Tag: Anand Singh Bisht

  • ಸಿಎಂ ಯೋಗಿ ಸೂಚನೆಯಂತೆ ತಂದೆ ಅಂತ್ಯಕ್ರಿಯೆ

    ಸಿಎಂ ಯೋಗಿ ಸೂಚನೆಯಂತೆ ತಂದೆ ಅಂತ್ಯಕ್ರಿಯೆ

    ಡೆಹ್ರಾಡೂನ್: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ್ ಸಿಂಗ್ ಬಿಶ್ತ್ ಅಂತಿಮ ವಿಧಿ-ವಿಧಾನದಲ್ಲಿ ಮಂಗಳವಾರ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಫೂಲ್ ಚಟ್ಟಿಯಲ್ಲಿ ನೆರವೇರಿದೆ.

    ದೆಹಲಿಯ ಏಮ್ಸ್ ನಲ್ಲಿ ಸೋಮವಾರ ಬೆಳಗ್ಗೆ 89 ವರ್ಷದ ಆನಂದ್ ಸಿಂಗ್ ಬಿಶ್ತ್ ಅವರು ನಿಧನರಾಗಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಅವರು ತಂದೆಯ ಅಂತಿಮ ವಿಧಿ-ವಿಧಾನದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಭಾಗವಹಿಸಿದ್ದರು. ಇದನ್ನೂ ಓದಿ: ತಂದೆ ಅಂತ್ಯಕ್ರಿಯೆಗೆ ಹೋಗಲ್ಲ, ಕನಿಷ್ಠ ಮಂದಿ ಭಾಗಿಯಾಗಿ – ಸಿಎಂ ಯೋಗಿ ಸೂಚನೆ

    ಆದಿತ್ಯನಾಥ್ ತನ್ನ ತಂದೆಯ ಅಂತ್ಯಸಂಸ್ಕಾರಕ್ಕೆ ಗೈರಾಗಿದ್ದರು. ಇಡೀ ದೇಶ ಕೊರೊನಾದಿಂದ ಲಾಕ್‍ಡೌನ್ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್ ಹೆಚ್ಚಾಗಿದೆ. ಹೀಗಾಗಿ ವೈರಸ್ ವಿರುದ್ಧ ಹೋರಾಡಲು ಲಾಕ್‍ಡೌನ್ ಕಠಿಣವಾಗಿ ಜಾರಿ ಮಾಡುವ ಅಗತ್ಯವಿದೆ. ಆದ್ದರಿಂದ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಆದಿತ್ಯನಾಥ್ ಸೋಮವಾರವೇ ತಿಳಿಸಿದ್ದರು.

    ಅಷ್ಟೇ ಅಲ್ಲದೇ ಸಿಎಂ ತಮ್ಮ ಕುಟುಂಬ ಸದಸ್ಯರಿಗೆ ಲಾಕ್‍ಡೌನ್ ನಿಯಮಗಳನ್ನು ಅನುಸರಿಸುವಂತೆ ಪತ್ರದ ಮೂಲಕ ತಿಳಿಸಿದ್ದರು. ಅದರಂತೆಯೇ ಕೊರೊನಾ ವೈರಸ್ ಸಂಬಂಧ ವೈದ್ಯಕೀಯ ಮಾನದಂಡಗಳು ಜಾರಿಯಲ್ಲಿರುವುದರಿಂದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲರೂ ಮಾಸ್ಕ್ ಧರಿಸಿದ್ದರು.

    ಅಂತ್ಯಕ್ರಿಯೆಯ ಸಮಯದಲ್ಲಿ ಕನಿಷ್ಠ ಮಂದಿ ಭಾಗಿಯಾಗುವಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಅವರ ತಂದೆಯ ಚಿತೆಗೆ ಹಿರಿಯ ಸೋದರ ಅಗ್ನಿಸ್ಪರ್ಶ ಮಾಡಿದ್ದು, ಆನಂದ್ ಸಿಂಗ್ ಬಿಶ್ತ್ ಪಂಚಭೂತಗಳಲ್ಲಿ ಲೀನನಾದರು.

    ಆನಂದ್ ಸಿಂಗ್ ಬಿಶ್ತ್ ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಮಾರ್ಚ್ 15 ರಂದು ಅವರನ್ನು ಏಮ್ಸ್ ಗೆ ದಾಖಲಿಸಲಾಗಿತ್ತು. ಭಾನುವಾರ ಆದಿತ್ಯನಾಥ್ ಅವರ ತಂದೆಯವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ತಕ್ಷಣ ಆದಿತ್ಯನಾಥ್ ಅವರ ತಂದೆಯನ್ನು ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

  • ತಂದೆ ಅಂತ್ಯಕ್ರಿಯೆಗೆ ಹೋಗಲ್ಲ, ಕನಿಷ್ಠ ಮಂದಿ ಭಾಗಿಯಾಗಿ – ಸಿಎಂ ಯೋಗಿ ಸೂಚನೆ

    ತಂದೆ ಅಂತ್ಯಕ್ರಿಯೆಗೆ ಹೋಗಲ್ಲ, ಕನಿಷ್ಠ ಮಂದಿ ಭಾಗಿಯಾಗಿ – ಸಿಎಂ ಯೋಗಿ ಸೂಚನೆ

    ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಆದರೆ ನಾಳೆ ನಡೆಯುವ ತಂದೆಯ ಅಂತಿಮ ವಿಧಿ-ವಿಧಾನಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಸ್ವತಃ ಸಿಎಂ ಹೇಳಿದ್ದಾರೆ.

    ಯೋಗಿ ಆದಿತ್ಯನಾಥ್ ಅವರ ಆನಂದ್ ಸಿಂಗ್ ಬಿಶ್ತ್ (89) ಅವರು ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ 10.44ಕ್ಕೆ ನಿಧನರಾಗಿದ್ದಾರೆ.

    ಇಡೀ ದೇಶ ಕೊರೊನಾದಿಂದ ಲಾಕ್‍ಡೌನ್ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್ ಹೆಚ್ಚಾಗಿದೆ. ಹೀಗಾಗಿ ವೈರಸ್ ವಿರುದ್ಧ ಹೋರಾಡಲು ಲಾಕ್‍ಡೌನ್ ಕಠಿಣವಾಗಿ ಜಾರಿ ಮಾಡುವ ಅಗತ್ಯವಿದೆ. ಆದ್ದರಿಂದ ಮಂಗಳವಾರ ನಡೆಯುವ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಆದಿತ್ಯನಾಥ್ ಹೇಳಿದ್ದಾರೆ.

    ಅಷ್ಟೇ ಅಲ್ಲದೇ ಸಿಎಂ ತಮ್ಮ ಕುಟುಂಬ ಸದಸ್ಯರಿಗೆ ಲಾಕ್‍ಡೌನ್ ನಿಯಮಗಳನ್ನು ಅನುಸರಿಸುವಂತೆ ಪತ್ರದ ಮೂಲಕ ತಿಳಿಸಿದ್ದಾರೆ. ಅಂದರೆ ಅಂತ್ಯಕ್ರಿಯೆಯ ಸಮಯದಲ್ಲಿ ಕನಿಷ್ಠ ಮಂದಿ ಭಾಗಿಯಾಗುವಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ.

    ತಂದೆ ಸಾವಿನ ಸುದ್ದಿಗೂ ಕೆಲವೇ ಗಂಟೆಗಳ ಹಿಂದೆ ಸಿಎಂ ಯೋಗಿ ಆದಿತ್ಯನಾಥ್ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ನಡೆದ ಕ್ರೂರ ಹತ್ಯಾಕಾಂಡದ ಬಗ್ಗೆ ಮಾತನಾಡಿದ್ದರು. ತಂದೆಯ ಮೃತಪಟ್ಟ ಬಳಿಕ ಅಧಿಕಾರಿಗಳ ಜೊತೆ ಕೊರೊನಾ ಸಭೆ ನಡೆಸಿದ್ದಾರೆ.

    ಪ್ರಧಾನಿ ಮೋದಿ ಭಾನುವಾರ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕರೆದು ತಂದೆಯ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕಳೆದ ದಿನವೇ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿಎಂ ತಂದೆಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ಅವರು ಕೂಡ ಟ್ವಿಟ್ಟರ್ ಮೂಲಕ ಆನಂದ್ ಸಿಂಗ್ ಬಿಶ್ತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಆನಂದ್ ಸಿಂಗ್ ಬಿಶ್ತ್ ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಮಾರ್ಚ್ 15 ರಂದು ಅವರನ್ನು ಏಮ್ಸ್ ಗೆ ದಾಖಲಿಸಲಾಗಿತ್ತು. ಭಾನುವಾರ ಆದಿತ್ಯನಾಥ್ ಅವರ ತಂದೆಯವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ತಕ್ಷಣ ಆದಿತ್ಯನಾಥ್ ಅವರ ತಂದೆಯನ್ನು ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಐಸಿಯು ವಾರ್ಡಿಗೆ ಸ್ಥಳಾಂತರಿಸುವ ಮೊದಲು ಅವರು ಭಾನುವಾರ ಡಯಾಲಿಸಿಸ್‍ಗೆ ಒಳಗಾಗಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

  • ಸಿಎಂ ಯೋಗಿ ಆದಿತ್ಯನಾಥ್ ತಂದೆ ವಿಧಿವಶ

    ಸಿಎಂ ಯೋಗಿ ಆದಿತ್ಯನಾಥ್ ತಂದೆ ವಿಧಿವಶ

    ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ್ ಸಿಂಗ್ ಬಿಶ್ತ್ ಇಂದು ಬೆಳಗ್ಗೆ ನಿಧನರಾದರು.

    ಆನಂದ್ ಸಿಂಗ್ ಬಿಶ್ತ್ (89) ಅವರು ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ 10.44ಕ್ಕೆ ನಿಧನರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಯುಪಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, “ಸಿಎಂ ಯೋಗಿ ಆದಿತ್ಯನಾಥ್ ಅವರ ತಂದೆ ಬೆಳಗ್ಗೆ  ನಿಧನರಾಗಿದ್ದಾರೆ” ಎಂದು ಸಂತಾಪ ಸೂಚಿಸಿದ್ದಾರೆ.

    ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ್ ಸಿಂಗ್ ಬಿಶ್ತ್ ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಮಾರ್ಚ್ 15 ರಂದು ಅವರನ್ನು ಏಮ್ಸ್ ಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು.

    ಭಾನುವಾರ ಆದಿತ್ಯನಾಥ್ ಅವರ ತಂದೆಯವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದ್ದು, ತಕ್ಷಣ ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಐಸಿಯು ವಾರ್ಡಿಗೆ ಸ್ಥಳಾಂತರಿಸುವ ಮೊದಲು ಅವರು ಭಾನುವಾರ ಡಯಾಲಿಸಿಸ್‍ಗೆ ಒಳಗಾಗಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.