Tag: Amy Jackson

  • ಗುಡ್‌ ನ್ಯೂಸ್‌ ಕೊಟ್ಟ ‘ದಿ ವಿಲನ್‌’ ನಟಿ- ಆ್ಯಮಿ ಜಾಕ್ಸನ್‌ಗೆ ಗಂಡು ಮಗು

    ಗುಡ್‌ ನ್ಯೂಸ್‌ ಕೊಟ್ಟ ‘ದಿ ವಿಲನ್‌’ ನಟಿ- ಆ್ಯಮಿ ಜಾಕ್ಸನ್‌ಗೆ ಗಂಡು ಮಗು

    ನ್ನಡದ ‘ದಿ ವಿಲನ್’ (The Villain Kannada) ನಟಿ ಆ್ಯಮಿ ಜಾಕ್ಸನ್ (Amy Jackson) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಗುಡ್ ನ್ಯೂಸ್ ಅನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ. ಮಗುವಿನ ಹೆಸರಿನ ಸಮೇತ ಆ್ಯಮಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಮುಂಬೈ ಯೂನಿವರ್ಸಿಟಿಯಲ್ಲಿ ಡಾಕ್ಟರೇಟ್ ಪದವಿ ಪಡೆದ ‘ಚಾರ್‌ಮಿನಾರ್‌’ ನಟಿ ಮೇಘನಾ

    ಮುದ್ದಾದ ಗಂಡು ಮಗುವಿಗೆ (Baby Boy) ಆ್ಯಮಿ ಮತ್ತು ಎಡ್ ವೆಸ್ಟ್ವಿಕ್ ದಂಪತಿ ಪೋಷಕರಾದ ಖುಷಿಯಲ್ಲಿದ್ದಾರೆ. ಇದೀಗ ಮಗುವನ್ನು ಹಿಡಿದುಕೊಂಡು ಪತಿಯ ಜೊತೆ ನಟಿ ಪೋಸ್ ಮಾಡಿರುವ ಪೋಸ್ಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮುದ್ದಾದ ಮಗನಿಗೆ ‘ಆಸ್ಕರ್ ಅಲೆಕ್ಸಾಂಡರ್ ವೆಸ್ಟ್ವಿಕ್’ (Oscar Alexandar Westwick) ಎಂದು ಹೆಸರಿಡಲಾಗಿದೆ.

     

    View this post on Instagram

     

    A post shared by Ed Westwick (@edwestwick)

    ಅಂದಹಾಗೆ, ಹಾಲಿವುಡ್ ನಟ ಎಡ್ ವೆಸ್ಟ್ವಿಕ್ ಜೊತೆ ಆ್ಯಮಿ 2022ರಿಂದ ಡೇಟಿಂಗ್‌ನಲ್ಲಿದ್ದರು. ಆ ನಂತರ ಕಳೆದ ವರ್ಷ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  • ಬೇಬಿ ಬಂಪ್ ಫೋಟೋ ಹಂಚಿಕೊಂಡ ‘ದಿ ವಿಲನ್’ ನಟಿ ಆ್ಯಮಿ

    ಬೇಬಿ ಬಂಪ್ ಫೋಟೋ ಹಂಚಿಕೊಂಡ ‘ದಿ ವಿಲನ್’ ನಟಿ ಆ್ಯಮಿ

    ಬಾಲಿವುಡ್ ಬೆಡಗಿ ಆ್ಯಮಿ ಜಾಕ್ಸನ್ (Amy Jackson) ಅವರು ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇದೀಗ ಬಿಕಿನಿ ಧರಿಸಿ ಬೇಬಿ ಬಂಪ್ ಫೋಟೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:BBK 11: ಭವ್ಯಾಗೆ ಐ ಲವ್‌ ಯೂ ಪನ್ನಿ ಕುಟ್ಟಿ ಎಂದ ತ್ರಿವಿಕ್ರಮ್‌

    ಕಳೆದ ವರ್ಷ ನಟ ಎಡ್ ವೆಸ್ಟ್‌ವಿಕ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆ್ಯಮಿ ಅವರು ಅಕ್ಟೋಬರ್‌ನಲ್ಲಿ ಪ್ರೆಗ್ನೆನ್ಸಿ ಬಗ್ಗೆ ನಟಿ ಗುಡ್‌ ನ್ಯೂಸ್‌ ಕೊಟ್ಟಿದ್ದರು. ಈಗ ಬಿಕಿನಿ ಧರಿಸಿ ಬೋಲ್ಡ್ ಲುಕ್‌ನಲ್ಲಿ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ. ನಟಿಯ ಲುಕ್‌ಗೆ ಫ್ಯಾನ್ಸ್‌‌ ಕಡೆಯಿಂದ ಬಗೆ ಬಗೆಯ ಕಾಮೆಂಟ್ಸ್‌ ಹರಿದು ಬರುತ್ತಿದೆ.

     

    View this post on Instagram

     

    A post shared by Amy Jackson Westwick (@iamamyjackson)

    ಅಂದಹಾಗೆ, 2015ರಲ್ಲಿ ಉದ್ಯಮಿ ಜಾರ್ಜ್ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಇಬ್ಬರ ಪ್ರೀತಿಗೆ ಮಗುವೊಂದು ಸಾಕ್ಷಿಯಾಗಿತ್ತು. ಆದರೆ ಕೆಲ ಮನಸ್ತಾಪಗಳಿಂದ 2021ರಲ್ಲಿ ಅವರೊಂದಿಗೆ ನಟಿ ಬ್ರೇಕಪ್ ಮಾಡಿಕೊಂಡಿದ್ದರು. ಇದೀಗ ಗಂಡು ಮಗನನ್ನು ನಟಿಯೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಎಡ್ ವೆಸ್ಟ್‌ವಿಕ್ ಜೊತೆ ದಾಂಪತ್ಯ ಜೀವನದಲ್ಲಿ ಖುಷಿಯಾಗಿರುವ ನಟಿ ಮಗುವೊಂದು ಆಗಮಿಸುತ್ತಿರುವ ಖುಷಿಯಲ್ಲಿದ್ದಾರೆ.

    ಇನ್ನೂ ಸುದೀಪ್ ಮತ್ತು ಶಿವಣ್ಣ ಜೊತೆ ‘ದಿ ವಿಲನ್’ ಸಿನಿಮಾದಲ್ಲಿ ಆ್ಯಮಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ಮೂಲಕ ಕನ್ನಡಿಗರಿಗೆ ನಟಿ ಪರಿಚಿತರಾದರು.

  • 6 ವರ್ಷದ ಮಗನ ಮುಂದೆ ಮದುವೆಯಾದ ‘ದಿ ವಿಲನ್’ ನಟಿ ಆ್ಯಮಿ ಜಾಕ್ಸನ್

    6 ವರ್ಷದ ಮಗನ ಮುಂದೆ ಮದುವೆಯಾದ ‘ದಿ ವಿಲನ್’ ನಟಿ ಆ್ಯಮಿ ಜಾಕ್ಸನ್

    ನ್ನಡದ ‘ದಿ ವಿಲನ್’ (The Villain Film) ನಟಿ ಆ್ಯಮಿ ಜಾಕ್ಸನ್ (Amy Jackson) ಅವರು ಮಗ ಹುಟ್ಟಿದ 6 ವರ್ಷದ ನಂತರ ಬಹುಕಾಲದ ಗೆಳೆಯ ಎಡ್ ವೆಸ್ಟ್‌ವಿಕ್ (Ed Westwick) ಜೊತೆ ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸುಂದರ ಫೋಟೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಇದೀಗ ‘ಪಯಣ ಶುರುವಾಗಿದೆ’ ಅಡಿಬರಹ ನೀಡಿ ಪತಿ ಜೊತೆಗಿನ ಫೋಟೋವನ್ನು ಆ್ಯಮಿ ಹಂಚಿಕೊಂಡಿದ್ದಾರೆ. ಇಬ್ಬರೂ ಬಿಳಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ನವಜೋಡಿಗೆ ಬಾಲಿವುಡ್, ಹಾಲಿವುಡ್ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾದಲ್ಲಿ ಬ್ರಿಟೀಷ್ ನಟ: ಬೆಂಗಳೂರಿಗೆ ಬಂದಿಳಿದ ತಾರಾ ದಂಡು

     

    View this post on Instagram

     

    A post shared by Ed Westwick (@edwestwick)

    ಅಂದಹಾಗೆ, ಎಂಗೇಜ್‌ಮೆಂಟ್ ಬಳಿಕ ಜೂನ್‌ನಲ್ಲಿ ನಟಿ ಬ್ಯಾಚುರಲ್ ಪಾರ್ಟಿ ಮಾಡಿದ್ದರು. ಖಾಸಗಿ ಜೆಟ್‌ನಲ್ಲಿ ನಡೆಯ ಪಾರ್ಟಿ ಫೋಟೋಗಳನ್ನು ಆ್ಯಮಿ ಹಂಚಿಕೊಂಡಿದ್ದರು.

    2019ರಲ್ಲಿ ನಟ ಜಾರ್ಜ್ ಎಂಬುವವರ ಜೊತೆ ಆ್ಯಮಿ ಡೇಟಿಂಗ್ ಮಾಡುತ್ತಿದ್ದರು. 2019ರ ಸೆಪ್ಟೆಂಬರ್‌ನಲ್ಲಿ ಗಂಡು ಮಗುವನ್ನು ಈ ಜೋಡಿ ಸ್ವಾಗತಿಸಿದ್ದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಜಾರ್ಜ್ ಜೊತೆ ನಟಿ ಬ್ರೇಕಪ್ ಮಾಡಿಕೊಂಡರು. ಜಾರ್ಜ್ ಜೊತೆಗಿನ ಅಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದರು. ಬಳಿಕ ಮಾಜಿ ಬಾಯ್ ಫ್ರೆಂಡ್‌ಗೆ ಮಗನ ಜವಾಬ್ದಾರಿಯನ್ನು ಬಿಟ್ಟು ಕೊಡದೇ ತಾವೇ ನೋಡಿಕೊಳ್ತಿದ್ದಾರೆ.

    ಇನ್ನೂ ಶಿವರಾಜ್ ಕುಮಾರ್, ಸುದೀಪ್ ನಟನೆಯ `ದಿ ವಿಲನ್’ ಸಿನಿಮಾದಲ್ಲಿ ಆ್ಯಮಿ ಜಾಕ್ಸನ್ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶನ ಮಾಡಿದರು.

  • ಇಟಲಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ ಆ್ಯಮಿ ಜಾಕ್ಸನ್ ಮದುವೆ

    ಇಟಲಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ ಆ್ಯಮಿ ಜಾಕ್ಸನ್ ಮದುವೆ

    ನ್ನಡದ ‘ವಿಲನ್’ ( The Villain) ಚಿತ್ರದ ನಟಿ ಆ್ಯಮಿ ಜಾಕ್ಸನ್ (Amy Jackson) ಅವರು ಗೆಳೆಯ ಎಡ್ ವೆಸ್ಟ್‌ವಿಕ್ (Ed Westwick) ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇಟಲಿಯಲ್ಲಿ (Italy) ಅದ್ಧೂರಿಯಾಗಿ ನಟಿಯ ಮದುವೆ ನಡೆಯಲಿದೆ. ಇದನ್ನೂ ಓದಿ:‘ಸ್ತ್ರೀ 2’ ನಟಿಗೆ ಹೆಚ್ಚಿದ ಬೇಡಿಕೆ- ಹೃತಿಕ್ ರೋಷನ್‌ಗೆ ಶ್ರದ್ಧಾ ಕಪೂರ್ ಜೋಡಿ

    ಭಾವಿ ಪತಿಗೆ ಆ್ಯಮಿ ಲಿಪ್‌ಲಾಕ್ ಮಾಡುತ್ತಿರುವ ಫೋಟೋ ಶೇರ್ ಮಾಡಿ, ನಾವು ಮದುವೆಯಾಗೋಣ ಬೇಬಿ ಎಂದು ಅಡಿಬರಹ ನೀಡಿದ್ದಾರೆ. ಈ ಮೂಲಕ ಮದುವೆಯಾಗುವ ಬಗ್ಗೆ ನಟಿ ಸುಳಿವು ನೀಡಿದ್ದಾರೆ.

     

    View this post on Instagram

     

    A post shared by Amy Jackson (@iamamyjackson)

    ಬ್ರಿಟಿಷ್ ನಟಿ ಆ್ಯಮಿ ಮದುವೆ ಇಟಲಿಯಲ್ಲಿ ನಡೆಯಲಿದೆ ಎಂಬುದಷ್ಟೇ ರಿವೀಲ್ ಆಗಿದೆ. ಯಾವ ದಿನಾಂಕದಂದು ಮದುವೆ ಎಂಬುದನ್ನು ನಟಿ ಗೌಪ್ಯವಾಗಿಟ್ಟಿದ್ದಾರೆ. ಇದನ್ನೂ ಓದಿ:ನಾನು ಸೆಲೆಬ್ರಿಟಿಯೇ ಹೊರತು ಸಾರ್ವಜನಿಕರ ಆಸ್ತಿಯಲ್ಲ- ಟ್ರೋಲಿಗರಿಗೆ ತಾಪ್ಸಿ ಪನ್ನು ವಾರ್ನಿಂಗ್

    ಅಂದಹಾಗೆ, ಎಂಗೇಜ್‌ಮೆಂಟ್ ಬಳಿಕ ಜೂನ್‌ನಲ್ಲಿ ನಟಿ ಬ್ಯಾಚುರಲ್ ಪಾರ್ಟಿ ಮಾಡಿದ್ದರು. ಖಾಸಗಿ ಜೆಟ್‌ನಲ್ಲಿ ನಡೆಯ ಪಾರ್ಟಿ ಫೋಟೋಗಳನ್ನು ಆ್ಯಮಿ ಹಂಚಿಕೊಂಡಿದ್ದರು.

    2019ರಲ್ಲಿ ನಟ ಜಾರ್ಜ್ ಎಂಬುವವರ ಜೊತೆ ಆ್ಯಮಿ ಡೇಟಿಂಗ್ ಮಾಡುತ್ತಿದ್ದರು. ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಗಂಡು ಮಗುವನ್ನು ಈ ಜೋಡಿ ಸ್ವಾಗತಿಸಿದ್ದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಜಾರ್ಜ್ ಜೊತೆ ನಟಿ ಬ್ರೇಕಪ್ ಮಾಡಿಕೊಂಡರು. ಜಾರ್ಜ್ ಜೊತೆಗಿನ ಅಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದರು. ಬಳಿಕ ಮಾಜಿ ಬಾಯ್ ಫ್ರೆಂಡ್‌ಗೆ ಮಗನ ಜವಾಬ್ದಾರಿಯನ್ನು ಬಿಟ್ಟು ಕೊಡದೇ ತಾವೇ ನೋಡಿಕೊಳ್ತಿದ್ದಾರೆ.

    ಇನ್ನೂ ಶಿವರಾಜ್‌ ಕುಮಾರ್‌, ಸುದೀಪ್‌ ನಟನೆಯ ‘ದಿ ವಿಲನ್‌’ ಸಿನಿಮಾದಲ್ಲಿ ಆ್ಯಮಿ ಜಾಕ್ಸನ್ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಚಿತ್ರಕ್ಕೆ ಜೋಗಿ ಪ್ರೇಮ್‌ ನಿರ್ದೇಶನ ಮಾಡಿದರು.

  • ಗುಡ್ ನ್ಯೂಸ್ ಕೊಟ್ಟ ‘ದಿ ವಿಲನ್’ ನಟಿ

    ಗುಡ್ ನ್ಯೂಸ್ ಕೊಟ್ಟ ‘ದಿ ವಿಲನ್’ ನಟಿ

    ನ್ನಡದ ‘ದಿ ವಿಲನ್’ (The Villain) ಸಿನಿಮಾ ಮೂಲಕ ಗಮನ ಸೆಳೆದ ಆ್ಯಮಿ ಜಾಕ್ಸನ್ (Amy Jackson) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆಗೆ ನಟಿ ರೆಡಿಯಾಗಿದ್ದಾರೆ. ಸದ್ಯ ಅದ್ಧೂರಿಯಾಗಿ ಬ್ಯಾಚುರಲ್ ಪಾರ್ಟಿ ಮಾಡಿದ್ದಾರೆ. ಇದರ ಸುಂದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ.

    ಈ ವರ್ಷ ಜನವರಿಯಲ್ಲಿ ನಟ ಎಡ್ ವೆಸ್ಟ್‌ವಿಕ್ (Ed Westwick) ಜೊತೆ ಎಂಗೇಜ್ ಆಗಿರೋದಾಗಿ ಅಧಿಕೃತವಾಗಿ ನಟಿ ಘೋಷಿಸಿದರು. 2022ರಿಂದ ಇಬ್ಬರೂ ಡೇಟಿಂಗ್‌ ಮಾಡುತ್ತಿದ್ದಾರೆ. ಈಗ ಹೊಸ ಜೀವನಕ್ಕೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಮಲಯಾಳಂ ನಟಿ ರಚನಾ

    ಇದೀಗ ಫ್ರಾನ್ಸ್‌ನಲ್ಲಿ ಸ್ನೇಹಿತರ ಜೊತೆ ಬ್ಯಾಚುರಲ್ ಪಾರ್ಟಿ ಮಾಡಿದ್ದಾರೆ. ಖಾಸಗಿ ಜೆಟ್‌ನಲ್ಲಿ ಪಾರ್ಟಿಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ವಧು ಎಂದು ಅಡಿಬರಹ ನೀಡಿದ್ದಾರೆ.

    ಬ್ಯಾಚುರಲ್ ಪಾರ್ಟಿ ಮಾಡುತ್ತಿರುವ ನಟಿ ಆ್ಯಮಿ ಮದುವೆ ಯಾವಾಗ? ಎಂಬುದು ಇನ್ನೂ ರಿವೀಲ್ ಆಗಿಲ್ಲ. ಸದ್ಯ ದಿ ವಿಲನ್‌ ನಾಯಕಿಯ ಖಾಸಗಿ ಬದುಕಿನ ಬಗ್ಗೆ ಫ್ಯಾನ್ಸ್‌ ಕ್ಯೂರಿಯಸ್‌ ಆಗಿದ್ದಾರೆ.

    ಅಂದಹಾಗೆ, 2019ರಲ್ಲಿ ನಟ ಜಾರ್ಜ್ ಎಂಬುವವರ ಜೊತೆ ಆ್ಯಮಿ ಡೇಟಿಂಗ್ ಮಾಡುತ್ತಿದ್ದರು. ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಗಂಡು ಮಗುವನ್ನು ಈ ಜೋಡಿ ಸ್ವಾಗತಿಸಿದ್ದರು.

    ಕೆಲ ಮನಸ್ತಾಪಗಳಿಂದ 2021ರಲ್ಲಿ ಜಾರ್ಜ್ ಜೊತೆ ನಟಿ ಬ್ರೇಕಪ್ ಮಾಡಿಕೊಂಡರು. ಜಾರ್ಜ್ ಜೊತೆಗಿನ ಅಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದರು. ಬಳಿಕ ಮಾಜಿ ಬಾಯ್ ಫ್ರೆಂಡ್‌ಗೆ ಮಗನ ಜವಾಬ್ದಾರಿಯನ್ನು ಬಿಟ್ಟು ಕೊಡದೇ ತಾವೇ ನೋಡಿಕೊಳ್ತಿದ್ದಾರೆ.

  • ಇಂಡಿಯಾ ಗೇಟ್ ಮುಂದೆ ಬಾಯ್‌ಫ್ರೆಂಡ್‌ಗೆ ‘ದಿ ವಿಲನ್’ ನಾಯಕಿ ಲಿಪ್‌ಲಾಕ್

    ಇಂಡಿಯಾ ಗೇಟ್ ಮುಂದೆ ಬಾಯ್‌ಫ್ರೆಂಡ್‌ಗೆ ‘ದಿ ವಿಲನ್’ ನಾಯಕಿ ಲಿಪ್‌ಲಾಕ್

    ನ್ನಡದ ‘ದಿ ವಿಲನ್’ (The Villain) ಸಿನಿಮಾದ ನಾಯಕಿ ಆ್ಯಮಿ ಜಾಕ್ಸನ್ (Amy Jackson) 5 ವರ್ಷಗಳ ನಂತರ ಕಳದೆ ಮೂರು ದಿನಗಳ ಹಿಂದೆ ಭಾರತಕ್ಕೆ ಕಾಲಿಟ್ಟಿದ್ದಾರೆ. ಫಾರಿನ್‌ನಲ್ಲಿ ಬೀಡು ಬಿಟ್ಟಿದ್ದ ನಟಿ ಈಗ ಮತ್ತೆ ಭಾರತಕ್ಕೆ (India) ಮರಳಿದ್ದಾರೆ. ಸದ್ಯ ಮುಂಬೈ ಬೀದಿಯಲ್ಲಿ ಬಾಯ್‌ಫ್ರೆಂಡ್ ಎಡ್ ವೆಸ್ಟ್ವಿಕ್ ಜೊತೆ ಸುತ್ತಾಡುತ್ತಿದ್ದಾರೆ. ಗೆಳೆಯನಿಗೆ ಲಿಪ್ ಕಿಸ್ ಕೊಟ್ಟಿರೋ ಫೋಟೋ ಇದೀಗ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ತಾಕತ್ತಿದ್ದರೆ ‘ಮಣಿಪುರ ಫೈಲ್ಸ್’ ಮಾಡಿ: ವಿವೇಕ್ ಅಗ್ನಿಹೋತ್ರಿಗೆ ಸವಾಲು

    2018ರಲ್ಲಿ ‘ದಿ ವಿಲನ್’ ಸಿನಿಮಾದ ಮೂಲಕ ಕನ್ನಡ ಸಿನಿ ರಸಿಕರಿಗೆ ಪರಿಚಿತರಾದ ಆ್ಯಮಿ ಜಾಕ್ಸನ್ ಅವರು ಸುದೀಪ್- ಶಿವಣ್ಣ ಅವರ ಜುಗಲ್‌ಬಂದಿಯ ನಡುವೆಯೂ ನಟಿ ಹೈಲೆಟ್ ಆಗಿದ್ರು. ‘ನೋಡವಳಂದಾವ’ ಸಾಂಗ್‌ನಲ್ಲಿ ಆ್ಯಮಿ ಬ್ಯೂಟಿಯನ್ನ ಬಣ್ಣಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಕನ್ನಡದ ಜೊತೆ ಹಿಂದಿ, ತಮಿಳು, ಇಂಗ್ಲೀಷ್ ಸಿನಿಮಾಗಳಲ್ಲೂ ಆ್ಯಮಿ ಜಾಕ್ಸನ್ ನಟಿಸಿ ಸೈ ಎನಿಸಿಕೊಂಡಿದ್ದಾರೆ.

    ಇದೀಗ ಬಿಟ್ರನ್ ಗೆಳೆಯ ಎಡ್ ವೆಸ್ಟ್ವಿಕ್ (Ed Westwick) ಜೊತೆ ನೆನ್ನೆ ಮುಂಬೈನ ಇಂಡಿಯಾ ಗೇಟ್‌ಗೆ (India Gate) ವಿಸಿಟ್ ಮಾಡಿದ್ದಾರೆ. ಬರೀ ಭೇಟಿ ಕೊಡೋದಲ್ದೇ ಇಂಡಿಯಾ ಮುಂದೆಯೇ ಹಸಿ – ಬಿಸಿ ಚುಂಬನವನ್ನೂ ಹಂಚಿಕೊಂಡಿದ್ದಾರೆ. ಈ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅಭಿಮಾನಿಗಳು ಉಬ್ಬೇರಿಸುವಂತೆ ಮಾಡಿದ್ದಾರೆ. ಬ್ರಿಟಿಷ್ ಆಕ್ಟರ್ ಆಗಿತೋ ಎಡ್ ಗಾಸಿಪ್ ಗರ್ಲ್ ಅನ್ನೋ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಇದೀಗ ಗೆಳೆತಿ ಆ್ಯಮಿ ಜೊತೆ ಇಂಡಿಯಾಗೆ ಬಂದಿರೋ ಎಡ್ ಮತ್ತಷ್ಟು ಪ್ರಸಿದ್ಧ ಭಾಗಗಳನ್ನು ನೋಡೋ ಕೌತುಕದಲ್ಲಿದ್ದಾರೆ.

    ಇನ್ನೂ ಫಾರಿನ್‌ನಲ್ಲಿ ಆ್ಯಮಿ ಸೆಟಲ್ ಆಗಿದ್ರು. ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿಯೇ ನಟಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ರು. ಬಾಯ್‌ಫ್ರೆಂಡ್ ಜೊತೆ ಡೇಟಿಂಗ್ ಸುದ್ದಿ, ಮದುವೆಯಾಗದೇ ಮಗು ಬಗ್ಗೆ ಅನೌನ್ಸ್ ಮಾಡಿದ್ದ ಆ್ಯಮಿ , ಈಗ ಹೊಸ ಬಾಯ್‌ಫ್ರೆಂಡ್ ಎಡ್ ವೆಸ್ಟ್ವಿಕ್ ಜೊತೆ ಎಂಗೇಜ್ ಆಗಿದ್ದಾರೆ. ಅಂದ್ಹಾಗೆ ಈಗ ಆ್ಯಮಿ ಜಾಕ್ಸನ್ ಕುರಿತು ಹೊಸ ಚರ್ಚೆ ಏನಂದ್ರೆ, ಸುಮಾರು ಐದು ವರ್ಷಗಳ ನಂತ್ರ ಆ್ಯಮಿ ಭಾರತಕ್ಕೆ ಕಾಲಿಟ್ಟಿದ್ದಾರೆ. ಈ ಭೇಟಿ ಬಗ್ಗೆ ಆ್ಯಮಿ ಕೂಡ ಖುದ್ದಾಗಿ ಖುಷಿ ಹಂಚಿಕೊಂಡಿದ್ದು, ವರ್ಷಗಳ ನಂತ್ರ ಭಾರತಕ್ಕೆ ಬಂದಿರೋದು ಖುಷಿಕೊಟ್ಟಿದೆ ಎಂದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 5 ವರ್ಷಗಳ ನಂತರ ಭಾರತಕ್ಕೆ ಕಾಲಿಟ್ಟ ‘ದಿ ವಿಲನ್‌’ ಚಿತ್ರದ ನಾಯಕಿ

    5 ವರ್ಷಗಳ ನಂತರ ಭಾರತಕ್ಕೆ ಕಾಲಿಟ್ಟ ‘ದಿ ವಿಲನ್‌’ ಚಿತ್ರದ ನಾಯಕಿ

    ನ್ನಡದ ‘ದಿ ವಿಲನ್‌’ (The Villain) ಸಿನಿಮಾದ ನಾಯಕಿ ಆ್ಯಮಿ ಜಾಕ್ಸನ್ (Amy Jackson) 5 ವರ್ಷಗಳ ನಂತರ ಭಾರತಕ್ಕೆ ಕಾಲಿಟ್ಟಿದ್ದಾರೆ. ಫಾರಿನ್‌ನಲ್ಲಿ ಬೀಡು ಬಿಟ್ಟಿದ್ದ ನಟಿ ಈಗ ಮತ್ತೆ ಭಾರತಕ್ಕೆ ಮರಳಿದ್ದಾರೆ. ಈ ಕುರಿತ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    2018ರಲ್ಲಿ ‘ದಿ ವಿಲನ್’ ಸಿನಿಮಾದ ಮೂಲಕ ಕನ್ನಡ ಸಿನಿ ರಸಿಕರಿಗೆ ಪರಿಚಿತರಾದ ಆ್ಯಮಿ ಜಾಕ್ಸನ್ ಅವರು ಸುದೀಪ್- ಶಿವಣ್ಣ ಅವರ ಜುಗಲ್‌ಬಂದಿಯ ನಡುವೆಯೂ ನಟಿ ಹೈಲೆಟ್ ಆಗಿದ್ರು. ʼನೋಡವಳಂದಾವʼ ಸಾಂಗ್‌ನಲ್ಲಿ ಆ್ಯಮಿ ಬ್ಯೂಟಿಯನ್ನ ಬಣ್ಣಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಕನ್ನಡದ ಜೊತೆ ಹಿಂದಿ, ತಮಿಳು, ಇಂಗ್ಲೀಷ್ ಸಿನಿಮಾಗಳಲ್ಲೂ ಆ್ಯಮಿ ಜಾಕ್ಸನ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:ಜಯಣ್ಣ ಪಾಲಾದ ‘ಜೈಲರ್’ ಚಿತ್ರದ ಕರ್ನಾಟಕ ವಿತರಣಾ ಹಕ್ಕು

    ಫಾರಿನ್‌ನಲ್ಲಿ ಆ್ಯಮಿ ಸೆಟಲ್ ಆಗಿದ್ರು. ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿಯೇ ನಟಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ರು. ಬಾಯ್‌ಫ್ರೆಂಡ್ ಜೊತೆ ಡೇಟಿಂಗ್ ಸುದ್ದಿ, ಮದುವೆಯಾಗದೇ ಮಗು ಬಗ್ಗೆ ಅನೌನ್ಸ್ ಮಾಡಿದ್ದ ಆ್ಯಮಿ, ಈಗ ಹೊಸ ಬಾಯ್‌ಫ್ರೆಂಡ್ ಜೊತೆ ಎಂಗೇಜ್ ಆಗಿದ್ದಾರೆ. ಅಂದ್ಹಾಗೆ ಈಗ ಆ್ಯಮಿ ಜಾಕ್ಸನ್ ಕುರಿತು ಹೊಸ ಚರ್ಚೆ ಏನಂದ್ರೆ, ಸುಮಾರು ಐದು ವರ್ಷಗಳ ನಂತ್ರ ಆ್ಯಮಿ ಭಾರತಕ್ಕೆ ಕಾಲಿಟ್ಟಿದ್ದಾರೆ. ಈ ಭೇಟಿ ಬಗ್ಗೆ ಆ್ಯಮಿ ಕೂಡ ಖುದ್ದಾಗಿ ಖುಷಿ ಹಂಚಿಕೊಂಡಿದ್ದು, ವರ್ಷಗಳ ನಂತ್ರ ಭಾರತಕ್ಕೆ ಬಂದಿರೋದು ಖುಷಿಕೊಟ್ಟಿದೆ ಎಂದಿದ್ದಾರೆ.

    ನಟಿ ಭಾರತಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಪಾಪರಾಜಿಗಳು ಮುಗಿಬಿದ್ದರು. ಮುಂಬೈ ಏರ್ಪೋರ್ಟ್ ನಲ್ಲಿ ಆ್ಯಮಿ ಜಾಕ್ಸನ್ ಎಂಟ್ರಿ ಕೊಟ್ಟಿರುವ ಫೋಟೋಗಳು ವೈರಲ್ ಆಗಿವೆ. ಆ್ಯಮಿ ಭೇಟಿ ಬಳಿಕ ಆಕೆಯ ಮುಂದಿನ ಸಿನಿಮಾ ಬಗ್ಗೆಯೂ ಸುದ್ದಿ ಶುರುವಾಗಿದೆ. ಅಭಿಮಾನಿಗಳ ನಿರೀಕ್ಷೆಯಂತೆ ಬೆಳ್ಳಿ ತೆರೆಗೆ ವಾಪಸ್ಸಾಗಲು, ಆ್ಯಮಿ ಭಾರತಕ್ಕೆ ಬಂದಿಳಿದಿದ್ದಾರೆ ಎನ್ನಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೈಕಾ ತೆಕ್ಕೆಗೆ ‘ಮಿಷನ್: ಚಾಪ್ಟರ್-1’: ಅರುಣ್ ವಿಜಯ್ ನಟನೆಯ ಸಿನಿಮಾ

    ಲೈಕಾ ತೆಕ್ಕೆಗೆ ‘ಮಿಷನ್: ಚಾಪ್ಟರ್-1’: ಅರುಣ್ ವಿಜಯ್ ನಟನೆಯ ಸಿನಿಮಾ

    ಇಂಡಿಯನ್, ಖೈದಿ ನಂಬರ್ 150, 2.0, ದರ್ಬಾರ್ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಇದೀಗ ಮಿಷನ್:ಚಾಪ್ಟರ್ 1 ಸಿನಿಮಾವನ್ನು ವಿಶ್ವಾದ್ಯಂತ ರಿಲೀಸ್ ಮಾಡಲಿದೆ. ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ಭಾರೀ ಹೆಸರು ಮಾಡಿರುವ ಲೈಕಾ, ಪ್ರೇಕ್ಷಕರಿಗೆ ವಿಭಿನ್ನ ಬಗೆಯ ಚಿತ್ರಗಳನ್ನು ಉಣಬಡಿಸುತ್ತಿದೆ. ಪೊನ್ನಿಯಿನ್ ಸೆಲ್ವನ್-2, ಇಂಡಿಯನ್-2, ಲಾಲ್ ಸಲಾಂ ಸೇರಿದಂತೆ ಹಲವು ಚಿತ್ರಗಳ ನಿರ್ಮಾಣ ಮಾಡ್ತಿರುವ ಲೈಕಾ ಮಾಲೀಕ ಸುಭಾಷ್ ಕರಣ್, ‘ಮಿಷನ್:ಚಾಪ್ಟರ್-1’ (Mission: Chapter 1) ಅಖಂಡ ವಿಶ್ವ ತಲುಪಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

    ಕಾಲಿವುಡ್ ಹೀರೋ ಅರುಣ್ ವಿಜಯ್ (Arun Vijay) ನಟನೆಯ ‘ಮಿಷನ್:ಚಾಪ್ಟರ್-1’ ಸಿನಿಮಾಗೆ ಪ್ರತಿಭಾನ್ವಿತ ನಿರ್ದೇಶಕ ವಿಜಯ್ ಆಕ್ಷನ್ ಕಟ್ ಹೇಳಿದ್ದು, ದುಬಾರಿ ಬಜೆಟ್ ನಲ್ಲಿ ಎ ರಾಜಶೇಖರ್ ಹಾಗೂ ಎಸ್ ಸ್ವಾತಿ ನಿರ್ಮಾಣ ಮಾಡಿದ್ದಾರೆ. ‘ಮಿಷನ್:ಚಾಪ್ಟರ್-1’ ಸಿನಿಮಾವನ್ನು ಕೇವಲ 70 ದಿನದಲ್ಲಿ ಚೆನ್ನೈ ಹಾಗೂ ಲಂಡನ್ ನಲ್ಲಿ ಶೂಟಿಂಗ್ ನಡೆಸಲಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸೆಟ್ ಹಾಕಿ ಚಿತ್ರೀಕರಿಸಲಾಗಿದ್ದು, ನಾಯಕ ಅರುಣ್ ವಿಜಯ್ ಅದ್ಭುತ ಸ್ಟಂಟ್ ಮಾಡಿದ್ದಾರೆ. ಇದನ್ನೂ ಓದಿ: ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ ನಟಿ ನಯನತಾರಾ

    ಆಮಿ ಜಾಕ್ಸನ್(Amy Jackson)  ಸಣ್ಣದೊಂದು ಗ್ಯಾಪ್ ಬಳಿಕ ಈ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದು, ಮಾಲಿವುಡ್ ಖ್ಯಾತ ನಟಿ ನಿಮಿಷಾ (Nimisha) ಸಜಯನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಭರತ್ ಬೋಪಣ್ಣ, ವಿರಾಜ್, ಅಭಿ ಹಾಸನ್ ಸೇರಿದಂತೆ ಹಲವರು ನಟಿಸಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರುವ ‘ಮಿಷನ್:ಚಾಪ್ಟರ್-1’ ಸಿನಿಮಾಗೆ ಜಿವಿ ಪ್ರಕಾಶ್ ಕುಮಾರ್ ಸಂಗೀತ, ವಿಜಯ್ ಸಂಭಾಷಣೆ, ಆಂಥೋನಿ ಸಂಕಲನ, ಶರವಣ್ ವಸಂತ ಕಲಾ ನಿರ್ದೇಶನ, ಸಂದೀಪ್ ಕೆ ವಿಜಯ್ ಛಾಯಾಗ್ರಹಣ ಸಿನಿಮಾಕ್ಕಿದೆ. ಶೀಘ್ರದಲ್ಲಿಯೇ ಈ ಚಿತ್ರದ ಟ್ರೇಲರ್, ಆಡಿಯೋ ಹಾಗೂ ರಿಲೀಸ್ ಡೇಟ್ ಅನೌನ್ಸ್ ಆಗಲಿದ್ದು, ನಾಲ್ಕು ಭಾಷೆಯಲ್ಲಿ ಸಜ್ಜಾಗ್ತಿರುವ ‘ಮಿಷನ್:ಚಾಪ್ಟರ್-1’ ಸಿನಿಮಾವನ್ನು ಲೈಕಾ ವಿಶ್ವಾದ್ಯಂತ ವಿತರಣೆ ಮಾಡಲಿದೆ.

  • ಮಾಜಿ ಪ್ರಿಯಕರನಿಂದ ಮಗು ಪಡೆದು ಬ್ರೇಕಪ್: ಬ್ರಿಟನ್ ನಟನ ಜೊತೆ `ದಿ ವಿಲನ್’ ನಟಿ ಸುತ್ತಾಟ

    ಮಾಜಿ ಪ್ರಿಯಕರನಿಂದ ಮಗು ಪಡೆದು ಬ್ರೇಕಪ್: ಬ್ರಿಟನ್ ನಟನ ಜೊತೆ `ದಿ ವಿಲನ್’ ನಟಿ ಸುತ್ತಾಟ

    ಬ್ರಿಟಿಷ್ ನಟಿ ಆ್ಯಮಿ ಜಾಕ್ಸನ್ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಕಲಾವಿದೆ. ಅದರಲ್ಲೂ ಸುದೀಪ್ ಜೊತೆ `ದಿ ವಿಲನ್’ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿದ್ದರು. ಈಗ ಸಿನಿಮಾಗಿಂತ ತಮ್ಮ ವಯಕ್ತಿಕ ವಿಚಾರಗಳಿಂದ ಹೆಚ್ಚೆಚ್ಚು ಸುದ್ದಿಯಾಗುತ್ತಿದ್ದಾರೆ. ಮಾಜಿ ಬಾಯ್‌ಫ್ರೆಂಡ್‌ನಿಂದ ಮಗು ಪಡೆದು, ಬ್ರೇಕಪ್ ನಂತರ ಬ್ರಿಟನ್ ನಟನ ಜತೆ ಏಂಗೇಜ್ ಆಗಿದ್ದಾರೆ.

    ಆ್ಯಮಿ ಜಾಕ್ಸನ್ ದಕ್ಷಿಣ ಭಾರತದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿವ ನಾಯಕಿ, ಸತತ ೮ ವರ್ಷಗಳಿಂದ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ಸಿನಿಮಾ ವಿಚಾರಕ್ಕಿಂತ ತಮ್ಮ ವಯಕ್ತಿಕ ವಿಚರವಾಗಿ ಹೆಚ್ಚೆಚ್ಚು ಸುದ್ದಿಯಾಗುತ್ತಿದ್ದಾರೆ. ಬ್ರಿಟಿಷ್ ಉದ್ಯಮಿ ಜಾರ್ಜ್ ಜತೆ ಆ್ಯಮಿ ರಿಲೇಷನ್‌ಶಿಪ್‌ನಲ್ಲಿದ್ದರು. ಜಾರ್ಜ್ ಪ್ರೀತಿಗೆ ಬ್ರೇಕ್ ಹಾಕಿ, ಇದೀಗ ಬ್ರಿಟನ್ ನಟ ಎಡ್ ವೆಸ್ಟ್‌ವಿಕ್ ಜತೆ ಎಂಗೇಜ್ ಆಗಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್ ಜೊತೆ ತಂದೆಯನ್ನೂ ಕೊಲ್ಲುವ ಬೆದರಿಕೆ : ಎಫ್.ಐ.ಆರ್ ದಾಖಲು, ಹೆಚ್ಚಿದ ಭದ್ರತೆ

    ಬ್ರಿಟಿಷ್ ಉದ್ಯಮಿ ಜತೆ ಪ್ರೀತಿಯಲ್ಲಿದ್ದ ಆ್ಯಮಿಗೆ ನಂತರ ಗರ್ಭಿಣಿಯಾದರು. ಬಳಿಕ ಆಪ್ತರ ಸಮ್ಮುಖದಲ್ಲಿ ಏಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಬಳಿಕ 2019ರಲ್ಲಿ ಗಂಡು ಮಗುವಿಗೆ ತಾಯಿಯಾದ ಆ್ಯಮಿ ನಂತರ 2021ರಲ್ಲಿ ಜಾರ್ಜ್ ಬ್ರೇಕಪ್ ಮಾಡಿಕೊಂಡರು. ಈಗ ಬ್ರಿಟನ್ ನಟ ಎಡ್ ವೆಸ್ಟ್ವಿಕ್ ಜೊತೆ ಸುತ್ತಾಟ ನಡೆಸುತ್ತಿದ್ದಾರೆ. ಈ ಕುರಿತು ಇನ್ಸಾ÷್ಟಗ್ರಾಂ ಖಾತೆಯಲ್ಲೂ ಆ್ಯಮಿ ಖಚಿತಪಡಿಸಿದ್ದರು. ಆಗಾಗ ರೊಮ್ಯಾಂಟಿಕ್ ಫೋಟೋ ಹಾಕುವ ಮೂಲಕ ಆ್ಯಮಿ ಸಖತ್ ಸುದ್ದಿಯಲ್ಲಿರುತ್ತಾರೆ.

     

    View this post on Instagram

     

    A post shared by Amy Jackson (@iamamyjackson)

    ಪ್ರೇಮ್ ನಿರ್ದೇಶನದ `ದಿ ವಿಲನ್’ ಚಿತ್ರದ ನಂತರ 2.0 ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದರು. ಈಗ ವಯಕ್ತಿಕ ಜೀವನದಲ್ಲಿ ಬ್ಯುಸಿಯಾದ ಮೇಲೆ ಬ್ರಿಟನ್‌ನಲ್ಲೇ ನೆಲೆಸಿದ್ದಾರೆ. ಮತ್ತೆ ಸಿನಿಮಾಗಳತ್ತ ಕಾಣಿಸಿಕೊಳ್ಳತ್ತಾರಾ ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ.

  • ಮೂರು ದಿನಗಳ ಹಿಂದೆಯಷ್ಟೇ ಹುಟ್ಟಿದ ಮಗನ ಜೊತೆ ಆ್ಯಮಿ ಔಟಿಂಗ್

    ಮೂರು ದಿನಗಳ ಹಿಂದೆಯಷ್ಟೇ ಹುಟ್ಟಿದ ಮಗನ ಜೊತೆ ಆ್ಯಮಿ ಔಟಿಂಗ್

    ನವದೆಹಲಿ: ಮದುವೆಗೆ ಮುನ್ನವೇ ಗಂಡು ಮಗುವಿಗೆ ಜನ್ಮ ನೀಡಿರುವ ವಿಲನ್ ಬ್ಯೂಟಿ ಆ್ಯಮಿ ಜಾಕ್ಸನ್ ಹೆರಿಗೆಯಾದ ಮೂರು ದಿನದಲ್ಲೇ ಔಟಿಂಗ್ ಹೋಗಿದ್ದಾರೆ.

    ಹೌದು. ಸೋಮವಾರ ಸಂಜೆ ಆ್ಯಮಿ ಜಾಕ್ಸನ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬುಧವಾರ ತಮ್ಮ ಮಗನ ಜೊತೆ ಮೊದಲ ಬಾರಿಗೆ ಔಟಿಂಗ್ ಹೋಗಿದ್ದಾರೆ. ತಮ್ಮ ಮಗನನ್ನು ಹಿಡಿದುಕೊಂಡು ನಿಂತಿರುವ ಫೋಟೋವನ್ನು ನಟಿ ತಮ್ಮ ಇನ್ ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ `ಬೇಬಿಯ ಮೊದಲ ಔಟಿಂಗ್’ ಎಂದು ಬರೆದುಕೊಂಡಿದ್ದಾರೆ. ಮಗನಿಗೆ ಆ್ಯಂಡ್ರಿಯಾಸ್ ಎಂದು ನಾಮಕರಣ ಕೂಡ ಮಾಡಿದ್ದಾರೆ.

    ಸಾಮಾನ್ಯವಾಗಿ ಹೆರಿಗೆಯಾದ ಬಳಿಕ ಮಹಿಳೆಯರು ಕೆಲ ತಿಂಗಳು ಮನೆಯಿಂದ ಹೊರ ಬರಲ್ಲ. ಮಗುವಿಗೆ ಚುಚ್ಚುಮದ್ದು, ಔಷಧಿ ಎಂದು ಹೋಗುತ್ತಾರೆಯೇ ವಿನಃ ಹೀಗೆ ಶಾಪಿಂಗ್ ಮಾಡಲು ಹೋಗುವುದಿಲ್ಲ. ಆದರೆ ಇದೀಗ ನಟಿ ಮಾತ್ರ ಹೆರಿಗೆಯಾದ 3 ದಿನದಲ್ಲೇ ಪುಟ್ಟ ಮಗನನ್ನು ಹಿಡಿದುಕೊಂಡು ಹೊರ ಹೋಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಗರ್ಭಿಣಿಯಾದಾಗಿನಿಂದಲೂ ಆ್ಯಮಿ ಫೋಟೋಶೂಟ್ ಮಾಡಿಸಿಕೊಂಡು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸದಾ ಸುದ್ದಿಯಲ್ಲಿದ್ದರು. ಸೋಮವಾರ ಹೆರಿಗೆಯಾದ ಕೂಡಲೇ ನಟಿ ಮಗನಿಗೆ ಹಾಲುಣಿಸುತ್ತಿರುವಾಗ ಪ್ರಿಯತಮ ಮುತ್ತಿಕ್ಕುವ ಫೋಟೋವನ್ನು ಇನ್ ಸ್ಟಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಹೆರಿಗೆಯಾದ ವಿಚಾರವನ್ನು ತಿಳಿಸಿದ್ದರು. ಅಲ್ಲದೆ ಮಗು ಹಾಗೂ ತಾಯಿ ಇಬ್ಬರೂ ಕ್ಷೇಮವಾಗಿದ್ದಾರೆ. ಗಂಡು ಮಗುವಾಗಿರುವುದು ಖುಷಿ ತಂದಿದೆ ಎಂದು ಬರೆದುಕೊಂಡಿದ್ದರು. ಗರ್ಭಿಣಿಯಾಗಿದ್ದಾಗಲೇ ತಮಗೆ ಗಂಡು ಮಗು ಎಂದರೆ ತುಂಬಾ ಇಷ್ಟ ಎಂದು ನಟಿ ಹೇಳಿಕೊಂಡಿದ್ದರು.

    https://www.instagram.com/p/B2wCaALpayw/?utm_source=ig_embed&utm_campaign=dlfix

    2018 ಜನವರಿ 1ರಂದು ಆ್ಯಮಿ ಜಾಕ್ಸನ್ ಉದ್ಯಮಿ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಘೋಷಿಸಿದ್ದರು. ಬ್ರಿಟನ್ ಮದರ್ಸ್ ಡೇಯಂದು ನಟಿ ತಮ್ಮ ಗೆಳೆಯನೊಂದಿಗೆ ಕುಳಿತ ಬೇಬಿ ಬಂಪ್ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಳ್ಳುವ ಮೂಲಕ ತಾಯಿ ಆಗುತ್ತಿರುವ ವಿಷಯವನ್ನು ತಿಳಿಸಿದ್ದರು. ಗರ್ಭಿಣಿಯಾದ ಬಳಿಕ ಗೆಳೆಯ ಜಾರ್ಜ್ ಜೊತೆ ಮೇ 5ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.