Tag: anans singh

  • ಶಾಸಕ ಆನಂದ್ ಸಿಂಗ್ ಎಲ್ಲಿದ್ದಾರೆ ಅನ್ನೋದಕ್ಕೆ ಉತ್ತರಿಸಿದ್ರು ಹೆಚ್‍ಡಿಕೆ

    ಶಾಸಕ ಆನಂದ್ ಸಿಂಗ್ ಎಲ್ಲಿದ್ದಾರೆ ಅನ್ನೋದಕ್ಕೆ ಉತ್ತರಿಸಿದ್ರು ಹೆಚ್‍ಡಿಕೆ

    ಬೆಂಗಳೂರು: ರಾಜ್ಯ ಕಾರಣದಲ್ಲಿ ಭಾರೀ ಸಂಚಲನ ಮೂಡುತ್ತಿದ್ದು, ಇದೀಗ ಬಿಎಸ್‍ವೈ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ಸಿಎಂ ಕುರ್ಚಿಯಲ್ಲಿ ಆಸೀನರಾಗಿದ್ದಾರೆ. ಇತ್ತ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್, ಜೆಡಿಎಸ್ ಉಗ್ರ ಪ್ರತಿಭಟನೆ ಕೈಗೊಂಡಿವೆ.

    ಈ ವೇಳೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿ ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್ ಅವರು ಕಾಂಗ್ರೆಸ್ ನಾಯಕರ ಕೈಗೆ ಸಿಗುತ್ತಿಲ್ಲ. ಅವರು ಯಾಕೆ ಇಂದು ಬೆಳ್ಳಂಬೆಳಗ್ಗೆ 4.30ಕ್ಕೆ ದೆಹಲಿಗೆ ತೆರಳಿದ್ದಾರೆ. ಇದೆಲ್ಲದರ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ. ನರೇಂದ್ರ ಮೋದಿ ಸರ್ಕಾರ ಅಧಿಕಾರದ ದುರ್ಬಳಕೆ ಮಾಡಿಕೊಂಡು ನಮ್ಮ ಶಾಸಕರ ಮೇಲೆ ಒತ್ತಡ ಹೇರುತ್ತಿದೆ. ಇದನ್ನೂ ಓದಿ: ಗುಜರಾತ್‍ಗೆ ತೆರಳಿದ್ದಾರಾ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್?

    ಜಾರಿ ನಿರ್ದೇಶನಾಲಯದಲ್ಲಿ ಆನಂದ್ ಸಿಂಗ್ ಮೇಲೆ ಪ್ರಕರಣಗಳಿವೆ. ಬಿಜೆಪಿಯ ಕೇಂದ್ರದ ನಾಯಕರು ನನ್ನನ್ನು ಬ್ಲಾಕ್ ಮೇಲ್ ಮಾಡ್ತಿದ್ದಾರೆ. ನಾನು ನಿಸ್ಸಾಯಹಕನಾಗಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ ಅಂತಾ ಕಾಂಗ್ರೆಸ್ ನಾಯಕರೊಬ್ಬರು ಇಂದು ಬೆಳಗ್ಗೆ ನನಗೆ ತಿಳಿಸಿದ್ದಾರೆ ಅಂತ ಹೆಚ್ ಡಿಕೆ ರಿವೀಲ್ ಮಾಡಿದ್ದಾರೆ.