Tag: Anand Asnotikar

  • ನಾನು ಚುನಾವಣೆ ರೇಸ್‍ನಲ್ಲಿ ಇಲ್ಲ: ಆನಂದ್ ಆಸ್ನೋಟಿಕರ್ ಸ್ಪಷ್ಟನೆ

    ನಾನು ಚುನಾವಣೆ ರೇಸ್‍ನಲ್ಲಿ ಇಲ್ಲ: ಆನಂದ್ ಆಸ್ನೋಟಿಕರ್ ಸ್ಪಷ್ಟನೆ

    ಕಾರವಾರ: ಸದ್ಯಕ್ಕೆ ನಾನು ಚುನಾವಣೆ ರೇಸ್‍ನಲ್ಲಿ ಇಲ್ಲ. ನಾನು ಜೆಡಿಎಸ್‍ (JDS) ನಿಂದ ಸ್ಪರ್ಧಿಸುತ್ತೇನೆ ಎಂದು ಚುನಾವಣೆ ಸಮೀಕ್ಷೆ (Election Survey) ಮಾಡಲಾಗುತ್ತಿದೆ. ನಾನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮಾಜಿ ಸಚಿವ, ಮಾಜಿ ಶಾಸಕ ಆನಂದ್ ಆಸ್ನೋಟಿಕರ್ (Anand Asnotikar) ಹೇಳಿದ್ದಾರೆ.

    ತಾನು ಚುನಾವಣೆ ಸ್ಪರ್ಧೆ ಮಾಡುತ್ತೇನೆ ಎಂದು ಸುದ್ದಿ ಹರಡುತ್ತಿದೆ. ಜೆಡಿಎಸ್ ನಿಂದ ಸ್ಪರ್ಧಿಸುತ್ತೇನೆ ಎಂದು ಎಲ್ಲೆಡೆ ಪ್ರಚಾರ ಮಾಡಲಾಗುತ್ತಿದೆ. ಸದ್ಯಕ್ಕೆ ಚುನಾವಣೆ ರೇಸ್ ನಲ್ಲಿ ಇಲ್ಲ ಎಂದು ತಮ್ಮ ಫೇಸ್ ಬುಕ್ ಮೂಲಕ ಹೇಳಿಕೆ ನೀಡಿದ ಆನಂದ್ ಆಸ್ನೋಟಿಕರ್, ಈ ಬಾರಿ ಚುನಾವಣೆಗೆ ಕಾರವಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಿಖಿಲ್, ಅನಿತಾ ಕುಮಾರಸ್ವಾಮಿ ಗೆಲ್ತಾರೆ- ಭವಾನಿ ಪರ ರೇವಣ್ಣ ಬ್ಯಾಟಿಂಗ್

    ಈ ಹಿಂದೆ ಕಾಂಗ್ರೆಸ್ ನಿಂದ ಬಿಜೆಪಿ (BJP) ಗೆ ಬಂದು ಕಾರವಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡ ನಂತರ ಸಚಿವರಾಗಿದ್ದರು. ನಂತರ ಬಿಜೆಪಿ ತೊರೆದು ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದ ಮಾಜಿ ಸಚಿವ ಆನಂದ್ ಆಸ್ನೋಟಿಕರ್ 2018 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಬಿಜೆಪಿಯ ರೂಪಾಲಿನಾಯ್ಕ ವಿರುದ್ಧ ಸೋತಿದ್ದರು. ನಂತರ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧೆ ಮಾಡಿ ಬಿಜೆಪಿಯ ಅನಂತ್ ಕುಮಾರ್ ಹೆಗಡೆ ವಿರುದ್ಧ ಸೋತಿದ್ದರು. ಇದಾದ ಬಳಿಕ ಕಾರವಾರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೇ ಗೋವಾದಲ್ಲಿ ನೆಲಸಿದ್ದರು.

    2023 ರ ಚುನಾವಣೆ ಹತ್ತಿರ ಬರುತಿದ್ದಂತೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಜೆಡಿಎಸ್ ಬಿಟ್ಟು ಪಕ್ಷೇತರನಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿಕೊಂಡಿದ್ದರು. ಇದಾದ ಬಳಿಕ ತಾನು ಚುನಾವಣೆ ಸ್ಪರ್ಧೆ ಮಾಡುವುದಿಲ್ಲ ಕಾಂಗ್ರೆಸ್ ನ ಮಾಜಿ ಶಾಸಕ ಸತೀಶ್ ಸೈಲ್ ಗೆ ಬೆಂಬಲ ಕೊಡುವುದಾಗಿ ಹೇಳಿಕೊಂಡಿದ್ದರು. ಹೀಗಾಗಿ ಅವರ ಬೆಂಬಲಿಗರಲ್ಲೇ ಇವರ ಹೇಳಿಕೆಯಿಂದಾಗಿ ದ್ವಂದ್ವಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಕ್ಷೇತ್ರದ ಅವರ ಅಭಿಮಾನಿಗಳಿಗೆ ಮತ್ತೆ ಶಾಕ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 2023ಕ್ಕೆ ವಿಜಯೇಂದ್ರರನ್ನ ಸಿಎಂ ಮಾಡಲು ಬೊಮ್ಮಾಯಿ ಆಯ್ಕೆ: ಆನಂದ್ ಆಸ್ನೋಟಿಕರ್

    2023ಕ್ಕೆ ವಿಜಯೇಂದ್ರರನ್ನ ಸಿಎಂ ಮಾಡಲು ಬೊಮ್ಮಾಯಿ ಆಯ್ಕೆ: ಆನಂದ್ ಆಸ್ನೋಟಿಕರ್

    – ಇನ್ಮುಂದೆ ಯಡಿಯೂರಪ್ಪ ಸೂಪರ್ ಸಿಎಂ

    ಕಾರವಾರ: ಬಸವರಾಜ ಬೊಮ್ಮಾಯಿರವರನ್ನು ಸಿಎಂ ಮಾಡಿರುವುದು ಭವಿಷ್ಯದಲ್ಲಿ ವಿಜಯೇಂದ್ರರನ್ನ ಸಿಎಂ ಮಾಡುವುದಕ್ಕಾಗಿ ಎಂದು ಕಾರವಾರದಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

    ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು. ಬೊಮ್ಮಾಯಿ ಆಯ್ಕೆಯ ಮೂಲಕ ಬಿ.ಎಸ್ ಯಡಿಯೂರಪ್ಪನವರು ಪಕ್ಷದಲ್ಲಿ ಹಿಡಿತ ಸಾಧಿಸಿದ್ದಾರೆ. ಸೂಪರ್ ಸಿಎಂ ಆಗಿ ಯಡಿಯೂರಪ್ಪ ಇನ್ನು ಮುಂದೆ ರಾಜ್ಯದಲ್ಲಿ ಅಧಿಕಾರ ಚಲಾಯಿಸುತ್ತಾರೆ. 2023ಕ್ಕೆ ವಿಜಯೇಂದ್ರ ಸಿಎಂ ಮಾಡಲು ಬೊಮ್ಮಾಯಿಯನ್ನ ಈಗ ಸಿಎಂ ಮಾಡಿದ್ದಾರೆ. ಯತ್ನಾಳ್ ಹಾಗೂ ಯೋಗೇಶ್ವರ್ ಐದಾರು ತಿಂಗಳಿನಿಂದ ಯಡಿಯೂರಪ್ಪನವರ ವಿರುದ್ಧ ಮಾತನಾಡುತ್ತಿದ್ದರು. ಯತ್ನಾಳ್ ಬೋನಿನಲ್ಲಿ ಇದ್ದ ಮಂಗನ ರೀತಿ ಕೂಗಾಟ ಮಾಡಿದರು ಏನು ಮಾಡಿಕೊಳ್ಳಲಾಗಲಿಲ್ಲ. ಬಿಜೆಪಿ ಶಿಸ್ತಿನ ಪಕ್ಷ ಆಗಿದಿದ್ದರೇ ಅವರಿಬ್ಬರನ್ನ ಮಂತ್ರಿ ಮಾಡಬಾರದು ಎಂದು ಆಗ್ರಹಿಸಿದರು.

    ಇನ್ನು ಬಸವರಾಜ್ ಬೊಮ್ಮಾಯಿಯನ್ನು ಸಿಎಂ ಆಗಿ ಬಿಜೆಪಿ ಮಾಡಿರುವುದು ಒಳ್ಳೆಯ ಆಯ್ಕೆ. ಇದರಿಂದ ಬಿಜೆಪಿಗೆ ಭವಿಷ್ಯದಲ್ಲಿ ಲಾಭವಾಗಲಿದೆ. ರಾಜ್ಯಕ್ಕೆ ಒಳ್ಳೆಯ ದಿನ ಬರುತ್ತದೆ. ಈಗಿನ ಸರ್ಕಾರ ಬೆಳವಣಿಗೆ ಮುಂದೆ ಜೆಡಿಎಸ್ ಗೆ ಒಳ್ಳೆಯದಾಗಲಿದೆ. ಮುಂದಿನ ಬಾರಿ ಸರ್ಕಾರ ರಚನೆ ವೇಳೆ ಕುಮಾರಸ್ವಾಮಿ ದೊಡ್ಡ ರೋಲ್ ತೆಗೆದುಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಇನ್ಮೇಲೆ ನಾನು ಸೂಪರ್ ಸಿಎಂ ಅಲ್ಲ: ವಿಜಯೇಂದ್ರ

  • ಚುನಾವಣೆ ವೇಳೆ ಸೀಜ್ ಆಗಿದ್ದ ರಿವಾಲ್ವರ್ ಆನಂದ್ ಅಸ್ನೋಟಿಕರ್‌ಗೆ ವಾಪಸ್

    ಚುನಾವಣೆ ವೇಳೆ ಸೀಜ್ ಆಗಿದ್ದ ರಿವಾಲ್ವರ್ ಆನಂದ್ ಅಸ್ನೋಟಿಕರ್‌ಗೆ ವಾಪಸ್

    ಹಾವೇರಿ: ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಇಂದು ಜಿಲ್ಲೆ ರಾಣೇಬೆನ್ನೂರಿನ ಜೆಎಂಎಫ್‍ಸಿ ಕೋರ್ಟಿಗೆ ಹಾಜರಾಗಿದ್ದರು.

    2019ರ ಲೋಕಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಜಾರಿ ಮಾಡಿದ್ದ ಸಂದರ್ಭದಲ್ಲಿ ಪರವಾನಗಿ ನವೀಕರಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಅಲ್ಲದೇ ಮಾಜಿ ಸಚಿವರ ಕಾರು ಮತ್ತು ರಿವಾಲ್ವರ್ ಅನ್ನು ಸೀಜ್ ಮಾಡಲಾಗಿತ್ತು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ಅಧಿಕಾರಿಗಳು ಮಾಕನೂರು ಚೆಕ್‍ಪೋಸ್ಟ್ ನಲ್ಲಿ ಬಳಿ ರಿವಾಲ್ವರ್ ಮತ್ತು ಕಾರನ್ನು ವಶಕ್ಕೆ ಪಡೆದಿದ್ದರು.

    ಪ್ರಕರಣ ಸಂಬಂಧ ಇಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರು ಸಂಬಂಧಿಸಿದ ದಾಖಲೆಗಳನ್ನು ಖುದ್ದು ಕೋರ್ಟಿಗೆ ಹಾಜರು ಪಡಿಸಿದ್ದರು. ಅಲ್ಲದೇ ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿದ್ದರಿಂದ ನ್ಯಾಯ ಸಿಕ್ಕಿದೆ. ಅಂದಿನ ದಿನ ಕಾರು ಚಾಲಕ ರಿವಾಲ್ವರ್ ಗೆ  ಸಂಬಂಧಿಸಿದ ದಾಖಲೆ ಬಿಟ್ಟು ಬಂದಿದ್ದು ತೊಂದರೆಯಾಗಿತ್ತು. ಈಗ ನ್ಯಾಯ ಸಿಕ್ಕಿದೆ ಎಂದು ಅಸ್ನೋಟಿಕರ್ ಪ್ರತಿಕ್ರಿಯೆ ನೀಡಿದರು.

  • ಅತೃಪ್ತ ಶಾಸಕರು ಗಂಡಸರು ಆಗಿದ್ದರೆ ಸದನಕ್ಕೆ ಬರಬೇಕಿತ್ತು – ಆನಂದ್ ಅಸ್ನೋಟಿಕರ್

    ಅತೃಪ್ತ ಶಾಸಕರು ಗಂಡಸರು ಆಗಿದ್ದರೆ ಸದನಕ್ಕೆ ಬರಬೇಕಿತ್ತು – ಆನಂದ್ ಅಸ್ನೋಟಿಕರ್

    ಕಾರವಾರ: ಅತೃಪ್ತ ಶಾಸಕರಿಗೆ ಗಂಡಸ್ತನ ಇದ್ದಿದ್ದರೆ ಸದನಕ್ಕೆ ಬಂದು ನಮ್ಮ ವಿರುದ್ಧ ಮತ ಹಾಕಬೇಕಿತ್ತು. ಚಕ್ಕಾಗಳ ರೀತಿಯಲ್ಲಿ ಮುಂಬೈನಲ್ಲಿ ಕುಳಿತಿದ್ದೇಕೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಿಡಿ ಕಾರಿದ್ದಾರೆ.

    ಕಾರವಾರದಲ್ಲಿ ಮಾತನಾಡಿದ ಅವರು ಸುಪ್ರೀಂಕೋರ್ಟಿನಲ್ಲಿ ಶಾಸಕರ ಅನರ್ಹತೆ ತಡೆ ಹಿಡಿಯುವ ಸಾಧ್ಯತೆ ಕಡಿಮೆಯಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮನ್ನು ಅನರ್ಹ ಮಾಡಲಾಗಿತ್ತು. ಆಗ ನಾವು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಆಗ ನೊಟೀಸ್ ನೀಡದೆ ಅನರ್ಹತೆ ಮಾಡಿದ್ದಾರೆ ಎನ್ನುವ ಒಂದೇ ಒಂದು ಕಾರಣಕ್ಕೆ ನಮ್ಮ ಅನರ್ಹತೆ ರದ್ದಾಗಿತ್ತು ಎಂದು ತಿಳಿಸಿದರು.

    20 ದಿನಗಳ ಕಾಲ ಅನರ್ಹ ಶಾಸಕರ ರಾಜಕೀಯವನ್ನು ರಾಜ್ಯದ ಜನತೆ ನೋಡಿದ್ದಾರೆ. ಸುಪ್ರೀಂಕೋರ್ಟ್ ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿಯಲಿದೆ. ಯಡಿಯೂರಪ್ಪನವರ ಸರ್ಕಾರ ಉಪ ಚುನಾವಣೆ ಆಗುವ ವರೆಗೆ ಮಾತ್ರ ಉಳಿಯುತ್ತದೆ. ಎಲ್ಲರಿಗೂ ಸಚಿವನಾಗುವ ಆಸೆಯಿದೆ ಅವರಲ್ಲೇ ಗಲಾಟೆಗಳಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬೀಳಲಿದೆ ಎಂದು ಭವಿಷ್ಯ ನುಡಿದರು.

  • ಚುನಾವಣೆ ಸೋಲಿಗೆ ಶನಿದೋಷ ಕಾರಣ – 50 ಲಕ್ಷದ ನೀಲಮಣಿ ಹರಳು ಧರಿಸಿದ ಅಸ್ನೋಟಿಕರ್

    ಚುನಾವಣೆ ಸೋಲಿಗೆ ಶನಿದೋಷ ಕಾರಣ – 50 ಲಕ್ಷದ ನೀಲಮಣಿ ಹರಳು ಧರಿಸಿದ ಅಸ್ನೋಟಿಕರ್

    ಕಾರವಾರ: ನಾನು ಚುನಾವಣೆಯಲ್ಲಿ ಸೋಲಲು ಶನಿದೋಷ ಕಾರಣ. ಈ ದೋಷವನ್ನು ಪರಿಹಾರ ಮಾಡಿಕೊಳ್ಳಲು 50 ಲಕ್ಷ ರೂ. ಮೌಲ್ಯದ ನೀಲಮಣಿ ಹರಳನ್ನು ತರಿಸಿದ್ದೇನೆ ಎಂದು ಉತ್ತರ ಕನ್ನಡ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಹೇಳಿದ್ದಾರೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಅಸ್ನೋಟಿಕರ್, ಬಿಜೆಪಿ ಅಭ್ಯರ್ಥಿ ಅನಂತ್‍ಕುಮಾರ್ ಹೆಗಡೆ ಅವರ ವಿರುದ್ಧ 4,79,649 ಲಕ್ಷ ಮತಗಳ ಅಂತರದಲ್ಲಿ ಸೋತಿದ್ದರು. ಈ ಸೋಲಿಗೆ ಶನಿದೋಷವೇ ಕಾರಣ ಇದರ ಪರಿಹಾರಕ್ಕೆ ಕಾಶ್ಮೀರದಿಂದ 50 ಲಕ್ಷ ಹಣ ನೀಡಿ ನೀಲಮಣಿ ಹರಳನ್ನು ತರಿಸಿದ್ದೇನೆ ಎಂದು ಹೇಳಿದ್ದಾರೆ.

    ಕಾಶ್ಮೀರದಿಂದ 50 ಲಕ್ಷ ಹಣ ಕೊಟ್ಟು ಅಪರೂಪದ ನೀಲಮಣಿ ಹರಳನ್ನು ತರಿಸಿ ಎಡಗೈನ ಮಧ್ಯ ಬೆರಳಿಗೆ ಹಾಕಿಕೊಂಡಿದ್ದೇನೆ. ಈ ಹರಳನ್ನು ವಾರದಲ್ಲಿ ಒಂದು ಬಾರಿ ದೇವರ ಬಳಿ ಇಟ್ಟು ಹಾಲಿನಲ್ಲಿ ಅಭಿಷೇಕ ಮಾಡಿ ಧರಿಸುತ್ತೇನೆ ಎಂದು ಅನಂದ್ ಅಸ್ನೋಟಿಕರ್ ಹೇಳಿದ್ದಾರೆ.

    ಕೈ ಬೆರಳಿನಲ್ಲಿ ಇರುವ ಎಲ್ಲಾ ಉಂಗುರವನ್ನು ತೆಗೆದು ಲಕ್ಷ ಲಕ್ಷ ಖರ್ಚು ಮಾಡಿ ತಂದ ವಿಶೇಷ ಹರಳಿನ ಉಂಗುರವನ್ನು ಮಾತ್ರ ಧರಿಸಿದ್ದು ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ.

    ಚುನಾವಣೆ ಸೋತರೆ ರಾಜಕಾರಣಿಗಳು ದೇವರು, ಜ್ಯೋತಿಷ್ಯರ ಮೊರೆ ಹೋಗುವುದು ಸಾಮಾನ್ಯ. ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕ ಗಾಂಧಿ ಕೂಡ ಗುರುಗಳ ಮೊರೆ ಹೋಗಿದ್ದು ತಮ್ಮ ಯಶಸ್ಸಿಗಾಗಿ ರುದ್ರಾಕ್ಷಿ ಮಾಲೆಯನ್ನು ಧರಿಸಿದ್ದರು. ಇನ್ನು ರಾಜ್ಯದಲ್ಲೂ ಕೂಡ ರೇವಣ್ಣನವರಿಂದ ಹಿಡಿದು ಹಲವಾರು ರಾಜಕಾರಣಿಗಳು ತಮ್ಮ ಸಂಕಷ್ಟ, ದೋಷ ನಿವಾರಣೆಗೆ ಲಕ್ಷ ಲಕ್ಷ ಖರ್ಚು ಮಾಡಿ ಟೆಂಪಲ್ ರನ್ ಮಾಡಿದ್ದರು.

  • 4.79 ಲಕ್ಷ ಮತಗಳ ಅಂತರದಲ್ಲಿ ಗೆದ್ದು, 6ನೇ ಬಾರಿ ಲೋಕಸಭೆಗೆ ಹೆಗಡೆ ಪ್ರವೇಶ

    4.79 ಲಕ್ಷ ಮತಗಳ ಅಂತರದಲ್ಲಿ ಗೆದ್ದು, 6ನೇ ಬಾರಿ ಲೋಕಸಭೆಗೆ ಹೆಗಡೆ ಪ್ರವೇಶ

    ಕಾರವಾರ: ಕಳೆದ ಐದು ಬಾರಿಯೂ ಹಿಂದುತ್ವದ ಅಲೆಯಿಂದ ಜಯಗಳಿಸಿದ್ದ ಅನಂತಕುಮಾರ್ ಅವರು ಎರಡನೇ ಬಾರಿ ಮೋದಿ ಅಲೆ ಭರ್ಜರಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ತನ್ನ ಅಧಿಪತ್ಯ ಸಾಧಿಸಿದೆ.

    ಹೌದು. ಉತ್ತರ ಕನ್ನಡದಲ್ಲಿ ಒಟ್ಟೂ 11,54,390 ಮತಗಳು ಚಲಾವಣೆಯಾಗಿದೆ. ಕ್ಷೇತ್ರದಲ್ಲಿ ಮೊದಲ ಬಾರಿಗೆ 16,017 ಸಾವಿರ ನೋಟಾ ಮತಗಳು ಚಲಾವಣೆಯಾಗಿದೆ. ಅದರಲ್ಲಿ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ವಿರುದ್ಧ ಅನಂತ್‍ಕುಮಾರ್ ಅವರು 4,79,649 ಮತಗಳ ಭಾರೀ ಅಂತರದಿಂದ ಗೆದ್ದಿದ್ದಾರೆ. ಹೆಗಡೆ 7,86,042 ಮತಗಳನ್ನು ಪಡೆದಿದ್ದರೆ, ಮೈತ್ರಿ ಅಭ್ಯರ್ಥಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಆನಂದ್ ಆಸ್ನೋಟಿಕರ್ 3,06,393 ಮತಗಳನ್ನು ಪಡೆಡು ಭಾರೀ ಸೋಲನ್ನು ಅನುಭವಿಸಿದ್ದಾರೆ.

    ಗೆದ್ದಿದ್ದು ಹೇಗೆ?
    ಯಾವುದೇ ಅಭಿವೃದ್ಧಿ ಗೆಲ್ಲಬೇಕಾದರೇ ಪಕ್ಷದ ಕಾರ್ಯಕರ್ತರ ಶ್ರಮ ಇರಲೇ ಬೇಕು. ಆ ದಿಕ್ಕಿನಲ್ಲಿ ಹೇಳುವುದಾದರೇ ಬಿಜೆಪಿ ಕಾರ್ಯಕರ್ತರ ಶ್ರಮ ಉತ್ತರ ಕನ್ನಡ ಜಿಲ್ಲೆಯ ಕ್ಷೇತ್ರದಲ್ಲಿ ಹೆಚ್ಚಾಗಿತ್ತು. ಬಿಜೆಪಿ ಕಾರ್ಯಕರ್ತರಿಂದ ಹಿಡಿದು ಸಂಘ ಪರಿವಾರದ ಕಾರ್ಯಕರ್ತರು ತಮ್ಮ ಸರ್ಕಾರದ ನಿಲುವುಗಳನ್ನು, ಸಾಧನೆಗಳನ್ನು ಅನಾಯಾಸವಾಗಿ ಜನರ ಮುಂದೆ ಇಟ್ಟಿರುವುದು ಬಿಜೆಪಿಯ ಪ್ಲಸ್ ಪಾಯಿಂಟ್ ಆಗಿತ್ತು. ಇದೇ ಕಾರಣಕ್ಕೆ ಅನಂತ್‍ಕುಮಾರ್ ಅವರು ಸಲೀಸಾಗಿ ಲೋಕಸಮರವನ್ನು ಗೆದ್ದು ಮತ್ತೋಮ್ಮೆ ಲೋಕಸಭೆಯನ್ನು ಪ್ರವೇಶಿಸಿದ್ದಾರೆ.

    ಕಳೆದ ಚುನಾವಣೆಗೆ ಹೋಲಿಸಿದರೆ ಅನಂತಕುಮಾರ್ ಹೆಗಡೆ ಕ್ಷೇತ್ರದಲ್ಲಿ ಜನರೊಂದಿಗೆ ಬೆರತಿರುವುದು ಹೆಚ್ಚು ಲಾಭ ತಂದಿದೆ. ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಶ್ರಮದಿಂದ ನಾಲ್ಕು ಬಿಜೆಪಿ ಶಾಸಕರನ್ನು ಗೆದ್ದಿದ್ದು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸಹಕಾರಿಯಾಗಿದೆ. ಇದಲ್ಲದೇ ಪಕ್ಷದಲ್ಲೇ ಇದ್ದು ವಿರೋಧಿಗಳಾಗಿದ್ದ ಶಿರಸಿ ಶಾಸಕ ವಿಶ್ವೇಶ್ವರ ಭಟ್ ಕಾಗೇರಿ ಅನಂತಕುಮಾರ್ ಪರ ಪ್ರಚಾರ ಮಾಡಿರುವುದು ಸಹ ಬಿಜೆಪಿಗೆ ಗೆಲುವಿದೆ ಬುನಾದಿ ಕಲ್ಪಿಸಿಕೊಟ್ಟಿತ್ತು.

    ಆನಂದ್ ಆಸ್ನೋಟಿಕರ್ ಸೋಲಲು ಕಾರಣವೇನು?
    ಹಲವು ಬಾರಿ ಪಕ್ಷ ಬದಲಾವಣೆಯಿಂದ ನಂಬಿಕೆ ಕೆಡಿಸಿಕೊಂಡಿದ್ದು. ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಕ್ಷೇತ್ರದ ಜನರ ಜೊತೆ ಸಂಪರ್ಕ ಕಳೆದುಕೊಂಡಿದ್ದು ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಅವರು ಸೋಲಲು ಮುಖ್ಯ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರಭಾವಿ ರಾಜಕಾರಣಿ ದೇಶಪಾಂಡೆ ಜೊತೆ ವೈಯಕ್ತಿಕವಾಗಿ ಹೆಸರು ಕೆಡಿಸಿಕೊಂಡು ವಿರೋಧ ಮಾಡಿದ್ದು ಹಾಗೂ ಕಾಂಗ್ರೆಸ್ಸಿನ ಮಾರ್ಗರೇಟ್ ಆಳ್ವ ಬಣದಲ್ಲಿ ಹೆಚ್ಚು ಆತ್ಮೀಯವಾಗಿದ್ದು ಆಸ್ನೋಟಿಕರ್ ಅವರೊಗೆ ಸೋಲು ತಂದಿದೆ ಎನ್ನಬಹುದು. ಮೈತ್ರಿಕೂಟದ ಸಮನ್ವಯತೆ ಕಾಪಾಡಿಕೊಳ್ಳದೇ ಇರುವುದು ಹಾಗೂ ಮೂಲ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರಿಬ್ಬರನ್ನೂ ಕಡೆಗಣಿಸಿರುವುದು, ಸ್ಪರ್ಧೆ ಸಂದರ್ಭದಲ್ಲಿ ಸ್ಥಳೀಯ ನಾಯಕರು ಇವರ ಪರ ನಿಲ್ಲದೇ ಬಹಿರಂಗವಾಗಿ ಅಸಮದಾನ ಹೊರಹಾಕಿರುವುದು ಆನಂದ್ ಆಸ್ನೋಟಿಕರ್ ಅವರಿಗೆ ಭಾರಿ ಅಂತರದಲ್ಲಿ ಸೋಲು ಅನಿಭವಿಸುವಂತೆ ಮಾಡಿದೆ.

    ಕ್ಷೇತ್ರವಾರು ವಿವರ:
    1. ಖಾನಾಪುರ: ಬಿಜೆಪಿ-1,13,386
    ಮೈತ್ರಿಕೂಟ- 25,108 ಮತ
    2. ಕಿತ್ತೂರು: ಬಿಜೆಪಿ-92,339
    ಮೈತ್ರಿಕೂಟ- 37,337
    3. ಹಳಿಯಾಳ: ಬಿಜೆಪಿ- 81,629
    ಮೈತ್ರಿಕೂಟ-39,865
    4. ಕಾರವಾರ: ಬಿಜೆಪಿ- 1,13,135
    ಮೈತ್ರಿಕೂಟ- 37,349
    5. ಕುಮಟಾ: ಬಿಜೆಪಿ-99,609
    ಮೈತ್ರಿಕೂಟ- 33,179
    6. ಭಟ್ಕಳ: ಬಿಜೆಪಿ- 94,560
    ಮೈತ್ರಿ ಕೂಟ- 51,290
    7. ಶಿರಸಿ: ಬಿಜೆಪಿ-1,03,904
    ಮೈತ್ರಿಕೂಟ-38,996
    8. ಯಲ್ಲಾಪುರ: ಬಿಜೆಪಿ-84,649
    ಮೈತ್ರಿಕೂಟ-43,006

    ಅಂಚೆ ಮತ ವಿವರ:
    ಒಟ್ಟು 3199 ಮತಗಳು ಚಲಾವಣೆಯಾಗಿದೆ. ಅದರಲ್ಲಿ ಬಿಜೆಪಿ- 2831 ಮತ, ಮೈತ್ರಿಕೂಟ-263 ಮತಗಳನ್ನು ಗಳಿಸಿದೆ.

    ಸುಧಾಕರ್- 40, ನಾಗರಾಜ್ ನಾಯ್ಕ- 7, ನಾಗರಾಜ್ ಶೇಟ್- 4, ಮಂಜುನಾಥ್ ಸದಾಶಿವ- 7, ಸುನಿಲ್ ಪವಾರ್- 6, ಅನಿತಾ ಶೇಟ್- 16, ಕುಂದಾಬಾಯಿ- 7, ಚಿದಾನಂದ್- 4, ನಾಗರಾಜ್ ಶಿರಾಲಿ- 5, ಬಾಲಕೃಷ್ಣ ಪಾಟೀಲ್- 3, ಮಹ್ಮದ್ ಜಬುರುದ್ ಕತೀಬ್- 6 ಮತಗಳನ್ನು ಗಳಿಸಿದ್ದಾರೆ.

    ಮೈತ್ರಿ ಕೂಟದಲ್ಲಿ ಹೊಂದಾಣಿಕೆ ಇಲ್ಲದೇ ಬಹಿರಂಗವಾಗಿ ಕ್ಷೇತ್ರದಲ್ಲಿ ನಾಯಕರು ಅಸಮಧಾನ ತೋಡಿಕೊಂಡಿರುವುದು ಹೆಚ್ಚು ಬಿಜೆಪಿಗೆ ಹೆಚ್ಚು ಲಾಭ ತಂದಿದೆ. ಜಿಲ್ಲೆಯಲ್ಲಿ ಮೋದಿ ಹವ ಇರುವುದು, ಪ್ರಭಲ ಅಭ್ಯರ್ಥಿ ಎದುರಾಳಿಯಾಗಿರದೇ ಇರುವುದು ಹಾಗೂ ಪರೇಶ್ ಮೇಸ್ತಾ ಸಾವಿನ ಪ್ರಕರಣದ ಲಾಭ, ಮೈತ್ರಿಕೂಟದ ಅಭ್ಯರ್ಥಿ ಪರ ದೇಶಪಾಂಡೆ ಸೇರಿದಂತೆ ಉಳಿದ ನಾಯಕರು ಹೆಚ್ಚು ಪ್ರಚಾರ ಮಾಡದೇ ಅಸಮಧಾನ ಹೊರಹಾಕಿದ್ದು ಅನಂತ್‍ಕುಮಾರ್ ಅವರಿಗೆ ಮತ್ತೊಮ್ಮೆ ವಿಕ್ಟರಿ ತಂದುಕೊಟ್ಟಿದೆ.

  • ಅಸ್ನೋಟಿಕರ್ ರ‍್ಯಾಲಿಯಲ್ಲಿ ಮೋದಿ ಪರ ಘೋಷಣೆ

    ಅಸ್ನೋಟಿಕರ್ ರ‍್ಯಾಲಿಯಲ್ಲಿ ಮೋದಿ ಪರ ಘೋಷಣೆ

    – ಮೈತ್ರಿ ಪಕ್ಷ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ

    ಕಾರವಾರ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ರ‍್ಯಾಲಿ ವೇಳೆ ಮೋದಿ ಪರ ಘೋಷಣೆ ಕೂಗಿ, ಗಲಾಟೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಮುಖ್ಯರಸ್ತೆಯಲ್ಲಿ ನಡೆದಿದೆ.

    ಶಿರಸಿಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ನೇತೃತ್ವದಲ್ಲಿ ಪ್ರಚಾರ ಮಾಡಲಾಗುತಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ ಎಂದು ಘೋಷಣೆ ಕೂಗಿದರು. ಇದರಿಂದಾಗಿ ಕೋಪಗೊಂಡ ಮೈತ್ರಿ ಪಕ್ಷದ ಕಾರ್ಯಕರ್ತರು ರಾಹುಲ್ ಎಂದು ಕೂಗಿದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಾರ್ಯಕರ್ತರು ಮತ್ತು ಬಿಜೆಪಿ ಮಧ್ಯೆ ಮಾತಿನ ಚಕಮಕಿ ಆರಂಭವಾಯಿತು. ಬಳಿಕ ಕೈ ಮಿಲಾಯಿಸುವ ಹಂತ ತಲುಪಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

  • ಹೆಗ್ಡೆಗೆ ಹೊಟ್ಟೆ ತುಂಬಿಸಿಕೊಳ್ಳಲು ಇಸ್ಲಾಂ ದೇಶ ಬೇಕು, ಮುಸ್ಲಿಮರ ಮತ ಬೇಡ: ಅಸ್ನೋಟಿಕರ್

    ಹೆಗ್ಡೆಗೆ ಹೊಟ್ಟೆ ತುಂಬಿಸಿಕೊಳ್ಳಲು ಇಸ್ಲಾಂ ದೇಶ ಬೇಕು, ಮುಸ್ಲಿಮರ ಮತ ಬೇಡ: ಅಸ್ನೋಟಿಕರ್

    ಕಾರವಾರ: ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಅವರಿಗೆ ಹೊಟ್ಟೆ ತುಂಬಿಸಿಕೊಳ್ಳಲು ಇಸ್ಲಾಂ ದೇಶ ಬೇಕು. ಆದರೆ ಮುಸ್ಲಿಮರ ಮತ ಬೇಡ ಅಂತ ಹೇಳುತ್ತಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

    ನಗರದ ಬೈತ್ಕೋಲ ಬಡಾವಣೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅನಂತ್‍ಕುಮಾರ್ ಹೆಗ್ಡೆ ಅವರು ಇರಾನ್ ದೇಶಗಳಲ್ಲಿ ಬಿಟುಮಿನ್ (ಟಾರ್) ತಂದು ತಮ್ಮ ಕದಂಬ ಸಂಸ್ಥೆಯಿಂದ ವ್ಯವಹಾರ ಮಾಡುತ್ತಿದ್ದಾರೆ. ಅವರ ವ್ಯವಹಾರಕ್ಕೆ ಇಸ್ಲಾಂ ದೇಶ ಬೇಕು. ಆದರೆ ರಾಜಕೀಯ ಬಂದಾಗ ಮಾತ್ರ ಮುಸ್ಲಿಂ ಮತ ಬೇಡ ಎನ್ನುತ್ತಾರೆ. 30 ಪ್ರಕರಣಗಳನ್ನು ಎದರಿಸುತ್ತಿರುವ ಫಯಾಜ್ ಎಂಬ ಯುವಕನ ಜೊತೆಗೆ ಕೇಂದ್ರ ಸಚಿವರು ಇಂದು ಸಮಾವೇಶ ನಡೆಸಿದರು. ಅಷ್ಟೇ ಅಲ್ಲದೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ತೀರ್ಥ ನೀಡಿದರು. ಇದು ಸ್ವಾರ್ಥಕ್ಕಾಗಿ ಮಾಡಿದ ತಂತ್ರ ಎಂದು ದೂರಿದರು.

    ಅನಂತ್‍ಕುಮಾರ್ ಹೆಗ್ಡೆ ಅವರು 5 ಬಾರಿ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಧಾನಿ ನರೇಂದ್ರ ಮೊದಿ ಅವರ ಅಲೆಯಲ್ಲಿ ಅವರು ಗೆಲುವು ಸಾಧಿಸಿದರು. ಕೌಶಲಾಭಿವೃದ್ಧಿ ಸಚಿವರಾಗಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಕ್ಷೇತ್ರ ಅಭಿವೃದ್ಧಿ ಮಾಡಲಿಲ್ಲ ಎಂದು ದೂರಿದರು.

    ಕಿತ್ತೂರಿನಲ್ಲಿ ಜನರು ಅನಂತ್‍ಕುಮಾರ್ ಹೆಗ್ಡೆ ಅವರ ಫೋಟೋಗೆ ಕಲ್ಲಿನಿಂದ ಹೊಡೆದಿದ್ದಾರೆ. ಅವರ ಮಾನಸಿಕ ಸ್ಥಿತಿ ಸರಿಯಿಲ್ಲ, ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ವಿರುದ್ಧ ನಾನು ಹೋರಾಟ ಮಾಡುತ್ತಿದ್ದೇನೆ. ನನಗೆ ಬೆಂಬಲ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

  • 18ರವರೆಗೆ ಮಂಡ್ಯದಲ್ಲಿ ನಿಖಿಲ್ ಎಲ್ಲಿದೀಯಪ್ಪ, ಬಳಿಕ ಆನಂದ್ ಎಲ್ಲಿದೀಯಪ್ಪ ಎಂದು ಹುಡುಕ್ತಾರೆ: ಅನಂತ್ ಕುಮಾರ್ ಹೆಗಡೆ

    18ರವರೆಗೆ ಮಂಡ್ಯದಲ್ಲಿ ನಿಖಿಲ್ ಎಲ್ಲಿದೀಯಪ್ಪ, ಬಳಿಕ ಆನಂದ್ ಎಲ್ಲಿದೀಯಪ್ಪ ಎಂದು ಹುಡುಕ್ತಾರೆ: ಅನಂತ್ ಕುಮಾರ್ ಹೆಗಡೆ

    ಕಾರವಾರ: 18ನೇ ತಾರೀಕಿನವರೆಗೆ ನಿಖಿಲ್ ಎಲ್ಲಿದೀಯಪ್ಪ ಎಂದು ಮಂಡ್ಯದಲ್ಲಿ ನಿಖಿಲ್‍ಗಾಗಿ ಹುಡುಕುತ್ತಾರೆ. ನಂತರ ಇಲ್ಲಿಗೆ ಬಂದು ಆನಂದ್ ಎಲ್ಲಿದೀಯಪ್ಪ ಎಂದು ಹುಡುಕುತ್ತಾರೆ. 18ನೇ ತಾರೀಕಿನ ನಂತರ ಕುಂಬಳಕಾಯಿ, ನಿಂಬೆಹಣ್ಣುಗಳು ಬರುತ್ತವೆ ಎಂದು ಕುಮಾರಸ್ವಾಮಿ, ರೇವಣ್ಣರವರನ್ನು ಕೇಂದ್ರ ಸಚಿವ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.

    ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆನಂದ್ ಆಸ್ನೋಟಿಕರ್ ನಾನು ಕುಲದೇವರು ಎಂದು ಒಂದು ಸಾರಿ ಹೇಳುತ್ತಾರೆ. ದೇಶಪಾಂಡೆ ಕುಲದೇವರು ಎಂದು ಹೇಳುತ್ತಾರೆ. ಅವರಿಗೆ ಎಷ್ಟು ಕುಲದೇವರಿದ್ದಾರೆ ಎಂದು ಗೊತ್ತಿಲ್ಲ ಎಂದರು.

    ಪ್ರತಿ ವರ್ಷ ಕುಲದೇವರು ಬದಲಾಗುತ್ತೆ. ಇಂತವರು ಇಂದು ಬಂದು ವೋಟನ್ನು ಕೇಳುತ್ತಾರೆ. ಗೋಸುಂಬೆ ಹೇಗೆ ಬದಲಾಯಿಸುತ್ತದೆ ಹಾಗೆ ಬದಲಾಯಿಸುತ್ತಾರೆ. ಇಂದು ಒಂದು ಪಾರ್ಟಿ, ನಾಳೆ ಒಂದು ಪಾರ್ಟಿ. ಮುಂದಿನ ವರ್ಷ ಸೋತರೂ ಈ ಪಕ್ಷದಲ್ಲಿ ಇರುವುದಿಲ್ಲ ಎಂದು ಆನಂದ್ ಆಸ್ನೋಟಿಕರ್‍ಗೆ ಟಾಂಗ್ ನೀಡಿದರು.

    ಬಿಜೆಪಿ ಮುಖಂಡರ ಮನೆಗಳಿಗೆ ಐಟಿ ದಾಳಿಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು ಎಲ್ಲೆಲ್ಲಿ ದಾಳಿ ಮಾಡಬೇಕೋ ಅಲ್ಲಲ್ಲಿ ದಾಳಿ ಮಾಡಲು ಅಧಿಕಾರವಿದೆ. ಇದಕ್ಕೆ ನಮ್ಮ ಸ್ವಾಗತ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಹುಡುಕಲಿ. ತಪ್ಪಿದ್ದರೇ ಯಾವುದನ್ನೂ ನಾವು ಸಮರ್ಥನೆ ಮಾಡಿಕೊಳ್ಳುವುದಿಲ್ಲ ಎಂದರು.

  • ಬಿಜೆಪಿಯವ್ರು ನಾಯಿಗಳಿದ್ದಂತೆ, ಅವ್ರು ಬೊಗಳ್ತಿದ್ರೂ ಅಸ್ನೋಟಿಕರ್ ಆನೆ ಮುನ್ನುಗುತ್ತೆ: ಆನಂದ್ ಗುಡುಗು

    ಬಿಜೆಪಿಯವ್ರು ನಾಯಿಗಳಿದ್ದಂತೆ, ಅವ್ರು ಬೊಗಳ್ತಿದ್ರೂ ಅಸ್ನೋಟಿಕರ್ ಆನೆ ಮುನ್ನುಗುತ್ತೆ: ಆನಂದ್ ಗುಡುಗು

    ಕಾರವಾರ: ಬಿಜೆಪಿಯವರು ಮರಿ ಪುಡಾರಿಗಳನ್ನು ಬಿಟ್ಟು ಬೊಗಳುವಂತಹ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಐಟಿಯವರನ್ನು ಬಿಟ್ಟು ನನ್ನ ಸಂಬಂಧಿಕರು ಹಾಗೂ ಸ್ನೇಹಿತರ ಮನೆಯ ಮೇಲೆ ದಾಳಿ ಮಾಡಿಸಿ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಾನು ಹೆದರುವುದಿಲ್ಲ. ಜನರ ಮುಂದೆ ಹೋಗುತ್ತೇನೆ ಎಂದು ಕಾರವಾರದಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗ್ಡೆ ತನ್ನ ತಲೆಯಲ್ಲಿರುವ ಎಲ್ಲಾ ಅಸ್ತ್ರವನ್ನು ನನ್ನ ಮೇಲೆ ಪ್ರಯೋಗ ಮಾಡುತ್ತಿದ್ದಾರೆ. ನನ್ನನ್ನು ಮನೆಯಲ್ಲಿ ಕೂರಿಸುವ ವಿಚಾರ ನಡೆಯುತ್ತಿದೆ. ಬಿಜೆಪಿಯವರ ಕುತಂತ್ರವಿದು. ಅವರ ಅಸ್ತ್ರಕ್ಕೆ ನಾನು ಹೆದರುವುದಿಲ್ಲ. ಆನೆ ಮುಂದೆ ಹೋಗುತ್ತಿರಬೇಕು ನಾಯಿ ಬೊಗಳುತ್ತಿರಬೇಕು. ಹಾಗೆ ನಾನು ಮುಂದೆ ಹೋಗುತ್ತಿದ್ದೇನೆ ಬಿಜೆಪಿ ನಾಯಿಗಳು ಬೊಗಳುತ್ತಿದೆ ಎಂದು ಕಾರವಾರದಲ್ಲಿ ಆನಂದ್ ಅಸ್ನೋಟಿಕರ್ ಬಿಜೆಪಿ ವಿರುದ್ಧ ಹರಿಹಾಯ್ದರು.

    ಶನಿವಾರ ಅಸ್ನೋಟಿಕರ್ ಸ್ನೇಹಿತನ ಮನೆ ಹಾಗೂ ಕಚೇರಿ ಮೇಲೆ ನಡೆದ ಐಟಿ ದಾಳಿಯನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ತಮ್ಮನ್ನು ಮನೆಯಲ್ಲಿ ಕೂರಿಸಲು ಬಿಜೆಪಿ ಎಲ್ಲಾ ಪ್ರಯತ್ನ ಮಾಡುತ್ತಿದೆ. ಅದು ನಡೆಯುವುದಿಲ್ಲ ಎಂದು ಹರಿಹಾಯ್ದರು. ಕೇಂದ್ರ ಸಚಿವರಾಗಿ ಜಿಲ್ಲೆಗೆ ಏನೂ ಕೆಲಸ ಮಾಡಿಲ್ಲ, ನಮ್ಮ ಜಿಲ್ಲೆಯ ಏಳು ಮೀನುಗಾರರು ಕಾಣೆಯಾಗಿ ನಾಲ್ಕು ತಿಂಗಳಾಯಿತು. ಇಲ್ಲಿವರೆಗೂ ಸಾಂತ್ವನ ಹೇಳಲು ಬರಲಿಲ್ಲ. ಐದು ವರ್ಷದಲ್ಲಿ ಜನರ ಮುಂದೆ ಮುಖ ತೋರಿಸಲು ಬರಲಿಲ್ಲ. ನಾಲ್ಕು ತಿಂಗಳಿರಬೇಕಾದ್ರೆ ಮುಖ ತೋರಿಸಲು ಬಂದಿದ್ದಾರೆ. ಅಸ್ನೋಟಿಕರ್‍ಗೆ ಹೆದರಿ ಈ ಬಾರಿ ಪ್ರಚಾರಕ್ಕೆ ಇಳಿದಿದ್ದಾರೆ ಎಂದರು.