Tag: anaconda

  • ರಾಷ್ಟ್ರೀಯ ಸಂಸ್ಥೆಗಳನ್ನು ನುಂಗುತ್ತಿರೋ ಅನಾಕೊಂಡ ಮೋದಿ: ಆಂಧ್ರಪ್ರದೇಶ ಸಚಿವ

    ರಾಷ್ಟ್ರೀಯ ಸಂಸ್ಥೆಗಳನ್ನು ನುಂಗುತ್ತಿರೋ ಅನಾಕೊಂಡ ಮೋದಿ: ಆಂಧ್ರಪ್ರದೇಶ ಸಚಿವ

    ನವದೆಹಲಿ: ಆಂಧ್ರಪ್ರದೇಶದ ಹಣಕಾಸು ಸಚಿವ ಹಾಗೂ ತೆಲಗುಂ ದೇಶಂ ಪಕ್ಷದ (ಟಿಡಿಪಿ) ಮುಖಂಡ ಯನಮಲ ರಾಮ ಕೃಷ್ಣುಡು ಅವರು, ಪ್ರಧಾನಿ ನರೇಂದ್ರ ಮೋದಿ ‘ಅನಕೊಂಡ’ ಇದ್ದಂತೆ ಎಂದು ಹೇಳಿಕಿ ನೀಡಿ, ಭಾರೀ ವಿವಾದಕ್ಕೆ ಗುರಿಯಾಗಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಸಿಬಿಐ, ಆರ್‍ಬಿಐ ಸೇರಿದಂತೆ ವಿವಿಧ ರಾಷ್ಟ್ರೀಯ ಸಂಸ್ಥೆಗಳನ್ನು ನುಂಗುತ್ತಿದ್ದಾರೆ. ಇಂತಹ ಧೋರಣೆ ಹೊಂದಿರುವ ಅವರು ಹೇಗೆ ಸಂರಕ್ಷಕರಾಗಲು ಸಾಧ್ಯ ಎಂದು ಸಚಿವರು ಪ್ರಶ್ನಿಸಿದ್ದಾರೆ.

    ಅಷ್ಟೇ ಅಲ್ಲದೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎಲ್ಲರೂ ಟಾಮ್, ಡಿಕ್ ಮತ್ತು ಹ್ಯಾರಿ ಹಾಗೆ ಆಡುತ್ತಿದ್ದಾರೆ. ಹಿಂದೆ ಆಗಿ ಹೋಗಿರುವ ಬಗ್ಗೆ ಮಾತನಾಡುತ್ತಿದ್ದಾರೆ. ಆಗಿರುವುದು ಈಗ ಮತ್ತು ಭವಿಷ್ಯದಲ್ಲಿ ಬರುವುದಿಲ್ಲ ಎಂದ ಅವರು, ಕಾಂಗ್ರೆಸ್ ಮತ್ತು ಜನಸೇನಾ ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆಯೇ ಹೊರತು ದೇಶದ ಬಗ್ಗೆ ಯಾವುದೇ ಹೊಣೆಗಾರಿಕೆ ಅವರಿಗಿಲ್ಲ ಎಂದು ಕುಟುಕಿದ್ದಾರೆ.

    ಸಚಿವರ ಹೇಳಿಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಕನ್ನ ಲಕ್ಷ್ಮೀನಾರಾಯಣ ಅವರು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭ್ರಷ್ಟಾಚಾರದ ರಾಜ ಎಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಡಿಯೋ: ಅನಕೊಂಡಾಗೆ ಬಲಿಯಾಗ್ತಿದ್ದ ನಾಯಿಯನ್ನ ರಕ್ಷಣೆ ಮಾಡಿದ ಗ್ರಾಮಸ್ಥರು

    ವಿಡಿಯೋ: ಅನಕೊಂಡಾಗೆ ಬಲಿಯಾಗ್ತಿದ್ದ ನಾಯಿಯನ್ನ ರಕ್ಷಣೆ ಮಾಡಿದ ಗ್ರಾಮಸ್ಥರು

    ಬ್ರೆಜಿಲಿಯಾ: ಅನಕೊಂಡಾ ಹಾವಿಗೆ ಆಹಾರವಾಗಿಬಿಡುತ್ತಿದ್ದ ನಾಯಿಯನ್ನ ಗ್ರಾಮಸ್ಥರು ರಕ್ಷಣೆ ಮಾಡಿರುವ ಘಟನೆ ಬ್ರೆಜಿಲ್‍ನಲ್ಲಿ ನಡೆದಿದ್ದು, ಇದರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ವಿಡಿಯೋದ ಆರಂಭದಲ್ಲಿ ನದಿ ತೀರದಲ್ಲಿ ನಾಯಿಯನ್ನ ಸುತ್ತುವರಿದಿದ್ದ ದೈತ್ಯ ಅನಕೊಂಡಾವನ್ನ ಕಾಣಬಹುದು. ನಂತರ ಇಬ್ಬರು ಅಲ್ಲಿಗೆ ಬಂದು ಹಾವಿನ ಬಾಲ ಹಿಡಿದು ನೀರಿನಿಂದ ಹೊರಗೆಳೆದು ಹುಲ್ಲಿಗೆ ಮೇಲೆ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಮತ್ತೊಬ್ಬ ವ್ಯಕ್ತಿ ಸೇರ್ಪಡೆಗೊಂಡು ಎಲ್ಲರೂ ಸೇರಿ ನಾಯಿಯನ್ನ ಹಾವಿನ ಹಿಡಿತದಿಂದ ಬಿಡಿಸಲು ಯತ್ನಿಸಿದ್ದಾರೆ.

    ಅವರಲ್ಲೊಬ್ಬ ವ್ಯಕ್ತಿ ಕೋಲಿನಿಂದ ಹಾವಿಗೆ ಹೊಡೆದಿದ್ದು, ಎರಡು ಮೂರು ಏಟು ತಿಂದ ಬಳಿಕ ಹಾವಿನ ಹಿಡಿತ ಸಡಿಲವಾಗಿ, ನಾಯಿ ಅದರಿಂದ ಬಿಡಿಸಿಕೊಂಡು ಬಂದು ಹಾವಿನ ಕಡೆ ಬೊಗಳಲು ಶುರು ಮಾಡಿದೆ.

    ಆಂಡ್ರೀವ್ ಬರೋ ಎಂಬವರು ಇದರ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ನಾಯಿ ಜಮೀನಿನಿಂದ ಕಾಣೆಯಾಗಿತ್ತು. ಅದಕ್ಕಾಗಿ ಹುಡುಕಾಟ ನಡೆಸಿದಾಗ ಅನಕೊಂಡಾಗೆ ಆಹಾರವಾಗಿಬಿಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಅವರು ಹೇಳಿದ್ದಾರೆ.

    ನಂತರ ಗ್ರಮಸ್ಥರು ಕೂಡಲೇ ಕಾರ್ಯಪ್ರವೃತ್ತರಾಗಿ ಅನಕೊಂಡಾದಿಂದ ಇನ್ನೇನು ಕೊಲ್ಲಲ್ಪಡುತ್ತಿದ್ದ ನಾಯಿಯ ರಕ್ಷಣೆಗೆ ಮುಂದಾದರು ಎಂದು ತಿಳಿಸಿದ್ದಾರೆ.

    https://www.youtube.com/watch?v=3x7qvzKIc7g