Tag: Anand Ahuja

  • ಬೇಬಿ ಬಂಪ್ ಫೋಟೋ ಶೂಟ್ ನಲ್ಲಿ ಸೋನಂ ಮುದ್ದು ಮುದ್ದು

    ಬೇಬಿ ಬಂಪ್ ಫೋಟೋ ಶೂಟ್ ನಲ್ಲಿ ಸೋನಂ ಮುದ್ದು ಮುದ್ದು

    ಟಿ ಸೋನಂ ಕಪೂರ್ ತಾಯಿ ಆಗಲಿದ್ದಾರೆ ಎಂದು ಸೋನಂ ಅಪ್ಪ, ಖ್ಯಾತ ನಟ ಅನಿಲ್ ಕಪೂರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅದಕ್ಕೆ ತಕ್ಕಂತೆ ಒಂದಷ್ಟು ಫೋಟೋಗಳನ್ನೂ ಅವರು ಶೇರ್ ಮಾಡಿದ್ದರು. ಬೇಬಿ ಬಂಪ್ ಫೋಟೋಗಳು ಅಭಿಮಾನಿಗಳಿಗೆ ಸರಿ ಕಂಡಿರಲಿಲ್ಲ. ಹಾಗಾಗಿ ಅನಿಲ್ ಕಪೂರ್ ಮೇಲೆ ಅಭಿಮಾನಿಗಳು ಕೋಪ ಮಾಡಿಕೊಂಡಿದ್ದರು. ಒಬ್ಬ ತಂದೆಯಾಗಿ ನೀವು ಆ ರೀತಿಯ ಫೋಟೋಗಳನ್ನು ಹಂಚಿಕೊಳ್ಳಬಾರದಿತ್ತು ಎಂದಿದ್ದರು. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

    ಇದೀಗ ಸ್ವತಃ ಸೋನಂ ಕಪೂರ್ ಮತ್ತೊಂದು ಬೇಬಿ ಬಂಪ್ ಫೋಟೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಕೆಲವೇ ನಿಮಿಷಗಳಲ್ಲಿ ವೈರಲ್ ಕೂಡ ಆಗಿದೆ. ತಾಯಿ ಆಗುತ್ತಿರುವ ಸೋನಂಗೆ ಹಾರೈಕೆಯ ಮಹಾಪುರವೇ ಹರಿದು ಬರುತ್ತಿದೆ. ಕಲಾ ಕುಟುಂಬದಲ್ಲಿ ಜನ್ಮ ತಾಳುತ್ತಿರುವ ಆ ಮಗು ಕಲಾಸೇವೆಯನ್ನು ಮುಂದುವರೆಯಲಿ ಎಂದು ಕೆಲವರು ಆಶೀರ್ವದಿಸಿದ್ದಾರೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?

    ಈ ಹಿಂದೆ ಅನಿಲ್ ಕಪೂರ್ ಹಂಚಿಕೊಂಡಿದ್ದ ಫೋಟೋದಲ್ಲಿ ಸೋನಂ ಕಪ್ಪು ಬಿಕಿನಿ ಧರಿಸಿದ್ದರು. ಪತಿ ಆನಂದ್ ಅಹುಜಾ ಅವರ ಮಡಿಲಲ್ಲಿ ಸೋನಂ ಮಲಗಿದ್ದ ಫೋಟೋವನ್ನು ಹಾಕಿದ್ದರು. ಆದರೆ, ಫೋಟೋದಲ್ಲಿ ಸೋನಂ ಮಲಗಿದ್ದ ಕೋನ ಚೆನ್ನಾಗಿರಲಿಲ್ಲ ಎನ್ನುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಸೋನಂ ಮೊದಲ ಬಾರಿಗೆ ಬೇಬಿ ಬಂಪ್ ನೊಂದಿಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಸ್ಟೈಲಿಶ್ ಲುಕ್ ನಲ್ಲಿ ಇದ್ದಾರೆ. ಹಾಗಾಗಿ ಸೋನಂಗೆ ಪ್ರೀತಿಯ ಮಹಾಮಳೆಯೇ ಸುರಿದಿದೆ.

  • ಅನಿಲ್ ಕಪೂರ್ ಈ ಫೋಟೋ ಹಾಕಬಾರದಿತ್ತು: ಕಿವಿ ಹಿಂಡಿದ ಅಭಿಮಾನಿಗಳು

    ಅನಿಲ್ ಕಪೂರ್ ಈ ಫೋಟೋ ಹಾಕಬಾರದಿತ್ತು: ಕಿವಿ ಹಿಂಡಿದ ಅಭಿಮಾನಿಗಳು

    ಬಾಲಿವುಡ್ ನ ಹೆಸರಾಂತ ನಟ, ಎವರ್ ಯಂಗ್ ಅನಿಲ್ ಕಪೂರ್ ತಾತನಾಗುತ್ತಿದ್ದಾರೆ. ಈ ಸಂಭ್ರಮವನ್ನು ಹಂಚಿಕೊಳ್ಳುವುದಕ್ಕಾಗಿ ಅವರು ಪುತ್ರಿ ಮತ್ತು ಅಳಿಯನ ಫೋಟೋ ಬಳಸಿಕೊಂಡಿದ್ದಾರೆ. ಆ ಫೋಟೋ ಇದೀಗ ಅಭಿಮಾನಿಗಳ ಕಂಗೆಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ : ರಾಜಕೀಯ ದಾಳವಾದ ಪುನೀತ್ ನಟನೆಯ ‘ಜೇಮ್ಸ್’ ಚಿತ್ರ

    ಅನಿಲ್ ಕಪೂರ್ ಅವರ ಪುತ್ರಿ, ನಟಿ ಸೋನಮ್ ಕಪೂರ್ ಮತ್ತು ಅಳಿಯ, ಉದ್ಯಮಿ ಆನಂದ್ ಆಹೂಜಾ ಬೇಬಿ ಬಂಪ್ ರೀತಿಯ ಫೋಟೋಗಳನ್ನು ಶೂಟ್ ಮಾಡಿಸಿಕೊಂಡಿದ್ದಾರೆ. ಅವು ತೀರಾ ಖಾಸಗಿ ಕ್ಷಣಗಳಂತೆ ಕಾಣುವ ಭಂಗಿಗಳಲ್ಲಿವೆ. ಹಾಗೂ ಆ ಫೋಟೋದಲ್ಲಿ ನಟಿ ಸೋನಮ್ ಕಪೂರ್ ಮಲಗಿದ ರೀತಿಯ ಸರಿ ಕಂಡಿಲ್ಲ. ಇವೆಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಅಭಿಮಾನಿಗಳು ಅನಿಲ್ ಕಪೂರ್ ಅವರ ಕಿವಿಹಿಂಡಿದ್ದಾರೆ. ಇದನ್ನೂ ಓದಿ : ಸ್ವಂತ ಜಮೀನು ಮಾರಿ ಆಸ್ಪತ್ರೆ ಕಟ್ಟಿಸಲು ಮುಂದಾದ ಹಿರಿಯ ನಟಿ ಲೀಲಾವತಿ: ಬಹುಪರಾಕ್ ಹೇಳಿದ ಕನ್ನಡ ಜನತೆ

    ‘ತಾತಾ ಆಗುವುದು ಸಂಭ್ರಮದ ವಿಚಾರ. ಆದರೆ, ನೀವು ಆ ರೀತಿಯ ಫೋಟೋಗಳನ್ನು ಹಾಕಬಾರದಿತ್ತು. ಮುಂದೆ ಮತ್ತೆ ಈ ತಪ್ಪು ಮಾಡದಿರಿ’ ಎಂದು ಕೆಲ ಅಭಿಮಾನಿಗಳು ಪ್ರತಿಕ್ರಿಯೆ ಮಾಡಿದ್ದರೆ, ಇನ್ನೂ ಕೆಲ ಅಭಿಮಾನಿಗಳು ಸಿನಿಮಾ ಮತ್ತು ಬದುಕು ಎರಡೂ ಬೇರೆ ಬೇರೆ. ಇಲ್ಲಿ ಮಿಕ್ಸ್ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ : ಇಡೀ ಥಿಯೇಟರ್ ನಲ್ಲಿ ಒಬ್ಬರೇ ಕೂತು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಿಸಿದ ಡೈಮಂಡ್ ರವಿ

    ಅನಿಲ್ ಕಪೂರ್ ನಾಲ್ಕು ಫೋಟೋಗಳನ್ನು ಹಂಚಿಕೊಂಡು ‘ನಾನು ನನ್ನ ಬದುಕಿನ ಅತ್ಯಂತ ರೋಚಕ ದಿನಕ್ಕಾಗಿ ಕಾದಿದ್ದೇನೆ. ತಾತನಾಗುತ್ತಿದ್ದೇನೆ. ಬದುಕು ಹೀಗೆಯೇ ಇರಲಾರದು. ಇಂಥದ್ದೊಂದು ಅವಕಾಶ ನೀಡಿದ್ದಕ್ಕೆ ಅಳಿಯ ಮತ್ತು ಮಗಳಿಗೆ ಧನ್ಯವಾದಗಳು’ ಎಂದು ಟ್ವಿಟರ್ ನಲ್ಲಿ ಅನಿಲ್ ಕಪೂರ್ ಬರೆದುಕೊಂಡಿದ್ದಾರೆ.

  • ಪತಿ ಜೊತೆಗಿನ ಲಿಪ್‍ಲಾಕ್ ಫೋಟೋ ಶೇರ್ ಮಾಡಿದ ಸೋನಂ ಕಪೂರ್

    ಪತಿ ಜೊತೆಗಿನ ಲಿಪ್‍ಲಾಕ್ ಫೋಟೋ ಶೇರ್ ಮಾಡಿದ ಸೋನಂ ಕಪೂರ್

    ಮುಂಬೈ: ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಪತಿ ಆನಂದ್ ಅಹುಜಾರವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ವಿಶೇಷ ದಿನದಂದು ಸೋನಂ ಕಪೂರ್ ಪತಿ ಜೊತೆಗಿರುವ ಕೆಲವು ರೋಮ್ಯಾಂಟಿಕ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಆನಂದ್ ಅಹುಜಾರಿಗೆ 38ನೇ ಹುಟ್ಟುಹಬ್ಬದ ಸಂಭ್ರಮ. ಪತಿಯ ಬರ್ತ್‍ಡೇಯನ್ನು ಸೆಲೆಬ್ರೆಟ್ ಮಾಡುವುದರ ಜೊತೆಗೆ ಕೆಲವೊಂದು ಹಳೆಯ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸೋನಂ ಕಪೂರ್ ದಿನವನ್ನು ಮತ್ತಷ್ಟು ಸ್ಪೆಷಲ್‍ಗೊಳಿಸಿದ್ದಾರೆ. ಒಂದು ಫೋಟೋದಲ್ಲಿ ಸೋನಂ, ಆನಂದ್ ಅಹುಜಾ ಜೊತೆ ಐಫೆಲ್ ಟವರ್ ಮುಂದೆ ಮಿಂಚಿದ್ದರೆ, ಮತ್ತೊಂದು ಫೋಟೋದಲ್ಲಿ ಪತಿ ಜೊತೆಗೆ ಲಿಪ್‍ಲಾಕ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

    ಪತಿಯ ಬರ್ತ್‍ಡೇ ದಿನದಂದು ಸೋನಂ ಕಪೂರ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕ್ಯೂಟ್ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ನನಗೆ ದೊರೆತ ಶ್ರೇಷ್ಠ ಉಡುಗೊರೆ ಎಂದು ಹೇಳಿಕೊಂಡಿದ್ದಾರೆ. ಫೋಟೋದಲ್ಲಿ ಹಿಂದಿನಿಂದ ಆನಂದ್ ಅಹುಜಾರನ್ನು ಸೋನಂ ಬಿಗಿದಪ್ಪಿದ್ದು, ನನ್ನ ಜೀವನದ ಬೆಳಕಿಗೆ ಹುಟ್ಟು ಹಬ್ಬದ ಶುಭಾಶಯಗಳು. ನನಗೆ ಇಡೀ ಜಗತ್ತನ್ನೇ ಉಡುಗೊರೆಯಾಗಿ ನೀಡಿದ ಪ್ರೀತಿಯ ಪಾಲುದಾರ ಮತ್ತು ಸ್ನೇಹಿತ. ಯು ಆರ್ ಮೈ ಬೇಬಿ ಎಂದು ವಿಶ್ ಮಾಡಿದ್ದಾರೆ. ಇದನ್ನೂ ಓದಿ:ದೇವರ ಮನೆಯಲ್ಲಿ ನಟಸಾರ್ವಭೌಮ ನಟಿಗೆ ಪೂಜೆ – ಫೋಟೋ ವೈರಲ್

     

    View this post on Instagram

     

    A post shared by Sonam K Ahuja (@sonamkapoor)

  • ಶೂ ಲೇಸ್ ಕಟ್ಟಿಕೊಳ್ಳದ ಸೋನಂ ಈಗ ಗರ್ಭಿಣಿ?

    ಶೂ ಲೇಸ್ ಕಟ್ಟಿಕೊಳ್ಳದ ಸೋನಂ ಈಗ ಗರ್ಭಿಣಿ?

    ಮುಂಬೈ: ಬಾಲಿವುಡ್ ನಟಿ ಸೋನಂ ಕಪೂರ್ ಕಳೆದ ವರ್ಷ ಉದ್ಯಮಿ ಆನಂದ್ ಅಹುಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಸೋನಂ ತಮ್ಮ ಪತಿ ಆನಂದ್ ಜೊತೆಯಿರುವ ಫೋಟೋ ನೋಡಿ ನಟಿ ಗರ್ಭಿಣಿ ಆಗಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

    ಇತ್ತೀಚೆಗೆ ಸೋನಂ ಕಪೂರ್ ತಮ್ಮ ಪತಿ ಜೊತೆ ಲಾಂಚಿಂಗ್ ಇವೆಂಟ್‍ನಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿನ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋ ನೋಡಿ ಅಭಿಮಾನಿಗಳು ಸೋನಂ ಗರ್ಭಿಣಿ ಆಗಿದ್ದಾರೆ ಎಂದುಕೊಂಡಿದ್ದಾರೆ.

    ಸೋನಂ ಕಾರ್ಯಕ್ರಮಕ್ಕೆ ಹಳದಿ ಬಣ್ಣದ ಉಡುಪು ಹಾಕಿ ಅದಕ್ಕೆ ಮ್ಯಾಚಿಂಗ್ ಶೂ ಹಾಕಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸೋನಂ ಅವರ ಶೂ ಲೇಸ್ ಓಪನ್ ಆಗಿದೆ. ಆಗ ಸೋನಂ ಪತಿ ಆನಂದ್ ಕೆಳಗೆ ಕುಳಿತುಕೊಂಡು ಸೋನಂ ಅವರ ಶೂ ಲೇಸ್ ಕಟ್ಟಿದ್ದಾರೆ.

    ಸೋನಂ ಅವರು ಶೂ ಲೇಸ್ ಕಟ್ಟಿಕೊಳ್ಳದ ಕಾರಣ ಅವರು ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಫೋಟೋ ನೋಡಿ ಅಭಿಮಾನಿಯೊಬ್ಬರು ಸೋನಂ ಪ್ರೆಗ್ನೆಂಟಾ? ಎಂದು ಕಮೆಂಟ್ ಮಾಡಿದರೆ, ಮತ್ತೊಬ್ಬರು ಬೇಬಿ ಬಂಪ್ ಕಾಣಿಸುತ್ತಿದೆ. ಆದರೆ ತನ್ನ ಸೋನಂ ಡ್ರೆಸ್‍ನಿಂದ ಅದನ್ನು ಬಚ್ಚಿಡುತ್ತಿದ್ದಾರೆ ಎಂದು ಕಮೆಂಟ್ ಹಾಕಿದ್ದಾರೆ.

    ಸೋನಂ ಕಪೂರ್ ಕಳೆದ ವರ್ಷ ಮೇ 8 ರಂದು ಆನಂದ್ ಅಹುಜಾ ಜೊತೆ ಸಿಖ್ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಸೋನಂ ಮದುವೆಗೆ ಕರೀನಾ ಕಪೂರ್, ಸೈಫ್ ಅಲಿ ಖಾನ್, ಅಮಿತಾಬ್ ಬಚ್ಚನ್, ಕರಣ್ ಜೋಹರ್, ಜಾನ್ವಿ ಕಪೂರ್, ಬೋನಿ ಕಪೂರ್ ಸೇರಿದಂತೆ ಬಾಲಿವುಡ್ ತಾರಾಗಣವೇ ಭಾಗವಹಿಸಿತ್ತು.

  • ಸ್ವಿಮಿಂಗ್ ಪೂಲ್ ಬಳಿಯ ಸೋನಂ-ಅಹುಜಾ ಕಿಸ್ಸಿಂಗ್ ಫೋಟೋ ವೈರಲ್

    ಸ್ವಿಮಿಂಗ್ ಪೂಲ್ ಬಳಿಯ ಸೋನಂ-ಅಹುಜಾ ಕಿಸ್ಸಿಂಗ್ ಫೋಟೋ ವೈರಲ್

    ಮುಂಬೈ: ಬಾಲಿವುಡ್ ಚೆಲುವೆ ಸೋನಂ ಕಪೂರ್ ಮೇ ತಿಂಗಳಲ್ಲಿ ಉದ್ಯಮಿ ಆನಂದ್ ಅಹುಜಾ ಜೊತೆ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಸದ್ಯ ಈ ಜೋಡಿ ವಿದೇಶ ಪ್ರವಾಸದಲ್ಲಿದ್ದು, ಇವರಿಬ್ಬರ ಸ್ವಿಮಿಂಗ್ ಪೂಲ್ ಬಳಿಯ ಕಿಸ್ಸಿಂಗ್ ಫೋಟೋ ವೈರಲ್ ಆಗಿದೆ.

    ವಿದೇಶ ಪ್ರವಾಸದಲ್ಲಿರುವ ಸೋನಂ ಮತ್ತು ಆನಂದ್ ತಮ್ಮ ಇನ್ಸ್ ಟಾಗ್ರಾಂ ಮತ್ತು ಟ್ವಿಟ್ಟರ್ ನಲ್ಲಿ ರೊಮ್ಯಾಂಟಿಕ್ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಇಟಲಿಯಲ್ಲಿರುವ ಅಹುಜಾ ದಂಪತಿ ಕಿಸ್ಸಿಂಗ್ ಫೋಟೋ ನೋಡಿದ ನೆಟ್ಟಿಗರು ಫುಲ್ ಥ್ರಿಲ್‍ಗೆ ಒಳಗಾಗಿದ್ದಾರೆ. ಕೆಲವರು ಲಿವ್ಲಿ ಅಂತಾ ಬರೆದ್ರೆ, ಮತ್ತೆ ಕೆಲವರು ರಿಯಲ್ ಲವ್ ಬರ್ಡ್ಸ್  ಅಂತಾ ಕಮೆಂಟ್ ಹಾಕಿದ್ದಾರೆ. ಇದನ್ನೂ ಓದಿ: ಬೆಡ್‍ರೂಮಿಗೆ ಹೋಗೋ ಮೊದಲು ಸೋನಂಗೆ ಷರತ್ತು ಹಾಕಿದ ಆನಂದ್!

    ಇತ್ತ ರಜಾದಿನಗಳನ್ನು ಕಳೆಯಲು ದೇಸಿ ಗರ್ಲ್ ಪ್ರಿಯಾಂಕ ಚೋಪ್ರ ಮತ್ತು ಗೆಳೆಯ ನಿಕ್ ಜೋನ್ಸ್ ಇಟಲಿ ಪ್ರವಾಸದಲ್ಲಿದ್ದಾರೆ. ಇಟಲಿಯಲ್ಲಿ ಒಂದಾಗಿರುವ ಸ್ಟಾರ್ ಜೋಡಿಗಳು ಮೋಜು ಮಸ್ತಿಯಿಂದ ರಜಾ ದಿನ ಕಳೆಯುತ್ತಿದ್ದಾರೆ. ಇದನ್ನೂ ಓದಿ: ಒಂದೇ ತಿಂಗಳಲ್ಲಿ ಸೋನಂ ಕಪೂರ್ ಗೆ ಎರಡು ಮದ್ವೆ!

    ಮೇ ಮೊದಲ ವಾರದಲ್ಲಿ ಸೋನಂ ಮತ್ತು ಆನಂದ್ ಸಿಖ್ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಸೋನಂ ಮದುವೆಗೆ ಕರೀನಾ ಕಪೂರ್, ಸೈಫ್ ಅಲಿ ಖಾನ್, ಅಮಿತಾಬ್ ಬಚ್ಚನ್, ಕರಣ್ ಜೋಹರ್, ಜಾನ್ವಿ ಕಪೂರ್, ಬೋನಿ ಕಪೂರ್ ಸೇರಿದಂತೆ ಬಾಲಿವುಡ್ ತಾರಾಗಣವೇ ಭಾಗವಹಿಸಿತ್ತು. ಸೋನಂ ಮದುವೆ ಬಳಿಕ ವೀರೇ ದಿ ವೆಡ್ಡಿಂಗ್, ಸಂಜು ಚಿತ್ರ ತೆರೆಕಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.instagram.com/p/BoKEI4FB9pZ/?taken-by=sonamkapoor.anandahuja

  • ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‍ಗೊಳಗಾಯಿತು ಸೋನಮ್ ಕಪೂರ್ ಮಂಗಳ ಸೂತ್ರ

    ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‍ಗೊಳಗಾಯಿತು ಸೋನಮ್ ಕಪೂರ್ ಮಂಗಳ ಸೂತ್ರ

    ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಜನರು ಮತ್ತು ಹೇಳಿಕೆಗಳು ಟ್ರೋಲ್‍ಗೊಳಗಾಗುತ್ತವೆ. ಇತ್ತೀಚೆಗೆ ಸಾಂಸರಿಕ ಜೀವನಕ್ಕೆ ಕಾಲಿರಿಸಿದ ನಟಿ ಸೋನಮ್ ಕಪೂರ್ ಪತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿತ್ತು. ಈಗ ಸೋನಮ್ ಕೈಗೆ ಕಟ್ಟಿಕೊಂಡಿರುವ ತಾಳಿಯ (ಮಂಗಳ ಸೂತ್ರ) ಫೋಟೋಗಳು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿವೆ.

    ಮದುವೆ ಬಳಿಕ ಸೋನಮ್ ‘ವೀರೆ ದಿ ವೆಡ್ಡಿಂಗ್’ ಚಿತ್ರದ ಪ್ರಮೋಶನ್ ದಲ್ಲಿ ಬ್ಯೂಸಿಯಾಗಿದ್ದಾರೆ. ಭಾರತೀಯ ಮಹಿಳೆಯರು ಮಾಂಗಲ್ಯವನ್ನು ಕೊರಳಿಗೆ ಧರಿಸುವುದು ನಮ್ಮ ಸಂಸ್ಕೃತಿ. ಆದ್ರೆ ಸಿನಿಮಾ ಪ್ರಮೋಶನ್ ನಲ್ಲಿ ಕಾಣಿಸಿಕೊಂಡಿದ್ದ ಸೋನಮ್ ತಮ್ಮ ಮಾಂಗಲ್ಯವನ್ನು ಬ್ರೆಸಲೇಟ್ ರೀತಿಯಲ್ಲಿ ಕೈಗೆ ಕೊಟ್ಟಿಕೊಂಡಿದ್ರು. ಸದ್ಯ ಈ ಫೋಟೋಗಳು ವೈರಲ್ ಆಗಿದ್ದು ಸೋನಮ್ ನಡೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

    ಮಹಿಳೆಗೆ ಕಡ್ಡಾಯವಾಗಿ ಮಾಂಗಲ್ಯ ಧರಿಸಬೇಕೆಂಬ ನಿಯಮಗಳಿಲ್ಲ. ಆದ್ರೆ ದೇಶದಲ್ಲಿ ಪತಿ-ಪತ್ನಿಯ ನಡುವಿನ ಪ್ರೀತಿಯ ಸಂಕೇತವಾಗಿ ಮಾಂಗಲ್ಯ ಧರಿಸುವುದು ಸಂಪ್ರದಾಯ. ಮಹಿಳೆಯ ಎದೆಯ ನೇರ ಭಾಗಕ್ಕೆ ಮಾಂಗಲ್ಯ ಧರಿಸಿದ್ರೆ ಪತಿ ತನ್ನ ಹೃದಯದ ಹತ್ತಿರದಲ್ಲಿಯೇ ಇದ್ದಾನೆ ಎಂದರ್ಥ. ಆದ್ರೆ ಬಾಲಿವುಡ್ ಸ್ಟಾರ್ ಗಳು ಫ್ಯಾಶನ್ ಹೆಸರಲ್ಲಿ ಭಾರತೀಯ ಸಂಸ್ಕೃತಿಯನ್ನು ಪಾಶ್ಚತ್ಯಾರ ಶೈಲಿಯೊಂದಿಗೆ ಕಲಬೆರಕೆ ಮಾಡ್ತಿದ್ದಾರೆ ಎಂದು ಟ್ವಿಟ್ಟರ್‍ನಲ್ಲಿ ಹಲವರು ಟೀಕಿಸಿದ್ದಾರೆ.

    ಅನಿಲ್ ಕಪೂರ್ ಮುದ್ದಿನ ಪುತ್ರಿ ಸೋನಮ್ ತಮ್ಮ ಬಹುದಿನಗಳ ಗೆಳೆಯ ಉದ್ಯಮಿಯೊಂದಿಗೆ ಆನಂದ್ ಅಹುಜಾ ಜೊತೆ ಮೇ 8ರಂದು ವೈವಾಹಿಕ ಬಂಧನಕ್ಕೆ ಒಳಗಾಗಿದ್ದರು.

  • ಮಗಳ ಮದ್ವೆಯಲ್ಲಿ ಅಳಿಯನ ಫೋಟೋದೊಂದಿಗೆ ಅನಿಲ್ ಕಪೂರ್ ಟ್ರೋಲ್

    ಮಗಳ ಮದ್ವೆಯಲ್ಲಿ ಅಳಿಯನ ಫೋಟೋದೊಂದಿಗೆ ಅನಿಲ್ ಕಪೂರ್ ಟ್ರೋಲ್

    ಮುಂಬೈ: ಬಾಲಿವುಡ್ ಬೆಡಗಿ ಸೋನಮ್ ಕಪೂರ್ ತನ್ನ ಬಹುದಿನದ ಗೆಳೆಯ ಹಾಗೂ ದೆಹಲಿಯ ಉದ್ಯಮಿ ಆನಂದ್ ಅಹುಜಾ ಜೊತೆ ಮಂಗಳವಾರ ವಿವಾಹವಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೋನಮ್ ತಂದೆ ಅನಿಲ್ ಅಪೂರ್ ವರನಿಗಿಂತಲೂ ತರುಣನಂತೆ ಕಾಣಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ.

    ಅನಿಲ್ ಕಪೂರ್ 60 ವರ್ಷದವರಾಗಿದ್ದು, 35 ವರ್ಷದ ವರನಿಗಿಂತ ಹೆಚ್ಚು ತರುಣನಂತೆ ಕಾಣಿಸಿಕೊಂಡಿದ್ದಾರೆ. ಮದುವೆ ಮನೆಯಲ್ಲಿ ಬಿಳಿ ಶೇರ್ವಾನಿ ಧರಿಸಿ ಅದರ ಮೇಲೊಂದು ಹಸಿರು ಬಣ್ಣದ ರೂಬಿ ನೆಕ್ಲೆಸ್ ಹಾಕಿಕೊಂಡು ಅನಿಲ್ ಕಪೂರ್ ಎಲ್ಲರ ಗಮನ ಸೆಳೆದಿದ್ದರು.

    ಸೋನಮ್ ಕಪೂರ್, ರಿಯಾ ಕಪೂರ್ ಹಾಗೂ ಹರ್ಷವರ್ಧನ್ ಕಪೂರ್ ತಂದೆಯಾಗಿರುವ ಅನಿಲ್ ಕಪೂರ್ ಮಗಳ ಮದುವೆಯ ಪ್ರತಿಕ್ಷಣವನ್ನು ಸಂಭ್ರಮಿಸಿದರು. ಮದುವೆಯ ವೇದಿಕೆ ಮೇಲೆ ಮಕ್ಕಳೊಂದಿಗೆ ನೃತ್ಯ ಮಾಡಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.

    ಅನಿಲ್ ಕಪೂರ್ ತಮ್ಮ ಇಳಿ ವಯಸ್ಸಿನಲ್ಲಿಯೂ ಸಕಾರಾತ್ಮಕ ಜೀವನ ಶೈಲಿ, ಆರೋಗ್ಯಕರ ಆಹಾರ ಸೇವನೆ ಹಾಗೂ ನಿಯಮಿತ ವ್ಯಾಯಾಮದಿಂದ ಅನಿಲ್ ಕಪೂರ್ ತರುಣರಂತೆ ಈಗಲೂ ಕಾಣುತ್ತಾರೆ.

    ಸಲ್ಮಾನ್ ಖಾನ್, ಶಾರುಖ್ ಖಾನ್, ಕತ್ರಿನಾ ಕೈಫ್, ಕರೀನಾ ಕಪೂರ್, ಕಂಗನಾ ರಾವತ್, ಸೈಫ್ ಅಲಿಖಾನ್, ಕರಣ್ ಜೋಹರ್ ಮತ್ತು ಅಲಿಯಾ ಭಟ್ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ನವದಂಪತಿಗೆ ಶುಭಕೋರಿದ್ದಾರೆ.

  • ಸೋನಮ್ ಮದ್ವೆಗೆ ಬಂದ ಅತಿಥಿಗಳಿಗೆ ಸಿಕ್ತು ವಿಚಿತ್ರ ಗಿಫ್ಟ್!

    ಸೋನಮ್ ಮದ್ವೆಗೆ ಬಂದ ಅತಿಥಿಗಳಿಗೆ ಸಿಕ್ತು ವಿಚಿತ್ರ ಗಿಫ್ಟ್!

    ಮುಂಬೈ: ಬಾಲಿವುಡ್ ಬೆಡಗಿ ಸೋನಮ್ ಕಪೂರ್ ತನ್ನ ಗೆಳೆಯ ಆನಂದ್ ಅಹುಜಾ ಜೊತೆ ಮಂಗಳವಾರ ವಿವಾಹವಾಗಿದ್ದಾರೆ.

    ಸೋನಮ್ ಮದುವೆಗೆ ಮುಂಚೆ ಮೆಹಂದಿ, ಅರಿಶಿಣ ಶಾಸ್ತ್ರ ಮತ್ತು ಸಂಗೀತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಎಲ್ಲಾ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದ್ದು, ಮೆಹಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಒಂದು ವಿಶೇಷವಾದ ಉಡುಗೊರೆ ನೀಡಲಾಗಿದೆ.

    ಹೌದು, ಸೋನಮ್ ಮೆಹಂದಿ ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳಿಗೆಲ್ಲ ಒಂದು ಜೋಡಿ ಶೂ ನೀಡಲಾಗಿದೆ. ಆ ಶೂ ಅನ್ನು ವಿಶೇಷವಾಗಿ ಕೈ ಮಗ್ಗದಲ್ಲಿ ವಿನ್ಯಾಸಗೊಳಿಸಲಾಗಿತ್ತು. ಬಿಳಿ ಬಣ್ಣದಿಂದ ಅಲಂಕರಿಸಿ ಅದಕ್ಕೆ ಮಿರರ್ ಮತ್ತು ಸೀಕ್ವಿನ್(ಮಿನುಗು ಬಟ್ಟು) ಇತ್ಯಾದಿ ಅಲಂಕಾರಿಕ ವಸ್ತುಗಳನ್ನು ಹಾಕಿ ಶೂ ಅನ್ನು ತಯಾರಿಸಲಾಗಿತ್ತು. ಈ ರೀತಿಯ ವಿಶೇಷವಾಗಿ ತಯಾರಿಸಿದ್ದ ಶೂ ಅನ್ನು ಮೆಹಂದಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದವರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಬೆಡಗಿ ಸೋನಮ್ ಕಪೂರ್

    ಸೋನಮ್ ಮೇ 8ರಂದು ಬಾಂದ್ರಾದಲ್ಲಿರುವ ತನ್ನ ಆಂಟಿಯ ಬಂಗಲೆಯಲ್ಲಿ ಸಿಖ್ ಸಂಪ್ರದಾಯದಂತೆ ಮದುವೆಯಾಗಿದ್ದು, ತಮ್ಮ ಬಹುದಿನಗಳ ಗೆಳೆಯ ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಸೋನಮ್ ಕಪೂರ್ ಮದುವೆಗೆ ಬಾಲಿವುಡ್‍ನ ಗಣ್ಯಾತಿಗಣ್ಯರು ಹಾಜರಾಗಿದ್ದರು. ಅಮಿತಾಬ್ ಬಚ್ಚನ್, ಅವರ ಮಕ್ಕಳು ಅಭಿಷೇಕ್, ಅಮೀರ್ ಖಾನ್, ಜಾಕ್ವೇಲಿನ್ ಫರ್ನಾಂಡಿಸ್, ರಾಣಿ ಮುಖರ್ಜಿ, ಸ್ವರ ಭಾಸ್ಕರ್ ಆಗಮಿಸಿದ್ದರು.

    ಸೋನಮ್ ಅವರ ಸೋದರ ಸಂಬಂಧಿಗಳಾದ ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ತನ್ನ ತಂದೆ ಬೋನಿ ಕಪೂರ್ ಜೊತೆ ಮದುವೆಯಲ್ಲಿ ಪಾಲ್ಗೊಂಡಿದ್ದರು. ಕರೀನಾ ಕಪೂರ್ ತನ್ನ ಪತಿ ಸೈಫ್ ಅಲಿ ಖಾನ್, ಮಗ ತೈಮೂರ್ ಹಾಗೂ ಸಹೋದರಿ ಕರಿಷ್ಮ ಕಪೂರ್ ಜೊತೆ ಕುಟುಂಬ ಸಮೇತರಾಗಿ ಆಗಮಿಸಿದ್ದು, ಎಲ್ಲರು ನವ ಜೋಡಿಗೆ ಶುಭಾ ಹಾರೈಸಿದ್ದಾರೆ. ಇದನ್ನೂ ಓದಿ: ಬೆಡ್‍ರೂಮಿಗೆ ಹೋಗೋ ಮೊದಲು ಸೋನಂಗೆ ಷರತ್ತು ಹಾಕಿದ ಆನಂದ್!

    ಮಂಗಳವಾರ ಬೆಳಗ್ಗೆ ಮದುವೆಯಾದ ನಂತರ ಸಂಜೆ ಲೀಲಾ ಹೋಟೆಲ್ ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಆರತಕ್ಷತೆಯಲ್ಲಿ ಕತ್ರಿನಾ ಕೈಫ್, ಐಶ್ವರ್ಯ ರೈ ಬಚ್ಚನ್, ಅಲಿಯಾ ಭಟ್ ಹಾಗೂ ಹಲವು ಸಿನಿಮಾ ಗಣ್ಯರು ಮಂದಿ ಪಾಲ್ಗೊಂಡಿದ್ದರು.

    ಸದ್ಯಕ್ಕೆ ಸೋನಮ್ `ವೀರೆ ದಿ ವೆಡ್ಡಿಂಗ್’ ಸಿನಿಮಾದಲ್ಲಿ ಕರೀನಾ ಕಪೂರ್ ಜೊತೆ ನಟಿಸುತ್ತಿದ್ದಾರೆ.

  • ಬೆಡ್‍ರೂಮಿಗೆ ಹೋಗೋ ಮೊದಲು ಸೋನಂಗೆ ಷರತ್ತು ಹಾಕಿದ ಆನಂದ್!

    ಬೆಡ್‍ರೂಮಿಗೆ ಹೋಗೋ ಮೊದಲು ಸೋನಂಗೆ ಷರತ್ತು ಹಾಕಿದ ಆನಂದ್!

    ಮುಂಬೈ: ಬಾಲಿವುಡ್ ಬೆಡಗಿ ಸೋನಂ ಕಪೂರ್ ತನ್ನ ಗೆಳೆಯ ಆನಂದ್ ಅಹುಜಾ ಜೊತೆ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋನಂ ಬಾಂದ್ರಾದಲ್ಲಿರುವ ತನ್ನ ಆಂಟಿಯ ಬಂಗಲೆಯಲ್ಲಿ ಸಿಖ್ ಸಂಪ್ರದಾಯದಂತೆ ಆನಂದ್ ಅಹುಜಾ ಅವರನ್ನು ಮಂಗಳವಾರ ಬೆಳಗ್ಗೆ ಮದುವೆಯಾಗಿದ್ದಾರೆ.

    ಮಂಗಳವಾರ ಇಬ್ಬರ ಮದುವೆ ನಡೆದಿದ್ದರೂ ಭಾವಿ ಪತ್ನಿಗೆ ಮದುವೆಗೂ ಮೊದಲೇ ಆನಂದ್ ಷರತ್ತು ವಿಧಿಸಿದ್ದಾರೆ.

    ಹೌದು, ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದ ಸಂದರ್ಶನದಲ್ಲಿ ಮಾತನಾಡಿದ ಸೋನಂ, ಆನಂದ್ ಬೆಡ್ ರೂಮ್‍ಗೆ ಹೋಗುವ ಮೊದಲು ಒಂದು ಷರತ್ತು ಹಾಕಿದ್ದಾರೆ. ಏನೇ ಆದರೂ ಆ ಷರತ್ತು ಪಾಲಿಸಬೇಕೆಂದು ಹೇಳಿದ್ದಾರೆ ಎಂದು ತಿಳಿಸಿದ್ದರು.

    ಬೆಡ್ ರೂಮ್‍ಗೆ ಹೋಗುವ ಮೊದಲು ಎಂದರೆ ಮಲಗಲು ಹೋಗುವಾಗ ನಾವಿಬ್ಬರು ಮೊಬೈಲ್ ಬಳಸಬಾರದು ಎಂದು ಷರತ್ತು ಹಾಕಿದ್ದಾರೆ. ರೂಮಿನಲ್ಲಿ ಮಲಗಲು ಹೋಗುವಾಗ ಆನಂದ್‍ಗೆ ನಾವಿಬ್ಬರೇ ಇರುವುದು ಇಷ್ಟ. ನಮ್ಮ ಮಧ್ಯೆ ಮೊಬೈಲ್ ಇರುವುದು ಅವರಿಗೆ ಇಷ್ಟವಿಲ್ಲ ಎಂದು ಸೋನಂ ಹೇಳಿದ್ದಾರೆ.

    ನಾನು ಪ್ರತಿ ದಿನವೂ ತಮ್ಮ ಸ್ಟೇಟಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುತ್ತೇನೆ. ಈಗ ಪತಿ ಹೇಳಿದ ಷರತ್ತನ್ನು ಪಾಲಿಸುವುದು ನನಗೆ ಸ್ವಲ್ಪ ಕಷ್ಟವಾದರೂ ಪಾಲಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಎಲ್ಲ ದಂಪತಿಗಳು ನಾವು ಅಳವಡಿಸಿಕೊಂಡಿರುವ ಈ ನಿಯಮ ಪಾಲಿಸಿ ಎಂದು ಸೋನಂ ಸಲಹೆ ಕೂಡ ನೀಡಿದ್ದಾರೆ.

    ಮದುವೆಯಾಗಿರುವ ಸೋನಂ ಕ್ಯಾನೆ ಫಿಲ್ಮ್ ಫೆಸ್ಟಿವಲ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ ಅಕ್ಟೋಬರ್ ವರೆಗೂ ಸೋನಂ ಹಾಗೂ ಆನಂದ್ ಅವರಿಗೆ ಹನಿಮೂನ್‍ಗೆ ಹೋಗಲು ಸಮಯವಲ್ಲ ಎಂದು ವರದಿಯಾಗಿದೆ.

    ಆನಂದ್ ತನ್ನ ಪತ್ನಿ ಸೋನಂ ಜೊತೆ ಕ್ಯಾನೆ ಫಿಲ್ಮಂ ಫೆಸ್ಟಿವಲ್‍ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಸೋನಂ ಅಕ್ಟೋಬರ್‍ವರೆಗೂ ಬ್ಯುಸಿಯಿದ್ದು, ಈ ಜೋಡಿ ತಮ್ಮ ಹನಿಮೂನ್‍ಗೆ ನವೆಂಬರ್ ನಲ್ಲಿ ಹೋಗುತ್ತಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಬೆಡಗಿ ಸೋನಮ್ ಕಪೂರ್

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಬೆಡಗಿ ಸೋನಮ್ ಕಪೂರ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಬೆಡಗಿ ಸೋನಮ್ ಕಪೂರ್

    ಮುಂಬೈ: ಬಾಲಿವುಡ್ ಮೋಸ್ಟ್ ಹ್ಯಾಂಡ್‍ಸಮ್ ಸ್ಟಾರ್ ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಇಂದು ಬಹು ದಿನಗಳ ಗೆಳೆಯ ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಸೋನಮ್ ಬಾಂದ್ರಾದಲ್ಲಿರುವ ತನ್ನ ಆಂಟಿಯ ಬಂಗಲೆಯಲ್ಲಿ ಸಿಖ್ ಸಂಪ್ರದಾಯದಂತೆ ಆನಂದ್ ಅಹುಜಾ ಅವರನ್ನು ಇಂದು ಬೆಳಗ್ಗೆ ಮದುವೆಯಾಗಿದ್ದಾರೆ.

    ಸೋನಮ್ ಅನುರಾಧ ವಾಕೀಲ್ ಅವರು ತಯಾರಿಸಿದ ಚೋಕರ್ ಹಾಗೂ ನೆಕ್ಲೆಸ್ ಗೆ ಹೊಂದುವ ಬೈತಲೆ ಬೊಟ್ಟು ಹಾಗೂ ಜುಮ್ಕಾವನ್ನು ತೊಟ್ಟಿದ್ದರು. ಇನ್ನೂ ಆನಂದ್ ಗೋಲ್ಡನ್ ಶೇರ್ವಾನಿ ಜೊತೆ ಕೆಂಪು ಬಣ್ಣದ ರೂಬಿ ಮಾಲೆ ತೊಟ್ಟು ಮಿಂಚಿದ್ದಾರೆ.

    ಸೋನಮ್ ಕಪೂರ್ ಮದುವೆಗೆ ಬಾಲಿವುಡ್‍ನ ಗಣ್ಯಾತಿಗಣ್ಯರು ಹಾಜರಾಗಿದ್ದರು. ಅಮಿತಾಬ್ ಬಚ್ಚನ್, ಅಮೀರ್ ಖಾನ್, ಕರೀನಾ ಕಪೂರ್, ಜಾಕ್ವೇಲಿನ್ ಫರ್ನಾಂಡಿಸ್ ಎಲ್ಲರು ಸೋನಮ್ ಮದುವೆಗೆ ಸಾಕ್ಷಿಯಾಗಿದ್ದರು.

    ಸದ್ಯಕ್ಕೆ ಸೋನಮ್ ‘ವೀರೆ ದಿ ವೆಡ್ಡಿಂಗ್’ ಚಿತ್ರದಲ್ಲಿ ಕರೀನಾ ಕಪೂರ್ ಜೊತೆ ನಟಿಸುತ್ತಿದ್ದು, ಮದುವೆಗೆ ಕರೀನಾ ಕಪೂರ್ ತನ್ನ ಪತಿ ಸೈಫ್ ಅಲಿ ಖಾನ್, ಮಗ ತೈಮೂರ್ ಹಾಗೂ ಸಹೋದರಿ ಕರೀಶ್ಮಾ ಕಪೂರ್ ಜೊತೆ ಸಬ್ಯಾಸಾಚಿ ಲೆಹೆಂಗಾದಲ್ಲಿ ಮಿಂಚಿದ್ದರು.

    ಇನ್ನೂ ಸೋನಮ್ ಅವರ ಸೋದರ ಸಂಬಂಧಿಗಳಾದ ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ತನ್ನ ತಂದೆ ಬೋನಿ ಕಪೂರ್ ಜೊತೆ ಮದುವೆಗೆ ಆಗಮಿಸಿದ್ದರು. ಜಾನ್ವಿ ಹಾಗೂ ಖುಷಿ ಮನೀಶ್ ಮಲ್ಹೋತ್ರ ಡಿಸೈನ್ ಮಾಡಿದ ಲೆಹೆಂಗಾ ತೊಟ್ಟಿದ್ದರು.

    ಸೋನಮ್ ಆತ್ಮೀಯ ಗೆಳತಿ ಜಾಕ್ವೇಲಿನ್ ಫರ್ನಾಂಡಿಸ್ ಕೂಡ ಪಿಂಕ್ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದರು. ಜಾಕ್ವೇಲಿನ್ ಜೊತೆ ರಾಣಿ ಮುಖರ್ಜಿ, ಸ್ವರ ಭಾಸ್ಕರ್ ಕಾಣಿಸಿಕೊಂಡರು. ಇನ್ನೂ ಸೋನಮ್ ಮದುವೆಗೆ ಅಮಿತಾಬ್ ಮಕ್ಕಳು ಅಭಿಷೇಕ್ ಹಾಗೂ ಶ್ವೇತಾ ಕೂಡ ಆಗಮಿಸಿದ್ದರು.