Tag: anand sigh

  • ಆನಂದ್ ಸಿಂಗ್ ಬೆಂಗಲಿಗರ ಗೂಂಡಾಗಿರಿ- ಜಗಳ ಬಿಡಿಸಲು ಹೋದ ಪೇದೆ ಮೇಲೆಯೇ ಹಲ್ಲೆ

    ಆನಂದ್ ಸಿಂಗ್ ಬೆಂಗಲಿಗರ ಗೂಂಡಾಗಿರಿ- ಜಗಳ ಬಿಡಿಸಲು ಹೋದ ಪೇದೆ ಮೇಲೆಯೇ ಹಲ್ಲೆ

    ಬಳ್ಳಾರಿ: ಮಾಜಿ ಸಚಿವ, ಮಾಜಿ ಶಾಸಕ ಆನಂದಸಿಂಗ್ ಬೆಂಬಲಿಗರು ರಕ್ಷಣೆ ಕೊಡುವ ಆರಕ್ಷಕರನ್ನೇ ಎಳೆದಾಡಿ ಹಲ್ಲೆ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಮಲ್ಲಿಕಾರ್ಜುನ ಎಂಬವರ ಮೇಲೆ ಆನಂದಸಿಂಗ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಹೊಸಪೇಟೆಯ ಪಾಡುರಂಗ ಕಾಲೋನಿಯಲ್ಲಿ ಕಳೆದ ರಾತ್ರಿ ಕುಲ್ಲಕ ವಿಚಾರಕ್ಕೆ ಕೆಲವರು ಜಗಳ ಮಾಡುತ್ತಿದ್ದರು. ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿತ್ತು.

    ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಗ್ರಾಮೀಣ ಪೊಲೀಸರು ಜಗಳ ಬಿಡಿಸಲು ಹೋದಾಗ ಅವರು ಪೊಲೀಸರನ್ನೇ ಎಳೆದಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಜಗಳ ತಡೆಯಲು ಮುಂದಾದ ಪೊಲೀಸ್ ಪೇದೆಯ ವಾಕಿ ಟಾಕಿ ಕಿತ್ತೆಸೆದು ಬಟ್ಟೆಯನ್ನು ಎಳೆದಾಡಿ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಹೆಸರು ಸಿದ್ದರಾಮಯ್ಯ, ಕೆಲಸ ಮಾಡೋದು ಭೂಮಿ ಮೇಲೆ- ಕುಡಿದ ಮತ್ತಲ್ಲಿ ಪೊಲೀಸರಿಗೆ ಅವಾಜ್

    ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೇದೆ ದೂರು ದಾಖಲು ಮಾಡುತ್ತಿದ್ದಂತೆಯೇ ವೀರೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ದೇವೇಂದ್ರ ಪೂಜಾರ, ಸೋಮೇಶ ಹಾಗೂ ಹನುಮಂತ ಪರಾರಿಯಾಗಿದ್ದು, ಮೂವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ವಪಕ್ಷದ ವಿರುದ್ಧವೇ ಶಾಸಕರ ಮುನಿಸು- ಆನಂದ್ ಸಿಂಗ್ ಅನುಪಸ್ಥಿತಿಯಲ್ಲೇ ಪರಿವರ್ತನಾ ಯಾತ್ರೆಗೆ ಸಿದ್ಧತೆ

    ಸ್ವಪಕ್ಷದ ವಿರುದ್ಧವೇ ಶಾಸಕರ ಮುನಿಸು- ಆನಂದ್ ಸಿಂಗ್ ಅನುಪಸ್ಥಿತಿಯಲ್ಲೇ ಪರಿವರ್ತನಾ ಯಾತ್ರೆಗೆ ಸಿದ್ಧತೆ

    ಬಳ್ಳಾರಿ: ಮಾಜಿ ಸಚಿವ, ಬಿಜೆಪಿ ಶಾಸಕ ಆನಂದಸಿಂಗ್ ಅನುಪಸ್ಥಿತಿಯಲ್ಲೇ ಹೊಸಪೇಟೆಯಲ್ಲಿ ಪರಿವರ್ತನಾ ಯಾತ್ರೆ ನಡೆಸಲು ಬಿಜೆಪಿ ತೀರ್ಮಾನಿಸಿದೆ.

    ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡು ಪರಿವರ್ತನಾ ಯಾತ್ರೆಯಿಂದ ದೂರ ಉಳಿದಿರುವ ಶಾಸಕ ಆನಂದ್ ಸಿಂಗ್ ಮನವೊಲಿಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಇಂದು ಸಂಜೆ ಹೊಸಪೇಟೆಯಲ್ಲಿ ನಡೆಯಬೇಕಿರುವ ಪರಿವರ್ತನಾ ಯಾತ್ರೆ ಯಾವುದೇ ಕಾರಣಕ್ಕೂ ರದ್ದಾಗಬಾರದೆಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರಾವ್ ಸೂಚನೆ ನೀಡಿದ್ದು, ಸಕಲ ಸಿದ್ಧತೆ ನಡೆದಿದೆ. ಇದನ್ನೂ ಓದಿ: ಬಿಜೆಪಿ ಮಂತ್ರಿ ವಿರುದ್ಧದ ಬಂದ್‍ ಗೆ ಬಿಜೆಪಿ ಶಾಸಕನ ಬೆಂಬಲ!

    ಆನಂದ್ ಸಿಂಗ್ ಬದಲಾಗಿ ಗಣಿ ಉದ್ಯಮಿ ಕಿಶೋರ್ ಪತ್ತಿಗೊಂಡಗೆ ಪರಿವರ್ತನಾ ಯಾತ್ರೆಯ ಉಸ್ತುವಾರಿ ನೀಡಲಾಗಿದೆ. ಕಿಶೋರ್ ಪತ್ತಿಗೊಂಡರಿಗೆ ಟಿಕೆಟ್ ನೀಡಲಾಗುತ್ತೆ ಅನ್ನೋ ಮಾತುಗಳು ಕೇಳಿ ಬರುತ್ತಿರುವುದರಿಂದ ಶಾಸಕ ಆನಂದ್ ಸಿಂಗ್ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದು, ಇಂದು ಪರಿವರ್ತನಾ ಯಾತ್ರೆಯಲ್ಲಿ ಗೈರಾಗಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕ್ಷೇತ್ರದ ಜನರು ಪೊರಕೆ ಏಟು ನೀಡಿದರೂ ಸ್ವೀಕರಿಸುತ್ತೇನೆ :ಡಿಕೆಶಿ

    ಆದ್ರೆ ಬಿಜೆಪಿ ಹೈಕಮಾಂಡ್ ಆನಂದ್ ಸಿಂಗ್ ಗೆ ಸೊಪ್ಪು ಹಾಕದೇ ಪತ್ತಿಗೊಂಡ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆ ನಡೆಸಲು ಮುಂದಾಗಿದೆ.