ್ನೂ ನೆಲಮಂಗಲ ಡಿವೈಎಸ್‌ಪಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ. ಇದನ್ನೂ ಓದಿ: 2 ಕೋಟಿಗೂ ಅಧಿಕ ಮೌಲ್ಯದ ಫ್ಲ್ಯಾಟ್ ಸೇರಿ ʻಬಂಗಾರಿʼಗೌಡಳ 3.98 ಕೋಟಿ ಆಸ್ತಿ ಜಪ್ತಿ
ಘಟನೆ ಸಂಬಂಧ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಪ್ರತಿಕ್ರಿಯಿಸಿ, ಅನಂತ್‌ಕುಮಾರ್ ಹೆಗಡೆ ಸೇರಿದಂತೆ ಮೂವರ ಮೇಲೆ ಎಫ್‌ಐಆರ್ ದಾಖಲಾಗಿದೆ, ಎ.1 ಅನಂತ್‌ಕುಮಾರ್ ಹೆಗಡೆ, ಎ2 ಗನ್ ಮ್ಯಾನ್, ಎ3- ಚಾಲಕ ಆರೋಪಿಗಳಾಗಿದ್ದಾರೆ. ತನಿಖೆ ಮಾಡಿ ಅಗತ್ಯವಿದ್ದರೆ ಬಂಧಿಸುತ್ತೆವೆ. ಇದರೊಂದಿಗೆ ಗಾಯಾಳುಗಳ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ ಪ್ರಕಟ – ಎಎಪಿ 2, ಬಿಜೆಪಿ, ಕಾಂಗ್ರೆಸ್, ಟಿಎಂಸಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು
ತಪ್ಪಿದ್ದರೆ ಕ್ಷಮೆ ಕೇಳ್ತಾರೆ: ಶಾಸಕ ಸುರೇಶ್
ಈ ಕುರಿತು ಮಾತನಾಡಿರುವ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಮಾತನಾಡಿ, 5 ಬಾರಿ ಸಂಸದರಾಗಿ ಆಯ್ಕೆಯಾದವರು ಅನಂತ್ ಕುಮಾರ್. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುವಾಗ ಮಾರ್ಗ ಮಧ್ಯೆದಲ್ಲಿ ಗಲಾಟೆ ನಡೆದಿದೆ. ಅನಂತ್ ಕುಮಾರ್ ಹೆಗಡೆ ಇದ್ದ ಕಾರಿಗೆ ಪಕ್ಕದಲ್ಲಿ ಬಂದ ಕಾರಿನವರು ಚಮಕ್ ಕೊಟ್ಟಿದ್ದಾರೆ. ಆಗ ಸರಿಯಾದ ರೀತಿಯಲ್ಲಿ ಹೋಗಿ ಅಂತ ಹೇಳಿದ್ದಾರೆ. ಗೊಂದಲವಾಗಿ ಗಲಾಟೆ ಶುರುವಾಗಿದೆ. ಗನ್ ಮ್ಯಾನ್ ಮತ್ತು ಡ್ರೈವರ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ರಸ್ತೆಯಲ್ಲಿ ಸಾಕಷ್ಟು ಆಕ್ಸಿಡೆಂಟ್, ಗೊಂದಲ ಆಗೋದು ಸರ್ವೇ ಸಾಮಾನ್ಯ. ಇಂತಹ ವಿಚಾರದಲ್ಲಿ ಗೊಂದಲ ಬೇಡ. ಕೂತು ಮಾತನಾಡಿ ಬಗೆಹರಿಸಿಕೊಳ್ಳೋಣ. ಅನಂತ್ ಕುಮಾರ್ ಹೆಗಡೆ ತಪ್ಪಿದ್ರೆ ಅವರು ಕ್ಷಮೆ ಕೇಳುತ್ತಾರೆ. ನಿಮ್ಮ ತಪ್ಪಿದ್ರೆ ನೀವು ಕ್ಷಮೆ ಕೇಳಿ ಅಂತ ಹೇಳಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನನಗೆ ಚರಂಡಿ, ರಸ್ತೆಯೂ ಮಾಡಿಸೋಕೆ ಆಗ್ತಿಲ್ಲ – ಮೊಳಕಾಳ್ಮೂರು ಶಾಸಕ ಗೋಪಾಲಕೃಷ್ಣ ಅಸಹಾಯಕತೆ
ಕಾಫಿ ಡೇಯಲ್ಲಿ ಕರೆಸಿ ಮುಸ್ಲಿಂ ಅವರ ಜೊತೆ ಮಾತನಾಡಿದ್ದೇನೆ. ಈ ಕೇಸ್ ಮುಂದುವರಿಸೋದು ಬೇಡ ಅಂತ ಹೇಳಿದ್ದೇನೆ. ಕಾಂಗ್ರೆಸ್‌ನವರು ಯಾವಾಗಲೂ ರಾಜಕೀಯವಾಗಿ ತುಷ್ಟಿಕರಣ ಮಾಡುತ್ತಿರುತ್ತಾರೆ. ಪೊಲೀಸ್ ಅವರು ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗುವುದು ಬೇಡ. ಕಾನೂನಿನ ಪ್ರಕಾರ ತಪ್ಪಿದ್ರೆ ಕ್ರಮ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: 2 ಶತಕ, ಡಿಫರೆಂಟ್ ಸೆಲೆಬ್ರೇಷನ್ – ಈ ಸಾಧನೆ ಮಾಡಿದ ಏಷ್ಯಾದ ಏಕೈಕ ವಿಕೆಟ್ ಕೀಪರ್ ಪಂತ್
ನವದೆಹಲಿ: ಬಿಜೆಪಿ-ಜೆಡಿಎಸ್ ಮೈತ್ರಿಯ ಭಾಗವಾಗಿ ಮಂಡ್ಯ, ಹಾಸನದ ಜೊತೆಗೆ ಕೋಲಾರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ (BJP) ಹೈಕಮಾಂಡ್ ನಿರ್ಧರಿಸಿದೆ. ಮಂಗಳವಾರ ತಡರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಿಳಿಸಿದ್ದಾರೆ.
ಬಾಕಿ ಉಳಿದ ಐದು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಹೈಕಮಾಂಡ್ ನಾಯಕರು ರಾಜ್ಯ ನಾಯಕರ ಜೊತೆಗೆ ಸಭೆ ನಡೆಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಭಾಗಿಯಾಗಿದ್ದರು. ಇದನ್ನೂ ಓದಿ: ಟೈಂ ಪಾಸ್ ಮಾಡಲು ಕಷ್ಟ, ಅದಕ್ಕೆ ಲೋಕಸಭೆಗೆ ಸ್ಪರ್ಧೆ – ಡಾ.ಕೆ.ಸುಧಾಕರ್ ಸ್ಪರ್ಧೆ ಬಗ್ಗೆ ಎಸ್.ಅರ್.ವಿಶ್ವನಾಥ್ ಹೇಳಿದ್ದೇನು?
ಉತ್ತರ ಕನ್ನಡ, ಬೆಳಗಾವಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ರಾಯಚೂರು ಕ್ಷೇತ್ರಗಳಿಗೆ ಟಿಕೆಟ್ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಬೆಳಗಾವಿ ಕ್ಷೇತ್ರದಿಂದ ಜಗದೀಶ್ ಶೆಟ್ಟರ್‌ಗೆ (Jagdish Shettar) ಟಿಕೆಟ್ ನೀಡುವ ಬಗ್ಗೆ ಅಂತಿಮ ಚರ್ಚೆಯಾಗಿದೆ. ಚಿಕ್ಕಬಳ್ಳಾಪುರಕ್ಕೆ ಅಲೋಕ್ ವಿಶ್ವನಾಥ್ ಮತ್ತು ಡಾ.ಕೆ ಸುಧಾಕರ್ ಬಗ್ಗೆ ಚರ್ಚೆಯಾಗಿದೆ. ಉತ್ತರ ಕನ್ನಡಕ್ಕೆ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆಯನ್ನು (Anantkumar Hegde) ಬದಲಿಸಿ ವಿಶ್ವೇಶ್ವರ ಹೆಗಡೆ ಕಾಗೇರಿ, ಚಕ್ರವರ್ತಿ ಸೂಲಿಬೆಲೆ ಸೇರಿ ಇತರೆ ಹೆಸರುಗಳ ಬಗ್ಗೆ ಚರ್ಚೆಯಾಗಿದೆ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ವಿರುದ್ಧ ಚುನಾವಣಾ ಆಯೋಗಕ್ಕೆ ಡಿಎಂಕೆ ದೂರು
ಚಿತ್ರದುರ್ಗ ಮತ್ತು ರಾಯಚೂರು ಮೀಸಲು ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಮತ್ತೆ ಮುಂದೂಡಿಕೆಯಾಗಿದೆ. ಚಿತ್ರದುರ್ಗದಲ್ಲಿ ಸಚಿವ ನಾರಯಣಸ್ವಾಮಿ ಸ್ಪರ್ಧೆಗೆ ನಿರಾಕರಿಸಿದರು. ಈಗ ಅವರು ಸ್ಪರ್ಧೆಗೆ ಬಯಸಿದ್ದು, ಸ್ಥಳೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಇನ್ನು ರಾಯಚೂರಿನಲ್ಲೂ ಬಿ.ವಿ ನಾಯಕ್ ಮತ್ತು ಹಾಲಿ ಸಂಸದ ರಾಜ ಅಮರೇಷ್ ನಾಯಕ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಹಿನ್ನೆಲೆ ಮತ್ತೊಮ್ಮೆ ಎರಡು ಕ್ಷೇತ್ರಗಳಿಂದ ಸರ್ವೆ ವರದಿ ತರಿಸಿಕೊಳ್ಳಲು ನಿರ್ಧರಿಸಿದೆ. ಮಾರ್ಚ್ 22ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅಂತಿಮ ತಿರ್ಮಾನವಾಗಲಿದೆ. ಇದನ್ನೂ ಓದಿ: ಯುರೋಪಿನಲ್ಲಿ ಐವರ ಸಾವಿಗೆ ಕಾರಣವಾಯ್ತು ಗಿಳಿ ಜ್ವರ- ಏನಿದು ಫೀವರ್, ಲಕ್ಷಣಗಳೇನು..?
ಸಭೆ ಬಳಿಕ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra), ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ನಿನ್ನೆ ಸಭೆ ನಡೆದಿದೆ. 30 ನಿಮಿಷಗಳ ಕಾಲ ಬಾಕಿ ಉಳಿದಿರುವ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಚರ್ಚೆ ಆಗಿದೆ. ಎಲ್ಲವೂ ಕೂಡ ಒಂದು ಹಂತಕ್ಕೆ ಬಂದಿದೆ. ಅಂತಿಮವಾಗಿ ಮಾ.22ಕ್ಕೆ ಮೋದಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿ ಘೋಷಣೆಯಾಗಲಿದೆ ಎಂದರು. ಇದನ್ನೂ ಓದಿ: ಸಂಜೆ ನೆರೆ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಹತ್ಯೆ – ರಾತ್ರಿ ಯುಪಿ ಪೊಲೀಸರ ಎನ್‌ಕೌಂಟರ್‌ಗೆ ಪಾತಕಿ ಬಲಿ
ಬಿಜೆಪಿ ಆಂತರಿಕ ಅಸಮಾಧಾನದ ಬಗ್ಗೆ ಮಾತನಾಡಿದ ಅವರು, ಯಾವುದೇ ಕ್ಷೇತ್ರದಲ್ಲಿ ಒಮ್ಮತದ ನಿರ್ಧಾರ ಆಗಲ್ಲ. ಆಕಾಂಕ್ಷಿಗಳ ಪಟ್ಟಿ ಬಹಳ ದೊಡ್ಡದಿದೆ. ನಿನ್ನೆ ಸಭೆಯಲ್ಲಿ ಆಗಿರುವ ಎಲ್ಲಾ ವಿಚಾರ ಬಹಿರಂಗಪಡಿಸೋಕೆ ಆಗಲ್ಲ. ಏನೇ ಚರ್ಚೆ ಆದರೂ ಸಹ ಪ್ರಧಾನಿ ನೇತೃತ್ವದ ಸಭೆಯಲ್ಲಿ ಎಲ್ಲವೂ ಫೈನಲ್ ಆಗುತ್ತದೆ. ಈಗಾಗಲೇ ಘೋಷಣೆ ಆಗಿರುವ ಅಭ್ಯರ್ಥಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಈಶ್ವರಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಒಂದು ಅವಧಿಗೆ ನನ್ನನ್ನು ನೇಮಕ ಮಾಡಿದ್ದಾರೆ ಎಂದು ಭಾವಿಸುತ್ತೇನೆ. ಮಂಗಳವಾರ ಬಂಡಾಯದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಏ.19, 26ರ ಚುನಾವಣಾ ದಿನಾಂಕ ಬದಲಾಯಿಸುವಂತೆ ಆಯೋಗಕ್ಕೆ ಮುಸ್ಲಿಂ ಸಂಘಟನೆಗಳಿಂದ ಮನವಿ
ಉತ್ತರ ಕನ್ನಡ: ಹಿಂದುತ್ವವನ್ನೇ ಉಸಿರಾಡುವ ಬಿಜೆಪಿಯ (BJP) ಭದ್ರ ನೆಲೆ ಉತ್ತರ ಕನ್ನಡ (Uttara Kannada Lok Sabha). ಮುಂಬರುವ ಲೋಕಸಭಾ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಬಿಜೆಪಿ ಭದ್ರಕೋಟೆ ಎನಿಸಿರುವ ಉತ್ತರ ಕನ್ನಡ ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್ ತಂತ್ರ ರೂಪಿಸಿದೆ. ಕ್ಷೇತ್ರದ ರಾಜಕೀಯ ಇತಿಹಾಸ ಗಮನಿಸಿದರೆ 1991 ರವರೆಗೆ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಕಾಲಾಂತರದಲ್ಲಿ ಬಿಜೆಪಿ ತೆಕ್ಕೆಗೆ ಬಂತು. ಈಗಲೂ ಕ್ಷೇತ್ರ ಕಮಲದ ಹಿಡಿತದಲ್ಲೇ ಇದೆ. ಇದನ್ನು ಭೇದಿಸಲು ಕಾಂಗ್ರೆಸ್ (Congress) ರಣತಂತ್ರ ರೂಪಿಸಿದೆ.
1999 ರ ಚುನಾವಣೆ ನಂತರ ಈ ಕ್ಷೇತ್ರ ಕಾಂಗ್ರೆಸ್ ಹಿಡಿತದಿಂದ ತಪ್ಪಿತು. ಕಳೆದ ಎರಡು ದಶಕಗಳಿಂದ ಬಿಜೆಪಿ ಹಿಡಿತದಲ್ಲಿದೆ. 1996 ರಿಂದ ಸತತ ಏಳು ಬಾರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಂತಕುಮಾರ್ ಹೆಗಡೆ (Anantkumar Hegde) ಮತ್ತೆ ಕಣಕ್ಕಿಳಿಯುವರೆ ಅಥವಾ ಹೊಸಬರಿಗೆ ಅವಕಾಶ ಸಿಗುವುದೇ ಎಂಬ ಕುತೂಹಲ ಮೂಡಿದೆ. 1999 ರ ಚುನಾವಣೆಯಲ್ಲಿ ಮಾತ್ರ ಹೆಗಡೆ ಕಾಂಗ್ರೆಸ್‌ನ ಮಾರ್ಗರೇಟ್ ಆಳ್ವಾ ವಿರುದ್ಧ ಸೋತಿದ್ದರು. ಕಳೆದ ಎರಡು ದಶಕಗಳಿಂದ ಕ್ಷೇತ್ರ ಬಿಜೆಪಿ ಹಿಡಿತದಲ್ಲಿದೆ. ಇದನ್ನೂ ಓದಿ: Haveri-Gadag Lok Sabha 2024: ಬಿಜೆಪಿ v/s ಕಾಂಗ್ರೆಸ್ – ಗೆಲುವು ಯಾರಿಗೆ?
ಕ್ಷೇತ್ರ ಪರಿಚಯ
ಈ ಹಿಂದೆ ಕೆನರಾ ಲೋಕಸಭಾ ಕ್ಷೇತ್ರವಾಗಿತ್ತು. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಸಂಸದೀಯ ಕ್ಷೇತ್ರಗಳ ವಿಂಗಡಣೆಯ ನಂತರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವಾಗಿ ಮರುನಾಮಕರಣಗೊಂಡಿತು. ಪುನರ್ ವಿಂಗಡಣೆ ನಂತರ ಕ್ಷೇತ್ರಕ್ಕೆ ನಾಲ್ಕನೇ ಚುನಾವಣೆ ಇದಾಗಿದೆ. 1951, 1957, 1962, 1971, 1977, 1980, 1984, 1989, 1991, 1999 ರಲ್ಲಿ ಒಟ್ಟು 10 ಬಾರಿ ಕಾಂಗ್ರೆಸ್ ಲೋಕಸಭೆ ಚುನಾವಣೆ ಗೆದ್ದರೆ, ಆರು ಬಾರಿ ಬಿಜೆಪಿ ಗೆದ್ದಿದೆ. 1967 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸಾಹಿತಿ, ಚುಟುಕು ಬ್ರಹ್ಮ ದಿನಕರ ದೇಸಾಯಿ ಗೆದ್ದಿದ್ದರು. ಇನ್ನು ಉತ್ತರ ಕನ್ನಡ ಜಿಲ್ಲೆ ಸಾಹಿತಿಗಳು, ಸಿನಿಮಾ ನಟರು ಸೇರಿದಂತೆ ಮಾಜಿ ಮುಖ್ಯಮಂತ್ರಿಗಳು ಸಹ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಸೋತ ಇತಿಹಾಸ ಹೊಂದಿದೆ. 1951, 1971 ರಲ್ಲಿ ಎಸ್‌ಪಿ ಪಕ್ಷದಿಂದ ಸಾಹಿತಿ ದಿನಕರ ದೇಸಾಯಿ, 1977 ರಲ್ಲಿ ಬಿಎಲ್‌ಡಿ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ, 1989 ರಲ್ಲಿ ಜನತಾ ದಳದಿಂದ ಸಿನಿಮಾ ನಟ ಅನಂತನಾಗ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವರಾಮ್ ಕಾರಂತ್ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು.
ವಿಧಾನಸಭಾ ಕ್ಷೇತ್ರಗಳೆಷ್ಟು?
ಉತ್ತರ ಕನ್ನಡ ಲೋಕಸಭಾ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ, ಯಲ್ಲಾಪುರ ವಿಧಾನಸಭಾ ಕ್ಷೇತ್ರ ಒಳಗೊಂಡಿದೆ. ಇದನ್ನೂ ಓದಿ: Lok Sabha 2024: ಕೋಟೆ ನಾಡಿಗೆ ಯಾರಾಗ್ತಾರೆ ಒಡೆಯಾ?
ಒಟ್ಟು ಮತದಾರರು
ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 15,35,047 ಇದೆ. ಪುರುಷರು – 7,78,538 ಹಾಗೂ ಮಹಿಳಾ ಮತದಾರರ ಸಂಖ್ಯೆ – 7,56,483 ಇದೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸದಾಗದಷ್ಟು ಕುಸಿತ ಕಂಡಿದ್ದ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಗೆ ಬೆಂಬಲ ನೀಡಿತ್ತು. ಆದರೂ ಬಿಜೆಪಿಯ ಅನಂತಕುಮಾರ್ ಹೆಗಡೆ ನಾಲ್ಕು ಲಕ್ಷಕ್ಕೂ ಅಧಿಕ ಅಂತರದಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಅವರನ್ನು ಸೋಲಿಸಿ ಆರನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. 4,79,649 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಹೆಗಡೆ ಪರಾಭವಗೊಳಿಸಿದ್ದರು.
27 ವರ್ಷಗಳ ಬಳಿಕ ಹೊಸಬರಿಗೆ ಬಿಜೆಪಿ ಟಿಕೆಟ್?
1996 ರಿಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅನಂತಕುಮಾರ್ ಹೆಗಡೆ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಪಕ್ಷ ಹೊಸಬರಿಗೆ ಮಣೆ ಹಾಕುತ್ತಾ ಎಂಬ ಪ್ರಶ್ನೆ ಮೂಡಿದೆ. ಹಲವು ಕ್ಷೇತ್ರಗಳಿಗೆ ಈಗಾಗಲೇ ಟಿಕೆಟ್ ಘೋಷಿಸಿರುವ ಬಿಜೆಪಿ ಉತ್ತರ ಕನ್ನಡ ಸೇರಿ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಹೈಕಮಾಂಡ್ ಈ ನಡೆ ಕುತೂಹಲ ಮೂಡಿಸಿದೆ. ಕಳೆದ ಅವಧಿ ಆರಂಭದಲ್ಲೇ ಇದು ಕೊನೆ ಚುನಾವಣೆ ಎಂದು ಹೆಗಡೆ ಹೇಳಿದ್ದರು. ಅದಾದ ಬಳಿಕ ಮೂರ್ನಾಲ್ಕು ವರ್ಷ ಅನಾರೋಗ್ಯ ಹಾಗೂ ಇತರೆ ಕಾರಣಗಳಿಂದ ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಈ ಕಾರಣಕ್ಕೆ ಸ್ಥಳೀಯರಲ್ಲಿ ನಾಯಕನ ವಿರುದ್ಧ ಅಸಮಾಧಾನವಿದೆ. ಈಚೆಗೆ ಸಂವಿಧಾನ ಬದಲಾಯಿಸುವ ಹೆಗಡೆ ಮಾತು ದೇಶ ಮಟ್ಟದಲ್ಲಿ ವಿವಾದ ಸೃಷ್ಟಿಸಿದೆ. ಚುನಾವಣೆ ಹೊತ್ತಲ್ಲೇ ಸಂಸದನ ಈ ಮಾತಿನಿಂದ ಮುಜುಗರಕ್ಕೊಳಗಾದ ಪಕ್ಷವು ಹೆಗಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. ಸಂಸದನ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿತು. ಈ ಎಲ್ಲಾ ಕಾರಣಗಳಿಂದ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ. ಇದನ್ನೂ ಓದಿ: Davanagere Lok Sabha 2024: ಬೆಣ್ಣೆ ನಗರಿನ ಕುಟುಂಬದ ಭದ್ರಕೋಟೆ ಮಾಡ್ತಾರಾ ಇಲ್ಲ ‘ಕೈ’ ಹಿಡೀತಾರಾ ಜನ?
ಕಾಂಗ್ರೆಸ್ ಲೆಕ್ಕಾಚಾರವೇನು?
ಸರ್ಕಾರದ ಗ್ಯಾರಂಟಿ ಯೋಜನೆಗಳು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಶಾಸಕರ ಗೆಲುವಿನಿಂದಾಗಿ ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೇಲೆ ಕಾಂಗ್ರೆಸ್ ಭರವಸೆ ಇಟ್ಟುಕೊಂಡಿದೆ. ಆ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗೆ ಟಫ್ ಫೈಟ್ ಕೊಡುವಂತಹ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ.
ವಿಧಾನಸಭಾ ಕ್ಷೇತ್ರವಾರು ಪಕ್ಷ/ಗೆದ್ದ ಅಭ್ಯರ್ಥಿಗಳ ವಿವರ
ಹಳಿಯಾಳ – ಕಾಂಗ್ರೆಸ್ – ಆರ್.ವಿ.ದೇಶಪಾಂಡೆ
ಕಾರವಾರ – ಕಾಂಗ್ರೆಸ್ – ಸತೀಶ ಸೈಲ್
ಕುಮಟಾ – ಬಿಜೆಪಿ – ದಿನಕರ ಶೆಟ್ಟಿ
ಭಟ್ಕಳ – ಕಾಂಗ್ರೆಸ್ – ಮಂಕಾಳ ವೈದ್ಯ
ಶಿರಸಿ – ಕಾಂಗ್ರೆಸ್ – ಭೀಮಣ್ಣ ನಾಯ್ಕ
ಯಲ್ಲಾಪುರ – ಬಿಜೆಪಿ – ಶಿವರಾಮ ಹೆಬ್ಬಾರ್
ಕಿತ್ತೂರು – ಕಾಂಗ್ರೆಸ್ – ಬಾಬಾ ಸಾಹೇಬ್ ಪಾಟೀಲ್
ಖಾನಾಪುರ – ಬಿಜೆಪಿ – ವಿಠ್ಠಲ ಹಳಗೇಕರ
ಜಾತಿವಾರು ಲೆಕ್ಕಾಚಾರ
ನಾಮಧಾರಿಗಳು – 1,94,032
ಬ್ರಾಹ್ಮಣರು – 1,60,413
ಮೀನುಗಾರರು – 1,30,100
ಕೊಂಕಣ ಮರಾಠ – 90,406
ಲಿಂಗಾಯತರು – 65,000
ಮುಸ್ಲಿಂ – 1,32,908
ಹಾಲಕ್ಕಿ/ಒಕ್ಕಲಿಗರು – 1,21,804
ಎಸ್.ಸಿ/ಎಸ್.ಟಿ – 80,719
ಇತರೆ – 5,59,665
ಯಾದಗಿರಿ: ಸಂವಿಧಾನ ಬದಲಾವಣೆ ಮಾಡ್ತೀವಿ ಎಂಬ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ರಾಜೂಗೌಡ (Raju Gowda) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಒಬ್ಬ ಹೆಗಡೆ ಎನ್ನುವವನು ಎಲ್ಲೋ ಮಾತಾಡಿದ್ದಾನೆ. ಸಂವಿಧಾನ ಚೇಂಜ್ ಮಾಡ್ತೀವಿ ಅಂತಾ ಹೇಳಿದ್ದಾನೆ. ಹೆಗಡೆ ಅಲ್ಲ ಅವರಪ್ಪ ಹುಟ್ಟಿ ಬಂದ್ರೂ ಸಂವಿಧಾನಕ್ಕೆ ಏನು ಮಾಡಕಾಗಲ್ಲ. ಸಂವಿಧಾನ ಮುಟ್ಟುವುದಕ್ಕೂ ಆಗಲ್ಲ. ಚೇಂಜ್ ಮಾಡೋಕೂ ಆಗಲ್ಲ. ಅಂಬೇಡ್ಕರ್ ಬರೆದ ಸಂವಿಧಾನವನ್ನು ಮೋದಿ ಅವ್ರು ರಕ್ಷಣೆ ಮಾಡ್ತಿದ್ದಾರೆ. ಸಂವಿಧಾನವನ್ನು ತಲೆ ಮೇಲೆ ಇಟ್ಕೊಂಡು ಹೋಗುವಂತಹ ಕೆಲಸ ಮೋದಿ, ಬಿಜೆಪಿ ಮಾಡಿದೆ ಎಂದು ಹೇಳಿದರು.
ಒಳ ಮೀಸಲಾತಿ ವಿಚಾರದಲ್ಲೂ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ ರಾಜೂಗೌಡ, ಮೀಸಲಾತಿ ಹೆಚ್ಚಳವನ್ನು ಬಿಜೆಪಿ ಸರ್ಕಾರ ಮಾಡಿದೆ. ಎಲ್ಲೋ ನಿಂತು ಒಳ ಮೀಸಲಾತಿ ಮಾಡಿದ್ರು. ನಾನು ನಿಮ್ಮ ಪರ ನಿಂತೆ. ಆದ್ರೆ ಅದರ ಏಟು ನನಗೆ ಬಿತ್ತು ಎಂದು ಸಭೆಯಲ್ಲಿ ನೋವು ತೋಡಿಕೊಂಡರು. ಸಂವಿಧಾನ ವಿರೋಧಿ ಇದ್ರೆ ಮೀಸಲಾತಿ ಹೆಚ್ಚಳ ಯಾಕೆ ಮಾಡ್ತಿತ್ತು. ಎಸ್ಸಿ ಸಮುದಾಯಕ್ಕಿದ್ದ 15% ಮೀಸಲಾತಿಯನ್ನು 17% ಕ್ಕೆ ಹೆಚ್ಚಳ ಮಾಡಿತು. ಎಸ್ಟಿಗೆ 3% ಇದ್ದದ್ದನ್ನು 7% ಗೆ ಮೀಸಲಾತಿ ಹೆಚ್ಚಳ ಮಾಡಿತು ಎಂದರು. ಇದನ್ನೂ ಓದಿ: ಸಂವಿಧಾನ ತಿದ್ದುಪಡಿ ಹೇಳಿಕೆ – ಅನಂತಕುಮಾರ್ ಹೆಗಡೆ ಹೇಳಿಕೆಗೆ ರಾಜ್ಯ ಬಿಜೆಪಿಯಿಂದಲೇ ವಿರೋಧ
ನಮ್ಮ ಬಿಜೆಪಿಯ ಕೆಲವು ನಾಯಕರು ಕೆಲವೊಂದು ಗಾಳಿಯೊಳಗೆ ಗೆದ್ದು ಬಿಡ್ತಾರೆ. ಕೆಲವೊಂದು ಹುಚ್ಚುಚ್ಚು ಭಾಷಣ ಮಾಡಿ ಗೆದ್ದು ಬಿಡ್ತವೆ. ಗೆದ್ದು 4 ವರ್ಷದಿಂದ ಮಾಯ ಆಗ್ತಾರೆ. ಕೊನೆಯ 15 ದಿನದಲ್ಲಿ ಬಂದು ಬಾಯಿಗೆ ಬಂದಂಗೆ ಮಾತಾಡ್ತಾರೆ. ಹುಚ್ಚುಚ್ಚು ಮಾತಾಡುವಂತವರಿಗೆ ಬಿಜೆಪಿ ಏನು ಶಿಕ್ಷೆ ಕೊಡಬೇಕು ಕೊಡುತ್ತದೆ. ಬಾಯಿ ಮಾತಿನಿಂದ ಕೊಡಲ್ಲ, ಕಾದು ನೋಡಿ ಗೊತ್ತಾಗ್ತದೆ ಎಂದು ತಿರುಗೇಟು ಕೊಟ್ಟರು.
ಬೆಂಗಳೂರು: ಸಂವಿಧಾನ (Constitution of India) ಬದಲಾವಣೆ ಮಾಡಿದರೆ ದೇಶದಲ್ಲಿ ರಕ್ತಪಾತವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಅನಂತ್ ಕುಮಾರ್ ಹೆಗಡೆಯವರ (Anantkumar Hegde) ಸಂವಿಧಾನ ತಿದ್ದುಪಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಹೇಳಿಕೆ ಮೊದಲ ಬಾರಿಯಲ್ಲ. ಈ ಹಿಂದೆ ಮಂತ್ರಿಯಾಗಿದ್ದಾಗಲೂ ಇದನ್ನೇ ಹೇಳಿದ್ದರು. ಮೋದಿ ಪ್ರಧಾನಿಯಾಗಿದ್ದಾಗಲೇ ಅವರು ಹೇಳಿದ್ದರು. ಮೋದಿಯವರು ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಿಲ್ಲ. ಇದು ಬಿಜೆಪಿಯವರ ಹಿಡನ್ ಅಜೆಂಡಾ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: SBIಗೆ ಹಿನ್ನಡೆ- ನಾಳೆಯೊಳಗೆ ಚುನಾವಣಾ ಬಾಂಡ್ ಮಾಹಿತಿ ನೀಡಲು ಸುಪ್ರೀಂ ಸೂಚನೆ
ಸಂವಿಧಾನ ಬದಲಾವಣೆ ಮಾಡಬೇಕು ಎನ್ನುವುದು ಬಿಜೆಪಿಗರ ಹಿಡನ್ ಅಜೆಂಡಾ. ಸಂವಿಧಾನಕ್ಕೆ ಅನಗತ್ಯ ವಿಚಾರಗಳನ್ನ ಸೇರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಸಂವಿಧಾನ ಬದಲಾವಣೆ ಮಾಡಬೇಕು, ಇದಕ್ಕಾಗಿ 2/3 ಬಹುಮತ ಬೇಕು ಎಂದಿದ್ದಾರೆ. ದೇಶ ಉದ್ದಾರಕ್ಕೆ, ಬಡವರ ಉದ್ದಾರಕ್ಕೆ ಅಲ್ಲ. ಸಂವಿಧಾನ ಬದಲಾವಣೆಗಾಗಿ 2/3 ಬಹುಮತ ಕೇಳುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಮನುವಾದವನ್ನು ಸಮರ್ಥನೆ ಮಾಡಿಕೊಳ್ಳೋದು, ಮನುಸ್ಮೃತಿಗೆ ಅನುಗುಣವಾಗಿ ಸಂವಿಧಾನ ಇರಬೇಕು ಎನ್ನುವುದು ಇವರ ಹಿಡನ್ ಅಜೆಂಡಾ. ಅದಕ್ಕೆ ಇಡೀ ದೇಶದ ಬಡವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರು ಎಲ್ಲರೂ ಇದನ್ನ ವಿರೋಧ ಮಾಡ್ತಾರೆ. ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ಹೆಗಡೆ ಮೂಲಕ ಇದನ್ನು ಹೇಳಿಸುತ್ತಿದ್ದಾರೆ. ಒಂದು ವೇಳೆ ಸಂವಿಧಾನ ಬದಲಾವಣೆಯ ಕೆಲಸವಾದರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಅನಂತ್ ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ ಎಂಬ ಬಿಜೆಪಿ ನಿಲುವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಂತ್ರಿ ಮಂಡಲದಲ್ಲಿದ್ದುಕೊಂಡು ಅದು ವೈಯಕ್ತಿಕ ಹೇಳಿಕೆ ಆಗುತ್ತಾ? ಸರ್ಕಾರ ಎಂದರೆ ಅದು ಪಕ್ಷದ ಹೇಳಿಕೆ. ಈಗ ಸಿಟ್ಟಿಂಗ್ ಎಂಪಿ, ಅವರು ಸ್ಟೇಟ್ಮೆಂಟ್ ಕೊಡ್ತಾರೆ ಅಂದ್ರೆ ಏನು? ಅವರು ಸಿನೀಯರ್ ಸಂಸದರು. ನಮ್ಗೂ ಅದಕ್ಕೂ ಸಂಬಂಧವಿಲ್ಲ ಅಂದ್ರೆ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ, ಸರ್ವಾಧಿಕಾರದಲ್ಲಿ ನಂಬಿಕೆ ಇದೆ. ಸರ್ವಾಧಿಕಾರಿ ವ್ಯವಸ್ಥೆ ತರಬೇಕು ಎನ್ನುವುದು ಅವರ ಉದ್ದೇಶ. ಸಂವಿಧಾನ ಸಮಸಮಾಜವನ್ನು ಬಯಸುತ್ತದೆ. ಅವಕಾಶ ವಂಚಿತರಿಗೆ ನ್ಯಾಯ ಒದಗಿಸುತ್ತೆ. ನಮ್ಮ ಸಂವಿಧಾನಲ್ಲಿ ಸಮಾನತೆ, ಸ್ವಾತಂತ್ರ್ಯ, ಭ್ರ್ರಾತೃತ್ವ ಇದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: 28ಕ್ಕೆ 28 ಗೆಲ್ಲುವ ಗುರಿ ಇದ್ದು 28ಕ್ಕೆ 25 ಗೆದ್ದೇ ಗೆಲ್ತೀವಿ: ಬಿಎಸ್‍ವೈ
ಕಾರವಾರ: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಅನಂತ್ ಕುಮಾರ್ ಹೆಗಡೆ (Anantkumar Hegde) ಅವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ (ಸುಮೊಟೋ ಕೇಸ್) ದಾಖಲಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾ ಖಾನ್ ಎಂದಿದ್ದಕ್ಕೆ ಕೇಸ್ ದಾಖಲಿಸಿದ್ದು, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಮುಂಡಗೋಡದಲ್ಲಿ ಫೆ.23ರಂದು ಕಾರ್ಯಕರ್ತರ ಸಭೆಯಲ್ಲಿ ಭಾಷಣ ಮಾಡುವ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾ ಖಾನ್ ಎಂಬ ಪದ ಬಳಕೆ ಮಾಡಿದ್ದರು. ಈ ಹಿನ್ನೆಲೆ ಮುಂಡಗೋಡ ಪೊಲೀಸರು ಸುಮೊಟೊ ಪ್ರಕರಣ (Sumoto Case) ದಾಖಲಿಸಿದ್ದಾರೆ. ಇದನ್ನೂ ಓದಿ: ನೀಲಗಿರಿ ತೋಪಿನಲ್ಲಿ ಬಿ.ಟೆಕ್ ವಿದ್ಯಾರ್ಥಿಯ ಬರ್ಬರ ಹತ್ಯೆ – ಸುಟ್ಟು ಹಾಕಿರುವ ಸ್ಥಿತಿಯಲ್ಲಿ ಶವ ಪತ್ತೆ
ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟಕ್ಕೆ ತಿರುಗೇಟು ನೀಡುವ ಭರದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ, ದೇಶದಲ್ಲಿ 99.9% ಹಿಂದೂಗಳು ತೆರಿಗೆ ಕಟ್ಟುತ್ತಾರೆ. ಆದರೆ ಮುಸ್ಲಿಮರ ಮಸೀದಿಗೆ ಯಾಕೆ ಅನುದಾನ ಕೊಟ್ರಿ? ಸಿದ್ರಾಮುಲ್ಲಾ ಖಾನ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ರಾಜ್ಯದಲ್ಲಿ ಸಿದ್ರಮುಲ್ಲಾ ಖಾನ್ ಸರ್ಕಾರ ಇದೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಕುತೂಹಲ ಘಟ್ಟದಲ್ಲಿ ರಾಜ್ಯಸಭಾ ಚುನಾವಣೆ – ನಂಬರ್ ಗೇಮ್ ಹೇಗಿದೆ? ಕಾಂಗ್ರೆಸ್, ದೋಸ್ತಿಗಳ ಲೆಕ್ಕಾಚಾರ ಏನು?
ಹಾಸನ: ಬಿಜೆಪಿಯವರು (BJP) ಕೇಂದ್ರ ಸರ್ಕಾರದ ಅನ್ಯಾಯವನ್ನು ಸಮರ್ಥನೆ ಮಾಡಿಕೊಂಡು ಪಕ್ಷ ರಾಜಕಾರಣಕ್ಕಾಗಿ ಕನ್ನಡಿಗರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಲ್ಲಿ ಆಂಧ್ರ ಪ್ರದೇಶ, ತಮಿಳುನಾಡಿಗೆ ತೊಂದರೆ ಇಲ್ಲ. ನಮ್ಮ ಸರ್ಕಾರಕ್ಕೆ ಮಾತ್ರ ಯಾಕೆ ತೊಂದರೆ? ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿ ಕೇರಳದವರು ಯಾಕೆ ದೆಹಲಿಗೆ ಬಂದು ಪ್ರತಿಭಟಿಸಿದರು? ಅದಕ್ಕೆ ತಮಿಳುನಾಡಿನವರು ಏಕೆ ಬೆಂಬಲ ನೀಡಿದರು? ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಲ್ಲಿ ಎಲ್ಲಾ ರಾಜ್ಯಗಳಿಗೂ ಅನ್ಯಾಯವಾಗಿದೆ. ದಕ್ಷಿಣ ರಾಜ್ಯಗಳಿಗೆ ಜಾಸ್ತಿ ಅನ್ಯಾಯವಾಗಿದೆ. ಉತ್ತರದ ರಾಜ್ಯಗಳಿಗೆ ಕೊಡಬೇಡಿ ಎನ್ನುವುದಿಲ್ಲ. ನಮಗೆ ಅನ್ಯಾಯ ಮಾಡಬೇಡಿ. ಕೇಂದ್ರದ ಪಾಲಿನಲ್ಲಿಯೇ ಕೊಡಲಿ. ನಮ್ಮ ಪಾಲಿನಿಂದ ಯಾಕೆ ಕಿತ್ತುಕೊಡುತ್ತಾರೆ? 100 ರೂ. ತೆರಿಗೆ ಸಂಗ್ರಹ ಮಾಡಿ ಕೊಟ್ಟರೆ 13 ರೂ. ಮಾತ್ರ ಕೊಡುತ್ತಾರೆ. ಇದು ನ್ಯಾಯವೇ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬರಗಾಲದಲ್ಲಿ ಸಿಎಂ ನಿವಾಸ ನವೀಕರಣ – ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಗಾದೆ ನೆನೆದ ಬಿವೈವಿ
ಉದ್ದೇಶಪೂರ್ವಕವಾಗಿ ಅಪಪ್ರಚಾರ: ವಿಧಾನ ಪರಿಷತ್‍ನಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ಮಸೂದೆಗೆ ಸೋಲುಂಟಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಆದಾಯ ಹೆಚ್ಚಿರುವ ದೇವಸ್ಥಾನಗಳಿಂದ ಕಡಿಮೆ ಆದಾಯವಿರುವ ಹಿಂದೂ ದೇವಾಲಯಗಳಿಗೆ ಬಳಸುವುದನ್ನು ವಿರೋಧಿಸುತ್ತಾರೆ. ಬೇರೆ ಯಾವ ಧರ್ಮದ ದೇವಾಲಯಗಳಿಗೂ ಇದನ್ನು ಬಳಸುವುದಿಲ್ಲ. ಅವರಿಗೆ ಪರಿಷತ್ತಿನಲ್ಲಿ ಬಹುಮತ ಇದೆ ಎಂದು ಹೀಗೆ ಮಾಡಿದ್ದಾರೆ ಎಂದರು.
ಹಿಂದೂಗಳ ಹಣವನ್ನು ಲೂಟಿ ಮಾಡಲು ಸರ್ಕಾರ ಹೊರಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆಗೆ ಪ್ರತಿಕ್ರಿಯೆ ನೀಡಿ, ಲೂಟಿ ಮಾಡುತ್ತಿದ್ದರೆಂದೇ ರಾಜ್ಯದ ಜನ ಅವರನ್ನು ತಿರಸ್ಕಾರ ಮಾಡಿರುವುದು ಎಂದು ತಿರುಗೇಟು ಕೊಟ್ಟಿದ್ದಾರೆ.
ಕಳೆದ ಬಾರಿ ಬಿಜೆಪಿ ಸರ್ಕಾರದ ವಿರುದ್ಧ 40% ಸರ್ಕಾರ ಎಂದು ಜಾಹೀರಾತು ನೀಡಿದ್ದಾರೆ ಎಂಬ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯ ವಿಶೇಷ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಜನಪ್ರತಿನಿಧಿ ನ್ಯಾಯಾಲಯ ಆದೇಶ ಮಾಡಿರುವ ಬಗ್ಗೆ, ನಮ್ಮ ವಕೀಲರನ್ನು ನೇಮಿಸುತ್ತೇವೆ. ಅವರು ಸರಿಯಾದ ಉತ್ತರ ನೀಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಿದರೆ ಅಥವಾ ಪ್ರತಿಭಟನಾ ಜಾಹೀರಾತು ನೀಡಿದರೆ ಅದು ತಪ್ಪಲ್ಲ ಎಂದಿದ್ದಾರೆ.
ಅನಂತ್ ಕುಮಾರ್ ಹೆಗಡೆ ಲೋಕಸಭಾ ಸದಸ್ಯರಾಗಲು ಲಾಯಕ್ಕೇ?
ಸಂಸದ ಅನಂತ ಕುಮಾರ್ ಹೆಗಡೆಯವರು (Anantkumar Hegde) ಇಂಥ ದರಿದ್ರ ಸರ್ಕಾರ ಎಂದೂ ನೋಡಿಲ್ಲ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲ. ರಾಜ್ಯವನ್ನು ಲೂಟಿ ಮಾಡಿ ಚುನಾವಣೆ ನಡೆಸಲು ಹೊರಟಿದ್ದಾರೆ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿ, ಯಾರಾದರೂ ವೇತನ ನೀಡಿಲ್ಲ ಎಂದು ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು. ಅನಂತ್ ಕುಮಾರ್ ಹೆಗಡೆ ನಾವು ಅಧಿಕಾರಕ್ಕೆ ಬಂದಿರುವುದೇ ಈ ಸಂವಿಧಾನ ಬದಲಾಯಿಸಲು ಎಂದವರು. ಅವರು ಲೋಕಸಭಾ ಸದಸ್ಯರಾಗಲು ಲಾಯಕ್ಕೇ? ಅಂಥವರು ಹೇಳಿಕೆ ನೀಡಿದರೆ ಯಾವ ಕಿಮ್ಮತ್ತು ಇರುತ್ತದೆ ಎಂದಿದ್ದಾರೆ.
ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಸಂಸತ್ತು ಮತ್ತು ನ್ಯಾಯಾಲಯಗಳಿಗೆ ಜನರೇ ಮಾಲೀಕರು. ಸಂವಿಧಾನ ಕಿತ್ತೊಗೆಯಿರಿ ಎನ್ನುವವರನ್ನೇ ಕಿತ್ತೊಗೆಯಿರಿ ಎಂದು ಹೇಳಿದ್ದರು. ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಲೋಕಸಭಾ ಸದಸ್ಯರಾಗಲು ಲಾಯಕ್ಕೇ ಎಂದು ಅವರು ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರ ವಿರೋಧಿ: ಕಾಮಾಲೆ ರೋಗದವರಿಗೆ ಕಾಣೋದೆಲ್ಲಾ ಹಳದಿ. ಮಾತನಾಡುವುದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಮುಸಲ್ಮಾನರನ್ನು ವಿರೋಧಿಸುತ್ತಾರೆ. ನನ್ನನ್ನು ಏಕೆ ಸಿದ್ರಾಮುಲ್ಲಾ ಖಾನ್ ಎನ್ನುತ್ತಾರೆ ಎಂದರೆ ಅವರು ಅಲ್ಪಸಂಖ್ಯಾತರ ಧರ್ಮಕ್ಕೆ ವಿರುದ್ಧವಾಗಿರುವವರು. ಅದಕ್ಕೆ ಹಾಗೆ ಕರೆಯುತ್ತಾರೆ ಎಂದು ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ರಾಜಕಾರಣಿಯಾಗಿ ಸಾಯಲ್ಲ: ಅನಂತ್ ಕುಮಾರ್ ಹೆಗಡೆ
ಕಾರವಾರ: ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ರಾಜಕಾರಣಿಯಾಗಿ ಸಾಯುವುದಿಲ್ಲ. ಭಗವಂತ ಅವಕಾಶ ಕೊಟ್ಟಿದ್ದರಿಂದ ಅಲ್ಪಸ್ವಲ್ಪ ಕೆಲಸ ಮಾಡಿದ್ದೇನೆ. ಚುನಾವಣೆಗೆ ನಾನು ನಿಲ್ಲುವುದಿಲ್ಲ ಎಂದರೂ ನಿಲ್ಲಿಸುತ್ತಿದ್ದಾರೆ ಎಂದು ಸಂಸದ ಅನಂತ್ಕುಮಾರ್ ಹೆಗಡೆ (Anantkumar Hegde) ಹೇಳಿದ್ದಾರೆ.
ಉತ್ತರ ಕನ್ನಡದ (Uttara Kannada) ಮುಂಡಗೋಡಿನ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದೆರಡು ಚುನಾವಣೆಯಲ್ಲೇ ಹೇಳಿದ್ದೆ, ರಾಜಕಾರಣ ಬೇಡ, ನಮ್ಮನ್ನು ಬಿಟ್ಟುಬಿಡಿ ಎಂದಿದ್ದೆ. ಸಂಘಟನೆಯವರು ಬಿಡದೇ ಮತ್ತೆ ಮತ್ತೆ ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ಮಂದಿ ಮುಂದೆ ಹೋದರೆ ನಿಮಗೆ ಬೇರೆ ಅಭ್ಯರ್ಥಿ ಸಿಗುವುದಿಲ್ಲ ಮತ್ತೆ ನನಗೇ ಕೊಡುತ್ತೀರಾ. ಹಾಗಾಗಿ ಮಂದಿ ಮುಂದೆ ನಾನು ಹೋಗುವುದಿಲ್ಲ ಎಂದಿದ್ದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟಿಸ್ತಿರೋರು ರೈತರಲ್ಲ, ದೇಶದ್ರೋಹಿಗಳು: ಅನಂತ್ ಕುಮಾರ್ ಹೆಗಡೆ
ಇದೆಲ್ಲದರ ನಡುವೆ ಕೊರೊನಾ ಸಹ ಬಂತು. ನನ್ನ ಆರೋಗ್ಯ ಕೂಡ ತಪ್ಪಿತು. ರೋಗಿ ಬಯಸಿದ್ದು ಹಾಲು, ವೈದ್ಯ ಕೊಟ್ಟಿದ್ದು ಹಾಲು ಎನ್ನುವಂತಾಯಿತು. ರಾಜಕಾರಣ ಬೇಡ ಎಂದು ಗಟ್ಟಿ ಮನಸ್ಸು ಮಾಡಿ ಕುಳಿತಿದ್ದೆ. ಅದೇನೋ ಗೊತ್ತಿಲ್ಲ ವಾಪಸ್ ಯೂ ಟರ್ನ್ ಮಾಡಿ ಬರುತಿದ್ದೇನೆ ಎಂದು ಈ ಬಾರಿ ಲೋಕಸಭೆಗೆ (Lok Sabha Elections 2024) ಸ್ಪರ್ಧಿಸುವ ಆಕಾಂಕ್ಷೆಯನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮುಲ್ಲ ಖಾನ್ ಎನ್ನುತ್ತಾ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಸಂಸದ ಅನಂತ್ ಕುಮಾರ್ ಹೆಗಡೆ