Tag: Anandiben Patel

  • ಮೋದಿ, ಯೋಗಿ ಜೋಡಿಯನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ: ಯುಪಿ ರಾಜ್ಯಪಾಲ

    ಮೋದಿ, ಯೋಗಿ ಜೋಡಿಯನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ: ಯುಪಿ ರಾಜ್ಯಪಾಲ

    ಗಾಂಧಿನಗರ: ಯಾರಿಂದಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿಆದಿತ್ಯನಾಥ್‌ ಅವರ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಉತ್ತರಪ್ರದೇಶದ ರಾಜ್ಯಪಾಲ ಆನಂದಬೆನ್ ಪಟೇಲ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‍ನ ಸೂರತ್‍ನಲ್ಲಿ ನೆಲೆಸಿರುವ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಭಾರತೀಯರು ನೆಲೆಸಿದ್ದಾರೆ. ಇವರೆಲ್ಲರ ಬೆಂಬಲದಿಂದಾಗಿ ಉತ್ತರಪ್ರದೇಶದಲ್ಲಿ ಬಿಜೆಪಿಯೂ ಅಧಿಕಾರವನ್ನು ಉಳಿಸಿಕೊಂಡಿದೆ ಎಂದರು.

    ಈ ತಿಂಗಳ ಆರಂಭದಲ್ಲಿ ನಡೆದ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 403 ಸ್ಥಾನಗಳಲ್ಲಿ 255 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜೊತೆಗೆ ಮಿತ್ರ ಪಕ್ಷಗಳಾದ ನಿಶಾದ್ ಪಕ್ಷ ಮತ್ತು ಅಪ್ನಾ ದಳ 14 ಕ್ಷೇತ್ರಗಳಲ್ಲಿ ಗೆದ್ದಿದೆ. ಇದರಿಂದಾಗಿ ಬಿಜೆಪಿ ಪುನಃ ಸರ್ಕಾರವನ್ನು ರಚಿಸುವ ಮೂಲಕ 2ನೇ ಬಾರಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಒಂದೇ ಪಕ್ಷವು ಸತತ 2 ಬಾರಿ ಗೆದ್ದಿರುವುದು ಇದೇ ಮೊದಲ ಬಾರಿಗೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಈ ಅಕ್ಟೋಬರ್‌ನಲ್ಲಿ ಬೆಂಗಳೂರು-ಮೈಸೂರು ಹೈವೇ ಪೂರ್ಣ: ಗಡ್ಕರಿ

    ಉತ್ತರಪ್ರದೇಶದಲ್ಲಿ ನಾವು ಸರ್ಕಾರ ರಚಿಸಿದ್ದೇವೆ. ಮೋದಿ, ಯೋಗಿ ಜೋಡಿಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಸೂರತ್‍ನಿಂದ ಹಲವಾರು ಜನರು ಪ್ರಚಾರಕ್ಕಾಗಿ ಉತ್ತರಪ್ರದೇಶಕ್ಕೆ ಹೋಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸ್ಟಾಲಿನ್ ಸಿಎಂ ಆದ ಬಳಿಕ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದೆ: ಎಡಪಾಡಿ ಕೆ.ಪಳನಿಸ್ವಾಮಿ

  • ನಿರಾಣಿ ಸಕ್ಕರೆ ಕಾರ್ಖಾನೆ ವೀಕ್ಷಿಸಿದ ಉತ್ತರ ಪ್ರದೇಶದ ರಾಜ್ಯಪಾಲೆ

    ನಿರಾಣಿ ಸಕ್ಕರೆ ಕಾರ್ಖಾನೆ ವೀಕ್ಷಿಸಿದ ಉತ್ತರ ಪ್ರದೇಶದ ರಾಜ್ಯಪಾಲೆ

    ಬಾಗಲಕೋಟೆ: ಗುಜರಾತ್‍ನ ಮಾಜಿ ಮುಖ್ಯಮಂತ್ರಿ ಹಾಗೂ ಉತ್ತರ ಪ್ರದೇಶ ರಾಜ್ಯದ ರಾಜ್ಯಪಾಲೆಯಾಗಿರುವ ಆನಂದಿಬೆನ್ ಪಟೇಲ್ (Anandiben Patel)  ನಿನ್ನೆ ರಾತ್ರಿ ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ (Murugesh Nirani) ಅವರ ಸಕ್ಕರೆ ಕಾರ್ಖಾನೆ ವೀಕ್ಷಿಸಿದ್ಧಾರೆ.

    ಬಾಗಲಕೋಟೆ (Bagalkote) ಜಿಲ್ಲೆಯ ಮುಧೋಳ ನಗರಕ್ಕೆ ಆಗಮಿಸಿರುವ ಆನಂದಿಬೆನ್ ಪಟೇಲ್ ಅವರನ್ನು ಮುರುಗೇಶ್ ಆರ್.ನಿರಾಣಿ ಸ್ವಾಗತಿಸಿದರು. ಕೆಲಹೊತ್ತು ಸಚಿವ ನಿರಾಣಿ ಅವ್ರ ನಿವಾಸದಲ್ಲಿ ವಿಶ್ರಾಂತಿ ಪಡೆದ ಆನಂದಿಬೆನ್ ಅವರು ನಂತರ ಸಚಿವ ಮುರಗೇಶ್ ನಿರಾಣಿ ಒಡೆತನದ ಎಂ.ಆರ್.ಎನ್ ಸಮೂಹ ಸಂಸ್ಥೆ ಕಾರ್ಖಾನೆಯನ್ನು ವೀಕ್ಷಿಸಿದ್ದಾರೆ.  ಇದನ್ನೂ ಓದಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದಿರೋ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್!

    ಕಾರ್ಖಾನೆಯ ಸಿಬ್ಬಂದಿ ಜೊತೆ ಚರ್ಚೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಸಚಿವ ಮುರುಗೇಶ್‌ ನಿರಾಣಿ, ಸಂಗಮೇಶ್ ನಿರಾಣಿ, ವಿಜಯ್‌ ನಿರಾಣಿ, ನಿರಾಣಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಅಧಿಕಾರಿ ವರ್ಗದವರು ಇದ್ದರು. ಇಂದು ಮುರಗೇಶ್ ನಿರಾಣಿ ಒಡೆತನದ ತೇಜಸ್ ಅಂತರಾಷ್ಟ್ರೀಯ ಶಾಲೆಯ ಅಂಗಸಂಸ್ಥೆಗಳ ಉದ್ಘಾಟನೆ ಮಾಡಲಿರುವ ರಾಜ್ಯಪಾಲರಾದ ಆನಂದಿಬೆನ್ ಅವರು, ನಂತರ ಬಾದಾಮಿ ತಾಲೂಕಿನಲ್ಲಿರುವ ನಿರಾಣಿ ಸಮೂಹಸಂಸ್ಥೆಯ ಕೇದಾರನಾಥ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ, ಬಾದಾಮಿಯ ಐತಿಹಾಸಿಕ ಬನಶಂಕರಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ಆಶಿರ್ವಾದ ಪಡೆಯಲಿದ್ದಾರೆ.

     

  • ಮೋದಿಯವರು ನನಗೆ ಶ್ರೀರಾಮ ಇದ್ದಂತೆ: ಪತ್ನಿ ಜಶೋದಾ ಬೆನ್

    ಮೋದಿಯವರು ನನಗೆ ಶ್ರೀರಾಮ ಇದ್ದಂತೆ: ಪತ್ನಿ ಜಶೋದಾ ಬೆನ್

    ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವಿವಾಹಿತರು ಎಂದು ಮಧ್ಯಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲರ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಆನಂದಿಬೆನ್ ಈ ರೀತಿ ಹೇಳಿಕೆಯನ್ನು ನೀಡಿರುವುದು ನನಗೆ ಅಶ್ಚರ್ಯವನ್ನು ಉಂಟುಮಾಡಿದೆ. 2014 ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸ್ವತಃ ನರೇಂದ್ರ ಮೋದಿಯವರು, ತಾವು ವಿವಾಹಿತರು ಎಂದು ನನ್ನ ಹೆಸರು ನಮೂದಿಸಿದ್ದಾರೆ ಎಂದು ಹೇಳಿದ್ದನ್ನು ಜಶೋದಾ ಬೆನ್ ಸಹೋದರ ಅಶೋಕ್ ಮೋದಿ ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿರುವುದು ಸುದ್ದಿಯಾಗಿತ್ತು.

    ಈ ವಿಚಾರ ಸಂಬಂಧಪಟ್ಟಂತೆ ವಿದ್ಯಾವಂತ ಮಹಿಳೆಯಾಗಿ ಆನಂದಿಬೆನ್ ಈ ರೀತಿ ಹೇಳಿಕೆ ನೀಡುವುದು ಸರಿಯಿಲ್ಲ. ನಾನು ಒಬ್ಬ ಶಿಕ್ಷಕಿಯಾಗಿ ಇದು ಸರಿ ಕಾಣುವುದಿಲ್ಲ. ಅವರು ಪ್ರಧಾನಿಯಾಗಿದ್ದು, ಈ ರೀತಿಯ ಹೇಳಿಕೆಗಳು ಅವರ ಗೌರವ ಪ್ರತಿಷ್ಠೆಗೆ ಧಕ್ಕೆ ತರುವಂತದ್ದಾಗಿದೆ. ಅವರು ನನಗೆ ಶ್ರೀರಾಮ ಇದ್ದಂತೆ ಎಂದು ಹೇಳಿದ್ದಾರೆ.

    ಉತ್ತರ ಗುಜರಾತ್‍ನ ಉಂಝಾದಲ್ಲಿ ಅವರ ಸಹೋದರ ಅಶೋಕ್ ಮೋದಿ ಆ ವಿಡಿಯೋದಲ್ಲಿ ಮಾತನಾಡಿದ್ದು, ಜಶೋದಾ ಬೆನ್ ಎಂದು ಐಎಎನ್‍ಎಸ್‍ಗೆ ಖಚಿತಪಡಿಸಿದ್ದಾರೆ.

    ಈ ಆನಂದಿಬೆನ್ ಹೇಳಿಕೆಯೂ ಸಾಮಾಜಿಕ ಜಾಲತಾಣಗಳಲ್ಲಿ ಬಂದಾಗ ನಂಬಿರಲಿಲ್ಲ. ಆದರೆ ಇದು ಜೂನ್ 19 ರಂದು ದಿವ್ಯ ಭಾಸ್ಕರ ಪತ್ರಿಕೆಯಲ್ಲಿ ಮೊದಲ ಪುಟದಲ್ಲಿ ಮುದ್ರಣಗೊಂಡಿತ್ತು. ಈಗಿರುವಾಗ ಅದು ತಪ್ಪಾಗಿರಲು ಸಾಧ್ಯವಿಲ್ಲ ಎಂದರು. ಜಶೋದಾಬೆನ್ ರವರ ಲಿಖಿತ ಹೇಳಿಕೆಯನ್ನು ಕೂಡ ನಾವು ದಾಖಲಿಸಿಕೊಂಡಿದ್ದೇವೆಂದು ಹೇಳಿದರು.